02.02.20    Avyakt Bapdada     Kannada Murli     18.11.85     Om Shanti     Madhuban


"ಭಗವಂತನ ಭಾಗ್ಯವಂತ ಮಕ್ಕಳ ಲಕ್ಷಣಗಳು"


ಬಾಪ್ದಾದಾರವರು ಎಲ್ಲಾ ಮಕ್ಕಳ ಮಸ್ತಕದಲ್ಲಿ ಭಾಗ್ಯದ ರೇಖೆಗಳನ್ನು ನೋಡುತ್ತಿದ್ದಾರೆ. ಪ್ರತಿಯೊಂದು ಮಕ್ಕಳ ಮಸ್ತಕದಲ್ಲಿ ಭಾಗ್ಯದ ರೇಖೆಗಳು ತಯಾರಾಗಿವೆ ಆದರೆ ಕೆಲಕೆಲವು ಮಕ್ಕಳದು ಸ್ಪಷ್ಟ ರೇಖೆಗಳಿದೆ ಮತ್ತು ಕೆಲಕೆಲವು ಮಕ್ಕಳದು ಸ್ಪಷ್ಟ ರೇಖೆಗಳಲ್ಲಿ. ಯಾವಾಗಿನಿಂದ ಭಗವಂತ ತಂದೆಯ ಮಕ್ಕಳಾದರು, ಭಗವಂತ ಅರ್ಥಾತ್ ಭಾಗ್ಯವಿಧಾತಾ. ಭಗವಂತ ಅರ್ಥಾತ್ ದಾತಾ-ವಿಧಾತಾ ಎಂದು. ಆದ್ದರಿಂದ ಮಕ್ಕಳಾಗುವುದರಿಂದ ಭಾಗ್ಯದ ಅಧಿಕಾರ ಅಂದರೆ ಆಸ್ತಿಯು ಎಲ್ಲಾ ಮಕ್ಕಳಿಗೂ ಅವಶ್ಯವಾಗಿ ಪ್ರಾಪ್ತವಾಗುತ್ತದೆ. ಆದರೆ ಸಿಕ್ಕಿರುವ ಆ ಆಸ್ತಿಯನ್ನು ಜೀವನದಲ್ಲಿ ಧಾರಣೆ ಮಾಡುವುದು, ಸೇವೆಯಲ್ಲಿ ಉಪಯೋಗಿಸಿ ಶ್ರೇಷ್ಠವನ್ನಾಗಿ ಮಾಡಿಕೊಳ್ಳುವುದು, ಸ್ಪಷ್ಟ ಮಾಡಿಕೊಳ್ಳುವುದು - ಇದರಲ್ಲಿ ನಂಬರ್ವಾರ್ ಇದ್ದಾರೆ ಏಕೆಂದರೆ ಈ ಭಾಗ್ಯವನ್ನೆಷ್ಟು ಸ್ವಯಂ ಪ್ರತಿ ಅಥವಾ ಸೇವೆಗಾಗಿ ಕಾರ್ಯದಲ್ಲಿ ಉಪಯೋಗಿಸುತ್ತೀರಿ, ಅಷ್ಟೂ ಹೆಚ್ಚುತ್ತದೆ ಅರ್ಥಾತ್ ರೇಖೆಯು ಸ್ಪಷ್ಟವಾಗುತ್ತದೆ. ತಂದೆಯು ಒಬ್ಬರಾಗಿದ್ದಾರೆ ಮತ್ತು ಕೊಡುವುದೂ ಸಹ ಎಲ್ಲರಿಗೂ ಒಂದೇರೀತಿ ಕೊಡುತ್ತಾರೆ. ತಂದೆಯವರು ನಂಬರ್ವಾರ್ ಆಗಿ ಭಾಗ್ಯವನ್ನು ಹಂಚುವುದಿಲ್ಲ ಆದರೆ ಭಾಗ್ಯವನ್ನು ರೂಪಿಸಿಕೊಳ್ಳುವವರು ಅರ್ಥಾತ್ ಭಾಗ್ಯವಂತನಾಗುವವರು, ಇಷ್ಟು ದೊಡ್ಡ ಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುವುದರಲ್ಲಿ ಯಥಾಶಕ್ತಿಯಾಗುವ ಕಾರಣದಿಂದ ನಂಬರ್ವಾರ್ ಆಗಿ ಬಿಡುತ್ತಾರೆ. ಆದ್ದರಿಂದ ಕೆಲವರದು ರೇಖೆಗಳು ಸ್ಪಷ್ಟವಿದೆ, ಕೆಲವರದು ಸ್ಪಷ್ಟವಿಲ್ಲ. ಸ್ಪಷ್ಟವಾದ ರೇಖೆಯುಳ್ಳಂತಹ ಮಕ್ಕಳು ಸ್ವಯಂ ಸಹ ಪ್ರತಿಯೊಂದು ಕರ್ಮದಲ್ಲಿ ತನ್ನನ್ನು ಭಾಗ್ಯವಂತನೆಂದು ಅನುಭವ ಮಾಡುತ್ತಾರೆ. ಜೊತೆ ಜೊತೆಗೆ ಅವರ ಚಹರೆ ಮತ್ತು ಚಲನೆಯಿಂದ ಅನ್ಯರಿಗೂ ಭಾಗ್ಯದ ಅನುಭವವಾಗುತ್ತದೆ. ಇಂತಹ ಭಾಗ್ಯಶಾಲಿ ಮಕ್ಕಳನ್ನು ಅನ್ಯರೂ ಸಹ ನೋಡಿ ಯೋಚಿಸುತ್ತಾರೆ ಮತ್ತು ಹೇಳುತ್ತಾರೆ - ಈ ಆತ್ಮರು ಬಹಳ ಭಾಗ್ಯಶಾಲಿಯಾಗಿದ್ದಾರೆ. ಇವರ ಭಾಗ್ಯವು ಸದಾ ಶ್ರೇಷ್ಠವಾಗಿದೆ. ತಮ್ಮೊಂದಿಗೆ ತಾವು ಕೇಳಿಕೊಳ್ಳಿರಿ - ಪ್ರತೀ ಕರ್ಮದಲ್ಲಿ ತನ್ನನ್ನು ಭಗವಂತನು ಮಗು ಭಾಗ್ಯಶಾಲಿ ಎಂದು ಅನುಭವ ಮಾಡುತ್ತೀರಾ? ಭಾಗ್ಯವು ತಮ್ಮ ಆಸ್ತಿಯಾಗಿದೆ. ಆಸ್ತಿಯು ಎಂದಿಗೂ ಪ್ರಾಪ್ತಿಯಾಗುವುದಿಲ್ಲ, ಹೀಗಾಗಲು ಸಾಧ್ಯವೇ ಇಲ್ಲ. ಭಾಗ್ಯವನ್ನು ಆಸ್ತಿಯ ರೂಪದಲ್ಲಿ ಅನುಭವ ಮಾಡುತ್ತೀರಾ? ಅಥವಾ ಪರಿಶ್ರಮ ಪಡಬೇಕಾಗುತ್ತದೆಯೇ? ಆಸ್ತಿಯು ಸಹಜವಾಗಿ ಪ್ರಾಪ್ತಿಯಾಗುತ್ತದೆ. ಇದರಲ್ಲಿ ಪರಿಶ್ರಮವಿಲ್ಲ. ಲೌಕಿಕದಲ್ಲಿಯೂ ತಂದೆಯ ಖಜಾನೆಯ ಮೇಲೆ, ಆಸ್ತಿಯ ಮೇಲೆ ಮಕ್ಕಳ ಅಧಿಕಾರವು ಸ್ವತಹವಾಗಿಯೇ ಇರುತ್ತದೆ ಮತ್ತು ನಶೆಯಿರುತ್ತದೆ - ತಂದೆಯು ಆಸ್ತಿಯಲ್ಲಿ ಸಿಕ್ಕಿದೆ. ಹೀಗೆ ಭಾಗ್ಯದ ನಶೆಯಿದೆಯೇ ಅಥವಾ ಏರುವ ಮತ್ತು ಇಳಿಯುವುದಿರುತ್ತದೆಯೇ? ಅವಿನಾಶಿ ಆಸ್ತಿಯಿದೆಯೆಂದಾಗ ಎಷ್ಟೊಂದು ನಶೆಯಿರಬೇಕು! ಒಂದು ಜನ್ಮವೇನು, ಅನೇಕ ಜನ್ಮಗಳ ಭಾಗ್ಯವು ಜನ್ಮಸಿದ್ಧ ಅಧಿಕಾರವಾಗಿದೆ. ಇಂತಹ ನಶೆಯಿಂದ ವರ್ಣನೆ ಮಾಡುತ್ತೀರಾ! ಸದಾ ಭಾಗ್ಯದ ಹೊಳಪು ಪ್ರತ್ಯಕ್ಷ ರೂಪದಲ್ಲಿ ಅನ್ಯರಿಗೆ ಕಾಣಿಸಲಿ. ನಶೆ ಮತ್ತು ಹೊಳಪು ಎರಡೂ ಇದೆಯೇ? ಮರ್ಜ್ ರೂಪದಲ್ಲಿದೆಯೇ ಅಥವಾ ಇಮರ್ಜ್ ರೂಪದಲ್ಲಿದೆಯೇ? ಭಾಗ್ಯವಂತ ಆತ್ಮರ ಲಕ್ಷಣಗಳಾಗಿದೆ - ಭಾಗ್ಯವಂತ ಆತ್ಮನು ಸದಾ ಭಲೆ ಮಡಿಲಲ್ಲಿ ಬೆಳೆಯುತ್ತಿರಬಹುದು, ಭಲೆ ಗಲೀಚಾದ ಮೇಲೆ ನಡೆಯುತ್ತಾರೆ, ಉಯ್ಯಾಲೆಯಲ್ಲಿ ತೂಗುತ್ತಿರುತ್ತದೆ, ಮಣ್ಣಿನಲ್ಲಿ ಕಾಲನ್ನಿಡುವುದಿಲ್ಲ, ಎಂದಿಗೂ ಕಾಲು ಮೈಲಿಗೆಯಾಗುವುದಿಲ್ಲ. ಅವರುಗಳು ಗಲೀಚಾ(ಮ್ಯಾಟ್)ದ ಮೇಲೆ ನಡೆಯುತ್ತಾರೆ ಮತ್ತು ತಾವು ಬುದ್ಧಿಯೆಂಬ ಕಾಲಿನಿಂದ ಸದಾ ಬಂಧನಕ್ಕೆ ಬದಲಾಗಿ ಫರಿಶ್ಥೆಗಳ ಪ್ರಪಂಚದಲ್ಲಿರುತ್ತೀರಿ. ಈ ಹಳೆಯ ಮಣ್ಣಿನ ಪ್ರಪಂಚದಲ್ಲಿ ಬುದ್ಧಿಯೆಂಬ ಕಾಲನ್ನಿಡುವುದಿಲ್ಲ ಅರ್ಥಾತ್ ಬುದ್ಧಿಯನ್ನು ಮೈಲಿಗೆ ಮಾಡಿಕೊಳ್ಳುವುದಿಲ್ಲ. ಭಾಗ್ಯವಂತರು ಮಣ್ಣಿನ ಆಟಿಕೆಯೊಂದಿಗೆ ಆಡುವುದಿಲ್ಲ. ಸದಾ ರತ್ನಗಳೊಂದಿಗೆ ಆಡುತ್ತಾರೆ. ಭಾಗ್ಯವಂತರು ಸದಾ ಸಂಪನ್ನರಿರುತ್ತಾರೆ ಆದ್ದರಿಂದ ಇಚ್ಛಾ ಮಾತ್ರಂ ಅವಿದ್ಯಾ - ಇದೇ ಸ್ಥಿತಿಯಲ್ಲಿರುತ್ತಾರೆ. ಭಾಗ್ಯವಂತ ಆತ್ಮನು ಸದಾ ಮಹಾದಾನಿ ಪುಣ್ಯಾತ್ಮನಾಗಿ ಅನ್ಯರ ಭಾಗ್ಯವನ್ನೂ ರೂಪಿಸುತ್ತಿರುತ್ತಾರೆ. ಭಾಗ್ಯವಂತ ಆತ್ಮನು ಸದಾ ಕಿರೀಟ, ಸಿಂಹಾಸನ ಮತ್ತು ತಿಲಕಧಾರಿಯಾಗಿರುತ್ತಾರೆ. ಭಾಗ್ಯವಂತ ಆತ್ಮನಲ್ಲಿ ಎಷ್ಟು ಭಾಗ್ಯದ ಅಧಿಕಾರವಿದೆಯೇ, ಅಷ್ಟೇ ತ್ಯಾಗವುಳ್ಳ ಆತ್ಮರಾಗಿರುತ್ತಾರೆ. ಭಾಗ್ಯದ ಚಿಹ್ನೆಯು ತ್ಯಾಗವಾಗಿದೆ. ತ್ಯಾಗ ಭಾಗ್ಯವನ್ನು ಸ್ಪಷ್ಟ ಮಾಡುತ್ತದೆ. ಭಾಗ್ಯವಂತ ಆತ್ಮನು ಸದಾ ಭಗವಂತನ ಸಮಾನ ನಿರಾಕಾರಿ, ನಿರಹಂಕಾರಿ ಮತ್ತು ನಿರ್ವಿಕಾರಿ - ಈ ಮೂರೂ ವಿಶೇಷತೆಗಳಿಂದ ಸಂಪನ್ನವಾಗಿರುತ್ತಾನೆ. ಈ ಎಲ್ಲಾ ಚಿಹ್ನೆಗಳನ್ನು ತಮ್ಮಲ್ಲಿ ಅನುಭವ ಮಾಡುತ್ತೀರಿ? ಭಾಗ್ಯವಂತರ ಪಟ್ಟಿಯಲ್ಲಂತು ಇದ್ದೇ ಇರುತ್ತೀರಲ್ಲವೆ. ಆದರೆ ಯಥಾಶಕ್ತಿಯೇ ಅಥವಾ ಸರ್ವಶಕ್ತಿವಂತರೇ? ಮಾಸ್ಟರ್ ಆಗಿದ್ದೀರಲ್ಲವೆ? ತಂದೆಯ ಮಹಿಮೆಯಲ್ಲಿ ಎಂದಿಗೂ ಯಥಾಶಕ್ತಿ ಎಂದು ಅಥವಾ ನಂಬರ್ವಾರ್ ಎಂದು ಹೇಳುವುದಿಲ್ಲ, ಸದಾ ಸರ್ವಶಕ್ತಿವಂತನೆಂದು ಹೇಳುತ್ತಾರೆ. ಮಾಸ್ಟರ್ ಸರ್ವಶಕ್ತಿವಂತನು ಮತ್ತೇಕೆ ಯಥಾಶಕ್ತಿ? ಸದಾ ಶಕ್ತಿವಂತರು. ಯಥಾ ಶಬ್ಧಕ್ಕೆ ಬದಲಾಗಿ ಸದಾ ಶಕ್ತಿವಂತರಾಗಿ ಮತ್ತು ಅನ್ಯರನ್ನು ಮಾಡಿ. ತಿಳಿಯಿತೆ.

ಯಾವ ಝೋನಿನವರು ಬಂದಿದ್ದಾರೆ? ಎಲ್ಲರೂ ವರದಾನ ಭೂಮಿಯಲ್ಲಿ ತಲುಪಿ ಜೋಳಿಗೆಯನ್ನು ವರದಾನಗಳಿಂದ ತುಂಬಿಕೊಳ್ಳುತ್ತಿದ್ದೀರಲ್ಲವೆ. ವರದಾನ ಭೂಮಿಯ ಒಂದೊಂದು ಚರಿತ್ರೆಯಲ್ಲಿ, ಕರ್ಮದಲ್ಲಿ ವಿಶೇಷವಾಗಿ ವರದಾನಗಳನ್ನು ತುಂಬಿಕೊಂಡಿದ್ದೀರಿ. ಯಜ್ಞ ಭೂಮಿಯಲ್ಲಿ ಬಂದು ಭಲೆ ತರಕಾರಿಯನ್ನೇ ಕತ್ತರಿಸಬಹುದು, ಧಾನ್ಯಗಳ ಸ್ವಚ್ಛತೆಯನ್ನೇ ಮಾಡುತ್ತಿರಬಹುದು, ಇದರಲ್ಲಿಯೂ ಯಜ್ಞ ಸೇವೆಯ ವರದಾನಗಳು ಅಡಗಿದೆ. ಹೇಗೆ ಯಾತ್ರೆಯಲ್ಲಿ ಹೋಗುತ್ತಾರೆ, ಮಂದಿರದ ಸ್ವಚ್ಛತೆಯನ್ನು ಮಾಡುವುದೂ ಸಹ ಒಂದು ಮಹಾಪುಣ್ಯವೆಂದು ತಿಳಿಯುತ್ತಾರೆ. ಈ ಮಹಾನ್ತೀರ್ಥ ಅಥವಾ ವರದಾನ ಭೂಮಿಯ ಪ್ರತೀ ಕರ್ಮದಲ್ಲಿ, ಪ್ರತೀ ಹೆಜ್ಜೆಯಲ್ಲಿ ವರದಾನಗಳೇ ವರದಾನಗಳು ತುಂಬಿದೆ. ಜೋಳಿಗೆಯು ಎಷ್ಟು ತುಂಬಿದೆ? ಜೋಳಿಗೆಯಲ್ಲಿ ಪೂರ್ಣ ತುಂಬಿಕೊಂಡು ಹೋಗುತ್ತೀರಾ ಅಥವಾ ಯಥಾಶಕ್ತಿಯೇ? ಯಾರು ಎಲ್ಲಿಂದಲಾದರೂ ಬಂದಿದ್ದೀರಿ, ಮೇಳವನ್ನಾಚರಿಸಲು ಬಂದಿದ್ದೀರಿ. ಮಧುಬನದಲ್ಲಿ ಒಂದು ಸಂಕಲ್ಪವೂ ಅಥವಾ ಒಂದು ಸೆಕೆಂಡ್ ಸಹ ವ್ಯರ್ಥವಾಗಿ ಹೋಗಬಾರದು. ಸಮರ್ಥರಾಗುವ ಈ ಅಭ್ಯಾಸವನ್ನು ತಮ್ಮ ಸ್ಥಾನದಲ್ಲಿಯೂ ಸಹಯೋಗವನ್ನು ಕೊಡುತ್ತದೆ. ಓದುವುದು ಮತ್ತು ಪರಿವಾರ - ಓದುವ ಲಾಭವನ್ನು ತೆಗೆದುಕೊಳ್ಳಿರಿ ಮತ್ತು ವಿಶೇಷವಾಗಿ ಪರಿವಾರದ ಅನುಭವವನ್ನೂ ಮಾಡಿರಿ. ತಿಳಿಯಿತೆ!

ಬಾಪ್ದಾದಾರವರು ಎಲ್ಲಾ ಝೋನಿನವರಿಗೂ ಸದಾ ವರದಾನಿ, ಮಹಾದಾನಿಯಾಗುವ ಶುಭಾಶಯಗಳನ್ನು ಕೊಡುತ್ತಿದ್ದಾರೆ. ಜನರ ಉತ್ಸಾಹ ಸಮಾಪ್ತಿಯಾಯಿತು ಆದರೆ ತಮ್ಮ ಉತ್ಸಾಹ ತುಂಬಿದ ಉತ್ಸವವು ಸದಾ ಇದೆ. ಸದಾ ಶ್ರೇಷ್ಠ ದಿನವಾಗಿದೆ. ಆದ್ದರಿಂದ ಪ್ರತೀ ದಿನವೂ ಶುಭಾಶಯಗಳೇ ಶುಭಾಶಯಗಳಿದೆ. ಮಹಾರಾಷ್ಟ್ರದವರು ಸದಾ ಮಹಾನರಿಗಿಂತ ಮಹಾನರನ್ನಾಗಿ ಮಾಡುವ ವರದಾನಗಳಿಂದ ಜೋಳಿಗೆಯನ್ನು ತುಂಬಿಕೊಳ್ಳುವವರಾಗಿದ್ದಾರೆ. ಕರ್ನಾಟಕದವರು ಸದಾ ತಮ್ಮ ಹರ್ಷಿತಮುಖದ ಮೂಲಕ ಸ್ವಯಂ ಸಹ ಸದಾ ಹರ್ಷಿತ ಮತ್ತು ಅನ್ಯರನ್ನೂ ಸದಾ ಹರ್ಷಿತರನ್ನಾಗಿ ಮಾಡುತ್ತಾ, ಜೋಳಿಗೆಯನ್ನು ತುಂಬಿಕೊಳ್ಳುತ್ತಿರಿ. ಯು.ಪಿ.ಯವರು ಏನು ಮಾಡುವರು? ಸದಾ ಶೀತಲ ನದಿಗಳಂತೆ ಶೀತಲತೆಯ ವರದಾನವನ್ನು ಕೊಟ್ಟು, ಶೀತಲ ದೇವಿಯರಾಗಿ ಶೀತಲ ದೇವಿಯನ್ನಾಗಿ ಮಾಡಿರಿ. ಶೀತಲತೆಯಿಂದ ಸದ ಸರ್ವರ ಎಲ್ಲಾ ಪ್ರಕಾರದ ದುಃಖವನ್ನು ಹರಣ ಮಾಡಿರಿ. ಹೀಗೆ ವರದಾನಗಳಿಂದ ಜೋಳಿಗೆಯನ್ನು ತುಂಬಿಕೊಳ್ಳಿರಿ. ಒಳ್ಳೆಯದು!

ಸದಾ ಶ್ರೇಷ್ಠ ಭಾಗ್ಯದ ಸ್ಪಷ್ಟ ರೇಖೆಯುಳ್ಳವರು, ಸದಾ ತಂದೆಯ ಸಮಾನ ಸರ್ವಶಕ್ತಿಗಳಿಂದ ಸಂಪನ್ನ, ಸಂಪೂರ್ಣ ಸ್ಥಿತಿಯಲ್ಲಿ ಸ್ಥಿತರಾಗಿರುವ, ಸದಾ ಈಶ್ವರೀಯ ಹೊಳಪು ಮತ್ತು ಭಾಗ್ಯದ ನಶೆಯಲ್ಲಿರುವಂತಹ, ಪ್ರತೀ ಕರ್ಮದ ಮೂಲಕ ಭಾಗ್ಯವಂತರಾಗಿ ಭಾಗ್ಯದ ಆಸ್ತಿಯನ್ನು ಕೊಡಿಸುವವರು, ಇಂತಹ ಮಾಸ್ಟರ್ ಭಗವಂತ, ಶ್ರೇಷ್ಠ ಭಾಗ್ಯವಂತ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಹಿರಿಯ ದಾದಿಯರೊಂದಿಗೆ ಅವ್ಯಕ್ತ ಬಾಪ್ದಾದಾರವರ ವಾರ್ತಾಲಾಪ:-
ಯಾರು ಪ್ರತೀ ಕಾರ್ಯದಲ್ಲಿ ಆದಿಯಿಂದ ಈಗಿನವರೆಗೂ ಜೊತೆ ನಡೆಯುತ್ತಾ ಬಂದಿದ್ದಾರೆ, ಅವರಲ್ಲಿ ಈ ವಿಶೇಷತೆಯಿದೆ - ಹೇಗೆ ಬ್ರಹ್ಮಾ ತಂದೆಯು ಪ್ರತೀ ಹೆಜ್ಜೆಯಲ್ಲಿ ಅನುಭವಿಯಾಗಿ, ಅನುಭವ ಅಥಾರಿಟಿಯಿಂದ ವಿಶ್ವದ ರಾಜ್ಯದ ಅಥಾರಿಟಿಯನ್ನು ತೆಗೆದುಕೊಳ್ಳುತ್ತಾರೆ, ಹಾಗೆಯೇ ತಮ್ಮೆಲ್ಲರ ಬಹಳ ಕಾಲದಿಂದ ಪ್ರತಿಯೊಂದು ಪ್ರಕಾರದ ಅನುಭವ ಅಥಾರಿಟಿಯ ಕಾರಣ, ಬಹಳ ಕಾಲದ ರಾಜ್ಯಾಧಿಕಾರಲ್ಲಿಯೂ ಜೊತೆಗಾರರಾಗುವವರಾಗಿದ್ದೀರಿ. ಯಾರೆಲ್ಲಾ ಆದಿಯಿಂದ ಸಂಕಲ್ಪ ಮಾಡಿದಿರಿ - ಎಲ್ಲಿ ಕೂರಿಸುತ್ತೀರಿ, ಹೇಗೆ ನಡೆಸುತ್ತೀರೋ, ಹಾಗೆಯೇ ನಡೆಯುತ್ತಾ ಜೊತೆಯಲ್ಲಿಯೂ ನಡೆಯುತ್ತೇವೆ. ಅಂದಮೇಲೆ ಜೊತೆ ನಡೆಯುವ ಮೊದಲ ಪ್ರತಿಜ್ಞೆಯಲ್ಲಿ ಬಾಪ್ದಾದಾರವರು ನಿಭಾಯಿಸಲೇಬೇಕಾಗುತ್ತದೆ. ಬ್ರಹ್ಮಾ ತಂದೆಗೂ ಜೊತೆಯಲ್ಲಿರುವವರಾಗಿದ್ದೀರಿ. ರಾಜ್ಯದಲ್ಲಿ ಜೊತೆಯಿರುತ್ತೀರಿ, ಭಕ್ತಿಯಲ್ಲಿಯೂ ಜೊತೆಯಿರುತ್ತೀರಿ. ಈಗೆಷ್ಟು ಬುದ್ಧಿಯಿಂದ ಸದಾ ಜೊತೆಯಿರುತ್ತೀರಿ, ಅದೇ ಲೆಕ್ಕದಿಂದ ರಾಜ್ಯದಲ್ಲಿಯೂ ಸದಾ ಜೊತೆಯಿರಲಾಗುತ್ತದೆ. ಒಂದುವೇಳೆ ಈಗ ಸ್ವಲ್ಪ ದೂರವಿದ್ದರೆ, ಕೆಲವು ಜನ್ಮಗಳಲ್ಲಿ ದೂರವಾಗಿ ಬಿಡಲಾಗುತ್ತದೆ, ಕೆಲವು ಜನ್ಮಗಳಲ್ಲಿ ಸಮೀಪದಲ್ಲಿರಲಾಗುತ್ತದೆ. ಆದರೆ ಯಾರು ಸದಾಕಾಲವೂ ಬುದ್ಧಿಯಿಂದ ಜೊತೆಯಲ್ಲಿರುತ್ತಾರೆ, ಅವರು ಅಲ್ಲಿಯೂ ಜೊತೆಯಲ್ಲಿರುತ್ತಾರೆ. ಸಾಕಾರದಲ್ಲಂತು ತಾವೆಲ್ಲರೂ 14 ವರ್ಷಗಳು ಜೊತೆಯಲ್ಲಿದ್ದಿರಿ, ಸಂಗಮಯುಗದ 14 ವರ್ಷಗಳು, ಎಷ್ಟು ವರ್ಷಗಳ ಸಮಾನವಾಯಿತು! ಸಂಗಮಯುಗದ ಇಷ್ಟೂ ಸಮಯ ಸಾಕಾರ ರೂಪದಲ್ಲಿ ಜೊತೆಯಿದ್ದಿರಿ, ಇದೂ ಸಹ ಬಹಳ ದೊಡ್ಡ ಭಾಗ್ಯವಾಗಿದೆ. ನಂತರ ಬುದ್ಧಿಯಿಂದಲೂ ಜೊತೆಯಿದ್ದಿರಿ, ಮನೆಯಲ್ಲಿಯೂ ಜೊತೆಯಿರುತ್ತೀರಿ, ರಾಜ್ಯದಲ್ಲಿಯೂ ಜೊತೆಯಿರುತ್ತೀರಿ. ಭಲೆ ಸಿಂಹಾಸನದ ಮೇಲೆ ಕೆಲವರಿರುತ್ತಾರೆ ಆದರೆ ರಾಯಲ್ ಫ್ಯಾಮಿಲಿಯ ಸಮೀಪ ಸಂಬಂಧದಲ್ಲಿ, ಇಡೀ ದಿನದ ದಿನಚರಿಯಲ್ಲಿ ಜೊತೆಯಿರುವುದರಲ್ಲಿ ಪಾತ್ರವನ್ನು ಅವಶ್ಯವಾಗಿ ಅಭಿನಯಿಸಲಾಗುತ್ತದೆ. ಅಂದಮೇಲೆ ಆದಿಯಿಂದ ಈ ಜೊತೆಯಿರುವ ಪ್ರತಿಜ್ಞೆಯು ಇಡೀ ಕಲ್ಪವೇ ನಡೆಯುತ್ತಿರುತ್ತದೆ. ಭಕ್ತಿಯಲ್ಲಿಯೂ ಹೆಚ್ಚು ಸಮಯದವರೆಗೆ ಜೊತೆಯಿರುತ್ತೀರಿ. ಅಂತಿಮ ಈ ಜನ್ಮದಲ್ಲಿ ಕೆಲವರು ಸ್ವಲ್ಪ ದೂರ, ಕೆಲವರು ಸ್ವಲ್ಪ ಸಮೀಪ ಆದರೆ ಆದರೂ ಸಹ ಜೊತೆಯಂತು ಇಡೀ ಕಲ್ಪದಲ್ಲಿ, ಒಂದಲ್ಲ ಒಂದು ರೂಪದಿಂದ ಇರುತ್ತಾರೆ. ಇಂತಹ ಪ್ರತಿಜ್ಞೆಯಿದೆಯಲ್ಲವೆ! ಆದ್ದರಿಂದ ತಮ್ಮೆಲ್ಲರನ್ನು ಯಾವ ದೃಷ್ಟಿಯಿಂದ ನೋಡುತ್ತಾರೆ! ತಂದೆಯ ರೂಪವಾಗಿದ್ದೀರಿ. ಇದಕ್ಕೇ ಭಕ್ತಿಯಲ್ಲಿ ಅವರುಗಳು ಹೇಳಿದ್ದಾರೆ - ಇವರೆಲ್ಲರೂ ಭಗವಂತನ ರೂಪವಾಗಿದ್ದಾರೆ! ಏಕೆಂದರೆ ತಂದೆಯ ಸಮಾನರಾಗುತ್ತೀರಲ್ಲವೆ! ತಮ್ಮ ರೂಪದಿಂದ ತಂದೆಯು ಕಾಣಿಸುತ್ತಾರೆ ಆದ್ದರಿಂದ ತಂದೆಯ ರೂಪವೆಂದು ಹೇಳಿ ಬಿಡುತ್ತಾರೆ. ಯಾರು ತಂದೆಯ ಜೊತೆಯಿರುವವರಾಗಿದ್ದಾರೆ, ಅವರ ವಿಶೇಷತೆಯು ಇದೇ ಆಗಿರುತ್ತದೆ, ಅವರನ್ನು ನೋಡಿ ತಂದೆಯ ನೆನಪು ಬರುತ್ತದೆ, ಅವರನ್ನು ನೆನಪು ಮಾಡುವುದಿಲ್ಲ. ಆದರೆ ತಂದೆಯನ್ನು ನೆನಪು ಮಾಡುವರು. ಅವರಿಂದ ತಂದೆಯ ಚರಿತ್ರೆ, ತಂದೆಯ ದೃಷ್ಟಿ, ತಂದೆಯ ಕರ್ಮ, ಎಲ್ಲವೂ ಅನುಭವವಾಗುತ್ತದೆ. ಅವರು ಸ್ವಯಂ ಕಾಣಿಸುವುದೇ ಇಲ್ಲ ಆದರೆ ಅವರ ಮೂಲಕ ತಂದೆಯ ಕರ್ಮ ಹಾಗೂ ದೃಷ್ಟಿಯ ಅನುಭವವಾಗುವುದು. ಇದೇ ವಿಶೇಷತೆಯಿದೆ - ಅನನ್ಯ ಮತ್ತು ಸಮಾನ ಮಕ್ಕಳಲ್ಲಿ. ಎಲ್ಲರೂ ಹೀಗೆ ಇದ್ದೀರಲ್ಲವೆ! ತಮ್ಮಲ್ಲಂತು ಸಿಲುಕುವುದಿಲ್ಲ ಅಲ್ಲವೆ! ಹೀಗಂತು ಹೇಳುವುದಿಲ್ಲವೇ - ಇಂತಹವರು ಬಹಳ ಒಳ್ಳೆಯವರಿದ್ದಾರೆ, ಅಲ್ಲ, ತಂದೆಯವರು ಇವರನ್ನು ಒಳ್ಳೆಯವರನ್ನಾಗಿ ಮಾಡಿದ್ದಾರೆ. ತಂದೆಯ ದೃಷ್ಟಿ, ತಂದೆಯ ಪಾಲನೆಯು ಇವರಿಂದ ಸಿಗುತ್ತದೆ. ತಂದೆಯ ಮಹಾವಾಕ್ಯಗಳು ಇವರಿಂದ ಕೇಳುತ್ತೇವೆ. ಇದು ವಿಶೇಷತೆಯಾಗಿದೆ, ಇದಕ್ಕೆ ಹೇಳಲಾಗುತ್ತದೆ - ಪ್ರಿಯರೂ ಆಗಿದ್ದಾರೆ ಮತ್ತು ಭಿನ್ನ ಎಂದೂ ಹೇಳಲಾಗುತ್ತದೆ. ಎಲ್ಲರಿಗೂ ಭಲೆ ಪ್ರಿಯರಾಗಲಿ ಆದರೆ ಸಿಲುಕಿಸುವವರಾಗಬಾರದು. ತಂದೆಯ ಬದಲು ತಮ್ಮನ್ನು ನೆನಪು ಮಾಡದಿರಲಿ. ತಂದೆಯ ಶಕ್ತಿಯನ್ನು ತೆಗೆದುಕೊಳ್ಳುವುದಕ್ಕಾಗಿ ತಂದೆಯ ಮಹಾವಾಕ್ಯವನ್ನು ಕೇಳುವುದಕ್ಕಾಗಿ ತಮ್ಮನ್ನು ನೆನಪು ಮಾಡಲಿ. ಇದಕ್ಕೆ ಹೇಳಲಾಗುತ್ತದೆ - `ಪ್ಯಾರಾ ಮತ್ತು ನ್ಯಾರಾ' (ಪ್ರಿಯರು ಮತ್ತು ಭಿನ್ನ). ಇಂತಹ ಗ್ರೂಪ್ ಆಗಿದೆಯಲ್ಲವೆ! ಸಾಕಾರದ ಪಾಲನೆಯನ್ನು ತೆಗೆದುಕೊಂಡಿದ್ದಾರೆಂದರೆ ಏನೋ ವಿಶೇಷತೆಯಿದ್ದಿರಬಹುದು. ವಿಶೇಷತೆಯಂತು ಇರುತ್ತದೆಯಲ್ಲವೆ. ತಮ್ಮ ಬಳಿ ಬರುತ್ತಾರೆಂದರೆ ಏನು ಕೇಳುತ್ತಾರೆ - ಬಾಬಾ ಏನು ಮಾಡುತ್ತಿದ್ದರು, ಹೇಗೆ ನಡೆಯುತ್ತಿದ್ದರು...... ಇದೇ ನೆನಪು ಬರುತ್ತದೆಯಲ್ಲವೆ! ಇಂತಹ ವಿಶೇಷ ಆತ್ಮರಾಗಿದ್ದೀರಿ. ಇದಕ್ಕೆ ಹೇಳಲಾಗುತ್ತದೆ - ದೇವತೆಗಳ ಸಮೂಹ (ಏಕತೆ). ದೈವೀ ಗುಣಗಳ ಸ್ಮೃತಿ ತರಿಸುತ್ತಾ ದೇವತೆಗಳನ್ನಾಗಿ ಮಾಡುತ್ತೀರಿ, ಆದ್ದರಿಂದ ದೈವೀ ಸಮೂಹ. 50 ವರ್ಷಗಳು ಅವಿನಾಶಿಯಾಗಿದ್ದೀರೆಂದರೆ, ಅವಿನಾಶಿ ಭವದ ಶುಭಾಶಯಗಳು. ಕೆಲವರು ಬಂದರು, ಕೆಲವರು ಪರಿಕ್ರಮಣ ಹಾಕಲು ಹೋದರು. ತಾವುಗಳಂತು ಅನಾದಿ ಅವಿನಾಶಿಯಾಗಿ ಬಿಟ್ಟಿರಿ. ಅನಾದಿಯಲ್ಲಿಯೂ ಜೊತೆ, ಆದಿಯಲ್ಲಿ ಜೊತೆ. ವತನದಲ್ಲಿ ಜೊತೆಯಿರುತ್ತೀರೆಂದರೆ ಸೇವೆಯನ್ನು ಹೇಗೆ ಮಾಡುವಿರಿ! ತಾವುಗಳಂತು ಸ್ವಲ್ಪ ವಿಶ್ರಾಂತಿಯನ್ನೂ ಮಾಡುತ್ತೀರಿ, ತಂದೆಗಂತು ವಿಶ್ರಂತಿಯ ಅವಶ್ಯಕತೆಯಿಲ್ಲ. ಬಾಪ್ದಾದಾರವರು ಇದರಿಂದಲೂ ಮುಕ್ತರಾಗಿ ಬಿಟ್ಟರು. ಅವ್ಯಕ್ತನಿಗೆ ವಿಶ್ರಾಂತಿಯ ಅವಶ್ಯಕತೆಯಿಲ್ಲ. ವ್ಯಕ್ತನಿಗೆ ಅವಶ್ಯಕತೆಯಿದೆ. ಇದರಲ್ಲಿ ತಮ್ಮ ಸಮಾನ ಮಾಡುತ್ತೀರೆಂದರೆ, ಕೆಲಸವೇ ಮುಗಿದು ಹೋಯಿತು. ಆದರೂ ನೋಡಿ, ಯಾವಾಗ ಯಾವುದೇ ಸೇವೆಯ ಅವಕಾಶವುಂಟಾಗುತ್ತದೆ, ಆಗ ತಂದೆಯ ಸಮಾನ ಅವಿಶ್ರಾಂತರಾಗಿ ಬಿಡುತ್ತೀರಿ. ಮತ್ತೆ ಸುಸ್ತಾಗುವುದಿಲ್ಲ. ಒಳ್ಳೆಯದು.

ದಾದೀಜಿಯವರೊಂದಿಗೆ:-
ಬಾಲ್ಯದಿಂದಲೂ ತಂದೆಯವರು ಕಿರೀಟಧಾರಿಯನ್ನಾಗಿ ಮಾಡಿದರು. ಬರುತ್ತಿದ್ದಂತೆಯೇ ಸೇವೆಯ ಜವಾಬ್ದಾರಿಯ ಕಿರೀಟವನ್ನಾಕಿದರು ಮತ್ತು ಸಮಯ-ಪ್ರತಿ ಸಮಯದಲ್ಲಿ ಏನೆಲ್ಲಾ ಪಾತ್ರವು ನಡೆಯಿತು, ಅದರಲ್ಲಿ ಭಲೆ ಬೆಗ್ಗರಿ ಪಾತ್ರವಾಗಿರಬಹುದು, ಭಲೆ ಮೋಜಿನ ಪಾತ್ರವು ನಡೆದಿರಬಹುದು, ಎಲ್ಲಾ ಪಾತ್ರದಲ್ಲಿಯೂ ಜವಾಬ್ದಾರಿಯ ಕಿರೀಟವನ್ನು, ಡ್ರಾಮಾನುಸಾರವಾಗಿ ಧಾರಣೆ ಮಾಡಿಕೊಳ್ಳುತ್ತಾ ಬಂದಿದ್ದೀರಿ. ಆದ್ದರಿಂದ ಅವ್ಯಕ್ತ ಪಾತ್ರದಲ್ಲಿಯೂ ಕಿರೀಟಧಾರಿ ನಿಮಿತ್ತರಾಗಿ ಬಿಟ್ಟಿರಿ. ಅಂದಮೇಲೆ ಇದು ವಿಶೇಷವಾಗಿ ಆದಿಯಿಂದ ಪಾತ್ರವಿದೆ. ಸದಾ ಜವಾಬ್ದಾರಿಯನ್ನು ನಿಭಾಯಿಸುವವರು. ಹೇಗೆ ತಂದೆಯು ಜವಾಬ್ದಾರನಾಗಿದ್ದಾರೆ ಅಂದಮೇಲೆ ಜವಾಬ್ದಾರಿಯ ಕಿರೀಟಧಾರಿಯಾಗುವ ವಿಶೇಷ ಪಾತ್ರವಿದೆ. ಆದ್ದರಿಂದ ಅಂತ್ಯದಲ್ಲಿಯೂ ದೃಷ್ಟಿಯ ಮೂಲಕ ಕಿರೀಟ, ತಿಲಕ ಎಲ್ಲವನ್ನೂ ಕೊಟ್ಟು ಹೊರಟರು. ಆದ್ದರಿಂದ ಯಾವ ನೆನಪಾರ್ಥವಿದೆಯಲ್ಲವೆ, ಅದರಲ್ಲಿ ಕಿರೀಟವು ಖಂಡಿತವಾಗಿ ಇರುತ್ತದೆ. ಹೇಗೆ ಕೃಷ್ಣನಿಗೂ ಬಾಲ್ಯದಿಂದಲೂ ಕಿರೀಟವನ್ನು ತೋರಿಸುತ್ತಾರೆ ಅಂದಾಗ ನೆನಪಾರ್ಥದಲ್ಲಿಯೂ ಬಾಲ್ಯದಿಂದ ಕಿರೀಟಧಾರಿಯ ರೂಪದಿಂದ ಪೂಜಿಸುತ್ತಾರೆ. ಮತ್ತೆಲ್ಲರೂ ಜೊತೆಗಾರರಿದ್ದಾರೆ ಆದರೆ ತಾವು ಕಿರೀಟಧಾರಿಯಾಗಿದ್ದೀರಿ. ಜೊತೆಯಂತು ಎಲ್ಲರೂ ನಿಭಾಯಿಸುತ್ತಾರೆ ಆದರೆ ಸಮಾನ ರೂಪದಲ್ಲಿ ಜೊತೆ ನಿಭಾಯಿಸುವುದು, ಇದರಲ್ಲಿ ಅಂತರವಿದೆ.

ಪಾರ್ಟಿಯೊಂದಿಗೆ ಅವ್ಯಕ್ತ ಬಾಪ್ದಾದಾರವರ ವಾರ್ತಾಲಾಪ -
ಕುಮಾರರೊಂದಿಗೆ:- ಕುಮಾರ ಅರ್ಥಾತ್ ನಿರ್ಬಂಧನ. ಅತಿ ದೊಡ್ಡ ಬಂಧನವೆಂದರೆ ಮನಸ್ಸಿನ ವ್ಯರ್ಥ ಸಂಕಲ್ಪಗಳದಾಗಿದೆ. ಇದರಲ್ಲಿಯೂ ನಿರ್ಬಂಧನ. ಕೆಲಕೆಲವೊಮ್ಮೆ ಈ ಬಂಧನವು ಬಂಧಿಸುವುದಿಲ್ಲವೆ? ಏಕೆಂದರೆ ಸಂಕಲ್ಪಶಕ್ತಿಯು ಪ್ರತೀ ಹೆಜ್ಜೆಯಲ್ಲಿ ಸಂಪಾದನೆಗೆ ಆಧಾರವಾಗಿದೆ. ನೆನಪಿನ ಯಾತ್ರೆಯನ್ನು ಯಾವುದರ ಆಧಾರದಿಂದ ಮಾಡುತ್ತೀರಿ? ಸಂಕಲ್ಪ ಶಕ್ತಿಯ ಆಧಾರದಿಂದ ಬಾಬಾರವರ ಬಳಿ ತಲುಪುತ್ತೀರಲ್ಲವೆ! ಅಶರೀರಿಯಾಗಿ ಬಿಡುತ್ತೀರಿ ಅಂದಮೇಲೆ ಮನಸ್ಸಿನ ಶಕ್ತಿಯು ವಿಶೇಷವಾದುದಾಗಿದೆ. ವ್ಯರ್ಥ ಸಂಕಲ್ಪವು ಮನಸ್ಸಿನ ಶಕ್ತಿಯನ್ನು ಬಲಹೀನಗೊಳಿಸಿ ಬಿಡುತ್ತದೆ. ಆದ್ದರಿಂದ ಈ ಬಂಧನದಿಂದ ಮುಕ್ತರು. ಕುಮಾರ ಅರ್ಥಾತ್ ಸದಾ ತೀವ್ರ ಪುರುಷಾರ್ಥಿ. ಏಕೆಂದರೆ ಯಾರು ನಿರ್ಬಂಧನರಾಗಿರುತ್ತಾರೆಯೋ, ಅವರ ಗತಿಯು ಸ್ವತಹವಾಗಿ ತೀವ್ರವಾಗಿರುತ್ತದೆ. ಹೊರೆಯಿರುವವರು ನಿಧಾನ ಗತಿಯಿಂದ ನಡೆಯುತ್ತಾರೆ. ಹಗುರವಾಗಿರುವವರು ಸದಾ ತೀವ್ರ ಗತಿಯಿಂದ ನಡೆಯುತ್ತಾರೆ. ಈಗ ಸಮಯದನುಸಾರವಾಗಿ ಪುರುಷಾರ್ಥದ ಸಮಯ ಹೋಯಿತು. ಈಗ ತೀವ್ರ ಪುರುಷಾರ್ಥಿಯಾಗಿ ಗುರಿಯಲ್ಲಿ ತಲುಪಬೇಕಾಗಿದೆ.

2. ಕುಮಾರರು ಹಳೆಯ ವ್ಯರ್ಥ ಖಾತೆಯನ್ನು ಸಮಾಪ್ತಿ ಮಾಡಿ ಬಿಟ್ಟಿದ್ದೀರಾ? ಹೊಸ ಖಾತೆಯು ಸಮರ್ಥ ಖಾತೆಯಾಗಿದೆ. ಹಳೆಯ ಖಾತೆಯು ವ್ಯರ್ಥವಾದುದಾಗಿದೆ. ಅಂದಾಗ ಹಳೆಯ ಖಾತೆಯು ಸಮಾಪ್ತಿಯಾಯಿತು. ಹಾಗೆಯೇ ನೋಡಿ - ವ್ಯವಹಾರದಲ್ಲಿಯೂ ಹಳೆಯ ಖಾತೆಯನ್ನೆಂದಿಗೂ ಇಟ್ಟುಕೊಳ್ಳುವುದಿಲ್ಲ. ಹಳೆಯದನ್ನು ಸಮಾಪ್ತಿ ಮಾಡುತ್ತಾ ಅದರ ನಂತರ ಖಾತೆಯನ್ನು ವೃದ್ಧಿಯನ್ನು ಮಾಡುತ್ತಿರುತ್ತಾರೆ. ಅಂದಾಗ ಇಲ್ಲಿಯೂ ಹಳೆಯ ಖಾತೆಯನ್ನು ಸಮಾಪ್ತಿಗೊಳಿಸುತ್ತಾ, ಪ್ರತೀ ಹೆಜ್ಜೆಯಲ್ಲಿ ಸದಾ ಹೊಸದಕ್ಕಿಂತ ಹೊಸದು, ಸಮರ್ಥವಾಗಿರಲಿ. ಪ್ರತೀ ಸಂಕಲ್ಪವು ಸಮರ್ಥವಾಗಿರಲಿ. ತಂದೆಯಂತೆ ಮಕ್ಕಳಿರಬೇಕು. ತಂದೆಯು ಸಮರ್ಥನಾಗಿದ್ದಾರೆಂದರೆ ಮಕ್ಕಳೂ ಸಹ ಫಾಲೋ ಫಾದರ್ ಮಾಡುತ್ತಾ ಸಮರ್ಥರಾಗಿ ಬಿಡುತ್ತಾರೆ.

ಮಾತೆಯರೊಂದಿಗೆ:- ಮಾತೆಯರು ಯಾವ ಒಂದು ಗುಣದಲ್ಲಿ ವಿಶೇಷ ಅನುಭವಿಯಾಗಿದ್ದಾರೆ? ಆ ವಿಶೇಷವಾದ ಗುಣವು ಯಾವುದು? (ತ್ಯಾಗವಿದೆ, ಸಹನಶೀಲತೆಯಿದೆ) ಇನ್ನೂ ಯಾವುದಾದರೂ ಗುಣವಿದೆಯೇ? ಮಾತೆಯರ ಸ್ವರೂಪವು ವಿಶೇಷವಾಗಿ ದಯಾಹೃದಯಿಯದಾಗಿರುತ್ತದೆ. ಮಾತೆಯರು ದಯಾ ಹೃದಯಿಯಾಗಿರುತ್ತಾರೆ. ತಾವು ಬೇಹದ್ದಿನ ಮಾತೆಯರು ಬೇಹದ್ದಿನ ಆತ್ಮರ ಪ್ರತಿ ದಯೆ ಬರುತ್ತದೆಯೇ? ಯಾವಾಗ ದಯೆ ಬರುತ್ತದೆಯೋ ಆಗ ಏನು ಮಾಡುತ್ತಾರೆ? ಯಾರು ದಯಾಹೃದಯಿ ಆಗಿರುತ್ತಾರೆ, ಅವರು ಸೇವೆಯಿಲ್ಲದೆ ಇರಲು ಸಾಧ್ಯವಾಗುವುದಿಲ್ಲ. ಯಾವಾಗ ದಯಾಹೃದಯಿ ಆಗುತ್ತೀರಿ, ಆಗ ಅನೇಕ ಆತ್ಮರ ಕಲ್ಯಾಣವಾಗಿಯೇ ಬಿಡುತ್ತದೆ. ಆದ್ದರಿಂದ ಮಾತೆಯರಿಗೆ ಕಲ್ಯಾಣಿ ಎಂದೂ ಸಹ ಹೇಳುತ್ತಾರೆ. ಕಲ್ಯಾಣಿ ಅರ್ಥಾತ್ ಕಲ್ಯಾಣ ಮಾಡುವವರು. ಹೇಗೆ ತಂದೆಯನ್ನು ವಿಶ್ವ ಕಲ್ಯಾಣಕಾರಿ ಎಂದು ಹೇಳುತ್ತಾರೆ, ಹಾಗೆಯೇ ಮಾತೆಯರನ್ನು ವಿಶೇಷವಾಗಿ ತಂದೆಯ ಸಮಾನ ಕಲ್ಯಾಣಿಯ ಟೈಟಲ್ ಸಿಕ್ಕಿರುವುದು. ಇಂತಹ ಉಮ್ಮಂಗ ಬರುತ್ತದೆಯೇ? ಎಂತಹವರಿಂದ ಎಂತಹವರಾಗಿ ಬಿಟ್ಟೆವು! ಎಂದು. ಸ್ವಯಂನ ಪರಿವರ್ತನೆಯಿಂದ ಅನ್ಯರಿಗಾಗಿಯೂ ಉಮ್ಮಂಗ-ಉತ್ಸಾಹವು ಬರುತ್ತದೆ. ಅಲ್ಪಕಾಲದ ಮತ್ತು ಬೇಹದ್ದಿನ ಸೇವೆಯ ಬ್ಯಾಲೆನ್ಸ್ ಇದೆಯೇ? ಆ ಸೇವೆಯಿಂದಂತು ಲೆಕ್ಕಾಚಾರವು ಸಮಾಪ್ತಿಯಾಗುತ್ತದೆ, ಅದು ಅಲ್ಪಕಾಲದ ಸೇವೆಯಾಗಿದೆ. ತಾವಂತು ಬೇಹದ್ದಿನ ಸೇವಾಧಾರಿಯಾಗಿದ್ದೀರಿ. ಸೇವೆಯ ಉಮ್ಮಂಗ-ಉತ್ಸಾಹವು ಎಷ್ಟು ಸ್ವಯಂನಲ್ಲಿರುತ್ತದೆಯೋ ಅಷ್ಟು ಸಫಲತೆಯಾಗುತ್ತದೆ.

3. ಮಾತೆಯರು ತಮ್ಮ ತ್ಯಾಗ ಮತ್ತು ತಪಸ್ಸಿನ ಮೂಲಕ ವಿಶ್ವ ಕಲ್ಯಾಣವನ್ನು ಮಾಡಲು ನಿಮಿತ್ತರಾಗಿದ್ದಾರೆ. ಮಾತೆಯರಲ್ಲಿ ತ್ಯಾಗ ಮತ್ತು ತಪಸ್ಸಿನ ವಿಶೇಷತೆಯಿದೆ. ಇವೆರಡು ವಿಶೇಷತೆಗಳಿಂದ ಸೇವೆಗೆ ನಿಮಿತ್ತರಾಗಿ, ಅನ್ಯರನ್ನೂ ತಂದೆಯ ಮಕ್ಕಳಾಗಿ ಮಾಡುವುದು - ಇದರಲ್ಲಿ ಬ್ಯುಸಿಯಾಗಿರುತ್ತೀರಾ? ಸಂಗಮಯುಗಿ ಬ್ರಾಹ್ಮಣರ ಕಾರ್ಯವೇ ಆಗಿದೆ - ಸೇವೆಯನ್ನು ಮಾಡುವುದು. ಬ್ರಾಹ್ಮಣರು ಸೇವೆಯಿಲ್ಲದೆ ಇರಲು ಸಾಧ್ಯವಿಲ್ಲ. ಹೇಗೆ ಹೆಸರಿಗೆ ಬ್ರಾಹ್ಮಣರು(ಲೌಕಿಕ ಬ್ರಾಹ್ಮಣರು) ಕಥೆಯನ್ನು ಖಂಡಿತ ಓದುತ್ತಾರೆ. ಅಂದಮೇಲೆ ಇಲ್ಲಿಯೂ ಕಥೆಯನ್ನು ಓದುವುದು ಅರ್ಥಾತ್ ಸೇವೆ ಮಾಡುವುದಾಗಿದೆ. ಅಂದಮೇಲೆ ಜಗನ್ಮಾತೆಯರಾಗಿ ಜಗತ್ತಿಗಾಗಿ ಯೋಚಿಸಿರಿ. ಬೇಹದ್ದಿನ ಮಕ್ಕಳಿಗಾಗಿ ಯೋಚಿಸಿರಿ. ಕೇವಲ ಮನೆಯಲ್ಲಿಯೇ ಕುಳಿತುಕೊಂಡು ಬಿಡಬಾರದು, ಬೇಹದ್ದಿನ ಸೇವಾಧಾರಿಯಾಗಿದ್ದು ಮುಂದುವರೆಯುತ್ತಾ ಸಾಗಿರಿ. ಹದ್ದಿನಲ್ಲಿ 63 ಜನ್ಮಗಳಾಯಿತು, ಈಗ ಬೇಹದ್ದಿನ ಸೇವೆಯಲ್ಲಿ ಮುಂದುವರೆಯಿರಿ.

ವಿದಾಯಿಯ ಸಮಯದಲ್ಲಿ ಎಲ್ಲಾ ಮಕ್ಕಳಿಗೆ ನೆನಪು-ಪ್ರೀತಿ:-
ಎಲ್ಲಾ ಕಡೆಯ ಸ್ನೇಹಿ-ಸಹಯೋಗಿ ಮಕ್ಕಳಿಗೆ ಬಾಪ್ದಾದಾರವರ ವಿಶೇಷ ಸ್ನೇಹ ಸಂಪನ್ನವಾದ ನೆನಪು-ಪ್ರೀತಿಯನ್ನು ಸ್ವೀಕಾರ ಮಾಡಿರಿ. ಇಂದು ಬಾಪ್ದಾದಾರವರು ಎಲ್ಲಾ ಮಕ್ಕಳಿಗೂ ಸದಾ ನಿರ್ವಿಘ್ನರಾಗಿ, ವಿಘ್ನ ವಿನಾಶಕರಾಗಿ, ವಿಶ್ವವನ್ನು ನಿರ್ವಿಘ್ನವನ್ನಾಗಿ ಮಾಡುವ ಕಾರ್ಯದ ಶುಭಾಶಯಗಳನ್ನು ಕೊಡುತ್ತಿದ್ದಾರೆ. ಪ್ರತಿಯೊಂದು ಮಗುವು ಇದೇ ಶ್ರೇಷ್ಠ ಸಂಕಲ್ಪವನ್ನು ಮಾಡುತ್ತಾರೆ - ಸೇವೆಯಲ್ಲಿ ಸದಾ ಮುಂದುವರೆಯೋಣ, ಈ ಶ್ರೇಷ್ಠ ಸಂಕಲ್ಪವು ಸೇವೆಯಲ್ಲಿ ಸದಾ ಮುಂದುವರೆಸುತ್ತದೆ ಮತ್ತು ಮುಂದುವರೆಸುತ್ತಿರುತ್ತದೆ. ಸೇವೆಯ ಜೊತೆ ಜೊತೆಗೆ ಸ್ವ-ಉನ್ನತಿ ಮತ್ತು ಸೇವೆಯ ಉನ್ನತಿಯ ಬ್ಯಾಲೆನ್ಸ್ ಇಟ್ಟುಕೊಂಡು, ಮುಂದುವರೆಯುತ್ತೀರೆಂದರೆ ಬಾಪ್ದಾದಾ ಮತ್ತು ಸರ್ವ ಆತ್ಮರ ಮೂಲಕ ಯಾರಿಗಾಗಿ ನಿಮಿತ್ತರಾಗುತ್ತೀರಿ, ಅವರ ಹೃದಯದ ಆಶೀರ್ವಾಗಳು ಪ್ರಾಪ್ತಿಯಾಗುತ್ತಿರುತ್ತದೆ. ಅಂದಾಗ ಸದಾ ಬ್ಯಾಲೆನ್ಸ್ನ ಮೂಲಕ ಬ್ಲೆಸ್ಸಿಂಗ್ ತೆಗೆದುಕೊಳ್ಳುತ್ತಾ ಮುಂದುವರೆಯುತ್ತಿರಿ. ಸ್ವ-ಉನ್ನತಿ ಮತ್ತು ಸೇವೆಯ ಉನ್ನತಿಯೆರಡೂ ಒಟ್ಟೊಟ್ಟಿಗೆ ಇರುವುದರಿಂದ ಸದಾ ಮತ್ತು ಸಹಜವಾಗಿಯೇ ಸಫಲತಾ ಸ್ವರೂಪರಾಗಿ ಬಿಡುತ್ತ್ತೀರಿ. ಎಲ್ಲರೂ ತಮ್ಮ-ತಮ್ಮ ಹೆಸರಿನಿಂದ ವಿಶೇಷವಾಗಿ ನೆನಪು-ಪ್ರೀತಿಯನ್ನು ಸ್ವೀಕಾರ ಮಾಡಿರಿ. ಒಳ್ಳೆಯದು! ಓಂ ಶಾಂತಿ.

ವರದಾನ:  
ಎಲ್ಲರಿಗೂ ಖುಷಿಯ ಸಮಾಚಾರವನ್ನು ತಿಳಿಸುವಂತಹ ಖುಷಿಯ ಖಜಾನೆಯಿಂದ ಸಂಪನ್ನ ಭಂಡಾರ ಭವ.

ಸದಾ ತಮ್ಮ ಈ ಸ್ವರೂಪವನ್ನು ಮುಂದಿಟ್ಟುಕೊಳ್ಳಿರಿ - ನಾವು ಖುಷಿಯ ಖಜಾನೆಯಿಂದ ಸಂಪನ್ನ ಭಂಡಾರವಾಗಿದ್ದೇವೆ. ಅಪರಿಮಿತ ಮತ್ತು ಅವಿನಾಶಿಯಾದ ಏನೆಲ್ಲಾ ಖಜಾನೆಗಳು ಸಿಕ್ಕಿವೆ, ಆ ಖಜಾನೆಗಳನ್ನು ಸ್ಮೃತಿಯಲ್ಲಿ ತಂದುಕೊಳ್ಳಿರಿ. ಖಜಾನೆಗಳನ್ನು ಸ್ಮೃತಿಯಲ್ಲಿ ತಂದುಕೊಳ್ಳುವುದರಿಂದ ಖುಷಿಯಾಗುತ್ತದೆ ಮತ್ತು ಎಲ್ಲಿ ಖುಷಿಯಿದೆ ಅಲ್ಲಿ ಸದಾಕಾಲಕ್ಕಾಗಿ ದುಃಖವು ದೂರವಾಗಿ ಬಿಡುತ್ತದೆ. ಖಜಾನೆಗಳ ಸ್ಮೃತಿಯಿಂದ ಆತ್ಮವು ಸಮರ್ಥವಾಗಿ ಬಿಡುತ್ತದೆ, ವ್ಯರ್ಥವು ಸಮಾಪ್ತಿಯಾಗಿ ಬಿಡುತ್ತದೆ. ಸಂಪನ್ನ ಆತ್ಮನೆಂದಿಗೂ ಸಹ ಏರುಪೇರಿನಲ್ಲಿ ಬರುವುದಿಲ್ಲ, ಅವರು ಸ್ವಯಂ ಸಹ ಖುಷಿಯಿರುತ್ತಾರೆ ಮತ್ತು ಅನ್ಯರಿಗೂ ಖುಷಿಯ ಸಮಾಚಾರವನ್ನು ತಿಳಿಸುತ್ತಾರೆ.

ಸ್ಲೋಗನ್:
ಯೋಗ್ಯರಾಗಬೇಕೆಂದರೆ ಕರ್ಮ ಮತ್ತು ಯೋಗದ ಬ್ಯಾಲೆನ್ಸ್ ಇಟ್ಟುಕೊಳ್ಳಿರಿ.