01.02.20         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಈ ಶರೀರ ರೂಪಿ ವಸ್ತ್ರವನ್ನು ಇಲ್ಲಿಯೇ ಬಿಡಬೇಕಾಗಿದೆ, ಆದ್ದರಿಂದ ಇದರೊಂದಿಗಿನ ಮಮತ್ವವನ್ನು ಕಳೆಯಿರಿ, ಯಾವ ಮಿತ್ರ ಸಂಬಂಧಿಗಳೂ ನೆನಪಿಗೆ ಬರಬಾರದು

ಪ್ರಶ್ನೆ:
ಯಾವ ಮಕ್ಕಳಲ್ಲಿ ಯೋಗಬಲವಿದೆ, ಅವರ ಚಿಹ್ನೆಗಳೇನು?

ಉತ್ತರ:
ಅವರಿಗೆ ಯಾವುದೇ ಮಾತಿನಲ್ಲಿ ಸ್ವಲ್ಪವೂ ಆಘಾತವಾಗುವುದಿಲ್ಲ, ಎಲ್ಲಿಯೂ ಸೆಳೆತವಿರುವುದಿಲ್ಲ. ತಿಳಿದುಕೊಳ್ಳಿ, ಇಂದು ಯಾರಾದರೂ ಶರೀರ ಬಿಟ್ಟರೂ ಸಹ ಅವರಿಗೆ ದುಃಖವಾಗುವುದಿಲ್ಲ ಏಕೆಂದರೆ ಅವರಿಗೆ ಗೊತ್ತಿದೆ, ಇವರ ಪಾತ್ರವು ನಾಟಕದಲ್ಲಿ ಇಷ್ಟೇ ಇತ್ತು. ಆತ್ಮವು ಒಂದು ಶರೀರವನ್ನು ಬಿಟ್ಟು ಹೋಗಿ ಇನ್ನೊಂದು ಶರೀರವನ್ನು ತೆಗೆದುಕೊಳ್ಳುತ್ತದೆ.

ಓಂ ಶಾಂತಿ.
ಈ ಜ್ಞಾನವು ಬಹಳ ಗುಪ್ತವಾಗಿದೆ, ಇದರಲ್ಲಿ ನಮಸ್ಕಾರ ಮಾಡುವ ಅವಶ್ಯಕತೆಯಿಲ್ಲ. ಪ್ರಪಂಚದಲ್ಲಿ ನಮಸ್ತೆ ಅಥವಾ ರಾಮ-ರಾಮ ಇತ್ಯಾದಿಯಾಗಿ ಹೇಳುತ್ತಾರೆ. ಇಲ್ಲಿ ಅವೆಲ್ಲಾ ಮಾತುಗಳು ನಡೆಯುವುದಿಲ್ಲ ಏಕೆಂದರೆ ಇದೊಂದು ಪರಿವಾರವಾಗಿದೆ. ಪರಿವಾರದಲ್ಲಿ ಒಬ್ಬರು ಇನ್ನೊಬ್ಬರಿಗೆ ನಮಸ್ತೆ ಅಥವಾ ಗುಡ್ ಮಾರ್ನಿಂಗ್ ಎನ್ನುವುದು ಶೋಭಿಸುವುದಿಲ್ಲ. ಮನೆಯಲ್ಲಂತೂ ಊಟ-ಉಪಚಾರ, ಕಛೇರಿಗೆ ಹೋಗುವುದು-ಬರುವುದು ನಡೆಯುತ್ತಿರುತ್ತದೆ. ನಮಸ್ತೆ ಮಾಡುವ ಅವಶ್ಯಕತೆಯೇ ಇರುವುದಿಲ್ಲ. ಗುಡ್ ಮಾರ್ನಿಂಗ್ - ಎನ್ನುವುದರ ಸಂಪ್ರದಾಯವು ಯುರೋಪಿಯನ್ನರಿಂದ ಬಂದಿದೆ. ಇಲ್ಲದಿದ್ದರೆ ಮೊದಲು ಇದೇನೂ ಇರಲಿಲ್ಲ. ಯಾವುದೇ ಸತ್ಸಂಗದಲ್ಲಿ ಪರಸ್ಪರ ಮಿಲನ ಮಾಡುತ್ತಾರೆಂದರೆ ನಮಸ್ಕಾರ ಮಾಡುತ್ತಾರೆ, ಕಾಲಿಗೆ ಬೀಳುತ್ತಾರೆ. ಈ ಕಾಲಿಗೆ ಬೀಳುವುದನ್ನು ನಮ್ರತೆಗಾಗಿ ಕಲಿಸುತ್ತಾರೆ. ಇಲ್ಲಂತೂ ನೀವು ಮಕ್ಕಳು ಆತ್ಮಾಭಿಮಾನಿಯಾಗಬೇಕಾಗಿದೆ. ಆತ್ಮ ಆತ್ಮಕ್ಕೆ ಏನು ಮಾಡುವುದು? ಆದರೂ ಸಹ ಹೇಳಬೇಕಾಗುತ್ತದೆ. ಹೇಗೆ ತಂದೆಗೆ ಬಾಬಾ ನಮಸ್ತೆ ಎಂದು ಹೇಳುತ್ತೀರಿ, ತಂದೆಯೂ ಹೇಳುತ್ತಾರೆ - ನಾನು ಸಾಧಾರಣ ಬ್ರಹ್ಮನ ತನುವಿನ ಮೂಲಕ ನಿಮಗೆ ಓದಿಸುತ್ತೇನೆ. ಇವರ ಮೂಲಕ ಸ್ಥಾಪನೆ ಮಾಡಿಸುತ್ತೇನೆ. ಅದು ಹೇಗೆ? ಯಾವಾಗ ತಂದೆಯು ಸನ್ಮುಖದಲ್ಲಿರುವರೋ ಆಗಲೇ ತಿಳಿಸುತ್ತಾರೆ. ಇಲ್ಲವೆಂದರೆ ಹೇಗೆ ತಿಳಿದುಕೊಳ್ಳುವುದು. ಈ ತಂದೆಯು ಸನ್ಮುಖದಲ್ಲಿ ತಿಳಿಸುತ್ತಾರೆ ಆದ್ದರಿಂದ ಮಕ್ಕಳು ತಿಳಿದುಕೊಳ್ಳುತ್ತೀರಿ - ಇಬ್ಬರಿಗೂ ನಮಸ್ತೆ ಮಾಡಬೇಕಾಗಿದೆ. ಬಾಪ್ದಾದಾ ನಮಸ್ತೆ. ಹೊರಗಿನವರು ಒಂದುವೇಳೆ ಈ ಮಾತನ್ನು ಕೇಳಿದರೆ ಬಾಪ್ದಾದಾ ಎಂದು ಇವರೇನು ಹೇಳುತ್ತಾರೆ ಎಂದು ತಬ್ಬಿಬ್ಬಾಗುತ್ತಾರೆ. ಅನೇಕರು ಡಬಲ್ ಹೆಸರುಗಳನ್ನಿಟ್ಟುಕೊಂಡಿರುತ್ತಾರೆ. ಹೇಗೆ ಲಕ್ಷ್ಮಿ-ನಾರಾಯಣ, ರಾಧಾ-ಕೃಷ್ಣ....... ಎಂಬ ಹೆಸರುಗಳೂ ಇವೆ. ಇಲ್ಲಂತೂ ಸ್ತ್ರೀ-ಪುರುಷರು ಒಟ್ಟಿಗೆ ಸೇರಿ ಬಿಟ್ಟರು. ಇಲ್ಲಿ ಇವರು ಬಾಪ್ದಾದಾ (ತಂದೆ+ದಾದ) ಆಗಿದ್ದಾರೆ. ಈ ಮಾತುಗಳನ್ನು ನೀವು ಮಕ್ಕಳೇ ಅರಿತುಕೊಳ್ಳುತ್ತೀರಿ. ಅವಶ್ಯವಾಗಿ ತಂದೆಯು ದೊಡ್ಡವರಾದರು. ಆ ಹೆಸರು ಭಲೆ ಡಬಲ್ ಆಗಿದೆ ಆದರೆ ಅವರು ಒಬ್ಬರೇ ಅಲ್ಲವೆ ಅಂದಮೇಲೆ ಎರಡು ಹೆಸರುಗಳನ್ನು ಏಕೆ ಇಡಲಾಗಿದೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಈ ಹೆಸರು ತಪ್ಪಾಗಿದೆ. ತಂದೆಯನ್ನು ಮತ್ತ್ಯಾರೂ ಅರಿತುಕೊಳ್ಳಲು ಸಾಧ್ಯವಿಲ್ಲ. ಬಾಪ್ದಾದಾ ನಮಸ್ತೆ ಎಂದು ನೀವು ಹೇಳುತ್ತೀರಿ ಶಾರೀರಿಕ, ಆತ್ಮಿಕ ಮಕ್ಕಳೇ ನಮಸ್ತೆ ಎಂದು ತಂದೆಯು ಹೇಳುತ್ತಾರೆ ಆದರೆ ಇಷ್ಟು ಉದ್ದವಾದುದು ಶೋಭಿಸುವುದಿಲ್ಲ. ಶಬ್ಧವು ಸರಿಯಾಗಿದೆ, ನೀವೀಗ ಶಾರೀರಿಕ ಮಕ್ಕಳೂ ಆಗಿದ್ದೀರಿ ಮತ್ತು ನಿರಾಕಾರೀ ಮಕ್ಕಳೂ ಆಗಿದ್ದೀರಿ. ಶಿವ ತಂದೆಯು ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ ಮತ್ತು ಪ್ರಜಾಪಿತನೂ ಇದ್ದಾರೆ. ಪ್ರಜಾಪಿತ ಬ್ರಹ್ಮನ ಸಂತಾನರು ಸಹೋದರ-ಸಹೋದರಿಯರಾಗಿದ್ದಾರೆ, ಪ್ರವೃತ್ತಿ ಮಾರ್ಗವಾಗಿ ಬಿಡುತ್ತದೆ. ನೀವೆಲ್ಲರೂ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ. ಬ್ರಹ್ಮಾಕುಮಾರ-ಕುಮಾರಿಯರಾಗುವುದರಿಂದ ಪ್ರಜಾಪಿತನ ಸಿದ್ಧವಾಗುತ್ತದೆ. ಇದರಲ್ಲಿ ಅಂಧಶ್ರದ್ಧೆಯ ಮಾತಿಲ್ಲ. ತಿಳಿಸಿ, ಬ್ರಹ್ಮಾಕುಮಾರ-ಕುಮಾರಿಯರಿಗೆ ತಂದೆಯಿಂದ ಆಸ್ತಿಯು ಸಿಗುತ್ತದೆ. ಬ್ರಹ್ಮನಿಂದ ಸಿಗುವುದಿಲ್ಲ, ಬ್ರಹ್ಮಾರವರೂ ಸಹ ಶಿವ ತಂದೆಯ ಮಗುವಾಗಿದ್ದಾರೆ. ಸೂಕ್ಷ್ಮವತನವಾಸಿ ಬ್ರಹ್ಮಾ-ವಿಷ್ಣು-ಶಂಕರ - ಇದು ರಚನೆಯಾಗಿದೆ, ಇವರ ರಚಯಿತನು ಶಿವನಾಗಿದ್ದಾರೆ. ಶಿವನ ರಚಯಿತ ಯಾರೆಂದು ಯಾರೂ ಸಹ ಪ್ರಶ್ನೆ ಮಾಡಲು ಸಾಧ್ಯವಿಲ್ಲ ಏಕೆಂದರೆ ಶಿವನಿಗೆ ಯಾರೂ ರಚಯಿತನಿಲ್ಲ. ಬ್ರಹ್ಮಾ-ವಿಷ್ಣು-ಶಂಕರ ರಚನೆಯಾಗಿದ್ದಾರೆ. ಅವರಿಗೂ ಮೇಲೆ ಶಿವನಿದ್ದಾರೆ. ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ. ಈಗ ರಚಯಿತನೆಂದು ಹೇಳಿದಾಗ ಮತ್ತೆ ಪ್ರಶ್ನೆಯು ಉದ್ಭವವಾಗುತ್ತದೆ - ಯಾವಾಗ ರಚನೆ ಮಾಡಿದರು? ಇಲ್ಲ. ಇದು ಅನಾದಿಯಾಗಿದೆ. ಇಷ್ಟೊಂದು ಆತ್ಮಗಳನ್ನು ಯಾವಾಗ ರಚನೆ ಮಾಡಿದರು - ಈ ಪ್ರಶ್ನೆಯು ಬರುವುದಿಲ್ಲ. ಈ ಅನಾದಿ ನಾಟಕವು ನಡೆದು ಬರುತ್ತಿದೆ, ಬೇಹಂತ್ ಆಗಿದೆ. ಎಂದೂ ಇದರ ಅಂತ್ಯವಾಗುವುದಿಲ್ಲ. ಈ ಮಾತುಗಳು ನೀವು ಮಕ್ಕಳಲ್ಲಿ ನಂಬರ್ವಾರ್ ಇದೆ. ಇದು ಬಹಳ ಸಹಜವಾಗಿದೆ. ಒಬ್ಬ ತಂದೆಯ ವಿನಃ ಮತ್ತ್ಯಾರೊಂದಿಗೂ ಸೆಳೆತವಿರಬಾರದು. ಯಾರಾದರೂ ಸಾಯಲಿ ಅಥವಾ ಬದುಕಲಿ. ಅಮ್ಮನು ಶರೀರ ಬಿಟ್ಟರೆ ಹಲ್ವ ತಿನ್ನಿ ಎಂಬ ಗಾಯನವೂ ಇದೆ. ಯಾರಾದರೂ ಶರೀರ ಬಿಡುತ್ತಾರೆಂದರೆ ತಿಳಿದುಕೊಳ್ಳಿ ಆಗ ಚಿಂತೆಯ ಮಾತಿಲ್ಲ ಏಕೆಂದರೆ ಈ ನಾಟಕವು ಅನಾದಿಯಾಗಿ ಮಾಡಲ್ಪಟ್ಟಿದೆ. ನಾಟಕದನುಸಾರ ಅವರು ಈ ಸಮಯದಲ್ಲಿ ಹೋಗಲೇಬೇಕಾಗಿತ್ತು, ಇದರಲ್ಲಿ ಏನು ತಾನೇ ಮಾಡಲು ಸಾಧ್ಯ. ಸ್ವಲ್ಪವೂ ದುಃಖಿಯಾಗುವ ಮಾತಿಲ್ಲ. ಇದು ಯೋಗಬಲದ ಸ್ಥಿತಿಯಾಗಿದೆ. ಸ್ವಲ್ಪವೂ ಆಘಾತವಾಗಬಾರದೆಂದು ನಿಯಮವು ಹೇಳುತ್ತದೆ. ಎಲ್ಲರೂ ಪಾತ್ರಧಾರಿಗಳಲ್ಲವೆ. ತಮ್ಮ-ತಮ್ಮ ಪಾತ್ರವನ್ನಭಿನಯಿಸುತ್ತಿರುತ್ತಾರೆ. ಮಕ್ಕಳಿಗೆ ಜ್ಞಾನವು ಸಿಕ್ಕಿದೆ.

ತಂದೆಯೊಂದಿಗೆ ಹೇಳುತ್ತಾರೆ - ಹೇ ಪರಮಪಿತ ಪರಮಾತ್ಮ ಬಂದು ನಮ್ಮನ್ನು ಕರೆದುಕೊಂಡು ಹೋಗಿ, ಇಷ್ಟೆಲ್ಲಾ ಶರೀರಗಳ ವಿನಾಶ ಮಾಡಿಸಿ, ಎಲ್ಲಾ ಆತ್ಮಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ, ಬಹಳ ಭಾರಿ ಕೆಲಸವಾಯಿತಲ್ಲವೆ! ಇಲ್ಲಿ ಯಾರಾದರೂ ಒಬ್ಬರು ಸತ್ತರೆ 12 ತಿಂಗಳಿನವರೆಗೆ ಅಳುತ್ತಿರುತ್ತಾರೆ. ನೋಡಿ, ತಂದೆಯಂತೂ ಇಷ್ಟೆಲ್ಲಾ ಆತ್ಮಗಳನ್ನು ಕರೆದುಕೊಂಡು ಹೋಗುತ್ತಾರೆ, ಎಲ್ಲರ ಶರೀರಗಳು ಇಲ್ಲಿ ಬಿಟ್ಟು ಹೋಗುತ್ತದೆ. ಮಕ್ಕಳಿಗೆ ಗೊತ್ತಿದೆ, ಮಹಾಭಾರತ ಯುದ್ಧವು ನಡೆಯುತ್ತದೆಯೆಂದರೆ ಎಲ್ಲರೂ ಸೊಳ್ಳೆಗಳೋಪಾದಿಯಲ್ಲಿ ಹೋಗುತ್ತಾರೆ. ಪ್ರಾಕೃತಿಕ ವಿಕೋಪಗಳೂ ಸಹ ಬರುವುದಿದೆ, ಇಡೀ ಪ್ರಪಂಚವೇ ಬದಲಾಗುತ್ತದೆ. ಈಗ ನೋಡಿ, ಇಂಗ್ಲೆಂಡ್, ರಷ್ಯಾ ಎಷ್ಟೊಂದು ದೊಡ್ಡ-ದೊಡ್ಡದಾಗಿದೆ. ಸತ್ಯಯುಗದಲ್ಲಿ ಇವೆಲ್ಲವೂ ಇತ್ತೆ? ನಮ್ಮ ರಾಜ್ಯದಲ್ಲಿ ಇದ್ಯಾವುದೂ ಇರಲಿಲ್ಲ. ಒಂದೇ ಧರ್ಮ, ಒಂದೇ ರಾಜ್ಯವಿತ್ತೆಂದು ಪ್ರಪಂಚದಲ್ಲಿ ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ನಿಮ್ಮಲ್ಲಿಯೂ ನಂಬರ್ವಾರ್ ಕೆಲವರ ಬುದ್ಧಿಯಲ್ಲಿ ಮಾತ್ರವೇ ಒಳ್ಳೆಯ ರೀತಿಯಲ್ಲಿ ಕುಳಿತುಕೊಳ್ಳುತ್ತದೆ. ಒಂದುವೇಳೆ ಧಾರಣೆಯಿದ್ದರೆ ಸದಾ ಆ ನಶೆಯೇರಿರುವುದು. ನಶೆಯು ಕೆಲವರಿಗೆ ಬಹಳ ಕಷ್ಟದಿಂದ ಏರುತ್ತದೆ. ಮಿತ್ರ ಸಂಬಂಧಿ ಮೊದಲಾದ ಎಲ್ಲರಿಂದ ನೆನಪನ್ನು ತೆಗೆದು ಒಂದು ಬೇಹದ್ದಿನ ಖುಷಿಯಲ್ಲಿ ನಿಲ್ಲುವುದು ಬಹಳ ಚಮತ್ಕಾರವಾಗಿದೆ. ಹಾ! ಇದು ಅಂತ್ಯದಲ್ಲಿಯೇ ಆಗುವುದು, ಅಂತಿಮದಲ್ಲಿಯೇ ಕರ್ಮಾತೀತ ಸ್ಥಿತಿಯನ್ನು ಪಡೆಯುತ್ತೀರಿ. ಶರೀರದಿಂದಲೂ ಪರಿವೆಯು ಬಿಟ್ಟು ಹೋಗುತ್ತದೆ. ಈಗ ನಾವು ಹೋಗುತ್ತೇವೆ ಎಂಬುದು ಹೇಗೆ ಸಾಮಾನ್ಯವಾಗಿ ಬಿಡುತ್ತದೆ. ಹೇಗೆ ನಾಟಕದಲ್ಲಿ ಪಾತ್ರವನ್ನಭಿನಯಿಸಿ ಮತ್ತೆ ಮನೆಗೆ ಹಿಂತಿರುಗಿ ಹೋಗುತ್ತಾರೆ. ಈ ದೇಹರೂಪಿ ವಸ್ತ್ರವನ್ನು ಇಲ್ಲಿಯೇ ಬಿಡಬೇಕಾಗಿದೆ. ಈ ವಸ್ತ್ರವನ್ನು ಇಲ್ಲಿಯೇ ತೆಗೆದುಕೊಳ್ಳುತ್ತೀರಿ, ಇಲ್ಲಿಯೇ ಬಿಡುತ್ತೀರಿ. ಇವೆಲ್ಲಾ ಹೊಸ ಮಾತುಗಳು ನೀವು ಮಕ್ಕಳ ಬುದ್ಧಿಯಲ್ಲಿದೆ, ಮತ್ತ್ಯಾರ ಬುದ್ಧಿಯಲ್ಲಿಯೂ ಇಲ್ಲ. ತಂದೆ ಮತ್ತು ಆಸ್ತಿ. ತಂದೆಯು ಎಲ್ಲರಿಗಿಂತ ಮೇಲಿದ್ದಾರೆ, ಬ್ರಹ್ಮಾರವರ ಮೂಲಕ ಸ್ಥಾಪನೆ, ವಿಷ್ಣುವಿನಿಂದ ಪಾಲನೆ, ಶಂಕರನಿಂದ ವಿನಾಶ ಎಂದು ಹೇಳುತ್ತಾರೆ ಅಂದಮೇಲೆ ಶಿವನ ಕರ್ತವ್ಯವೇನು? ಶ್ರೇಷ್ಠಾತಿ ಶ್ರೇಷ್ಠ ಶಿವ ತಂದೆಯನ್ನು ಯಾರೂ ಅರಿತುಕೊಂಡಿಲ್ಲ. ಸರ್ವವ್ಯಾಪಿಯಾಗಿದ್ದಾರೆ, ಇವರೆಲ್ಲರೂ ಅವರದೇ ರೂಪವೆಂದು ಹೇಳಿ ಬಿಡುತ್ತಾರೆ. ಇದು ಪ್ರಪಂಚದವರ ಬುದ್ಧಿಯಲ್ಲಿ ಪಕ್ಕಾ ಆಗಿ ಬಿಟ್ಟಿದೆ, ಆದ್ದರಿಂದ ಎಲ್ಲರೂ ತಮೋಪ್ರಧಾನರಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ಇಡೀ ಪ್ರಪಂಚವು ದುರ್ಗತಿಯನ್ನು ಹೊಂದಿದೆ ಮತ್ತೆ ನಾನೇ ಬಂದು ಸದ್ಗತಿಯನ್ನು ಕೊಡುತ್ತೇನೆ. ಒಂದುವೇಳೆ ಸರ್ವವ್ಯಾಪಿಯಾಗಿದ್ದರೆ ಎಲ್ಲರೂ ಭಗವಂತರಾಗಿದ್ದಾರೆಯೇ? ಒಂದು ಕಡೆ ಎಲ್ಲರೂ ಸಹೋದರರೆಂದು ಹೇಳುತ್ತಾರೆ, ಇನ್ನೊಂದು ಕಡೆ ಎಲ್ಲರೂ ತಂದೆಯರೆಂದು ಹೇಳುತ್ತಾರೆ. ಏನನ್ನೂ ತಿಳಿದುಕೊಂಡಿಲ್ಲ. ಈಗ ನೀವು ಮಕ್ಕಳಿಗೆ ಬೇಹದ್ದಿನ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ ಆಗ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ನೀವು ಈ ದಾದಾ ಮತ್ತು ಮಮ್ಮಾರವರನ್ನೂ ಸಹ ನೆನಪು ಮಾಡಬಾರದು. ತಂದೆಯು ತಿಳಿಸುತ್ತಾರೆ - ಮಮ್ಮಾರವರೂ ಇಲ್ಲ, ಬಾಬಾರವರೂ ಇಲ್ಲ, ಯಾರ ಮಹಿಮೆಯೇನೂ ಇಲ್ಲ. ಶಿವ ತಂದೆಯು ಇಲ್ಲದೇ ಇದ್ದಿದ್ದರೆ ಈ ಬ್ರಹ್ಮಾರವರೂ ಸಹ ಏನು ಮಾಡುತ್ತಿದ್ದರು? ಅಂದಮೇಲೆ ಇವರನ್ನು ನೆನಪು ಮಾಡುವುದರಿಂದೇನಾಗುವುದು! ಹಾ! ನಿಮಗೆ ತಿಳಿದಿದೆ - ಇವರ ಮೂಲಕ ನಾವು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ, ಇವರಿಂದ (ಬ್ರಹ್ಮಾ) ಲ್ಲ. ಇವರೂ ಸಹ ತಂದೆಯಿಂದಲೇ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ ಅಂದಮೇಲೆ ಅವರನ್ನು ನೆನಪು ಮಾಡಬೇಕಾಗಿದೆ. ಈ ಬ್ರಹ್ಮಾರವರು ನಡುವೆ ದಲ್ಲಾಳಿಯಾಗಿದ್ದಾರೆ. ಹೇಗೆ ಕುಮಾರ-ಕುಮಾರಿಯ ನಿಶ್ಚಿತಾರ್ಥವಾಗುತ್ತದೆ, ಆಗ ಪರಸ್ಪರ ಅವರು ಇನ್ನೊಬ್ಬರನ್ನು ನೆನಪು ಮಾಡುತ್ತಾರಲ್ಲವೆ. ವಿವಾಹ ಮಾಡಿಸುವವರು ಮಧ್ಯದಲ್ಲಿ ದಲ್ಲಾಳಿಯಾದರು, ಇವರ ಮೂಲಕ ತಂದೆಯು ತಮ್ಮ ಜೊತೆ ನೀವಾತ್ಮಗಳ ನಿಶ್ಚಿತಾರ್ಥ ಮಾಡಿಸುತ್ತಾರೆ ಆದ್ದರಿಂದ ಸದ್ಗುರುವು ದಲ್ಲಾಳಿಯ ರೂಪದಲ್ಲಿ ಸಿಕ್ಕಿದರೆಂದು ಗಾಯನವಿದೆ. ಸದ್ಗುರುವೇನೂ ದಲ್ಲಾಳಿಯಲ್ಲ, ಸದ್ಗುರು ನಿರಾಕಾರನಾಗಿದ್ದಾರೆ. ಭಲೆ ಗುರು ಬ್ರಹ್ಮಾ, ಗುರು ವಿಷ್ಣು ಎಂದು ಹೇಳುತ್ತಾರೆ ಆದರೆ ಅವರೇನು ಗುರುವಲ್ಲ, ಸದ್ಗುರು ತಂದೆಯೊಬ್ಬರೇ ಆಗಿದ್ದಾರೆ, ಅವರು ಸರ್ವರ ಸದ್ಗತಿ ಮಾಡುತ್ತಾರೆ. ತಂದೆಯು ನಿಮಗೆ ಕಲಿಸಿಕೊಟ್ಟಿದ್ದಾರೆ ಆದ್ದರಿಂದ ನೀವು ಅನ್ಯರಿಗೂ ಮಾರ್ಗವನ್ನು ತಿಳಿಸುತ್ತೀರಿ. ನೋಡಿಯೂ ನೋಡದಂತಿರಿ ಎಂದು ಎಲ್ಲರಿಗೂ ಹೇಳುತ್ತೀರಿ. ಬುದ್ಧಿಯು ಶಿವ ತಂದೆಯೊಂದಿಗೆ ತೊಡಗಿರಲಿ, ಕಣ್ಣುಗಳಿಂದ ಏನೆಲ್ಲವನ್ನೂ ನೋಡುತ್ತೀರೋ ಎಲ್ಲವೂ ಸ್ಮಶಾನವಾಗಲಿದೆ. ಒಬ್ಬ ತಂದೆಯನ್ನು ನೆನಪು ಮಾಡಬೇಕೆ ಹೊರತು ಇವರನ್ನಲ್ಲ (ಬ್ರಹ್ಮಾ). ಇವರಿಂದ ಆಸ್ತಿಯು ಸಿಗುವುದಿಲ್ಲ, ತಂದೆಯಿಂದಲೇ ಸಿಗುತ್ತದೆ. ತಂದೆಯ ಬಳಿಯೇ ಹೋಗಬೇಕೆಂದು ಬುದ್ಧಿಯು ಹೇಳುತ್ತದೆ. ವಿದ್ಯಾರ್ಥಿಗಳು ವಿದ್ಯಾರ್ಥಿಗಳನ್ನು ನೆನಪು ಮಾಡುವುದಿಲ್ಲ, ಶಿಕ್ಷಕರನ್ನು ನೆನಪು ಮಾಡುತ್ತಾರಲ್ಲವೆ. ಶಾಲೆಯಲ್ಲಿ ಯಾರು ತೀಕ್ಷ್ಣವಾದ ಮಕ್ಕಳಿರುತ್ತಾರೆಯೋ ಅವರು ಅನ್ಯರನ್ನು ಮೇಲೆತ್ತುವ ಪ್ರಯತ್ನ ಪಡುತ್ತಾರೆ. ತಂದೆಯು ತಿಳಿಸುತ್ತಾರೆ - ಒಬ್ಬರು ಇನ್ನೊಬ್ಬರನ್ನು ಮೇಲೆತ್ತುವ ಪ್ರಯತ್ನ ಪಡಿ ಆದರೆ ಅದೃಷ್ಟದಲ್ಲಿಲ್ಲವೆಂದರೆ ಪುರುಷಾರ್ಥವೂ ಮಾಡುವುದಿಲ್ಲ, ಸ್ವಲ್ಪದರಲ್ಲಿಯೇ ಖುಷಿಯಾಗಿ ಬಿಡುತ್ತಾರೆ. ಪ್ರದರ್ಶನಿಯಲ್ಲಿ ಅನೇಕರು ಬರುತ್ತಾರೆ, ಅನೇಕರಿಗೆ ತಿಳಿಸಿಕೊಡುವುದರಿಂದ ಬಹಳ ಉನ್ನತಿಯಾಗುತ್ತದೆ. ನಿಮಂತ್ರಣ ಕೊಟ್ಟು ಕರೆಸುತ್ತಾರೆ ಅಂದಾಗ ದೊಡ್ಡ-ದೊಡ್ಡ ಬುದ್ಧಿವಂತ ಮಕ್ಕಳು ಬರುತ್ತಾರೆ. ನಿಮಂತ್ರಣವಿಲ್ಲದೆ ಕೆಲವು ಪ್ರಕಾರದವರು ಬಂದು ಬಿಡುತ್ತಾರೆ. ಉಲ್ಟಾ-ಸುಲ್ಟಾ ಮಾತನಾಡುತ್ತಿರುತ್ತಾರೆ. ರಾಯಲ್ ವ್ಯಕ್ತಿಗಳ ಚಲನ-ವಲನೆಯು ಬಹಳ ರಾಯಲ್ ಆಗಿರುತ್ತದೆ. ರಾಯಲ್ ವ್ಯಕ್ತಿಗಳು ರಾಯಲ್ಟಿಯಿಂದಲೇ ಒಳಗೆ ಪ್ರವೇಶಿಸುತ್ತಾರೆ. ಚಲನೆಯಲ್ಲಿಯೂ ಬಹಳ ಅಂತರವಿರುತ್ತದೆ. ಅವರ ನಡೆಯುವ-ಮಾತನಾಡುವುದರಲ್ಲಿ ಶ್ರೇಷ್ಠತೆಯಿರುತ್ತದೆ. ಮೇಳದಲ್ಲಂತೂ ಎಲ್ಲಾ ಪ್ರಕಾರದವರು ಬಂದು ಬಿಡುತ್ತಾರೆ. ಯಾರನ್ನೂ ನಿರಾಕರಿಸುವಂತಿಲ್ಲ ಆದ್ದರಿಂದ ಎಲ್ಲಿಯಾದರೂ ಪ್ರದರ್ಶನಿಯಲ್ಲಿ ನಿಮಂತ್ರಣ ಪತ್ರವನ್ನು ಕೊಟ್ಟು ಕರೆಸುತ್ತೀರೆಂದರೆ ಒಳ್ಳೊಳ್ಳೆಯ ವ್ಯಕ್ತಿಗಳು ಬರುತ್ತಾರೆ ಮತ್ತು ಅವರು ಹೋಗಿ ಅನ್ಯರಿಗೆ ತಿಳಿಸುತ್ತಾರೆ. ಕೆಲವೊಮ್ಮೆ ಮಹಿಳೆಯರಿಗಾಗಿ ಕಾರ್ಯಕ್ರಮಗಳನ್ನಿಡಿ. ಕೇವಲ ಮಹಿಳೆಯರೇ ಬಂದು ನೋಡಲಿ ಏಕೆಂದರೆ ಕೆಲವೊಂದೆಡೆ ಸ್ತ್ರೀಯರು ಪರದೆಯ ಒಳಗೆ ಇರುತ್ತಾರೆ, ಆದ್ದರಿಂದ ಕೇವಲ ಮಹಿಳೆಯರಿಗೇ ಕಾರ್ಯಕ್ರಮಗಳನ್ನಿಡಿ, ಅಲ್ಲಿಗೆ ಪುರುಷರು ಯಾರೂ ಬರಬಾರದು ಆಗ ಆ ಪರದೆಯಲ್ಲಿನ ಮಹಿಳೆಯರು ನೋಡಲು ಬರುತ್ತಾರೆ. ತಂದೆಯು ತಿಳಿಸಿದ್ದಾರೆ ಮೊಟ್ಟ ಮೊದಲಿಗೆ ನೀವು ತಿಳಿಸಬೇಕಾಗಿದೆ ಶಿವ ತಂದೆಯು ನಿರಾಕಾರನಾಗಿದ್ದಾರೆ, ಶಿವ ತಂದೆ ಮತ್ತು ಪ್ರಜಾಪಿತ ಬ್ರಹ್ಮಾ ಇಬ್ಬರೂ ತಂದೆಯರಾದರು. ಆಸ್ತಿಯು ಸಿಗಲು ಇಬ್ಬರೂ ಏಕರಸವಾಗಿರುವುದಿಲ್ಲ. ಆಸ್ತಿಯು ತಾತನಿಂದ ಅಥವಾ ತಂದೆಯಿಂದ ಸಿಗುತ್ತದೆ. ತಾತನ ಆಸ್ತಿಯ ಮೇಲೆ ಅಧಿಕಾರವಿರುತ್ತದೆ. ಭಲೆ ಎಂತಹ ಕುಪುತ್ರ ಮಗುವಾಗಿದ್ದರೂ ಸಹ ತಾತನ ಆಸ್ತಿಯು ಸಿಕ್ಕಿ ಬಿಡುವುದು. ಇದು ಇಲ್ಲಿಯ ನಿಯಮವಾಗಿದೆ. ಇವರಿಗೆ ಹಣ ಸಿಕ್ಕಿದರೆ ಒಂದು ವರ್ಷದಲ್ಲಿ ಹಾರಿಸಿ ಬಿಡುತ್ತಾರೆ ಎಂಬುದೂ ತಿಳಿದಿದೆ ಆದರೆ ಸರ್ಕಾರದ ನಿಯಮವೇ ಈ ರೀತಿಯಿದೆ ಅಂದಾಗ ಕೊಡಲೇಬೇಕಾಗುತ್ತದೆ. ಸರ್ಕಾರವು ಏನೂ ಮಾಡಲು ಸಾಧ್ಯವಿಲ್ಲ, ಬಾಬಾರವರು ಅನುಭವಿಯಾಗಿದ್ದಾರೆ. ಒಬ್ಬ ರಾಜನ ಮಗನಿದ್ದರು, ಒಂದು ಕೋಟಿ ರೂಪಾಯಿಗಳನ್ನು 12 ತಿಂಗಳಿನಲ್ಲಿಯೇ ಸಮಾಪ್ತಿ ಮಾಡಿ ಬಿಟ್ಟರು, ಇಂತಹವರೂ ಇರುತ್ತಾರೆ. ನಾನು ನೋಡಿದ್ದೇನೆಂದು ಶಿವ ತಂದೆಯು ಹೇಳುವುದಿಲ್ಲ. ನಾನು (ಬ್ರಹ್ಮಾ) ಇಂತಹ ಬಹಳಷ್ಟು ದೃಷ್ಟಾಂತಗಳನ್ನು ನೋಡಿದ್ದೇನೆ, ಇದು ಬಹಳ ಕೊಳಕು ಪ್ರಪಂಚವಾಗಿದೆ ಎಂದು ಈ ಬ್ರಹ್ಮಾರವರೇ ಹೇಳುತ್ತಾರೆ. ಇದು ಹಳೆಯ ಪ್ರಪಂಚ, ಹಳೆಯ ಮನೆಯಾಗಿದೆ. ಯಾವಾಗಲೂ ಹಳೆಯ ಮನೆಯನ್ನು ಬೀಳಿಸಲಾಗುತ್ತದೆ. ಈ ಲಕ್ಷ್ಮಿ-ನಾರಾಯಣರ ರಾಜಧಾನಿಯು ನೋಡಿ, ಎಷ್ಟು ಸುಂದರವಾಗಿದೆ!

ಈಗ ನೀವು ತಂದೆಯ ಮೂಲಕ ಅರಿತುಕೊಳ್ಳುತ್ತಿದ್ದೀರಿ ಮತ್ತು ನೀವೂ ನರನಿಂದ ನಾರಯಣನಾಗುತ್ತೀರಿ. ಇದು ಸತ್ಯನಾರಾಯಣನ ಕಥೆಯಾಗಿದೆ. ಇದನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ನಿಮ್ಮಲ್ಲಿಯೂ ಯಾರು ಸಂಪೂರ್ಣ ಹೂಗಳಾಗಿಲ್ಲ. ಇದರಲ್ಲಿ ಘನತೆಯು ಬಹಳ ಚೆನ್ನಾಗಿರಬೇಕು. ನೀವು ದಿನ-ಪ್ರತಿದಿನ ಉನ್ನತಿ ಹೊಂದುತ್ತಾ ಇರುತ್ತೀರಿ, ಹೂಗಳಾಗುತ್ತಾ ಹೋಗುತ್ತೀರಿ.

ನೀವು ಮಕ್ಕಳು ಬಾಪ್ದಾದಾ ಎಂದು ಪ್ರೀತಿಯಿಂದ ಹೇಳುತ್ತೀರಿ. ಇದೂ ಸಹ ನಿಮ್ಮ ಹೊಸ ಭಾಷೆಯಾಗಿದೆ. ಇದು ಮನುಷ್ಯರಿಗೆ ಅರ್ಥವಾಗುವುದಿಲ್ಲ. ತಿಳಿದುಕೊಳ್ಳಿ, ಬಾಬಾರವರು ಎಲ್ಲಿಯೇ ಹೋದರೂ ಸಹ ಬಾಪ್ದಾದಾ ನಮಸ್ತೆ ಎಂದು ಹೇಳುತ್ತಾರೆ, ಸಾಕಾರ ಆತ್ಮೀಯ ಮಕ್ಕಳೇ ನಮಸ್ತೆ ಎಂದು ತಂದೆಯು ಪ್ರತ್ಯುತ್ತರ ಹೇಳುತ್ತಾರೆ. ಹೀಗೆ ಹೇಳಬೇಕಾಗುತ್ತದೆಯಲ್ಲವೆ. ಯಾರಾದರೂ ಕೇಳಿದರೆ ಇವರದೇನು ಹೊಸ ಮಾತಾಗಿದೆ, ಬಾಪ್ದಾದಾ ಇಬ್ಬರೂ ಒಟ್ಟಿಗೆ ಇದ್ದಾರೆಂದು ಹೇಗೆ ಹೇಳುತ್ತಾರೆಂದುಕೊಳ್ಳುತ್ತಾರೆ. ತಂದೆ ಮತ್ತು ದಾದಾ ಇಬ್ಬರೂ ಎಂದಾದರೂ ಒಂದೇ ಆಗಲು ಸಾಧ್ಯವೆ? ಇಬ್ಬರ ಹೆಸರುಗಳೂ ಸಹ ಬೇರೆಯಾಗಿದೆ. ಶಿವ ತಂದೆ, ಬ್ರಹ್ಮಾಬಾಬಾ. ನೀವು ಇವರಿಬ್ಬರ ಮಕ್ಕಳಾಗಿದ್ದೀರಿ. ನಿಮಗೆ ತಿಳಿದಿದೆ - ಇವರಲ್ಲಿ ಶಿವ ತಂದೆಯು ಕುಳಿತಿದ್ದಾರೆ. ನಾವು ಬಾಪ್ದಾದಾರವರ ಮಕ್ಕಳಾಗಿದ್ದೇವೆ ಎಂಬುದು ಬುದ್ಧಿಯಲ್ಲಿದ್ದರೂ ಸಹ ಖುಷಿಯ ನಶೆಯೇರುವುದು ಮತ್ತು ನಾಟಕದ ಮೇಲೆ ಪಕ್ಕಾ ಇರಬೇಕಾಗಿದೆ. ಒಂದುವೇಳೆ ಯಾರೋ ಶರೀರಬಿಟ್ಟರೆಂದು ತಿಳಿದುಕೊಳ್ಳಿ, ಅವರು ಇನ್ನೊಂದು ಪಾತ್ರವನ್ನಭಿನಯಿಸುತ್ತಾರೆ. ಪ್ರತಿಯೊಂದು ಆತ್ಮಕ್ಕೆ ಅವಿನಾಶಿ ಪಾತ್ರವು ಸಿಕ್ಕಿದೆ, ಇದರಲ್ಲಿ ಏನೂ ವಿಚಾರ ಮಾಡುವ ಅವಶ್ಯಕತೆಯಿಲ್ಲ. ಅವರು ಹೋಗಿ ಇನ್ನೊಂದು ಪಾತ್ರವನ್ನಭಿನಯಿಸಲೇಬೇಕಾಗಿದೆ. ಅವರನ್ನು ಮತ್ತೆ ಕರೆಸಲು ಸಾಧ್ಯವಿಲ್ಲ. ನಾಟಕವಾಗಿದೆಯಲ್ಲವೆ! ಇದರಲ್ಲಿ ಯಾವುದೇ ಅಳುವ ಮಾತಿಲ್ಲ. ಈ ಸ್ಥಿತಿಯುಳ್ಳವರೇ ಹೋಗಿ ನಿರ್ಮೋಹಿ ರಾಜರಾಗುತ್ತಾರೆ. ಸತ್ಯಯುಗದಲ್ಲಿ ಹೋಗಿ ಎಲ್ಲರೂ ರಾಜರಾಗುತ್ತಾರೆ. ಇಲ್ಲಿ ಯಾರಾದರೂ ಶರೀರ ಬಿಟ್ಟರೆ ಎಷ್ಟೊಂದು ಅಳುತ್ತಾರೆ. ತಂದೆಯನ್ನು ಪಡೆದಕೊಂಡಮೇಲೆ ಅಳುವ ಅವಶ್ಯಕತೆಯಾದರೂ ಏನು? ತಂದೆಯು ಎಷ್ಟು ಒಳ್ಳೆಯ ಮಾತನ್ನು ತಿಳಿಸುತ್ತಾರೆ. ಕನ್ಯೆಯರಿಗೆ ಇದು ಬಹಳ ಸಹಜವಾಗಿದೆ. ತಂದೆಯು ವ್ಯರ್ಥವಾಗಿ ಖರ್ಚು ಮಾಡಲಿ ಮತ್ತು ನೀವು ಹೋಗಿ ನರಕದಲ್ಲಿ ಬೀಳಿರಿ ಎಂದಲ್ಲ. ಇದಕ್ಕಿಂತಲೂ ನಾವು ಈ ಹಣದಿಂದ ಆತ್ಮೀಯ ಯುನಿವರ್ಸಿಟಿಯಿಂದ ಕೂಡಿದ ಆಸ್ಪತ್ರೆಯನ್ನು ತೆರೆಯಿರಿ ಎಂದು ಹೇಳುತ್ತೇವೆ, ಅನೇಕರ ಕಲ್ಯಾಣವಾಗುತ್ತದೆಯೆಂದರೆ ನಿಮ್ಮದೂ ಪುಣ್ಯವಾಗುವುದು, ನಮ್ಮದೂ ಪುಣ್ಯವಾಗುವುದು ಎಂದು ಹೇಳಿ. ಮಕ್ಕಳೂ ಸಹ ಉತ್ಸಾಹದಲ್ಲಿರುವಂತವರಾಗಿರಬೇಕು - ನಾವು ಭಾರತವನ್ನು ಸ್ವರ್ಗವನ್ನಾಗಿ ಮಾಡಲು ತನು-ಮನ-ಧನವೆಲ್ಲವನ್ನೂ ಖರ್ಚು ಮಾಡುತ್ತೇವೆ. ಇಷ್ಟೊಂದು ನಶೆಯಿರಬೇಕು. ಕೊಡುವುದಿದ್ದರೆ ಕೊಡಿ ಇಲ್ಲವೆಂದರೆ ಬೇಡ. ನೀವು ತಮ್ಮ ಕಲ್ಯಾಣ ಮತ್ತು ಅನೇಕರ ಕಲ್ಯಾಣ ಮಾಡಲು ಬಯಸುವುದಿಲ್ಲವೆ? ಇಷ್ಟೊಂದು ಮಸ್ತಿಯಿರಬೇಕು. ಅದರಲ್ಲಿಯೂ ವಿಶೇಷವಾಗಿ ಕುಮಾರಿಯರಂತೂ ಬಹಳ ಎದ್ದು ನಿಲ್ಲಬೇಕು. ಒಳ್ಳೆಯದು,

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಮ್ಮ ಚಲನ-ವಲನವು ಬಹಳ ಘನತೆಯಿಂದಿರಬೇಕಾಗಿದೆ. ಬಹಳ ಘನತೆಯಿಂದ ಮಾತನಾಡಬೇಕಾಗಿದೆ. ನಮ್ರತೆಯ ಗುಣವನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ.

2. ಈ ಕಣ್ಣುಗಳಿಂದ ಏನೆಲ್ಲವೂ ಕಾಣುತ್ತಿದೆಯೋ ಇದೆಲ್ಲವೂ ಸ್ಮಶಾನವಾಗಲಿದೆ ಆದ್ದರಿಂದ ಇದನ್ನು ನೋಡಿಯೂ ನೋಡದಂತಿರಬೇಕು, ಒಬ್ಬ ಶಿವ ತಂದೆಯನ್ನೇ ನೆನಪು ಮಾಡಬೇಕು, ಯಾವುದೇ ದೇಹಧಾರಿಯನ್ನಲ್ಲ.

ವರದಾನ:
ವಿಶೇಷತಾರೂಪಿ ಸಂಜೀವನಿ ಭೂಟಿಯ ಮೂಲಕ ಮೂರ್ಚಿತರನ್ನು ಸೂರ್ಜಿತರನ್ನಾಗಿ ಮಾಡುವಂತಹ ವಿಶೇಷ ಆತ್ಮ ಭವ.

ಪ್ರತಿಯೊಬ್ಬ ಆತ್ಮನಿಗೆ ಶ್ರೇಷ್ಠ ಸ್ಮೃತಿಯ, ವಿಶೇಷತೆಗಳ ಸ್ಮೃತಿರೂಪಿ ಸಂಜೀವನಿ ಭೂಟಿಯನ್ನು ತಿನ್ನಿಸಿದಾಗ ಅವರು ಮೂರ್ಚಿತರಿಂದ ಸುರ್ಜಿತರಾಗಿ ಬಿಡುವರು. ವಿಶೇಷತೆಗಳ ಸ್ವರೂಪದ ದರ್ಪಣವನ್ನು ಅವರ ಎದುರಿಗೆ ಇಡಿ. ಬೇರೆಯವರಿಗೆ ಸ್ಮೃತಿ ತರಿಸುವುದರಿಂದ ನೀವು ವಿಶೇಷ ಆತ್ಮ ಆಗಿ ಬಿಡುವಿರಿ. ಒಂದುವೇಳೆ ನೀವು ಯಾರಿಗಾದರೂ ಅವರ ಬಲಹೀನತೆಯನ್ನು ತಿಳಿಸಿದಾಗ ಅವರು ಮುಚ್ಚಿಡುತ್ತಾರೆ, ತಳ್ಳಿಹಾಕುತ್ತಾರೆ, ನೀವು ವಿಶೇಷತೆಯನ್ನು ತಿಳಿಸಿದಾಗ ಅವರು ಸ್ವಯಂ ಅವರ ಬಲಹೀನತೆಗಳನ್ನು ಸ್ಪಷ್ಟವಾಗಿ ಅನುಭವ ಮಾಡುತ್ತಾರೆ. ಇದೇ ಸಂಜೀವನಿ ಭೂಟಿಯಿಂದ ಮೂರ್ಚಿತರನ್ನು ಸೂರ್ಜಿತರನ್ನಾಗಿ ಮಾಡಿ ಹಾರುತ್ತಾ ಮತ್ತು ಹಾರಿಸುತ್ತಾ ಹೋಗಿ.

ಸ್ಲೋಗನ್:
(ನಾಮ್-ಮಾನ್-ಷಾನ್) ಹೆಸರು-ಮಾನ್ಯತೆ-ಘನತೆ ಹಾಗೂ ಸಂಬಂಧಗಳನ್ನು ಸಂಕಲ್ಪದಲ್ಲಿ ಸಹ ತ್ಯಾಗ ಮಾಡುವುದೆ ಮಹಾನ್ ತ್ಯಾಗವಾಗಿದೆ.