01.01.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಇಲ್ಲಿ ತಾವು ವನವಾಸದಲ್ಲಿದ್ದೀರಿ, ಒಳ್ಳೊಳ್ಳೆಯದನ್ನು ತೊಡಬೇಕು, ತಿನ್ನಬೇಕು..... ಈ ಆಸಕ್ತಿಯು ತಾವು ಮಕ್ಕಳಲ್ಲಿ ಇರಬಾರದು, ವಿದ್ಯೆ ಹಾಗೂ ನಡವಳಿಕೆಯ ಮೇಲೆ ಪೂರ್ಣ ಗಮನ ಕೊಡಬೇಕು

ಪ್ರಶ್ನೆ:
ಜ್ಞಾನರತ್ನಗಳಿಂದ ಸದಾ ಸಂಪನ್ನರಾಗಿರುವ ಸಾಧನವೇನಾಗಿದೆ?

ಉತ್ತರ:
ದಾನ ಮಾಡುವುದು. ಎಷ್ಟೆಷ್ಟು ಅನ್ಯರಿಗೆ ದಾನ ಮಾಡುತ್ತೀರಿ, ಅಷ್ಟಷ್ಟು ಸ್ವಯಂ ಸಂಪನ್ನರಾಗಿರುತ್ತೀರಿ. ಯಾರು ಕೇಳಿ ಧಾರಣೆ ಮಾಡಿಕೊಳ್ಳುತ್ತಾರೆ ಹಾಗೂ ಅನ್ಯರಿಗೂ ಧಾರಣೆ ಮಾಡಿಸುತ್ತಾರೆಯೋ ಅವರೇ ಬುದ್ಧಿವಂತರು. ಬುದ್ಧಿರೂಪಿ ಜೋಳಿಗೆಯಲ್ಲಿ ಒಂದುವೇಳೆ ರಂಧ್ರವಿದ್ದರೆ ಆಗ ಅದು ಹರಿದು ಹೋಗುತ್ತದೆ, ಧಾರಣೆಯಾಗುವುದಿಲ್ಲ. ಆದ್ದರಿಂದ ಖಾಯಿದೆಯನುಸಾರವಾಗಿ ವಿದ್ಯೆಯನ್ನು ಓದಬೇಕು, 5 ವಿಕಾರಗಳಿಂದ ದೂರವಿರಬೇಕು, ರೂಪ ಭಸಂತರಾಗಬೇಕು.

ಓಂ ಶಾಂತಿ.

ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಿದ್ದಾರೆ. ಆತ್ಮಿಕ ತಂದೆಯೂ ಸಹ ಕರ್ಮೇಂದ್ರಿಯಗಳಿಂದ ಹೇಳುತ್ತಾರೆ. ಆತ್ಮಿಕ ಮಕ್ಕಳೂ ಸಹ ಕರ್ಮೇಂದ್ರಿಯಗಳಿಂದ ಕೇಳುತ್ತಾರೆ - ಇದಂತೂ ಹೊಸ ಮಾತಾಗಿದೆ. ಪ್ರಪಂಚದಲ್ಲಿ ಯಾವುದೇ ಮನುಷ್ಯರೂ ಈ ರೀತಿ ಹೇಳಲು ಸಾಧ್ಯವಿಲ್ಲ. ನಿಮ್ಮಲ್ಲಿಯೂ ಸಹ ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಳ್ಳುತ್ತೀರಿ. ಹೇಗೆ ಶಿಕ್ಷಕರು ಓದಿಸುತ್ತಾರೆ ಅಂದಾಗ ವಿದ್ಯಾರ್ಥಿಗಳು ರಿಜಿಸ್ಟರ್ ಶೋ ಮಾಡುತ್ತದೆ. ರಿಜಿಸ್ಟರ್ನಿಂದ ಆ ವಿದ್ಯಾರ್ಥಿಯ ವಿದ್ಯೆ ಹಾಗೂ ನಡತೆಯು ತಿಳಿದುಬರುತ್ತದೆ. ಮುಖ್ಯವಾಗಿ ವಿದ್ಯೆ ಮತ್ತು ನಡವಳಿಕೆಯೇ ಆಗಿದೆ, ಇದು ಈಶ್ವರೀಯ ವಿದ್ಯೆಯಾಗಿದೆ, ಇದನ್ನು ಬೇರೆ ಯಾರೂ ಓದಿಸಲು ಸಾಧ್ಯವಿಲ್ಲ. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ, ಸೃಷ್ಟಿಚಕ್ರದ ಜ್ಞಾನವಾಗಿದೆ. ಇದನ್ನು ಯಾವುದೇ ಮನುಷ್ಯರು ಇಡೀ ಸೃಷ್ಟಿಯಲ್ಲಿಯೇ ತಿಳಿದುಕೊಂಡಿಲ್ಲ. ಯಾವ ಋಷಿ ಮುನಿಗಳು ಇಷ್ಟೊಂದು ಓದಿ-ಬರೆದಿದ್ದಾರೆ, ಅವರು ಸ್ವಯಂ ಹೇಳುತ್ತಾರೆ - ನಾವು ರಚಯಿತ ಮತ್ತು ರಚನೆಯನ್ನು ತಿಳಿದುಕೊಂಡಿಲ್ಲ. ತಂದೆಯೇ ಬಂದು ಪರಿಚಯ ಕೊಟ್ಟಿದ್ದಾರೆ. ಗಾಯನವೂ ಸಹ ಇದೆ - ಇದು ಮುಳ್ಳಿನ ಕಾಡಾಗಿದೆ. ಕಾಡಿಗೆ ಅವಶ್ಯವಾಗಿ ಬೆಂಕಿ ಬೀಳುತ್ತದೆ. ಹೂಗಳ ಉದ್ಯಾನವನಕ್ಕೆ ಎಂದೂ ಬೆಂಕಿ ಬೀಳುವುದಿಲ್ಲ. ಏಕೆಂದರೆ ಕಾಡು ಸಂಪೂರ್ಣ ಒಣಗಿ ಬಿಟ್ಟಿರುತ್ತದೆ, ಹೂದೋಟವು ಹಸಿರಾಗಿರುತ್ತದೆ. ಹಸಿರಿನ ಹೂದೋಟಕ್ಕೆ ಬೆಂಕಿ ಬೀಳುವುದಿಲ್ಲ. ಒಣಗಿರುವುದಕ್ಕೆ ತಕ್ಷಣ ಬೆಂಕಿ ಹತ್ತಿಕೊಳ್ಳುತ್ತದೆ. ಇದು ವಿಶಾಲವಾದ ಕಾಡಾಗಿದೆ. ಇದಕ್ಕೂ ಸಹ ಬೆಂಕಿ ಬಿದ್ದಿತ್ತು, ಹೂದೋಟವೂ ಸ್ಥಾಪನೆಯಾಗಿತ್ತು. ತಮ್ಮ ಹೂದೋಟವು ಗುಪ್ತವಾಗಿ ಸ್ಥಾಪನೆಯಾಗುತ್ತಿದೆ. ನಾವು ಹೂದೋಟದ ಹೂಗಳು ಸುಗಂಧಭರಿತ ದೇವತೆಗಳಾಗುತ್ತಿದ್ದೇವೆ ಎಂಬುದು ನಿಮಗೆ ಗೊತ್ತಿದೆ. ಇದರ ಹೆಸರೇ ಸ್ವರ್ಗವಾಗಿದೆ, ಈಗ ಸ್ವರ್ಗದ ಸ್ಥಾಪನೆಯಾಗುತ್ತಿದೆ. ಆಶ್ಚರ್ಯವೇನೆಂದರೆ, ತಾವು ಮನುಷ್ಯರಿಗೆ ಎಷ್ಟೇ ತಿಳಿಸಿದರೂ ಸಹ ಅವರ ಬುದ್ಧಿಯಲ್ಲಿ ಕುಳಿತುಕೊಳ್ಳುವುದೇ ಇಲ್ಲ. ಯಾರು ಈ ಧರ್ಮದವರಲ್ಲವೋ ಅವರ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಟ್ಟು ಬಿಡುತ್ತಾರೆ. ಸತ್ಯ-ತ್ರೇತಾಯುಗದಲ್ಲಿ ಭಾರತವಾಸಿಗಳು ಎಷ್ಟೊಂದು ಕಡಿಮೆಯಿರುತ್ತಾರೆ ನಂತರ ದ್ವಾಪರ-ಕಲಿಯುಗದಲ್ಲಿ ಎಷ್ಟೊಂದು ವೃದ್ಧಿಯಾಗುತ್ತದೆ, ಅಲ್ಲಿ ಒಂದೆರಡು ಮಕ್ಕಳು, ಇಲ್ಲಿ 4-5 ಮಕ್ಕಳು ಅಂದಾಗ ಅವಶ್ಯವಾಗಿ ವೃದ್ಧಿಯಾಗಿದೆ. ಭಾರತವಾಸಿಗಳೇ ಹಿಂದೂಗಳೆಂದು ಹೇಳಿಕೊಳ್ಳುತ್ತಾರೆ. ವಾಸ್ತವದಲ್ಲಿ ದೇವತಾ ಧರ್ಮದವರಾಗಿದ್ದರು. ಬೇರೆ ಯಾವುದೇ ಧರ್ಮದವರು ತಮ್ಮ ಧರ್ಮವನ್ನು ಮರೆಯುವುದಿಲ್ಲ. ಈ ಭಾರತವಾಸಿಗಳು ಮರೆತು ಹೋಗಿದ್ದಾರೆ. ನೋಡಿ, ಈ ಸಮಯದಲ್ಲಿ ಎಷ್ಟೊಂದು ಮನುಷ್ಯರಿದ್ದಾರೆ. ಇವರೆಲ್ಲರೂ ಬಂದು ಜ್ಞಾನವನ್ನು ಪಡೆಯುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಜನ್ಮಗಳನ್ನು ತಿಳಿದುಕೊಳ್ಳಬಹುದು. ಯಾರು ಪೂರ್ಣ 84 ಜನ್ಮಗಳನ್ನು ಪಡೆಯುತ್ತಾರೆಯೋ ಅವರು ಅವಶ್ಯವಾಗಿ ಹಳೆಯ ಭಕ್ತರಾಗಿರುತ್ತಾರೆ. ನಾವು ಎಷ್ಟು ಭಕ್ತಿಯನ್ನು ಮಾಡಿದ್ದೇವೆ ಎಂಬುದೂ ಸಹ ನೀವು ತಿಳಿದುಕೊಳ್ಳಬಹುದು. ಸ್ವಲ್ಪ ಮಾಡಿದ್ದರೆ ಜ್ಞಾನವೂ ಸಹ ಸ್ವಲ್ಪವೇ ಪಡೆಯುತ್ತಾರೆ ಹಾಗೂ ಕೆಲವರು ಆತ್ಮಗಳಿಗೇ ತಿಳಿಸುತ್ತಾರೆ. ಬಹಳ ಭಕ್ತಿ ಮಾಡಿದ್ದರೆ ಜ್ಞಾನವನ್ನು ಬಹಳ ಪಡೆಯುತ್ತಾರೆ ಹಾಗೂ ಅನೇಕರಿಗೆ ತಿಳಿಸುತ್ತಾರೆ. ಜ್ಞಾನವೇ ಪಡೆಯಲಿಲ್ಲವೆಂದರೆ ತಿಳಿಸುವುದೂ ಸಹ ಕಡಿಮೆ. ಆದ್ದರಿಂದ ಅವರಿಗೆ ಫಲವೂ ಸಹ ಕಡಿಮೆ ಸಿಗುತ್ತದೆ. ಲೆಕ್ಕವಿದೆಯಲ್ಲವೆ. ತಂದೆಗೆ ಒಬ್ಬರು ಲೆಕ್ಕವನ್ನು ಕಳುಹಿಸಿದರು. ಇಸ್ಲಾಮಿಯರದು ಇಷ್ಟು ಜನ್ಮ, ಬೌದ್ಧರದು ಇಷ್ಟು ಜನ್ಮವಾಗುತ್ತದೆ ಎಂದು. ಬುದ್ಧನೂ ಸಹ ಧರ್ಮ ಸ್ಥಾಪಕರಾಗಿದ್ದಾರೆ. ಅದಕ್ಕೆ ಮೊದಲು ಯಾವುದೇ ಬೌದ್ಧ ಧರ್ಮವಿರಲಿಲ್ಲ. ಬುದ್ಧನ ಆತ್ಮವು ಪ್ರವೇಶವಾಯಿತು ನಂತರ ಬೌದ್ಧ ಧರ್ಮವನ್ನು ಸ್ಥಾಪನೆ ಮಾಡಿದರು ನಂತರ ಒಬ್ಬರಿಂದ ವೃದ್ಧಿಯಾಯಿತು. ಅವರೂ ಸಹ ಒಬ್ಬ ಪ್ರಜಾಪಿತನಾಗಿದ್ದಾರೆ. ಒಬ್ಬರಿಂದ ಎಷ್ಟೊಂದು ವೃದ್ಧಿಯಾಗುತ್ತದೆ. ತಾವಂತೂ ಹೊಸ ಪ್ರಪಂಚದಲ್ಲಿ ರಾಜರಾಗಬೇಕು. ಇಲ್ಲಿ ವನವಾಸದಲ್ಲಿದ್ದೀರಿ. ಅಂದಾಗ ಯಾವುದೇ ವಸ್ತುವಿನ ಮೇಲೆ ಆಸಕ್ತಿಯಿರಬಾರದು. ನಾವು ಒಳ್ಳೆಯ ಬಟ್ಟೆಯನ್ನು ಹಾಕಿಕೊಳ್ಳಬೇಕೆನ್ನುವುದೂ ಸಹ ದೇಹಾಭಿಮಾನವಾಗಿದೆ. ಯಾವುದು ಸಿಗುತ್ತದೆಯೋ ಅದು ಒಳ್ಳೆಯದು. ಈ ಪ್ರಪಂಚವೇ ಸ್ವಲ್ಪ ಸಮಯ ಇರುತ್ತದೆ ಇಲ್ಲಿ ಒಳ್ಳೆಯ ಬಟ್ಟೆಯನ್ನು ಹಾಕಿಕೊಂಡರೆ ನಂತರ ಅಲ್ಲಿ ಕಡಿಮೆಯಾಗಿ ಬಿಡುತ್ತದೆ. ಆದ್ದರಿಂದ ಈ ಆಸಕ್ತಿಯನ್ನೂ ಬಿಡಬೇಕು. ಮುಂದೆ ಹೋದಂತೆ ತಾವು ಮಕ್ಕಳಿಗೆ ತಾನಾಗಿಯೇ ಸಾಕ್ಷಾತ್ಕಾರವಾಗುತ್ತದೆ. ತಾವು ಸ್ವಯಂ ಹೇಳುತ್ತೀರಿ - ಇವರಂತೂ ಬಹಳ ಚೆನ್ನಾಗಿ ಸರ್ವೀಸ್ ಮಾಡುತ್ತಾರೆ, ಚಮತ್ಕಾರವಾಗಿದೆ. ಇವರು ಬಹಳ ಒಳ್ಳೆಯ ಪದವಿಯನ್ನು ಪಡೆಯುತ್ತಾರೆ, ಅನ್ಯರನ್ನು ತಮ್ಮ ಸಮಾನ ಮಾಡಿಕೊಳ್ಳುತ್ತಾರೆ. ದಿನ-ಪ್ರತಿದಿನ ಹೂದೋಟವು ದೊಡ್ಡದಾಗುತ್ತದೆ. ಸತ್ಯಯುಗದ ಎಷ್ಟು ದೇವಿ-ದೇವತೆಗಳಿದ್ದಾರೆಯೋ ಅವರೆಲ್ಲರೂ ಇಲ್ಲಿಯೇ ಗುಪ್ತವಾಗಿ ಕುಳಿತಿದ್ದಾರೆ ನಂತರ ಪ್ರತ್ಯಕ್ಷವಾಗುತ್ತಾರೆ. ಈಗ ತಾವು ಗುಪ್ತವಾಗಿ ಪದವಿಯನ್ನು ಪಡೆಯುತ್ತಿದ್ದೀರಿ. ತಮಗೆ ಗೊತ್ತಿದೆ, ನಾವು ಮೃತ್ಯುಲೋಕದಲ್ಲಿ ಓದುತ್ತಿದ್ದೇವೆ, ಅಮರಲೋಕದಲ್ಲಿ ಪದವಿ ಪಡೆಯುತ್ತೇವೆ. ಇಂತಹ ವಿದ್ಯೆಯನ್ನು ಎಲ್ಲಿಯಾದರೂ ನೋಡಿದ್ದೀರಾ. ಹಳೆಯ ಜಗತ್ತಿನಲ್ಲಿ ಮೃತ್ಯುಲೋಕದ ವಿನಾಶವನ್ನು ಮಾಡಿಸುತ್ತಾರೆಯೋ ಅವರೇ ಈ ವಿದ್ಯೆಯನ್ನು ಓದಿಸುತ್ತಾರೆ. ನಿಮ್ಮ ಈ ಪುರುಷೋತ್ತಮ ಸಂಗಮಯುಗವು ಚಿಕ್ಕದಾಗಿದೆ. ತಂದೆಯು ಇದರಲ್ಲಿಯೇ ಬಂದು ಓದಿಸುತ್ತಾರೆ. ಬಂದ ಕೂಡಲೇ ನಿಮ್ಮ ಈ ವಿದ್ಯೆಯು ಪ್ರಾರಂಭವಾಗುತ್ತದೆ. ಅದಕ್ಕಾಗಿ ತಂದೆಯು ಹೇಳುತ್ತಾರೆ - ಶಿವಜಯಂತಿಯೇ ಗೀತಾ ಜಯಂತಿ ಎಂದು ಬರೆಯಿರಿ, ಇದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಅವರು ಕೃಷ್ಣನ ಹೆಸರನ್ನು ಇಟ್ಟಿದ್ದಾರೆ. ಈಗ ಈ ತಪ್ಪನ್ನು ಯಾರಾದರು ಅರ್ಥ ಮಾಡಿಕೊಳ್ಳಬೇಕು. ಎಷ್ಟು ದೊಡ್ಡ-ದೊಡ್ಡ ವ್ಯಕ್ತಿಗಳು ಮ್ಯೂಜಿಯಂಗೆ ಬರುತ್ತಾರೆ, ಅವರು ತಂದೆಯನ್ನು ತಿಳಿದುಕೊಂಡಿರುವುದಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಫಾರಂ ತುಂಬಿಸಿ ಆಗ ಅವರು ಸ್ವಲ್ಪವಾದರೂ ಕಲಿತುಕೊಂಡಿದ್ದಾರೆಂದು ಗೊತ್ತಾಗುತ್ತದೆ. ಬಾಕಿ ಇಲ್ಲಿ ಬಂದು ಏನು ಮಾಡುತ್ತಾರೆ. ಹೇಗೆ ಸಾಧು-ಸನ್ಯಾಸಿಗಳು, ಮಹಾತ್ಮರ ಬಳಿ ಹೋಗುತ್ತಾರೆ ಆದರೆ ಇಲ್ಲಿ ಆ ಮಾತಿಲ್ಲ. ಇವರಂತೂ ಸಾಧಾರಣ ರೂಪದಲ್ಲಿದ್ದಾರೆ, ವಸ್ತ್ರದಲ್ಲಿಯೂ ಸ್ವಲ್ಪವೂ ವ್ಯತ್ಯಾಸವಿಲ್ಲ. ಆದ್ದರಿಂದ ಯಾರೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಇವರು ವಜ್ರದ ವ್ಯಾಪಾರಿಯಾಗಿದ್ದರು ಎಂದಷ್ಟೇ ತಿಳಿದುಕೊಳ್ಳುತ್ತಾರೆ. ಮೊದಲು ವಿನಾಶಿ ರತ್ನಗಳ ವ್ಯಾಪಾರಿಯಾಗಿದ್ದರು, ಈಗ ಅವಿನಾಶಿ ಜ್ಞಾನರತ್ನಗಳ ವ್ಯಾಪಾರಿಯಾಗಿದ್ದಾರೆ. ತಾವು ಬೇಹದ್ದಿನ ತಂದೆಯ ಜೊತೆ ವ್ಯಾಪಾರ ಮಾಡುತ್ತೀರಿ. ಇವರು ಬಹಳ ದೊಡ್ಡ ವ್ಯಾಪಾರಸ್ಥರು, ಜಾದೂಗಾರರೂ ರತ್ನಾಗಾರರಾಗಿದ್ದಾರೆ ಅಂದಮೇಲೆ ಪ್ರತಿಯೊಬ್ಬರೂ ತಮ್ಮನ್ನು ನಾವು ರೂಪ ಬಸಂತರೆಂದು ತಿಳಿದುಕೊಳ್ಳಬೇಕು. ನಮ್ಮ ಬಳಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಜ್ಞಾನರತ್ನಗಳಿವೆ, ಈ ಜ್ಞಾನರತ್ನಗಳಿಂದ ತಾವು ಪಾರಸ ಬುದ್ಧಿಯವರಾಗುತ್ತೀರಿ. ಇದೂ ಸಹ ತಿಳಿದುಕೊಳ್ಳುವ ಮಾತುಗಳಾಗಿವೆ. ಯಾರು ಒಳ್ಳೆಯ ಬುದ್ಧಿವಂತರಿರುತ್ತಾರೆಯೋ ಅವರು ಕೇಳಿ ಧಾರಣೆ ಮಾಡಿಕೊಳ್ಳುತ್ತಾರೆ. ಒಂದುವೇಳೆ ಧಾರಣೆಯಾಗದಿದ್ದರೆ ಏನೂ ಪ್ರಯೋಜನವಿಲ್ಲ. ತಿಳಿದುಕೊಳ್ಳಿ ಅವರ ಜೋಳಿಗೆಯಲ್ಲಿ ರಂಧ್ರವಿದೆ ಅದು ಹರಿದು ಹೋಗುತ್ತದೆ. ತಂದೆಯು ಹೇಳುತ್ತಾರೆ - ನಾನು ನಿಮಗೆ ಅವಿನಾಶಿ ಜ್ಞಾನ ರತ್ನಗಳ ದಾನ ಕೊಡುತ್ತೇನೆ. ಒಂದುವೇಳೆ ತಾವು ದಾನ ಮಾಡುತ್ತಿದ್ದರೆ ತುಂಬಿರುತ್ತದೆ. ಇಲ್ಲದಿದ್ದರೆ ಏನೂ ಇಲ್ಲ ಖಾಲಿ ಇದೆ. ಓದುವುದಿಲ್ಲ, ನಿಯಮದನುಸಾರ ನಡೆಯುವುದೂ ಇಲ್ಲ, ಇದರಲ್ಲಿ ವಿಷಯಗಳು ಬಹಳ ಚೆನ್ನಾಗಿವೆ. ಪಂಚ ವಿಕಾರಗಳಿಂದ ತಾವು ಬಹಳ ದೂರವಿರಬೇಕು.

ತಂದೆಯು ತಿಳಿಸುತ್ತಾರೆ - ಯಾವ ರಕ್ಷಾಬಂಧನವನ್ನು ಆಚರಿಸುತ್ತಾರೆಯೋ ಅದು ಈ ಸಮಯದ್ದಾಗಿದೆ ಆದರೆ ಮನುಷ್ಯರು ರಾಖಿಯನ್ನು ಏಕೆ ಕಟ್ಟುವುದು ಎಂಬುದರ ಅರ್ಥವನ್ನು ತಿಳಿದುಕೊಂಡಿಲ್ಲ. ಅವರಂತೂ ಅಪವಿತ್ರರಾಗುತ್ತಲೇ ಇರುತ್ತಾರೆ, ರಾಖಿಯನ್ನು ಕಟ್ಟುತ್ತಲೇ ಇರುತ್ತಾರೆ. ಮೊದಲು ಬ್ರಾಹ್ಮಣರು ರಕ್ಷಾಬಂಧನವನ್ನು ಕಟ್ಟುತ್ತಿದ್ದರು, ಈಗ ಸಹೋದರಿಯು ಸಹೋದರನಿಗೆ ಕಟ್ಟುತ್ತಾಳೆ ಖರ್ಚಿಗಾಗಿ ಅಲ್ಲಿ ಪವಿತ್ರತೆಯ ಮಾತಿಲ್ಲ. ಬಹಳ ಫ್ಯಾಷನ್ ಆಗಿರುವ ರಾಖಿಗಳನ್ನು ತಯಾರಿಸುತ್ತಾರೆ. ಈ ದೀಪಾವಳಿ, ದಸರಾ ಎಲ್ಲವೂ ಈ ಸಂಗಮದ್ದಾಗಿದೆ. ತಂದೆಯು ಯಾವ ಪಾತ್ರವನ್ನು ಮಾಡುತ್ತಾರೆಯೋ ಅದು ಭಕ್ತಿಮಾರ್ಗದಲ್ಲಿ ನಡೆಯುತ್ತದೆ. ತಂದೆಯು ತಮಗೆ ಸತ್ಯ ಗೀತೆಯನ್ನು ಹೇಳಿ ಈ ಲಕ್ಷ್ಮೀ-ನಾರಾಯಣರನ್ನಾಗಿ ಮಾಡುತ್ತಾರೆ. ತಾವು ಮೊದಲ ದರ್ಜೆಯಲ್ಲಿ ಹೋಗುತ್ತೀರಿ. ಈಗ ಸತ್ಯ ನಾರಾಯಣನ ಕಥೆಯನ್ನು ಕೇಳಿ ತಾವು ನರನಿಂದ ನಾರಾಯಣರಾಗುತ್ತೀರಿ. ಈಗ ತಾವು ಮಕ್ಕಳೇ ಪೂರ್ಣ ಜಗತ್ತನ್ನು ಜಾಗೃತಗೊಳಿಸಬೇಕು. ಎಷ್ಟೊಂದು ಯೋಗದ ಶಕ್ತಿಯು ಬೇಕು. ಯೋಗದ ಶಕ್ತಿಯಿಂದಲೇ ತಾವು ಕಲ್ಪ-ಕಲ್ಪವೂ ಸ್ವರ್ಗದ ಸ್ಥಾಪನೆ ಮಾಡುತ್ತೀರಿ. ಯೋಗಬಲದಿಂದ ಸ್ಥಾಪನೆಯಾಗುತ್ತದೆ, ಬಾಹುಬಲದಿಂದ ವಿನಾಶವಾಗುತ್ತದೆ. ತಂದೆ ಮತ್ತು ಆಸ್ತಿ ಇವರಡೇ ಅಕ್ಷರಗಳಿರುತ್ತದೆ. ಯೋಗಬಲದಿಂದ ತಾವು ವಿಶ್ವದ ಮಾಲೀಕರಾಗುತ್ತೀರಿ. ತಮ್ಮ ಜ್ಞಾನ ಸಂಪೂರ್ಣ ಗುಪ್ತವಾಗಿದೆ. ತಾವು ಯಾರು ಸತೋಪ್ರಧಾನರಾಗಿದ್ದೀರೋ ಅವರೇ ತಮೋಪ್ರಧಾನರಾಗಿದ್ದೀರಿ ಮತ್ತೆ ಸತೋಪ್ರಧಾನರಾಗಬೇಕು. ಪ್ರತಿಯೊಂದು ವಸ್ತುವು ಅವಶ್ಯವಾಗಿ ಹೊಸದರಿಂದ ಹಳೆಯದಾಗುತ್ತದೆ. ಹೊಸ ಪ್ರಪಂಚದಲ್ಲಿ ಏನು ತಾನೇ ಇರುವುದಿಲ್ಲ! ಹಳೆಯದಲ್ಲಂತೂ ಏನೇನೂ ಇಲ್ಲ. ಭಾರತದಲ್ಲಿ ಸ್ವರ್ಗವಿತ್ತು, ಈಗ ಭಾರತವು ನರಕವಾಗಿದೆ. ಹಗಲು-ರಾತ್ರಿಯ ಅಂತರವಿದೆ. ರಾವಣನ ಭೂತವನ್ನು ಮಾಡಿ ಸುಡುತ್ತಾರೆ ಆದರೆ ಅರ್ಥವಂತೂ ಗೊತ್ತಿಲ್ಲ. ಈಗ ಇವರು ಏನೇನು ಮಾಡುತ್ತಿದ್ದಾರೆ ಎಂಬುದು ನಿಮಗೆ ಗೊತ್ತಿದೆ. ನಿಮ್ಮಲ್ಲಿಯೂ ಸಹ ನಿನ್ನೆ ಅಜ್ಞಾನವಿತ್ತು, ಇಂದು ಜ್ಞಾನವಿದೆ. ನೆನ್ನೆ ನರಕದಲ್ಲಿದ್ದಿರಿ, ಇಂದು ಸ್ವರ್ಗಕ್ಕೆ ಹೋಗುತ್ತಿದ್ದೀರಿ. ಇದು ಸತ್ಯವಾಗಿದೆ ಹೇಗೆ ಜಗತ್ತಿನವರು ಹೇಳುತ್ತಾರೆ ಯಾವ ಸ್ವರ್ಗವಾಸಿಗಳಾದರು, ಎಂಬುವ ರೀತಿಯಿಲ್ಲ. ತಾವು ಈಗ ಸ್ವರ್ಗಕ್ಕೆ ಹೋಗುತ್ತೀರಿ, ನಂತರ ಇಲ್ಲಿ ನರಕವಿರುವುದಿಲ್ಲ - ಇದು ತಿಳಿದುಕೊಳ್ಳುವ ವಿಚಾರಗಳಾಗಿವೆ. ಇದು ಸೆಕೆಂಡಿನ ಮಾತಾಗಿದೆ. ತಂದೆಯನ್ನು ನೆನಪು ಮಾಡಿದರೆ ವಿಕರ್ಮ ವಿನಾಶವಾಗುತ್ತದೆ. ಇದನ್ನು ಎಲ್ಲರಿಗೂ ಹೇಳುತ್ತಾ ಇರಿ. ನೀವು ಈ ಲಕ್ಷ್ಮೀ-ನಾರಾಯಣರ ಹಾಗಿದ್ದಿರಿ ಮತ್ತೆ 84 ಜನ್ಮಗಳನ್ನು ಪಡೆದು ಹೀಗಾಗಿದ್ದೀರಿ. ಸತೋಪ್ರಧಾನರಿಂದ ತಮೋಪ್ರಧಾನರಾಗುದ್ದೀರಿ. ಮತ್ತೆ ಸತೋಪ್ರಧಾನರಾಗಬೇಕು. ಆತ್ಮವಂತೂ ವಿನಾಶವಾಗುವುದಿಲ್ಲ ಬಾಕಿ ಅದು ತಮೋಪ್ರಧಾನದಿಂದ ಮತ್ತೆ ಸತೋಪ್ರಧಾನವಾಗಲೇಬೇಕು. ತಂದೆಯು ಅನೇಕ ಪ್ರಕಾರವಾಗಿ ತಿಳಿಸುತ್ತಲೇ ಇರುತ್ತಾರೆ. ನನ್ನ ಬ್ಯಾಟರಿ ಎಂದೂ ಹಳೆಯದಾಗುವುದೇ ಇಲ್ಲ. ತಮ್ಮನ್ನು ಬಿಂದು ಆತ್ಮವೆಂದು ತಿಳಿಯಿರಿ ಎಂದು ತಂದೆಯು ಹೇಳುತ್ತಾರೆ. ಇವರ ಆತ್ಮವು ಹೊರಟು ಹೋಯಿತೆಂದು ಹೇಳುತ್ತಾರೆ. ಅಂದಮೇಲೆ ಆತ್ಮವು ಸಂಸ್ಕಾರದನುಸಾರವಾಗಿ ಒಂದು ದೇಹವನ್ನು ಬಿಟ್ಟು ಇನ್ನೊಂದನ್ನು ಪಡೆಯುತ್ತದೆ. ಈಗ ಆತ್ಮರು ಮನೆಗೆ ಹೋಗಬೇಕು. ಇದೂ ಸಹ ನಾಟಕವಾಗಿದೆ. ಸೃಷ್ಟಿಚಕ್ರವು ಪುನರಾವರ್ತನೆಯಾಗುತ್ತಲೇ ಇರುತ್ತದೆ. ಪ್ರಪಂಚದಲ್ಲಿ ಎಷ್ಟು ಮನುಷ್ಯರಿದ್ದಾರೆಂದು ಕೊನೆಯಲ್ಲಿ ಲೆಕ್ಕ ತೆಗೆಯುತ್ತಾರೆ. ಇಷ್ಟು ಆತ್ಮರು ಇದ್ದಾರೆಂದು ಏಕೆ ಹೇಳುವುದಿಲ್ಲ. ತಂದೆಯು ಹೇಳುತ್ತಾರೆ - ಮಕ್ಕಳೇ ನನ್ನನ್ನು ನೀವು ಎಷ್ಟೊಂದು ಮರೆತು ಹೋಗಿದ್ದೀರಿ ಮತ್ತೆ ನಾನೇ ಎಲ್ಲರ ಕಲ್ಯಾಣ ಮಾಡಬೇಕು ಅದಕ್ಕಾಗಿಯೇ ತಂದೆಯನ್ನು ಕರೆಯುತ್ತಾರೆ. ನೀವು ತಂದೆಯನ್ನು ಮರೆತು ಹೋಗುತ್ತೀರಿ, ಆದರೆ ತಂದೆ, ಮಕ್ಕಳನ್ನು ಮರೆಯುವುದಿಲ್ಲ. ತಂದೆಯು ಬರುವುದೇ ಪತಿತರನ್ನು ಪಾವನ ಮಾಡಲು. ಇದು ಗೋಮುಖವಾಗಿದೆ, ಬಾಕಿ ನಂದಿ ಇತ್ಯಾದಿಯ ಮಾತಿಲ್ಲ. ಇದು ಭಾಗ್ಯಶಾಲಿ ರಥವಾಗಿದೆ. ಶಿವ ತಂದೆಯು ತಾವು ಮಕ್ಕಳಿಗೆ ಹೇಳುತ್ತಾರೆ - ತಂದೆಯು ತಮಗೆ ಶೃಂಗಾರ ಮಾಡುತ್ತಾರೆ ಇದನ್ನು ಪಕ್ಕಾ ಮಾಡಿಕೊಳ್ಳಿ. ತಂದೆ ನೆನಪು ಮಾಡಿದರೆ ಬಹಳ ಲಾಭವಿದೆ. ಶಿವ ತಂದೆಯು ನಮಗೆ ಇವರ ಮೂಲಕ (ಬ್ರಹ್ಮಾರವರ ಮೂಲಕ) ಓದಿಸುತ್ತಾರೆ ಅಂದಮೇಲೆ ಇವರನ್ನು ನೆನಪು ಮಾಡಬಾರದು. ಸದ್ಗುರು ಒಬ್ಬ ಶಿವ ತಂದೆಯಾಗಿದ್ದಾರೆ, ಅವರ ಮೇಲೆ ನೀವು ಅರ್ಪಣೆಯಾಗಬೇಕು. ಇವರೂ (ಬ್ರಹ್ಮಾ) ಸಹ ಅವರ ಮೇಲೆ ಅರ್ಪಣೆಯಾದರಲ್ಲವೆ. ತಂದೆಯು ಹೇಳುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ. ಮಕ್ಕಳು ಸತ್ಯಯುಗೀ ಹೂಗಳ ತೋಟಕ್ಕೆ ಹೋಗುತ್ತೀರಿ ಅಂದಮೇಲೆ ಮುಳ್ಳುಗಳ ಕಾಡಿನಲ್ಲಿ ಮೋಹವೇಕೆ ಇರಬೇಕು! 63 ಜನ್ಮಗಳು ಭಕ್ತಿಮಾರ್ಗದ ಶಾಸ್ತ್ರಗಳ ಪಠಣ ಮಾಡುತ್ತೀರಿ. ಪೂಜೆ ಮಾಡುತ್ತಾ ಬಂದಿದ್ದೀರಿ. ತಾವು ಮೊದಲು ಶಿವತಂದೆಯ ಪೂಜೆ ಮಾಡಿದಿರಿ, ಅದಕ್ಕಾಗಿಯೇ ಸೋಮನಾಥನ ಮಂದಿರವನ್ನು ಮಾಡಲಾಗಿದೆ. ಮಂದಿರವಂತೂ ಎಲ್ಲಾ ರಾಜರ ಮನೆಯಲ್ಲಿತ್ತು ಎಷ್ಟೊಂದು ವಜ್ರ-ವೈಡೂರ್ಯಗಳಿತ್ತು, ನಂತರ ಅವರು ಬಂದು ದಾಳಿ ಮಾಡಿದರು. ಒಂದು ಮಂದಿರದಿಂದ ಎಷ್ಟೊಂದು ಚಿನ್ನ ಮುಂತಾದವನ್ನು ತೆಗೆದುಕೊಂಡು ಹೋದರು. ತಾವು ಅಂತಹವರು ವಿಶ್ವದ ಮಾಲೀಕರಾಗುತ್ತೀರಿ. ಇವರೂ ಧನವಂತರಾಗಿದ್ದರು, ವಿಶ್ವದ ಮಾಲೀಕರಾಗಿದ್ದರು. ಆದರೆ ಇವರ ರಾಜ್ಯಕ್ಕೆ ಎಷ್ಟು ಸಮಯವಾಯಿತೆಂದು ಯಾರಿಗೂ ಗೊತ್ತಿಲ್ಲ. 5000 ವರ್ಷಗಳಾಯಿತೆಂದು ತಂದೆಯು ತಿಳಿಸುತ್ತಾರೆ. 2500 ವರ್ಷಗಳು ರಾಜ್ಯಭಾರ ಮಾಡಿದರು, ಉಳಿದ 2500 ವರ್ಷಗಳಲ್ಲಿ ಇಷ್ಟೊಂದು ಮಠ ಪಂಥಗಳು ವೃದ್ಧಿಯಾಯಿತು.

ನಮಗೆ ಬೇಹದ್ದಿನ ತಂದೆಯೇ ಓದಿಸುತ್ತಾರೆಂದು ತಾವು ಮಕ್ಕಳಿಗೆ ಖುಷಿಯಾಗಬೇಕು. ಅಪಾರವಾದ ಸಂಪತ್ತು ಸಿಗುತ್ತದೆ, ಸಾಗರದಿಂದ ಹೊರಬಂದಂತಹ ದೇವತೆಗಳು ರತ್ನಗಳ ತಟ್ಟೆಗಳನ್ನು ತುಂಬಿಕೊಂಡು ಬಂದರೆಂದು ತೋರಿಸುತ್ತಾರೆ. ಈಗ ತಮಗೆ ಜ್ಞಾನರತ್ನಗಳು ತುಂಬಿದ ತಟ್ಟೆಗಳು ಸಿಗುತ್ತವೆ. ತಂದೆಯಂತೂ ಜ್ಞಾನದ ಸಾಗರನಾಗಿದ್ದಾರೆ. ಕೆಲವರು ಚೆನ್ನಾಗಿ ತಟ್ಟೆಗಳನ್ನು ತುಂಬಿಕೊಳ್ಳುತ್ತಾರೆ, ಕೆಲವರದು ಸೋರಿ ಹೋಗುತ್ತದೆ. ಯಾರು ಚೆನ್ನಾಗಿ ಓದುತ್ತಾರೆ, ಓದಿಸುತ್ತಾರೆಯೋ ಅವರು ಖಂಡಿತ ಧನವಂತರಾಗುತ್ತಾರೆ. ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಇದು ಡ್ರಾಮಾದಲ್ಲಿ ನಿಶ್ಚಿತವಾಗಿದೆ. ಯಾರು ಚೆನ್ನಾಗಿ ಓದುತ್ತಾರೆಯೋ ಅವರಿಗೆ ವಿದ್ಯಾರ್ಥಿವೇತನವೂ ಸಿಗುತ್ತದೆ. ಇದು ಈಶ್ವರೀಯ ಅವಿನಾಶಿ ವಿಧ್ಯಾರ್ಥಿವೇತನ ಅದು ವಿನಾಶಿಯಾಗಿದೆ. ಏಣಿಯು ಬಹಳ ಅದ್ಭುತವಾಗಿದೆ 84 ಜನ್ಮಗಳ ಕಥೆಯಲ್ಲವೆ. ತಂದೆಯು ತಿಳಿಸುತ್ತಾರೆ - ಏಣಿಯು ಅಷ್ಟು ದೊಡ್ಡ ಟ್ರಾನ್ಸ್ಲೇಟ್ ಚಿತ್ರವನ್ನು ಮಾಡಿ, ಅದು ದೂರದಿಂದಲೇ ಸ್ಪಷ್ಟವಾಗಿ ಕಾಣಿಸಲಿ. ಮನುಷ್ಯರು ಅದನ್ನು ನೋಡಿ ಆಶ್ಚರ್ಯ ಪಡುತ್ತಾರೆ, ಮತ್ತೆ ನಿಮ್ಮ ಹೆಸರು ಪ್ರಸಿದ್ಧವಾಗುತ್ತಾ ಹೋಗುತ್ತದೆ. ಈಗ ಯಾರು ಸುತ್ತಾಡಿಕೊಂಡು ಹೋಗುತ್ತಾರೆಯೋ ಅವರು ಕೊನೆಯಲ್ಲಿ ಬರುತ್ತಾರೆ. 2-4 ಬಾರಿ ಸುತ್ತಾಡಿದ ನಂತರ ಅದೃಷ್ಟದಲ್ಲಿದ್ದರೆ ಬರುತ್ತಾರೆ. ಪರಂಜ್ಯೋತಿಯಂತೂ ಒಬ್ಬರೇ ಆಗಿದ್ದಾರೆ, ಮತ್ತೆ ಇವರು ಎಲ್ಲಿಗೆ ಹೋಗುತ್ತಾರೆ? ಮಕ್ಕಳು ಬಹಳ ಮಧುರರಾಗಬೇಕು, ಯಾವಾಗ ಯೋಗದಲ್ಲಿರುತ್ತೀರೋ ಆಗ ಮಧುರರಾಗಬಹುದು. ಯೋಗದಿಂದಲೇ ಆಕರ್ಷಣೆಯಾಗುತ್ತದೆ. ಎಲ್ಲಿಯವರೆಗೆ ತುಕ್ಕು ಬಿಟ್ಟು ಹೋಗುವುದಿಲ್ಲವೋ ಅಲ್ಲಿಯವರೆಗೆ ಯಾರಿಗೂ ಆಕರ್ಷಣೆಯಾಗುವುದಿಲ್ಲ. ಏಣಿಯ ರಹಸ್ಯವನ್ನು ಎಲ್ಲಾ ಆತ್ಮಗಳಿಗೂ ಹೇಳಬೇಕು. ನಿಧಾನ-ನಿಧಾನವಾಗಿ ಎಲ್ಲರೂ ನಂಬರ್ವಾರ್ ಆಗಿ ಅರ್ಥ ಮಾಡಿಕೊಳ್ಳುತ್ತಾರೆ. ಇದೂ ಸಹ ನಾಟಕವಾಗಿದೆ. ವಿಶ್ವದ ಇತಿಹಾಸ-ಭೂಗೋಳವು ಪುನರಾವರ್ತನೆಯಾಗುತ್ತಿರುತ್ತದೆ. ಯಾರು ಇದನ್ನು ತಿಳಿಸಿದರೋ ಅವರನ್ನು ನೆನಪು ಮಾಡಬೇಕಲ್ಲವೆ. ತಂದೆಯನ್ನು ಸರ್ವವ್ಯಾಪಿ ಎಂದು ಹೇಳುತ್ತಾರೆ ಆದರೆ ಅಲ್ಲಿ (ಕಲಿಯುಗ) ಮಾಯೆಯು ಸರ್ವವ್ಯಾಪಿಯಾಗಿದೆ. ಇಲ್ಲಿ ತಂದೆಯಿದ್ದಾರೆ ಏಕೆಂದರೆ ಸೆಕೆಂಡಿನಲ್ಲಿ ಬರಲು ಸಾಧ್ಯ. ತಾವು ತಿಳಿಸಬೇಕು - ತಂದೆಯು ಇವರಲ್ಲಿ ಕುಳಿತಿದ್ದಾರೆ. ಮಾಡಿ-ಮಾಡಿಸುವವರಲ್ಲವೆ. ಮಾಡುತ್ತಾರೆ ಹಾಗೂ ಮಾಡಿಸುತ್ತಾರೆ, ಮಕ್ಕಳಿಗೆ ಆದೇಶ ಕೊಡುತ್ತಿರುತ್ತಾರೆ ಮತ್ತು ಸ್ವಯಂ ಮಾಡುತ್ತಲೂ ಇರುತ್ತಾರೆ. ಈ ಶರೀರದಿಂದ ಏನು ಮಾಡಲು ಸಾಧ್ಯ, ಏನು ಮಾಡಲು ಸಾಧ್ಯವಿಲ್ಲವೆಂದು ಲೆಕ್ಕ ಮಾಡಿ. ತಂದೆಯು ಭೋಗ ಸ್ವೀಕಾರ ಮಾಡುವುದಿಲ್ಲ. ಸುಗಂಧವನ್ನು ಸ್ವೀಕರಿಸುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ರೂಪಬಸಂತರಾಗಿ ತಮ್ಮ ಬುದ್ಧಿರೂಪಿ ಜೋಳಿಗೆಯನ್ನು ಅವಿನಾಶಿ ಜ್ಞಾನರತ್ನಗಳಿಂದ ಸದಾ ತುಂಬಿಟ್ಟುಕೊಳ್ಳಬೇಕು. ಬುದ್ಧಿರೂಪಿ ಜೋಳಿಗೆಯಲ್ಲಿ ಯಾವುದೇ ರಂಧ್ರ ಇರಬಾರದು. ಜ್ಞಾನರತ್ನಗಳನ್ನು ಧಾರಣೆ ಮಾಡಿ ಅನ್ಯರಿಗೂ ದಾನ ಮಾಡಬೇಕು.

2. ವಿದ್ಯಾರ್ಥಿ ವೇತನವನ್ನು ಪಡೆಯಲು ವಿದ್ಯೆಯನ್ನು ಚೆನ್ನಾಗಿ ಓದಬೇಕು. ಪೂರ್ಣ ವನವಾಸದಲ್ಲಿರಬೇಕು. ಯಾವುದೇ ಪ್ರಕಾರದ ಆಸಕ್ತಿಯನ್ನಿಟ್ಟುಕೊಳ್ಳಬಾರದು. ಸುಗಂಧಭರಿತ ಹೂಗಳಾಗಿ ಅನ್ಯರನ್ನೂ ಮಾಡಬೇಕು.


ವರದಾನ:
ಶುಭ ಚಿಂತಕ ಸ್ಥಿತಿಯ ಮೂಲಕ ಎಲ್ಲರ ಸಹಯೋಗ ಪ್ರಾಪ್ತಿ ಮಾಡಿಕೊಳ್ಳುವಂತಹ ಸರ್ವರ ಸ್ನೇಹಿ ಭವ.

ಶುಭಚಿಂತಕ ಆತ್ಮರ ಪ್ರತಿ ಎಲ್ಲರ ಹೃದಯದಲ್ಲಿ ಸ್ನೇಹ ಉತ್ಪನ್ನವಾಗುವುದು ಮತ್ತು ಆ ಸ್ನೇಹವೇ ಸಹಯೋಗಿಗಳನ್ನಾಗಿ ಮಾಡುವುದು. ಎಲ್ಲಿ ಸ್ನೇಹವಿರುವುದು, ಅಲ್ಲಿ ಸಮಯ, ಸಂಪತ್ತು, ಸಹಯೋಗ ಸದಾ ತ್ಯಾಗ ಮಾಡಲು ತಯಾರಾಗಿ ಬಿಡುತ್ತಾರೆ. ಆದ್ದರಿಂದ ಶುಭಚಿಂತಕ, ಸ್ನೇಹಿಗಳನ್ನಾಗಿ ಮಾಡುವುದು ಮತ್ತು ಸ್ನೇಹ ಎಲ್ಲಾ ಪ್ರಕಾರದ ಸಹಯೋಗದಲ್ಲಿ ತ್ಯಾಗ ಮಾಡಿಸುವುದು. ಆದ್ದರಿಂದ ಸದಾ ಶುಭ ಚಿಂತನೆಯಿಂದ ಸಂಪನ್ನರಾಗಿರಿ ಮತ್ತು ಶುಭ ಚಿಂತಕರಾಗಿ ಸರ್ವರನ್ನು ಸ್ನೇಹಿ ಸಹಯೋಗಿಗಳಾನ್ನಾಗಿ ಮಾಡಿ.

ಸ್ಲೋಗನ್:
ಈ ಸಮಯದಲ್ಲಿ ದಾತಾ ಆದಾಗ ನಿಮ್ಮ ರಾಜ್ಯದಲ್ಲಿ ಜನ್ಮ-ಜನ್ಮಾಂತರ ಪ್ರತಿಯೊಬ್ಬರೂ ಸಂಪನ್ನರಾಗಿರುತ್ತಾರೆ.


ಈ ಅವ್ಯಕ್ತ ಮಾಸ ನಾವೆಲ್ಲಾ ಬ್ರಹ್ಮ ವತ್ಸರಿಗೆಲ್ಲಾ ವಿಶೇಷ ವರದಾನಿ ಮಾಸವಾಗಿದೆ, ಇದರಲ್ಲಿ ನಾವು ಅಂತರ್ಮುಖಿಯಾಗಿ ಸಾಕಾರ ಬ್ರಹ್ಮ ತಂದೆಯ ಸಮಾನ ಆಗುವಂತಹ ಲಕ್ಷ್ಯವನ್ನಿಟ್ಟು ತೀವ್ರ ಪುರುಷಾರ್ಥವನ್ನು ಮಾಡುವೆವು, ಅದಕ್ಕಾಗಿ ಈ ಜನವರಿ ತಿಂಗಳಲ್ಲಿ ಪ್ರತಿದಿನದ ಮುರಳಿಯ ಕೆಳಗೆ ವಿಶೇಷ ಪುರುಷಾರ್ಥದ ಒಂದು ಪಾಯಿಂಟ್ ಬರೆಯಲಾಗುವುದು, ದಯ ಮಾಡಿ ಎಲ್ಲರೂ ಇದರನುಸಾರ ಗಮನವಿಟ್ಟು ಇಡೀ ದಿನ ಇದರ ಬಗ್ಗೆ ಮನನ-ಚಿಂತನೆ ಮಾಡುತ್ತಾ ಅವ್ಯಕ್ತವತನದ ಸಂಚಾರ ಮಾಡಿ.

ಬ್ರಹ್ಮ ತಂದೆಯ ಸಮಾನರಾಗಲು ವಿಶೇಷ ಪುರುಷಾರ್ಥ

ಸಮಯ ಪ್ರಮಾಣ ಮೂರು ಶಬ್ಧ ಸದಾ ನೆನಪಿನಲ್ಲಿಡಿ - ಅಂತರ್ಮುಖಿ, ಅವ್ಯಕ್ತ ಮತ್ತು ಅಲೌಕಿಕ, ಇಲ್ಲಿಯವರೆಗೆ ಸ್ವಲ್ಪ ಲೌಕಿಕತನ ಮಿಶ್ರವಾಗಿದೆ. ಆದರೆ ಯಾವಾಗ ಸಂಪೂರ್ಣ ಅಲೌಕಿಕ ಅಂತರ್ಮುಖಿಗಳಾಗಿ ಬಿಡುವಿರಿ ಆಗ ಅವ್ಯಕ್ತ ಫರಿಶ್ತೆಗಳಾಗಿ ಕಂಡುಬರುವಿರಿ. ಆತ್ಮೀಯತೆ ಅಥವಾ ಅಲೌಕಿಕ ಸ್ಥಿತಿಯಲ್ಲಿರಲು ಅಂತರ್ಮುಖಿಗಳಾಗಿ.