01.01.21         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನೀವು ಪಾವನ ಪ್ರಪಂಚದಲ್ಲಿ ಹೋಗಬೇಕಾಗಿದೆ, ಆದ್ದರಿಂದ ಕಾಮ ಮಹಾಶತ್ರುವಿನ ಮೇಲೆ ಜಯ ಗಳಿಸಬೇಕಾಗಿದೆ, ಕಾಮಜೀತ-ಜಗಜ್ಜೀತರಾಗಬೇಕಾಗಿದೆ

ಪ್ರಶ್ನೆ:
ಪ್ರತಿಯೊಬ್ಬರೂ ತಮ್ಮ ಚಲನೆಯಿಂದ ಎಲ್ಲರಿಗೆ ಯಾವ ಸಾಕ್ಷಾತ್ಕಾರ ಮಾಡಿಸಬಹುದು?

ಉತ್ತರ:
ನಾನು ಹಂಸವಾಗಿದ್ದೇನೆಯೇ ಅಥವಾ ಕೊಕ್ಕರೆಯಾಗಿದ್ದೇನೆಯೇ? ಇದನ್ನು ಪ್ರತಿಯೊಬ್ಬರೂ ತಮ್ಮ ಚಲನೆಯಿಂದಲೇ ಎಲ್ಲರಿಗೆ ಸಾಕ್ಷಾತ್ಕಾರ ಮಾಡಿಸಬಹುದು. ಏಕೆಂದರೆ ಹಂಸಗಳು ಎಂದೂ ಯಾರಿಗೂ ದುಃಖ ಕೊಡುವುದಿಲ್ಲ. ಕೊಕ್ಕರೆಯು ದುಃಖ ಕೊಡುತ್ತದೆ, ಅದು ವಿಕಾರಿಯಾಗಿರುತ್ತದೆ. ನೀವು ಮಕ್ಕಳು ಈಗ ಕೊಕ್ಕರೆಯಿಂದ ಹಂಸಗಳಾಗಿದ್ದೀರಿ. ನೀವು ಪಾರಸ ಬುದ್ಧಿಯವರಾಗುವ ಮಕ್ಕಳ ಕರ್ತವ್ಯವು ಎಲ್ಲರನ್ನೂ ಪಾರಸ ಬುದ್ಧಿಯವರನ್ನಾಗಿ ಮಾಡುವುದಾಗಿದೆ.

ಓಂ ಶಾಂತಿ.
ಓಂ ಶಾಂತಿ ಎಂದು ಹೇಳಿದಾಗ ತಮ್ಮ ಸ್ವ ಧರ್ಮವು ನೆನಪಿಗೆ ಬರುತ್ತದೆ, ಮನೆಯ ನೆನಪೂ ಬರುತ್ತದೆ. ಆದರೆ ಮನೆಯಲ್ಲಿ ಕುಳಿತು ಬಿಡುವಂತಿಲ್ಲ. ತಂದೆಯ ಮಕ್ಕಳಾಗಿದ್ದೀರೆಂದಮೇಲೆ ಅವಶ್ಯವಾಗಿ ತಮ್ಮ ಸ್ವರ್ಗದ ನೆನಪನ್ನೂ ಮಾಡಬೇಕಾಗಿದೆ. ಅಂದಾಗ ಓಂ ಶಾಂತಿ ಎಂದು ಹೇಳುವುದರಿಂದ ಇಡೀ ಜ್ಞಾನವು ಬುದ್ಧಿಯಲ್ಲಿ ಬಂದು ಬಿಡುತ್ತದೆ. ನಾನಾತ್ಮ ಶಾಂತ ಸ್ವರೂಪನಾಗಿದ್ದೇನೆ. ಶಾಂತಿಯ ಸಾಗರ ತಂದೆಯ ಮಗುವಾಗಿದ್ದೇನೆ. ಯಾವ ತಂದೆಯು ಸ್ವರ್ಗದ ಸ್ಥಾಪನೆ ಮಾಡುತ್ತಾರೆಯೋ ಆ ತಂದೆಯೇ ನಮ್ಮನ್ನು ಪವಿತ್ರ, ಶಾಂತ ಸ್ವರೂಪರನ್ನಾಗಿ ಮಾಡುತ್ತಾರೆ. ಮುಖ್ಯವಾದ ಮಾತು ಪವಿತ್ರತೆಯದಾಗಿದೆ. ಪ್ರಪಂಚವೇ ಪವಿತ್ರ ಮತ್ತು ಅಪವಿತ್ರವಾಗುತ್ತದೆ. ಪವಿತ್ರ ಪ್ರಪಂಚದಲ್ಲಿ ಯಾರೊಬ್ಬರೂ ವಿಕಾರಿಗಳಿರುವುದಿಲ್ಲ. ಅಪವಿತ್ರ ಪ್ರಪಂಚದಲ್ಲಿ ಪಂಚ ವಿಕಾರಗಳಿವೆ ಆದ್ದರಿಂದ ವಿಕಾರೀ ಪ್ರಪಂಚವೆಂದು ಹೇಳಲಾಗುತ್ತದೆ. ಅದು ನಿರ್ವಿಕಾರಿ ಪ್ರಪಂಚವಾಗಿದೆ, ನಿರ್ವಿಕಾರಿ ಪ್ರಪಂಚದಿಂದ ಇಳಿಯುತ್ತಾ-ಇಳಿಯುತ್ತಾ ವಿಕಾರಿ ಪ್ರಪಂಚದಲ್ಲಿ ಬರುತ್ತೀರಿ. ಅದು ಪಾವನ ಪ್ರಪಂಚ, ಇದು ಪತಿತ ಪ್ರಪಂಚವಾಗಿದೆ. ಅದು ದಿನ, ಸುಖವಾಗಿದೆ. ಇದು ಅಲೆದಾಡುವ ರಾತ್ರಿಯಾಗಿದೆ. ಹಾಗೆ ನೋಡಿದರೆ ರಾತ್ರಿಯಲ್ಲಿ ಯಾರೂ ಅಲೆಯುವುದಿಲ್ಲ ಆದರೆ ಭಕ್ತಿಗೆ ಅಲೆಯುವುದೆಂದು ಹೇಳಲಾಗುತ್ತದೆ.

ನೀವು ಮಕ್ಕಳು ಇಲ್ಲಿಗೆ ಸದ್ಗತಿಯನ್ನು ಪಡೆಯಲು ಬಂದಿದ್ದೀರಿ. ನಿಮ್ಮ ಆತ್ಮದಲ್ಲಿ ಎಲ್ಲಾ ಪಾಪಗಳಿತ್ತು, ಪಂಚ ವಿಕಾರಗಳಿತ್ತು, ಅದರಲ್ಲಿಯೂ ಮುಖ್ಯವಾದುದು ಕಾಮ ವಿಕಾರವಾಗಿದೆ. ಇದರಿಂದಲೇ ಮನುಷ್ಯರು ಪಾಪಾತ್ಮರಾಗುತ್ತಾರೆ. ಇದಂತೂ ಪ್ರತಿಯೊಬ್ಬರಿಗೂ ಗೊತ್ತಿದೆ, ನಾವು ಪತಿತರಾಗಿದ್ದೇವೆ ಮತ್ತು ಪಾಪಾತ್ಮರೂ ಆಗಿದ್ದೇವೆ. ಒಂದು ಕಾಮ ವಿಕಾರದ ಕಾರಣ ಮತ್ತೆಲ್ಲಾ ಅರ್ಹತೆ ಹೊರಟು ಹೋಗುತ್ತವೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಕಾಮವನ್ನು ಗೆದ್ದರೆ ನೀವು ಜಗಜ್ಜೀತ್ ಅರ್ಥಾತ್ ಹೊಸ ವಿಶ್ವದ ಮಾಲೀಕರಾಗುತ್ತೀರಿ. ಅಂದಮೇಲೆ ಆಂತರ್ಯದಲ್ಲಿ ಇಷ್ಟು ಖುಷಿಯಿರಬೇಕು. ಮನುಷ್ಯರು ಪತಿತರಾಗುವ ಕಾರಣ ಏನನ್ನೂ ತಿಳಿದುಕೊಳ್ಳುವುದಿಲ್ಲ. ತಂದೆಯು ತಿಳಿಸುತ್ತಾರೆ - ಯಾವುದೇ ವಿಕಾರವಿರಬಾರದು. ಮುಖ್ಯವಾದುದು ಕಾಮ ವಿಕಾರವಾಗಿದೆ. ಇದರಮೇಲೆ ಎಷ್ಟೊಂದು ಹೊಡೆದಾಟಗಳಾಗುತ್ತವೆ. ಮನೆ-ಮನೆಯಲ್ಲಿ ಎಷ್ಟೊಂದು ಅಶಾಂತಿ, ಹಾಹಾಕಾರವಾಗಿ ಬಿಡುತ್ತದೆ! ಈ ಸಮಯದ ಪ್ರಪಂಚದಲ್ಲಿ ಹಾಹಾಕಾರ ಏಕೆ ಇದೆ? ಏಕೆಂದರೆ ಪಾಪಾತ್ಮರಿದ್ದಾರೆ, ವಿಕಾರಗಳ ಕಾರಣದಿಂದಲೇ ಅಸುರರೆಂದು ಹೇಳಲಾಗುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ - ಈ ಸಮಯದ ಪ್ರಪಂಚದಲ್ಲಿ ಯಾವುದೂ ಕೆಲಸಕ್ಕೆ ಬರುವ ವಸ್ತುವಿಲ್ಲ. ಬಿದುರಿನ ಕಾಡಿಗೆ ಬೆಂಕಿ ಬೀಳುವುದಿದೆ. ಈ ಕಣ್ಣುಗಳಿಂದ ಏನೆಲ್ಲಾ ನೋಡುವಿರೋ ಎಲ್ಲದಕ್ಕೆ ಬೆಂಕಿ ಬೀಳುವುದು, ಆತ್ಮಕ್ಕೆ ಬೆಂಕಿ ಬೀಳುವುದಿಲ್ಲ. ಆತ್ಮವಂತೂ ಸದಾ ಇನ್ಶೂರ್ (ವಿಮೆ) ಆಗಿದೆ. ಸದಾ ಜೀವಿಸಿರುತ್ತದೆ. ಆತ್ಮಕ್ಕೆ ಎಂದಾದರೂ ಇನ್ಶೂರ್ ಮಾಡಿಸುತ್ತಾರೆಯೇ? ಶರೀರಕ್ಕೆ ಇನ್ಶೂರ್ ಮಾಡಿಸಲಾಗುತ್ತದೆ. ಆತ್ಮವು ಅವಿನಾಶಿಯಾಗಿದೆ. ಮಕ್ಕಳಿಗೆ ತಿಳಿಸಲಾಗಿದೆ - ಇದು ಒಂದು ಆಟವಾಗಿದೆ. ಆತ್ಮವಂತು ಪಂಚ ತತ್ವಗಳಿಂದ ಸಂಪೂರ್ಣ ಭಿನ್ನವಾಗಿದೆ. ಇಡೀ ಪ್ರಪಂಚದ ಸಾಮಗ್ರಿಗಳೆಲ್ಲವೂ ಪಂಚ ತತ್ವಗಳಿಂದ ಮಾಡಲ್ಪಡುತ್ತದೆ. ಆತ್ಮವಂತೂ ಪಂಚ ತತ್ವಗಳಿಂದ ಮಾಡಲ್ಪಡುವುದಿಲ್ಲ. ಆತ್ಮವಂತೂ ಸದಾ ಇದ್ದೇ ಇರುತ್ತದೆ. ಕೇವಲ ಪುಣ್ಯಾತ್ಮ, ಪಾಪಾತ್ಮನಾಗುತ್ತದೆ. ಆತ್ಮಕ್ಕೇ ಪುಣ್ಯಾತ್ಮ, ಪಾಪಾತ್ಮನೆಂದು ಹೆಸರು ಬರುತ್ತದೆ. ಪಂಚ ವಿಕಾರಗಳಿಂದ ಎಷ್ಟೊಂದು ಕೊಳಕಾಗಿ ಬಿಡುತ್ತಾರೆ. ತಂದೆಯು ಪಾಪಗಳಿಂದ ಬಿಡಿಸಲು ಬಂದಿದ್ದಾರೆ. ವಿಕಾರವೇ ಎಲ್ಲಾ ನಡವಳಿಕೆಯನ್ನು ಕೆಡಿಸುತ್ತದೆ. ಯಾವುದಕ್ಕೆ ನಡವಳಿಕೆಯೆಂದು ಹೇಳಲಾಗುತ್ತದೆ ಎಂಬುದನ್ನೂ ಸಹ ತಿಳಿದುಕೊಂಡಿಲ್ಲ. ಇದು ಸರ್ವಶ್ರೇಷ್ಠ ಆತ್ಮಿಕ ಸರ್ಕಾರವಾಗಿದೆ. ಪಾಂಡವ ಸರ್ಕಾರವೆಂದು ಹೇಳದೆ ನಿಮಗೆ ಈಶ್ವರೀಯ ಸರ್ಕಾರವೆಂದು ಹೇಳಬಹುದಾಗಿದೆ. ನಿಮಗೆ ತಿಳಿದಿದೆ - ನಾವು ಈಶ್ವರೀಯ ಸರ್ಕಾರದವರಾಗಿದ್ದೇವೆ. ಈಶ್ವರೀಯ ಸರ್ಕಾರವು ಏನು ಮಾಡುತ್ತದೆ? ಆತ್ಮರನ್ನು ಪವಿತ್ರರನ್ನಾಗಿ ಮಾಡಿ ದೇವತೆಗಳನ್ನಾಗಿ ಮಾಡುತ್ತದೆ. ಇಲ್ಲವೆಂದರೆ ದೇವತೆಗಳು ಎಲ್ಲಿಂದ ಬಂದರು? ಇದನ್ನು ಯಾರೂ ತಿಳಿದುಕೊಂಡಿಲ್ಲ. ಅವರೂ ಮನುಷ್ಯರೇ ಆದರೆ ಹೇಗೆ ದೇವತೆಗಳಾಗಿದ್ದರು, ಯಾರು ಮಾಡಿದರು? ದೇವತೆಗಳಂತೂ ಸ್ವರ್ಗದಲ್ಲಿಯೇ ಇರುತ್ತಾರೆ ಅಂದಾಗ ಅವರನ್ನು ಸ್ವರ್ಗವಾಸಿಗಳನ್ನಾಗಿ ಯಾರು ಮಾಡಿದರು? ಸ್ವರ್ಗವಾಸಿಗಳು ಮತ್ತೆ ಅವಶ್ಯವಾಗಿ ನರಕವಾಸಿಗಳಾಗುತ್ತಾರೆ ಮತ್ತೆ ಸ್ವರ್ಗವಾಸಿಗಳಾಗುತ್ತಾರೆ. ಇದನ್ನು ನೀವೂ ಸಹ ತಿಳಿದುಕೊಂಡಿರಲಿಲ್ಲ ಅಂದಮೇಲೆ ಮತ್ತ್ಯಾರು ತಿಳಿದುಕೊಳ್ಳುವರು! ನೀವೀಗ ತಿಳಿದುಕೊಂಡಿದ್ದೀರಿ - ಡ್ರಾಮಾ ಮಾಡಲ್ಪಟ್ಟಿದೆ. ಇಷ್ಟೆಲ್ಲಾ ಪಾತ್ರಧಾರಿಗಳಿದ್ದಾರೆ. ಇವೆಲ್ಲಾ ಮಾತುಗಳು ಬುದ್ಧಿಯಲ್ಲಿರಬೇಕು. ವಿದ್ಯಾಭ್ಯಾಸವು ಬುದ್ಧಿಯಲ್ಲಿರಬೇಕಲ್ಲವೆ ಮತ್ತು ಪವಿತ್ರರೂ ಆಗಬೇಕಾಗಿದೆ. ಪತಿತರಾಗುವುದು ಬಹಳ ಕೆಟ್ಟ ಮಾತಾಗಿದೆ. ಆತ್ಮವೇ ಪತಿತನಾಗುತ್ತದೆ, ಪತಿತರನ್ನು ಪಾವನರನ್ನಾಗಿ ಮಾಡುವುದು ನಿಮ್ಮ ಕರ್ತವ್ಯವಾಗಿದೆ. ಪಾವನರಾಗಿ ಆಗ ಪಾವನ ಪ್ರಪಂಚದಲ್ಲಿ ಹೋಗುವಿರಿ. ಇದನ್ನು ಆತ್ಮವು ತಿಳಿದುಕೊಳ್ಳುತ್ತದೆ. ಆತ್ಮವಿಲ್ಲದಿದ್ದರೆ ಶರೀರವೂ ಸಹ ನಿಲ್ಲಲು ಸಾಧ್ಯವಿಲ್ಲ, ಪ್ರತ್ಯುತ್ತರ ಸಿಗಲು ಸಾಧ್ಯವಿಲ್ಲ. ಆತ್ಮಕ್ಕೆ ಗೊತ್ತಿದೆ, ನಾವು ಮೂಲತಃ ಪಾವನ ಪ್ರಪಂಚದ ನಿವಾಸಿಗಳಾಗಿದ್ದೇವೆ. ಈಗ ತಂದೆಯು ತಿಳಿಸಿದ್ದಾರೆ - ನೀವು ಸಂಪೂರ್ಣ ಬುದ್ಧಿಹೀನರಾಗಿದ್ದೀರಿ ಆದ್ದರಿಂದ ಪತಿತ ಪ್ರಪಂಚಕ್ಕೆ ಯೋಗ್ಯರಾಗಿ ಬಿಟ್ಟಿದ್ದೀರಿ. ಈಗ ಎಲ್ಲಿಯವರೆಗೆ ಪಾವನರಾಗುವುದಿಲ್ಲವೋ ಅಲ್ಲಿಯವರೆಗೆ ಸ್ವರ್ಗಕ್ಕೆ ಯೋಗ್ಯರಾಗುವುದಿಲ್ಲ. ಸ್ವರ್ಗದ ಹೋಲಿಕೆಯನ್ನು ಸಂಗಮದಲ್ಲಿಯೇ ಮಾಡಲಾಗುತ್ತದೆ. ಸತ್ಯಯುಗದಲ್ಲಿ ಈ ಹೋಲಿಕೆ ಮಾಡಲು ಸಾಧ್ಯವಿಲ್ಲ ಏಕೆಂದರೆ ಈ ಸಂಗಮಯುಗದಲ್ಲಿಯೇ ನಿಮಗೆ ಸಂಪೂರ್ಣ ಜ್ಞಾನವು ಸಿಗುತ್ತದೆ. ಪವಿತ್ರರಾಗುವ ಅಸ್ತ್ರವು ಸಿಗುತ್ತದೆ. ಪತಿತ-ಪಾವನ ತಂದೆಯೇ ನಮ್ಮನ್ನು ಈ ರೀತಿ ಪಾವನರನ್ನಾಗಿ ಮಾಡಿ ಎಂದು ಒಬ್ಬರಿಗೇ ಹೇಳಲಾಗುತ್ತದೆ. ಇವರು ಸ್ವರ್ಗದ ಮಾಲೀಕರಾಗಿದ್ದರಲ್ಲವೆ. ನಿಮಗೆ ತಿಳಿದಿದೆ - ನಾವೇ ಸ್ವರ್ಗದ ಮಾಲೀಕರಾಗಿದ್ದೆವು ಮತ್ತೆ 84 ಜನ್ಮಗಳನ್ನು ತೆಗೆದುಕೊಂಡು ಪತಿತರಾಗಿದ್ದೇವೆ. ಶ್ಯಾಮ ಮತ್ತು ಸುಂದರ ಎಂದು ಇವರ ಹೆಸರನ್ನು ಇಟ್ಟಿದ್ದಾರೆ. ಕೃಷ್ಣನ ಚಿತ್ರವನ್ನು ಕಪ್ಪಾಗಿ ತೋರಿಸುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಕೃಷ್ಣನ ಬಗ್ಗೆ ನಿಮಗೆ ಇಷ್ಟು ಸ್ಪಷ್ಟ ತಿಳುವಳಿಕೆ ಸಿಗುತ್ತದೆ. ಇದರಲ್ಲಿ ಎರಡು ಪ್ರಪಂಚಗಳನ್ನು ಮಾಡಿ ಬಿಟ್ಟಿದ್ದಾರೆ. ವಾಸ್ತವದಲ್ಲಿ ಎರಡು ಪ್ರಪಂಚಗಳಂತೂ ಇಲ್ಲ. ಪ್ರಪಂಚವು ಒಂದೇ ಆಗಿದೆ. ಅದೇ ಹೊಸದು ಮತ್ತು ಹಳೆಯದಾಗುತ್ತದೆ. ಮೊದಲು ಚಿಕ್ಕ ಮಕ್ಕಳು ಹೊಸದಾಗಿರುತ್ತಾರೆ (ಫ್ರೆಷ್) ನಂತರ ದೊಡ್ಡವರಾಗಿ ವೃದ್ಧರಾಗುತ್ತಾರೆ. ಅಂದಾಗ ನೀವು ತಿಳಿಸುವುದಕ್ಕಾಗಿ ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತೀರಿ. ತಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೀರಲ್ಲವೆ. ಈ ಲಕ್ಷ್ಮೀ-ನಾರಾಯಣರು ತಿಳಿದುಕೊಂಡಿದ್ದಾರಲ್ಲವೆ. ತಿಳುವಳಿಕೆಯಿಂದಲೇ ಎಷ್ಟೊಂದು ಮಧುರರಾಗಿದ್ದಾರೆ! ಯಾರು ತಿಳಿಸಿದರು? ಭಗವಂತ. ಯುದ್ಧ ಮೊದಲಾದ ಮಾತಿಲ್ಲ. ಭಗವಂತನು ಎಷ್ಟು ಬುದ್ಧಿವಂತ, ಜ್ಞಾನ ಪೂರ್ಣನಾಗಿದ್ದಾರೆ, ಪವಿತ್ರರಾಗಿದ್ದಾರೆ. ಶಿವನ ಚಿತ್ರದ ಮುಂದೆ ಎಲ್ಲಾ ಮನುಷ್ಯರು ಹೋಗಿ ನಮನ ಮಾಡುತ್ತಾರೆ ಆದರೆ ಅವರು ಯಾರು? ಏನು ಮಾಡುತ್ತಾರೆ? ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಶಿವಕಾಶಿ ವಿಶ್ವನಾಥ ಗಂಗಾ...... ಕೇವಲ ಈ ರೀತಿ ಹೇಳುತ್ತಿರುತ್ತಾರೆ. ಅರ್ಥವೇನೂ ಗೊತ್ತಿಲ್ಲ. ನೀವು ತಿಳಿಸಿದರೂ ಸಹ ನಮಗೆ ನೀವೇನು ತಿಳಿಸುತ್ತೀರಿ? ನಾವಂತೂ ವೇದ-ಶಾಸ್ತ್ರ ಇತ್ಯಾದಿಗಳೆಲ್ಲವನ್ನೂ ಓದಿದ್ದೇವೆಂದು ಹೇಳುತ್ತಾರೆ. ಆದರೆ ಯಾವುದಕ್ಕೆ ರಾಮ ರಾಜ್ಯವೆಂದು ಕರೆಯಲಾಗುತ್ತದೆ ಎಂಬುದನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ರಾಮ ರಾಜ್ಯವೆಂದು ಸತ್ಯಯುಗ, ಹೊಸ ಪ್ರಪಂಚಕ್ಕೆ ಹೇಳಲಾಗುತ್ತದೆ. ನಿಮ್ಮಲ್ಲಿಯೂ ನಂಬರ್ವಾರ್ ಇದ್ದಾರೆ, ಕೆಲವರಿಗೆ ಧಾರಣೆಯಾಗುತ್ತದೆ. ಕೆಲವರಂತೂ ಮರೆತೇ ಹೋಗುತ್ತಾರೆ ಏಕೆಂದರೆ ಪೂರ್ಣ ಕಲ್ಲು ಬುದ್ಧಿಯವರಾಗಿ ಬಿಟ್ಟಿದ್ದಾರೆ ಅಂದಾಗ ಯಾರು ಈಗ ಪಾರಸಬುದ್ಧಿಯವರಾಗಿದ್ದಾರೆಯೋ ಅವರ ಕರ್ತವ್ಯವು ಅನ್ಯರನ್ನು ಪಾರಸಬುದ್ಧಿಯವರನ್ನಾಗಿ ಮಾಡುವುದಾಗಿದೆ. ಕಲ್ಲು ಬುದ್ಧಿಯವರ ಚಲನೆಯು ಅದೇ ನಡೆಯುತ್ತಿರುತ್ತದೆ ಏಕೆಂದರೆ ಹಂಸ ಮತ್ತು ಕೊಕ್ಕರೆಯಾಗಿ ಬಿಟ್ಟರಲ್ಲವೆ. ಹಂಸವೆಂದೂ ಯಾರಿಗೂ ದುಃಖ ಕೊಡುವುದಿಲ್ಲ, ಕೊಕ್ಕರೆಯು ದುಃಖ ಕೊಡುತ್ತದೆ. ಕೆಲವರ ಚಲನೆಯೇ ಕೊಕ್ಕರೆಯಂತಿರುತ್ತದೆ, ಅವರಲ್ಲಿ ಎಲ್ಲಾ ವಿಕಾರಗಳಿರುತ್ತವೆ. ಇಲ್ಲಿಯೂ ಸಹ ಅಂತಹ ಬಹಳಷ್ಟು ಮಂದಿ ವಿಕಾರಿಗಳು ಬಂದು ಬಿಡುತ್ತಾರೆ ಯಾರಿಗೆ ಅಸುರರೆಂದು ಹೇಳಲಾಗುತ್ತದೆ. ಅವರಿಗೆ ಅರಿವಿರುವುದಿಲ್ಲ. ಅನೇಕ ಸೇವಾಕೇಂದ್ರಗಳಲ್ಲಿಯೂ ವಿಕಾರಿಗಳು ಬರುತ್ತಾರೆ. ನಾವು ಬ್ರಾಹ್ಮಣರಾಗಿದ್ದೇವೆಂದು ನೆಪ ಮಾಡಿಕೊಂಡು ಬರುತ್ತಾರೆ ಆದರೆ ಅದು ಸುಳ್ಳಾಗಿದೆ. ಇದಕ್ಕೆ ಸುಳ್ಳು ಪ್ರಪಂಚವೆಂದು ಹೇಳಲಾಗುತ್ತದೆ. ಆ ಹೊಸ ಪ್ರಪಂಚವು ಸತ್ಯ ಪ್ರಪಂಚವಾಗಿದೆ, ಈಗ ಸಂಗಮವಾಗಿದೆ. ಎಷ್ಟೊಂದು ಅಂತರವಿರುತ್ತದೆ! ಯಾರು ಸುಳ್ಳು ಹೇಳುವರೋ, ಸುಳ್ಳು ಕೆಲಸಗಳನ್ನು ಮಾಡುವವರಿದ್ದಾರೆಯೋ ಅವರು ಕನಿಷ್ಠ ದರ್ಜೆಯವರಾಗುತ್ತಾರೆ. ಪ್ರಥಮ ದರ್ಜೆ, ದ್ವಿತೀಯ ದರ್ಜೆಯವರೂ ಇರುತ್ತಾರಲ್ಲವೆ.

ತಂದೆಯು ತಿಳಿಸುತ್ತಾರೆ - ನೀವು ಪವಿತ್ರತೆಯ ಪೂರ್ಣ ಸಾಕ್ಷಿಯನ್ನು ತೋರಿಸಬೇಕಾಗಿದೆ. ಇವರಿಬ್ಬರು ಒಟ್ಟಿಗೆ ಇದ್ದು ಪವಿತ್ರರಾಗಿರುವುದು ಅಸಂಭವವೆಂದು ಹಲವರು ಹೇಳುತ್ತಾರೆ ಆದ್ದರಿಂದ ನೀವು ತಿಳಿಸಬೇಕು. ಯೋಗಬಲ ಇಲ್ಲದಿರುವ ಕಾರಣ ಇಷ್ಟು ಸಹಜ ಮಾತನ್ನೂ ಸಹ ಪೂರ್ಣ ರೀತಿಯಿಂದ ನೀವು ತಿಳಿಸುವುದಿಲ್ಲ. ಅವರಿಗೆ ಇಲ್ಲಿ ನಮಗೆ ಭಗವಂತನೇ ಓದಿಸುತ್ತಾರೆ, ನೀವು ಪವಿತ್ರರಾಗಿದ್ದೇ ಆದರೆ 21 ಜನ್ಮಗಳವರೆಗೆ ಸ್ವರ್ಗದ ಮಾಲೀಕರಾಗುತ್ತೀರಿ ಎಂದು ಅವರು ಹೇಳುತ್ತಾರೆ ಎಂಬ ಮಾತನ್ನು ಯಾರೂ ತಿಳಿಸುವುದಿಲ್ಲ. ಅದು ಪವಿತ್ರ ಪ್ರಪಂಚವಾಗಿದೆ, ಪವಿತ್ರ ಪ್ರಪಂಚದಲ್ಲಿ ಯಾರೂ ಪತಿತರಿರಲು ಸಾಧ್ಯವಿಲ್ಲ, ಪಂಚ ವಿಕಾರಗಳೇ ಇರುವುದಿಲ್ಲ. ಅದು ನಿರ್ವಿಕಾರಿ ಪ್ರಪಂಚ, ಇದು ವಿಕಾರಿ ಪ್ರಪಂಚವಾಗಿದೆ. ನಮಗೆ ಸತ್ಯಯುಗದ ರಾಜ್ಯಭಾಗ್ಯ ಸಿಗುತ್ತದೆ ಅಂದಮೇಲೆ ನಾವೇಕೆ ಕೇವಲ ಇದೊಂದು ಜನ್ಮಕ್ಕಾಗಿ ಪಾವನರಾಗಬಾರದು!! ನಮಗೆ ಜಬರ್ದಸ್ತ್ ಲಾಟರಿ ಸಿಗುತ್ತದೆ ಆದ್ದರಿಂದ ಖುಷಿಯಾಗುತ್ತದೆ. ದೇವಿ-ದೇವತೆಗಳು ಪವಿತ್ರರಲ್ಲವೆ. ಅಪವಿತ್ರರಿಂದ ಪವಿತ್ರರನ್ನಾಗಿ ತಂದೆಯೇ ಮಾಡುತ್ತಾರೆ ಆದ್ದರಿಂದ ನಮಗೆ ಇದೇ ಲಕ್ಷ್ಯವಿದೆ ಎಂದು ತಿಳಿಸಬೇಕು. ತಂದೆಯೇ ನಮ್ಮನ್ನು ಈ ರೀತಿ ಮಾಡುತ್ತಾರೆ. ತಂದೆಯಲ್ಲದೆ ಮತ್ತ್ಯಾರೂ ಹೊಸ ಪ್ರಪಂಚವನ್ನು ಸ್ಥಾಪಿಸಲು ಸಾಧ್ಯವಿಲ್ಲ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡಲು ಭಗವಂತನೇ ಬರುತ್ತಾರೆ, ಶಿವನ ರಾತ್ರಿಯ ಗಾಯನವಿದೆ. ಇದನ್ನೂ ತಿಳಿಸಿದ್ದಾರೆ - ಜ್ಞಾನ, ಭಕ್ತಿ, ವೈರಾಗ್ಯ. ಜ್ಞಾನ ಮತ್ತು ಭಕ್ತಿ ಅರ್ಧ-ಅರ್ಧ ಭಾಗವಿದೆ. ಭಕ್ತಿಯ ನಂತರ ವೈರಾಗ್ಯ. ಈಗ ಮನೆಗೆ ಹೋಗಬೇಕಾಗಿದೆ, ಈ ಶರೀರರೂಪಿ ವಸ್ತ್ರವನ್ನು ಕಳಚಬೇಕಾಗಿದೆ. ಈ ಛೀ ಛೀ ಪ್ರಪಂಚದಲ್ಲಿ ಇರುವಂತಿಲ್ಲ. 84 ಜನ್ಮದ ಚಕ್ರವು ಈಗ ಪೂರ್ಣವಾಯಿತು. ಶಾಂತಿಧಾಮದ ಮೂಲಕ ಈಗ ಸುಖಧಾಮಕ್ಕೆ ಹೋಗಬೇಕಾಗಿದೆ. ಮೊಟ್ಟ ಮೊದಲು ಪರಮಾತ್ಮನ ಪರಿಚಯದ ಮಾತನ್ನು ಮರೆಯಬಾರದು. ಇದೂ ಸಹ ಮಕ್ಕಳಿಗೆ ತಿಳಿದಿದೆ - ಈ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ. ತಂದೆಯು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಾರೆ. ಸ್ವರ್ಗದ ಸ್ಥಾಪನೆ ಮಾಡಲು ತಂದೆಯು ಅನೇಕ ಬಾರಿ ಬಂದಿದ್ದಾರೆ. ನರಕದ ವಿನಾಶವಾಗಬೇಕಾಗಿದೆ. ನರಕವು ಎಷ್ಟು ದೊಡ್ಡದಾಗಿದೆ, ಸ್ವರ್ಗವು ಎಷ್ಟು ಚಿಕ್ಕದಾಗಿದೆ. ಹೊಸ ಪ್ರಪಂಚದಲ್ಲಿ ಒಂದೇ ಧರ್ಮವಿರುತ್ತದೆ, ಇಲ್ಲಿ ಅನೇಕ ಧರ್ಮಗಳಿವೆ. ಒಂದು ಧರ್ಮವನ್ನು ಯಾರು ಸ್ಥಾಪನೆ ಮಾಡಿದರು? ಬ್ರಹ್ಮನಂತೂ ಮಾಡಲಿಲ್ಲ. ಬ್ರಹ್ಮನೇ ಪತಿತನಿಂದ ಮತ್ತೆ ಪಾವನನಾಗುತ್ತಾರೆ. ಶಿವ ತಂದೆಯು ಪತಿತರಿಂದ ಪಾವನರಾಗುವರು ಎಂದು ಹೇಳುವುದಿಲ್ಲ. ಪಾವನರೆಂದಾಗ ಲಕ್ಷ್ಮೀ-ನಾರಾಯಣರ ಹೆಸರಿದೆ. ಬ್ರಹ್ಮನ ದಿನ, ಬ್ರಹ್ಮನ ರಾತ್ರಿ. ಇವರು ಪ್ರಜಾಪಿತನಾಗಿದ್ದಾರಲ್ಲವೆ. ಶಿವ ತಂದೆಗೆ ಅನಾದಿ ರಚಯಿತನೆಂದು ಹೇಳಲಾಗುತ್ತದೆ. ಅನಾದಿ ಶಬ್ಧವು ತಂದೆಗೇ ಇದೆ. ತಂದೆಯು ಅನಾದಿಯೆಂದ ಮೇಲೆ ಆತ್ಮಗಳೂ ಸಹ ಅನಾದಿಯಾಗಿದ್ದೀರಿ. ಆಟವೂ ಅನಾದಿಯಾಗಿದೆ. ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಸ್ವ-ಆತ್ಮಕ್ಕೆ ಸೃಷ್ಟಿಚಕ್ರದ ಆದಿ-ಮಧ್ಯ-ಅಂತ್ಯ, ಕಾಲಾವಧಿಯ ಜ್ಞಾನ ಸಿಗುತ್ತದೆ. ಇದನ್ನು ಯಾರು ಕೊಟ್ಟರು? ತಂದೆ. ನೀವು 21 ಜನ್ಮಗಳಿಗಾಗಿ ಧನಿಕರಾಗಿ ಬಿಡುತ್ತೀರಿ ಮತ್ತೆ ರಾವಣ ರಾಜ್ಯದಲ್ಲಿ ನಿರ್ಧನಿಕರಾಗಿ ಬಿಡುತ್ತೀರಿ. ಇಲ್ಲಿಯೇ ನಡವಳಿಕೆಯು ಕೆಡುತ್ತದೆ, ವಿಕಾರಗಳಿವೆಯಲ್ಲವೆ. ಬಾಕಿ ಎರಡು ಪ್ರಪಂಚಗಳು ಯಾವುದೂ ಇರುವುದಿಲ್ಲ. ಸ್ವರ್ಗ, ನರಕ ಎಲ್ಲವೂ ಒಟ್ಟಿಗೆ ನಡೆಯುತ್ತದೆಯೆಂದು ಮನುಷ್ಯರು ತಿಳಿದುಕೊಳ್ಳುತ್ತಾರೆ. ಈಗ ನೀವು ಮಕ್ಕಳಿಗೆ ಎಷ್ಟು ಸ್ಪಷ್ಟವಾಗಿ ತಿಳಿಸಲಾಗುತ್ತದೆ. ಈಗ ನೀವು ಗುಪ್ತವಾಗಿದ್ದೀರಿ. ಶಾಸ್ತ್ರಗಳಲ್ಲಿ ಏನೇನು ಬರೆದು ಬಿಟ್ಟಿದ್ದಾರೆ! ಸೂತ್ರವೇ ಗಂಟಾಗಿ ಬಿಟ್ಟಿದೆ. ಅದನ್ನು ತಂದೆಯ ವಿನಃ ಮತ್ತ್ಯಾರೂ ಬಿಡಿಸಲು ಸಾಧ್ಯವಿಲ್ಲ. ನಾವು ಏನೂ ಪ್ರಯೋಜನಕ್ಕಿಲ್ಲ, ಬಂದು ಪಾವನರನ್ನಾಗಿ ಮಾಡಿ ನಮ್ಮ ಚಾರಿತ್ರ್ಯ ಸುಧಾರಣೆ ಮಾಡಿ ಎಂದು ತಂದೆಯನ್ನೇ ಕರೆಯುತ್ತಾರೆ. ಈಗ ನಿಮ್ಮ ಚಾರಿತ್ರ್ಯ ಸುಧಾರಣೆಯಾಗುತ್ತದೆ. ಕೆಲವರಂತೂ ಸುಧಾರಣೆಯಾಗುವ ಬದಲು ಇನ್ನೂ ಹಾಳಾಗುತ್ತಾರೆ. ಚಲನೆಯಿಂದಲೂ ಸಹ ಅರ್ಥವಾಗುತ್ತದೆ. ಇಂದು ಮಹಾರಥಿ ಹಂಸಗಳೆಂದು ಕರೆಸಿಕೊಳ್ಳುವವರು ನಾಳೆ ಕೊಕ್ಕರೆಯಾಗಿ ಬಿಡುತ್ತಾರೆ. ಇದರಲ್ಲಿ ತಡವಾಗುವುದಿಲ್ಲ. ಮಾಯೆಯೂ ಸಹ ಗುಪ್ತವಾಗಿದೆಯಲ್ಲವೆ. ಕ್ರೋಧವೇನೂ ಕಾಣುವುದಿಲ್ಲ ಆದರೆ ಬೌ ಬೌ ಎಂದು ಹೊರಗೆ ಬಂದಾಗ ಇವರಿಗೆ ಕೋಪ ಬಂದಿದೆ ಎಂದು ಅರ್ಥವಾಗುತ್ತದೆ. ಕೆಲವರು ಆಶ್ಚರ್ಯವಾಗಿ ಕೇಳಿ, ಹೇಳಿ ನಡೆದು ಮತ್ತೆ ಹೊರಟು ಹೋಗುತ್ತಾರೆ. ಎಷ್ಟೊಂದು ಜನರು ಬೀಳಿವರು ಒಮ್ಮೆಲೇ ಕಲ್ಲಾಗಿ ಬಿಡುತ್ತಾರೆ, ಇಂದ್ರಪ್ರಸ್ಥದ ಮಾತಿದೆಯಲ್ಲವೆ. ನೋಡುತ್ತಿದ್ದಂತೆಯೇ ಅರ್ಥವಾಗಿ ಬಿಡುತ್ತದೆ. ಇಂತಹವರು ಮತ್ತೆ ಸಭೆಯಲ್ಲಿ ಬರಬಾರದು. ಅಲ್ಪಸ್ವಲ್ಪ ಜ್ಞಾನವನ್ನು ಕೇಳಿದರೂ ಸಹ ಸ್ವರ್ಗದಲ್ಲಿ ಬಂದೇ ಬರುತ್ತಾರೆ. ಜ್ಞಾನದ ವಿನಾಶವಾಗಲು ಸಾಧ್ಯವಿಲ್ಲ.

ಈಗ ತಂದೆಯು ತಿಳಿಸುತ್ತಾರೆ - ನೀವು ಪುರುಷಾರ್ಥ ಮಾಡಿ ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ. ಒಂದುವೇಳೆ ವಿಕಾರದಲ್ಲಿ ಹೋದರೆ ಪದವಿ ಭ್ರಷ್ಟ ಮಾಡಿಕೊಳ್ಳುತ್ತೀರಿ. ಸೂರ್ಯವಂಶಿ, ಚಂದ್ರವಂಶಿಯರಾಗುತ್ತೀರಿ, ನಂತರ ವೈಶ್ಯವಂಶಿ, ಶೂದ್ರವಂಶಿಯಾಗುತ್ತೀರಿ. ಈ ಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಅವರಂತೂ ಕಲಿಯುಗದ ಆಯಸ್ಸನ್ನು 40 ಸಾವಿರ ವರ್ಷಗಳೆಂದು ಹೇಳಿ ಬಿಡುತ್ತಾರೆ. ಏಣಿಯನ್ನು ಕೆಳಗಿಳಿಯಲೇಬೇಕಾಗುತ್ತದೆಯಲ್ಲವೆ. 40 ಸಾವಿರ ವರ್ಷಗಳು ಇದ್ದಿದ್ದೇ ಆದರೆ ಜನಸಂಖ್ಯೆಯು ಇನ್ನೂ ಹೆಚ್ಚಾಗಿ ಬಿಡುವುದು. 5000 ವರ್ಷಗಳಲ್ಲಿಯೇ ಇಷ್ಟೊಂದು ಜನಸಂಖ್ಯೆಯಿದೆ, ತಿನ್ನುವುದಕ್ಕೆ ಆಹಾರವೂ ಸಿಗುವುದಿಲ್ಲ ಅಂದಮೇಲೆ ಇಷ್ಟು ಸಾವಿರ ವರ್ಷಗಳಲ್ಲಿ ಇನ್ನೆಷ್ಟು ವೃದ್ಧಿಯಾಗಿ ಬಿಡುತ್ತಿತ್ತು! ಅಂದಾಗ ತಂದೆಯು ಬಂದು ಧೈರ್ಯವನ್ನು ಕೊಡುತ್ತಾರೆ. ಪತಿತ ಮನುಷ್ಯರಂತೂ ಹೊಡೆದಾಡಲೇಬೇಕಾಗಿದೆ. ಅವರ ಬುದ್ಧಿಯು ಇತ್ತ ಕಡೆಗೆ ಬರಲು ಸಾಧ್ಯವಿಲ್ಲ. ಈಗ ನಿಮ್ಮ ಬುದ್ಧಿಯು ನೋಡಿ, ಎಷ್ಟು ಬದಲಾಗುತ್ತಿದೆ! ಆದರೂ ಸಹ ಮಾಯೆಯು ಅವಶ್ಯವಾಗಿ ಮೋಸಗೊಳಿಸುತ್ತದೆ. ಇಚ್ಛಾ ಮಾತ್ರಂ ಅವಿದ್ಯಾ. ಯಾವುದೇ ಇಚ್ಛೆ ಬಂದಿತೆಂದರೆ ಅವರು ಸಮಾಪ್ತಿ ಅರ್ಥಾತ್ ಕನಿಷ್ಟರಾಗಿ ಬಿಡುತ್ತಾರೆ. ಒಳ್ಳೊಳ್ಳೆಯ ಮಹಾರಥಿಗಳಿಗೂ ಸಹ ಮಾಯೆಯು ಯಾವುದಾದರೊಂದು ಪ್ರಕಾರದಿಂದ ಕೆಲವೊಮ್ಮೆ ಮೋಸ ಮಾಡುತ್ತಿರುತ್ತದೆ. ಅಂತಹವರು ಮತ್ತೆ ಹೃದಯವನ್ನೇರಲು ಸಾಧ್ಯವಿಲ್ಲ. ಹೇಗೆ ಲೌಕಿಕ ತಂದೆ-ತಾಯಿಯ ಹೃದಯವನ್ನೇರುವುದಿಲ್ಲ. ಕೆಲವು ಮಕ್ಕಳಂತೂ ತನ್ನ ತಂದೆಯನ್ನೂ ಮುಗಿಸಿ ಬಿಡುತ್ತಾರೆ, ಪರಿವಾರವನ್ನೂ ಮುಗಿಸಿ ಬಿಡುತ್ತಾರೆ, ಮಹಾನ್ ಪಾಪಾತ್ಮರಾಗಿದ್ದಾರೆ. ರಾವಣನು ಏನು ಮಾಡಿ ಬಿಡುತ್ತಾನೆ! ಬಹಳ ಕೊಳಕು ಪ್ರಪಂಚವಾಗಿದೆ. ಇದರಲ್ಲೆಂದೂ ಮನಸ್ಸನ್ನಿಡಬಾರದು. ಪವಿತ್ರರಾಗಲು ಬಹಳ ಸಾಹಸ ಬೇಕು. ವಿಶ್ವದ ರಾಜ್ಯಭಾಗ್ಯದ ಬಹುಮಾನವನ್ನು ತೆಗೆದುಕೊಳ್ಳಲು ಪವಿತ್ರತೆ ಮುಖ್ಯವಾಗಿದೆ. ಆದ್ದರಿಂದಲೇ ಬಂದು ನಮ್ಮನ್ನು ಪಾವನ ಮಾಡಿ ಎಂದು ತಂದೆಗೆ ಹೇಳುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಮಾಯೆಯ ಮೋಸದಿಂದ ಪಾರಾಗಲು ಇಚ್ಛಾ ಮಾತ್ರಂ ಅವಿದ್ಯಾ ಆಗಬೇಕಾಗಿದೆ. ಈ ಕೊಳಕು ಪ್ರಪಂಚದೊಂದಿಗೆ ಮನಸ್ಸನ್ನಿಡಬಾರದು.

2. ಪವಿತ್ರತೆಯ ಸಂಪೂರ್ಣ ಸಾಕ್ಷಿಯನ್ನು ತೋರಿಸಬೇಕಾಗಿದೆ. ಎಲ್ಲದಕ್ಕಿಂತ ಶ್ರೇಷ್ಠ ಚಾರಿತ್ರ್ಯವು ಪವಿತ್ರತೆಯಾಗಿದೆ. ತಮ್ಮನ್ನು ತಾವು ಸುಧಾರಣೆ ಮಾಡಿಕೊಳ್ಳಲು ಖಂಡಿತ ಪವಿತ್ರರಾಗಬೇಕಾಗಿದೆ.

ವರದಾನ:
ತಮ್ಮ ಏಕಾಗ್ರ ಸ್ವರೂಪದ ಮೂಲಕ ಸೂಕ್ಷ್ಮ ಶಕ್ತಿಯ ಲೀಲೆಗಳ ಅನುಭವ ಮಾಡುವಂತಹ ಅಂತರ್ಮುಖಿ ಭವ.

ಏಕಾಗ್ರತೆಯ ಆಧಾರ ಅಂತರ್ಮುಖತೆಯಾಗಿದೆ. ಯಾರು ಅಂತರ್ಮುಖಿಗಳಾಗಿರುತ್ತಾರೆ ಅವರು ಒಳಗೊಳಗೆ ಸೂಕ್ಷ್ಮ ಶಕ್ತಿಯ ಲೀಲೆಗಳ ಅನುಭವ ಮಾಡುತ್ತಾರೆ. ಆತ್ಮಗಳ ಆಹ್ವಾನ ಮಾಡುವುದು, ಆತ್ಮಗಳ ಜೊತೆ ಆತ್ಮೀಕ ಸಂಭಾಷಣೆ ಮಾಡುವುದು, ಆತ್ಮಗಳ ಸಂಸ್ಕಾರ ಸ್ವಭಾವವನ್ನು ಪರಿವರ್ತನೆ ಮಾಡುವುದು, ತಂದೆಯ ಜೊತೆ ಸಂಬಂಧವನ್ನು ಜೋಡಿಸುವುದು - ಈ ರೀತಿಯ ಆತ್ಮಗಳ ಲೋಕದಲ್ಲಿ ಆತ್ಮೀಯ ಸೇವೆ ಮಾಡುವುದಕ್ಕೋಸ್ಕರ ಏಕಾಗ್ರತೆಯ ಶಕ್ತಿಯನ್ನು ಎಚ್ಚಿಸಿಕೊಳ್ಳಿ, ಇದರಿಂದ ಸರ್ವ ಪ್ರಕಾರದ ವಿಘ್ನಗಳು ಸ್ವತಃವಾಗಿ ಸಮಾಪ್ತಿಯಾಗಿ ಬಿಡುವುದು.

ಸ್ಲೋಗನ್:
ಸರ್ವ ಪ್ರಾಪ್ತಿಗಳನ್ನು ಸ್ವಯಂನಲ್ಲಿ ಧಾರಣೆ ಮಾಡಿಕೊಂಡು ವಿಶ್ವದ ಸ್ಟೇಜ್ ಮೇಲೆ ಪ್ರತ್ಯಕ್ಷ ಆಗುವುದೇ ಪ್ರತ್ಯಕ್ಷತೆಗೆ ಆಧಾರವಾಗಿದೆ.


ವಿಶೇಷ ಸೂಚನೆ:-
ಈ ಜನವರಿ ತಿಂಗಳು ಮಧುರ ಸಾಕಾರ ಬಾಬಾರವರ ಸ್ಮೃತಿಯ ತಿಂಗಳಾಗಿದೆ, ಸ್ವಯಂನ್ನು ಸಮರ್ಥ ಮಾಡಿಕೊಳ್ಳುವುದಕ್ಕಾಗಿ ವಿಶೇಷ ಅಂತರ್ಮುಖಿಯಾಗಿ ಸೂಕ್ಷ್ಮ ಶಕ್ತಿಗಳ ಲೀಲೆಗಳ ಅನುಭವ ಮಾಡಬೇಕು. ಪೂರ್ತಿ ತಿಂಗಳು ತಾವು ಅವ್ಯಕ್ತ ಸ್ಥಿತಿಯಲ್ಲಿರ ಬೇಕು. ಮನಸ್ಸು ಮತ್ತು ಮುಖದ ಮೌನ ಇಡಬೇಕು.

ಬ್ರಹ್ಮಾ ತಂದೆಯ ಸಮಾನ ಸಂಪನ್ನ ಸ್ಥಿತಿಯ ಅನುಭವ ಮಾಡಿರಿ:-
ಹೇಗೆ ಬ್ರಹ್ಮಾ ತಂದೆಯು ಸಾಕಾರ ಸೃಷ್ಟಿಯಲ್ಲಿ ಸರಳವಾಗಿರುತ್ತಾ, ಎಲ್ಲರ ಮುಂದೆ ಉದಾಹರಣೆಯಾದರು. ಸಾಧಾರಣತೆಯಲ್ಲಿ ಮಹಾನತೆ ಅರ್ಥಾತ್ ರಾಯಲ್ಟಿಯ ಅನುಭವ ಮಾಡಿಸಿದರು. ಬೆಗ್ಗರಿ ಜೀವನದಲ್ಲಿ ನಿಶ್ಚಿಂತ ಚಕ್ರವರ್ತಿಯ ಸ್ಥಿತಿಯ ಅನುಭವ ಮಾಡಿಸಿದರು. ಬ್ರಹ್ಮಾ ತಂದೆಯ ಮಾತು-ಚಲನೆ ಮತ್ತು ಚಹರೆಯಿಂದ ಸದಾ ರಾಯಲ್ಟಿಯು ಕಾಣಿಸುತ್ತಿತ್ತು. ಇದೇರೀತಿ ಬ್ರಹ್ಮಾ ತಂದೆಯನ್ನು ಅನುಸರಣೆ ಮಾಡಿರಿ.