02.11.20         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಇದು ಪುರುಷೋತ್ತಮ ಸಂಗಮಯುಗವಾಗಿದೆ, ಹಳೆಯ ಪ್ರಪಂಚವು ಪರಿವರ್ತನೆಯಾಗಿ ಹೊಸ ಪ್ರಪಂಚವಾಗುತ್ತಿದೆ, ನೀವೀಗ ಪುರುಷಾರ್ಥ ಮಾಡಿ ಉತ್ತಮ ದೇವ ಪದವಿಯನ್ನು ಪಡೆಯಬೇಕಾಗಿದೆ

ಪ್ರಶ್ನೆ:
ಸೇವಾಧಾರಿ ಮಕ್ಕಳ ಬುದ್ಧಿಯಲ್ಲಿ ಯಾವ ಮಾತು ಸದಾ ನೆನಪಿರುತ್ತದೆ?

ಉತ್ತರ:
ಅವರಿಗೆ ಸದಾ ನೆನಪಿರುತ್ತದೆ ಧನ ದಾನ ಮಾಡಿದರೆ ಧನವೆಂದೂ ಖಾಲಿಯಾಗುವುದಿಲ್ಲ.... ಆದ್ದರಿಂದ ಅವರು ದಿನ-ರಾತ್ರಿ ನಿದ್ರೆಯನ್ನೂ ತ್ಯಾಗ ಮಾಡಿ ಜ್ಞಾನ ಧನದ ದಾನ ಮಾಡುತ್ತಿರುತ್ತಾರೆ. ಸುಸ್ತಾಗುವುದಿಲ್ಲ, ಆದರೆ ಒಂದುವೇಳೆ ಸ್ವಯಂನಲ್ಲಿ ಯಾವುದೇ ಅವಗುಣವಿದ್ದರೆ ಸರ್ವೀಸ್ ಮಾಡುವುದಕ್ಕೂ ಉಮ್ಮಂಗ ಬರುವುದಿಲ್ಲ.

ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳ ಪ್ರತಿ ತಂದೆಯು ತಿಳಿಸುತ್ತಾರೆ. ಮಕ್ಕಳಿಗೆ ತಿಳಿದಿದೆ, ಪರಮಪಿತನೇ ಪ್ರತಿನಿತ್ಯವೂ ತಿಳಿಸುತ್ತಾರೆ. ಹೇಗೆ ಶಿಕ್ಷಕರು ಪ್ರತಿನಿತ್ಯವೂ ಓದಿಸುತ್ತಾರೆ. ತಂದೆಯು ಕೇವಲ ಶಿಕ್ಷಣ ಕೊಡುತ್ತಾರೆ, ಸಂಭಾಲನೆ ಮಾಡುತ್ತಿರುತ್ತಾರೆ ಏಕೆಂದರೆ ತಂದೆಯ ಮನೆಯಲ್ಲಿಯೇ ಮಕ್ಕಳಿರುತ್ತಾರೆ. ತಂದೆ-ತಾಯಿ ಜೊತೆಯಿರುತ್ತಾರೆ ಆದರೆ ಇಲ್ಲಿ ಇದು ಅದ್ಭುತವಾದ ಮಾತಾಗಿದೆ. ಆತ್ಮಿಕ ತಂದೆಯ ಬಳಿ ನೀವು ಇರುತ್ತೀರಿ. ಮೊಟ್ಟ ಮೊದಲಿಗೆ ಆತ್ಮಿಕ ತಂದೆಯ ಬಳಿ ಮೂಲವತನದಲ್ಲಿರುತ್ತೀರಿ ನಂತರ ಕಲ್ಪದಲ್ಲಿ ಒಂದೇ ಬಾರಿ ಮಕ್ಕಳಿಗೆ ಆಸ್ತಿಯನ್ನು ಕೊಡಲು ಹಾಗೂ ಪಾವನರನ್ನಾಗಿ ಮಾಡಲು, ಸುಖ-ಶಾಂತಿಯನ್ನು ಕೊಡಲು ಬರುತ್ತಾರೆ ಅಂದಮೇಲೆ ಅವಶ್ಯವಾಗಿ ಕೆಳಗೆ ಬಂದು ಇರುತ್ತಾರೆ. ಇದರಲ್ಲಿಯೇ ಮನುಷ್ಯರಿಗೆ ಗೊಂದಲವಿದೆ. ಸಾಧಾರಣ ತನುವಿನಲ್ಲಿ ಪ್ರವೇಶ ಮಾಡುತ್ತಾರೆಂದು ಗಾಯನವೂ ಇದೆ. ಸಾಧಾರಣ ಶರೀರವೆಂದರೆ ಎಲ್ಲಿಂದಲೋ ಹಾರಿ ಬರುವುದಿಲ್ಲ. ಅವಶ್ಯವಾಗಿ ಮನುಷ್ಯನ ಶರೀರದಲ್ಲಿಯೇ ಬರುತ್ತಾರೆ ಮತ್ತು ತಿಳಿಸುತ್ತಾರೆ - ನಾನು ಈ ತನುವಿನಲ್ಲಿ ಬಂದು ಪ್ರವೇಶ ಮಾಡುತ್ತೇನೆ. ಈ ಮಕ್ಕಳೂ ಸಹ ನೀವು ತಿಳಿದುಕೊಂಡಿದ್ದೀರಿ - ತಂದೆಯು ನಮಗೆ ಸ್ವರ್ಗದ ಆಸ್ತಿಯನ್ನು ಕೊಡಲು ಬಂದಿದ್ದಾರೆ. ಅವಶ್ಯವಾಗಿ ನಾವು ಯೋಗ್ಯರಿಲ್ಲ, ಪತಿತರಾಗಿ ಬಿಟ್ಟಿದ್ದೇವೆ. ಹೇ ಪತಿತ-ಪಾವನ ಬನ್ನಿ, ಬಂದು ನಾವು ಪತಿತರನ್ನು ಪಾವನ ಮಾಡಿ ಎಂದು ಎಲ್ಲರೂ ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಕಲ್ಪ-ಕಲ್ಪವೂ ನನಗೆ ಪತಿತರನ್ನು ಪಾವನ ಮಾಡುವ ಕೆಲಸವು ಸಿಕ್ಕಿದೆ. ಹೇ ಮಕ್ಕಳೇ, ಈಗ ಈ ಪತಿತ ಪ್ರಪಂಚವನ್ನು ಪಾವನವನ್ನಾಗಿ ಮಾಡಬೇಕಾಗಿದೆ. ಹಳೆಯ ಪ್ರಪಂಚ ಪತಿತ ಎಂತಲೂ, ಹೊಸ ಪ್ರಪಂಚಕ್ಕೆ ಪಾವನವೆಂದು ಹೇಳುತ್ತಾರೆ ಅಂದರೆ ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡಲು ತಂದೆಯು ಬಂದಿದ್ದಾರೆ. ಕಲಿಯುಗಕ್ಕೆ ಯಾರೂ ಹೊಸ ಪ್ರಪಂಚವೆಂದು ಹೇಳುವುದಿಲ್ಲ. ಇವು ತಿಳಿದುಕೊಳ್ಳುವ ಮಾತಲ್ಲವೆ. ಕಲಿಯುಗವು ಹಳೆಯ ಪ್ರಪಂಚವಾಗಿದೆ ಅಂದಾಗ ತಂದೆಯೂ ಸಹ ಹಳೆಯ ಮತ್ತು ಹೊಸದರ ಸಂಗಮದಲ್ಲಿಯೇ ಬರುತ್ತಾರೆ. ನೀವು ಎಲ್ಲಿಯಾದರೂ ತಿಳಿಸುವಾಗ ಹೇಳಿ, ಇದು ಪುರುಷೋತ್ತಮ ಸಂಗಮಯುಗವಾಗಿದೆ, ತಂದೆಯು ಬಂದಿದ್ದಾರೆ - ಇಡೀ ಪ್ರಪಂಚದಲ್ಲಿ ಇದು ಪುರುಷೋತ್ತಮ ಸಂಗಮಯುಗವೆಂದು ತಿಳಿದಿರುವ ಮನುಷ್ಯರು ಯಾರೊಬ್ಬರೂ ಇಲ್ಲ. ಅವಶ್ಯವಾಗಿ ನೀವು ಸಂಗಮಯುಗದಲ್ಲಿದ್ದೀರಿ ಆದ್ದರಿಂದಲೇ ತಿಳಿಸುತ್ತೀರಿ. ಮುಖ್ಯ ಮಾತು ಸಂಗಮಯುಗದ್ದಾಗಿದೆ ಅಂದಾಗ ಈ ಜ್ಞಾನ ಬಿಂದುಗಳು ಬಹಳ ಅವಶ್ಯವಾಗಿದೆ. ಯಾವ ಮಾತನ್ನು ಯಾರೂ ತಿಳಿದುಕೊಂಡಿಲ್ಲವೋ ಅದನ್ನು ತಿಳಿಸಬೇಕಾಗಿದೆ ಆದ್ದರಿಂದ ತಂದೆಯು ತಿಳಿಸಿದ್ದರು, ಇದನ್ನು ಅವಶ್ಯವಾಗಿ ಬರೆಯಿರಿ - ಈಗ ಪುರುಷೋತ್ತಮ ಸಂಗಮಯುಗವಾಗಿದೆ. ಹೊಸ ಯುಗ ಅರ್ಥಾತ್ ಸತ್ಯಯುಗದ ಚಿತ್ರವೂ ಇದೆ ಅಂದಮೇಲೆ ಈ ಲಕ್ಷ್ಮೀ-ನಾರಾಯಣರು ಸತ್ಯಯುಗೀ ಹೊಸ ಪ್ರಪಂಚದ ಮಾಲೀಕರಾಗಿದ್ದಾರೆಂಬುದು ಮನುಷ್ಯರಿಗೆ ಹೇಗೆ ಅರ್ಥವಾಗಬೇಕು! ಆದ್ದರಿಂದ ಅದರಮೇಲೆ ಪುರುಷೋತ್ತಮ ಸಂಗಮಯುಗ ಎಂಬ ಶಬ್ಧವು ಖಂಡಿತ ಇರಬೇಕಾಗಿದೆ. ಇದನ್ನು ಬರೆಯಲೇಬೇಕಾಗಿದೆ ಏಕೆಂದರೆ ಇದೇ ಮುಖ್ಯ ಮಾತಾಗಿದೆ. ಕಲಿಯುಗದಲ್ಲಿ ಇನ್ನೂ ಬಹಳಷ್ಟು ವರ್ಷಗಳಿದೆಯೆಂದು ಮನುಷ್ಯರು ತಿಳಿದುಕೊಂಡಿದ್ದಾರೆ. ಸಂಪೂರ್ಣ ಘೋರ ಅಂಧಕಾರದಲ್ಲಿದ್ದಾರೆ ಅಂದಾಗ ಈ ಲಕ್ಷ್ಮೀ-ನಾರಾಯಣರು ಹೊಸ ಪ್ರಪಂಚದ ಮಾಲೀಕರಾಗಿದ್ದಾರೆ ಎಂಬುದು ತಿಳಿಸಬೇಕಾಗಿದೆ. ಇದು ಸಂಪೂರ್ಣ ಸಾಕ್ಷ್ಯಾಧಾರವಾಗಿದೆ. ಇಂತಹ ರಾಜ್ಯದ ಸ್ಥಾಪನೆಯಾಗುತ್ತಿದೆ ಎಂದು ನೀವು ಹೇಳುತ್ತೀರಿ. ನವಯುಗ ಬರಲಿದೆ, ಅಜ್ಞಾನ ನಿದ್ರೆಯಿಂದ ಜಾಗೃತರಾಗಿ ಎಂದು ಗೀತೆಯೂ ಇದೆ. ನೀವು ಇದನ್ನು ತಿಳಿದುಕೊಂಡಿದ್ದೀರಿ, ಈಗ ಸಂಗಮಯುಗವಾಗಿದೆ ಇದಕ್ಕೆ ನವಯುಗವೆಂದು ಹೇಳುವುದಿಲ್ಲ. ಸಂಗಮಕ್ಕೆ ಸಂಗಮಯುಗವೆಂದೇ ಹೇಳಲಾಗುತ್ತದೆ. ಇದು ಪುರುಷೋತ್ತಮ ಸಂಗಮಯುಗವಾಗಿದೆ. ಈ ಸಮಯದಲ್ಲಿಯೇ ಹಳೆಯ ಪ್ರಪಂಚವು ಸಮಾಪ್ತಿಯಾಗಿ ಹೊಸ ಪ್ರಪಂಚವು ಸ್ಥಾಪನೆಯಾಗುತ್ತಿದೆ. ಮನುಷ್ಯರಿಂದ ದೇವತೆಗಳಾಗುತ್ತಿದ್ದೀರಿ ರಾಜಯೋಗವನ್ನು ಕಲಿಯುತ್ತಿದ್ದೀರಿ. ದೇವತೆಗಳಲ್ಲಿಯೂ ಉತ್ತಮ ಪದವಿಯು ಈ ಲಕ್ಷ್ಮೀ-ನಾರಾಯಣರದಾಗಿದೆ. ಇವರೂ ಮನುಷ್ಯರೇ ಆಗಿದ್ದಾರೆ ಆದರೆ ಇವರಲ್ಲಿ ದೈವೀ ಗುಣಗಳಿವೆ ಆದ್ದರಿಂದ ದೇವಿ-ದೇವತೆಗಳೆಂದು ಹೇಳಲಾಗುತ್ತದೆ. ಎಲ್ಲದಕ್ಕಿಂತ ಉತ್ತಮ ಗುಣವು ಪವಿತ್ರತೆಯಾಗಿದೆ ಆದ್ದರಿಂದಲೇ ಮನುಷ್ಯರು ದೇವತೆಗಳ ಮುಂದೆ ಹೋಗಿ ತಲೆ ಬಾಗುತ್ತಾರೆ. ಯಾರು ಸರ್ವೀಸ್ ಮಾಡುತ್ತಿರುವರೋ ಅವರ ಬುದ್ಧಿಯಲ್ಲಿಯೇ ಇವೆಲ್ಲಾ ಮಾತುಗಳು ಧಾರಣೆಯಾಗುವುದು. ಧನ ದಾನ ಮಾಡಿದರೆ ಅದೆಂದೂ ಖಾಲಿಯಾಗುವುದಿಲ್ಲ ಎಂದು ಹೇಳಲಾಗುತ್ತದೆ. ಜ್ಞಾನವು ಬಹಳ ಸಹಜವಾಗಿದೆ ಆದರೆ ಕೆಲವರಲ್ಲಿ ಚೆನ್ನಾಗಿ ಧಾರಣೆಯಾಗುತ್ತದೆ, ಕೆಲವರಲ್ಲಿ ಆಗುವುದಿಲ್ಲ. ಯಾರಲ್ಲಿ ಅವಗುಣಗಳಿವೆಯೋ ಅವರು ಸೇವಾಕೇಂದ್ರವನ್ನು ಸಂಭಾಲನೆ ಮಾಡಲೂ ಸಾಧ್ಯವಿಲ್ಲ ಆದ್ದರಿಂದ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಪ್ರದರ್ಶನಿಯಲ್ಲಿಯೂ ನೇರವಾಗಿ ಶಬ್ಧಗಳನ್ನು ತಿಳಿಸಬೇಕು. ಪುರುಷೋತ್ತಮ ಸಂಗಮಯುಗದ ಬಗ್ಗೆ ಮುಖ್ಯವಾಗಿ ತಿಳಿಸಿಕೊಡಬೇಕು. ಈ ಸಂಗಮದಲ್ಲಿಯೂ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತಿದೆ. ಯಾವಾಗ ಈ ಧರ್ಮವಿತ್ತೋ ಆಗ ಮತ್ತ್ಯಾವುದೇ ಧರ್ಮವಿರಲಿಲ್ಲ. ಈ ಮಹಾಭಾರತ ಯುದ್ಧವೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ನೂರುವರ್ಷಗಳಲ್ಲಿ ಎಲ್ಲರೂ ಸಮಾಪ್ತಿಯಾಗುತ್ತಾರೆ. ಸಂಗಮಯುಗಕ್ಕೆ ಕೊನೆ ಪಕ್ಷ 100 ವರ್ಷಗಳಾದರೂ ಬೇಕಲ್ಲವೆ. ಇಡೀ ಪ್ರಪಂಚವೇ ಹೊಸದಾಗುವುದಿದೆ. ಹೊಸ ದೆಹಲಿಯನ್ನು ಮಾಡುವುದರಲ್ಲಿ ಎಷ್ಟು ವರ್ಷಗಳು ಹಿಡಿಸಿತು!

ನೀವು ತಿಳಿದುಕೊಂಡಿದ್ದೀರಿ ಭಾರತದಲ್ಲಿಯೇ ಹೊಸ ಪ್ರಪಂಚವಾಗುತ್ತದೆ ಮತ್ತು ಹಳೆಯದು ಸಮಾಪ್ತಿಯಾಗುತ್ತದೆ. ಅಲ್ಪ ಸ್ವಲ್ಪ ಉಳಿದಿರುತ್ತದೆಯಲ್ಲವೆ. ಪ್ರಳಯವಂತೂ ಆಗುವುದಿಲ್ಲ. ಇವೆಲ್ಲಾ ಮಾತುಗಳು ನಿಮ್ಮ ಬುದ್ಧಿಯಲ್ಲಿದೆ. ಈಗ ಸಂಗಮಯುಗವಾಗಿದೆ, ಹೊಸ ಪ್ರಪಂಚದಲ್ಲಿ ಅವಶ್ಯವಾಗಿ ಈ ದೇವಿ-ದೇವತೆಗಳಿದ್ದರು, ಪುನಃ ಇವರೇ ಆಗುತ್ತಾರೆ. ಇದು ರಾಜಯೋಗದ ವಿದ್ಯೆಯಾಗಿದೆ. ಒಂದುವೇಳೆ ಇದನ್ನು ವಿವರವಾಗಿ ತಿಳಿಸಲು ಆಗದಿದ್ದರೆ ಕೇವಲ ಒಂದು ಮಾತನ್ನು ತಿಳಿಸಿ - ಪರಮಪಿತ ಪರಮಾತ್ಮ, ಯಾರು ಎಲ್ಲರ ತಂದೆಯಾಗಿದ್ದಾರೆಯೋ ಅವರನ್ನು ಎಲ್ಲರೂ ನೆನಪು ಮಾಡುತ್ತಾರೆ. ಅವರೇ ನಾವೆಲ್ಲಾ ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ನೀವೀಗ ಪತಿತರಾಗಿ ಬಿಟ್ಟಿದ್ದೀರಿ. ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತೀರಿ. ಅಂದಮೇಲೆ ಅವಶ್ಯವಾಗಿ ಕಲಿಯುಗದಲ್ಲಿ ಪತಿತರಿದ್ದಾರೆ. ಸತ್ಯಯುಗದಲ್ಲಿ ಪಾವನರಿರುತ್ತಾರೆ. ಈಗ ಪರಮಪಿತ ಪರಮಾತ್ಮನು ತಿಳಿಸುತ್ತಾರೆ ದೇಹ ಸಹಿತವಾಗಿ ಇವೆಲ್ಲಾ ಪತಿತ ಸಂಬಂಧಗಳನ್ನು ಬಿಟ್ಟು ನನ್ನೊಬ್ಬನನ್ನೇ ನೆನಪು ಮಾಡಿರಿ ಆಗ ಪಾವನರಾಗುವಿರಿ. ಇದು ಗೀತೆಯಲ್ಲಿನ ಶಬ್ಧವಾಗಿದೆ ಮತ್ತು ಗೀತಾ ಯುಗವಾಗಿದೆ. ಗೀತೆಯನ್ನು ಭಗವಂತನು ಸಂಗಮಯುಗದಲ್ಲಿಯೂ ಉಚ್ಛರಿಸಿದ್ದಾರೆ, ಆಗ ವಿನಾಶವೂ ಆಗಿತ್ತು, ತಂದೆಯು ರಾಜಯೋಗವನ್ನು ಕಲಿಸಿದ್ದರು. ರಾಜಧಾನಿಯು ಸ್ಥಾಪನೆಯಾಗಿತ್ತು, ಇದು ಪುನಃ ಈಗ ಅವಶ್ಯವಾಗಿ ಸ್ಥಾಪನೆಯಾಗುವುದು. ಇದೆಲ್ಲವನ್ನೂ ಆತ್ಮಿಕ ತಂದೆಯೇ ತಿಳಿಸುತ್ತಾರಲ್ಲವೆ. ಈ ತನುವಿನಲ್ಲಿ ಬರದಿದ್ದರೆ ಹೋಗಲಿ, ಮತ್ತ್ಯಾರಲ್ಲಿಯಾದರೂ ತಂದೆಯು ಬರಲೇಬೇಕಲ್ಲವೆ. ಇದೆಲ್ಲವನ್ನೂ ತಂದೆಯೇ ತಿಳಿಸುತ್ತಾರೆ. ನಾವು ಇವರ (ಬ್ರಹ್ಮಾ) ಹೆಸರನ್ನು ತೆಗೆದುಕೊಳ್ಳುವುದಿಲ್ಲ. ತಂದೆಯೇ ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನೀವು ಪಾವನರಾಗಿ ನನ್ನ ಬಳಿ ಬಂದು ಬಿಡುವಿರಿ. ಎಷ್ಟು ಸಹಜವಾಗಿದೆ! ಕೇವಲ ನನ್ನನ್ನು ನೆನಪು ಮಾಡಿ ಮತ್ತು 84 ಜನ್ಮಗಳ ಚಕ್ರವು ಬುದ್ಧಿಯಲ್ಲಿರಲಿ. ಯಾರು ಧಾರಣೆ ಮಾಡುವರೋ ಅವರು ಚಕ್ರವರ್ತಿ ರಾಜರಾಗುವರು. ಈ ಸಂದೇಶವು ಎಲ್ಲಾ ಧರ್ಮದವರಿಗಾಗಿ ಇದೆ. ಎಲ್ಲರೂ ಮನೆಗೆ ಹೋಗಬೇಕಲ್ಲವೆ. ನಾವೂ ಸಹ ಮನೆಯ ಮಾರ್ಗವನ್ನು ತಿಳಿಸುತ್ತೇವೆ. ಪಾದ್ರಿ ಮುಂತಾದವರು ಯಾರೇ ಆಗಲಿ ನೀವು ಅವರಿಗೆ ತಂದೆಯ ಸಂದೇಶವನ್ನು ಕೊಡಬಹುದು. ನಿಮಗೆ ಬಹಳ ಖುಷಿಯ ನಶೆಯೇರಬೇಕು - ಪರಮಪಿತ ಪರಮಾತ್ಮನು ತಿಳಿಸುತ್ತಾರೆ, ನನ್ನೊಬ್ಬನನ್ನೇ ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುವವು. ಎಲ್ಲರಿಗೂ ಇದನ್ನೇ ನೆನಪು ತರಿಸಿ. ತಂದೆಯ ಸಂದೇಶವನ್ನು ತಿಳಿಸುವುದೇ ನಂಬರ್ವನ್ ಸರ್ವೀಸ್ ಆಗಿದೆ. ಗೀತಾಯುಗವೂ ಸಹ ಈಗ ಇದೆ. ತಂದೆಯೂ ಬಂದಿದ್ದಾರೆ ಆದ್ದರಿಂದ ಅದೇ ಚಿತ್ರವನ್ನು ಮೊಟ್ಟ ಮೊದಲಿಗೆ ಇಡಬೇಕು. ನಾವು ತಂದೆಯ ಸಂದೇಶವನ್ನು ಕೊಡಬಲ್ಲೆವು ಎಂದು ಯಾರು ತಿಳಿಯುವಿರೋ ಅವರು ತಯಾರಿರಬೇಕು. ನಾವು ಅಂಧರಿಗೆ ಊರುಗೋಲಾಗಬೇಕೆಂದು ಮನಸ್ಸಿನಲ್ಲಿ ಸಂಕಲ್ಪ ಬರಬೇಕು. ನೀವು ಯಾರಿಗೆ ಬೇಕಾದರೂ ಈ ಸಂದೇಶವನ್ನು ಕೊಡಬಲ್ಲಿರಿ. ಬ್ರಹ್ಮಾಕುಮಾರ-ಕುಮಾರಿಯರ ಹೆಸರನ್ನು ಕೇಳುತ್ತಿದ್ದಂತೆಯೇ ಹೆದರುತ್ತಾರೆ. ಆದ್ದರಿಂದ ತಿಳಿಸಿ - ನಾವು ಕೇವಲ ತಂದೆಯ ಸಂದೇಶವನ್ನು ಕೊಡುತ್ತೇವೆ. ಪರಮಪಿತ ಪರಮಾತ್ಮನು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ ಸಾಕು, ನಾವು ಯಾರ ನಿಂದನೆಯನ್ನೂ ಮಾಡುವುದಿಲ್ಲ. ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ. ನಾನು ಸರ್ವಶ್ರೇಷ್ಠ, ಪತಿತ-ಪಾವನನಾಗಿದ್ದೇನೆ. ನನ್ನನ್ನು ನೆನಪು ಮಾಡುವುದರಿಂದ ನಿಮ್ಮ ವಿಕರ್ಮಗಳು ವಿನಾಶವಾಗುತ್ತದೆ. ಇದನ್ನು ಬರೆದಿಟ್ಟುಕೊಳ್ಳಿ, ಇದು ಬಹಳ ಪ್ರಯೋಜನಕಾರಿ ಮಾತುಗಳಾಗಿವೆ. ಹೇಗೆ ಕೆಲವರು ಕೈಗಳ ಮೇಲೆ ಹಾಗೂ ಬಾಹುಗಳ ಮೇಲೆ ಶಬ್ಧಗಳನ್ನು ಬರೆಸಿಕೊಳ್ಳುತ್ತಾರಲ್ಲವೆ. ಇದನ್ನೂ ಸಹ ಬರೆಯಿರಿ - ಕೇವಲ ಇಷ್ಟು ತಿಳಿಸಿದರೂ ಸಾಕು, ದಯಾಹೃದಯಿ ಕಲ್ಯಾಣಕಾರಿಗಳಾಗುವಿರಿ. ತನ್ನೊಂದಿಗೆ ತಾನು ಪ್ರತಿಜ್ಞೆ ಮಾಡಿಕೊಳ್ಳಬೇಕು. ಅವಶ್ಯವಾಗಿ ಸರ್ವೀಸ್ ಮಾಡಬೇಕು ನಂತರ ಅದೇ ಹವ್ಯಾಸವಾಗುವುದು. ಇಲ್ಲಿಯೂ ಸಹ ನೀವು ತಿಳಿಸಿ ಚಿತ್ರಗಳನ್ನು ಕೊಡಬಹುದು. ಇದು ಸಂದೇಶ ಕೊಡುವ ವಸ್ತುಗಳಾಗಿವೆ. ಲಕ್ಷಾಂತರ ಸಂಖ್ಯೆಯಲ್ಲಿ ತಯಾರಾಗುತ್ತವೆ. ಮನೆ-ಮನೆಗೆ ಹೋಗಿ ಸಂದೇಶ ಕೊಡಬೇಕಾಗಿದೆ. ಯಾರಾದರೂ ಹಣ ಕೊಡಲಿ, ಬಿಡಲಿ ತಿಳಿಸಿ - ತಂದೆಯು ಬಡವರ ಬಂಧುವಾಗಿದ್ದಾರೆ. ಮನೆ-ಮನೆಗೆ ಸಂದೇಶ ಕೊಡುವುದು ನಿಮ್ಮ ಕರ್ತವ್ಯವಾಗಿದೆ. ಇವರು ಬಾಪ್ದಾದಾ ಆಗಿದ್ದಾರೆ. ಇವರಿಂದ ಈ ಆಸ್ತಿಯು ಸಿಗುತ್ತದೆ. ಇವರು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ, ಇವರದು (ಬ್ರಹ್ಮಾ) ಇದು ಅಂತಿಮ ಜನ್ಮವಾಗಿದೆ. ನಾವು ಬ್ರಾಹ್ಮಣರಾಗಿದ್ದೇವೆ ಮತ್ತೆ ನಾವೇ ದೇವತೆಗಳಾಗುವೆವು. ಬ್ರಹ್ಮಾರವರೂ ಬ್ರಾಹ್ಮಣನಾಗಿದ್ದಾರೆ, ಪ್ರಜಾಪಿತ ಬ್ರಹ್ಮನೆಂದರೆ ಒಬ್ಬರೇ ಇರುವುದಿಲ್ಲ ಅಲ್ಲವೆ. ಅವಶ್ಯವಾಗಿ ಬ್ರಾಹ್ಮಣ ವಂಶಾವಳಿಯೂ ಇರಬೇಕಲ್ಲವೆ. ಬ್ರಹ್ಮನಿಂದ ವಿಷ್ಣುದೇವತೆ, ಬ್ರಾಹ್ಮಣರು ಶಿಖೆಗೆ ಸಮಾನರಾಗಿದ್ದಾರೆ. ಅವರೇ ನಂತರ ದೇವತಾ, ಕ್ಷತ್ರಿಯ, ವೈಶ್ಯ, ಶೂದ್ರರಾಗುತ್ತಾರೆ. ಯಾರಾದರೂ ಅವಶ್ಯವಾಗಿ ನಿಮ್ಮ ಮಾತುಗಳನ್ನು ತಿಳಿದುಕೊಳ್ಳುತ್ತಾರೆ. ಪುರುಷರೂ ಸಹ ಸರ್ವೀಸ್ ಮಾಡಬಹುದು. ಮುಂಜಾನೆಯೆದ್ದು ಮನುಷ್ಯರು ಅಂಗಡಿಯನ್ನು ತೆರೆಯುವಾಗ ಮುಂಜಾನೆಯ ಸ್ವಾಮಿ... ಎಂದು ಹೇಳುತ್ತಾರೆ. ನೀವೂ ಸಹ ಬೆಳಗ್ಗೆ-ಬೆಳಗ್ಗೆ ಹೋಗಿ ತಂದೆಯ ಸಂದೇಶವನ್ನು ಕೊಡಿ. ತಿಳಿಸಿ, ನೀವು ಇವರನ್ನು ನೆನಪು ಮಾಡಿದರೆ ನಿಮ್ಮ ವ್ಯಾಪಾರಗಳು ಚೆನ್ನಾಗಿ ಆಗುವವು. ಮತ್ತು 21 ಜನ್ಮಗಳ ಆಸ್ತಿಯು ಸಿಗುವುದು. ಅಮೃತವೇಳೆಯ ಸಮಯವು ಚೆನ್ನಾಗಿರುತ್ತದೆ. ಇತ್ತೀಚೆಗೆ ಕಾರ್ಖಾನೆಗಳಲ್ಲಿ ಮಾತೆಯರೂ ಸಹ ಕೆಲಸ ಮಾಡುತ್ತಾರೆ. ಈ ಬ್ಯಾಡ್ಜನ್ನು ಮಾಡುವುದೂ ಸಹ ಬಹಳ ಸಹಜವಾಗಿದೆ.

ನೀವು ಮಕ್ಕಳಂತೂ ಹಗಲು-ರಾತ್ರಿ ಸೇವೆಯಲ್ಲಿ ತೊಡಗಬೇಕು. ವಿಶ್ರಾಂತಿ, ನಿದ್ರೆಯನ್ನೂ ಮಾಡಿರಿ. ತಂದೆಯ ಪರಿಚಯ ಸಿಕ್ಕಿದರೆ ಮನುಷ್ಯರು ಧಣಿಕರಾಗಿ ಬಿಡುತ್ತಾರೆ ಆದ್ದರಿಂದ ನೀವು ಯಾರಿಗಾದರೂ ಸಂದೇಶವನ್ನು ಕೊಡಬಹುದು. ನಿಮ್ಮ ಜ್ಞಾನವಂತೂ ಬಹಳ ಶ್ರೇಷ್ಠವಾಗಿದೆ, ಆದ್ದರಿಂದ ತಿಳಿಸಿ, ನಾವು ಒಬ್ಬ ತಂದೆಯನ್ನು ನೆನಪು ಮಾಡುತ್ತೇವೆ. ಕ್ರಿಸ್ತನ ಆತ್ಮವೂ ಸಹ ಅವರ ಮಗುವಾಗಿತ್ತು. ಆತ್ಮಗಳೆಲ್ಲರೂ ಅವರ ಮಕ್ಕಳಾಗಿದ್ದೇವೆ. ಆ ಪರಮಪಿತ ಪರಮಾತ್ಮನೇ ತಿಳಿಸುತ್ತಾರೆ - ಮತ್ತ್ಯಾವುದೇ ದೇಹಧಾರಿಗಳನ್ನು ನೆನಪು ಮಾಡಬೇಡಿ, ನೀವು ತಮ್ಮನ್ನು ಆತ್ಮನೆಂದು ತಿಳಿದು ನನ್ನೊಬ್ಬನನ್ನೇ ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗಿ ನನ್ನ ಬಳಿ ಬಂದು ಬಿಡುವಿರಿ. ಮನುಷ್ಯರು ಮನೆಗೆ ಹೋಗುವುದಕ್ಕಾಗಿಯೇ ಪುರುಷಾರ್ಥ ಮಾಡುತ್ತಾರೆ ಆದರೆ ಯಾರೂ ಹೋಗುವುದಿಲ್ಲ. ತಂದೆಯು ಮಕ್ಕಳನ್ನು ನೋಡಿ ಹೇಳುತ್ತಾರೆ - ಕೆಲವು ಮಕ್ಕಳು ಪುರುಷಾರ್ಥದಲ್ಲಿ ಪರಿಶ್ರಮ ಪಡುತ್ತಿಲ್ಲ, ತಣ್ಣಗಾಗಿ ಬಿಟ್ಟಿದ್ದಾರೆ. ನೆಪ ಹೇಳುತ್ತಿರುತ್ತಾರೆ. ಇದರಲ್ಲಿ ಬಹಳ ಸಹನೆಯನ್ನೂ ಮಾಡಬೇಕಾಗುತ್ತದೆ. ಧರ್ಮ ಸ್ಥಾಪಕರಿಗೆ ಎಷ್ಟೊಂದು ಸಹನೆ ಮಾಡಬೇಕಾಗುತ್ತದೆ. ಕ್ರಿಸ್ತನ ಬಗ್ಗೆಯೂ ಸಹ ಹೇಳುತ್ತಾರೆ, ಕ್ರಿಸ್ತನನ್ನು ಗಲ್ಲಿಗೇರಿಸಿದರು. ನಿಮ್ಮ ಕರ್ತವ್ಯವಾಗಿದೆ - ಎಲ್ಲರಿಗೆ ಸಂದೇಶ ಕೊಡುವುದು. ಅದಕ್ಕಾಗಿ ತಂದೆಯು ಯುಕ್ತಿಗಳನ್ನು ತಿಳಿಸುತ್ತಿರುತ್ತಾರೆ. ಯಾರಾದರೂ ಸರ್ವೀಸ್ ಮಾಡಲಿಲ್ಲವೆಂದರೆ ಇವರಿಗೆ ಧಾರಣೆಯಿಲ್ಲವೆಂದು ತಂದೆಯು ತಿಳಿಯುತ್ತಾರೆ. ಹೇಗೆ ಸಂದೇಶ ಕೊಡಬೇಕೆಂದು ತಂದೆಯು ಸಲಹೆಯನ್ನೂ ಕೊಡುತ್ತಾರೆ. ರೈಲಿನಲ್ಲಿಯೂ ನೀವು ಈ ಸಂದೇಶವನ್ನು ಕೊಡುತ್ತಾ ಇರಿ. ನಿಮಗೆ ತಿಳಿದಿದೆ, ನಾವು ಸ್ವರ್ಗದಲ್ಲಿ ಹೋಗುತ್ತೇವೆ. ಕೆಲವರು ಶಾಂತಿಧಾಮದಲ್ಲಿಯೂ ಹೋಗುತ್ತಾರಲ್ಲವೆ. ಮಾರ್ಗವನ್ನು ನೀವೇ ತಿಳಿಸುತ್ತೀರಿ, ನೀವು ಬ್ರಾಹ್ಮಣರೇ ಹೋಗಬೇಕಾಗಿದೆ. ಪ್ರಜಾಪಿತ ಬ್ರಹ್ಮನ ಸಂತಾನರು ಬ್ರಾಹ್ಮಣರೆಂದಮೇಲೆ ಅವಶ್ಯವಾಗಿ ವಿರಾಟ ರೂಪದಲ್ಲಿ ತೋರಿಸಿರಬೇಕಲ್ಲವೆ. ಆದಿಯಲ್ಲಿ ಇರುವುದೇ ಬ್ರಾಹ್ಮಣರು. ನೀವು ಬ್ರಾಹ್ಮಣರು ಶ್ರೇಷ್ಠಾತಿ ಶ್ರೇಷ್ಠರಾಗಿದ್ದೀರಿ, ಆ ಬ್ರಾಹ್ಮಣರು ಕುಖವಂಶಾವಳಿಯಾಗಿದ್ದಾರೆ ಆದರೆ ಬ್ರಾಹ್ಮಣರಂತೂ ಅವಶ್ಯವಾಗಿ ಬೇಕಲ್ಲವೆ. ಇಲ್ಲವಾದರೆ ಪ್ರಜಾಪಿತ ಬ್ರಹ್ಮನ ಮಕ್ಕಳು ಬ್ರಾಹ್ಮಣರು ಎಲ್ಲಿಗೆ ಹೋದರು! ಬ್ರಾಹ್ಮಣರಿಗೇ ನೀವು ತಿಳಿಸಿಕೊಡಿ ಆಗ ಅವರಿಗೆ ಕೂಡಲೇ ಅರ್ಥವಾಗುತ್ತದೆ. ತಿಳಿಸಿ, ನೀವೂ ಬ್ರಾಹ್ಮಣರಾಗಿದ್ದೀರಿ, ನಾವೂ ಸಹ ನಮ್ಮನ್ನು ಬ್ರಾಹ್ಮಣರೆಂದು ಕರೆಸಿಕೊಳ್ಳುತ್ತೇವೆ. ಈಗ ತಿಳಿಸಿ, ನಿಮ್ಮ ಧರ್ಮವನ್ನು ಸ್ಥಾಪನೆ ಮಾಡುವವರು ಯಾರು? ಬ್ರಹ್ಮನ ವಿನಃ ಮತ್ತ್ಯಾರ ಹೆಸರುಗಳನ್ನೂ ಅವರು ತೆಗೆದುಕೊಳ್ಳುವುದಿಲ್ಲ ಅಂದಾಗ ನೀವು ಇದನ್ನು ಪ್ರಯೋಗ ಮಾಡಿ ನೋಡಿ. ಬ್ರಾಹ್ಮಣರಲ್ಲಿಯೂ ಬಹಳ ದೊಡ್ಡ-ದೊಡ್ಡ ಕುಲಗಳಿರುತ್ತವೆ. ಪೂಜಾರಿ ಬ್ರಾಹ್ಮಣರು ಅನೇಕರಿದ್ದಾರೆ. ಅಜ್ಮೀರಿನಲ್ಲಿ ಅನೇಕ ಮಂದಿ ಮಕ್ಕಳು ಹೋಗುತ್ತಾರೆ ಆದರೆ ಬಾಬಾ ನಾವು ಆ ಬ್ರಾಹ್ಮಣರೊಂದಿಗೆ ಮಿಲನ ಮಾಡಿದೆವು ಎಂದು ಯಾರೂ ಸಮಾಚಾರವನ್ನು ತಿಳಿಸಲಿಲ್ಲ ಮತ್ತು ಅವರೊಂದಿಗೆ ಕೇಳಬೇಕು - ನಿಮ್ಮ ಧರ್ಮ ಸ್ಥಾಪನೆ ಮಾಡುವವರು ಯಾರು? ಬ್ರಾಹ್ಮಣ ಧರ್ಮವನ್ನು ಯಾರು ಸ್ಥಾಪನೆ ಮಾಡಿದರು? ನೀವು ಮಕ್ಕಳಿಗಂತು ತಿಳಿದಿದೆ, ಸತ್ಯ ಬ್ರಾಹ್ಮಣರು ಯಾರು ಎಂದು. ಅಂದಮೇಲೆ ನೀವು ಅನೇಕರ ಕಲ್ಯಾಣ ಮಾಡಬಲ್ಲಿರಿ. ತೀರ್ಥ ಯಾತ್ರೆಗಳಿಗೆ ಭಕ್ತರೇ ಹೋಗುತ್ತಾರೆ. ಈ ಲಕ್ಷ್ಮೀ-ನಾರಾಯಣರ ಚಿತ್ರವು ಬಹಳ ಒಳ್ಳೆಯದಾಗಿದೆ. ಜಗದಂಬೆ ಯಾರು, ಲಕ್ಷ್ಮೀ ಯಾರೆಂಬುದೆಲ್ಲವೂ ನಿಮಗೆ ತಿಳಿದಿದೆ. ಅಂದಮೇಲೆ ನೌಕರರು, ಕಾಡು ಜನರು ಮೊದಲಾದವರೆಲ್ಲರಿಗೂ ಸಹ ನೀವು ತಿಳಿಸಿಕೊಡಬಹುದು. ಅವರಿಗೆ ತಿಳಿಸಿಕೊಡುವವರು ನಿಮ್ಮ ವಿನಃ ಮತ್ತ್ಯಾರೂ ಇಲ್ಲ ಅಂದಮೇಲೆ ಬಹಳ ದಯಾಹೃದಯಿಗಳಾಗಬೇಕಾಗಿದೆ. ಅವರಿಗೆ ತಿಳಿಸಿ, ನೀವೂ ಸಹ ಪಾವನರಾಗಿ ಪಾವನ ಪ್ರಪಂಚದಲ್ಲಿ ಹೋಗಬಹುದು. ಆದ್ದರಿಂದ ತಮ್ಮನ್ನು ಆತ್ಮನೆಂದು ತಿಳಿದು ಶಿವ ತಂದೆಯನ್ನು ನೆನಪು ಮಾಡಿ. ಅನ್ಯರಿಗೆ ಮಾರ್ಗವನ್ನು ತಿಳಿಸುವ ಬಹಳ ಉಮ್ಮಂಗವಿರಬೇಕು. ಯಾರು ಸ್ವಯಂ ನೆನಪು ಮಾಡುತ್ತಿರುವರೋ ಅವರಿಗೇ ಅನ್ಯರಿಗೆ ನೆನಪು ತರಿಸುವ ಪುರುಷಾರ್ಥ ಮಾಡುತ್ತಾರೆ. ತಂದೆಯಂತೂ ಹೋಗಿ ಮಾತನಾಡುವುದಿಲ್ಲ. ಇದು ನೀವು ಮಕ್ಕಳ ಕರ್ತವ್ಯವಾಗಿದೆ, ಬಡವರ ಕಲ್ಯಾಣವನ್ನೂ ಮಾಡಬೇಕಾಗಿದೆ. ಪಾಪ! ಅವರೂ ಸಹ ಸುಖಿಯಾಗಲಿ, ಸ್ವಲ್ಪ ನೆನಪು ಮಾಡಿದರೂ ಸಹ ಒಳ್ಳೆಯದೇ ಏಕೆಂದರೆ ಪ್ರಜೆಗಳಲ್ಲಿಯಾದರೂ ಬರುವರು. ಈ ಧರ್ಮವು ಬಹಳ ಸುಖ ಕೊಡುವಂತದ್ದಾಗಿದೆ. ದಿನ-ಪ್ರತಿದಿನ ನಿಮ್ಮ ಪ್ರಭಾವವು ಹೆಚ್ಚುತ್ತಾ ಹೋಗುವುದು. ಎಲ್ಲರಿಗೆ ಇದೇ ಸಂದೇಶವನ್ನು ಕೊಡುತ್ತಾ ಇರಿ - ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ನೀವು ಮಧುರಾತಿ ಮಧುರ ಮಕ್ಕಳು ಪದಮಾಪದಮ ಭಾಗ್ಯಶಾಲಿಗಳಾಗಿದ್ದೀರಿ. ಮಹಿಮೆಯನ್ನು ಕೇಳಿದಾಗ ತಿಳಿದುಕೊಳ್ಳುತ್ತೀರಿ ಅಂದಮೇಲೆ ಮತ್ತೆ ಯಾವುದೇ ಮಾತಿನ ಚಿಂತೆಯನ್ನೇಕೆ ಮಾಡುವಿರಿ? ಇದು ಗುಪ್ತ ಜ್ಞಾನ, ಗುಪ್ತ ಖುಷಿಯಾಗಿದೆ. ನೀವು ರಕ್ಷಣಾ ಸೈನಿಕರಾಗಿದ್ದೀರಿ. ನಿಮಗೆ ಗುಪ್ತ ಸೈನಿಕರೆಂದು ಹೇಳುತ್ತಾರೆ. ನಿಮ್ಮ ವಿನಃ ಮತ್ತ್ಯಾರೂ ಗುಪ್ತ ಸೈನಿಕರಿರಲು ಸಾಧ್ಯವಿಲ್ಲ. ದಿಲ್ವಾಡಾ ಮಂದಿರವು ನಿಮ್ಮ ಪೂರ್ಣ ನೆನಪಾರ್ಥ ಮಂದಿರವಾಗಿದೆ. ಹೃದಯವನ್ನು ಗೆಲ್ಲುವ ತಂದೆಯ ಪರಿವಾರವಲ್ಲವೆ. ಮಹಾವೀರ-ಮಹಾವೀರಿಣಿ ಮತ್ತು ಅವರ ಸಂತಾನರ ನೆನಪಾರ್ಥವಿರುವ ತೀರ್ಥ ಸ್ಥಾನವು ಇದಾಗಿದೆ. ಇದು ಕಾಶಿಗಿಂತಲೂ ಶ್ರೇಷ್ಠ ಸ್ಥಳವಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಮನೆ-ಮನೆಗೂ ಹೋಗಿ ತಂದೆಯ ಸಂದೇಶವನ್ನು ಕೊಡಬೇಕಾಗಿದೆ. ಸರ್ವೀಸ್ ಮಾಡುವ ಪ್ರತಿಜ್ಞೆ ಮಾಡಿ, ಸರ್ವೀಸಿಗಾಗಿ ಯಾವುದೇ ನೆಪ ಹೇಳಬೇಡಿ.

2. ಯಾವುದೇ ಮಾತಿನ ಚಿಂತೆ ಮಾಡಬಾರದು, ಗುಪ್ತ ಖುಷಿಯಲ್ಲಿರಬೇಕಾಗಿದೆ. ಯಾವುದೇ ದೇಹಧಾರಿಯನ್ನು ನೆನಪು ಮಾಡಬಾರದು. ಒಬ್ಬ ತಂದೆಯ ನೆನಪಿನಲ್ಲಿರಬೇಕಾಗಿದೆ.

ವರದಾನ:
ಪರಿಸ್ಥಿತಿಗಳನ್ನು ಶುಭ ಸೂಚನೆ ಎಂದು ತಿಳಿದು ತಮ್ಮ ನಿಶ್ಚಯದ ಅಡಿಪಾಯವನ್ನು ಶಕ್ತಿಶಾಲಿಯನ್ನಾಗಿ ಮಾಡಿಕೊಳ್ಳುವಂತಹ ಅಚಲ-ಅಡೋಲ ಭವ.

ಯಾವುದೇ ಪರಿಸ್ಥಿತಿ ಬಂದರೆ ನೀವು ಹೈ ಜಂಪ್ ಹಾಕಿ ಬಿಡಿ ಏಕೆಂದರೆ ಪರಿಸ್ಥಿತಿ ಬರುವುದೂ ಸಹ ಶುಭ ಸೂಚನೆಯಾಗಿದೆ. ಈ ನಿಶ್ಚಯದ ಅಡಿಪಾಯವನ್ನು ಶಕ್ತಿಶಾಲಿ ಮಾಡಿಕೊಳ್ಳುವ ಸಾಧನವಾಗಿದೆ. ತಾವು ಯಾವಾಗ ಒಮ್ಮೆ ಅಂಗದನ ಸಮಾನ ಸ್ಥಿರವಾಗಿರುವಿರಿ ಆಗ ಈ ಪೇಪರ್ ಸಹ ನಮಸ್ಕಾರ ಮಾಡುವುದು. ಮೊದಲು ಭೀಕರ ರೂಪದಲ್ಲಿ ಬರುವುದು ಮತ್ತು ನಂತರ ದಾಸಿಯಾಗಿ ಬಿಡುವುದು. ಚಾಲೆಂಜ್ ಮಾಡಿ ನಾವು ಮಹಾವೀರರಾಗಿದ್ದೇವೆ. ಹೇಗೆ ನೀರಿನ ಮೇಲೆ ಗೆರೆ ನಿಲ್ಲಲು ಸಾಧ್ಯವಿಲ್ಲ, ಹಾಗೆ ನಾನು ಮಾಸ್ಟರ್ ಸಾಗರನ ಮೇಲೆ ಯಾವುದೇ ಪರಿಸ್ಥಿತಿ ಯುದ್ಧ ಮಾಡಲು ಸಾಧ್ಯವಿಲ್ಲ. ಸ್ವ-ಸ್ಥಿತಿಯಲ್ಲಿರುವುದರಿಂದ ಅಚಲ-ಅಡೋಲರಾಗಿ ಬಿಡುವಿರಿ.

ಸ್ಲೋಗನ್:
ಯಾರ ಪ್ರತಿ ಕರ್ಮ ಶ್ರೇಷ್ಠ ಮತ್ತು ಸಫಲವಾಗುವುದು, ಅವರೇ ಜ್ಞಾನ ಪೂರ್ಣರು ಆಗಿದ್ದಾರೆ.