01.09.20         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ತಂದೆಯು ನಿಮಗೆ ಕರ್ಮ-ಅಕರ್ಮ-ವಿಕರ್ಮದ ಗುಹ್ಯಗತಿಯನ್ನು ತಿಳಿಸಲು ಬಂದಿದ್ದಾರೆ, ಯಾವಾಗ ಆತ್ಮ ಮತ್ತು ಶರೀರವೆರಡೂ ಪವಿತ್ರವಾಗಿರುವುದೋ ಆಗ ಕರ್ಮವು ಅಕರ್ಮವಾಗುತ್ತದೆ, ಪತಿತರಾದಾಗ ವಿಕರ್ಮಗಳಾಗುತ್ತವೆ".

ಪ್ರಶ್ನೆ:
ಆತ್ಮದಲ್ಲಿ ತುಕ್ಕು ಏರಲು ಕಾರಣವೇನು? ತುಕ್ಕು ಏರಿದೆಯೆಂಬುದಕ್ಕೆ ಚಿಹ್ನೆಗಳೇನು?

ಉತ್ತರ:
ತುಕ್ಕು ಏರಲು ಕಾರಣ ವಿಕಾರವಾಗಿದೆ, ಪತಿತರಾಗುವುದರಿಂದಲೇ ತುಕ್ಕು ಹಿಡಿಯುತ್ತದೆ. ಒಂದುವೇಳೆ ಇಲ್ಲಿಯವರೆಗೆ ತುಕ್ಕು ಹಿಡಿದಿದೆಯೆಂದರೆ ಅಂತಹವರಿಗೆ ಹಳೆಯ ಪ್ರಪಂಚದ ಆಕರ್ಷಣೆಯಾಗುತ್ತಿರುವುದು. ಬುದ್ಧಿಯು ವಿಕಾರದ ಕಡೆಯೇ ಹೋಗುತ್ತಿರುವುದು, ನೆನಪಿನಲ್ಲಿರಲು ಆಗುವುದಿಲ್ಲ.

ಓಂ ಶಾಂತಿ.
ಮಕ್ಕಳು ಇದರ ಅರ್ಥವನ್ನಂತೂ ತಿಳಿದುಕೊಂಡಿದ್ದೀರಿ. ಓಂ ಶಾಂತಿ ಎಂದು ಹೇಳಿದೊಡನೆಯೇ ಈ ನಿಶ್ಚಯವಾಗಿ ಬಿಡುತ್ತದೆ - ನಾವಾತ್ಮಗಳು ಇಲ್ಲಿನ ನಿವಾಸಿಗಳಲ್ಲ. ನಾವು ಶಾಂತಿಧಾಮದ ನಿವಾಸಿಗಳಾಗಿದ್ದೇವೆ, ನಮ್ಮ ಸ್ವಧರ್ಮವು ಶಾಂತಿಯಾಗಿದೆ. ಮನೆಯಲ್ಲಿರುತ್ತೇವೆ ನಂತರ ಇಲ್ಲಿಗೆ ಬಂದು ಪಾತ್ರವನ್ನಭಿನಯಿಸುತ್ತೇವೆ, ಏಕೆಂದರೆ ಶರೀರದ ಜೊತೆ ಕರ್ಮ ಮಾಡಬೇಕಾಗುತ್ತದೆ. ಕರ್ಮವು ಒಂದು ಒಳ್ಳೆಯದು, ಇನ್ನೊಂದು ಕೆಟ್ಟದ್ದಾಗಿರುತ್ತದೆ. ರಾವಣ ರಾಜ್ಯದಲ್ಲಿ ಕೆಟ್ಟ ಕರ್ಮವೇ ಆಗುತ್ತದೆ. ರಾವಣ ರಾಜ್ಯದಲ್ಲಿ ಎಲ್ಲರ ಕರ್ಮಗಳು ವಿಕರ್ಮಗಳಾಗಿ ಬಿಟ್ಟಿವೆ. ವಿಕರ್ಮವಾಗದಂತಹ ಮನುಷ್ಯರು ಯಾರೊಬ್ಬರೂ ಇಲ್ಲ. ಸಾಧು-ಸನ್ಯಾಸಿ ಮೊದಲಾದವರಿಂದ ವಿಕರ್ಮಗಳಾಗುವುದಿಲ್ಲ, ಏಕೆಂದರೆ ಅವರು ಪವಿತ್ರರಾಗಿರುತ್ತಾರೆ, ಸನ್ಯಾಸ ಮಾಡಿದ್ದಾರೆಂದು ಮನುಷ್ಯರು ತಿಳಿದುಕೊಳ್ಳುತ್ತಾರೆ. ವಾಸ್ತವದಲ್ಲಿ ಯಾರಿಗೆ ಪವಿತ್ರರೆಂದು ಹೇಳಲಾಗುತ್ತದೆ ಎಂಬುದನ್ನು ತಿಳಿದುಕೊಂಡಿಲ್ಲ. ನಾವು ಪತಿತರೆಂದು ಹೇಳುತ್ತಾರೆ, ಪತಿತ-ಪಾವನ ತಂದೆಯನ್ನು ಕರೆಯುತ್ತಾರೆ. ಎಲ್ಲಿಯವರೆಗೆ ಅವರು ಬರುವುದಿಲ್ಲವೋ ಅಲ್ಲಿಯವರೆಗೆ ಪ್ರಪಂಚವು ಪಾವನವಾಗಲು ಸಾಧ್ಯವಿಲ್ಲ. ಇಲ್ಲಿ ಇದು ಪತಿತ, ಹಳೆಯ ಪ್ರಪಂಚವಾಗಿದೆ ಆದ್ದರಿಂದ ಪಾವನ ಪ್ರಪಂಚವನ್ನು ನೆನಪು ಮಾಡುತ್ತಾರೆ. ಪಾವನ ಪ್ರಪಂಚದಲ್ಲಿ ಹೋದ ಮೇಲೆ ಪತಿತ ಪ್ರಪಂಚವನ್ನು ನೆನಪು ಮಾಡುವುದಿಲ್ಲ. ಆ ಪ್ರಪಂಚವೇ ಬೇರೆಯಾಗಿದೆ, ಪ್ರತಿಯೊಂದು ವಸ್ತು ಹೊಸದರಿಂದ ಹಳೆಯದಾಗುತ್ತದೆಯಲ್ಲವೆ. ಹೊಸ ಪ್ರಪಂಚದಲ್ಲಿ ಒಬ್ಬರೂ ಪತಿತರಿರಲು ಸಾಧ್ಯವಿಲ್ಲ. ಹೊಸ ಪ್ರಪಂಚದ ರಚಯಿತನು ಪರಮಪಿತ ಪರಮಾತ್ಮನಾಗಿದ್ದಾರೆ, ಅವರೇ ಪತಿತ-ಪಾವನನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಅವರ ರಚನೆಯೂ ಪಾವನವಾಗಿರಬೇಕಲ್ಲವೆ. ಪತಿತರಿಂದ ಪಾವನ, ಪಾವನರಿಂದ ಪತಿತ - ಈ ಮಾತುಗಳು ಪ್ರಪಂಚದಲ್ಲಿ ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳಲು ಸಾಧ್ಯವಿಲ್ಲ. ಕಲ್ಪ-ಕಲ್ಪವೂ ತಂದೆಯೇ ಬಂದು ತಿಳಿಸುತ್ತಾರೆ. ನೀವು ಮಕ್ಕಳಲ್ಲಿಯೂ ಕೆಲವರು ನಿಶ್ಚಯ ಬುದ್ಧಿಯವರಾಗಿದ್ದು ಮತ್ತೆ ಸಂಶಯ ಬುದ್ಧಿಯವರಾಗಿ ಬಿಡುತ್ತಾರೆ. ಮಾಯೆಯು ಒಮ್ಮೆಲೆ ನುಂಗಿ ಬಿಡುತ್ತದೆ. ನೀವು ಮಹಾರಥಿಗಳಲ್ಲವೆ, ಮಹಾರಥಿಗಳನ್ನು ಭಾಷಣ ಮಾಡಲು ಕರೆಸುತ್ತಾರೆ. ನೀವು ಮಹಾರಾಜರಿಗೂ ಸಹ ತಿಳಿಸಬೇಕಾಗಿದೆ. ನೀವೇ ಮೊದಲು ಪಾವನ, ಪೂಜ್ಯರಾಗಿದ್ದಿರಿ, ಈಗಂತೂ ಇದು ಪತಿತ ಪ್ರಪಂಚವಾಗಿದೆ, ಪಾವನ ಪ್ರಪಂಚದಲ್ಲಿ ಭಾರತವಾಸಿಗಳೇ ಇದ್ದಿರಿ, ನೀವು ಭಾರತವಾಸಿಗಳು ಆದಿ ಸನಾತನ ದೇವಿ-ದೇವತಾ ಧರ್ಮದ ಡಬಲ್ ಕಿರೀಟಧಾರಿ, ಸಂಪೂರ್ಣ ನಿರ್ವಿಕಾರಿಗಳಾಗಿದ್ದಿರಿ. ಮಹಾರಥಿಗಳು ಹೀಗೆ ತಿಳಿಸಬೇಕಲ್ಲವೆ, ನಶೆಯಿಂದ ತಿಳಿಸಬೇಕಾಗಿದೆ. ಭಗವಾನುವಾಚ - ಕಾಮಚಿತೆಯ ಮೇಲೆ ಕುಳಿತು ಕಪ್ಪಾಗಿ ಬಿಡುತ್ತೀರಿ ಮತ್ತೆ ಜ್ಞಾನ ಚಿತೆಯ ಮೇಲೆ ಕುಳಿತುಕೊಳ್ಳುವುದರಿಂದ ಸುಂದರರಾಗುತ್ತೀರಿ. ಈಗ ಯಾರೆಲ್ಲರೂ ತಿಳಿಸುತ್ತೀರೋ ಅವರು ಕಾಮ ಚಿತೆಯ ಮೇಲೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಆದರೆ ಇಂತಹವರೂ ಇದ್ದಾರೆ, ಅನ್ಯರಿಗೆ ತಿಳಿಸುತ್ತಾ-ತಿಳಿಸುತ್ತಾ ಕಾಮ ಚಿತೆಯ ಮೇಲೆ ಕುಳಿತು ಬಿಡುತ್ತಾರೆ. ಇಂದು ತಿಳಿಸುತ್ತಿದ್ದವರು ನಾಳೆ ವಿಕಾರದಲ್ಲಿ ಬೀಳುತ್ತಾರೆ. ಮಾಯೆಯು ಬಹಳ ಪ್ರಬಲವಾಗಿದೆ, ಮಾತೇ ಕೇಳಬೇಡಿ. ಅನ್ಯರಿಗೆ ತಿಳಿಸುವವರು ತಾವೇ ಕಾಮ ಚಿತೆಯ ಮೇಲೆ ಕುಳಿತು ಬಿಡುತ್ತಾರೆ. ಇದೇನಾಯಿತೆಂದು ಮತ್ತೆ ಪಶ್ಚಾತ್ತಾಪ ಪಡುತ್ತಾರೆ. ಇದು ಮಲ್ಲ ಯುದ್ಧವಲ್ಲವೆ. ಸ್ತ್ರೀಯನ್ನು ನೋಡಿದೊಡನೆಯೇ ಆಕರ್ಷಿತರಾಗಿ ಮುಖ ಕಪ್ಪು (ಪತಿತ) ಮಾಡಿಕೊಳ್ಳುತ್ತಾರೆ. ಮಾಯೆಯು ಬಹಳ ಪ್ರಬಲವಾಗಿದೆ, ಪ್ರತಿಜ್ಞೆ ಮಾಡಿ ಮತ್ತೆ ಕೆಳಗೆ ಬೀಳುತ್ತಾರೆಂದರೆ ಒಂದಕ್ಕೆ ನೂರು ಪಟ್ಟು ಶಿಕ್ಷೆಯನ್ನನುಭವಿಸಬೇಕಾಗುತ್ತದೆ. ಅಂತಹವರು ಶೂದ್ರರ ಸಮಾನ ಪತಿತರಾಗಿ ಬಿಟ್ಟರು. ಆದ್ದರಿಂದಲೇ ಗಾಯನವೂ ಇದೆ - ಅಮೃತವನ್ನು ಕುಡಿದು ಹೊರಗಡೆ ಹೋಗಿ ಮತ್ತೆ ಅನ್ಯರನ್ನೂ ಸತಾಯಿಸುತ್ತಿದ್ದರು, ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದರೆಂದು. ಎರಡು ಕೈಯಿಂದಲೇ ಚಪ್ಪಾಳೆಯಾಗುತ್ತದೆಯಲ್ಲವೆ. ಒಂದು ಕೈಯಿಂದ ಆಗುವುದಿಲ್ಲ ಅಂದಾಗ ಇಬ್ಬರೂ ಪತಿತರಾಗಿ ಬಿಡುತ್ತಾರೆ ನಂತರ ಕೆಲವರು ಸತ್ಯ ಸಮಾಚಾರವನ್ನು ತಿಳಿಸುತ್ತಾರೆ, ಇನ್ನೂ ಕೆಲವರು ನಾಚಿಕೆಯಾಗಿ ಸಮಾಚಾರವನ್ನೇ ತಿಳಿಸುವುದಿಲ್ಲ, ಏಕೆಂದರೆ ಬ್ರಾಹ್ಮಣ ಕುಲದಲ್ಲಿ ನಮ್ಮ ಹೆಸರು ಹಾಳಾಗದಿರಲಿ ಎಂದು ಯೋಚಿಸುತ್ತಾರೆ. ಯುದ್ಧದಲ್ಲಿ ಯಾರಾದರೂ ಸೋತರೆ ಆಹಾಕಾರವಾಗಿ ಬಿಡುತ್ತದೆ. ಅರೆ! ಇಷ್ಟು ಶಕ್ತಿಶಾಲಿಯನ್ನು ಬೀಳಿಸಿ ಬಿಟ್ಟರೆಂದು ಹೇಳುತ್ತಾರೆ. ಇಂತಹ ಬಹಳಷ್ಟು ಅಪಘಾತಗಳಾಗುತ್ತವೆ, ಮಾಯೆಯು ಬಹಳ ದೊಡ್ಡ ಪೆಟ್ಟು ಕೊಡುತ್ತದೆ. ಬಹಳ ದೊಡ್ಡ ಗುರಿಯಲ್ಲವೆ!

ಈಗ ನೀವು ಮಕ್ಕಳು ತಿಳಿಸುತ್ತೀರಿ - ಯಾರು ಸತೋಪ್ರಧಾನ, ಸುಂದರರಾಗಿದ್ದರು ಅವರೇ ಕಾಮ ಚಿತೆಯ ಮೇಲೆ ಕುಳಿತುಕೊಂಡಿದ್ದರಿಂದ ತಮೋಪ್ರಧಾನ, ಕಪ್ಪಾಗಿದ್ದಾರೆ, ರಾಮನನ್ನೂ ಕಪ್ಪಾಗಿ ತೋರಿಸುತ್ತಾರೆ. ಅನೇಕರ ಚಿತ್ರಗಳನ್ನೂ ಕಪ್ಪಾಗಿ ತೋರಿಸುತ್ತಾರೆ. ಆದರೆ ಮುಖ್ಯವಾದವರ ಮಾತನ್ನು ತಿಳಿಸಲಾಗುತ್ತದೆ. ಇಲ್ಲಿಯೂ ರಾಮ ಚಂದ್ರನ ಚಿತ್ರಗಳನ್ನು ಕಪ್ಪಾಗಿ ತೋರಿಸಿದ್ದಾರೆ. ಆದ್ದರಿಂದ ಅವರೊಂದಿಗೆ ಪ್ರಶ್ನೆ ಮಾಡಿ - ಏಕೆ ಕಪ್ಪಾಗಿ ಮಾಡಿದ್ದೀರಿ? ಅದಕ್ಕೆ ಅವರು ಇದು ಈಶ್ವರನ ಲೀಲೆಯಾಗಿದೆ, ಇದು ನಡೆದು ಬಂದಿದೆಯೆಂದು ಹೇಳಿ ಬಿಡುತ್ತಾರೆ. ಏಕೆ ಆಗುತ್ತದೆ? ಏನಾಗುತ್ತದೆ ಎಂಬುದೇನನ್ನೂ ತಿಳಿದುಕೊಂಡಿಲ್ಲ. ಈಗ ತಂದೆಯು ನಿಮಗೆ ತಿಳಿಸುತ್ತಾರೆ ಕಾಮ ಚಿತೆಯ ಮೇಲೆ ಕುಳಿತುಕೊಳ್ಳುವುದರಿಂದ ಪತಿತ-ದುಃಖಿ, ಕನಿಷ್ಟರಾಗಿ ಬಿಡುತ್ತೀರಿ. ಇದು ವಿಕಾರೀ ಪ್ರಪಂಚ, ಅದು ನಿರ್ವಿಕಾರಿ ಪ್ರಪಂಚವಾಗಿದೆ ಅಂದಾಗ ಈ ರೀತಿಯಾಗಿ ತಿಳಿಸಿಕೊಡಬೇಕು. ಇವರು ಸೂರ್ಯವಂಶಿಯರು, ಇವರು ಚಂದ್ರವಂಶಿಯರು ಮತ್ತೆ ವೈಶ್ಯ ವಂಶಿಯರಾಗಲೇಬೇಕಾಗಿದೆ. ವಾಮ ಮಾರ್ಗದಲ್ಲಿ ಬರುವ ಕಾರಣ ಮತ್ತೆ ಅವರು ದೇವತೆಗಳೆಂದು ಕರೆಸಿಕೊಳ್ಳುವುದಿಲ್ಲ. ಜಗನ್ನಾಥನ ಮಂದಿರದಲ್ಲಿ ಮೇಲೆ ದೇವತಾ ಕುಲವನ್ನು ತೋರಿಸುತ್ತಾರೆ. ವೇಷಭೂಷಣಗಳು ದೇವತೆಗಳದಾಗಿದೆ ಆದರೆ ಚಟುವಟಿಕೆಯನ್ನು ಬಹಳ ಕೊಳಕಾಗಿ ತೋರಿಸುತ್ತಾರೆ. ತಂದೆಯು ಯಾವ ಮಾತುಗಳ ಮೇಲೆ ಗಮನ ಸೆಳೆಯುತ್ತಾರೆಯೋ ಅದರ ಮೇಲೆ ಗಮನವಿಡಬೇಕು. ಮಂದಿರಗಳಲ್ಲಿ ಬಹಳಷ್ಟು ಸೇವೆಯಾಗುತ್ತದೆ, ಶ್ರೀನಾಥ ದ್ವಾರದಲ್ಲಿಯೂ ನೀವು ತಿಳಿಸಬಹುದು. ನೀವು ಪ್ರಶ್ನೆ ಮಾಡಿ - ಇವರನ್ನು ಏಕೆ ಕಪ್ಪಾಗಿ ಮಾಡಿದ್ದಾರೆ? ಇದನ್ನು ತಿಳಿಸುವುದು ಬಹಳ ಸುಲಭವಾಗಿದೆ. ಅದು ಸತ್ಯಯುಗ, ಇದು ಕಲಿಯುಗವಾಗಿದೆ. ತುಕ್ಕು ಹಿಡಿಯುತ್ತದೆಯಲ್ಲವೆ. ಈಗ ನಿಮ್ಮ ತುಕ್ಕು ಕಳೆಯುತ್ತಿದೆ, ಯಾರು ನೆನಪೇ ಮಾಡುವುದಿಲ್ಲವೋ ಅವರಲ್ಲಿ ತುಕ್ಕು ಕಳೆಯುವುದಿಲ್ಲ. ಬಹಳ ತುಕ್ಕು ಹಿಡಿದಿದ್ದರೆ ಅಂತಹವರಿಗೆ ಹಳೆಯ ಪ್ರಪಂಚದ ಆಕರ್ಷಣೆಯಾಗುತ್ತಿರುತ್ತದೆ. ಎಲ್ಲದಕ್ಕಿಂತ ದೊಡ್ಡದಾದ ತುಕ್ಕು ವಿಕಾರಗಳಿಂದಲೇ ಹಿಡಿಯುತ್ತದೆ, ಅದರಿಂದಲೇ ಪತಿತರಾಗಿದ್ದೀರಿ. ಅಂದಾಗ ತಮ್ಮ ಪರಿಶೀಲನೆ ಮಾಡಿಕೊಳ್ಳಿ, ನನ್ನ ಬುದ್ಧಿಯು ವಿಕಾರದ ಕಡೆ ಹೋಗುತ್ತಿಲ್ಲವೆ? ಅದರಲ್ಲಿ ಒಳ್ಳೊಳ್ಳೆಯ ಮಕ್ಕಳೂ ಸಹ ಅನುತ್ತೀರ್ಣರಾಗಿ ಬಿಡುತ್ತಾರೆ. ಈಗ ನೀವು ಮಕ್ಕಳಿಗೆ ಈ ತಿಳುವಳಿಕೆ ಸಿಕ್ಕಿದೆ. ಮುಖ್ಯ ಮಾತೇ ಪವಿತ್ರತೆಯದಾಗಿದೆ. ಆದಿಯಿಂದ ಹಿಡಿದು ಇದಕ್ಕಾಗಿಯೇ ಜಗಳಗಳು ನಡೆಯುತ್ತಾ ಬಂದಿದೆ. ತಂದೆಯೇ ಈ ಯುಕ್ತಿಯನ್ನು ರಚಿಸಿದರು - ನಾವು ಜ್ಞಾನಾಮೃತವನ್ನು ಕುಡಿಯಲು ಹೋಗುತ್ತಿದ್ದೇವೆಂದು ಎಲ್ಲರೂ ಹೇಳುತ್ತಿದ್ದರು. ಜ್ಞಾನಾಮೃತವು ಜ್ಞಾನ ಸಾಗರ ತಂದೆಯ ಬಳಿಯಿರುವುದು. ಶಾಸ್ತ್ರಗಳನ್ನು ಓದುವುದರಿಂದ ಯಾರೂ ಪತಿತರಿಂದ ಪಾವನರಾಗಲು ಸಾಧ್ಯವಿಲ್ಲ. ಪಾವನರಾಗಿ ಮತ್ತೆ ಪಾವನ ಪ್ರಪಂಚದಲ್ಲಿ ಹೋಗಬೇಕಾಗಿದೆ. ಇಲ್ಲಿ ಪಾವನರಾಗಿ ಮತ್ತೆಲ್ಲಿಗೆ ಹೋಗುತ್ತೀರಿ? ಇಂತಹವರು ಮೋಕ್ಷವನ್ನು ಪಡೆದರೆಂದು ಮನುಷ್ಯರು ತಿಳಿಯುತ್ತಾರೆ. ಆದರೆ ಒಂದುವೇಳೆ ಮೋಕ್ಷವು ಪಡೆದರೆ ಮತ್ತೆ ಅವರಿಗೆ ಕ್ರಿಯಾ ಕರ್ಮಗಳನ್ನೂ ಮಾಡುವ ಅವಶ್ಯಕತೆಯಿಲ್ಲವೆಂದು ಅವರಿಗೇನು ಗೊತ್ತು? ಇಲ್ಲಿ ಆತ್ಮವು ಅಂಧಕಾರದಲ್ಲಿ ಅಲೆಯದಿರಲಿ, ಕಷ್ಟವಾಗಬಾರದೆಂದು ಶವದ ಪಕ್ಕದಲ್ಲಿ ಜ್ಯೋತಿಯನ್ನಿಡುತ್ತಾರೆ. ಆತ್ಮವು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಒಂದು ಸೆಕೆಂಡಿನ ಮಾತಾಗಿದೆ. ಮತ್ತೆ ಅಂಧಕಾರವು ಎಲ್ಲಿಂದ ಬಂದಿತು? ಈ ಪದ್ಧತಿಯು ನಡೆದು ಬರುತ್ತದೆ. ನೀವು ಮಾಡುತ್ತಿದ್ದಿರಿ, ಈಗ ಏನನ್ನು ಮಾಡುವುದಿಲ್ಲ! ನೀವು ತಿಳಿದುಕೊಂಡಿದ್ದೀರಿ - ಶರೀರವಂತೂ ಮಣ್ಣು ಪಾಲಾಯಿತು, ಸತ್ಯಯುಗದಲ್ಲಿ ಇಂತಹ ರೀತಿ-ಪದ್ಧತಿಗಳಿರುವುದಿಲ್ಲ. ಇತ್ತೀಚೆಗೆ ರಿದ್ಧಿ-ಸಿದ್ಧಿಯ ಮಾತುಗಳಲ್ಲಿ ಏನೂ ಇಲ್ಲ. ತಿಳಿದುಕೊಳ್ಳಿ - ಯಾರಿಗಾದರೂ ರೆಕ್ಕೆಗಳು ಬಂದು ಬಿಡುತ್ತವೆ, ಹಾರ ತೊಡಗುತ್ತಾರೆಂದರೆ ಮತ್ತೇನು? ಅದರಿಂದ ಲಾಭವೇನೂ ಸಿಗುವುದಿಲ್ಲ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ. ಇದು ಯೋಗಾಗ್ನಿಯಾಗಿದೆ, ಇದರಿಂದ ಪತಿತರಿಂದ ಪಾವನರಾಗುತ್ತೀರಿ. ಜ್ಞಾನದಿಂದ ಧನವು ಸಿಗುತ್ತದೆ. ಯೋಗದಿಂದ ಪವಿತ್ರ ಆರೋಗ್ಯವಂತರಾಗುತ್ತೀರಿ, ಯೋಗಿಗಳ ಆಯಸ್ಸು ಯಾವಾಗಲೂ ಧೀರ್ಘವಾಗಿರುತ್ತದೆ, ಭೋಗಿಗಳದು ಕಡಿಮೆ. ಕೃಷ್ಣನಿಗೆ ಯೋಗೇಶ್ವರನೆಂದು ಹೇಳುತ್ತಾರೆ, ಈಶ್ವರನ ನೆನಪಿನಿಂದಲೇ ಕೃಷ್ಣನಾಗಿದ್ದಾನೆ. ಕೃಷ್ಣನಿಗೆ ಸ್ವರ್ಗದಲ್ಲಿ ಯೋಗೇಶ್ವರನೆಂದು ಹೇಳುವುದಿಲ್ಲ, ರಾಜ ಕುಮಾರನಾಗಿದ್ದಾನೆ. ಹಿಂದಿನ ಜನ್ಮದಲ್ಲಿ ಇಂತಹ ಶ್ರೇಷ್ಠ ಕರ್ಮವನ್ನು ಮಾಡಿದರಿಂದಲೇ ಈ ರೀತಿಯಾಗಿದ್ದಾನೆ. ತಂದೆಯು ಕರ್ಮ-ಅಕರ್ಮ-ವಿಕರ್ಮದ ರಹಸ್ಯವನ್ನು ತಿಳಿಸಿದ್ದಾರೆ. ಅರ್ಧ ಕಲ್ಪ ರಾಮ ರಾಜ್ಯ, ಅರ್ಧ ಕಲ್ಪ ರಾವಣ ರಾಜ್ಯವಿರುವುದು. ವಿಕಾರದಲ್ಲಿ ಹೋಗುವುದು ಎಲ್ಲದಕ್ಕಿಂತ ದೊಡ್ಡ ಪಾಪವಾಗಿದೆ. ನೀವೆಲ್ಲರೂ ಸಹೋದರ-ಸಹೋದರಿಯರಲ್ಲವೆ. ಆತ್ಮಗಳೆಲ್ಲರೂ ಪರಸ್ಪರ ಸಹೋದರರಾಗಿದ್ದೀರಿ. ಭಗವಂತನ ಸಂತಾನರಾಗಿ ಮತ್ತೆ ವಿಕಾರಿ ದೃಷ್ಟಿಯನ್ನು ಹೇಗಿಡುತ್ತೀರಿ? ನಾವು ಬಿ.ಕೆ.ಗಳು ವಿಕಾರದಲ್ಲಿ ಹೋಗಲು ಸಾಧ್ಯವಿಲ್ಲ. ಈ ಯುಕ್ತಿಯಿಂದಲೇ ಪವಿತ್ರರಾಗಿರುತ್ತೀರಿ. ನಿಮಗೆ ತಿಳಿದಿದೆ, ಈಗ ರಾವಣ ರಾಜ್ಯವು ಸಮಾಪ್ತಿಯಾಗುತ್ತಿದೆ ಮತ್ತೆ ಪ್ರತಿಯೊಂದು ಆತ್ಮವು ಪವಿತ್ರವಾಗಿ ಬಿಡುತ್ತದೆ. ಅದಕ್ಕೆ ಮನೆ-ಮನೆಯಲ್ಲಿ ಪ್ರಕಾಶವೆಂದು ಹೇಳಲಾಗುತ್ತದೆ. ಈಗ ನಿಮ್ಮ ಜ್ಯೋತಿಯು ಜಾಗೃತವಾಗಿದೆ, ಜ್ಞಾನದ ಮೂರನೆಯ ನೇತ್ರವು ಸಿಕ್ಕಿದೆ. ಸತ್ಯಯುಗದಲ್ಲಿ ಎಲ್ಲರೂ ಪವಿತ್ರರಾಗಿರುತ್ತಾರೆ. ಇದನ್ನೂ ಸಹ ನೀವೀಗ ತಿಳಿದುಕೊಂಡಿದ್ದೀರಿ. ಅನ್ಯರಿಗೆ ತಿಳಿಸಲು ಮಕ್ಕಳಲ್ಲಿ ನಂಬರ್ವಾರ್ ಇರುತ್ತದೆ. ನಂಬರ್ವಾರ್ ನೆನಪಿನಲ್ಲಿರುತ್ತಾರೆ. ರಾಜಧಾನಿಯು ಹೇಗೆ ಸ್ಥಾಪನೆಯಾಗುತ್ತದೆಯೆಂಬುದು ಯಾರ ಬುದ್ಧಿಯಲ್ಲಿಯೂ ಇರುವುದಿಲ್ಲ. ನೀವು ಸೈನಿಕರಲ್ಲವೆ. ನಿಮಗೆ ತಿಳಿದಿದೆ - ನೆನಪಿನ ಬಲದಿಂದ ನಾವು ಪವಿತ್ರರಾಗಿ ರಾಜ-ರಾಣಿಯರಾಗುತ್ತಿದ್ದೇವೆ ಮತ್ತೆ ಇನ್ನೊಂದು ಜನ್ಮದಲ್ಲಿ ಬಾಯಲ್ಲಿ ಚಿನ್ನದ ಚಮಚವಿರುವುದು. ದೊಡ್ಡ ಪರೀಕ್ಷೆಯನ್ನು ತೇರ್ಗಡೆ ಮಾಡುವವರು ದೊಡ್ಡ ಪದವಿಯನ್ನೇ ಪಡೆಯುತ್ತಾರೆ, ಅಂತರವಾಗುತ್ತದೆಯಲ್ಲವೆ. ಎಷ್ಟು ವಿದ್ಯೆಯೋ ಅಷ್ಟು ಸುಖ. ಇಲ್ಲಂತೂ ಭಗವಂತನೇ ಓದಿಸುತ್ತಾರೆ, ಈ ನಶೆಯೇರಿರಬೇಕು. ಇಲ್ಲಿ ಬಹಳ ಶಕ್ತಿಯುತ ಪದಾರ್ಥವು ಸಿಗುತ್ತದೆ. ಭಗವಂತನಲ್ಲವೆ. ಭಗವಾನ್-ಭಗವತಿಯರನ್ನಾಗಿ ಯಾರು ಮಾಡುತ್ತಾರೆ? ನೀವೀಗ ಪತಿತರಿಂದ ಪಾವನರಾಗುತ್ತೀರಿ. ಮತ್ತೆ ಜನ್ಮ-ಜನ್ಮಾಂತರಕ್ಕಾಗಿ ಸುಖಿಯಾಗಿ ಬಿಡುತ್ತೀರಿ, ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಓದುತ್ತಾ-ಓದುತ್ತಾ ಮತ್ತೆ ಕೊಳಕಾಗಿ ಬಿಡುತ್ತಾರೆ, ದೇಹಾಭಿಮಾನದಲ್ಲಿ ಬರುವುದರಿಂದ ಜ್ಞಾನದ ನೇತ್ರವೇ ಮುಚ್ಚಿ ಹೋಗುತ್ತದೆ. ಮಾಯೆಯು ಬಹಳ ಶಕ್ತಿಶಾಲಿಯಾಗಿದೆ. ಸ್ವಯಂ ತಂದೆಯೇ ಹೇಳುತ್ತಾರೆ - ಇದು ಪರಿಶ್ರಮವಿದೆ, ನಾನು ಬ್ರಹ್ಮಾರವರಲ್ಲಿ ಬಂದು ಎಷ್ಟೊಂದು ಪರಿಶ್ರಮ ಪಡುತ್ತೇನೆ ಆದರೆ ತಿಳಿದುಕೊಂಡರೂ ಸಹ ಮತ್ತೆ ಈ ರೀತಿಯಾಗಲು ಸಾಧ್ಯವೇ? ಶಿವ ತಂದೆಯು ಬಂದು ಓದಿಸುತ್ತಾರೆ ಎಂಬುದನ್ನು ನಾವು ನಂಬುವುದಿಲ್ಲ. ಇದು ಚಾಲಾಕಿಯಾಗಿದೆ ಎಂದೂ ಹೇಳಿ ಬಿಡುತ್ತಾರೆ. ರಾಜಧಾನಿಯಂತೂ ಸ್ಥಾಪನೆಯಾಗಿಯೇ ಆಗುವುದು. ಹೇಳುತ್ತಾರಲ್ಲವೆ, ಸತ್ಯದ ದೋಣಿಯು ಅಲುಗಾಡುತ್ತದೆಯೇ ಹೊರತು ಮುಳುಗುವುದಿಲ್ಲ. ಎಷ್ಟೊಂದು ವಿಘ್ನಗಳು ಬರುತ್ತವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಕಣ್ಮಣಿಗಳು, ಶ್ಯಾಮನಿಂದ ಸುಂದರರಾಗುವಂತಹ ಆತ್ಮಗಳ ಪ್ರತಿ ಮಾತಾಪಿತಾ ಬಾಪ್ದಾದಾರವರ ಹೃದಯಪೂರ್ವಕ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಯೋಗಾಗ್ನಿಯಿಂದ ವಿಕಾರಗಳ ತುಕ್ಕನ್ನು ಇಳಿಸಿಕೊಳ್ಳಬೇಕಾಗಿದೆ. ತಮ್ಮ ಪರಿಶೀಲನೆ ಮಾಡಿಕೊಳ್ಳಿ - ನನ್ನ ಬುದ್ಧಿಯು ವಿಕಾರದ ಕಡೆ ಹೋಗುತ್ತಿಲ್ಲವೆ?

2. ನಿಶ್ಚಯ ಬುದ್ಧಿಯವರಾದ ಮೇಲೆ ಮತ್ತೆಂದೂ ಯಾವುದೇ ಮಾತಿನಲ್ಲಿ ಸಂಶಯದಲ್ಲಿ ಬರಬಾರದು. ವಿಕರ್ಮಗಳಿಂದ ಪಾರಾಗಲು ಯಾವುದೇ ಕರ್ಮವನ್ನು ತನ್ನ ಸ್ವಧರ್ಮದಲ್ಲಿ ಸ್ಥಿತರಾಗಿ ತಂದೆಯ ನೆನಪನಲ್ಲಿ ಮಾಡಬೇಕಾಗಿದೆ.

ವರದಾನ:
ಸರ್ವ ಪ್ರಾಪ್ತಿಗಳ ಅನುಭವದ ಮುಖಾಂತರ ಶಕ್ತಿಶಾಲಿಯಾಗುವಂತಹ ಸದಾ ಸಫಲತಾ ಮೂರ್ತಿ ಭವ.

ಯಾರು ಸರ್ವ ಪ್ರಾಪ್ತಿಗಳ ಅನುಭವಿ ಮೂರ್ತಿಗಳಾಗಿದ್ದಾರೆ ಅವರೇ ಶಕ್ತಿಶಾಲಿಯಾಗಿದ್ದಾರೆ, ಈ ರೀತಿಯ ಶಕ್ತಿಶಾಲಿಗಳು ಸರ್ವ ಪ್ರಾಪ್ತಿಗಳ ಅನುಭವಿ ಆತ್ಮಗಳೇ ಸಫಲತಾ ಮೂರ್ತಿಗಳಾಗಲು ಸಾಧ್ಯ, ಏಕೆಂದರೆ ಈಗ ಎಲ್ಲಾ ಆತ್ಮರು ಸುಖ-ಶಾಂತಿಯ ಮಾಸ್ಟರ್ ದಾತ ಎಲ್ಲಿದ್ದಾರೆ ಎಂದು ಹುಡುಕುತ್ತಾರೆ. ಆದ್ದರಿಂದ ಯಾವಾಗ ನಿಮ್ಮ ಬಳಿ ಸರ್ವಶಕ್ತಿಗಳ ಸ್ಟಾಕ್ ಇರುತ್ತೆ ಆಗಲೇ ಎಲ್ಲರನ್ನೂ ಸಂತುಷ್ಟ ಮಾಡಲು ಸಾಧ್ಯ. ಹೇಗೆ ಇತ್ತೀಚಿನ ದಿನಗಳಲ್ಲಿ ಒಂದೆ ಸ್ಟೋರ್ನಲ್ಲಿ ಎಲ್ಲಾ ವಸ್ತುಗಳೂ ದೊರಕುತ್ತದೆ, ಅದೇ ರೀತಿ ನೀವುಗಳೂ ಸಹ ಆಗಬೇಕು. ಹೀಗಲ್ಲ ಸಹನ ಶಕ್ತಿ ಇದೆ ಎದುರಿಸುವ ಶಕ್ತಿ ಇಲ್ಲ. ಸರ್ವ ಶಕ್ತಿಗಳ ಸ್ಟಾಕ್ ಇರಬೇಕು, ಆಗ ಸಫಲತಾ ಮೂರ್ತಿಗಳಾಗಲು ಸಾಧ್ಯ.

ಸ್ಲೋಗನ್:
ಮರ್ಯಾದೆಗಳೇ ಬ್ರಾಹ್ಮಣ ಜೀವನದ ಹೆಜ್ಜೆಯಾಗಿದೆ, ಹೆಜ್ಜೆಯ ಮೇಲೆ ಹೆಜ್ಜೆ ಇಡುವುದು ಎಂದರೆ ಗುರಿಯ ಸಮೀಪ ತಲುಪುವುದು.


ಮಾತೇಶ್ವರೀಜಿಯವರ ಅಮೂಲ್ಯ ಮಹಾವಾಕ್ಯ

ಪುರುಷಾರ್ಥ ಮತ್ತು ಪ್ರಾಲಬ್ದದಿಂದ ಮಾಡಿರುವ ಅನಾದಿ ಡ್ರಾಮ

ಮಾತೇಶ್ವರಿ: ಪುರುಷಾರ್ಥ ಮತ್ತು ಪ್ರಾಲಬ್ಧ ಎರಡು ವಸ್ತುಗಳಾಗಿವೆ, ಪುರುಷಾರ್ಥದಿಂದ ಪ್ರಾಲಬ್ಧವಾಗುವುದು. ಇದು ಅನಾದಿ ಸೃಷ್ಟಿಯ ಚಕ್ರ ತಿರುಗುತ್ತಿರುತ್ತದೆ, ಯಾರು ಆದಿ ಸನಾತನ ಭಾರತವಾಸಿ ಪೂಜ್ಯರಿದ್ದರು, ಅವರೇ ನಂತರ ಪೂಜಾರಿಗಳಾದರು ಪುನಃ ಅದೇ ಪೂಜಾರಿಗಳು ಪುರುಷಾರ್ಥ ಮಾಡಿ ಪೂಜ್ಯರಾಗುತ್ತಾರೆ, ಇದು ಇಳಿಯುವುದು ಮತ್ತು ಏರುವುದು ಅನಾದಿ ಡ್ರಾಮದ ಆಟ ಮಾಡಲ್ಪಟ್ಟಿದೆ.

ಜಿಜ್ಞಾಸು: ಮಾತೇಶ್ವರೀ, ನನ್ನಲ್ಲೂ ಒಂದು ಪ್ರಶ್ನೆ ಬರುತ್ತೆ ಯಾವಾಗ ಈ ಡ್ರಾಮ ಹೀಗೆ ಮಾಡಲ್ಪಟ್ಟಿದೆ ಒಂದುವೇಳೆ ಮೇಲೆ ಏರಬೇಕಾದರೆ ತಾನಾಗೇ ಏರುವೆ ಎಂದಮೇಲೆ ಪುರುಷಾರ್ಥ ಮಾಡುವುದರಿಂದ ಲಾಭವಾದರೂ ಏನು? ಯಾರು ಏರುತ್ತಾರೆ ನಂತರವಾದರೂ ಬೀಳುತ್ತಾರೆ ಹಾಗಿದ್ದಲ್ಲಿ ಇಷ್ಟು ಪುರುಷಾರ್ಥವಾದರೂ ಏಕೆ ಮಾಡಬೇಕು? ಮಾತೇಶ್ವರಿ, ನೀವು ಹೇಳುವುದು ಈ ಡ್ರಾಮ ಅದೇ ರೀತಿ ಪುನರಾರ್ವತನೆಯಾಗುತ್ತದೆ ಎಂದಮೇಲೆ ಸರ್ವಶಕ್ತಿವಂತ ಪರಮಾತ್ಮ ಏನು ಸದಾ ಇಂತಹ ಆಟವನ್ನು ನೋಡಿ ಸ್ವಯಂ ಆಯಾಸಗೊಳ್ಳುವುದಿಲ್ಲವೆ? ಹೇಗೆ ನಾಲ್ಕು ಋತುಗಳಲ್ಲಿ ಛಳಿ, ಬಿಸಿಲು ಇತ್ಯಾದಿಗಳ ವ್ಯತ್ಯಾಸವಿರುತ್ತದೆ ಅಂದಮೇಲೆ ಈ ಆಟದಲ್ಲಿ ವ್ಯತ್ಯಾಸವಾಗುವುದಿಲ್ಲವೆ?

ಮಾತೇಶ್ವರಿ: ಅದೇ ಈ ಡ್ರಾಮದಲ್ಲಿರುವ ಸುಂದರತೆ, ಒಂದೇ ರೀತಿ ಪುನರಾವರ್ತನೆಯಾಗುತ್ತದೆ ಮತ್ತು ಈ ಡ್ರಾಮದಲ್ಲಿ ಇನ್ನೊಂದು ಸುಂದರತೆ ಎಂದರೆ ಯಾವುದು ಪುನರಾವೃತ್ತಿಯಾಗುತ್ತಿದ್ದರೂ ಸಹ ನಿತ್ಯ ಹೊಸದೆನಿಸುತ್ತದೆ. ಮೊದಲು ನಮಗೂ ಸಹ ಈ ಶಿಕ್ಷಣ ಇರಲಿಲ್ಲ, ಆದರೆ ಯಾವಾಗ ಈ ಜ್ಞಾನ ಸಿಕ್ಕಿತು ಆಗ ಸೆಕೆಂಡ್ ಬೈ ಸೆಕೆಂಡ್ ಏನೆಲ್ಲಾ ನಡೆಯುತ್ತಿದೆ, ಭಲೇ ಒಂದೇ ರೀತಿ ಕಲ್ಪದ ಹಿಂದಿನಂತೆ ನಡೆಯುತ್ತೆ. ಆದರೆ ಯಾವಾಗ ಅದನ್ನು ಸಾಕ್ಷಿ ಎಂದು ತಿಳಿದು ನೋಡುವಿರಿ ಆಗ ನಿತ್ಯ ಹೊಸದೆಂದು ತಿಳಿಯುವಿರಿ. ಈಗ ಸುಖ ದುಃಖ ಎರಡರ ಪರಿಚಯ ಸಿಕ್ಕಿದೆ. ಆದ್ದರಿಂದ ಹೀಗೆ ತಿಳಿಯಬೇಡಿ ಒಂದುವೇಳೆ ಫೇಲ್ ಆಗಲೇ ಬೇಕಾದರೆ ಏಕೆ ಓದಬೇಕು? ಇಲ್ಲ, ಹೀಗೆಂದೂ ತಿಳಿಯಬಹುದು ಊಟ ಸಿಗುವುದಿದ್ದರೆ ತಾನಾಗೆ ಸಿಗುತ್ತದೆ, ಅದಕ್ಕಾಗಿ ಇಷ್ಟು ಪರಿಶ್ರಮ ಪಟ್ಟು ಸಂಪಾದನೆ ಏಕೆ ಮಾಡಬೇಕು? ಅದೇರೀತಿ ನಾವೂ ನೋಡುತ್ತಿದ್ದೇವೆ ಈಗ ಏರುವ ಕಲೆಯ ಸಮಯ ಬಂದಿದೆ, ಅದೇ ದೇವತಾ ಮನೆತನ ಸ್ಥಾಪನೆಯಾಗುತ್ತಿದೆ ಅಂದಮೇಲೆ ನಾವು ಏಕೆ ಈಗಲೇ ಆ ಸುಖವನ್ನು ಪಡೆಯಬಾರದು. ಹಾಗೆಯೇ ನೋಡಿ ಈಗ ಯಾರೊ ಜಡ್ಜ್ ಆಗಲು ಇಷ್ಡ ಪಡುತ್ತಾರೆ. ಅದಕ್ಕಾಗಿ ಅವರು ಪುರುಷಾರ್ಥ ಮಾಡಿದಾಗಲೇ ಆ ಡಿಗ್ರಿಯನ್ನು ಪಡೆಯುತ್ತಾರಲ್ಲವೇ. ಒಂದುವೇಳೆ ಅದರಲ್ಲಿ ಫೇಲ್ ಆಗಿ ಬಿಟ್ಟರೆ ಅವರ ಪರಿಶ್ರಮವೇ ವ್ಯರ್ಥವಾಗಿ ಹೋಗುತ್ತದೆ, ಆದರೆ ಈ ಅವಿನಾಶಿ ಜ್ಞಾನದಲ್ಲಿ ಮತ್ತೆ ಹೀಗಾಗುವುದಿಲ್ಲ, ಸ್ವಲ್ಪ ಕೂಡ ಈ ಅವಿನಾಶಿ ಜ್ಞಾನದ ವಿನಾಶವಾಗುವುದಿಲ್ಲ. ಇಷ್ಟು ಪುರುಷಾರ್ಥ ಮಾಡದೇ ಹೋದರೂ ಸಹ ದೈವೀ ರಾಜ ಮನೆತನದಲ್ಲಿ ಬರದೇ ಹೋದರೂ ಸಹ ಆದರೆ ಒಂದುವೇಳೆ ಕಡಿಮೆ ಪುರುಷಾರ್ಥ ಮಾಡಿದ್ದರೂ ಸಹ ಆ ಸತ್ಯಯುಗಿ ದೈವಿ ಪ್ರಜೆಯಲ್ಲಿ ಬರಲು ಸಾಧ್ಯ. ಆದರೆ ಪುರುಷಾರ್ಥ ಮಾಡುವುದು ಅವಶ್ಯವಾಗಿದೆ ಏಕೆಂದರೆ ಪುರುಷಾರ್ಥದಿಂದಲೇ ಪ್ರಾಲಬ್ದವಾಗುವುದು, ಬಲಿಹಾರಿ ಪುರುಷಾರ್ಥದ ಬಗ್ಗೆಯೇ ಗಾಯನವಿದೆ.

ಈ ಈಶ್ವರೀಯ ಜ್ಞಾನ ಸರ್ವ ಮನುಷ್ಯಾತ್ಮರಿಗಾಗಿದೆ

ಮೊಟ್ಟ-ಮೊದಲು ನೀವು ಒಂದು ಮುಖ್ಯ ವಿಷಯವನ್ನು ಬುದ್ಧಿಯಲ್ಲಿ ಅವಶ್ಯವಾಗಿ ಇಟ್ಟುಕೊಳ್ಳಬೇಕಿದೆ, ಯಾವಾಗ ಈ ಮನುಷ್ಯ ಸೃಷ್ಟಿ ವೃಕ್ಷದ ಬೀಜರೂಪ ಪರಮಾತ್ಮನಾಗಿದ್ದಾರೆ ಅಂದಮೇಲೆ ಆ ಪರಮಾತ್ಮನ ಮೂಲಕ ಯಾವ ಜ್ಞಾನ ಪ್ರಾಪ್ತಿಯಾಗುತ್ತಿದೆ ಅದು ಮನುಷ್ಯರಿಗಾಗಿ ಅವಶ್ಯವಾಗಿದೆ. ಎಲ್ಲಾ ಧರ್ಮದವರಿಗೂ ಈ ಜ್ಞಾನ ಪಡೆಯುವ ಅಧಿಕಾರವಿದೆ. ಭಲೆ ಪ್ರತಿಯೊಂದು ಧರ್ಮದ ಜ್ಞಾನ ತನ್ನ-ತನ್ನದೇ ಆಗಿದೆ ಪ್ರತಿಯೊಬ್ಬರ ಶಾಸ್ತ್ರ ತಮ್ಮ-ತಮ್ಮದೇ ಆಗಿದೆ, ಪ್ರತಿಯೊಬ್ಬರ ಮತ ತಮ್ಮ-ತಮ್ಮದಾಗಿದೆ, ಪ್ರತಿಯೊಬ್ಬರ ಸಂಸ್ಕಾರ ತಮ್ಮ-ತಮ್ಮದೇ ಆಗಿದೆ, ಆದರೆ ಈ ಜ್ಞಾನ ಎಲ್ಲರಿಗಾಗಿಯೂ ಇದೆ. ಭಲೆ ಅವರು ಈ ಜ್ಞಾನವನ್ನು ತೆಗೆದುಕೊಳ್ಳದೇ ಹೋದರೂ ನಮ್ಮ ಮನೆತನದಲ್ಲಿ ಬರದೇ ಹೋಗಬಹುದು. ಆದರೆ ಎಲ್ಲರ ತಂದೆ ಆಗಿರುವ ಕಾರಣ ಅವರ ಜೊತೆ ಯೋಗ ಇಡುವುದರಿಂದ ಅವಶ್ಯವಾಗಿ ಪವಿತ್ರರಾಗುತ್ತಾರೆ. ಈ ಪವಿತ್ರತೆಯ ಕಾರಣ ತಮ್ಮದೇ ಸೆಕ್ಷನ್ನಲ್ಲಿ ಪದವಿಯನ್ನು ಅವಶ್ಯ ಪಡೆಯುತ್ತಾರೆ. ಏಕೆಂದರೆ ಯೋಗವನ್ನು ಎಲ್ಲಾ ಮನುಷ್ಯರೂ ಒಪ್ಪುತ್ತಾರೆ, ಬಹಳ ಮನುಷ್ಯರು ಈ ರೀತಿ ಹೇಳುತ್ತಾರೆ ನಮಗೂ ಮುಕ್ತಿ ಬೇಕು, ಆದರೆ ಸಜೆಗಳಿಂದ ಬಿಡಿಸಿಕೊಂಡು ಮುಕ್ತರಾಗುವ ಶಕ್ತಿಯೂ ಸಹ ಈ ಯೋಗದ ಮುಖಾಂತರ ದೊರಕಲು ಸಾಧ್ಯ... ಒಳ್ಳೆಯದು. ಓಂ ಶಾಂತಿ.