01.11.23 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಬ್ರಹ್ಮನ ಸಂತಾನರು ಪರಸ್ಪರ ಸಹೋದರ-ಸಹೋದರಿಯರಾಗಿದ್ದೀರಿ ಆದುದರಿಂದ ನಿಮ್ಮ ವೃತ್ತಿ ಬಹಳ ಶುದ್ಧ
ಪವಿತ್ರವಾಗಬೇಕಾಗಿದೆ”
ಪ್ರಶ್ನೆ:
ಯಾವ ಮಕ್ಕಳು
ತಿಳಿಸಿಕೊಟ್ಟಾಗ ಬಹಳ ಪ್ರಭಾವ ಬೀರುತ್ತದೆ?
ಉತ್ತರ:
ಯಾರು ಗೃಹಸ್ಥ
ವ್ಯವಹಾರದಲ್ಲಿರುತ್ತಾ ಕಮಲಪುಷ್ಫ ಸಮಾನ ಪವಿತ್ರರಾಗಿರುತ್ತಾರೆ, ಇಂತಹ ಅನುಭವೀ ಮಕ್ಕಳು ಯಾರಿಗಾದರೂ
ತಿಳಿಸಿದಾಗ ಬಹಳ ಪ್ರಭಾವ ಬೀರುತ್ತದೆ ಏಕೆಂದರೆ ವಿವಾಹಿತರಾಗಿಯೂ ಅಪವಿತ್ರತೆಯ ವೃತ್ತಿ ಬಾರದಂತಹ
ಗುರಿಯು ಬಹಳ ದೊಡ್ಡ ಗುರಿಯಾಗಿದೆ. ಇದರಲ್ಲಿ ಮಕ್ಕಳು ಬಹಳ-ಬಹಳ ಎಚ್ಚರಿಕೆಯಿಂದಿರಬೇಕು.
ಗೀತೆ:
ನಮ್ಮ
ತೀರ್ಥಸ್ಥಾನ ಭಿನ್ನವಾಗಿದೆ......................
ಓಂ ಶಾಂತಿ.
ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ ಏಕೆಂದರೆ ಮಕ್ಕಳೇ ತಂದೆಯನ್ನು ತಿಳಿದಿರುತ್ತಾರೆ.
ಎಲ್ಲರೂ ಸಹ ಮಕ್ಕಳೇ ಆಗಿದ್ದಿರಿ, ಎಲ್ಲಾ ಮಕ್ಕಳೂ ಬ್ರಹ್ಮಾಕುಮಾರ-ಕುಮಾರಿಯರೆ ಆಗಿದ್ದೀರಿ, ಯಾರು
ಬ್ರಹ್ಮಾಕುಮಾರ-ಕುಮಾರಿಯರಾಗಿದ್ದಾರೆ ಅವರು ನಾವು ಪರಸ್ಪರ ಸಹೋದರ-ಸಹೋದರಿಯರೆಂದು
ತಿಳಿದುಕೊಂಡಿದ್ದಾರೆ. ನಾವೆಲ್ಲಾ ಒಬ್ಬ ತಂದೆಯ ಮಕ್ಕಳೆಂಬ ಮೂಲ ಸಂಬಂಧದಲ್ಲಿ ತಿಳಿಸಬೇಕು.
ನಾವಾತ್ಮಗಳು ಸಹೋದರ-ಸಹೋದರರಾಗಿದ್ದೇವೆ. ಎಲ್ಲರೂ ಸಹೋದರರಾಗಿದ್ದಾರೆ. ಇಲ್ಲಿ ನೀವು, ನಾವೆಲ್ಲರೂ
ಒಬ್ಬ ತಾತನ (ಗ್ರಾಂಡ್ ಫಾದರ್) ಹಾಗೂ ತಂದೆಯ ಮಕ್ಕಳಾಗಿದ್ದೇವೆ ಎಂದು ತಿಳಿದುಕೊಂಡಿದ್ದೀರಿ.
ಶಿವತಂದೆಗೆ ಮೊಮ್ಮಕ್ಕಳು, ಬ್ರಹ್ಮಾರವರಿಗೆ ಮಕ್ಕಳಾಗಿದ್ದೇವೆ. ಬ್ರಹ್ಮಾತಂದೆಯು ತನ್ನ ಲೌಕಿಕ
ಪತ್ನಿಯನ್ನೂ ಸಹ ಬ್ರಹ್ಮಾಕುಮಾರಿಯೆಂದು ಹೇಳಿದರು ಅಂದಾಗ ಅವರ ಸಂಬಂಧವೂ ಸಹ ನಮ್ಮಂತೆಯೇ ಆಯಿತು.
ಹೇಗೆ ಲೌಕಿಕ ಸಹೋದರ ಸಹೋದರಿಯಿದ್ದಂತೆ. ಅವರಿಗೆ ದೃಷ್ಟಿಯಲ್ಲಿ ಯಾವುದೇ ಅಪವಿತ್ರತೆ ಇರುವುದಿಲ್ಲ.
ವರ್ತಮಾನದಲ್ಲಿ ಎಲ್ಲರೂ ಬಹಳ ಅಪವಿತ್ರರಾಗಿದ್ದಾರೆ. ಏಕೆಂದರೆ ಪ್ರಪಂಚವು ಅಶುದ್ಧವಾಗಿದೆ. ನಾವು
ಬ್ರಹ್ಮಾಕುಮಾರ-ಕುಮಾರಿಯರೆಂದು ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಬ್ರಹ್ಮಾನ ಮುಖಾಂತರ
ದತ್ತು ಮಕ್ಕಳಾಗಿರುವ ಕಾರಣ ಸಹೋದರ-ಸಹೋದರಿಯರಾಗಿದ್ದೀರಿ. ಸನ್ಯಾಸತ್ವದಲ್ಲಿಯೂ ಎರಡು ರೀತಿಯ
ಸನ್ಯಾಸವಿದೆಯೆಂದು ತಿಳಿಸಬೇಕು. ಸನ್ಯಾಸವೆಂದರೆ ಪವಿತ್ರವಾಗಿರುವುದು, ಪಂಚವಿಕಾರಗಳನ್ನು ಬಿಡುವುದು.
ಅದಾಗಿದೆ ಹಠಯೋಗದ ಸನ್ಯಾಸ, ಅವರು ಹಠಯೋಗದ ಸನ್ಯಾಸಿಗಳು, ಅವರ ವಿಭಾಗವೇ ಬೇರೆಯಾಗಿದೆ.
ಗೃಹಸ್ಥದಲ್ಲಿ ಇರುವವರ ಜೊತೆ ಸಂಬಂಧವನ್ನು ಬಿಟ್ಟುಹೋಗುತ್ತಾರೆ ಆದ್ದರಿಂದ ಅವರನ್ನು ಹಠಯೋಗದ
ಸನ್ಯಾಸಿಗಳೆಂದು ಹೇಳುತ್ತಾರೆ. ಆದರೆ ಈಗ ಮಕ್ಕಳಿಗೆ ಗೃಹಸ್ಥ ವ್ಯವಹಾರದಲ್ಲಿದ್ದು ದೇಹಸಹಿತ ದೇಹದ
ಎಲ್ಲಾ ಸಂಬಂಧಗಳನ್ನು ತ್ಯಾಗ ಮಾಡಿ ತಂದೆಯನ್ನು ನೆನಪು ಮಾಡಬೇಕೆಂದು ತಿಳಿಸಲಾಗುತ್ತದೆ. ಅವರಂತೂ
ಮನೆ-ಮಠವನ್ನು ಬಿಡುತ್ತಾರೆ. ಮಾಮಾ, ಚಿಕ್ಕಪ್ಪ, ದೊಡ್ಡಪ್ಪ..... ಯಾವ ಸಂಬಂಧಿಯೂ ಇರುವುದಿಲ್ಲ.
ಅವರು ಜ್ಯೋತಿಯಲ್ಲಿ ಜ್ಯೋತಿಯು ಲೀನವಾಗಬೇಕು, ಅವರನ್ನೇ ನೆನಪು ಮಾಡಬೇಕು, ಅವರೊಬ್ಬರೆ ನಮಗೆ ಎಂದು
ತಿಳಿಯುತ್ತಾರೆ. ನಿರ್ವಾಣಧಾಮದಲ್ಲಿ ಹೋಗಬೇಕು ಎಂದು ತಿಳಿಯುತ್ತಾರೆ. ಅವರ ವಿಭಾಗವು ಬೇರೆಯಾಗಿದೆ.
ಅವರ ಪಾಲನೆಯೂ ಬೇರೆಯಾಗಿದೆ. ಅವರಂತೂ ಸ್ತ್ರೀಯನ್ನು ನರಕದ ದ್ವಾರವೆಂದು ಹೇಳಿಬಿಡುತ್ತಾರೆ. ಹತ್ತಿ
ಮತ್ತು ಬೆಂಕಿಯು ಜೊತೆಯಲ್ಲಿರಲು ಸಾಧ್ಯವಿಲ್ಲವೆಂದು ಮತ್ತು ದೂರವಾಗುವುದರಿಂದ
ಸುರಕ್ಷಿತರಾಗಿರುತ್ತೇವೆಂದು ಹೇಳುತ್ತಾರೆ. ನಾಟಕದ ಅನುಸಾರವಾಗಿ ಅವರ ಧರ್ಮವೇ ಬೇರೆಯಾಗಿದೆ ಅದನ್ನು
ಶಂಕರಾಚಾರ್ಯರು ಸ್ಥಾಪನೆ ಮಾಡಿದರು, ಅವರು ಹಠಯೋಗವನ್ನು ಕಲಿಸುತ್ತಾರೆ, ಅದು ಕರ್ಮಸನ್ಯಾಸವಾಗಿದೆ
ಆದರೆ ಕರ್ಮಯೋಗವಲ್ಲ. ಇದು ನಾಟಕದಲ್ಲಿ ನಂಬರ್ವಾರ್ ಆಗಿ ಮಾಡಲ್ಪಟ್ಟಿದೆ ಎಂದು ನೀವು ತಿಳಿದಿದ್ದೀರಿ.
100% ಬುದ್ಧಿವಂತರೆಂದು ಎಲ್ಲರಿಗೂ ಹೇಳಲಾಗುವುದಿಲ್ಲ. ಕೆಲವರು ಮಾತ್ರ 100%
ಬುದ್ಧಿವಂತರಾಗಿದ್ದಾರೆ, ಕೆಲವರು ಬುದ್ಧಿ ಇಲ್ಲದವರಾಗಿದ್ದಾರೆ ಇದಂತೂ ಇರುತ್ತದೆ. ನಿಮಗೆ
ಗೊತ್ತಿದೆ - ನಾವು ಮಮ್ಮಾ-ಬಾಬಾ ಎಂದು ಹೇಳುತ್ತಾ ಪರಸ್ಪರ ಸಹೋದರ-ಸಹೋದರಿಯರಾಗಿದ್ದೇವೆ ಎಂದು.
ಆದುದರಿಂದ ಕೊಳಕು ವೃತ್ತಿಯಿರಬಾರದು ಎಂದು ನಿಯಮವು ಹೇಳುತ್ತದೆ ಸಹೋದರ ಸಹೋದರಿಗೆ ಎಂದೂ
ಪರಸ್ಪರರಿಗೆ ಮದುವೆ ಅಗಲು ಸಾಧ್ಯವಿಲ್ಲ. ತಂದೆಯು ನೋಡುತ್ತಾರೆ, ಇವರ ಚಲನೆ ಅಪವಿತ್ರವಾಗಿದೆ ಎಂದರೆ
ತುಂಬಾ ಚಿಂತೆ ಮಾಡುತ್ತಾರೆ. ಇವರು ಎಲ್ಲಿಂದ ಜನ್ಮಪಡೆದರು, ಎಷ್ಟೊಂದು ನಷ್ಟ ಮಾಡುತ್ತಿದ್ದಾರೆ
ಎಂದು ಅವರನ್ನು ತುಂಬಾ ನಿಂದನೆ ಮಾಡುತ್ತಾರೆ. ಮೊದಲು ಈ ಮಾತುಗಳ ನಿಯಮವಿರುತ್ತಿತ್ತು. ಈಗಂತೂ
100% ತಮೋಪ್ರಧಾನವಾಗಿದೆ. ಅವಶ್ಯವಾಗಿ ಮಾಯೆಯ ಪ್ರಭಾವವು ಬಹಳಷ್ಟಿದೆ. ಮಾಯೆಯ ಪ್ರಭಾವವು
ಹೆಚ್ಚಾಗಿದೆ. ಪರಮಪಿತ ಪರಮಾತ್ಮನ ಮಕ್ಕಳೊಂದಿಗೂ ಮಾಯೆಯ ಯುದ್ಧವು ಒಮ್ಮೆಲೆ ನಡೆಯುತ್ತದೆ. ತಂದೆಯು
ಹೇಳುತ್ತಾರೆ - ಇವರು ನನ್ನ ಮಕ್ಕಳು, ನಾನು ಇವರನ್ನು ಸ್ವರ್ಗಕ್ಕೆ ಕರೆದೊಯ್ಯುತ್ತೇನೆ, ಮಾಯೆಯು
ಹೇಳುತ್ತದೆ - ಇವರು ನನ್ನ ಮಕ್ಕಳು, ನಾನು ಇವರನ್ನು ನರಕದಲ್ಲಿ ಕರೆದೊಯ್ಯುತ್ತೇನೆ. ಇಲ್ಲಿ
ಧರ್ಮರಾಜನು ತಂದೆಯ ಜೊತೆಯಲ್ಲಿದ್ದಾರೆ. ಆದ್ದರಿಂದ ಯಾರು ಗೃಹಸ್ಥ ವ್ಯವಹಾರದಲ್ಲಿರುತ್ತಾ
ಪವಿತ್ರವಾಗಿರುತ್ತಾರೆಯೋ ಅವರು ಅನ್ಯರಿಗೆ ತುಂಬಾ ಚೆನ್ನಾಗಿ ತಿಳಿಸಿಕೊಡುತ್ತಾರೆ - ನಾವು ಹೇಗೆ
ಜೊತೆಯಲ್ಲಿದ್ದು ಪವಿತ್ರವಾಗಿರುತ್ತೇವೆ. ತಂದೆಯು ಮಾಡುವಂತಹ ಈ ಕೆಲಸವನ್ನು ಹಠಯೋಗಿ ಸನ್ಯಾಸಿಗಳು
ಮಾಡಲಾಗುವುದಿಲ್ಲ. ಸನ್ಯಾಸಿಗಳು ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ವಿವೇಕಾನಂದರ ಪುಸ್ತಕದ ಮೇಲೆ
ರಾಜಯೋಗವೆಂದು ಬರೆಯಲಾಗಿದೆ. ಆದರೆ ಯಾವುದೇ ನಿವೃತ್ತಿ ಮಾರ್ಗದವರು ರಾಜಯೋಗವನ್ನು ಕಲಿಸಲು
ಸಾಧ್ಯವಿಲ್ಲ ನೀವು ಗೃಹಸ್ಥ ವ್ಯವಹಾರದಲ್ಲಿರುತ್ತಾ ಪವಿತ್ರರಾಗಿದ್ದು ತಿಳಿಸಿಕೊಡುವುದರಿಂದ
ಒಳ್ಳೆಯ ಪ್ರಭಾವ ಬೀರುತ್ತದೆ. ದೆಹಲಿಯಲ್ಲಿ ವನಮಹೋತ್ಸವವನ್ನು ಕುರಿತು ಸಮ್ಮೇಳನ ನಡೆಯುತ್ತಿದೆ
ಎಂದು ತಂದೆಯು ಸಮಾಚಾರ ಪತ್ರಿಕೆಯಲ್ಲಿ ನೋಡಿದ್ದರು. ಆ ವನಮಹೋತ್ಸವವನ್ನು ಕುರಿತು ಹೇಗೆ
ತಿಳಿಸಿಕೊಡಬೇಕೆಂದು ನೀವು ವಿಚಾರ ಮಾಡುತ್ತೀರಿ. ಆದರೆ ಈ ಮಾನವ ವಂಶವೃಕ್ಷದ ಬಗ್ಗೆ ಎಂದಾದರೂ
ವಿಚಾರ ಮಾಡಿದ್ದೀರಾ, ಈ ಮನುಷ್ಯ ಸೃಷ್ಟಿಯು ಹೇಗಾಗುತ್ತದೆ, ಹೇಗೆ ಪಾಲನೆಯಾಗುತ್ತದೆ.
ಮಕ್ಕಳು ಅಷ್ಟೊಂದು
ವಿಶಾಲಬುದ್ಧಿಯವರಾಗಿಲ್ಲ, ಅಷ್ಟೊಂದು ಗಮನವಿಲ್ಲ. ಒಂದಲ್ಲ ಒಂದು ಖಾಯಿಲೆಗಳಿಗೆ ಒಳಗಾಗಿದ್ದಾರೆ.
ಲೌಕಿಕದ ಮನೆಯಲ್ಲೂ ಸಹೋದರ-ಸಹೋದರಿಗೆ ಯಾವುದೇ ಅಶುದ್ಧ ವಿಚಾರಗಳು ಬರುವುದಿಲ್ಲ. ಇಲ್ಲಿಯೂ ಸಹ
ನೀವೆಲ್ಲರೂ ಒಬ್ಬ ತಂದೆಯ ಮಕ್ಕಳು ಸಹೋದರ-ಸಹೋದರಿಯರು, ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ.
ಒಂದುವೇಳೆ ಅಶುದ್ಧ ವಿಚಾರಗಳು ಬಂದರೆ ಅದಕ್ಕೆ ಏನೆಂದು ಹೇಳಬೇಕು? ಯಾರು ನರಕದಲ್ಲಿರುವರೋ
ಅವರಿಗಿಂತಲೂ ಸಾವಿರಪಟ್ಟು ಕನಿಷ್ಠರೆಂದು ಹೇಳಬೇಕಾಗುತ್ತದೆ. ಆದುದರಿಂದ ನೀವು ಮಕ್ಕಳ ಮೇಲೆ ಬಹಳ
ಜವಾಬ್ದಾರಿಯಿದೆ. ಅದರಲ್ಲಿಯೂ ಯಾರು ಗೃಹಸ್ಥ ವ್ಯವಹಾರದಲ್ಲಿದ್ದು ಯಾರು ಪವಿತ್ರರಾಗಿರುತ್ತಾರೆಯೋ
ಅವರದು ಪರಿಶ್ರಮದ ಕಾರ್ಯವಾಗಿದೆ. ಪ್ರಪಂಚವು ಈ ಮಾತುಗಳನ್ನು ತಿಳಿದುಕೊಂಡಿಲ್ಲ. ತಂದೆಯು ಬರುವುದೇ
ಪಾವನ ಮಾಡುವ ಸಲುವಾಗಿ, ಅವಶ್ಯವಾಗಿ ಮಕ್ಕಳು ರಕ್ಷಾಬಂಧನವನ್ನು ಕಟ್ಟಿಸಿಕೊಂಡು ಪ್ರತಿಜ್ಞೆ
ಮಾಡುತ್ತಾರೆ, ಇಲ್ಲಿಯೂ ಬಹಳಷ್ಟು ಪರಿಶ್ರಮವಿದೆ. ವಿವಾಹಿತರಾಗಿ ಮತ್ತೆ ಪವಿತ್ರರಾಗಿರುವುದು ಅತೀ
ದೊಡ್ಡ ಗುರಿಯಾಗಿದೆ. ಸ್ವಲ್ಪವೂ ಬುದ್ಧಿಯು ಆ ಕಡೆ ಹೋಗಬಾರದು. ವಿವಾಹಿತರಾದ ನಂತರ
ವಿಕಾರಿಗಳಾಗಿಬಿಡುತ್ತಾರೆ. ತಂದೆಯು ಬಂದು ಇದರಿಂದ ನಮ್ಮನ್ನು ರಕ್ಷಿಸುತ್ತಾರೆ. ಶಾಸ್ತ್ರಗಳಲ್ಲಿ
ದ್ರೌಪದಿಯ ಮಾತೂ ಇದೆ. ಈ ಮಾತುಗಳಲ್ಲಿ ಸ್ವಲ್ಪವಾದರೂ ರಹಸ್ಯವಿದೆಯಲ್ಲವೆ. ಈ ಶಾಸ್ತ್ರ
ಮುಂತಾದುವುಗಳಲ್ಲೆ ನಾಟಕದಲ್ಲಿ ನೊಂದಾವಣೆಯಾಗಿದೆ - ಯಾವುದು ಹಿಂದೆ ಆಗಿ ಹೋಗಿರುತ್ತದೆಯೋ ಅದು
ನಾಟಕದಲ್ಲಿ ನೊಂದಾವಣೆಯಾಗಿಬಿಡುತ್ತದೆ, ಅದು ಅವಶ್ಯವಾಗಿ ಪುನರಾವರ್ತನೆಯಾಗುತ್ತದೆ. ನಾಟಕದಲ್ಲಿ
ಜ್ಞಾನಮಾರ್ಗ ಮತ್ತು ಭಕ್ತಿಮಾರ್ಗವು ನೊಂದಾವಣೆಯಾಗಿದೆ. ಈಗ ನಿಮ್ಮ ಬುದ್ಧಿಯು ಬಹಳ ವಿಶಾಲವಾಗಿದೆ.
ಬೇಹದ್ದಿನ ತಂದೆಯ ಬುದ್ಧಿಯಂತೆಯೇ ಶ್ರೀಮತದಂತೆ ನಡೆಯುವ ಅತೀ ಪ್ರೀತಿಯ ಮಕ್ಕಳು ಇದ್ದಾರೆ. ತುಂಬಾ
ಮಕ್ಕಳಿದ್ದಾರೆ. ಇನ್ನೂ ಎಷ್ಟು ಮಕ್ಕಳಾಗುವರೋ ಗೊತ್ತಿಲ್ಲ. ಎಲ್ಲಿಯವರೆಗೆ
ಬ್ರಾಹ್ಮಣ-ಬ್ರಾಹ್ಮಣಿಯಾಗುವುದಿಲ್ಲ ಅಲ್ಲಿಯವರೆಗೆ ತಂದೆಯಿಂದ ಆಸ್ತಿಯನ್ನು ಪಡೆಯುವುದಿಲ್ಲ. ಈಗ
ನೀವು ಬ್ರಹ್ಮಾವಂಶಿಯರೇ ಮತ್ತೆ ಹೋಗಿ ಸೂರ್ಯವಂಶಿ ಅಥವಾ ವಿಷ್ಣುವಂಶಿಯಾಗುತ್ತೀರಿ. ಈಗ
ಶಿವವಂಶಿಯಾಗಿದ್ದೀರಿ. ಶಿವ ತಾತ ಆಗಿದ್ದಾರೆ, ಬ್ರಹ್ಮಾ ತಂದೆಯಾಗಿದ್ದಾರೆ. ಎಲ್ಲಾ ಪ್ರಜೆಗಳಿಗೂ
ಪ್ರಜಾಪಿತ ಒಬ್ಬರೇ ಆಗಿದ್ದಾರೆ. ಯಾವ ಮನುಷ್ಯ ಸೃಷ್ಟಿಯ ವೃಕ್ಷದ ಬೀಜವೂ ಇರಬೇಕು. ಇದರ ಮೊದಲನೆ
ಮನುಷ್ಯನೂ ಇರಬೇಕು, ಅವರಿಗೆ ನ್ಯೂ ಮ್ಯಾನ್ (ಹೊಸ ಮಾನವ) ಎಂದು ಹೇಳುತ್ತಾರೆ. ಹಾಗಾದರೆ ನ್ಯೂ
ಮ್ಯಾನ್ ಯಾರು? ಬ್ರಹ್ಮಾನೆ ಆಗಿರಬೇಕು. ಬ್ರಹ್ಮಾ ಹಾಗೂ ಸರಸ್ವತಿ ಇಬ್ಬರೂ ಹೊಸ ಮಾನವರ ಗಣನೆಯಲ್ಲಿ
ಬರುತ್ತಾರೆ. ಇದರಲ್ಲಿ ಬಹಳ ವಿಶಾಲಬುದ್ಧಿಯು ಬೇಕಾಗುತ್ತದೆ. ಆತ್ಮವು ಓ ಗಾಡ್ ಫಾದರ್, ಓ ಸುಪ್ರೀಂ
ಗಾಡ್ ಫಾದರ್ ಎಂದು ಹೇಳುತ್ತದೆ. ಆತ್ಮವೇ ಹೇಳುತ್ತದೆಯಲ್ಲವೆ. ಆದುದರಿಂದ ಅವರು ಎಲ್ಲರ
ರಚಯಿತನಾಗಿದ್ದಾರೆ. ಅವರು ಶ್ರೇಷ್ಠಾತಿ ಶ್ರೇಷ್ಠನಾಗಿದ್ದಾರೆ. ನಂತರ ಮಾನವ ಸೃಷ್ಟಿಯಲ್ಲಿ ಬನ್ನಿ,
ಈಗ ಅವರಲ್ಲಿ ಶ್ರೇಷ್ಠರು ಯಾರು? ಪ್ರಜಾಪಿತ. ಇದು ಮನುಷ್ಯ ಸೃಷ್ಟಿಯ ವಂಶವೃಕ್ಷವಾಗಿದೆ, ಇದಕ್ಕೆ
ಬ್ರಹ್ಮಾನು ಮುಖ್ಯವಾಗಿದ್ದಾರೆಂದು ಯಾರಾದರೂ ತಿಳಿದುಕೊಳ್ಳಬಹುದು. ಶಿವ ಆತ್ಮಗಳ ತಂದೆಯಾಗಿದ್ದಾರೆ
ಆದರೆ ಬ್ರಹ್ಮಾರವರಿಗೆ ಮನುಷ್ಯ ಸೃಷ್ಟಿಯ ರಚೈತನೆಂದು ಹೇಳಬಹುದು. ಆದರೆ ಅವರು ಯಾರ ಮತದಂತೆ
ರಚಿಸುತ್ತಾರೆ, ತಂದೆಯು ಹೇಳುತ್ತಾರೆ - ನಾನು ಬ್ರಹ್ಮನನ್ನು ದತ್ತು ತೆಗೆದುಕೊಳ್ಳುತ್ತೇನೆ. ಹೊಸ
ಬ್ರಹ್ಮಾ ಎಲ್ಲಿಂದ ಬರುತ್ತಾರೆ? ಬಹಳ ಜನ್ಮಗಳ ಅಂತ್ಯದ ಜನ್ಮದಲ್ಲಿ ನಾನು ಪ್ರವೇಶ ಮಾಡುತ್ತೇನೆ,
ಆಗ ನಾನು ಇವರಿಗೆ ಪ್ರಜಾಪಿತ ಬ್ರಹ್ಮಾ ಎಂದು ಹೆಸರಿಡುತ್ತೇನೆ. ಈಗ ನಾವು ಸತ್ಯವಾಗಿಯೂ ಬ್ರಹ್ಮನ
ಮಕ್ಕಳಾಗಿದ್ದೇವೆಂದು ನೀವು ತಿಳಿದುಕೊಂಡಿದ್ದೀರಿ. ಶಿವತಂದೆಯಿಂದ ಜ್ಞಾನವನ್ನು
ಪಡೆದುಕೊಳ್ಳುತ್ತಿದ್ದೇವೆ, ನಾವು ತಂದೆಯಿಂದ ಪವಿತ್ರತೆ, ಸುಖ, ಶಾಂತಿ, ಆರೋಗ್ಯ, ಸಂಪತ್ತು
ತೆಗೆದುಕೊಳ್ಳಲು ಬಂದಿದ್ದೇವೆ. ಭಾರತದಲ್ಲಿ ನಾವು ಸದಾ ಸುಖಿಗಳಾಗಿದ್ದೆವು ಆದರೆ ಈಗ ಇಲ್ಲ. ಮತ್ತೆ
ತಂದೆಯು ಆ ಆಸ್ತಿಯನ್ನು ಕೊಡುತ್ತಿದ್ದಾರೆ. ಅದಕ್ಕಾಗಿ ಮೊದಲು ಪವಿತ್ರತೆಯು ಮುಖ್ಯವಾಗಿದೆ ಎಂದು
ಮಕ್ಕಳು ತಿಳಿದುಕೊಂಡಿದ್ದೀರಿ. ರಕ್ಷಾಬಂಧನವನ್ನು ಯಾರಿಗೆ ಕಟ್ಟಲಾಗುತ್ತದೆ? ಯಾರು ಅಪವಿತ್ರರಾಗಿ
ಪವಿತ್ರರಾಗುತ್ತೇವೆಂದು ಪ್ರತಿಜ್ಞೆ ಮಾಡುತ್ತಾರೆಯೋ ಅವರಿಗೆ ಕಟ್ಟಲಾಗುತ್ತದೆ. ತಂದೆಯು ಇದು ಅತೀ
ದೊಡ್ಡ ಗುರಿಯಾಗಿದೆ ಎಂದು ತಿಳಿಸುತ್ತಾರೆ. ಮೊದಲಿನಿಂದಲೇ ಯಾರು ಜೋಡಿಯಾಗಿರುತ್ತಾರೆಯೋ ಅವರಿಗೂ
ಸಹ ನಾವು ಹೇಗೆ ಸಹೋದರ-ಸಹೋದರಿಯರಾಗುತ್ತೇವೆಂದು ತಿಳಿಸುತ್ತಾರೆ. ಹೌದು! ಇಂತಹ ಸ್ಥಿತಿಯನ್ನು ಜಮಾ
ಮಾಡಿಕೊಳ್ಳಲು ಸಮಯ ಹಿಡಿಸುತ್ತದೆ. ಮಕ್ಕಳಿಗೂ ಸಹ ಮಾಯೆಯ ಬಿರುಗಾಳಿ ಬಹಳ ಬರುತ್ತದೆ ಎಂದು
ಬರೆಯುತ್ತಾರೆ. ಆದುದರಿಂದ ಗೃಹಸ್ಥ ವ್ಯವಹಾರದಲ್ಲಿದ್ದು ಪವಿತ್ರವಾಗಿರುವ ಮಕ್ಕಳು ಭಾಷಣ ಮಾಡಿದರೆ
ಚೆನ್ನಾಗಿರುತ್ತದೆ ಏಕೆಂದರೆ ಇದು ಹೊಸ ಮಾತಾಗಿದೆ. ಇದು ಸ್ವ-ರಾಜಯೋಗವಾಗಿದೆ. ಇದರಲ್ಲಿಯೂ
ಸನ್ಯಾಸತ್ವವು ಇದೆ. ನಾವು ಗೃಹಸ್ಥ ವ್ಯವಹಾರದಲ್ಲಿದ್ದು ಜೀವನ್ಮುಕ್ತಿ ಅರ್ಥಾತ್ ಸದ್ಗತಿಯನ್ನು
ಪಡೆಯಬೇಕು. ಇದಂತೂ ಜೀವನ ಬಂಧನವಾಗಿದೆ. ನಿಮ್ಮದು ಸ್ವರಾಜ್ಯ ಪದವಿಯಾಗಿದೆ ಆದುದರಿಂದ ಸ್ವಯಂಗೆ
ರಾಜ್ಯ ಬೇಕಾಗುತ್ತದೆ. ಈಗ ಅದರ (ಆತ್ಮದ) ರಾಜ್ಯವಿಲ್ಲ. ಆತ್ಮವೂ ಸಹ ಈ ರೀತಿ ಹೇಳುತ್ತದೆ - ನಾವು
ರಾಜ-ರಾಣಿಯಾಗಿದ್ದೆವು ಈಗ ನಾವು ನಿರ್ಗತಿಕರಾಗಿದ್ದೇವೆ. ನಮ್ಮಲ್ಲಿ ಯಾವುದೇ ಗುಣವಿಲ್ಲ. ಇದನ್ನು
ಆತ್ಮವೇ ಹೇಳುತ್ತದೆಯಲ್ಲವೆ. ಆದುದರಿಂದ ತಮ್ಮನ್ನು ಆತ್ಮ, ಪರಮಾತ್ಮನ ಸಂತಾನನೆಂದು ತಿಳಿಯಬೇಕು.
ನಾವಾತ್ಮ ಸಹೋದರ ಸಹೋದರಿಯರಾಗಿದ್ದೇವೆ. ಅದಕ್ಕಾಗಿ ಪರಸ್ಪರದಲ್ಲಿ ತುಂಬಾ ಪ್ರೀತಿಯಿರಬೇಕು, ನಾವು
ಇಡೀ ಪ್ರಪಂಚವನ್ನು ಪ್ರೀತಿಯಿಂದ ಕೂಡಿದ ಪ್ರಪಂಚವನ್ನಾಗಿ ಮಾಡುತ್ತಿದ್ದೇವೆ. ರಾಮರಾಜ್ಯದಲ್ಲಿ
ಸಿಂಹ ಮತ್ತು ಕುರಿಯು ಒಂದೇ ಜೊತೆಯಲ್ಲಿ ನೀರು ಕುಡಿಯುತ್ತಿತ್ತು, ಎಂದಿಗೂ ಜಗಳವಾಡುತ್ತಿರಲಿಲ್ಲ.
ಅದೇ ರೀತಿ ಮಕ್ಕಳಲ್ಲಿ ಎಷ್ಟೊಂದು ಪ್ರೀತಿಯಿರಬೇಕಾಗಿದೆ. ಅಂತಹ ಸ್ಥಿತಿಯು ನಿಧಾನವಾಗಿ ಬರುತ್ತದೆ.
ತುಂಬಾ ಜಗಳವೂ ಮಾಡುತ್ತಾರೆ, ಪಾರ್ಲಿಮೆಂಟ್ನಲ್ಲಿ ಒಬ್ಬರಿಗೊಬ್ಬರು ಕುರ್ಚಿ ತೆಗೆದುಕೊಂಡು ಹೊಡೆಯಲು
ಹೋಗುತ್ತಾರೆ. ಅದಂತೂ ಅಸುರೀ ಸಭೆಯಾಗಿದೆ, ನಿಮ್ಮದು ಈಶ್ವರೀಯ ಸಭೆಯಾಗಿರುವ ಕಾರಣ ಎಷ್ಟೊಂದು
ನಶೆಯಿರಬೇಕು. ಆದರೆ ಇದು ಶಾಲೆಯೂ ಆಗಿದೆ. ಆದುದರಿಂದ ಓದುತ್ತಾ ಕೆಲವರು ಮುಂದೆ ಹೋಗುತ್ತಾರೆ,
ಕೆಲವರು ಹಿಂದುಳಿಯುತ್ತಾರೆ. ಈ ಶಾಲೆಯೂ ಸಹ ವಂಡರ್ಪುಲ್ ಶಾಲೆಯಾಗಿದೆ, ಆ ಶಾಲೆಯಲ್ಲಿ ಬೇರೆ-ಬೇರೆ
ಶಿಕ್ಷಕರಿರುತ್ತಾರೆ. ಇಲ್ಲಿ ಶಾಲೆಯೂ ಸಹ ಒಂದೆ, ಶಿಕ್ಷಕರೂ ಸಹ ಒಬ್ಬರೆ ಆಗಿದ್ದಾರೆ. ಆತ್ಮವು
ಶರೀರವನ್ನು ಧಾರಣೆ ಮಾಡಿ ಶಿಕ್ಷಣ ಕೊಡುತ್ತದೆ. ಆತ್ಮನಿಗೆ ಕಲಿಸಲಾಗುತ್ತದೆ - ನಾವಾತ್ಮ ಈ ಶರೀರದ
ಮೂಲಕ ಓದುತ್ತಿದ್ದೇವೆ. ಇಷ್ಟೊಂದು ಆತ್ಮಾಭಿಮಾನಿಯಾಗಬೇಕು. ನಾವು ಆತ್ಮಗಳಾಗಿದ್ದೇವೆ, ಅವರು
ಪರಮಾತ್ಮ ಆಗಿದ್ದಾರೆ. ಇಡೀ ದಿನ ಇದು ಬುದ್ಧಿಯಲ್ಲಿ ವಿಚಾರ ನಡೆಯುತ್ತಿರಬೇಕು. ದೇಹಾಭಿಮಾನದಿಂದಲೇ
ತಪ್ಪುಗಳಾಗುತ್ತಿರುತ್ತವೆ. ತಂದೆಯು ಪದೇ ಪದೇ ಹೇಳುತ್ತಾರೆ - ದೇಹಿ ಅಭಿಮಾನಿಭವ. ದೇಹಾಭಿಮಾನದಲ್ಲಿ
ಬರುವುದರಿಂದ ಮಾಯೆಯ ಯುದ್ಧ ನಡೆಯುತ್ತದೆ. ಈ ಗುರಿಯು ಬಹಳ ದೊಡ್ಡದಾಗಿದೆ. ಎಷ್ಟೊಂದು ವಿಚಾರಸಾಗರ
ಮಂಥನ ಮಾಡಬೇಕಾಗುತ್ತದೆ. ರಾತ್ರಿಯ (ಅಮೃತವೇಳೆ) ವೇಳೆಯಲ್ಲಿ ವಿಚಾರಸಾಗರ ಮಂಥನ ಮಾಡಬಹುದು. ಹೀಗೆ
ವಿಚಾರಸಾಗರ ಮಂಥನ ಮಾಡುತ್ತಾ-ಮಾಡುತ್ತಾ ತಂದೆಯ ಸಮಾನರಾಗುತ್ತಾ ಹೋಗುತ್ತೀರಿ.
ನೀವು ಮಕ್ಕಳು ಎಲ್ಲಾ
ಜ್ಞಾನವನ್ನು ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕು ಮತ್ತು ಗೃಹಸ್ಥ ವ್ಯವಹಾರದಲ್ಲಿದ್ದು ರಾಜಯೋಗವನ್ನು
ಕಲಿಯಬೇಕು. ಇದೆಲ್ಲವೂ ಬುದ್ಧಿಯ ಕೆಲಸವಾಗಿದೆ. ಬುದ್ಧಿಯಲ್ಲಿ ಧಾರಣೆಯಾಗುತ್ತದೆ.
ಗೃಹಸ್ಥದಲ್ಲಿರುವವರಿಗೆ ಬಹಳ ಪರಿಶ್ರಮವಾಗಿದೆ. ಈಗಂತೂ ತಮೋಪ್ರಧಾನವಾಗಿರುವ ಕಾರಣ ತುಂಬಾ
ಕೊಳಕರಾಗಿರುತ್ತಾರೆ. ಮಾಯೆಯು ಎಲ್ಲರನ್ನೂ ಸಮಾಪ್ತಿ ಮಾಡಿಬಿಟ್ಟಿದೆ. ಹಗಿದು ಒಂದೇ ಬಾರಿ
ತಿಂದುಬಿಡುತ್ತದೆ. ತಂದೆಯು ಇಂತಹ ಮಾಯಾ ಹೆಬ್ಬಾವಿನ ಹೊಟ್ಟೆಯಿಂದ ಬಿಡಿಸಲು ಬರುತ್ತಾರೆ.
ಬಿಡಿಸುವುದಂತೂ ಬಹಳ ಕಷ್ಟವಾಗುತ್ತದೆ. ಇದನ್ನು ಗೃಹಸ್ಥ ವ್ಯವಹಾರದಲ್ಲಿ ಇರುವವರು ಮಾಡಿ ತೋರಿಸಬೇಕು.
ನಮ್ಮದು ರಾಜಯೋಗವಾಗಿದೆ ಎಂದು ತಿಳಿಸಬೇಕು. ನಮ್ಮನ್ನು ಬ್ರಹ್ಮಾಕುಮಾರ-ಕುಮಾರಿಯರೆಂದು ಏಕೆ
ಹೇಳಲಾಗುತ್ತದೆ? ಈ ಒಗಟನ್ನು ತಿಳಿದು ಬೇರೆಯವರಿಗೂ ಹೇಳಬೇಕು. ವಾಸ್ತವದಲ್ಲಿ ನೀವೂ ಸಹ
ಬ್ರಹ್ಮಾಕುಮಾರ-ಕುಮಾರಿಯಾಗಿದ್ದೀರಿ. ಪ್ರಜಾಪಿತ ಬ್ರಹ್ಮಾ ಹೊಸ ಸೃಷ್ಟಿಯನ್ನು ರಚಿಸುತ್ತಾರೆ. ಹೊಸ
ಮಾನವನ ಮೂಲಕ ಹೊಸ ಸೃಷ್ಟಿಯನ್ನು ಮಾಡುತ್ತಾರೆ. ವಾಸ್ತವದಲ್ಲಿ ಸತ್ಯಯುಗದ ಮೊದಲನೆ ಮಗುವಿಗೆ
ನ್ಯೂಮ್ಯಾನ್ ಎಂದು ಹೇಳುತ್ತಾರೆ. ಇದು ಎಷ್ಟೊಂದು ಖುಷಿಯ ಮಾತಾಗಿದೆ. ಅಲ್ಲಿ (ಸತ್ಯಯುಗ) ಯಂತೂ
ಖುಷಿಯ ಸಂಗೀತವೇ ಮೊಳಗುತ್ತದೆ. ಅಲ್ಲಿ ಶರೀರ ಹಾಗೂ ಆತ್ಮ ಎರಡೂ ಪವಿತ್ರವಾಗಿರುತ್ತದೆ. ಇಲ್ಲಿ
ಇವರಲ್ಲಿ ಈಗ ತಂದೆಯು ಪ್ರವೇಶ ಮಾಡಿದ್ದಾರೆ. ಈ ಹೊಸಮಾನವ ಪವಿತ್ರರಲ್ಲ, ಹಳೆಯದರಲ್ಲಿ ಕುಳಿತುಕೊಂಡು
ಇವರನ್ನು ಹೊಸ ಮಾನವರನ್ನಾಗಿ ಮಾಡುತ್ತಾರೆ. ಹಳೆಯದನ್ನು ಹೊಸದನ್ನಾಗಿ ಮಾಡುತ್ತಾರೆ. ಹಾಗಾದರೆ ಈಗ
ಹೊಸ ಮನುಷ್ಯರೆಂದು ಯಾರಿಗೆ ಹೇಳುವುದು? ಬ್ರಹ್ಮಾನಿಗೆ ಹೇಳೋಣವೇನು? ಹೀಗೆ ಬುದ್ಧಿಯ ಕೆಲಸ
ನಡೆಯುತ್ತದೆ. ಅವರಿಗೆ ಆಡಂ-ಈವ್ ಯಾರೆಂದು ಗೊತ್ತೇನು? ಶ್ರೀಕೃಷ್ಣ ಹೊಸ ಮಾನವನಾಗಿದ್ದಾನೆ, ಅವರೇ
ಮತ್ತೆ ಹಳೆಯ ಮಾನವ - ಬ್ರಹ್ಮಾನಾಗುತ್ತಾರೆ. ನಂತರ ಹಳೆಯ ಮಾನವ ಬ್ರಹ್ಮನನ್ನು ಹೊಸ ಮಾನವನನ್ನಾಗಿ
ಮಾಡುತ್ತೇನೆ. ಹೊಸಜಗತ್ತಿಗೆ ಹೊಸ ಮನುಷ್ಯ ಬೇಕಾಗುತ್ತದೆ. ಅವರು ಎಲ್ಲಿಂದ ಬರುತ್ತಾರೆ? ಹೊಸ
ಮಾನವನಂತೂ ಸತ್ಯಯುಗದ ರಾಜಕುಮಾರನಾಗಿದ್ದಾನೆ. ಅವರಿಗೆ ಪಾವನರೆಂದು ಹೇಳಲಾಗುತ್ತದೆ. ಆದರೆ ಇವರು
ಪತಿತರಾಗಿದ್ದಾರೆ, ಇವರು ಹೊಸ ಮಾನವರಲ್ಲ. ಅದೇ ಶ್ರೀಕೃಷ್ಣ 84 ಜನ್ಮಗಳನ್ನು
ಪಡೆಯುತ್ತಾ-ಪಡೆಯುತ್ತಾ ಈಗ ಕೊನೆಯ ಜನ್ಮದಲ್ಲಿದ್ದಾರೆ. ಅವರನ್ನು ಮತ್ತೆ ತಂದೆಯು ದತ್ತು
ತೆಗೆದುಕೊಳ್ಳುತ್ತಾರೆ. ಹಳಬರನ್ನು ಹೊಸಬರನ್ನಾಗಿ ಮಾಡುತ್ತಾರೆ, ಇವು ತಿಳಿದುಕೊಳ್ಳಲು ಎಷ್ಟೊಂದು
ರಹಸ್ಯವುಳ್ಳಂತಹ ಮಾತುಗಳಾಗಿವೆ. ಹೊಸದರಿಂದ ಹಳೆಯದು, ಹಳೆಯದರಿಂದ ಹೊಸದು. ಶ್ಯಾಮ ಸೋ ಸುಂದರ,
ಸುಂದರ ಸೋ ಶ್ಯಾಮ. ಯಾರು ಹಳೆಯದರಲ್ಲಿಯೂ ಹಳೆಯವರಾಗಿದ್ದಾರೆಯೋ ಅವರೇ ಹೊಸಬರಲ್ಲಿಯೂ
ಹೊಸಬರಾಗುತ್ತಿದ್ದಾರೆ. ಈಗ ತಂದೆಯು ನಮ್ಮನ್ನು ಮುನರುಜ್ಜೀವನ ಮಾಡಿ ಹೊಸಬರಲ್ಲಿ ಹೊಸಬರನ್ನಾಗಿ
ಮಾಡುತ್ತಾರೆ. ಇವು ತುಂಬಾ ತಿಳಿದುಕೊಳ್ಳುವ ಮಾತುಗಳಾಗಿವೆ ಹಾಗೂ ತಮ್ಮ ಸ್ಥಿತಿಯನ್ನೂ ಸಹ ಶ್ರೇಷ್ಠ
ಮಾಡಿಕೊಳ್ಳಬೇಕು. ಕುಮಾರ-ಕುಮಾರಿಯರಂತೂ ಪವಿತ್ರರೇ ಆಗಿದ್ದಾರೆ. ಉಳಿದಂತೆ ನಾವು
ಗೃಹಸ್ಥದಲ್ಲಿರುತ್ತಾ ಕಮಲಪುಷ್ಫ ಸಮಾನರಾಗುತ್ತೇವೆ. ಸ್ವದರ್ಶನ ಚಕ್ರಧಾರಿಗಳಾಗುತ್ತೇವೆ.
ವಿಷ್ಣುವಂಶೀಯರಿಗೆ ತ್ರಿಕಾಲದರ್ಶಿತನದ ಜ್ಞಾನವಿರುವುದಿಲ್ಲ. ಹಳೆಯ ಮನುಷ್ಯ
ತ್ರಿಕಾಲದರ್ಶಿಗಳಾಗಿದ್ದಾರೆ. ಇದೆಷ್ಟು ವಿಚಿತ್ರವಾದ ಮಾತಾಗಿದೆ. ಹಳೆಯ ಮನುಷ್ಯನೇ ಜ್ಞಾನವನ್ನು
ತೆಗೆದುಕೊಂಡು ಹೊಸ ಮನುಷ್ಯನಾಗುತ್ತಾನೆ. ಇದು ರಾಜಯೋಗ, ಅದು ಹಠಯೋಗವಾಗಿದೆ ಎಂದು ತಂದೆಯು ಕುಳಿತು
ತಿಳಿಸುತ್ತಾರೆ. ರಾಜಯೋಗವೆಂದರೇನೇ ಸ್ವರ್ಗದ ರಾಜ್ಯಭಾಗ್ಯ. ಸನ್ಯಾಸಿಗಳು ಸುಖವನ್ನು ಕಾಗವಿಷ್ಟ
ಸಮಾನ ವೆಂದು ಹೇಳುತ್ತಾರೆ ಮತ್ತು ಅದನ್ನು ತಿರಸ್ಕರಿಸುತ್ತಾರೆ. ಆದರೆ ನಾರಿ ಸ್ವರ್ಗಕ್ಕೆ
ದ್ವಾರವೆಂದು ತಂದೆಯು ಹೇಳುತ್ತಾರೆ. ಮಾತೆಯರ ಮೇಲೆ ಕಳಶವನ್ನಿಡುತ್ತೇನೆ. ಮೊಟ್ಟಮೊದಲು ಶಿವಾಯ ನಮಃ,
ಭಗವಾನುವಾಚವೆಂದು ಹೇಳಿ. ತಂದೆಯ ಸಂದೇಶದ ಘರ್ಜನೆಯನ್ನು ಹೊರಡಿಸಬೇಕಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ
ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ನಾವಾತ್ಮರು
ಸಹೋದರ-ಸಹೋದರರಾಗಿದ್ದೇವೆ ಎನ್ನುವ ನಿಶ್ಚಯದಿಂದ ಪವಿತ್ರತೆಯ ವ್ರತವನ್ನು ಪಾಲನೆ ಮಾಡಿ ಪರಸ್ಪರ
ತುಂಬಾ ಪ್ರೀತಿಯಿಂದ ಇರಬೇಕಾಗಿದೆ. ಎಲ್ಲರನ್ನೂ ಅತೀ ಪ್ರೀಯರನ್ನಾಗಿ ಮಾಡಬೇಕಾಗಿದೆ.
2. ವಿಶಾಲಬುದ್ಧಿಯವರಾಗಿ
ಜ್ಞಾನದ ಗುಹ್ಯ ರಹಸ್ಯಗಳನ್ನು ತಿಳಿಯಬೇಕಾಗಿದೆ, ವಿಚಾರಸಾಗರ ಮಂಥನ ಮಾಡಬೇಕು. ಮಾಯೆಯ ಯುದ್ಧದಿಂದ
ಪಾರಾಗಲು ದೇಹೀ ಅಭಿಮಾನಿಯಾಗುವ ಅಭ್ಯಾಸ ಮಾಡಬೇಕಾಗಿದೆ.
ವರದಾನ:
ಜ್ಞಾನಾಮೃತದ
ಮಳೆಯ ಮುಖಾಂತರ ಹೆಣವನ್ನೂ ಸಹಾ ಮಹಾನ್ ಆಗಿ ಮಾಡುವಂತಹ ಮರಜೀವಾ ಭವ
ಮೊದಲು ಚಿಂತೆಎಂಬ ಚಿತೆಯ
ಮೇಲೆ ಸುಡುತ್ತಿದ್ದಿರಿ, ಈಗ ತಂದೆಯು ಜ್ಞಾನ ಅಮೃತದ ಮಳೆ ಸುರಿಸಿ ಸುಡುತ್ತಿರುವ ಚಿತೆಯಿಂದ ಮರಜೀವಾ
ಮಾಡಿದರು. ಜೀವ ಕೊಟ್ಟರು. ತಂದೆ ಅಮೃತ ಕುಡಿಸಿದರು ಮತ್ತು ಅಮರರನ್ನಾಗಿ ಮಾಡಿದರು. ಮೊದಲು
ಸತ್ತಿರುವ ಹೆಣದಂತಿದ್ದಿರಿ ಮತ್ತು ಈಗ ಹೆಣದಿಂದ ಮಹಾನ್ ಆದಿರಿ. ಮೊದಲು ಹೇಳುತ್ತಿದ್ದಿರಿ ಭಗವಂತನು
ಸತ್ತಿರುವ ಹೆಣವನ್ನೂ ಸಹ ಜೀವಂತವಾಗಿ ಮಾಡುತ್ತಾರೆ ಎಂದು ಆದರೆ ಹೇಗೆ ಮಾಡುತ್ತಾರೆ, ಅದು
ತಿಳಿದಿರಲಿಲ್ಲ, ಈಗ ಖುಷಿಯಾಗಿದೆ ತಂದೆ ಈಗ ಉರಿಯುತ್ತಿರುವ ಚಿತೆಯಿಂದ ನಮ್ಮನ್ನು ತೆಗೆದು
ಅಮರರನ್ನಾಗಿ ಮಾಡಿದರು.
ಸ್ಲೋಗನ್:
ಧರ್ಮದಲ್ಲಿ
ಸ್ಥಿತರಾಗಿ ಕರ್ಮ ಮಾಡುವವರೇ ಧರ್ಮಾತ್ಮರಾಗಿದ್ದಾರೆ.