01.03.20    Avyakt Bapdada     Kannada Murli     02.12.85     Om Shanti     Madhuban


ಬಂಧನಗಳಿಂದ ಮುಕ್ತರಾಗುವ ಯುಕ್ತಿ- ಆತ್ಮಿಕ ಶಕ್ತಿ


ಇಂದು ಬಾಪ್ದಾದಾರವರು ಆತ್ಮಿಕ ಮಕ್ಕಳ ಆತ್ಮೀಯತೆಯ ಶಕ್ತಿಯನ್ನು ನೋಡುತ್ತಿದ್ದರು. ಪ್ರತಿಯೊಬ್ಬ ಆತ್ಮಿಕ ಮಗುವು ಆತ್ಮಿಕ ತಂದೆಯಿಂದ, ಮಕ್ಕಳಾಗಿರುವ ಸಂಬಂಧದಿಂದ ಆತ್ಮಿಕ ಶಕ್ತಿಯ ಸಂಪೂರ್ಣ ಅಧಿಕಾರವನ್ನು ಪ್ರಾಪ್ತಿಯನ್ನಂತು ಮಾಡಿಕೊಂಡಿದ್ದಾರೆ. ಆದರೆ ಪ್ರಾಪ್ತಿ ಸ್ವರೂಪರು ಎಲ್ಲಿಯವರೆಗೆ ಆಗಿದ್ದಾರೆನ್ನುವುದನ್ನು ತಂದೆಯು ನೋಡುತ್ತಿದ್ದರು. ಎಲ್ಲಾ ಮಕ್ಕಳು ಪ್ರತಿ ನಿತ್ಯವೂ ಸ್ವಯಂನ್ನು ಆತ್ಮಿಕ ಮಗುವೆಂದು ಹೇಳುತ್ತಾ, ಆತ್ಮಿಕ ತಂದೆಗೆ ನೆನಪು ಪ್ರೀತಿಯ ರಿಟರ್ನ್ನ್ನು ಮುಖದಿಂದ ಅಥವಾ ಮನಸ್ಸಿನಿಂದ ನೆನಪು ಪ್ರೀತಿ ಹಾಗೂ ನಮಸ್ತೆಯ ರೂಪದಲ್ಲಿ ಕೊಡುತ್ತಾರೆ. ರಿಟರ್ನ್ ಕೊಡುತ್ತೀರಲ್ಲವೆ! ಇದರ ರಹಸ್ಯವು ಇದಾಯಿತು - ಪ್ರತಿನಿತ್ಯವೂ ಆತ್ಮಿಕ ತಂದೆಯ ಆತ್ಮಿಕ ಮಕ್ಕಳೆಂದು ಹೇಳುತ್ತಾ, ಆತ್ಮಿಕ ಶಕ್ತಿಯ ವಾಸ್ತವಿಕ ಸ್ವರೂಪವನ್ನು ನೆನಪು ತರಿಸುತ್ತಾರೆ. ಏಕೆಂದರೆ ಈ ಬ್ರಾಹ್ಮಣ ಜೀವನದ ವಿಶೇಷತೆಯೇ ಇದಾಗಿದೆ - ಆತ್ಮೀಯತೆ. ಈ ಆತ್ಮೀಯತೆಯ ಶಕ್ತಿಯಿಂದ ಸ್ವಯಂನ್ನು ಹಾಗೂ ಸರ್ವರನ್ನು ಪರಿವರ್ತನೆ ಮಾಡುತ್ತೀರಿ. ಮುಖ್ಯವಾದ ಬುನಾದಿಯೇ ಈ ಆತ್ಮಿಕ ಶಕ್ತಿಯಾಗಿದೆ. ಈ ಶಕ್ತಿಯಿಂದಲೇ ಅನೇಕ ಪ್ರಕಾರದ ದೈಹಿಕ ಬಂಧನಗಳಿಂದ ಮುಕ್ತಿಯು ಸಿಗುತ್ತದೆ. ಬಾಪ್ದಾದಾರವರು ನೋಡುತ್ತಿದ್ದರು - ಈಗಿನವರೆಗೂ ಹಲವು ಸೂಕ್ಷ್ಮಬಂಧನಗಳೇನು ಸ್ವಯಂ ಸಹ ಅನುಭವ ಮಾಡುತ್ತಾರೆ - ಈ ಬಂಧನಗಳಿಂದ ಮುಕ್ತಿಯಾಗಬೇಕು ಎಂದು ಹೇಳುತ್ತಾರೆ. ಆದರೆ ಮುಕ್ತಿ ಪಡೆಯುವ ಯುಕ್ತಿಯನ್ನು ಪ್ರತ್ಯಕ್ಷದಲ್ಲಿ ತರಲು ಸಾಧ್ಯವಿಲ್ಲ. ಕಾರಣವೇನು? ಆತ್ಮಿಕ ಶಕ್ತಿಯನ್ನು ಪ್ರತಿಯೊಂದು ಕರ್ಮದಲ್ಲಿ ಉಪಯೋಗಿಸುವುದು ಬರುವುದಿಲ್ಲ. ಒಂದೇ ಸಮಯ, ಒಂದೇ ಸಂಕಲ್ಪ, ಒಂದೇ ಮಾತು ಮತ್ತು ಕರ್ಮ, ಮೂರನ್ನೂ ಜೊತೆ ಜೊತೆಯಲ್ಲಿ ಶಕ್ತಿಶಾಲಿಯನ್ನಾಗಿ ಮಾಡಬೇಕಾಗುತ್ತದೆ. ಆದರೆ ಯಾವುದರಲ್ಲಿ ಲೂಸ್ ಆಗಿ ಬಿಡುತ್ತಾರೆ? ಒಂದು ಕಡೆ ಸಂಕಲ್ಪವನ್ನು ಶಕ್ತಿಶಾಲಿ ಮಾಡುತ್ತಾರೆಂದರೆ ವಾಣಿಯಲ್ಲಿ ಸ್ವಲ್ಪ ಲೂಸ್ ಆಗಿ ಬಿಡುತ್ತಾರೆ. ಯಾವಾಗ ವಾಣಿಯನ್ನು ಶಕ್ತಿಶಾಲಿ ಮಾಡುತ್ತಾರೆ, ಕರ್ಮದಲ್ಲಿ ಲೂಸ್ ಆಗಿ ಬಿಡುತ್ತಾರೆ. ಆದರೆ ಈ ಮೂರನ್ನೂ ಆತ್ಮಿಕ ಶಕ್ತಿಶಾಲಿಗಳು ಸಮಯದಲ್ಲಿ ತಯಾರು ಮಾಡಿಕೊಳ್ಳಬೇಕು, ಇದೇ ಮುಕ್ತಿಯ ಯುಕ್ತಿಯಾಗಿದೆ. ಹೇಗೆ ಸೃಷ್ಟಿಯ ರಚನೆಯಲಿ ಮೂರು ಕಾರ್ಯಗಳು - ಸ್ಥಾಪನೆ, ಪಾಲನೆ ಮತ್ತು ವಿನಾಶ ಮೂರೂ ಸಹ ಅವಶ್ಯಕವಿದೆ. ಹಾಗೆಯೇ ಸರ್ವ ಬಂಧನಗಳಿಂದ ಮುಕ್ತರಾಗಲು ಯುಕ್ತಿ- ಮನಸ್ಸಾ, ವಾಚಾ, ಕರ್ಮಣಾ ಮೂರರಲ್ಲಿಯೂ ಆತ್ಮಿಕ ಶಕ್ತಿಯು ಜೊತೆ ಜೊತೆಗೆ ಇರುವುದು ಅವಶ್ಯಕವಿದೆ. ಕೆಲವೊಮ್ಮೆ ಮನಸ್ಸನ್ನು ಸಂಭಾಲಿಸಿದರೆ ವಾಚಾದಲ್ಲಿ ಕೊರತೆಯಾಗಿ ಬಿಡುತ್ತದೆ. ಮತ್ತೆ ಹೇಳುವುದು - ಹೀಗಂತು ಯೋಚಿಸಿರಲಿಲ್ಲ, ಗೊತ್ತಿಲ್ಲ ಹೀಗೇಕೆ ಆಗಿ ಬಿಟ್ಟಿತು. ಮೂರರ ಕಡೆ ಸಂಪೂರ್ಣವಾದ ಗಮನವಿರಬೇಕು. ಏಕೆ? ಈ ಮೂರೂ ಸಾಧನಗಳು ಸಂಪನ್ನ ಸ್ಥಿತಿಯನ್ನು ಹಾಗೂ ತಂದೆಯನ್ನು ಪ್ರತ್ಯಕ್ಷಗೊಳಿಸುವುದಾಗಿದೆ. ಮುಕ್ತಿಯನ್ನು ಪಡೆಯುವುದಕ್ಕಾಗಿ ಮೂರರಲ್ಲಿಯೂ ಆತ್ಮೀಯತೆಯ ಅನುಭವವಾಗಬೇಕು. ಯಾರು ಮೂರರಲ್ಲಿಯೂ ಯುಕ್ತಿಯುಕ್ತವಾಗಿರುತ್ತಾರೆ, ಅವರೇ ಜೀವನ್ಮುಕ್ತರು. ಆದ್ದರಿಂದ ಬಾಪ್ದಾದಾರವರು ಸೂಕ್ಷ್ಮ ಬಂಧನಗಳನ್ನು ನೋಡುತ್ತಿದ್ದರು. ಸೂಕ್ಷ್ಮ ಬಂಧನದಲ್ಲಿಯೂ ವಿಶೇಷವಾಗಿ ಈ ಮೂರರ ಸಂಬಂಧವಿದೆ. ಬಂಧನದ ಚಿಹ್ನೆಗಳು -

ಬಂಧನವಿರುವವರು ಸದಾಕಾಲ ಪರವಶವಾಗಿರುತ್ತಾರೆ. ಬಂಧನದವರು ತನ್ನನ್ನು ಆಂತರಿಕ ಖುಷಿ ಹಾಗೂ ಸುಖದಲ್ಲಿ ಸದಾ ಅನುಭವ ಮಾಡುವುದಿಲ್ಲ. ಹೇಗೆ ಲೌಕಿಕ ಪ್ರಪಂಚದಲ್ಲಿ ಅಲ್ಪಕಾಲದ ಸಾಧನಗಳು, ಅಲ್ಪಕಾಲದ ಖುಷಿ ಹಾಗೂ ಅಲ್ಪಕಾಲದ ಸುಖದ ಅನುಭವ ಮಾಡಿಸುತ್ತದೆ. ಆದರೆ ಆಂತರಿಕ ಹಾಗೂ ಅವಿನಾಶಿ ಅನುಭೂತಿಯಾಗುವುದಿಲ್ಲ. ಹಾಗೆಯೇ ಸೂಕ್ಷ್ಮ ಬಂಧನದಲ್ಲಿ ಬಂಧಿತನಾಗಿರುವ ಆತ್ಮನು, ಈ ಬ್ರಾಹ್ಮಣ ಜೀವನದಲ್ಲಿಯೂ ಸ್ವಲ್ಪ ಸಮಯಕ್ಕಾಗಿ ಸೇವೆಯ ಸಾಧನ, ಸಂಘಟನೆಯ ಶಕ್ತಿಯ ಸಾಧನ, ಒಂದಲ್ಲ ಒಂದು ಸಾಧನಗಳು, ಶ್ರೇಷ್ಠ ಸಂಗದ ಸಾಧನ - ಈ ಸಾಧನಗಳ ಆಧಾರದಿಂದ ನಡೆಯುತ್ತಾರೆ, ಎಲ್ಲಿಯವರೆಗೆ ಸಾಧನಗಳಿವೆ ಅಲ್ಲಿಯವರೆಗೆ ಖುಷಿ ಹಾಗೂ ಸುಖದ ಅನುಭೂತಿ ಮಾಡುತ್ತಾರೆ. ಆದರೆ ಸಾಧನಗಳ ಸಮಾಪ್ತಿಯಾಯಿತೆಂದರೆ ಖುಷಿಯೂ ಸಮಾಪ್ತಿ. ಸದಾ ಏಕರಸವಿರುವುದಿಲ್ಲ. ಕೆಲವೊಮ್ಮೆ ಖುಷಿಯಲ್ಲಿ ನರ್ತಿಸುತ್ತಿರುತ್ತಾರೆ, ಆ ಸಮಯದಲ್ಲಿ ಹೇಗೆಂದರೆ ಅವರು ಇಲ್ಲಿ ಇಲ್ಲವೇ ಇಲ್ಲ ಎನ್ನುವಂತೆ. ಆದರೆ ನಿಲ್ಲುತ್ತಾರೆ, ನಂತರ ಅದೇ ರೀತಿಯಲ್ಲಿ ಚಿಕ್ಕದಾದ ಕಲ್ಲು ಸಹ ಬೆಟ್ಟದ ಸಮಾನವಾಗಿ ಅನುಭವ ಮಾಡುತ್ತಾರೆ. ಏಕೆಂದರೆ ಸತ್ಯವಾದ ಶಕ್ತಿಯಿರದ ಕಾರಣದಿಂದ ಸಾಧನಗಳ ಆಧಾರದ ಮೇಲೆ ಖುಷಿಯಲ್ಲಿ ನರ್ತಿಸುತ್ತಾರೆ. ಸಾಧನಗಳು ಸಮಾಪ್ತಿಯಾಯಿತೆಂದರೆ ನರ್ತಿಸುವುದೆಲ್ಲಿ? ಆದ್ದರಿಂದ ಆಂತರಿಕ ಮೂರು ರೂಪಗಳಲ್ಲಿಯೂ ಆತ್ಮಿಕ ಶಕ್ತಿಯ ಸದಾ ಜೊತೆ ಜೊತೆಯಲ್ಲಿರುವುದು ಅವಶ್ಯಕವಿದೆ. ಮುಖ್ಯವಾದ ಬಂಧನವಾಗಿದೆ - ಮನಸ್ಸಾ ಸಂಕಲ್ಪಗಳ ನಿಯಂತ್ರಣಾ ಶಕ್ತಿ ಇಲ್ಲದಿರುವುದು. ತನ್ನದೇ ಸಂಕಲ್ಪಗಳ ವಶರಾಗುವ ಕಾರಾದಿಂದ ಪರವಶತೆಯ ಅನುಭವವನ್ನು ಮಾಡುತ್ತಾರೆ. ಯಾರು ಸ್ವಯಂನ ಸಂಕಲ್ಪಗಳ ಬಂಧನಗಳಲ್ಲಿರುತಾರೆ, ಅವರು ಬಹಳ ಸಮಯ ಇದರಲ್ಲಿಯೇ ಬ್ಯುಸಿಯಾಗಿರುತ್ತಾರೆ. ಹೇಗೆ ತಾವುಗಳೂ ಹೇಳುತ್ತೀರಲ್ಲವೆ ಗಾಳಿ ಗೋಪುರ ಮಾಡುತ್ತಾರೆ ಎಂದು. ಕೋಟೆಯನ್ನು ಕಟ್ಟುತ್ತಾರೆ ಮತ್ತು ಬೀಳಿಸುತ್ತಾರೆ. ಬಹಳ ಉದ್ದವಾದ ಗೋಡೆಯನ್ನು ಕಟ್ಟಿನಿಲ್ಲಿಸುತ್ತಾರೆ. ಆದ್ದರಿಂದ ಗಾಳಿ ಗೋಪುರವೆಂದು ಹೇಳಲಾಗುತ್ತದೆ. ಹೇಗೆ ಭಕ್ತಿಯಲ್ಲಿ ಪೂಜೆ ಮಾಡಿ, ಶೃಂಗಾರ ಮಾಡಿ.... ನಂತರ ಮುಳುಗಿಸಿ ಬಿಡುತ್ತಾರಲವೆ, ಹಾಗೆಯೇ ಸಂಕಲ್ಪದ ಬಂಧನಗಳಲ್ಲಿ ಬಂಧಿತವಾಗಿರುವ ಆತ್ಮವು ಬಹಳಷ್ಟು ತಯಾರಿ ಮಾಡಿಕೊಳ್ಳುತ್ತಾರೆ ಮತ್ತು ಬಹಳಷ್ಟು ಸಮಾಪ್ತಿ ಮಾಡಿ ಬಿಡುತ್ತಾರೆ. ಸ್ವಯಂ ತಾನೇ ಈ ವ್ಯರ್ಥ ಕಾರ್ಯಗಳಿಂದ ಸುಸ್ತಾಗಿ ಬಿಡುತ್ತಾರೆ, ಹೃದಯ ವಿಧೀರ್ಣರಾಗಿ ಬಿಡುತ್ತಾರೆ. ಮತ್ತು ಕೆಲವೊಮ್ಮೆ ಅಭಿಮಾನದಲ್ಲಿ ಬಂದು, ತನ್ನ ತಪ್ಪುಗಳನ್ನು ಅನ್ಯರ ಮೇಲೆ ಹೊರಿಸುತ್ತಿರುತ್ತಾರೆ. ಆದರೂ ಸಮಯ ಕಳೆದಂತೆ ತನ್ನಲ್ಲಿಯೇ ತಿಳಿಯುತ್ತಾರೆ, ಅದರ ಬಗ್ಗೆ ಯೋಚಿಸುತ್ತಾರೆ - ಇದನ್ನು ಮಾಡುತ್ತಿರುವುದು ಸರಿಯಲ್ಲ. ಆದರೆ ಅಭಿಮಾನದಲ್ಲಿ ಪರವಶವಾಗಿರುವ ಕಾರಣದಿಂದ, ತನ್ನನ್ನು ಪಾರು ಮಾಡಿಕೊಳ್ಳುವ ಕಾರಣದಿಂದ, ಅನ್ಯರದೇ ದೋಷವೆಂದು ಯೋಚಿಸುತ್ತಿರುತ್ತಾರೆ. ಅತಿ ದೊಡ್ಡ ಬಂಧನವು ಈ ಮನಸ್ಸಿನ ಬಂಧನವಾಗಿದೆ, ಅದರಿಂದ ಬುದ್ಧಿ ಬೀಗವನ್ನು ಹಾಕಿ ಬಿಡುತ್ತದೆ, ಆದ್ದರಿಂದ ಎಷ್ಟೇ ತಿಳಿಸಿ ಹೇಳುವ ಪ್ರಯತ್ನ ಪಡಿ, ಆದರೆ ಅವರಿಗೆ ಅರ್ಥವಾಗುವುದಿಲ್ಲ. ಮನಸ್ಸಿನ ಬಂಧನದ ವಿಶೇಷ ಚಿಹ್ನೆಯಗಿದೆ - ಅನುಭೂತಿಯ ಶಕ್ತಿಯು ಸಮಾಪ್ತಿಯಾಗಿ ಬಿಡುತ್ತದೆ. ಆದ್ದರಿಂದ ಈ ಸೂಕ್ಷ್ಮ ಬಂಧನಗಳನ್ನು ಸಮಾಪ್ತಿ ಮಾಡದೆ ಎಂದಿಗೂ ಸಹ ಆಂತರಿಕ ಖುಷಿ, ಸದಾಕಾಲಕ್ಕಾಗಿ ಅತೀಂದ್ರಿಯ ಸುಖದ ಅನುಭವವನ್ನು ಮಾಡಲು ಸಾಧ್ಯವಿಲ್ಲ.

ಸಂಗಮಯುಗದ ವಿಶೇಷತೆಯೇ ಆಗಿದೆ - ಅತೀಂದ್ರಿಯ ಸುಖದಲ್ಲಿ ತೂಗುವುದು, ಸದಾ ಖುಷಿಯಲ್ಲಿ ನರ್ತಿಸುವುದು. ಹಾಗಾದರೆ ಸಂಗಮಯುಗಿಯಾಗಿಯೂ ಒಂದುವೇಳೆ ಈ ವಿಶೇಷತೆಯ ಅನುಭವ ಮಾಡಲಿಲ್ಲವೆಂದರೆ ಏನು ಹೇಳುವುದು? ಆದ್ದರಿಂದ ಸ್ವಯಂನ್ನು ಪರಿಶೀಲನೆ ಮಾಡಿಕೊಳ್ಳಿರಿ - ಯಾವುದೇ ಪ್ರಕಾರದ ಸಂಕಲ್ಪಗಳ ಬಂಧನದಲ್ಲಂತು ಇಲ್ಲವೇ? ಭಲೆ ವ್ಯರ್ಥ ಸಂಕಲ್ಪದ ಬಂಧನವಿರಬಹುದು, ಈರ್ಷ್ಯಾ-ದ್ವೇಷದ ಸಂಕಲ್ಪವಿರಬಹುದು, ಹುಡುಗಾಟಿಕೆಯ ಸಂಕಲ್ಪವಿರಬಹುದು, ಭಲೆ ಆಲಸ್ಯದ ಸಂಕಲ್ಪವೇ ಇರಬಹುದು, ಯಾವುದೇ ಪ್ರಕಾರದ ಸಂಕಲ್ಪವು ಮನಸ್ಸಿನ ಬಂಧನವಿರುವ ಗುರುತಾಗಿದೆ. ಅಂದಮೇಲೆ ಇಂದು ಬಾಪ್ದಾದಾರವರು ಬಂಧನಗಳನ್ನು ನೋಡುತ್ತಿದ್ದರು. ಮುಕ್ತಾತ್ಮರು ಎಷ್ಟಿದ್ದಾರೆ? ಚಿಕ್ಕ ಪುಟ್ಟ ಬಂಧನಗಳಂತು ಸಮಾಪ್ತಿಯಾಯಿತು. ಈಗ ಇದು ಸೂಕ್ಷ್ಮವಾದ ಎಳೆಯಾಗಿದೆ. ಇರುವುದಂತು ಎಳೆಯಷ್ಟು ಆದರೆ ಬಂಧನದಲ್ಲಿ ಬಂಧಿಸುವುದರಲ್ಲಿ ಬುದ್ಧಿವಂತನಾಗಿದೆ. ನಾವು ಬಂಧನದಲ್ಲಿ ಬಂಧಿತರಾಗಿದ್ದೇವೆ ಎನ್ನುವುದೂ ಸಹ ಗೊತ್ತಾಗುವುದಿಲ್ಲ. ಏಕೆಂದರೆ ಈ ಬಂಧನವು ಅಲ್ಪಕಾಲದ ನಶೆಯನ್ನೂ ಏರಿಸುತ್ತದೆ. ಹೇಗೆ ವಿನಾಶಿ ನಶೆಯಿರುವವರೆಂದಿಗೂ ಸಹ ಸ್ವಯಂನ್ನು ನಾನು ನೀಚನೆಂದು ತಿಳಿಯುವುದಿಲ್ಲ. ಇರುವುದಂತು ಮೋರಿಯಲ್ಲಿ, ಆದರೆ ಮಹಲಿನಲ್ಲಿ ಇದ್ದೇವೆಂದು ತಿಳಿಯುತ್ತಾರೆ. ಇರುವುದಂತು ಖಾಲಿ ಕೈ, ತನ್ನನ್ನು ರಾಜನೆಂದು ತಿಳಿಯುತ್ತಾರೆ. ಹಾಗೆಯೇ ಈ ನಶೆಯಲ್ಲಿರುವವರೂ ಸಹ ಸ್ವಯಂನೆಂದಿಗೂ ರಾಂಗ್ ಎಂದು ತಿಳಿಯುವುದಿಲ್ಲ. ಸದಾ ತನ್ನನ್ನು ರೈಟ್ ಎಂದು ಸಿದ್ಧ ಮಾಡುತ್ತಾರೆ, ಇಲ್ಲವೆಂದರೆ ಹೀಗೆ ಹುಡುಗಾಟಿಕೆಯನ್ನು ತೋರಿಸುತ್ತಾರೆ - ಇದಂತು ಆಗುತ್ತಲೇ ಇರುತ್ತದೆ, ಈ ರೀತಿಯಲ್ಲಂತು ನಡೆಯುತ್ತಿರುತ್ತದೆ. ಆದ್ದರಿಂದ ಇಂದು ಕೇವಲ ಮನಸ್ಸಿನ ಬಂಧನಗಳ ಬಗ್ಗೆ ತಿಳಿಸಿದೆವು. ನಂತರ ವಾಚಾ ಮತ್ತು ಕರ್ಮದ ಬಗ್ಗೆಯೂ ತಿಳಿಸುತ್ತೇವೆ. ತಿಳಿಯಿತೆ!

ಆತ್ಮಿಕ ಶಕ್ತಿಯ ಮೂಲಕ ಮುಕ್ತಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾ ಸಾಗಿರಿ. ಸಂಗಮಯುಗದಲ್ಲಿ ಜೀವನ್ಮುಕ್ತಿಯ ಅನುಭವವನ್ನು ಮಾಡುವುದೇ ಭವಿಷ್ಯದ ಜೀವನ್ಮುಕ್ತಿಯ ಪ್ರಾಲಬ್ಧವನ್ನು ಪಡೆಯುವುದಾಗಿದೆ. ಗೋಲ್ಡನ್ ಜುಬಿಲಿಯಲ್ಲಂತು ಜೀವನ್ಮುಕ್ತರಾಗಬೇಕಲ್ಲವೆ ಅಥವಾ ಕೇವಲ ಗೋಲ್ಡನ್ ಜುಬಿಲಿಯನ್ನು ಆಚರಿಸಿಕೊಳ್ಳಬೇಕಾ! ಹಾಗೆ ಆಗುವುದೇ ಆಚರಿಸುವುದಾಗಿದೆ. ಪ್ರಪಂಚದವರು ಕೇವಲ ಆಚರಿಸುತ್ತಾರೆ, ಇಲ್ಲಿ ತಯಾರು ಮಾಡಿಕೊಳ್ಳುತ್ತೀರಿ. ಈಗ ಬೇಗ-ಬೇಗನೆ ತಯಾರಾಗಿರಿ, ಆಗ ಎಲ್ಲರೂ ತಮ್ಮ ಮುಕ್ತಿಯಿಂದ ಮುಕ್ತರಾಗಿ ಬಿಡುತ್ತಾರೆ. ವಿಜ್ಞಾನಿಗಳೂ ಸಹ ಸ್ವಯಂ ಮಾಡಿರುವ ಸಾಧನಗಳ ಬಂಧನದಲ್ಲಿ ಬಂಧಿತರಾಗಿದ್ದಾರೆ. ನೇತರೂ ಸಹ ನೋಡಿ, ಪಾರಾಗಲು ಬಯಸುತ್ತಾರೆ ಆದರೆ ಎಷ್ಟೊಂದು ಬಂಧಿತರಾಗಿದ್ದಾರೆ. ಯೋಚಿಸುತ್ತಿದ್ದರೂ ಮಾಡುವುದಕ್ಕಾಗುತ್ತಿಲ್ಲ ಎಂದರೆ ಬಂಧನವಾಯಿತಲ್ಲವೆ. ಎಲ್ಲಾ ಆತ್ಮರು ಭಿನ್ನ-ಭಿನ್ನ ಬಂಧನಗಳಿಂದ ಮುಕ್ತಗೊಳಿಸುವವರು, ಸ್ವಯಂ ಮುಕ್ತರಾಗಿ ಎಲ್ಲರನ್ನೂ ಮುಕ್ತಿಗೊಳಿಸಿರಿ. ಎಲ್ಲರೂ ಮುಕ್ತಿ, ಮುಕ್ತಿ ಎಂದು ಚೀರಾಡುತ್ತಿದ್ದಾರೆ. ಕೆಲವರು ಬಡತನದಿಂದ ಮುಕ್ತಿ ಬಯಸುತ್ತಾರೆ, ಕೆಲವರು ಗೃಹಸ್ಥಿಯಿಂದ ಮುಕ್ತಿ ಬಯಸುತ್ತಾರೆ, ಆದರೆ ಎಲ್ಲರ ಧ್ವನಿಯೊಂದೇ ಮುಕ್ತಿ ಎನ್ನುವುದಾಗಿದೆ. ಅಂದಾಗ ಈಗ ಮುಕ್ತಿದಾತರಾಗಿ ಮುಕ್ತಿಯ ಮಾರ್ಗವನ್ನು ತಿಳಿಸಿರಿ ಅಥವಾ ಮುಕ್ತಿಯ ಆಸ್ತಿಯನ್ನು ಕೊಡಿ. ಧ್ವನಿಯಂತು ತಲುಪುತ್ತದೆಯಲ್ಲವೆ ಅಥವಾ ಹೀಗೆ ತಿಳಿಯುತ್ತೀರಾ - ಇದಂತು ತಂದೆಯ ಕಾರ್ಯವಾಗಿದೆ. ನಮ್ಮದೇನಿದೆ! ಪ್ರಾಲಬ್ಧವನ್ನು ತಾವು ಪಡೆಯಬೇಕು, ತಂದೆಯವರು ಪಡೆಯುವುದಿಲ್ಲ. ಪ್ರಜೆ ಅಥವಾ ಭಕ್ತರೂ ಸಹ ತಮಗೆ ಬೇಕಾಗಿದೆ. ತಂದೆಯವರಿಗೆ ಬೇಕಾಗಿಲ್ಲ. ಯಾರು ತಮ್ಮ ಭಕ್ತರಾಗಿರುತ್ತಾರೆ, ಅವರು ಸ್ವತಹವಾಗಿಯೇ ತಂದೆಗೆ ಮಕ್ಕಳಾಗಿ ಬಿಡುತ್ತಾರೆ. ಏಕೆಂದರೆ ದ್ವಾಪರದಲ್ಲಿ ತಾವುಗಳೇ ಮೊದಲ ಭಕ್ತರಾಗುತ್ತೀರಿ. ಮೊದಲು ತಂದೆಯ ಪೂಜೆ ಪ್ರಾರಂಭಿಸುತ್ತೀರಿ. ಆದ್ದರಿಂದ ಈಗ ತಮ್ಮನ್ನು ಎಲ್ಲರೂ ಫಾಲೋ ಮಾಡುತ್ತಾರೆ. ಆದ್ದರಿಂದ ಈಗ ಏನು ಮಾಡಬೇಕಾಗಿದೆ? ಅವರ ಕೂಗನ್ನು ಕೇಳಿಸಿಕೊಳ್ಳಿರಿ. ಮುಕ್ತಿದಾತರಾಗಿರಿ. ಒಳ್ಳೆಯದು!

ಸದಾ ಆತ್ಮಿಕ ಶಕ್ತಿಯ ಯುಕ್ತಿಯಿಂದ ಮುಕ್ತಿಯನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ, ಸದಾ ಸ್ವಯಂನ್ನು ಸೂಕ್ಷ್ಮ ಬಂಧನಗಳಿಂದ ಮುಕ್ತ ಮಾಡಿಕೊಂಡು ಮುಕ್ತಿದಾತರಾಗುವ, ಸದಾ ಸ್ವಯಂನ್ನು ಆಂತರಿಕ ಖುಷಿ, ಅತೀಂದ್ರಿಯ ಸುಖದ ಅನುಭೂತಿಗಳಲ್ಲಿ ಬಹಳ ಮುಂದುವರೆಯುವಂತಹ, ಸದಾ ಸರ್ವರ ಪ್ರತಿ ಮುಕ್ತಾತ್ಮರನ್ನಾಗಿ ಮಾಡುವಂತಹ ಶುಭ ಭಾವನೆಯುಳ್ಳಂತಹ, ಹೀಗೆ ಆತ್ಮಿಕ ಶಕ್ತಿಶಾಲಿಯಾಗಿರುವ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಪಾರ್ಟಿಯೊಂದಿಗೆ:- ಕೇಳುವುದರ ಜೊತೆ ಜೊತೆಗೆ ಸ್ವರೂಪರಾಗುವುದರಲ್ಲಿಯೂ ಶಕ್ತಿಶಾಲಿ ಆತ್ಮರಾಗಿದ್ದೀರಲ್ಲವೆ! ಸದಾ ತಮ್ಮ ಸಂಕಲ್ಪಗಳಲ್ಲಿ ಪ್ರತಿನಿತ್ಯವೂ ಯಾವುದಾದರೊಂದು ಉಮ್ಮಂಗದ ಸಂಕಲ್ಪವನ್ನು ಸ್ವಯಂ ಬಗ್ಗೆ ಹಾಗೂ ಅನ್ಯರ ಬಗ್ಗೆ ಇಡಿ. ಹೇಗೆ ಇತ್ತೀಚೆಗೆ ವಾರ್ತಾ ಪತ್ರಿಕೆಯಲ್ಲಿ ಅಥವಾ ಕೆಲವು ಸ್ಥಾನಗಳಲ್ಲಿ "ಇಂದಿನ ವಿಚಾರ" ಎಂದು ವಿಶೇಷವಾಗಿ ಬರೆಯುತ್ತಾರಲ್ಲವೆ. ಹಾಗೆಯೇ ಪ್ರತಿ ನಿತ್ಯವೂ ಯಾವುದಾದರೊಂದು ಉಮ್ಮಂಗ-ಉತ್ಸಾಹದ ಮನಸ್ಸಿನ ಸಂಕಲ್ಪದಲ್ಲಿ, ಇಮರ್ಜ್ ರೂಪದಲ್ಲಿ ತನ್ನಿರಿ. ಮತ್ತು ಅದೇ ಸಂಕಲ್ಪದಿಂದ ಸ್ವಯಂನಲ್ಲಿಯೂ ಸ್ವರೂಪವನ್ನಾಗಿ ಮಾಡಿಕೊಳ್ಳಿರಿ ಮತ್ತು ಅನ್ಯರ ಸೇವೆಯಲ್ಲಿ ಉಪಯೋಗಿಸುತ್ತೀರೆಂದರೆ ಏನಾಗುತ್ತೀರಿ? ಸದಾ ಹೊಸ ಉಮ್ಮಂಗ-ಉತ್ಸಾಹವಿರುತ್ತದೆ. ಇಂದು ಇದನ್ನು ಮಾಡುತ್ತೇವೆ, ಇಂದು ಇದನ್ನು ಮಾಡುತ್ತೇವೆ ಎನ್ನುವುದಿರುತ್ತದೆ. ಹೇಗೆ ಯಾವುದಾದರೂ ವಿಶೇಷವಾದ ಕಾರ್ಯಕ್ರಮ ಇರುತ್ತದೆಯೆಂದರೆ ಉಮ್ಮಂಗ-ಉತ್ಸಾಹವು ಬರುತ್ತದೆ, ಏಕೆ? ಯೋಜನೆಯನ್ನು ಮಾಡುತ್ತೀರಲ್ಲವೆ - ಇಂದು ಇದನ್ನು ಮಾಡುತ್ತೇವೆ, ನಂತರ ಇದನ್ನು ಮಾಡುತ್ತೇವೆ ಎಂದು. ಇದರಿಂದ ವಿಶೇಷವಾಗಿ ಉಮ್ಮಂಗ-ಉತ್ಸಾಹವು ಬರುತ್ತದೆ. ಹೀಗೆ ಪ್ರತಿನಿತ್ಯವೂ ಅಮೃತವೇಳೆ ವಿಶೇಷವಾಗಿ ಉಮ್ಮಂಗ-ಉತ್ಸಾಹದ ಸಂಕಲ್ಪ ಮಾಡಿರಿ ಮತ್ತು ಪರಿಶೀಲನೆ ಮಾಡುತ್ತೀರೆಂದರೆ, ತಮಗಾಗಿಯೂ ಸದಾಕಾಲಕ್ಕಾಗಿ ಉತ್ಸಾಹವಿರುವ ಜೀವನವಾಗುತ್ತದೆ ಮತ್ತು ಉತ್ಸಾಹವನ್ನು ತರಿಸುವವರೂ ಸಹ ಆಗಿ ಬಿಡುತ್ತೀರಿ. ತಿಳಿಯಿತೆ - ಹೇಗೆ ಮನೋರಂಜನೆಯ ಕಾರ್ಯಕ್ರಮವಾಗುತ್ತದೆ, ಹಾಗೆಯೇ ಪ್ರತಿನಿತ್ಯವೂ ಮನಸ್ಸಿನ ಈ ಮನೋರಂಜನೆಯ ಕಾರ್ಯಕ್ರಮವಿರಲಿ. ಒಳ್ಳೆಯದು.

2. ಸದಾ ಶಕ್ತಿಶಾಲಿ ನೆನಪಿನಲ್ಲಿ ಮುಂದುವರೆಯುತ್ತಿರುವ ಆತ್ಮರಾಗಿದ್ದೀರಲ್ಲವೆ? ಶಕ್ತಿಶಾಲಿ ನೆನಪಿಲ್ಲದೆ ಯಾವುದೇ ಅನುಭವವಾಗಲು ಸಾಧ್ಯವಿಲ್ಲ. ಆದ್ದರಿಂದ ಸದಾ ಶಕ್ತಿಶಾಲಿಯಾಗಿ ಮುಂದುವರೆಯುತ್ತಾ ಇರಿ. ಸದಾ ತಮ್ಮ ಶಕ್ತಿಯನುಸಾರ ಈಶ್ವರನ ಸೇವೆಯ ತೊಡಗಿ ಬಿಡಿ ಮತ್ತು ಸೇವೆಯ ಫಲವನ್ನು ಪಡೆಯಿರಿ. ಎಷ್ಟು ಶಕ್ತಿಯಿದೆ, ಅಷ್ಟು ಸೇವೆಯಲ್ಲಿ ಉಪಯೋಗಿಸುತ್ತಾ ಸಾಗಿರಿ. ಭಲೆ ತನುವಿನಿಂದಿರಬಹುದು, ಮನಸ್ಸಿನಿಂದಿರಬಹುದು ಅಥವಾ ಧನದಿಂದ ಸೇವೆಯಾಗುತ್ತಿರಲಿ. ಒಂದಕ್ಕೆ ಪದಮದಷ್ಟು ಸಿಗಲೇಬೇಕು. ತಮಗಾಗಿ ಜಮಾ ಮಾಡಿಕೊಳ್ಳುತ್ತಿರಿ. ಅನೇಕ ಜನ್ಮಗಳಿಗಾಗಿ ಜಮಾ ಮಾಡಬೇಕಾಗಿದೆ. ಒಂದು ಜನ್ಮದಲ್ಲಿ ಜಮಾ ಮಾಡುವುದರಿಂದ 21 ಜನ್ಮಗಳಿಗಾಗಿ ಪರಿಶ್ರಮ ಪಡುವುದರಿಂದ ಮುಕ್ತರಾಗುತ್ತೀರಿ. ಈ ರಹಸ್ಯವನ್ನು ತಿಳಿಯುತ್ತೀರಲ್ಲವೇ? ಅಂದಮೇಲೆ ಸದಾ ತಮ್ಮ ಭವಿಷ್ಯವನ್ನು ಶ್ರೇಷ್ಠ ಮಾಡಿಕೊಳ್ಳುತ್ತಾ ಸಾಗಿರಿ. ಖುಷಿ-ಖುಷಿಯಿಂದ ತಮ್ಮನ್ನು ಸೇವೆಯಲ್ಲಿ ಮುಂದುವರೆಸುತ್ತಾ ಸಾಗಿರಿ. ಸದಾ ನೆನಪಿನ ಮೂಲಕ ಏಕರಸ ಸ್ಥಿತಿಯಿಂದ ಮುಂದುವರೆಯಿರಿ.

3. ನೆನಪಿನ ಖುಷಿಯಿಂದ ಅನೇಕ ಆತ್ಮರಿಗೆ ಖುಷಿ ಕೊಡುವಂತಹ ಸೇವಾಧಾರಿ ಆಗಿದ್ದೀರಲ್ಲವೆ. ಸತ್ಯ ಸೇವಾಧಾರಿ ಅರ್ಥಾತ್ ಸದಾ ಸ್ವಯಂ ಲಗನ್ನಿನಲ್ಲಿ ಮಗ್ನರಾಗಿರಿ ಮತ್ತು ಅನ್ಯರನ್ನೂ ಲಗನ್ನಿನಲ್ಲಿ ಮಗ್ನರನ್ನಾಗಿ ಮಾಡುವವರು. ಪ್ರತಿಯೊಂದು ಸ್ಥಾನದ ಸೇವೆಯು ತಮ್ಮ-ತಮ್ಮದಾಗಿದೆ. ಆದರೂ ಸ್ವಯಂ ಲಕ್ಷ್ಯವನ್ನಿಟ್ಟು ಮುಂದುವರೆಯುತ್ತೀರೆಂದರೆ, ಹೀಗೆ ಮುಂದುವರೆಯುವುದು ಬಹಳ ಖುಷಿಯ ಮಾತಾಗಿದೆ. ವಾಸ್ತವದಲ್ಲಿ ಈ ಲೌಕಿಕ ವಿದ್ಯೆ ಮುಂತಾದುವೆಲ್ಲವೂ ವಿನಾಶಿಯಾಗಿದೆ, ಅವಿನಾಶಿ ಪ್ರಾಪ್ತಿಯ ಸಾಧನವು ಕೇವಲ ಈ ವಿದ್ಯೆಯಾಗಿದೆ. ಹೀಗೆ ಅನುಭವ ಮಾಡುತ್ತೀರಲ್ಲವೆ. ನೋಡಿ, ತಾವು ಸೇವಾಧಾರಿಗಳಿಗೆ ಡ್ರಾಮಾದ ಎಷ್ಟೊಂದು ಗೋಲ್ಡನ್ ಚಾನ್ಸ್ ಸಿಕ್ಕಿದೆ. ಇದೇ ಗೋಲ್ಡನ್ ಚಾನ್ಸ್ನ್ನು ಎಷ್ಟು ಮುಂದುವರೆಸುತ್ತೀರಿ, ಅಷ್ಟು ತಮ್ಮ ಕೈಯಲ್ಲಿದೆ. ಇಂತಹ ಸುವರ್ಣಾವಕಾಶವು ಎಲ್ಲರಿಗೂ ಸಿಗುವುದಿಲ್ಲ. ಕೋಟಿಯಲ್ಲಿ ಕೆಲವರಿಗಷ್ಟೇ ಸಿಗುತ್ತದೆ. ತಮಗೆ ಸಿಕ್ಕಿ ಬಿಟ್ಟಿದೆ. ಇಷ್ಟೂ ಖುಷಿಯಿರುತ್ತದೆಯೇ? ಪ್ರಪಂಚದಲ್ಲಂತು ಯಾರ ಬಳಿಯೂ ಇಲ್ಲ, ಅದು ನಮ್ಮ ಬಳಿಯಿದೆ. ಇಂತಹ ಖುಷಿಯಲ್ಲಿ ಸದಾ ತಾವಿರಿ ಮತ್ತು ಅನ್ಯರನ್ನೂ ಖುಷಿಯಲ್ಲಿ ತನ್ನಿರಿ. ಸ್ವಯಂ ಎಷ್ಟು ಮುಂದುವರೆಯುತ್ತೀರಿ, ಅಷ್ಟು ಅನ್ಯರನ್ನು ಮುಂದುವರೆಸುತ್ತೀರಿ ಸದಾ ಮುಂದುವರೆಯುವವರು, ಇಲ್ಲಿ-ಅಲ್ಲಿ ನೋಡುತ್ತಾ ನಿಲ್ಲುವವರಲ್ಲ. ಸದಾ ತಂದೆ ಮತ್ತು ಸೇವೆ ಮುಂದಿರಲಿ, ಅಷ್ಟೇ. ನಂತರ ಸದಾ ಉನ್ನತಿಯನ್ನು ಪಡೆಯುತ್ತಿರುತ್ತೀರಿ. ಸದಾ ತಮ್ಮನ್ನು ತಂದೆಗೆ ಅಗಲಿ ಮರಳಿ ಸಿಕ್ಕಿರುವವರಾಗಿದ್ದೀರಿ, ಹೀಗೆ ತಿಳಿದುಕೊಂಡು ನಡೆಯಿರಿ.

ನೌಕರಿ ಮಾಡುವಂತಹ ಕುಮಾರಿಯರೊಂದಿಗೆ:-
1. ಎಲ್ಲರ ಲಕ್ಷ್ಯವಂತು ಶ್ರೇಷ್ಠವಾಗಿದೆಯಲ್ಲವೆ. ಹೀಗಂತು ತಿಳಿಯುವುದಿಲ್ಲವೇ ಎರಡು ಕಡೆ ನಡೆಯುತ್ತಿರುತ್ತೇವೆ. ಏಕೆಂದರೆ ಯಾವಾಗ ಯಾವುದೇ ಬಂಧನವಾಗುತ್ತದೆ ಎಂದರೆ ಎರಡು ಕಡೆ ನಡೆಯುವುದು ಬೇರೆ ಮಾತಾಗಿದೆ. ಆದರೆ ನಿರ್ಬಂಧನ ಆತ್ಮರು ಎರಡು ಕಡೆ ಇರುವುದು ಅರ್ಥಾತ್ ಸಿಕ್ಕಿ ಹಾಕಿಕೊಂಡಿರುವುದು. ಒಂದಲ್ಲ ಒಂದು ಸಂಧರ್ಭವುಂಟಾಗುತ್ತದೆ, ಆದ್ದರಿಂದ ಬಾಪ್ದಾದಾರವರು ಅನುಮತಿ ಕೊಡುತ್ತಾರೆ ಆದರೆ ಮನಸ್ಸಿನ ಬಂಧನವಿದೆಯೆಂದರೆ, ಇದು ಸಿಕ್ಕಿಹಾಕಿಕೊಳ್ಳುವುದಾಯಿತು. ಒಂದು ಕಾಲು ಇಲ್ಲಿದ್ದಂತಾಯಿತು, ಒಂದು ಕಾಲು ಅಲ್ಲಿದ್ದಂತಾಯಿತೆಂದರೆ ಮತ್ತೇನಾಗುತ್ತದೆ? ಒಂದುವೇಳೆ ಒಂದು ದೋಣಿಯಲ್ಲಿ ಒಂದು ಕಾಲನ್ನಿಡಿ, ಇನ್ನೊಂದು ದೋಣಿಯಲ್ಲಿ ಇನ್ನೊಂದು ಕಾಲನ್ನಿಡುತ್ತೀರೆಂದರೆ ಗತಿಯೇನಾಗುತ್ತದೆ? ಬೇಸರವಾಗುತ್ತೀರಲ್ಲವೆ. ಆದ್ದರಿಂದ ಎರಡೂ ಕಾಲುಗಳು ಒಂದು ದೋಣಿಯಲ್ಲಿರಲಿ. ಸದಾ ತಮ್ಮಲ್ಲಿ ಸಾಹಸವನ್ನಿಡಿ. ಸಾಹಸವನ್ನಿಡುವುದರಿಂದ ಸಹಜವಾಗಿಯೇ ಪಾರು ಮಾಡಿ ಬಿಡುತ್ತೀರಿ, ಸದಾ ಇದನ್ನು ನೆನಪಿಟ್ಟುಕೊಳ್ಳಿರಿ - ನನ್ನ ಜೊತೆ ಬಾಬಾ ಇದ್ದಾರೆ. ಒಂಟಿಯಿಲ್ಲ, ಆಗ ಯಾವುದೇ ಕಾರ್ಯವನ್ನು ಮಾಡಬೇಕೆಂದು ಬಯಸುತ್ತೀರಿ, ಮಾಡಬಲ್ಲಿರಿ.

2. ಕುಮಾರಿಯರದು ಸಂಗಮಯುಗದಲ್ಲಿ ವಿಶೇಷ ಪಾತ್ರವಿದೆ, ತಮ್ಮನ್ನು ಇಂತಹ ವಿಶೇಷ ಪಾತ್ರಧಾರಿಯನ್ನಾಗಿ ಮಾಡಿಕೊಂಡಿದ್ದೀರಾ? ಅಥವಾ ಈಗಿನವರೆಗೂ ಸಾಧಾರಣರಾಗಿದ್ದೀರಾ? ತಮ್ಮ ವಿಶೇಷತೆಯೇನಾಗಿದೆ? ವಿಶೇಷತೆಯು ಸೇವಾಧಾರಿಯಾಗುವುದಾಗಿದೆ. ಯಾರು ಸೇವಾಧಾರಿ ಆಗಿದ್ದಾರೆ, ಅವರು ವಿಶೇಷವಾಗಿದ್ದಾರೆ. ಸೇವಾಧಾರಿಯಿಲ್ಲದಿದ್ದರೆ ಸಾಧಾರಣರಾಗಿ ಬಿಟ್ಟಿರಿ. ಲಕ್ಷ್ಯವನ್ನೇನು ಇಡಬೇಕು? ಸಂಗಮಯುಗದಲ್ಲಿಯೇ ಈ ಅವಕಾಶವು ಸಿಗುತ್ತದೆ. ಒಂದುವೇಳೆ ಈಗ ಈ ಅವಕಾಶವನ್ನು ತೆಗೆದುಕೊಳ್ಳಲಿಲ್ಲವೆಂದರೆ, ಇಡೀ ಕಲ್ಪದಲ್ಲಿ ಸಿಗುವುದಿಲ್ಲ. ಸಂಗಮಯುಗಕ್ಕೇ ವಿಶೇಷವಾದ ವರದಾನವಿದೆ. ಲೌಕಿಕ ವಿದ್ಯೆಯನ್ನು ಓದುತ್ತಿದ್ದರೂ ಲಗನ್ ಈ ವಿದ್ಯೆಯಲ್ಲಿರಲಿ. ಆಗ ಆ ವಿದ್ಯೆಯು ವಿಘ್ನ ರೂಪವಾಗುವುದಿಲ್ಲ. ಹಾಗಾದರೆ ಎಲ್ಲರೂ ತಮ್ಮ ಭಾಗ್ಯವನ್ನು ರೂಪಿಸಿಕೊಳ್ಳುತ್ತಾ ಮುಂದುವರೆಯಿರಿ. ತಮ್ಮ ಭಾಗ್ಯದ ನಶೆಯೆಷ್ಟಿರುತ್ತದೆ, ಅಷ್ಟು ಸಹಜವಾಗಿ ಮಾಯಾಜೀತರಾಗಿ ಬಿಡುತ್ತೀರಿ. ಇದು ಆತ್ಮಿಕ ನಶೆಯಾಗಿದೆ. ಸದಾ ತಮ್ಮ ಭಾಗ್ಯದ ಹಾಡನ್ನು ಹಾಡುತ್ತಿರುತ್ತೀರೆಂದರೆ, ಹಾಡನ್ನಾಡುತ್ತಾ-ಹಾಡುತ್ತಾ ತಮ್ಮ ರಾಜ್ಯದಲ್ಲಿ ತಲುಪಿ ಬಿಡುತ್ತೀರಿ.

ವರದಾನ:  
ಸ್ವಯಂನ ಸರ್ವ ಬಲಹೀನತೆಗಳನ್ನು ದಾನದ ವಿಧಿಯಿಂದ ಸಮಾಪ್ತಿಗೊಳಿಸುವಂತಹ ದಾತಾ, ವಿದಾತಾ ಭವ.

ಭಕ್ತಿಯಲ್ಲಿ ಈ ನಿಯಮವಿರುತ್ತದೆ - ಯಾವಾಗ ಯಾವುದೇ ವಸ್ತುವಿನ ಕೊರತೆಯಾಗುತ್ತದೆಯೆಂದರೆ ಹೇಳುತ್ತಾರೆ - ದಾನ ಮಾಡಿರಿ. ದಾನ ಮಾಡುವುದರಿಂದ ಕೊಡುವುದು - ತೆಗೆದುಕೊಳ್ಳುವುದಾಗುತ್ತದೆ. ಅಂದಮೇಲೆ ಯಾವುದೇ ಬಲಹೀನತೆಯನ್ನು ಸಮಾಪ್ತಿ ಮಾಡುವುದಕ್ಕಾಗಿ ದಾತಾ ಮತ್ತು ವಿದಾತಾ ಆಗಿರಿ. ಒಂದುವೇಳೆ ತಾವು ಅನ್ಯರಿಗೆ ತಂದೆಯ ಖಜಾನೆಯನ್ನು ಕೊಡಲು ನಿಮಿತ್ತ ಆಶ್ರಯವಾಗುತ್ತೀರೆಂದರೆ, ಬಲಹೀನತೆಗಳು ಸ್ವತಹವಾಗಿ ದೂರವಾಗಿ ಬಿಡುತ್ತದೆ. ತಮ್ಮ ದಾತಾ-ವಿದಾತನ ಶಕ್ತಿಶಾಲಿ ಸಂಸ್ಕಾರಗಳನ್ನು ಇಮರ್ಜ್ ಮಾಡಿಕೊಳ್ಳುತ್ತೀರೆಂದರೆ, ಬಲಹೀನತೆಯ ಸಂಸ್ಕಾರವು ಸ್ವತಹವಾಗಿ ಸಮಾಪ್ತಿಯಾಗಿ ಬಿಡುತ್ತದೆ.

ಸ್ಲೋಗನ್:
ತಮ್ಮ ಶ್ರೇಷ್ಠ ಭಾಗ್ಯದ ಗುಣಗಾನ ಮಾಡುತ್ತಿರಿ, ಬಲಹೀನತೆಗಳನ್ನಲ್ಲ.


ಸ್ವ-ಪರಿವರ್ತನೆ, ಸ್ವ-ಉನ್ನತಿಗಾಗಿ ಸ್ವಯಂನ್ನು ಪರಿಶೀಲನೆ ಮಾಡಿಕೊಳ್ಳಲು ಅವ್ಯಕ್ತವಾಣಿಯಿಂದ ಪ್ರಶ್ನೆಗಳು:
1. ಬಂಧನಯುಕ್ತ ಆತ್ಮಗಳ ಲಕ್ಷಣಗಳೇನಾಗಿವೆ?
2. ಸಂಗಮಯುಗದ ವಿಶೇಷತೆ ಏನು?
3. ಸಂಕಲ್ಪಗಳ ಬಂಧನವನ್ನು ಎಂತಹ ಬಂಧನವೆಂದು ಕರೆಯಲಾಗುವುದು?
4. ಬಂಧನಗಳಿಂದ ಮುಕ್ತರಾಗಲು ಯುಕ್ತಿ ಏನಾಗಿದೆ?
5. ಮನಸ್ಸಾ ಬಂಧನಯುಳ್ಳ ಆತ್ಮಗಳ ಲಕ್ಷಣಗಳು ಏನು?
6. ಬಲಹೀನತೆಗಳನ್ನು ಸಮಾಪ್ತಿ ಮಾಡಲು ಏನಾಗಬೇಕು?
7. ಅಲ್ಪಕಾಲದ ಸಾಧನಗಳು ಯಾವ ಅನುಭವವನ್ನು ಮಾಡಿಸುವುದಿಲ್ಲ?
8. ಯಾವ ಗುಣಗಾನವನ್ನು ಮಾಡುತ್ತಿರಬೇಕು?
9. ಶಾರೀರಿಕ ಬಂಧನಗಳಿಂದ ಮುಕ್ತರಾಗಲು ಯುಕ್ತಿ ಏನು?
10. ಯಾವುದೇ ಬಲಹೀನತೆಯನ್ನು ಸಮಾಪ್ತಿ ಮಾಡಲು ಏನಾಗಬೇಕಾಗಿದೆ?