01/02/21 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ


"ಮಧುರ ಮಕ್ಕಳೇ – ಬಡವರ ಬಂಧು ತಂದೆ ನಮ್ಮನ್ನು ಕವಡೆಯಿಂದ ವಜ್ರ ಸಮಾನರನ್ನಾಗಿ ಮಾಡಲು ಬಂದಿದ್ದಾರೆ ಅಂದಾಗ ನೀವು ಸದಾ ಅವರ ಶ್ರೀಮತದಂತೆ ನಡೆಯಿರಿ”

ಪ್ರಶ್ನೆ:

ಮೊಟ್ಟ ಮೊದಲು ನೀವು ಎಲ್ಲರಿಗೆ ಯಾವ ಒಂದು ಗುಹ್ಯ ರಹಸ್ಯವನ್ನು ತಿಳಿಸಬೇಕು?

ಉತ್ತರ:

"ಬಾಪ್-ದಾದಾ” ರವರ ಗುಹ್ಯ ರಹಸ್ಯವನ್ನು ತಿಳಿಸಬೇಕು. ನಿಮಗೆ ತಿಳಿದಿದೆ - ನಾವಿಲ್ಲಿ ಬಾಪ್-ದಾದಾರವರ ಬಳಿ ಬಂದಿದ್ದೇವೆ, ಇವರಿಬ್ಬರೂ ಒಟ್ಟಿಗೆ ಇದ್ದಾರೆ, ಶಿವನ ಆತ್ಮವೂ ಇವರಲ್ಲಿದೆ. ಬ್ರಹ್ಮನ ಆತ್ಮವೂ ಇದೆ. ಒಬ್ಬರು ಆತ್ಮನಾಗಿದ್ದಾರೆ, ಇನ್ನೊಬ್ಬರು ಪರಮ ಆತ್ಮನಾಗಿದ್ದಾರೆ ಅಂದಾಗ ಮೊಟ್ಟ ಮೊದಲು ಈ ಗುಹ್ಯ ರಹಸ್ಯವನ್ನು ಎಲ್ಲರಿಗೆ ತಿಳಿಸಿ - ಈ ಬಾಪ್ದಾದಾ ಒಟ್ಟಿಗೆ ಇದ್ದಾರೆ, ಈ ದಾದಾರವರು ಭಗವಂತನಲ್ಲ. ಮನುಷ್ಯರು ಭಗವಂತನಾಗುವುದಿಲ್ಲ. ನಿರಾಕಾರನಿಗೇ ಭಗವಂತನೆಂದು ಹೇಳಲಾಗುತ್ತದೆ. ಆ ತಂದೆಯು ಶಾಂತಿಧಾಮದ ನಿವಾಸಿಯಾಗಿದ್ದಾರೆ.

ಗೀತೆ:

ಕೊನೆಗೂ ಆ ದಿನ ಇಂದು ಬಂದಿತು................

ಓಂ ಶಾಂತಿ. ತಂದೆಯು ದಾದಾರವರ ಮೂಲಕ ಅರ್ಥಾತ್ ಶಿವ ತಂದೆಯು ಬ್ರಹ್ಮಾದಾದಾರವರ ಮೂಲಕ ತಿಳಿಸುತ್ತಾರೆ, ಇದನ್ನು ಪಕ್ಕಾ ಮಾಡಿಕೊಳ್ಳಿ. ಲೌಕಿಕ ಸಂಬಂಧದಲ್ಲಿ ತಂದೆಯೇ ಬೇರೆ, ದಾದಾರವರೇ ಬೇರೆಯಿರುತ್ತಾರೆ. ತಂದೆಯಿಂದ ದಾದಾ (ತಾತ) ರವರ ಆಸ್ತಿಯು ಸಿಗುತ್ತದೆ. ತಾತನ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆಂದು ಹೇಳುತ್ತಾರೆ. ಅವರು ಬಡವರ ಬಂಧು ಆಗಿದ್ದಾರೆ. ಯಾರು ಬಂದು ಬಡವರನ್ನು ಕಿರೀಟಧಾರಿಗಳನ್ನಾಗಿ ಮಾಡುವರೋ ಅವರಿಗೇ ಬಡವರ ಬಂಧು ಎಂದು ಹೇಳಲಾಗುತ್ತದೆ. ಅಂದಾಗ ಮೊಟ್ಟ ಮೊದಲು ಪಕ್ಕಾ ನಿಶ್ಚಯವಿರಬೇಕು - ಇವರು ಯಾರು? ನೋಡಲು ಸಾಕಾರ ಮನುಷ್ಯನಾಗಿದ್ದಾರೆ, ಇವರನ್ನು ಎಲ್ಲರೂ ಬ್ರಹ್ಮಾ ಎಂದು ಹೇಳುತ್ತಾರೆ. ನೀವೆಲ್ಲರೂ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ. ನಮಗೆ ಶಿವ ತಂದೆಯಿಂದ ಆಸ್ತಿಯು ಸಿಗುತ್ತದೆ ಎಂಬುದನ್ನು ತಿಳಿದುಕೊಂಡಿದ್ದೀರಿ. ಆ ಎಲ್ಲರ ತಂದೆಯು ಆಸ್ತಿಯನ್ನು ಕೊಡುವುದಕ್ಕಾಗಿ ಬಂದಿದ್ದಾರೆ. ತಂದೆಯು ಸುಖದ ಆಸ್ತಿಯನ್ನು ಕೊಡುತ್ತಾರೆ ಮತ್ತೆ ಅರ್ಧಕಲ್ಪದ ನಂತರ ರಾವಣನು ದುಃಖದ ಶಾಪವನ್ನು ಕೊಡುತ್ತಾನೆ. ಭಕ್ತಿಮಾರ್ಗದಲ್ಲಿ ಭಗವಂತನನ್ನು ಹುಡುಕುವುದಕ್ಕಾಗಿ ಅಲೆದಾಡುತ್ತಾರೆ, ಯಾರಿಗೂ ಸಿಗುವುದಿಲ್ಲ. ನೀವೇ ಮಾತಾಪಿತಾ.... ಎಂದು ಭಾರತವಾಸಿಗಳು ಹಾಡುತ್ತಾರೆ. ಮತ್ತೆ ಇದನ್ನೂ ಹೇಳುತ್ತಾರೆ - ಬಾಬಾ, ತಾವು ಬಂದರೆ ನಮ್ಮವರು ನಿಮ್ಮ ಹೊರತು ಬೇರೆ ಯಾರೂ ಇಲ್ಲ, ಮತ್ತ್ಯಾರ ಜೊತೆಯಲ್ಲಿಯೂ ನಾವು ಮಮತೆಯನ್ನಿಟ್ಟುಕೊಳ್ಳುವುದಿಲ್ಲ. ನನ್ನವರು ಒಬ್ಬ ಶಿವ ತಂದೆಯಾಗಿದ್ದಾರೆ. ಮಕ್ಕಳಿಗೆ ತಿಳಿದಿದೆ - ಈ ತಂದೆಯು ಬಡವರ ಬಂಧುವಾಗಿದ್ದಾರೆ. ಬಡವರನ್ನು ಸಾಹುಕಾರರನ್ನಾಗಿ ಮಾಡುತ್ತಾರೆ. ಕವಡೆಯಂತಿರುವವರನ್ನು ವಜ್ರ ಸಮಾನರನ್ನಾಗಿ ಮಾಡುತ್ತಾರೆ ಅರ್ಥಾತ್ ಕಲಿಯುಗೀ ಪತಿತ ಕಂಗಾಲರಿಂದ ಸತ್ಯಯುಗೀ ಕಿರೀಟಧಾರಿಗಳನ್ನಾಗಿ ಮಾಡಲು ತಂದೆಯು ಬಂದಿದ್ದಾರೆ. ಇಲ್ಲಿ ನಾವು ಬಾಪ್ದಾದಾರವರ ಬಳಿ ಬಂದಿದ್ದೇವೆ, ಇವರಿಬ್ಬರೂ ಒಟ್ಟಿಗೆ ಇದ್ದಾರೆ. ಶಿವನ ಆತ್ಮವು ಇವರಲ್ಲಿದೆ, ಬ್ರಹ್ಮನ ಆತ್ಮವೂ ಇದೆ ಅಂದಮೇಲೆ ಇಬ್ಬರಾದರಲ್ಲವೆ. ಒಬ್ಬರು ಆತ್ಮ, ಇನ್ನೊಬ್ಬರು ಪರಮ ಆತ್ಮನಾಗಿದ್ದಾರೆ. ನೀವೆಲ್ಲರೂ ಆತ್ಮರಾಗಿದ್ದೀರಿ. ಆತ್ಮಗಳು ಪರಮಾತ್ಮನಿಂದ ಬಹುಕಾಲ ಅಗಲಿದ್ದರೆಂದು ಗಾಯನ ಮಾಡಲಾಗುತ್ತದೆ. ಮೊಟ್ಟ ಮೊದಲನೆಯದಾಗಿ ಮಿಲನ ಮಾಡುವವರು ನೀವಾತ್ಮರಾಗಿದ್ದೀರಿ ಅರ್ಥಾತ್ ನೀವಾತ್ಮರು ಪರಮಾತ್ಮ ತಂದೆಯೊಂದಿಗೆ ಮಿಲನ ಮಾಡುತ್ತೀರಿ! ಆ ತಂದೆಯನ್ನೇ ಓ ಗಾಡ್ಫಾದರ್ ಎಂದು ಕರೆಯುತ್ತಾರೆ. ನೀವು ಅವರ ಮಕ್ಕಳಾಗಿದ್ದೀರಿ ಅಂದಮೇಲೆ ಆಸ್ತಿಯು ಅವಶ್ಯವಾಗಿ ಸಿಗುತ್ತದೆ. ತಂದೆಯು ತಿಳಿಸುತ್ತಾರೆ - ಯಾವ ಭಾರತವು ಕಿರೀಟಧಾರಿಯಾಗಿತ್ತೋ ಅದು ಈಗ ಎಷ್ಟೊಂದು ಕಂಗಾಲಾಗಿದೆ. ಈಗ ನಾನು ಪುನಃ ನೀವು ಮಕ್ಕಳನ್ನು ಕಿರೀಟಧಾರಿಗಳನ್ನಾಗಿ ಮಾಡಲು ಬಂದಿದ್ದೇನೆ. ನೀವು ಡಬ್ಬಲ್ ಕಿರೀಟಧಾರಿಗಳಾಗುತ್ತೀರಿ. ಒಂದು ಪವಿತ್ರತೆಯ ಕಿರೀಟವಾಗಿದೆ, ಅದರಲ್ಲಿ ಪ್ರಕಾಶತೆಯನ್ನು ತೋರಿಸುತ್ತಾರೆ, ಇನ್ನೊಂದು ರತ್ನ ಜಡಿತ ಕಿರೀಟವಾಗಿದೆ. ಅಂದಾಗ ಮೊಟ್ಟ ಮೊದಲು ಈ ಗುಹ್ಯ ರಹಸ್ಯವನ್ನು ಎಲ್ಲರಿಗೆ ತಿಳಿಸಬೇಕಾಗಿದೆ - ಈ ಬಾಪ್ದಾದಾ ಒಟ್ಟಿಗೆ ಇದ್ದಾರೆ, ಈ ಬ್ರಹ್ಮಾರವರು ಭಗವಂತನಲ್ಲ, ಮನುಷ್ಯರು ಭಗವಂತನಾಗುವುದಿಲ್ಲ. ನಿರಾಕಾರನಿಗೇ ಭಗವಂತನೆಂದು ಹೇಳಲಾಗುತ್ತದೆ. ಅವರು ಶಾಂತಿಧಾಮದ ನಿವಾಸಿಯಾಗಿದ್ದಾರೆ. ನೀವಾತ್ಮರೂ ಸಹ ಅಲ್ಲಿಯೇ ಇರುತ್ತೀರಿ, ಅದಕ್ಕೆ ನಿರ್ವಾಣಧಾಮ ಅಥವಾ ವಾನಪ್ರಸ್ಥವೆಂದು ಹೇಳಲಾಗುತ್ತದೆ ನಂತರ ನೀವಾತ್ಮರು ಶರೀರ ಧಾರಣೆ ಮಾಡಿ ಇಲ್ಲಿ ಪಾತ್ರವನ್ನಭಿನಯಿಸುತ್ತೀರಿ. ಅರ್ಧಕಲ್ಪ ಸುಖದ ಪಾತ್ರ, ಇನ್ನರ್ಧಕಲ್ಪ ದುಃಖದ ಪಾತ್ರವಿದೆ. ಯಾವಾಗ ದುಃಖದ ಅಂತ್ಯವಾಗುವುದೋ ಆಗ ನಾನು ಬರುತ್ತೇನೆಂದು ತಂದೆಯು ತಿಳಿಸುತ್ತಾರೆ. ಈ ನಾಟಕವು ಮಾಡಲ್ಪಟ್ಟಿದೆ, ತಂದೆಯು ಮುರುಳಿಯಲ್ಲಿ ಈ ನಾಟಕದ ಬಗ್ಗೆ ಚೆನ್ನಾಗಿ ತಿಳಿಸಿದ್ದಾರೆ. ಆ ಮುರುಳಿಯನ್ನು ಮಕ್ಕಳು ಓದಬೇಕು. ನೀವಿಲ್ಲಿ ಭಟ್ಟಿಗಾಗಿ ಬರುತ್ತೀರಿ, ಅಂದಮೇಲೆ ಇಲ್ಲಿ ಮತ್ತೇನೂ ಹೊರಗಿನ ನೆನಪು ಬರಬಾರದು. ಇಲ್ಲಿರುವುದೇ ಮಾತಾಪಿತಾ ಮತ್ತು ಮಕ್ಕಳು ಇಲ್ಲಿ ಯಾರೂ ಶೂದ್ರ ಸಂಪ್ರದಾಯದವರಿಲ್ಲ, ಯಾರು ಬ್ರಾಹ್ಮಣರಲ್ಲವೋ ಅವರನ್ನು ಶೂದ್ರರೆಂದು ಹೇಳುವರು. ಇಲ್ಲಿ ಅವರ ಸಂಗವೇ ಇಲ್ಲ. ಇಲ್ಲಿರುವುದೇ ಬ್ರಾಹ್ಮಣರ ಸಂಗ, ಬ್ರಾಹ್ಮಣ ಮಕ್ಕಳಿಗೆ ತಿಳಿದಿದೆ – ಶಿವ ತಂದೆಯು ಬ್ರಹ್ಮಾರವರ ಮೂಲಕ ನಮ್ಮನ್ನು ನರಕದಿಂದ ಸ್ವರ್ಗದ ರಾಜಧಾನಿಯ ಮಾಲೀಕರನ್ನಾಗಿ ಮಾಡಲು ಬಂದಿದ್ದಾರೆ. ನಾವೀಗ ಮಾಲೀಕರಲ್ಲ ಏಕೆಂದರೆ ನಾವು ಪತಿತರಾಗಿದ್ದೇವೆ. ನಾವೇ ಪಾವನರಾಗಿದ್ದೆವು, ನಂತರ 84 ಜನ್ಮಗಳ ಚಕ್ರವನ್ನು ಸುತ್ತಿ ಸತೋ, ರಜೋ, ತಮೋದಲ್ಲಿ ಬಂದಿದ್ದೇವೆ. ಏಣಿ ಚಿತ್ರದಲ್ಲಿ 84 ಜನ್ಮಗಳ ಲೆಕ್ಕವನ್ನು ಬರೆಯಲಾಗಿದೆ. ತಂದೆಯು ಇದನ್ನು ಮಕ್ಕಳಿಗೆ ತಿಳಿಸುತ್ತಾರೆ. ಯಾವ ಮಕ್ಕಳೊಂದಿಗೆ ಮೊಟ್ಟ ಮೊದಲು ಮಿಲನ ಮಾಡುವರೋ ಅವರೇ ಮತ್ತೆ ಸತ್ಯಯುಗದಲ್ಲಿ ಮೊಟ್ಟ ಮೊದಲಿಗೆ ಬರಬೇಕಾಗಿದೆ. ನೀವು 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ಈ ರಚಯಿತ ಮತ್ತು ರಚನೆಯ ಸಂಪೂರ್ಣ ಜ್ಞಾನವು ಒಬ್ಬ ತಂದೆಯ ಬಳಿಯೇ ಇದೆ. ಅವರೇ ಮನುಷ್ಯ ಸೃಷ್ಟಿಯ ಬೀಜ ರೂಪನಾಗಿದ್ದಾರೆ ಅಂದಮೇಲೆ ಈ ವೃಕ್ಷದ ಉತ್ಪತ್ತಿ, ಪಾಲನೆ ಮತ್ತು ವಿನಾಶವು ಹೇಗಾಗುತ್ತದೆ ಎಂಬ ಜ್ಞಾನವು ಅವಶ್ಯವಾಗಿ ಬೀಜದಲ್ಲಿಯೇ ಇರುತ್ತದೆ. ಇದನ್ನು ತಂದೆಯೇ ತಿಳಿಸುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ - ನಾವೀಗ ಭಾರತವಾಸಿಗಳು ಬಡವರಾಗಿದ್ದೇವೆ. ದೇವಿ-ದೇವತೆಗಳಾಗಿದ್ದಾಗ ಎಷ್ಟು ಸಾಹುಕಾರರಾಗಿದ್ದೆವು, ವಜ್ರಗಳಿಂದ ಆಟವಾಡುತ್ತಿದ್ದೆವು, ವಜ್ರಗಳ ಮಹಲುಗಳಲ್ಲಿದ್ದೆವು, ನೀವು ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ ಎಂದು ತಂದೆಯು ಈಗ ಸ್ಮೃತಿ ತರಿಸುತ್ತಾರೆ. ಹೇ ಪತಿತ-ಪಾವನ, ಬಡವರ ಬಂಧು ತಂದೆಯೇ ಬನ್ನಿ, ನಾವು ಬಡವರನ್ನು ಪುನಃ ಸ್ವರ್ಗದ ಮಾಲೀಕರನ್ನಾಗಿ ಮಾಡಿ ಎಂದು ಕರೆಯುತ್ತಾರೆ. ಸ್ವರ್ಗದಲ್ಲಿ ಅಪಾರ ಸುಖವಿತ್ತು, ಈಗ ಅಪಾರ ದುಃಖವಿದೆ. ಮಕ್ಕಳಿಗೆ ತಿಳಿದಿದೆ - ಈ ಸಮಯದಲ್ಲಿ ಎಲ್ಲರೂ ಸಂಪೂರ್ಣ ಪತಿತರಾಗಿ ಬಿಟ್ಟಿದ್ದಾರೆ, ಈಗ ಕಲಿಯುಗದ ಅಂತ್ಯವಾಗಿದೆ ನಂತರ ಸತ್ಯಯುಗ ಬೇಕು. ಮೊದಲು ಭಾರತದಲ್ಲಿ ಒಂದು ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು, ಅದು ಈಗ ಪ್ರಾಯಃಲೋಪವಾಗಿ ಬಿಟ್ಟಿದೆ ಮತ್ತು ಎಲ್ಲರೂ ತಮ್ಮನ್ನು ಹಿಂದೂಗಳೆಂದು ಕರೆಸಿಕೊಳ್ಳುತ್ತಾರೆ. ಈ ಸಮಯದಲ್ಲಿ ಕ್ರಿಶ್ಚಿಯನ್ನರು ಬಹಳ ಮಂದಿ ಆಗಿ ಬಿಟ್ಟಿದ್ದಾರೆ ಏಕೆಂದರೆ ಹಿಂದೂ ಧರ್ಮದವರು ಅನೇಕರು ಹೋಗಿ ಆ ಧರ್ಮವನ್ನು ಸೇರಿದ್ದಾರೆ. ನೀವು ದೇವಿ-ದೇವತೆಗಳ ಕರ್ಮವು ಮೂಲತಃ ಶ್ರೇಷ್ಠವಾಗಿತ್ತು, ನೀವು ಪವಿತ್ರ ಪ್ರವೃತ್ತಿ ಮಾರ್ಗದವರಾಗಿದ್ದಿರಿ, ಈಗ ರಾವಣ ರಾಜ್ಯದಲ್ಲಿ ಪತಿತ ಪ್ರವೃತ್ತಿ ಮಾರ್ಗದವರು ಆಗಿ ಬಿಟ್ಟಿದ್ದೀರಿ ಆದ್ದರಿಂದ ದುಃಖಿಯಾಗಿದ್ದೀರಿ. ಸತ್ಯಯುಗಕ್ಕೆ ಶಿವಾಲಯವೆಂದು ಹೇಳಲಾಗುತ್ತದೆ, ಅದು ಶಿವ ತಂದೆಯಿಂದ ಸ್ಥಾಪನೆ ಮಾಡಲ್ಪಟ್ಟಿರುವ ಸ್ವರ್ಗವಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಬಂದು ನೀವು ಮಕ್ಕಳನ್ನು ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡಿ ನಿಮಗೆ ಸೂರ್ಯವಂಶಿ, ಚಂದ್ರವಂಶಿ ರಾಜಧಾನಿಯ ಆಸ್ತಿಯನ್ನು ಕೊಡುತ್ತೇನೆ. ಇವರು ಬಾಪ್ದಾದಾ ಆಗಿದ್ದಾರೆ, ಇವರನ್ನು ಮರೆಯಬೇಡಿ. ಶಿವ ತಂದೆಯು ಬ್ರಹ್ಮಾರವರ ಮೂಲಕ ನಮ್ಮನ್ನು ಸ್ವರ್ಗಕ್ಕೆ ಯೋಗ್ಯರನ್ನಾಗಿ ಮಾಡುತ್ತಿದ್ದಾರೆ ಏಕೆಂದರೆ ಪತಿತ ಆತ್ಮವು ಪಾವನವಾಗುವವರೆಗೆ ಮುಕ್ತಿಧಾಮಕ್ಕೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ ನಾನು ಬಂದು ನಿಮಗೆ ಪಾವನರಾಗುವ ಮಾರ್ಗವನ್ನು ತಿಳಿಸುತ್ತೇನೆ. ನಾನು ನಿಮ್ಮನ್ನು ಪದಮಾಪತಿಗಳು, ಸ್ವರ್ಗದ ಮಾಲೀಕರನ್ನಾಗಿ ಮಾಡಿ ಹೋಗಿದ್ದೆನು. ನಿಮಗೆ ಸ್ಮೃತಿ ಬಂದಿದೆ - ಖಂಡಿತವಾಗಿಯೂ ನಾವು ಸ್ವರ್ಗದ ಮಾಲೀಕರಾಗಿದ್ದೆವು, ಆ ಸಮಯದಲ್ಲಿ ನಾವು ಬಹಳ ಕೆಲವರೇ ಇದ್ದೆವು, ಈಗಂತೂ ಎಷ್ಟೊಂದು ಜನಸಂಖ್ಯೆಯಾಗಿ ಬಿಟ್ಟಿದೆ. ಸತ್ಯಯುಗದಲ್ಲಿ ಕೇವಲ 9 ಲಕ್ಷ ಜನಸಂಖ್ಯೆಯಿರುತ್ತದೆ ಆದ್ದರಿಂದ ತಂದೆಯು ತಿಳಿಸುತ್ತಾರೆ – ನಾನು ಬಂದು ಬ್ರಹ್ಮಾರವರ ಮೂಲಕ ಸ್ವರ್ಗದ ಸ್ಥಾಪನೆ, ಶಂಕರನ ಮೂಲಕ ವಿನಾಶ ಮಾಡಿಸುತ್ತೇನೆ. ಕಲ್ಪದ ಹಿಂದಿನ ತರಹ ಎಲ್ಲಾ ತಯಾರಿಗಳನ್ನು ಮಾಡುತ್ತಿದ್ದಾರೆ. ಎಷ್ಟೊಂದು ಬಾಂಬುಗಳನ್ನು ತಯಾರಿಸುತ್ತಾರೆ. 5000 ವರ್ಷಗಳ ಮೊದಲೂ ಸಹ ಈ ಮಹಾ ಭಾರತ ಯುದ್ಧವಾಗಿತ್ತು, ಭಗವಂತನು ಬಂದು ರಾಜಯೋಗವನ್ನು ಕಲಿಸಿ ಮನುಷ್ಯರನ್ನು ನರನಿಂದ ನಾರಾಯಣನನ್ನಾಗಿ ಮಾಡಿದ್ದರು. ಅಂದಮೇಲೆ ಈಗ ಅವಶ್ಯವಾಗಿ ಕಲಿಯುಗೀ ಹಳೆಯ ಪ್ರಪಂಚದ ವಿನಾಶವಾಗಬೇಕು. ಇಡೀ ಬಿದುರಿನ ಕಾಡಿನ ಬೆಂಕಿ ಬೀಳುವುದು. ಇಲ್ಲದಿದ್ದರೆ ವಿನಾಶವಾಗುವುದು ಹೇಗೆ? ಇತ್ತೀಚೆಗೆ ಬಾಂಬುಗಳಲ್ಲಿ ಬೆಂಕಿಯನ್ನೂ ತುಂಬುತ್ತಾರೆ. ಬೆಂಕಿಯ ಮಳೆ, ಭೂಕಂಪ ಇತ್ಯಾದಿಗಳೆಲ್ಲವೂ ಆಗುತ್ತದೆ, ಆಗ ವಿನಾಶವಾಗುವುದು. ಹಳೆಯ ಪ್ರಪಂಚದ ವಿನಾಶ, ಹೊಸ ಪ್ರಪಂಚದ ಸ್ಥಾಪನೆಯಾಗುತ್ತದೆ, ಇದು ಸಂಗಮ ಯುಗವಾಗಿದೆ. ರಾವಣ ರಾಜ್ಯವು ಸಮಾಪ್ತಿಯಾಗಿ ರಾಮ ರಾಜ್ಯಕ್ಕೆ ಜಯ ಜಯಕಾರವಾಗುತ್ತದೆ. ಹೊಸ ಪ್ರಪಂಚದಲ್ಲಿ ಕೃಷ್ಣನ ರಾಜ್ಯವಿತ್ತು, ಲಕ್ಷ್ಮೀ-ನಾರಾಯಣರ ಬದಲು ಕೃಷ್ಣನ ಹೆಸರನ್ನು ತೆಗೆದುಕೊಳ್ಳುತ್ತಾರೆ ಏಕೆಂದರೆ ಕೃಷ್ಣನು ಸುಂದರ, ಎಲ್ಲರಿಗಿಂತ ಪ್ರಿಯಮಗುವಾಗಿದ್ದಾನೆ. ಮನುಷ್ಯರಿಗಂತೂ ಗೊತ್ತಿಲ್ಲ ಅಲ್ಲವೆ. ಕೃಷ್ಣನೇ ಬೇರೆ ರಾಜಧಾನಿಯವನು, ರಾಧೆಯೇ ಇನ್ನೊಂದು ರಾಜಧಾನಿಯವಳು ಆಗಿದ್ದಳು. ಭಾರತವು ಕಿರೀಟಧಾರಿಯಾಗಿತ್ತು, ಈಗ ಕಂಗಾಲಾಗಿದೆ. ಮತ್ತೆ ತಂದೆಯು ಬಂದು ಸಾಹುಕಾರನನ್ನಾಗಿ ಮಾಡುತ್ತಾರೆ. ಈಗ ತಂದೆಯು ತಿಳಿಸುತ್ತಾರೆ - ಪವಿತ್ರರಾಗಿ ಮತ್ತು ನನ್ನೊಬ್ಬನನ್ನೇ ನೆನಪು ಮಾಡಿದರೆ ನೀವು ಸತೋಪ್ರಧಾನರಾಗಿ ಬಿಡುತ್ತೀರಿ. ಯಾರು ಸರ್ವೀಸ್ ಮಾಡಿ ತಮ್ಮ ಸಮಾನ ಮಾಡಿಕೊಳ್ಳುವರೋ ಅವರು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ, ಡಬ್ಬಲ್ ಕಿರೀಟಧಾರಿಗಳಾಗುತ್ತಾರೆ. ಸತ್ಯಯುಗದಲ್ಲಿ ರಾಜ-ರಾಣಿ ಮತ್ತು ಪ್ರಜೆಗಳೆಲ್ಲರೂ ಪವಿತ್ರರಾಗಿರುತ್ತಾರೆ. ಈಗಂತೂ ಪ್ರಜೆಗಳ ರಾಜ್ಯವಾಗಿದೆ, ಎರಡೂ ಕಿರೀಟಗಳಿಲ್ಲ. ತಂದೆಯು ತಿಳಿಸುತ್ತಾರೆ, ಯಾವಾಗ ಇಂತಹ ಗತಿಯಾಗುವುದೋ ಆಗ ನಾನು ಬರುತ್ತೇನೆ. ನಾನೀಗ ನೀವು ಮಕ್ಕಳಿಗೆ ರಾಜಯೋಗವನ್ನು ಕಲಿಸುತ್ತಿದ್ದೇನೆ. ನಾನೇ ಪತಿತ-ಪಾವನನಾಗಿದ್ದೇನೆ. ನೀವೀಗ ನನ್ನನ್ನು ನೆನಪು ಮಾಡಿದರೆ ನಿಮ್ಮ ಆತ್ಮದಲ್ಲಿನ ತುಕ್ಕು ಕಳೆಯುವುದು ಮತ್ತು ಸತೋಪ್ರಧಾನರಾಗುತ್ತೀರಿ. ಈಗ ಶ್ಯಾಮನಿಂದ ಸುಂದರರಾಗಬೇಕಾಗಿದೆ. ಚಿನ್ನದಲ್ಲಿ ಲೋಹವು ಬೆರಕೆಯಾದಾಗ ಕಪ್ಪಾಗಿ ಬಿಡುತ್ತದೆ. ಅಂದಮೇಲೆ ಈಗ ಲೋಹವನ್ನು ತೆಗೆಯಬೇಕಾಗಿದೆ. ಬೇಹದ್ದಿನ ತಂದೆಯು ತಿಳಿಸುತ್ತಾರೆ- ನೀವು ಕಾಮ ಚಿತೆಯ ಮೇಲೆ ಕುಳಿತು ಕಪ್ಪಾಗಿ ಬಿಟ್ಟಿದ್ದೀರಿ. ಈಗ ಜ್ಞಾನ ಚಿತೆಯ ಮೇಲೆ ಕುಳಿತುಕೊಳ್ಳಿ ಮತ್ತು ಎಲ್ಲರಿಂದ ಮಮತ್ವವನ್ನು ಕಳೆಯಿರಿ. ನೀವು ನಾನು ಒಬ್ಬ ಪ್ರಿಯತಮನ ಪ್ರಿಯತಮೆಯರಾಗಿದ್ದೀರಿ. ಭಕ್ತರೆಲ್ಲರೂ ಭಗವಂತನನ್ನು ನೆನಪು ಮಾಡುತ್ತಾರೆ. ಸತ್ಯ-ತ್ರೇತಾಯುಗದಲ್ಲಿ ಭಕ್ತಿಯಿರುವುದಿಲ್ಲ, ಅಲ್ಲಿ ಜ್ಞಾನದ ಪ್ರಾಲಬ್ಧವಿರುತ್ತದೆ, ತಂದೆಯು ಬಂದು ಜ್ಞಾನದಿಂದ ರಾತ್ರಿಯನ್ನು ದಿನವನ್ನಾಗಿ ಮಾಡುತ್ತಾರೆ. ಶಾಸ್ತ್ರಗಳನ್ನು ಓದುವುದರಿಂದ ದಿನವಾಗಿ ಬಿಡುವುದಿಲ್ಲ. ಅದು ಭಕ್ತಿಯ ಸಾಮಗ್ರಿಯಾಗಿದೆ. ಜ್ಞಾನ ಸಾಗರ, ಪತಿತ-ಪಾವನನು ಒಬ್ಬರೇ ತಂದೆಯಾಗಿದ್ದಾರೆ. ಅವರೇ ಬಂದು ಸೃಷ್ಟಿಚಕ್ರದ ಜ್ಞಾನವನ್ನು ಮಕ್ಕಳಿಗೆ ತಿಳಿಸುತ್ತಾರೆ ಮತ್ತು ಯೋಗವನ್ನು ಕಲಿಸುತ್ತಾರೆ. ಈಶ್ವರನ ಜೊತೆ ಯೋಗವನ್ನಿಡುವವರು ಯೋಗ ಯೋಗೇಶ್ವರ ಮತ್ತು ರಾಜ ರಾಜೇಶ್ವರ, ರಾಜ ರಾಜೇಶ್ವರಿಯಾಗುತ್ತಾರೆ. ನೀವು ಈಶ್ವರನ ಮೂಲಕ ರಾಜಾಧಿರಾಜರಾಗುತ್ತೀರಿ. ಯಾರು ಪಾವನ ರಾಜರಿದ್ದರೋ ಮತ್ತೆ ಅವರೇ ಪತಿತರಾಗುತ್ತಾರೆ. ತಾವೇ ಪೂಜ್ಯ ಮತ್ತು ತಾವೇ ಪೂಜಾರಿಯಾಗುತ್ತಾರೆ. ಈಗ ಎಷ್ಟು ಸಾಧ್ಯವೋ ನೆನಪಿನಲ್ಲಿರಬೇಕಾಗಿದೆ. ಹೇಗೆ ಪ್ರಿಯತಮೆಯು ಪ್ರಿಯತಮನನ್ನು ನೆನಪು ಮಾಡುತ್ತಾಳಲ್ಲವೆ. ಹೇಗೆ ಕನ್ಯೆಯ ನಿಶ್ಚಿತಾರ್ಥವಾದರೆ ಮತ್ತೆ ಒಬ್ಬರು ಇನ್ನೊಬ್ಬರನ್ನು ನೆನಪು ಮಾಡುತ್ತಾರೆ. ಈಗ ಈ ಪ್ರಿಯತಮನಿಗೆ ಭಕ್ತಿಮಾರ್ಗದಲ್ಲಿ ಬಹಳ ಮಂದಿ ಪ್ರಿಯತಮೆಯರಿದ್ದಾರೆ. ಎಲ್ಲರೂ ದುಃಖದಲ್ಲಿ ತಂದೆಯನ್ನು ನೆನಪು ಮಾಡುತ್ತಾರೆ - ಹೇ ಭಗವಂತ ದುಃಖವನ್ನು ದೂರ ಮಾಡಿ ಸುಖವನ್ನು ಕೊಡಿ, ಇಲ್ಲಂತೂ ಶಾಂತಿಯೂ ಇಲ್ಲ, ಸುಖವೂ ಇಲ್ಲ. ಸತ್ಯಯುಗದಲ್ಲಿ ಎರಡೂ ಇರುತ್ತದೆ. ಈಗ ನೀವು ತಿಳಿದುಕೊಂಡಿದ್ದೀರಿ- ನಾವಾತ್ಮರು ಹೇಗೆ 84 ಜನ್ಮಗಳ ಪಾತ್ರವನ್ನಭಿನಯಿಸುತ್ತೇವೆ. ಬ್ರಾಹ್ಮಣ, ದೇವತಾ, ಕ್ಷತ್ರಿಯ, ವೈಶ್ಯ, ಶೂದ್ರರಾಗುತ್ತೇವೆ, ಈ 84 ಜನ್ಮಗಳ ಏಣಿಯು ಬುದ್ಧಿಯಲ್ಲಿದೆಯಲ್ಲವೆ. ಈಗ ಎಷ್ಟು ಸಾಧ್ಯವೋ ಅಷ್ಟು ತಂದೆಯನ್ನು ನೆನಪು ಮಾಡಬೇಕಾಗಿದೆ, ಇದರಿಂದ ಪಾಪಗಳು ಕಳೆಯುವುದು. ಕರ್ಮ ಮಾಡುತ್ತಲೂ ಬುದ್ಧಿಯಲ್ಲಿ ತಂದೆಯ ನೆನಪಿರಲಿ. ತಂದೆಯಿಂದ ನಾವು ಸ್ವರ್ಗದ ಆಸ್ತಿಯನ್ನು ಪಡೆಯುತ್ತಿದ್ದೇವೆ. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಬೇಕಾಗಿದೆ. ನೆನಪಿನಿಂದಲೇ ಪಾಪಗಳು ಕಳೆಯುತ್ತಾ ಹೋಗುತ್ತವೆ. ಎಷ್ಟು ನೆನಪು ಮಾಡುತ್ತೀರೋ ಅಷ್ಟು ಪವಿತ್ರತೆಯ ಪ್ರಕಾಶವು ಬರುತ್ತಾ ಹೋಗುವುದು, ತುಕ್ಕು ಕಳೆಯುತ್ತಾ ಹೋಗುವುದು. ಮಕ್ಕಳು ಎಷ್ಟು ಸಾಧ್ಯವೋ ಅಷ್ಟು ಸಮಯವನ್ನು ತೆಗೆದು ನೆನಪಿನ ಉಪಾಯ ಮಾಡಬೇಕಾಗಿದೆ. ಬೆಳಗ್ಗೆ-ಬೆಳಗ್ಗೆ ಸಮಯವು ಚೆನ್ನಾಗಿ ಸಿಗುತ್ತದೆ. ಈ ಪುರುಷಾರ್ಥ ಮಾಡಬೇಕಾಗಿದೆ. ಭಲೆ ಗೃಹಸ್ಥ ವ್ಯವಹಾರದಲ್ಲಿಯೇ ಇರಿ. ಮಕ್ಕಳ ಸಂಭಾಲನೆ ಮಾಡಿ ಆದರೆ ಈ ಅಂತಿಮ ಜನ್ಮ ಪವಿತ್ರರಾಗಿ. ಕಾಮ ಚಿತೆಯನ್ನು ಏರಬೇಡಿ, ನೀವೀಗ ಜ್ಞಾನ ಚಿತೆಯ ಮೇಲೆ ಕುಳಿತಿದ್ದೀರಿ. ಈ ವಿದ್ಯೆಯು ಬಹಳ ಶ್ರೇಷ್ಠವಾಗಿದೆ, ಇದಕ್ಕಾಗಿ ಚಿನ್ನದ ಪಾತ್ರೆ ಬೇಕು. ನೀವು ತಂದೆಯನ್ನು ನೆನಪು ಮಾಡುವುದರಿಂದ ನಿಮ್ಮ ಬುದ್ಧಿಯು ಚಿನ್ನದ ಪಾತ್ರೆಯಾಗುತ್ತದೆ. ನೆನಪನ್ನು ಮರೆತರೆ ಮತ್ತೆ ಕಬ್ಬಿಣದ ಪಾತ್ರೆಯಾಗಿ ಬಿಡುತ್ತೀರಿ. ತಂದೆಯನ್ನು ನೆನಪು ಮಾಡುವುದರಿಂದ ಸ್ವರ್ಗದ ಮಾಲೀಕರಾಗುತ್ತೀರಿ. ಇದು ಬಹಳ ಸಹಜವಾಗಿದೆ, ಇದರಲ್ಲಿ ಪವಿತ್ರತೆಯು ಮುಖ್ಯವಾಗಿದೆ. ನೆನಪಿನಿಂದಲೇ ಪವಿತ್ರರಾಗುತ್ತೀರಿ ಮತ್ತು ಸೃಷ್ಟಿಚಕ್ರವನ್ನು ನೆನಪು ಮಾಡುವುದರಿಂದ ಸ್ವರ್ಗದ ಮಾಲೀಕರಾಗುತ್ತೀರಿ. ನೀವು ಗೃಹಸ್ಥವನ್ನು ಬಿಡುವಂತಿಲ್ಲ. ಗೃಹಸ್ಥ ವ್ಯವಹಾರದಲ್ಲಿಯೂ ಇರಬೇಕಾಗಿದೆ. 63 ಜನ್ಮಗಳು ನೀವು ಪತಿತ ಪ್ರಪಂಚದಲ್ಲಿದ್ದೀರಿ, ಈಗ ಶಿವಾಲಯ, ಅಮರ ಲೋಕದಲ್ಲಿ ಹೋಗುವುದಕ್ಕಾಗಿ ನೀವು ಇದೊಂದು ಜನ್ಮ ಪವಿತ್ರರಾಗಿದ್ದರೆ ಏನಾಗುತ್ತದೆ! ಬಹಳ ಸಂಪಾದನೆಯಾಗುತ್ತದೆ. ಪಂಚ ವಿಕಾರಗಳ ಮೇಲೆ ಜಯ ಗಳಿಸಬೇಕು ಆಗಲೇ ಜಗತ್ಜೀತರಾಗುವಿರಿ. ಇಲ್ಲವೆಂದರೆ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ- ಎಲ್ಲರೂ ಸಾಯಲೇಬೇಕಾಗಿದೆ, ಇದು ಅಂತಿಮ ಜನ್ಮವಾಗಿದೆ. ನಂತರ ಹೋಗಿ ನೀವು ಹೊಸ ಪ್ರಪಂಚದಲ್ಲಿ ರಾಜ್ಯ ಮಾಡುತ್ತೀರಿ. ವಜ್ರ ವೈಡೂರ್ಯಗಳ ಗಣಿಗಳು ಸಂಪನ್ನವಾಗಿ ಬಿಡುತ್ತವೆ. ಅಲ್ಲಿ ನೀವು ವಜ್ರ ವೈಡೂರ್ಯಗಳಿಂದ ಆಟವಾಡುತ್ತಾ ಇರುತ್ತೀರಿ ಅಂದಮೇಲೆ ಇಂತಹ ತಂದೆಯ ಮಕ್ಕಳಾಗಿ ಅವರ ಮತದನುಸಾರ ನಡೆಯಬೇಕಲ್ಲವೆ. ಶ್ರೀಮತದಿಂದಲೇ ನೀವು ಶ್ರೇಷ್ಠರಾಗುತ್ತೀರಿ, ರಾವಣನ ಮತದಿಂದ ನೀವು ಭ್ರಷ್ಟಾಚಾರಿಯಾಗಿದ್ದೀರಿ. ನೀವು ಈಗ ತಂದೆಯ ಶ್ರೀಮತದಂತೆ ನಡೆದು ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕು, ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಯು ಮತ್ತ್ಯಾವುದೇ ಕಷ್ಟ ಕೊಡುವುದಿಲ್ಲ. ಭಕ್ತಿ ಮಾರ್ಗದಲ್ಲಂತೂ ನೀವು ಬಹಳ ಅಲೆದಿದ್ದೀರಿ, ಈಗ ಕೇವಲ ತಂದೆಯನ್ನು ನೆನಪು ಮಾಡಿ ಮತ್ತು ಸೃಷ್ಟಿಚಕ್ರವನ್ನು ನೆನಪು ಮಾಡಿ. ಸ್ವದರ್ಶನ ಚಕ್ರಧಾರಿಗಳಾಗಿ ಆಗ ನೀವು 21 ಜನ್ಮಗಳಿಗಾಗಿ ಚಕ್ರವರ್ತಿ ರಾಜರಾಗಿ ಬಿಡುತ್ತೀರಿ. ನೀವು ಅನೇಕ ಬಾರಿ ರಾಜ್ಯವನ್ನು ತೆಗೆದುಕೊಂಡಿದ್ದೀರಿ ಮತ್ತು ಕಳೆದುಕೊಂಡಿದ್ದೀರಿ. ಅರ್ಧಕಲ್ಪ ಸುಖ, ಅರ್ಧಕಲ್ಪ ದುಃಖವಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಕಲ್ಪ-ಕಲ್ಪವೂ ಸಂಗಮದಲ್ಲಿ ಬರುತ್ತೇನೆ, ನಿಮ್ಮನ್ನು ಸುಖಧಾಮದ ಮಾಲೀಕನನ್ನಾಗಿ ಮಾಡುತ್ತೇನೆ. ನಾವು ಹೇಗೆ ಚಕ್ರವನ್ನು ಸುತ್ತುತ್ತೇವೆಂದು ಈಗ ನಿಮಗೆ ಸ್ಮೃತಿ ಬಂದಿದೆ. ಈ ಚಕ್ರದ ಜ್ಞಾನವನ್ನು ಬುದ್ಧಿಯಲ್ಲಿಟ್ಟುಕೊಳ್ಳಬೇಕಾಗಿದೆ. ತಂದೆಯು ಜ್ಞಾನ ಸಾಗರನಾಗಿದ್ದಾರೆ, ನೀವಿಲ್ಲಿ ಬೇಹದ್ದಿನ ತಂದೆಯ ಸಮ್ಮುಖದಲ್ಲಿ ಕುಳಿತಿದ್ದೀರಿ. ಶ್ರೇಷ್ಠಾತಿ ಶ್ರೇಷ್ಠ ಭಗವಂತನು ಪ್ರಜಾಪಿತ ಬ್ರಹ್ಮಾರವರ ಮೂಲಕ ನಿಮಗೆ ಆಸ್ತಿಯನ್ನು ಕೊಡುತ್ತಾರೆ ಅಂದಮೇಲೆ ಈಗ ವಿನಾಶಕ್ಕೆ ಮೊದಲೇ ನೀವು ತಂದೆಯನ್ನು ನೆನಪು ಮಾಡಿ, ಪವಿತ್ರರಾಗಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ನಿರಂತರ ತಂದೆಯ ನೆನಪಿನಲ್ಲಿರಲು ಬುದ್ಧಿಯನ್ನು ಚಿನ್ನದ ಪಾತ್ರೆಯನ್ನಾಗಿ ಮಾಡಿಕೊಳ್ಳಬೇಕಾಗಿದೆ. ಕರ್ಮ ಮಾಡುತ್ತಲೂ ತಂದೆಯ ನೆನಪಿರಲಿ. ನೆನಪಿನಿಂದಲೇ ಪವಿತ್ರತೆಯ ಪ್ರಕಾಶವು ಬರುವುದು.

2. ಮುರುಳಿಯನ್ನೆಂದೂ ತಪ್ಪಿಸಬಾರದು. ಡ್ರಾಮಾದ ರಹಸ್ಯವನ್ನು ಯಥಾರ್ಥ ರೀತಿಯಿಂದ ತಿಳಿದುಕೊಳ್ಳಬೇಕಾಗಿದೆ. ಭಟ್ಟಿಯಲ್ಲಿ ಹೊರಗಿನದೇನೂ ನೆನಪಿಗೆ ಬರಬಾರದು.

ವರದಾನ:

ಸ್ವಯಂನ ಮೇಲೆ ಬಾಪ್ದಾದಾರವರನ್ನು ಬಲಿಹಾರಿ ಮಾಡಿಸುವಂತಹ ತ್ಯಾಗ ಮೂರ್ತಿ, ನಿಶ್ಚಯ ಬುದ್ಧಿ ಭವ.

"ತಂದೆ ಸಿಕ್ಕಿದರು ಎಲ್ಲವೂ ಸಿಕ್ಕಿತು” ಈ ನಶೆಯಲ್ಲಿ ಎಲ್ಲವನ್ನೂ ತ್ಯಾಗ ಮಾಡುವಂತಹ ಜ್ಞಾನ ಸ್ವರೂಪ, ನಿಶ್ಚಯ ಬುದ್ಧಿ ಮಕ್ಕಳು ತಂದೆಯ ಮೂಲಕ ಯಾವಾಗ ಖುಶಿ, ಶಾಂತಿ, ಶಕ್ತಿ ಹಾಗೂ ಸುಖದ ಅನುಭೂತಿ ಮಾಡುತ್ತಾರೆ ಅಂದಾಗ ಲೋಕ ಮರ್ಯಾದೆಯ ಬಗ್ಗೆಯೂ ಸಹ ಚಿಂತೆ ಮಾಡದೆ, ಸದಾ ಮುನ್ನಡೆಯುತ್ತಿರುತ್ತಾರೆ. ಅವರಿಗೆ ಈ ಜಗತ್ತಿನದೆಲ್ಲವೂ ತುಚ್ಛ, ಸಾರವಿಲ್ಲದ್ದು ಎಂದು ಅನುಭವವಾಗುತ್ತದೆ. ಈ ರೀತಿಯ ತ್ಯಾಗ ಮೂರ್ತಿ, ನಿಶ್ಚಯ ಬುದ್ಧಿ ಮಕ್ಕಳ ಮೇಲೆ ಬಾಪ್ದಾದಾ ತಮ್ಮ ಸರ್ವ ಸಂಪತ್ತಿನ ಸಹಿತ ಬಲಿಹಾರಿಯಾಗಿ ಬಿಡುತ್ತಾರೆ. ಹೇಗೆ ಮಕ್ಕಳು ಸಂಕಲ್ಪ ಮಾಡುತ್ತಾರೆ. ಬಾಬಾ ನಾವು ನಿಮ್ಮವರು ಎಂದು ಹಾಗೆಯೇ ಬಾಬಾರವರೂ ಸಹ ಹೇಳುತ್ತಾರೆ ತಂದೆಯದೇನೆಲ್ಲ ಇದೆ ಅದು ನಿಮ್ಮದು ಎಂದು.

ಸ್ಲೋಗನ್:

ಯಾರು ತಮ್ಮ ಎಲ್ಲಾ ಸಂಕಲ್ಪ ಹಾಗೂ ಕರ್ಮದಿಂದ ತಂದೆಯ ಸ್ನೇಹದ ಪ್ರಕಂಪನಗಳು (ವೈಬ್ರೇಷನ್) ಹರಡುತ್ತಿರುತ್ತಾರೆ, ಅವರೇ ಸಹಜಯೋಗಿ ಆಗಿದ್ದಾರೆ.