ಪ್ರಾತಃಮುರುಳಿ ಓಂ ಶಾಂತಿ ಬಾಪ್‌ದಾದಾ ಮಧುಬನ


“ಮಧುರ ಮಕ್ಕಳೇ - ನೀವು ಈಶ್ವರೀಯ ರಕ್ಷಣಾ ಸೈನಿಕರಾಗಿದ್ದಿರಿ, ನೀವು ಎಲ್ಲರಿಗೆ ಸದ್ಗತಿ ನೀಡಬೇಕಾಗಿದೆ, ಎಲ್ಲರ ಪ್ರೀತಿಯನ್ನು ಒಬ್ಬ ತಂದೆಯೊಂದಿಗೆ ಜೋಡಣೆ ಮಾಡಿಸಬೇಕಾಗಿದೆ”.

ಪ್ರಶ್ನೆ :

ಮನುಷ್ಯರು ತಮ್ಮ ಬುದ್ಧಿಯನ್ನು ಯಾವ ಮಾತಿನಲ್ಲಿ ತೊಡಗಿಸುತ್ತಾರೆ ಮತ್ತು ನೀವು ತಮ್ಮ ಬುದ್ಧಿಯನ್ನು ಎಲ್ಲಿ ತೊಡಗಿಸಬೇಕಾಗಿದೆ?

ಉತ್ತರ :

ಮನುಷ್ಯರು ಆಕಾಶ ಮತ್ತು ಸೃಷ್ಟಿಯ ಅಂತ್ಯವನ್ನು ಹುಡುಕುವುದರಲ್ಲಿ ತಮ್ಮ ಬುದ್ಧಿಯನ್ನು ತೊಡಗಿಸುತ್ತಿದ್ದಾರೆ, ಆದರೆ ಇದರಿಂದ ಯಾವುದೇ ಲಾಭವಿಲ್ಲ. ಇದರ ಅಂತ್ಯವಂತೂ ಸಿಗಲು ಸಾಧ್ಯವಿಲ್ಲ. ನೀವು ಮಕ್ಕಳು ತಮ್ಮ ಬುದ್ದಿಯನ್ನು ಪೂಜ್ಯರಾಗುವುದರಲ್ಲಿ ಉಪಯೋಗಿಸುತ್ತೀರಿ. ಅವರನ್ನು ಪ್ರಪಂಚವು ಪೂಜಿಸುವುದಿಲ್ಲ. ನೀವು ಮಕ್ಕಳಂತೂ ಪೂಜ್ಯ ದೇವತೆಗಳಾಗುತ್ತೀರಿ.

ಗೀತೆ :

ನಿಮ್ಮನ್ನು ಪಡೆದ ನಾನು ಜಗತ್ತನ್ನೇ ಪಡೆದೆನು............

ಓಂಶಾಂತಿ

ಮಕ್ಕಳಿಗೆ ಇದು ಅರ್ಥವಾಗಿದೆ, ಇದು ಜ್ಞಾನಮಾರ್ಗವಾಗಿದೆ. ಅದು ಭಕ್ತಿ ಮಾರ್ಗವಾಗಿದೆ. ಈಗ ಪ್ರಶ್ನೆ ಉದ್ಭವಿಸುತ್ತದೆ - ಭಕ್ತಿಮಾರ್ಗವು ಒಳ್ಳೆಯದೋ ಅಥವಾ ಜ್ಞಾನ ಮಾರ್ಗವು ಒಳ್ಳೆಯದೋ? ಎರಡು ಮಾತುಗಳು ಇದೆಯಲ್ಲವೆ? ಜ್ಞಾನದಿಂದ ಸದ್ಗತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಅವಶ್ಯವಾಗಿ ಭಕ್ತಿ ಮತ್ತು ಜ್ಞಾನ ಎರಡೂ ಬೇರೆ-ಬೇರೆ ಎಂದು ಹೇಳಲಾಗುತ್ತದೆ. ಮನುಷ್ಯರು ತಿಳಿದುಕೊಳ್ಳುತ್ತಾರೆ - ಭಕ್ತಿ ಮಾಡುವುದರಿಂದ ಜ್ಞಾನ ಸಿಗುವುದು ಆಗ ಸದ್ಗತಿಯಾಗುವುದು. ಭಕ್ತಿಯ ಮಧ್ಯದಲ್ಲಿ ಜ್ಞಾನವು ಬರಲು ಸಾಧ್ಯವಿಲ್ಲ. ಭಕ್ತಿಯು ಎಲ್ಲರಿಗಾಗಿ ಇದೆ, ಜ್ಞಾನವೂ ಎಲ್ಲರಿಗಾಗಿ ಇದೆ. ಈ ಸಮಯವು ಕಲಿಯುಗದ ಅಂತ್ಯವಾಗಿದೆ ಅಂದಮೇಲೆ ಅವಶ್ಯವಾಗಿ ಎಲ್ಲರ ದುರ್ಗತಿಯಾಗುವುದು ಆದ್ದರಿಂದಲೇ ಕೂಗುತ್ತಾರೆ ಮತ್ತು ಅನ್ಯಸಂಗಗಳನ್ನು ಬಿಟ್ಟು ಈಗ ನಿಮ್ಮ ಸಂಗವನ್ನು ಸೇರುವೆನು ಎಂದು ಹಾಡುತ್ತಾರೆ. ಈಗ ಅವರು ಯಾರು? ಯಾರ ಜೊತೆ ಜೋಡಿಸಬೇಕು ಎಂಬುದನ್ನು ತಿಳಿದುಕೊಂಡಿಲ್ಲ. ಬಹುತೇಕವಾಗಿ ಬುದ್ದಿಯು ಕೃಷ್ಣನ ಕಡೆಯೇ ಹೋಗುತ್ತದೆ. ನಾವು ಸತ್ಯಪ್ರೀತಿಯನ್ನು ನಿಮ್ಮೊಂದಿಗೆ ಜೋಡಿಸುವೆವು ಎಂದು ಹೇಳುತ್ತಾರೆ. ಯಾವಾಗ ಕೃಷ್ಣನೊಂದಿಗೆ ಪ್ರೀತಿಯನ್ನು ಜೋಡಿಸುತ್ತಾರೆಂದಮೇಲೆ ಮತ್ತೆ ಗುರು-ಗೋಸಾಯಿ ಯಾರದೇ ಅವಶ್ಯಕತೆಯಿಲ್ಲ. ಕೃಷ್ಣನನ್ನೇ ನೆನಪು ಮಾಡಬೇಕಾಗಿದೆ. ಕೃಷ್ಣನ ಚಿತ್ರವಂತೂ ಎಲ್ಲರ ಬಳಿಯಿರುತ್ತದೆ. ಕೃಷ್ಣ ಜಯಂತಿಯನ್ನೂ ಆಚರಿಸುತ್ತಾರೆ, ಮತ್ತ್ಯಾರ ಬಳಿಯೂ ಹೋಗುವ ಅವಶ್ಯಕತೆಯಿಲ್ಲ. ಹೇಗೆ ಭಕ್ತಮೀರಾ ಒಬ್ಬರ ಸಂಗವನ್ನು ಸೇರಿದರು, ಕೆಲಸ-ಕಾರ್ಯಗಳನ್ನು ಮಾಡುತ್ತಾ ಕೃಷ್ಣನನ್ನೇ ನೆನಪು ಮಾಡಿದರು. ಮನೆಯಲ್ಲಿ ತಿನ್ನುವುದು, ಕುಡಿಯುವುದು, ಮಾಡುವುದು ಇದ್ದೇ ಇರುತ್ತದೆ ಆದರೆ ಸತ್ಯಪ್ರೀತಿಯನ್ನು ಒಬ್ಬ ಕೃಷ್ಣನ ಜೊತೆ ಜೋಡಿಸಿದೆವು. ಹೇಗೆ ಅವರು ಪ್ರಿಯತಮ-ಪ್ರಿಯತಮೆಯಾಗಿಬಿಟ್ಟರು. ಕೃಷ್ಣನನ್ನು ನೆನಪು ಮಾಡುವುದರಿಂದ ಫಲವು ಸಿಗುತ್ತದೆ. ಕೃಷ್ಣನನ್ನಂತೂ ಎಲ್ಲರೂ ತಿಳಿದುಕೊಂಡಿದ್ದಾರೆ. ನಾವು ಸತ್ಯಪ್ರೀತಿಯನ್ನು ನಿಮ್ಮೊಂದಿಗೆ ಜೋಡಿಸಿದೆವು ಎಂದು ಹಾಡುತ್ತಾರೆ. ಸರ್ವಶ್ರೇಷ್ಠ ಸತ್ಯವಂತನಂತೂ ಪರಮಪಿತನೇ ಆಗಿದ್ದಾರೆ. ಎಲ್ಲರಿಗೆ ಆಸ್ತಿಯನ್ನು ಕೊಡುವವರು ಒಬ್ಬರೇ ತಂದೆಯಾಗಿದ್ದಾರೆ, ಅವರನ್ನು ಯಾರೂ ಅರಿತುಕೊಂಡಿಲ್ಲ. ಭಲೆ ಪರಮಪಿತ ಪರಮಾತ್ಮ ಶಿವನೆಂದು ಹೇಳುತ್ತಾರೆ, ಆದರೆ ಅವರು ಯಾವಾಗ ಬರುತ್ತಾರೆ ಎಂಬುದನ್ನು ತಿಳಿದುಕೊಂಡಿಲ್ಲ. ಶಿವಜಯಂತಿಯಾಗುತ್ತದೆ ಎಂದರೆ ಅವಶ್ಯವಾಗಿ ಅವರು ಬರುತ್ತಾರೆ, ಆದರೆ ಯಾವಾಗ ಹೇಗೆ ಬರುತ್ತಾರೆ, ಬಂದು ಏನು ಮಾಡುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ. ಅವರು ಸರ್ವರ ಸದ್ಗತಿ ಮಾಡುತ್ತಾರೆ ಎಂಬುದನ್ನು ಯಾವುದೇ ಮನುಷ್ಯ ಮಾತ್ರರು ಅರಿತುಕೊಂಡಿಲ್ಲ. ಹೇಗೆ ಮಾಡುತ್ತಾರೆ, ಸದ್ಗತಿಯ ಅರ್ಥವೇನು ಏನನ್ನೂ ತಿಳಿದು ಕೊಳ್ಳುವುದಿಲ್ಲ. ಶಿವತಂದೆಯು ಅವಶ್ಯವಾಗಿ ಸ್ವರ್ಗದ ರಾಜ್ಯಭಾಗ್ಯವನ್ನು ಕೊಟ್ಟಿರಬೇಕಲ್ಲವೆ. ನೀವು ಮಕ್ಕಳು ಆ ಧರ್ಮದವರಾಗಿದ್ದೀರಿ. ನಿಮಗಿದು ತಿಳಿದಿದೆ, ನೀವೇ ಮರೆತು ಹೋಗಿದ್ದೀರಿ ಅಂದಮೇಲೆ ಮತ್ತ್ಯಾರು ತಿಳಿದುಕೊಳ್ಳುವರು! ಈಗ ಶಿವತಂದೆಯ ಮೂಲಕ ಅರಿತಿದ್ದೀರಿ ಮತ್ತು ಅನ್ಯರಿಗೆ ತಿಳಿಸುತ್ತೀರಿ. ನೀವು ಈಶ್ವರೀಯ ರಕ್ಷಣಾ ಸೈನಿಕರಾಗಿದ್ದೀರಿ, ರಕ್ಷಣಾಸೈನಿಕರೆಂದಾದರೂ ಹೇಳಿ ಅಥವಾ ಸದ್ಗತಿಯ ಸೈನಿಕರೆಂದಾದರೂ ಹೇಳಿ. ಈಗ ನೀವು ಮಕ್ಕಳ ಮೇಲೆ ಜವಾಬ್ದಾರಿಯಿದೆ, ನೀವು ಚಿತ್ರಗಳಲ್ಲಿಯೂ ತಿಳಿಸುತ್ತೀರಿ. ಭಾಷೆಗಳು ಅನೇಕ ಇವೆ, ಮುಖ್ಯಭಾಷೆಗಳಲ್ಲಿ ಚಿತ್ರಗಳನ್ನು ಮಾಡಿಸಬೇಕಾಗಿದೆ. ಭಾಷೆಗಳಲ್ಲಿಯೂ ಬಹಳ ಜಂಜಾಟವಿದೆ ಆದ್ದರಿಂದ ಪ್ರದರ್ಶನಿ ಮಾಡಿಸಬೇಕು. ಚಿತ್ರಗಳನ್ನಿಟ್ಟು ತಿಳಿಸುವುದು ಬಹಳ ಸಹಜವಾಗುತ್ತದೆ. ಗೋಲದ ಚಿತ್ರದಲ್ಲಿಯೂ ಸಂಪೂರ್ಣ ಜ್ಞಾನವಿದೆ. ಏಣಿಯು ಕೇವಲ ಭಾರತವಾಸಿಗಳಿಗಾಗಿ ಇದೆ, ಇದರಲ್ಲಿ ಮತ್ತ್ಯಾವುದೇ ಧರ್ಮವಿಲ್ಲ. ಹಾಗೆಂದು ಹೇಳಿ ಕೇವಲ ಭಾರತವೇ ತಮೋಪ್ರಧಾನವಾಗುತ್ತದೆ, ಮತ್ತ್ಯಾವುದೂ ಆಗುವುದಿಲ್ಲವೆಂದಲ್ಲ, ತಮೋಪ್ರಧಾನರಂತೂ ಎಲ್ಲರೂ ಆಗುತ್ತಾರೆ ಅಂದಮೇಲೆ ಅವರಿಗಾಗಿಯೂ ಇರಬೇಕು. ಬುದ್ಧಿಯಲ್ಲಿ ಇವೆಲ್ಲಾ ಸೇವೆಯ ವಿಚಾರಗಳು ಬರಬೇಕು. ಇಬ್ಬರು ತಂದೆಯರ ರಹಸ್ಯವನ್ನೂ ತಿಳಿಸಬೇಕಾಗಿದೆ. ಆಸ್ತಿಯು ರಚಯಿತನಿಂದ ಸಿಗುತ್ತದೆ. ಇದೂ ಸಹ ಎಲ್ಲಾ ಧರ್ಮದವರಿಗೆ ಗೊತ್ತಿದೆ ಲಕ್ಷ್ಮೀ-ನಾರಾಯಣರು ಭಾರತದ ಮೊದಲ ಮಹಾರಾಜ-ಮಹಾರಾಣಿಯಾಗಿದ್ದರು ಅಥವಾ ಭಗವಾನ್-ಭಗವತಿಯಾಗಿದ್ದರು ಅಂದಾಗ ಅವರಿಗೆ ಈ ಸ್ವರ್ಗದ ರಾಜ್ಯವು ಹೇಗೆ ಸಿಕ್ಕಿತು? ಅವಶ್ಯವಾಗಿ ಭಗವಂತನ ಮೂಲಕ ಸಿಕ್ಕಿತು, ಇದು ಯಾವಾಗ ಹೇಗೆ ಸಿಕ್ಕಿತು ಎಂಬುದು ಯಾರಿಗೂ ತಿಳಿದಿಲ್ಲ. ಗೀತೆಯಲ್ಲಿ ಕೃಷ್ಣನ ಹೆಸರನ್ನು ಹಾಕಿ ಪ್ರಳಯವನ್ನು ತೋರಿಸಿದ್ದಾರೆ, ಫಲಿತಾಂಶವೇನೂ ಇಲ್ಲ. ಇದನ್ನು ನೀವು ಮಕ್ಕಳು ತಿಳಿಸಬೇಕಾಗಿದೆ. ಚಿತ್ರಗಳಂತೂ ಎಲ್ಲಾ ಕಡೆಯೂ ಇದೆ. ಲಕ್ಷ್ಮೀ-ನಾರಾಯಣರ ಚಿತ್ರವೂ ಇರುತ್ತದೆ. ಭಲೆ ಅವರ ಉಡುಪು, ಮುಖಲಕ್ಷಣಗಳು ಬೇರೆಯಿರಬಹುದು ಏಕೆಂದರೆ ಯಾರಿಗೆ ಏನು ಕಂಡಿತೋ ಅದರಂತೆ ಕುಳಿತು ಮಾಡಿದ್ದಾರೆ. ಶ್ರೀನಾಥ-ಶ್ರೀನಾಥಿನಿ ಈ ರಾಧೆ-ಕೃಷ್ಣರಲ್ಲವೆ. ಶ್ರೀರಾಧೆ-ಶ್ರೀಕೃಷ್ಣನಂತೂ ಕಿರೀಟಧಾರಿಗಳಲ್ಲ ಅಥವಾ ಪತಿತರೂ ಅಲ್ಲ. ರಾಜಧಾನಿಯು ಲಕ್ಷ್ಮೀ-ನಾರಾಯಣನದಾಗಿದೆ, ರಾಧೆ-ಕೃಷ್ಣನದಲ್ಲ. ಅನೇಕ ಪ್ರಕಾರದ ಮಂದಿರಗಳನ್ನು ಕಟ್ಟಿಸಿದ್ದಾರೆ, ಹೆಸರನ್ನಂತೂ ಒಂದೇ ಇಡುತ್ತಾರೆ - ಲಕ್ಷ್ಮೀ-ನಾರಾಯಣ ಎಂದು. ಲಕ್ಷ್ಮೀ-ನಾರಾಯಣರ ರಾಜಧಾನಿಯೆಂದೇ ಹೇಳುತ್ತಾರೆ. ರಾಮ-ಸೀತೆಯರ ಮನೆತನ, ಲಕ್ಷ್ಮೀ-ನಾರಾಯಣರ ಮನೆತನ, ರಾಧೆ-ಕೃಷ್ಣರ ಮನೆತನ ಎಂದು ಇರುವುದಿಲ್ಲ. ಈ ಮಾತುಗಳು ಮನುಷ್ಯರ ವಿಚಾರದಲ್ಲಿಯೂ ಬರುವುದಿಲ್ಲ. ನೀವು ಮಕ್ಕಳೂ ಸಹ ನಂಬರ್‌ವಾರ್ ಪುರುಷಾರ್ಥದ ಅನುಸಾರ ಅರಿತುಕೊಂಡಿದ್ದೀರಿ. ಯಾರಿಗೆ ಸೇವೆಯ ಉಮಂಗವಿದೆಯೋ ಅವರು ಕಾತರಿಸುತ್ತಾರೆ. ನಾವು ತಿಳಿದುಕೊಂಡಿದ್ದೇವೆಂದು ಕೆಲವರು ಹೇಳುತ್ತಾರೆ ಆದರೆ ನಿಧಾನ-ನಿಧಾನವಾಗಿ ಬಾಯಿ ತೆರೆಯುವ (ಜ್ಞಾನ ಹೇಳುವ) ಯುಕ್ತಿಗಳನ್ನೂ ರಚಿಸಬೇಕಾಗುತ್ತದೆ. ವೇದ-ಶಾಸ್ತ್ರ ಅಧ್ಯಯನ ಮಾಡುವುದರಿಂದ ಯಜ್ಞ, ತಪ ಇತ್ಯಾದಿಗಳನ್ನು ಮಾಡುವುದರಿಂದ, ತೀರ್ಥಯಾತ್ರೆ ಮಾಡುವುದರಿಂದ ಪರಮಾತ್ಮನನ್ನು ಪಡೆಯಬಹುದೆಂದು ತಿಳಿಯುತ್ತಾರೆ. ಆದರೆ ಭಗವಂತನು ತಿಳಿಸುತ್ತಾರೆ - ಇವೆಲ್ಲವೂ ನನ್ನಿಂದ ದೂರ ಮಾಡುವ ಮಾರ್ಗವಾಗಿದೆ. ಡ್ರಾಮಾದಲ್ಲಿ ಎಲ್ಲರೂ ದುರ್ಗತಿಯನ್ನು ಹೊಂದಲೇಬೇಕಾಗಿದೆ ಆದ್ದರಿಂದ ಇಂತಹ ಮಾತುಗಳನ್ನು ತಿಳಿಸುತ್ತಾರೆ. ಮೊದಲು ನಾವೂ ಸಹ ಹೇಳುತ್ತಿದ್ದೆವು – ಭಗವಂತನ ಶಿಖೆಯಿದ್ದಂತೆ. ಯಾರು ಎಲ್ಲಿಂದಲಾದರೂ ಹೋಗಬಹುದು ಎಂದು. ಆದ್ದರಿಂದ ಮನುಷ್ಯರು ಅನೇಕ ಪ್ರಕಾರದ ಮಾರ್ಗಗಳನ್ನು ಹಿಡಿದಿದ್ದಾರೆ. ಭಕ್ತಿಮಾರ್ಗದ ಮಾರ್ಗಗಳನ್ನು ಹಿಡಿದು-ಹಿಡಿದು ಯಾವಾಗ ಸುಸ್ತಾಗಿಬಿಡುವರೋ ಆಗ ಕೊನೆಗೆ ಈ ಪತಿತ-ಪಾವನ ಬಂದು ಪಾವನರಾಗುವ ಮಾರ್ಗ ತಿಳಿಸಿ, ತಮ್ಮ ವಿನಃ ಪಾವನರಾಗಲು ಸಾಧ್ಯವಿಲ್ಲ, ಸುಸ್ತಾಗಿಬಿಟ್ಟಿದ್ದೇವೆಂದು ಭಗವಂತನನ್ನೇ ಕರೆಯುತ್ತಾರೆ. ದಿನ-ಪ್ರತಿದಿನ ಭಕ್ತಿಯು ಸಂಪೂರ್ಣ ಸುಸ್ತು ಮಾಡಿಸುತ್ತದೆ. ಈಗಂತೂ ಮೇಳ ಇತ್ಯಾದಿಗಳಲ್ಲಿ ಎಷ್ಟು ಲಕ್ಷಾಂತರ ಮಂದಿ ಹೋಗಿ ಸೇರುತ್ತಾರೆ! ಅಲ್ಲಿ ಎಷ್ಟೊಂದು ಕೊಳಕಾಗುತ್ತದೆ. ಈಗಂತೂ ಅಂತ್ಯವಾಗಿದೆ. ಪ್ರಪಂಚವು ಬದಲಾಗಲಿದೆ. ವಾಸ್ತವದಲ್ಲಿ ಪ್ರಪಂಚವು ಒಂದೇ ಆಗಿದೆ, ಎರಡು ಭಾಗಗಳನ್ನು ಮಾಡಿದ್ದಾರೆ ಆದ್ದರಿಂದ ಮನುಷ್ಯರು ಸ್ವರ್ಗ ಮತ್ತು ನರಕ ಬೇರೆ-ಬೇರೆ ಪ್ರಪಂಚಗಳಾಗಿದೆ ಎಂದು ತಿಳಿದುಕೊಳ್ಳುತ್ತಾರೆ. ಆದರೆ ಇದು ಅರ್ಧ-ಅರ್ಧ ಭಾಗವಾಗಿದೆ. ಮೇಲೆ ಸತ್ಯ - ತ್ರೇತಾಯುಗ, ನಂತರ ದ್ವಾಪರ-ಕಲಿಯುಗ, ಕಲಿಯುಗದಲ್ಲಿ ತಮೋಪ್ರಧಾನರಾಗಲೇಬೇಕಾಗಿದೆ. ಸೃಷ್ಟಿಯು ಹಳೆಯದಾಗುತ್ತದೆ. ಈ ಮಾತುಗಳನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ತಬ್ಬಿಬ್ಬಾಗುತ್ತಾರೆ. ಕೆಲವರು ಕೃಷ್ಣನನ್ನು ಕೆಲವರು ರಾಮನನ್ನು ಭಗವಂತನೆಂದು ಹೇಳುತ್ತಾರೆ. ಇತ್ತೀಚೆಗಂತೂ ಮನುಷ್ಯರು ತನ್ನನ್ನೇ ಭಗವಂತನೆಂದು, ನಾನು ಈಶ್ವರನ ಅವತಾರವೆಂದು ಹೇಳಿಹೋಗುತ್ತಾರೆ. ಇದರಲ್ಲಿ ಮನುಷ್ಯರು ದೇವತೆಗಳಿಗಿಂತಲೂ ಮುಂದೆ ಹೋಗುತ್ತಾರೆ. ದೇವತೆಗಳಿಗಾದರೂ ದೇವತೆಗಳೆಂದೇ ಹೇಳುತ್ತಾರೆ, ಇಲ್ಲಂತೂ ಮನುಷ್ಯರು ತನ್ನನ್ನೇ ಭಗವಂತನೆಂದು ಹೇಳಿಕೊಳ್ಳುತ್ತಾರೆ, ಇದು ಭಕ್ತಿಮಾರ್ಗವಾಗಿದೆ. ದೇವತೆಗಳು ಸ್ವರ್ಗವಾಸಿಗಳಾಗಿದ್ದರು. ಈಗ ಕಲಿಯುಗದಲ್ಲಿ ಮನುಷ್ಯರು ಭಗವಂತನಾಗಲು ಹೇಗೆ ಸಾಧ್ಯ? ತಂದೆಯು ತಿಳಿಸುತ್ತಾರೆ - ನಾನು ಸಂಗಮದಲ್ಲಿಯೇ ಬರುತ್ತೇನೆ, ಯಾವಾಗ ನಾನು ಬಂದು ಪ್ರಪಂಚವನ್ನು ಪರಿವರ್ತನೆ ಮಾಡಬೇಕಾಗಿದೆ, ಕಲಿಯುಗದಿಂದ ಸತ್ಯಯುಗವಾದಾಗ ಉಳಿದೆಲ್ಲರೂ ಶಾಂತಿಧಾಮಕ್ಕೆ ಹೊರಟುಹೋಗುತ್ತಾರೆ. ಅದು ನಿರಾಕಾರಿ ಪ್ರಪಂಚ, ಇದು ಸಾಕಾರಿ ಪ್ರಪಂಚವಾಗಿದೆ. ತಿಳಿಸುವುದಕ್ಕಾಗಿ ನಿರಾಕಾರಿ ವೃಕ್ಷವನ್ನು ದೊಡ್ಡಗಾತ್ರದಲ್ಲಿ ಮಾಡಿಸಬೇಕಾಗಿದೆ. ಬ್ರಹ್ಮ್ ಮಹಾತತ್ವವೂ ಸಹ ಆಕಾಶದಷ್ಟೇ ದೊಡ್ಡದಾಗಿದೆ. ಎರಡರ ಅಂತ್ಯವನ್ನು ಮುಟ್ಟಲು ಸಾಧ್ಯವಿಲ್ಲ, ಭಲೆ ಪ್ರಯತ್ನಪಡುತ್ತಾರೆ, ವಿಮಾನ ಇತ್ಯಾದಿಗಳಲ್ಲಿ ಹೋಗುತ್ತಾರೆ ಆದರೆ ಅಂತ್ಯವನ್ನು ಮುಟ್ಟಲು ಸಾಧ್ಯವಿಲ್ಲ. ಸಮುದ್ರವೇ ಸಮುದ್ರ... ಆಕಾಶವೇ ಆಕಾಶವಿದೆ... ಅಲ್ಲಂತೂ ಏನೂ ಇಲ್ಲ, ಭಲೆ ಬಹಳ ಪ್ರಯತ್ನಪಡುತ್ತಾರೆ ಆದರೆ ಇವೆಲ್ಲಾ ಮಾತುಗಳಿಂದೇನು ಲಾಭ! ನಾವು ನಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸುತ್ತೇವೆಂದು ತಿಳಿದುಕೊಳ್ಳುತ್ತಾರೆ. ಇದು ಮನುಷ್ಯರ ಬುದ್ಧಿಯಾಗಿದೆ. ವಿಜ್ಞಾನದ ಅಹಂಕಾರವು ಮನುಷ್ಯರದಾಗಿದೆ. ಭಲೆ ಯಾರೆಷ್ಟಾದರೂ ಅಂತ್ಯವನ್ನು ಪಡೆಯಲಿ ಆದರೆ ಅವರನ್ನು ಇಡೀ ಪ್ರಪಂಚವು ಪೂಜಿಸುವುದಿಲ್ಲ. ದೇವತೆಗಳಿಗಂತೂ ಪೂಜೆ ನಡೆಯುತ್ತದೆ. ತಂದೆಯು ನೀವು ಮಕ್ಕಳನ್ನು ಎಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆ. ಎಲ್ಲರನ್ನೂ ಶಾಂತಿಧಾಮಕ್ಕೆ ಕರೆದುಕೊಂಡು ಹೋಗುತ್ತಾರೆ. ನಾವು ಮೂಲವತನದಿಂದ ಬರುತ್ತೇವೆಂದು, ಭಲೆ ಎಲ್ಲರಿಗೂ ತಿಳಿದಿದೆ ಆದರೆ ಯಾವ ಪ್ರಕಾರದಲ್ಲಿ ನೀವು ತಿಳಿದುಕೊಂಡಿದ್ದೀರೋ ಆ ರೀತಿ ಪ್ರಪಂಚವು ತಿಳಿದುಕೊಂಡಿಲ್ಲ. ಅದು ಏನು, ಹೇಗೆ ಆತ್ಮರು ಅಲ್ಲಿರುತ್ತಾರೆ, ಮತ್ತೆ ನಂಬರ್‌ವಾರ್ ಬರುತ್ತಾರೆ, ಇದು ಯಾರಿಗೂ ಗೊತ್ತಿಲ್ಲ. ಬ್ರಹ್ಮ್ ಮಹಾತತ್ವದಲ್ಲಿ ನಿರಾಕಾರಿ ವೃಕ್ಷವಿದೆ. ಇದನ್ನೂ ತಿಳಿದುಕೊಂಡಿಲ್ಲ - ಸತ್ಯಯುಗದಲ್ಲಿ ಕೆಲವರೇ ಇರುತ್ತಾರೆ, ಉಳಿದೆಲ್ಲಾ ಆತ್ಮರು ಮೂಲವತನದಲ್ಲಿರುತ್ತಾರೆ. ಹೇಗೆ ಇದು ಸಾಕಾರಿವತನವಾಗಿದೆಯೋ ಅದೇರೀತಿ ಮೂಲವತನವಿದೆ. ವತನವೆಂದೂ ಖಾಲಿಯಾಗುವುದಿಲ್ಲ, ಇದಾಗಲಿ, ಅದಾಗಲಿ, ಖಾಲಿಯಾಗುವುದಿಲ್ಲ. ಯಾವಾಗ ಅಂತ್ಯವಾಗುವುದೋ ಆಗ ವರ್ಗಾಯಿತರಾಗುತ್ತೀರಿ. ಕೆಲವರು ಈ ವತನದಲ್ಲಿರುತ್ತಾರೆ. ಇಡೀ ವತನವೇ ಖಾಲಿಯಾಗಿಬಿಟ್ಟರೆ ಅದು ಪ್ರಳಯವಾದಂತೆ ಆದರೆ ಪ್ರಳಯವಾಗುವುದಿಲ್ಲ. ಅವಿನಾಶಿ ಖಂಡವಲ್ಲವೆ. ಇವೆಲ್ಲಾ ಮಾತುಗಳನ್ನು ಬುದ್ಧಿಯಲ್ಲಿಟ್ಟುಕೊಳ್ಳಬೇಕಾಗಿದೆ. ಇಡೀ ದಿನ ನಾವು ಯಾರ ಕಲ್ಯಾಣ ಮಾಡುವುದು? ಎಂಬುದು ಚಿಂತನೆಯೇ ನಡೆಯುತ್ತಿರಲಿ, ತಂದೆಯ ಜೊತೆ ಪ್ರೀತಿಯು ಜೋಡಣೆ ಆಗಿರುವುದೇ ಆದರೆ ಅವರ ಪರಿಚಯ ಕೊಡಬೇಕಲ್ಲವೆ. ಅವರು ತಂದೆಯಾಗಿದ್ದಾರೆ, ಅವರಿಂದ ಆಸ್ತಿಯು ಸಿಗುತ್ತದೆ. ಅದು ಹೇಗೆ ಸಿಗುತ್ತದೆ ಎಂಬುದನ್ನು ನಾವು ತಿಳಿಸುತ್ತೇವೆ ಎಂದು ತಿಳಿಸುವುದರಲ್ಲಿಯೂ ನಂಬರ್‌ವಾರ್ ಇರುತ್ತಾರೆ. ಕೆಲವರು ಬಹಳ ಚೆನ್ನಾಗಿ ಭಾಷಣ ಮಾಡುತ್ತಾರೆ, ಕೆಲವರು ಮಾಡುವುದಿಲ್ಲ, ಆದ್ದರಿಂದ ಕಲಿಯಬೇಕಾಗಿದೆ. ಪ್ರತಿಯೊಬ್ಬ ಮಗುವು ತಮ್ಮ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ. ಮಾರ್ಗ ಸಿಕ್ಕಿದೆ ಅಂದಮೇಲೆ ಒಬ್ಬರು ಇನ್ನೊಬ್ಬರ ಕಲ್ಯಾಣ ಮಾಡಬೇಕಾಗಿದೆ. ಅನ್ಯರಿಗೂ ತಂದೆಯಿಂದ ಆಸ್ತಿಯನ್ನು ಕೊಡಿಸೋಣ, ಆತ್ಮೀಕ ಸೇವೆ ಮಾಡೋಣವೆಂದು ಮನಸ್ಸಾಗುತ್ತದೆ. ಎಲ್ಲರೂ ಒಬ್ಬರು ಇನ್ನೊಬ್ಬರ ಸೇವೆ ಮಾಡುತ್ತಾರೆ.

ತಂದೆಯು ಬಂದು ಆತ್ಮೀಕ ಸೇವೆಯನ್ನು ಕಲಿಸುತ್ತಾರೆ. ಈ ಸೇವೆಯನ್ನು ಮತ್ತ್ಯಾರೂ ಅರಿತುಕೊಂಡಿಲ್ಲ. ಆತ್ಮಿಕ ತಂದೆಯೇ ಆತ್ಮಗಳ ಸೇವೆ ಮಾಡುತ್ತಾರೆ. ದೈಹಿಕ ಸೇವೆಯನ್ನಂತೂ ಜನ್ಮ-ಜನ್ಮಾಂತರ ಬಹಳಷ್ಟು ಮಾಡಿದಿರಿ, ಈಗ ಅಂತಿಮ ಜನ್ಮದಲ್ಲಿ ಆತ್ಮಿಕಸೇವೆ ಮಾಡಬೇಕಾಗಿದೆ ಯಾವುದನ್ನು ತಂದೆಯು ತಿಳಿಸಿದ್ದಾರೆ. ಇದರಲ್ಲಿಯೂ ಕಲ್ಯಾಣವಿದೆ, ಮತ್ತ್ಯಾವುದರಲ್ಲಿಯೂ ಲಾಭವಿಲ್ಲ. ಗೃಹಸ್ಥ ವ್ಯವಹಾರದಲ್ಲಿಯೇ ಇರಬೇಕಾಗಿದೆ. ಸಂಬಂಧಗಳನ್ನು ನಿಭಾಯಿಸಬೇಕಾಗಿದೆ. ಅವರಿಗೂ ಸಹ ಇದನ್ನೇ ತಿಳಿಸಿ ಕಲ್ಯಾಣ ಮಾಡಬೇಕಾಗಿದೆ. ಪ್ರೀತಿಯಿದ್ದರೆ ಸ್ವಲ್ಪವಾದರೂ ಕೇಳುತ್ತಾರೆ. ಇನ್ನೂ ಕೆಲವರು ನಾವೂ ಸನ್ಯಾಸ ಮಾಡಬೇಕಾಗುತ್ತದೆಯೇನೋ ಎಂದು ಹೆದರುತ್ತಾರೆ. ಇತ್ತೀಚೆಗೆ ಸನ್ಯಾಸಿಗಳೂ ಅನೇಕರಿದ್ದಾರಲ್ಲವೆ. ಕಾವಿಯನ್ನು ಧರಿಸಿ ಕೆಲವು ಶಬ್ದಗಳನ್ನು ತಿಳಿಸಿದರೆ ಸಾಕು, ಎಲ್ಲಿಂದಲಾದರೂ ಹೊಟ್ಟೆಪಾಡು ನಡೆಯುತ್ತದೆ. ಯಾವುದಾದರೂ ಅಂಗಡಿಯ ಬಳಿ ಹೋದರೆ ಎರಡು ಪೂರಿಯನ್ನು ಕೊಡುತ್ತಾರೆ ಮತ್ತೆ ಇನ್ನೊಬ್ಬರ ಬಳಿ ಹೋಗುತ್ತಾರೆ, ಹೊಟ್ಟೆ ಪೂಜೆಯಾಗಿ ಬಿಡುತ್ತದೆ. ಭಿಕ್ಷೆ ಬೇಡುವವರಲ್ಲಿಯೂ ಅನೇಕ ಪ್ರಕಾರದವರಿರುತ್ತಾರೆ. ಈ ತಂದೆಯ ಬಳಿ ಒಂದೇ ಪ್ರಕಾರದ ಆಸ್ತಿಯು ಸಿಗುತ್ತದೆ. ಬೇಹದ್ದಿನ ರಾಜ್ಯಭಾಗ್ಯ ಸಿಗುತ್ತದೆ, ಸದಾ ನಿರೋಗಿಗಳಾಗುತ್ತೀರಿ. ಸಾಹುಕಾರರು ಬಹಳ ಕಷ್ಟದಿಂದ ಮೇಲೇಳುತ್ತಾರೆ ಆದ್ದರಿಂದ ಬಡವರ ಕಲ್ಯಾಣವನ್ನು ಮಾಡಬೇಕಾಗಿದೆ. ತಂದೆಯು ಬಹಳಷ್ಟು ಪ್ರದರ್ಶನಿಗಳನ್ನು ಮಾಡಿಸುತ್ತಿದ್ದಾರೆ ಏಕೆಂದರೆ ಗ್ರಾಮಾಂತರ ಜನ ಅನೇಕರಿದ್ದಾರಲ್ಲವೆ, ಈ ಜ್ಞಾನವು ಬಹಳ ಚೆನ್ನಾಗಿದೆ ಎಂದು ಮಂತ್ರಿಗಳು ಮೊದಲಾದವರು ತಿಳಿದುಕೊಂಡರೆ ಸಾಕು, ಇದನ್ನು ಎಲ್ಲರೂ ಕೇಳತೊಡಗುತ್ತಾರೆ. ಹಾ! ಮುಂದೆ ಹೋದಂತೆ ನಿಮ್ಮದು ಬಹಳ ಪ್ರಸಿದ್ಧವಾಗುವುದು. ಆಗ ಅನೇಕರು ಬರುತ್ತಾರೆ. ಆತ್ಮದಲ್ಲಿನ ತುಕ್ಕು ಕಳೆಯುವುದರಲ್ಲಿ ಸಮಯ ಹಿಡಿಸುತ್ತದೆ, ಇದರಲ್ಲಿ ಯಾರಾದರೂ ಹಗಲು ರಾತ್ರಿ ತೊಡಗಿದರೆ ಅವರಲ್ಲಿ ಬಹುಷಃ ಬೇಗನೆ ತುಕ್ಕು ಕಳೆದು ಆತ್ಮವು ಪವಿತ್ರವಾದರೆ ಅದು ಈ ಶರೀರವನ್ನು ಬಿಟ್ಟುಬಿಡುವುದು. ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಪ್ರದರ್ಶನಿಯಲ್ಲಿಯೂ ತಿಳಿಸಬೇಕಾಗಿದೆ. ಮುಖ್ಯವಾಗಿ ಎಲ್ಲವೂ ಭಾರತದ ಮಾತಾಗಿದೆ. ಭಾರತದ ಉನ್ನತಿಯಾದರೆ ಎಲ್ಲರ ಉನ್ನತಿಯಾಗಿ ಬಿಡುತ್ತದೆ. ಪ್ರೊಜೆಕ್ಟರ್‌ಗಿಂತಲೂ ಪ್ರದರ್ಶನಿಯಲ್ಲಿ ಹೆಚ್ಚು ಸೇವೆ ನಡೆಯುತ್ತದೆ. ನಿಧಾನ-ನಿಧಾನವಾಗಿ ವೃದ್ಧಿ ಹೊಂದುತ್ತಾ ಹೋಗುತ್ತದೆ. ದಿನ-ಪ್ರತಿದಿನ ನಿಮ್ಮ ಹೆಸರು ಪ್ರಸಿದ್ಧವಾಗುತ್ತಾ ಹೋಗುವುದು. ಇದನ್ನೂ ಸಹ ಬರೆಯಬೇಕು - ಇಂದಿಗೆ 5000 ವರ್ಷಗಳ ಮೊದಲೂ ಸಹ ಇದೇರೀತಿ ಆಗಿತ್ತು, ಇವು ಬಹಳ ಅದ್ಭುತ ಮಾತುಗಳಾಗಿವೆ. ತಂದೆಯು ಸಲಹೆಯನ್ನಿಡುತ್ತಾರೆ ಆದರೆ ಮಕ್ಕಳು ಅನೇಕ ಮಾತುಗಳನ್ನು ಮರೆತು ಹೋಗುತ್ತಾರೆ. ಏನಾದರೂ ಆದರೆ ಇಂದಿಗೆ 5000 ವರ್ಷಗಳ ಮೊದಲೂ ಸಹ ಇದೇರೀತಿ ಆಗಿತ್ತೆಂದು ಹೇಳುತ್ತಾರೆ. ಬಹಳ ಸ್ಪಷ್ಟ ಮಾತಾಗಿದೆ ಆದರೆ ಇದು ಬುದ್ಧಿಯಲ್ಲಿ ಕುಳಿತುಕೊಳ್ಳಬೇಕಷ್ಟೆ, ಪತ್ರಿಕೆಗಳಲ್ಲಿಯೂ ಸಹ ಹಾಕಿಸಿದರೆ ಯಾರಾದರೂ ತಿಳಿದುಕೊಳ್ಳಬೇಕಷ್ಟೆ, ಜ್ಞಾನ ಮಾರ್ಗದಲ್ಲಿ ಸ್ಥಿತಿಯು ಬಹಳ ಚೆನ್ನಾಗಿರಬೇಕು. ಇಂತಿಂತಹ ಮಾತುಗಳನ್ನು ಕೇಳಿ ಹರ್ಷಿತರಾಗಬೇಕು. ಅಭ್ಯಾಸವಾಗಿಬಿಟ್ಟರೆ ಮತ್ತೆ ಸ್ಥಿತಿಯು ಬಹಳ ಪ್ರಸನ್ನವಾಗಿರುತ್ತದೆ. ಒಳ್ಳೆಯದು-

ಮಧುರಾತಿ ಮಧುರ ಅಗಲಿಹೋಗಿ ಮರಳಿಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ :

1. ಮತ್ತೆಲ್ಲರಿಂದ ಬುದ್ಧಿಯ ಪ್ರೀತಿಯನ್ನು ತೆಗೆದು ಒಬ್ಬ ತಂದೆಯೊಂದಿಗೆ ಜೋಡಿಸಬೇಕಾಗಿದೆ ಮತ್ತು ಎಲ್ಲರ ಪ್ರೀತಿಯನ್ನು ಒಬ್ಬರೊಂದಿಗೆ ಜೋಡಿಸುವ ಸೇವೆ ಮಾಡಬೇಕಾಗಿದೆ.

2. ಸತ್ಯ-ಸತ್ಯವಾದ ಆತ್ಮೀಕ ಸೇವಾಧಾರಿಗಳಾಗಬೇಕಾಗಿದೆ. ತಮ್ಮ ಕಲ್ಯಾಣವನ್ನೂ ಮಾಡಿ ಕೊಳ್ಳಬೇಕು ಮತ್ತು ಅನ್ಯರಿಗೂ ಮಾರ್ಗ ತಿಳಿಸಬೇಕಾದರೆ ಸ್ಥಿತಿಯನ್ನು ಬಹಳ ಪ್ರಸನ್ನಚಿತ್ತವನ್ನಾಗಿ ಮಾಡಿಕೊಳ್ಳಬೇಕಾಗಿದೆ.

ವರದಾನ :

ಒಬ್ಬ ತಂದೆಯ ಸ್ಮೃತಿಯಿಂದ ಸತ್ಯ ಸುಮಂಗಲಿಯ ಅನುಭವ ಮಾಡುವಂತಹ ಭಾಗ್ಯಶಾಲಿ ಆತ್ಮಭವಪ್ರಶಸ್ತಿ

ಯಾರು ಯಾವುದೇ ಆತ್ಮನ ಮಾತನ್ನು ಕೇಳಿಸಿಕೊಳ್ಳುತ್ತಿದ್ದರೂ ಕೇಳಿಸದಂತೆ ಇರುತ್ತಾರೆ. ಯಾವುದೇ ಅನ್ಯ ಆತ್ಮನ ಸ್ಮೃತಿಯನ್ನು ಸಂಕಲ್ಪ ಅಥವ ಸ್ವಪ್ನದಲ್ಲಿಯೂ ತಂದುಕೊಳ್ಳುವುದಿಲ್ಲ. ಅರ್ಥಾತ್ ಯಾವುದೇ ದೇಹಧಾರಿಯ ಬಾಗುವಿಕೆಯಲ್ಲಿ (ಅಧೀನತೆ) ಬರುವುದಿಲ್ಲ. ಒಬ್ಬ ತಂದೆಯ ಹೊರತು ಮತ್ತ್ಯಾರೂ ಇಲ್ಲವೆಂಬ ಸ್ಮೃತಿಯಲ್ಲಿ ಇರುತ್ತಾರೆಯೋ ಅವರಿಗೆ ಅವಿನಾಶಿ ಸುಮಂಗಲಿಯ ತಿಲಕವು ಸಿಕ್ಕಿಬಿಡುತ್ತದೆ. ಇಂತಹ ಸತ್ಯ ಸುಮಂಗಲಿಯರೇ ಭಾಗ್ಯಶಾಲಿಗಳಾಗಿದ್ದಾರೆ.

ಸ್ಲೋಗನ್ :

ತಮ್ಮ ಶ್ರೇಷ್ಠ ಸ್ಥಿತಿಯನ್ನು ರೂಪಿಸಿಕೊಳ್ಳಬೇಕೆಂದರೆ ಅಂತರ್ಮುಖಿಯಾಗಿರುತ್ತಾ ನಂತರ ಬಾಹರ್ಮುಖತೆಯಲ್ಲಿ ಬನ್ನಿರಿ.