02.05.22         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಶಾಂತಿಯು ನಿಮ್ಮ ಕೊರಳಿನ ಹಾರವಾಗಿದೆ, ಆತ್ಮನ ಸ್ವಧರ್ಮವಾಗಿದೆ, ಆದ್ದರಿಂದ ಶಾಂತಿಗಾಗಿ ಅಲೆದಾಡುವ ಅವಶ್ಯಕತೆ ಇಲ್ಲ, ನೀವು ತಮ್ಮ ಸ್ವಧರ್ಮದಲ್ಲಿ ಸ್ಥಿತರಾಗಿ

ಪ್ರಶ್ನೆ:
ಮನುಷ್ಯರು ಯಾವುದೇ ವಸ್ತುವನ್ನು ಶುದ್ಧ ಮಾಡುವುದಕ್ಕೋಸ್ಕರ ಯಾವ ಯುಕ್ತಿಯನ್ನು ರಚಿಸುತ್ತಾರೆ ಮತ್ತು ತಂದೆಯು ಯಾವ ಯುಕ್ತಿಯನ್ನು ರಚಿಸಿದ್ದಾರೆ?

ಉತ್ತರ:
ಮನುಷ್ಯರು ಯಾವುದೇ ವಸ್ತುವನ್ನು ಶುದ್ಧ ಮಾಡಲು ಅದನ್ನು ಅಗ್ನಿಯಲ್ಲಿ ಹಾಕುತ್ತಾರೆ. ಯಜ್ಞವನ್ನು ರಚಿಸುತ್ತಾರೆಂದರೆ ಅದರಲ್ಲಿಯೂ ಸಹ ಬೆಂಕಿಯನ್ನು ಉರಿಸುತ್ತಾರೆ. ಇಲ್ಲಿಯೂ ಸಹ ತಂದೆಯು ರುದ್ರ ಯಜ್ಞವನ್ನು ರಚಿಸಿದ್ದಾರೆ ಆದರೆ ಇದು ಜ್ಞಾನ ಯಜ್ಞವಾಗಿದೆ, ಇದರಲ್ಲಿ ಎಲ್ಲರ ಆಹುತಿಯಾಗಬೇಕಾಗಿದೆ. ನೀವು ಮಕ್ಕಳು ದೇಹಸಹಿತವಾಗಿ ಸರ್ವಸ್ವವನ್ನು ಇದರಲ್ಲಿ ಸ್ವಾಹಾ ಮಾಡುತ್ತೀರಿ. ನೀವು ತಂದೆಯೊಂದಿಗೆ ಯೋಗವನ್ನು ಜೋಡಿಸಬೇಕಾಗಿದೆ. ಇಲ್ಲಿ ಯೋಗದ್ದೇ ಸ್ಪರ್ಧೆಯಾಗಿದೆ. ಇದರಿಂದಲೇ ನೀವು ಮೊದಲು ಶಿವನ ಕೊರಳಿನ ಹಾರವಾಗುತ್ತೀರಿ ನಂತರ ವಿಷ್ಣುವಿನ ಕೊರಳಿನ ಮಾಲೆಯಲ್ಲಿ ಸುತ್ತುತ್ತೀರಿ.

ಗೀತೆ:
ಓಂ ನಮಃ ಶಿವಾಯ ...

ಓಂ ಶಾಂತಿ.
ಇದು ಯಾರ ಮಹಿಮೆಯನ್ನು ಕೇಳಿದಿರಿ? ಪಾರಲೌಕಿಕ ಪರಮಪಿತ ಪರಮ ಆತ್ಮ ಅರ್ಥಾತ್ ಪರಮಾತ್ಮನ ಮಹಿಮೆಯನ್ನು ಕೇಳಿದಿರಿ. ಎಲ್ಲಾ ಭಕ್ತರು ಅಥವಾ ಸಾಧನೆ ಮಾಡುವವರು ಇವರನ್ನು ನೆನಪು ಮಾಡುತ್ತಾರೆ. ಅವರ ಹೆಸರೂ ಸಹ ಪತಿತ ಪಾವನ ಆಗಿದೆ. ನಾವು ಮಕ್ಕಳು ಅರಿತುಕೊಂಡಿದ್ದೇವೆ - ಭಾರತವೂ ಪಾವನವಾಗಿತ್ತು. ಲಕ್ಷ್ಮೀ-ನಾರಾಯಣ ಮುಂತಾದವರ ಪವಿತ್ರ ಪ್ರವೃತ್ತಿ ಮಾರ್ಗದ ಧರ್ಮವಿತ್ತು, ಅದನ್ನೇ ಆದಿ ಸನಾತನ ದೇವೀ-ದೇವತಾ ಧರ್ಮವೆಂದು ಹೇಳಲಾಗುತ್ತದೆ. ಭಾರತದಲ್ಲಿ ಪವಿತ್ರತೆ, ಸುಖ, ಶಾಂತಿ, ಸಂಪತ್ತು ಎಲ್ಲವೂ ಇತ್ತು. ಪವಿತ್ರತೆ ಇಲ್ಲದಿದ್ದರೆ ಅಲ್ಲಿ ಶಾಂತಿಯು ಇಲ್ಲ, ಸುಖವೂ ಇಲ್ಲ. ಶಾಂತಿಗಾಗಿ ಅಲೆದಾಡುತ್ತಿರುತ್ತಾರೆ. ಕಾಡಿನಲ್ಲಿ ಸುತ್ತುತ್ತಿರುತ್ತಾರೆ. ಈ ಸಮಯದಲ್ಲಿ ಒಬ್ಬರಿಗೂ ಶಾಂತಿ ಇಲ್ಲ ಏಕೆಂದರೆ ತಂದೆಯನ್ನು ಅರಿತುಕೊಂಡಿಲ್ಲ. ನಾನು ಆತ್ಮನಾಗಿದ್ದೇನೆ, ಇದು ನನ್ನ ಶರೀರವಾಗಿದೆ ಎನ್ನುವುದನ್ನೂ ಸಹ ಅರಿತುಕೊಂಡಿಲ್ಲ. ಈ ಶರೀರದ ಮುಖಾಂತರವೇ ಕರ್ಮ ಮಾಡಬೇಕಾಗುತ್ತದೆ. ನನ್ನ ಸ್ವಧರ್ಮವೇ ಶಾಂತಿಯಾಗಿದೆ. ಇವೆಲ್ಲವು ಶರೀರದ ಕರ್ಮೇಂದ್ರಿಯಗಳಾಗಿವೆ. ಆತ್ಮನಿಗೆ ಇದೂ ಗೊತ್ತಿಲ್ಲ - ನಾವು ಆತ್ಮಗಳು ನಿರ್ವಾಣ ಅಥವಾ ಪರಮಧಾಮದ ವಾಸಿಗಳಾಗಿದ್ದೇವೆ. ಈ ಕರ್ಮಕ್ಷೇತ್ರದಲ್ಲಿ ನಾವು ಶರೀರದ ಆಧಾರವನ್ನು ತೆಗೆದುಕೊಂಡು ಪಾತ್ರವನ್ನು ಅಭಿನಯಿಸುತ್ತೇವೆ. ಶಾಂತಿಯ ಹಾರವು ಕೊರಳನಲ್ಲಿ ಬಿದ್ದಿದೆ ಆದರೆ ಹೊರಗಡೆ ಪೆಟ್ಟನ್ನು ತಿನ್ನುತ್ತಿರುತ್ತಾರೆ. ಕೇಳುತ್ತಿರುತ್ತಾರೆ - ಮನಸ್ಸಿಗೆ ಶಾಂತಿಯು ಹೇಗೆ ಸಿಗುತ್ತದೆ? ಅವರಿಗೆ ಆತ್ಮವು ಮನಸ್ಸು-ಬುದ್ಧಿಯಿಂದ ಕೂಡಿದೆ ಎನ್ನುವುದು ಗೊತ್ತೇ ಇಲ್ಲ. ಆತ್ಮವು ಪರಮಪಿತ ಪರಮಾತ್ಮನ ಸಂತಾನವಾಗಿದೆ. ತಂದೆಯು ಶಾಂತಿಯ ಸಾಗರ ಆಗಿದ್ದಾರೆ. ನಾವು ಅವರ ಸಂತಾನರಾಗಿದ್ದೇವೆ. ಈಗ ಅಶಾಂತಿಯು ಇಡೀ ಪ್ರಪಂಚಕ್ಕೆ ಇದೆಯಲ್ಲವೇ. ಎಲ್ಲರೂ ಸಹ ಶಾಂತಿಯು ಬೇಕು ಎಂದು ಹೇಳುತ್ತಾರೆ. ಈಗ ಇಡೀ ಪ್ರಪಂಚದ ಮಾಲೀಕರು ಒಬ್ಬರೇ ಆಗಿದ್ದಾರೆ. ಇವರನ್ನೇ ಶಿವಾಯ ನಮಃ ಎಂದು ಹೇಳುತ್ತಾರೆ. ಶ್ರೇಷ್ಠಾತಿ ಶ್ರೇಷ್ಠ ಭಗವಂತ, ಶಿವ ಯಾರಾಗಿದ್ದಾರೆ? ಎನ್ನುವುದನ್ನು ಯಾವುದೇ ಮನುಷ್ಯರು ಅರಿತುಕೊಂಡಿಲ್ಲ. ಪೂಜೆಯನ್ನೂ ಮಾಡುತ್ತಾರೆ, ಇನ್ನು ಕೆಲವರು ಮತ್ತೆ ತಮ್ಮನ್ನೇ ಶಿವೋಹಂ ಎಂದು ಹೇಳಿಕೊಳ್ಳುತ್ತಾರೆ. ಅರೇ! ಶಿವನಂತು ಒಬ್ಬ ತಂದೆಯಾಗಿದ್ದಾರಲ್ಲವೇ. ಮನುಷ್ಯರು ತಮ್ಮನ್ನು ಶಿವ ಎಂದು ಹೇಳಿಕೊಂಡಿದ್ದೇ ಆದರೆ ಇದು ಅತಿ ದೊಡ್ಡ ಪಾಪವಾಗುವುದು. ಶಿವನನ್ನೇ ಪತಿತ ಪಾವನ ಎಂದು ಹೇಳಲಾಗುತ್ತದೆ. ಬ್ರಹ್ಮಾ, ವಿಷ್ಣು, ಶಂಕರ ಅಥವಾ ಯಾವುದೇ ಮನುಷ್ಯರನ್ನು ಪತಿತ ಪಾವನ ಎಂದು ಹೇಳಲು ಸಾಧ್ಯವಿಲ್ಲ. ಪತಿತ ಪಾವನ ಸದ್ಗತಿದಾತ ಒಬ್ಬರೇ ಆಗಿದ್ದಾರೆ. ಮನುಷ್ಯ, ಮನುಷ್ಯರನ್ನು ಪಾವನರನ್ನಾಗಿ ಮಾಡಲು ಸಾಧ್ಯವಿಲ್ಲ ಏಕೆಂದರೆ ಇದು ಇಡೀ ಪ್ರಪಂಚದ ಪ್ರಶ್ನೆಯಾಗಿದೆಯಲ್ಲವೇ. ತಂದೆಯು ತಿಳಿಸುತ್ತಾರೆ ಯಾವಾಗ ಸತ್ಯಯುಗವಿತ್ತು ಆಗ ಭಾರತವು ಪಾವನವಾಗಿತ್ತು, ಈಗ ಪತಿತವಾಗಿದೆ ಎಂದಾಗ ಯಾರು ಇಡೀ ಸೃಷ್ಟಿಯನ್ನು ಪಾವನ ಮಾಡುವವರಿದ್ದಾರೆ ಅವರನ್ನೇ ನೆನಪು ಮಾಡಬೇಕು. ಬಾಕಿ ಇದಂತು ಪತಿತ ಪ್ರಪಂಚವಾಗಿದೆ. ಇಲ್ಲಿ ಯಾರಿಗಾದರು ಮಹಾನಾತ್ಮ ಎಂದು ಹೇಳುತ್ತಾರೆ, ಆದರೆ ಇಲ್ಲಿ ಮಹಾನಾತ್ಮರು ಯಾರೂ ಇಲ್ಲ. ಪಾರಲೌಕಿಕ ತಂದೆಯನ್ನು ಅರಿತುಕೊಂಡಿಲ್ಲ. ಭಾರತದಲ್ಲಿ ಶಿವ ಜಯಂತಿಯ ಗಾಯನ ಮಾಡಲಾಗಿದೆ ಎಂದಾಗ ಪತಿತರನ್ನು ಪಾವನ ಮಾಡಲು ಅವಶ್ಯವಾಗಿ ಭಾರತದಲ್ಲಿಯೇ ಬಂದಿರಬೇಕಲ್ಲವೇ! ತಂದೆಯೂ ಹೇಳುತ್ತಾರೆ - ನಾನು ಸಂಗಮಯುಗದಲ್ಲಿಯೇ ಬರುತ್ತೇನೆ, ಇದನ್ನೇ ಕುಂಭ ಮೇಳವೆಂದು ಹೇಳಲಾಗುತ್ತದೆ. ಇದು ಆ ನೀರಿನ ಸಾಗರ ಮತ್ತು ನದಿಗಳ ಕುಂಭ ಮೇಳವಲ್ಲ. ಯಾವಾಗ ಜ್ಞಾನ ಸಾಗರ ಪತಿತ ಪಾವನ ತಂದೆಯೇ ಬಂದು ಎಲ್ಲಾ ಆತ್ಮರನ್ನು ಪಾವನ ಮಾಡುತ್ತಾರೆ, ಇದನ್ನೇ ಕುಂಭ ಮೇಳವೆಂದು ಹೇಳಲಾಗುತ್ತದೆ. ಇದನ್ನೂ ಸಹ ನೀವೇ ತಿಳಿದುಕೊಂಡಿದ್ದೀರಿ - ಭಾರತವು ಯಾವಾಗ ಸ್ವರ್ಗವಾಗಿತ್ತು ಆಗ ಒಂದೇ ಧರ್ಮವಿತ್ತು. ಸತ್ಯಯುಗದಲ್ಲಿ ಸೂರ್ಯವಂಶಿ ರಾಜ್ಯವಿತ್ತು, ನಂತರ ತ್ರೇತಾದಲ್ಲಿ ಚಂದ್ರವಂಶಿ ರಾಜ್ಯವಿತ್ತು. ಇದರ ಮಹಿಮೆ ಇದೆ - ರಾಮ ರಾಜಾ, ರಾಮ ಪ್ರಜಾ......... ತ್ರೇತಾಯುಗಕ್ಕೆ ಇಷ್ಟು ಮಹಿಮೆ ಇದೆ ಎಂದರೆ ಸತ್ಯಯುಗಕ್ಕೆ ಇದಕ್ಕಿಂತಲೂ ಹೆಚ್ಚಿನ ಮಹಿಮೆ ಇರುವುದು. ಭಾರತವೇ ಸ್ವರ್ಗವಾಗಿತ್ತು, ಪವಿತ್ರ ಜೀವಾತ್ಮರಿದ್ದರು. ಉಳಿದ ಎಲ್ಲಾ ಧರ್ಮದ ಆತ್ಮಗಳು ಆ ಸಮಯದಲ್ಲಿ ನಿರ್ವಾಣಧಾಮದಲ್ಲಿ ಇದ್ದರು. ಆತ್ಮ ಏನಾಗಿದೆ, ಪರಮಾತ್ಮ ಯಾರಾಗಿದ್ದಾರೆ - ಇದನ್ನು ಯಾವುದೇ ಮನುಷ್ಯ ಮಾತ್ರರು ಅರಿತುಕೊಂಡಿಲ್ಲ. ಆತ್ಮವು ಅತಿ ಚಿಕ್ಕ ಬಿಂದುವಾಗಿದೆ, ಇದರಲ್ಲಿ 84 ಜನ್ಮಗಳ ಪಾತ್ರವು ತುಂಬಿದೆ. 84 ಲಕ್ಷ ಜನ್ಮಗಳು ಇರಲು ಸಾಧ್ಯವಿಲ್ಲ. ಆತ್ಮವೂ 84 ಲಕ್ಷ ಜನ್ಮಗಳಲ್ಲಿ ಕಲ್ಪ-ಕಲ್ಪಾಂತರಗಳ ಕಾಲ ಸುತ್ತಲು ಸಾಧ್ಯವಿಲ್ಲ. ಇರುವುದೇ 84 ಜನ್ಮಗಳ ಚಕ್ರ. ಇದರಲ್ಲೂ ಸಹ ಪೂರ್ತಿ 84 ಜನ್ಮಗಳನ್ನು ಎಲ್ಲರೂ ಸುತ್ತುವುದಿಲ್ಲ. ಯಾರು ಅತಿ ಮುಂದೆ ಇದ್ದರು ಈಗ ಅವರೇ ತುಂಬಾ ಹಿಂದೆ ಬಿದ್ದಿದ್ದಾರೆ, ಮತ್ತೆ ಅವರೇ ಮೊದಲು ಹೋಗುತ್ತಾರೆ. ಹಿಂದೆ ಬರುವಂತಹ ಎಲ್ಲಾ ಆತ್ಮಗಳು ನಿರ್ವಾಣಧಾಮದಲ್ಲಿ ಇರುತ್ತಾರೆ. ಈ ಎಲ್ಲಾ ಮಾತುಗಳನ್ನು ತಂದೆಯೇ ತಿಳಿಸಿಕೊಡುತ್ತಾರೆ. ಅವರನ್ನೇ ವಿಶ್ವದ ಸರ್ವಶಕ್ತಿವಂತರೆಂದು ಹೇಳಲಾಗುತ್ತದೆ. ತಂದೆಯು ಹೇಳುತ್ತಾರೆ - ನಾನು ಬಂದು ಬ್ರಹ್ಮಾರವರ ಮುಖಾಂತರ ಎಲ್ಲಾ ವೇದ-ಶಾಸ್ತ್ರ ಗೀತೆ ಮುಂತಾದವುಗಳ ಸಾರವನ್ನು ತಿಳಿಸುತ್ತೇನೆ. ಇವೆಲ್ಲವೂ ಸಹ ಭಕ್ತಿಮಾರ್ಗದ ಕರ್ಮಕಾಂಡದ ಶಾಸ್ತ್ರಗಳು ಮಾಡಲ್ಪಟ್ಟಿವೆ. ನಾನು ಬಂದು ಹೇಗೆ ಯಜ್ಞವನ್ನು ರಚಿಸುತ್ತೇನೆ ಎನ್ನುವ ಮಾತುಗಳು ಯಾವ ಶಾಸ್ತ್ರಗಳಲ್ಲಿಯೂ ಇಲ್ಲ. ಇದರ ಹೆಸರೇ ರಾಜಸ್ವ ಅಶ್ವ ಮೇಧ ರುದ್ರ ಜ್ಞಾನ ಯಜ್ಞವಾಗಿದೆ. ರುದ್ರ ಎಂದರೆ ಶಿವ ಆಗಿದ್ದಾರೆ, ಈ ಯಜ್ಞದಲ್ಲಿ ಎಲ್ಲರೂ ಸ್ವಾಹಾ ಆಗಬೇಕಾಗಿದೆ. ತಂದೆಯು ಹೇಳುತ್ತಾರೆ ದೇಹ ಸಹಿತ ಯಾರೆಲ್ಲಾ ಮಿತ್ರ ಸಂಬಂಧಿ ಮುಂತಾದವರಿದ್ದಾರೆ, ಅವರೆಲ್ಲರನ್ನು ಮರೆತು ಬಿಡಿ. ಒಬ್ಬರೇ ತಂದೆಯನ್ನು ನೆನಪು ಮಾಡಿ. ನಾನು ಸನ್ಯಾಸಿ, ಉದಾಸಿಯಾಗಿದ್ದೇನೆ, ಕ್ರಿಶ್ಚಿಯನ್ ಆಗಿದ್ದೇನೆ..... ಇವೆಲ್ಲವೂ ಸಹ ದೇಹದ ಧರ್ಮಗಳಾಗಿವೆ. ಇವುಗಳನ್ನು ಬಿಟ್ಟು ನನ್ನೊಬ್ಬನನ್ನೇ ನೆನಪು ಮಾಡಿ. ನಿರಾಕಾರ ತಂದೆಯು ಬರುತ್ತಾರೆಂದರೆ ಅವಶ್ಯವಾಗಿ ಶರೀರದಲ್ಲಿಯೇ ಬರುತ್ತಾರಲ್ಲವೇ. ಅಂತಹ ತಂದೆಯೇ ಹೇಳುತ್ತಾರೆ - ನಾನು ಬರಬೇಕಾದರೆ ಪ್ರಕೃತಿಯ ಆಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ನಾನೇ ಬಂದು ಈ ಶರೀರದ ಮುಖಾಂತರ ಹೊಸ ಪ್ರಪಂಚದ ಸ್ಥಾಪನೆ ಮಾಡುತ್ತೇನೆ. ಹಳೆಯ ಪ್ರಪಂಚದ ವಿನಾಶವು ಸಮೀಪದಲ್ಲಿಯೇ ನಿಂತಿದೆ. ಗಾಯನವೂ ಇದೆ - ಪ್ರಜಾಪಿತ ಬ್ರಹ್ಮನ ಮುಖಾಂತರ ಸ್ಥಾಪನೆ ಎಂದು. ಸೂಕ್ಷ್ಮವತನವು ಫರಿಸ್ಥೆಗಳ ಪ್ರಪಂಚವಾಗಿದೆ, ಅಲ್ಲಿ ಮೂಳೆ-ಮಾಂಸದ ಶರೀರವಿರುವುದಿಲ್ಲ. ಅಲ್ಲಿ ಬೆಳ್ಳ-ಬೆಳ್ಳಗೆ ಹೇಗೆ ಪ್ರೇತಾತ್ಮಗಳು ಇರುತ್ತದೆಯೋ ಅದೇ ತರಹದ ಸೂಕ್ಷ್ಮಶರೀರವಿರುತ್ತದೆ. ಆತ್ಮನಿಗೆ ಯಾವಾಗ ಶರೀರವು ಸಿಗುವುದಿಲ್ಲ ಆಗ ಅದು ಅಲೆದಾಡುತ್ತಿರುತ್ತದೆ. ಛಾಯಾ (ನೆರಳು) ರೂಪಿ ಶರೀರವು ಕಂಡುಬರುತ್ತದೆ, ಇದನ್ನು ಹಿಡಿಯಲು ಸಾಧ್ಯವಿಲ್ಲ. ಇದನ್ನೇ ಪ್ರೇತಾತ್ಮವೆಂದು ಹೇಳಲಾಗುತ್ತದೆ. ಈಗ ತಂದೆಯು ಹೇಳುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ, ನೆನಪಿನಿಂದಲೇ ನಿಮ್ಮ ವಿಕರ್ಮ ವಿನಾಶವಾಗುತ್ತದೆ. ಗಾಯನವನ್ನು ಮಾಡಲಾಗುತ್ತದೆ - ಬಹಳ ಕಳೆದು ಹೋಯಿತು, ಇನ್ನೂ ಸ್ವಲ್ಪ ಮಾತ್ರ ಉಳಿದಿದೆ ಅರ್ಥಾತ್ ಈಗ ಸ್ವಲ್ಪ ಸಮಯ ಮಾತ್ರ ಉಳಿದಿದೆ ಆದ್ದರಿಂದ ಎಷ್ಟಾದರೆ ಆಷ್ಟು ತಂದೆಯನ್ನು ನೆನಪು ಮಾಡಿ, ಆಗ ಅಂತಮತಿ ಸೋ ಗತಿ ಆಗುವುದು. ಗೀತೆಯಲ್ಲಿ ಕೆಲವು ಒಂದೆರಡು ಅಕ್ಷರಗಳನ್ನು ಸರಿಯಾಗಿ ಬರೆದಿದ್ದಾರೆ. ಹೇಗೆ ಹಿಟ್ಟಿನಲ್ಲಿ ಉಪ್ಪಿನ ತರಹ ಕೆಲ-ಕೆಲವು ಅಕ್ಷರಗಳು ಸರಿಯಾಗಿದೆ. ಮೊದಲು ಭಗವಂತ ನಿರಾಕಾರನಾಗಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಆ ನಿರಾಕಾರ ಭಗವಂತ ಹೇಗೆ ಮಾತನಾಡುತ್ತಾರೆ? ಆ ತಂದೆಯೇ ಹೇಳುತ್ತಾರೆ- ನಾನು ಸಾಧಾರಣ ಬ್ರಹ್ಮನ ಶರೀರದಲ್ಲಿ ಪ್ರವೇಶ ಮಾಡಿ ರಾಜಯೋಗವನ್ನು ಕಲಿಸುತ್ತೇನೆ, ಆದ್ದರಿಂದ ಮಕ್ಕಳೇ ನನ್ನನ್ನು ನೆನಪು ಮಾಡಿ. ನಾನು ಒಂದು ಧರ್ಮದ ಸ್ಥಾಪನೆ ಮಾಡಿ, ಉಳಿದ ಎಲ್ಲಾ ಧರ್ಮಗಳ ವಿನಾಶ ಮಾಡಿಸಲು ಬರುತ್ತೇನೆ. ಇಂದಿನಿಂದ 5000 ವರ್ಷಗಳ ಮೊದಲು ಸತ್ಯಯುಗದಲ್ಲಿ ಒಂದೇ ಆದಿ ಸನಾತನ ದೇವೀ-ದೇವತಾ ಧರ್ಮವಿತ್ತು. ಎಲ್ಲಾ ಆತ್ಮಗಳು ತಮ್ಮ-ತಮ್ಮ ಲೆಕ್ಕಾಚಾರವನ್ನು ಸಮಾಪ್ತಿ ಮಾಡಿಕೊಂಡು ಹೋಗುತ್ತಾರೆ, ಇದನ್ನೇ ಅಂತಿಮ ಸಮಯವೆಂದು ಹೇಳಲಾಗುತ್ತದೆ. ಎಲ್ಲರ ದುಃಖದ ಲೆಕ್ಕಾಚಾರವು ಸಮಾಪ್ತಿಯಾಗುತ್ತದೆ. ಪಾಪಗಳ ಕಾರಣವೇ ದುಃಖವು ಸಿಗುತ್ತದೆ. ಪಾಪದ ಲೆಕ್ಕಾಚಾರವು ಸಮಾಪ್ತಿ ಆದ ನಂತರ ಮತ್ತೆ ಪುಣ್ಯವು ಶುರುವಾಗುತ್ತದೆ. ಪ್ರತಿಯೊಂದು ವಸ್ತುವನ್ನು ಶುದ್ಧ ಮಾಡಲು ಅದನ್ನು ಬೆಂಕಿಯಲ್ಲಿ ಹಾಕಲಾಗುತ್ತದೆ. ಯಜ್ಞವನ್ನು ರಚಿಸುತ್ತಾರೆ, ಅದರಲ್ಲಿಯೂ ಸಹ ಬೆಂಕಿಯನ್ನು ಉರಿಸುತ್ತಾರೆ. ಆದರೆ ಇದು ಸ್ಥೂಲ ಯಜ್ಞವಲ್ಲ. ರುದ್ರ ಜ್ಞಾನ ಯಜ್ಞವಾಗಿದೆ. ಇದು ಕೃಷ್ಣ ಜ್ಞಾನ ಯಜ್ಞವೂ ಅಲ್ಲ. ಕೃಷ್ಣನು ಯಾವುದೇ ಯಜ್ಞವನ್ನು ರಚಿಸಿರಲಿಲ್ಲ, ಕೃಷ್ಣನಂತು ರಾಜಕುಮಾರನಾಗಿದ್ದರು. ಯಜ್ಞವನ್ನು ಆಪತ್ತುಗಳ ಸಮಯದಲ್ಲಿ ರಚಿಸಲಾಗುತ್ತದೆ. ಈ ಸಮಯದಲ್ಲಿ ಎಲ್ಲಾ ಕಡೆಯು ಆಪತ್ತುಗಳಿದೆಯಲ್ಲವೇ. ಅನೇಕ ಮನುಷ್ಯರು ರುದ್ರ ಯಜ್ಞವನ್ನು ರಚಿಸುತ್ತಾರೆ. ಆದರೆ ರುದ್ರ ಜ್ಞಾನ ಯಜ್ಞವನ್ನು ರಚಿಸುವುದಿಲ್ಲ. ಈ ರುದ್ರ ಜ್ಞಾನ ಯಜ್ಞವನ್ನು ರುದ್ರ ಪರಮಪಿತ ಪರಮಾತ್ಮನೇ ಬಂದು ರಚಿಸುತ್ತಾರೆ. ಅವರೇ ಹೇಳುತ್ತಾರೆ - ಈ ರುದ್ರ ಜ್ಞಾನ ಯಜ್ಞದಲ್ಲಿ ಎಲ್ಲರ ಆಹುತಿಯಾಗುವುದು. ತಂದೆಯು ಬಂದಿದ್ದಾರೆ - ಯಜ್ಞವು ರಚಿಸಲ್ಪಟ್ಟಿದೆ. ಎಲ್ಲಿಯ ತನಕ ರಾಜಾಯಿ ಸ್ಥಾಪನೆ ಆಗುತ್ತಾ ಇರುತ್ತದೆಯೋ ಅಲ್ಲಿಯ ತನಕ ಎಲ್ಲರೂ ಪಾವನರಾಗುತ್ತಾ ಇರುತ್ತಾರೆ. ಒಂದೇ ಸಲ ಎಲ್ಲರೂ ಪಾವನರಾಗುವುದಿಲ್ಲ. ಆದ್ದರಿಂದ ಅಂತ್ಯದ ತನಕ ಯೋಗವನ್ನು ಜೋಡಿಸುತ್ತಾ ಇರಿ. ಇದು ಯೋಗದ ಸ್ಪರ್ಧೆಯಾಗಿದೆ. ಇದರಲ್ಲಿ ತಂದೆಯನ್ನು ಎಷ್ಟು ಜಾಸ್ತಿ ನೆನಪು ಮಾಡುತ್ತಾರೆ ಅಷ್ಟು ಬೇಗ ಹೋಗಿ ರುದ್ರನ ಕೊರಳಿನ ಹಾರವಾಗುತ್ತಾರೆ. ನಂತರ ವಿಷ್ಣುವಿನ ಕೊರಳಿನ ಮಾಲೆಯಾಗುತ್ತಾರೆ. ಮೊದಲು ರುದ್ರನ ಮಾಲೆ, ನಂತರ ವಿಷ್ಣುವಿನ ಮಾಲೆ. ಮೊದಲು ತಂದೆಯು ಎಲ್ಲರನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ, ಯಾರೆಷ್ಟು ಪುರುಷಾರ್ಥ ಮಾಡುತ್ತಾರೆ, ಅವರೇ ನರನಿಂದ ನಾರಾಯಣ, ನಾರಿನಿಂದ ಲಕ್ಷ್ಮಿಯಾಗಿ ರಾಜ್ಯ ಮಾಡುತ್ತಾರೆ. ಈ ಆದಿ ಸನಾತನ ದೇವೀ-ದೇವತಾ ಧರ್ಮದ ಸ್ಥಾಪನೆ ಆಗುತ್ತಿದೆ, ನಿಮಗೆ ತಂದೆಯು ರಾಜಯೋಗವನ್ನು ಕಲಿಸುತ್ತಿದ್ದಾರೆ. ಹೇಗೆ 5000 ವರ್ಷಗಳ ಹಿಂದೆಯೂ ಕಲಿಸಿದ್ದರೋ ಅದೇ ತರಹ ಕಲ್ಪದ ನಂತರ ಕಲಿಸಲು ಬಂದಿದ್ದಾರೆ. ಇಲ್ಲಿ ಶಿವ ಜಯಂತಿ ಅರ್ಥಾತ್ ಶಿವರಾತ್ರಿಯನ್ನು ಆಚರಿಸುತ್ತಾರೆ. ರಾತ್ರಿ ಅರ್ಥಾತ್ ಕಲಿಯುಗೀ ಹಳೆಯ ಪ್ರಪಂಚದ ಅಂತ್ಯ, ಹೊಸ ಪ್ರಪಂಚದ ಆದಿ. ಸತ್ಯಯುಗ, ತ್ರೇತಾ ದಿನವಾಗಿದೆ, ದ್ವಾಪರ ಕಲಿಯುಗವು ರಾತ್ರಿಯಾಗಿದೆ. ಬ್ರಹ್ಮನ ಬೇಹದ್ದಿನ ಹಗಲು, ಮತ್ತೆ ಬ್ರಹ್ಮನ ಬೇಹದ್ದಿನ ರಾತ್ರಿ. ಕೃಷ್ಣನ ದಿನ-ರಾತ್ರಿ ಎಂದು ಹೇಳಲಾಗುವುದಿಲ್ಲ. ಕೃಷ್ಣನಿಗೆ ಜ್ಞಾನವೇ ಇರುವುದಿಲ್ಲ. ಬ್ರಹ್ಮನಿಗೆ ಶಿವಬಾಬಾರವರಿಂದ ಜ್ಞಾನವು ಸಿಗುತ್ತದೆ. ನಂತರ ಇವರಿಂದ ನೀವು ಮಕ್ಕಳಿಗೆ ಜ್ಞಾನ ಸಿಗುತ್ತದೆ. ಶಿವಬಾಬಾ ಬ್ರಹ್ಮಾ ತನುವಿನ ಮುಖಾಂತರ ನಿಮಗೆ ಜ್ಞಾನವನ್ನು ಕೊಡುತ್ತಿದ್ದಾರೆ ಮತ್ತು ತ್ರಿಕಾಲದರ್ಶಿಗಳನ್ನಾಗಿ ಮಾಡುತ್ತಾರೆ. ಮನುಷ್ಯ ಸೃಷ್ಟಿಯಲ್ಲಿ ಯಾರೂ ತ್ರಿಕಾಲದರ್ಶಿಗಳಿರಲು ಸಾಧ್ಯವಿಲ್ಲ. ಒಂದುವೇಳೆ ಇದ್ದರೇ ಜ್ಞಾನವನ್ನು ಕೊಡಬೇಕಾಗಿತ್ತಲ್ಲವೇ. ಈ ಸೃಷ್ಟಿಚಕ್ರವು ಹೇಗೆ ತಿರುಗುತ್ತದೆ? ಎನ್ನುವ ಜ್ಞಾನವನ್ನು ಎಂದೂ ಯಾರೂ ಕೊಡಲು ಸಾಧ್ಯವಿಲ್ಲ.

ಎಲ್ಲರಿಗೂ ಭಗವಂತ ಒಬ್ಬರೇ ಆಗಿದ್ದಾರೆ. ಕೃಷ್ಣನನ್ನು ಭಗವಂತನೆಂದು ಎಲ್ಲರೂ ಒಪ್ಪಲು ಸಾಧ್ಯವೇ! ಕೃಷ್ಣನಂತು ರಾಜಕುಮಾರನಾಗಿದ್ದಾರೆ. ರಾಜಕುಮಾರ ಭಗವಂತನಾಗುತ್ತಾರೇನು? ಒಂದುವೇಳೆ ಅವರು ರಾಜ್ಯ ಮಾಡುತ್ತಾರೆಂದರೆ ಮತ್ತು ಕಳೆದುಕೊಳ್ಳಲು ಬೇಕಾಗುವುದು. ತಂದೆಯು ಹೇಳುತ್ತಾರೆ- ನಿಮ್ಮನ್ನು ವಿಶ್ವದ ಮಾಲೀಕರನಾಗಿ ಮಾಡಿ ನಾನು ಪುನಃ ನಿರ್ವಾಣಧಾಮದಲ್ಲಿ ಹೋಗಿ ಇರುತ್ತೇನೆ. ಮತ್ತೆ ಯಾವಾಗ ದುಃಖವೂ ಶುರುವಾಗುತ್ತದೆ ಆಗ ನನ್ನ ಪಾತ್ರವೂ ಶುರುವಾಗುತ್ತದೆ. ನಾನು ಎಲ್ಲವನ್ನು ಆಲಿಸುತ್ತೇನೆ. ಆದ್ದರಿಂದ ನನಗೆ ಹೇ! ದಯಾ ಹೃದಯಿ ಎಂದು ಹೇಳುತ್ತಾರೆ. ಭಕ್ತಿಯೂ ಸಹ ಮೊದಲು ಅವ್ಯಭಿಚಾರಿ ಅರ್ಥಾತ್ ಒಬ್ಬ ಶಿವನ ಭಕ್ತಿಯನ್ನು ಮಾಡುತ್ತಾರೆ. ನಂತರ ದೇವತೆಗಳ ಭಕ್ತಿಯನ್ನು ಶುರು ಮಾಡುತ್ತಾರೆ. ಈಗಂತೂ ವ್ಯಭಿಚಾರಿ ಭಕ್ತಿ ಆಗಿಬಿಟ್ಟಿದೆ. ಯಾವಾಗಿನಿಂದ ಪೂಜೆಯು ಶುರುವಾಗುತ್ತದೆ ಎನ್ನುವುದನ್ನು ಪೂಜಾರಿಗಳೂ ಸಹ ತಿಳಿದುಕೊಂಡಿಲ್ಲ. ಶಿವ ಅಥವಾ ಸೋಮನಾಥ ಎನ್ನುವುದು ಒಂದೇ ಮಾತಾಗಿದೆ. ಶಿವ ನಿರಾಕಾರನಾಗಿದ್ದಾರೆ ಎಂದಾಗ ಸೋಮನಾಥ ಎಂದು ಏಕೆ ಹೇಳುತ್ತಾರೆ? ಏಕೆಂದರೆ ಸೋಮನಾಥ ತಂದೆಯು ಮಕ್ಕಳಿಗೆ ಜ್ಞಾನಾಮೃತವನ್ನು ಕುಡಿಸಿದ್ದಾರೆ. ಅನೇಕ ಹೆಸರುಗಳಿದೆ, ಬಬುಲ್ನಾಥನೆಂದು ಹೇಳುತ್ತಾರೆ ಏಕೆಂದರೆ ಮುಳ್ಳಾಗಿದ್ದವರನ್ನು ಹೂಗಳನ್ನಾಗಿ ಮಾಡುವವರು, ಸರ್ವರ ಸದ್ಗತಿದಾತ ತಂದೆ ಆಗಿದ್ದಾರೆ. ಅವರನ್ನು ಮತ್ತೆ ಸರ್ವವ್ಯಾಪಿ ಎಂದು ಹೇಳುವುದು..... ಇದಂತು ನಿಂದನೆ ಆಯಿತಲ್ಲವೇ. ತಂದೆಯು ಹೇಳುತ್ತಾರೆ - ಯಾವಾಗ ಸಂಗಮದ ಸಮಯವಾಗುತ್ತದೆ ಆಗ ಒಂದೇ ಬಾರಿ ನಾನು ಬರುತ್ತೇನೆ, ಯಾವಾಗ ಭಕ್ತಿಯು ಪೂರ್ಣ ಆಗುತ್ತದೆ ಆಗಲೇ ನಾನು ಬರುತ್ತೇನೆ. ಇದು ನಿಯಮವಾಗಿದೆ. ನಾನು ಬರುವುದೇ ಒಂದೇ ಬಾರಿ. ತಂದೆಯು ಒಬ್ಬರೇ ಆಗಿದ್ದಾರೆ, ಅವತಾರವೂ ಒಂದೇ ಆಗಿದೆ. ಒಂದೇಬಾರಿ ಬಂದು ಎಲ್ಲರನ್ನು ಪವಿತ್ರ ರಾಜಯೋಗಿಗಳನ್ನಾಗಿ ಮಾಡುತ್ತೇನೆ. ನಿಮ್ಮದು ರಾಜಯೋಗವಾಗಿದೆ, ಸನ್ಯಾಸಿಗಳದು ಹಠಯೋಗವಾಗಿದೆ, ಅವರು ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ಈ ಹಠಯೋಗಿಗಳದೂ ಸಹ ಭಾರತವನ್ನು ತಮನ ಮಾಡಲು ಒಂದು ಧರ್ಮವಾಗಿದೆ. ಪವಿತ್ರತೆಯಂತೂ ಬೇಕಲ್ಲವೇ! ಭಾರತವು 100% ಪಾವನವಾಗಿತ್ತು ಈಗ ಪತಿತವಾಗಿದೆ, ಆದ್ದರಿಂದಲೇ ಪತಿತ ಪಾವನ ಬಂದು ಪಾವನ ಮಾಡು ಎಂದು ಹೇಳುತ್ತಾರೆ. ಸತ್ಯಯುಗವು ಪಾವನ ಜೀವಾತ್ಮಗಳ ಪ್ರಪಂಚವಾಗಿದೆ. ಈಗಿನ ಗೃಹಸ್ಥ ಧರ್ಮವು ಪತಿತವಾಗಿದೆ. ಸತ್ಯಯುಗದಲ್ಲಿ ಗೃಹಸ್ಥ ಧರ್ಮವು ಪಾವನವಾಗಿತ್ತು, ಈಗ ಪುನಃ ಅದೇ ಪಾವನ ಗೃಹಸ್ಥ ಧರ್ಮದ ಸ್ಥಾಪನೆ ಆಗುತ್ತಿದೆ. ಒಬ್ಬ ತಂದೆಯೇ ಸರ್ವರ ಮುಕ್ತಿ, ಜೀವನ್ಮುಕ್ತಿದಾತ ಆಗಿದ್ದಾರೆ. ಮನುಷ್ಯರು, ಮನುಷ್ಯರಿಗೆ ಮುಕ್ತಿ-ಜೀವನ್ಮುಕ್ತಿಯನ್ನು ಕೊಡಲು ಸಾಧ್ಯವಿಲ್ಲ.

ನೀವು ಜ್ಞಾನಸಾಗರ ತಂದೆಯ ಮಕ್ಕಳಾಗಿದ್ದೀರಿ. ನೀವು ಬ್ರಾಹ್ಮಣರೇ ಸತ್ಯ-ಸತ್ಯವಾದ ಯಾತ್ರೆಯನ್ನು ಮಾಡಿಸುತ್ತೀರಿ. ಬಾಕಿ ಎಲ್ಲರೂ ಸುಳ್ಳು ಯಾತ್ರೆಯನ್ನು ಮಾಡಿಸುವವರಾಗಿದ್ದಾರೆ. ನೀವು ಡಬಲ್ ಅಹಿಂಸಕರಾಗಿದ್ದೀರಿ. ನೀವು ಯಾವುದೇ ಹಿಂಸೆಯನ್ನು ಮಾಡುವುದಿಲ್ಲ- ಜಗಳ ಮಾಡುವುದಿಲ್ಲ, ಕಾಮ ಕಟಾರಿಯನ್ನು ನಡೆಸುವುದಿಲ್ಲ. ಕಾಮದ ಮೇಲೆ ಜಯವನ್ನು ಪಡೆಯುವುದರಲ್ಲಿ ಪರಿಶ್ರಮವಾಗುತ್ತದೆ. ವಿಕಾರಗಳನ್ನು ಗೆಲ್ಲಬೇಕಾಗಿದೆ, ನೀವು ಬ್ರಹ್ಮಾಕುಮಾರ-ಕುಮಾರಿಯರು ಶಿವಬಾಬಾರವರಿಂದ ಆಸ್ತಿಯನ್ನು ಪಡೆದುಕೊಳ್ಳುತ್ತೀರಿ ಆದ್ದರಿಂದ ನೀವು ಪರಸ್ಪರ ಸಹೋದರ-ಸಹೋದರಿ ಆಗುತ್ತೀರಿ. ನಾವೀಗ ನಿರಾಕಾರ ಭಗವಂತನ ಮಕ್ಕಳು ಪರಸ್ಪರ ಸಹೋದರ-ಸಹೋದರರಾಗಿದ್ದೇವೆ ನಂತರ ಬ್ರಹ್ಮಾ ತಂದೆಯ ಮಕ್ಕಳಾಗಿರುವುದರಿಂದ ಅವಶ್ಯವಾಗಿ ನಿರ್ವಿಕಾರಿಗಳಾಗಬೇಕಲ್ಲವೇ ಅರ್ಥಾತ್ ವಿಶ್ವದ ರಾಜ್ಯಭಾಗ್ಯವು ನಿಮಗೇ ಸಿಗುತ್ತದೆ. ಇದು ಅನೇಕ ಜನ್ಮಗಳ ಅಂತ್ಯದ ಜನ್ಮವಾಗಿದೆ. ಈಗ ಕಮಲ ಪುಷ್ಪ ಸಮಾನ ಪವಿತ್ರರಾಗಿ, ಆಗ ಶ್ರೇಷ್ಠ ಪದವಿಯು ಸಿಗುತ್ತದೆ. ಈಗ ತಂದೆಯ ಮುಖಾಂತರ ನೀವು ತುಂಬಾ ಬುದ್ಧಿವಂತರಾಗುತ್ತೀರಿ. ಸೃಷ್ಟಿಯ ಎಲ್ಲಾ ಜ್ಞಾನವು ನಿಮ್ಮ ಬುದ್ಧಿಯಲ್ಲಿದೆ. ನೀವು ಸ್ವದರ್ಶನ ಚಕ್ರಧಾರಿಗಳಾಗಿದ್ದೀರಿ. ಸ್ವ ಆತ್ಮನಿಗೆ ದರ್ಶನವಾಗುತ್ತದೆ ಅರ್ಥಾತ್ ಪರಮಾತ್ಮನಿಂದ ಜ್ಞಾನವು ಸಿಗುತ್ತದೆ, ಅವರನ್ನೇ ಜ್ಞಾನ ಸಾಗರನೆಂದು ಹೇಳುತ್ತಾರೆ. ಅವರೇ ಮನುಷ್ಯ ಸೃಷ್ಟಿಯ ಬೀಜ ರೂಪನಾಗಿದ್ದಾರೆ, ಚೈತನ್ಯ ಆಗಿದ್ದಾರೆ. ಈಗ ಜ್ಞಾನವನ್ನು ಕೊಡಲು ಬಂದಿದ್ದಾರೆ. ಬೀಜ ಒಂದೇ ಆಗಿದೆ, ಇದನ್ನು ನೀವು ತಿಳಿದುಕೊಂಡಿದ್ದೀರಿ. ಬೀಜದಿಂದ ವೃಕ್ಷವು ಹೇಗೆ ಹೊರಡುತ್ತದೆ, ಇದು ಉಲ್ಟಾ ವೃಕ್ಷವಾಗಿದೆ. ಬೀಜವು ಮೇಲಿದೆ, ಮೊದಲು-ಮೊದಲು ದೈವೀ ವೃಕ್ಷವು ಹೊರಡುತ್ತದೆ ನಂತರ ಇಸ್ಲಾಮಿ, ಬೌದ್ಧಿ...... ವೃದ್ಧಿಯಾಗುತ್ತಾ ಹೋಗುತ್ತದೆ. ಈ ಎಲ್ಲಾ ಜ್ಞಾನವು ಈಗ ನಿಮಗೆ ಸಿಕ್ಕಿದೆ ಇದನ್ನು ಮತ್ಯಾರೂ ಕೊಡಲು ಸಾಧ್ಯವಿಲ್ಲ. ನೀವು ಏನನ್ನು ಕೇಳುತ್ತೀರಿ ಅದು ನಿಮ್ಮ ಬುದ್ಧಿಯಲ್ಲಿಯೇ ಇರುತ್ತದೆ. ಸತ್ಯಯುಗದ ಆದಿಯಲ್ಲಿ ಶಾಸ್ತ್ರಗಳು ಇರುವುದಿಲ್ಲ. ಇದು ಎಷ್ಟು ಸಹಜವಾದ 5000 ವರ್ಷಗಳ ಕಥೆಯಾಗಿದೆಯಲ್ಲವೇ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತ್-ಪಿತ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ತಂದೆ ಆತ್ಮೀಯ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸಮಯವು ಕಡಿಮೆ ಇದೆ. ತುಂಬಾ ಕಳೆದು ಹೋಯಿತು, ಸ್ವಲ್ಪ ಮಾತ್ರ ಉಳಿದಿದೆ..... ಆದ್ದರಿಂದ ಯಾವ ಶ್ವಾಸವು ಉಳಿದಿದೆ ಅದನ್ನು ತಂದೆಯ ನೆನಪಿನಲ್ಲಿ ಸಫಲ ಮಾಡಿಕೊಳ್ಳಬೇಕಾಗಿದೆ. ಹಳೆಯ ಪಾಪದ ಲೆಕ್ಕಾಚಾರವನ್ನು ಸಮಾಪ್ತಿ ಮಾಡಬೇಕಾಗಿದೆ.

2. ಶಾಂತಿಯ ಸ್ವಧರ್ಮದಲ್ಲಿ ಸ್ಥಿತರಾಗಲು ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. ಎಲ್ಲಿ ಪವಿತ್ರತೆಯಿದೆ ಅಲ್ಲಿ ಶಾಂತಿ ಇದೆ. ನನ್ನ ಸ್ವಧರ್ಮವೇ ಶಾಂತಿಯಾಗಿದೆ, ನಾನು ಶಾಂತಿ ಸಾಗರ ತಂದೆಯ ಸಂತಾನನಾಗಿದ್ದೇನೆ.... ಈ ಅನುಭವ ಮಾಡಬೇಕಾಗಿದೆ.

ವರದಾನ:
ನಿರ್ಮಾಣತೆಯ ವಿಶೇಷತೆಯ ಮೂಲಕ ಸಹಜ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಸರ್ವರ ಮಾನನೀಯ ಭವ.

ಸರ್ವರ ಮೂಲಕ ಮಾನ್ಯತೆಯನ್ನು ಪ್ರಾಪ್ತಿ ಮಾಡಿಕೊಳ್ಳುವ ಸಹಜ ಸಾಧನವಾಗಿದೆ - ನಿರಹಂಕಾರಿ ಆಗಿರುವುದು. ಯಾವ ಆತ್ಮರು ತನ್ನನ್ನು ಸದಾಕಾಲ ನಿರ್ಮಾಣ ಚಿತ್ತದ ವಿಶೇಷತೆಯಿಂದ ನಡೆಸುತ್ತಾರೆಯೋ ಅವರು ಸಹಜವಾಗಿಯೇ ಸಫಲತೆಯನ್ನು ಪಡೆದುಕೊಳ್ಳುವರು. ನಿರಹಂಕಾರಿ ಆಗುವುದೇ ಸ್ವಮಾನವಾಗಿದೆ. ನಿರಹಂಕಾರಿ ಆಗುವುದು ಬಾಗುವುದೆಂದಲ್ಲ ಆದರೆ ಸರ್ವರನ್ನೂ ತಮ್ಮ ವಿಶೇಷತೆ ಹಾಗೂ ಪ್ರೀತಿಯಿಂದ ಬಾಗಿಸುವುದಾಗಿದೆ. ವರ್ತಮಾನ ಸಮಯದನುಸಾರ ಸದಾ ಹಾಗೂ ಸಹಜ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುವುದಕ್ಕಾಗಿ ಮೂಲಾಧಾರವೂ ಇದೇ ಆಗಿದೆ. ಪ್ರತೀ ಕರ್ಮ, ಸಂಬಂಧ ಹಾಗೂ ಸಂಪರ್ಕದಲ್ಲಿ ನಿರಹಂಕಾರಿ ಆಗುವವರೇ ವಿಜಯಿ ರತ್ನಗಳಾಗುವರು.

ಸ್ಲೋಗನ್:
ಜ್ಞಾನದ ಶಕ್ತಿಯನ್ನು ಧಾರಣೆ ಮಾಡಿಕೊಳ್ಳುತ್ತೀರೆಂದರೆ ವಿಘ್ನವು ಯುದ್ಧ ಮಾಡುವುದರ ಬದಲು ಸೋಲನ್ನೊಪ್ಪಿಕೊಳ್ಳುವುದು.