02.06.22         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಸತ್ಯ ತಂದೆಯು ನಿಮಗೆ ಎಲ್ಲವನ್ನೂ ಸತ್ಯವನ್ನೇ ತಿಳಿಸುತ್ತಾರೆ, ಇಂತಹ ಸತ್ಯ ತಂದೆಯೊಂದಿಗೆ ಸದಾ ಸತ್ಯವಾಗಿರಬೇಕು, ಒಳಗೆ ಯಾವುದೇ ಸುಳ್ಳು, ಕಪಟವನ್ನು ಇಟ್ಟುಕೊಳ್ಳಬಾರದು

ಪ್ರಶ್ನೆ:
ಸಂಗಮಯುಗದಲ್ಲಿ ನೀವು ಮಕ್ಕಳು ಯಾವ ಅಂತರವನ್ನು ಒಳ್ಳೆಯ ರೀತಿಯಲ್ಲಿ ಅರಿತುಕೊಂಡಿದ್ದೀರಿ?

ಉತ್ತರ:
ಬ್ರಾಹ್ಮಣರು ಏನು ಮಾಡುತ್ತಾರೆ ಮತ್ತು ಶೂದ್ರರು ಏನು ಮಾಡುತ್ತಾರೆ. ಭಕ್ತಿಮಾರ್ಗ ಏನಾಗಿದೆ, ಜ್ಞಾನಮಾರ್ಗ ಏನಾಗಿದೆ, ಆ ಶಾರೀರಿಕ ಸೈನ್ಯಕ್ಕೋಸ್ಕರ ಯುದ್ಧದ ಮೈದಾನವು ಯಾವುದಾಗಿದೆ ಮತ್ತು ನಮ್ಮ ಯುದ್ಧದ ಮೈದಾನವು ಯಾವುದಾಗಿದೆ - ಈ ಎಲ್ಲಾ ಅಂತರವನ್ನು ನೀವು ಮಕ್ಕಳೇ ಅರಿತುಕೊಂಡಿದ್ದೀರಿ. ಸತ್ಯಯುಗ ಅಥವಾ ಕಲಿಯುಗದಲ್ಲಿ ಈ ಅಂತರವನ್ನು ಯಾರೂ ತಿಳಿದುಕೊಂಡಿಲ್ಲ.

ಗೀತೆ:
ಮಾತಾ ಓ ಮಾತಾ ನೀವೇ ಎಲ್ಲರ ಭಾಗ್ಯ ವಿಧಾತ........................

ಓಂ ಶಾಂತಿ.
ಇದು ಭಾರತ ಮಾತೆಯರ ಮಹಿಮೆಯಾಗಿದೆ. ಪರಮಪಿತ ಪರಮಾತ್ಮ ಶಿವನ ಮಹಿಮೆಯೂ ಇದೆ. ಕೇವಲ ಒಂದು ಮಾತೆಯ ಮಹಿಮೆಯು ನಡೆಯಲು ಸಾಧ್ಯವಿಲ್ಲ. ಒಬ್ಬರಂತು ಏನನ್ನೂ ಮಾಡಲು ಸಾಧ್ಯವಿಲ್ಲ. ಅವಶ್ಯವಾಗಿ ಸೈನ್ಯವು ಬೇಕು. ಸೈನ್ಯವಿಲ್ಲದೆ ಕೆಲಸವು ಹೇಗೆ ನಡೆಯುತ್ತದೆ! ಶಿವಬಾಬಾ ಒಬ್ಬರಾಗಿದ್ದಾರೆ. ಅವರು ಒಬ್ಬರು ಇಲ್ಲದೇ ಇದ್ದರೆ ಮಾತೆಯರೂ ಸಹ ಇರುವುದಿಲ್ಲ. ಮಕ್ಕಳು ಇರುವುದಿಲ್ಲ, ಬ್ರಹ್ಮಾಕುಮಾರ-ಕುಮಾರಿಯರೂ ಇರುವುದಿಲ್ಲ. ಮೆಜಾರಿಟಿ ಮಾತೆಯರದಾಗಿದೆ ಆದ್ದರಿಂದ ಮಾತೆಯರಿಗೆ ಮಹಿಮೆ ಮಾಡಲಾಗಿದೆ. ಭಾರತ ಮಾತೆಯರು ಶಿವಶಕ್ತಿ ಗುಪ್ತಸೇನೆಯಾಗಿದ್ದಾರೆ ಹಾಗೂ ಅಹಿಂಸಕರಾಗಿದ್ದಾರೆ. ಯಾವುದೇ ಪ್ರಕಾರದ ಹಿಂಸೆಯನ್ನು ಮಾಡುವುದಿಲ್ಲ. ಹಿಂಸೆಯೂ ಎರಡು ಪ್ರಕಾರದ್ದಾಗಿರುತ್ತದೆ. ಮೊದಲನೆಯದು ಕಾಮ, ಕಟಾರಿಯನ್ನು ನಡೆಸುವುದಾಗಿದೆ, ಎರಡನೆಯದು ಗುಂಡು ಹೊಡೆಯುವುದು, ಕ್ರೋಧ ಮಾಡುವುದು, ಸಾಯಿಸುವುದು ಮುಂತಾದವುಗಳಾಗಿವೆ. ಈ ಸಮಯದಲ್ಲಿ ಯಾವ ಶಾರೀರಿಕ ಸೈನ್ಯಗಳಿದೆ ಅವರು ಎರಡೂ ಹಿಂಸೆಗಳನ್ನು ಮಾಡುತ್ತಾರೆ. ಇಂದಿನ ಕಾಲದಲ್ಲಿ ಬಂಧೂಕು ಮುಂತಾದವುಗಳನ್ನು ನಡೆಸುವುದನ್ನು ಮಾತೆಯರಿಗೂ ತೋರಿಸುತ್ತಾರೆ. ಅವರು ಶಾರೀರಿಕ ಸೈನ್ಯದ ಮಾತೆಯರಾಗಿದ್ದಾರೆ ಮತ್ತು ಇವರು ಆತ್ಮಿಕ ಸೈನ್ಯ ದೈವೀ ಸಂಪ್ರದಾಯಯುಳ್ಳ ಮಾತೆಯರಾಗಿದ್ದಾರೆ. ಅವರು ಎಷ್ಟೊಂದು ವ್ಯಾಯಾಮ ಮುಂತಾದವುಗಳು ಕಲಿಯುತ್ತಾರೆ. ಬಹುಶಃ ನೀವು ಎಂದೂ ಮೈದಾನದಲ್ಲಿ ಹೋಗಿರುವುದಿಲ್ಲ. ಅವರು ತುಂಬಾ ಪರಿಶ್ರಮ ಪಡುತ್ತಾರೆ. ಕಾಮ ವಿಕಾರದಲ್ಲಿಯೂ ಹೋಗುತ್ತಾರೆ, ಮದುವೆಯನ್ನು ಮಾಡಿಕೊಳ್ಳದೇ ಇರುವವರು ಕೆಲವರಷ್ಟೆ ಪರಿಶ್ರಮಪಟ್ಟು ಇರುತ್ತಾರೆ. ಆ ಸೈನ್ಯದಲ್ಲಿಯೂ ಸಹ ತುಂಬಾ ಕಲಿಯುತ್ತಾ ಇರುತ್ತಾರೆ. ಚಿಕ್ಕ-ಚಿಕ್ಕ ಮಕ್ಕಳಿಗೂ ಸಹ ಕಲಿಸುತ್ತಾ ಇರುತ್ತಾರೆ. ಅದು ಸೈನ್ಯವಾಗಿದೆ, ಇದೂ ಸೈನ್ಯವಾಗಿದೆ. ಸೈನ್ಯದ ಬಗ್ಗೆ ಗೀತೆಯನ್ನು ತುಂಬಾ ವಿಸ್ತಾರವಾಗಿ ಬರೆಯಲ್ಪಟ್ಟಿದೆ. ಆದರೆ ಪ್ರತ್ಯಕ್ಷದಲ್ಲಿ ಏನಿದೆ ಎಂಬುದಂತೂ ನೀವೇ ಅರಿತುಕೊಂಡಿದ್ದೀರಿ. ನಾವು ಎಷ್ಟು ಗುಪ್ತರಾಗಿದ್ದೇವೆ ಎನ್ನುವುದೂ ಸಹ ನಿಮಗೆ ತಿಳಿದಿದೆ. ಶಿವಶಕ್ತಿ ಸೇನೆಯು ಏನು ಮಾಡುತ್ತದೆ? ವಿಶ್ವದ ಮಾಲೀಕರು ಹೇಗಾಗುತ್ತಾರೆ? ಇದಕ್ಕೆ ಯುದ್ಧ ಸ್ಥಳವೆಂದು ಹೇಳಲಾಗುತ್ತದೆ. ನಿಮ್ಮ ಯುದ್ಧದ ಮೈದಾನವೂ ಸಹ ಗುಪ್ತವಾಗಿದೆ. ಮೈದಾನವೆಂದು ಈ ಮಂಟಪಕ್ಕೆ ಹೇಳಲಾಗುತ್ತದೆ. ಮೊದಲು ಮಾತೆಯರು ಯುದ್ಧದ ಮೈದಾನದಲ್ಲಿ ಹೋಗುತ್ತಿರಲಿಲ್ಲ. ಈಗ ಇಲ್ಲಿಯದು ಪೂರ್ಣ ಹೋಲಿಕೆಯಾಗುತ್ತದೆ. ಎರಡೂ ಸೈನ್ಯಗಳಲ್ಲಿ ಮಾತೆಯರಿದ್ದಾರೆ ಆದರೆ ಅವರಲ್ಲಿ ಮೆಜಾರಿಟಿ ಪುರುಷರದ್ದಾಗಿದೆ, ಇಲ್ಲಿ ಮೆಜಾರಿಟಿ ಮಾತೆಯರದ್ದಾಗಿದೆ. ಜ್ಞಾನಮಾರ್ಗ ಮತ್ತು ಭಕ್ತಿಮಾರ್ಗದಲ್ಲಿ ಅಂತರವಿದೆಯಲ್ಲವೇ. ಇದು ಕೊನೆಯ ಅಂತರವಾಗಿದೆ. ಸತ್ಯಯುಗದಲ್ಲಿ ಈ ಅಂತರದ ಮಾತು ಇರುವುದಿಲ್ಲ. ತಂದೆಯೇ ಬಂದು ಈ ಅಂತರವನ್ನು ತಿಳಿಸುತ್ತಾರೆ. ಬ್ರಾಹ್ಮಣರೇನು ಮಾಡುತ್ತಾರೆ ಮತ್ತು ಶೂದ್ರರು ಏನು ಮಾಡುತ್ತಾರೆ? ಇಬ್ಬರೂ ಸಹ ಇಲ್ಲಿ ಯುದ್ಧದ ಮೈದಾನದಲ್ಲಿ ಇದ್ದಾರೆ. ಸತ್ಯಯುಗ ಅಥವಾ ಕಲಿಯುಗದ ಮಾತಿಲ್ಲ. ಇದು ಸಂಗಮಯುಗದ ಮಾತಾಗಿದೆ. ನೀವು ಪಾಂಡವರು ಸಂಗಮಯುಗದವರಾಗಿದ್ದೀರಿ, ಕಲಿಯುಗೀ ಕೌರವರಾಗಿದ್ದಾರೆ. ಅವರು ಕಲಿಯುಗದ ಸಮಯವನ್ನು ತುಂಬಾ ಉದ್ದವನ್ನಾಗಿ ಮಾಡಿ ಬಿಟ್ಟಿದ್ದಾರೆ. ಈ ಕಾರಣದಿಂದ ಅವರಿಗೆ ಸಂಗಮಯುಗವೂ ತಿಳಿದೇ ಇಲ್ಲ. ನಿಧಾನ-ನಿಧಾನವಾಗಿ ಈ ಜ್ಞಾನವನ್ನೂ ಸಹ ನಿಮ್ಮ ಮುಖಾಂತರ ತಿಳಿಯುತ್ತಾರೆ ಎಂದಾಗ ಒಬ್ಬ ಮಾತೆಯ ಮಹಿಮೆಯಲ್ಲ. ಇದು ಶಕ್ತಿ ಸೈನ್ಯವಾಗಿದೆ. ಶ್ರೇಷ್ಠಾತಿ ಶ್ರೇಷ್ಠ ಒಬ್ಬ ಭಗವಂತನಾಗಿದ್ದಾರೆ ಮತ್ತು ನೀವು ಕಲ್ಪದ ಮೊದಲಿನ ಸೈನ್ಯವಾಗಿದ್ದೀರಿ. ಈ ಭಾರತವನ್ನು ದೈವೀ ರಾಜಸ್ಥಾನವನ್ನಾಗಿ ಮಾಡುವುದು ನಿಮ್ಮ ಕರ್ತವ್ಯವಾಗಿದೆ.

ಮೊದಲು ನಾವು ಸೂರ್ಯವಂಶೀ ಆಗಿದ್ದೆವು ನಂತರ ಚಂದ್ರವಂಶೀ, ವೈಶ್ಯವಂಶಿಯರಾದೆವು ಎನ್ನುವುದನ್ನು ನೀವು ತಿಳಿದುಕೊಂಡಿದ್ದೀರಿ ಆದರೆ ಸೂರ್ಯವಂಶಿಯರಿಗೇ ಮಹಿಮೆ ಮಾಡುತ್ತಾರೆ. ನಾವು ಪುರುಷಾರ್ಥವನ್ನೇ ಈ ರೀತಿ ಮಾಡುತ್ತಿದ್ದೆವೆ, ಆದ್ದರಿಂದ ನಾವು ಮೊದಲು ಸೂರ್ಯವಂಶಿ ಅರ್ಥಾತ್ ಸ್ವರ್ಗದಲ್ಲಿ ಬರುತ್ತೇವೆ. ಸತ್ಯಯುಗವನ್ನು ಸ್ವರ್ಗವೆಂದು ಹೇಳಲಾಗುತ್ತದೆ. ವಾಸ್ತವದಲ್ಲಿ ತ್ರೇತಾಯುಗವನ್ನು ಸ್ವರ್ಗವೆಂದು ಹೇಳುವುದಿಲ್ಲ. ಯಾರಾದರೂ ಶರೀರ ಬಿಟ್ಟಾಗ ಇಂತಹವರು ಸ್ವರ್ಗಕ್ಕೆ ಹೋದರೆಂದು ಹೇಳುತ್ತಾರೆ ಆದರೆ ಇಂತಹವರು ತ್ರೇತಾದಲ್ಲಿ ರಾಮ-ಸೀತೆಯ ರಾಜ್ಯದಲ್ಲಿ ಹೋದರೆಂದು ಹೇಳುವುದಿಲ್ಲ. ವೈಕುಂಠದಲ್ಲಿ ಶ್ರೀಕೃಷ್ಣನ ರಾಜ್ಯವಿತ್ತು ಎನ್ನುವುದನ್ನು ಭಾರತವಾಸಿಗಳು ಅರಿತುಕೊಂಡಿದ್ದಾರೆ ಆದರೆ ಶ್ರೀಕೃಷ್ಣನು ದ್ವಾಪರದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಮನುಷ್ಯರಿಗೆ ಸತ್ಯವು ತಿಳಿದೇ ಇಲ್ಲ. ಸತ್ಯವನ್ನು ತಿಳಿಸುವಂತಹ ಸದ್ಗುರು ಯಾರೂ ಅವರಿಗೆ ದೊರೆತಿಲ್ಲ, ಈಗ ನಿಮಗೆ ದೊರೆತಿದ್ದಾರೆ. ಅವರು ಎಲ್ಲವನ್ನು ಸತ್ಯವನ್ನೇ ತಿಳಿಸುತ್ತಾರೆ ಹಾಗೂ ಸತ್ಯವಂತರನ್ನಾಗಿ ಮಾಡುತ್ತಾರೆ. ಮಕ್ಕಳೇ, ನೀವು ಎಂದೂ ಸುಳ್ಳು, ಕಪಟ ಮಾಡಬಾರದೆಂದು ಮಕ್ಕಳಿಗೆ ತಿಳಿಸುತ್ತಾರೆ. ನಿಮ್ಮದು ಏನೂ ಸಹ ಮುಚ್ಚಿಡುವುದಿಲ್ಲ, ಯಾರು ಎಂತಹ ಕರ್ಮ ಮಾಡುತ್ತಾರೆ, ಅಂತಹದನ್ನೇ ಪಡೆಯುತ್ತಾರೆ. ತಂದೆಯು ಒಳ್ಳೆಯ ಕರ್ಮವನ್ನು ಕಲಿಸುತ್ತಾರೆ. ಈಶ್ವರನ ಬಳಿ ಯಾರದೇ ವಿಕರ್ಮವು ಮುಚ್ಚಿಡಲು ಸಾಧ್ಯವಿಲ್ಲ. ಕರ್ಮಭೋಗವೂ ಸಹ ತುಂಬಾ ಕಠಿಣವಾಗುತ್ತದೆ. ಭಲೆ ನಿಮ್ಮದು ಇದು ಅಂತಿಮ ಜನ್ಮವಾಗಿದ್ದರೂ ಸಹ ಶಿಕ್ಷೆಯನ್ನು ಅನುಭವಿಸಲೇಬೇಕಾಗುತ್ತದೆ ಏಕೆಂದರೆ ಅನೇಕ ಜನ್ಮಗಳ ಲೆಕ್ಕಾಚಾರವು ಮುಕ್ತಾಯವಾಗಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಕಾಶಿಯಲ್ಲಿ ಹೋಗಿ ಬಲಿಹಾರಿ ಆಗುತ್ತಾರೆಂದರೆ ಎಲ್ಲಿಯ ತನಕ ಪ್ರಾಣವು ಹೋಗುವುದಿಲ್ಲವೋ ಅಲ್ಲಿಯ ತನಕವು ನೋವನ್ನು ಅನುಭವಿಸಲೇಬೇಕಾಗುತ್ತದೆ. ತುಂಬಾ ಕಷ್ಟವನ್ನು ಸಹನೆ ಮಾಡಬೇಕಾಗುತ್ತದೆ. ಒಂದಂತೂ ಕರ್ಮಭೋಗವೂ ಕಾಯಿಲೆ ಮುಂತಾದವುಗಳದ್ದಾಗಿದೆ. ಎರಡನೆಯದು ವಿಕರ್ಮಗಳ ಶಿಕ್ಷೆಯಾಗಿದೆ. ಆ ಸಮಯದಲ್ಲಿ ಏನನ್ನೂ ಮಾತನಾಡುವುದು ಸಾಧ್ಯವಾಗುವುದಿಲ್ಲ, ಚೀರಾಡುತ್ತಾ ಇರುತ್ತಾರೆ. ತ್ರಾಹಿ-ತ್ರಾಹಿ (ಅಯ್ಯಯ್ಯೋ) ಎನ್ನುತ್ತಿರುತ್ತಾರೆ. ಪಾಪಾತ್ಮರಿಗೆ ಇಲ್ಲಿಯೂ ಶಿಕ್ಷೆ, ಅಲ್ಲಿಯೂ ಶಿಕ್ಷೆಯು ಸಿಗುತ್ತದೆ. ಸತ್ಯಯುಗದಲ್ಲಿ ಪಾಪವಾಗುವುದೇ ಇಲ್ಲ. ಕೋರ್ಟ್, ಮೆಜಿಸ್ಟ್ರೇಟ್ ಇರುವುದಿಲ್ಲ. ಗರ್ಭ ಜೈಲಿನ ಶಿಕ್ಷೆಯು ಇರುವುದಿಲ್ಲ. ಅಲ್ಲಿ ಗರ್ಭ ಮಹಲ್ ಇರುತ್ತದೆ. ಆದ್ದರಿಂದಲೇ ಆಲದ ಎಲೆಯ ಮೇಲೆ ಕೃಷ್ಣನು ಬೆರಳನ್ನು ಚೀಪುತ್ತಾ ಬಂದನೆಂದು ತೋರಿಸಿದ್ದಾರೆ. ಅಲ್ಲಿ ಗರ್ಭ ಮಹಲ್ನ ಮಾತಾಗಿದೆ. ಸತ್ಯಯುಗದಲ್ಲಿ ಮಕ್ಕಳು ಸುಲಭ ರೀತಿಯಲ್ಲಿ ಜನ್ಮವನ್ನು ಪಡೆಯುತ್ತಾರೆ. ಆದಿ-ಮಧ್ಯ-ಅಂತ್ಯ ಸುಖವೇ ಸುಖವಿರುತ್ತದೆ ಆದರೆ ಈ ಪ್ರಪಂಚದಲ್ಲಿ ಆದಿ-ಮಧ್ಯ-ಅಂತ್ಯ ದುಃಖವೇ ದುಃಖವಿದೆ. ಈಗ ನೀವು ಸುಖದ ಪ್ರಪಂಚದಲ್ಲಿ ಹೋಗಲು ಓದುತ್ತಿದ್ದೀರಿ. ಎಷ್ಟು ನೀವು ಅನೇಕರಿಗೆ ಮಾರ್ಗವನ್ನು ತಿಳಿಸುತ್ತಾ ಹೋಗುತ್ತೀರಿ ಅಷ್ಟು ಈ ಗುಪ್ತ ಸೈನ್ಯವು ವೃದ್ಧಿಯನ್ನು ಹೊಂದುತ್ತಾ ಇರುವುದು. ಅವರು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ನೆನಪಿನ ಪರಿಶ್ರಮ ಪಡಬೇಕಾಗಿದೆ. ಬೇಹದ್ದಿನ ಆಸ್ತಿಯು ಸಿಕ್ಕಿತು. ಅದನ್ನು ಈಗ ಕಳೆದುಕೊಂಡಿದ್ದೀರಿ. ಈಗ ಪುನಃ ಪಡೆಯುತ್ತಿದ್ದೀರಿ. ಇಲ್ಲಿ ಲೌಕಿಕ ತಂದೆ, ಪಾರಲೌಕಿಕ ತಂದೆ ಇಬ್ಬರನ್ನು ನೆನಪು ಮಾಡುತ್ತಾರೆ. ಸತ್ಯಯುಗದಲ್ಲಿ ಒಬ್ಬ ಲೌಕಿಕ ತಂದೆಯನ್ನು ನೆನಪು ಮಾಡುತ್ತಾರೆ. ಅಲ್ಲಿ ಪಾರಲೌಕಿಕ ತಂದೆಯನ್ನು ನೆನಪು ಮಾಡುವ ಅವಶ್ಯಕತೆಯೇ ಇರುವುದಿಲ್ಲ. ಅಲ್ಲಿ ಸುಖವೇ ಸುಖವಿರುತ್ತದೆ. ಈ ಜ್ಞಾನವೂ ಭಾರತವಾಸಿಗಳಿಗೋಸ್ಕರವಾಗಿದೆ, ಅನ್ಯ ಧರ್ಮದವರಿಗೋಸ್ಕರ ಅಲ್ಲ ಆದರೆ ಯಾರು ಅನ್ಯ ಧರ್ಮಗಳಲ್ಲಿ ಮತಾಂತರಗೊಂಡಿದ್ದಾರೆ, ಅವರು ಪುನಃ ಹೊರ ಬರುತ್ತಾರೆ, ಬಂದು ಯೋಗವನ್ನು ಕಲಿಯುತ್ತಾರೆ. ಯೋಗದ ಬಗ್ಗೆ ತಿಳಿಸುವುದಕ್ಕೋಸ್ಕರ ನಿಮಗೆ ನಿಮಂತ್ರಣ ಸಿಗುತ್ತದೆ ಎಂದರೆ ನೀವು ತಯಾರಿ ಮಾಡಬೇಕು. ಅವರಿಗೆ ತಿಳಿಸಬೇಕು - ನೀವು ಭಾರತದ ಪ್ರಾಚೀನ ಯೋಗವನ್ನು ಮರೆತು ಬಿಟ್ಟಿದ್ದೀರಾ? ಭಗವಂತನೇ ಮನ್ಮನಾಭವ ಎಂದು ಹೇಳುತ್ತಾರೆ. ಪರಮಪಿತ ಪರಮಾತ್ಮನೇ ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿದಾಗ ನೀವು ನನ್ನ ಬಳಿ ಬರುತ್ತೀರೆಂದು ನಿರಾಕಾರಿ ಮಕ್ಕಳಿಗೆ ತಿಳಿಸುತ್ತಾರೆ. ನೀವು ಆತ್ಮಗಳು ಈ ಕರ್ಮೇಂದ್ರಿಯಗಳಿಂದ ಕೇಳುತ್ತೀರಿ. ನಾನಾತ್ಮ ಈ ಕರ್ಮೇಂದ್ರಿಯಗಳ ಆಧಾರದಿಂದ ತಿಳಿಸುತ್ತೇನೆ. ನಾನು ಎಲ್ಲರ ತಂದೆಯಾಗಿದ್ದೇನೆ. ನನ್ನ ಮಹಿಮೆಯನ್ನು ಸರ್ವಶಕ್ತಿವಂತ, ಜ್ಞಾನ ಸಾಗರ, ಸುಖದ ಸಾಗರ ಇತ್ಯಾದಿ ಗಾಯನ ಮಾಡುತ್ತಾರೆ. ಶಿವ ಪರಮಾತ್ಮನ ಮಹಿಮೆ ಹಾಗೂ ಕೃಷ್ಣನ ಮಹಿಮೆಯನ್ನು ತಿಳಿಸಿ ಎನ್ನುವ ಟಾಪಿಕ್ ತುಂಬಾ ಚೆನ್ನಾಗಿದೆ. ಈಗ ವಿಚಾರ ಮಾಡಿ - ಗೀತೆಯ ಭಗವಂತ ಯಾರು? ಇದು ಜಬರ್ದಸ್ತ್ ಟಾಪಿಕ್ ಆಗಿದೆ. ಇದರ ಮೇಲೆ ನೀವು ತಿಳಿಸಬೇಕಾಗಿದೆ. ಹೇಳಿ, ನಾವು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವುದಿಲ್ಲ. ಒಂದು ನಿಮಿಷ ಕೊಟ್ಟರು ಸರಿ. ಭಗವಾನುವಾಚ: ಮನ್ಮನಾಭವ, ನನ್ನೊಬ್ಬನನ್ನೇ ನೆನಪು ಮಾಡಿದಾಗ ಸ್ವರ್ಗದ ಆಸ್ತಿಯು ಸಿಗುತ್ತದೆ. ಇದನ್ನು ಯಾರು ಹೇಳಿದರು? ನಿರಾಕಾರ ಪರಮಾತ್ಮನು ಬ್ರಹ್ಮಾರವರ ಶರೀರ ಮೂಲಕ ಬ್ರಾಹ್ಮಣ ಮಕ್ಕಳಿಗೆ ತಿಳಿಸಿದರು, ಇವರನ್ನೇ ಪಾಂಡವ ಸೈನ್ಯವೆಂದು ಹೇಳುತ್ತಾರೆ. ಆತ್ಮಿಕ ಯಾತ್ರೆಯಲ್ಲಿ ಕರೆದುಕೊಂಡು ಹೋಗಲು ನೀವು ಮಾರ್ಗದರ್ಶಕರಾಗಿದ್ದೀರಿ. ಬಾಬಾ ನಿಬಂಧನೆಯನ್ನು [ಈ ರೀತಿ] ಕೊಡುತ್ತಾರೆ. ಅವರಿಗೆ ಮತ್ತೆ ಹೇಗೆ ರಿಫೈನ್ ಮಾಡಿ ತಿಳಿಸಬೇಕು ಎನ್ನುವುದನ್ನು ಮಕ್ಕಳು ವಿಚಾರ ಮಾಡಬೇಕು. ತಂದೆಯನ್ನು ನೆನಪು ಮಾಡುವುದರಿಂದಲೇ ಮುಕ್ತಿ-ಜೀವನ್ಮುಕ್ತಿಯ ಆಸ್ತಿಯು ಸಿಗುತ್ತದೆ. ನಾವು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೇವೆ. ವಾಸ್ತವದಲ್ಲಿ ನೀವೂ ಸಹ ಆಗಿದ್ದೀರಿ ಆದರೆ ನೀವು ತಂದೆಯನ್ನು ಅರ್ಥ ಮಾಡಿಕೊಂಡಿಲ್ಲ. ನೀವು ಮಕ್ಕಳು ಈಗ ಪರಮಪಿತ ಪರಮಾತ್ಮನ ಮುಖಾಂತರ ದೇವತೆ ಆಗುತ್ತಿದ್ದೀರಿ. ಭಾರತದಲ್ಲಿಯೇ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಚಿಕ್ಕ-ಚಿಕ್ಕ ಮಕ್ಕಳು ಝೇಂಕರಿಸುವ ಧ್ವನಿಯಿಂದ ದೊಡ್ಡ-ದೊಡ್ಡ ಸಭೆಯಲ್ಲಿ ತಿಳಿಸುವುದರಿಂದ ಎಷ್ಟು ಪ್ರಭಾವವಾಗುತ್ತದೆ. ಎಲ್ಲರೂ ಇವರಲ್ಲಿ ಜ್ಞಾನವಿದೆ, ಭಗವಂತನ ಮಾರ್ಗವನ್ನು ಇವರು ತಿಳಿಸುತ್ತಾರೆ ಎನ್ನುವುದನ್ನು ತಿಳಿಯುತ್ತಾರೆ. ನಿರಾಕಾರ ಪರಮಾತ್ಮನೇ ಹೇಳುತ್ತಾರೆ- ಹೇ! ಆತ್ಮಗಳೇ, ನನ್ನನ್ನು ನೆನಪು ಮಾಡಿದಾಗ ನಿಮ್ಮ ವಿಕರ್ಮಗಳು ವಿನಾಶವಾಗುತ್ತದೆ. ಗಂಗಾ ಸ್ನಾನ, ತೀರ್ಥ ಯಾತ್ರೆ ಮುಂತಾದವುಗಳನ್ನು ಜನ್ಮ-ಜನ್ಮಾಂತರ ಮಾಡುತ್ತಾ-ಮಾಡುತ್ತಾ ಪತಿತರಾಗುತ್ತಾ ಬಂದಿದ್ದೀರಿ. ಭಾರತಕ್ಕೇ ಏರುವ ಕಲೆ, ಇಳಿಯುವ ಕಲೆಯಾಗಿದೆ. ತಂದೆಯು ರಾಜಯೋಗವನ್ನು ಕಲಿಸಿ ಏರುವ ಕಲೆ ಅರ್ಥಾತ್ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ ನಂತರ ಮಾಯಾ ರಾವಣನು ನರಕದ ಮಾಲೀಕರನ್ನಾಗಿ ಮಾಡುವುದರಿಂದ ಇದನ್ನು ಇಳಿಯುವ ಕಲೆ ಎಂದೇ ಹೇಳಲಾಗುತ್ತದೆಯಲ್ಲವೇ. ಒಂದು ಜನ್ಮದಿಂದ ಇನ್ನೊಂದು ಜನ್ಮಕ್ಕೆ ಸ್ವಲ್ಪ-ಸ್ವಲ್ಪವಾಗಿ ಇಳಿಯುವ ಕಲೆ ಆಗುತ್ತಾ ಹೋಗುತ್ತದೆ. ಜ್ಞಾನವು ಏರುವ ಕಲೆಯಾಗಿದೆ. ಹೇಳುತ್ತಾರೆ, ಭಕ್ತಿಯ ನಂತರ ಭಗವಂತ ಸಿಗುತ್ತಾರೆ ಎಂದಾಗ ಭಗವಂತನೇ ಜ್ಞಾನವನ್ನು ಕೊಡುವರಲ್ಲವೇ. ಅವರೇ ಜ್ಞಾನದ ಸಾಗರನಾಗಿದ್ದಾರೆ. ಜ್ಞಾನಾಂಜನವನ್ನು ಸದ್ಗುರು ಕೊಟ್ಟರು, ಅಜ್ಞಾನ ಅಂಧಕಾರವು ವಿನಾಶವಾಯಿತು. ಪರಮಪಿತ ಪರಮಾತ್ಮ ಒಬ್ಬರೇ ಸದ್ಗುರುವಾಗಿದ್ದಾರೆ. ಮಹಿಮೆಯಲ್ಲವೂ ಸದ್ಗುರುವಿನದಾಗಿದೆ, ಕೇವಲ ಗುರುವಿನದಲ್ಲ. ಗುರುಗಳಂತೂ ಅನೇಕರಿದ್ದಾರೆ, ಸದ್ಗುರು ಒಬ್ಬರೇ ಆಗಿದ್ದಾರೆ. ಅವರೇ ಸದ್ಗತಿದಾತ ಪತಿತ-ಪಾವನ, ಮುಕ್ತಿದಾತನಾಗಿದ್ದಾರೆ. ಈಗ ನೀವು ಮಕ್ಕಳು ಭಗವಾನುವಾಚವನ್ನು ಕೇಳುತ್ತೀರಿ. ನನ್ನೊಬ್ಬನನ್ನೇ ನೆನಪು ಮಾಡುವುದರಿಂದ ನೀವು ಆತ್ಮಗಳು ಶಾಂತಿಧಾಮದಲ್ಲಿ ಹೋಗುವಿರಿ. ಅದು ಶಾಂತಿಧಾಮವಾಗಿದೆ, ಸತ್ಯಯುಗವೂ ಸುಖಧಾಮವಾಗಿದೆ ಮತ್ತು ಇದು ದುಃಖಧಾಮವಾಗಿದೆ. ನೀವು ಇಷ್ಟನ್ನು ಅರಿತುಕೊಳ್ಳುವುದಿಲ್ಲವೇ! ತಂದೆಯೇ ಬಂದು ಪತಿತ ಪ್ರಪಂಚವನ್ನು ಪಾವನ ಪ್ರಪಂಚವನ್ನಾಗಿ ಮಾಡುತ್ತಾರೆ.

ಬೇಹದ್ದಿನ ಸುಖವನ್ನು ಕೊಡುವವರು ಬೇಹದ್ದಿನ ತಂದೆಯೇ ಆಗಿದ್ದಾರೆ. ಬೇಹದ್ದಿನ ದುಃಖವನ್ನು ಕೊಡುವವರು ರಾವಣನಾಗಿದ್ದಾರೆ. ಅವರು ದೊಡ್ಡ ಶತ್ರುವಾಗಿದ್ದಾರೆ. ಇದನ್ನು ನೀವು ಅರಿತುಕೊಂಡಿದ್ದೀರಿ. ಇದು ಯಾರಿಗೂ ತಿಳಿದಿಲ್ಲ. ಈ ರಾವಣ ರಾಜ್ಯವನ್ನು ಪತಿತ ರಾಜ್ಯವೆಂದು ಏಕೆ ಹೇಳಲಾಗುತ್ತದೆ. ಈಗ ತಂದೆಯು ಎಲ್ಲಾ ರಹಸ್ಯವನ್ನು ನಮಗೆ ತಿಳಿಸಿದ್ದಾರೆ. ಪ್ರತಿಯೊಬ್ಬರಲ್ಲಿ 5-5 ವಿಕಾರಗಳು ಪ್ರವೇಶವಾಗಿದೆ, ಆದ್ದರಿಂದ 10 ತಲೆಯ ರಾವಣನನ್ನು ಮಾಡುತ್ತಾರೆ. ಈ ಮಾತನ್ನು ವಿಧ್ವಾಂಸ-ಪಂಡಿತರೂ ಸಹ ಅರಿತುಕೊಂಡಿಲ್ಲ. ರಾಮ ರಾಜ್ಯವು ಯಾವಾಗಿನಿಂದ ಎಲ್ಲಿಯ ತನಕ ನಡೆಯುತ್ತದೆ ಎನ್ನುವ ಬೇಹದ್ದಿನ ಇತಿಹಾಸ-ಭೂಗೋಳವನ್ನು ಈಗ ತಂದೆಯು ತಿಳಿಸಿಕೊಡುತ್ತಾರೆ. ರಾವಣನು ಭಾರತದ ಬೇಹದ್ದಿನ ಶತ್ರು ಆಗಿದ್ದಾನೆ. ರಾವಣನೇ ಎಷ್ಟೊಂದು ದುರ್ಗತಿಯನ್ನು ಮಾಡಿದ್ದಾನೆ. ಭಾರತವೇ ಸ್ವರ್ಗವಾಗಿತ್ತು, ಇದನ್ನು ಮರೆತು ಬಿಟ್ಟಿದ್ದಾರೆ.

ಈಗ ನೀವು ಮಕ್ಕಳಿಗೆ ತಂದೆಯ ಶ್ರೀಮತವೂ ಸಿಗುತ್ತದೆ - ಮಕ್ಕಳೇ, ನನ್ನನ್ನು ನೆನಪು ಮಾಡಿ. ತಂದೆ ಮತ್ತು ಆಸ್ತಿ. ಪರಮಪಿತ ಪರಮಾತ್ಮನು ಸ್ವರ್ಗದ ಸ್ಥಾಪನೆ ಮಾಡುತ್ತಾರೆ ನಂತರ ರಾವಣನು ನರಕದ ಸ್ಥಾಪನೆ ಮಾಡುತ್ತಾನೆ. ನೀವೀಗ ಸ್ವರ್ಗದ ಸ್ಥಾಪನೆ ಮಾಡುವಂತಹ ತಂದೆಯನ್ನು ನೆನಪು ಮಾಡಬೇಕಾಗಿದೆ. ಭಲೆ ಗೃಹಸ್ಥ ವ್ಯವಹಾರದಲ್ಲಿ ಇರಿ, ಮದುವೆ ಮುಂತಾದ ಸಮಾರಂಭಗಳಿಗೆ ಹೋಗಿ, ಯಾವಾಗ ಸಮಯ ಸಿಕ್ಕಿದರೆ ಆಗ ತಂದೆಯನ್ನು ನೆನಪು ಮಾಡಿ. ಶರೀರ ನಿರ್ವಹಣಾರ್ಥ ಕರ್ಮ ಮಾಡುತ್ತಾ ಯಾರ ಜೊತೆ ನಿಮ್ಮ ನಿಶ್ಚಿತಾರ್ಥವಾಗಿದೆ ಅವರನ್ನು ನೆನಪು ಮಾಡಬೇಕಾಗಿದೆ. ಎಲ್ಲಿಯ ತನಕ ಅವರ ಮನೆಯಲ್ಲಿ ಹೋಗುವುದಿಲ್ಲವೋ ಅಲ್ಲಿಯ ತನಕ ಭಲೆ ಎಲ್ಲಾ ಕರ್ತವ್ಯವನ್ನು ಮಾಡುತ್ತಾ ಇರಿ ಆದರೆ ಬುದ್ಧಿಯಿಂದ ತಂದೆಯನ್ನು ಮರೆಯಬೇಡಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಶಿಕ್ಷೆಗಳಿಂದ ಬಿಡುಗಡೆಯಾಗಲು ತಮ್ಮ ಎಲ್ಲಾ ಲೆಕ್ಕಾಚಾರವನ್ನು ಸಮಾಪ್ತಿ ಮಾಡಬೇಕು. ಸತ್ಯ ತಂದೆಯೊಂದಿಗೆ ಏನನ್ನೂ ಮುಚ್ಚಿಡಬಾರದಾಗಿದೆ. ಸುಳ್ಳು ಕಪಟದ ತ್ಯಾಗ ಮಾಡಬೇಕಾಗಿದೆ. ನೆನಪಿನ ಯಾತ್ರೆಯಲ್ಲಿ ಇರಬೇಕಾಗಿದೆ.

2. ಹೇಗೆ ತಂದೆಯು ಅಪಕಾರಿಗಳ ಮೇಲೂ ಉಪಕಾರ ಮಾಡುತ್ತಾರೆ ಹಾಗೆಯೇ ಎಲ್ಲರ ಮೇಲೆ ಉಪಕಾರ ಮಾಡಬೇಕಾಗಿದೆ. ಎಲ್ಲರಿಗೆ ತಂದೆಯ ಸತ್ಯ ಪರಿಚಯವನ್ನು ಕೊಡಬೇಕಾಗಿದೆ.

ವರದಾನ:
ಈಶ್ವರೀಯ ಸಂಸ್ಕಾರಗಳನ್ನು ಕಾರ್ಯದಲ್ಲಿ ಉಪಯೋಗಿಸಿ ಸಫಲ ಮಾಡುವಂತಹ ಸಫಲತಾ ಮೂರ್ತಿ ಭವ.

ಯಾವ ಮಕ್ಕಳು ಸ್ವಯಂನ ಈಶ್ವರೀಯ ಸಂಸ್ಕಾರಗಳನ್ನು ಕಾರ್ಯದಲ್ಲಿ ಉಪಯೋಗಿಸುವರು, ಅವರಲ್ಲಿ ಸ್ವತಹವಾಗಿಯೇ ವ್ಯರ್ಥ ಸಂಕಲ್ಪಗಳು ಸಮಾಪ್ತಿಯಾಗಿ ಬಿಡುತ್ತವೆ. ಸಫಲಗೊಳಿಸುವುದು ಎಂದರೆ ಉಳಿತಾಯ ಮಾಡುವುದು ಅಥವಾ ವೃದ್ಧಿಗೊಳಿಸುವುದು. ಅದು ಈ ರೀತಿಯಾಗಬಾರದು - ಹಳೆಯ ಸಂಸ್ಕಾರಗಳನ್ನೇ ಉಪಯೋಗಿಸುತ್ತಾ, ಈಶ್ವರೀಯ ಸಂಸ್ಕಾರಗಳನ್ನು ಬುದ್ಧಿಯ ಲಾಕರ್ನಲ್ಲಿ ಇಟ್ಟು ಬಿಡಿ. ಹೇಗೆ ಹಲವರಲ್ಲಿ ಹವ್ಯಾಸವಾಗಿರುತ್ತದೆ - ಒಳ್ಳೆಯ ವಸ್ತು ಅಥವಾ ಹಣವನ್ನು ಬ್ಯಾಂಕ್ ಅಥವಾ ಅಲ್ಮಾರಿಯಲ್ಲಿ ಇಡುವುದು, ಹಳೆಯ ವಸ್ತುಗಳೊಂದಿಗೆ ಪ್ರೀತಿಯಿರುವ ಕಾರಣ ಅದನ್ನೇ ಉಪಯೋಗ ಮಾಡುತ್ತಿರುತ್ತಾರೆ. ಇಲ್ಲಿ ಹಾಗೆ ಮಾಡಬಾರದು, ಇಲ್ಲಂತು ತಮ್ಮದೆಲ್ಲವನ್ನೂ ಮನಸ್ಸಾ, ವಾಣಿಯಿಂದ,ಶಕ್ತಿಶಾಲಿ ವೃತ್ತಿಯಿಂದ ಸಫಲ ಮಾಡುತ್ತೀರೆಂದರೆ ಸಫಲತಾ ಮೂರ್ತಿಯಾಗಿ ಬಿಡುವಿರಿ.

ಸ್ಲೋಗನ್:
ಬಾಬಾ ಮತ್ತು ನಾನು ಈ ಛತ್ರಛಾಯೆಯು ಜೊತೆಯಿದ್ದಾಗ ಯಾವುದೇ ವಿಘ್ನಗಳು ನಿಲ್ಲಲು ಸಾಧ್ಯವಿಲ್ಲ.

ಸರ್ವ ಬ್ರಾಹ್ಮಣ ಮಕ್ಕಳಿಗಾಗಿ ವಿಶೇಷ ಗಮನ ವಹಿಸಬೇಕಾದ ಪರಮಾತ್ಮನ ಮಹಾವಾಕ್ಯ:

ಒಂದು ಬಲ ಒಂದು ಭರವಸೆ ಅರ್ಥಾತ್ ಸದಾ ನಿಶ್ಚಯವಿರಲಿ - ಸಾಕಾರ ಮುರುಳಿಯೇನಿದೆ, ಅದೇ ಮುರುಳಿಯಾಗಿದೆ. ಮಧುಬನದಿಂದ ಶ್ರೀಮತವೇನು ಸಿಗುತ್ತದೆಯೋ ಅದೇ ಶ್ರೀಮತವಾಗಿದೆ, ತಂದೆಯು ಮಧುಬನದ ವಿನಃ ಮತ್ತೆಲ್ಲಿಯೂ ಮಿಲನವಾಗಲು ಸಾಧ್ಯವಿಲ್ಲ. ಸದಾ ಒಬ್ಬ ತಂದೆಯ ವಿದ್ಯೆಯಲ್ಲಿ ನಿಶ್ಚಯವಿರಲಿ. ವಿದ್ಯಾಭ್ಯಾಸಕ್ಕಾಗಿ ಮಧುಬನದಿಂದ ಯಾವ ವಿದ್ಯೆಯನ್ನು ಓದಿಸಲಾಗುತ್ತದೆಯೋ ಅದೇ ವಿದ್ಯೆಯಾಗಿದೆ, ಮತ್ತೊಂದಿಲ್ಲ. ಒಂದುವೇಳೆ ಎಲ್ಲಿಯೇ ಭೋಗ ಇತ್ಯಾದಿ.... ಸಮಯದಲ್ಲಿ ಸಂದೇಶಿಯ ಮೂಲಕ ತಂದೆಯವರ ಪಾತ್ರವು ನಡೆಯುತ್ತದೆಯೆಂದರೆ, ಅದು ಸಂಪೂರ್ಣವಾಗಿ ತಪ್ಪು ಕಲ್ಪನೆಯಾಗಿದೆ, ಇದೂ ಸಹ ಮಾಯೆಯಾಗಿದೆ. ಇದಕ್ಕೆ ಒಂದು ಬಲ ಒಂದು ಭರವಸೆಯೆಂದು ಹೇಳುವುದಿಲ್ಲ. ಮಧುಬನದಿಂದ ಯಾವ ಮುರುಳಿ ಬರುತ್ತದೆಯೋ ಅದರ ಮೇಲೆ ಗಮನ ಕೊಡಿ, ಇಲ್ಲದಿದ್ದರೆ ಬೇರೆ ಮಾರ್ಗದಲ್ಲಿ ಹೋಗಿ ಬಿಡುತ್ತೀರಿ. ಮಧುಬನದಲ್ಲಿಯೇ ಬಾಬಾರವರ ಮಧುರ ಮಹಾವಾಕ್ಯ (ಮುರುಳಿ) ನುಡಿಸಲಾಗುತ್ತದೆ, ಮಧುಬನದಲ್ಲಿಯೇ ಬಾಬಾರವರು ಬರುತ್ತಾರೆ. ಆದ್ದರಿಂದ ಪ್ರತಿಯೊಬ್ಬ ಮಕ್ಕಳೂ ಇದರಲ್ಲಿ ಗಮನವನ್ನಿಡಿ, ಇಲ್ಲದಿದ್ದರೆ ಮಾಯೆಯು ಮೋಸ ಮಾಡಿ ಬಿಡುತ್ತದೆ.