02/02/21 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ


"ಮಧುರ ಮಕ್ಕಳೇ - ಖುದಾನು (ಭಗವಂತ) ನಿಮ್ಮ ಮಿತ್ರನಾಗಿದ್ದಾರೆ, ರಾವಣನು ಶತ್ರುವಾಗಿದ್ದಾನೆ, ಆದ್ದರಿಂದ ನೀವು ಖುದಾನನ್ನು ಪ್ರೀತಿ ಮಾಡುತ್ತೀರಿ ಮತ್ತು ರಾವಣನನ್ನು ಸುಡುತ್ತೀರಿ.”

ಪ್ರಶ್ನೆ:

ಯಾವ ಮಕ್ಕಳಿಗೆ ಅನೇಕರ ಆಶೀರ್ವಾದಗಳು ಸ್ವತಹವಾಗಿ ಸಿಗುತ್ತಾ ಇರುತ್ತವೆ?

ಉತ್ತರ:

ಯಾವ ಮಕ್ಕಳು ನೆನಪಿನಲ್ಲಿದ್ದು ತಾವೂ ಪವಿತ್ರರಾಗುತ್ತಾರೆ ಮತ್ತು ಅನ್ಯರನ್ನೂ ತಮ್ಮ ಸಮಾನ ಮಾಡಿಕೊಳ್ಳುತ್ತಾರೆ. ಅವರಿಗೆ ಅನೇಕರ ಆಶೀರ್ವಾದ ಸಿಗುತ್ತದೆ. ಅವರು ಬಹಳ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ತಂದೆಯು ನೀವು ಮಕ್ಕಳಿಗೆ ಶ್ರೇಷ್ಠರಾಗುವ ಒಂದೇ ಶ್ರೀಮತವನ್ನು ಕೊಡುತ್ತಾರೆ - ಮಕ್ಕಳೇ, ಯಾವುದೇ ದೇಹದಾರಿಯನ್ನು ನೆನಪು ಮಾಡದೇ ನನ್ನನ್ನು ನೆನಪು ಮಾಡಿ.

ಗೀತೆ:

ಕೊನೆಗೂ ಆದಿನ ಇಂದು ಬಂದಿತು..................

ಓಂ ಶಾಂತಿ. ಓಂ ಶಾಂತಿಯ ಅರ್ಥವನ್ನಂತೂ ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸಿದ್ದಾರೆ. ಓಂ ಎಂದರೆ ನಾನು ಆತ್ಮನಾಗಿದ್ದೇನೆ ಮತ್ತು ಇದು ನನ್ನ ಶರೀರವಾಗಿದೆ. ಆತ್ಮವು ಕಣ್ಣಿಗೆ ಕಾಣಿಸುವುದಿಲ್ಲ. ಆತ್ಮದಲ್ಲಿಯೇ ಒಳ್ಳೆಯ ಹಾಗೂ ಕೆಟ್ಟ ಸಂಸ್ಕಾರವಿರುತ್ತದೆ. ಆತ್ಮದಲ್ಲಿಯೇ ಮನಸ್ಸು-ಬುದ್ಧಿಯಿದೆ. ಶರೀರದಲ್ಲಿ ಬುದ್ಧಿಯಿಲ್ಲ. ಮುಖ್ಯವಾದುದು ಆತ್ಮವಾಗಿದೆ. ಶರೀರವಂತೂ ನನ್ನದಾಗಿದೆ, ಆತ್ಮವನ್ನು ಯಾರೂ ನೋಡಲು ಸಾಧ್ಯವಿಲ್ಲ. ಶರೀರವನ್ನು ಆತ್ಮವು ನೋಡುತ್ತದೆ, ಆತ್ಮವನ್ನು ಶರೀರವು ನೋಡಲು ಸಾಧ್ಯವಿಲ್ಲ. ಆತ್ಮವು ಹೊರಟು ಹೋಗುತ್ತದೆಯೆಂದರೆ ಶರೀರವು ಜಡವಾಗಿ ಬಿಡುತ್ತದೆ, ಆತ್ಮವನ್ನು ಕಣ್ಣಿನಿಂದ ನೋಡಲು ಸಾಧ್ಯವಿಲ್ಲ. ಶರೀರವನ್ನು ನೋಡಲಾಗುತ್ತದೆ. ಹಾಗೆಯೇ ಆತ್ಮಕ್ಕೆ ಯಾವ ತಂದೆಯಿದ್ದಾರೆ, ಯಾರನ್ನು ಓ ಗಾಡ್ಫಾದರ್ ಎಂದು ಹೇಳುತ್ತಾರೆ. ಅವರೂ ಸಹ ಸ್ಥೂಲ ಕಣ್ಣುಗಳಿಗೆ ಕಾಣುವುದಿಲ್ಲ. ಅವರನ್ನು ತಿಳಿದುಕೊಳ್ಳಬಹುದು, ಅನುಭವ ಮಾಡಲಾಗುತ್ತದೆ. ನಾವಾತ್ಮರೆಲ್ಲರೂ ಸಹೋದರರಾಗಿದ್ದೇವೆ, ಶರೀರದಲ್ಲಿ ಬಂದಾಗ ಇವರು ಸಹೋದರ-ಸಹೋದರರು, ಇವರು ಸಹೋದರ-ಸಹೋದರಿಯೆಂದದು ಹೇಳುತ್ತಾರೆ. ಆತ್ಮಗಳ ರೂಪದಲ್ಲಿ ಎಲ್ಲರೂ ಸಹೋದರರಾಗಿದ್ದಾರೆ. ಆತ್ಮಗಳ ತಂದೆಯು ಪರಮಪಿತ ಪರಮಾತ್ಮನಾಗಿದ್ದಾರೆ. ದೈಹಿಕ ಸಹೋದರ-ಸಹೋದರಿಯರು ಒಬ್ಬರು ಇನ್ನೊಬ್ಬರನ್ನು ನೋಡುತ್ತಾರೆ, ಆತ್ಮರ ತಂದೆಯು ಒಬ್ಬರೇ ಆಗಿದ್ದಾರೆ, ಅವರನ್ನು ನೋಡಲು ಸಾಧ್ಯವಿಲ್ಲ. ಆದ್ದರಿಂದ ಈಗ ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡಲು ತಂದೆಯು ಬಂದಿದ್ದಾರೆ. ಹೊಸ ಪ್ರಪಂಚ ಸತ್ಯಯುಗವಿತ್ತು, ಈಗ ಹಳೆಯ ಪ್ರಪಂಚ ಕಲಿಯುಗವಾಗಿದೆ. ಇದು ಈಗ ಪರಿವರ್ತನೆಯಾಗಬೇಕಾಗಿದೆ. ಹಳೆಯ ಪ್ರಪಂಚವಂತೂ ಸಮಾಪ್ತಿಯಾಗಬೇಕಲ್ಲವೆ. ಹಳೆಯ ಮನೆಯು ಸಮಾಪ್ತಿಯಾಗಿ ಹೊಸ ಮನೆಯಾಗುತ್ತದೆಯಲ್ಲವೆ. ಹಾಗೆಯೇ ಈ ಹಳೆಯ ಪ್ರಪಂಚವು ಸಮಾಪ್ತಿಯಾಗಬೇಕಾಗಿದೆ. ಸತ್ಯಯುಗದ ನಂತರ ತ್ರೇತಾ, ದ್ವಾಪರ, ಕಲಿಯುಗ ಪುನಃ ಸತ್ಯಯುಗವು ಖಂಡಿತ ಬರಬೇಕಾಗಿದೆ. ವಿಶ್ವದ ಚರಿತ್ರೆ-ಭೂಗೋಳವು ಪುನರಾವರ್ತನೆಯಾಗುವುದು. ಸತ್ಯಯುಗದಲ್ಲಿ ದೇವಿ-ದೇವತೆಗಳ ರಾಜ್ಯವಿರುತ್ತದೆ. ಸೂರ್ಯವಂಶಿ ಮತ್ತು ಚಂದ್ರವಂಶಿ. ಲಕ್ಷೀ-ನಾರಾಯಣರ ರಾಜಧಾನಿಗೆ ಸೂರ್ಯವಂಶಿ ಎಂತಲೂ, ರಾಮ-ಸೀತೆಯರ ರಾಜಧಾನಿಗೆ ಚಂದ್ರವಂಶಿ ಎಂತಲೂ ಹೇಳಲಾಗುತ್ತದೆ. ಇದು ಸಹಜವಲ್ಲವೆ. ಮತ್ತೆ ದ್ವಾಪರ, ಕಲಿಯುಗದಲ್ಲಿ ಅನ್ಯ ಧರ್ಮದವರು ಬರುತ್ತಾರೆ. ಯಾವ ದೇವತೆಗಳು ಪವಿತ್ರರಾಗಿದ್ದರೋ ಅವರು ಅಪವಿತ್ರರಾಗಿ ಬಿಡುತ್ತಾರೆ. ಇದಕ್ಕೆ ರಾವಣ ರಾಜ್ಯವೆಂದು ಹೇಳಲಾಗುತ್ತದೆ. ರಾವಣನನ್ನು ವರ್ಷ-ವರ್ಷವೂ ಸುಡುತ್ತಾ ಬರುತ್ತಾರೆ ಆದರೆ ಸುಟ್ಟು ಹೋಗುವುದೇ ಇಲ್ಲ. ಮತ್ತೆ-ಮತ್ತೆ ಸುಡುತ್ತಿರುತ್ತಾರೆ. ರಾವಣನು ಎಲ್ಲರಿಗಿಂತ ದೊಡ್ಡ ಶತ್ರುವಾಗಿದ್ದಾನೆ ಆದ್ದರಿಂದ ಅವನನ್ನು ಸುಡುವ ಪದ್ಧತಿಯಿದೆ. ಭಾರತದ ನಂಬರ್ವನ್ ಶತ್ರು ಯಾರು? ಮತ್ತೆ ನಂಬರ್ವನ್ ಮಿತ್ರನು, ಸದಾ ಸುಖ ಕೊಡುವವರು ಖದಾ ಆಗಿದ್ದಾರೆ. ಖುದಾನಿಗೆ ದೋಸ್ತ್ ಎಂದು ಹೇಳುತ್ತಾರಲ್ಲವೆ. ಇದರ ಮೇಲೆ ಒಂದು ಕಥೆಯೂ ಇದೆ ಅಂದಾಗ ಖುದಾನು ದೋಸ್ತ್ ಅರ್ಥಾತ್ ಮಿತ್ರನಾಗಿದ್ದಾನೆ. ರಾವಣನು ಶತ್ರುವಾಗಿದ್ದಾನೆ. ಖುದಾ ದೋಸ್ತನ್ನು ಎಂದೂ ಸುಡುವುದಿಲ್ಲ. ರಾವಣನು ಶತ್ರುವಾಗಿದ್ದಾನೆ ಆದ್ದರಿಂದ 10 ತಲೆಗಳ ರಾವಣನನ್ನಾಗಿ ಮಾಡಿ ವರ್ಷ-ವರ್ಷವೂ ಸುಡುತ್ತಾರೆ. ನಮಗೆ ರಾಮ ರಾಜ್ಯ ಬೇಕೆಂದು ಗಾಂಧೀಜಿಯೂ ಹೇಳುತ್ತಿದ್ದರು. ರಾಮ ರಾಜ್ಯದಲ್ಲಿ ಸುಖ, ರಾವಣ ರಾಜ್ಯದಲ್ಲಿ ದುಃಖವಿದೆ. ಇದನ್ನು ಯಾರು ಕುಳಿತು ತಿಳಿಸುತ್ತಾರೆ? ಪತಿತ-ಪಾವನ ತಂದೆ. ಶಿವನು ತಂದೆ, ಬ್ರಹ್ಮನು ದಾದಾ ಆಗಿದ್ದಾರೆ. ತಂದೆಯು ಯಾವಾಗಲೂ ಬಾಪ್ದಾದಾ ಎಂದು ಸಹಿ ಮಾಡುತ್ತಾರೆ. ಪ್ರಜಾಪಿತ ಬ್ರಹ್ಮನೂ ಸಹ ಎಲ್ಲರ ತಂದೆಯಾದರು, ಇವರಿಗೆ ಆಡಂ ಎಂತಲೂ ಹೇಳಲಾಗುತ್ತದೆ. ಅವರಿಗೆ ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಎಂತಲೂ ಹೇಳಲಾಗುತ್ತದೆ. ಮನುಷ್ಯ ಸೃಷ್ಟಿಯಲ್ಲಿ ಪ್ರಜಾಪಿತನಾದರು. ಪ್ರಜಾಪಿತ ಬ್ರಹ್ಮನ ಮೂಲಕ ಬ್ರಾಹ್ಮಣರನ್ನು ರಚಿಸಲಾಗುತ್ತದೆ ಮತ್ತೆ ಬ್ರಾಹ್ಮಣರೇ ದೇವತೆಗಳಾಗುತ್ತಾರೆ. ದೇವತೆಗಳು ಕ್ಷತ್ರಿಯರು, ವೈಶ್ಯ, ಶೂದ್ರರಾಗಿ ಬಿಡುತ್ತಾರೆ. ಇವರಿಗೆ ಪ್ರಜಾಪಿತ ಬ್ರಹ್ಮಾ ಗ್ರೇಟ್ ಗ್ರೇಟ್ ಗ್ರ್ಯಾಂಡ್ ಫಾದರ್ ಎಂದು ಹೇಳಲಾಗುತ್ತದೆ. ಮನುಷ್ಯ ಸೃಷ್ಠಿಗೆ ಹಿರಿಯ. ಪ್ರಜಾಪಿತ ಬ್ರಹ್ಮನಿಗೆ ಎಷ್ಟೊಂದು ಮಕ್ಕಳು ಇದ್ದಾರೆ, ಬಾಬಾ, ಬಾಬಾ ಎಂದು ಹೇಳುತ್ತಿರುತ್ತಾರೆ. ಇವರು ಸಾಕಾರ ತಂದೆಯಾಗಿದ್ದಾರೆ, ಶಿವನು ನಿರಾಕಾರ ತಂದೆಯಾಗಿದ್ದಾರೆ. ಪ್ರಜಾಪಿತ ಬ್ರಹ್ಮನ ಮೂಲಕ ಹೊಸ ಮನುಷ್ಯ ಸೃಷ್ಟಿಯನ್ನು ರಚಿಸುತ್ತಾರೆಂದು ಗಾಯನವಿದೆ. ಈಗ ನಿಮ್ಮದು ಇದು ಹಳೆಯ ಪೋರೆಯಾಗಿದೆ. ಪತಿತ ಪ್ರಪಂಚ ರಾವಣನ ಪ್ರಪಂಚವಾಗಿದೆ. ಈಗ ರಾವಣನ ಅಸುರೀ ಪ್ರಪಂಚವು ಸಮಾಪ್ತಿಯಾಗಿ ಬಿಡುವುದು ಅದಕ್ಕಾಗಿಯೇ ಈ ಮಹಾಭಾರತ ಯುದ್ಧವಿದೆ ಮತ್ತೆ ಸತ್ಯಯುಗದಲ್ಲಿ ಈ ರಾವಣ ಶತ್ರುವನ್ನು ಯಾರೂ ಸುಡುವುದೇ ಇಲ್ಲ. ರಾವಣನಿರುವುದೇ ಇಲ್ಲ. ರಾವಣನೇ ದುಃಖದ ಪ್ರಪಂಚವನ್ನಾಗಿ ಮಾಡಿದ್ದಾನೆ. ಇಲ್ಲಿ ಯಾರ ಬಳಿ ಬಹಳಷ್ಟು ಹಣವಿದೆಯೋ, ದೊಡ್ಡ-ದೊಡ್ಡ ಮಹಲುಗಳಲ್ಲಿದ್ದಾರೆಯೋ ಅವರು ಸ್ವರ್ಗದಲ್ಲಿದ್ದಾರೆ ಎಂದಲ್ಲ.

ತಂದೆಯು ತಿಳಿಸುತ್ತಾರೆ - ಭಲೆ ಯಾರ ಬಳಿಯಾದರೂ ಕೋಟಿಗಳಿರಬಹುದು ಆದರೆ ಇದೆಲ್ಲವೂ ಮಣ್ಣು ಪಾಲಾಗುವುದು. ಹೊಸ ಪ್ರಪಂಚದಲ್ಲಿ ಮತ್ತೆ ಹೊಸ ಗಣಿಗಳಿರುತ್ತವೆ, ಆದ್ದರಿಂದ ಹೊಸ ಪ್ರಪಂಚದ ಮಹಲು ಇತ್ಯಾದಿಗಳನ್ನು ಕಟ್ಟಿಸುತ್ತಾರೆ. ಈ ಹಳೆಯ ಪ್ರಪಂಚವು ಈಗ ಸಮಾಪ್ತಿಯಾಗುವುದಿದೆ. ಮನುಷ್ಯರು ಸದ್ಗತಿಗಾಗಿ ಭಕ್ತಿ ಮಾಡುತ್ತಾರೆ - ನಮ್ಮನ್ನು ಪಾವನ ಮಾಡಿ, ನಾವು ವಿಕಾರಿಗಳಾಗಿ ಬಿಟ್ಟಿದ್ದೇವೆ. ವಿಕಾರಿಗಳಿಗೆ ಪತಿತರೆಂದು ಹೇಳಲಾಗುತ್ತದೆ. ಸತ್ಯಯುಗದಲ್ಲಿ ಇರುವುದೇ ಸಂಪೂರ್ಣ ನಿರ್ವಿಕಾರಿಗಳು, ಅಲ್ಲಿ ಮಕ್ಕಳು ಯೋಗಬಲದಿಂದ ಜನ್ಮ ಪಡೆಯುತ್ತಾರೆ. ಅಲ್ಲಿ ವಿಕಾರವಿರುವುದಿಲ್ಲ. ದೇಹಾಭಿಮಾನವಾಗಲಿ, ಕಾಮ-ಕ್ರೋಧವಾಗಲಿ.... ಪಂಚ ವಿಕಾರಗಳೇ ಇರುವುದಿಲ್ಲ. ಆದ್ದರಿಂದ ಅಲ್ಲಿ ಎಂದೂ ರಾವಣನನ್ನು ಸುಡುವುದಿಲ್ಲ. ಇಲ್ಲಿ ರಾವಣ ರಾಜ್ಯವಿದೆ, ಈಗ ತಂದೆಯು ತಿಳಿಸುತ್ತಾರೆ - ನೀವು ಪವಿತ್ರರಾಗಿ, ಈ ಪತಿತ ಪ್ರಪಂಚವು ಸಮಾಪ್ತಿಯಾಗಲಿದೆ ಅಂದಾಗ ಯಾರು ಶ್ರೀಮತದಂತೆ ಪವಿತ್ರರಾಗಿರುವರೋ ಅವರೇ ತಂದೆಯ ಮತದಂತೆ ನಡೆದು ವಿಶ್ವದ ರಾಜಧಾನಿಯ ಆಸ್ತಿಯನ್ನು ಪಡೆಯುತ್ತಾರೆ. ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತಲ್ಲವೆ, ಈಗಂತೂ ರಾವಣ ರಾಜ್ಯವಾಗಿದೆ, ಇದು ಸಮಾಪ್ತಿಯಾಗುವುದು. ಸತ್ಯಯುಗೀ ರಾಮ ರಾಜ್ಯವು ಸ್ಥಾಪನೆಯಾಗುತ್ತದೆ, ಸತ್ಯಯುಗದಲ್ಲಿ ಬಹಳ ಕೆಲವರೇ ಮನುಷ್ಯರಿರುತ್ತಾರೆ. ರಾಜಧಾನಿಯು ದೆಹಲಿಯಾಗಿರುತ್ತದೆ. ಅಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿರುತ್ತದೆ. ದೆಹಲಿಯು ಸತ್ಯಯುಗದಲ್ಲಿ ಪರಿಸ್ತಾನವಾಗಿತ್ತು, ದೆಹಲಿಯೇ ರಾಜ ಸಿಂಹಾಸನವಾಗಿತ್ತು. ರಾವಣ ರಾಜ್ಯದಲ್ಲಿಯೂ ದೆಹಲಿಯೇ ರಾಜಧಾನಿಯಾಗಿದೆ, ರಾಮ ರಾಜ್ಯದಲ್ಲಿಯೂ ಇದೇ ರಾಜಧಾನಿಯಾಗಿರುತ್ತದೆ ಆದರೆ ರಾಮ ರಾಜ್ಯದಲ್ಲಂತೂ ವಜ್ರ ವೈಢೂರ್ಯಗಳ ಮಹಲುಗಳಿತ್ತು, ಅಪಾರ ಸುಖವಿತ್ತು. ಈಗ ತಂದೆಯು ತಿಳಿಸುತ್ತಾರೆ - ನೀವು ವಿಶ್ವದ ರಾಜ್ಯವನ್ನು ಕಳೆದುಕೊಂಡಿದ್ದೀರಿ. ಪುನಃ ನಾನು ನಿಮಗೆ ಕೊಡುತ್ತೇನೆ, ನೀವು ನನ್ನ ಮತದಂತೆ ನಡೆಯಿರಿ. ಶ್ರೇಷ್ಠರಾಗಬೇಕೆಂದರೆ ಕೇವಲ ನನ್ನನ್ನು ನೆನಪು ಮಾಡಿ, ಮತ್ತ್ಯಾವುದೇ ದೇಹಧಾರಿಯನ್ನು ನೆನಪು ಮಾಡಬೇಡಿ, ತನ್ನನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿದರೆ ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ. ನೀವು ನನ್ನ ಬಳಿಗೆ ಬಂದು ಬಿಡುತ್ತೀರಿ, ನನ್ನ ಕೊರಳಿನ ಮಾಲೆಯಾಗಿ ನಂತರ ವಿಷ್ಣುವಿನ ಮಾಲೆಯಾಗುತ್ತೀರಿ. ಮಾಲೆಯಲ್ಲಿ ಮೇಲೆ ನಾನು ಇದ್ದೇನೆ, ನಂತರ ಇಬ್ಬರು ಬ್ರಹ್ಮಾ-ಸರಸ್ವತಿಯಿದ್ದಾರೆ, ಅವರೇ ಸತ್ಯಯುಗದ ಮಹಾರಾಜ-ಮಹಾರಾಣಿಯಾಗುತ್ತಾರೆ. ನಂತರ ಯಾರು ನಂಬರ್ವಾರ್ ಸಿಂಹಾಸನದ ಮೇಲೆ ಕುಳಿತುಕೊಳ್ಳುವರೋ ಅವರ ಮಾಲೆಯಿದೆ. ನಾನು ಭಾರತವನ್ನು ಈ ಬ್ರಹ್ಮಾ-ಸರಸ್ವತಿ ಮತ್ತು ಬ್ರಾಹ್ಮಣರ ಮೂಲಕ ಸ್ವರ್ಗವನ್ನಾಗಿ ಮಾಡುತ್ತೇನೆ. ಯಾರು ಪರಿಶ್ರಮ ಪಡುವರೋ ಅವರದೇ ಮತ್ತೆ ನೆನಪಾರ್ಥವಾಗುತ್ತದೆ. ಪರಮಧಾಮದಲ್ಲಿ ರುದ್ರ ಮಾಲೆ ನಂತರ ಸತ್ಯಯುಗದಲ್ಲಿ ವಿಷ್ಣುವಿನ ಮಾಲೆಯಾಗುತ್ತದೆ. ರುದ್ರ ಮಾಲೆಯು ಆತ್ಮಗಳ ಮಾಲೆಯಾಗಿದೆ ಮತ್ತು ವಿಷ್ಣುವಿನ ಮಾಲೆಯು ಮನುಷ್ಯರ ಮಾಲೆಯಾಗಿದೆ. ಆತ್ಮಗಳಿರುವ ಸ್ಥಾನವು ನಿರಾಕಾರ ಪರಮಧಾಮವಾಗಿದೆ ಅದಕ್ಕೆ ಬ್ರಹ್ಮಾಂಡವೆಂದೂ ಹೇಳುತ್ತಾರೆ. ಆತ್ಮವೇನೂ ಅಂಡಾಕಾರವಾಗಿಲ್ಲ. ಆತ್ಮವು ಬಿಂದು ಮಾದರಿಯಾಗಿದೆ. ನಾವೆಲ್ಲಾ ಆತ್ಮರು ಆ ಮಧುರ ಮನೆಯ ನಿವಾಸಿಗಳಾಗಿದ್ದೇವೆ, ತಂದೆಯ ಜೊತೆ ನಾವಾತ್ಮಗಳಿರುತ್ತೇವೆ. ಅದು ಮುಕ್ತಿಧಾಮವಾಗಿದೆ. ಮನುಷ್ಯರೆಲ್ಲರೂ ಮುಕ್ತಿಧಾಮಕ್ಕೆ ಹೋಗಬೇಕೆಂದು ಬಯಸುತ್ತಾರೆ ಆದರೆ ಯಾರೊಬ್ಬರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಎಲ್ಲರೂ ಪಾತ್ರದಲ್ಲಿ ಬರಲೇಬೇಕಾಗಿದೆ, ಅಲ್ಲಿಯವರೆಗೆ ತಂದೆಯು ನಿಮ್ಮನ್ನು ತಯಾರು ಮಾಡುತ್ತಿರುತ್ತಾರೆ. ನೀವು ತಯಾರಾಗಿ ಬಿಟ್ಟರೆ ಮತ್ತೆ ಯಾರೆಲ್ಲಾ ಆತ್ಮರಿದ್ದಾರೆಯೋ ಅವರೆಲ್ಲರೂ ಬಂದು ಬಿಡುವರು ನಂತರ ಸಮಾಪ್ತಿ. ನೀವು ಹೋಗಿ ಹೊಸ ರಾಜ್ಯದಲ್ಲಿ ರಾಜ್ಯಭಾರ ಮಾಡುತ್ತೀರಿ ನಂತರ ನಂಬರ್ವಾರ್ ಚಕ್ರವು ನಡೆಯುವುದು. ಕೊನೆಗೂ ಆ ದಿನ ಇಂದು ಬಂದಿತು ಎಂಬುದನ್ನು ಗೀತೆಯಲ್ಲಿ ಕೇಳಿದಿರಲ್ಲವೆ. ನಿಮಗೆ ತಿಳಿದಿದೆ - ಭಾರತವಾಸಿಗಳೆಲ್ಲರೂ ಈಗ ನರಕವಾಸಿಗಳಾಗಿದ್ದಾರೆ, ಅವರೇ ಪುನಃ ಸ್ವರ್ಗವಾಸಿಗಳಾಗುತ್ತಾರೆ. ಉಳಿದೆಲ್ಲಾ ಆತ್ಮರು ಶಾಂತಿಧಾಮದಲ್ಲಿ ಹೊರಟುಹೋಗುವರು. ಬಹಳ ಕಡಿಮೆ ತಿಳಿಸಿ ಕೊಡಬೇಕು. ತಂದೆ ಮತ್ತು ಆಸ್ತಿ. ಆತ್ಮಕ್ಕೆ ಆಸ್ತಿಯು ಸಿಕ್ಕಿ ಬಿಡುತ್ತದೆ. ಈಗ ತಂದೆಯು ತಿಳಿಸುತ್ತಾರೆ - ನಾನು ಅದೇ ರಾಜ್ಯವನ್ನು ಪುನಃ ಸ್ಥಾಪನೆ ಮಾಡುತ್ತೇನೆ, ನೀವು 84 ಜನ್ಮಗಳನ್ನು ಭೋಗಿಸಿ ಈಗ ಪತಿತರಾಗಿ ಬಿಟ್ಟಿದ್ದೀರಿ. ರಾವಣನು ಪತಿತರನ್ನಾಗಿ ಮಾಡಿದ್ದಾನೆ. ಮತ್ತೆ ಯಾರು ಪಾವನ ಮಾಡುತ್ತಾರೆ? ಭಗವಂತ, ಯಾರಿಗೆ ಪತಿತ-ಪಾವನನೆಂದು ಹೇಳುತ್ತೀರಿ, ಹೇಗೆ ನೀವು ಪತಿತರಿಂದ ಪಾವನರು, ಪಾವನರಿಂದ ಪತಿತರಾಗುತ್ತೀರಿ. ಅದೆಲ್ಲಾ ಚರಿತ್ರೆ-ಭೂಗೋಳವು ಪುನರಾವರ್ತನೆಯಾಗುವುದು. ಈ ವಿನಾಶವು ಇರುವುದೇ ಇದಕ್ಕಾಗಿ. ಬ್ರಹ್ಮನ ಆಯಸ್ಸು ಶಾಸ್ತ್ರಗಳಲ್ಲಿ 100 ವರ್ಷಗಳಿವೆಯೆಂದು ಹೇಳುತ್ತಾರೆ, ಇವರು ಬ್ರಹ್ಮನಾಗಿದ್ದಾರೆ, ಇವರಲ್ಲಿ ತಂದೆಯು ಕುಳಿತು ಆಸ್ತಿಯನ್ನು ಕೊಡುತ್ತಾರೆ, ನಂತರ ಇವರ ಶರೀರವು ಬಿಟ್ಟು ಹೋಗುವುದು ಆತ್ಮಗಳಿಗೆ ಆತ್ಮಗಳ ತಂದೆಯು ಕುಳಿತು ತಿಳಿಸಿ ಕೊಡುತ್ತಾರೆ. ಮನುಷ್ಯರು ಮನುಷ್ಯರನ್ನು ಪಾವನ ಮಾಡಲು ಸಾಧ್ಯವಿಲ್ಲ. ದೇವತೆಗಳೆಂದೂ ವಿಕಾರದಿಂದ ಜನ್ಮ ಪಡೆಯುವುದಿಲ್ಲ. ಪುನರ್ಜನ್ಮವನ್ನಂತೂ ಎಲ್ಲರೂ ತೆಗೆದುಕೊಳ್ಳುತ್ತಾ ಬರುತ್ತಾರಲ್ಲವೆ. ಅದೃಷ್ಟವು ಬೆಳಗಲಿ ಎಂದು ತಂದೆಯು ಎಷ್ಟು ಚೆನ್ನಾಗಿ ತಿಳಿಸುತ್ತಾರೆ! ತಂದೆಯು ಬರುವುದೇ ಮನುಷ್ಯ ಮಾತ್ರರ ಅದೃಷ್ಟವನ್ನು ಬೆಳಗಿಸಲು ಏಕೆಂದರೆ ಎಲ್ಲರೂ ಪತಿತ-ದುಃಖಿಯಾಗಿದ್ದಾರೆ. ತ್ರಾಹಿ-ತ್ರಾಹಿ ಎನ್ನುತ್ತಾ ವಿನಾಶವಾಗಿ ಬಿಡುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ತ್ರಾಹಿ-ತ್ರಾಹಿ ಎನ್ನುವುದಕ್ಕೆ ಮೊದಲೇ ಬೇಹದ್ದಿನ ತಂದೆಯಾದ ನನ್ನಿಂದ ಆಸ್ತಿಯನ್ನು ತೆಗೆದುಕೊಳ್ಳಿ. ಈ ಪ್ರಪಂಚದಲ್ಲಿ ಏನೆಲ್ಲವನ್ನೂ ನೋಡುತ್ತಿದ್ದೀರೋ ಇದೆಲ್ಲವೂ ಸಮಾಪ್ತಿಯಾಗಬೇಕಾಗಿದೆ. ಭಾರತದ ಉತ್ಥಾನ ಮತ್ತು ಪತನ, ಇದರದ್ದೇ ಆಟವಾಗಿದೆ. ಸ್ವರ್ಗದಲ್ಲಿ ಯಾರು-ಯಾರು ರಾಜ್ಯ ಮಾಡುತ್ತಾರೆ ಎಂಬುದನ್ನು ತಂದೆಯೇ ತಿಳಿಸುತ್ತಾರೆ. ಭಾರತದ ಉತ್ಥಾನವಿದ್ದಾಗ ದೇವತೆಗಳ ರಾಜ್ಯ, ಭಾರತದ ಪತನವೆಂದರೆ ರಾವಣ ರಾಜ್ಯವಾಗುತ್ತದೆ. ಈಗ ಹೊಸ ಪ್ರಪಂಚವಾಗುತ್ತಿದೆ, ತಂದೆಯಿಂದ ಹೊಸ ಪ್ರಪಂಚದ ಆಸ್ತಿಯನ್ನು ತೆಗೆದುಕೊಳ್ಳಲು ಓದುತ್ತಿದ್ದೀರಿ. ಎಷ್ಟು ಸಹಜವಾಗಿದೆ! ಇದು ಮನುಷ್ಯರಿಂದ ದೇವತೆಗಳಾಗುವ ವಿದ್ಯೆಯಾಗಿದೆ. ಇದನ್ನೂ ಸಹ ಚೆನ್ನಾಗಿ ತಿಳಿದುಕೊಳ್ಳಬೇಕಾಗಿದೆ. ಯಾವ-ಯಾವ ಧರ್ಮದವರು ಯಾವಾಗ ಬರುತ್ತಾರೆ, ದ್ವಾಪರದ ನಂತರವೇ ಅನ್ಯ ಧರ್ಮದವರೆಲ್ಲರೂ ಬರುತ್ತಾರೆ. ಮೊದಲು ಸುಖವನ್ನನುಭವಿಸುತ್ತಾರೆ ನಂತರ ದುಃಖ. ಈ ಇಡೀ ಚಕ್ರವನ್ನು ಬುದ್ಧಿಯಲ್ಲಿ ಕೂರಿಸಬೇಕಾಗಿದೆ, ಇದರಿಂದ ನೀವು ಚಕ್ರವರ್ತಿ ಮಹಾರಾಜ-ಮಹಾರಾಣಿಯಾಗುತ್ತೀರಿ. ಕೇವಲ ತಂದೆ ಮತ್ತು ಆಸ್ತಿಯನ್ನು ತಿಳಿದುಕೊಳ್ಳಬೇಕಾಗಿದೆ. ಈಗ ವಿನಾಶವಂತೂ ಖಂಡಿತ ಆಗುತ್ತದೆ, ಇಷ್ಟೊಂದು ಹೊಡೆದಾಟಗಳಾಗುವುದು, ಆ ಸಮಯದಲ್ಲಿ ವಿದೇಶದಿಂದ ಹಿಂತಿರುಗಿ ಬರುವುದಕ್ಕೂ ಸಾಧ್ಯವಾಗುವುದಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ – ಭಾರತ ಭೂಮಿಯೇ ಎಲ್ಲದಕ್ಕಿಂತ ಉತ್ತಮ ಭೂಮಿಯಾಗಿದೆ, ಯಾವಾಗ ಬಲವಾದ ಯುದ್ಧವಾಗುವುದೋ ಆಗ ಅಲ್ಲಿನವರು ಅಲ್ಲಿಯೇ ಉಳಿದು ಬಿಡುತ್ತಾರೆ. 50-60 ಲಕ್ಷ ರೂಪಾಯಿಗಳನ್ನು ಕೊಟ್ಟರೂ ಸಹ ಬರಲು ಕಷ್ಟವಾಗುತ್ತದೆ. ಭಾರತ ಭೂಮಿಯು ಎಲ್ಲದಕ್ಕಿಂತ ಉತ್ತಮವಾಗಿದೆ, ಇಲ್ಲಿ ತಂದೆಯು ಬಂದು ಅವತರಿತರಾಗುತ್ತಾರೆ. ಶಿವ ಜಯಂತಿಯನ್ನೂ ಇಲ್ಲಿಯೇ ಆಚರಣೆ ಮಾಡಲಾಗುತ್ತದೆ. ಕೇವಲ ಕೃಷ್ಣನ ಹೆಸರನ್ನು ಹಾಕಿರುವುದರಿಂದ ಮಹಿಮೆಯಲ್ಲವೂ ಸಮಾಪ್ತಿಯಾಗಿ ಬಿಟ್ಟಿದೆ. ಸರ್ವ ಮನುಷ್ಯ ಮಾತ್ರರ ಮುಕ್ತಿದಾತನು ಇಲ್ಲಿಯೇ ಬಂದು ಅವತರಣೆ ಮಾಡುತ್ತಾರೆ. ಶಿವ ಜಯಂತಿಯನ್ನು ಇಲ್ಲಿಯೇ ಆಚರಿಸುತ್ತಾರೆ. ಪರಮಪಿತ ಪರಮಾತ್ಮನೇ ಬಂದು ಮುಕ್ತಗೊಳಿಸುತ್ತಾರೆ ಅಂದಮೇಲೆ ಇಂತಹ ತಂದೆಗೆ ನಮಸ್ಕಾರ ಮಾಡಬೇಕು, ಅವರ ಜಯಂತಿಯನ್ನೇ ಆಚರಿಸಬೇಕು. ಆ ತಂದೆಯು ಈ ಭಾರತದಲ್ಲಿಯೇ ಬಂದು ಎಲ್ಲರನ್ನೂ ಪಾವನರನ್ನಾಗಿ ಮಾಡುತ್ತಾರೆ ಅಂದಮೇಲೆ ಇದು ಎಲ್ಲದಕ್ಕಿಂತ ದೊಡ್ಡ ತೀರ್ಥ ಸ್ಥಾನವಾಯಿತು. ಎಲ್ಲರನ್ನು ದುರ್ಗತಿಯಿಂದ ಬಿಡಿಸಿ ಸದ್ಗತಿಯನ್ನು ಕೊಡುತ್ತಾರೆ, ಈ ನಾಟಕವು ಮಾಡಲ್ಪಟ್ಟಿದೆ. ಈಗ ನೀವಾತ್ಮಗಳು ತಿಳಿದುಕೊಂಡಿದ್ದೀರಿ - ನಮ್ಮ ತಂದೆಯು ನಮಗೆ ಈ ಶರೀರದ ಮೂಲಕ ಈ ರಹಸ್ಯವನ್ನು ತಿಳಿಸುತ್ತಿದ್ದಾರೆ, ನಾವಾತ್ಮಗಳು ಈ ಶರೀರದ ಮೂಲಕ ಕೇಳಿಸಿಕೊಳ್ಳುತ್ತೇವೆ. ಆತ್ಮಾಭಿಮಾನಿಯಾಗಬೇಕಾಗಿದೆ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿದಾಗಲೇ ತುಕ್ಕು ಕಳೆಯುತ್ತಾ ಹೋಗುವುದು ಮತ್ತು ಪವಿತ್ರರಾಗಿ ನೀವು ತಂದೆಯ ಬಳಿ ಬಂದು ಬಿಡುತ್ತೀರಿ. ಎಷ್ಟು ನೆನಪು ಮಾಡುತ್ತೀರೋ ಅಷ್ಟು ಪವಿತ್ರರಾಗುತ್ತೀರಿ, ಅನ್ಯರನ್ನೂ ತಮ್ಮ ಸಮಾನ ಮಾಡಿಕೊಂಡಾಗ ಅನೇಕರ ಆಶೀರ್ವಾದವು ಸಿಗುವುದು. ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಆದ್ದರಿಂದಲೇ ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಗಾಯನವಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಶ್ರೀಮತದನುಸಾರ ಪವಿತ್ರರಾಗಿ ಪ್ರತೀ ಹೆಜ್ಜೆಯಲ್ಲಿ ತಂದೆಯ ಮತದಂತೆ ನಡೆದು ವಿಶ್ವ ರಾಜ್ಯ ಭಾಗ್ಯವನ್ನು ತೆಗೆದುಕೊಳ್ಳಬೇಕಾಗಿದೆ. ತಂದೆಯ ಸಮಾನ ದುಃಖಹರ್ತ-ಸುಖಕರ್ತನಾಗಬೇಕಾಗಿದೆ.

2. ಮನುಷ್ಯರಿಂದ ದೇವತೆಗಳಾಗುವ ಈ ವಿದ್ಯೆಯನ್ನು ಸದಾ ಓದುತ್ತಿರಬೇಕಾಗಿದೆ. ಎಲ್ಲರನ್ನೂ ತಮ್ಮ ಸಮಾನ ಮಾಡಿಕೊಳ್ಳುವ ಸೇವೆ ಮಾಡಿ ಆಶೀರ್ವಾದವನ್ನು ಪ್ರಾಪ್ತಿ ಮಾಡಿಕೊಳ್ಳಬೇಕಾಗಿದೆ.

ವರದಾನ:

ಅಧಿಕಾರಿತನದ ಸ್ಥಿತಿಯ ಮುಖಾಂತರ ತಂದೆಯನ್ನು ತಮ್ಮ ಜೊತೆಗಾರರನ್ನಾಗಿ ಮಾಡಿಕೊಳ್ಳುವಂತಹ ಸದಾ ವಿಜಯಿ ಭವ.

ತಂದೆಯನ್ನು ಜೊತೆಗಾರನನ್ನಾಗಿ ಮಾಡಿಕೊಳ್ಳಲು ಸಹಜ ವಿಧಿಯಾಗಿದೆ - ಅಧಿಕಾರಿತನದ ಸ್ಥಿತಿ. ಯಾವಾಗ ಅಧಿಕಾರಿತನದ ಸ್ಥಿತಿಯಲ್ಲಿ ಸ್ಥಿತರಾಗುವಿರಿ ಆಗ ವ್ಯರ್ಥ ಸಂಕಲ್ಪ ಹಾಗೂ ಅಶುದ್ದ ಸಂಕಲ್ಪಗಳ ಏರುಪೇರಿನಲ್ಲಿ ಹಾಗೂ ಅನೇಕ ರಸಗಳಲ್ಲಿ ಬುದ್ಧಿ ಅಸ್ಥಿರ ಆಗುವುದಿಲ್ಲ. ಬುದ್ಧಿಯ ಏಕಾಗ್ರತೆಯ ಮುಖಾಂತರ ಎದುರಿಸುವಂತಹ, ಪರಿಶೀಲಿಸುವಂತಹ ಹಾಗೂ ನಿರ್ಣಯ ಮಾಡುವಂತಹ ಶಕ್ತಿ ಬಂದು ಬಿಡುವುದು, ಯಾವುದು ಸಹಜವಾಗಿ ಮಾಯೆಯ ಅನೇಕ ಪ್ರಕಾರದ ಯುದ್ಧದಲ್ಲಿ ವಿಜಯಿಯನ್ನಾಗಿ ಮಾಡಿ ಬಿಡುವುದು.

ಸ್ಲೋಗನ್:

ಯಾರು ಸೆಕೆಂಡ್ನಲ್ಲಿ ಸಾರದಿಂದ ವಿಸ್ತಾರ ಮತ್ತು ವಿಸ್ತಾರದಿಂದ ಸಾರದಲ್ಲಿ ಹೋಗುವಂತಹ ಅಭ್ಯಾಸಿಯಾಗಿರುತ್ತಾರೆ, ಅವರೇ ರಾಜಯೋಗಿ ಆಗಿದ್ದಾರೆ.