02.01.21 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಂದೆಯ
ಶ್ರೀಮತಕ್ಕೆ ಗೌರವ ಕೊಡುವುದು ಎಂದರೆ ಮುರುಳಿಯನ್ನೆಂದೂ ತಪ್ಪಿಸದಿರುವುದು, ಪ್ರತಿಯೊಂದು ಆಜ್ಞೆಯ
ಪಾಲನೆ ಮಾಡುವುದು”
ಪ್ರಶ್ನೆ:
ಒಂದುವೇಳೆ ನೀವು
ಮಕ್ಕಳೊಂದಿಗೆ ಯಾರಾದರೂ ರಾಜಿ ಖುಷಿಯಾಗಿದ್ದೀರಾ ಎಂದು ಕೇಳಿದರೆ ನೀವು ಯಾವ ಉತ್ತರವನ್ನು ನಶೆಯಿಂದ
ಕೊಡಬೇಕು?
ಉತ್ತರ:
ಹೇಳಿರಿ, ಪರಬ್ರಹ್ಮ್ದಲ್ಲಿರುವ ಪರಮಾತ್ಮನನ್ನು ಪಡೆಯುವ ಇಚ್ಛೆಯಿತ್ತು, ಅವರು ಸಿಕ್ಕಿ ಬಿಟ್ಟರು
ಅಂದಮೇಲೆ ಇನ್ನೇನು ಬೇಕು? ಏನನ್ನು ಪಡೆಯಬೇಕಿತ್ತೋ ಅದನ್ನು ಪಡೆದುಕೊಂಡೆವು..... ನೀವು ಈಶ್ವರನ
ಮಕ್ಕಳಿಗೆ ಯಾವುದೇ ಮಾತಿನ ಚಿಂತೆಯಿಲ್ಲ. ತಂದೆಯು ನಿಮ್ಮನ್ನು ತನ್ನವರನ್ನಾಗಿ ಮಾಡಿಕೊಂಡರು,
ನಿಮ್ಮ ಮೇಲೆ ಕಿರೀಟವನ್ನಿಟ್ಟರು ಅಂದಮೇಲೆ ಇನ್ನ್ಯಾವ ಮಾತಿನ ಚಿಂತೆಯಿದೆ!
ಓಂ ಶಾಂತಿ.
ತಂದೆಯು ತಿಳಿಸುತ್ತಾರೆ, ಮಕ್ಕಳ ಬುದ್ಧಿಯಲ್ಲಿ ಇದು ಖಂಡಿತ ಇರುವುದು – ಶಿವ ತಂದೆ ತಂದೆಯೂ
ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ, ಇದೇ ನೆನಪಿನಲ್ಲಿ ಅವಶ್ಯವಾಗಿ
ಇರುತ್ತೀರಿ, ಈ ನೆನಪನ್ನು ಎಂದೂ ಯಾರೂ ಕಲಿಸಿಕೊಡಲು ಸಾಧ್ಯವಿಲ್ಲ, ತಂದೆಯೇ ಕಲ್ಪ-ಕಲ್ಪವೂ ಬಂದು
ಕಲಿಸುತ್ತಾರೆ. ಅವರೇ ಜ್ಞಾನ ಸಾಗರ, ಪತಿತ-ಪಾವನನೂ ಆಗಿದ್ದಾರೆ. ಅವರು ತಂದೆ, ಶಿಕ್ಷಕ, ಗುರುವೂ
ಆಗಿದ್ದಾರೆ. ಈಗ ಜ್ಞಾನದ ಮೂರನೆಯ ನೇತ್ರವು ಸಿಕ್ಕಿದೆ. ಆದ್ದರಿಂದ ಇದನ್ನು ಈಗ
ತಿಳಿದುಕೊಳ್ಳುತ್ತೀರಿ. ಭಲೆ ನಾವು ಅವರ ಮಕ್ಕಳು ಎಂಬುದನ್ನು ತಿಳಿದುಕೊಂಡಿರಬಹುದು ಆದರೆ
ತಂದೆಯನ್ನೇ ಮರೆತು ಹೋಗುತ್ತಾರೆ ಅಂದಮೇಲೆ ಶಿಕ್ಷಕ, ಗುರುಗಳು ಹೇಗೆ ನೆನಪಿಗೆ ಬರುವರು? ಮಾಯೆಯು
ಬಹಳ ಪ್ರಬಲವಾಗಿದೆ, ಮೂರೂ ರೂಪಗಳಲ್ಲಿಯೂ ಮಹಿಮೆಯಿದ್ದರೂ ಸಹ ಮೂವರನ್ನೂ ಮರೆಸಿ ಬಿಡುತ್ತದೆ, ಇಷ್ಟು
ಸರ್ವಶಕ್ತಿವಂತನಾಗಿದೆ. ಬಾಬಾ, ನಾವು ಮರೆತು ಹೋಗುತ್ತೇವೆ. ಮಾಯೆಯು ಇಷ್ಟು ಪ್ರಬಲವಾಗಿದೆ ಎಂದು
ಮಕ್ಕಳು ಬರೆಯುತ್ತಾರೆ, ಡ್ರಾಮಾನುಸಾರ ಇದು ಬಹಳ ಸಹಜವಾಗಿದೆ. ಮಕ್ಕಳಿಗೆ ಗೊತ್ತಿದೆ, ಈ ರೀತಿ ಎಂದೂ
ಯಾರೂ ಇರಲು ಸಾಧ್ಯವಿಲ್ಲ. ಒಬ್ಬರೇ ತಂದೆಯು ಶಿಕ್ಷಕ ಮತ್ತು ಸತ್ಯ-ಸತ್ಯವಾದ ಸದ್ಗುರುವೂ ಆಗಿದ್ದಾರೆ,
ಇದರಲ್ಲಿ ಯಾವುದೇ ಸುಳ್ಳಿನ ಮಾತಿಲ್ಲ. ಆಂತರ್ಯದಲ್ಲಿ ತಿಳಿದುಕೊಳ್ಳಬೇಕಲ್ಲವೆ ಆದರೆ ಮಾಯೆಯು ಮರೆಸಿ
ಬಿಡುತ್ತದೆ. ಬಾಬಾ, ನಾವು ಸೋಲನ್ನನುಭವಿಸುತ್ತೇವೆಂದು ಹೇಳುತ್ತಾರೆ ಅಂದಮೇಲೆ
ಹೆಜ್ಜೆ-ಹೆಜ್ಜೆಯಲ್ಲಿ ಪದುಮವು ಹೇಗಿರುತ್ತದೆ! ದೇವತೆಗಳಿಗೆ ಪದ್ಮದ ಗುರುತನ್ನು ತೋರಿಸುತ್ತಾರೆ,
ಎಲ್ಲರಿಗೂ ತೋರಿಸುವುದಿಲ್ಲ. ಇದು ಈಶ್ವರನ ವಿದ್ಯೆಯಾಗಿದೆ, ಮನುಷ್ಯರದಲ್ಲ. ಇಂತಹ ವಿದ್ಯೆಯು ಎಂದೂ
ಮನುಷ್ಯರದಾಗಿರಲು ಸಾಧ್ಯವಿಲ್ಲ. ಭಲೆ ದೇವತೆಗಳ ಮಹಿಮೆ ಮಾಡಲಾಗುತ್ತದೆ ಆದರೂ ಸಹ ಶ್ರೇಷ್ಠಾತಿ
ಶ್ರೇಷ್ಠನು ಒಬ್ಬ ತಂದೆಯಾಗಿದ್ದಾರೆ. ಬಾಕಿ ದೇವತೆಗಳದು ಯಾವುದೇ ಹೆಗ್ಗಳಿಕೆಯಿಲ್ಲ. ಇಂದು ಗುಲಾಮರು
ನಾಳೆ ರಾಜರಾಗುವರು. ನೀವೀಗ ಇಂತಹ ಲಕ್ಷ್ಮೀ-ನಾರಾಯಣರಾಗುವ ಪುರುಷಾರ್ಥ ಮಾಡುತ್ತಿದ್ದೀರಿ. ನಿಮಗೆ
ತಿಳಿದಿದೆ, ಈ ಪುರುಷಾರ್ಥದಲ್ಲಿ ಅನೇಕರು ಅನುತ್ತೀರ್ಣರಾಗುತ್ತಾರೆ. ಕಲ್ಪದ ಹಿಂದೆ ಎಷ್ಟು
ತೇರ್ಗಡೆಯಾಗಿದ್ದರೋ ಅಷ್ಟೇ ಓದುತ್ತಾರೆ. ವಾಸ್ತವದಲ್ಲಿ ಇದು ಬಹಳ ಸಹಜ ಜ್ಞಾನವಾಗಿದೆ ಆದರೆ ಮಾಯೆಯು
ಮರೆಸಿ ಬಿಡುತ್ತದೆ. ತಂದೆಯು ಹೇಳುತ್ತಾರೆ - ಮಕ್ಕಳೇ, ತಮ್ಮ ಚಾರ್ಟನ್ನಿಡಿ ಎಂದು. ಆದರೆ ಮಕ್ಕಳು
ಇಡುವುದಿಲ್ಲ. ಎಲ್ಲಿಯವರೆಗೆ ಕುಳಿತು ಬರೆಯುವುದು! ಒಂದುವೇಳೆ ಬರೆದರೂ ಸಹ ಪರಿಶೀಲನೆ
ಮಾಡಿಕೊಳ್ಳುತ್ತಾರೆ – ಎರಡು ಗಂಟೆ ನೆನಪಿನಲ್ಲಿದ್ದೆನಾ? ಯಾರು ತಂದೆಯ ಶ್ರೀಮತವನ್ನು ಕಾರ್ಯದಲ್ಲಿ
ತರುವರೋ ಅವರಿಗೇ ಅದು ಅರ್ಥವಾಗುತ್ತದೆ. ಚಾರ್ಟ್ ಬರೆಯಲಿಲ್ಲವೆಂದರೆ ತಂದೆಯು ತಿಳಿದುಕೊಳ್ಳುತ್ತಾರೆ
- ಬಹುಷಃ ಇವರಿಗೆ ಸಂಕೋಚವಾಗಬಹುದು, ಇಲ್ಲವೆಂದರೆ ಶ್ರೀಮತವನ್ನು ಕಾರ್ಯದಲ್ಲಿ ತರಬೇಕಲ್ಲವೆ ಆದರೆ
2%ನಷ್ಟೇ ಚಾರ್ಟ್ ಬರೆಯುತ್ತಾರೆ. ಮಕ್ಕಳಿಗೆ ಶ್ರೀಮತದ ಪ್ರತಿ ಅಷ್ಟು ಗೌರವವಿಲ್ಲ. ಮುರುಳಿಯು
ಸಿಗುತ್ತಿದ್ದರೂ ಸಹ ಓದುವುದಿಲ್ಲ. ಹೃದಯದಲ್ಲಿ ಇದು ಖಂಡಿತ ಎನಿಸುತ್ತಿರಬಹುದು - ತಂದೆಯು
ಸತ್ಯವನ್ನೇ ಹೇಳುತ್ತಾರೆ, ನಾವು ಮುರುಳಿಯನ್ನೇ ಓದುವುದಿಲ್ಲವೆಂದರೆ ಅನ್ಯರಿಗೇನು ತಿಳಿಸುತ್ತೇವೆ?
(ನೆನಪಿನ ಯಾತ್ರೆ) ಓಂ ಶಾಂತಿ. ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ - ಇದಂತೂ
ಮಕ್ಕಳಿಗೆ ತಿಳಿದಿದೆ - ಅವಶ್ಯವಾಗಿ ನಾವಾತ್ಮರಾಗಿದ್ದೇವೆ, ನಮಗೆ ಪರಮಪಿತ ಪರಮಾತ್ಮನು
ಓದಿಸುತ್ತಿದ್ದಾರೆ ಮತ್ತು ಏನು ಹೇಳುತ್ತಾರೆ? ಮಕ್ಕಳೇ, ನನ್ನನ್ನು ನೆನಪು ಮಾಡಿದರೆ ನೀವು
ಸ್ವರ್ಗದ ಮಾಲೀಕರಾಗುವಿರಿ. ಇದರಲ್ಲಿ ತಂದೆಯೂ ಬಂದು ಬಿಟ್ಟರು, ವಿದ್ಯೆ ಮತ್ತು ಓದಿಸುವವರು ಬಂದು
ಬಿಟ್ಟರು. ಸದ್ಗತಿದಾತ ಬಂದು ಬಿಟ್ಟರು, ಕೆಲವೇ ಶಬ್ಧಗಳಲ್ಲಿ ಇಡೀ ಜ್ಞಾನವು ಬಂದು ಬಿಡುತ್ತದೆ.
ಇದನ್ನು ರಿವೈಜ್ ಮಾಡಿಕೊಳ್ಳುವುದಕ್ಕಾಗಿಯೇ ನೀವಿಲ್ಲಿಗೆ ಬರುತ್ತೀರಿ. ತಂದೆಯೂ ಸಹ ಇದನ್ನೇ
ತಿಳಿಸಿಕೊಡುತ್ತಾರೆ ಏಕೆಂದರೆ ಬಾಬಾ, ನಮಗೆ ಮರೆತು ಹೋಗುತ್ತದೆ ಎಂದು ನೀವು ಹೇಳುತ್ತೀರಿ.
ಆದ್ದರಿಂದ ರಿವೈಜ್ ಮಾಡಲು ಇಲ್ಲಿಗೆ ಬರುತ್ತೀರಿ. ಭಲೆ ಕೆಲವರು ಇಲ್ಲಿಯೇ ಇದ್ದರೂ ಸಹ ರಿವೈಜ್
ಮಾಡುವುದಿಲ್ಲ. ಅವರ ಅದೃಷ್ಟದಲ್ಲಿಲ್ಲ ಪುರುಷಾರ್ಥವನ್ನಂತೂ ತಂದೆಯು ಮಾಡಿಸುತ್ತಾರೆ. ಭಾಗ್ಯವನ್ನು
ಮಾಡಿಸುವವರು ಒಬ್ಬ ತಂದೆಯೇ ಆಗಿದ್ದಾರೆ. ಇದರಲ್ಲಿ ಯಾರ ಬಳಿಯೂ ವಿಶೇಷತೆಯೂ ಇಲ್ಲ ಅಥವಾ ಯಾರಿಗೂ
ವಿಶೇಷವಾದ ವಿದ್ಯಾಭ್ಯಾಸವಿಲ್ಲ. ಆ ವಿದ್ಯೆಯಲ್ಲಾದರೆ ವಿಶೇಷವಾಗಿ ಓದಿಸಲು ಶಿಕ್ಷಕರನ್ನು
ಕರೆಸುತ್ತಾರೆ. ಇಲ್ಲಂತೂ ತಂದೆಯು ಆ ಅದೃಷ್ಟವನ್ನು ರೂಪಿಸಲು ಎಲ್ಲರಿಗೆ ಓದಿಸುತ್ತಾರೆ.
ಒಬ್ಬೊಬ್ಬರನ್ನೂ ಬೇರೆಯಾಗಿ ಕುಳ್ಳರಿಸಿ ಎಲ್ಲಿಯವರೆಗೆ ಓದಿಸುವರು! ಎಷ್ಟೊಂದು ಮಂದಿ ಮಕ್ಕಳಿದ್ದಾರೆ.
ಆ ವಿದ್ಯೆಯಲ್ಲಾದರೆ ಯಾರಾದರೂ ಹಿರಿಯ ವ್ಯಕ್ತಿಗಳ ಮಕ್ಕಳಾಗಿದ್ದರೆ ಅವರಿಗೆ ವಿಶೇಷವಾಗಿ
ಓದಿಸುತ್ತಾರೆ. ಶಿಕ್ಷಕರಿಗೆ ತಿಳಿದಿರುತ್ತದೆ - ಇವರು ಮಂಧವಾಗಿದ್ದಾರೆ ಆದ್ದರಿಂದ ಇವರನ್ನು
ಸ್ಕಾಲರ್ಶಿಪ್ ತೆಗೆದುಕೊಳ್ಳಲು ಯೋಗ್ಯರನ್ನಾಗಿ ಮಾಡಬೇಕೆಂದು. ಈ ತಂದೆಯಂತೂ ಆ ರೀತಿ ಮಾಡುವುದಿಲ್ಲ.
ಇವರು ಎಲ್ಲರಿಗೂ ಒಂದೇ ಸಮನಾಗಿ ಓದಿಸುತ್ತಾರೆ. ಆ ಶಿಕ್ಷಕರದು ಅಧಿಕ ಪುರುಷಾರ್ಥ ಮಾಡಿಸುವುದಾಗಿದೆ.
ಆದರೆ ಇಲ್ಲಂತೂ ಯಾರಿಗೂ ಬೇರೆಯಾಗಿ ಅಧಿಕ ಪುರುಷಾರ್ಥ ಮಾಡಿಸುವುದಿಲ್ಲ. ಅಧಿಕ ಪುರುಷಾರ್ಥವೆಂದರೆ
ಶಿಕ್ಷಕರು ಸ್ವಲ್ಪ ಕೃಪೆ ತೋರುತ್ತಾರೆ. ಭಲೆ ಹೀಗೆ ಹಣ ತೆಗೆದುಕೊಳ್ಳುತ್ತಾರೆ. ವಿಶೇಷವಾಗಿ ಸಮಯ
ಕೊಟ್ಟು ಓದಿಸುತ್ತಾರೆ. ಇದರಿಂದ ಅವರು ಹೆಚ್ಚು ಓದಿ ಬುದ್ಧಿವಂತರಾಗುತ್ತಾರೆ. ಇಲ್ಲಂತೂ
ಹೆಚ್ಚಿನದಾಗಿ ಏನನ್ನೂ ಓದುವಂತಿಲ್ಲ. ಇಲ್ಲಿನ ಮಾತೇ ಹೊಸದಾಗಿದೆ. ತಂದೆಯು ಒಂದೇ ಮಹಾಮಂತ್ರವನ್ನು
ಕೊಡುತ್ತಾರೆ - “ಮನ್ಮಾನಭವ” ನೆನಪಿನಿಂದ ಏನಾಗುತ್ತದೆಯೆಂಬುದನ್ನೂ ಸಹ ತಿಳಿದುಕೊಂಡಿದ್ದೀರಿ.
ತಂದೆಯೇ ಪತಿತ-ಪಾವನನಾಗಿದ್ದಾರೆ, ಅವರನ್ನು ನೆನಪು ಮಾಡುವುದರಿಂದಲೇ ಪಾವನರಾಗುತ್ತೇವೆ.
ಈಗ ನೀವು ಮಕ್ಕಳಿಗೆ ಜ್ಞಾನವಿದೆ, ಎಷ್ಟು ನೆನಪು ಮಾಡುವಿರೋ ಅಷ್ಟು ಪಾವನರಾಗುವಿರಿ. ಕಡಿಮೆ ನೆನಪು
ಮಾಡಿದರೆ ಕಡಿಮೆ ಪಾವನರಾಗುವಿರಿ. ಇದು ನೀವು ಮಕ್ಕಳ ಪುರುಷಾರ್ಥವನ್ನು ಅವಲಂಭಿಸಿದೆ. ಬೇಹದ್ದಿನ
ತಂದೆಯನ್ನು ನೆನಪು ಮಾಡಿ ನಾವು ಈ ರೀತಿಯಾಗಬೇಕು. ಈ ಲಕ್ಷ್ಮೀ-ನಾರಾಯಣರ ಮಹಿಮೆಯನ್ನಂತೂ
ಪ್ರತಿಯೊಬ್ಬರೂ ತಿಳಿದುಕೊಂಡಿದ್ದಾರೆ. ತಾವು ಪುಣ್ಯಾತ್ಮರಾಗಿದ್ದೀರಿ, ನಾವು
ಪಾಪಾತ್ಮರಾಗಿದ್ದೇವೆಂದು ಹೇಳುತ್ತಾರೆ. ಅನೇಕ ಮಂದಿರಗಳಾಗಿವೆ, ಅಲ್ಲಿಗೆ ಎಲ್ಲರೂ ಏನು ಮಾಡಲು
ಹೋಗುತ್ತಾರೆ? ದರ್ಶನದಿಂದ ಲಾಭವೇನೂ ಆಗುವುದಿಲ್ಲ. ಒಬ್ಬರು ಇನ್ನೊಬ್ಬರನ್ನು ನೋಡಿ ಹೊರಟು
ಹೋಗುತ್ತಾರೆ. ಕೇವಲ ದರ್ಶನ ಮಾಡಲು ಹೋಗುತ್ತಾರೆ. ಇಂತಹವರು ಯಾತ್ರೆಗೆ ಹೋಗುತ್ತಿದ್ದಾರೆ, ನಾವೂ
ಹೋಗೋಣವೆಂದು ಹೋಗುತ್ತಾರೆ. ಇದರಿಂದೇನಾಗುವುದು? ಏನೂ ಇಲ್ಲ. ನೀವು ಮಕ್ಕಳೂ ಸಹ ಯಾತ್ರೆಗಳನ್ನು
ಮಾಡಿದ್ದೀರಿ. ಹೇಗೆ ಅನ್ಯ ಹಬ್ಬಗಳನ್ನು ಆಚರಿಸುವರೋ ಹಾಗೆಯೇ ಈ ಯಾತ್ರೆಯನ್ನು ಒಂದು ಹಬ್ಬವೆಂದು
ತಿಳಿಯುವರು. ನೀವೂ ಸಹ ನೆನಪಿನ ಯಾತ್ರೆಯನ್ನು ಒಂದು ಹಬ್ಬವೆಂದು ತಿಳಿಯುತ್ತೀರಿ. ನೀವು ನೆನಪಿನ
ಯಾತ್ರೆಯಲ್ಲಿರುತ್ತೀರಿ. ಒಂದೇ ಶಬ್ಧವಾಗಿದೆ - ಮನ್ಮನಾಭವ. ಈ ನಿಮ್ಮ ಯಾತ್ರೆಯು ಮನ್ಮಾನಭವ ಆಗಿದೆ.
ನಾವು ಅನಾದಿಯಿಂದಲೂ ಈ ಯಾತ್ರೆಗಳನ್ನು ಮಾಡುತ್ತಾ ಬಂದಿದ್ದೇವೆ ಎಂದು ಅವರೂ ಸಹ ಹೇಳುತ್ತಾರೆ ಆದರೆ
ನಾವು ಕಲ್ಪ-ಕಲ್ಪವೂ ಈ ಯಾತ್ರೆ ಮಾಡುತ್ತೇವೆ. ತಂದೆಯು ಬಂದು ಈ ಯಾತ್ರೆಯನ್ನು ಕಲಿಸುತ್ತಾರೆಂದು
ನೀವೀಗ ಜ್ಞಾನ ಸಹಿತವಾಗಿ ಹೇಳುತ್ತೀರಿ. ಅವರು ನಾಲ್ಕಾರು ಧಾಮಗಳನ್ನು ಪ್ರತೀ ಜನ್ಮದಲ್ಲಿ ಯಾತ್ರೆ
ಮಾಡುತ್ತಲೇ ಬರುತ್ತಾರೆ. ಇಲ್ಲಂತೂ ಬೇಹದ್ದಿನ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು
ಮಾಡಿದರೆ ನೀವು ಪಾವನರಾಗುವಿರಿ. ಯಾತ್ರೆಯಿಂದ ನೀವು ಪಾವನರಾಗುವಿರಿ ಎಂಬ ಮಾತನ್ನು ಮತ್ತ್ಯಾರೂ
ಹೇಳುವುದಿಲ್ಲ. ಮನುಷ್ಯರು ಯಾತ್ರೆಗೆ ಹೋಗುತ್ತಾರೆಂದರೆ ಆ ಸಮಯದಲ್ಲಿ ಪಾವನರಾಗಿರುತ್ತಾರೆ.
ಇತ್ತೀಚೆಗಂತೂ ಅಲ್ಲಿಯೂ ಸಹ ಕೊಳಕಾಗಿ ಬಿಟ್ಟಿದೆ. ಪಾವನರಾಗಿರುವುದಿಲ್ಲ. ಈ ಆತ್ಮಿಕ ಯಾತ್ರೆಯ
ಬಗ್ಗೆ ಯಾರಿಗೂ ತಿಳಿದಿಲ್ಲ. ಈಗ ನಿಮಗೆ ತಂದೆಯು ತಿಳಿಸಿದ್ದಾರೆ - ಇದು ಸತ್ಯವಾದ ನೆನಪಿನ
ಯಾತ್ರೆಯಾಗಿದೆ. ಆ ಯಾತ್ರೆಗಾಗಿ ಸುತ್ತಾಡಲು ಹೋಗುತ್ತಾರೆ ಆದರೂ ಸಹ ಹೇಗಿದ್ದವರು ಹಾಗೆಯೇ ಉಳಿದು
ಬಿಡುತ್ತಾರೆ. ಕೇವಲ ಸುತ್ತಾಡುತ್ತಿರುತ್ತಾರೆ. ಹೇಗೆ ವಾಸ್ಕೋಡಿಗಾಮನು ಸೃಷ್ಟಿಯನ್ನು ಪರ್ಯಟನೆ
ಮಾಡಿದನೋ ಅದೇ ರೀತಿ ಇವರೂ ಸಹ ಸುತ್ತುತ್ತಿರುತ್ತಾರೆ. ನಾಲ್ಕಾರೂ ಕಡೆ ಸುತ್ತಿದೆವು ಆದರೂ ಬಹಳಷ್ಟು
ದೂರ ಉಳಿದೆವು ಎಂದು ಗೀತೆಯಿದೆಯಲ್ಲವೆ. ಭಕ್ತಿಮಾರ್ಗದಲ್ಲಂತೂ ಯಾರೂ ಭಗವಂತನೊಂದಿಗೆ ಮಿಲನ ಮಾಡಿಸಲು
ಸಾಧ್ಯವಿಲ್ಲ, ಯಾರಿಗೂ ಭಗವಂತನು ಸಿಗಲಿಲ್ಲ. ಭಗವಂತನಿಂದ ದೂರವೇ ಉಳಿದರು. ಸುತ್ತಾಡಿ ಬಂದು ಪುನಃ
ಮನೆಯಲ್ಲಿ, ಪಂಚ ವಿಕಾರಗಳಲ್ಲಿ ಸಿಲುಕುತ್ತಾರೆ, ಅವೆಲ್ಲವೂ ಸುಳ್ಳು ಯಾತ್ರೆಗಳಾಗಿವೆ. ನೀವು
ಮಕ್ಕಳು ಈಗ ತಿಳಿದುಕೊಂಡಿದ್ದೀರಿ - ಇದು ಪುರುಷೋತ್ತಮ ಸಂಗಮಯುಗವಾಗಿದೆ. ಈಗ ತಂದೆಯು ಬಂದಿದ್ದಾರೆ,
ತಂದೆಯು ಬಂದಿದ್ದಾರೆ ಎಂಬ ಮಾತನ್ನು ಕೊನೆಗೊಂದು ದಿನ ಎಲ್ಲರೂ ತಿಳಿದುಕೊಳ್ಳುವರು. ಭಗವಂತನು
ಕೊನೆಗೂ ಸಿಗುವರು, ಆದರೆ ಹೇಗೆ? ಇದನ್ನು ಯಾರೂ ತಿಳಿದುಕೊಂಡಿಲ್ಲ. ಇದಂತೂ ಮಧುರಾತಿ ಮಧುರ
ಮಕ್ಕಳಿಗೇ ತಿಳಿದಿದೆ - ನಾವು ಶ್ರೀಮತದಂತೆ ಈ ಭಾರತವನ್ನು ಪುನಃ ಸ್ವರ್ಗವನ್ನಾಗಿ ಮಾಡುತ್ತಿದ್ದೇವೆ.
ನೀವು ಭಾರತದ ಹೆಸರನ್ನೇ ತೆಗೆದುಕೊಳ್ಳುತ್ತೀರಿ, ಆ ಸಮಯದಲ್ಲಿ ಮತ್ತ್ಯಾವುದೇ ಧರ್ಮವಿರುವುದಿಲ್ಲ.
ಇಡೀ ವಿಶ್ವವೇ ಪವಿತ್ರವಾಗಿ ಬಿಡುತ್ತದೆ. ಈಗಂತೂ ಅನೇಕ ಧರ್ಮಗಳಿವೆ, ತಂದೆಯು ಬಂದು ನಿಮಗೆ ಇಡೀ
ವೃಕ್ಷದ ಜ್ಞಾನವನ್ನು ತಿಳಿಸುತ್ತಾರೆ, ನಿಮಗೆ ಸ್ಮೃತಿ ತರಿಸುತ್ತಾರೆ. ನೀವೇ ದೇವತೆಗಳಾಗಿದ್ದಿರಿ
ನಂತರ ಕ್ಷತ್ರಿಯ, ವೈಶ್ಯ, ಶೂದ್ರರಾದಿರಿ. ಈಗ ನೀವೇ ಬ್ರಾಹ್ಮಣರಾಗಿದ್ದೀರಿ, ಈ ಹಮ್ ಸೋ ಸೋ ಹಮ್ನ
ಅರ್ಥವನ್ನು ತಂದೆಯು ಎಷ್ಟು ಸಹಜವಾಗಿ ತಿಳಿಸುತ್ತಾರೆ! ಓಂ ಅರ್ಥಾತ್ ನಾನಾತ್ಮ. ಹೀಗೆ ಚಕ್ರವನ್ನು
ಸುತ್ತುತ್ತೇನೆ. ಇದನ್ನು ಅವರು ನಾನಾತ್ಮನೇ ಪರಮಾತ್ಮ, ಪರಮಾತ್ಮನೇ ಆತ್ಮನೆಂದು ಹೇಳಿ ಬಿಡುತ್ತಾರೆ.
ಹಮ್ ಸೋ ಸೋ ಹಮ್ನ ಯಥಾರ್ಥ ಅರ್ಥವನ್ನು ತಿಳಿದುಕೊಂಡಿರುವವರು ಯಾರೊಬ್ಬರೂ ಇಲ್ಲ. ಆದ್ದರಿಂದ ತಂದೆಯು
ತಿಳಿಸುತ್ತಾರೆ - ಈ ಯಾವ ಮಂತ್ರವಿದೆಯೋ ಇದನ್ನು ಪ್ರತೀ ಕ್ಷಣ ನೆನಪಿಟ್ಟುಕೊಳ್ಳಬೇಕು. ಚಕ್ರವು
ಬುದ್ಧಿಯಲ್ಲಿಲ್ಲವೆಂದರೆ ಚಕ್ರವರ್ತಿ ರಾಜರು ಹೇಗಾಗುತ್ತೀರಿ! ಈಗ ನಾವಾತ್ಮರು
ಬ್ರಾಹ್ಮಣರಾಗಿದ್ದೇವೆ, ಮತ್ತೆ ನಾವೇ ದೇವತೆಗಳಾಗುತ್ತೇವೆ. ನೀವು ಇದನ್ನು ಯಾರೊಂದಿಗಾದರೂ ಕೇಳಿ,
ಯಾರೂ ತಿಳಿಸುವುದಿಲ್ಲ. ಅವರಂತೂ 84 ಜನ್ಮಗಳ ಅರ್ಥವನ್ನೂ ತಿಳಿದುಕೊಂಡಿಲ್ಲ. ಭಾರತದ ಉತ್ಥಾನ ಹಾಗೂ
ಪಥನದ ಗಾಯನವಿದೆ. ಇದು ಸರಿಯಾಗಿದೆ. ಸತೋಪ್ರಧಾನ, ಸತೋ, ರಜೋ, ತಮೋ. ಸೂರ್ಯವಂಶಿ, ಚಂದ್ರವಂಶಿ,
ವೈಶ್ಯವಂಶಿ...... ಈಗ ನೀವು ಮಕ್ಕಳಿಗೆ ಎಲ್ಲವೂ ಅರ್ಥವಾಗಿದೆ. ಬೀಜ ರೂಪ ತಂದೆಯನ್ನೇ ಜ್ಞಾನ
ಸಾಗರನೆಂದು ಕರೆಯಲಾಗುತ್ತದೆ. ಅವರು ಈ ಚಕ್ರದಲ್ಲಿ ಬರುವುದಿಲ್ಲ. ನಾವು ಜೀವಾತ್ಮರು ಪರಮಾತ್ಮನಾಗಿ
ಬಿಡುತ್ತೇವೆಂದಲ್ಲ. ತಂದೆಯು ಕೇವಲ ತಮ್ಮ ಸಮಾನ ಜ್ಞಾನಪೂರ್ಣರನ್ನಾಗಿ ಮಾಡುತ್ತಾರೆಯೇ ಹೊರತು ತಮ್ಮ
ಸಮಾನ ಭಗವಂತರನ್ನಾಗಿ ಮಾಡುವುದಿಲ್ಲ. ಈ ಮಾತುಗಳನ್ನು ಬಹಳ ಚೆನ್ನಾಗಿ ತಿಳಿದುಕೊಳ್ಳಬೇಕಾಗಿದೆ ಆಗ
ಬುದ್ಧಿಯಲ್ಲಿ ಚಕ್ರವು ತಿರುಗುತ್ತದೆ, ಇದರ ಹೆಸರನ್ನೂ ಸ್ವದರ್ಶನ ಚಕ್ರವೆಂದು ಇಟ್ಟಿದ್ದಾರೆ. ನೀವು
ಬುದ್ಧಿಯಿಂದ ತಿಳಿದುಕೊಳ್ಳುತ್ತೀರಿ - ನಾವು ಹೇಗೆ ಈ 84 ಜನ್ಮಗಳ ಚಕ್ರದಲ್ಲಿ ಬಂದಿದ್ದೇವೆ.
ಇದರಲ್ಲಿ ಎಲ್ಲವೂ ಬಂದು ಬಿಡುತ್ತದೆ. ಸಮಯ, ವರ್ಣ, ವಂಶಾವಳಿ ಎಲ್ಲವೂ ಬಂದು ಬಿಡುತ್ತದೆ.
ಈಗ ನೀವು ಮಕ್ಕಳ ಬುದ್ಧಿಯಲ್ಲಿ ಇಡೀ ಜ್ಞಾನವಿರಬೇಕು. ಜ್ಞಾನದಿಂದಲೇ ಶ್ರೇಷ್ಠ ಪದವಿ ಸಿಗುತ್ತದೆ.
ಜ್ಞಾನವಿದ್ದರೆ ಅನ್ಯರಿಗೂ ಕೊಡುತ್ತೀರಿ. ಇಲ್ಲಿ ನಿಮ್ಮಿಂದ ಯಾವುದೇ ಪೇಪರ್ ಇತ್ಯಾದಿಗಳನ್ನು
ತುಂಬಿಸುವುದಿಲ್ಲ. ಆ ಶಾಲೆಗಳಲ್ಲಿ ಯಾವಾಗ ಪರೀಕ್ಷೆ ನಡೆಯುವುದೋ ಆಗ ಪ್ರಶ್ನೆ ಪತ್ರಿಕೆಗಳು
ವಿದೇಶದಿಂದ ಬರುತ್ತವೆ. ಯಾರು ವಿದೇಶದಲ್ಲಿ ಓದುವರೋ ಅವರ ಫಲಿತಾಂಶವೂ ಸಹ ಅಲ್ಲಿಯೇ ಹೊರ ಬರುತ್ತದೆ.
ಅದರಲ್ಲಿಯೂ ಯಾರು ಬಹಳ ದೊಡ್ಡ ಎಜುಕೇಷನ್ ಅಥಾರಿಟಿಯಾಗಿರುವರೋ ಅವರೇ ಪತ್ರಿಕೆಗಳನ್ನು ಮೌಲ್ಯಮಾಪನ
ಮಾಡುತ್ತಾರೆ ಆದರೆ ನಿಮ್ಮ ಪತ್ರಿಕೆಗಳಿಗೆ ಯಾರು ಮೌಲ್ಯಮಾಪನ ಮಾಡುತ್ತಾರೆ? ಸ್ವಯಂ ನೀವೇ
ಮಾಡಿಕೊಳ್ಳುತ್ತೀರಿ. ಸ್ವಯಂನ್ನು ಹೇಗೆ ಬೇಕೋ ಹಾಗೆ ಮಾಡಿಕೊಳ್ಳಿ. ಪುರುಷಾರ್ಥದಿಂದ ಯಾವ ಪದವಿ
ಬೇಕೋ ಆ ಪದವಿಯನ್ನು ತಂದೆಯಿಂದ ಪಡೆದುಕೊಳ್ಳಿ. ಪ್ರದರ್ಶನಿ ಮುಂತಾದುವುಗಳಲ್ಲಿ ನೀವು ಏನಾಗುವಿರಿ
ಎಂದು ಕೇಳುತ್ತೀರಲ್ಲವೆ. ದೇವತೆಗಳಾಗುತ್ತೀರಾ, ಬ್ಯಾರಿಸ್ಟರ್ ಆಗುವಿರಾ.... ಏನಾಗುವಿರಿ? ಎಷ್ಟು
ತಂದೆಯನ್ನು ನೆನಪು ಮಾಡುತ್ತೀರಿ, ಸರ್ವೀಸ್ ಮಾಡುತ್ತೀರೋ ಅಷ್ಟು ಫಲವು ಸಿಗುವುದು. ಯಾರು ಚೆನ್ನಾಗಿ
ತಂದೆಯನ್ನು ನೆನಪು ಮಾಡುವರೋ ಅವರು ನಾವೂ ಸಹ ಸರ್ವೀಸ್ ಮಾಡಬೇಕೆಂದು ತಿಳಿಯುತ್ತಾರೆ. ಪ್ರಜೆಗಳನ್ನು
ಮಾಡಿಕೊಳ್ಳಬೇಕಲ್ಲವೆ. ಈಗ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಅದರಲ್ಲಿ ಎಲ್ಲರೂ ಬೇಕು. ಅಲ್ಲಿ
ಮಂತ್ರಿಗಳಿರುವುದಿಲ್ಲ. ಯಾರಿಗೆ ಬುದ್ಧಿಯು ಕಡಿಮೆಯಿರುತ್ತದೆಯೊ ಅವರಿಗೆ ಮಂತ್ರಿಗಳ
ಅವಶ್ಯಕತೆಯಿರುತ್ತದೆ. ನಿಮಗೆ ಅಲ್ಲಿ ಸಲಹೆಯ ಅವಶ್ಯಕತೆಯಿರುವುದಿಲ್ಲ. ತಂದೆಯ ಬಳಿ ಸಲಹೆ
ತೆಗೆದುಕೊಳ್ಳಲು ಬರುತ್ತಾರೆ – ಸ್ಥೂಲ ಮಾತುಗಳ ಸಲಹೆ ತೆಗೆದುಕೊಳ್ಳುತ್ತಾರೆ, ಹಣವನ್ನು ಏನು
ಮಾಡುವುದು? ವ್ಯವಹಾರ ಹೇಗೆ ಮಾಡುವುದು? ಇದಕ್ಕೆ ತಂದೆಯು ಹೇಳುತ್ತಾರೆ - ಈ ಪ್ರಾಪಂಚಿಕ
ಮಾತುಗಳನ್ನು ತಂದೆಯ ಬಳಿ ತರಬೇಡಿ. ಹಾ! ಅವರಿಗೆ ಬೇಸರವಾಗದಿರಲೆಂದು ಏನಾದರೂ ಧೈರ್ಯವನ್ನು ಹೇಳಿ
ಕಳುಹಿಸುತ್ತೇನೆ. ಇದೇನೂ ನನ್ನ ಕೆಲಸವಲ್ಲ. ನನ್ನದು ನಿಮಗೆ ಮಾರ್ಗವನ್ನು ತಿಳಿಸುವ ಈಶ್ವರೀಯ
ಕರ್ತವ್ಯವಾಗಿದೆ. ನೀವು ವಿಶ್ವದ ಮಾಲೀಕರು ಹೇಗಾಗುವಿರಿ? ನಿಮಗೆ ಶ್ರೀಮತ ಸಿಕ್ಕಿದೆ. ಉಳಿದೆಲ್ಲವೂ
ಆಸುರೀ ಮತಗಳಾಗಿವೆ. ಸತ್ಯಯುಗದಲ್ಲಿ ಶ್ರೀಮತವೆಂದು ಹೇಳುತ್ತಾರೆ, ಕಲಿಯುಗದಲ್ಲಿ ಆಸುರೀ ಮತವಿದೆ.
ಅದು ಸುಖಧಾಮವಾಗಿದೆ, ಅಲ್ಲಿ ಎಂದೂ ಸಹ ನಿಮ್ಮ ಯೋಗಕ್ಷೇಮ ಹೇಗಿದೆ? ಆರೋಗ್ಯ ಚೆನ್ನಾಗಿದೆಯೇ? ಎಂದು
ಕೇಳುವುದಿಲ್ಲ. ಅಲ್ಲಿ ಈ ಶಬ್ಧಗಳೇ ಇರುವುದಿಲ್ಲ, ಅದನ್ನು ಇಲ್ಲಿ ಕೇಳಲಾಗುತ್ತದೆ - ಯಾವುದೇ
ತೊಂದರೆಯಿಲ್ಲವೇ? ರಾಜಿ ಖುಷಿಯಾಗಿದ್ದೀರಾ? ಇದರಲ್ಲಿಯೂ ಬಹಳ ಮಾತುಗಳು ಬರುತ್ತವೆ. ಸತ್ಯಯುಗದಲ್ಲಿ
ಯೋಗಕ್ಷೇಮ ಕೇಳಲು ಅಲ್ಲಿ ದುಃಖವೇ ಇರುವುದಿಲ್ಲ. ಇದು ದುಃಖದ ಪ್ರಪಂಚವಾಗಿದೆ. ವಾಸ್ತವದಲ್ಲಿ
ನಿಮ್ಮೊಂದಿಗೆ ಯಾರೂ ಕೇಳಲು ಸಾಧ್ಯವಿಲ್ಲ. ಭಲೆ ಮಾಯೆಯು ಬೀಳಿಸುವಂತದ್ದಾಗಿದೆ ಆದರೂ ಸಹ ತಂದೆಯು
ಸಿಕ್ಕಿದ್ದಾರಲ್ಲವೆ. ಹಾಗೇನಾದರೂ ಕೇಳಿದರೆ ನೀವು ಹೇಳಿರಿ - ನೀವೇನು ಯೋಗಕ್ಷೇಮವನ್ನು ಕೇಳುತ್ತೀರಿ!
ನಾವು ಈಶ್ವರನ ಮಕ್ಕಳಾಗಿದ್ದೇವೆ, ನಮ್ಮೊಂದಿಗೇನು ಕೇಳುತ್ತೀರಿ! ಪರಬ್ರಹ್ಮದಲ್ಲಿರುವ ಪರಮಾತ್ಮ
ತಂದೆಯನ್ನು ಪಡೆಯುವ ಚಿಂತೆಯಿತ್ತು, ಅವರು ಸಿಕ್ಕಿ ಬಿಟ್ಟರು ಅಂದಮೇಲೆ ಇನ್ನ್ಯಾವುದರ ಚಿಂತೆ!
ಇದನ್ನು ಸದಾ ನೆನಪಿಟ್ಟುಕೊಳ್ಳಬೇಕು - ನಾವು ಯಾರ ಮಕ್ಕಳಾಗಿದ್ದೇವೆ? ಇದೂ ಸಹ ಬುದ್ಧಿಯಲ್ಲಿ
ಜ್ಞಾನವಿದೆ - ನಾವು ಪಾವನರಾಗಿ ಬಿಟ್ಟರೆ ಮತ್ತೆ ಯುದ್ಧ ಆರಂಭವಾಗುವುದು. ನಿಮ್ಮೊಂದಿಗೆ ಯಾರಾದರೂ
ನೀವು ಖುಷಿಯಾಗಿದ್ದೀರಾ ಎಂದು ಕೇಳಿದರೆ ತಿಳಿಸಿ, ನಾವಂತೂ ಸದಾ ಖುಷಿಯಾಗಿರುತ್ತೇವೆ. ರೋಗಿಯಾದಾಗಲೂ
ಸಹ ತಂದೆಯ ನೆನಪಿನಲ್ಲಿರಿ. ನೀವು ಸ್ವರ್ಗಕ್ಕಿಂತಲೂ ಹೆಚ್ಚಿನದಾಗಿ ಇಲ್ಲಿ ಖುಷಿಯಾಗಿದ್ದೀರಿ.
ಯಾವಾಗ ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುವ ತಂದೆಯು ಸಿಕ್ಕಿದ್ದಾರೆ ಅವರು ನಮ್ಮನ್ನು ಇಷ್ಟು
ಯೋಗ್ಯರನ್ನಾಗಿ ಮಾಡುತ್ತಾರೆ ಅಂದಮೇಲೆ ನಮಗೇನು ಚಿಂತೆಯಿದೆ! ಈಶ್ವರನ ಮಕ್ಕಳಿಗೇನು ಚಿಂತೆ! ಅಲ್ಲಿ
ದೇವತೆಗಳಿಗೂ ಸಹ ಚಿಂತೆಯಿರುವುದಿಲ್ಲ. ದೇವತೆಗಳಿಗೂ ಹಿರಿಯರು ಈಶ್ವರನಾಗಿದ್ದಾರೆ ಅಂದಮೇಲೆ
ಈಶ್ವರನ ಮಕ್ಕಳಿಗೆ ಚಿಂತೆಯಿರಲು ಸಾಧ್ಯವೆ? ತಂದೆಯು ನಮಗೆ ಓದಿಸುತ್ತಾರೆ. ಅವರು ನಮ್ಮ ಶಿಕ್ಷಕ,
ಸದ್ಗುರುವಾಗಿದ್ದಾರೆ. ನಮ್ಮ ಮೇಲೆ ಕಿರೀಟವನ್ನಿಟ್ಟು ಕಿರೀಟಧಾರಿಗಳನ್ನಾಗಿ ಮಾಡುತ್ತಿದ್ದಾರೆ.
ನಮಗೆ ವಿಶ್ವದ ಕಿರೀಟವು ಹೇಗೆ ಸಿಗುತ್ತದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ತಂದೆಯು
ಸ್ಥೂಲವಾಗಿ ಕಿರೀಟವನ್ನಿಡುವುದಿಲ್ಲ. ಇದೂ ನಿಮಗೆ ತಿಳಿದಿದೆ - ಸತ್ಯಯುಗದಲ್ಲಿ ತಂದೆಯು ತನ್ನ
ಮಕ್ಕಳಿಗೆ ತಮ್ಮ ಕಿರೀಟವನ್ನಿಡುತ್ತಾರೆ. ಇದಕ್ಕೆ ಆಂಗ್ಲ ಭಾಷೆಯಲ್ಲಿ ಕ್ರೌನ್ಪ್ರಿನ್ಸ್ ಎಂದು
ಹೇಳುತ್ತಾರೆ. ಇಲ್ಲಿ ಎಲ್ಲಿಯವರೆಗೆ ತಂದೆಯ ಕಿರೀಟವು ಮಕ್ಕಳಿಗೆ ಸಿಗುವುದಿಲ್ಲವೋ ಅಲ್ಲಿಯವರೆಗೆ
ನಮ್ಮ ತಂದೆಯು ಸತ್ತರೆ ನಮಗೆ ಕಿರೀಟ ಸಿಕ್ಕಿ ಬಿಡುವುದು ಎಂದು ಮಕ್ಕಳಿಗೆ ಉತ್ಕಂಠವಿರುತ್ತದೆ. ನಾನು
ರಾಜಕುಮಾರನಿಂದ ಮಹಾರಾಜನಾಗಬೇಕೆಂಬ ಆಸೆಯಿರುತ್ತದೆ. ಸತ್ಯಯುಗದಲ್ಲಿ ಈ ರೀತಿಯ ಮಾತಿಲ್ಲ. ತಮ್ಮ
ಸಮಯದಲ್ಲಿ ಕಾಯಿದೆಯನುಸಾರ ತಂದೆಯು ಮಕ್ಕಳಿಗೆ ಕಿರೀಟವನ್ನು ಕೊಟ್ಟು ದೂರ ಸರಿಯುತ್ತಾರೆ. ಅಲ್ಲಿ
ವಾನಪ್ರಸ್ಥದ ಚರ್ಚೆಯಾಗುವುದಿಲ್ಲ. ಮಕ್ಕಳಿಗೆ ಮಹಲು ಇತ್ಯಾದಿಗಳನ್ನು ಮಾಡಿಸುತ್ತಾರೆ,
ಆಸೆಗಳೆಲ್ಲವೂ ಪೂರ್ಣವಾಗುತ್ತದೆ. ನಿಮಗೆ ತಿಳಿದಿದೆ - ಸತ್ಯಯುಗದಲ್ಲಿ ಸುಖವೇ ಸುಖವಿರುತ್ತದೆ.
ಪ್ರಾಕ್ಟಿಕಲ್ನಲ್ಲಿ ಯಾವಾಗ ಅಲ್ಲಿ ಹೋಗುವಿರೋ ಆಗ ಅದೆಲ್ಲಾ ಸುಖವನ್ನು ಪಡೆಯುವಿರಿ. ಸ್ವರ್ಗದಲ್ಲಿ
ಏನಿರುವುದು ಎಂದು ನಿಮಗೇ ಗೊತ್ತು. ಒಂದು ಶರೀರವನ್ನು ಬಿಟ್ಟು ಮತ್ತೆ ಎಲ್ಲಿ ಹೋಗುವರು? ಈಗ ನಿಮಗೆ
ತಂದೆಯು ಸನ್ಮುಖದಲ್ಲಿ ಓದಿಸುತ್ತಿದ್ದಾರೆ, ನಾವು ಸತ್ಯ-ಸತ್ಯವಾಗಿ ಹೋಗುತ್ತೇವೆಂದು ನಿಮಗೆ
ತಿಳಿದಿದೆ. ಅವರೂ ಸಹ ನಾವು ಸ್ವರ್ಗದಲ್ಲಿ ಹೋಗುತ್ತೇವೆಂದು ಹೇಳುತ್ತಾರೆ ಆದರೆ ಯಾವುದಕ್ಕೆ
ಸ್ವರ್ಗವೆಂದು ಹೇಳಲಾಗುತ್ತದೆ ಎಂಬುದು ತಿಳಿದಿಲ್ಲ. ಜನ್ಮ-ಜನ್ಮಾಂತರದಿಂದ ಈ ಅಜ್ಞಾನದ ಮಾತುಗಳನ್ನೇ
ಕೇಳುತ್ತಾ ಬಂದಿರಿ. ಈಗ ತಂದೆಯು ನಿಮಗೆ ಸತ್ಯ ಮಾತುಗಳನ್ನು ತಿಳಿಸುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಸದಾ ರಾಜಿ
ಖುಷಿಯಾಗಿರಲು ತಂದೆಯ ನೆನಪಿನಲ್ಲಿರಬೇಕಾಗಿದೆ. ವಿದ್ಯೆಯಿಂದ ತಮ್ಮ ಮೇಲೆ ರಾಜ್ಯ
ಕಿರೀಟವನ್ನಿಟ್ಟುಕೊಳ್ಳಬೇಕಾಗಿದೆ.
2. ಶ್ರೀಮತದಂತೆ ಭಾರತವನ್ನು ಸ್ವರ್ಗವನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ. ಸದಾ ಶ್ರೀಮತದ ಪ್ರತಿ
ಗೌರವ ಕೊಡಬೇಕಾಗಿದೆ.
ವರದಾನ:
ಕನೆಕ್ಷನ್ ಮತ್ತು
ರಿಲೇಷನ್ (ಸಂಬಂಧ ಮತ್ತು ಸಂಪರ್ಕ) ಮುಖಾಂತರ ಮನಸಾ ಶಕ್ತಿಯ ಪ್ರತ್ಯಕ್ಷ ಪ್ರಮಾಣ ನೋಡುವಂತಹ
ಸೂಕ್ಷ್ಮ ಸೇವಾಧಾರಿ ಭವ.
ಹೇಗೆ ವಾಣಿಯ ಶಕ್ತಿ ಅಥವಾ
ಕರ್ಮದ ಶಕ್ತಿಯ ಪ್ರತ್ಯಕ್ಷ ಪ್ರಮಾಣ ಕಂಡು ಬರುತ್ತದೆ ಹಾಗೆಯೇ ಎಲ್ಲದಕ್ಕಿಂತ ಶಕ್ತಿಶಾಲಿ
ಸೈಲೆನ್ಸ್ನ ಶಕ್ತಿಯ ಪ್ರತ್ಯಕ್ಷ ಪ್ರಮಾಣವನ್ನು ನೋಡುವುದಕ್ಕಾಗಿ ಬಾಪ್ದಾದಾರವರ ಜೊತೆ ನಿರಂತರ
ಕನೆಕ್ಷನ್ ಮತ್ತು ರಿಲೇಷನ್ ಇರಬೇಕು, ಇದನ್ನೇ ಯೋಗಬಲ ಎಂದು ಹೇಳಲಾಗುವುದು. ಇಂತಹ ಯೋಗಬಲವುಳ್ಳ
ಆತ್ಮಗಳು ಸ್ಥೂಲದಲ್ಲಿ ದೂರ ಇರುವಂತಹ ಆತ್ಮಗಳಿಗೆ ಸಮ್ಮಖದ ಅನುಭವವನ್ನು ಮಾಡಿಸಲು ಸಾಧ್ಯ.
ಆತ್ಮಗಳನ್ನು ಆಹ್ವಾನ ಮಾಡಿ ಅವರನ್ನು ಪರಿವರ್ತನೆ ಮಾಡಲು ಸಾಧ್ಯ. ಇದೇ ಸೂಕ್ಷ್ಮ ಸೇವೆಯಾಗಿದೆ,
ಇದಕ್ಕಾಗಿ ಏಕಾಗ್ರತೆಯ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.
ಸ್ಲೋಗನ್:
ತಮ್ಮ ಸರ್ವ ಖಜಾನೆಗಳನ್ನೂ
ಸಫಲ ಮಾಡಿಕೊಳ್ಳುವವರೇ ಮಹಾದಾನಿ ಆತ್ಮಗಳಾಗಿದ್ದಾರೆ.
ಬ್ರಹ್ಮಾ ತಂದೆಯ ಸಮಾನ
ಸಂಪನ್ನ ಸ್ಥಿತಿಯ ಅನುಭವ ಮಾಡಿರಿ:-
ಪ್ರತಿಯೊಂದು
ಗುಣ ಹಾಗೂ ಶಕ್ತಿಯನ್ನು ತಮ್ಮ ಸ್ವರೂಪವನ್ನಾಗಿ ಮಾಡಿಕೊಳ್ಳಿರಿ. ನಾನಾತ್ಮ ನೆನಪಿನ ಸ್ವರೂಪ,
ಸರ್ವಗುಣ ಮತ್ತು ಸರ್ವಶಕ್ತಿಗಳ ಸ್ವರೂಪನಾಗಿದ್ದೇನೆ. ಗುಣ ಹಾಗೂ ಶಕ್ತಿಗಳು ಬೇರೆಯಲ್ಲ ಆದರೆ
ರೂಪದಲ್ಲಿ ಸಮಾವೇಶವಾಗಿದೆ. ನೆನಪು ಮಾಡುವಂತಹ ಪರಿಶ್ರಮವು ಇಲ್ಲ ಆದರೆ ನೆನಪಿನಲ್ಲಿ
ಸಮಾವೇಶವಾಗಿರಬೇಕು. ಇದೇ ಅಭ್ಯಾಸವು ಸಮಾನ ಹಾಗೂ ಸಂಪನ್ನವನ್ನಾಗಿ ಮಾಡಿ ಬಿಡುತ್ತದೆ.