01.12.19    Avyakt Bapdada     Kannada Murli     15.03.85     Om Shanti     Madhuban


ಪರಿಶ್ರಮದಿಂದ ಮುಕ್ತರಾಗುವ ಸಹಜ ಸಾಧನ - ನಿರಾಕಾರಿ ಸ್ವರೂಪದ ಸ್ಥಿತಿ


ಬಾಪ್ದಾದಾರವರು ಮಕ್ಕಳ ಸ್ನೇಹದಲ್ಲಿ, ವಾಣಿಯಿಂದ ಭಿನ್ನ ನಿರ್ವಾಣ ಸ್ಥಿತಿಯಿಂದ ವಾಣಿಯಲ್ಲಿ ಬರುತ್ತಾರೆ. ಏತಕ್ಕಾಗಿ? ಮಕ್ಕಳನ್ನು ತನ್ನ ಸಮಾನ ನಿರ್ವಾಣ ಸ್ಥಿತಿಯ ಅನುಭವ ಮಾಡಿಸುವುದಕ್ಕಾಗಿ. ನಿರ್ವಾಣ ಮಧುರ ಮನೆಯಲ್ಲಿ ಕರೆದುಕೊಂಡು ಹೋಗುವುದಕ್ಕಾಗಿ. ನಿರ್ವಾಣ ಸ್ಥಿತಿಯು ನಿರ್ವಿಕಾರಿ ಸ್ಥಿತಿಯಾಗಿದೆ. ನಿರ್ವಾಣ ಸ್ಥಿತಿಯು ನಿರ್ವಿಕಾರಿ ಸ್ಥಿತಿಯಾಗಿದೆ. ನಿರ್ವಾಣ ಸ್ಥಿತಿಯಿಂದ ನಿರಾಕಾರಿ, ನಿರಾಕಾರಿಯಿಂದ ಸಾಕಾರ ಸ್ವರೂಪಧಾರಿಯಾಗಿ ವಾಣಿಯಲ್ಲಿ ಬರುತ್ತಾರೆ. ಸಾಕಾರದಲ್ಲಿ ಬರುತ್ತಿದ್ದರೂ ನಿರಾಕಾರ ಸ್ವರೂಪದ ಸ್ಥಿತಿಯು ಸ್ಮೃತಿಯಲ್ಲಿರುತ್ತದೆ. ನಾನು ನಿರಾಕಾರನು ಸಾಕಾರದ ಆಧಾರದಿಂದ ಮಾತನಾಡುತ್ತಿರುವೆನು. ಸಾಕಾರದಲ್ಲಿದ್ದರೂ ನಿರಾಕಾರಿ ಸ್ಥಿತಿಯ ಸ್ಮೃತಿಯಿರಬೇಕಾಗಿದೆ. ಇದಕ್ಕೆ ನಿರಾಕಾರ ಸೋ ಸಾಕಾರದ ಮೂಲಕ ವಾಣಿಯಲ್ಲಿ ಮತ್ತು ಕರ್ಮದಲ್ಲಿ ಬರುವುದೆಂದು ಹೇಳಲಾಗುತ್ತದೆ. ಮೂಲ ಸ್ವರೂಪವು ನಿರಾಕಾರಿಯಾಗಿರುವುದು, ಸಾಕಾರವು ಆಧಾರವಾಗಿದೆ. ಈ ಡಬಲ್ ಸ್ಮೃತಿಯು ನಿರಾಕಾರನಿಂದ ಸಾಕಾರ, ಶಕ್ತಿಶಾಲಿ ಸ್ಥಿತಿಯಾಗಿದೆ. ಸಾಕಾರದ ಆಧಾರವನ್ನು ಪಡೆದುಕೊಂಡರೂ ನಿರಾಕಾರ ಸ್ವರೂಪವನ್ನು ಮರೆಯಬಾರದು. ಮರೆಯುತ್ತೀರಿ, ಆದ್ದರಿಂದ ನೆನಪು ಮಾಡುವ ಪರಿಶ್ರಮ ಪಡಬೇಕಾಗುತ್ತದೆ. ಹೇಗೆ ಲೌಕಿಕ ಜೀವನದಲ್ಲಿ ನಿಮ್ಮ ಶಾರೀರಿಕ ಸ್ವರೂಪವು ಸದಾ ಸ್ವತಹವಾಗಿಯೇ ನೆನಪಿರುತ್ತದೆ, ನಾನು ಇಂತಹವನು, ಈ ಸಮಯದಲ್ಲಿ ಈ ಕಾರ್ಯವನ್ನು ಮಾಡುತ್ತಿದ್ದೇನೆ ಅಥವಾ ಮಾಡಿಸುತ್ತಿದ್ದೇನೆ ಎಂದು ನೆನಪಿರುತ್ತದೆ. ಕಾರ್ಯವು ಬದಲಾಗಬಹುದು, ಆದರೆ ನಾನು ಇಂತಹವನು ಎನ್ನುವುದನ್ನು ಮರೆಯುವುದಿಲ್ಲ ಮತ್ತು ಬದಲಾಗುವುದಿಲ್ಲ. ಹಾಗೆಯೇ ನಾನು ನಿರಾಕಾರ ಆತ್ಮನಾಗಿರುವೆನು, ಈ ಮೂಲ ಸ್ವರೂಪವನ್ನು ಯಾವುದೇ ಕಾರ್ಯವನ್ನು ಮಾಡುತ್ತಿದ್ದರೂ ಸ್ವತಹ ಮತ್ತು ಸದಾ ನೆನಪಿರಬೇಕು. ಒಮ್ಮೆ ಸ್ಮೃತಿ ಬಂದಿತೆಂದರೆ ಪರಿಚಯವೂ ಸಿಕ್ಕಿ ಬಿಟ್ಟಿತು. ನಾನು ನಿರಾಕಾರ ಆತ್ಮನಾಗಿರುವೆನು ಎಂದು. ಪರಿಚಯವೆಂದರೆ ಜ್ಞಾನವೆಂದು, ಜ್ಞಾನದ ಶಕ್ತಿಯ ಮೂಲಕ ಸ್ವರೂಪವನ್ನು ತಿಳಿದುಕೊಂಡೆವು, ತಿಳಿದ ನಂತರ ಮತ್ತೆ ಮರೆಯಲು ಹೇಗೆ ಸಾಧ್ಯ? ಹೇಗೆ ಜ್ಞಾನದ ಶಕ್ತಿಯಿಂದ ಶರೀರದ ಸ್ಮೃತಿಯನ್ನು ಮರೆತರೂ ಮರೆಯುವುದಿಲ್ಲ, ಹಾಗೆಯೇ ಆತ್ಮಿಕ ಸ್ವರೂಪವನ್ನು ಮರೆಯಲು ಹೇಗೆ ಸಾಧ್ಯ. ಈಗ ತಮ್ಮನ್ನು ತಾವು ಕೇಳಿಕೊಳ್ಳಿರಿ ಮತ್ತು ಅಭ್ಯಾಸ ಮಾಡಿರಿ-ನಡೆಯುತ್ತಾ-ತಿರುಗಾಡುತ್ತಾ, ಕಾರ್ಯವನ್ನು ಮಾಡುತ್ತಾ ಪರಿಶೀಲಿಸಿಕೊಳ್ಳಬೇಕು - ನಿರಾಕಾರನಿಂದ ಸಾಕಾರದ ಆಧಾರವನ್ನು ಪಡೆದುಕೊಂಡು ಈ ಕಾರ್ಯವನ್ನು ಮಾಡುತ್ತಿದ್ದೇನೆ! ಆಗ ಸ್ವತಹವಾಗಿಯೇ ನಿರ್ವಿಕಲ್ಪ ಸ್ಥಿತಿ, ನಿರಾಕಾರಿ ಸ್ಥಿತಿ, ನಿರ್ವಿಘ್ನ ಸ್ಥಿತಿಯು ಸಹಜವಾಗಿ ಇರುತ್ತದೆ, ಪರಿಶ್ರಮದಿಂದ ಮುಕ್ತರಾಗುತ್ತೇವೆ. ಪರಿಶ್ರಮವೆಂದು ಯಾವಾಗ ಅನಿಸುತ್ತದೆಯೋ, ಆಗಲೇ ಪದೇ-ಪದೇ ಮರೆಯುತ್ತೇವೆ. ನಂತರ ನೆನಪು ಮಾಡುವ ಪರಿಶ್ರಮ ಪಡಬೇಕಾಗುತ್ತದೆ. ಅದನ್ನು ಮರೆಯಲೇಬಾರದು, ಮರೆಯಬೇಕೇ? ಬಾಪ್ದಾದಾರವರು ಕೇಳುತ್ತಾರೆ- ತಾವು ಯಾರು? ಸಾಕಾರಿಯೇ ಅಥವಾ ನಿರಾಕಾರಿಯೇ? ನಿರಾಕಾರನಲ್ಲವೇ! ನಿರಾಕಾರನಾಗಿದ್ದರೂ ಹೇಗೆ ಮರೆಯುತ್ತೀರಿ! ಮೂಲ ಸ್ವರೂಪವನ್ನು ಮರೆತು ಹೋಗುತ್ತೀರಿ ಮತ್ತು ಆಧಾರವು ನೆನಪಿರುತ್ತದೆಯೇ? ನಾನು ಏನು ಮಾಡುತ್ತಿದ್ದೇನೆ ಎಂದು ಸ್ವಯಂನ ಮೇಲೆ ಸ್ವಯಂಗೆ ನಗು ಬರುವುದಿಲ್ಲವೇ? ಮೂಲವನ್ನು ಮರೆಯುತ್ತೀರಿ ಮತ್ತು ನಕಲಿ ವಸ್ತುವಿನ ನೆನಪು ಬರುತ್ತದೆಯೇ? ಬಾಪ್ದಾದಾರವರಿಗೆ ಕೆಲವೊಮ್ಮೆ ಮಕ್ಕಳ ಪ್ರತಿ ಆಶ್ಚರ್ಯವೆನಿಸುತ್ತದೆ. ತಮ್ಮನ್ನು ತಾವು ಮರೆಯುತ್ತೀರಿ ಮತ್ತು ಮರೆತ ನಂತರ ಏನು ಮಾಡುವಿರಿ? ತಮ್ಮನ್ನು ತಾವು ಮರೆತು ತೊಂದರೆಗೊಳಗಾಗುತ್ತೀರಿ. ಹೇಗೆ ತಂದೆಯನ್ನು ಸ್ನೇಹದಿಂದ ನಿರಾಕಾರದಿಂದ ಸಾಕಾರದಲ್ಲಿ ಆಹ್ವಾನ ಮಾಡುತ್ತೀರಿ, ಅದರಲ್ಲಿ ಸ್ನೇಹವಿರುತ್ತದೆ. ಹಾಗೆಯೇ ನಿರಾಕಾರಿ ಸ್ಥಿತಿಯಲ್ಲಿ ಸ್ಥಿತರಾಗಲು ಸಾಧ್ಯವಿಲ್ಲವೇ! ಬಾಪ್ದಾದಾರವರು ಮಕ್ಕಳ ಪರಿಶ್ರಮವನ್ನು ನೋಡಲು ಬಯಸುವುದಿಲ್ಲ. ಮಾ|| ಸರ್ವಶಕ್ತಿವಂತರು, ಮತ್ತೆ ಪರಿಶ್ರಮ ಪಡುವುದೇ? ಮಾ|| ಸರ್ವಶಕ್ತಿವಂತನು ಸರ್ವಶಕ್ತಿಗಳ ಮಾಲೀಕನಾಗಿರುತ್ತಾನೆ. ಯಾವ ಶಕ್ತಿಯನ್ನು ಯಾವ ಸಮಯದಲ್ಲಿ ಶುಭ ಸಂಕಲ್ಪದಿಂದ ಆಹ್ವಾನ ಮಾಡುತ್ತೇವೆಯೋ, ಆ ಶಕ್ತಿಯು ತಾವು ಮಾಲೀಕನ ಮುಂದೆ ಉಪಸ್ಥಿತನಾಗಿ ಬಿಡುತ್ತದೆ. ಹಾಗೆಯೇ ಮಾಲೀಕನು, ಸರ್ವಶಕ್ತಿಗಳ ಮಾಲೀಕನಾಗಿರುವವರು ಪರಿಶ್ರಮ ಪಡುತ್ತಾರೆಯೇ ಅಥವಾ ಶುಭ ಸಂಕಲ್ಪದಿಂದ ಆಹ್ವಾನ ಮಾಡುತ್ತಾರೆಯೋ? ಏನು ಮಾಡುವರು? ರಾಜರಾಗಿದ್ದೀರಾ ಅಥವಾ ಪ್ರಜೆಯೇ? ಹಾಗೆಯೇ ಯಾರು ಯೋಗ್ಯ ಮಕ್ಕಳಿರುತ್ತಾರೆಯೋ ಅವರು ಏನು ಹೇಳುತ್ತಾರೆ? ರಾಜಾ ಮಕ್ಕಳು ಎಂದು ಹೇಳುತ್ತಾರಲ್ಲವೇ? ಹಾಗಾದರೆ ತಾವು ಯಾರಾಗಿದ್ದೀರಿ? ರಾಜಾ ಮಕ್ಕಳೋ ಅಥವಾ ಅಧೀನವಾಗಿರುವ ಮಕ್ಕಳೋ? ಅಧಿಕಾರಿ ಆತ್ಮರಲ್ಲವೇ? ಈ ಶಕ್ತಿಗಳು, ಗುಣ ಎಲ್ಲವೂ ತಮ್ಮ ಸೇವಾಧಾರಿಗಳಾಗಿದೆ. ತಾವು ಆಹ್ವಾನ ಮಾಡುತ್ತೀರೆಂದರೆ ಅವು ಉಪಸ್ಥಿತವಾಗಿ ಬಿಡುತ್ತದೆ. ಯಾರು ದುರ್ಬಲರಾಗಿರುತ್ತಾರೆಯೋ, ಅವರ ಬಳಿ ಶಕ್ತಿಶಾಲಿ ಶಸ್ತ್ರಗಳಿದ್ದರೂ ಸಹ ದುರ್ಬಲತೆಯ ಕಾರಣದಿಂದ ಸೋಲುತ್ತಾರೆ. ತಾವು ದುರ್ಬಲರಾಗಿದ್ದೀರಾ? ಬಹದ್ದೂರ್ ಮಕ್ಕಳಲ್ಲವೇ! ಸರ್ವಶಕ್ತಿವಂತನ ಮಕ್ಕಳು ದುರ್ಬಲರೆಂದರೆ ಜಗತ್ತೇನು ಹೇಳುತ್ತದೆ! ಎಲ್ಲರೂ ಏನು ಹೇಳುವರು! ಇದು ಚೆನ್ನಾಗಿದೆಯೇ? ಹೀಗೆ ಆಹ್ವಾನ ಮಾಡುತ್ತಾ ಆದೇಶ ಮಾಡುವುದನ್ನು ಕಲಿಯಿರಿ. ಆದರೆ ಸೇವಾಧಾರಿಗಳು ಯಾರ ಆದೇಶವನ್ನು ಒಪ್ಪುತ್ತದೆ? ಯಾರ ಮಾಲೀಕನಾಗಿರುವರೋ ಅವರ ಆದೇಶವನ್ನು ಒಪ್ಪುತ್ತದೆ. ಮಾಲೀಕನೇ ಸ್ವಯಂ ಸೇವಾಧಾರಿಯಾದರೆ, ಪರಿಶ್ರಮ ಪಡುವವರು ಸೇವಾಧಾರಿಗಳಾದರಲ್ಲವೇ! ಈಗ ಮನಸ್ಸಿನ ಪರಿಶ್ರಮದಿಂದ ಮುಕ್ತರಾಗಿದ್ದೀರಾ? ಶಾರೀರಿಕ ಪರಿಶ್ರಮ ಪಡುವುದು - ಅದು ಯಜ್ಞ ಸೇವೆಯಲ್ಲಿ ಬೇರೆ ಮಾತಾಗಿದೆ. ಯಜ್ಞ ಸೇವೆಯ ಮಹತ್ವವನ್ನು ತಿಳಿದುಕೊಂಡಿರುವುದರಿಂದ ಪರಿಶ್ರಮವೆನಿಸುವುದಿಲ್ಲ. ಇಂದು ಮಧುಬನದಲ್ಲಿ ಸಂಪರ್ಕದಲ್ಲಿ ಬರುವಂತಹ ಆತ್ಮರು ಬರುತ್ತಾರೆ ಮತ್ತು ನೋಡುತ್ತಾರೆ - ಇಷ್ಟೂ ಸಂಖ್ಯೆಯಲ್ಲಿನ ಆತ್ಮರ ಭೋಜನ ತಯಾರಿಯನ್ನು ನೋಡುತ್ತಾ, ಮತ್ತು ಸರ್ವ ಕಾರ್ಯಗಳು ನಡೆಯುತ್ತಿರುವುದನ್ನು ನೋಡಿ-ನೋಡಿ ತಿಳಿದುಕೊಳ್ಳುತ್ತಾರೆ - ಇವರು ಇಷ್ಟು ಕಷ್ಟದ ಕಾರ್ಯಗಳನ್ನು ಹೇಗೆ ಮಾಡುವರು! ಅವರು ಗಳಿಗೆ ಬಹಳ ಆಶ್ಚರ್ಯವೆನಿಸುತ್ತದೆ, ಇಷ್ಟು ದೊಡ್ಡ ಕಾರ್ಯವು ಹೇಗೆ ನಡೆಯುತ್ತಿದೆ! ಆದರೆ ಮಾಡುವವರೂ ಸಹ ಈ ದೊಡ್ಡ ಕಾರ್ಯವನ್ನು ಏನೆಂದು ತಿಳಿಯುವಿರಿ? ಸೇವೆಯ ಮಹತ್ವಿಕೆಯ ಕಾರಣದಿಂದ ಇದು ಆಟವೆನಿಸುತ್ತದೆ. ಪರಿಶ್ರಮವಾಗುವುದಿಲ್ಲ. ಇಂತಹ ಮಹತ್ವಿಕೆಯ ಕಾರಣದಿಂದ, ತಂದೆಯೊಂದಿಗೆ ಪ್ರೀತಿಯಿರುವ ಕಾರಣ ಪರಿಶ್ರಮದ ರೂಪವು ಬದಲಾಗುವುದು. ಹಾಗೆಯೇ ಮನಸ್ಸಿನ ಪರಿಶ್ರಮದಿಂದ ಮುಕ್ತರಾಗುವ ಸಮಯವು ಈಗ ಬಂದು ಬಿಟ್ಟಿದೆ. ದ್ವಾಪರದಿಂದ ಹುಡುಕುತ್ತಾ, ಬಳಲುತ್ತಾ, ಕರೆಯುತ್ತಾ, ಮನಸ್ಸಿನಿಂದ ಪರಿಶ್ರಮ ಪಡುತ್ತಾ ಬಂದಿದ್ದೀರಿ. ಮನಸ್ಸಿನ ಪರಿಶ್ರಮದ ಕಾರಣದಿಂದ ಧನ ಸಂಪಾದನೆಯಲ್ಲಿಯೂ ಪರಿಶ್ರಮವು ಹೆಚ್ಚಾಯಿತು. ಇಂದು ಯಾರನ್ನೇ ಕೇಳಿದರೂ ಏನು ಹೇಳುವರು? ಧನ ಸಂಪಾದನೆಯು ಚಿಕ್ಕಮ್ಮನ ಮನೆಯಂತಲ್ಲ. ಮನಸ್ಸಿನ ಪರಿಶ್ರಮದಿಂದ ಧನದ ಸಂಪಾದನೆಯ ಪರಿಶ್ರಮವೂ ಹೆಚ್ಚಾಗಿ ಬಿಟ್ಟಿದೆ ಮತ್ತು ತನುವಿನಿಂದಲೂ ರೋಗಿಯಾಗಿದ್ದೀರಿ. ಆದ್ದರಿಂದ ತನುವಿನ ಕಾರ್ಯದಲ್ಲಿಯೂ ಪರಿಶ್ರಮ, ಮನಸ್ಸಿನಲ್ಲಿಯೂ ಪರಿಶ್ರಮ, ಧನದಲ್ಲಿಯೂ ಪರಿಶ್ರಮ. ಕೇವಲ ಇಷ್ಟೇ ಅಲ್ಲ, ಆದರೆ ಇಂದು ಪರಿವಾರದಲ್ಲಿಯೂ ಪ್ರೀತಿ ನಿಭಾಯಿಸುವುದರಲ್ಲಿಯೂ ಪರಿಶ್ರಮವಾಗಿ ಬಿಟ್ಟಿದೆ. ಕೆಲವೊಮ್ಮೆ ಒಬ್ಬರು ಮುನಿಸಿಕೊಂಡರೆ ಮತ್ತೊಮ್ಮೆ ಇನ್ನೊಬ್ಬರು ಮುನಿಸಿಕೊಳ್ಳುತ್ತಾರೆ. ಮತ್ತೆ ಅವರನ್ನು ಸಂತೈಸುವಂತಹ ಪರಿಶ್ರಮ ಪಡಬೇಕಾಗುತ್ತದೆ. ಇಂದು ನಿಮ್ಮದಾಗಿದೆ, ನಾಳೆ ನಿಮ್ಮದಲ್ಲ, ಅದು ಸುತ್ತಿಕೊಂಡು ಬರುತ್ತದೆ. ಸರ್ವ ಪ್ರಕಾರದ ಪರಿಶ್ರಮ ಪಟ್ಟು ಸುಸ್ತಾಗಿ ಬಿಟ್ಟಿದ್ದೀರಲ್ಲವೆ! ತನುವಿನಿಂದ, ಮನಸ್ಸಿನಿಂದ, ಧನದಿಂದ, ಸಂಬಂಧದಿಂದ, ಎಲ್ಲದರಲ್ಲಿಯೂ ಸುಸ್ತಾಗಿ ಬಿಟ್ಟಿದ್ದೀರಿ.

ಬಾಪ್ದಾದಾರವರು ಮೊದಲು ಮನಸ್ಸಿನ ಪರಿಶ್ರಮವನ್ನು ಸಮಾಪ್ತಿ ಮಾಡುತ್ತಾರೆ. ಏಕೆಂದರೆ ಮನಸ್ಸು ಬೀಜವಾಗಿದೆ. ಮನಸ್ಸಿನ ಪರಿಶ್ರಮವು ತನುವಿನ, ಧನದ ಪರಿಶ್ರಮವನ್ನು ಅನುಭವ ಮಾಡಿಸುತ್ತದೆ. ಯಾವಾಗ ಮನಸ್ಸು ಬೇಸರವಾಗಿರುತ್ತದೆಯೋ, ಯಾವುದೇ ಕಾರ್ಯವಿದ್ದರೂ ಸಹ ಹೇಳುತ್ತೀರಿ - ಇಂದು ಇದಾಗುವುದಿಲ್ಲ ಎಂದು. ರೋಗವಿರುವುದಿಲ್ಲ ಆದರೆ ನನಗೆ 103 ಡಿಗ್ರಿ ಜ್ವರವಿದೆಯೆಂದು ತಿಳಿದುಕೊಳ್ಳುತ್ತೀರಿ. ಮನಸ್ಸಿನ ಪರಿಶ್ರಮವು ತನುವಿನ ಪರಿಶ್ರಮವನ್ನು ಅನುಭವ ಮಾಡಿಸುತ್ತದೆ, ಧನದಿಂದಲೂ ಹಾಗೆಯೇ ಆಗುತ್ತದೆ. ಮನಸ್ಸು ಸ್ವಲ್ಪ ಹಾಳಾದರೆ ಹೇಳುತ್ತೀರಿ- ಇಂದು ತುಂಬಾ ಕಾರ್ಯವನ್ನು ಮಾಡಬೇಕಾಗಿದೆ. ಸಂಪಾದನೆ ಮಾಡಲು ತುಂಬಾ ಕಷ್ಟವಾಗಿದೆ. ವಾಯುಮಂಡಲವು ಹಾಳಾಗಿದೆ. ಎಂದೇ ಮನಸ್ಸು ಖುಷಿಯಾಗಿದ್ದರೆ ಆಗ ಹೇಳುವುದು - ಇದೇನೂ ದೊಡ್ಡ ಮಾತಲ್ಲ. ಕಾರ್ಯವು ಅದೇ ಇರುತ್ತದೆ ಆದರೆ ಮನಸ್ಸಿನ ಪರಿಶ್ರಮವು ಧನದ ಪರಿಶ್ರಮವನ್ನು ಅನುಭವ ಮಾಡಿಸುತ್ತದೆ. ಮನಸ್ಸಿನ ದುರ್ಬಲತೆಯು ವಾಯುಮಂಡಲವನ್ನೂ ದುರ್ಬಲತೆಯಲ್ಲಿ ತರುತ್ತದೆ. ಬಾಪ್ದಾದಾರವರು ಮಕ್ಕಳ ಮನಸ್ಸಿನ ಪರಿಶ್ರಮವನ್ನು ನೋಡಲು ಬಯಸುವುದಿಲ್ಲ. 63 ಜನ್ಮಗಳಿಂದ ಪರಿಶ್ರಮ ಪಟ್ಟಿರಿ, ಈಗ ಈ ಒಂದು ಜನ್ಮವು ಮೋಜಿನ ಜನ್ಮವಾಗಿದೆ, ಪ್ರಿಯವಾದ ಜನ್ಮವಾಗಿದೆ, ಪ್ರಾಪ್ತಿಗಳ ಜನ್ಮವಾಗಿದೆ, ವರದಾನಗಳ ಜನ್ಮವಾಗಿದೆ. ಸಹಯೋಗವನ್ನು ಪಡೆಯುವ ಮಿಲನದ ಜನ್ಮವಾಗಿದೆ. ಅಂದಾಗ ಈ ಜನ್ಮದಲ್ಲಿ ಪರಿಶ್ರಮವೇಕೆ ಇದೆ? ಈಗ ಪರಿಶ್ರಮವನ್ನು ಪ್ರೀತಿಯಲ್ಲಿ ಪರಿವರ್ತನೆ ಮಾಡಿರಿ. ಮಹತ್ವಿಕೆಯನ್ನಿಟ್ಟು ಅದನ್ನು ಸಮಾಪ್ತಿ ಮಾಡಿರಿ.

ಇಂದು ಬಾಪ್ದಾದಾರವರು ಪರಸ್ಪರದಲ್ಲಿ ಮಕ್ಕಳ ಪರಿಶ್ರಮದ ಬಗ್ಗೆ ಬಹಳ ವಾರ್ತಾಲಾಪ ಮಾಡುತ್ತಿದ್ದರು. ಮಕ್ಕಳು ಏನು ಮಾಡುತ್ತಾರೆ, ಬಾಪ್ದಾದಾರವರು ಮುಗುಳ್ನಗುತ್ತಿದ್ದರು - ಮನಸ್ಸಿನ ಪರಿಶ್ರಮದ ಕಾರಣ ಏನಾಗುತ್ತಾರೆ, ಏನು ಮಾಡುತ್ತಾರೆ? ಅಂಕು ಡೊಂಕು, ಮಕ್ಕಳು ಜನ್ಮ ನೀಡುತ್ತಾರೆ, ಕೆಲವೊಮ್ಮೆ ಅದಕ್ಕೆ ಮುಖವಿರುವುದಿಲ್ಲ, ಕೆಲವೊಮ್ಮೆ ಕಾಲಿರುವುದಿಲ್ಲ, ಕೆಲವೊಮ್ಮೆ ಭುಜವಿರುವುದಿಲ್ಲ. ಇಂತಹ ವ್ಯರ್ಥ ವಂಶಾವಳಿಯ ಬಹಳ ಜನ್ಮ ನೀಡುತ್ತಾರೆ ಮತ್ತು ಜನ್ಮ ನೀಡಿದ ನಂತರ ಏನು ಮಾಡುತ್ತಾರೆ? ಅದರ ಪಾಲನೆಗಾಗಿ ಪರಿಶ್ರಮ ಪಡಬೇಕಾಗುತ್ತದೆ, ಇಂತಹ ರಚನೆಯ ಕಾರಣದಿಂದ ಹೆಚ್ಚು ಪರಿಶ್ರಮ ಪಟ್ಟು ಸುಸ್ತಾಗುತ್ತಾರೆ ಮತ್ತು ಮನಸ್ಸಿನಿಂದ ಖಿನ್ನತೆಯುಂಟಾಗುತ್ತದೆ. ತುಂಬಾ ಕಷ್ಟವೆನಿಸುತ್ತದೆ. ಚೆನ್ನಾಗಿರುತ್ತದೆ. ಆದರೆ ತುಂಬಾ ಕಷ್ಟವೆನಿಸುತ್ತದೆ. ಬಿಡುವುದಕ್ಕೂ ಬಯಸುವುದಿಲ್ಲ ಮತ್ತು ಹಾರಲೂ ಬಯಸುವುದಿಲ್ಲ. ಹಾಗಾದರೆ ಏನು ಮಾಡುವುದು? ನಡೆಯಬೇಕಾಗುತ್ತದೆ. ನಡೆಯುವುದರಲ್ಲಿ ಖಂಡಿತವಾಗಿ ಪರಿಶ್ರಮವಾಗುತ್ತದೆ ಆದ್ದರಿಂದ ಈಗ ದುರ್ಬಲತೆಯ ರಚನೆಯನ್ನು ನಿಲ್ಲಿಸಿ, ಮನಸ್ಸಿನ ಪರಿಶ್ರಮದಿಂದ ಮುಕ್ತರಾಗುತ್ತೀರಿ. ನಗುವ ಮಾತೇನು ಮಾಡುತ್ತೀರಿ. ತಂದೆಯು ಹೇಳುವರು - ಇಂತಹ ರಚನೆಯೇಕೆ ಮಾಡುವಿರಿ. ಹೇಗೆ ವರ್ತಮಾನದ ಪ್ರಪಂಚದ ಜನರು ಏನು ಹೇಳುವರು- ಈಶ್ವರನೇ ಕೊಡುತ್ತಾನೆ, ಅಂದಮೇಲೆ ಏನು ಮಾಡುವುದು! ಎಲ್ಲಾ ದೋಷಗಳನ್ನೂ ಈಶ್ವರನ ಮೇಲೆ ಹೊರಿಸುತ್ತಾರೆ. ಇಂತಹ ವ್ಯರ್ಥ ರಚನೆಯ ಬಗ್ಗೆ ಏನು ಹೇಳುವಿರಿ? ನಾವು ಬಯಸುವುದಿಲ್ಲ ಆದರೆ ಮಾಯೆಯು ಬಂದು ಬಿಡುತ್ತದೆ. ನಮಗೆ ಇಷ್ಟವಿಲ್ಲ, ಆದರೆ ಆಗಿ ಬಿಡುತ್ತದೆ. ಆದ್ದರಿಂದ ಸರ್ವಶಕ್ತಿವಂತ ತಂದೆಯ ಮಕ್ಕಳು ಮಾಲೀಕರಾಗಿರಿ, ರಾಜರಾಗಿರಿ. ದುರ್ಬಲರೆಂದರೆ ಅಧೀನವಾಗಿರುವ ಪ್ರಜೆಗಳು, ಮಾಲೀಕನೆಂದರೆ ಶಕ್ತಿಶಾಲಿಯಾದ ರಾಜರು ಎಂದು. ಈಗ ಆಹ್ವಾನ ಮಾಡಿ ಮಾಲೀಕರಾಗಿರಿ. ಸ್ವಸ್ಥಿತಿಯಿಂದ ಶ್ರೇಷ್ಠ ಸಿಂಹಾಸನದಲ್ಲಿ ಕುಳಿತುಕೊಳ್ಳಿರಿ. ಸಿಂಹಾಸನದಲ್ಲಿ ಕುಳಿತುಕೊಂಡು ಶಕ್ತಿಗಳೆಂಬ ಸೇವಾಧಾರಿಗಳನ್ನು ಆಹ್ವಾನಿಸಿರಿ, ಆದೇಶ ಮಾಡಿರಿ. ತಮ್ಮ ಸೇವಾಧಾರಿಗಳು ಆದೇಶದನುಸಾರ ನಡೆಯುವುದಿಲ್ಲವೆಂದು ಹೇಳಲಾಗುವುದಿಲ್ಲ. ಏನು ಮಾಡಲಿ, ಸಹನಾಶಕ್ತಿ ಇಲ್ಲದಿರುವುದರಿಂದ ಪರಿಶ್ರಮ ಪಡಬೇಕಾಗುತ್ತದೆ ಎಂದು ಹೇಳುವುದಿಲ್ಲವೇ! ಅಳವಡಿಸಿಕೊಳ್ಳುವ ಶಕ್ತಿಯಿಲ್ಲದಿರುವುದರಿಂದ ಹೀಗೆ ಆಗುತ್ತದೆ ಎಂದು ಹೇಳುತ್ತಾರೆ. ತಮ್ಮ ಸೇವಾಧಾರಿಗಳು ತಮ್ಮ ಸಮಯದಲ್ಲಿ ಕಾರ್ಯದಲ್ಲಿ ಬರುವುದಿಲ್ಲವೆಂದರೆ ಸೇವಾಧಾರಿಗಳೇನಾದರು? ಕಾರ್ಯವು ಮುಕ್ತಾಯವಾದ ನಂತರ ಸೇವಾಧಾರಿಗಳು ಬಂದರೆಂದರೆ ಏನಾಯಿತು? ಯಾರಲ್ಲಿ ಸಮಯದ ಮಹತ್ವಿಕೆಯಿರುತ್ತದೆ, ಅವರು ಸೇವಾಧಾರಿಗಳಾಗುವ ಸಮಯದ ಮಹತ್ವಿಕೆಯನ್ನು ತಿಳಿದು ಉಪಸ್ಥಿತರಾಗುತ್ತಾರೆ. ಒಂದುವೇಳೆ ಯಾವುದೇ ಶಕ್ತಿ ಅಥವಾ ಗುಣವು ಸಮಯದಲ್ಲಿ ಸ್ಮೃತಿಗೆ ಬರಲಿಲ್ಲವೆಂದರೆ, ಇದರಿಂದ ಸಿದ್ಧವಾಯಿತು - ಮಾಲೀಕನಿಗೆ ಸಮಯದ ಮಹತ್ವಿಕೆಯಿಲ್ಲ ಎಂದು. ಏನು ಮಾಡಬೇಕಾಗಿದೆ? ಸಿಂಹಾಸನದಲ್ಲಿ ಕುಳಿತುಕೊಳ್ಳುವುದು ಒಳ್ಳೆಯದೇ ಅಥವಾ ಪರಿಶ್ರಮ ಪಡುವುದು ಒಳ್ಳೆಯದೇ? ಈಗ ಇದರಲ್ಲಿ ಸಮಯ ಕೊಡುವ ಅವಶ್ಯಕತೆಯಿಲ್ಲ. ಪರಿಶ್ರಮ ಪಡುವುದು ಚೆನ್ನಾಗಿರುತ್ತದೆಯೇ? ಅಥವಾ ಮಾಲೀಕನಾಗಿ ಕುಳಿತುಕೊಳ್ಳುವುದು ಚೆನ್ನಾಗಿರುತ್ತದೆಯೇ? ಯಾವುದು ಪ್ರಿಯವಾಗುವುದು? ಇದಕ್ಕಾಗಿ ಕೇವಲ ಒಂದು ಅಭ್ಯಾಸವನ್ನು ಸದಾ ಮಾಡುತ್ತಿರಿ - ನಿರಾಕಾರದಿಂದ ಸಾಕಾರದ ಆಧಾರವನ್ನು ಪಡೆದು, ಈ ಕಾರ್ಯವನ್ನು ಮಾಡುತ್ತಿದ್ದೇನೆ ಎಂದು ತಿಳಿದುಕೊಳ್ಳಿರಿ ಎಂದು ತಿಳಿಸಿದೆವಲ್ಲವೆ. ಮಾಡುವವನಾಗಿದ್ದು ಕರ್ಮೇಂದ್ರಿಯಗಳಿಂದ ಮಾಡಿಸಿರಿ, ತಮ್ಮ ನಿರಾಕಾರಿ ವಾಸ್ತವಿಕ ಸ್ವರೂಪದ ಸ್ಮೃತಿಯಲ್ಲಿದ್ದರೆ, ವಾಸ್ತವಿಕ ಸ್ವರೂಪದ ಗುಣ, ಶಕ್ತಿಗಳು ಸ್ವತಹವಾಗಿ ಇಮರ್ಜ್ ಆಗುತ್ತದೆ. ಸ್ವರೂಪವು ಹೇಗಿದೆಯೋ ಹಾಗೆಯೇ ಗುಣ ಮತ್ತು ಶಕ್ತಿಗಳು ಸ್ವತಹವಾಗಿ ಕರ್ಮದಲ್ಲಿ ಬರುತ್ತವೆ. ಹೇಗೆ ಕನ್ಯೆಯು ತಾಯಿಯಾದ ನಂತರ, ತಾಯಿಯ ಸ್ವರೂಪದಿಂದ ಸೇವಾಭಾವ, ತ್ಯಾಗ, ಸ್ನೇಹ ಅಥವಾ ಅವಿಶ್ರಾಂತ ಸೇವೆ ಇತ್ಯಾದಿ.... ಗುಣ ಮತ್ತು ಶಕ್ತಿಗಳು ಸ್ವತಹವಾಗಿ ಇಮರ್ಜ್ ಆಗುತ್ತದೆಯಲ್ಲವೆ. ಹಾಗೆಯೇ ಅನಾದಿ-ಅವಿನಾಶಿ ಸ್ವರೂಪವನ್ನು ನೆನಪಿಟ್ಟುಕೊಳ್ಳುವುದರಿಂದ ಸ್ವತಹವಾಗಿಯೇ ಈ ಗುಣ ಮತ್ತು ಶಕ್ತಿಗಳು ಇಮರ್ಜ್ ಆಗುತ್ತದೆ. ಸ್ವರೂಪವು ಸ್ಮೃತಿ ಮತ್ತು ಸ್ಥಿತಿಯನ್ನು ಸ್ವತಹವಾಗಿಯೇ ತಯಾರು ಮಾಡುತ್ತದೆ. ಏನು ಮಾಡಬೇಕೆಂದು ತಿಳಿದಿರಾ! ಪರಿಶ್ರಮ ಎಂಬ ಶಬ್ಧವನ್ನು ಜೀವನದಿಂದ ಸಮಾಪ್ತಿಗೊಳಿಸಿರಿ. ಪರಿಶ್ರಮವು ಪರಿಶ್ರಮ ಪಡುವುದಕ್ಕೆ ಕಾರಣವಾಗುತ್ತದೆ. ಪರಿಶ್ರಮ ಸಮಾಪ್ತಿ ಎಂದರೆ ಪರಿಶ್ರಮದ ಶಬ್ಧವು ಸ್ವತಹವಾಗಿ ಸಮಾಪ್ತಿಯಾಗುತ್ತದೆ. ಒಳ್ಳೆಯದು.

ಸದಾ ಪರಿಶ್ರಮವನ್ನು ಸಹಜಗೊಳಿಸುವ, ಪರಿಶ್ರಮವನ್ನು ಪ್ರೀತಿಯಲ್ಲಿ ಪರಿವರ್ತನೆ ಮಾಡುವ, ಸದಾ ಸ್ವ ಸ್ವರೂಪದ ಮೂಲಕ ಶ್ರೇಷ್ಠ ಶಕ್ತಿಗಳು ಮತ್ತು ಗುಣಗಳ ಅನುಭವ ಮಾಡುವಂತಹ, ಸದಾ ತಂದೆಯ ಸ್ನೇಹದ ಪ್ರತ್ಯುತ್ತರವನ್ನು ನೀಡುವಂತಹ, ತಂದೆಯ ಸಮಾನರಾಗುವ, ಸದಾ ಶ್ರೇಷ್ಠ ಸ್ಮೃತಿಯ ಶ್ರೇಷ್ಠ ಆಸನದಲ್ಲಿ ಸ್ಥಿತರಾಗಿ, ಮಾಲೀಕರಾಗಿದ್ದು ಸೇವಾಧಾರಿಗಳ ಮೂಲಕ ಕಾರ್ಯವನ್ನು ಮಾಡಿಸುವಂತಹ ರಾಜಾ ಮಕ್ಕಳಿಗೆ, ಮಾಲೀಕ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ವ್ಯಕ್ತಿಗತ ವಾರ್ತಾಲಾಪ (ವಿದೇಶಿ ಸಹೋದರ-ಸಹೋದರಿಯರೊಂದಿಗೆ)
1. ಸೇವೆಯು ತಂದೆಯ ಜೊತೆಯ ಅನುಭವ ಮಾಡಿಸುತ್ತದೆ. ಸೇವೆಯಲ್ಲಿ ಬರುವುದೆಂದರೆ ಸದಾ ತಂದೆಯ ಜೊತೆಯಲ್ಲಿರುವುದಾಗಿದೆ. ಭಲೆ ಸಾಕಾರ ರೂಪದಿಂದಿರಲಿ, ಆಕಾರ ರೂಪದಿಂದಿರಲಿ, ಆದರೆ ಸೇವಾಧಾರಿ ಮಕ್ಕಳ ಜೊತೆ ತಂದೆಯು ಸದಾ ಇರುತ್ತಾರೆ. ಮಾಡಿಸುವವರು ಮಾಡಿಸುತ್ತಿದ್ದಾರೆ, ನಡೆಸುವವರು ನಡೆಸುತ್ತಿದ್ದಾರೆ ಮತ್ತು ತಾವು ಸ್ವಯಂ ಏನು ಮಾಡುವಿರಿ? ನಿಮಿತ್ತರಾಗಿದ್ದು ಆಟವನ್ನಾಡುತ್ತಿರುತ್ತೀರಿ. ಹೀಗೆಯೇ ಅನುಭವವಾಗುತ್ತದೆಯಲ್ಲವೇ? ಇಂತಹ ಸೇವಾಧಾರಿಗಳು ಸಫಲತೆಯ ಅಧಿಕಾರಿಗಳಾಗುತ್ತಾರೆ. ಸಫಲತೆಯು ತಮ್ಮ ಜನ್ಮ ಸಿದ್ಧ ಅಧಿಕಾರವಾಗಿದೆ. ಸಫಲತೆಯು ಸದಾ ಮಹಾನ್ ಪುಣ್ಯಾತ್ಮನಾಗುವ ಅನುಭವ ಮಾಡಿಸುತ್ತದೆ. ಮಹಾನ್ ಪುಣ್ಯಾತ್ಮನಾಗುವವರು ಅನೇಕ ಆತ್ಮರ ಆಶೀರ್ವಾದದ ಲಿಫ್ಟ್ ಸಿಗುತ್ತದೆ. ಒಳ್ಳೆಯದು.

ಈಗಂತು ಆ ದಿನವೂ ಬರಲೇಬೇಕು, ಯಾವಾಗ ಎಲ್ಲರ ಮುಖದಿಂದ ಒಬ್ಬರೇ ಇದ್ದಾರೆ, ಒಬ್ಬರೇ ಆಗಿದ್ದಾರೆ - ಈ ಹಾಡು ಹೊರ ಬರುತ್ತದೆ. ಅಷ್ಟೇ, ಡ್ರಾಮಾದಲ್ಲಿ ಈ ಪಾತ್ರವು ಉಳಿದುಕೊಂಡಿದೆ. ಇದಾಯಿತೆಂದರೆ ಸಮಾಪ್ತಿಯಾಗುತ್ತದೆ. ಈಗ ಈ ಪಾತ್ರವನ್ನು ಸಮೀಪಕ್ಕೆ ತರಬೇಕು. ಇದಕ್ಕಾಗಿ ಅನುಭವ ಮಾಡಿಸುವುದು ವಿಶೇಷ ಆಕರ್ಷಣೆಯಾಗಿದೆ. ಜ್ಞಾನವನ್ನು ತಿಳಿಸುತ್ತಾ ಸಾಗಿರಿ, ಅನುಭವ ಮಾಡಿಸುತ್ತಾ ಸಾಗಿರಿ. ಜ್ಞಾನವನ್ನು ಕೇವಲ ಕೇಳುವುದರಿಂದ ಸಂತುಷ್ಟರಾಗುವುದಿಲ್ಲ, ಆದರೆ ಜ್ಞಾನವನ್ನು ತಿಳಿಸುತ್ತಾ ಇದ್ದರೂ ಅನುಭವ ಮಾಡಿಸುತ್ತಿರಬೇಕು, ಜ್ಞಾನದ ಮಹತ್ವಿಕೆಯಿದೆ ಮತ್ತು ಪ್ರಾಪ್ತಿಯ ಕಾರಣದಿಂದ ಉತ್ಸಾಹದಲ್ಲಿ ಬರುತ್ತಾರೆ. ಎಲ್ಲರ ಭಾಷಣವು ಕೇವಲ ಜ್ಞಾನಪೂರ್ಣವಾಗಿರುತ್ತದೆ, ತಮ್ಮ ಭಾಷಣವು ಕೇವಲ ಜ್ಞಾನಯುಕ್ತವಾಗಿರಬಾರದು, ಆದರೆ ಅನುಭವ ಅಥಾರಿಟಿಯುಳ್ಳದ್ದಾಗಿರಬೇಕು ಮತ್ತು ಅನುಭವದ ಅಥಾರಿಟಿಯ ಮಾತಿನ ಅನುಭವ ಮಾಡಿಸುತ್ತಾ ಸಾಗಿರಿ. ಹೇಗೆ ಕೆಲವರು ಒಳ್ಳೆಯ ಸ್ಪೀಕರ್ ಆಗಿರುತ್ತಾರೆ, ಅವರು ಮಾತನಾಡುವುದರಲ್ಲಿ ಅಳಿಸುತ್ತಾರೆ, ನಗಿಸುತ್ತಾರೆ. ಶಾಂತಿಯಲ್ಲಿ, ಸೈಲೆನ್ಸ್ನಲ್ಲಿಯೂ ಕರೆದುಕೊಂಡು ಹೋಗುತ್ತಾರೆ. ಹಾಗೆಯೇ ಅವರು ಹೇಗೆ ಮಾತನಾಡುತ್ತಾರೆಯೋ ಅಂತಹ ವಾಯುಮಂಡಲದಲ್ಲಿ ತಯಾರಾಗುತ್ತದೆ. ಅದು ಕ್ಷಣಿಕವಾಗಿರುತ್ತದೆ. ಹಾಗಾದರೆ ಅವರು ಮಾಡುತ್ತಾರೆಂದರೆ ತಾವು ಮಾ|| ಸರ್ವಶಕ್ತಿವಂತರು, ತಾವೇನು ಮಾಡಲು ಆಗುವುದಿಲ್ಲ! ಕೆಲವರು "ಶಾಂತಿ" ಎಂದು ಹೇಳಿದರೆ ಶಾಂತಿಯ ವಾತಾವರಣವುಂಟಾಗುತ್ತದೆ, ಆನಂದ ಎಂದರೆ ಆನಂದ ವಾತಾವರಣವುಂಟಾಗುತ್ತದೆ. ಹೀಗೆ ಅನುಭೂತಿ ಮಾಡಿಸುವ ಭಾಷಣವು ಪ್ರತ್ಯಕ್ಷತೆಯ ಧ್ವಜವನ್ನು ಹಾರಿಸುತ್ತದೆ. ಕೆಲವರಾದರೂ ವಿಶೇಷತೆಯನ್ನು ನೋಡುತ್ತಾರಲ್ಲವೆ. ಒಳ್ಳೆಯದು. ಸಮಯವು ಸ್ವತಹವಾಗಿ ಶಕ್ತಿಗಳನ್ನು ತುಂಬಿಸುತ್ತಿದೆ. ಅದು ಆಗಿಯೇ ಇದೆ, ಕೇವಲ ಅದನ್ನು ಪುನರಾವರ್ತಿಸಬೇಕು. ಒಳ್ಳೆಯದು.

ಬೀಳ್ಕೊಡುಗೆಯ ಸಮಯದಲ್ಲಿ ದಾದಿ ಜಾನಕಿಯವರೊಂದಿಗೆ ಬಾಪ್ದಾದಾರವರ ವಾರ್ತಾಲಾಪ:-
ನೋಡುತ್ತಾ-ನೋಡುತ್ತಾ ಹರ್ಷಿತವಾಗುತ್ತಿರುತ್ತೀರಾ! ಎಲ್ಲರಿಗಿಂತಲೂ ಹೆಚ್ಚಿನ ಖುಷಿಯು ಅನನ್ಯ ಮಕ್ಕಳಲ್ಲಿರುತ್ತದೆ! ಯಾರು ಖುಷಿಯ ಸಾಗರನ ಅಲೆಗಳಲ್ಲಿ ತೇಲುತ್ತಿರುತ್ತಾರೆ, ಸುಖದ ಸಾಗರನಲ್ಲಿ ತೇಲುತ್ತಿರುತ್ತಾರೆ, ಸರ್ವ ಪ್ರಾಪ್ತಿಗಳ ಸಾಗರದ ಅಲೆಗಳಲ್ಲಿ ತೇಲುತ್ತಿರುತ್ತಾರೆಯೋ ಅವರು ಅನ್ಯರನ್ನೂ ಸಾಗರನ ಅಲೆಗಳಲ್ಲಿ ತೇಲಿಸುತ್ತಿರುತ್ತಾರೆ. ಇಡೀ ದಿನದಲ್ಲಿ ಕರ್ತವ್ಯವೇನು ಮಾಡುತ್ತೀರಿ? ಹೇಗೆ ಯಾರಾದರೂ ಸಾಗರದಲ್ಲಿ ಸ್ನಾನ ಮಾಡಲು ಬರುವುದಿಲ್ಲವೆಂದರೆ ಏನು ಮಾಡುತ್ತಾರೆ? ಕೈಯನ್ನೆಳೆದು ಮಾಡಿಸುತ್ತಾರಲ್ಲವೇ! ಇದೇ ಕಾರ್ಯವನ್ನು ಮಾಡುತ್ತೀರಲ್ಲವೆ - ಸುಖದ ಅಲೆಗಳಲ್ಲಿ, ಖುಷಿಯ ಅಲೆಗಳಲ್ಲಿ ತೇಲಿಸುತ್ತೀರಿ, ಇಂತಹ ಕಾರ್ಯವನ್ನು ಮಾಡುತ್ತಿರುತ್ತೀರಾ! ಬ್ಯುಸಿಯಾಗಿರುವ ಕಾರ್ಯವು ಚೆನ್ನಾಗಿ ಸಿಕ್ಕಿದೆ, ಎಷ್ಟು ಬ್ಯುಸಿಯಿರುತ್ತೀರಿ? ಬಿಡುವಿರುತ್ತದೆಯೇ? ಇದರಲ್ಲಿ ಸದಾ ಬ್ಯುಸಿಯಿರುತ್ತೀರೆಂದರೆ, ಅನ್ಯರೂ ಸಹ ನೋಡಿ ಅನುಸರಿಸುತ್ತಾರೆ. ನೆನಪು ಮತ್ತು ಸೇವೆಯಲ್ಲದೆ ಮತ್ತೇನೂ ಕಾಣಿಸುವುದಿಲ್ಲ ಅಷ್ಟೇ. ಸ್ವತಹವಾಗಿಯೇ ನೆನಪು ಮತ್ತು ಸೇವೆಯಲ್ಲಿಯೇ ಬುದ್ಧಿಯಿರುತ್ತದೆ, ಮತ್ತೆಲ್ಲಿಯೂ ಹೋಗುವುದಿಲ್ಲ. ನಡೆಸುವ ಅವಶ್ಯಕತೆಯಿರುವುದಿಲ್ಲ, ನಡೆಯುತ್ತಿರುತ್ತದೆ. ಇದಕ್ಕೆ ಹೇಳಲಾಗುತ್ತದೆ - ಕಲಿತಿರುವುದನ್ನು ಕಲಿಸುವವರು. ಒಳ್ಳೆಯ ಕಾರ್ಯವನ್ನು ಕೊಟ್ಟಿದ್ದಾರಲ್ಲವೆ. ತಂದೆಯು ಬುದ್ಧಿವಂತನಾಗಿದ್ದಾರಲ್ಲವೆ. ಹಾಗೀಗೆ ಬಿಟ್ಟು ಹೋಗಿಲ್ಲ ಅಲ್ಲವೆ. ಬುದ್ಧಿವಂತರನ್ನಾಗಿ ಮಾಡಿ, ಸ್ಥಾನವನ್ನು ಕೊಟ್ಟು ಹೋಗಿದ್ದಾರೆ. ಜೊತೆಯಲ್ಲಿಯೂ ಇದ್ದಾರೆ ಆದರೆ ನಿಮಿತ್ತರನ್ನಾಗಿ ಮಾಡಿದ್ದಾರೆ. ಬುದ್ಧಿವಂತರನ್ನಾಗಿ ಮಾಡಿ ಸ್ಥಾನವನ್ನು ಕೊಟ್ಟಿದ್ದಾರೆ. ಇಲ್ಲಿಂದಲೇ ಸ್ಥಾನವನ್ನು ನೀಡುವ ಪದ್ಧತಿಯು ಪ್ರಾರಂಭವಾಗಿದೆ. ತಂದೆಯು ಸೇವೆಯ ಸಿಂಹಾಸನ ಅಥವಾ ಸೇವೆಯ ಸ್ಥಾನವನ್ನು ಕೊಟ್ಟು ಮುಂದುವರೆಸುತ್ತಿದ್ದು, ಮಕ್ಕಳು ಹೇಗೆ ಬಹಳ ಚೆನ್ನಾಗಿ ಮುಂದುವರೆಯುತ್ತಿದ್ದಾರೆ, ಸಾಕ್ಷಿಯಾಗಿ ನೋಡುತ್ತಿದ್ದಾರೆ. ಜೊತೆಗೆ ಜೊತೆಯೂ ಇದ್ದಾರೆ, ಸಾಕ್ಷಿಗೆ ಸಾಕ್ಷಿಯೂ ಇದ್ದಾರೆ. ಎರಡೂ ಪಾತ್ರವನ್ನೂ ಸಹ ಅಭಿನಯಿಸುತ್ತಿದ್ದಾರೆ. ಸಾಕಾರ ರೂಪದಲ್ಲಿ ಸಾಕ್ಷಿ ಎಂದು ಹೇಳಲಾಗುತ್ತದೆ, ಅವ್ಯಕ್ತ ರೂಪದಲ್ಲಿ ಜೊತೆ ಎಂದು ಹೇಳಲಾಗುತ್ತದೆ. ಎರಡೂ ಪಾತ್ರವನ್ನಭಿನಯಿಸುತ್ತಿದ್ದಾರೆ. ಒಳ್ಳೆಯದು.

ವರದಾನ:  
ಶ್ವಾಸ-ಶ್ವಾಸದಲ್ಲಿ ನೆನಪು ಮತ್ತು ಸೇವೆಯ ಸಮತೋಲದ ಮೂಲಕ ಆಶೀರ್ವಾದವನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಸದಾ ಪ್ರಸನ್ನಚಿತ್ತ ಭವ.

ಹೇಗೆ ಗಮನವಿರುತ್ತದೆ - ನೆನಪಿನ ಲಿಂಕ್ ಸದಾ ಜೊತೆಯಿರಲಿ ಎಂದು. ಹಾಗೆಯೇ ಸೇವೆಯಲ್ಲಿ ಸದಾ ಲಿಂಕ್ ಜೋಡಣೆಯಲ್ಲಿರಬೇಕು. ಶ್ವಾಸ-ಶ್ವಾಸದಲ್ಲಿ ನೆನಪು ಮತ್ತು ಶ್ವಾಸ-ಶ್ವಾಸದಲ್ಲಿ ಸೇವೆ. ಇದಕ್ಕೇ ಸಮತೋಲನವೆಂದು ಹೇಳಲಾಗುತ್ತದೆ. ಈ ಸಮತೋಲನದಿಂದ ಸದಾ ಆಶೀರ್ವಾದದ ಅನುಭವವಾಗುತ್ತಿರುತ್ತದೆ ಮತ್ತು ಇದೇ ಧ್ವನಿ ಹೃದಯದಿಂದ ಬರುತ್ತದೆ - ಆಶೀರ್ವಾದಗಳ ಪಾಲನೆಯಲ್ಲಿರುವೆನು. ಪರಿಶ್ರಮದಿಂದ, ಯುದ್ಧದಿಂದ ಮುಕ್ತರಾಗುತ್ತಾರೆ. ಏನು, ಹೇಗೆ, ಏಕೆ - ಈ ಪ್ರಶ್ನೆಗಳಿಂದ ಮುಕ್ತರಾಗಿ ಸದಾ ಪ್ರಸನ್ನಚಿತ್ತರಾಗಿರುವಿರಿ. ನಂತರ ಸಫಲತೆಯು ಜನ್ಮಸಿದ್ಧ ಅಧಿಕಾರದ ರೂಪದಲ್ಲಿ ಅನುಭವವಾಗುತ್ತದೆ.

ಸ್ಲೋಗನ್:
ತಂದೆಯಿಂದ ಬಹುಮಾನವನ್ನು ಪಡೆದುಕೊಳ್ಳಬೇಕೆಂದರೆ ಸ್ವಯಂನಿಂದ, ಜೊತೆಗಾರರಿಂದ ನಿರ್ವಿಘ್ನವಾಗಿರುವ ಸರ್ಟಿಫಿಕೇಟ್ ಜೊತೆಯಿರಲಿ.