02.08.20    Avyakt Bapdada     Kannada Murli     01.03.86     Om Shanti     Madhuban


ಹೋಲಿ ಹಂಸ ಬುದ್ಧಿ, ವೃತ್ತಿ, ದೃಷ್ಟಿ ಮತ್ತು ಮುಖ


ಇಂದು ಬಾಪ್ದಾದಾರವರು ಎಲ್ಲಾ ಹೋಲಿ ಹಂಸಗಳ ಸಭೆಯನ್ನು ನೋಡುತ್ತಿದ್ದಾರೆ. ಇದು ಸಾಧಾರಣವಾದ ಸಭೆಯಲ್ಲ ಆದರೆ ಆತ್ಮಿಕ ಹೋಲಿ ಹಂಸಗಳ ಸಭೆಯಾಗಿದೆ. ಬಾಪ್ದಾದಾರವರು ಪ್ರತಿಯೊಂದು ಹೋಲಿ ಹಂಸಗಳು ಎಲ್ಲಿಯವರೆಗೆ ಹೋಲಿ ಹಂಸಗಳಾಗಿದ್ದಾರೆ! ಎಂದು ನೋಡುತ್ತಿದ್ದಾರೆ. ಹಂಸದ ವಿಶೇಷತೆಯನ್ನು ಬಹಳ ಚೆನ್ನಾಗಿ ತಿಳಿದುಕೊಂಡಿದ್ದೀರಾ? ಹಂಸ ಬುದ್ಧಿಯೆಂದರೆ ಮೊಟ್ಟ ಮೊದಲು - ಪ್ರತಿಯೊಂದು ಆತ್ಮನ ಪ್ರತಿ ಶ್ರೇಷ್ಠ ಮತ್ತು ಶುಭ ಚಿಂತನೆ ಮಾಡುವವರು ಎಂದು. ಹೋಲಿ ಹಂಸವೆಂದರೆ ಕಲ್ಲು ಮತ್ತು ರತ್ನಗಳ ಅಂತರವನ್ನು ಬಹಳ ಚೆನ್ನಾಗಿ ಪರಿಶೀಲಿಸುವವರು ಮತ್ತೆ ನಂತರದಲ್ಲಿ ಧಾರಣೆ ಮಾಡುವವರು ಎಂದಾಗಿದೆ. ಅಂದಾಗ ಮೊದಲು ಪ್ರತಿಯೊಂದು ಆತ್ಮನ ಭಾವವನ್ನು ಪರಿಶೀಲಿಸುವವರು ಮತ್ತೆ ನಂತರದಲ್ಲಿ ಧಾರಣೆ ಮಾಡುವವರು ಎಂದಾಯಿತು. ಯಾವುದೇ ಆತ್ಮನ ಬಗ್ಗೆ ಎಂದಿಗೂ ಅಶುಭ ಅಥವಾ ಸಾಧಾರಣ ಭಾವವನ್ನು ಬುದ್ದಿಯಲ್ಲಿ ಧಾರಣೆ ಮಾಡುವವರಾಗಿರಬಾರದು. ಸದಾ ಶುಭ ಭಾವ ಮತ್ತು ಶುಭ ಭಾವನೆಯನ್ನು ಧಾರಣೆ ಮಾಡಿಕೊಂಡಿರಬೇಕು. ಭಾವವನ್ನು ತಿಳಿಯುವುದರಿಂದ ಯಾರದೇ ಸಾಧಾರಣ ಸ್ವಭಾವ ಅಥವಾ ವ್ಯರ್ಥ ಸ್ವಭಾವವೆಂದಿಗೂ ಸಹ ಪ್ರಭಾವ ಬೀರುವುದಿಲ್ಲ. ಶುಭ ಭಾವ, ಶುಭ ಭಾವನೆಯನ್ನು ತಾವು ಭಾವ-ಸ್ವಭಾವವೆಂದು ಹೇಳುತ್ತೀರಿ, ಅದರಲ್ಲಿ ವ್ಯರ್ಥವೇನಿದೆಯೋ ಅದನ್ನು ಬದಲಾಯಿಸಬೇಕಾಗಿದೆ. ಇಂತಹ ಹಂಸ ಬುದ್ಧಿಯವರು ಎಲ್ಲಿಯವರೆಗೆ ಆಗಿದ್ದಾರೆ? ಎಂದು ಬಾಪ್ದಾದಾರವರು ನೋಡುತ್ತಿದ್ದಾರೆ. ಅದೇರೀತಿಯಲ್ಲಿ ಹಂಸ ವೃತ್ತಿ ಅಂದರೆ ಸದಾ ಪ್ರತಿಯೊಂದು ಆತ್ಮನ ಬಗ್ಗೆ ಶ್ರೇಷ್ಠ, ಕಲ್ಯಾಣದ ವೃತ್ತಿ. ಪ್ರತಿಯೊಂದು ಆತ್ಮನ ಅಕಲ್ಯಾಣದ ಮಾತುಗಳನ್ನು ಕೇಳಿಸಿಕೊಳ್ಳುತ್ತಾ, ನೋಡುತ್ತಾ ಇದ್ದರೂ, ಅಕಲ್ಯಾಣವನ್ನು ಕಲ್ಯಾಣದ ವೃತ್ತಿಯಿಂದ ಬದಲಾಯಿಸುವುದಕ್ಕೆ ಹೋಲಿ ಹಂಸ ವೃತ್ತಿಯೆಂದು ಹೇಳಲಾಗುತ್ತದೆ. ಸ್ವಯಂನ ಕಲ್ಯಾಣದ ವೃತ್ತಿಯಿಂದ ಅನ್ಯರನ್ನೂ ಪರಿವರ್ತಿಸಬಹುದು. ಅವರ ಅಕಲ್ಯಾಣದ ವೃತ್ತಿಯನ್ನು ತಮ್ಮ ಕಲ್ಯಾಣದ ವೃತ್ತಿಯಿಂದ ಪರಿವರ್ತಿಸುವುದೇ ಹೋಲಿ ಹಂಸಗಳ ಕರ್ತವ್ಯವಾಗಿದೆ. ಇದೇ ರೀತಿ ಸದಾ ಪ್ರತಿಯೊಂದು ಆತ್ಮನ ಬಗ್ಗೆ ಶ್ರೇಷ್ಠ, ಶುದ್ಧವಾದ ಸ್ನೇಹದ ದೃಷ್ಟಿಯಿರಲಿ. ಅವರು ಹೇಗಾದರೂ ಇರಲಿ ಆದರೆ ಎಲ್ಲರ ಬಗ್ಗೆ ತಮ್ಮ ಕಡೆಯಿಂದ ಆತ್ಮಿಕ ಸ್ನೇಹದ ದೃಷ್ಟಿಯನ್ನು ಧಾರಣೆ ಮಾಡಿಕೊಳ್ಳಬೇಕು. ಇದಕ್ಕೇ ಹೋಲಿ ಹಂಸಗಳ ದೃಷ್ಟಿಯೆಂದು ಹೇಳಲಾಗುತ್ತದೆ. ಇದೇ ರೀತಿ ಮಾತಿನ ಬಗ್ಗೆ ಮುಂಚೆಯೇ ತಿಳಿಸಿದ್ದೇವೆ. ಕೆಟ್ಟ ಮಾತು ಬೇರೆ ಮಾತಾಗಿದೆ. ಅದಂತು ಬ್ರಾಹ್ಮಣರಲ್ಲಿ ಬದಲಾಗಿ ಬಿಟ್ಟಿದೆ ಆದರೆ ವ್ಯರ್ಥ ಮಾತನ್ನೂ ಸಹ ಹೋಲಿ ಹಂಸಗಳ ಮಾತೆಂದು ಹೇಳುವುದಿಲ್ಲ. ಮುಖವೂ(ಬಾಯಿಯ ಮಾತು) ಹೋಲಿ ಹಂಸದ ಮಾತಾಗಿರಲಿ! ಯಾರ ಮುಖದಿಂದ ವ್ಯರ್ಥವೆಂದಿಗೂ ಬರುವುದಿಲ್ಲವೋ ಅಂತಹವರಿಗೆ ಹೋಲಿ ಹಂಸದ ಮುಖ ಸ್ಥಿತಿಯೆಂದು ಹೇಳಲಾಗುತ್ತದೆ. ಅಂದಮೇಲೆ ಹೋಲಿ ಹಂಸ ಬುದ್ಧಿ, ವೃತ್ತಿ, ದೃಷ್ಟಿ ಮತ್ತು ಮುಖ - ಇವೆಲ್ಲವೂ ಯಾವಾಗ ಪವಿತ್ರವಾಗುತ್ತದೆಯೋ ಅಂದರೆ ಶ್ರೇಷ್ಠವಾಗುತ್ತದೆಯೋ ಆಗ ಸ್ವತಹವಾಗಿಯೇ ಹೋಲಿ ಹಂಸ ಸ್ಥಿತಿಯ ಪ್ರತ್ಯಕ್ಷ ಪ್ರಭಾವವು ಕಂಡು ಬರುತ್ತದೆ. ಹಾಗಾದರೆ ಎಲ್ಲರೂ ತಮ್ಮನ್ನು ತಾವು ನೋಡಿಕೊಳ್ಳಿರಿ - ನಾನು ಎಲ್ಲಿಯವರೆಗೆ ಸದಾ ಹೋಲಿ ಹಂಸನಾಗಿ ನಡೆಯುತ್ತಿದ್ದೇನೆ? ಏಕೆಂದರೆ ಸ್ವ-ಉನ್ನತಿಯ ಸಮಯವೀಗ ಹೆಚ್ಚಿನದಾಗಿ ಉಳಿದುಕೊಂಡಿಲ್ಲ, ಆದ್ದರಿಂದ ತಮ್ಮನ್ನು ತಾವು ಚೆಕ್ ಮಾಡಿರಿ ಮತ್ತು ಚೇಂಜ್ ಮಾಡಿರಿ.

ಈ ಸಮಯದ ಪರಿವರ್ತನೆಯು ಬಹಳ ಕಾಲದಿಂದ ಪರಿವರ್ತನೆಯಲ್ಲಿರುವವರನ್ನು ಸ್ವರ್ಣೀಮ ಪ್ರಪಂಚದ ಅಧಿಕಾರಿಯನ್ನಾಗಿ ಮಾಡುತ್ತದೆ. ಬಾಪ್ದಾದಾರವರು ಈ ಸೂಚನೆಯನ್ನು ಮುಂಚೆಯೂ ಕೊಟ್ಟಿದ್ದಾರೆ. ಎಲ್ಲರಲ್ಲಿ ಸ್ವಯಂನ ಬಗ್ಗೆ ಬಹಳ-ಬಹಳ ಗಮನ(ಡಬಲ್ ಅಂಡರ್ಲೈನ್)ವಿದೆಯೇ? ಸ್ವಲ್ಪ ಸಮಯದ ಗಮನವಿದೆ, ಹಾಗೆ ಬಹಳ ಕಾಲ ಗಮನವಿಟ್ಟಿರುವ ಫಲ ಸ್ವರೂಪವಾಗಿ ಶ್ರೇಷ್ಠ ಪ್ರಾಲಬ್ಧವಿದೆ. ಆದ್ದರಿಂದ ಈ ಸ್ವಲ್ಪ ಸಮಯ ಬಹಳ ಶ್ರೇಷ್ಠವಾದ ಸೌಭಾಗ್ಯವಿದೆ. ಇದರಲ್ಲಿ ಪರಿಶ್ರಮವೂ ಇಲ್ಲ, ಕೇವಲ ತಂದೆಯು ಹೇಳಿದರು ಮತ್ತು ಧಾರಣೆ ಮಾಡಬೇಕು ಅಷ್ಟೇ. ಧಾರಣೆ ಮಾಡುವುದರಿಂದ ಸ್ವತಹವಾಗಿಯೇ ಪ್ರಾಕ್ಟಿಕಲ್ ಆಗುತ್ತದೆ. ಧಾರಣೆ ಮಾಡುವುದೇ ಹೋಲಿ ಹಂಸದ ಕಾರ್ಯವಾಗಿದೆ. ಅಂದಮೇಲೆ ಇದು ಇಂತಹ ಹೋಲಿಗಳ ಸಭೆಯಾಗಿದೆಯಲ್ಲವೆ! ಜ್ಞಾನಪೂರ್ಣರಾಗಿ ಬಿಟ್ಟಿರಿ, ವ್ಯರ್ಥ ಅಥವಾ ಸಾಧಾರಣವನ್ನು ಬಹಳ ಚೆನ್ನಾಗಿ ತಿಳಿದು ಬಿಟ್ಟಿರಿ. ಅಂದಮೇಲೆ ತಿಳಿದುಕೊಂಡ ನಂತರ ಸ್ವತಹವಾಗಿಯೇ ಕರ್ಮದಲ್ಲಿ ಬರುತ್ತದೆ. ಅದೇರೀತಿ ಸಾಧಾರಣ ಭಾಷೆಯಲ್ಲಿ ಇದನ್ನೇ ಹೇಳುತ್ತೀರಲ್ಲವೆ - ಈಗ ನನಗೆ ಅರ್ಥವಾಯಿತು. ಅರ್ಥವಾದ ನಂತರ ಅದನ್ನು ಮಾಡದಿರಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಮೊದಲು ಇದನ್ನು ಪರಿಶೀಲಿಸಿರಿ - ನನ್ನಲ್ಲಿ ಸಾಧಾರಣ ಅಥವಾ ವ್ಯರ್ಥವೇನಾದರೂ ಇದೆಯೇ? ಕೆಲವೊಮ್ಮೆ ವ್ಯರ್ಥವಿದೆ ಅಥವಾ ಸಾಧಾರಣವಿದೆಯೆಂದರೂ, ಅದನ್ನೂ ಶ್ರೇಷ್ಠವಾಗಿದೆಯೆಂದು ತಿಳಿದುಕೊಳ್ಳುವುದಿಲ್ಲವೇ? ಆದ್ದರಿಂದ ಮೊಟ್ಟ ಮೊದಲು ಮುಖ್ಯವಾದುದು ಹೋಲಿ ಹಂಸದ ಬುದ್ಧಿಯಿರಬೇಕಾಗಿರುವುದು. ಅದರಲ್ಲಿ ಸ್ವತಹವಾಗಿಯೇ ಪರಿಶೀಲಿಸುವ ಶಕ್ತಿ ಖಂಡಿತವಾಗಿಯೂ ಬರುತ್ತದೆ. ಏಕೆಂದರೆ ವ್ಯರ್ಥ ಸಂಕಲ್ಪ ಮತ್ತು ವ್ಯರ್ಥ ಸಮಯ ಆಗ ಆಗುತ್ತದೆ ಯಾವಾಗ ಅದು ಸರಿಯಿದೆಯೇ ಅಥವಾ ತಪ್ಪಾಗಿದೆಯೇ ಎನ್ನುವುದರ ಪರಿಶೀಲನೆ ಆಗಿರುವುದಿಲ್ಲ. ತಮ್ಮ ವ್ಯರ್ಥವನ್ನು, ರಾಂಗ್ನ್ನು ರೈಟ್ ಎಂದು ತಿಳಿದುಕೊಳ್ಳುತ್ತೀರಿ, ಆಗಲೇ ಸಮಯವು ವ್ಯರ್ಥದಲ್ಲಿ ಹೆಚ್ಚಾಗಿ ಹೋಗುತ್ತದೆ. ಇರುವುದಂತು ವ್ಯರ್ಥದಲ್ಲಿ ಆದರೆ ನಾನು ಸಮರ್ಥ, ಸರಿಯಾದ ಚಿಂತನೆಯಲ್ಲಿದ್ದೇನೆ, ನಾನೇನು ಹೇಳುತ್ತೇನೆಯೋ ಅದು ಸರಿಯಾಗಿದೆ ಎಂದು ತಿಳಿದುಕೊಳ್ಳುರಲ್ಲಿಯೇ ಪರಿಶೀಲನಾ ಶಕ್ತಿ ಇಲ್ಲದಿರುವ ಕಾರಣದಿಂದ ಮನಸ್ಸಿನ ಶಕ್ತಿ, ಸಮಯದ ಶಕ್ತಿ, ವಾಣಿಯ ಶಕ್ತಿ, ಎಲ್ಲವೂ ಹೊರಟು ಹೋಗುತ್ತದೆ. ಮತ್ತೆ ಅನ್ಯರಿಂದ ಪರಿಶ್ರಮ ತೆಗೆದುಕೊಳ್ಳುವ ಹೊರೆಯೂ ಹೆಚ್ಚಾಗುತ್ತದೆ. ಅದರ ಕಾರಣವೇನು? ಏಕೆಂದರೆ ಹೋಲಿ ಹಂಸದ ಬುದ್ಧಿಯವರಾಗಿಲ್ಲ. ಅದಕ್ಕಾಗಿಯೇ ಬಾಪ್ದಾದಾರವರು ಎಲ್ಲಾ ಹೋಲಿ ಹಂಸಗಳಿಗೆ ಮತ್ತೊಮ್ಮೆ ಇದೇ ಸೂಚನೆಯನ್ನು ಕೊಡುತ್ತಿದ್ದಾರೆ - ಉಲ್ಟಾ ಇರುವುದನ್ನು ಮತ್ತೆ ಉಲ್ಟಾ ಮಾಡಿ(ಸರಿ ಮಾಡಿ). ಇವರಿರುವುದೇ ಉಲ್ಟಾ ಎಂದು ಯೋಚಿಸಬಾರದು. ಆದರೆ ಉಲ್ಟಾ ಇರುವವರನ್ನು ಸುಲ್ಟಾ ಹೇಗೆ ಮಾಡಲಿ ಎನ್ನುವುದನ್ನು ಯೋಚಿಸಬೇಕು. ಇದಕ್ಕೇ ಕಲ್ಯಾಣದ ಭಾವನೆಯೆಂದು ಹೇಳಲಾಗುತ್ತದೆ. ಶ್ರೇಷ್ಠ ಭಾವ, ಶುಭ ಭಾವನೆಯಿಂದ ತಮ್ಮ ವ್ಯರ್ಥ ಭಾವ - ಸ್ವಭಾವ ಮತ್ತು ಅನ್ಯರ ಭಾವ - ಸ್ವಭಾವವನ್ನು ಪರಿವರ್ತನೆ ಮಾಡುವ ವಿಜಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರಾ! ತಿಳಿಯಿತೆ. ಮೊದಲು ಸ್ವಯಂನ ಮೇಲೆ ವಿಜಯಿ, ನಂತರ ಸರ್ವರ ಮೇಲೆ ವಿಜಯಿ, ನಂತರ ಪ್ರಕೃತಿಯ ಮೇಲೂ ವಿಜಯಿಯಾಗುವಿರಿ. ಈ ಮೂರೂ ವಿಜಯವು ತಮ್ಮನ್ನು ವಿಜಯ ಮಾಲೆಯ ಮಣಿಯನ್ನಾಗಿ ಮಾಡುತ್ತದೆ. ಪ್ರಕೃತಿಯಲ್ಲಿ ವಾಯುಮಂಡಲ, ವೈಬ್ರೇಷನ್ ಅಥವಾ ಸ್ಥೂಲ ಪ್ರಕೃತಿಯ ಸಮಸ್ಯೆಗಳು - ಎಲ್ಲವೂ ಬಂದು ಬಿಡುತ್ತದೆ. ಅಂದಾಗ ಈ ಮೂರರ ಮೇಲೆ ವಿಜಯವಾಗಬೇಕು, ಇದರ ಆಧಾರದಿಂದಲೇ ವಿಜಯ ಮಾಲೆಯಲ್ಲಿ ತಮ್ಮ ನಂಬರ್ ಯಾವುದೆಂದು ನೋಡಿಕೊಳ್ಳಬಹುದು. ಆದ್ದರಿಂದ ಹೆಸರಿನಲ್ಲಿಯೇ ವೈ ಜಯಂತಿ ಮಾಲೆಯೆಂದು ಇಟ್ಟಿದ್ದಾರೆ. ಹಾಗಾದರೆ ಎಲ್ಲರೂ ವಿಜಯಿಯಾಗಿದ್ದೀರಾ? ಒಳ್ಳೆಯದು.

ಇಂದು ಆಸ್ಟ್ರೇಲಿಯಾದವರ ಟರ್ನ್ ಆಗಿದೆ. ಆಸ್ಟ್ರೇಲಿಯಾದವರಿಗೆ ಮಧುಬನದವರಿಗಿಂತಲೂ ಗೋಲ್ಡನ್ ಚಾನ್ಸ್ಲರ್ ಆಗುವ ಚಾನ್ಸ್ ಸಿಗುತ್ತದೆ ಏಕೆಂದರೆ ಎಲ್ಲರನ್ನೂ ಮುಂದಿಡುವ ಚಾನ್ಸ್ ಕೊಡುತ್ತೀರಿ, ಇದು ವಿಶೇಷತೆಯಾಗಿದೆ. ಅನ್ಯರನ್ನು ಮುಂದಿಡುವ ಚಾನ್ಸ್ ಕೊಡುವುದು ಅರ್ಥಾತ್ ಚಾನ್ಸ್ಲರ್ ಆಗುವುದಾಗಿದೆ. ಚಾನ್ಸ್ ತೆಗೆದುಕೊಳ್ಳುವವರಿಗೆ ಮತ್ತು ಚಾನ್ಸ್ ಕೊಡುವವವರಿಗೆ - ಇಬ್ಬರನ್ನೂ ಚಾನ್ಸ್ಲರ್ ಎಂದು ಹೇಳುತ್ತೇವೆ. ಬಾಪ್ದಾದಾರವರು ಸದಾ ಪ್ರತಿಯೊಂದು ಮಕ್ಕಳ ವಿಶೇಷತೆಯನ್ನೇ ನೋಡುತ್ತಾರೆ ಮತ್ತು ವರ್ಣನೆ ಮಾಡುತ್ತಾರೆ. ಆಸ್ಟ್ರೇಲಿಯಾದಲ್ಲಿ ವಿಶೇಷವಾಗಿ ಪಾಂಡವರಿಗೆ ಸೇವೆಯ ಅವಕಾಶವು ಸಿಕ್ಕಿದೆ. ಸೇವಾಕೇಂದ್ರಗಳನ್ನೂ ಹೆಚ್ಚಾಗಿ ಪಾಂಡವರೇ ಸಂಭಾಲನೆ ಮಾಡುತ್ತಾರೆ. ಶಕ್ತಿಯರು ಪಾಂಡವರಿಗೆ ಚಾನ್ಸ್ ಕೊಟ್ಟಿದ್ದಾರೆ. ಮುಂದಿಡುವವವರು ಸದಾ ಮುಂದೆಯೇ ಇರುತ್ತಾರೆ - ಇದೂ ಸಹ ಶಕ್ತಿಯರ ವಿಶಾಲತೆಯಾಗಿದೆ. ಆದರೆ ಪಾಂಡವರು ತನ್ನನ್ನು ಸದಾ ನಿಮಿತ್ತನೆಂದು ತಿಳಿದು, ಸೇವೆಯಲ್ಲಿ ಮುಂದುವರೆಯುತ್ತಿದ್ದೀರಲ್ಲವೆ. ಸೇವೆಯಲ್ಲಿ ನಿಮಿತ್ತ ಭಾವವೇ ಸೇವೆಯ ಸಫಲತೆಗೆ ಆಧಾರವಾಗಿದೆ. ಬಾಪ್ದಾದಾರವರು ಮೂರು ಶಬ್ಧಗಳನ್ನು ತಿಳಿಸುತ್ತಾರಲ್ಲವೆ, ಅದನ್ನು ಸಾಕಾರನ (ಬ್ರಹ್ಮಾ ಬಾಬಾ) ಮೂಲಕವೂ ಅಂತ್ಯದಲ್ಲಿ ಉಚ್ಛರಿಸಿದರು - ನಿರಾಕಾರಿ, ನಿರ್ವಿಕಾರಿ ಮತ್ತು ನಿರಹಂಕಾರಿ. ಈ ಮೂರು ವಿಶೇಷತೆಗಳು ನಿಮಿತ್ತ ಭಾವದಿಂದ ಸ್ವತಹವಾಗಿಯೇ ಬರುತ್ತದೆ. ನಿಮಿತ್ತ ಭಾವ ಇಲ್ಲದಿದ್ದರೆ, ಈ ಮೂರು ವಿಶೇಷತೆಗಳ ಅನುಭವವಾಗುವುದಿಲ್ಲ. ನಿಮಿತ್ತ ಭಾವವು ಅನೇಕ ಪ್ರಕಾರದ ನಾನು, ನನ್ನದು ಎನ್ನುವುದನ್ನು ಸಹಜವಾಗಿಯೇ ಸಮಾಪ್ತಿ ಮಾಡಿ ಬಿಡುತ್ತದೆ. ನಾನೂ ಇಲ್ಲ, ನನ್ನದೂ ಇಲ್ಲ. ಸ್ಥಿತಿಯಲ್ಲಿ ಏನೆಲ್ಲಾ ಏರುಪೇರುಗಳಾಗುತ್ತದೆಯೋ ಅದು ಇವೆರಡೇ ಕನಿಷ್ಠಗಳ ಕಾರಣದಿಂದ ಆಗುತ್ತದೆ. ಸೇವೆಯಲ್ಲಿಯೂ ಪರಿಶ್ರಮ ಪಡಬೇಕಾಗುತ್ತದೆ ಮತ್ತು ತಮ್ಮ ಹಾರುವ ಕಲೆಯ ಸ್ಥಿತಿಯಲ್ಲಿಯೂ ಪರಿಶ್ರಮ ಪಡಬೇಕಾಗುತ್ತದೆ. ನಿಮಿತ್ತವಾಗಿರುವುದು ಅಂದರೆ ಸದಾ ನಿಮಿತ್ತ ಮಾಡಿರುವವರ ನೆನಪಿನಲ್ಲಿರುವುದು. ಅಂದಾಗ ಇದೇ ವಿಶೇಷತೆಯಿಂದ ಸದಾ ಸೇವೆಯ ವೃದ್ಧಿಯನ್ನು ಮಾಡುತ್ತಾ ವೃದ್ಧಿಯಾಗುತ್ತಿದ್ದೀರಲ್ಲವೆ. ಸೇವೆಯ ವಿಸ್ತಾರವಾಗುವುದೂ ಸಹ ಸೇವೆಯ ಸಫಲತೆಯ ಚಿಹ್ನೆಯಾಗಿದೆ. ಈಗ ಬಹಳಚೆನ್ನಾಗಿ ಅಚಲ-ಅಡೋಲ ಸ್ಥಿತಿಯ ಅನುಭವಿಯಾಗಿದ್ದೀರಿ. ಚಾರಿಟಿ ಬಿಗಿನ್ಸ್ ಅಟ್ ಹೋಮ್ನ ಕಾರ್ಯವು ಹೆಚ್ಚಾಗಿ ಮಾಡಿದ್ದೀರಿ. ಹಮ್ಜೀನ್ಸ್(ತಮ್ಮ ಸಮಾನರನ್ನು)ನ್ನು ಜಾಗೃತ ಮಾಡಿದ್ದೀರಿ. ಇದರಲ್ಲಿ ಕುಮಾರ-ಕುಮಾರಿಯದು ಬಹಳ ಕಲ್ಯಾಣವಾಗುತ್ತಿದೆ. ಈ ಜೀವನದಲ್ಲಿ ತಮ್ಮ ಜೀವನದ ಬಗ್ಗೆ ಶ್ರೇಷ್ಠವಾದ ನಿರ್ಣಯವನ್ನು ತೆಗೆದುಕೊಳ್ಳಬೇಕಾಗುತ್ತದೆ. ತಮ್ಮ ಜೀವನವನ್ನಂತು ರೂಪಿಸಿಕೊಂಡಿದ್ದೀರೆಂದರೆ, ಸದಾಕಾಲಕ್ಕಾಗಿ ಶ್ರೇಷ್ಠರಾಗಿ ಬಿಟ್ಟಿರಿ. ಉಲ್ಟಾ ಏಣಿಯನ್ನು ಹತ್ತುವುದರಿಂದ ಪಾರಾಗಿ ಬಿಟ್ಟಿರಿ. ಒಬ್ಬರಿನ್ನೊಬ್ಬರಿಂದ ಅನೇಕ ದೀಪಗಳನ್ನೇ ಬೆಳಗಿಸಿ ದೀಪ ಮಾಲೆಯನ್ನು ಮಾಡುತ್ತಿದ್ದೀರಿ. ಉಮ್ಮಂಗ-ಉತ್ಸಾಹವು ಚೆನ್ನಾಗಿದೆ. ಸೇವೆಯಲ್ಲಿ ವ್ಯಸ್ತರಾಗಿರುವುದರಿಂದ ಬಹಳ ಒಳ್ಳೆಯ ಉನ್ನತಿಯನ್ನು ಮಾಡಿಕೊಳ್ಳುತ್ತಿದ್ದೀರಿ.

ಒಂದಂತು ನಿಮಿತ್ತ ಭಾವದ ಮಾತನ್ನು ತಿಳಿಸಿದೆವು, ಇನ್ನೊಂದು - ಯಾರು ಸೇವೆಯಲ್ಲಿ ನಿಮಿತ್ತರಾಗುತ್ತಾರೆಯೋ, ಅವರಿಗಾಗಿ ಸ್ವ-ಉನ್ನತಿ ಅಥವಾ ಸೇವೆಯ ಉನ್ನತಿಯ ಬಗ್ಗೆ ವಿಶೇಷವಾದ ಒಂದು ಸ್ಲೋಗನ್ ಸುರಕ್ಷತೆಯ ಸಾಧನವಾಗಿದೆ. ನಾವು ನಿಮಿತ್ತರಾಗಿರುವವರು ಏನನ್ನು ಮಾಡುತ್ತೇವೆ, ನಮ್ಮನ್ನು ನೋಡಿ ಎಲ್ಲರೂ ಮಾಡುವರು. ಏಕೆಂದರೆ ಸೇವೆಗೆ ನಿಮಿತ್ತರಾಗುವುದು ಅಂದರೆ ಸ್ಟೇಜಿನ ಮೇಲೆ ಬರುವುದು. ಹೇಗೆ ಯಾವುದೇ ಪಾತ್ರಧಾರಿಗಳು ಸ್ಟೇಜಿನ ಮೇಲೆ ಬರುತ್ತಾರೆಂದರೆ ಎಷ್ಟೊಂದು ಗಮನವನ್ನಿಡುತ್ತಾರೆ. ಅದೇ ರೀತಿ ಸೇವೆ ನಿಮಿತ್ತರಾಗುವುದು ಅರ್ಥಾತ್ ಸ್ಟೇಜಿನ ಮೇಲೆ ಪಾತ್ರವನ್ನಭಿನಯಿಸುವುದಾಗಿದೆ. ಎಲ್ಲರ ದೃಷ್ಟಿಯು ಸ್ಟೇಜಿನ ಕಡೆಗೆ ಇರುತ್ತದೆ ಮತ್ತು ಯಾರೆಷ್ಟು ಹೀರೊ ಪಾತ್ರಧಾರಿಯಾಗಿರುತ್ತಾರೆಯೋ ಅವರ ಮೇಲೆ ಹೆಚ್ಚು ಕಣ್ಣಿರುತ್ತದೆ. ಅದಕ್ಕಾಗಿಯೇ ಈ ಸ್ಲೋಗನ್ ಸುರಕ್ಷತೆಯ ಸಾಧನವಾಗಿದೆ, ಇದರಿಂದ ಸ್ವತಹವಾಗಿಯೇ ಹಾರುವ ಕಲೆಯನ್ನು ಅನುಭವ ಮಾಡುವಿರಿ. ಭಲೆ ಸೇವಾಕೇಂದ್ರದಲ್ಲಿಯೇ ಇರಬಹುದು ಅಥವಾ ಎಲ್ಲಿಯೇ ಇದ್ದುಕೊಂಡು ಸೇವೆ ಮಾಡುತ್ತಿರಬಹುದು, ಎಲ್ಲರೂ ಸೇವಾಧಾರಿಯಾಗಿದ್ದಾರೆ. ಕೆಲವರು ತನ್ನ ನಿಮಿತ್ತ ಸ್ಥಾನಗಳಲ್ಲಿದ್ದುಕೊಂಡು ಸೇವೆಯ ಅವಕಾಶವನ್ನು ತೆಗೆದುಕೊಳ್ಳುತ್ತಾರೆ, ಅವರೂ ಸಹ ಸೇವೆಯ ಸ್ಟೇಜಿನ ಮೇಲಿದ್ದಾರೆ. ಸೇವೆಯಲ್ಲದೆ ತನ್ನ ಸಮಯವನ್ನು ವ್ಯರ್ಥವಾಗಿ ಕಳೆಯಬಾರದು. ಸೇವೆಯ ಖಾತೆಯೂ ಸಹ ಬಹಳಷ್ಟು ಜಮಾ ಆಗುತ್ತದೆ. ಸತ್ಯ ಹೃದಯದಿಂದ ಸೇವೆಯನ್ನು ಮಾಡುವವರು ತನ್ನ ಖಾತೆಯನ್ನು ಬಹಳ ಚೆನ್ನಾಗಿಯೇ ಜಮಾ ಮಾಡುತ್ತಿದ್ದಾರೆ. ಬಾಪ್ದಾದಾರವರ ಬಳಿ ಪ್ರತಿಯೊಂದು ಮಕ್ಕಳ ಸೇವೆಯ ಖಾತೆಯು ಆದಿಯಿಂದ ಅಂತ್ಯದವರೆಗೂ ಇದೆ ಮತ್ತು ಸ್ವತಹವಾಗಿಯೇ ಅದರಲ್ಲಿ ಜಮಾ ಆಗುತ್ತಿರುತ್ತದೆ. ಒಬ್ಬೊಬ್ಬರ ಅಕೌಂಟನ್ನಿಡಬೇಕಾಗಿರುವುದಿಲ್ಲ, ಅಕೌಂಟನ್ನಿಡುವವರ ಬಳಿ ಬಹಳ ಫೈಲುಗಳಿರುತ್ತವೆ, ತಂದೆಯವರ ಬಳಿ ಸ್ಥೂಲ ಫೈಲುಗಳೇನಿರುವುದಿಲ್ಲ. ಒಂದು ಸೆಕೆಂಡಿನಲ್ಲಿ ಪ್ರತಿಯೊಬ್ಬರದೂ ಆದಿಯಿಂದ ಇಲ್ಲಿಯವರೆಗಿನ ರಿಜಿಸ್ಟರ್ ಸೆಕೆಂಡಿನಲ್ಲಿ ಇಮರ್ಜ್ ಆಗುತ್ತದೆ. ಸ್ವತಹವಾಗಿಯೇ ಜಮಾ ಆಗುತ್ತಿರುತ್ತದೆ. ನಮ್ಮನ್ನಂತು ಯಾರೂ ನೋಡುವುದಿಲ್ಲ, ತಿಳಿದುಕೊಳ್ಳುವುದಿಲ್ಲ ಎಂದು ಎಂದಿಗೂ ತಿಳಿಯಬಾರದು. ಬಾಪ್ದಾದಾರವರ ಬಳಿ ಯಾರು ಹೇಗಿದ್ದಾರೆ, ಎಷ್ಟು ಮಾಡುತ್ತಾರೆ, ಯಾವ ಸ್ಥಿತಿಯಿಂದ ಮಾಡುತ್ತಾರೆ ಎನ್ನುವುದೆಲ್ಲವೂ ಜಮಾ ಆಗುತ್ತದೆ. ಫೈಲ್ ಇರುವುದಲ್ಲ ಆದರೆ ಫೈನಲ್ ಆಗಿರುತ್ತದೆ. ಆಸ್ಟ್ರೇಲಿಯಾದವರಲ್ಲಿ ಶಕ್ತಿಯರು ತಂದೆಯವರಾಗುವುದರಲ್ಲಿ, ತಂದೆಯವರನ್ನು ಗುರುತಿಸಿ ತಂದೆಯೊಂದಿಗೆ ಸ್ನೇಹ ನಿಭಾಯಿಸುವುದರಲ್ಲಿ ಬಹಳ ಒಳ್ಳೆಯ ಸಾಹಸವನ್ನು ತೋರಿಸಿದ್ದಾರೆ. ಏರುಪೇರಿನ ತಪ್ಪುಗಳಾಗುತ್ತದೆ, ಅದಂತು ಕೆಲವು ಸ್ಥಾನದ, ಧರಣಿಯ ಅಥವಾ ಹಿಂದಿನ ಜನ್ಮದ ಸಂಸ್ಕಾರದ ಕಾರಣದಿಂದ ಏರುಪೇರುಗಳು ಬರುತ್ತವೆ. ಅದನ್ನೂ ಪಾರು ಮಾಡುತ್ತಾ ಸ್ನೇಹದ ಬಂಧನದಲ್ಲಿ ಮುಂದುವರೆಯುತ್ತಿರುತ್ತಾರೆ. ಆದ್ದರಿಂದ ಶಕ್ತಿಯ ಸಾಹಸದ ಬಗ್ಗೆ ಬಾಪ್ದಾದಾರವರು ಶುಭಾಷಯಗಳನ್ನು ಕೊಡುತ್ತಾರೆ. ಒಂದು ಬಲ ಒಂದು ಭರವಸೆಯು ಮುಂದುವರೆಸುತ್ತಿದೆ. ಅಂದಾಗ ಶಕ್ತಿಯರ ಸಾಹಸ ಮತ್ತು ಪಾಂಡವರ ಸೇವೆಯ ಉಮ್ಮಂಗ - ಇವೆರಡೂ ರೆಕ್ಕೆಗಳು ಪರಿಪಕ್ವವಾಗಿ ಬಿಟ್ಟಿದೆ. ಸೇವಾಕ್ಷೇತ್ರದಲ್ಲಿ ಪಾಂಡವರೂ ಸಹ ಮಹಾವೀರರಾಗಿ ಮುಂದುವರೆಯುತ್ತಿದ್ದಾರೆ. ಏರುಪೇರುಗಳನ್ನು ಪಾರು ಮಾಡುವುದರಲ್ಲಿ ಬುದ್ಧಿವಂತರಾಗಿದ್ದಾರೆ. ಎಲ್ಲರ ಚಿತ್ರಗಳೂ ಅದೇ ಆಗಿದೆ, ಪಾಂಡವರನ್ನು ದೊಡ್ಡ ಕಿರೀಟಧಾರಿ, ಉದ್ದಗಲವಾಗಿ ತೋರಿಸುತ್ತಾರೆ. ಏಕೆಂದರೆ ಆ ರೀತಿಯಲ್ಲಿ ಸ್ಥಿತಿಯು ಶ್ರೇಷ್ಠ ಮತ್ತು ಶಕ್ತಿಶಾಲಿಯಾದ ಸ್ಥಿತಿಯಿದೆ. ಆದ್ದರಿಂದ ಪಾಂಡವರು ಶ್ರೇಷ್ಠ ಮತ್ತು ಶಕ್ತಿಶಾಲಿ ಎಂದು ತೋರಿಸುತ್ತಾರೆ. ಆಸ್ಟ್ರೇಲಿಯಾದವರು ಹೆಚ್ಚಾಗಿ ದಯಾಹೃದಯಿಗಳೂ ಆಗಿದ್ದಾರೆ, ಅಲೆದಾಡುತ್ತಿರುವ ಆತ್ಮರ ಬಗ್ಗೆ ದಯಾಹೃದಯಿಯಾಗಿದ್ದು ಸೇವೆಯಲ್ಲಿ ಮುಂದುವರೆಯುತ್ತಿದ್ದಾರೆ. ಅವರೆಂದಿಗೂ ಸಹ ಸೇವೆಯಿಲ್ಲದೆ ಇರಲು ಸಾಧ್ಯವಿಲ್ಲ. ಮಕ್ಕಳು ಮುಂದುವರೆಯುತ್ತಿರುವ ವಿಶೇಷತೆಯ ಬಗ್ಗೆ ಬಾಪ್ದಾದಾರವರಿಗೂ ಸಹ ಸದಾ ಖುಷಿಯಿದೆ. ವಿಶೇಷವಾದ ಅದೃಷ್ಟವಂತರಾಗಿದ್ದೀರಿ. ಹೇಗೆ ಪ್ರತಿಯೊಬ್ಬರೂ ಶ್ರೇಷ್ಠ ಲಕ್ಷ್ಯದಿಂದ ಮುಂದುವರೆಯುತ್ತಿದ್ದಾರೆ ಮತ್ತು ಮುಂದುವರೆಸುತ್ತಿದ್ದಾರೆ ಎಂದು ಪ್ರತಿಯೊಂದು ಮಕ್ಕಳ ಉಮ್ಮಂಗ-ಉತ್ಸಾಹದಲ್ಲಿ ಬಾಪ್ದಾದಾರವರಿಗೆ ಹರ್ಷವಾಗುತ್ತದೆ. ಬಾಪ್ದಾದಾರವರು ಸದಾ ವಿಶೇಷತೆಯನ್ನೇ ನೋಡುತ್ತಾರೆ. ಪ್ರತಿಯೊಬ್ಬರೂ ಒಬ್ಬರಿಗಿಂತ ಇನ್ನೊಬ್ಬರು ಪ್ರಿಯವೆನಿಸುತ್ತಾರೆ. ತಾವೂ ಸಹ ಒಬ್ಬರನ್ನೊಬ್ಬರು ಇದೇ ವಿಧಿಯಿಂದ ನೋಡುತ್ತೀರಲ್ಲವೇ! ಯಾರನ್ನೇ ನೋಡಿದರೂ ಒಬ್ಬರಿಂತ ಇನ್ನೊಬ್ಬರ ಪ್ರಿಯವೆನಿಸಲಿ. ಏಕೆಂದರೆ 5 ಸಾವಿರ ವರ್ಷದ ನಂತರ ಅಗಲಿ ಮರಳಿ ಪರಸ್ಪರದಲ್ಲಿ ಮಿಲನವಾಗಿದ್ದೇವೆ, ಆದ್ದರಿಂದ ಎಷ್ಟು ಪ್ರಿಯವೆನಿಸುತ್ತಾರೆ! ತಂದೆಯೊಂದಿಗೆ ಪ್ರೀತಿಯಿರುವ ಚಿಹ್ನೆಯಾಗಿದೆ - ಬ್ರಾಹ್ಮಣ ಆತ್ಮರೆಲ್ಲರೂ ಪ್ರಿಯವೆನಿಸುತ್ತಾರೆ. ಪ್ರತಿಯೊಬ್ಬ ಬ್ರಾಹ್ಮಣನು ಪ್ರಿಯವೆನಿಸುವುದು ಎಂದರೆ ತಂದೆಯೊಂದಿಗೆ ಪ್ರೀತಿಯಿದೆ. ಮಾಲೆಯಲ್ಲಿ ಒಬ್ಬರಿನ್ನೊಬ್ಬರ ಸಂಬಂಧದಲ್ಲಂತು ಬ್ರಾಹ್ಮಣರೇ ಬರುತ್ತಾರೆ. ತಂದೆಯಂತು ರಿಟೈರ್ಡ್ ಆಗಿದ್ದು ನೋಡುವರು ಆದ್ದರಿಂದ ತಂದೆಯೊಂದಿಗೆ ಪ್ರೀತಿಯಿರುವ ಸಂಕೇತವನ್ನು ಸದಾ ಅನುಭವ ಮಾಡಿರಿ. ಎಲ್ಲರೂ ತಂದೆಗೆ ಪ್ರಿಯರಾಗಿದ್ದಾರೆಂದರೆ ನಮಗೂ ಪ್ರಿಯರಾಗಿದ್ದಾರೆ. ಒಳ್ಳೆಯದು.

ಪಾರ್ಟಿಯೊಂದಿಗೆ:-

1. ಎಲ್ಲರೂ ತಮ್ಮನ್ನು ವಿಶೇಷ ಆತ್ಮರೆಂದು ತಿಳಿಯುತ್ತೀರಾ? ವಿಶೇಷ ಆತ್ಮನಾಗಿದ್ದೇನೆ, ವಿಶೇಷ ಕಾರ್ಯಕ್ಕಾಗಿ ನಿಮಿತ್ತನಾಗಿದ್ದೇನೆ ಮತ್ತು ವಿಶೇಷತೆಯನ್ನು ತೋರಿಸಬೇಕಾಗಿದೆ - ಸದಾ ಇಂತಹ ಸ್ಮೃತಿಯಲ್ಲಿ ಇರಬೇಕು. ವಿಶೇಷ ಸ್ಮೃತಿಯು ಸಾಧಾರಣ ಸ್ಮೃತಿಯನ್ನೂ ಶಕ್ತಿಶಾಲಿಯನ್ನಾಗಿ ಮಾಡಿ ಬಿಡುತ್ತದೆ. ವ್ಯರ್ಥವನ್ನೂ ಸಮಾಪ್ತಿಗೊಳಿಸಿ ಬಿಡುತ್ತದೆ. ಆದ್ದರಿಂದ ಸದಾ ಈ ವಿಶೇಷವಾದ ಶಬ್ಧವನ್ನು ನೆನಪಿಟ್ಟುಕೊಳ್ಳಿರಿ - ಮಾತನಾಡುವುದೂ ವಿಶೇಷವಾಗಿ, ನೋಡುವುದೂ ವಿಶೇಷವಾಗಿ, ಮಾಡುವುದೂ ವಿಶೇಷವಾದುದನ್ನು, ಚಿಂತನೆಯೂ ವಿಶೇಷವಾಗಿ ಮಾಡಬೇಕು. ಪ್ರತೀ ಮಾತಿನಲ್ಲಿಯೂ ಈ ವಿಶೇಷ ಎನ್ನುವ ಶಬ್ಧವನ್ನು ತಂದುಕೊಳ್ಳುವುದರಿಂದ ಸ್ವತಹವಾಗಿಯೇ ಬದಲಾಗಿ ಬಿಡುತ್ತೀರಿ. ಮತ್ತು ಇದೇ ಸ್ಮೃತಿಯಿಂದ ಸ್ವ ಪರಿವರ್ತನೆ ವಿಶ್ವ ಪರಿವರ್ತನೆಯೂ ಸಹಜವಾಗಿ ಆಗಿ ಬಿಡುತ್ತದೆ. ಪ್ರತೀ ಮಾತಿನಲ್ಲಿ ವಿಶೇಷ ಎನ್ನುವ ಶಬ್ಧವನ್ನು ಸೇರ್ಪಡೆ ಮಾಡುತ್ತಾ ಸಾಗಿರಿ. ಇದರಿಂದ ಸಂಪೂರ್ಣತೆಯನ್ನು ಪ್ರಾಪ್ತಿ ಮಾಡಿಕೊಳ್ಳುವ ಲಕ್ಷ್ಯವೇನಿದೆಯೋ, ಅದನ್ನು ಪ್ರಾಪ್ತಿ ಮಾಡಿಕೊಳ್ಳುವಿರಿ.

2. ಸದಾ ತಂದೆ ಮತ್ತು ಆಸ್ತಿಯ ಸ್ಮೃತಿಯಲ್ಲಿರುತ್ತೀರಾ? ಶ್ರೇಷ್ಠ ಸ್ಮೃತಿಯ ಮೂಲಕ ಸ್ಥಿತಿಯ ಅನುಭವವಾಗುತ್ತದೆಯೇ? ಸ್ಥಿತಿಗೆ ಆಧಾರವಾಗಿ - ಸ್ಮೃತಿ. ಸ್ಮೃತಿಯು ಬಲಹೀನವಾಗಿದೆಯೆಂದರೆ ಸ್ಥಿತಿಯೂ ಬಲಹೀನವಾಗಿ ಬಿಡುತ್ತದೆ. ಸ್ಮೃತಿಯು ಸದಾ ಶಕ್ತಿಶಾಲಿಯಾಗಿರಲಿ. ಶಕ್ತಿಶಾಲಿಯಾದ ಸ್ಮೃತಿಯು ಅದಾಗಿದೆ - "ನಾನು ತಂದೆಯವನು ಮತ್ತು ತಂದೆಯು ನನ್ನವರು". ಇದೇ ಸ್ಮೃತಿಯಿಂದ ಸ್ಥಿತಿಯು ಶಕ್ತಿಶಾಲಿಯಾಗಿರುತ್ತದೆ ಮತ್ತು ಅನ್ಯರನ್ನೂ ಶಕ್ತಿಶಾಲಿಯನ್ನಾಗಿ ಮಾಡುತ್ತೀರಿ. ಆದ್ದರಿಂದ ವಿಶೇಷವಾಗಿ ಸದಾ ಸ್ಮೃತಿಯ ಬಗ್ಗೆ ಗಮನವಿರಲಿ. ಸಮರ್ಥ ಸ್ಮೃತಿ, ಸಮರ್ಥ ಸ್ಥಿತಿ, ಸಮರ್ಥ ಸೇವೆಯು ಸ್ವತಹವಾಗಿ ಆಗುತ್ತಿರಲಿ. ಸ್ಮೃತಿ, ಸ್ಥಿತಿ ಮತ್ತು ಸೇವೆ - ಈ ಮೂರೂ ಸಮರ್ಥವಾಗಿರಲಿ. ಹೇಗೆ ಸ್ವಿಚ್ಆನ್ ಮಾಡುತ್ತೀರೆಂದರೆ ಬೆಳಕುಂಟಾಗಿ ಬಿಡುತ್ತದೆ, ಆಫ್ ಮಾಡುತ್ತೀರೆಂದರೆ ಅಂಧಕಾರವಾಗಿ ಬಿಡುತ್ತದೆ, ಹಾಗೆಯೇ ಈ ಸ್ಮೃತಿಯೂ ಸಹ ಒಂದು ಸ್ವಿಚ್ ಆಗಿದೆ. ಒಂದುವೇಳೆ ಸ್ಮೃತಿಯ ಸ್ವಿಚ್ ಬಲಹೀನವಾಗಿರುತ್ತದೆ ಎಂದರೆ ಸ್ಥಿತಿಯೂ ಬಲಹೀನವಾಗಿರುತ್ತದೆ. ಸದಾ ಸ್ಮೃತಿಯೆಂಬ ಸ್ವಿಚ್ನ ಬಗ್ಗೆ ಗಮನವಿರಲಿ. ಇದರಿಂದಲೇ ಸ್ವಯಂನ ಮತ್ತು ಸರ್ವರ ಕಲ್ಯಾಣವಿದೆ. ಹೊಸ ಜನ್ಮವಾಯಿತೆಂದರೆ ಹೊಸ ಸ್ಮೃತಿಯಿರಲಿ. ಹಳೆಯ ಸ್ಮೃತಿಗಳೆಲ್ಲವೂ ಸಮಾಪ್ತಿ. ಅಂದಾಗ ಸದಾ ಇದೇ ವಿಧಿಯಿಂದ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಿರಿ.

3. ಎಲ್ಲರೂ ತಮ್ಮನ್ನು ಭಾಗ್ಯಶಾಲಿಯೆಂದು ತಿಳಿಯುತ್ತೀರಾ? ವರದಾನ ಭೂಮಿಯಲ್ಲಿ ಬರುವುದೂ ಸಹ ಮಹಾನ್ ಭಾಗ್ಯವಾಗಿದೆ. ಒಂದು ಭಾಗ್ಯ - ವರದಾನ ಭೂಮಿಯಲ್ಲಿ ತಲುಪುವುದರಿಂದ ಸಿಕ್ಕಿ ಬಿಟ್ಟಿತು, ಇದೇ ಭಾಗ್ಯವನ್ನು ಎಷ್ಟು ಶ್ರೇಷ್ಠವನ್ನಾಗಿಯಾದರೂ ಮಾಡಿಕೊಳ್ಳಬಹುದು. ಶ್ರೇಷ್ಠ ಮತವೇ ಭಾಗ್ಯದ ರೇಖೆಯನ್ನೆಳೆಯುವ ಲೇಖನಿಯಾಗಿದೆ. ಇದರಲ್ಲಿ ತಮ್ಮ ಶ್ರೇಷ್ಠ ರೇಖೆಯನ್ನೆಷ್ಟು ರೂಪಿಸಿಕೊಳ್ಳುತ್ತೀರೋ ಅಷ್ಟೂ ಶ್ರೇಷ್ಠರಾಗುತ್ತೀರಿ. ಇಡೀ ಕಲ್ಪದಲ್ಲಿಯೂ ಶ್ರೇಷ್ಠ ಭಾಗ್ಯದ ರೇಖೆಯನ್ನೆಳೆಯುವ ಸಮಯವು ಇದೇ ಆಗಿದೆ. ಅಂತಹ ಸಮಯ ಹಾಗೂ ಅಂತಹ ಸ್ಥಾನದಲ್ಲಿ ತಲುಪಿ ಬಿಟ್ಟಿದ್ದೀರಿ! ಹಾಗಾದರೆ ಸ್ವಲ್ಪದರಲ್ಲಿಯೇ ಖುಷಿಯಾಗಿ ಬಿಡಬಾರದು. ಯಾವಾಗ ಕೊಡುವವರು ಕೊಡುತ್ತಿದ್ದಾರೆ ಅಂದಮೇಲೆ ತೆಗೆದುಕೊಳ್ಳುವವರೇಕೆ ಸುಸ್ತಾಗಬೇಕು! ತಂದೆಯ ನೆನಪೇ ಶ್ರೇಷ್ಠರನ್ನಾಗಿ ಮಾಡುತ್ತದೆ. ತಂದೆಯನ್ನು ನೆನಪು ಮಾಡುವುದು ಅಂದರೆ ಪಾವನರಾಗುವುದಾಗಿದೆ. ಜನ್ಮ-ಜನ್ಮದ ಸಂಬಂಧವಿದೆ ಅಂದಾಗ ನೆನಪು ಮಾಡುವುದೇಕೆ ಕಷ್ಟವಾಗುತ್ತದೆ? ಕೇವಲ ಸ್ನೇಹದಿಂದ ಮತ್ತು ಸಂಬಂಧದಿಂದ ನೆನಪು ಮಾಡಿರಿ. ಎಲ್ಲಿ ಸ್ನೇಹವಿರುತ್ತದೆಯೋ ಅಲ್ಲಿ ನೆನಪು ಬರುತ್ತಿಲ್ಲ ಎನ್ನುವುದಾಗಲು ಸಾಧ್ಯವಿಲ್ಲ. ಸ್ನೇಹವಿರುವ ಕಾರಣದಿಂದ ಅವರನ್ನು ಮರೆಯಲು ಪ್ರಯತ್ನಿಸಿದರೂ ನೆನಪು ಬರುತ್ತದೆ. ಒಳ್ಳೆಯದು.

ವರದಾನ:  
ಮಸ್ತಕದ ಮೂಲಕ ಸಂತುಷ್ಟತೆಯ ಹೊಳಪಿನ ಜಲಕ್ನ್ನು ತೋರಿಸುವಂತಹ ಸಾಕ್ಷಾತ್ಕಾರ ಮೂರ್ತಿ ಭವ.

ಯಾರು ಸದಾ ಸಂತುಷ್ಟವಾಗಿರುತ್ತಾರೆಯೋ, ಅವರ ಮಸ್ತಕದಿಂದ ಸದಾ ಸಂತುಷ್ಟತೆಯ ಜಲಕ್ ಹೊಳೆಯುತ್ತಿರುತ್ತದೆ. ಅವರನ್ನೇನಾದರೂ ಉದಾಸವಾಗಿರುವ ಆತ್ಮನೇ ನೋಡಿದರೂ ಸಹ ಖುಷಿಯಾಗಿ ಬಿಡುತ್ತಾರೆ, ಅವರಲ್ಲಿನ ಉದಾಸತ್ವವೆಲ್ಲವೂ ಸಮಾಪ್ತಿಯಾಗಿ ಬಿಡುತ್ತದೆ. ಯಾರ ಬಳಿ ಸಂತುಷ್ಟತೆಯ ಖುಷಿಯ ಖಜಾನೆಯಿದೆಯೋ, ಅವರ ಹಿಂದೆ ಸ್ವತಹವಾಗಿಯೇ ಎಲ್ಲವೂ ಆಕರ್ಷಣೆಯಾಗುತ್ತದೆ. ಅವರ ಖುಷಿಯ ಚಹರೆಯು ಚೈತನ್ಯ ಬೋರ್ಡ್ ಆಗಿ ಬಿಡುತ್ತದೆ. ಚಹರೆಯು ಅನೇಕ ಆತ್ಮರನ್ನು ತಯಾರುಮಾಡುವವರ(ಬಾಬಾರವರ) ಪರಿಚಯವನ್ನೂ ಕೊಡುತ್ತದೆ. ಅಂದಾಗ ಸಂತುಷ್ಟವಾಗಿರುವ ಮತ್ತು ಸರ್ವರನ್ನು ಸಂತುಷ್ಟ ಪಡಿಸುವ ಇಂತಹ ಸಂತುಷ್ಟ ಮಣಿಯಾಗಿರಿ, ಅದರಿಂದ ಅನೇಕರಿಗೆ ಸಾಕ್ಷಾತ್ಕಾರವಾಗಲಿ.

ಸ್ಲೋಗನ್:
ಪೆಟ್ಟು ಕೊಡುವವರ ಕಾರ್ಯವಾಗಿದೆ ಪೆಟ್ಟು ಕೊಡುವುದು ಮತ್ತು ತಮ್ಮ ಕಾರ್ಯವಾಗಿದೆ - ತಮ್ಮನ್ನು ಪಾರು ಮಾಡಿಕೊಳ್ಳುವುದು.


ಮುರಳಿ ಪ್ರಶ್ನೆಗಳು

1. ಹೋಲಿ ಹಂಸ ವೃತ್ತಿ ಎಂದರೇನು?

2. ಹೋಲಿ ಹಂಸನ ಸ್ಥಿತಿಯ ಪ್ರತ್ಯಕ್ಷ ಪ್ರಭಾವ ಯಾವಾಗ ಕಾಣಿಸುತ್ತದೆ?

3. ಈ ಸಮಯದ ಪರಿವರ್ತನೆ ಯಾವ ಅಧಿಕಾರಿಯನ್ನಾಗಿ ಮಾಡುತ್ತದೆ?

4. ಪರಿಶೀಲನೆ ಶಕ್ತಿಯಿಲ್ಲದ ಕಾರಣ ಯಾವ -ಯಾವ ಶಕ್ತಿಗಳು ಹೋಗಿ ಬಿಡುತ್ತವೆ?

5. ನಮ್ಮ ದೃಷ್ಟಿ ಹೇಗಿರಬೇಕು?
ಅ. ನಿರ್ವಿಕಾರಿ, ಸಹೋದರತ್ವ
ಆ. ಪವಿತ್ರ ಆತ್ಮಿಕ
ಇ. ಶ್ರೇಷ್ಠ ಶುದ್ಧ ಸ್ನೇಹಿ

6. ಹೋಲಿ ಹಂಸ ಬುದ್ಧಿಯಲ್ಲಿ ಯಾವ ಶಕ್ತಿಯು ಸ್ವತಃವಾಗಿ ಬರುವುದು?
ಅ. ಸಹನೆ ಶಕ್ತಿ
ಆ. ಪರಿಶೀಲನೆ ಶಕ್ತಿ
ಇ. ಪವಿತ್ರತೆಯ ಶಕ್ತಿ

7. ವಿಜಯ ಮಾಲೆಯ ಮಣಿಯಾಗುವ ಯುಕ್ತಿ ಏನಾಗಿದೆ?
ಅ. ಸ್ವಯಂನ ಮೇಲೆ ವಿಜಯಿ, ಸರ್ವರ ಮೇಲೆ ವಿಜಯಿ, ಪ್ರಕೃತಿ ಮೇಲೆ ವಿಜಯಿ
ಆ. ವಿಕಾರಗಳ ಮೇಲೆ ವಿಜಯಿ, ತತ್ವಗಳ ಮೇಲೆ ವಿಜಯಿ
ಇ. ಕರ್ಮೇಂದ್ರಿಯಗಳ ಮೇಲೆ ವಿಜಯಿ, ಮನಸ್ಸು-ಬುದ್ಧಿಯ ಮೇಲೆ ವಿಜಯಿ

8. ಚಾನ್ಸಲರ್ (ಕುಲಪತಿ) ಎಂದರೆ ಯಾರು?
ಅ. ಸ್ವಯಂ ಮುಂದೆ ಹೋಗುವವರು
ಆ. ಅನ್ಯರನ್ನು ಮುಂದೆ ಇಡುವವರು
ಇ. ಸ್ವಯಂ ಮುಂದೆ ಹೋಗುವವರು ಮತ್ತು ಅನ್ಯರನ್ನು ಮುಂದೆ ಇಡುವವರು

9. ನಿಮಿತ್ತ ಭಾವ ಸ್ವತಃವಾಗಿ ಯಾವಾಗ ಬರುವುದು?
ಅ. ಮನಸ್ಸಾ-ವಾಚಾ-ಕರ್ಮಣಾ ನಿಸ್ವಾರ್ಥವಾಗಿದ್ದಾಗ
ಆ. ನಮ್ರತೆ, ನಿರ್ಮಾನ ಮತ್ತು ನಿರ್ಮಾಣವಾಗಿದ್ದಾಗ
ಇ. ನಿರಾಕಾರಿ, ನಿರ್ವಿಕಾರಿ ಮತ್ತು ನಿರಂಹಕಾರಿಯಾಗಿದ್ದಾಗ

10. ಸ್ಥಿಯಲ್ಲಿ ಏರುಪೇರಾಗಲು ಕಾರಣವೇನು?
ಅ. ದೇಹಾಭಿಮಾನ
ಆ. ನಾನು ಮತ್ತು ನನ್ನತನ
ಇ. ಮೋಹ