02.10.21         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಈಗ ಈ ಮೃತ್ಯುಲೋಕದ ಅಂತ್ಯವಾಗಿದೆ, ಅಮರಲೋಕದ ಸ್ಥಾಪನೆಯಾಗುತ್ತಿದೆ, ಆದ್ದರಿಂದ ನೀವು ಮೃತ್ಯುಲೋಕದವರನ್ನು ನೆನಪು ಮಾಡಬಾರದು

ಪ್ರಶ್ನೆ:
ತಂದೆಯು ತಮ್ಮ ಬಡ ಮಕ್ಕಳಿಗೆ ಯಾವ ಸ್ಮೃತಿ ತರಿಸುತ್ತಾರೆ?

ಉತ್ತರ:
ಮಕ್ಕಳೇ, ನೀವು ಪವಿತ್ರರಾಗಿದ್ದಾಗ ಬಹಳ ಸುಖಿಯಾಗಿದ್ದಿರಿ, ನಿಮ್ಮಂತಹ ಸಾಹುಕಾರರು ಮತ್ತ್ಯಾರೂ ಇರಲಿಲ್ಲ. ನೀವು ಅಪಾರ ಸುಖಿಯಾಗಿದ್ದಿರಿ. ಆಕಾಶ, ಭೂಮಿ ಎಲ್ಲವೂ ನಿಮ್ಮ ಕೈಯಲ್ಲಿತ್ತು. ಈಗ ತಂದೆಯು ನಿಮ್ಮನ್ನು ಪುನಃ ಸಾಹುಕಾರರನ್ನಾಗಿ ಮಾಡಲು ಬಂದಿದ್ದಾರೆ.

ಗೀತೆ:
ನಯನಹೀನನಿಗೆ ದಾರಿ ತೋರಿಸು ಪ್ರಭು....

ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳೇ, ಆತ್ಮಗಳೇ, ಗೀತೆಯನ್ನು ಕೇಳಿದಿರಾ! ಯಾರು ಹೇಳಿದರು? ಆತ್ಮಗಳ ಆತ್ಮಿಕ ತಂದೆ. ಆತ್ಮಿಕ ತಂದೆಗೆ ಆತ್ಮಿಕ ಮಕ್ಕಳು ಹೇಳಿದರು - ಬಾಬಾ ಎಂದು. ಅವರಿಗೆ ಈಶ್ವರನೆಂದೂ ಹೇಳಲಾಗುತ್ತದೆ, ಪಿತನೆಂದೂ ಹೇಳಲಾಗುತ್ತದೆ. ಯಾವ ಪಿತಾ? ಪರಮಪಿತ. ಇಬ್ಬರು ತಂದೆಯರಿದ್ದಾರೆ. ಒಬ್ಬರು ಲೌಕಿಕ ಇನ್ನೊಬ್ಬರು ಪಾರಲೌಕಿಕ. ಲೌಕಿಕ ತಂದೆಯ ಮಕ್ಕಳು ಪಾರಲೌಕಿಕ ತಂದೆಯನ್ನು ಕರೆಯುತ್ತಾರೆ ಹೇ ತಂದೆಯೇ ಎಂದು. ಆ ತಂದೆಯ ಹೆಸರೇನು? ಶಿವ. ಆ ಶಿವ ನಿರಾಕಾರನಿಗೆ ಪೂಜೆಯಾಗುತ್ತದೆ, ಅವರಿಗೆ ಪರಮಪಿತನೆಂದು ಹೇಳಲಾಗುತ್ತದೆ. ಲೌಕಿಕ ತಂದೆಗೆ ಪರಮಪಿತನೆಂದು ಹೇಳುವುದಿಲ್ಲ. ಎಲ್ಲಾ ಆತ್ಮರ ಸರ್ವ ಶ್ರೇಷ್ಠ ತಂದೆಯು ಒಬ್ಬರೇ ಆಗಿದ್ದಾರೆ. ಎಲ್ಲಾ ಜೀವಾತ್ಮರು ಆ ತಂದೆಯನ್ನು ನೆನಪು ಮಾಡುತ್ತಾರೆ ಆದರೆ ನಮ್ಮ ತಂದೆಯು ಯಾರೆಂಬುದನ್ನೇ ಆತ್ಮರು ಮರೆತು ಹೋಗಿದ್ದಾರೆ. ಓ ತಂದೆಯೇ ನಾವು ಕಣ್ಣಿಲ್ಲದ ಕುರುಡರಿಗೆ ಕಣ್ಣನ್ನು ಕೊಡಿ ಅದರಿಂದ ನಾವು ನಮ್ಮ ತಂದೆಯನ್ನು ಅರಿತುಕೊಳ್ಳುವೆವು ಎಂದು ಕೂಗುತ್ತಾರೆ. ಭಕ್ತಿಮಾರ್ಗದಲ್ಲಿ ನಾವು ಅಂಧರಾಗಿ ಹುಡುಕುತ್ತಾ ಇರುತ್ತೇವೆ. ಈಗ ಈ ಹುಡುಕಾಟದಿಂದ ಬಿಡಿಸು ಎಂದು ಹೇಳುತ್ತಾರೆ. ತಂದೆಯೇ ಕಲ್ಪ-ಕಲ್ಪವೂ ಬಂದು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ. ಈಗ ಕಲಿಯುಗವಾಗಿದೆ, ಸತ್ಯಯುಗವು ಬರಲಿದೆ. ಕಲಿಯುಗ ಮತ್ತು ಸತ್ಯಯುಗದ ನಡುವಿನ ಸಮಯಕ್ಕೆ ಸಂಗಮವೆಂದು ಹೇಳಲಾಗುತ್ತದೆ. ಇದು ಪುರುಷೋತ್ತಮ ಸಂಗಮ ಯುಗವಾಗಿದೆ. ಬೇಹದ್ದಿನ ತಂದೆಯು ಬಂದು ಭ್ರಷ್ಟಾಚಾರಿ ಅಗಿರುವವರನ್ನು ಶ್ರೇಷ್ಠಾಚಾರಿ ಪುರುಷೋತ್ತಮರನ್ನಾಗಿ ಮಾಡುತ್ತಾರೆ. ಲಕ್ಷ್ಮೀ-ನಾರಾಯಣರು ಪುರುಷೋತ್ತಮರಾಗಿದ್ದರು, ಲಕ್ಷ್ಮೀ-ನಾರಾಯಣರ ವಂಶಾವಳಿಯ ರಾಜ್ಯವಿತ್ತು, ಇದನ್ನು ತಂದೆಯು ಬಂದು ಸ್ಮೃತಿ ತರಿಸುತ್ತಾರೆ. ನೀವು ಭಾರತವಾಸಿಗಳು ಇಂದಿಗೆ 5000 ವರ್ಷಗಳ ಮೊದಲು ಸ್ವರ್ಗವಾಸಿಗಳಾಗಿದ್ದಿರಿ, ಈಗ ನರಕವಾಸಿಗಳಾಗಿದ್ದೀರಿ. ಇಂದಿಗೆ 5000 ವರ್ಷಗಳ ಮೊದಲು ಭಾರತವು ಸ್ವರ್ಗವಾಗಿತ್ತು, ಭಾರತಕ್ಕೆ ಬಹಳ ಮಹಿಮೆಯಿತ್ತು. ವಜ್ರ ವೈಡೂರ್ಯಗಳ ಮಹಲುಗಳಿತ್ತು, ಈಗ ಏನೂ ಇಲ್ಲ. ಆ ಸಮಯದಲ್ಲಿ ಮತ್ತ್ಯಾವುದೇ ಧರ್ಮವಿರಲಿಲ್ಲ, ಕೇವಲ ಸೂರ್ಯವಂಶಿಯರಿದ್ದರು, ಚಂದ್ರವಂಶಿಯರು ಕೊನೆಯಲ್ಲಿ ಬರುತ್ತಾರೆ. ತಂದೆಯು ತಿಳಿಸುತ್ತಾರೆ - ನೀವೇ ಸೂರ್ಯವಂಶಿಗಳಾಗಿದ್ದಿರಿ, ಇಲ್ಲಿಯವರೆಗೂ ಮನುಷ್ಯರು ಲಕ್ಷ್ಮೀ-ನಾರಾಯಣರ ಮಂದಿರಗಳನ್ನು ಕಟ್ಟಿಸುತ್ತಾ ಇರುತ್ತಾರೆ ಆದರೆ ಲಕ್ಷ್ಮೀ-ನಾರಾಯಣರ ರಾಜ್ಯವು ಯಾವಾಗ ಇತ್ತು? ಅವರು ಹೇಗೆ ರಾಜ್ಯವನ್ನು ಪಡೆದರು? ಇದು ಯಾರಿಗೂ ತಿಳಿದಿಲ್ಲ. ಪೂಜೆ ಮಾಡುತ್ತಾರೆ ಆದರೆ ತಿಳಿದುಕೊಂಡಿಲ್ಲ. ಅಂದಮೇಲೆ ಅಂಧಶ್ರದ್ಧೆಯಾಯಿತಲ್ಲವೆ. ಶಿವನಿಗೆ ಲಕ್ಷ್ಮೀ-ನಾರಾಯಣರಿಗೆ ಪೂಜೆ ಮಾಡುತ್ತಾರೆ. ಅವರ ಚರಿತ್ರೆಯನ್ನು ಯಾರೂ ತಿಳಿದುಕೊಂಡಿಲ್ಲ. ಭಾರತವಾಸಿಗಳೇ ಸ್ವಯಂ ಹೇಳುತ್ತಾರೆ - ನಾವು ಪತಿತರಾಗಿದ್ದೇವೆ. ಹೇ ಪತಿತ-ಪಾವನ ತಂದೆಯೇ ಬನ್ನಿ, ಬಂದು ನಮ್ಮನ್ನು ದುಃಖದಿಂದ ರಾವಣ ರಾಜ್ಯದಿಂದ ಬಿಡಿಸಿ ಎಂದು. ತಂದೆಯು ಬಂದು ಎಲ್ಲರನ್ನು ಬಿಡುಗಡೆ ಮಾಡುತ್ತಾರೆ. ಮಕ್ಕಳಿಗೆ ತಿಳಿದಿದೆ - ಸತ್ಯಯುಗದಲ್ಲಿ ಒಂದೇ ರಾಜ್ಯವಿತ್ತು, ಕಾಂಗ್ರೆಸ್ಸಿನವರು ಅಥವಾ ಬಾಪೂಜಿಯೂ ಸಹ ನಮಗೆ ಪುನಃ ರಾಮರಾಜ್ಯ ಬೇಕು, ನಾವು ಸ್ವರ್ಗವಾಸಿಗಳಾಗ ಬಯಸುತ್ತೇವೆ ಎಂದೇ ಹೇಳುತ್ತಿದ್ದರು. ಈಗ ನರಕವಾಸಿಗಳದು ಯಾವ ಸ್ಥಿತಿಯಾಗಿದೆ, ನೋಡುತ್ತಿದ್ದೀರಾ! ಇದಕ್ಕೆ ನರಕ, ಭೂತ ಪ್ರಪಂಚ ಎಂದು ಹೇಳಲಾಗುತ್ತದೆ. ಇದೇ ಭಾರತವು ದೈವೀ ಪ್ರಪಂಚವಾಗಿತ್ತು, ಈಗ ಭೂತಗಳ ಪ್ರಪಂಚವಾಗಿ ಬಿಟ್ಟಿದೆ.

ತಂದೆಯು ತಿಳಿಸುತ್ತಾರೆ - ನೀವು 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ, 84 ಲಕ್ಷವಲ್ಲ. 84 ಲಕ್ಷವೆಂದು ಶಾಸ್ತ್ರಗಳಲ್ಲಿ ಸುಳ್ಳು ಬರೆದಿದ್ದಾರೆ. ಇಂದಿಗೆ 5000 ವರ್ಷಗಳ ಮೊದಲು ಸದ್ಗತಿ ಮಾರ್ಗವಿತ್ತು. ಅಲ್ಲಿ ಭಕ್ತಿಯಾಗಲಿ, ದುಃಖದ ಹೆಸರು-ಗುರುತಾಗಲಿ ಇರಲಿಲ್ಲ. ಅದಕ್ಕೆ ಸುಖಧಾಮವೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ - ನೀವು ಮೂಲತಃ ಶಾಂತಿಧಾಮದ ನಿವಾಸಿಗಳಾಗಿದ್ದೀರಿ. ನೀವು ಇಲ್ಲಿಗೆ ಪಾತ್ರವನ್ನು ಅಭಿನಯಿಸಲು ಬಂದಿದ್ದೀರಿ. 84 ಪುನರ್ಜನ್ಮಗಳು ಇರುತ್ತವೆಯೇ ಹೊರತು 84 ಲಕ್ಷವಲ್ಲ. ಈಗ ಬೇಹದ್ದಿನ ತಂದೆಯೇ ನೀವು ಮಕ್ಕಳಿಗೆ ಬೇಹದ್ದಿನ ಆಸ್ತಿಯನ್ನು ಕೊಡಲು ಬಂದಿದ್ದಾರೆ. ನೀವಾತ್ಮಗಳೊಂದಿಗೆ ಮಾತನಾಡುತ್ತಾರೆ. ಅನ್ಯ ಸತ್ಸಂಗಗಳಲ್ಲಿ ಮನುಷ್ಯರು ಮನುಷ್ಯರಿಗೆ ಭಕ್ತಿಯ ಮಾತುಗಳನ್ನು ತಿಳಿಸುತ್ತಾರೆ. ಅರ್ಧಕಲ್ಪ ಭಾರತವು ಸ್ವರ್ಗವಾಗಿದ್ದಾಗ ಯಾರೊಬ್ಬರೂ ಪತಿತರಿರಲಿಲ್ಲ. ಈಗ ಒಬ್ಬರೂ ಪಾವನರಿಲ್ಲ. ಇದು ಪತಿತ ಪ್ರಪಂಚವಾಗಿದೆ. ತಂದೆಯು ತಿಳಿಸುತ್ತಾರೆ - ಗೀತೆಯಲ್ಲಿ ಕೃಷ್ಣ ಭಗವಾನುವಾಚ ಎಂದು ಬರೆದು ಬಿಟ್ಟಿದ್ದಾರೆ. ಕೃಷ್ಣನು ಭಗವಂತನಲ್ಲ, ಗೀತೆಯನ್ನೂ ತಿಳಿಸಲಿಲ್ಲ. ಇವರು ತಮ್ಮ ಧರ್ಮಶಾಸ್ತ್ರವನ್ನೂ ಸಹ ತಿಳಿದುಕೊಂಡಿಲ್ಲ, ತಮ್ಮ ಧರ್ಮವನ್ನೇ ಮರೆತು ಬಿಟ್ಟಿದ್ದಾರೆ. ನಾಲ್ಕು ಮುಖ್ಯ ಧರ್ಮಗಳಿವೆ. ಮೊದಲು ಆದಿ ಸನಾತನ ದೇವಿ-ದೇವತಾ ಧರ್ಮ, ಸೂರ್ಯವಂಶಿಯರು ನಂತರ ಚಂದ್ರವಂಶಿಯರು ಇಬ್ಬರನ್ನೂ ಸೇರಿಸಿ ದೇವಿ-ದೇವತಾ ಧರ್ಮವೆಂದು ಹೇಳುತ್ತಾರೆ. ಅಲ್ಲಿ ದುಃಖದ ಹೆಸರುಗಳೂ ಇರಲಿಲ್ಲ. 21 ಜನ್ಮಗಳು ನೀವು ಸುಖಧಾಮದಲ್ಲಿದ್ದಿರಿ, ನಂತರ ರಾವಣ ರಾಜ್ಯ ಭಕ್ತಿಮಾರ್ಗವು ಆರಂಭವಾಗುತ್ತದೆ. ಶಿವ ತಂದೆಯು ಯಾವಾಗ ಬರುತ್ತಾರೆ? ರಾತ್ರಿಯಾದಾಗ. ಭಾರತವಾಸಿಗಳು ಘೋರ ಅಂಧಕಾರದಲ್ಲಿ ಬಂದಾಗ ತಂದೆಯು ಬರುತ್ತಾರೆ, ಮನುಷ್ಯರು ಗೊಂಬೆಗಳ ಪೂಜೆ ಮಾಡುತ್ತಿರುತ್ತಾರೆ. ಒಬ್ಬರ ಚರಿತ್ರೆಯನ್ನೂ ತಿಳಿದುಕೊಂಡಿಲ್ಲ. ಭಕ್ತಿಮಾರ್ಗದಲ್ಲಿ ಹಲವಾರು ಕಡೆ ಹುಡುಕುತ್ತಾರೆ. ತೀರ್ಥ ಯಾತ್ರೆಗಳನ್ನು ಮಾಡಿ ತಿರುಗಾಡುತ್ತಾರೆ ಆದರೆ ಯಾವುದೇ ಪ್ರಾಪ್ತಿಯಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಬಂದು ನಿಮಗೆ ಬ್ರಹ್ಮಾರವರ ಮೂಲಕ ಯಥಾರ್ಥ ಜ್ಞಾನವನ್ನು ತಿಳಿಸುತ್ತೇನೆ, ನಮಗೆ ಸುಖಧಾಮ ಮತ್ತು ಶಾಂತಿಧಾಮದ ಮಾರ್ಗವನ್ನು ತಿಳಿಸಿ ಎಂದು ಕರೆಯುತ್ತಾರೆ. ತಂದೆಯು ತಿಳಿಸುತ್ತಾರೆ - ಇಂದಿಗೆ 5000 ವರ್ಷಗಳ ಮೊದಲು ಬಹಳ ಸಾಹುಕಾರರನ್ನಾಗಿ ಮಾಡಿದ್ದೆನು, ಎಷ್ಟೊಂದು ಹಣವನ್ನು ಕೊಟ್ಟೆನು, ಅದನ್ನು ಎಲ್ಲಿ ಕಳೆದಿರಿ. ನೀವು ಎಷ್ಟೊಂದು ಸಾಹುಕಾರರಾಗಿದ್ದಿರಿ, ಭಾರತವೇ ಎಲ್ಲದಕ್ಕಿಂತ ಸರ್ವಶ್ರೇಷ್ಠ ಖಂಡವಾಗಿತ್ತು. ವಾಸ್ತವದಲ್ಲಿ ಇದು ಎಲ್ಲರ ತೀರ್ಥ ಸ್ಥಾನವಾಗಿದೆ ಏಕೆಂದರೆ ಪತಿತ-ಪಾವನ ತಂದೆಯ ಜನ್ಮ ಭೂಮಿಯಾಗಿದೆ. ಯಾರೆಲ್ಲಾ ಧರ್ಮದವರಿದ್ದಾರೆಯೋ ಎಲ್ಲರ ತಂದೆಯು ಬಂದು ಸದ್ಗತಿ ಮಾಡುತ್ತಾರೆ. ಈಗ ರಾವಣ ರಾಜ್ಯವು ಕೇವಲ ಲಂಕೆಯಲ್ಲ, ಇಡೀ ಸೃಷ್ಟಿಯಲ್ಲಿಯೇ ಇದೆ. ಸೂರ್ಯವಂಶಿ ರಾಜ್ಯವಿದ್ದಾಗ ಈ ವಿಕಾರವಿರಲಿಲ್ಲ. ಭಾರತವು ನಿರ್ವಿಕಾರಿಯಾಗಿತ್ತು, ಈಗ ವಿಕಾರಿಯಾಗಿದೆ. ಎಲ್ಲರೂ ನರಕವಾಸಿಗಳಾಗಿದ್ದಾರೆ. ಸತ್ಯಯುಗದಲ್ಲಿ ದೈವೀ ಸಂಪ್ರದಾಯವಿತ್ತು, ಅವರು 84 ಜನ್ಮಗಳನ್ನು ಪಡೆದು ಆಸುರೀ ಸಂಪ್ರದಾಯದವರಾಗಿದ್ದಾರೆ. ಪುನಃ ದೈವೀ ಸಂಪ್ರದಾಯದವರಾಗಲಿದ್ದಾರೆ. ಭಾರತವು ಬಹಳ ಸಾಹುಕಾರನಾಗಿತ್ತು, ಈಗ ಬಡ ಭಾರತವಾಗಿದೆ ಆದ್ದರಿಂದ ಭಿಕ್ಷೆ ಬೇಡುತ್ತಿದ್ದಾರೆ. ತಂದೆಯು ನೀವು ಬಡ ಮಕ್ಕಳಿಗೆ ಸ್ಮೃತಿ ತರಿಸುತ್ತಾರೆ - ಮಕ್ಕಳೇ, ನೀವು ಎಷ್ಟೊಂದು ಸುಖಿಯಾಗಿದ್ದಿರಿ, ನಿಮ್ಮಂತಹ ಸುಖ ಯಾರಿಗೂ ಸಿಗಲು ಸಾಧ್ಯವಿಲ್ಲ. ಆಕಾಶ, ಭೂಮಿ ಎಲ್ಲವೂ ನಿಮ್ಮ ಕೈಯಲ್ಲಿತ್ತು, ಶಾಸ್ತ್ರಗಳಲ್ಲಿ ಕಲ್ಪದ ಆಯಸ್ಸನ್ನು ಬಹಳ ಉದ್ದವಾಗಿ ಬರೆದು ಎಲ್ಲರನ್ನೂ ಕುಂಭಕರ್ಣನ ಆಸುರೀ ನಿದ್ರೆಯಲ್ಲಿ ಮಲಗಿಸಿ ಬಿಟ್ಟಿದ್ದಾರೆ. ಈ ಭಾರತವು ಶಿವ ತಂದೆಯು ಸ್ಥಾಪನೆ ಮಾಡಿರುವ ಶಿವಾಲಯವಾಗಿತ್ತು, ಅಲ್ಲಿ ಪವಿತ್ರತೆಯಿತ್ತು. ಆ ಹೊಸ ಪ್ರಪಂಚದಲ್ಲಿ ದೇವಿ-ದೇವತೆಗಳು ರಾಜ್ಯಭಾರ ಮಾಡುತ್ತಿದ್ದರು. ಮನುಷ್ಯರು ಇದನ್ನೂ ಸಹ ತಿಳಿದುಕೊಂಡಿಲ್ಲ - ರಾಧೆ-ಕೃಷ್ಣರ ಪರಸ್ಪರ ಸಂಬಂಧವೇನು? ಇವರು ಬೇರೆ-ಬೇರೆ ರಾಜಧಾನಿಯವರಾಗಿದ್ದರು. ಮತ್ತೆ ಸ್ವಯಂವರದ ನಂತರ ಲಕ್ಷ್ಮೀ-ನಾರಾಯಣರಾದರು. ಈ ಜ್ಞಾನವು ಯಾವ ಮನುಷ್ಯ ಮಾತ್ರರಲ್ಲಿಯೂ ಇಲ್ಲ. ಆತ್ಮಿಕ ಜ್ಞಾನವನ್ನು ಕೇವಲ ಒಬ್ಬ ತಂದೆಯೇ ಕೊಡುತ್ತಾರೆ. ಈಗ ತಂದೆಯು ಹೇಳುತ್ತಾರೆ - ಆತ್ಮಾಭಿಮಾನಿಯಾಗಿರಿ. ಪರಮಪಿತನಾದ ನನ್ನನ್ನು ನೆನಪು ಮಾಡಿರಿ. ನೆನಪಿನಿಂದಲೇ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ. ನೀವಿಲ್ಲಿ ಮನುಷ್ಯರಿಂದ ದೇವತೆ ಅಥವಾ ಪತಿತರಿಂದ ಪಾವನರಾಗಲು ಬರುತ್ತೀರಿ. ಈಗ ಇದು ರಾವಣ ರಾಜ್ಯವಾಗಿದೆ. ಭಕ್ತಿಯಲ್ಲಿ ರಾವಣ ರಾಜ್ಯವು ಆರಂಭವಾಗುತ್ತದೆ. ಭಕ್ತಿ ಮಾಡುವವರೆಲ್ಲರೂ ರಾವಣನ ಬಂಧನದಲ್ಲಿದ್ದಾರೆ, ಇಡೀ ಪ್ರಪಂಚವು 5 ವಿಕಾರಗಳೆಂಬ ರಾವಣನ ಬಂಧನದಲ್ಲಿದೆ, ಶೋಕವಾಟಿಕೆಯಲ್ಲಿದೆ. ತಂದೆಯು ಬಂದು ಎಲ್ಲರನ್ನೂ ಬಿಡುಗಡೆ ಮಾಡಿ ಮಾರ್ಗದರ್ಶಕನಾಗಿ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ, ಅದಕ್ಕಾಗಿಯೇ ಈ ಮಹಾಭಾರತ ಯುದ್ಧವಿದೆ. ಇದು 5000 ವರ್ಷಗಳ ಮೊದಲೂ ಸಹ ನಡೆದಿತ್ತು, ಈಗ ತಂದೆಯು ಪುನಃ ಸ್ವರ್ಗವನ್ನಾಗಿ ಮಾಡುತ್ತಿದ್ದಾರೆ. ಯಾರಿಗೆ ಬಹಳಷ್ಟು ಹಣವಿದೆಯೋ ಅವರು ಸ್ವರ್ಗದಲ್ಲಿದ್ದಾರೆಂದಲ್ಲ. ಈಗ ಇರುವುದೇ ನರಕವಾಗಿದೆ. ಪತಿತ-ಪಾವನ ಎಂದು ತಂದೆಗೆ ಹೇಳಲಾಗುತ್ತದೆ, ನದಿಗಳಿಗಲ್ಲ. ಇದೆಲ್ಲವೂ ಭಕ್ತಿಮಾರ್ಗವಾಗಿದೆ, ಈ ಮಾತುಗಳನ್ನು ತಂದೆಯೇ ಬಂದು ತಿಳಿಸುತ್ತಾರೆ. ಇದನ್ನಂತೂ ತಿಳಿದುಕೊಂಡಿದ್ದೀರಿ, ಒಬ್ಬರು ಲೌಕಿಕ ತಂದೆ, ಇನ್ನೊಬ್ಬರು ಪಾರಲೌಕಿಕ ತಂದೆ, ಮೂರನೆಯವರು ಅಲೌಕಿಕ ತಂದೆಯಾಗಿದ್ದಾರೆ. ಈಗ ಪಾರಲೌಕಿಕ ತಂದೆಯು ಬ್ರಹ್ಮಾರವರ ಮೂಲಕ ಬ್ರಾಹ್ಮಣ ಧರ್ಮವನ್ನು ಸ್ಥಾಪನೆ ಮಾಡುತ್ತಾರೆ. ಬ್ರಾಹ್ಮಣರನ್ನು ದೇವತೆಗಳನ್ನಾಗಿ ಮಾಡಲು ರಾಜಯೋಗವನ್ನು ಕಲಿಸುತ್ತಾರೆ. ಆತ್ಮವೇ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತದೆ. ನಾನು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೇನೆಂದು ಆತ್ಮವೇ ಹೇಳುತ್ತದೆ. ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿರಿ. ಇದರಿಂದ ನೀವು ಪಾವನರಾಗುತ್ತೀರಿ. ಯಾವುದೇ ದೇಹಧಾರಿಗಳನ್ನು ನೆನಪು ಮಾಡಬೇಡಿ. ಈಗ ಮೃತ್ಯುಲೋಕದ ಅಂತ್ಯವಾಗಿದೆ, ಅಮರಲೋಕದ ಸ್ಥಾಪನೆಯಾಗುತ್ತಿದೆ. ಉಳಿದೆಲ್ಲಾ ಅನೇಕ ಧರ್ಮಗಳು ಸಮಾಪ್ತಿಯಾಗುತ್ತವೆ. ಸತ್ಯಯುಗದಲ್ಲಿ ಒಂದೇ ದೇವಿ-ದೇವತಾ ಧರ್ಮವಿತ್ತು ನಂತರ ಚಂದ್ರವಂಶಿ ರಾಮ-ಸೀತೆಯು ತ್ರೇತಾಯುಗದಲ್ಲಿದ್ದರು. ನೀವು ಮಕ್ಕಳಿಗೆ ಇಡೀ ಚಕ್ರದ ನೆನಪು ತರಿಸುತ್ತಾರೆ. ಶಾಂತಿಧಾಮ ಮತ್ತು ಸುಖಧಾಮದ ಸ್ಥಾಪನೆಯನ್ನು ತಂದೆಯೇ ಮಾಡುತ್ತಾರೆ, ಮನುಷ್ಯರು ಮನುಷ್ಯರಿಗೆ ಸದ್ಗತಿ ನೀಡಲು ಸಾಧ್ಯವಿಲ್ಲ. ಅವರೆಲ್ಲರೂ ಭಕ್ತಿಮಾರ್ಗದ ಗುರುಗಳಾಗಿದ್ದಾರೆ.

ನೀವೀಗ ಈಶ್ವರೀಯ ಸಂತಾನರಾಗಿದ್ದೀರಿ, ತಂದೆಯಿಂದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತಿದ್ದೀರಿ. ಈಗ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಪ್ರಜೆಗಳಂತೂ ಅನೇಕರು ತಯಾರಾಗುವರು ಆದರೆ ಕೋಟಿಯಲ್ಲಿ ಕೆಲವರೇ ರಾಜರಾಗುತ್ತಾರೆ. ಸತ್ಯಯುಗಕ್ಕೆ ಹೂವಿನ ಉದ್ಯಾನ ವನವೆಂದು ಹೇಳಲಾಗುತ್ತದೆ. ಈಗ ಮುಳ್ಳುಗಳ ಕಾಡಾಗಿದೆ. ರಾವಣ ರಾಜ್ಯವು ಬದಲಾಗುತ್ತಿದೆ. ವಿನಾಶವಾಗಲಿದೆ, ಈ ಜ್ಞಾನವು ಈಗ ನಿಮಗೆ ಸಿಗುತ್ತಿದೆ, ಲಕ್ಷ್ಮೀ-ನಾರಾಯಣರಿಗೆ ಈ ಜ್ಞಾನವಿರುವುದಿಲ್ಲ. ಇದು ಪ್ರಾಯಲೋಪ ಆಗಿ ಬಿಡುತ್ತದೆ. ಭಕ್ತಿಮಾರ್ಗದಲ್ಲಿ ತಂದೆಯನ್ನು ಯಾರೂ ಯಥಾರ್ಥವಾಗಿ ತಿಳಿದುಕೊಂಡಿಲ್ಲ. ತಂದೆಯು ರಚಯಿತನಾಗಿದ್ದಾರೆ, ಬ್ರಹ್ಮಾ-ವಿಷ್ಣು-ಶಂಕರನೂ ಸಹ ರಚಯಿತನಾಗಿದ್ದಾನೆ, ಸರ್ವವ್ಯಾಪಿ ಎಂದು ಹೇಳಿದರೆ ಆಸ್ತಿಯ ಅಧಿಕಾರವೇ ಸಮಾಪ್ತಿಯಾಗುತ್ತದೆ. ತಂದೆಯು ಬಂದು ಎಲ್ಲರಿಗೆ ಆಸ್ತಿಯನ್ನು ಕೊಡುತ್ತಾರೆ. ಯಾರು ಮೊಟ್ಟ ಮೊದಲು ಸತ್ಯಯುಗದಲ್ಲಿ ಬರುವರೋ ಅವರೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಕ್ರಿಶ್ಚಿಯನ್ನರು ಹೆಚ್ಚೆಂದರೆ 40 ಜನ್ಮಗಳನ್ನು ತೆಗೆದುಕೊಳ್ಳಬಹುದು. ಒಬ್ಬ ಭಗವಂತನನ್ನು ಹುಡುಕುವುದಕ್ಕಾಗಿ ಎಷ್ಟೊಂದು ಪರಿಶ್ರಮ ಪಡುತ್ತಾರೆ. ಈಗ ನಿಮಗೆ ಯಾವುದೇ ಪರಿಶ್ರಮವಿಲ್ಲ, ಒಬ್ಬ ತಂದೆಯನ್ನು ನೆನಪು ಮಾಡಿದರೆ ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುತ್ತೀರಿ. ಇದು ಯಾತ್ರೆಯಾಗಿದೆ. ಇದು ಈಶ್ವರೀಯ ವಿಶ್ವವಿದ್ಯಾಲಯವಾಗಿದೆ. ನೀವಾತ್ಮರು ಓದುತ್ತೀರಿ, ಸಾಧು-ಸಂತರು ಆತ್ಮವು ನಿರ್ಲೇಪವೆಂದು ಹೇಳುತ್ತಾರೆ ಆದರೆ ಆತ್ಮವೇ ಕರ್ಮಗಳ ಅನುಸಾರ ಇನ್ನೊಂದು ಜನ್ಮವನ್ನು ತೆಗೆದುಕೊಳ್ಳುತ್ತದೆ. ಆತ್ಮವೇ ಒಳ್ಳೆಯ ಹಾಗೂ ಕೆಟ್ಟ ಕರ್ಮಗಳನ್ನು ಮಾಡುತ್ತದೆ. ಈ ಸಮಯದಲ್ಲಿ (ಕಲಿಯುಗದಲ್ಲಿ) ನಿಮ್ಮ ಕರ್ಮಗಳು ವಿಕರ್ಮಗಳಾಗುತ್ತವೆ. ಸತ್ಯಯುಗದಲ್ಲಿ ಕರ್ಮವು ಅಕರ್ಮವಾಗುತ್ತದೆ. ಅಲ್ಲಿ ವಿಕರ್ಮವಾಗುವುದಿಲ್ಲ, ಅದು ಪುಣ್ಯಾತ್ಮರ ಪ್ರಪಂಚವಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಒಬ್ಬ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಶ್ರೇಷ್ಠ ಕರ್ಮಗಳನ್ನೇ ಮಾಡಬೇಕಾಗಿದೆ. ತಂದೆಯು ಸಿಕ್ಕಿದ್ದಾರೆ ಅಂದಮೇಲೆ ಯಾವುದೇ ಪ್ರಕಾರದ ಪೆಟ್ಟು ತಿನ್ನಬಾರದು ಅರ್ಥಾತ್ ಹುಡುಕಾಡಬಾರದು.

2. ತಂದೆಯು ಯಾವ ಸ್ಮೃತಿ ತರಿಸಿದ್ದಾರೆಯೋ ಅದನ್ನು ಸ್ಮೃತಿಯಲ್ಲಿ ಇಟ್ಟುಕೊಂಡು ಅಪಾರ ಖುಷಿಯಲ್ಲಿ ಇರಬೇಕಾಗಿದೆ. ಯಾವುದೇ ದೇಹಧಾರಿಯನ್ನು ನೆನಪು ಮಾಡಬಾರದು.

ವರದಾನ:
ನಿಮಿತ್ತನೆಂಬ ಸ್ಮೃತಿಯ ಮೂಲಕ ತಮ್ಮ ಪ್ರತಿಯೊಂದು ಸಂಕಲ್ಪದ ಮೇಲೆ ಗಮನವನ್ನಿಡುವ ನಿವಾರಣಾ ಸ್ವರೂಪ ಭವ.

ಸರ್ವರ ದೃಷ್ಟಿಯು ನಿಮಿತ್ತವಾಗಿರುವ ಆತ್ಮರ ಮೇಲಿರುತ್ತದೆ ಆದ್ದರಿಂದ ನಿಮಿತ್ತವಾಗಿ ಇರುವವರು ವಿಶೇಷವಾಗಿ ಪ್ರತಿಯೊಂದು ಸಂಕಲ್ಪದ ಮೇಲೆ ಗಮನವನ್ನಿಡಬೇಕಾಗುವುದು. ಒಂದುವೇಳೆ ನಿಮಿತ್ತವಾಗಿರುವ ಮಕ್ಕಳೂ ಸಹ ಯಾವುದೇ ಕಾರಣಗಳನ್ನು ಹೇಳುತ್ತಾರೆಂದರೆ, ಅವರನ್ನು ಫಾಲೋ ಮಾಡುವವರಿಗೂ ಸಹ ಅನೇಕ ಕಾರಣಗಳನ್ನು ತಿಳಿಸಿ ಬಿಡುತ್ತಾರೆ. ಒಂದುವೇಳೆ ನಿಮಿತ್ತವಾಗಿ ಇರುವವರಲ್ಲಿ ಯಾವುದೇ ಕೊರತೆಯಿದ್ದರೆ, ಅದನ್ನು ಬಚ್ಚಿಡಲು ಸಾಧ್ಯವಿಲ್ಲ. ಆದ್ದರಿಂದ ವಿಶೇಷವಾಗಿ ತಮ್ಮ ಸಂಕಲ್ಪ, ವಾಣಿ ಹಾಗೂ ಕರ್ಮದ ಮೇಲೆ ಗಮನವನ್ನಿಟ್ಟು ನಿವಾರಣಾ ಸ್ವರೂಪರಾಗಿರಿ.

ಸ್ಲೋಗನ್:
ಯಾರಲ್ಲಿ ತಮ್ಮ ಗುಣ ಅಥವಾ ವಿಶೇಷತೆಗಳ ಬಗ್ಗೆಯೂ ಅಭಿಮಾನವಿರುವುದಿಲ್ಲವೋ ಅವರು ಜ್ಞಾನಿ ಆತ್ಮರಾಗಿದ್ದಾರೆ.


ಮಾತೇಶ್ವರಿಯವರ ಅಮೂಲ್ಯ ಮಹಾವಾಕ್ಯ:

1. ಮನುಷ್ಯನ ಗುರಿ-ಉದ್ದೇಶವೇನು? ಅದನ್ನು ಪ್ರಾಪ್ತಿ ಮಾಡುಕೊಲ್ಳುವ ಯಥಾರ್ಥ ವಿಧಿ!

ಪ್ರತಿಯೊಬ್ಬ ಮನುಷ್ಯನು ಅವಶ್ಯವಾಗಿ ಇದನ್ನು ವಿಚಾರ ಮಾಡಬೇಕು - ತಮ್ಮ ಒಳ್ಳೆಯ ಜೀವನವನ್ನು ರೂಪಿಸಿಕೊಳ್ಳುವುದಕ್ಕಾಗಿ ಯಾವುದು ಅವಶ್ಯಕವಿದೆ? ಮನುಷ್ಯನ ಜೀವನವು ಏತಕ್ಕಾಗಿ ಇದೆ, ಅದರಲ್ಲಿ ಏನು ಮಾಡಬೇಕು? ಈಗ ತಮ್ಮ ಹೃದಯದಲ್ಲಿ ಕೇಳಿಕೊಳ್ಳಿರಿ - ನನ್ನ ಜೀವನದಲ್ಲಿ ಪರಿವರ್ತನೆ ಆಗುತ್ತಿದೆಯೇ? ಮನುಷ್ಯ ಜೀವನದಲ್ಲಿ ಮೊಟ್ಟ ಮೊದಲು ತಿಳುವಳಿಕೆ ಇರಬೇಕು, ನಂತರ ಈ ಜೀವನದ ಗುರಿ-ಉದ್ದೇಶವೇನಾಗಿದೆ? ಈ ಜೀವನಕ್ಕೆ ಸರ್ವ ಸುಖ ಹಾಗೂ ಶಾಂತಿ ಇರಬೇಕೆಂದು ಅವಶ್ಯವಾಗಿ ಒಪ್ಪುತ್ತಾರೆ. ಅದೀಗ ಸಿಗುತ್ತಿದೆಯೇ? ಈ ಕಗ್ಗತ್ತಲಿನ ಕಲಿಯುಗದಲ್ಲಂತು ದುಃಖ-ಅಶಾಂತಿಯಲ್ಲದೆ ಮತ್ತೇನೂ ಇಲ್ಲ, ಈಗ ಸುಖ-ಶಾಂತಿಯು ಹೇಗೆ ಸಿಗುತ್ತದೆ? ಎಂಬುದನ್ನು ಯೋಚಿಸಬೇಕಾಗಿದೆ. ಸುಖ ಮತ್ತು ಶಾಂತಿ ಎಂಬ ಎರಡು ಶಬ್ಧಗಳೇನಿವೆ, ಅವಶ್ಯವಾಗಿ ಅದು ಇದೇ ಪ್ರಪಂಚದಲ್ಲಿ ಯಾವಾಗ ಬಂದಿರಬಹುದು, ಆಗಲೇ ಈ ವಸ್ತುವಿನ ಬೇಡಿಕೆ ಉಂಟಾಗುತ್ತದೆ. ಒಂದುವೇಳೆ ಯಾವುದೇ ಮನುಷ್ಯನು ಹೇಳುವನು - ನಾವು ಇಂತಹ ಪ್ರಪಂಚವನ್ನು ನೋಡಿಯೇ ಇಲ್ಲ ಅಂದಮೇಲೆ ನೀವು ಆ ಪ್ರಪಂಚವನ್ನು ಹೇಗೆ ಒಪ್ಪುತ್ತೀರಿ? ಇದರ ಬಗ್ಗೆ ತಿಳಿಸಲಾಗುತ್ತದೆ - ಇದು ದಿನ ಮತ್ತು ರಾತ್ರಿ ಎಂಬ ಯಾವ ಎರಡು ಶಬ್ಧಗಳಿವೆಯೋ ಅದು ಅವಶ್ಯವಾಗಿ ನಡೆಯುತ್ತಿರುತ್ತದೆ. ನಾವಂತು ರಾತ್ರಿಯನ್ನಷ್ಟೇ ನೋಡಿದ್ದೇವೆ ಅಂದಾಗ ದಿನವನ್ನು ಹೇಗೆ ಒಪ್ಪುತ್ತೇವೆ? ಈ ರೀತಿ ಯಾರೂ ಸಹ ಹೇಳಲು ಸಾಧ್ಯವಿಲ್ಲ. ಆದರೆ ಯಾವಾಗ ಎರಡು ಹೆಸರುಗಳಿವೆ ಅಂದಮೇಲೆ ಅದರ ಪಾತ್ರವೂ ಇರಬೇಕು. ಅದೇರೀತಿ ನಾವೂ ಕೇಳಿದ್ದೇವೆ - ಈ ಕಲಿಯುಗಕ್ಕಿಂತಲೂ ಶ್ರೇಷ್ಠವಾದ ಸ್ಥಿತಿಯೂ ಇತ್ತು, ಅದಕ್ಕೆ ಸತ್ಯಯುಗವೆಂದು ಹೇಳಲಾಗುತ್ತದೆ. ಒಂದುವೇಳೆ ಸಮಯವು ಇದೇರೀತಿ (ಕಲಿಯುಗ) ನಡೆಯುತ್ತಿದ್ದರೆ ಆ ಸಮಯಕ್ಕೆ ಸತ್ಯಯುಗವೆಂದು ಏಕೆ ಕೊಡಲಾಯಿತು! ಅಂದಮೇಲೆ ಈ ಸೃಷ್ಟಿಯು ತನ್ನ ಸ್ಥಿತಿಯು ಬದಲಾಯಿಸುತ್ತಾ ಇರುತ್ತದೆ, ಹೇಗೆ ಕಿಶೋರಾವಸ್ಥೆ, ಬಾಲ್ಯಾವಸ್ಥೆ, ಯೌವನವಸ್ಥೆ, ವೃದ್ಧಾಪ್ಯ.... ಹೀಗೆ ಬದಲಾಗುತ್ತಿರುತ್ತದೆಯೋ ಹಾಗೆಯೇ ಸೃಷ್ಟಿಯು ಪರಿವರ್ತನೆ ಆಗುತ್ತಿರುತ್ತದೆ. ಇಂದಿನ ಜೀವನ ಹಾಗೂ ಆ ಜೀವನದಲ್ಲಿ ಎಷ್ಟೊಂದು ಅಂತರವಿದೆ! ಅಂದಮೇಲೆ ಆ ಶ್ರೇಷ್ಠ ಜೀವನವನ್ನು ತಯಾರು ಮಾಡಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ.

2. "ನಿರಾಕಾರಿ ಪ್ರಪಂಚ, ಆಕಾರಿ ಪ್ರಪಂಚ ಹಾಗೂ ಸಾಕಾರಿ ಪ್ರಪಂಚದ ವಿಸ್ತಾರ"

ಇಡೀ ಬ್ರಹ್ಮಾಂಡದಲ್ಲಿ ಮೂರು ಪ್ರಪಂಚಗಳಿವೆ - 1. ನಿರಾಕಾರಿ ಪ್ರಪಂಚ, 2. ಆಕಾರಿ 3. ಸಾಕಾರಿ ಪ್ರಪಂಚ. ಈಗ ಇದನ್ನಂತು ತಿಳಿದಿದ್ದೀರಿ - ನಿರಾಕಾರಿ ಸೃಷ್ಟಿಯಲ್ಲಂತು ಆತ್ಮರು ನಿವಾಸ ಮಾಡುತ್ತಾರೆ ಹಾಗೂ ಸಾಕಾರ ಸೃಷ್ಟಿಯಲ್ಲಿ ಸಾಕಾರ ಮನುಷ್ಯ ಸಂಪ್ರದಾಯದವರು ನಿವಾಸ ಮಾಡುತ್ತಾರೆ. ಉಳಿದದ್ದು ಆಕಾರಿ ಸೂಕ್ಷ್ಮ ಸೃಷ್ಠಿ. ಈಗ ವಿಚಾರ ನಡೆಯುತ್ತದೆ - ಈ ಆಕಾರಿ ಸೃಷ್ಟಿಯು ಸದಾಕಾಲ ಇರುತ್ತದೆಯೇ ಅಥವಾ ಅದರ ಪಾತ್ರವು ಸ್ವಲ್ಪ ಸಮಯದ್ದಾಗಿದೆಯೇ? ಪ್ರಪಂಚದ ಮನುಷ್ಯರಂತು ತಿಳಿಯುತ್ತಾರೆ - ಸೂಕ್ಷ್ಮವಾದ ಯಾವುದೋ ಪ್ರಪಂಚವು ಮೇಲಿದೆ, ಅಲ್ಲಿ ಫರಿಶ್ತೆಗಳಿರುತ್ತಾರೆ, ಅದಕ್ಕೇ ಸ್ವರ್ಗವೆಂದು ಹೇಳುವರು. ಅಲ್ಲಿ ಹೋಗಿ ಸುಖವನ್ನು ಅನುಭವಿಸುತ್ತಾರೆ. ಆದರೆ ಈಗ ಇದಂತು ಸ್ಪಷ್ಟವಿದೆ - ಸ್ವರ್ಗ ಹಾಗೂ ನರಕವು ಇದೇ ಸೃಷ್ಟಿಯಲ್ಲಿ ಆಗುತ್ತದೆ. ಉಳಿದ ಈ ಸೂಕ್ಷ್ಮವಾದ ಆಕಾರಿ ಸೃಷ್ಟಿಯೇನಿದೆ, ಅಲ್ಲಿ ಶುದ್ಧ ಆತ್ಮರುಗಳ ಸಾಕ್ಷಾತ್ಕಾರವಾಗುತ್ತದೆ, ಅದಂತು ದ್ವಾಪರದಿಂದ ಯಾವಾಗ ಭಕ್ತಿ ಮಾರ್ಗವು ಆರಂಭವಾದಾಗಿನಿಂದ ಪ್ರಾರಂಭವಾಗಿದೆ. ಇದರಿಂದ ಸಿದ್ಧವಾಗುತ್ತದೆ - ನಿರಾಕಾರಿ ಸೃಷ್ಟಿ ಹಾಗೂ ಸಾಕಾರ ಸೃಷ್ಟಿಯು ಸದಾಕಾಲವೂ ಇದ್ದೇ ಇದೆ. ಉಳಿದ ಸೂಕ್ಷ್ಮ ಪ್ರಪಂಚವಂತು ಸದಾಕಾಲ ಎಂದು ಹೇಳುವುದಿಲ್ಲ, ಅದರಲ್ಲಿಯೂ ವಿಶೇಷವಾಗಿ ಬ್ರಹ್ಮಾ, ವಿಷ್ಣು, ಶಂಕರನ ಸಾಕ್ಷಾತ್ಕಾರವೂ ಸಹ ನಮಗೆ ಇದೇ ಸಮಯದಲ್ಲಾಗುವುದೆ ಏಕೆಂದರೆ ಇದೇ ಸಮಯದಲ್ಲಿ ಪರಮಾತ್ಮನು ಮೂರು ಕರ್ತವ್ಯಗಳನ್ನು ಮಾಡುವುದಕ್ಕಾಗಿ, ಮೂರು ರೂಪಗಳನ್ನು ರಚಿಸುವರು. ಒಳ್ಳೆಯದು. ಓಂ ಶಾಂತಿ.