01.11.20    Avyakt Bapdada     Kannada Murli     11.04.86     Om Shanti     Madhuban


ಶ್ರೇಷ್ಠ ಅದೃಷ್ಠದ ಚಹರೆಯನ್ನಾಗಿ (ಚಿತ್ರ) ರೂಪಿಸಿಕೊಳ್ಳುವ ಯುಕ್ತಿ


ಇಂದು ಅದೃಷ್ಠವನ್ನು ರೂಪಿಸುವಂತಹ ಬಾಪ್ದಾದಾರವರು, ಎಲ್ಲಾ ಮಕ್ಕಳ ಶ್ರೇಷ್ಠ ಅದೃಷ್ಠದ ಚಹರೆಯನ್ನು ನೋಡುತ್ತಿದ್ದಾರೆ. ಅದೃಷ್ಠವಂತರಂತು ಎಲ್ಲರೂ ಆಗಿದ್ದಾರೆ ಆದರೆ ಪ್ರತಿಯೊಬ್ಬರ ಅದೃಷ್ಠದ ಚಹರೆಯ ಆ ಹೊಳಪು ತನ್ನ ತನ್ನದಾಗಿದೆ. ಹೇಗೆ ಭಾವಚಿತ್ರವನ್ನು ತಯಾರು ಮಾಡುವವರು ಯಾರದೇ ಚಿತ್ರಣ ಮಾಡುತ್ತಾರೆ ಎಂದರೆ, ಕೆಲವು ಭಾವಚಿತ್ರಗಳ ಮೌಲ್ಯವು ಸಾವಿರಾರು ರೂಪಾಯಿಗಳದ್ದು ಆಗಿರುತ್ತದೆ, ಕೆಲವು ಸಾಧಾರಣವಾಗಿಯೂ ಇರುತ್ತದೆ. ಇಲ್ಲಿ ಬಾಪ್ದಾದಾರವರ ಮೂಲಕ ಸಿಕ್ಕಿರುವಂತಹ ಭಾಗ್ಯವನ್ನು, ಅದೃಷ್ಠವನ್ನು ಚಹರೆ(ಚಿತ್ರ)ಯಲ್ಲಿ ತರುವುದು ಅಂದರೆ ಪ್ರತ್ಯಕ್ಷ ಜೀವನದಲ್ಲಿ ಧಾರಣೆಯಲ್ಲಿ ತರುವುದಾಗಿದೆ - ಇದರಲ್ಲಿ ಅಂತರವಾಗಿ ಬಿಡುತ್ತದೆ. ಅದೃಷ್ಠವನ್ನು ರೂಪಿಸುವವರಂತು ಎಲ್ಲರಿಗೂ ಒಂದೇ ಸಮಯದಲ್ಲಿ ಹಾಗೂ ಒಂದೇ ರೀತಿಯಾಗಿಯೇ ಹಂಚುತ್ತಾರೆ ಆದರೆ ಅದೃಷ್ಠವನ್ನು ಚಹರೆಯಲ್ಲಿ ಧಾರಣೆ ಮಾಡುವಂತಹ ಪ್ರತಿಯೊಂದು ಆತ್ಮಗಳು, ಭಿನ್ನ-ಭಿನ್ನವಾಗಿರುವ ಕಾರಣದಿಂದ ಯಾವ ಚಿತ್ರವನ್ನು ಮಾಡಲಾಗಿತ್ತು, ಅದರಲ್ಲಿ ನಂಬರ್ವಾರಾಗಿ ಕಾಣಿಸುತ್ತಿದೆ. ಯಾವುದೇ ಚಹರೆಯ ವಿಶೇಷತೆಯು ನಯನ ಹಾಗೂ ಮುಗುಳ್ನಗೆ ಆಗಿರುತ್ತದೆ. ಇವೆರಡು ವಿಶೇಷತೆಗಳಿಂದಲೇ ಚಹರೆಯ ಬೆಲೆಯಿರುತ್ತದೆ, ಅಂದಮೇಲೆ ಇಲ್ಲಿಯೂ ಸಹ ಇವರೆಡೇ ವಿಶೇಷತೆಗಳಿಂದ ಅದೃಷ್ಠದ ಚಹರೆಯಿದೆ. 1. ನಯನ ಅಂದರೆ ಆತ್ಮಿಕ ವಿಶ್ವ ಕಲ್ಯಾಣಿ, ದಯಾಹೃದಯಿ, ಪರೋಪಕಾರಿ ದೃಷ್ಟಿ. ದೃಷ್ಟಿಯಿಲ್ಲೇನಾದರು ಈ ವಿಶೇಷತೆಯಿತ್ತು ಎಂದರೆ ಭಾಗ್ಯದ ಚಹರೆಯು ಶ್ರೇಷ್ಠವಿದೆ ಎಂದು. ಮೂಲ ಮಾತು - ದೃಷ್ಟಿ ಮತ್ತು ಮುಗುಳ್ನಗೆಯು ಚಹರೆಯ ಹೊಳಪಾಗಿದೆ, ಇದು ಸಂತುಷ್ಟವಾಗಿರುವ ಹಾಗೂ ಸಂತುಷ್ಟತೆ-ಪ್ರಸನ್ನತೆಯ ಹೊಳಪಾಗಿದೆ. ಚಹರೆಯಲ್ಲಿ ಸದಾ ಇದೇ ವಿಶೇಷತೆಗಳಿಂದ ಆತ್ಮಿಕ ಹೊಳಪು ಬರುತ್ತದೆ, ಆತ್ಮಿಕ ಮುಗುಳ್ನಗೆಯ ಅನುಭವವಾಗುತ್ತದೆ, ಇವೆರಡು ವಿಶೇಷತೆಗಳೇ ಚಹರೆಯ ಮೌಲ್ಯವನ್ನು ಹೆಚ್ಚಿಸಿ ಬಿಡುತ್ತದೆ - ಬಾಪ್ದಾದಾರವರು ಇಂದು ಇದನ್ನೇ ನೋಡುತ್ತಿದ್ದರು. ಅದೃಷ್ಠದ ಚಹರೆಯಂತು ಎಲ್ಲರೂ ರೂಪಿಸಿದ್ದಾರೆ, ಬಾಬಾ ಎಲ್ಲರಿಗೂ ಚಹರೆಯನ್ನು ರೂಪಿಸುವ (ಚಿತ್ರಿಸುವ) ಲೇಖನಿಯನ್ನು ಕೊಟ್ಟಿದ್ದಾರೆ, ಆ ಲೇಖನಿಯಾಗಿದೆ - ಶ್ರೇಷ್ಠ ಸ್ಮೃತಿ, ಶ್ರೇಷ್ಠ ಕರ್ಮಗಳ ಜ್ಞಾನ. ಶ್ರೇಷ್ಠ ಕರ್ಮ ಹಾಗೂ ಶ್ರೇಷ್ಠ ಸಂಕಲ್ಪವೆಂದರೆ ಸ್ಮೃತಿ, ಈ ಜ್ಞಾನದ ಲೇಖನಿಯ ಮೂಲಕ ಪ್ರತಿಯೊಂದು ಆತ್ಮನು ತನ್ನ ಅದೃಷ್ಠದ ಚಹರೆಯನ್ನು ತಯಾರು ಮಾಡುತ್ತಿದ್ದಾರೆ ಮತ್ತು ಕೆಲವರು ಮಾಡಿದ್ದಾರೆ. ಚಹರೆಯಂತು ತಯಾರಾಯಿತು, ಚಲನೆ-ವಲನೆಯೂ ತಯಾರಾಯಿತು, ಈಗ ಲಾಸ್ಟ್ ಟಚಿಂಗ್ ಉಳಿದುಕೊಂಡಿದೆ - "ಸಂಪೂರ್ಣತೆ"ಯ, ತಂದೆಯ ಸಮಾನರಾಗುವ ಲಾಸ್ಟ್ ಟಚಿಂಗ್. ಡಬಲ್ ವಿದೇಶಿಗಳು ಹೆಚ್ಚಾಗಿ ಚಿತ್ರಣ ಮಾಡುವುದನ್ನು ಬಯಸುತ್ತಾರಲ್ಲವೆ. ಇಂದು ಬಾಪ್ದಾದಾರವರೂ ಸಹ ಚಹರೆಯನ್ನು ನೋಡುತ್ತಿದ್ದಾರೆ. ಪ್ರತಿಯೊಬ್ಬರೂ ತಮ್ಮ ಚಹರೆಯನ್ನು ನೋಡಿಕೊಳ್ಳಬಹುದಲ್ಲವೆ - ನಾವು ಎಲ್ಲಿಯವರೆಗೆ ಶ್ರೇಷ್ಠ ಚಹರೆಯುಳ್ಳವರು ಆಗಿದ್ದೇವೆ ಎಂದು. ಸದಾ ತಮ್ಮ ಈ ಆತ್ಮಿಕ ಚಹರೆಯನ್ನು ನೋಡುತ್ತಾ, ಅದರಲ್ಲಿ ಸಂಪೂರ್ಣತೆಯನ್ನು ತಂದುಕೊಳ್ಳುತ್ತಿರಿ. ವಿಶ್ವದ ಎಲ್ಲ ಆತ್ಮರಿಗಿಂತ ಶ್ರೇಷ್ಠ ಭಾಗ್ಯವಂತರು, ಕೋಟಿಯಲ್ಲಿ ಕೆಲವರು, ಕೆಲವರಲ್ಲಿಯೂ ಕೆಲವರು ಅಮೂಲ್ಯ ಅಥವಾ ಶ್ರೇಷ್ಠ ಭಾಗ್ಯವಂತರಂತು ಆಗಿದ್ದೀರಿ ಆದರೆ ಒಂದು ಪ್ರಕಾರ - ಶ್ರೇಷ್ಠ ಅದೃಷ್ಠವಂತರು, ಎರಡನೆಯದು - ಅತಿ ಶ್ರೇಷ್ಠವಾದುದು, ಹಾಗಾದರೆ ಶ್ರೇಷ್ಠರಾಗಿದ್ದೀರಾ ಅಥವಾ ಅತಿ ಶ್ರೇಷ್ಠರಾಗಿದ್ದೀರಾ? ಇದನ್ನು ಪರಿಶೀಲಿಸಬೇಕಾಗಿದೆ. ಒಳ್ಳೆಯದು.

ಈಗ ಡಬಲ್ ವಿದೇಶಿಗಳು ರೇಸ್ ಮಾಡುತ್ತೀರಲ್ಲವೆ! ಮೊದಲ ನಂಬರ್ ತೆಗೆದುಕೊಳ್ಳಬೇಕೆ ಅಥವಾ ಮುಂದೆ ಹೋಗುತ್ತಿರುವವರನ್ನು ನೋಡುತ್ತಾ ಖುಷಿಯಾಗುತ್ತೀರಾ. ಅದನ್ನು ನೋಡಿ-ನೋಡಿ ಖುಷಿ ಪಡುವುದೂ ಸಹ ಅವಶ್ಯಕವಿದೆ ಆದರೆ ತಾವು ಹಿಂದೆಗಡೆ ಇದ್ದು ನೋಡ ಬೇಡಿ, ಜೊತೆ-ಜೊತೆಯಲ್ಲಿದ್ದು ಅನ್ಯರನ್ನೂ ನೋಡುತ್ತಾ ಹರ್ಷಿತವಾಗಿ ಸಾಗಿರಿ. ತಾವೂ ಮುಂದುವರೆಯಿರಿ ಹಾಗೂ ಹಿಂದಿರುವವರನ್ನೂ ಮುಂದುವರೆಸುವುದಕ್ಕೆ ಹೇಳಲಾಗುತ್ತದೆ - ಪರೋಪಕಾರಿ. ಪರೋಪಕಾರಿಗಳ ವಿಶೇಷತೆಯಾಗಿದೆ - ಸದಾ ಸ್ವಾರ್ಥ ಭಾವದಿಂದ ಮುಕ್ತರಾಗಿ ಇರುವುದು. ಪ್ರತೀ ಪರಿಸ್ಥಿತಿ, ಪ್ರತೀ ಕಾರ್ಯದಲ್ಲಿ, ಪ್ರತಿಯೊಂದು ಸಹಯೋಗಿ ಸಂಘಟನೆಯಲ್ಲಿ ನಿಸ್ವಾರ್ಥತೆಯು ಎಷ್ಟಿರುತ್ತದೆಯೋ, ಅಷ್ಟೇ ಪರೋಪಕಾರಿ ಗುಣವಿರುತ್ತದೆ. ಸ್ವಯಂ ಸದಾ ಸಂಪನ್ನ ಆಗಿದ್ದೇನೆಂದು ಅನುಭವ ಮಾಡುತ್ತಾರೆ, ಸದಾ ಪ್ರಾಪ್ತಿ ಸ್ವರೂಪದ ಸ್ಥಿತಿಯಿರುತ್ತದೆ, ಹೀಗಿದ್ದಾಗಲೇ ಪರೋಪಕಾರಿಯ ಅಂತಿಮ ಸ್ಥಿತಿಯನ್ನು ಅನುಭವ ಮಾಡಿ, ಅನ್ಯರಿಗೂ ಮಾಡಿಸಲು ಸಾಧ್ಯವಾಗುವುದು. ಹೇಗೆ ಬ್ರಹ್ಮಾ ತಂದೆಯ ಅಂತಿಮ ಸಮಯದ ಅಂತಿಮ ಸ್ಥಿತಿಯನ್ನು ನೋಡಿದ್ದೀರಿ ಉಪರಾಂ ಸ್ಥಿತಿ'ಯಲ್ಲಿದ್ದರು ಹಾಗೂ ಪರ-ಉಪಕಾರ' - ಈ ವಿಶೇಷತೆಯನ್ನು ಸದಾ ನೋಡಿದಿರಿ. ಏನನ್ನೂ ತನಗಾಗಿ ಸ್ವೀಕರಿಸಲಿಲ್ಲ, ಮಹಿಮೆಯನ್ನೂ ಸ್ವೀಕರಿಸಲಿಲ್ಲ, ವಸ್ತುವನ್ನೂ ಸ್ವೀಕರಿಸಲಿಲ್ಲ, ಇರುವಂತಹ ಸ್ಥಾನವನ್ನೂ ಸ್ವೀಕರಿಸಲಿಲ್ಲ. ಸ್ಥೂಲ ಹಾಗೂ ಸೂಕ್ಷ್ಮವಾಗಿರುವುದು ಎಲ್ಲವನ್ನೂ ಸದಾ ಮೊದಲು ಮಕ್ಕಳಿಗೆ ಎನ್ನುತ್ತಿದ್ದರು, ಇದಕ್ಕೆ ಪರ-ಉಪಕಾರಿ ಆಗುವುದೆಂದು ಹೇಳಲಾಗುತ್ತದೆ. ಸಂಪನ್ನತೆ, ಸಂಪೂರ್ಣತೆಯ ಚಿಹ್ನೆಯೂ ಸಹ ಇದೇ ಆಗಿದೆ. ತಿಳಿಯಿತೆ!!

ಮುರುಳಿಯನ್ನಂತು ಬಹಳ ಕೇಳಿಸಿಕೊಂಡಿರಿ, ಈಗ ತಾವು ಮುರುಳೀಧರನಾಗಿ ಸದಾ ನರ್ತಿಸುತ್ತಾ ಹಾಗೂ ಅನ್ಯರನ್ನೂ ನರ್ತಿಸುತ್ತಿರಬೇಕು. ಮುರುಳಿಯಿಂದ (ನಾದ) ಹಾವಿನ ವಿಷವನ್ನೂ ಸಮಾಪ್ತಿ ಮಾಡಿಬಿಡುತ್ತಾರೆ ಅಂದಾಗ ಅಂತಹ ಮುರುಳೀಧರರಾಗಿದ್ದೀರಾ, ಯಾವುದರಿಂದ ಯಾರಲ್ಲೆಷ್ಟೇ ಕಠಿಣ ಸ್ವಭಾವ-ಸಂಸ್ಕಾರವೇ ಇರಲಿ, ಅದನ್ನೂ ವಶ ಪಡಿಸಿಕೊಳ್ಳುವವರು ಅಂದರೆ ಅದರಿಂದ ಮುಕ್ತಗೊಳಿಸಿ ನರ್ತನ ಮಾಡಿಸುವವರು, ಹರ್ಷಿತರನ್ನಾಗಿ ಮಾಡಿ ಬಿಡುವವರು. ಈಗ ಇದೇ ಫಲಿತಾಂಶವನ್ನು ನೋಡುತ್ತೇವೆ - ಯಾರ್ಯಾರು ಹೀಗೆ ಯೋಗ್ಯ ಮುರುಳೀಧರ ಆಗುವವರು! ಮುರುಳಿಯೊಂದಿಗೂ ಪ್ರೀತಿಯಿದೆ, ಮುರುಳೀಧರನೊಂದಿಗೂ ಪ್ರೀತಿಯಿದೆ ಆದರೆ ಪ್ರೀತಿಯ ಪ್ರತ್ಯಕ್ಷ ಪ್ರಮಾಣವಾಗಿದೆ - ಮುರುಳೀಧರನ ಪ್ರತಿಯೊಂದು ಮಕ್ಕಳ ಪ್ರತಿ ಯಾವ ಶುಭ ಆಶೆಯಿದೆಯೋ ಅದನ್ನು ಪ್ರತ್ಯಕ್ಷದಲ್ಲಿ ಮಾಡಿ ತೋರಿಸುವುದು. ಪ್ರೀತಿಯ ಚಿಹ್ನೆಯನ್ನು ಏನು ಹೇಳಲಾಯಿತು, ಅದನ್ನು ಮಾಡಿ ತೋರಿಸಿ, ಇಂತಹ ಮಾಸ್ಟರ್ ಮುರುಳೀಧರ ಆಗಿದ್ದೀರಲ್ಲವೆ. ಆಗಲೇಬೇಕು, ಈಗ ಆಗದಿದ್ದರೆ ಮತ್ತ್ಯಾವ ಸಮಯದಲ್ಲಿ ಆಗುತ್ತೀರಿ, ಮಾಡುತ್ತೇವೆ ಎನ್ನುವ ವಿಚಾರ ಮಾಡದಿರಿ, ಮಾಡಲೇಬೇಕು ಅಷ್ಟೇ. ಪ್ರತಿಯೊಬ್ಬರೂ ಇದನ್ನೇ ಯೋಚಿಸಿರಿ - ನಾವು ಮಾಡದಿದ್ದರೆ ಮತ್ತ್ಯಾರು ಮಾಡುವರು, ನಾವೇ ಮಾಡಬೇಕು, ನಾವೇ ಮುರುಳೀಧರನಾಗಬೇಕು, ಕಲ್ಪದ ಆಟ ಎಷ್ಟು ದೊಡ್ಡದಿದೆ, ಇಡೀ ಕಲ್ಪದ ಮಾತಾಗಿದೆ ಅಂದಮೇಲೆ ಮೊದಲ ದರ್ಜೆ (ಫಸ್ಟ್ ಡಿವಿಷನ್)ಯಲ್ಲಿ ಬರಬೇಕು ಎಂಬ ಧೃಡತೆಯನ್ನು ಧಾರಣೆ ಮಾಡಿಕೊಳ್ಳಬೇಕು. ಯಾವುದೇ ಹೊಸ ಕಾರ್ಯವನ್ನು ಮಾಡುತ್ತಿದ್ದೀರೇನು? ಬಹಳಷ್ಟು ಸಾರಿ ಮಾಡಿರುವುದರ ಬಗ್ಗೆ ಕೇವಲ ಒತ್ತು ಕೊಡುತ್ತಿದ್ದೀರಿ (ಕಲ್ಪದ ಹಿಂದೆ ಮಾಡಿರುವುದನ್ನೇ ಮಾಡುತ್ತಿರುವುದು). ಇದು ಡ್ರಾಮಾದಲ್ಲಿ ಮುಂಚೆ ಆಗಿದೆ, ಗೊತ್ತಿಲ್ಲ ಸೀದಾ ಇದೆಯೋ ಅಥವಾ ಹೇಗಿದೆಯೋ ಎಂದು ಯೋಚಿಸಲು ಯಾವುದನ್ನೂ ಹೊಸದಾಗಿ ಮಾಡುತ್ತಿಲ್ಲ. ಕಲ್ಪ-ಕಲ್ಪವೂ ರೂಪಿಸಿಕೊಂಡಿರುವ ಪ್ರಾಲಬ್ಧವನ್ನಷ್ಟೇ ರೂಪಿಸುತ್ತೀರಿ. ಏಕೆಂದರೆ ಕರ್ಮಗಳ ಫಲದ ಲೆಕ್ಕವಿದೆ, ಹಾಗಾದರೆ ಹೊಸ ಮಾತೇನು? ಇದಂತು ಬಹಳ ಹಳೆಯದಾಗಿದೆ, ಈಗಲೂ ಅವಶ್ಯವಾಗಿ ಆಗುತ್ತದೆ - ಇದಾಯಿತು ಅಟಲ ನಿಶ್ಚಯ, ಇದಕ್ಕೆ ಧೃಡತೆಯೆಂದು ಹೇಳಲಾಗುತ್ತದೆ, ತಪಸ್ವಿಮೂರ್ತಿ ಎಂದು ಹೇಳಲಾಗುತ್ತದೆ. ಪ್ರತೀ ಸಂಕಲ್ಪದಲ್ಲಿಯೂ ಧೃಡತೆ ಇದೆಯೆಂದರೆ ತಪಸ್ಸಿದೆ. ಒಳ್ಳೆಯದು.

ಬಾಪ್ದಾದಾರವರು ಅತಿ ಶ್ರೇಷ್ಠ ಮಾಲೀಕನೂ ಆಗಿದ್ದಾರೆ ಹಾಗೂ ಗೋಲ್ಡನ್ (ಅತಿ ಶ್ರೇಷ್ಠ) ಅತಿಥಿಯೂ ಆಗಿದ್ದಾರೆ. ಮಾಲೀಕನಾಗಿಯೂ ಭೇಟಿಯಾಗುತ್ತಾರೆ, ಅತಿಥಿಯಾಗಿ ಬರುತ್ತಾರೆ ಆದರೆ ಅತಿಶ್ರೇಷ್ಠವಾದ ಅತಿಥಿಯಾಗಿದ್ದಾರೆ, ಪ್ರಕಾಶವಾಗಿರುವವರು ಅಲ್ಲವೆ. ಅತಿಥಿಗಳನ್ನಂತು ಬಹಳಷ್ಟು ನೋಡಿದಿರಿ ಆದರೆ ಅತಿ ಶ್ರೇಷ್ಠ (ಗೋಲ್ಡನ್) ಅತಿಥಿಯನ್ನು ನೋಡಿಲ್ಲ. ಉದಾ: ಮುಖ್ಯ ಅತಿಥಿಯನ್ನಾಗಿ ಯಾರನ್ನೇ ಕರೆಸಿದಾಗ, ಅವರು ಧನ್ಯವಾದಗಳನ್ನು ತಿಳಿಸುತ್ತಾರೆ. ಹಾಗೆಯೇ ಬ್ರಹ್ಮಾ ತಂದೆಯವರೂ ಸಹ ಮಾಲೀಕನಾಗಿ ಸೂಚನೆ ಕೊಟ್ಟರು ಮತ್ತು ಎಲ್ಲರಿಗೂ ಅತಿಥಿಯಾಗಿ ಶುಭಾಷಯಗಳನ್ನು ಕೊಡುತ್ತಿದ್ದಾರೆ. ಯಾರು ಪೂರ್ಣ ಸೀಜನ್ನಿನಲ್ಲಿ ಸೇವೆಯನ್ನು ಮಾಡಿದರು, ಅವರೆಲ್ಲರಿಗೂ ಅತಿ ಶ್ರೇಷ್ಠ ಅತಿಥಿಯ ರೂಪದಲ್ಲಿ ಶುಭಾಷಯಗಳನ್ನು ಕೊಡುತ್ತಿದ್ದೇವೆ. ಎಲ್ಲದಕ್ಕಿಂತ ಮೊದಲ ಶುಭಾಷಯಗಳು ಯಾರಿಗೆ? ನಿಮಿತ್ತ ದಾದಿಯವರಿಗೆ. ಬಾಪ್ದಾದಾರವರು ನಿರ್ವಿಘ್ನ ಸೇವೆಯ ಸಮಾಪ್ತಿಯ ಶುಭಾಷಯಗಳನ್ನು ಕೊಡುತ್ತಿದ್ದೇವೆ. ಮಧುಬನ ನಿವಾಸಿಗಳಿಗೂ ಸಹ ನಿರ್ವಿಘ್ನ, ಹರ್ಷಿತವಾಗಿ ಅತಿಥಿಯಾಗಿದ್ದು ಸೇವೆಯ ಮಾಡುತ್ತಿರುವುದಕ್ಕೆ, ವಿಶೇಷವಾಗಿ ಶುಭಾಷಯಗಳನ್ನು ಕೊಡುತ್ತಿದ್ದೇವೆ. ಭಗವಂತನೂ ಸಹ ಅತಿಥಿಯಾಗಿ ಬಂದಿದ್ದಾರೆ ಅಂದಮೇಲೆ ಮಕ್ಕಳೂ ಸಹ ಅತಿಥಿಗಳು. ಯಾರ ಮನೆಗೆ ಭಗವಂತನು ಅತಿಥಿಯಾಗಿ ಬರುವರೋ, ಅವರೆಷ್ಟು ಭಾಗ್ಯಶಾಲಿಯಾಗಿದ್ದಾರೆ! ರಥಕ್ಕೂ ಶುಭಾಷಯಗಳು ಏಕೆಂದರೆ ಈ ಪಾತ್ರವನ್ನ ಅಭಿನಯಿಸುವುದೂ ಸಹ ಸಾಮಾನ್ಯವಾದ ಮಾತಲ್ಲ. ಪ್ರವೇಶವಾಗಿರುವ ಇಷ್ಟೊಂದು ಶಕ್ತಿಗಳನ್ನು, ಇಷ್ಟು ಸಮಯದವರೆಗೂ ಧಾರಣೆ ಮಾಡಿಕೊಳ್ಳುವುದೂ ಸಹ ವಿಶೇಷ ಪಾತ್ರವಾಗಿದೆ ಆದರೆ ಸಮಾವೇಶವಾಗಿರುವ ಶಕ್ತಿಗಳ ಫಲವು, ತಮ್ಮೆಲ್ಲರಿಗೂ ಸಿಗುತ್ತಿದೆ. ಈ ಸಮಾವೇಶ ಮಾಡಿಕೊಳ್ಳುವ ಶಕ್ತಿಯಿಂದ, ಬಾಪ್ದಾದಾರವರ ಶಕ್ತಿಗಳನ್ನು ಸಮಾವೇಶ ಮಾಡಿಕೊಳ್ಳುವ ಪಾತ್ರವೆಂದಾದರೂ ಹೇಳಿ ಅಥವಾ ಗುಣವೆಂದಾದರೂ ಹೇಳಿ, ಇದು ವಿಶೇಷವಾಗಿದೆ. ಎಲ್ಲಾ ಸೇವಾಧಾರಿಗಳಲ್ಲಿ, ಸೇವೆಯ ಈ ಪಾತ್ರವನ್ನೂ ಅಭಿನಯಿಸುವವರು ನಿರ್ವಿಘ್ನವಾಗಿದ್ದಾರೆ, ಇವರಿಗಾಗಿ ಶುಭಾಷಯಗಳು ಮತ್ತು ಪದಮಾ ಪದಮ ಧನ್ಯವಾದಗಳು. ಡಬಲ್ ವಿದೇಶಿಗಳಿಗೂ ಡಬಲ್ ಧನ್ಯವಾದಗಳು ಏಕೆಂದರೆ ಡಬಲ ವಿದೇಶಿಗಳು ಮಧುಬನ ಶೋಭೆಯನ್ನು ಬಹಳ ಚೆನ್ನಾಗಿ ಮಾಡಿದ್ದಾರೆ. ಬ್ರಾಹ್ಮಣ ಪರಿವಾರದ ಶೃಂಗಾರವು ಡಬಲ್ ವಿದೇಶಿಯಾಗಿದ್ದಾರೆ. ಬ್ರಾಹ್ಮಣ ಪರಿವಾರದಲ್ಲಿ ದೇಶದವರ ಜೊತೆಯಲ್ಲಿ ವಿದೇಶಿಗಳೂ ಇದ್ದಾರೆ, ಆದ್ದರಿಂದ ಪುರುಷಾರ್ಥಕ್ಕಾಗಿಯೂ ಶುಭಾಷಯಗಳು ಹಾಗೂ ಬ್ರಾಹ್ಮಣ ಪರಿವಾರದ ಶೃಂಗಾರವಾಗಿದ್ದೀರಿ, ಅದಕ್ಕಾಗಿಯೂ ಶುಭಾಶಯಗಳು. ಮಧುಬನ ಪರಿವಾರದ ವಿಶೇಷ ಗಿಫ್ಟ್ ಆಗಿದ್ದೀರಿ, ಆದ್ದರಿಂದ ಡಬಲ್ ವಿದೇಶಿ ಮಕ್ಕಳು ಭಲೆ ಎಲ್ಲಿಯೇ ಇರಬಹುದು, ಸನ್ಮುಖದಲ್ಲಂತು ಸ್ವಲ್ಪವೇ ಇದ್ದಾರೆ, ಡಬಲ್ ಶುಭಾಷಯಗಳನ್ನು ಕೊಡುತ್ತಿದ್ದೇವೆ. ನಾಲ್ಕೂ ಕಡೆಯಲ್ಲಿರುವ ಭಾರತವಾಸಿ ಮಕ್ಕಳಿಗೆ ಹಾಗೂ ಡಬಲ್ ವಿದೇಶಿ ಮಕ್ಕಳಿಗೆ, ವಿಶಾಲ ಹೃದಯದಿಂದ ಶುಭಾಷಯಗಳನ್ನು ಕೊಡುತ್ತಿದ್ದೇವೆ. ಪ್ರತಿಯೊಬ್ಬರೂ ಬಹಳ ಒಳ್ಳೆಯ ಪಾತ್ರವನ್ನು ಅಭಿನಯಿಸಿದಿರಿ, ಎಲ್ಲಾ ಆಲ್ರೌಂಡ್ ಸೇವಾಧಾರಿಗಳಲ್ಲಿ, ಭಲೆ ಚಿಕ್ಕ ಸಾಧಾರಣ ಸೇವೆಯಾಗಿರಲಿ ಆದರೆ ಅದೂ ಸಹ ಮಹಾನ್ ಆಗಿದೆ. ಪ್ರತಿಯೊಬ್ಬರೂ ತಮ್ಮದನ್ನೂ ಜಮಾ ಮಾಡಿಕೊಂಡಿದ್ದೀರಿ ಮತ್ತು ಪುಣ್ಯವನ್ನೂ ಮಾಡಿಕೊಂಡಿದ್ದೀರಿ. ದೇಶ-ವಿದೇಶದ ಎಲ್ಲಾ ಮಕ್ಕಳು ಇಲ್ಲಿ ತಲುಪಿರುವ ವಿಶೇಷತೆಯೂ ಸಹ ಶುಭಾಷಯಗಳಿಗೆ ಯೋಗ್ಯವಾಗಿದೆ. ಮಹಾರಥಿಗಳು ಎಲ್ಲರೂ ಸೇರಿ ಸೇವೆಯ ಶ್ರೇಷ್ಠ ಸಂಕಲ್ಪವನ್ನು ಪ್ರತ್ಯಕ್ಷದಲ್ಲಿ ತಂದಿದ್ದೀರಿ ಹಾಗೂ ಮುಂದೆಯೂ ತರುತ್ತೀರಿ. ಸೇವೆಯಲ್ಲಿ ಯಾರು ನಿಮಿತ್ತರಾಗಿದ್ದಾರೆ, ಅವರಿಗೂ ಕಷ್ಟ ಕೊಡಬಾರದು. ತಮ್ಮ ಹುಡುಗಾಟಿಕೆಯಿಂದ ಯಾರಿಗೂ ಕಷ್ಠ ಪಡುವಂತೆ ಮಾಡಬಾರದು. ತಮ್ಮ ವಸ್ತುಗಳನ್ನು ಸಂಭಾಲನೆ ಮಾಡುವುದರ ತಿಳುವಳಿಕೆಯೂ ಇದೆ, ಬ್ರಹ್ಮಾ ತಂದೆಯು ಏನು ಹೇಳುತ್ತಿದ್ದರು ನೆನಪಿದೆಯಲ್ಲವೆ? ಒಂದು ಟವಲ್ ಕಳೆದುಕೊಳ್ಳುತ್ತೀರಿ ಎಂದರೆ, ಎಂದಾದರೂ ತಮ್ಮನ್ನೂ ಕಳೆದುಕೊಳ್ಳುತ್ತೀರಿ. ಪ್ರತೀ ಕರ್ಮದಲ್ಲಿ ಶ್ರೇಷ್ಠ ಹಾಗೂ ಸಫಲರಾಗಿರುವುದಕ್ಕೆ ಹೇಳಲಾಗುತ್ತದೆ - ನಾಲೆಡ್ಜ್ಫುಲ್. ಶರೀರದ ಬಗ್ಗೆಯೂ ತಿಳುವಳಿಕೆಯಿರಲಿ, ಆತ್ಮದ ವಿಚಾರದಲ್ಲಿಯೂ ತಿಳುವಳಿಕೆಯಿರಲಿ, ಎರಡೂ ತಿಳುವಳಿಕೆಯು ಪ್ರತೀ ಕರ್ಮದಲ್ಲಿ ಇರಬೇಕು, ನನ್ನ ಶರೀರವು ಯಾವ ವಿಧಿಯಿಂದ ಸರಿಯಾಗಿ ನಡೆಸಬಹುದು, ಹೀಗೆ ಶರೀರದ ರೋಗದ ಬಗ್ಗೆಯೂ ತಿಳುವಳಿಕೆ ಇರಬೇಕು. ಹೀಗೆ ತಿಳಿದುಕೊಳ್ಳಬೇಡಿ - ಆತ್ಮವಂತು ಶಕ್ತಿಶಾಲಿಯಾಗಿದೆ, ಶರೀರವು ಹೇಗಾದರೂ ಇರಲಿ. ಶರೀರವು ಅನಾರೋಗ್ಯವಾಗಿದ್ದರೆ ಯೋಗ (ತಂದೆಯ ನೆನಪು) ಮಾಡುವುದಕ್ಕು ಆಗುವುದಿಲ್ಲ. ನಂತರ ಶರೀರವು ತನ್ನ ಕಡೆ ಎಳೆಯುತ್ತದೆ ಆದ್ದರಿಂದ ನಾಲೆಡ್ಜ್ಫುಲ್ (ಜ್ಞಾನಪೂರ್ಣ)ನಲ್ಲಿ ಇವೆಲ್ಲಾ ತಿಳುವಳಿಕೆಯು ಬರುತ್ತದೆ. ಒಳ್ಳೆಯದು.

ಕೆಲವು ಕುಮಾರಿಯರ ಸಮರ್ಪಣಾ ಸಮಾರೋಹವು ಬಾಪ್ದಾದಾರವರ ಸನ್ಮುಖದಲ್ಲಾಯಿತು:

ಬಾಪ್ದಾದಾರವರು ವಿಶೇಷ ಆತ್ಮ ಎಲ್ಲರ ಬಹಳ ಸುಂದರವಾಗಿ ಶೃಂಗಾರವಾಗಿರುವುದನ್ನು ನೋಡುತ್ತಿದ್ದಾರೆ. ದಿವ್ಯ ಗುಣಗಳ ಶೃಂಗಾರವು ಎಷ್ಟೊಂದು ಶ್ರೇಷ್ಠವಾದುದು, ಎಲ್ಲರನ್ನೂ ಶೋಭನೀಯವನ್ನಾಗಿ ಮಾಡುತ್ತಿದೆ. ಪ್ರಕಾಶತೆಯ ಕಿರೀಟವು ಎಷ್ಟೊಂದು ಸುಂದರವಾಗಿ ಹೊಳೆಯುತ್ತಿದೆ. ಅವಿನಾಶಿ ಶೃಂಗಾರ ಆಗಿರುವ ಚಹರೆಯನ್ನು ಬಾಪ್ದಾದಾರವರು ನೋಡುತ್ತಿದ್ದಾರೆ. ಬಾಪ್ದಾದಾರವರಿಗೆ ಮಕ್ಕಳ ಈ ಉಮ್ಮಂಗ-ಉತ್ಸಾಹದ ಸಂಕಲ್ಪವನ್ನು ನೋಡುತ್ತಾ ಖುಷಿಯಾಗುತ್ತಿದೆ. ಬಾಪ್ದಾದಾರವರು ಎಲ್ಲರನ್ನೂ ಸದಾ ಕಾಲಕ್ಕಾಗಿ ಇಷ್ಟ ಪಟ್ಟರು, ತಾವೂ ಸಹ ಪರಿಪಕ್ವವಾಗಿ ಬಯಸಿದ್ದೀರಲ್ಲವೆ!! ಧೃಡ ಸಂಕಲ್ಪದ ಕಂಕಣವನ್ನು ಕಟ್ಟಿಕೊಂಡಿರಿ, ಬಾಪ್ದಾದಾರವರ ಬಳಿ ಪ್ರತಿಯೊಬ್ಬರ ಹೃದಯದ ಸ್ನೇಹದ ಸಂಕಲ್ಪವು ಬಹಳ ಬೇಗನೆ ತಲುಪುತ್ತದೆ. ಈಗ ಈ ಶ್ರೇಷ್ಠ ಬಂಧನವನ್ನು ಸಂಕಲ್ಪದಲ್ಲಿಯೂ ಸಡಿಲಗೊಳಿಸಬಾರದು, ಅಷ್ಟು ಗಟ್ಟಿಯಾಗಿ ಕಟ್ಟಿದ್ದೀರಲ್ಲವೆ. ಎಷ್ಟು ಜನ್ಮಗಳ ಪ್ರತಿಜ್ಞೆಯನ್ನು ಮಾಡಿದ್ದೀರಿ? ಬ್ರಹ್ಮಾ ತಂದೆಯ ಜೊತೆ ಸದಾ ಸಂಬಂಧದಲ್ಲಿ ಬರುವ ಪರಿಪಕ್ವ ಪ್ರತಿಜ್ಞೆಯನ್ನು ಮಾಡಿದ್ದಿರಿ ಮತ್ತು ಗ್ಯಾರಂಟಿಯೂ ಇದೆ - ಸದಾ ಭಿನ್ನ ನಾಮ, ರೂಪ, ಸಂಬಂಧದಲ್ಲಿ 21 ಜನ್ಮಗಳವರೆಗೆ ಜೊತೆಯಲ್ಲಿ ಇದ್ದೇ ಇರುತ್ತೇವೆ. ಹಾಗಾದರೆ ಎಷ್ಟು ಖುಷಿಯಿದೆ! ಅದನ್ನು ಲೆಕ್ಕ ಮಾಡಲು ಸಾಧ್ಯವೇ? ಯಾರೂ ಸಹ ಇದರ ಲೆಕ್ಕವನ್ನು ಮಾಡುವವರು ಬಂದಿಲ್ಲ. ಈಗ ಇದೇ ರೀತಿ ಸದಾ ಶೃಂಗಾರಿತರಾಗಿರಿ, ಸದಾ ಕಿರೀಟಧಾರಿಯಾರಿ ಇರಿ ಮತ್ತು ಸದಾ ಖುಷಿಯಲ್ಲಿ ನಗುತ್ತಾ -ಹಾಡುತ್ತಾ ಆತ್ಮಿಕ ಮೋಜಿನಲ್ಲಿರಿ. ಎಲ್ಲರೂ ಧೃಡ ಸಂಕಲ್ಪವನ್ನು ಮಾಡಿದಿರಲ್ಲವೆ - ಹೆಜ್ಜೆಯ ಮೇಲೆ ಹೆಜ್ಜೆಯನ್ನು ಇಡುವವರು ಆಗುತ್ತೇವೆ. ಅವರಂತು (ಲೌಕಿಕ) ಹೆಜ್ಜಯ ಹೆಜ್ಜೆಯನ್ನು ಇಡುತ್ತಾರೆ ಆದರೆ ತಾವೆಲ್ಲರೂ ಸಂಕಲ್ಪವೆಂಬ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುವವರು. ತಂದೆಯ ಸಂಕಲ್ಪವು ಏನಿದೆಯೋ, ಅದೇ ಮಕ್ಕಳ ಸಂಕಲ್ಪವಾಗಿ ಇರುತ್ತದೆ - ಇಂತಹ ಸಂಕಲ್ಪವನ್ನು ಮಾಡಿದಿರಾ? ಒಂದು ಹೆಜ್ಜೆಯೂ ಸಹ ತಂದೆಯ ಹೆಜ್ಜೆಯನ್ನು ಬಿಟ್ಟು ಅಲ್ಲಿ - ಇಲ್ಲಿ ಹೋಗಬಾರದು. ಪ್ರತೀ ಸಂಕಲ್ಪವನ್ನು ಸಮರ್ಥವಾಗಿ ಮಾಡಿರಿ ಅಂದರೆ ತಂದೆಯ ಸಮಾನ ಹೆಜ್ಜೆಯ ಮೇಲೆ ಹೆಜ್ಜೆಯನ್ನು ಇಡಬೇಕು. ಒಳ್ಳೆಯದು.

ವಿದೇಶಿ ಸಹೋದರ-ಸಹೋದರಿಯರೊಂದಿಗೆ:

ವಿಮಾನದಲ್ಲಿ ಯಾವ ರೀತಿ ಹಾರಿಕೊಂಡು ಬಂದಿದ್ದೀರಿ, ಹಾಗೆಯೇ ಬುದ್ಧಿಯೆಂಬ ವಿಮಾನವೂ ಸಹ ಅಷ್ಟು ತೀವ್ರವಾಗಿಯೇ ಹಾರುತ್ತಿರುತ್ತದೆ ಅಲ್ಲವೆ. ಏಕೆಂದರೆ ಈ ವಿಮಾನವು ಸಂದರ್ಭಕ್ಕನುಗುಣವಾಗಿ ಸಿಗದೇ ಇರಬಹುದು ಆದರೆ ಬುದ್ಧಿಯೆಂಬ ವಿಮಾನವಂತು ಸದಾ ಜೊತೆಯಿರುತ್ತದೆ ಮತ್ತು ಸದಾ ಶಕ್ತಿಶಾಲಿಯಾಗಿ ಇರುತ್ತದೆಯೆಂದರೆ, ಎಲ್ಲಿಗೆ ಬೇಕಾದರೂ ಅಲ್ಲಿಗೆ ಸೆಕೆಂಡಿನಲ್ಲಿ ತಲುಪಿ ಬಿಡಬೇಕು. ಹಾಗಾದರೆ ಈ ವಿಮಾನದ ಮಾಲೀಕನಾಗಿದ್ದೀರಿ ಅಲ್ಲವೆ. ಸದಾ ಈ ಬುದ್ಧಿಯೆಂಬ ವಿಮಾನವು ಎವರೆಡಿಯಾಗಿ ಇರಲಿ ಅಂದರೆ ಸದಾ ಬುದ್ಧಿಯ ಲೈನ್ ಕ್ಲಿಯರ್ ಆಗಿರಲಿ. ಬುದ್ಧಿಯು ಸದಾ ತಂದೆಯ ಜೊತೆ, ಶಕ್ತಿಶಾಲಿಯಾಗಿ ಇರುತ್ತದೆ ಎಂದರೆ ಯಾವಾಗ ಬೇಕು ಆಗ ಸೆಕೆಂಡಿನಲ್ಲಿಯೇ ತಲುಪಿ ಬಿಡುತ್ತೀರಿ. ಯಾರ ಬುದ್ಧಿಯ ವಿಮಾನವು ತಲುಪುತ್ತದೆಯೋ, ಅವರ ಆ ವಿಮಾನವೂ ಸಾಗುತ್ತದೆ. ಬುದ್ಧಿಯ ವಿಮಾನವು ಸರಿಯಿಲ್ಲದಿದ್ದರೆ, ಆ ವಿಮಾನವೂ ಸಾಗುವುದಿಲ್ಲ. ಒಳ್ಳೆಯದು.

ಪಾರ್ಟಿಯೊಂದಿಗೆ:

1. ಸದಾ ತಮ್ಮನ್ನು ರಾಜಯೋಗಿ ಶ್ರೇಷ್ಠ ಆತ್ಮನೆಂದು ಅನುಭವ ಮಾಡುತ್ತೀರಾ? ರಾಜಯೋಗಿ ಅಂದರೆ ಸರ್ವ ಕರ್ಮೇಂದ್ರಿಯಗಳ ಮೇಲೆ ರಾಜನಾಗಿ ಇರುವುದು. ರಾಜನಾಗಿದ್ದು ಕರ್ಮೇಂದ್ರಿಯಗಳನ್ನು ನಡೆಸುವವರು, ಕರ್ಮೇಂದ್ರಿಯಗಳಿಗೆ ವಶರಾಗಿ ನಡೆಯುವವರಲ್ಲ. ಯಾರು ಕರ್ಮೇಂದ್ರಿಯಗಳ ವಶರಾಗಿ ನಡೆಯುವವರು ಆಗಿದ್ದಾರೆ, ಅವರಿಗೆ ಪ್ರಜಾ ಯೋಗಿ ಎಂದು ಹೇಳಲಾಗುತ್ತದೆ, ರಾಜಯೋಗಿ ಎನ್ನುವುದಿಲ್ಲ. ಯಾವಾಗ ಈ ತಿಳುವಳಿಕೆಯು ಸಿಕ್ಕಿತು - ಅದು ಯಾವುದು ಎಂದರೆ, ಈ ಕರ್ಮೇಂದ್ರಿಯಗಳು ನನ್ನ ಕರ್ಮಚಾರಿಯಾಗಿವೆ, ನಾನು ಅದರ ಮಾಲೀಕನಾಗಿರುವೆನು. ಹಾಗಾದರೆ ಮಾಲೀಕನೆಂದಿಗೂ ಸೇವಾಧಾರಿಗಳ ವಶನಾಗಲು ಸಾಧ್ಯವಿಲ್ಲ. ಯಾರೆಷ್ಟೇ ಪ್ರಯತ್ನ ಪಡಲಿ ಆದರೆ ರಾಜಯೋಗಿ ಆತ್ಮರು ಸದಾ ಶ್ರೇಷ್ಠವಾಗಿ ಇರುತ್ತಾರೆ. ಸದಾ ರಾಜ್ಯಾಡಳಿತ ಮಾಡುವಂತಹ ಸಂಸ್ಕಾರವನ್ನು ಈಗ ರಾಜಯೋಗಿ ಜೀವನದಲ್ಲಿ ತುಂಬಬೇಕಾಗಿದೆ. ಏನಾದರೂ ಆಗಲಿ, ನಾನು ರಾಜಯೋಗಿ ಆಗಿದ್ದೇನೆಂಬ ತಮ್ಮ ಟೈಟಲ್ನ್ನು ಸದಾ ನೆನಪಿಟ್ಟುಕೊಳ್ಳಿರಿ. ಸರ್ವಶಕ್ತಿವಂತನ ಬಲವಿದೆ, ಭರವಸೆಯಿದ್ದಾಗ ಸಫಲತೆಯು ಅಧಿಕಾರದ ರೂಪದಲ್ಲಿ ಸಿಕ್ಕಿ ಬಿಡುತ್ತದೆ. ಅಧಿಕಾರವು ಸಹಜವಾಗಿಯೇ ಪ್ರಾಪ್ತಿಯಾಗಿದೆ, ಕಷ್ಟವಾಗುವುದಿಲ್ಲ. ಸರ್ವಶಕ್ತಿಗಳ ಆಧಾರದಿಂದ ಪ್ರತಿಯೊಂದು ಕಾರ್ಯವು ಸಫಲವಾಗಿಯೇ ಇರುತ್ತದೆ. ಸದಾ ನಶೆಯಲ್ಲಿರಿ - ನಾನು ಹೃದಯ ಸಿಂಹಾಸನ ಅಧಿಕಾರಿ ಆತ್ಮನಾಗಿರುವೆನು. ಈ ನಶೆಯು ತಮ್ಮನ್ನು ಅನೇಕ ಚಿಂತೆಗಳಿಂದ ಪಾರು ಮಾಡಿ ಬಿಡುತ್ತದೆ. ನಶೆಯಿಲ್ಲದಿದ್ದರೆ ಕೇವಲ ಚಿಂತೆಯೇ ಚಿಂತೆಯಿರುತ್ತದೆ ಆದ್ದರಿಂದ ಸದಾ ನಶೆಯಲ್ಲಿದ್ದು, ವರದಾನಿಯಾಗಿದ್ದು ವರದಾನವನ್ನು ಹಂಚುತ್ತಿರಿ. ಸ್ವಯಂ ತಾವು ಸಂಪನ್ನರಾಗಿ, ಅನ್ಯರನ್ನೂ ಸಂಪನ್ನಗೊಳಿಸಬೇಕು. ಅನ್ಯರನ್ನು ತಯಾರು ಮಾಡುವುದು ಅಂದರೆ ಸ್ವರ್ಗದಲ್ಲಿನ ಸ್ಥಾನದ ಸರ್ಟಿಫಿಕೇಟ್ನ್ನು ಕೊಡುವಿರಿ. ಆ ಕಾಗದದ ಸರ್ಟಿಫಿಕೇಟ್ ಅಲ್ಲ, ಅಧಿಕಾರದ ಸರ್ಟಿಫಿಕೇಟ್. ಒಳ್ಳೆಯದು.

2. ಪ್ರತೀ ಹೆಜ್ಜೆಯಲ್ಲಿ ಪದಮಗಳ ಸಂಪಾದನೆಯನ್ನು ಜಮಾ ಮಾಡುವವರು, ಅಕೂಟ ಖಜಾನೆಗಳ ಮಾಲೀಕರಾಗಿ ಬಿಟ್ಟಿರಿ. ಇದೇ ಖುಷಿಯ ಅನುಭವ ಮಾಡುತ್ತಿರಿ. ಏಕೆಂದರೆ ವರ್ತಮಾನದ ಪ್ರಪಂಚವಿರುವುದೇ "ಮೋಸಗಾರ"ನಾಗಿ. ಮೋಸ ಮಾಡುವ ಪ್ರಪಂಚದಿಂದ ಹೊರಗೆ ಬಂದಿದ್ದೀರಿ, ಮೋಸ ಹೋಗುವ ಪ್ರಪಂಚದ ಸೆಳೆತವಂತು ಇಲ್ಲ. ಸೇವಾರ್ಥವಾಗಿ ಸಂಪರ್ಕದಲ್ಲಿ ಇರುವುದು ಬೇರೆ ಮಾತಾಗಿದೆ ಆದರೆ ಸೆಳೆತವಿರಬಾರದು. ಹಾಗಾದರೆ ತಮ್ಮನ್ನು ಸದಾ ಕನಿಷ್ಠರೆಂದಲ್ಲ, ಸಾಧಾರಣರೂ ಅಲ್ಲ ಆದರೆ ಶ್ರೇಷ್ಠ ಆತ್ಮನಾಗಿದ್ದೇನೆ, ಸದಾ ತಂದೆಯ ಪ್ರಿಯವಾಗಿರುವ ಮಗುವೆಂಬ ನಶೆಯಲ್ಲಿರಿ. ತಂದೆಯ ಮಕ್ಕಳು ಹೆಜ್ಜೆಯಲ್ಲಿ ಹೆಜ್ಜೆಯನ್ನು ಇಡುತ್ತಾ ಅರ್ಥಾತ್ ಫಾಲೋ ಫಾದರ್ ಮಾಡುತ್ತಾ ನಡೆಯುತ್ತೀರಿ ಎಂದರೆ ತಂದೆಯ ಸಮಾನ ಆಗುತ್ತೀರಿ. ಸಮಾನರಾಗುವುದು ಅಂದರೆ ಸಂಪನ್ನರಾಗುವುದು. ಇದೇ ಕಾರ್ಯವು ಈ ಬ್ರಾಹ್ಮಣ ಜೀವನದ್ದಾಗಿದೆ.

3. ಸದಾ ತಮ್ಮನ್ನು ತಂದೆಯ ಆತ್ಮಿಕ ಹೂದೋಟದ ಆತ್ಮಿಕ ಗುಲಾಬಿಯೆಂದು ತಿಳಿಯುತ್ತೀರಾ! ಅತ್ಯಂತ ಸುಗಂಧವಿರುವ ಹೂ ಗುಲಾಬಿ ಆಗಿರುತ್ತದೆ. ಗುಲಾಬ್ಜಲ್ ಎಷ್ಟೊಂದು ಕಾರ್ಯದಲ್ಲಿ ಉಪಯೋಗಿಸುತ್ತಾರೆ, ರಂಗು-ರೂಪದಲ್ಲಿಯೂ ಗುಲಾಬಿಯು ಸರ್ವರ ಪ್ರಿಯವಾಗಿದೆ. ಹಾಗಾದರೆ ತಾವೆಲ್ಲರೂ ಸಹ ಆತ್ಮಿಕ ಗುಲಾಬಿಗಳಾಗಿದ್ದೀರಿ. ತಮ್ಮ ಆತ್ಮಿಕ ಸುಗಂಧವು ಸ್ವತಹವಾಗಿಯೇ ಅನ್ಯರನ್ನೂ ಆಕರ್ಷಿಸುತ್ತದೆ. ಎಲ್ಲಿ ಯಾವುದೇ ಸುಗಂಧವಿರುವ ವಸ್ತುವಿರುತ್ತದೆ ಎಂದರೆ, ಎಲ್ಲರ ಗಮನವು ಸ್ವತಹವಾಗಿಯೇ ಅಲ್ಲಿಗೆ ಹೋಗುತ್ತದೆ. ಅಂದಾಗ ತಾವು ಆತ್ಮಿಕ ಗುಲಾಬಿಗಳ ಸುಗಂಧವು ಇಡೀ ವಿಶ್ವವನ್ನು ಆಕರ್ಷಿಸುವಂತದ್ದು, ಏಕೆಂದರೆ ಈಗ ವಿಶ್ವಕ್ಕೆ ಈ ಆತ್ಮಿಕ ಸುಗಂಧದ ಅವಶ್ಯಕತೆಯಿದೆ. ಆದ್ದರಿಂದ ಸದಾ ಈ ಸ್ಮೃತಿಯಲ್ಲಿರಿ - ನಾನು ಅವಿನಾಶಿ ಹೂದೋಟದ ಅವಿನಾಶಿ ಗುಲಾಬಿ ಆಗಿರುವೆನು. ಎಂದಿಗೂ ಬಾಡಿ ಹೋಗುವವನಲ್ಲ, ಸದಾ ಅರಳಿರುವ ಗುಲಾಬಿ. ಹೀಗೆ ಅರಳಿರುವ ಆತ್ಮಿಕ ಗುಲಾಬಿಯು ಸ್ವತಹವಾಗಿ ಸದಾ ಸೇವೆಯಲ್ಲಿ ನಿಮಿತ್ತರಾಗಿ ಬಿಡುತ್ತಾರೆ. ನೆನಪಿನ, ಶಕ್ತಿಗಳ, ಗುಣಗಳ - ಎಲ್ಲಾ ಪ್ರಕಾರದ ಸುಗಂಧವನ್ನು ಎಲ್ಲರಿಗೂ ಕೊಡುತ್ತಿರಿ. ತಂದೆಯು ಸ್ವಯಂ ತಾನೇ ಬಂದು, ತಾವು ಹೂಗಳನ್ನು ತಯಾರು ಮಾಡಿದ್ದಾರೆ ಎಂದಾಗ, ಎಷ್ಟು ಅಗಲಿ ಮರಳಿ ಸಿಕ್ಕಿರುವವರಾಗಿದ್ದೀರಿ! ಒಳ್ಳೆಯದು.

ವರದಾನ:  
ಭಿನ್ನ ಹಾಗೂ ಪ್ರಿಯರಾಗುವ ರಹಸ್ಯವನ್ನು ತಿಳಿದುಕೊಂಡು ರಾಜಿ(ಪ್ರಸನ್ನ)ವಾಗಿರುವಂತಹ ರಹಸ್ಯಯುಕ್ತ ಭವ.

ಯಾವ ಮಕ್ಕಳು ಪ್ರವೃತ್ತಿಯಲ್ಲಿದ್ದು ಭಿನ್ನ ಹಾಗೂ ಪ್ರಿಯರಾಗುವ ರಹಸ್ಯವನ್ನು ತಿಳಿದುಕೊಂಡಿರುತ್ತಾರೆ, ಅವರು ಸದಾ ತಾನು ತನ್ನೊಂದಿಗೂ ಸಂತುಷ್ಟವಾಗಿರುತ್ತಾರೆ, ಪ್ರವೃತ್ತಿಯನ್ನೂ ಸಂತುಷ್ಟವಾಗಿ ಇಡುತ್ತಾರೆ. ಜೊತೆ-ಜೊತೆಗೆ ಸತ್ಯ-ಹೃದಯವಿರುವ ಕಾರಣದಿಂದ ಅಂತಹ ಮಕ್ಕಳ ಪ್ರತಿ ಸಾಹೇಬ (ಮಾಲೀಕ, ತಂದೆ)ನೂ ಸಹ ಖುಷಿಯಾಗಿ ಇರುತ್ತಾರೆ. ಹೀಗೆ ರಾಜಿಯಾಗಿರುವ ರಹಸ್ಯಯುಕ್ತ ಮಕ್ಕಳು ತನ್ನ ಪ್ರತಿ ಅಥವಾ ಅನ್ಯ ಯಾರದೇ ಬಗ್ಗೆ, ಯಾವುದೇ ಲಾಯರ್(ನ್ಯಾಯ ಕೊಡಿಸುವ)ನ್ನು ಇಡುವ ಅವಶ್ಯಕತೆ ಇರುವುದಿಲ್ಲ, ಏಕೆಂದರೆ ಅವರು ತನ್ನ ನಿರ್ಣಯವನ್ನು ತಾನೇ ಮಾಡಿ ಬಿಡುತ್ತಾರೆ ಆದ್ದರಿಂದ ಅವರು ಯಾರನ್ನೇ ಲಾಯರ್, ವಕೀಲ ಅಥವಾ ನ್ಯಾಯಾಧೀಶನನ್ನಾಗಿ ಮಾಡುವ ಅವಶ್ಯಕತೆಯೇ ಇಲ್ಲ.

ಸ್ಲೋಗನ್:
ಸೇವೆಯಿಂದ ಆಶೀರ್ವಾದಗಳೇನು ಸಿಗುತ್ತದೆ, ಆ ಆಶೀರ್ವಾದಗಳೇ ಆರೋಗ್ಯವಂತನಾಗಲು ಆಧಾರವಾಗಿದೆ.


ಪ್ರಶ್ನೆಗಳು -

1. ಯಾವ ಏರಡು ವಿಶೇಷತೆಗಳಿಂದ ಚಿತ್ರದ ಮೂಲ್ಯ ಹೆಚ್ಚಾಗುತ್ತದೆ?
2. ಪರ-ಉಪಕಾರಿಯೆಂದು ಯಾವುದಕ್ಕೆ ಹೇಳಲಾಗುತ್ತದೆ?
3. ಪರ-ಉಪಕಾರಿಯ ವಿಶೇಷತೆಗಳೇನು?
4. ಬ್ರಹ್ಮಾ ತಂದೆಯ ಅಂತಿಮ ಸಮಯದ ಸ್ಥಿತಿಯ ವಿಶೇಷತೆಗಳೇನು?
5. ಸಂಪನ್ನತೆ ಮತ್ತು ಸಂಪೂರ್ಣತೆಯ ಲಕ್ಷಣಗಳೇನು?
6. ಕಠಿಣ ಸ್ವಭಾವ - ಸಂಸ್ಕಾರಯುಳ್ಳವರನ್ನು ಹೇಗೆ ವಶ ಮಾಡಿಕೊಳ್ಳಬೇಕು?
7. ಯಾವುದಕ್ಕೆ ಜ್ಞಾನಪೂರ್ಣ (ನಾಲೆಜ್ಫುಲ್) ಎಂದು ಹೇಳಲಾಗುತ್ತದೆ?
8. ಯಾವ ನಶೆಯಿದ್ದರೆ ನಾವು ಎಲ್ಲಾ ಚಿಂತೆಗಳಿಂದ ಪಾರಾಗಬಹುದು?
9. ಆರೋಗ್ಯವಂತರಾಗಿರಲು ಆಧಾರ ಏನು?
10. ವಿಶ್ವಕ್ಕೆ ಯಾವ ಸುವಾಸನೆಯ ಅವ್ಯಶಕತೆಯಿದೆ?