01.01.23    Avyakt Bapdada     Kannada Murli    26.03.93     Om Shanti     Madhuban


ಅವ್ಯಕ್ತ ವರ್ಷದಲ್ಲಿ ಲಕ್ಷ್ಯ ಮತ್ತು ಲಕ್ಷಣವನ್ನು ಸಮಾನವನ್ನಾಗಿ ಮಾಡಿಕೊಳ್ಳಿ


ಇಂದು ನಿರಾಕಾರಿ ಮತ್ತು ಆಕಾರಿ ಬಾಪ್ದಾದಾ ಸರ್ವ ಶ್ರೇಷ್ಠ ಬ್ರಾಹ್ಮಣ ಆತ್ಮಗಳಿಗೆ ಆಕಾರ ರೂಪದಿಂದ ಹಾಗೂ ಸಾಕಾರ ರೂಪದಿಂದ ನೋಡುತ್ತಿದ್ದಾರೆ. ಸಾಕಾರ ರೂಪದವರಾದಂತಹ ತಾವೆಲ್ಲಾ ಆತ್ಮಗಳು ತಂದೆಯ ಸನ್ಮುಖದಲ್ಲಿದ್ದೀರಿ ಹಾಗೂ ಆಕಾರಿ ರೂಪಧಾರಿ ಮಕ್ಕಳು ಸನ್ಮುಖದಲ್ಲಿದ್ದಾರೆ. ಇಬ್ಬರನ್ನು ಬಾಪ್ದಾದಾರವರು ನೋಡಿ ಹರ್ಷಿತರಾಗುತ್ತಿದ್ದಾರೆ. ಎಲ್ಲರ ಹೃದಯದಲ್ಲಿ ಒಂದೇ ಸಂಕಲ್ಪವಿದೆ, ಉಮಂಗವಿದೆ ನಾವೆಲ್ಲರೂ ತಂದೆಯ ಸಮಾನ ಸಾಕಾರಿಯಿಂದ ಆಕಾರಿ ಮತ್ತು ಆಕಾರಿಯಿಂದ ನಿರಾಕಾರಿ ತಂದೆಯ ಸಮಾನರಾಗಿ. ಬಾಪ್ದಾದಾ ಎಲ್ಲರ ಲಕ್ಷ್ಯ ಹಾಗೂ ಲಕ್ಷಣವನ್ನು ನೋಡುತ್ತಿದ್ದಾರೆ. ಏನು ಕಂಡು ಬಂದಿತು?

ಮೆಜಾರಿಟಿ ಮಕ್ಕಳ ಲಕ್ಷ್ಯ ಬಹಳ ಒಳ್ಳೆಯದು ದೃಢವಾಗಿದೆ. ಆದರೆ ಲಕ್ಷಣ ಕೆಲವೊಮ್ಮೆ ದೃಢವಾಗಿದೆ, ಕೆಲವೊಮ್ಮೆ ಸಾಧಾರಣವಾಗಿದೆ. ಲಕ್ಷ್ಯ ಹಾಗೂ ಲಕ್ಷಣ ಸಮಾನತೆ ಬರುವುದು ಇದರ ಚಿಹ್ನೆಯಾಗಿದೆ ಸಮಾನರಾಗುವುದು. ಲಕ್ಷಣವನ್ನು ಧಾರಣೆ ಮಾಡುವುದರಲ್ಲಿ 99% ಇರುವವರು ಕೆಲವರಿದ್ದಾರೆ, ಬಾಕಿ ನಂಬರ್ ವಾರ್ ಇದ್ದಾರೆ. ಆದರೆ ಸದಾ, ಸಹಜ ಹಾಗೂ ಸ್ವಾಭಾವಿಕವಾದ ನೇಚರ್ ನಲ್ಲಿ ಲಕ್ಷಣವನ್ನು ಧಾರಣೆ ಮಾಡುವುದರಲ್ಲಿ ಎಲ್ಲಿಯವರೆಗೂ ಇದ್ದೀರಾ- ಇದರಲ್ಲಿ ಮೈನಾರಿಟಿ 90% ವರೆಗೂ ಇದ್ದಾರೆ, ಬಾಕಿ ಹಾಗೂ ನಂಬರ್ವಾರ್ ಇದ್ದಾರೆ. ಹಾಗಾದರೆ ಲಕ್ಷ್ಯ ಮತ್ತು ಲಕ್ಷಣದಲ್ಲಿ ಹಾಗೂ ಲಕ್ಷಣವನ್ನು ಸಹ ನ್ಯಾಚುರಲ್ ಹಾಗೂ ನೇಚರ್ ಮಾಡಿಕೊಳ್ಳುವುದರಲ್ಲಿ ಅಂತರವೇಕಿದೆ? ಸಮಯ ಪ್ರಮಾಣ, ಸಂದರ್ಭದ ಪ್ರಮಾಣ, ಸಮಸ್ಯೆಯ ಪ್ರಮಾಣ ಕೆಲವೊಂದು ಮಕ್ಕಳು ಪುರುಷಾರ್ಥದ ಮುಖಾಂತರ ತಮ್ಮ ಲಕ್ಷ್ಯ ಮತ್ತು ಲಕ್ಷಣವನ್ನು ಸಮಾನವನ್ನಾಗಿ ಮಾಡಿಕೊಳ್ಳುತ್ತಾರೆ. ಆದರೆ ಈ ನ್ಯಾಚುರಲ್ ಮತ್ತು ನೇಚರ್ ಆಗಿ ಬಿಡಲಿ - ಅದರಲ್ಲಿ ಈಗ ಮತ್ತಷ್ಟು ಗಮನವಿರಬೇಕು. ಈ ವರ್ಷ ಅವ್ಯಕ್ತ ಫರಿಶ್ತಾ ಸ್ಥಿತಿಯಲ್ಲಿ ಸ್ಥಿತರಾಗುವಂತಹ ವರ್ಷವನ್ನಾಗಿ ಆಚರಣೆ ಮಾಡುತ್ತಿದ್ದೀರಾ. ಇದನ್ನು ನೋಡಿ ಬಾಪ್ ದಾದಾರವರು ಮಕ್ಕಳ ಪ್ರೀತಿ ಹಾಗೂ ಪುರುಷಾರ್ಥ- ಎರಡನ್ನು ನೋಡಿ ನೋಡಿ ಖುಷಿಯಾಗುತ್ತಿದ್ದಾರೆ, ವಾಹ್ ಮಕ್ಕಳೇ, ವಾಹ್ ಗೀತೆಯನ್ನು ಹಾಡುತ್ತಿದ್ದಾರೆ. ಜೊತೆ ಜೊತೆಯಲ್ಲಿ ಈಗ ಹಾಗೂ ಮುಂದೆ ಸರ್ವ ಮಕ್ಕಳ ಲಕ್ಷ್ಯ ಮತ್ತು ಲಕ್ಷಣದ ಸಮಾನತೆಯನ್ನು ನೋಡುವುದಕ್ಕೆ ಇಷ್ಟ ಪಡುತ್ತಾರೆ. ತಾವೆಲ್ಲರೂ ಸಹ ಇದನ್ನೇ ಇಷ್ಟ ಪಡುತ್ತೀರಿ ಅಲ್ಲವೇ. ತಂದೆಯು ಬಯಸುತ್ತಾರೆ, ತಾವು ಮಕ್ಕಳು ಬಯಸುತ್ತೀರಾ ಆದರೂ ಮಧ್ಯದಲ್ಲಿ ಏನಿದೆ? ಅದನ್ನು ಸಹ ಚೆನ್ನಾಗಿ ತಿಳಿದುಕೊಂಡಿದ್ದೀರಿ. ಪರಸ್ಪರರಲ್ಲಿ ವರ್ಕ್ ಶಾಪ್ ಮಾಡುತ್ತೀರಲ್ಲವೇ.

ಬಾಪ್ ದಾದಾರವರು ಲಕ್ಷ ಮತ್ತು ಲಕ್ಷ್ಯಣದ ಅಂತರವಾಗುವುದಕ್ಕೆ ವಿಶೇಷ ಒಂದು ಮಾತನ್ನು ನೋಡಿದರು. ಅಥವಾ ಆಕಾರಿ ಫರಿಶ್ತಾ ಆಗಿರಬಹುದು ಅಥವಾ ನಿರಾಕಾರಿ - ನಿರಂತರ, ನ್ಯಾಚುರಲ್ ನೇಚರ್ ಆಗಿರಬಹುದು ಇದರ ಮೂಲ ಆಧಾರವಾಗಿದೆ ನಿರಹಂಕಾರಿ ಆಗುವುದು. ಅಹಂಕಾರ ಅನೇಕ ಪ್ರಕಾರದಲ್ಲಿದೆ. ಎಲ್ಲದಕ್ಕಿಂತ ವಿಶೇಷ ಹೇಳುವುದರಲ್ಲಿ ಒಂದು ಶಬ್ದ ದೇಹಾಭಿಮಾನವಾಗಿದೆ ಆದರೆ ದೇಹಾಭಿಮಾನದ ವಿಸ್ತಾರ ಬಹಳಷ್ಟಿದೆ ಒಂದು ದೊಡ್ಡ ರೂಪದಲ್ಲಿ ದೇಹಾಭಿಮಾನ, ಯಾವುದು ಕೆಲವು ಮಕ್ಕಳಲ್ಲಿ ದೇಹಾಭಿಮಾನವೇ ಇಲ್ಲ. ಭಲೇ ಸ್ವಯಂನಲ್ಲಿ ದೇಹ ಅಥವಾ ಅನ್ಯರ ದೇಹ ಒಂದು ವೇಳೆ ಅನ್ಯರ ದೇಹದ ಆಕರ್ಷಣೆ ಇರಬಹುದು, ಅದೂ ಸಹ ದೇಹಾಭಿಮಾನವಾಗಿದೆ. ಕೆಲವು ಮಕ್ಕಳು ಈ ದೊಡ್ಡ ರೂಪದಲ್ಲಿ ಪಾಸ್ ಆಗಿರಬಹುದು. ದೊಡ್ಡ ರೂಪದಲ್ಲಿ ದೇಹದ ಆಕಾರದಲ್ಲಿ ಸೆಳೆತ ಅಥವಾ ಅಭಿಮಾನವಿರುವುದಿಲ್ಲ ಆದರೆ ಇದರ ಜೊತೆ-ಜೊತೆ ದೇಹದ ಸಂಬಂಧದಲ್ಲಿ ತನ್ನ ಸಂಸ್ಕಾರ ವಿಶೇಷವಾಗಿದೆ ಅದರ ಅಭಿಮಾನ ಅರ್ಥಾತ್ ಅಹಂಕಾರ, ನಶೆ, ಆವೇಶ ಇದೂ ಸಹ ಸೂಕ್ಷ್ಮ ದೇಹಾಭಿಮಾನವಾಗಿದೆ. ಒಂದು ವೇಳೆ ಈ ಸೂಕ್ಷ್ಮ ಅಭಿಮಾನದಿಂದ ಯಾವುದೇ ಅಭಿಮಾನವಿದೆಯೆಂದರೆ ಆಕಾರಿ ಫರಿಶ್ತಾ ಸ್ವಾಭಾವಿಕವಾಗಿರಲು ನಿರಂತರವಾಗಿ ಸಾಧ್ಯವಿರುವುದಿಲ್ಲ, ಅಥವಾ ನಿರಾಕಾರಿಗಳು ಸಹ ಆಗಲು ಸಾಧ್ಯವಿಲ್ಲ. ಏಕೆಂದರೆ ಆಕಾರಿ ಫರಿಶ್ತೆಯಲ್ಲು ದೇಹಾಭಿಮಾನವಿಲ್ಲ ಡಬಲ್ ಲೈಟ್ ಆಗಿದ್ದಾರೆ. ದೇಹದ ಅಹಂಕಾರ ನಿರಾಕಾರಿ ಆಗುವುದಕ್ಕೆ ಬಿಡುವುದಿಲ್ಲ. ಎಲ್ಲರೂ ಈ ವರ್ಷ ಗಮನವನ್ನು ಒಳ್ಳೆಯದನ್ನೇ ಇಟ್ಟಿದ್ದೀರಾ, ಉಮಂಗ ಉತ್ಸಾಹವಿದೆ. ಬಯಸುವುದು ಸಹ ಒಳ್ಳೆಯದಿದೆ, ಇಷ್ಟವೂ ಪಡುತ್ತೀರಾ ಆದರೆ ಮತ್ತಷ್ಟು ಮುಂದೆ ಅಟೆನ್ಶನ್ ಪ್ಲೀಸ್! ಚೆಕ್ ಮಾಡಿಕೊಳ್ಳಿ ಯಾವುದೇ ಪ್ರಕಾರದ ಅಭಿಮಾನ ಅಥವಾ ಅಹಂಕಾರ ನ್ಯಾಚುರಲ್ ಸ್ವರೂಪವನ್ನಾಗಿ ಮಾಡುವುದಿಲ್ಲ ತಾನೇ? ಯಾವುದೇ ಸೂಕ್ಷ್ಮ ಅಭಿಮಾನ ಅಂಶ ರೂಪದಲ್ಲಿ ಉಳಿದುಕೊಂಡಿಲ್ಲವೇ, ಯಾವುದು ಸಮಯ ಪ್ರಮಾಣ ಹಾಗೂ ಸೇವೆಯ ಪ್ರಮಾಣದನುಸಾರ ಇಮರ್ಜ್ ರೂಪವಾಗುವುದಿಲ್ಲ ತಾನೆ? ಏಕೆಂದರೆ ಅಂಶ ಮಾತ್ರವು ಸಮಯದಲ್ಲಿ ಮೋಸ ಮಾಡಿ ಬಿಡುತ್ತದೆ. ಆ ಕಾರಣ ಈ ವರ್ಷ ಯಾವ ಲಕ್ಷ್ಯವನ್ನಿಟ್ಟಿದ್ದೀರಾ, ಬಾಪ್ ದಾದಾ ಇದನ್ನೇ ಇಷ್ಟ ಪಡುತ್ತಾರೆ ಲಕ್ಷ್ಯ ಸಮಾನವಾಗಿರಲೇ ಬೇಕು.

ನಡೆಯುತ್ತಾ-ನಡೆಯುತ್ತಾ ಯಾವುದೇ ವಿಶೇಷ ಸ್ಥೂಲ ರೂಪದಲ್ಲಿ ಆ ದಿನ, ಆ ಸಮಯ ಯಾವುದೇ ತಪ್ಪನ್ನು ಮಾಡುವುದಿಲ್ಲ ಆದರೆ ಕೆಲವೊಮ್ಮೆ ಇದೇ ಅನುಭವವಾಗುತ್ತದೆ ಅಲ್ಲವೇ. ಇಂದು ಅಥವಾ ಈಗ ಏನೆನ್ನುವುದು ಗೊತ್ತಿಲ್ಲ. ಹೇಗೆ ಖುಷಿಯಾಗಿರಬೇಕು ಅದರಂತೆ ಇರುವುದಿಲ್ಲ, ಇಂದು ಒಂಟಿತನ, ನಿರಾಶೆ ಅಥವಾ ವ್ಯರ್ಥ ಸಂಕಲ್ಪಗಳು ಅಚಾನಕ್ ಆಗಿ ಬಿರುಗಾಳಿಗಳು ಏಕೆ ಬರುತ್ತಿವೆ ಎಂದು ಗೊತ್ತಿಲ್ಲ. ಅಮೃತವೇಳೆಯನ್ನು ಮಾಡಿದೆ, ಕ್ಲಾಸ್ಗೂ ಹೋಗಿದ್ದೆ, ಸೇವೆಯನ್ನು, ಜಾಬ್ (ಕೆಲಸ) ಅನ್ನು ಮಾಡಿದೆ ಆದರೂ ಇದು ಏಕೆ ಆಗುತ್ತಿದೆ? ಕಾರಣ ಏನಾಗಿರಬಹುದು? ದೊಡ್ಡ ರೂಪದಲ್ಲಂತು ಚೆಕ್ ಮಾಡಿಕೊಳ್ಳುತ್ತೀರಾ ಹಾಗು ಅದನ್ನು ತಿಳಿದುಕೊಳ್ಳುತ್ತೀರಾ ನನ್ನಿಂದ ಯಾವುದೇ ತಪ್ಪು ಆಗಿಲ್ಲವೆಂದು. ಆದರೆ ಸೂಕ್ಷ್ಮ ಅಭಿಮಾನದ ಸ್ವರೂಪದ ಅಂಶ ಪ್ರಗಟವಾಗುತ್ತದೆ. ಆದ ಕಾರಣ ಯಾವುದೇ ಕಾರ್ಯದಲ್ಲಿ ಮನಸ್ಸೇ ಆಗುವುದಿಲ್ಲ, ವೈರಾಗ್ಯವು ಉದಾಸಿತನದ ಅನುಭವವಾಗುತ್ತದೆ. ಇದನ್ನು ಯೋಚನೆ ಮಾಡುತ್ತೀರಾ? ಯಾವುದಾದರೂ ಏಕಾಂತದ ಸ್ಥಳದಲ್ಲಿ ಹೊರಟು ಹೋಗೋಣವೆಂದು; ಅಥವಾ ಯೋಚನೆ ಮಾಡುತ್ತೀರಾ, ಮಲಗಿ ಬಿಡೋಣ, ರೆಸ್ಟ್ನಲ್ಲಿ ಹೋಗೋಣವೆಂದು ಅಥವಾ ಪರಿವಾರದಿಂದ ದೂರ ಹೊರಟು ಹೋಗೋಣ ಸ್ವಲ್ಪ ಸಮಯಕ್ಕೋಸ್ಕರ. ಈ ಎಲ್ಲಾ ಸ್ಥಿತಿಗಳ ಕಾರಣ ಅಂಶದ ಅದ್ಭುತವಾಗಿದೆ. ಅದ್ಭುತವೆಂದು ಹೇಳಬೇಡಿ, ಅನಾಹುತವೆಂದುಕೊಳ್ಳಿ. ಹಾಗಾದರೆ ಸಂಪೂರ್ಣ ನಿರಹಂಕಾರಿ ಆಗುವುದು ಅರ್ಥಾತ್ ಆಕಾರಿ - ನಿರಾಕಾರಿ ಸಹಜವಾಗುವುದು. ಹೇಗೆ ಕೆಲವೊಮ್ಮೆ ಮನಸ್ಸಾಗುವುದಿಲ್ಲ ಏನು ಸದಾ ಒಂದೇ ದಿನಚರ್ಯದಂತೆ ನಡೆಯಬೇಕಾ? ಬದಲಾವಣೆಯು ಬೇಕಲ್ಲವೇ? ಇಷ್ಟವಿಲ್ಲದಿದ್ದರೂ ಈ ಸ್ಥಿತಿ ಬಂದು ಬಿಡುತ್ತದೆ.

ಯಾವಾಗ ನಿರಹಂಕಾರಿ ಆಗಿ ಬಿಡುತ್ತೀರಾ ಆಗ ಆಕಾರಿ ಹಾಗೂ ನಿರಾಕಾರಿ ಸ್ಥಿತಿಯಿಂದ ಕೆಳಗೆ ಬರುವುದಕ್ಕೆ ಹೃದಯ ಇಷ್ಟ ಪಡುವುದಿಲ್ಲ. ಅದರಲ್ಲೇ ಲವಲೀನತೆಯ ಅನುಭವ ಮಾಡುತ್ತೀರಾ. ಏಕೆಂದರೆ ತಮ್ಮ ಒರಿಜಿನಲ್ ಅನಾದಿ ಸ್ಥಿತಿ ನಿರಾಕಾರಿ ಆಗಿದೆ. ನಿರಾಕಾರಿ ಆತ್ಮವು ಈ ಶರೀರದಲ್ಲಿ ಪ್ರವೇಶ ಮಾಡಿದೆ. ಶರೀರ ಆತ್ಮದಲ್ಲಿ ಪ್ರವೇಶ ಮಾಡಿಲ್ಲ ಆತ್ಮವು ಶರೀರದಲ್ಲಿ ಪ್ರವೇಶ ಮಾಡಿತು. ಹಾಗಾದರೆ ಅನಾದಿ ಒರಿಜಿನಲ್ ಸ್ವರೂಪ ನಿರಾಕಾರಿ ಆಗಿದೆ ಅಥವಾ ಶರೀರಧಾರಿ ಆಗಿದೆಯಾ? ಶರೀರದ ಆಧಾರವನ್ನು ತೆಗೆದುಕೊಂಡಿರಿ ಆದರೆ ತೆಗೆದುಕೊಂಡಿದ್ದು ಯಾರು? ತಾವು ಆತ್ಮಗಳು, ನಿರಾಕಾರದಿಂದ ಸಾಕಾರ ಶರೀರದ ಆಧಾರವನ್ನು ತೆಗೆದುಕೊಂಡಿರಿ. ಹಾಗಾದರೆ ಒರಿಜಿನಲ್ ಏನಾಯಿತು ಆತ್ಮ ಅಥವಾ ಶರೀರ? ಆತ್ಮ. ಇದು ಪಕ್ಕಾ ಇದೆಯೇ? ಹಾಗಾದರೆ ನನ್ನ ಮೂಲ ಸ್ಥಿತಿಯಲ್ಲಿ ಸ್ಥಿತರಾಗುವುದು ಸಹಜ ಅಥವಾ ಆಧಾರ ತೆಗೆದುಕೊಳ್ಳುವ ಸ್ಥಿತಿ ಸಹಜವೇ?

ಅಹಂಕಾರ ಬರುವಂತಹ ಬಾಗಿಲಿನ ಒಂದು ಶಬ್ಧವಾಗಿದೆ, ಅದು ಯಾವುದಾಗಿದೆ ನಾನು ಈಗ ಅಭ್ಯಾಸವನ್ನು ಮಾಡಿ ಯಾವಾಗ ನಾನು ಶಬ್ದ ಬರುತ್ತದೆ ಆಗ ಒರಿಜಿನಲ್ ಸ್ವರೂಪ ಮುಂದೆ ತಂದುಕೊಳ್ಳಿ ನಾನು ಯಾರು? ನಾನು ಆತ್ಮ ಅಥವಾ ಇಂತಿಂತವರು? ಅನ್ಯರಿಗೆ ಜ್ಞಾನವನ್ನು ಕೊಡುತ್ತೀರಲ್ಲವೇ ನಾನು ಶಬ್ಧ ಹಾರಿಸುವಂತಹದ್ದಾಗಿದೆ, ನಾನು ಶಬ್ಧವೇ ಕೆಳಗಡೆ ತರುವಂತಹದ್ದಾಗಿದೆ. ನಾನು ಹೇಳುವುದರಿಂದ ಒರಿಜಿನಲ್ ನಿರಾಕಾರ ಸ್ವರೂಪ ನೆನಪಿಗೆ ಬಂದು ಬಿಡಲಿ. ಇದು ನ್ಯಾಚುರಲ್ ಆಗಿ ಬಿಡಲಿ. ಎಂದ ಮೇಲೆ ಮೊದಲನೇ ಪಾಠ ಸಹಜವಾಗಿದೆಯಲ್ಲವೇ. ಹಾಗಾದರೆ ಇದನ್ನು ಚೆಕ್ ಮಾಡಿಕೊಳ್ಳಿ, ಅಭ್ಯಾಸ ಮಾಡಿಕೊಳ್ಳಿ ನಾನು ಯೋಚನೆ ಮಾಡಿದಿರಿ ಹಾಗೂ ನಿರಾಕಾರಿ ಸ್ವರೂಪದ ಸ್ಮೃತಿಯಲ್ಲಿ ಬಂದು ಬಿಡಲಿ. ಎಷ್ಟು ಬಾರಿ ನಾನು ಶಬ್ದವನ್ನು ಹೇಳುತ್ತೀರಲ್ಲವೇ. ನಾನು ಇದನ್ನು ಹೇಳಿದೆ, ನಾನು ಇದನ್ನು ಮಾಡುತ್ತೇನೆ, ನಾನು ಇದನ್ನು ಮಾಡುತ್ತೇನೆ.. ಅನೇಕ ಬಾರಿ ನಾನು ಎನ್ನುವ ಶಬ್ದವನ್ನು ಉಪಯೋಗವನ್ನು ಮಾಡುತ್ತೀರಾ. ಹಾಗಾದರೆ ಸಹಜ ವಿಧಿ ಇದೇ ಆಗಿದೆ ನಿರಾಕಾರಿ ಅಥವಾ ಆಕಾರಿ ಆಗುವುದು ಯಾವಾಗಲಾದರೂ ನಾನು ಶಬ್ದವನ್ನು ಉಪಯೋಗಿಸಿ, ತಕ್ಷಣ ತಮ್ಮ ನಿರಾಕಾರಿ ಒರಿಜಿನಲ್ ಸ್ವರೂಪವನ್ನು ಮುಂದೆ ತನ್ನಿ. ಇದು ಕಷ್ಟವೇ ಅಥವಾ ಸಹಜವಾಗಿದೆಯೇ? ಹಾಗಾದರೆ ಈ ಲಕ್ಷ್ಯ ಮತ್ತು ಲಕ್ಷಣವು ಸಮಾನವಾಗಿ ಬಿಟ್ಟಿದೆಯಲ್ಲವೇ. ಕೇವಲ ಈ ಯುಕ್ತಿ - ನಿರಹಂಕಾರಿ ಆಗುವ ಸಹಜ ಸಾಧನವನ್ನು ತನ್ನದನ್ನಾಗಿ ಮಾಡಿಕೊಂಡು ನೋಡಿ. ಈ ದೇಹಾಭಿಮಾನದ ನಾನು ಸಮಾಪ್ತಿಯಾಗಿ ಬಿಡಲಿ. ಏಕೆಂದರೆ ನಾನು ಶಬ್ದವಾಗಿದೆ. ದೇಹ ಅಹಂಕಾರದಲ್ಲಿ ತರುತ್ತದೆ ಹಾಗೂ ಒಂದು ವೇಳೆ ನಾನು ನಿರಾಕಾರಿ ಆತ್ಮ ಸ್ವರೂಪನಾಗಿದ್ದೇನೆ ಈ ಸ್ಮೃತಿಯಲ್ಲಿ ತಂದು ಬಿಟ್ಟರೆ ನಾನು ಶಬ್ದವೇ ದೇಹಾಭಿಮಾನದಿಂದ ದೂರ ತೆಗೆದುಕೊಂಡು ಹೋಗುತ್ತದೆ. ಸರಿಯೇ. ಇಡೀ ದಿನದಲ್ಲಿ ಇದೆಷ್ಟು 25-30 ಸಾರಿ ಅವಶ್ಯಕವಾಗಿ ಹೇಳುತ್ತೀರಿ. ಹೇಳುವುದಿಲ್ಲ ಆದರೆ ಯೋಚನೆ ಮಾಡುತ್ತೀರಾ ನಾನು ಇದನ್ನು ಮಾಡುತ್ತೇನೆ. ನಾನು ಇದನ್ನು ಮಾಡಬೇಕು... ಪ್ಲಾನ್ನ್ನೂ ಮಾಡುತ್ತೀರಾ ಹಾಗಾದರೆ ಯೋಚನೆ ಮಾಡುತ್ತೀರಲ್ಲವೇ. ಇಷ್ಟು ಬಾರಿಯ ಅಭ್ಯಾಸ, ಆತ್ಮ ಸ್ವರೂಪದ ಸ್ಮೃತಿ ಏನನ್ನಾಗಿ ಮಾಡಿ ಬಿಡುತ್ತದೆ? ನಿರಾಕಾರಿ. ನಿರಾಕಾರಿಗಳಾಗಿ, ಆಕಾರಿ ಫರಿಶ್ತೆಯಾಗಿ ಕಾರ್ಯ ಮಾಡಿದೆ ಹಾಗೂ ನಿರಾಕಾರಿ. ಕರ್ಮ-ಸಂಬಂಧದ ಸ್ವರೂಪದಿಂದ ಸಂಬಂಧದಲ್ಲಿ ಬನ್ನಿ, ಸಂಬಂಧದ ಬಂಧನದಲ್ಲಿ ಬರಬೇಡಿ. ದೇಹಾಭಿಮಾನದಲ್ಲಿ ಬರುವುದು ಅರ್ಥಾತ್ ಕರ್ಮಬಂಧನದಲ್ಲಿ ಬರುವುದು. ದೇಹ ಸಂಬಂಧದಲ್ಲಿ ಬರುವುದು ಅರ್ಥಾತ್ ಕರ್ಮ ಸಂಬಂಧದಲ್ಲಿ ಬರುವುದು. ಎರಡರಲ್ಲಿ ಅಂತರವಿದೆ. ದೇಹದ ಆಧಾರವನ್ನು ತೆಗೆದುಕೊಳ್ಳುವುದು ಹಾಗೂ ದೇಹದ ವಶದಲ್ಲಿ ಬರುವುದು ಎರಡರಲ್ಲಿ ಅಂತರವಿದೆ. ಫರಿಶ್ತೆ ಅಥವಾ ನಿರಾಕಾರಿ ಆತ್ಮ ದೇಹದ ಆಧಾರವನ್ನು ತೆಗೆದುಕೊಂಡು ದೇಹದ ಬಂಧನದಲ್ಲಿ ಬರುವುದಿಲ್ಲ, ಸಂಬಂಧವನ್ನು ಇಡುತ್ತದೆ. ಆದರೆ ಬಂಧನದಲ್ಲಿ ಬರುವುದಿಲ್ಲ ಹಾಗಾದರೆ ಬಾಪ್ ದಾದಾ ಪುನಃ ಈ ವರ್ಷದ ಫಲಿತಾಂಶವನ್ನು ನೋಡುತ್ತಾರೆ. ನಿರಹಂಕಾರಿ, ಆಕಾರಿ ಫರಿಶ್ತೆ ಹಾಗೂ ನಿರಾಕಾರಿ ಸ್ಥಿತಿಯಲ್ಲಿ ಲಕ್ಷ್ಯ ಹಾಗೂ ಲಕ್ಷಣ ಎಷ್ಟು ಸಮಾನವಾಗಿದೆ?

ಮಹಾನತೆಯ ಚಿಹ್ನೆಯಾಗಿದೆ ನಿರ್ಮಾಣತೆ. ಎಷ್ಟು ನಿರ್ಮಾಣರಾಗಿರುತ್ತಾರೆ ಅಷ್ಟೇ ಎಲ್ಲರ ಹೃದಯದಲ್ಲಿ ಮಹಾನ್ ಸ್ವತಃವಾಗುತ್ತಾರೆ. ನಿರ್ಮಾಣತೆ ಇಲ್ಲದೆ ಸರ್ವರ ಮಾ||ಸುಖದಾತರಾಗುವುದಕ್ಕೆ ಸಾಧ್ಯವಿಲ್ಲ. ನಿರ್ಮಾಣತೆ ನಿರಹಂಕಾರಿಯನ್ನು ಸಹಜವನ್ನಾಗಿ ಮಾಡುತ್ತದೆ. ನಿರ್ಮಾಣತೆಯ ಬೀಜ ಮಹಾನತೆಯ ಫಲವನ್ನು ಸ್ವತಃವಾಗಿ ಪ್ರಾಪ್ತಿ ಮಾಡಿಸುತ್ತದೆ. ನಿರ್ಮಾಣತೆ ಎಲ್ಲರ ಹೃದಯದ ಆಶೀರ್ವಾದವನ್ನು ಪ್ರಾಪ್ತಿ ಮಾಡುವಂತಹ ಸಹಜ ಸಾಧನವಾಗಿದೆ. ನಿರ್ಮಾಣತೆ ಎಲ್ಲರ ಮನಸ್ಸಿನಲ್ಲಿ ನಿರ್ಮಾಣ ಆತ್ಮದ ಪ್ರತಿ ಸಹಜ ಪ್ರೀತಿಯ ಸ್ಥಾನವನ್ನಾಗಿ ಮಾಡಿ ಬಿಡುತ್ತದೆ. ನಿರ್ಮಾಣತೆ ಮಹಿಮಾ ಯೋಗ್ಯರನ್ನಾಗಿ ಸ್ವತಃವಾಗಿ ಮಾಡಿ ಬಿಡುತ್ತದೆ. ಹಾಗಾದರೆ ನಿರಹಂಕಾರಿಯಾಗುವ ವಿಶೇಷ ಚಿಹ್ನೆಯಾಗಿದೆ - ನಿರ್ಮಾಣತೆ. ವೃತ್ತಿಯಲ್ಲೂ ಸಹ ನಿರ್ಮಾಣತೆ, ದೃಷ್ಠಿಯಲ್ಲೂ ಸಹ ನಿರ್ಮಾಣತೆ, ವಾಣಿಯಲ್ಲೂ ಸಹ ನಿರ್ಮಾಣತೆ, ಸಂಬಂಧ-ಸಂಪರ್ಕದಲ್ಲೂ ಸಹ ನಿರ್ಮಾಣತೆ. ಈ ರೀತಿಯಲ್ಲ ನನ್ನ ವೃತ್ತಿಯಲ್ಲಿ ಇರಲಿಲ್ಲ ಆದರೆ ಮಾತಿನಿಂದ ಬಂದು ಬಿಟ್ಟಿತು. ಯಾವುದು ವೃತ್ತಿಯಲ್ಲಿರುತ್ತದೆ ಅದು ದೃಷ್ಟಿಯಲ್ಲಿರುತ್ತದೆ. ಯಾವುದು ದೃಷ್ಟಿಯಲ್ಲಿರುತ್ತದೆ ಅದು ವಾಣಿಯಲ್ಲಿರುತ್ತದೆ, ಯಾವುದು ವಾಣಿಯಲ್ಲಿರುತ್ತದೆ ಅದು ಸಂಬಂಧ-ಸಂಪರ್ಕದಲ್ಲಿ ಬರುತ್ತದೆ. ನಾಲ್ಕರಲ್ಲೂ ಇರಬೇಕು, ಮೂರರಲ್ಲಿದೆ, ಒಂದರಲ್ಲಿಲ್ಲ - ಹಾಗಾದರೆ ಅಹಂಕಾರ ಬರುವುದಕ್ಕೆ ಮಾರ್ಜಿನ್ ಇದೆ. ಇದಕ್ಕೆ ಹೇಳಲಾಗುತ್ತದೆ ಫರಿಶ್ತಾ. ಹಾಗಾದರೆ ತಿಳಿಯಿತೇ, ಬಾಪ್ ದಾದಾರವರು ಏನನ್ನು ಬಯಸುತ್ತಾರೆ ಹಾಗೂ ತಾವು ಏನು ಬಯಸುತ್ತೀರಾ? ಬಯಸುವುದು ಎರಡೂ ಒಂದೇ ಆಗಿದೆ, ಈಗ ಮಾಡುವುದು ಒಂದೇ ಮಾಡಿ. ಒಳ್ಳೆಯದು.

ಮುಂದೆ ಸೇವೆಯ ಹೊಸ ಹೊಸ ಪ್ಲಾನ್ಸ್ ಏನು ಮಾಡುತ್ತೀರಾ. ಏನಾದರೂ ಮಾಡಿದ್ದೀರಾ, ಏನಾದರೂ ಮಾಡುತ್ತೀರಾ. ಈ ವರ್ಷವಿರಬಹುದು ಅಥವಾ ಮುಂದಿನ ವರ್ಷ - ಹೇಗೆ ಅನ್ಯ ಪ್ಲಾನ್ಸ್ ಹೇಗೆ ಯೋಚನೆ ಮಾಡುತ್ತೀರಾ, ಭಾಷಣವನ್ನು ಮಾಡುತ್ತೀರಾ, ಸಂಬಂಧ ಸಂಪರ್ಕವನ್ನು ಜಾಸ್ತಿ ಮಾಡಿಕೊಳ್ಳುತ್ತೀರಾ, ದೊಡ್ಡ ಪ್ರೋಗ್ರಾಂ ಅನ್ನು ಮಾಡುತ್ತೀರಾ, ಚಿಕ್ಕ ಕಾರ್ಯಕ್ರಮವನ್ನು ಮಾಡುತ್ತೀರಾ ಇದನ್ನು ಯೋಚನೆಯನ್ನಂತೂ ಮಾಡುತ್ತೀರಾ ಆದರೆ ವರ್ತಮಾನ ಸಮಯದ ಗತಿಯ ಪ್ರಮಾಣ ಈಗ ಸೇವೆಯಲ್ಲಿ ತೀವ್ರ ಗತಿ ಬೇಕು ಅದು ಹೇಗೆ ಆಗುತ್ತದೆ? ವಾಣಿಯ ಮುಖಾಂತರ, ಸಂಬಂಧ - ಸಂಪರ್ಕದ ಮುಖಾಂತರವಂತೂ ಸೇವೆಯನ್ನಂತೂ ಮಾಡುತ್ತಿದ್ದೀರಾ, ಮನಸಾ ಸೇವೆಯನ್ನು ಮಾಡುತ್ತೀರಾ ಆದರೆ ಈಗ ಬೇಕು - ಸ್ವಲ್ಪ ಸಮಯ ಸೇವೆಯಲ್ಲಿ ಸಫಲತೆ ಜಾಸ್ತಿ ಇರಬೇಕು. ಸಫಲತೆ ಅರ್ಥಾತ್ ಫಲಿತಾಂಶ. ಅದರ ವಿಧಿಯಾಗಿದೆ ವಾಣಿಯ ಜೊತೆ ಜೊತೆ ಮೊದಲು ತನ್ನ ಸ್ಥಿತಿ ಮತ್ತು ಸ್ಥಾನದ ವಾತಾವರಣವನ್ನು ಶಕ್ತಿಶಾಲಿಯನ್ನಾಗಿ ಮಾಡಿಕೊಳ್ಳಿ. ಹೇಗೆ ತಮ್ಮ ಜಡ ಚಿತ್ರಗಳು ಏನು ಸೇವೆಯನ್ನು ಮಾಡುತ್ತಿವೆ? ವೈಬ್ರೇಷನ್ಸ್ ನ ಮೂಲಕ ಎಷ್ಟು ಭಕ್ತಾತ್ಮರನ್ನು ಪ್ರಸನ್ನ ಮಾಡುತ್ತಿದೆ. ಡಬಲ್ ವಿದೇಶಿಯರು ಮಂದಿರವನ್ನು ನೋಡಿದ್ದೀರಾ? ತಮ್ಮ ಚಿತ್ರಗಳು ಸೇವೆಯನ್ನು ಮಾಡುತ್ತಿವೆಯಲ್ಲವೇ! ಹಾಗಾದರೆ ವಾಣಿಯ ಮೂಲಕ ಭಲೇ ಮಾಡಿ ಆದರೆ ಈಗ ಈ ತರಹ ಪ್ಲಾನಿಂಗ್ ಮಾಡಿ, ವಾಣಿಯ ಜೊತೆ ಜೊತೆಗೆ ವೈಬ್ರೇಷನ್ಸ್ ನ ಇಂತಹ ವಿಧಿಯನ್ನು ಮಾಡಿರಿ ಹೇಗೆಂದರೆ ವಾಣಿ ಮತ್ತು ವೈಬ್ರೇಷನ್ಸ್ ಡಬಲ್ ಕೆಲಸವನ್ನು ಮಾಡಲಿ. ವೈಬ್ರೇಷನ್ಸ್ ಬಹಳಕಾಲ ಇರುತ್ತದೆ. ವಾಣಿಯಿಂದ ಕೇಳಿರುವಂತಹದ್ದು ಕೆಲವೊಮ್ಮೆ ಕೆಲವರಿಗೆ ಮರೆತೂ ಹೋಗುತ್ತದೆ ಆದರೆ ವೈಬ್ರೇಷನ್ಸ್ ನ ಛಾಪವು ಹೆಚ್ಚಿನ ಸಮಯ ನಡೆಯುತ್ತದೆ. ಹೇಗೆ ತಾವು ತಮ್ಮ ಜೀವನದಲ್ಲಿ ಅನುಭವಿಗಳಾಗಿದ್ದೀರಿ ಕೆಲವರ ವೈಬ್ರೇಷನ್ಸ್ ಒಂದು ವೇಳೆ ತಮ್ಮ ಮನದಲ್ಲಿ ಅಥವಾ ಬುದ್ಧಿಯಲ್ಲಿ ಕುಳಿತುಕೊಂಡು ಬಿಡುತ್ತದೆ; ಎಂದ ಮೇಲೆ ಉಲ್ಟಾ ಎಷ್ಟು ಸಮಯ ನಡೆಯುತ್ತದೆ. ವೈಬ್ರೇಷನ್ಸ್ ಒಳಗಡೆ ಕುಳಿತು ಬಿಡುತ್ತದೆಯಲ್ಲವೇ! ಮತ್ತು ಮಾತು ಸಹ ಅದೇ ಸಮಯದಲ್ಲಿ ಮರೆತು ಹೋಗುತ್ತದೆ ಆದರೆ ವೈಬ್ರೇಷನ್ಸ್ನ ರೂಪದಲ್ಲಿ ಮನಸ್ಸು ಮತ್ತು ಬುದ್ಧಿಯಲ್ಲಿ ಛಾಪನ್ನು ಮೂಡಿಸುತ್ತದೆ ಮತ್ತು ಎಷ್ಟು ಸಮಯ ಅದೇ ವೈಬ್ರೇಷನ್ಸ್ ನ ವಶರಾಗಿ ಅದೇ ವ್ಯಕ್ತಿಯಿಂದ ವ್ಯವಹಾರದಲ್ಲಿ ಬರುತ್ತೀರಿ. ಭಲೇ ಉಲ್ಟಾ ಆಗಿರಬಹುದು, ಭಲೇ ಸುಲ್ಟಾ ಆಗಿರಬಹುದು ಆದರೆ ವೈಬ್ರೇಷನ್ಸ್ ಪರಿಶ್ರಮದಿಂದ ಅಳಿಸಿ ಹೋಗುತ್ತದೆ.

ಆದರೆ ಈ ಆತ್ಮಿಕ ವೈಬ್ರೇಷನ್ಸ್ ಅನ್ನು ಹರಡಿಸಲು ಮೊದಲು ತಮ್ಮ ಮನದಲ್ಲಿ, ಬುದ್ಧಿಯಲ್ಲಿ ವ್ಯರ್ಥದ ವೈಬ್ರೇಷನ್ಸ್ ಅನ್ನು ಸಮಾಪ್ತಿ ಮಾಡಿರಿ ಆಗ ಆತ್ಮಿಕ ವೈಬ್ರೇಷನ್ಸ್ ಅನ್ನು ಹರಡಿಸಬಹುದು. ಯಾರ ಪ್ರತಿಯಾದರೂ ಒಂದುವೇಳೆ ವ್ಯರ್ಥದ ವೈಬ್ರೇಷನ್ಸ್ ಧಾರಣೆ ಮಾಡಿದ್ದೇ ಆದರೆ ಆತ್ಮಿಕ ವೈಬ್ರೇಷನ್ಸ್ ಅನ್ನು ಹರಡಿಸಲಾಗುವುದಿಲ್ಲ. ವ್ಯರ್ಥ ವೈಬ್ರೇಷನ್ಸ್ ಆತ್ಮಿಕ ವೈಬ್ರೇಷನ್ಸ್ನ ಎದುರು ಒಂದು ಗೋಡೆಯಾಗಿ ಬಿಡುತ್ತದೆ. ಭಲೇ ಸೂರ್ಯ ಎಷ್ಟೇ ಪ್ರಕಾಶಮಯವಾಗಿರಬಹುದು, ಒಂದು ವೇಳೆ ಗೋಡೆ ಎದುರಿಗೆ ಬಂದರೆ, ಮೋಡ ಎದುರಿಗೆ ಬಂದರೆ ಸೂರ್ಯನ ಪ್ರಕಾಶತೆ ಪ್ರಜ್ವಲಿತವಾಗಲು ಸಾಧ್ಯವಿಲ್ಲ. ಹಾಗಾದರೆ ಪಕ್ಕಾ ವೈಬ್ರೇಷನ್ಸ್ ಆಗಿದೆ ಗೋಡೆ ಮತ್ತು ಹಗುರವಾದ ವೈಬ್ರೇಷನ್ಸ್ ಆಗಿದೆ ಹಗುರವಾದ ಮೋಡ ಮತ್ತು ಕಪ್ಪಾದ ಮೋಡ. ಅವರು ಆತ್ಮಿಕ ವೈಬ್ರೇಷನ್ಸ್ ಆತ್ಮಗಳವರೆಗೆ ತಲುಪಲು ಅನುಮತಿಸುವುದಿಲ್ಲ. ಹೇಗೆ ಸಾಗರದಲ್ಲಿ ಬಲೆ ಹಾಕುವ ಮೂಲಕ ಒಂದೇ ಬಾರಿಗೆ ಅನೇಕ ವಸ್ತುಗಳನ್ನು ಸಂಗ್ರಹಿಸುತ್ತದೆ ಅಥವಾ ನೀವು ಎಲ್ಲೆಲ್ಲಿ ನಿಮ್ಮ ಬಲೆಯನ್ನು ಹರಡಿ ಒಂದೇ ಸಮಯದಲ್ಲಿ ಅನೇಕರನ್ನು ತಮ್ಮವರನ್ನಾಗಿಸಿಕೊಳ್ಳುವುದರಿಂದ ವೈಬ್ರೇಷನ್ಸ್ ಅನ್ನು ಒಂದೇ ಸಮಯದಲ್ಲಿ ಅನೇಕ ಆತ್ಮಗಳನ್ನು ಆಕರ್ಷಿಸುತ್ತವೆ. ವೈಬ್ರೇಷನ್ಸ್ ವಾಯುಮಂಡಲವನ್ನು ಮಾಡುತ್ತದೆ. ಆದ್ದರಿಂದ ಭವಿಷ್ಯದ ಸೇವೆಯಲ್ಲಿ ವೃತ್ತಿಯ ಮೂಲಕ ಆತ್ಮಿಕ ವೈಬ್ರೇಷನ್ಸ್ನಿಂದ ಜೊತೆ-ಜೊತೆಗೆ ಸೇವೆ ಮಾಡಿ, ಆಗ ಮಾತ್ರ ವೇಗವಾಗಿರುತ್ತದೆ. ವೈಬ್ರೇಷನ್ಸ್ ಮತ್ತು ವಾಯುಮಂಡಲದ ಜೊತೆ-ಜೊತೆಗೆ ವಾಣಿಯ ಸೇವೆಯನ್ನು ಸಹ ಮಾಡಿದರೆ, ನೀವು ಒಂದೇ ಸಮಯದಲ್ಲಿ ಅನೇಕ ಆತ್ಮಗಳ ಕಲ್ಯಾಣವನ್ನು ಮಾಡಬಹುದು.

ಉಳಿದ ಕಾರ್ಯಕ್ರಮಗಳಿಗೆ ಮೊದಲು ಮಾಡಿರುವಂತಹ ಸ್ಟೇಜ್ನ ಪ್ರಯೋಗವನ್ನು ಬಳಸಿ ಮತ್ತು ಅದನ್ನು ಮತ್ತಷ್ಟು ಹೆಚ್ಚಿಸಿ. ಸಂಪರ್ಕದವರ ಮೂಲಕ ಈ ಸಹಯೋಗವನ್ನು ತೆಗೆದುಕೊಂಡು ಈ ಸೇವೆಯ ವೃದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳಬಹುದು. ಸಹಯೋಗಿಗಳ ಸಹಯೋಗವನ್ನು ಯಾವುದೇ ವಿಧಿಯಿಂದ ಮುಂದುವರೆಸಿದರೆ, ಸ್ವತಃವಾಗಿ ಸೇವೆಯಲ್ಲಿ ಸಹಯೋಗಿಗಳಾಗುವುದರಿಂದ ಸಹಜ ಯೋಗಿಗಳಾಗುತ್ತೇವೆ. ಕೆಲವು ಇಂತಹ ಆತ್ಮಗಳಿದ್ದಾರೆ ಸೀದಾ ಸಹಜಯೋಗಿಗಳು ಆಗುವುದಿಲ್ಲ. ಆದರೆ ಸಹಯೋಗ ತೆಗೆದುಕೊಳ್ಳುತ್ತಾ ಹೋಗಿ, ಸಹಯೋಗಿಗಳನ್ನಾಗಿ ಮಾಡಿಕೊಳ್ಳುತ್ತಾ ಹೋಗಿ. ಸಹಯೋಗದಿಂದ ಮುಂದುವರೆಯುತ್ತಾ ಸಹಯೋಗ ಅವರನ್ನು ಯೋಗಿಯನ್ನಾಗಿ ಮಾಡುತ್ತದೆ. ಹಾಗಾದರೆ ಸಹಯೋಗಿ ಆತ್ಮಗಳನ್ನು ಹಾಗೂ ಸ್ಟೇಜ್ನಲ್ಲಿ ತನ್ನಿರಿ, ಅವರ ಸಹಯೋಗವನ್ನು ಸಫಲ ಮಾಡಿ. ತಿಳಿಯಿತೇ, ಏನು ಮಾಡಬೇಕೆಂದು. ಒಂದೇ ಆತ್ಮವು ಸಹಯೋಗಿಯಾದರೆ ಆ ಆತ್ಮ ಪ್ರಾಕ್ಟಿಕಲ್ ನಲ್ಲಿ ಸಹಯೋಗವನ್ನು ತೆಗೆದುಕೊಳ್ಳುವುದರಿಂದ, ಕೊಡುವುದರಲ್ಲಿ ಪ್ರತ್ಯಕ್ಷ ಆಶೀರ್ವಾದದಿಂದ ಸಹಜ ಮುಂದುವರೆಯುತ್ತಾರೆ ಹಾಗೂ ಅನೇಕರ ಸೇವೆಗೆ ನಿಮಿತ್ತರಾಗುತ್ತಾರೆ.

ಜೊತೆ-ಜೊತೆಗೆ ವರ್ಷದಲ್ಲಿ ತಿಂಗಳನ್ನು ನಿಗಧಿ ಪಡಿಸಿ - ಕೆಲವೊಂದು ತಿಂಗಳು ವಿಶೇಷ ಸ್ವಯಂನ ಪುರುಷಾರ್ಥ ಶ್ರೇಷ್ಠ ಶಕ್ತಿಯನ್ನು ಧಾರಣೆ ಮಾಡುವ ಅಭ್ಯಾಸ, ಯಾವುದನ್ನು ತಮ್ಮ ತಪಸ್ಯ, ರಿಟ್ರೀಟ್ ಅಥವಾ ಭಟ್ಟಿ ಎಂದು ಹೇಳುತ್ತೀರಾ. ಪ್ರತಿಯೊಂದು ದೇಶದ ಪ್ರಮಾಣ ಎರಡೆರಡು ತಿಂಗಳು ಫಿಕ್ಸ್ ಮಾಡಿ ಹೇಗೆ ಸೀಜನ್ ಇರುತ್ತದೆ. ಎರಡು ತಿಂಗಳು ತಪಸ್ಸಿಗೆ, ಎರಡು ತಿಂಗಳು ಚಿಕ್ಕ ಚಿಕ್ಕ ಸೇವೆಗಳಿಗೆ, ಎರಡು ತಿಂಗಳು ದೊಡ್ಡ ರೂಪದಲ್ಲಿ ಸೇವೆಯನ್ನು ಮಾಡುವುದಕ್ಕೆ ಈ ರೀತಿ ಫಿಕ್ಸ್ ಮಾಡಿ. ಈ ರೀತಿಯಲ್ಲ 12 ತಿಂಗಳೂ ಸೇವೆಯಲ್ಲಿ ಇಷ್ಟೊಂದು ಬಿಜಿಯಾಗಿರುತ್ತೀರಿ. ಸ್ವಯಂನ ಪ್ರಗತಿಗೋಸ್ಕರ ಟೈಮ್ ಕಡಿಮೆ ಸಿಗುತ್ತದೆ. ಯಾವ ದೇಶದ ಸೀಜನ್ ಇರಲಿ, ಕೆಲವೊಂದು ಸಮಯ ಈ ರೀತಿಯಾಗುತ್ತದೆ ಯಾವುದರಲ್ಲಿ ಹೊರಗಿನ ವಿಶೇಷ ಸೇವೆ ಮಾಡುವುದಕ್ಕೆ ಆಗುವುದಿಲ್ಲ. ಅಂತಹ ಸಮಯವನ್ನು ತಮ್ಮ ಪ್ರಗತಿಯ ಪ್ರತಿ ವಿಶೇಷ ರೂಪದಿಂದ ಇಡಿ. ಇಡೀ ವರ್ಷ ಸೇವೆಯನ್ನು ಮಾಡುವುದು ಇದೂ ಕೂಡ ಸಾಧ್ಯವಿಲ್ಲ, ಇಡೀ ವರ್ಷ ಕೇವಲ ತಪಸ್ಸನ್ನು ಮಾಡುವುದು ಇದೂ ಸಹ ಆಗುವುದಿಲ್ಲ. ಆದ ಕಾರಣ ಎರಡನ್ನು ಜೊತೆ-ಜೊತೆ ಲಕ್ಷ್ಯವನ್ನು ಇಡುತ್ತಾ ತನ್ನ ಸ್ಥಾನದ ಪ್ರಮಾಣ ನಿಗಧಿ ಮಾಡಿ ಯಾವುದರಲ್ಲಿ ಸೇವೆ ಹಾಗೂ ಸ್ವಯಂನ ಪ್ರಗತಿ ಎರಡು ಜೊತೆಜೊತೆಯಲ್ಲಿ ನಡೆಯಬೇಕು.

ಒಳ್ಳೆಯದು, ಈ ವರ್ಷ ಸೀಜನ್ನ ಸಮಾಪ್ತಿಯಾಗುತ್ತದೆ. ಸಮಾಪ್ತಿಯಲ್ಲಿ ಏನು ಮಾಡಲಾಗುತ್ತದೆ? ಸಮಾಪ್ತಿಯಲ್ಲಿ ಒಂದು ಸಮಾರೋಹವನ್ನು ಮಾಡಲಾಗುತ್ತದೆ ಮತ್ತು ಎರಡನೆಯದು ಆಧ್ಯಾತ್ಮಿಕತೆಯ ಮಾತುಗಳನ್ನು ಸ್ವಾಹ ಮಾಡಲಾಗುತ್ತದೆ. ಹಾಗಾದರೆ ಸಮಾರೋಹವನ್ನು ನೆನ್ನೆ ಆಚರಿಸಿಬಿಟ್ಟಿದ್ದೀರಾ. (ನೆನ್ನೆ 10 ವರ್ಷದ ಹಳೆಯ ಡಬಲ್ ವಿದೇಶಿ ಸಹೋದರ-ಸಹೋದರಿಯರ ಸೆರೆಮನಿಯನ್ನು ಆಚರಿಸಲಾಗಿತ್ತು) ನೋಡುವಂತಹವರೂ ಆಚರಿಸಿದಿರಾ ಅಥವಾ ಕೇವಲ ಕುಳಿತುಕೊಳ್ಳುವಂತಹವರಾ? ಅಥವಾ ಕೇವಲ 10 ವರ್ಷದವರು ಆಚರಿಸಿದಿರಾ? ಎಲ್ಲರೂ ಆಚರಿಸಿದಿರಲ್ಲವೇ. ಈಗ ಸ್ವಾಹ ಏನು ಮಾಡುತ್ತೀರಾ? ಒಂದು ಮಾತು ವಿಶೇಷ ಮನಸ್ಸು ಬುದ್ಧಿಯನ್ನು ಸ್ವಾಹ ಮಾಡಿ, ವಾಣಿಯಿಂದ ಅಲ್ಲ, ಕೇವಲ ಓದಿ ಬಿಟ್ಟೆನು ಅಥವಾ ಇಲ್ಲ, ಮನಸ್ಸು ಬುದ್ಧಿಯಿಂದ ಸ್ವಾಹ ಮಾಡಿ, ನಂತರ ನೋಡಿ. ಸ್ವಯಂ ಹಾಗು ಸೇವೆಯ ತೀವ್ರಗತಿ ಹೇಗಿರುತ್ತದೆ ಎಂದು. ಹಾಗಾದರೆ ಇಂದಿನ ಅಲೆಯಾಗಿದೆ ಯಾವುದೇ ಆತ್ಮನ ಪ್ರತಿ ವ್ಯರ್ಥ ವೈಬ್ರೇಷನ್ಸ್ ಅನ್ನು ಸ್ವಾಹ ಮಾಡಿ. ಸ್ವಾಹ ಮಾಡುತ್ತೀರಾ? ಅಥವಾ ಸ್ವಲ್ಪ ಸ್ವಲ್ಪ ಉಳಿದುಕೊಳ್ಳುತ್ತದೆಯೇ? ಈ ರೀತಿ ತಿಳಿಯಬೇಡಿ. ಇವರು ಇರುವುದೇ ಈ ರೀತಿ ವೈಬ್ರೇಷನ್ಸ್ ಅಂತೂ ಇರುತ್ತದೆ ಅಲ್ಲವೇ. ಹೇಗೆ ಇರಲಿ ಆದರೆ ನಕಾರಾತ್ಮಕ ವೈಬ್ರೇಷನ್ಸ್ ಅನ್ನು ಬದಲಾವಣೆ ಮಾಡಿ ಪಾಸಿಟಿವ್ ವೈಬ್ರೇಷನ್ಸ್ ಅನ್ನು ಇಟ್ಟುಕೊಳ್ಳುತ್ತೇವೆ ಹಾಗಾದರೆ ಆ ಆತ್ಮನೂ ಸಹ ನೆಗೆಟೀವ್ ನಿಂದ ಪಾಸಿಟಿವ್ ನಲ್ಲಿ ಬಂದೇ ಬಿಡುತ್ತಾರೆ, ಬರಲೇಬೇಕು. ಏಕೆಂದರೆ ಎಲ್ಲಿಯವರೆಗೆ ಈ ವ್ಯರ್ಥ ವೈಬ್ರೇಷನ್ಸ್ ಮನಸ್ಸು ಬುದ್ಧಿಯಲ್ಲಿರುತ್ತದೆ, ಅಲ್ಲಿಯವರೆಗು ತೀವ್ರಗತಿಯ ಸೇವೆಯನ್ನು ಮಾಡಲು ಸಾಧ್ಯವಿಲ್ಲ.

ವೃತ್ತಿಯ ಮುಖಾಂತರ ವೈಬ್ರೇಷನ್ಸ್ ಅನ್ನು ಹರಡಿಸಬೇಕು. ವೃತ್ತಿಯಾಗಿದೆ ರಾಕೆಟ್, ಯಾವುದು ಇಲ್ಲಿ ಕುಳಿತಿದ್ದ ಹಾಗೆ ಎಲ್ಲಿಗೆ ಬೇಕಾದರೂ ಎಷ್ಟೇ ಪವರ್ ಫುಲ್ ಪರಿವರ್ತನೆ ಮಾಡುವುದಕ್ಕೆ ಇಷ್ಟ ಪಡುತ್ತೀರಾ ಅದು ಮಾಡಬಹುದು. ಇದು ಆತ್ಮಿಕ ರಾಕೆಟ್ ಆಗಿದೆ ಎಲ್ಲಿಯವರೆಗೂ ಎಷ್ಟು ಜನರಿಗೆ ತಲುಪಿಸುವುದಕ್ಕೆ ಇಷ್ಟ ಪಡುತ್ತೀರಾ, ಅಷ್ಟು ಶಕ್ತಿಶಾಲಿ ವೃತ್ತಿಯ ವೈಬ್ರೇಷನ್ಸ್ನಿಂದ, ವೈಬ್ರೇಷನ್ಸ್ ಇಂದ ವಾಯುಮಂಡಲ ಮಾಡಬಹುದು. ಭಲೇ ಅದು ರಿಯಲ್ ಸತ್ಯವಾಗಿ ರಾಂಗ್ ಆಗಿರಬಹುದು ಆದರೆ ತಾವು ಅವರ ತಪ್ಪನ್ನು ಧಾರಣೆ ಮಾಡಬೇಡಿ. ತಪ್ಪನ್ನು ತಾವು ಏಕೆ ಧಾರಣೆ ಮಾಡುತ್ತೀರಾ. ಇದು ಶ್ರೀಮತವಾಗಿದೆಯೇ? ತಿಳಿದುಕೊಳ್ಳುವುದು ಬೇರೆ ಮಾತಾಗಿದೆ. ಜ್ಞಾನ ಸ್ವರೂಪರು ಭಲೇ ಆಗಿರಿ ಆದರೆ ಜ್ಞಾನ ಸ್ವರೂಪದ ಜೊತೆ ಪವರ್ ಫುಲ್ ಆಗಿ ಅದನ್ನು ಸಮಾಪ್ತಿ ಮಾಡಿಬಿಡಿ. ತಿಳಿದುಕೊಳ್ಳುವುದು ಬೇರೆ ಮಾತಾಗಿದೆ. ಎದುರಿಸುವುದು ಬೇರೆ ಮಾತಾಗಿದೆ, ಸಮಾಪ್ತಿ ಮಾಡುವುದು ಬೇರೆ ಮಾತಾಗಿದೆ. ಭಲೇ ತಿಳಿದುಕೊಳ್ಳುತ್ತೀರಾ ಇದು ತಪ್ಪಾಗಿದೆ, ಅಥವಾ ಸರಿಯಾಗಿದೆ, ಇದು ಈ ರೀತಿಯಾಗಿದೆ. ಆದರೆ ಒಳಗಡೆ ಅದನ್ನು ಸಮಾವೇಶ ಮಾಡಿಕೊಳ್ಳಬಾರದು. ಸಮಾವೇಶ ಮಾಡಿಕೊಳ್ಳುವುದು ಬರುತ್ತದೆಯೇ? ಸಮಾಪ್ತಿ ಮಾಡುವುದು ಬರುವುದಿಲ್ಲವೇ. ಜ್ಞಾನ ಅರ್ಥಾತ್ ತಿಳುವಳಿಕೆ ಆದರೆ ಬುದ್ಧಿವಂತರು ಯಾರಿಗೆ ಹೇಳಲಾಗುತ್ತದೆ ಎಂದರೆ ಯಾರಿಗೆ ತಿಳಿದುಕೊಳ್ಳುವುದು ಬರುತ್ತದೆ ಹಾಗೂ ಸಮಾಪ್ತಿ ಮಾಡುವುದು ಬರುತ್ತದೆ, ಪರಿವರ್ತನೆ ಮಾಡುವುದು ಬರಬೇಕು.

ಈ ವರ್ಷ ಮನಸ್ಸು ಹಾಗೂ ಬುದ್ಧಿಯಿಂದ ಸಂಪೂರ್ಣ ವ್ಯರ್ಥದಿಂದ ಮುಕ್ತರಾಗಿ. ಇದು ತೀವ್ರಗತಿಯನ್ನು ಸಾಧಾರಣ ಗತಿಯಲ್ಲಿ ತಂದು ಬಿಡುತ್ತದೆ. ಇದಕ್ಕಾಗಿ ಈ ಸಮಾಪ್ತಿ ಸಮಾರೋಹವನ್ನು ಮಾಡಿ ಅರ್ಥಾತ್ ಸ್ವಾಹ ಮಾಡಿ. ಸಂಪೂರ್ಣ ಕ್ಲೀನ್. ಹೇಗೆ ಇರಲಿ ಆದರೆ ಕ್ಷಮೆಯನ್ನು ಮಾಡಿ. ಶುಭ ಭಾವನೆ, ಶುಭ ಕಾಮನೆಯ ವೃತ್ತಿಯಿಂದ ಶುಭ ವೈಬ್ರೇಷನ್ಸ್ ಅನ್ನು ಧಾರಣೆ ಮಾಡಿ. ಏಕೆಂದರೆ ಕೊನೆಯಲ್ಲಿ ಮುಂದುವರೆಯುತ್ತಾ ಇದೇ ವೃತ್ತಿ ವೈಬ್ರೇಷನ್ಸ್ ತಮ್ಮ ಸೇವೆಯನ್ನು ಮುಂದುವರೆಸುತ್ತದೆ, ಆಗ ಬೇಗ-ಬೇಗ ಕಡಿಮೆ ಎಂದರೆ ಕಡಿಮೆ ಒಂದು ಲಕ್ಷವನ್ನು ಮಾಡಬಹುದು. ತಿಳಿಯಿತೇ, ಏನು ಸ್ವಾಹ ಮಾಡಬೇಕೆಂದು? ವ್ಯರ್ಥ ವೃತ್ತಿ, ವ್ಯರ್ಥ ವೈಬ್ರೇಷನ್ಸ್ನ ಸ್ವಾಹ. ನಂತರ ನೋಡಿ ನ್ಯಾಚುರಲ್ ಯೋಗಿ ಹಾಗೂ ನೇಚರ್ ಫರಿಶ್ತೆ ಆಗಿಯೇ ಬಿಟ್ಟಿದೆ. ಈ ಅನುಭವದಲ್ಲಿ ರಿಟ್ರೀಟ್ ಮಾಡಿ, ವರ್ಕ್ ಶಾಪ್ ಮಾಡಿ ಹೇಗಾಗುತ್ತದೆ, ಇಲ್ಲ; ಈ ರೀತಿ ಆಗುತ್ತದೆ. ಒಳ್ಳೆಯದು.

ಸದಾ ಸ್ವಯಂಗೆ ಮತ್ತೆ ಮತ್ತೆ ಒರಿಜಿನಲ್ ಸ್ವರೂಪ ನಾನು ನಿರಾಕಾರಿಯಾಗಿದ್ದೇನೆ ಈ ರೀತಿ ನಿಶ್ಚಯ ಹಾಗೂ ನಶೆಯಲ್ಲಿ ಹಾರುವಂತಹ, ಸದಾ ನಿರ್ಮಾಣತೆಯ ಮುಖಾಂತರ ಮಹಾನತೆಯ ಪ್ರಾಪ್ತಿಯ ಅನುಭವಿ ಆತ್ಮಗಳಿಗೆ, ಇಂತಹ ನಿರ್ಮಾಣ, ಸದಾ ಮಹಾನ್, ಹಾಗೂ ಸದಾ ಆಕಾರಿ, ನಿರಾಕಾರಿ ಸ್ಥಿತಿಯನ್ನು ನೇಚರ್ ಹಾಗೂ ನ್ಯಾಚುರಲ್ ಅನ್ನು ಮಾಡಿಕೊಳ್ಳುವಂತಹ ಸರ್ವ ಶ್ರೇಷ್ಠ ಆತ್ಮಗಳಿಗೆ ಬಾಪ್ ದಾದಾರವರ ಬಹಳ-ಬಹಳ-ಬಹಳ ನೆನಪು-ಪ್ರೀತಿ ಹಾಗೂ ನಮಸ್ತೆ.

ವರದಾನ:
ಈ ಮರುಜೀವ ಜೀವನದಲ್ಲಿ ಸದಾ ಸಂತುಷ್ಠವಾಗಿರುವಂತಹ ಇಚ್ಛಾ ಮಾತ್ರಂ ಅವಿಧ್ಯಾ ಭವ

ನೀವು ಮಕ್ಕಳು ಸದಾ ಸಂತುಷ್ಠರಾಗಿರುವುದಕ್ಕೋಸ್ಕರವೇ ಮರ್ಜೀವಾ ಆದಿರಿ. ಎಲ್ಲಿ ಸಂತುಷ್ಠತೆಯಿದೆ ಅಲ್ಲಿ ಸರ್ವ ಗುಣ ಮತ್ತು ಸರ್ವ ಶಕ್ತಿಗಳು ಇವೆ ಏಕೆಂದರೆ ರಚೈತನನ್ನು ತನ್ನವರನ್ನಾಗಿ ಮಾಡಿಕೊಂಡಿರಿ, ಆದ್ದರಿಂದ ತಂದೆ ಸಿಕ್ಕಿದೊಡನೆ ಎಲ್ಲವೂ ಸಿಕ್ಕಿದಹಾಗೆ. ಸರ್ವ ಇಚ್ಛೆಗಳನ್ನು ಒಟ್ಟುಮಾಡಿದರೂ ಅದಕ್ಕಿಂತಲೂ ಪಧುಮಾಗುಣದಷ್ಟು ಹೆಚ್ಚು ಸಿಕ್ಕಿದೆ. ಅದರ ಮುಂದೆ ಇಚ್ಛೆಗಳು ಈ ರೀತಿ ಇದೆ ಹೇಗೆ ಸೂರ್ಯನ ಮುಂದೆ ದೀಪವಿದ್ದಂತೆ. ಇಚ್ಛೆ ಉಂಟಾಗುವ ಮಾತು ಬಿಡಿ ಆದರೆ ಇಚ್ಛೆ ಆಗುವುದೇ ಇಲ್ಲ- ಈ ಪ್ರಶ್ನೆಯೂ ಸಹಾ ಏಳಲು ಸಾಧ್ಯವಿಲ್ಲ. ಸರ್ವ ಪ್ರಾಪ್ತಿ ಸಂಪನ್ನವಿದೆ. ಆದ್ದರಿಂದ ಇಚ್ಛಾಮಾತ್ರಂ ಅವಿದ್ಯೆ, ಸದಾ ಸಂತುಷ್ಠ ಮಣಿಯಾಗಿರಿ.

ಸ್ಲೋಗನ್:
ಯಾರ ಸಂಸ್ಕಾರ ಸರಳವಾಗಿರುವುದು ಅವರು ಎಂತಹದೇ ಪರಿಸ್ಥಿತಿಯಲ್ಲಿ ಸ್ವಯಂ ಅನ್ನು ಮೋಲ್ಡ ಮಾಡಿಕೊಂಡುಬಿಡುತ್ತಾರೆ.