01.06.22         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಸದಾ ಈಶ್ವರೀಯ ಸೇವೆಯಲ್ಲಿ ಬಿಜಿಯಾಗಿದ್ದಾಗ ತಂದೆಯೊಂದಿಗೆ ಪ್ರೀತಿಯೂ ಹೆಚ್ಚುತ್ತಾ ಹೋಗುವುದು, ಖುಷಿಯ ನಶೆಯು ಏರುವುದು

ಪ್ರಶ್ನೆ:
ದೃಷ್ಟಿಯಿಂದ ಪರಿವರ್ತನೆಯಾಗುವಂತಹ ಮಕ್ಕಳಲ್ಲಿ ಯಾವ ಖುಷಿಯಿರುತ್ತದೆ?

ಉತ್ತರ:
ಅವರ ಹೃದಯದಲ್ಲಿ ಸ್ವರ್ಗದ ರಾಜ್ಯಭಾಗ್ಯದ ಖುಷಿಯಿರುತ್ತದೆ ಏಕೆಂದರೆ ತಂದೆಯ ದೃಷ್ಟಿಯು ಸಿಕ್ಕಿತು ಅರ್ಥಾತ್ ಆಸ್ತಿಯ ಅಧಿಕಾರಿಯಾದರು. ತಂದೆಯಲ್ಲಿ ಎಲ್ಲವೂ ಸಮಾವೇಶಗೊಂಡಿದೆ.

ಪ್ರಶ್ನೆ:
ತಂದೆಯು ಮಕ್ಕಳಿಗೆ ಪ್ರತಿನಿತ್ಯ ಭಿನ್ನ-ಭಿನ್ನ ಪದ್ಧತಿಗಳಿಂದ ಹೊಸ ವಿಷಯಗಳನ್ನು ಏಕೆ ತಿಳಿಸುತ್ತಾರೆ?

ಉತ್ತರ:
ಏಕೆಂದರೆ ಮಕ್ಕಳ ಅನೇಕ ಜನ್ಮಗಳ ಇಚ್ಛೆಯನ್ನು ಪೂರ್ಣ ಮಾಡಬೇಕಾಗಿದೆ. ಮಕ್ಕಳು ತಂದೆಯ ಮುಖಾಂತರ ಹೊಸ-ಹೊಸ ವಿಷಯಗಳನ್ನು ಕೇಳುವುದರಿಂದ ತಂದೆಯ ಪ್ರತಿ ಪ್ರೀತಿಯೂ ಹೆಚ್ಚುತ್ತಾ ಹೋಗುತ್ತದೆ.

ಗೀತೆ:
ನೀನು ರಾತ್ರಿಯನ್ನು ನಿದ್ರೆಯಲ್ಲಿ ಕಳೆದೆ, ಹಗಲನ್ನು ತಿನ್ನುತ್ತಾ ಕಳೆದೆ.........

ಓಂ ಶಾಂತಿ.
ಮಕ್ಕಳು ದೃಷ್ಟಿಯನ್ನು ಜೋಡಿಸಿ ಕುಳಿತಿದ್ದಾರೆ. ತಂದೆಯೂ ಸಹ ಆತ್ಮನನ್ನು ಹಾಗೂ ಈ ಶರೀರವನ್ನು ನೋಡುತ್ತಿದ್ದಾರೆ. ಮಕ್ಕಳೂ ಸಹ ನೋಡುತ್ತಿದ್ದಾರೆ. ನೋಡುವುದರಲ್ಲಿ ಮಜಾ ಇರುತ್ತದೆಯೋ ಅಥವಾ ಕೇಳುವುದರಲ್ಲಿ ಮಜಾ ಇರುತ್ತದೆಯೋ? ಏಕೆಂದರೆ ಕೇಳುವುದಂತೂ ತುಂಬಾ ಕೇಳಿದ್ದೇವೆ. ಅನೇಕ ಜ್ಞಾನ ಮುಂತಾದವುಗಳನ್ನು ಹೆಚ್ಚಿನದಾಗಿ ಕೇಳಿದ್ದೀರಿ. ನೀವು ನಂಬರ್ವನ್ ಭಕ್ತರಾಗಿದ್ದೀರಿ. ನೀವೇ ಎಲ್ಲರಗಿಂತ ಹೆಚ್ಚಿನ ಭಕ್ತಿಯನ್ನು ಮಾಡಿದ್ದೀರಿ. ವೇದ-ಶಾಸ್ತ್ರ, ಗ್ರಂಥ, ಗೀತಾ, ಗಾಯತ್ರಿ, ಜಪ-ತಪ ಮುಂತಾದ ಎಲ್ಲವನ್ನೂ ಓದಿದ್ದರು, ತುಂಬಾ ಕೇಳಿದ್ದೀರಿ ಆದ್ದರಿಂದ ತಂದೆಯು ತಿಳಿಸುತ್ತಾರೆ - ಯಾವಾಗಿನಿಂದ ಇವುಗಳನ್ನು ಕೇಳಿದ್ದೀರಿ? ಯಾವಾಗಿನಿಂದ ಇವು ರಚನೆಯಾಗಿದೆ ಎನ್ನುವುದನ್ನು ತುಂಬಾ ಕೇಳಿದ್ದೀರಿ ಆದರೆ ತಂದೆಯೊಂದಿಗೆ ದೃಷ್ಟಿಯನ್ನು ಜೋಡಿಸುವುದು ಈಗಲೇ ಆಗುತ್ತದೆ. ದೃಷ್ಟಿಯಿಂದ ಪರಿವರ್ತನೆ ಆಗಿಯೇ ಆಗುತ್ತಾರೆ. ಇದಕ್ಕೆ ಒಂದು ಶ್ಲೋಕವೂ ಇದೆ - ಸದ್ಗುರು ದೃಷ್ಟಿಯಿಂದ ಪರಿವರ್ತನೆ ಮಾಡಿದರು. ಅವರು ಗುರುವೂ ಆಗಿದ್ದಾರೆ, ಪ್ರಿಯತಮೆಯರ ಸ್ವಾಮಿಯೂ ಆಗಿದ್ದಾರೆ. ದೃಷ್ಟಿಯ ಸಮ್ಮುಖದಲ್ಲಿ ಕುಳಿತಿದ್ದೀರಿ, ದೃಷ್ಟಿಯಿಂದಲೇ ತಂದೆಯನ್ನು ಅರಿತುಕೊಳ್ಳುತ್ತೀರಿ ಅವರಿಂದ ನಮಗೆ ವಿಶ್ವದ ಮಾಲೀಕತನವೂ ಸಿಗುತ್ತದೆ. ತಂದೆಯನ್ನು ನೋಡುವುದರಿಂದ ಹೃದಯವೂ ಖುಷಿಯಾಗುತ್ತದೆ ಏಕೆಂದರೆ ತಂದೆಯಿಂದಲೇ ಸರ್ವಸ್ವವೂ ಸಿಗುತ್ತದೆ. ತಂದೆಯಿಂದಲೇ ಸರ್ವಸ್ವವೂ ಸಮಾವೇಶಗೊಂಡಿದೆ. ಯಾವಾಗ ತಂದೆಯು ಸಿಕ್ಕಿದರು, ತಂದೆಯ ದೃಷ್ಟಿಯ ಸಮ್ಮುಖದಲ್ಲಿ ಕುಳಿತಿದ್ದಾರೆಂದರೆ ಆವಶ್ಯವಾಗಿ ಮಕ್ಕಳಿಗೆ ಸ್ವರ್ಗದ ರಾಜ್ಯಭಾಗ್ಯದ ನಶೆಯೂ ಏರುತ್ತದೆ. ಮೊದಲು ತಂದೆಯ ನಶೆ ನಂತರ ರಾಜ್ಯಭಾಗ್ಯದ ನಶೆ. ಮಕ್ಕಳಿಗೆ ನಾವೀಗ ತಂದೆಯ ಸಮ್ಮುಖದಲ್ಲಿ ಕುಳಿತಿದ್ದೇವೆಂದು ಅರ್ಥವಾಗಿದೆ. ದೇಹಾಭಿಮಾನವು ಈಗ ಬಿಟ್ಟು ಹೋಗುತ್ತಿದೆ. ನಾವಾತ್ಮಗಳು ಈ ಶರೀರದ ಜೊತೆ ಚಕ್ಕರ್ ಹಾಕುತ್ತಾ, ಪಾತ್ರವನ್ನು ಅಭಿನಯಿಸುತ್ತಾ, ಅಭಿನಯಿಸುತ್ತಾ ಈಗ ತಂದೆಯೂ ಸಹ ಸಮ್ಮುಖದಲ್ಲಿ ಕುಳಿತಿದ್ದಾರೆ. ತಂದೆಯ ಜೊತೆ ಆಸ್ತಿಯ ಖುಷಿಯು ಇದ್ದೇ ಇರುತ್ತದೆ. ಮಕ್ಕಳೇ ಬೆಳೆದು ಯಾವಾಗ ದೊಡ್ಡವರಾಗುತ್ತಾರೆ ಆಗ ನಾನು ಬ್ಯಾರಿಸ್ಟರ್ನ, ಇಂಜಿನಿಯರ್ನ, ರಾಜನ ಮಗುವಾಗಿದ್ದೇನೆ ಎನ್ನುವುದು ಬುದ್ಧಿಯಲ್ಲಿ ಬರುತ್ತದೆ. ನಾನು ರಾಜ್ಯಭಾಗ್ಯದ ಮಾಲೀಕನಾಗಿದ್ದಾನೆ. ಹಾಗೆಯೇ ಇಲ್ಲಿ ನೀವು ಮಕ್ಕಳೂ ಸಹ ನಮಗೆ ತಂದೆಯಿಂದ ಸ್ವರ್ಗದ ಆಸ್ತಿಯು ಸಿಗುತ್ತದೆ ಎನ್ನುವುದನ್ನು ಅರಿತುಕೊಂಡಿದ್ದೀರಿ. ತಂದೆಯನ್ನು ನೋಡುವುದರಿಂದ ಮಕ್ಕಳಿಗೆ ಸ್ಥಿರವಾದ ಖುಷಿ ಇರಬೇಕು, ಇದನ್ನೇ ವಾರ್ತಾಲಾಪ ಎಂದು ಹೇಳಲಾಗುತ್ತದೆ. ಯಾರು ಎಲ್ಲರ ಸುಪ್ರೀಂ ತಂದೆ ಆಗಿದ್ದಾರೆ. ಅವರು ಆತ್ಮಗಳೊಂದಿಗೆ ಕುಳಿತು ಮಾತನಾಡುತ್ತಾರೆ. ಆತ್ಮನೂ ಸಹ ಈ ಶರೀರದ ಮುಖಾಂತರ ಕೇಳುತ್ತದೆ. ಇದು ಒಂದೇಬಾರಿ ಈ ರೀತಿ ಆಗುತ್ತದೆ - ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಯಾವಾಗ ಅವರು ಬರುತ್ತಾರೆ ಹಾಗೂ ದೃಷ್ಟಿಯನ್ನು ಕೊಡುತ್ತಾರೆ ಆಗ 21 ಜನ್ಮಗಳಿಗೋಸ್ಕರ ಆಸ್ತಿಯನ್ನು ಕೊಟ್ಟು ಬಿಡುತ್ತಾರೆ. ಇದು ನೀವು ಮಕ್ಕಳಿಗೆ ನೆನಪಿರಬೇಕು, ಮಕ್ಕಳು ಮರೆತು ಬಿಡುತ್ತಾರೆ ಆದರೆ ಮರೆಯಬಾರದಾಗಿದೆ. ತಂದೆಯು ದೃಷ್ಟಿಯು ಸಮ್ಮುಖದಲ್ಲಿ ಇರುವುದರಿಂದಲೇ ನಾವು ತಂದೆಯ ಜೊತೆ ಕುಳಿತಿದ್ದೇವೆಂದು ತಿಳಿಯುತ್ತಾರೆ. ತಂದೆಯನ್ನು ನೋಡುವುದರಿಂದಲೇ ಖುಷಿಯ ನಶೆಯೇರುತ್ತದೆ ಹಾಗೂ ತಂದೆಯೂ ಹೊಸ-ಹೊಸ ವಿಷಯಗಳನ್ನು ತಿಳಿಸುತ್ತಾರೆ ಏಕೆಂದರೆ ಮಕ್ಕಳಿಗೆ ತಂದೆಯೊಂದಿಗೆ ಪೂರ್ಣ ಪ್ರೀತಿಯಿರಲಿ. ಆತ್ಮವು ತಮ್ಮ ಇಚ್ಛೆಯನ್ನು ಪೂರ್ಣ ಮಾಡಲಿ ಏಕೆಂದರೆ ತಂದೆಯಿಂದ ಅಗಲಿ ಹೋಗಿದ್ದಾರೆ. ಅನೇಕ ಪ್ರಕಾರದ ದುಃಖಗಳನ್ನು ನೋಡಿದ್ದಾರೆ, ಈಗ ತಂದೆಯ ಸಮ್ಮುಖದಲ್ಲಿ ಕುಳಿತಿದ್ದೀರೆಂದರೆ ನೋಡಿ ಹರ್ಷಿತರಾಗಬೇಕು. ತಂದೆಯ ಸಮ್ಮುಖದಲ್ಲಿ ಇದ್ದರೆ ಹರ್ಷಿತರಾಗುತ್ತೀರಾ ಅಥವಾ ತಂದೆಯಿಂದ ದೂರವಿದ್ದರೂ ಸಹ ಎಷ್ಟು ಹರ್ಷಿತತನವೂ ಇರುತ್ತದೆಯೇ? ವಿವೇಕವೂ ಹೇಳುತ್ತದೆ - ಹೊರಗಡೆಯಂತೂ ತುಂಬಾ ಮಾತುಗಳನ್ನು ಕೇಳುವುದರಿಂದ ಬುದ್ಧಿ ಇನ್ನೊಂದು ಕಡೆ ಹೊರಟು ಹೋಗುತ್ತದೆ. ಯಾವ ಮಕ್ಕಳು ಮಧುಬನದಲ್ಲಿ ಕುಳಿತಿದ್ದೀರಿ, ಸಮ್ಮುಖದಲ್ಲಿ ಕೇಳುತ್ತೀರಿ. ತಂದೆಯು ಪ್ರೀತಿಯಿಂದ ಆಕರ್ಷಣೆ ಮಾಡುತ್ತಾರೆ ಎಂದಾಗ ನೋಡಿ! ತಂದೆಯು ನಿಮ್ಮ ಎಷ್ಟು ಮಧುರ, ಎಷ್ಟು ಪ್ರಿಯ ತಂದೆಯಾಗಿದ್ದಾರೆ. ಅವರು ನಿಮ್ಮನ್ನು ಸ್ವರ್ಗದಲ್ಲಿ ಹೋಗಲು ಯೋಗ್ಯರನ್ನಾಗಿ ಮಾಡುತ್ತಿದ್ದಾರೆ. ಮಕ್ಕಳೇ ನೀವು ಸ್ವರ್ಗದ ಮಾಲೀಕರಾಗಿದ್ದಿರಿ. ಈಗ ನಾಟಕದನುಸಾರ ಎಲ್ಲವನ್ನು ಕಳೆದುಕೊಂಡಿದ್ದೀರಿ. ರಾಜ್ಯವನ್ನು ಕಳೆದುಕೊಳ್ಳುವುದು ಮತ್ತು ಪಡೆಯುವುದು ಇದಂತೂ ದೊಡ್ಡ ಮಾತೇನಲ್ಲ. ನೀವೇ ಈ ಮಾತನ್ನು ಅರಿತುಕೊಂಡಿದ್ದೀರಿ. ಪ್ರಪಂಚದಲ್ಲಿ ಕೋಟ್ಯಾಂತರ ಆತ್ಮಗಳಿದ್ದಾರೆ ಆದರೆ ಕೋಟಿಯಲ್ಲಿ ಕೆಲವರು ಮಾತ್ರ ನನ್ನನ್ನು ಅರ್ಥ ಮಾಡಿಕೊಳ್ಳುತ್ತಾರೆ. ನಾನು ಏನಾಗಿದ್ದೇನೆ ಮತ್ತು ಹೇಗಿದ್ದೇನೆ, ನಾನು ಯಾರಾಗಿದ್ದೇನೆ, ನನ್ನ ಮುಖಾಂತರ ಏನು ಸಿಗುತ್ತದೆ? ಇದನ್ನು ತಿಳಿದುಕೊಂಡಿದ್ದರೂ ಸಹ ಇದು ಆಶ್ಚರ್ಯವಾಗಿದೆ ಏಕೆಂದರೆ ಮಾಯೆಯು ಮರೆಸಿ ಬಿಡುತ್ತದೆ. ಸಮ್ಮುಖ ಇರುವವರಿಗೆ ಮಾಯೆಯು ಮರೆಸುವುದಿಲ್ಲ ಎಂದಲ್ಲ. ಸಮ್ಮುಖದಲ್ಲಿ ಇರುವವರಿಗೂ ಸಹ ಮಾಯೆಯು ಮರೆಸಿ ಬಿಡುತ್ತದೆ. ಶಿವ ತಂದೆಯಲ್ಲಿಯೂ ಸಹ ಪೂರ್ಣ ಪ್ರೀತಿಯಿರಬೇಕು. ಶ್ರೇಷ್ಠ ಆಸ್ತಿಯನ್ನು ಪಡೆದುಕೊಳ್ಳುವ ಆ ತಂದೆಯೊಂದಿಗೆ ಪ್ರೀತಿಯು ಹೇಗೆ ಹೆಚ್ಚಿಸಿಕೊಳ್ಳುವುದು? ಮಕ್ಕಳೇ ಸೇವೆ ಮಾಡಿ ಎಂದು ತಂದೆಯು ತಿಳಿಸುತ್ತಾರೆ. ತಂದೆಯೂ ಸಹ ಮಕ್ಕಳ ಸೇವೆಯನ್ನು ಮಾಡುತ್ತಾರೆ. ತಂದೆಯು ದೂರ ದೇಶದಿಂದ ಬಂದಿದ್ದಾರೆ ಎನ್ನುವುದನ್ನು ಮಕ್ಕಳು ಅರಿತುಕೊಂಡಿದ್ದೀರಿ. ನಿಶ್ಚಯ ಬುದ್ಧಿ ಮಕ್ಕಳು ಎಂದೂ ಚಂಚಲರಾಗಬಾರದು, ಗೊಂದಲಕ್ಕೊಳಗಾಗಬಾರದು ಆದರೆ ಮಾಯೆಯು ತುಂಬಾ ಬಲಶಾಲಿ ಆಗಿದೆ. ತಂದೆಯಂತೂ ಶೃಂಗರಿಸುತ್ತಿದ್ದಾರೆ, ಅವರು ಮನುಷ್ಯರನ್ನು ದೇವತೆಗಳನ್ನಾಗಿ ಮಾಡುತ್ತಾರೆ. ಇದು ದೇವತೆಗಳು ಆಗುವಂತಹ ಶಾಲೆಯಾಗಿದೆ. ಪವಿತ್ರ ಪ್ರಪಂಚದ ಮಾಲೀಕರಾಗುವುದಕ್ಕೋಸ್ಕರ ಈ ಪರಿಶ್ರಮವಾಗಿದೆ. ಕೇವಲ ನನ್ನನ್ನು ನೆನಪು ಮಾಡಿ ಎಂದು ತಂದೆಯು ಹೇಳುತ್ತಾರೆ. ಮನುಷ್ಯರು ಶರೀರ ಬಿಡುವವರಾಗಿದ್ದರೆ ಅವರಿಗೆ ರಾಮನನ್ನು ನೆನಪು ಮಾಡಿ ಎಂದು ಹೇಳುತ್ತಾರೆ ಆದರೆ ರಾಮನನ್ನು ಅರಿತುಕೊಂಡಿಲ್ಲವೆಂದಾಗ ನೆನಪಿನಿಂದ ಯಾವುದೇ ಲಾಭವಿಲ್ಲ. ನೀವು ಮಕ್ಕಳಿಗಂತೂ ತಂದೆಯ ಪೂರ್ಣ ಪರಿಚಯವಿದೆ. ನೀವು ಬರುವುದೇ ಶಿವ ತಂದೆಯ ಹತ್ತಿರ. ಆ ತಂದೆಯು ನಿರಾಕಾರ, ರಚಯಿತನಾಗಿದ್ದಾರೆ. ಅವರು ಹೇಗೆ ರಚನೆ ಮಾಡುತ್ತಾರೆ? ಪ್ರಜಾಪಿತ ಬ್ರಹ್ಮಾರವರನ್ನೂ ಸಹ ರಚಯಿತನೆಂದು ಹೇಳುತ್ತಾರೆ, ಬ್ರಹ್ಮಾರವರ ಮುಖಾಂತರ ಮನುಷ್ಯ ಸೃಷ್ಟಿಯ ಜನ್ಮವಾಗುತ್ತದೆ ಆದ್ದರಿಂದಲೇ ಪ್ರಜಾಪಿತ ಬ್ರಹ್ಮ ಎಂದು ಹೇಳಲಾಗುತ್ತದೆ. ಈಗ ನೀವು ಬ್ರಾಹ್ಮಣರಾಗಿದ್ದೀರಿ. ಶಿವಬಾಬಾರವರ ಮೊಮ್ಮಕ್ಕಳು, ಬ್ರಹ್ಮಾ ತಂದೆಯ ಮಕ್ಕಳಾಗಿದ್ದೇವೆ ಎನ್ನುವುದನ್ನು ನೀವಾತ್ಮಗಳು ಈಗ ಒಳ್ಳೆಯ ರೀತಿಯಲ್ಲಿ ಅರಿತುಕೊಂಡಿದ್ದೀರಿ. ನೀವು ಮಕ್ಕಳು ನಮ್ಮ ವಿಕರ್ಮ ವಿನಾಶವಾಗಲಿ ಮತ್ತು ನಾವು ವಿಜಯಮಾಲೆಯಲ್ಲಿ ಮೊದಲು ಬರಲು ಇಚ್ಛಿಸುತ್ತೀರಿ ಎಂದರೆ ತಂದೆಯನ್ನು ತುಂಬಾ ನೆನಪು ಮಾಡಬೇಕಾಗುತ್ತದೆ. ನೀವು ಕರ್ಮಯೋಗಿಗಳೂ ಸಹ ಆಗಿದ್ದೀರಿ. ಮನೆಯನ್ನು ಸಂಭಾಲನೆ ಮಾಡುತ್ತಾ ಕಮಲಪುಷ್ಪ ಸಮಾನ ಪವಿತ್ರರಾಗಿರಬೇಕಾಗಿದೆ. ಈ ಉದಾಹರಣೆಯು ಸನ್ಯಾಸಿಗಳಿಗೆ ಹೊಂದುವುದಿಲ್ಲ. ಅವರು ಗೃಹಸ್ಥ ವ್ಯವಹಾರದಲ್ಲಿ ಇರುತ್ತಾ ಕಮಲಪುಷ್ಪ ಸಮಾನ ಪವಿತ್ರರಾಗಿರಲು ಸಾಧ್ಯವಿಲ್ಲ ಮತ್ತು ಅನ್ಯರಿಗೆ ಹೇಳಲೂ ಸಾಧ್ಯವಿಲ್ಲ. ಯಾರು ಹೇಗಿರುತ್ತಾರೆ, ಅವರು ಅದೇ ತರಹ ಮಾಡುತ್ತಾರೆ. ಕಮಲಪುಷ್ಪ ಸಮಾನ ಪವಿತ್ರರಾಗಿರಿ ಎಂದು ಸನ್ಯಾಸಿಗಳು ಹೇಳಲು ಸಾಧ್ಯವಿಲ್ಲ. ಒಂದುವೇಳೆ ಬ್ರಹ್ಮ ಮಹಾತತ್ವವನ್ನು ನೆನಪು ಮಾಡಿ ಎಂದು ಹೇಳಿದರೆ, ಅದೂ ಸಹ ಆಗಲು ಸಾಧ್ಯವಿಲ್ಲ. ಬೇರೆಯವರು ಹೇಳುತ್ತಾರೆ - ನೀವಂತೂ ಮನೆ-ಮಠವನ್ನು ಬಿಟ್ಟಿದ್ದೀರಿ, ನಾವು ಹೇಗೆ ಬಿಡುವುದು? ನೀವೇ ಗೃಹಸ್ಥದಲ್ಲಿ ಇರುವುದಿಲ್ಲವೆಂದರೆ ಅನ್ಯರಿಗೆ ಹೇಗೆ ಹೇಳುತ್ತೀರಿ. ಅವರು ರಾಜಯೋಗದ ಶಿಕ್ಷಣವನ್ನು ಕೊಡಲು ಸಾಧ್ಯವಿಲ್ಲ. ಈಗ ನೀವು ಮಕ್ಕಳು ಎಲ್ಲಾ ಧರ್ಮಗಳ ರಹಸ್ಯವನ್ನು ಅರಿತುಕೊಂಡಿದ್ದೀರಿ. ಪ್ರತಿಯೊಂದು ಧರ್ಮವೂ ಸಹ ಪುನಃ ತಮ್ಮ ಸಮಯದಲ್ಲಿ ಬರಬೇಕಾಗಿದೆ. ಕಲಿಯುಗದಿಂದ ನಂತರ ಸತ್ಯಯುಗ ಆಗಬೇಕಾಗಿದೆ. ಸತ್ಯಯುಗಕ್ಕೋಸ್ಕರ ಆದಿ ಸನಾತನ ದೇವೀ-ದೇವತಾ ಧರ್ಮವೂ ಬೇಕು ಮತ್ತ್ಯಾವುದೇ ಧರ್ಮದ ಮನುಷ್ಯರನ್ನು ದೇವತೆಯನ್ನಾಗಿ ಮಾಡಲು ಸಾಧ್ಯವಿಲ್ಲ. ಅವರು ಕೇವಲ ಮುಕ್ತಿಯಲ್ಲಿ ಹೋಗಬೇಕಿದೆ, ಸುಖವಿರುವುದೇ ಸ್ವರ್ಗದಲ್ಲಿ. ಯಾವಾಗ ನಾವು ದೇವೀ-ದೇವತೆಗಳು ಆಗುತ್ತೇವೆ, ಆಗ ಅನ್ಯ ಧರ್ಮದವರು ಮುಕ್ತಿಧಾಮದಲ್ಲಿರುತ್ತಾರೆ. ಎಲ್ಲಿಯ ತನಕ ನಾವು ಜೀವನ್ಮುಕ್ತಿಧಾಮವಾದ ಸ್ವರ್ಗದಲ್ಲಿ ಹೋಗುವುದಿಲ್ಲವೋ ಅಲ್ಲಿಯ ತನಕ ಯಾರೂ ಮುಕ್ತಿಯಲ್ಲಿ ಹೋಗಲು ಸಾಧ್ಯವಿಲ್ಲ. ಸ್ವರ್ಗ ಮತ್ತು ನರಕವು ಜೊತೆಯಿರಲು ಸಾಧ್ಯವಿಲ್ಲ. ನಾವು ಜೀವನ್ಮುಕ್ತಿಯ ಆಸ್ತಿಯನ್ನು ಪಡೆಯುತ್ತೇವೆಂದರೆ ಜೀವನ ಬಂಧನದವರು ಆಗ ಇರಬಾರದಾಗಿದೆ. ಇದು ಸಂಗಮದ ಸಮಯವಾಗಿದೆ. ನೀವೇ ಕಲ್ಪದ ಸಂಗಮಯುಗದಲ್ಲಿ ತಂದೆಯೊಂದಿಗೆ ಮಿಲನ ಮಾಡುತ್ತೀರಿರಿ, ಅನ್ಯರು ಯಾರೂ ಮಿಲನ ಮಾಡುವುದಿಲ್ಲ. ಅನ್ಯರು ಇದು ಕಲಿಯುಗವೆಂದು ತಿಳಿಯುತ್ತಾರೆ. ಈಗ ನಾವು ಕಲಿಯುಗದಲ್ಲಿಲ್ಲ. ತಂದೆಯಿಂದ ಸ್ವರ್ಗಕ್ಕೋಸ್ಕರ ಪುನಃ ಆಸ್ತಿಯನ್ನು ಪಡೆಯುತ್ತಿದ್ದೇವೆ. ನಾವು ಜೀವಿಸಿದ್ಧಂತೆಯೇ ಸತ್ತು ತಂದೆಯವರಾಗಿದ್ದೇವೆ. ಯಾರು ದತ್ತು ಆಗುತ್ತಾರೆ ಅವರಿಗೆ ಎರಡು ಪ್ರಪಂಚಗಳ ಅರಿವಾಗುತ್ತದೆ. ಇಂತಹವರ ಮಕ್ಕಳಾಗಿದ್ದೆವು, ಈಗ ಇಂತಹವರ ಮಕ್ಕಳಾಗಿದ್ದೇವೆ. ಅವರು ತಮ್ಮ ಮಿತ್ರ ಸಂಬಂಧಿ ಮುಂತಾದವರೆಲ್ಲರನ್ನೂ ಅರಿತಿರುತ್ತಾರೆ, ಎರಡೂ ಕಡೆಯ ಜ್ಞಾನವಿರುತ್ತದೆ. ನೀವು ಮಕ್ಕಳಿಗೆ ತಿಳಿದಿದೆ, ನಾವು ಇವರಿಂದ ನಮ್ಮ ದೋಣಿಯನ್ನು ಬಿಡಿಸಿಕೊಂಡಿದ್ದೇವೆ, ಈಗ ನಾವು ಹೋಗುತ್ತಿದ್ದೇವೆ. ಈ ಪ್ರಪಂಚದೊಂದಿಗೆ ನಮಗೆ ಯಾವುದೇ ಸಂಬಂಧವಿಲ್ಲ. ಭಗವಂತನು ತನ್ನ ಮಕ್ಕಳೊಂದಿಗೆ ಅರ್ಥಾತ್ ಪರಮಪಿತ ಪರಮಾತ್ಮನು ಸಾಲಿಗ್ರಾಮ ಮಕ್ಕಳೊಂದಿಗೆ ಮಾತನಾಡುತ್ತಿದ್ದಾರೆ. ಭಗವಂತನು ಬರಲೇಬೇಕಾಗಿದೆ ಆದರೆ ಇದನ್ನು ಯಾರೂ ಅರಿತುಕೊಂಡಿಲ್ಲ. ತಂದೆಯನ್ನು ತಿಳಿಯದೇ ಇರುವ ಕಾರಣ ಗೊಂದಲಕ್ಕೊಳಗಾಗುತ್ತಾರೆ. ಇಷ್ಟು ಸಹಜ ಮಾತನ್ನೂ ಸಹ ಅರಿತುಕೊಳ್ಳುವುದಿಲ್ಲ ಆದರೆ ನೆನಪು ಮಾಡುತ್ತಾರೆ. ನಾವಾತ್ಮಗಳು ಶರೀರವನ್ನು ತೆಗೆದುಕೊಂಡು ಪಾತ್ರವನ್ನು ಅಭಿನಯಿಸುತ್ತೇವೆ. ನಾವು ಪರಮಧಾಮದಿಂದ ಬರುತ್ತೇವೆ, ಅಲ್ಲಿ ಪರಮಪಿತ ಪರಮಾತ್ಮನೂ ಸಹ ಇರುತ್ತಾರೆಂದು ನೀವು ಮಕ್ಕಳಿಗೆ ತಿಳಿದಿದೆ. ಮನುಷ್ಯರಂತೂ ಆತ್ಮನನ್ನಾಗಲಿ, ಪರಮಾತ್ಮನನ್ನಾಗಲಿ ಅರಿತುಕೊಂಡಿಲ್ಲ. ಭಗವಂತನು ಹೇಗೆ ಬಂದು ಮಿಲನ ಮಾಡುತ್ತಾರೆ, ಏನು ಮಾಡುತ್ತಾರೆ? ಯಾರೂ ತಿಳಿದುಕೊಂಡಿಲ್ಲ. ಗೀತೆಯಲ್ಲಿ ಎಲ್ಲವನ್ನು ತಪ್ಪಾಗಿ ಬರೆದಿದ್ದಾರೆ. ಹೆಸರನ್ನೇ ಬದಲಾಯಿಸಿ ಬಿಟ್ಟಿದ್ದಾರೆ. ತಂದೆಯು ಕೇಳುತ್ತಾರೆ - ಮಕ್ಕಳೇ ನೀವು ನನ್ನನ್ನು ಅರಿತುಕೊಂಡಿದ್ದೀರಲ್ಲವೇ? ನೀವು ನನ್ನನ್ನು ಅರಿತುಕೊಂಡಿದ್ದೀರಾ? ಎಂದು ಕೃಷ್ಣನು ಕೇಳಲು ಸಾಧ್ಯವಿಲ್ಲ. ಕೃಷ್ಣನನ್ನಂತು ಇಡೀ ಪ್ರಪಂಚವೇ ಅರಿತುಕೊಂಡಿದೆ. ಕೃಷ್ಣನು ಜ್ಞಾನವನ್ನು ಪಡೆಯಲು ಸಾಧ್ಯವಿಲ್ಲ ಎಂದಾಗ ಆವಶ್ಯವಾಗಿ ಭಗವಂತನ ರೂಪವನ್ನು ಬದಲಾಯಿಸುತ್ತಾರೆಂದು ತಿಳಿಸಬೇಕು ಆದರೆ ಅವರು ಕೃಷ್ಣನಾಗುವುದಿಲ್ಲ. ಅವರು ಮನುಷ್ಯನ ಶರೀರದಲ್ಲಿಯೇ ಬರುತ್ತಾರೆ, ಕೃಷ್ಣನ ಶರೀರದಲ್ಲಿ ಅಲ್ಲ. ಇವರು ಬ್ರಹ್ಮನಾಗಿದ್ದಾರೆ ಆದರೆ ಅವರು ಕೃಷ್ಣನ ಆತ್ಮನಾಗಿದ್ದಾರೆ. ಕೇವಲ ಚಿಕ್ಕ ಮಾತನ್ನು ಮರೆತಿದ್ದಾರೆ. ಈ ಬ್ರಹ್ಮನು ಕೃಷ್ಣನ 84ನೇ ಜನ್ಮದ ಆತ್ಮನಾಗಿದ್ದಾರೆ, ಇವರೇ ನಂತರ ಆದಿಯಲ್ಲಿ ಕೃಷ್ಣನಾಗುತ್ತಾರೆ. ಅಂತಿಮ ಜನ್ಮದಲ್ಲಿ ಕೃಷ್ಣನ ಪದವಿಯನ್ನು ಪಡೆಯುವುದಕ್ಕೋಸ್ಕರ ಪುರುಷಾರ್ಥ ಮಾಡುತ್ತಿದ್ದಾರೆ. ಇವು ಎಷ್ಟೊಂದು ಗುಪ್ತ ಮಾತುಗಳಾಗಿವೆ. ಅತಿ ಚಿಕ್ಕ ಮಾತು ಮರೆತು ಹೋಗಿದೆ.

ನೀವು ತಿಳಿದುಕೊಂಡಿದ್ದೀರಿ - ನಾವು ಕೃಷ್ಣನ ಮನೆತನದವರಾಗಿದ್ದೆವು. ಈಗ ಶಿವ ತಂದೆಯಿಂದ ಪುನಃ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೇವೆ. ನಮ್ಮ ಬುದ್ಧಿಯಲ್ಲಿ ಕೃಷ್ಣನು ಕುಳಿತುಕೊಳ್ಳುವುದಿಲ್ಲ. ಮನುಷ್ಯರಂತೂ ಕೃಷ್ಣ ಭಗವಾನುವಾಚ ಎಂದು ಹೇಳಿ ಬಿಡುತ್ತಾರೆ. ಇದು ಸ್ವಲ್ಪವೂ ಸಿದ್ಧವಾಗುವುದಿಲ್ಲ. ಪಂಚ ಪಾಂಡವರು ಉಳಿದುಕೊಂಡರೆಂದು ಗೀತೆಯಲ್ಲಿ ತೋರಿಸಿದ್ದಾರೆ. ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳನ್ನಾಗಿ ಮಾಡಿ ಬಿಟ್ಟಿದ್ದಾರೆ. ಇಷ್ಟು ಸಹಜ ಮಾತನ್ನೂ ಸಹ ಯಾರೂ ಅರಿತುಕೊಂಡಿಲ್ಲ. ನಾವೇ ಸೂರ್ಯವಂಶಿ ಮನೆತನದವರಾಗಿದ್ದೆವು, ಈಗ ಸೂರ್ಯವಂಶೀಯಿಂದ ಶೂದ್ರವಂಶದಲ್ಲಿ ಬಂದಿದ್ದೇವೆ. ಪುನಃ ಬ್ರಾಹ್ಮಣರಿಂದ ದೇವತೆಗಳಾಗುತ್ತೇವೆ ಎನ್ನುವುದನ್ನು ನೀವು ಸನ್ನೆಯಿಂದಲೇ ತಿಳಿದುಕೊಳ್ಳುತೀರಿ. ವರ್ಣಗಳನ್ನೂ ಸಹ ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಮನುಷ್ಯರು ವರ್ಣಗಳನ್ನೂ ಸಹ ಅರ್ಧ ಮಾಡಿ ಬಿಟ್ಟಿದ್ದಾರೆ. ಶಿಖೆಯ ಸಮಾನ ಬ್ರಾಹ್ಮಣರು ಶಿವಬಾಬಾರವರನ್ನು ಮರೆತು ಬಿಟ್ಟಿದ್ದಾರೆ, ಬಾಕಿ ದೇವತಾ, ಕ್ಷತ್ರಿಯ, ವೈಶ್ಯ, ಶೂದ್ರರನ್ನು ತೋರಿಸಿದ್ದಾರೆ. ಬ್ರಾಹ್ಮಣರಂತೂ ಆವಶ್ಯವಾಗಿ ಬೇಕಲ್ಲವೇ. ಬ್ರಹ್ಮನ ಸಂತಾನರು ಎಲ್ಲಿ ಹೋದರು! ಎನ್ನುವುದು ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ನಿಮಗೆ ತಂದೆಯು ಒಳ್ಳೆಯ ರೀತಿಯಲ್ಲಿ ತಿಳಿಸಿಕೊಡುತ್ತಾರೆ, ನೀವು ಬುದ್ಧಿಯಲ್ಲಿ ಚೆನ್ನಾಗಿ ಧಾರಣೆ ಮಾಡಬೇಕಾಗಿದೆ. ಯಾವ ಜ್ಞಾನವು ತಂದೆಯ ಬುದ್ಧಿಯಲ್ಲಿದೆ ಅದು ನಿಮ್ಮಲ್ಲಿಯೂ ಸಹ ಇರಬೇಕಾಗಿದೆ. ನಾನು ನೀವು ಆತ್ಮಗಳನ್ನು ನನ್ನ ಸಮಾನರನ್ನಾಗಿ ಮಾಡುತ್ತೇನೆ. ಯಾವ ಸೃಷ್ಟಿಚಕ್ರದ ಜ್ಞಾನವು ನನ್ನಲ್ಲಿದೆ, ಅದು ನಿಮ್ಮ ಬುದ್ಧಿಯಲ್ಲಿಯೂ ಇದೆ. ಬುದ್ಧಿವಂತರೂ ಬೇಕಾಗಿದೆ. ತಂದೆಯ ಜೊತೆ ಯೋಗವೂ ಇರಬೇಕು ಹಾಗೂ ಗಳಿಗೆ-ಗಳಿಗೆ ವಿಚಾರ ಸಾಗರ ಮಂಥನ ಆಗುತ್ತಿರಬೇಕು. ಈಗ ನೀವು ಸಮ್ಮುಖದಲ್ಲಿ ಕುಳಿತಿದ್ದೀರಿ. ತಂದೆಯನ್ನು ಸಂಪೂರ್ಣ ಸಹಜವಾಗಿ ತಿಳಿಸುತ್ತಾರೆನ್ನುವುದನ್ನು ನೀವು ಅರಿತುಕೊಂಡಿದ್ದೀರಿ. ಇದಕ್ಕೆ ಗಾಯನವಿದೆ - ಆತ್ಮನಿಗೆ ಪರಮಾತ್ಮ ಸದ್ಗುರು ದಲ್ಲಾಳಿಯ ರೂಪದಲ್ಲಿ ಓದಿಸುತ್ತಾರೆ. ದಲ್ಲಾಳಿ ಅಥವಾ ವ್ಯಾಪಾರ ಮಾಡುವಂತಹವರು ತಂದೆಯಾಗಿದ್ದಾರೆ. ತಂದೆ ಈ ಬ್ರಹ್ಮಾರವರ ಮುಖಾಂತರ ವ್ಯಾಪಾರವನ್ನು ಮಾಡಿಸುತ್ತಾರೆ. ದಲ್ಲಾಳಿಯನ್ನು ನೆನಪು ಮಾಡಬಾರದೆಂದು ನೀವು ತಿಳಿದುಕೊಂಡಿದ್ದೀರಿ. ದಲ್ಲಾಳಿಯ ಮುಖಾಂತರ ಶಿವಬಾಬಾನ ಜೊತೆ ನಮ್ಮ ನಿಶ್ಚಿತಾರ್ಥವಾಗುತ್ತದೆ. ನೀವೆಲ್ಲಾ ಮಧ್ಯದಲ್ಲಿ ಇರುವಂತಹ ದಲ್ಲಾಳಿಯಾಗಿದ್ದೀರಿ. ಹೇಳುತ್ತಾರೆ - ಪರಮಪಿತ ಪರಮಾತ್ಮನೊಂದಿಗೆ ನಿಮ್ಮ ಸಂಬಂಧವೇನು? ನೀವು ನಿಶ್ಚಿತಾರ್ಥವನ್ನು ಮಾಡಿಸುವ ಯುಕ್ತಿಯನ್ನು ರಚಿಸುತ್ತೀರಿ. ಮತ್ತೆ ಪ್ರಜಾಪಿತ ಬ್ರಹ್ಮಾರವರ ಹೆಸರನ್ನೂ ಕೊಡುತ್ತೀರಿ. ಆಸ್ತಿಯು ಶಿವಬಾಬಾರವರಿಂದ ಸಿಗುತ್ತದೆ. ಸ್ವರ್ಗದ ರಚಯಿತನೇ ಅವರಾಗಿದ್ದಾರೆ. ಜೀವಾತ್ಮಗಳಿಗೆ ಪರಮಾತ್ಮನ ಜೊತೆ ನಿಶ್ಚಿತಾರ್ಥವಾಗುತ್ತದೆ. ನಿಶ್ಚಿತಾರ್ಥವಾಗಿತ್ತು, ಆಸ್ತಿಯನ್ನು ಪಡೆದಿದ್ದಿರಿ ಪುನಃ ಈಗ ಪಡೆಯುತ್ತೀರಿ.

ನೀವು ಅರಿತುಕೊಂಡಿದ್ದೀರಿ - ನಮ್ಮದು ಕಲ್ಪ-ಕಲ್ಪ, ಕಲ್ಪದ ಸಂಗಮಯುಗದಲ್ಲಿ ಇದೇ ವ್ಯವಹಾರವಾಗಿದೆ. ಮತ್ತ್ಯಾರೂ ಸಹ ಆತ್ಮಗಳನ್ನು ಪರಮಾತ್ಮನೊಂದಿಗೆ ನಿಶ್ಚಿತಾರ್ಥ ಮಾಡಿಸುವುದಿಲ್ಲ. ಯಾರು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ ಅವರೊಂದಿಗೆ ನಿಶ್ಚಿತಾರ್ಥವನ್ನು ಮಾಡಿಸುತ್ತೇವೆ. ಇದು ಶ್ರೇಷ್ಠಾತಿ ಶ್ರೇಷ್ಠ ಆತ್ಮಿಕ ನಿಶ್ಚಿತಾರ್ಥವಾಗಿದೆ. ಆತ್ಮಿಕ ನಿಶ್ಚಿತಾರ್ಥ ಮಾಡಿಸುವುದನ್ನು ಕಲ್ಪ-ಕಲ್ಪವೂ ತಂದೆಯಿಂದಲೇ ಕಲಿಯುತ್ತೇವೆ. ಕಲ್ಪ-ಕಲ್ಪವೂ ಹೀಗೆಯೇ ಆಗುತ್ತದೆ. ಕಲ್ಪ-ಕಲ್ಪ ಮನುಷ್ಯರಿಂದ ಅವಶ್ಯವಾಗಿ ದೇವತೆಗಳಾಗುತ್ತೇವೆ. ದೇವತೆಗಳು ಪುನಃ ಮನುಷ್ಯರಾಗುತ್ತಾರೆ. ಮನುಷ್ಯರಂತೂ ಮನುಷ್ಯರೇ ಆಗಿದ್ದಾರೆ ಆದರೆ ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರು ಎಂದು ಏಕೆ ಬರೆದಿದ್ದಾರೆ? ಏಕೆಂದರೆ ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆ. ಇದು ನಿಮಗೂ ಸಹ ತಿಳಿದಿದೆ, ಈ ನಿಶ್ಚಿತಾರ್ಥದಿಂದ ನಾವು ಮನುಷ್ಯರಿಂದ ದೇವತೆಗಳಾಗುತ್ತಿದ್ದೇವೆ. ಎಲ್ಲರೂ ಹೇಳುತ್ತಾರೆ ಕ್ರೈಸ್ಟ್ಗೆ 3000 ವರ್ಷಗಳ ಹಿಂದೆ ಭಾರತವು ಸ್ವರ್ಗವಾಗಿತ್ತು, ಆದರೆ ಇದು ಬುದ್ಧಿಯಲ್ಲಿ ಬರುವುದಿಲ್ಲ. ಭಾರತವು ಮೊದಲು ಸ್ವರ್ಗವಾಗಿತ್ತು, ಈಗಲೂ ಸಹ ಎಷ್ಟೊಂದು ಮಂದಿರಗಳನ್ನು ನಿರ್ಮಿಸುತ್ತಾರೆ ಆದರೆ ಎಲ್ಲರದೂ ಇಳಿಯುವ ಕಲೆಯಾಗಿದೆ. ನಮ್ಮದು ಏರುವ ಕಲೆಯಾಗಿದೆ. ಏರುವ ಕಲೆಯಲ್ಲಿ ಒಂದು ಸೆಕೆಂಡ್ ಹಿಡಿಸುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಎಂದೂ ಯಾವುದೇ ಮಾತಿನಲ್ಲಿ ಗೊಂದಲಕ್ಕೊಳಗಾಗಿ ನಿಶ್ಚಯದಲ್ಲಿ ಮೇಲೆ-ಕೆಳಗೆ ಆಗಬಾರದಾಗಿದೆ. ಗೃಹಸ್ಥವನ್ನು ಸಂಭಾಲನೆ ಮಾಡುತ್ತಾ, ಕರ್ಮಯೋಗಿಯಾಗಿ ಇರಬೇಕಾಗಿದೆ. ವಿಜಯಮಾಲೆಯಲ್ಲಿ ಮೊದಲು ಬರುವುದಕ್ಕೋಸ್ಕರ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ.

2. ಬುದ್ಧಿವಂತರಾಗುವುದಕ್ಕೋಸ್ಕರ ಜ್ಞಾನದ ವಿಚಾರ ಸಾಗರ ಮಂಥನ ಮಾಡಬೇಕು, ಸದಾ ಸೇವೆಯಲ್ಲಿ ತತ್ಪರರಾಗಬೇಕಾಗಿದೆ. ಅನ್ಯರನ್ನು ತಮ್ಮ ಸಮಾನ ಮಾಡಿಕೊಳ್ಳುವಂತಹ ಸೇವೆ ಮಾಡಬೇಕಾಗಿದೆ.

ವರದಾನ:
ಬಾಬಾ ಶಬ್ಧದ ಸ್ಮೃತಿಯಿಂದ ಅಲ್ಪಕಾಲದ ನನ್ನತನವನ್ನು ಅರ್ಪಣೆ ಮಾಡುವಂತಹ ಬೇಹದ್ದಿನ (ಸದಾಕಾಲ) ವೈರಾಗಿ ಭವ.

ಹಲವು ಮಕ್ಕಳು ಹೇಳುತ್ತಾರೆ - ಇದು ನನ್ನ ಗುಣವಾಗಿದೆ, ನನ್ನ ಶಕ್ತಿಯಾಗಿದೆ, ಇದೂ ಸಹ ತಪ್ಪುಗಳಾಗಿವೆ, ಪರಮಾತ್ಮನ ಕೊಡುಗೆಯನ್ನು ನನ್ನದೆಂದು ಭಾವಿಸುವುದು - ಇದು ಮಹಾಪಾಪವಾಗಿದೆ. ಇನ್ನೂ ಕೆಲವು ಮಕ್ಕಳು ಸಾಧಾರಣ ಭಾಷೆಯಲ್ಲಿ ಹೇಳಿ ಬಿಡುತ್ತಾರೆ - ನನ್ನ ಈ ಗುಣವನ್ನು, ನನ್ನ ಬುದ್ಧಿಯನ್ನು ಉಪಯೋಗ ಮಾಡಲಾಗುವುದಿಲ್ಲ. ಆದರೆ ನನ್ನದೆಂದು ಹೇಳುವುದೆಂದರೆ ಕಲ್ಮಷವಾಗುವುದು - ಇದೂ ಸಹ ಮೋಸವಾಗಿದೆ. ಆದ್ದರಿಂದ ಈ ಅಲ್ಪಕಾಲದ ನನ್ನದೆನುವುದನ್ನು ಅರ್ಪಣೆ ಮಾಡುತ್ತಾ, ಬಾಬಾ ಶಬ್ಧವನ್ನೇ ಸದಾ ನೆನಪಿಟ್ಟುಕೊಳ್ಳಿರಿ. ಹೀಗಿದ್ದಾಗ ಬೇಹದ್ದಿನ ವೈರಾಗಿ ಆತ್ಮನೆಂದು ಹೇಳಲಾಗುವುದು.

ಸ್ಲೋಗನ್:
ತಮ್ಮ ಸೇವೆಯನ್ನು ತಂದೆಯ ಮುಂದೆ ಅರ್ಪಣೆ ಮಾಡುತ್ತೀರೆಂದರೆ ಸೇವೆಯ ಫಲ ಹಾಗೂ ಬಲವು ಪ್ರಾಪ್ತಿಯಾಗುತ್ತಾ ಇರುವುದು.