01.07.20         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ದೊಡ್ಡ-ದೊಡ್ಡ ಸ್ಥಾನಗಳಲ್ಲಿ ದೊಡ್ಡ-ದೊಡ್ಡ ಅಂಗಡಿ (ಸೇವಾಕೇಂದ್ರ)ಗಳನ್ನು ತೆರೆಯಿರಿ, ಸರ್ವೀಸನ್ನು ವೃದ್ಧಿ ಪಡಿಸಲು ಯುಕ್ತಿಗಳನ್ನು ರಚಿಸಿ, ಮೀಟಿಂಗ್ ಮಾಡಿ, ವಿಚಾರ ನಡೆಸಿ.

ಪ್ರಶ್ನೆ:
ಸ್ಥೂಲ ಅದ್ಭುತಗಳನ್ನಂತೂ ಎಲ್ಲರೂ ಅರಿತುಕೊಂಡಿದ್ದಾರೆ, ಆದರೆ ಎಲ್ಲದಕ್ಕಿಂತ ದೊಡ್ಡ ಅದ್ಭುತವು ಯಾವುದಾಗಿದೆ, ಯಾವುದನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ?

ಉತ್ತರ:
ಯಾರು ಸರ್ವರ ಸದ್ಗತಿದಾತ ತಂದೆಯಿದ್ದಾರೆಯೋ ಅವರೇ ಸ್ವಯಂ ಬಂದು ಓದಿಸುತ್ತಾರೆ. ಇದು ಎಲ್ಲದಕ್ಕಿಂತ ದೊಡ್ಡ ಅದ್ಭುತವಾಗಿದೆ, ಈ ಅದ್ಭುತವಾದ ಮಾತನ್ನು ತಿಳಿಸಲು ನೀವು ತಮ್ಮ-ತಮ್ಮ ಅಂಗಡಿಗಳ ಶೋ ಮಾಡಬೇಕಾಗಿದೆ, ಏಕೆಂದರೆ ಮನುಷ್ಯರು ಆಡಂಬರ (ಸುಂದರ) ವಾಗಿರುವುದನ್ನು ನೋಡಿಯೇ ಬರುತ್ತಾರೆ. ಆದ್ದರಿಂದ ಎಲ್ಲದಕ್ಕಿಂತ ಒಳ್ಳೆಯ ಮತ್ತು ದೊಡ್ಡದಾದ ಅಂಗಡಿ (ಸೇವಾಕೇಂದ್ರ)ಯು ರಾಜಧಾನಿಯಲ್ಲಿರಬೇಕು, ಅದರಿಂದ ಎಲ್ಲರೂ ತಿಳಿದುಕೊಳ್ಳುವರು.

ಗೀತೆ:
ಸತ್ತರೂ ನಿಮ್ಮ ಮಡಿಲಿನಲ್ಲಿಯೇ, ಬದುಕಿದರೂ.........

ಓಂ ಶಾಂತಿ.
ಶಿವ ಭಗವಾನುವಾಚ. ರುದ್ರ ಭಗವಾನುವಾಚವೆಂದೂ ಹೇಳಲಾಗುತ್ತದೆ. ಏಕೆಂದರೆ ಶಿವ ಮಾಲೆಯೆಂದು ಗಾಯನವಾಗುವುದಿಲ್ಲ. ಯಾವ ಮನುಷ್ಯರು ಭಕ್ತಿಮಾರ್ಗದಲ್ಲಿ ಬಹಳ ಜಪ ಮಾಡುವರೋ ಅದರ ಹೆಸರು ರುದ್ರ ಮಾಲೆಯೆಂದು ಇಡಲಾಗಿದೆ. ಎರಡೂ ಒಂದೇ ಮಾತಾಗಿದೆ, ಆದರೆ ಸರಿಯಾದ ಮಾತೆಂದರೆ ಶಿವ ತಂದೆಯು ಓದಿಸುತ್ತಾರೆ. ಅದರ ಹೆಸರೇ ಇರಬೇಕು ಆದರೆ ರುದ್ರ ಮಾಲೆಯೆಂದೇ ಹೆಸರು ನಡೆದು ಬರುತ್ತದೆ ಅಂದಾಗ ಇದನ್ನೂ ಸಹ ತಿಳಿಸಿಕೊಡಬೇಕಾಗಿದೆ. ಶಿವ ಮತ್ತು ರುದ್ರನಲ್ಲಿ ಯಾವುದೇ ಅಂತರವಿಲ್ಲ. ಮಕ್ಕಳ ಬುದ್ಧಿಯಲ್ಲಿದೆ - ನಾವು ಚೆನ್ನಾಗಿ ಪುರುಷಾರ್ಥ ಮಾಡಿ ತಂದೆಯ ಮಾಲೆಯಲ್ಲಿ ಸಮೀಪ ಬಂದು ಬಿಡಬೇಕು. ಈ ದೃಷ್ಟಾಂತವನ್ನೂ ಸಹ ತಿಳಿಸಲಾಗುತ್ತದೆ. ಹೇಗೆ ಮಕ್ಕಳು ಓಟದ ಸ್ಪರ್ಧೆ ಮಾಡುತ್ತಾರೆ, ಗುರಿಯನ್ನು ಮುಟ್ಟಿ ಮತ್ತೆ ಹಿಂತಿರುಗಿ ಬಂದು ಶಿಕ್ಷಕರ ಬಳಿ ನಿಂತು ಬಿಡುತ್ತಾರೆ. ನೀವು ಮಕ್ಕಳು ಸಹ ತಿಳಿದುಕೊಂಡಿದ್ದೀರಿ - ನಾವು 84 ಜನ್ಮಗಳ ಚಕ್ರವನ್ನು ಸುತ್ತಿದೆವು. ಈಗ ಮೊಟ್ಟ ಮೊದಲಿಗೆ ಹೋಗಿ ಮಾಲೆಯಲ್ಲಿ ಪೊಣಿಸಲ್ಪಡಬೇಕಾಗಿದೆ. ಅದು ಲೌಕಿಕ ವಿದ್ಯಾರ್ಥಿಗಳ ಸ್ಪರ್ಧೆಯಾಗಿದೆ, ಇದು ಆತ್ಮಿಕ ಸ್ಪರ್ಧೆಯಾಗಿದೆ. ಆ ಸ್ಪರ್ಧೆಯನ್ನು ನೀವು ಮಾಡುವುದಿಲ್ಲ. ಇದು ಆತ್ಮಗಳ ಮಾತಾಗಿದೆ. ಆತ್ಮವು ಯುವಕನಾಗಲಿ, ವೃದ್ಧನಾಗಲಿ ಅಥವಾ ಚಿಕ್ಕ-ದೊಡ್ಡದಾಗಲಿ ಆಗುವುದಿಲ್ಲ. ಆತ್ಮವು ಒಂದೇ ಆಗಿದೆ. ಆತ್ಮವೇ ತನ್ನ ತಂದೆಯನ್ನು ನೆನಪು ಮಾಡಬೇಕಾಗಿದೆ. ಇದರಲ್ಲಿ ಯಾವುದೇ ಕಷ್ಟದ ಮಾತಿಲ್ಲ. ಭಲೆ ವಿದ್ಯಾಭ್ಯಾಸದಲ್ಲಿ ಹಿಂದುಳಿಯಬಹುದು ಆದರೆ ಇದರಲ್ಲಿ ಏನೂ ಕಷ್ಟವಿಲ್ಲ. ಎಲ್ಲಾ ಆತ್ಮಗಳು ಸಹೋದರ-ಸಹೋದರರಾಗಿದ್ದೀರಿ. ಆ ಸ್ಪರ್ಧೆಯಲ್ಲಂತೂ ಯುವಕರು ವೇಗವಾಗಿ ಓಡುತ್ತಾರೆ, ಇಲ್ಲಂತೂ ಆ ಮಾತಿಲ್ಲ. ರುದ್ರ ಮಾಲೆಯಲ್ಲಿ ಪೊಣಿಸಲ್ಪಡುವುದು ನೀವು ಮಕ್ಕಳ ಸ್ಪರ್ಧೆಯಾಗಿದೆ. ಅದು ನಾವಾತ್ಮಗಳ ವೃಕ್ಷವಾಗಿದೆ ಎಂಬುದೂ ಸಹ ನಿಮಗೆ ತಿಳಿದಿದೆ. ಅದು ಶಿವ ತಂದೆಯ ಎಲ್ಲಾ ಮನುಷ್ಯಾತ್ಮರ ಮಾಲೆಯಾಗಿದೆ. ಕೇವಲ 108ರ ಅಥವಾ 16,108ರ ಮಾಲೆಯಲ್ಲ. ಯಾರೆಲ್ಲಾ ಮನುಷ್ಯ ಮಾತ್ರರಿದ್ದಾರೆಯೋ ಎಲ್ಲರ ಮಾಲೆಯಾಗಿದೆ. ಮಕ್ಕಳಿಗೆ ತಿಳಿದಿದೆ - ನಂಬರ್ವಾರ್ ಆಗಿ ಪ್ರತಿಯೊಬ್ಬರೂ ತಮ್ಮ-ತಮ್ಮ ಧರ್ಮದಲ್ಲಿ ಹೋಗಿ ವಿರಾಜಮಾನರಾಗುತ್ತಾರೆ. ಅವರು ಮತ್ತೆ ಕಲ್ಪ-ಕಲ್ಪವೂ ಅದೇ ಸ್ಥಾನದಲ್ಲಿಯೇ ಬರುತ್ತಿರುತ್ತಾರೆ. ಇದು ಆಶ್ಚರ್ಯಕರವಾಗಿದೆಯಲ್ಲವೆ. ಪ್ರಪಂಚದವರು ಈ ಮಾತುಗಳನ್ನು ತಿಳಿದುಕೊಂಡಿಲ್ಲ. ನಿಮ್ಮಲ್ಲಿಯೂ ಸಹ ಯಾರು ವಿಶಾಲಬುದ್ಧಿಯವರಿದ್ದಾರೆಯೋ ಅವರೇ ಈ ಮಾತುಗಳನ್ನು ಅರಿತುಕೊಳ್ಳುತ್ತಾರೆ. ನಾವು ಎಲ್ಲರಿಗೆ ಹೇಗೆ ಮಾರ್ಗವನ್ನು ತಿಳಿಸುವುದು ಎಂಬ ಸಂಕಲ್ಪವೇ ನಿಮ್ಮ ಬುದ್ಧಿಯಲ್ಲಿರಬೇಕು. ಇದು ವಿಷ್ಣುವಿನ ಮಾಲೆಯಾಗಿದೆ. ಪ್ರಾರಂಭದಿಂದ ಹಿಡಿದು ವಂಶಾವಳಿಯು ಆರಂಭವಾಗುತ್ತದೆ. ರೆಂಬೆ-ಕೊಂಬೆಗಳು ಎಲ್ಲವೂ ಇದೆಯಲ್ಲವೆ. ಅಲ್ಲಿಯೂ ಸಹ ಚಿಕ್ಕ-ಚಿಕ್ಕ ಆತ್ಮಗಳಿರುತ್ತಾರೆ, ಇಲ್ಲಿ ಮನುಷ್ಯರಿದ್ದಾರೆ ನಂತರ ಎಲ್ಲಾ ಆತ್ಮಗಳು ಅಲ್ಲಿ ನಿಖರವಾಗಿ ನಿಂತಿರುತ್ತಾರೆ. ಇವು ವಿಚಿತ್ರ ಮಾತುಗಳಾಗಿವೆ. ಮನುಷ್ಯರು ಈ ಸ್ಥೂಲ ಅದ್ಭುತಗಳನ್ನು ನೋಡುತ್ತಾರೆ ಆದರೆ ಇವು ಏನೇನೂ ಇಲ್ಲ. ಸರ್ವರ ಸದ್ಗತಿದಾತ ಪರಮಪಿತ ಪರಮಾತ್ಮನೇ ಬಂದು ಓದಿಸುತ್ತಾರೆ ಅಂದಮೇಲೆ ಇದು ಎಷ್ಟು ದೊಡ್ಡ ಅದ್ಭುತವಾಗಿದೆ. ಕೃಷ್ಣನಿಗೆ ಸರ್ವರ ಸದ್ಗತಿದಾತನೆಂದು ಹೇಳುವುದಿಲ್ಲ. ನೀವು ಇವೆಲ್ಲಾ ಮಾತುಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಮೂಲ ಮಾತಾಗಿದೆ - ಗೀತೆಯ ಭಗವಂತನದು. ಇದರ ಮೇಲೆ ಜಯ ಗಳಿಸಿದರೆ ಸಾಕು. ಗೀತೆಯು ಭಗವಂತನಿಂದ ಉಚ್ಛರಿಸಲ್ಪಟ್ಟ ಸರ್ವಶಾಸ್ತಮಯಿ ಶಿರೋಮಣಿಯಾಗಿದೆ. ಮೊಟ್ಟ ಮೊದಲು ಇದನ್ನು ಸಿದ್ಧ ಮಾಡುವ ಪ್ರಯತ್ನ ಪಡಬೇಕು. ಇತ್ತೀಚೆಗಂತೂ ಬಹಳ ಆಡಂಬರವಾಗಿರಬೇಕು. ಯಾವ ಅಂಗಡಿಯಲ್ಲಿ ಬಹಳ ಶೋ ಇರುತದೆಯೋ ಅಲ್ಲಿ ಬಹಳ ಮನುಷ್ಯರು ಹೋಗುತ್ತಾರೆ. ಇಲ್ಲಿ ಒಳ್ಳೆಯ ವಸ್ತುಗಳು ಸಿಗಬಹುದೆಂದು ತಿಳಿಯುತ್ತಾರೆ. ಮಕ್ಕಳು ಹಿಂಜರಿಯುತ್ತಾರೆ. ಇಷ್ಟು ದೊಡ್ಡ-ದೊಡ್ಡ ಸೇವಾಕೇಂದ್ರಗಳನ್ನು ತೆರೆಯಲು ಒಂದೆರಡು ಲಕ್ಷಗಳಾದರೂ ಬೇಕು. ಆಗ ಸುಂದರ ಮನೆ ಸಿಗುವುದು. ಒಂದೇ ಬಹಳ ಸುಂದರವಾದ ಸೇವಾಕೇಂದ್ರವಿರಲಿ. ಇಂತಹ ದೊಡ್ಡ ಸೇವಾಕೇಂದ್ರಗಳು ನಗರಗಳಲ್ಲಿಯೇ ಸಿಗುವುದು. ನಿಮ್ಮದು ರಾಜಧಾನಿಯಲ್ಲಿ ಬಹಳ ದೊಡ್ಡ ಸೇವಾಕೇಂದ್ರವಿರಬೇಕು. ಸರ್ವೀಸನ್ನು ಹೇಗೆ ವೃದ್ಧಿ ಮಾಡುವುದೆಂದು ಮಕ್ಕಳು ವಿಚಾರ ಸಾಗರ ಮಂಥನ ಮಾಡಿ ದೊಡ್ಡ ಅಂಗಡಿಗಳನ್ನು (ಸೇವಾಕೇಂದ್ರ) ತೆರೆಯುತ್ತೀರೆಂದರೆ ಗಣ್ಯ ವ್ಯಕ್ತಿಗಳು ಬರುತ್ತಾರೆ. ಹಿರಿಯ ವ್ಯಕ್ತಿಗಳ ಮಾತು ಬಹಳ ಬೇಗ ಹರಡುತ್ತದೆ. ಮೊಟ್ಟ ಮೊದಲಿಗೆ ಈ ಪ್ರಯತ್ನ ಪಡಬೇಕು. ಸರ್ವೀಸಿಗಾಗಿ ಇಂತಹ ದೊಡ್ಡದಕ್ಕಿಂತ ದೊಡ್ಡ ಸ್ಥಾನವನ್ನು ಮಾಡಿ ಅಲ್ಲಿಗೆ ಹಿರಿಯ ವ್ಯಕ್ತಿಗಳು ಬಂದು ನೋಡಿ ಆಶ್ಚರ್ಯ ಪಡಲಿ ಮತ್ತು ಅಲ್ಲಿ ತಿಳಿಸುವವರೂ ಸಹ ಬಹಳ ಬುದ್ಧಿವಂತರಿರಬೇಕು. ಯಾರಾದರೂ ಅರ್ಧಂಬರ್ಧ ತಿಳಿದುಕೊಂಡಿರುವ ಬಿ.ಕೆ., ತಿಳಿಸುತ್ತಾರೆಂದರೆ ಬಹುಷಃ ಎಲ್ಲರೂ ಇದೇ ರೀತಿಯಿರಬಹುದು ಎಂದು ತಿಳಿಯುತ್ತಾರೆ. ಆದ್ದರಿಂದ ಅಂಗಡಿಯಲ್ಲಿ (ಸೇವಾಕೇಂದ್ರ) ಮಾರಾಟಗಾರರೂ ಸಹ ಒಳ್ಳೆಯವರಿರಬೇಕು. ಇದು ವ್ಯಾಪಾರವಾಗಿದೆಯಲ್ಲವೆ. ತಂದೆಯು ತಿಳಿಸುತ್ತಾರೆ - ಸಾಹಸ ಮಕ್ಕಳದು ಸಹಯೋಗ ತಂದೆಯದು. ಆ ವಿನಾಶೀ ಧನವು ಯಾವುದೇ ಕೆಲಸಕ್ಕೆ ಬರುವುದಿಲ್ಲ. ನಾವಂತೂ ನಮ್ಮ ಅವಿನಾಶಿ ಸಂಪಾದನೆ ಮಾಡಿಕೊಳ್ಳಬೇಕಾಗಿದೆ. ಅದರಿಂದ ಅನೇಕರ ಕಲ್ಯಾಣವಾಗುವುದು. ಹೇಗೆ ಈ ಬ್ರಹ್ಮಾರವರೂ ಸಹ ಮಾಡಿದರು, ಇದರಿಂದ ನಂತರ ಹಸಿವಿನಿಂದೇನು ಇರುವುದಿಲ್ಲ. ನೀವೂ ತಿನ್ನುತ್ತಿದ್ದೀರಿ, ಇವರೂ (ಬ್ರಹ್ಮಾ) ತಿನ್ನುತ್ತಿದ್ದಾರೆ. ಇಲ್ಲಿ ಸಿಗುವ ಆಹಾರ-ಪಾನೀಯಗಳು ಮತ್ತೆಲ್ಲಿಯೂ ಸಿಗುವುದಿಲ್ಲ. ಇದೆಲ್ಲವೂ ಮಕ್ಕಳಿಗಾಗಿಯೇ ಇದೆಯಲ್ಲವೆ. ಮಕ್ಕಳು ರಾಜಧಾನಿಯನ್ನು ಸ್ಥಾಪನೆ ಮಾಡಬೇಕಾಗಿದೆ. ಇದರಲ್ಲಿ ಬಹಳ ವಿಶಾಲ ಬುದ್ಧಿಯು ಬೇಕು. ರಾಜಧಾನಿಯಲ್ಲಿ ಹೆಸರು ಪ್ರಖ್ಯಾತವಾದಾಗ ಎಲ್ಲರೂ ಬಂದು ತಿಳಿದುಕೊಳ್ಳುತ್ತಾರೆ. ಇವರು ಸತ್ಯವನ್ನು ಹೇಳುತ್ತಾರೆ. ವಿಶ್ವದ ಮಾಲೀಕರನ್ನಾಗಿ ಭಗವಂತನೇ ಮಾಡುವರು ಎಂಬ ಮಾತನ್ನು ಅವಶ್ಯವಾಗಿ ಹೇಳುತ್ತಾರೆ. ಮನುಷ್ಯರು ಮನುಷ್ಯರನ್ನು ವಿಶ್ವದ ಮಾಲೀಕರನ್ನಾಗಿ ಮಾಡಲು ಸಾಧ್ಯವಿಲ್ಲ ತಂದೆಯು ಸರ್ವೀಸಿನ ವೃದ್ಧಿಗಾಗಿ ಸಲಹೆಗಳನ್ನು ಕೊಡುತ್ತಾ ಇರುತ್ತಾರೆ.

ಯಾವಾಗ ಮಕ್ಕಳದು ವಿಶಾಲ ಹೃದಯವಿರುವುದೋ ಆಗ ಸರ್ವೀಸಿನ ವೃದ್ಧಿಯಾಗುವುದು. ಏನೆಲ್ಲಾ ಕಾರ್ಯವನ್ನು ಮಾಡುತ್ತೀರೋ ಅದನ್ನು ವಿಶಾಲ ಹೃದಯದಿಂದ ಮಾಡಿ. ಯಾವುದೇ ಶುಭ ಕಾರ್ಯವನ್ನು ತಾವೇ ಮಾಡುವುದು ಬಹಳ ಒಳ್ಳೆಯದು. ತಾನಾಗಿಯೇ ಮಾಡುವವರು ದೇವತಾ, ಹೇಳಿದನಂತರ ಮಾಡುವವರು ಮನುಷ್ಯರು, ಹೇಳಿಯೂ ಮಾಡದೇ ಇರುವವರು...... ಎಂದು ಹೇಳಲಾಗುತ್ತದೆ. ತಂದೆಯಂತೂ ದಾತನಾಗಿದ್ದಾರೆ, ಇದನ್ನು ಮಾಡಿ ಅದನ್ನು ಮಾಡಿ, ಈ ಕಾರ್ಯದಲ್ಲಿ ಇಷ್ಟನ್ನು ತೊಡಗಿಸಿ ಎಂದು ಹೇಳುವುದಿಲ್ಲ. ತಂದೆಯು ತಿಳಿಸಿದ್ದಾರೆ, ದೊಡ್ಡ-ದೊಡ್ಡ ರಾಜರ ಕೈ ಎಂದೂ ಸಹ ಮುಚ್ಚಿರುವುದಿಲ್ಲ. ರಾಜರು ಯಾವಾಗಲೂ ದಾತನಾಗಿರುತ್ತಾರೆ. ಏನೇನು ಮಾಡಬೇಕೆಂದು ತಂದೆಯು ಸಲಹೆ ಕೊಡುತ್ತಾರೆ, ಇದರಲ್ಲಿ ಬಹಳ ಎಚ್ಚರಿಕೆ ಕೊಡಬೇಕು. ಬಹಳ ಶ್ರೇಷ್ಠ ಪದವಿಯಾಗಿದೆ. ಆದ್ದರಿಂದ ಮಾಯೆಯ ಮೇಲೆ ಜಯ ಗಳಿಸಬೇಕಾಗಿದೆ. ಅಂತಿಮದಲ್ಲಿ ಫಲಿತಾಂಶವು ಹೊರ ಬರುತ್ತದೆ. ಆಗ ಯಾರು ಹೆಚ್ಚು ಅಂಕಗಳಿಂದ ತೇರ್ಗಡೆಯಾಗುವರು ಅವರಿಗೆ ಖುಷಿಯಾಗುತ್ತದೆ. ಅಂತಿಮದಲ್ಲಿ ಎಲ್ಲರಿಗೂ ಸಾಕ್ಷಾತ್ಕಾರವಾಗುತ್ತದೆಯಲ್ಲವೆ ಆದರೆ ಆ ಸಮಯದಲ್ಲಿ ಏನು ಮಾಡಲು ಸಾಧ್ಯ! ಅದೃಷ್ಠದಲ್ಲಿ ಏನಿದೆಯೋ ಅದೇ ಸಿಗುತ್ತದೆ. ಪುರುಷಾರ್ಥದ ಮಾತು ಬೇರೆ, ತಂದೆಯು ಮಕ್ಕಳಿಗೆ ತಿಳಿಸಿಕೊಡುತ್ತಾರೆ - ಮಕ್ಕಳೇ ವಿಶಾಲ ಬುದ್ಧಿಯವರಾಗಿ, ನೀವೀಗ ಧರ್ಮಾತ್ಮರಾಗುತ್ತೀರಿ. ಪ್ರಪಂಚದಲ್ಲಿ ಧರ್ಮಾತ್ಮರಂತು ಅನೇಕರು ಬಂದು ಹೋಗಿದ್ದಾರಲ್ಲವೆ. ಅವರ ಹೆಸರು ಬಹಳ ಪ್ರಸಿದ್ಧವಾಗುತ್ತದೆ. ಇಂತಹವರು ಬಹಳ ಧರ್ಮಾತ್ಮರಾಗಿದ್ದರು ಎಂದು ಹೇಳುತ್ತಾರೆ. ಕೆಲವರಂತೂ ಹಣವನ್ನು ಕೂಡಿಡುತ್ತಾ-ಕೂಡಿಡುತ್ತಾ ಆಕಸ್ಮಿಕವಾಗಿ ಸಾವನ್ನಪ್ಪುತ್ತಾರೆ. ನಂತರ ಯಾರಾದರೂ ಟ್ರಸ್ಟಿಯಾಗುತ್ತಾರೆ, ಮಕ್ಕಳು ಯೋಗ್ಯರಲ್ಲದಿದ್ದರೆ ಆಗ ಟ್ರಸ್ಟನ್ನು ಮಾಡುತ್ತಾರೆ. ಈ ಸಮಯದಲ್ಲಂತೂ ಇದು ಪಾಪಾತ್ಮರ ಪ್ರಪಂಚವಾಗಿದೆ. ದೊಡ್ಡ-ದೊಡ್ಡ ಗುರುಗಳು ಮೊದಲಾದವರಿಗೆ ದಾನ ಮಾಡುತ್ತಾರೆ. ಹೇಗೆ ಕಾಶ್ಮೀರದ ಮಹಾರಾಜನಿದ್ದರು, ಅವರು ಹೋಗುವ ಸಮಯದಲ್ಲಿ ಆರ್ಯ ಸಮಾಜಿಗಳಿಗೆ ಸಿಗಲೆಂದು ವ್ಹಿಲ್ ಮಾಡಿ ಹೋದರು. ಅವರ ಧರ್ಮವು ವೃದ್ಧಿಯಾಯಿತು. ನೀವೀಗ ಏನು ಮಾಡಬೇಕು, ಯಾವ ಧರ್ಮವನ್ನು ವೃದ್ಧಿಯಲ್ಲಿ ತರಬೇಕಾಗಿದೆ? ಆದಿ ಸನಾತನ ದೇವಿ-ದೇವತಾ ಧರ್ಮವೇ ಆಗಿದೆ, ಇದೂ ಸಹ ಯಾರಿಗೂ ತಿಳಿದಿಲ್ಲ. ನೀವೀಗ ಪುನಃ ಸ್ಥಾಪನೆ ಮಾಡುತ್ತಿದ್ದೀರಿ. ಬ್ರಹ್ಮಾರವರ ಮೂಲಕವೇ ಸ್ಥಾಪನೆ. ಮಕ್ಕಳು ಈಗ ಒಬ್ಬರ ನೆನಪಿನಲ್ಲಿಯೇ ಇರಬೇಕು. ನೀವು ನೆನಪಿನ ಬಲದಿಂದಲೇ ಇಡೀ ಸೃಷ್ಟಿಯನ್ನು ಪವಿತ್ರವನ್ನಾಗಿ ಮಾಡಬೇಕು ಏಕೆಂದರೆ ನಿಮಗಾಗಿ ಪವಿತ್ರ ಸೃಷ್ಟಿಯು ಬೇಕು ಅಂದಾಗ ಈ ಹಳೆಯ ಪ್ರಪಂಚಕ್ಕೆ ಬೆಂಕಿ ಬೀಳುವುದರಿಂದಲೇ ಪವಿತ್ರವಾಗುತ್ತದೆ. ಕಚ್ಚಾ ವಸ್ತುವನ್ನು ಬೆಂಕಿಯಲ್ಲಿ ಶುದ್ಧಗೊಳಿಸುತ್ತಾರೆ. ಇದರಲ್ಲಿ ಎಲ್ಲಾ ಅಪವಿತ್ರ ವಸ್ತುಗಳು ಬಿದ್ದು ನಂತರ ಚೆನ್ನಾಗಿ ತಯಾರಾಗುತ್ತವೆ. ನಿಮಗೆ ತಿಳಿದಿದೆ - ಇದು ಬಹಳ ಛೀ ಛೀ ತಮೋಪ್ರಧಾನ ಪ್ರಪಂಚವಾಗಿದೆ, ಪುನಃ ಸತೋಪ್ರಧಾನವಾಗಲಿದೆ, ಇದು ಜ್ಞಾನ ಯಜ್ಞವಲ್ಲವೆ. ನೀವು ಬ್ರಾಹ್ಮಣರಾಗಿದ್ದೀರಿ, ಇದೂ ಸಹ ನಿಮಗೆ ತಿಳಿದಿದೆ - ಶಾಸ್ತ್ರಗಳಲ್ಲಿ ಅನೇಕ ಮಾತುಗಳನ್ನು ಬರೆದಿದ್ದಾರೆ. ಯಜ್ಞದಲ್ಲಿ ದಕ್ಷ ಪ್ರಜಾಪಿತನ ಹೆಸರನ್ನು ತೋರಿಸಿದ್ದಾರೆ ಅಂದಮೇಲೆ ಮತ್ತೆ ರುದ್ರ ಜ್ಞಾನ ಯಜ್ಞವನ್ನು ಬರೆದಿದ್ದಾರೆ. ಯಜ್ಞದಲ್ಲಿ ದಕ್ಷ ಪ್ರಜಾಪಿತನ ಹೆಸರನ್ನು ತೋರಿಸಿದ್ದಾರೆ ಅಂದಮೇಲೆ ಮತ್ತೆ ರುದ್ರ ಜ್ಞಾನ ಯಜ್ಞವು ಎಲ್ಲಿ ಹೋಯಿತು! ಇದಕ್ಕಾಗಿಯೇ ಏನೇನೋ ಕಥೆಗಳನ್ನು ಬರೆದಿದ್ದಾರೆ. ಯಜ್ಞದ ವರ್ಣನೆಯು ಕಾಯಿದೆಯನುಸಾರವಾಗಿ ಇಲ್ಲ. ತಂದೆಯೇ ಬಂದು ಎಲ್ಲವನ್ನೂ ತಿಳಿಸುತ್ತಾರೆ. ಈಗ ನೀವು ಮಕ್ಕಳು ಶ್ರೀಮತದ ಜ್ಞಾನ ಯಜ್ಞವನ್ನು ರಚಿಸಿದ್ದೀರಿ. ಇದು ಜ್ಞಾನ ಯಜ್ಞವೂ ಆಗಿದೆ ಮತ್ತು ವಿದ್ಯಾಲಯವೂ ಆಗಿದೆ. ಜ್ಞಾನ ಮತ್ತು ಯಜ್ಞ ಎರಡೂ ಶಬ್ಧಗಳು ಬೇರೆ-ಬೇರೆಯಾಗಿದೆ. ಯಜ್ಞದಲ್ಲಿ ಆಹುತಿ ಮಾಡಬೇಕಾಗಿದೆ. ಜ್ಞಾನ ಸಾಗರ ತಂದೆಯೇ ಬಂದು ಯಜ್ಞವನ್ನು ರಚಿಸುತ್ತಾರೆ, ಇದು ಬಹಳ ದೊಡ್ಡ ಯಜ್ಞವಾಗಿದೆ, ಇದರಲ್ಲಿ ಇಡೀ ಹಳೆಯ ಪ್ರಪಂಚವು ಸ್ವಾಹಾ ಆಗಬೇಕಾಗಿದೆ. ಆದ್ದರಿಂದ ಮಕ್ಕಳು ಸರ್ವೀಸಿನ ಯುಕ್ತಿಗಳನ್ನು ರಚಿಸಬೇಕು, ಭಲೆ ಹಳ್ಳಿಗಳಲ್ಲಿಯೂ ಸರ್ವೀಸ್ ಮಾಡಿ. ಮೊದಲು ಬಡವರಿಗೆ ಈ ಜ್ಞಾನವನ್ನು ಕೊಡಬೇಕು ಎಂದು ನಿಮಗೆ ಅನೇಕರು ಹೇಳುತ್ತಾರೆ. ಕೇವಲ ಸಲಹೆ ಕೊಡುತ್ತಾರೆ ಆದರೆ ತಾವೇನು ಕೆಲಸ ಮಾಡುವುದಿಲ್ಲ. ಹೀಗೆ ಮಾಡಿ, ಇದು ಬಹಳ ಒಳ್ಳೆಯ ಜ್ಞಾನವಾಗಿದೆ ಎಂದು ಸಲಹೆ ನೀಡುತ್ತಾರೆ. ತಾವು ಮಾತ್ರ ಸರ್ವೀಸ್ ಮಾಡುವುದಿಲ್ಲ. ನಮಗೆ ಬಿಡುವಿಲ್ಲವೆಂದು ಹೇಳುತ್ತಾರೆ.

ಜ್ಞಾನವು ಬಹಳ ಒಳ್ಳೆಯದಾಗಿದೆ. ಎಲ್ಲರಿಗೆ ಈ ಜ್ಞಾನವು ಸಿಗಬೇಕು. ತಮ್ಮನ್ನು ದೊಡ್ಡವರು, ನಿಮ್ಮನ್ನು ಚಿಕ್ಕವರೆಂದು ತಿಳಿಯುತ್ತಾರೆ ಇದರಲ್ಲಿ ನೀವು ಬಹಳ ಎಚ್ಚರಿಕೆಯಿಂದಿರಬೇಕಾಗಿದೆ. ಆ ವಿದ್ಯೆಯ ಜೊತೆಗೆ ಈ ವಿದ್ಯೆಯೂ ಸಿಗುತ್ತದೆ. ವಿದ್ಯೆಯಿಂದ ಮಾತನಾಡುವ ತಿಳುವಳಿಕೆ ಬಂದು ಬಿಡುತ್ತದೆ. ನಡವಳಿಕೆ ಪರಿವರ್ತನೆಯಾಗುತ್ತದೆ. ಅವಿದ್ಯಾವಂತರಂತೂ ಹೇಗೆ ಮಂಧ ಬುದ್ಧಿಯವರಾಗಿರುತ್ತಾರೆ. ಹೇಗೆ ಮಾತನಾಡಬೇಕು ಎಂಬ ತಿಳುವಳಿಕೆಯೇ ಇರುವುದಿಲ್ಲ. ಹಿರಿಯ ವ್ಯಕ್ತಿಗಳೊಂದಿಗೆ ಯಾವಾಗಲೂ ತಾವು ಎಂದು ಮಾತನಾಡಬೇಕಾಗಿದೆ. ಇಲ್ಲಂತೂ ಕೆಲವರು ಇಂತಹವರೂ ಇದ್ದಾರೆ, ತನ್ನ ಪತಿಗೂ ನೀನು, ನೀನು ಎನ್ನುತ್ತಿರುತ್ತಾರೆ. ತಾವು ಎನ್ನುವ ಶಬ್ಧವು ರಾಯಲ್ ಶಬ್ಧವಾಗಿದೆ. ಹಿರಿಯ ವ್ಯಕ್ತಿಗಳಿಗೆ ತಾವು ಎಂದು ಹೇಳಬೇಕು ಅಂದಾಗ ಮೊಟ್ಟ ಮೊದಲು ತಂದೆಯು ಸಲಹೆ ನೀಡುತ್ತಾರೆ - ದೆಹಲಿ ಯಾವುದು ಪರಿಸ್ಥಾನವಾಗಿತ್ತೋ ಪುನಃ ಇದನ್ನು ಪರಿಸ್ಥಾನವನ್ನಾಗಿ (ಸ್ವರ್ಗ) ಮಾಡಬೇಕಾಗಿದೆ ಆದ್ದರಿಂದ ದೆಹಲಿಯಲ್ಲಿ ಎಲ್ಲರಿಗೆ ಸಂದೇಶ ಕೊಡಬೇಕು - ಬಹಳ ಚೆನ್ನಾಗಿ ಜಾಹೀರಾತುಗಳನ್ನು ಮಾಡಬೇಕಾಗಿದೆ. ತಂದೆಯು ಟಾಪಿಕ್ಸ್ನ್ನು ತಿಳಿಸುತ್ತಿರುತ್ತಾರೆ. ಟಾಪಿಕ್ನ ಪಟ್ಟಿಯನ್ನು ಬರೆಯುತ್ತಾ ಹೋಗಿ. ವಿಶ್ವದಲ್ಲಿ ಶಾಂತಿಯು ಹೇಗೆ ಸ್ಥಾಪನೆಯಾಗುತ್ತದೆ ಎಂಬುದನ್ನು ಬಂದು ತಿಳಿದುಕೊಳ್ಳಿ - 21 ಜನ್ಮಗಳಿಗಾಗಿ ಹೇಗೆ ನಿರೋಗಿಯಾಗುವುದು ಎಂದು ಬಂದು ತಿಳಿದುಕೊಳ್ಳಿ ಎಂಬ ಖುಷಿಯ ಮಾತುಗಳನ್ನು ಬರೆಯಿರಿ. ಬಂದು 21 ಜನ್ಮಗಳಿಗಾಗಿ ನಿರೋಗಿ, ಸತ್ಯಯುಗೀ ಡಬಲ್ ಕಿರೀಟಧಾರಿಗಳಾಗಿ. ಸತ್ಯಯುಗೀ ಶಬ್ಧವನ್ನು ಎಲ್ಲದರಲ್ಲಿ ಬರೆಯಿರಿ. ಸುಂದರವಾದ ಶಬ್ಧಗಳಾಗಿರಲಿ. ಅದನ್ನು ನೋಡುತ್ತಿದ್ದಂತೆಯೇ ಮನುಷ್ಯರಿಗೆ ಖುಷಿಯಾಗಲಿ. ಮನೆಯಲ್ಲಿಯೂ ಇಂತಹ ಚಿತ್ರಗಳು ಮತ್ತು ಬೋರ್ಡ್ ಇತ್ಯಾದಿಗಳನ್ನು ಹಾಕಿರಿ. ತಮ್ಮ ಉದ್ಯೋಗ-ವ್ಯವಹಾರಗಳನ್ನು ಭಲೆ ಮಾಡಿ. ಜೊತೆ ಜೊತೆಗೆ ಈ ಸೇವೆಯನ್ನೂ ಮಾಡುತ್ತಾ ಇರಿ. ಉದ್ಯೋಗವು ಇಡೀ ದಿನ ಇರುವುದಿಲ್ಲ. ಕೇವಲ ಮೇಲೆ-ಮೇಲೆ ನೋಡಿಕೊಳ್ಳಲಾಗುತ್ತದೆ. ಉಳಿದ ಕೆಲಸವನ್ನು ಅಸಿಸ್ಟೆಂಟ್ ಮ್ಯಾನೇಜರ್ ನಡೆಸುತ್ತಾರೆ. ಕೆಲವರು ಸೇಟುಗಳು ವಿಶಾಲಹೃದಯಿಗಳಾಗಿರುತ್ತಾರೆಂದರೆ ತಮ್ಮ ಅಸಿಸ್ಟೆಂಟ್ಗೆ ಒಳ್ಳೆಯ ಸಂಬಳ ಕೊಟ್ಟು ಗದ್ದುಗೆಯ ಮೇಲೆ ಕೂರಿಸುತ್ತಾರೆ. ಇದಂತೂ ಬೇಹದ್ದಿನ ಸೇವೆಯಾಗಿದೆ. ಮತ್ತೆಲ್ಲರದೂ ಹದ್ದಿನ ಸೇವೆಯಾಗಿದೆ. ಈ ಬೇಹದ್ದಿನ ಸೇವೆಯಲ್ಲಿ ಎಷ್ಟೊಂದು ವಿಶಾಲ ಬುದ್ಧಿಯು ಬೇಕು. ನಾವು ವಿಶ್ವದ ಮೇಲೆ ಜಯ ಗಳಿಸುತ್ತೇವೆ. ಮೃತ್ಯುವಿನ ಮೇಲೂ ಜಯ ಗಳಿಸಿ ಅಮರರಾಗಿ ಬಿಡುತ್ತೇವೆ. ಇಂತಹ ಬರವಣಿಗೆಗಳನ್ನು ನೋಡಿ ಅನೇಕರು ಬರುತ್ತಾರೆ ಮತ್ತು ತಿಳಿದುಕೊಳ್ಳುವ ಪ್ರಯತ್ನ ಪಡುತ್ತಾರೆ. ಅಮರಲೋಕದ ಮಾಲೀಕರು ನೀವು ಹೇಗಾಗಬಹುದು ಎಂಬುದನ್ನು ಬಂದು ತಿಳಿದುಕೊಳ್ಳಿ. ಹೀಗೆ ಬಹಳಷ್ಟು ವಿಷಯಗಳನ್ನು ತೆಗೆಯಬಹುದಾಗಿದೆ. ನೀವು ಯಾರನ್ನಾದರೂ ವಿಶ್ವದ ಮಾಲೀಕರನ್ನಾಗಿ ಮಾಡಬಲ್ಲಿರಿ. ಅಲ್ಲಿ ದುಃಖದ ಹೆಸರು, ಗುರುತೂ ಇರುವುದಿಲ್ಲ. ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕು! ತಂದೆಯು ನಮ್ಮನ್ನು ಪುನಃ ಹೇಗೆ ಮಾಡಲು ಬಂದಿದ್ದಾರೆ ಎಂದು. ಮೃತ್ಯುವು ಸನ್ಮುಖದಲ್ಲಿಯೇ ಇದೆ, ಈಗ ಹಳೆಯ ಸೃಷ್ಟಿಯು ಪರಿವರ್ತನೆಯಾಗಿ ಹೊಸದಾಗುವುದು. ಈಗಲೂ ಸಹ ನೀವು ನೋಡುತ್ತೀರಿ, ಕೆಲವೊಂದು ಕಡೆ ಯುದ್ಧಗಳು ನಡೆಯುತ್ತಲೇ ಇರುತ್ತವೆ. ಯಾವಾಗ ಬಹಳ ಭಾರಿ ಯುದ್ಧವು ನಡೆಯುವುದೋ ಆಗ ಆಟವು ಸಮಾಪ್ತಿಯಾಗುವುದು. ನೀವಂತೂ ಬಹಳ ಚೆನ್ನಾಗಿ ತಿಳಿದುಕೊಂಡಿದ್ದೀರಿ - ತಂದೆಯು ಬಹಳ ಪ್ರೀತಿಯಿಂದ ತಿಳಿಸುತ್ತಾರೆ, ಮಧುರ ಮಕ್ಕಳೇ ವಿಶ್ವದ ರಾಜ್ಯಭಾಗ್ಯವು ನಿಮ್ಮದಾಗಿದೆ. ನೀವು ವಿಶ್ವದ ಮಾಲೀಕರಾಗಿದ್ದಿರಿ, ಭಾರತದಲ್ಲಿ ನೀವು ಅಪಾರ ಸುಖವನ್ನು ನೋಡಿದಿರಿ, ಅಲ್ಲಿ ರಾವಣನ ರಾಜ್ಯವೇ ಇರಲಿಲ್ಲ ಅಂದಾಗ ಈಗ ಎಷ್ಟು ಖುಷಿಯಿರಬೇಕು! ಮಕ್ಕಳು ಪರಸ್ಪರ ಸೇರಿ ಸಲಹೆ ತೆಗೆದುಕೊಳ್ಳಬೇಕು. ಪತ್ರಿಕೆಗಳಲ್ಲಿಯೂ ಹಾಕಿಸಿ. ದೆಹಲಿಯಲ್ಲಿ ವಿಮಾನಗಳ ಮೂಲಕ ಸಂದೇಶ ಪತ್ರಗಳನ್ನು ಹಾಕಿಸಿ. ನಿಮಂತ್ರಣ ಕೊಡುತ್ತಾ ಇರಿ. ಖರ್ಚೇನೂ ಬಹಳಷ್ಟಾಗುವುದಿಲ್ಲ, ಇದು ದೊಡ್ಡ ಅಧಿಕಾರಿಗಳಿಗೆ ಅರ್ಥವಾಗಿದ್ದೇ ಆದರೆ ಅವರು ಉಚಿತವಾಗಿ ಮಾಡಿಸುತ್ತಾರೆ. ತಂದೆಯು ಸಲಹೆ ಕೊಡುತ್ತಾರೆ - ಹೇಗೆ ಕಲ್ಕತ್ತಾದಂತಹ ನಗರದಲ್ಲಿ ಬಹಳ ಸುಂದರವಾದ, ಅತಿ ದೊಡ್ಡದಾದ ಸೇವಾಕೇಂದ್ರವಿರಲಿ ಆಗ ಬಹಳಷ್ಟು ಮಂದಿ ಗ್ರಾಹಕರು ಬರುತ್ತಾರೆ. ಮದ್ರಾಸು, ಬಾಂಬೆ ದೊಡ್ಡ-ದೊಡ್ಡ ನಗರಗಳಲ್ಲಿ ದೊಡ್ಡ ಸೇವಾಕೇಂದ್ರಗಳಿರಲಿ. ತಂದೆಯು ವ್ಯಾಪಾರಿಯೂ ಆಗಿದ್ದಾರಲ್ಲವೆ. ನಿಮ್ಮಿಂದ ಏನೂ ಕೆಲಸಕ್ಕೆ ಬಾರದ ವಸ್ತುಗಳನ್ನು ತೆಗೆದುಕೊಂಡು ಅದಕ್ಕೆ ಬದಲಾಗಿ ಹೊಸದನ್ನು ಕೊಡುತ್ತೇನೆ. ಆದ್ದರಿಂದಲೇ ದಯಾಹೃದಯಿ ಎಂದು ಗಾಯನವಿದೆ. ಅಂದರೆ ಕವಡೆಯ ಸಮಾನರನ್ನೂ ವಜ್ರ ಸಮಾನರನ್ನಾಗಿ ಮಾಡುವವರು, ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವವರಾಗಿದ್ದಾರೆ. ಒಬ್ಬ ತಂದೆಯದೇ ಬಲಿಹಾರಿಯಾಗಿದೆ. ತಂದೆಯೇ ಇಲ್ಲದಿದ್ದರೆ ನಿಮ್ಮ ಮಹಿಮೆಯೇನು ಇರುತ್ತಿತ್ತು?

ಭಗವಂತನೇ ನಮಗೆ ಓದಿಸುತ್ತಾರೆಂದು ನೀವು ಮಕ್ಕಳಿಗೆ ನಶೆಯಿರಬೇಕು. ನರನಿಂದ ನಾರಾಯಣನಾಗುವ ಗುರಿ-ಧ್ಯೇಯವು ಸನ್ಮುಖದಲ್ಲಿದೆ. ಮೊಟ್ಟ ಮೊದಲಿಗೆ ಯಾವುದು ಅವ್ಯಭಿಚಾರಿ ಭಕ್ತಿಯನ್ನು ಆರಂಭಿಸಿದ್ದಾರೆಯೋ ಅವರೇ ಬಂದು ಶ್ರೇಷ್ಠ ಪದವಿಯನ್ನು ಪಡೆಯುವ ಪುರುಷಾರ್ಥವನ್ನು ಮಾಡುತ್ತಾರೆ. ತಂದೆಯು ಎಷ್ಟು ಒಳ್ಳೊಳ್ಳೆಯ ವಿಚಾರಗಳನ್ನು ತಿಳಿಸುತ್ತಾರೆ ಆದರೆ ಮಕ್ಕಳಿಗೆ ಮರೆತು ಹೋಗುತ್ತದೆ. ಆದ್ದರಿಂದಲೇ ತಂದೆಯು ತಿಳಿಸುತ್ತಾರೆ ಜ್ಞಾನ ಬಿಂದುಗಳನ್ನು ಬರೆದಿಟ್ಟುಕೊಳ್ಳಿ, ವಿಷಯಗಳನ್ನು ಬರೆಯುತ್ತಾ ಇರಿ. ವೈದ್ಯರೂ ಸಹ ಪುಸ್ತಕಗಳನ್ನು ಓದುತ್ತಾರೆ. ನೀವು ಮಾ||ಆತ್ಮಿಕ ವೈದ್ಯರಾಗಿದ್ದೀರಿ. ಆತ್ಮಕ್ಕೆ ಹೇಗೆ ಇಂಜೆಕ್ಷನ್ ಹಾಕಬೇಕೆಂದು ತಂದೆಯು ನಿಮಗೆ ಕಲಿಸುತ್ತಾರೆ. ಇದು ಜ್ಞಾನದ ಇಂಜೆಕ್ಷನ್ ಆಗಿದೆ. ಇದರಲ್ಲಿ ಸ್ಥೂಲವಾದ ಸೂಜಿ ಇತ್ಯಾದಿಗಳಂತೂ ಇಲ್ಲ. ತಂದೆಯು ಅವಿನಾಶಿ ತಜ್ಞರಾಗಿದ್ದಾರೆ, ಬಂದು ಆತ್ಮಗಳಿಗೆ ಓದಿಸುತ್ತಾರೆ, ಆತ್ಮಗಳೇ ಅಪವಿತ್ರರಾಗಿದ್ದಾರೆ. ತಂದೆಯೇ ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ ಅಂದಮೇಲೆ ಅವರನ್ನೇ ನೆನಪು ಮಾಡಲು ಸಾಧ್ಯವಿಲ್ಲವೇ! ಮಾಯೆಯ ಪೈಪೊಟಿಯು ಬಹಳಷ್ಟಿದೆ ಆದ್ದರಿಂದ ಮಕ್ಕಳೇ, ಚಾರ್ಟ್ ಇಡಿ ಮತ್ತು ಸರ್ವೀಸಿನ ಚಿಂತನೆ ಮಾಡಿ ಆಗ ಬಹಳ ಖುಷಿಯಿರುವುದು. ಎಷ್ಟೇ ಚೆನ್ನಾಗಿ ತಿಳಿಸಬಹುದು ಆದರೆ ಯೋಗವಿಲ್ಲ. ತಂದೆಯ ಜೊತೆ ಸತ್ಯವಂತರಾಗುವುದೂ ಸಹ ಬಹಳ ಪರಿಶ್ರಮವಿದೆ. ಒಂದುವೇಳೆ ನಾವು ಬಹಳ ತೀಕ್ಷ್ಣವಾಗಿದ್ದೇವೆ ಎಂದು ತಿಳಿದುಕೊಳ್ಳುವುದಾದರೆ ತಂದೆಯನ್ನು ನೆನಪು ಮಾಡಿ ಚಾರ್ಟ್ ಬರೆಯಿರಿ ಆಗ ಎಷು ಸತ್ಯವಂತರಾಗಿದ್ದೀರಿ ಎಂಬುದು ತಿಳಿಯುತ್ತದೆ. ಒಳ್ಳೆಯದು - ಮಕ್ಕಳಿಗೆ ತಿಳಿಸಿದೆವು - ಅವಿನಾಶಿ ಜ್ಞಾನ ರತ್ನಗಳ ವ್ಯಾಪಾರಿಗಳಾಗಬೇಕಾಗಿದೆ. ಒಳ್ಳೆಯದು.

ಮಧುರಾತಿಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಗುರಿ-ಧ್ಯೇಯವನ್ನು ಸನ್ಮುಖದಲ್ಲಿಟ್ಟುಕೊಂಡು ನಶೆಯಲ್ಲಿರಬೇಕಾಗಿದೆ. ಮಾ||ಆತ್ಮಿಕ ತಜ್ಞರಾಗಿ ಎಲ್ಲರಿಗೆ ಜ್ಞಾನದ ಇಂಜೆಕ್ಷನ್ನ್ನು ಕೊಡಬೇಕಾಗಿದೆ. ಸರ್ವೀಸಿನ ಜೊತೆ ಜೊತೆಗೆ ನೆನಪಿನ ಚಾರ್ಟನ್ನು ಇಡಿ ಆಗ ಖುಷಿಯಿರುವುದು.

2. ಮಾತನಾಡುವ ಶೈಲಿಯು ಚೆನ್ನಾಗಿರಬೇಕಾಗಿದೆ, ತಾವು ಎಂದು ಮಾತನಾಡಬೇಕಾಗಿದೆ. ಪ್ರತಿಯೊಂದು ಕಾರ್ಯವನ್ನು ವಿಶಾಲ ಬುದ್ಧಿಯವರಾಗಿ ಮಾಡಬೇಕಾಗಿದೆ.

ವರದಾನ:
ಸ್ವ-ಕಲ್ಯಾಣದ ಪ್ರತ್ಯಕ್ಷ ಪ್ರಮಾಣದ ಮುಖಾಂತರ ವಿಶ್ವ ಕಲ್ಯಾಣದ ಸೇವೆಯಲ್ಲಿ ಸದಾ ಸಫಲತಾ ಮೂರ್ತಿ ಭವ.

ಹೇಗೆ ಇತ್ತೀಚಿನ ದಿನಗಳಲ್ಲಿ ಶಾರೀರಿಕ ರೋಗ ಹೃದಯಾಘಾತ ಹೆಚ್ಚಾಗಿ ಆಗುತ್ತಿದೆ, ಹಾಗೆಯೇ ಆಧ್ಯಾತ್ಮಿಕ ಉನ್ನತಿಯಲ್ಲಿ ಮಾನಸಿಕ ಖಿನ್ನತೆಯ ರೋಗ ಹೆಚ್ಚಾಗಿದೆ. ಈ ರೀತಿ ಮಾನಸಿಕ ಖಿನ್ನತೆಗೊಳಗಾದ ಆತ್ಮಗಳಲ್ಲಿ ಪ್ರಾಕ್ಟಿಕಲ್ ಪರಿವರ್ತನೆಯನ್ನು ನೋಡಿದಾಗ ಮಾತ್ರ ಸಾಹಸ ಅಥವಾ ಶಕ್ತಿ ಬರಲು ಸಾಧ್ಯ. ಬಹಳಷ್ಟು ಕೇಳಿದ್ದಾರೆ ಆದರೆ ಈಗ ನೋಡಲು ಇಚ್ಛೆ ಪಡುತ್ತಾರೆ. ಪ್ರಮಾಣದ ಮುಖಾಂತರ ಪರಿವರ್ತನೆ ಇಷ್ಟ ಪಡುತ್ತಾರೆ. ಆದ್ದರಿಂದ ವಿಶ್ವ ಕಲ್ಯಾಣಕ್ಕಾಗಿ ಸ್ವ-ಕಲ್ಯಾಣವನ್ನು ಮೊದಲು ಸ್ಯಾಂಪಲ್ ರೂಪದಲ್ಲಿ ತೋರಿಸಿ. ವಿಶ್ವ ಕಲ್ಯಾಣದ ಸೇವೆಯಲ್ಲಿ ಸಫಲತಾ ಮೂರ್ತಿಗಳಾಗಲು ಪ್ರತ್ಯಕ್ಷ ಪ್ರಮಾಣವೇ ಸಾಧನವಾಗಿದೆ, ಇದರಿಂದಲೇ ತಂದೆಯ ಪ್ರತ್ಯಕ್ಷತೆಯಾಗುವುದು. ಏನು ಹೇಳುವಿರಿ ಅದನ್ನು ನಿಮ್ಮ ಸ್ವರೂಪದಿಂದ ಕಾರ್ಯ ರೂಪದಲ್ಲಿ ಕಂಡು ಬಂದಾಗ ಒಪ್ಪುತ್ತಾರೆ.

ಸ್ಲೋಗನ್:
ಬೇರೆಯವರ ವಿಚಾರವನ್ನು ತಮ್ಮ ವಿಚಾರದೊಂದಿಗೆ ಸೇರಿಸುವುದು ಇದೇ ಅವರಿಗೆ ಗೌರವ ಕೊಡುವುದಾಗಿದೆ.