01.02.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಈಗ ನಿಮ್ಮ ಮೋಹದ ದಾರಗಳು ತುಂಡಾಗಬೇಕು, ಏಕೆಂದರೆ ಈಗ ಇಡೀ ಪ್ರಪಂಚವು ವಿನಾಶ ಆಗುವುದಿದೆ, ಆದ್ದರಿಂದ ಈ ಹಳೆಯ ಪ್ರಪಂಚದ ಯಾವುದೇ ವಸ್ತುವಿನ ಮೇಲೆ ಆಸಕ್ತಿ ಇರಬಾರದು.

ಪ್ರಶ್ನೆ:
ಯಾವ ಮಕ್ಕಳಿಗೆ ಆತ್ಮಿಕ ನಶೆ ಏರಿರುತ್ತದೆಯೋ ಅವರ ಟೈಟಲ್ ಏನಾಗಿರುತ್ತದೆ? ನಶೆಯು ಯಾವ ಮಕ್ಕಳಿಗೆ ಏರುತ್ತದೆ?

ಉತ್ತರ:
ಆತ್ಮಿಕ ನಶೆಯಲ್ಲಿ ಇರುವ ಮಕ್ಕಳಿಗೆ ಮಸ್ತಕಲಂದರ್ ಎಂದು ಹೇಳಲಾಗುತ್ತದೆ, ಅವರೇ ಕಳಂಗೀಧರರಾಗುತ್ತಾರೆ, ಅವರಿಗೆ ರಾಜ್ಯಾಧಿಕಾರದ ನಶೆಯು ಏರಿರುತ್ತದೆ. ಈಗ ನಾವು ಭಿಕ್ಷುಕರಿಂದ ರಾಜರಾಗುತ್ತೇವೆ ಎಂದು ಬುದ್ಧಿಯಲ್ಲಿ ಇರುತ್ತದೆ. ಯಾರು ರುದ್ರ ಮಾಲೆಯಲ್ಲಿ ಪೋಣಿಸಲ್ಪಡುವವರಿದ್ದಾರೋ ಅವರಿಗೆ ನಶೆ ಏರುತ್ತದೆ. ಯಾರಿಗೆ ನಾವು ಈಗ ಮನೆಗೆ ಹೋಗಬೇಕೆಂಬ ಮತ್ತು ಹೊಸ ಪ್ರಪಂಚದಲ್ಲಿ ಬರಬೇಕೆಂಬ ನಿಶ್ಚಯವಿರುತ್ತದೋ ಅವರಿಗೆ ನಶೆ ಇರುತ್ತದೆ.

ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳೊಂದಿಗೆ ವಾರ್ತಾಲಾಪ ಮಾಡುತ್ತಿದ್ದಾರೆ. ಇದಕ್ಕೆ ಆತ್ಮಿಕ ಜ್ಞಾನವು ಆತ್ಮಗಳ ಪ್ರತಿ ಎಂದು ಹೇಳಲಾಗುತ್ತದೆ. ಆತ್ಮವು ಜ್ಞಾನಸಾಗರನಾಗಿದೆ. ಮನುಷ್ಯರು ಎಂದೂ ಸಹ ಜ್ಞಾನಸಾಗರರಾಗಲು ಸಾಧ್ಯವಿಲ್ಲ. ಮನುಷ್ಯರು ಭಕ್ತಿಯ ಸಾಗರರಾಗಿದ್ದಾರೆ. ಎಲ್ಲರೂ ಮನುಷ್ಯರೇ ಆಗಿದ್ದಾರೆ, ಯಾರು ಬ್ರಾಹ್ಮಣರಾಗುತ್ತಾರೆಯೋ ಅವರು ಜ್ಞಾನ ಸಾಗರನಿಂದ ಜ್ಞಾನವನ್ನು ತೆಗೆದುಕೊಂಡು ಮಾಸ್ಟರ್ ಜ್ಞಾನಸಾಗರರಾಗಿ ಬಿಡುತ್ತಾರೆ. ಮತ್ತೆ ದೇವತೆಗಳಲ್ಲಿ ಭಕ್ತಿಯು ಇರುವುದಿಲ್ಲ, ಜ್ಞಾನವು ಇರುವುದಿಲ್ಲ. ದೇವತೆಗಳಿಗೆ ಈ ಜ್ಞಾನವು ಗೊತ್ತಿಲ್ಲ. ಜ್ಞಾನಸಾಗರ ಒಬ್ಬರೇ ಪರಮಪಿತ ಪರಮಾತ್ಮ ಆಗಿದ್ದಾರೆ, ಆದ್ದರಿಂದ ಅವರಿಗೆ ವಜ್ರಸಮಾನರೆಂದು ಹೇಳುತ್ತಾರೆ. ಅವರೇ ಬಂದು ಕವಡೆಯಿಂದ ವಜ್ರ ಪಾರಸ ಬುದ್ಧಿಯವರನ್ನಾಗಿ ಮಾಡುತ್ತಾರೆ. ಮನುಷ್ಯರಿಗೆ ಏನೂ ಗೊತ್ತಿಲ್ಲ. ದೇವತೆಗಳೇ ಬಂದು ಮತ್ತೆ ಮನುಷ್ಯರಾಗುತ್ತಾರೆ. ಶ್ರೀಮತದಿಂದ ದೇವತೆಗಳಾದರು. ಅರ್ಧಕಲ್ಪ ಅಲ್ಲಿ ಯಾರ ಮತದ ಅವಶ್ಯಕತೆಯೂ ಇರುವುದಿಲ್ಲ. ಇಲ್ಲಂತೂ ಅನೇಕ ಗುರುಗಳ ಮತಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ. ಈಗ ತಂದೆಯು ತಿಳಿಸಿದ್ದಾರೆ, ಸದ್ಗುರುವಿನ ಶ್ರೀಮತವೂ ಸಿಗುತ್ತದೆ, ಸದ್ಗುರು ಅಕಾಲ್ ಎಂದು ಸಿಖ್ಖರು ಹೇಳುತ್ತಾರೆ, ಆದರೆ ಅದರ ಅರ್ಥವನ್ನು ತಿಳಿದುಕೊಂಡಿಲ್ಲ. ಸದ್ಗುರು ಅಕಾಲಮೂರ್ತಿ ಅರ್ಥಾತ್ ಸದ್ಗತಿ ಮಾಡುವ ಅಕಾಲಮೂರ್ತಿ ಎಂದು ಕರೆಯುತ್ತಾರೆ. ಪರಮಪಿತ ಪರಮಾತ್ಮನಿಗೆ ಅಕಾಲ ಮೂರ್ತನೆಂದು ಹೇಳಲಾಗುತ್ತದೆ. ಸದ್ಗುರು ಹಾಗೂ ಗುರುವಿನಲ್ಲಿ ರಾತ್ರಿ ಹಾಗೂ ಹಗಲಿನ ಅಂತರವಿದೆ, ಆದ್ದರಿಂದಲೇ ಅವರು ಬ್ರಹ್ಮನ ಹಗಲು-ಬ್ರಹ್ಮನ ರಾತ್ರಿ ಎಂದು ಹೇಳಿ ಬಿಡುತ್ತಾರೆ. ಬ್ರಹ್ಮನ ದಿನ, ಬ್ರಹ್ಮನ ರಾತ್ರಿ ಇರುವುದರಿಂದ ಅವರು ಬ್ರಹ್ಮ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾರೆಂದು ಅವಶ್ಯವಾಗಿ ಹೇಳುತ್ತಾರೆ. ಬ್ರಹ್ಮಾರವರೇ ಈ ದೇವತಾ ವಿಷ್ಣು ಆಗುತ್ತಾರೆ. ನೀವು ಶಿವ ತಂದೆಯ ಮಹಿಮೆ ಮಾಡುತ್ತೀರಿ ಅವರದು ವಜ್ರ ಸಮಾನ ಜನ್ಮವಾಗಿದೆ. ಈಗ ನೀವು ಮಕ್ಕಳು ಗೃಹಸ್ಥ ವ್ಯವಹಾರದಲ್ಲಿ ಇರುತ್ತಾ ಪಾವನರಾಗುತ್ತೀರಿ. ನೀವು ಪವಿತ್ರರಾಗಿ ಈ ಜ್ಞಾನವನ್ನು ಧಾರಣೆ ಮಾಡಬೇಕಾಗಿದೆ. ಕುಮಾರಿಯರಿಗಂತೂ ಯಾವುದೇ ಬಂಧನವಿಲ್ಲ. ಅವರಿಗೆ ಕೇವಲ ತಂದೆ-ತಾಯಿ, ಸಹೋದರ-ಸಹೋದರಿಯ ಸ್ಮೃತಿ ಇರುತ್ತದೆ ಮತ್ತೆ ಅತ್ತೆಯ ಮನೆಗೆ ಹೋಗುವುದರಿಂದ ಎರಡು ಪರಿವಾರಗಳು ಆಗಿ ಬಿಡುತ್ತವೆ. ಈಗ ತಂದೆಯು ನಿಮಗೆ ತಿಳಿಸುತ್ತಾರೆ - ಅಶರೀರಿ ಆಗಿ ಬಿಡಿ. ಈಗ ತಾವೆಲ್ಲರೂ ಹಿಂತಿರುಗಿ ಹೋಗಬೇಕಾಗಿದೆ. ನಿಮಗೆ ಪವಿತ್ರರಾಗುವ ಯುಕ್ತಿಯನ್ನು ತಿಳಿಸುತ್ತೇನೆ. ನಾನೇ ಪತಿತ ಪಾವನನಾಗಿದ್ದೇನೆ, ಆದ್ದರಿಂದ ಗ್ಯಾರೆಂಟಿ ಕೊಡುತ್ತೇನೆ. ನೀವು ನನ್ನನ್ನು ನೆನಪು ಮಾಡಿದ್ದೇ ಆದರೆ ನಿಮ್ಮ ಜನ್ಮ-ಜನ್ಮಾಂತರಗಳ ಪಾಪಗಳು ಭಸ್ಮ ಆಗಿ ಬಿಡುತ್ತವೆ. ಹೇಗೆ ಹಳೆಯ ಚಿನ್ನವನ್ನು ಭಟ್ಟಿಯಲ್ಲಿ ಹಾಕಿದಾಗ ಅದರಲ್ಲಿ ಇರುವ ಕಲ್ಮಷವು ಹೋಗಿ ಬಿಡುತ್ತದೆ, ಶುದ್ಧ ಚಿನ್ನವು ಉಳಿಯುತ್ತದೋ ಹಾಗೆಯೇ ಇದೂ ಸಹ ಯೋಗಾಗ್ನಿ ಆಗಿದೆ. ಈ ಸಂಗಮದಲ್ಲಿಯೇ ತಂದೆಯು ರಾಜಯೋಗವನ್ನು ಕಲಿಸುತ್ತಾರೆ, ಆದ್ದರಿಂದ ಅವರದ್ದು ಬಹಳ ಮಹಿಮೆ ಇದೆ. ಯಾವ ರಾಜಯೋಗವನ್ನು ಭಗವಂತನು ಕಲಿಸಿದ್ದರೋ ಅದನ್ನು ಎಲ್ಲರೂ ಕಲಿಯಲು ಇಚ್ಛಿಸುತ್ತಾರೆ. ವಿದೇಶದಿಂದಲೂ ಸಹ ಸನ್ಯಾಸಿಗಳು ಅನೇಕರನ್ನು ಕರೆ ತರುತ್ತಾರೆ. ಇವರು ಸನ್ಯಾಸ ಮಾಡಿದ್ದಾರೆ ಎಂದು ಅವರು ತಿಳಿಯುತ್ತಾರೆ. ತಾವೂ ಸಹ ಸನ್ಯಾಸಿಗಳಾಗಿದ್ದೀರಿ. ಆದರೆ ನಿಮ್ಮ ಬೇಹದ್ದಿನ ಸನ್ಯಾಸವನ್ನು ಯಾರೂ ತಿಳಿದುಕೊಂಡಿಲ್ಲ. ಬೇಹದ್ದಿನ ಸನ್ಯಾಸವನ್ನಂತೂ ಒಬ್ಬ ತಂದೆಯೇ ಕಲಿಸುತ್ತಾರೆ. ನಿಮಗೂ ಗೊತ್ತಿದೆ - ಈ ಹಳೆಯ ಪ್ರಪಂಚವು ಸಮಾಪ್ತಿ ಆಗುವುದಿದೆ, ಆದ್ದರಿಂದ ಈ ಪ್ರಪಂಚದ ಯಾವುದೇ ವಸ್ತುವಿನಲ್ಲಿ ನಮಗೆ ಆಸಕ್ತಿ ಇರುವುದಿಲ್ಲ. ಇಂತಹವರು ಶರೀರ ಬಿಟ್ಟರು, ಹೋಗಿ ಪಾತ್ರವನ್ನು ಅಭಿನಯಿಸಲು ಇನ್ನೊಂದು ಶರೀರವನ್ನು ತೆಗೆದುಕೊಂಡರು ಅಂದಮೇಲೆ ನಾವು ಏಕೆ ಅಳುವುದು? ಮೋಹದ ಅಂಶವು ಹೊರಟು ಹೋಗುತ್ತದೆ. ಈಗ ನಮ್ಮ ಸಂಬಂಧವು ಹೊಸ ಪ್ರಪಂಚದೊಂದಿಗೆ ಜೋಡಣೆಯಾಗಿದೆ. ಇಂತಹ ಮಕ್ಕಳು ಪಕ್ಕಾ ಮಸ್ತ್ ಕಳಂಗೀಧರರಾಗುತ್ತಾರೆ. ನಿಮ್ಮಲ್ಲಿ ರಾಜ್ಯಾಧಿಕಾರದ ನಶೆಯಿದೆ, ಹೋಗಿ ನಾನು ಇಂತಹ ಕಳಂಗೀಧರನಾಗುತ್ತೇನೆ, ಭಿಕಾರಿಯಿಂದ ರಾಜನಾಗುತ್ತೇನೆಂದು ಬ್ರಹ್ಮಾ ತಂದೆಗೂ ನಶೆಯಿದೆಯಲ್ಲವೆ. ಒಳಗೆ ನಶೆ ಇರುತ್ತದೆ, ಆದ್ದರಿಂದ ಮಸ್ತ್ ಕಳಂಗೀಧರರೆಂದು ಹೇಳುತ್ತಾರೆ. ಇವರ ಸಾಕ್ಷಾತ್ಕಾರವೂ ಆಗುತ್ತದೆ ಅಂದಾಗ ಹೇಗೆ ಇವರಿಗೆ ನಶೆ ಏರಿದೆಯೋ ಹಾಗೆಯೇ ನಿಮಗೂ ಸಹ ಏರಬೇಕು. ತಾವೂ ಕೂಡ ರುದ್ರ ಮಾಲೆಯಲ್ಲಿ ಪೋಣಿಸಲ್ಪಡುವವರಾಗಿದ್ದೀರಿ. ಯಾರಿಗೆ ಇದು ಪಕ್ಕಾ ನಿಶ್ಚಯವಾಗಿರುತ್ತದೆಯೋ ಅವರಿಗೆ ನಶೆ ಏರುತ್ತದೆ. ನಾವು ಆತ್ಮಗಳು ಈಗ ಮನೆಗೆ ಹೋಗಬೇಕಾಗಿದೆ ನಂತರ ಹೊಸ ಪ್ರಪಂದಲ್ಲಿ ಬರುತ್ತೇವೆ. ಈ ನಿಶ್ಚಯದಿಂದ ಯಾರೇ ಇವರನ್ನು ನೋಡಿದರೂ ಸಹ ಅವರಿಗೆ ಮಗು (ಶ್ರೀ ಕೃಷ್ಣ)ವಿನ ರೂಪದಲ್ಲಿ ಕಾಣಿಸುತ್ತಾರೆ. ಎಷ್ಟು ಸುಂದರರಾಗಿದ್ದಾರೆ, ಕೃಷ್ಣನಂತೂ ಇಲ್ಲಿ ಇಲ್ಲ. ಆದರೆ ಅವನ ಬಗ್ಗೆ ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾರೆ, ಉಯ್ಯಾಲೆಯನ್ನು ತಯಾರಿಸುತ್ತಾರೆ, ಕೃಷ್ಣನಿಗೆ ಹಾಲನ್ನು ಕುಡಿಸುತ್ತಾರೆ ಆದರೆ ಅದು ಜಡ ಚಿತ್ರವಾಗಿದೆ. ಇವರಂತೂ ಪ್ರತ್ಯಕ್ಷ ರೂಪದಲ್ಲಿ ಇದ್ದಾರಲ್ಲವೇ. ನಾನು ಬಾಲಕನಾಗುತ್ತೇನೆ ಎಂದು ಇವರಿಗೂ ನಿಶ್ಚಯವಿದೆ. ನೀವು ಮಕ್ಕಳೂ ಸಹ ದಿವ್ಯ ದೃಷ್ಟಿಯಲ್ಲಿ ಚಿಕ್ಕ ಮಗುವನ್ನು ನೋಡುತ್ತೀರಿ, ಈ ಕಣ್ಣುಗಳಿಂದಂತೂ ನೋಡಲು ಸಾಧ್ಯವಿಲ್ಲ. ಆತ್ಮಕ್ಕೆ ಯಾವಾಗ ದಿವ್ಯ ದೃಷ್ಟಿ ಸಿಗುತ್ತದೆಯೋ ಆಗ ಶರೀರದ ಪರಿವೆ ಇರುವುದಿಲ್ಲ. ಆ ಸಮಯದಲ್ಲಿ ತಮ್ಮನ್ನು ಮಹಾರಾಣಿ ಮತ್ತು ಅವರನ್ನು ಮಗು ಎಂದು ತಿಳಿಯುತ್ತಾರೆ. ಈ ಸಾಕ್ಷಾತ್ಕಾರವೂ ಸಹ ಈ ಸಮಯದಲ್ಲಿ ಅನೇಕರಿಗೆ ಆಗುತ್ತದೆ. ಶ್ವೇತ ವಸ್ತ್ರಧಾರಿಯ ಸಾಕ್ಷಾತ್ಕಾರವು ಅನೇಕರಿಗೆ ಆಗುತ್ತದೆ ಮತ್ತೆ ಅವರಿಗೆ ನೀವು ಇಂತಹವರ ಬಳಿಗೆ ಹೋಗಿ ಜ್ಞಾನವನ್ನು ತೆಗೆದುಕೊಳ್ಳಿ ಆಗ ಇಂತಹ ರಾಜಕುಮಾರರಾಗುತ್ತೀರಿ ಎಂದು ಹೇಳುತ್ತಾರೆ. ಇದು ಚಮತ್ಕಾರವಾಗಿದೆಯಲ್ಲವೇ! ಬಹಳ ಒಳ್ಳೆಯ ವ್ಯಾಪಾರ ಮಾಡುತ್ತಾರೆ. ಕವಡೆಯನ್ನು ತೆಗೆದುಕೊಂಡು ವಜ್ರ ಮುತ್ತುಗಳನ್ನು ನೀಡುತ್ತಾರೆ. ತಾವು ವಜ್ರದ ಸಮಾನರಾಗುತ್ತೀರಿ, ನಿಮಗೆ ಶಿವ ತಂದೆ ವಜ್ರದ ಸಮಾನರನ್ನಾಗಿ ಮಾಡುತ್ತಾರೆ, ಆದ್ದರಿಂದ ಬಲಿದಾನ ಅವರದಾಗಿದೆ. ಮನುಷ್ಯರು ಇದನ್ನು ತಿಳಿಯದೇ ಇರುವ ಕಾರಣ ಜಾದು-ಜಾದು ಎಂದು ಹೇಳುತ್ತಾರೆ. ಯಾರು ಆಶ್ಚರ್ಯ ಆಗುವ ರೀತಿಯಲ್ಲಿ ಓಡಿ ಹೋಗುತ್ತಾರೆ ಅವರು ಹೋಗಿ ಅಲ್ಲ-ಸಲ್ಲದ ಮಾತುಗಳನ್ನು ಹೇಳುತ್ತಾರೆ. ಈ ರೀತಿ ಅನೇಕರು ದ್ರೋಹಿಗಳಾಗುತ್ತಾರೆ. ಈ ದ್ರೋಹಿಗಳು ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಗುರುವಿನ ನಿಂದಕರು ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ ಎಂದು ಇಂಥಹವರಿಗೆ ಹೇಳಲಾಗುತ್ತದೆ. ಇಲ್ಲಿ ಸತ್ಯ ತಂದೆ ಇದ್ದಾರಲ್ಲವೇ, ಇದನ್ನು ನೀವು ಈಗ ತಿಳಿದಿದ್ದೀರಿ. ಮನುಷ್ಯರು ಯುಗ-ಯುಗದಲ್ಲಿಯೂ ಬರುತ್ತಾರೆ ಎಂದು ಹೇಳಿ ಬಿಟ್ಟಿದ್ದಾರೆ. ಹಾಗಾದರೆ ಇರುವ ನಾಲ್ಕು ಯುಗದಲ್ಲಿ ಅವರು 24 ಅವತಾರವನ್ನು ಹೇಗೆ ತೆಗೆದುಕೊಳ್ಳಲು ಸಾಧ್ಯ? ನಂತರ ಕಲ್ಲು, ಮಣ್ಣು, ಕಣ-ಕಣದಲ್ಲಿಯೂ ಭಗವಂತ ಇದ್ದಾರೆಂದು ಹೇಳುತ್ತಾರೆ. ಅಂದಾಗ ಎಲ್ಲವೂ ಪರಮಾತ್ಮನಾಗಿ ಬಿಟ್ಟಿತು. ತಂದೆಯು ತಿಳಿಸುತ್ತಾರೆ - ನಾನು ಕವಡೆಯಿಂದ ವಜ್ರ ಮಾಡುವಂತಹವನು, ನನ್ನನ್ನು ಕಲ್ಲು, ಮಣ್ಣು ಎಲ್ಲದರಲ್ಲೂ ಹಾಕಿ ಬಿಟ್ಟಿದ್ದಾರೆ. ಸರ್ವವ್ಯಾಪಿ ಎಂದರೆ ಎಲ್ಲದರಲ್ಲೂ ಇದ್ದಾರೆ ಅಂದಾಗ ಯಾವುದೇ ಬೆಲೇ ಇಲ್ಲದಂತಾಯಿತು. ನನಗೆ ಎಂತಹ ಅಪಕಾರ ಮಾಡುತ್ತಾರೆ ತಂದೆ ಹೇಳುತ್ತಾರೆ ಇದು ಡ್ರಾಮಾದಲ್ಲಿ ನಿಗಧಿಯಾಗಿದೆ. ಯಾವಾಗ ಈ ರೀತಿ ಆಗುತ್ತಾರೆ , ನಂತರ ತಂದೆ ಬಂದು ಉಪಕಾರ ಮಾಡುತ್ತಾರೆ. ಅಂದರೆ ಮನುಷ್ಯರಿಂದ ದೇವತೆಯನ್ನಾಗಿ ಮಾಡುತ್ತಾರೆ, ಪ್ರಪಂಚದ ಚರಿತ್ರೆ, ಭೂಗೋಳ ಪುನರಾವರ್ತನೆ ಆಗುತ್ತದೆ. ಸತ್ಯಯುಗದಲ್ಲಿ ಈ ಲಕ್ಷ್ಮೀ-ನಾರಾಯಣರೇ ಬರುತ್ತಾರೆ. ಅಲ್ಲಿ ಕೇವಲ ಈ ಭಾರತವೇ ಇರುತ್ತದೆ. ಪ್ರಾರಂಭದಲ್ಲಿ ಬಹಳ ಕಡಿಮೆ ದೇವತೆಗಳಿರುತ್ತಾರೆ, ನಂತರ ವೃದ್ಧಿಯನ್ನು ಹೊಂದುತ್ತಾ-ಹೊಂದುತ್ತಾ 5000 ವರ್ಷದಲ್ಲಿ ಎಷ್ಟಾಗಿ ಬಿಟ್ಟಿದ್ದಾರೆ. ಈ ಜ್ಞಾನ ಯಾರದೇ ಬುದ್ಧಿಯಲ್ಲಿ ಇಲ್ಲ. ಉಳಿದದ್ದು ಭಕ್ತಿ. ದೇವತೆಗಳ ಚಿತ್ರಗಳ ಮಹಿಮೆಯನ್ನು ಹಾಡುತ್ತಾರೆ. ಇವರು ಚೈತನ್ಯದಲ್ಲಿ ಇದ್ದರು ನಂತರ ಎಲ್ಲಿ ಹೋದರು ಇದನ್ನು ತಿಳಿದುಕೊಂಡಿಲ್ಲ. ಚಿತ್ರಗಳ ಪೂಜೆಯನ್ನು ಮಾಡುತ್ತಾರೆ, ಆದರೆ ಅವರಲ್ಲಿದ್ದಾರೆ ಅವರೂ ಸಹ ತಮೋಪ್ರಧಾನರಾಗಿ ಮತ್ತೆ ಸತೋಪ್ರಧಾನರಾಗಬೇಕಾಗಿದೆ. ಇದು ಯಾರದೇ ಬುದ್ಧಿಯಲ್ಲಿ ಬರುವುದಿಲ್ಲ, ಇಂತಹ ತಮೋಪ್ರಧಾನ ಬುದ್ಧಿಯನ್ನು ಮತ್ತೆ ಸತೋಪ್ರಧಾನ ಮಾಡುವುದು ತಂದೆಯದೇ ಕಾರ್ಯವಾಗಿದೆ. ಲಕ್ಷ್ಮೀ-ನಾರಾಯಣರು ಮೊದಲು ಇದ್ದವರು ಅದಕ್ಕಾಗಿ ಅವರ ಮಹಿಮೆಯಿದೆ, ಶ್ರೇಷ್ಠಾತಿ ಶ್ರೇಷ್ಠ ಒಬ್ಬರೇ ಭಗವಂತ ಆಗಿದ್ದಾರೆ, ಉಳಿದವರೆಲ್ಲರೂ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಿರುತ್ತಾರೆ. ಶ್ರೇಷ್ಠಾತಿ ಶ್ರೇಷ್ಠ ತಂದೆಯೇ ಎಲ್ಲರಿಗೂ ಮುಕ್ತಿ-ಜೀವನ್ಮುಕ್ತಿಯನ್ನು ನೀಡುತ್ತಾರೆ. ಅವರು ಬರದೇಯಿದಿದ್ದದರೆ ಇನ್ನೂ ಕಾಸಿಗೂ ಬೆಲೆ ಇಲ್ಲದ ತಮೋಪ್ರಧಾನರಾಗಿ ಬಿಡುತ್ತಾರೆ. ಯಾವಾಗ ಇವರು ರಾಜ್ಯಭಾರ ಮಾಡುತ್ತಿದ್ದರೋ ಆಗ ಶ್ರೇಷ್ಠ ಬೆಲೆ ಉಳ್ಳಂತಹವರಾಗಿದ್ದರು ಆ ಸಮಯದಲ್ಲಿ ಯಾವುದೇ ಪೂಜೆ ಮುಂತಾದದ್ದನ್ನು ಮಾಡುತ್ತಿರಲಿಲ್ಲ. ಪೂಜ್ಯ ದೇವೀ-ದೇವತೆಗಳೇ ಪೂಜಾರಿಗಳಾಗಿ ಬಿಟ್ಟರು. ವಾಮ ಮಾರ್ಗದಲ್ಲಿ ವಿಕಾರಿಗಳಾಗಿ ಬಿಟ್ಟರು. ಇವರೇ ಸಂಪೂರ್ಣ ನಿರ್ವಿಕಾರಿಗಳಾಗಿದ್ದರು ಎಂದು ಯಾರಿಗೂ ತಿಳಿದಿಲ್ಲ.ತಾವು ಬ್ರಾಹ್ಮಣರಲ್ಲಿಯೂ ಈ ಮಾತನ್ನು ನಂಬರ್ ವಾರ್ ತಿಳಿದುಕೊಳ್ಳುತ್ತಾರೆ. ಸ್ವಯಂ ಪೂರ್ಣ ತಿಳಿದುಕೊಂಡಿಲ್ಲವೆಂದರೆ ಅನ್ಯರಿಗೆ ಏನನ್ನು ತಿಳಿಸುಕೊಡಬಹುದು? ಹೆಸರು ಬ್ರಹ್ಮಾಕುಮಾರ-ಕುಮಾರಿಯರು ಅನ್ಯರಿಗೆ ತಿಳಿಸಿಕೊಡಲಿಲ್ಲವೆಂದರೆ ನಷ್ಟ ಮಾಡುತ್ತಾರೆ. ಆದ್ದರಿಂದ ನಾವು ಹಿರಿಯ ಸಹೋದರಿಯರನ್ನು ಕರಿಸುತ್ತೇವೆ, ಅವರು ನಿಮಗೆ ತಿಳಿಸಿಕೊಡುತ್ತಾರೆ ಎಂದು ಹೇಳಬೇಕು. ಭಾರತವೇ ವಜ್ರ ಸಮಾನವಾಗಿತ್ತು, ಈಗ ಕವಡೆಯ ಸಮಾನವಾಗಿದೆ, ಇಂತಹ ಬಡ ಭಾರತವನ್ನು ಕಿರೀಟ ಪ್ರಾಯವನ್ನಾಗಿ ಯಾರು ಮಾಡುವುದು? ಲಕ್ಷ್ಮೀ-ನಾರಾಯಣರು ಈಗ ಎಲ್ಲಿದ್ದಾರೆ? ಅದರ ಲೆಕ್ಕ ಹೇಳಿ? ಈ ಮಾತಿಗೆ ಅವರು ಏನನ್ನೂ ಹೇಳಲು ಸಾಧ್ಯವಿಲ್ಲ. ಅವರೆಲ್ಲಾ ಭಕ್ತಿಯ ಸಾಗರರಾಗಿದ್ದಾರೆ, ಅದೇ ನಶೆ ಏರಿ ಬಿಟ್ಟಿದೆ. ನೀವು ಜ್ಞಾನಸಾಗರರಾಗಿದ್ದೀರಿ. ಅವರು ಶಾಸ್ತ್ರವನ್ನೇ ಜ್ಞಾನವೆಂದು ತಿಳಿದಿದ್ದಾರೆ. ತಂದೆ ಶಾಸ್ತ್ರದಲ್ಲಿ ಭಕ್ತಿಯ ರೀತಿ, ಪದ್ಧತಿಗಳಿವೆ ಎಂದು ಹೇಳುತ್ತಾರೆ. ಎಷ್ಟು ತಮ್ಮಲ್ಲಿ ಜ್ಞಾನದ ಶಕ್ತಿ ತುಂಬುತ್ತಾ ಹೋಗುತ್ತದೋ ನೀವು ಅಯಸ್ಕಾಂತವಾಗಿ ಬಿಡುತ್ತೀರಿ, ನಂತರ ಎಲ್ಲರಿಗೂ ಸೆಳತವಾಗುತ್ತದೆ, ಆ ಸ್ಥಿತಿ ಈಗಿಲ್ಲ ಆದರೂ ಸಹ ಯಥಾ ಯೋಗ, ಯಥಾ ಶಕ್ತಿ ತಂದೆಯನ್ನು ನೆನಪು ಮಾಡುತ್ತಿರುತ್ತಾರೆ. ಸದಾ ಕಾಲ ತಂದೆಯ ನೆನಪು ಮಾಡುತ್ತಾರೆ ಎಂದಲ್ಲ. ಹಾಗಾದರೆ ಈ ಶರೀರವೇ ಇರುವುದಿಲ್ಲ. ಈಗಂತೂ ಅನೇಕರಿಗೆ ಸಂದೇಶವನ್ನು ಕೊಡಬೇಕು ಸಂದೇಶವಾಹಕರಾಗಬೇಕು. ನೀವು ಮಕ್ಕಳೇ ಸಂದೇಶವಾಹಕರಾಗುತ್ತೀರಿ ಮತ್ತೆ ಯಾರೂ ಆಗಲು ಸಾಧ್ಯವಿಲ್ಲ. ಕ್ರೈಸ್ಟ್ ಮುಂತಾದವರು ಬಂದು ಧರ್ಮವನ್ನು ಸ್ಥಾಪನೆ ಮಾಡುತ್ತಾರೆ, ಅವರಿಗೆ ಸಂದೇಶವಾಹಕರು ಎಂದು ಹೇಳಲು ಸಾಧ್ಯವಿಲ್ಲ. ಕ್ರಿಶ್ಚಿಯನ್ ಧರ್ಮದ ಸ್ಥಾಪನೆ ಮಾಡಿದ್ದಾರೆ ವಿನಃ ಮತ್ತೇನನ್ನೂ ಮಾಡಲಿಲ್ಲ. ಅವರು ಯಾರ ಶರೀರದಲ್ಲಿ ಬಂದಿದ್ದಾರೋ ಅವರ ನಂತರ ಮತ್ತೊಬ್ಬರು ಬರುತ್ತಾರೆ. ಇಲ್ಲಿ ರಾಜಧಾನಿ ಸ್ಥಾಪನೆ ಆಗುತ್ತಿದೆ, ಮುಂದೆ ಹೋದ ಹಾಗೆ ನಿಮಗೆ ನಾವು ಏನೇನು ಆಗುತ್ತೇವೆ, ಇಂತಹ ವಿಕರ್ಮವನ್ನು ಮಾಡಿದ್ದೇವೆ ಎಂಬುದು ಸಾಕ್ಷಾತ್ಕಾರ ಆಗುತ್ತದೆ. ಇದರಲ್ಲಿ ತಡವಾಗುವುದಿಲ್ಲ. ಹೇಗೆ ಕಾಶಿ ಕಲ್ವಟ್ನಲ್ಲಿ ಬಿದ್ದ ತಕ್ಷಣವೇ ಒಂದೇ ಏಟಿಗೆ ಮರಣ ಹೊಂದುತ್ತಿದ್ದರು. ಈಗ ಸರ್ಕಾರದವರು ಇದನ್ನು ನಿಲ್ಲಿಸಿ ಬಿಟ್ಟಿದ್ದಾರೆ. ಅವರು ಮುಕ್ತಿಯನ್ನು ಪಡೆಯುತ್ತೇವೆ ಎಂದು ತಿಳಿದಿದ್ದಾರೆ. ಯಾರೂ ಮುಕ್ತಿಯನ್ನು ಪಡೆಯಲು ಸಾಧ್ಯವಿಲ್ಲವೆಂದು ತಂದೆ ಹೇಳುತ್ತಾರೆ. ಸ್ವಲ್ಪ ಸಮಯದಲ್ಲಿ ಎಲ್ಲಾ ಜನ್ಮಗಳ ಶಿಕ್ಷೆ ಸಿಕ್ಕಿ ಬಿಡುತ್ತದೆ. ನಂತರ ಹೊಸದಾಗಿ ಲೆಕ್ಕಾಚಾರವು ಪ್ರಾರಂಭವಾಗುತ್ತದೆ. ಯಾರೂ ವಾಪಸ್ ಮನೆಗೆ ಹೋಗಲು ಸಾಧ್ಯವಿಲ್ಲ. ಎಲ್ಲಿ ಹೋಗಿ ಇರುತ್ತಾರೆ? ಆತ್ಮಗಳ ವೃಕ್ಷವೇ ಹಾಳಾಗಿ ಬಿಡುತ್ತದೆ. ನಂಬರ್ವಾರಾಗಿ ಬರುತ್ತಾರೆ. ನಂತರ ಹೋಗುತ್ತಾರೆ. ಮಕ್ಕಳಿಗೆ ಸಾಕ್ಷಾತ್ಕಾರ ಆಗುತ್ತದೆ ಆಗ ಈ ಎಲ್ಲಾ ಚಿತ್ರವನ್ನು ಮಾಡುತ್ತಾರೆ. 84 ಜನ್ಮದ ಇಡೀ ಸೃಷ್ಟಿ ಚಕ್ರದ ಆದಿ-ಮಧ್ಯ-ಅಂತ್ಯದ ಜ್ಞಾನ ನಿಮಗೆ ಸಿಕ್ಕಿದೆ. ನಂತರ ನಿಮ್ಮಲ್ಲೂ ಸಹ ನಂಬರ್ ವಾರ್ ಇರುತ್ತೀರಿ. ಕೆಲವರು ಬಹಳ ಉತ್ತಮ ಅಂಕದಿಂದ ಪಾಸ್ ಆಗುತ್ತೀರಿ, ಕೆಲವರು ಕಡಿಮೆ ತೆಗೆದುಕೊಳ್ಳುತ್ತಾರೆ, ಯಾರದೂ 100 ಅಂಕೆಗಳು ಇರುವುದಿಲ್ಲ. ತಂದೆಯದು ಮಾತ್ರವಿರುತ್ತದೆ. ಅದು ಯಾರೂ ಆಗಲು ಸಾಧ್ಯವಿಲ್ಲ. ಸ್ವಲ್ಪ-ಸ್ವಲ್ಪ ವ್ಯತ್ಯಾಸವಾಗುತ್ತದೆ. ಒಂದೇ ರೀತಿಯೂ ಆಗಲು ಸಾಧ್ಯವಿಲ್ಲ. ಎಷ್ಟೆಲ್ಲಾ ಮನುಷ್ಯರಿದ್ದಾರೆ, ಎಲ್ಲರದ್ದೂ ತನ್ನ-ತನ್ನದೇ ಆದ ಚೆಹರಗಳಿದೆ. ಆತ್ಮರೆಲ್ಲರೂ ಎಷ್ಟು ಸಣ್ಣ ಬಿಂದು ಆಗಿದ್ದಾರೆ? ಮನುಷ್ಯರು ಎಷ್ಟು ದೊಡ್ಡ-ದೊಡ್ಡದಾಗಿರುತ್ತಾರೆ. ಆದರೆ ಒಬ್ಬರ ಚೆಹರೆ ಮತ್ತೊಬ್ಬರನ್ನು ಹೋಲುವುದಿಲ್ಲ. ಎಷ್ಟು ಆತ್ಮರಿದ್ದಾರೋ ಅಷ್ಟೇ ಮತ್ತೆ ಇರುತ್ತಾರೆ ಆಗ ತಾನೇ ಮನೆಯಲ್ಲಿ ಇರುತ್ತಾರೆ. ಇದೂ ಸಹ ನಾಟಕದಲ್ಲಿ ಮಾಡಲ್ಪಟ್ಟಿದೆ, ಇದರಲ್ಲಿ ಯಾವುದೇ ವ್ಯತ್ಯಾಸವಾಗಲು ಸಾಧ್ಯವಿಲ್ಲ. ಒಮ್ಮೆ ನಡೆದ ಶೂಟಿಂಗ್ ಅದನ್ನೇ ಮತ್ತೆ ನೋಡುತ್ತೀರಿ. 5000 ವರ್ಷದ ಮೊದಲೂ ಸಹ ನಾವು ಹೀಗೆಯೇ ಮಿಲನ ಮಾಡಿದ್ದೆವು ಎಂದು ನೀವು ಹೇಳುತ್ತೀರಿ. ಒಂದು ಸೆಕೆಂಡೂ ಸಹ ಹೆಚ್ಚು-ಕಡಿಮೆ ಆಗಲು ಸಾಧ್ಯವಿಲ್ಲ. ಯಾರಿಗೆ ರಚಯಿತ ಹಾಗೂ ರಚನೆಯ ಜ್ಞಾನ ಬುದ್ಧಿಯಲ್ಲಿ ಇದೆ ಅವರಿಗೆ ಸ್ವದರ್ಶನ ಚಕ್ರಧಾರಿಗಳು ಎಂದು ಕರೆಯಲಾಗುತ್ತದೆ. ತಂದೆಯಿಂದಲೇ ಈ ಜ್ಞಾನ ಸಿಗುತ್ತದೆ. ಮನುಷ್ಯರು ಮನುಷ್ಯರಿಗೆ ಈ ಜ್ಞಾನವನ್ನು ಕೊಡಲು ಸಾಧ್ಯವಿಲ್ಲ. ಮನುಷ್ಯರು ಭಕ್ತಿಯನ್ನು ಕಲಿಸುತ್ತಾರೆ, ಒಬ್ಬ ತಂದೆಯೇ ಜ್ಞಾನವನ್ನು ಕಲಿಸುತ್ತಾರೆ. ಜ್ಞಾನಸಾಗರ ಒಬ್ಬರೇ ತಂದೆಯಾಗಿದ್ದಾರೆ ನಂತರ ನೀವು ಜ್ಞಾನ ನದಿಗಳಾಗುತ್ತೀರಿ, ಜ್ಞಾನಸಾಗರ ಮತ್ತು ಜ್ಞಾನ ನದಿಗಳಿಂದ ಮುಕ್ತಿ-ಜೀವನ್ಮುಕ್ತಿ ಸಿಗುತ್ತದೆ, ಅವು ನೀರಿನ ನದಿಗಳಾಗಿವೆ, ನೀರಂತೂ ಸದಾ ಇರುತ್ತದೆ, ಜ್ಞಾನ ಸಂಗಮಯುಗದಲ್ಲಿಯೇ ಸಿಗುತ್ತದೆ, ನೀರಿನ ನದಿಗಳು ಭಾರತದಲ್ಲಿ ಬಹಳಷ್ಟಿವೆ. ಉಳಿದೆಲ್ಲಾ ಪಟ್ಟಣಗಳು ನಾಶ ಆಗಿ ಬಿಡುತ್ತವೆ. ಖಂಡಗಳೇ ಇರುವುದಿಲ್ಲ. ಮಳೆಯಂತೂ ಬೀಳುತ್ತಿರುತ್ತದೆ, ನೀರು ನೀರಿನಲ್ಲಿ ಸೇರುತ್ತದೆ, ಇದೇ ಭಾರತವಿರುತ್ತದೆ. ಈಗ ನಿಮಗೆ ಎಲ್ಲಾ ಜ್ಞಾನವು ಸಿಕ್ಕಿದೆ. ಇದು ಜ್ಞಾನ ಉಳಿದದ್ದು ಭಕ್ತಿಯಾಗಿದೆ. ವಜ್ರಸಮಾನ ಒಬ್ಬರೇ ಶಿವಬಾಬಾ ಆಗಿದ್ದಾರೆ, ಅವರ ಜಯಂತಿಯನ್ನು ಆಚರಿಸಲಾಗುತ್ತದೆ, ಶಿವಬಾಬಾ ಏನು ಮಾಡಿದರು? ಎಂದು ಕೇಳಬೇಕು. ಅವರು ಬಂದು ಪತಿತರನ್ನು ಪಾವನರನ್ನಾಗಿ ಮಾಡುತ್ತಾರೆ. ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ. ಆದ್ದರಿಂದಲೇ ಗಾಯನವಿದೆ ಜ್ಞಾನಸೂರ್ಯ ಪ್ರಕಟವಾದಾಗ ಅಜ್ಞಾನ ಅಂಧಕಾರ ದೂರವಾಯಿತು ಎಂದು. ಜ್ಞಾನದಿಂದ ಹಗಲು ಭಕ್ತಿಯಿಂದ ರಾತ್ರಿ ಆಗುತ್ತದೆ, ಈಗ ನಾವೇ 84 ಜನ್ಮಗಳನ್ನು ಪೂರ್ಣ ಮಾಡಿದ್ದೇವೆ ಎಂಬುದನ್ನು ತಿಳಿದಿದ್ದೀರಿ. ಈಗ ತಂದೆಯನ್ನು ನೆನಪು ಮಾಡುವುದರಿಂದ ಪಾವನರಾಗಿ ಬಿಡುತ್ತೇವೆ. ನಂತರ ಶರೀರವೂ ಪಾವನ ಸಿಗುತ್ತದೆ. ತಾವೆಲ್ಲರೂ ನಂಬರ್ ವಾರ್ ಪಾವನರಾಗುತ್ತೀರಿ, ಎಷ್ಟು ಸಹಜ ಮಾತಾಗಿದೆ? ಮುಖ್ಯವಾದ ಮಾತು ನೆನಪು ಮಾಡುವುದು. ಅನೇಕರಿಗೆ ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಲೂ ಸಹ ಬರುವುದಿಲ್ಲ. ಆದರೂ ಸಹ ಮಕ್ಕಳಾಗಿರುವುದರಿಂದ ಸ್ವರ್ಗದಲ್ಲಿ ಖಂಡಿತ ಬರುತ್ತಾರೆ. ಈ ಸಮಯದ ಪುರುಷಾರ್ಥದನುಸಾರ ರಾಜ್ಯ ಸ್ಥಾಪನೆ ಆಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.


ಧಾರಣೆಗಾಗಿ ಮುಖ್ಯಸಾರ:
೧. ಸದಾ ನಾನು ಮಾಸ್ಟರ್ ಜ್ಞಾನಸಾಗರನಾಗಿದ್ದೇನೆ ಎಂಬ ನಶೆಯಲ್ಲಿ ಇರಬೇಕು, ತನ್ನಲ್ಲಿ ಜ್ಞಾನದ ಶಕ್ತಿಯನ್ನು ತುಂಬಿಕೊಂಡು ಅಯಸ್ಕಾಂತ ಆಗಬೇಕು. ಆತ್ಮಿಕ ಸಂದೇಹವಾಹಕರಾಗಬೇಕು.

೨. ಸದ್ಗುರುವು ತಂದೆಯ ಹೆಸರು ಹಾಳಾಗುವಂತಹ ಯಾವುದೇ ಇಂತಹ ಕರ್ಮವನ್ನು ಮಾಡಬಾರದು. ಏನೇ ಆಗಲಿ ಎಂದೂ ಸಹ ಅಳಬಾರದು.

ವರದಾನ:
ಜ್ಞಾನದ ಜೊತೆ ಗುಣಗಳನ್ನು ಇಮರ್ಜ್ ಮಾಡಿಕೊಂಡು ಸರ್ವಗುಣ ಸಂಪನ್ನರಾಗುವಂತಹ ಗುಣಮೂರ್ತಿ ಭವ.

ಪ್ರತಿಯೊಬ್ಬರಲ್ಲಿ ಜ್ಞಾನ ಬಹಳ ಇದೆ, ಆದರೆ ಈಗ ಅವಶ್ಯಕತೆ ಇರುವುದು ಗುಣ ಮೂರ್ತಿಯಾಗಿ ಎಲ್ಲರನ್ನೂ ಗುಣಮೂರ್ತಿಗಳನ್ನಾಗಿ ಮಾಡುವಂತಹ ಕರ್ತವ್ಯದಲ್ಲಿ ತತ್ಪರರಾಗಬೇಕು. ಇದರಿಂದ ವ್ಯರ್ಥ ನೋಡುವ, ಕೇಳುವ ಹಾಗೂ ಮಾಡಲು ಸಮಯ ಸಿಗುವುದಿಲ್ಲ. ಈ ವಿಧಿಯಿಂದ ಸ್ವಯಂನ ಹಾಗೂ ಸರ್ವರ ಬಲಹೀನತೆ ಸಹಜವಾಗಿ ಸಮಾಪ್ತಿಯಾಗಿ ಬಿಡುವುದು. ಆದ್ದರಿಂದ ಇದರಲ್ಲಿ ಪ್ರತಿಯೊಬ್ಬರೂ ತಮ್ಮನ್ನು ನಿಮಿತ್ತ ಮೊದಲು ನಾವು ಎಂದು ತಿಳಿದು ಸರ್ವಗುಣ ಸಂಪನ್ನರಾಗುವ ಮತ್ತು ಮಾಡುವುದರಲ್ಲಿ ಉದಾಹರಣೆಯಾಗಿ.

ಸ್ಲೋಗನ್:
ಮನಸ್ಸಿನಿಂದ ಯೋಗ ದಾನ, ವಾಚಾದಿಂದ ಜ್ಞಾನ ದಾನ ಮತ್ತು ಕರ್ಮಣದಿಂದ ಗುಣಗಳ ದಾನ ಮಾಡಿ.