02.11.23         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೆನಪೆಂಬ ಔಷಧಿಯಿಂದ ಸ್ವಯಂನ್ನು ಸದಾ ನಿರೋಗಿಯನ್ನಾಗಿ ಮಾಡಿಕೊಳ್ಳಿ, ನೆನಪು ಹಾಗೂ ಸ್ವದರ್ಶನ ಚಕ್ರವನ್ನು ತಿರುಗಿಸುವ ಅಭ್ಯಾಸ ಮಾಡಿಕೊಂಡಾಗ ವಿಕರ್ಮಾಜೀತರಾಗಿಬಿಡುತ್ತೀರಿ”

ಪ್ರಶ್ನೆ:
ಯಾವ ಮಕ್ಕಳಿಗೆ ಸದಾ ತಮ್ಮ ಉನ್ನತಿಯ ಚಿಂತೆಯಿರುತ್ತದೆ - ಅವರ ಚಿಹ್ನೆಯೇನಾಗಿದೆ?

ಉತ್ತರ:
ಅವರ ಪ್ರತೀ ಕರ್ಮವು ಸದಾ ಶ್ರೀಮತದ ಆಧಾರದ ಮೇಲೆ ಇರುತ್ತದೆ. ತಂದೆಯ ಶ್ರೀಮತವಾಗಿದೆ - ಮಕ್ಕಳೇ, ದೇಹಾಭಿಮಾನದಲ್ಲಿ ಬರಬೇಡಿ, ನೆನಪಿನ ಚಾರ್ಟನ್ನು ಇಡಿ. ತಮ್ಮ ಲೆಕ್ಕಾಚಾರದ ಲೆಕ್ಕವನ್ನು ಇಡಿ. ನಾನು ಎಷ್ಟು ಸಮಯ ತಂದೆಯ ನೆನಪಿನಲ್ಲಿದ್ದೆನು, ಬೇರೆಯವರಿಗೆ ಎಷ್ಟು ಸಮಯ ತಿಳಿಸಿಕೊಟ್ಟೆನು ಎಂದು ಪರಿಶೀಲನೆ ಮಾಡಿಕೊಳ್ಳಿ.

ಗೀತೆ:
ನೀವು ಪ್ರೀತಿಯ ಸಾಗರರಾಗಿದ್ದೀರಿ, ನಿಮ್ಮ ಪ್ರೀತಿಯ ಒಂದು ಹನಿಗಾಗಿ ನಾವು ಬಾಯಾರಿದ್ದೇವೆ....

ಓಂ ಶಾಂತಿ.
ಯಾವಾಗ ನೀವು ಇಲ್ಲಿ ಕುಳಿತುಕೊಳ್ಳುತ್ತೀರಿ ಆಗ ತಂದೆಯ ನೆನಪಿನಲ್ಲಿ ಕುಳಿತುಕೊಳ್ಳಿ. ದೇಹಾಭಿಮಾನವಿರುವ ಕಾರಣ ಮಾಯೆಯು ಮಕ್ಕಳಿಗೆ ನೆನಪಿನಲ್ಲಿ ಕುಳಿತುಕೊಳ್ಳಲು ಬಿಡುವುದಿಲ್ಲ. ಕೆಲವರಿಗೆ ಮಿತ್ರ-ಸಂಬಂಧಿಗಳ, ಕೆಲವರಿಗೆ ತಿಂಡಿ-ತೀರ್ಥ ಮೊದಲಾದುವುಗಳ ನೆನಪು ಬರುತ್ತಿರುತ್ತದೆ. ಯಾವಾಗ ಇಲ್ಲಿಗೆ ಬರುತ್ತೀರಿ ಆಗ ತಂದೆಯನ್ನು ಆಹ್ವಾನ ಮಾಡಬೇಕಾಗುತ್ತದೆ. ಹೇಗೆ ಲಕ್ಷ್ಮಿಯ ಪೂಜೆಯನ್ನು ಮಾಡುವಾಗ ಆಹ್ವಾನವಂತೂ ಮಾಡುತ್ತಾರೆ ಆದರೆ ಲಕ್ಷ್ಮಿಯಂತೂ ಬರುವುದಿಲ್ಲ. ಆದರೆ ಇಲ್ಲಿ ತಂದೆಯನ್ನು ನೆನಪು ಮಾಡಿ ಅಥವಾ ಆಹ್ವಾನ ಮಾಡಿ, ವಿಷಯ ಎರಡೂ ಒಂದೇ ಆಗಿದೆ. ಕೇವಲ ಹೇಳಲಾಗುತ್ತದೆ ಅಷ್ಟೆ. ನೆನಪಿನಿಂದಲೇ ವಿಕರ್ಮವಿನಾಶವಾಗುತ್ತದೆ, ಧಾರಣೆಯಾಗುವುದಿಲ್ಲವೆಂದರೆ ಬಹಳ ವಿಕರ್ಮ ಮಾಡಿದ್ದೀರಿ ಆದ್ದರಿಂದ ತಂದೆಯನ್ನು ನೆನಪು ಮಾಡಲು ಆಗುತ್ತಿಲ್ಲ. ಎಷ್ಟೆಷ್ಟು ತಂದೆಯನ್ನು ನೆನಪು ಮಾಡುತ್ತೀರಿ ಅಷ್ಟಷ್ಟು ವಿಕರ್ಮಾಜೀತರಾಗುತ್ತೀರಿ, ಆರೋಗ್ಯವೂ ಸಿಗುತ್ತದೆ, ಇದು ಬಹಳ ಸಹಜವೂ ಆಗಿದೆ ಆದರೆ ಮಾಯೆ ಅಥವಾ ಹಿಂದಿನ ವಿಕರ್ಮವು ತಡೆಯುತ್ತಿರುತ್ತದೆ. ನೀವು ನನ್ನನ್ನು ಅರ್ಧಕಲ್ಪದಿಂದ ಅಯತಾರ್ಥವಾಗಿ ನೆನಪು ಮಾಡಿದ್ದೀರೆಂದು ತಂದೆಯು ಹೇಳುತ್ತಾರೆ. ಈಗ ಪ್ರತ್ಯಕ್ಷವಾಗಿ ಆಹ್ವಾನ ಮಾಡುತ್ತಿದ್ದೀರಿ, ಈಗ ನಿಮಗೆ ಅವರು ಮುರುಳಿ ಹೇಳುವವರಾಗಿದ್ದಾರೆಂದು ತಿಳಿದಿದೆ. ಆದರೆ ನೆನಪು ಮಾಡುವಂತಹ ಅಭ್ಯಾಸವಿರಬೇಕು. ಸದಾ ನಿರೋಗಿಯಾಗಲು ನನ್ನನ್ನು ನೆನಪು ಮಾಡಿ ಎಂದು ಸರ್ಜನ್ ಔಷಧಿಯನ್ನು ಕೊಡುತ್ತಾರೆ ನಂತರ ನೀವು ನನ್ನನ್ನು ಬಂದು ಮಿಲನ ಮಾಡುತ್ತೀರಿ, ನೆನಪು ಮಾಡುವುದರಿಂದ ಆಸ್ತಿಯು ಸಿಗುತ್ತದೆ. ತಂದೆ ಹಾಗೂ ಮಧುರಮನೆಯನ್ನು ನೆನಪು ಮಾಡಬೇಕು. ನೀವು ಎಲ್ಲಿಗೆ ಹೋಗಬೇಕಾಗಿದೆಯೋ ಅದನ್ನು ಬುದ್ಧಿಯಲ್ಲಿಡಬೇಕು. ತಂದೆಯೇ ಇಲ್ಲಿಗೆ ಬಂದು ಸತ್ಯಸಂದೇಶವನ್ನು ಕೊಡುತ್ತಾರೆ. ಆದರೆ ಬೇರೆ ಯಾರೂ ಈಶ್ವರನ ಸಂದೇಶವನ್ನು ಕೊಡಲು ಸಾಧ್ಯವಿಲ್ಲ. ಅವರು ಈ ನಾಟಕದ ಮಂಚದ ಮೇಲೆ ಪಾತ್ರ ಮಾಡಲು ಬರುತ್ತಾರೆ ಮತ್ತು ಈಶ್ವರನನ್ನು ಮರೆತುಹೋಗುತ್ತಾರೆ. ಈಶ್ವರನ ಪರಿಚಯವಿರುವುದಿಲ್ಲ. ವಾಸ್ತವದಲ್ಲಿ ಅವರಿಗೆ ಪೈಗಂಬರ್ ಅಥವಾ ಮೆಸೆಂಜರ್ (ಸಂದೇಶಿ) ಎಂದು ಹೇಳಲಾಗುವುದಿಲ್ಲ. ಮನುಷ್ಯರು ಈ ಹೆಸರನ್ನು ಇಟ್ಟಿದ್ದಾರೆ. ಅವರು ತಮ್ಮ ಪಾತ್ರವನ್ನು ಅಭಿನಯಿಸಲು ಬರುತ್ತಾರೆ. ಹಾಗಿರುವಾಗ ಹೇಗೆ ನೆನಪು ಮಾಡುತ್ತೀರಿ? ಪಾತ್ರ ಮಾಡುತ್ತಾ ಪತಿತರಾಗಲೇಬೇಕು ನಂತರ ಅಂತ್ಯದಲ್ಲಿ ಪಾವನರಾಗಬೇಕಾಗುತ್ತದೆ. ತಂದೆಯೇ ಬಂದು ಪಾವನ ಮಾಡುತ್ತಾರೆ, ತಂದೆಯ ನೆನಪಿನಿಂದಲೇ ಪಾವನರಾಗಬೇಕು. ತಂದೆಯು ಹೇಳುತ್ತಾರೆ - ಪಾವನರಾಗಲು ಕೇವಲ ಒಂದೇ ಉಪಾಯವಾಗಿದೆ, ದೇಹಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಮರೆಯಬೇಕು.

ನಿಮಗೆ ಗೊತ್ತಿದೆ - ಈಗ ನಾನಾತ್ಮನಿಗೆ ನೆನಪು ಮಾಡುವ ಆಜ್ಞೆಯು ಸಿಕ್ಕಿದೆ. ಅದರಂತೆ ನಡೆಯುವುದರಿಂದ ಆಜ್ಞಾಪಾಲಕರೆಂದು ಕರೆಯಲಾಗುವುದು. ಯಾರೆಷ್ಟು ಪುರುಷಾರ್ಥ ಮಾಡುತ್ತೀರಿ ಅಷ್ಟು ಆಜ್ಞಾಪಾಲಕರಾಗಿರುತ್ತಾರೆ. ಕಡಿಮೆ ನೆನಪು ಮಾಡುವವರು ಕಡಿಮೆ ಆಜ್ಞಾಪಾಲಕರಾಗಿರುತ್ತಾರೆ. ಆಜ್ಞಾಪಾಲಕರು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ತಂದೆಯ ಆಜ್ಞೆಯಾಗಿದೆ 1)ನನ್ನನ್ನು ನೆನಪು ಮಾಡಿ 2)ಜ್ಞಾನವನ್ನು ಧಾರಣೆ ಮಾಡಿ. ನೆನಪು ಮಾಡದೇ ಇದ್ದರೆ ಬಹಳ ಶಿಕ್ಷೆಯನ್ನು ತಿನ್ನಬೇಕಾಗುತ್ತದೆ. ಸ್ವದರ್ಶನ ಚಕ್ರವನ್ನು ತಿರುಗಿಸುತ್ತಿದ್ದರೆ ಬಹಳ ಧನಸಂಪತ್ತು ಸಿಗುತ್ತದೆ. ಭಗವಾನುವಾಚ - ನನ್ನನ್ನು ನೆನಪು ಮಾಡಿ ಹಾಗೂ ಸ್ವದರ್ಶನಚಕ್ರವನ್ನು ತಿರುಗಿಸಿ ಅರ್ಥಾತ್ ನಾಟಕದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಳ್ಳಿ. ನನ್ನ ಮೂಲಕ ನನ್ನನ್ನು ತಿಳಿದುಕೊಳ್ಳಿ ಹಾಗೂ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಚಕ್ರವನ್ನು ತಿಳಿದುಕೊಳ್ಳಿ - ಈ ಎರಡೂ ಮಾತುಗಳು ಮುಖ್ಯವಾಗಿದೆ ಇವುಗಳ ಮೇಲೆ ಗಮನ ಕೊಡಬೇಕು. ಶ್ರೀಮತದ ಮೇಲೆ ಪೂರ್ಣ ಗಮನ ಕೊಟ್ಟಾಗ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ದಯಾಹೃದಯಿಗಳಾಗಿ ಎಲ್ಲರಿಗೂ ಮಾರ್ಗವನ್ನು ತೋರಿಸಬೇಕು, ಕಲ್ಯಾಣ ಮಾಡಬೇಕು. ಮಿತ್ರ-ಸಂಬಂಧಿ ಮೊದಲಾದವರಿಗೆ ಸತ್ಯಯಾತ್ರೆಗೆ ಕರೆದೊಯ್ಯುವ ಯುಕ್ತಿಯನ್ನು ರಚಿಸಬೇಕು. ಅವು ಶಾರೀರಿಕ ಯಾತ್ರೆಗಳಾಗಿವೆ, ಇದು ಆತ್ಮಿಕ ಯಾತ್ರೆಯಾಗಿದೆ. ಈ ಆಧ್ಯಾತ್ಮಿಕ ಜ್ಞಾನವು ಯಾರ ಬಳಿಯೂ ಇಲ್ಲ. ಅದೆಲ್ಲವೂ ಶಾಸ್ತ್ರ-ಪುರಾಣಗಳಾಗಿವೆ. ಇದು ಆಧ್ಯಾತ್ಮಿಕ-ಆತ್ಮಿಕ ಜ್ಞಾನವಾಗಿದೆ. ಪರಮಾತ್ಮನು ಆತ್ಮಗಳಿಗೆ ತಿಳಿಸಿ, ಹಿಂತಿರುಗಿ ಕರೆದುಕೊಂಡು ಹೋಗುವುದಕ್ಕಾಗಿಯೇ ಈ ಜ್ಞಾನವನ್ನು ನೀಡುತ್ತಿದ್ದಾರೆ.

ಕೆಲವು ಮಕ್ಕಳು ಇಲ್ಲಿಗೆ ಬಂದು ವ್ಯರ್ಥವಾಗಿ ಕುಳಿತುಕೊಳ್ಳುತ್ತಾರೆ. ತಮ್ಮ ಸ್ವಯಂ ಉನ್ನತಿಯ ಬಗ್ಗೆ ಸ್ವಲ್ಪವೂ ಯೋಚಿಸುವುದಿಲ್ಲ, ಬಹಳ ದೇಹಾಭಿಮಾನವಿರುತ್ತದೆ. ದೇಹೀ ಅಭಿಮಾನಿ ಆಗಿದ್ದೇ ಆದರೆ ದಯಾಹೃದಯಿಯಾಗಿ ಶ್ರೀಮತದಂತೆ ನಡೆಯಿರಿ. ಮಕ್ಕಳು ಆಜ್ಞಾಪಾಲಕರಾಗಿಲ್ಲತಂದೆಯು ತಮ್ಮ ಚಾರ್ಟನ್ನು ಬರೆಯಿರಿ ಎಂದು ಹೇಳುತ್ತಾರೆ. ಎಷ್ಟು ಸಮಯ ನೆನಪನ್ನು ಮಾಡುತ್ತೀರಿ? ಯಾವ-ಯಾವ ಸಮಯದಲ್ಲಿ ನೆನಪು ಮಾಡುತ್ತೀರಿ? ಮೊದಲು ಚಾರ್ಟ್ ಇಡುತ್ತಿದ್ದರು. ಒಳ್ಳೆಯದು. ತಂದೆಗೆ ಕಳುಹಿಸದಿದ್ದರೂ ಸಹ ತಮ್ಮ ಬಳಿಯೇ ಇಟ್ಟುಕೊಳ್ಳಬಹುದು. ನಾವು ಲಕ್ಷ್ಮಿಯನ್ನು ವರಿಸಲು ಯೋಗ್ಯರಾಗಿದ್ದೇವೆಯೇ? ಎಂದು ತಮ್ಮ ಮುಖವನ್ನು ನೋಡಿಕೊಳ್ಳಬೇಕು. ವ್ಯಾಪಾರಿಗಳೂ ತಮ್ಮ ಬಳಿ ಲೆಕ್ಕವನ್ನು ಇಡುತ್ತಾರೆ, ಕೆಲವು ವ್ಯಕ್ತಿಗಳು ತಮ್ಮ ಇಡೀ ದಿನದ ದಿನಚರಿಯನ್ನು ಬರೆಯುತ್ತಾರೆ. ಹೀಗೆ ಬರೆಯುವಂತಹ ಅಭ್ಯಾಸವಿರುತ್ತದೆ. ಹೀಗೆ ಯೋಗದ ಲೆಕ್ಕವನ್ನಿಡುವಂತಹ ಅಭ್ಯಾಸ ಬಹಳ ಒಳ್ಳೆಯ ಮಾತಾಗಿದೆ. ನಾವು ಎಷ್ಟು ಸಮಯ ತಂದೆಯ ನೆನಪಿನಲ್ಲಿದ್ದೆವು? ಎಷ್ಟು ಸಮಯ ಬೇರೆಯವರಿಗೆ ತಿಳಿಸಿಕೊಟ್ಟೆವು? ಹೀಗೆ ಚಾರ್ಟನ್ನು ಇಡುವುದರಿಂದ ಬಹಳ ಉನ್ನತಿಯಾಗುತ್ತದೆ. ತಂದೆಯು ಈ ರೀತಿಯಾಗಿ ಮಾಡಿ ಎಂದು ಸಲಹೆಯನ್ನು ಕೊಡುತ್ತಿರುತ್ತಾರೆ. ಮಕ್ಕಳು ತಮ್ಮ ಉನ್ನತಿಯನ್ನು ಮಾಡಿಕೊಳ್ಳಬೇಕು. ಮಾಲೆಯ ಮಣಿಗಳಾಗುವವರು ಬಹಳ ಪುರುಷಾರ್ಥವನ್ನು ಮಾಡಬೇಕು. ತಂದೆಯು ತಿಳಿಸಿದ್ದರು, ಬ್ರಾಹ್ಮಣರ ಮಾಲೆಯು ಈಗ ಮಾಡಲಾಗುವುದಿಲ್ಲ, ಯಾವಾಗ ರುದ್ರಮಾಲೆಯಾಗುತ್ತದೆ ಆಗ ಅಂತ್ಯದಲ್ಲಿ ಬ್ರಾಹ್ಮಣರ ಮಾಲೆ ಆಗುತ್ತದೆ ಏಕೆಂದರೆ ಬ್ರಾಹ್ಮಣ ಮಾಲೆಯ ಮಣಿಗಳು ಪರಿವರ್ತನೆಯಾಗುತ್ತಿರುತ್ತದೆ. ಇಂದು ಮೂರು ಅಥವಾ ನಾಲ್ಕನೆ ಸ್ಥಾನದಲ್ಲಿರುವವರು ನಾಳೆಯ ವೇಳೆಗೆ ಕೊನೆಯ ಸ್ಥಾನಕ್ಕೆ ಹೋಗುತ್ತಾರೆ. ಎಷ್ಟೊಂದು ವ್ಯತ್ಯಾಸವಾಗಿಬಿಡುತ್ತದೆ. ಹೀಗೆ ಬಿದ್ದರೆ ದುರ್ಗತಿಯನ್ನು ಹೊಂದುತ್ತಾರೆ. ಮಾಲೆಯಿಂದಲೂ ದೂರವಾದರು, ಪ್ರಜೆಗಳಲ್ಲಿಯೂ ಹೋಗಿ ಸಂಪೂರ್ಣ ಚಂಡಾಲರಾಗುತ್ತಾರೆ. ಒಂದುವೇಳೆ ಮಾಲೆಯಲ್ಲಿ ಬರಬೇಕಾದರೆ ಬಹಳ ಪರಿಶ್ರಮ ಪಡಬೇಕಾಗುವುದು. ತಮ್ಮ ಉನ್ನತಿಯನ್ನು ಹೇಗೆ ಮಾಡಿಕೊಳ್ಳಬೇಕು? ಎಂದು ತಂದೆಯು ಎಲ್ಲರಿಗಾಗಿ ಬಹಳ ಒಳ್ಳೆಯ ಸಲಹೆಯನ್ನು ಕೊಡುತ್ತಾರೆ. ಒಂದುವೇಳೆ ಕಿವುಡರಾಗಿದ್ದರೂ ಸಹ ಅವರು ಸನ್ನೆಯಿಂದ ಅನ್ಯರಿಗೆ ತಂದೆಯ ನೆನಪನ್ನು ತರಿಸಬಹುದು. ಮಾತನಾಡುವವರಿಗಿಂತಲೂ ಅವರು ಉನ್ನತಿಯನ್ನು ಹೊಂದಬಹುದು. ಕುರುಡರು, ಅಂಗವಿಕಲರು ಹೇಗೆ ಇರಲಿ, ಆರೋಗ್ಯವಂತರಿಗಿಂತಲೂ ಹೆಚ್ಚಿನ ಪದವಿಯನ್ನು ಪಡೆಯಬಹುದು. ಒಂದೇ ಸೆಕೆಂಡಿನಲ್ಲಿ ಸನ್ಹೆ ಮಾಡಬಹುದು. ಏಕೆಂದರೆ ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿ ಎಂದು ಗಾಯನವಿದೆ. ತಂದೆಗೆ ಮಕ್ಕಳಾದ ನಂತರ ಆಸ್ತಿಯು ಪ್ರಾಪ್ತಿಯಾಗಿ ಬಿಡುತ್ತದೆ ನಂತರ ಅದರಲ್ಲಿ ಅವಶ್ಯವಾಗಿ ನಂಬರ್ವಾರ್ ಪದವಿಯಿದೆ. ಮಗು ಜನ್ಮ ಪಡೆದ ನಂತರ ಆಸ್ತಿಗೆ ಹಕ್ಕುದಾರರಾಗಿಬಿಡುತ್ತಾರೆ. ಇಲ್ಲಿ ನೀವೆಲ್ಲಾ ಆತ್ಮಗಳು ಪುರುಷರಾಗಿದ್ದೀರಿ ಆದ್ದರಿಂದ ತಂದೆಯಿಂದ ಆಸ್ತಿಯ ಅಧಿಕಾರವನ್ನು ತೆಗೆದುಕೊಳ್ಳಿ. ಎಲ್ಲವೂ ಪುರುಷಾರ್ಥದ ಮೇಲೆ ಆಧಾರಿತವಾಗಿದೆ. ಕಲ್ಪದ ಹಿಂದೆ ಇಂತಹ ಪುರುಷಾರ್ಥ ಮಾಡಿದ್ದೆವು ಎಂದು ಹೇಳುತ್ತೀರಿ. ಮಾಯೆಯ ಜೊತೆ ನಿಮ್ಮ ಬಾಕ್ಸಿಂಗ್ ನಡೆಯುತ್ತಿದೆ. ಪಾಂಡವರ ಯುದ್ಧವೇ ಮಾಯಾ ರಾವಣನೊಂದಿಗೆ ಇದೆ. ಕೆಲವರು ಪುರುಷಾರ್ಥ ಮಾಡಿ ವಿಶ್ವದ ಮಾಲೀಕ, ಡಬಲ್ ಕಿರೀಟಧಾರಿಗಳಾಗುತ್ತಾರೆ, ಕೆಲವರು ನೌಕರ-ಚಾಕರರಾಗುತ್ತಾರೆ. ಅವರೆಲ್ಲರೂ ಇಲ್ಲಿಯೇ ಓದುತ್ತಿದ್ದಾರೆ. ರಾಜಧಾನಿಯೂ ಸ್ಥಾಪನೆಯಾಗುತ್ತಿದೆ. ಮುಂದೆ ಇರುವಂತಹ ಎರಡೂ ಕಡೆಯೂ ಅವಶ್ಯವಾಗಿ ಗಮನವಿರುತ್ತದೆ. 8 ಮಣಿಗಳು ಹೇಗೆ ನಡೆಯುತ್ತಿದ್ದಾರೆ ಎಂದು ಪುರುಷಾರ್ಥದಿಂದ ತಿಳಿಯುತ್ತದೆ. ತಂದೆಯು ಎಲ್ಲರ ಆಂತರ್ಯವನ್ನು ಓದುವ, ಅಂತರ್ಯಾಮಿ ಆಗಿದ್ದಾರೆಂದು ತಿಳಿಯಬಾರದು. ತಿಳಿದು ತಿಳಿಸುವಂತಹವರು ಎಂದರೆ ಜ್ಞಾನಪೂರ್ಣರಾಗಿದ್ದಾರೆ. ಅವರು ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದಾರೆ. ಅವರು ಒಬ್ಬೊಬ್ಬರ ಮನಸ್ಸಿನಲ್ಲಿ ಇರುವುದನ್ನು ಕುಳಿತು ತಿಳಿದುಕೊಳ್ಳುವುದಿಲ್ಲ. ನನ್ನನ್ನು ‘ಥಾಟ್ ರೀಡರ್’ ಎಂದು ತಿಳಿದಿದ್ದೀರೇನು? ನಾನು ತಿಳಿದು-ತಿಳಿಸುವವನಾಗಿದ್ದೇನೆ ಅಂದರೆ ಜ್ಞಾನಪೂರ್ಣನಾಗಿದ್ದೇನೆ. ಸೃಷ್ಟಿಯ ಭೂತ-ಭವಿಷ್ಯ-ವರ್ತಮಾನವನ್ನೇ ಸೃಷ್ಟಿಯ ಆದಿ-ಮಧ್ಯ-ಅಂತ್ಯವೆಂದು ಹೇಳಲಾಗುತ್ತದೆ. ಈ ಸೃಷ್ಟಿಚಕ್ರ ಹೇಗೆ ಪುನರಾವರ್ತನೆಯಾಗುತ್ತದೆ. ಅದರ ಪುನರಾವರ್ತನೆಯನ್ನು ನಾನು ತಿಳಿದುಕೊಂಡಿದ್ದೇನೆ. ನಾನು ಈ ಜ್ಞಾನವನ್ನು ಮಕ್ಕಳಿಗೆ ಓದಿಸಲು ಬರುತ್ತೇನೆ. ಪ್ರತಿಯೊಬ್ಬರೂ ಸಹ ಯಾರೆಷ್ಟು ಸೇವೆ ಮಾಡುತ್ತೇವೆ, ಓದುತ್ತೇವೆ ಎಂದು ತಿಳಿದುಕೊಳ್ಳಬಹುದು. ತಂದೆಯೇ ಒಬ್ಬೊಬ್ಬರನ್ನು ಕುಳಿತು ತಿಳಿದುಕೊಳ್ಳುತ್ತಾರೆಂದು ತಿಳಿಯಬಾರದು. ತಂದೆಯು ಕೇವಲ ಈ ವ್ಯಾಪಾರವನ್ನು ಮಾಡಲು ಕುಳಿತಿದ್ದಾರೇನು? ಅವರು ತಿಳಿದು-ತಿಳಿಸುವಂತಹ ಮನುಷ್ಯ ಸೃಷ್ಟಿಯ ಬೀಜರೂಪ, ಜ್ಞಾನಪೂರ್ಣರಾಗಿದ್ದಾರೆ. ಅವರು ಮನುಷ್ಯ ಸೃಷ್ಟಿಯ ಆದಿ-ಮಧ್ಯ-ಅಂತ್ಯ ಹಾಗೂ ಸೃಷ್ಟಿಯ ಮುಖ್ಯ ಪಾತ್ರಧಾರಿಗಳನ್ನು ತಿಳಿದುಕೊಂಡಿದ್ದೇನೆಂದು ಹೇಳುತ್ತಾರೆ. ಹಾಗೆ ನೋಡಿದರೆ ಬಹಳ ದೊಡ್ಡ ರಚನೆಯಿದೆ. ಈ ತಿಳಿದು-ತಿಳಿಸುವವರು ಎನ್ನುವ ಅಕ್ಷರ ಬಹಳ ಹಳೆಯದಾಗಿದೆ. ನನಗೆ ಯಾವ ಜ್ಞಾನವು ಗೊತ್ತಿದೆಯೋ ಅದನ್ನು ನಾನು ಓದಿಸುತ್ತೇನೆ ಆದರೆ ನೀವು ಇಡೀ ದಿನ ಏನೇನು ಮಾಡುತ್ತೀರೆಂದು ನೋಡುವುದಿಲ್ಲ. ನಾನು ಸಹಜ ರಾಜಯೋಗ ಹಾಗೂ ಜ್ಞಾನವನ್ನು ಕಲಿಸಲು ಬರುತ್ತೇನೆ. ತಂದೆಯು ಹೇಳುತ್ತಾರೆ - ಬಹಳ ಮಕ್ಕಳಿದ್ದಾರೆ, ನಾನು ಮಕ್ಕಳ ಮುಂದೆ ಪ್ರತ್ಯಕ್ಷವಾಗುತ್ತೇನೆ. ನನ್ನ ಎಲ್ಲಾ ಕೆಲಸ-ಕಾರ್ಯಗಳು ಮಕ್ಕಳೊಂದಿಗಿದೆ. ಯಾರು ಮಕ್ಕಳಾಗುತ್ತಾರೆಯೋ ಅವರಿಗೆ ನಾನು ತಂದೆಯಾಗುತ್ತೇನೆ ನಂತರ ಅವರಲ್ಲಿಯೂ ಸ್ವಂತ ಯಾರು? ಮಲತಾಯಿ ಮಕ್ಕಳು ಯಾರು? ಎಂದು ನಾನು ತಿಳಿದುಕೊಳ್ಳುತ್ತೇನೆ. ಈ ವಿದ್ಯೆಯು ಪ್ರತಿಯೊಬ್ಬರಿಗಾಗಿಯೇ ಇದೆ. ಶ್ರೀಮತದಂತೆ ಕರ್ಮದಲ್ಲಿ ಬರಬೇಕು, ಕಲ್ಯಾಣಕಾರಿಯಾಗಬೇಕು. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಬೃಹಸ್ಪತಿಯನ್ನು ವೃಕ್ಷಪತಿ ದಿನವೆಂದು ಕರೆಯಲಾಗುತ್ತದೆ. ವೃಕ್ಷಪತಿಯೂ ಆಗಿದ್ದಾರೆ, ಶಿವನೂ ಆಗಿದ್ದಾರೆ. ಅಂತೂ ಒಬ್ಬರೆ ಆಗಿದ್ದಾರೆ. ಗುರುವಾರದ ದಿನ ಶಾಲೆಯಲ್ಲಿ ಕುಳಿತುಕೊಂಡಿದ್ದಾಗ ಗುರುಗಳನ್ನು ಕರೆಸುತ್ತಾರೆ. ಇಂದು ಹಾಗೆಯೇ ಸೋಮನಾಥನ ದಿನ ಸೋಮವಾರವಾಗಿದೆ. ಶಿವತಂದೆಯು ಸೋಮರಸವನ್ನು ಕುಡಿಸುತ್ತಾರೆ. ಅವರ ಹೆಸರು ಶಿವ ಆಗಿದೆ ಆದರೆ ಓದಿಸುವ ಕಾರಣ ಸೋಮನಾಥನೆಂದು ಹೇಳಿದ್ದಾರೆ. ರುದ್ರನೆಂದು ಸೋಮನಾಥನಿಗೆ ಕರೆಯಲಾಗುವುದು. ರುದ್ರ ಜ್ಞಾನಯಜ್ಞವನ್ನು ರಚಿಸುವಾಗ ಜ್ಞಾನವನ್ನು ಹೇಳುವವರೂ ಆಗಿದ್ದಾರೆ. ಬಹಳ ಹೆಸರುಗಳನ್ನು ಇಟ್ಟಿದ್ದಾರೆ. ಈಗ ಅವೆಲ್ಲದರ ತಿಳುವಳಿಕೆಯನ್ನು ಕೊಡುತ್ತಿದ್ದಾರೆ. ಆರಂಭದಿಂದ ಈ ಯಜ್ಞವೊಂದೇ ನಡೆಯುತ್ತಾ ಬಂದಿದೆ, ಈ ಯಜ್ಞದಲ್ಲಿ ಸೃಷ್ಟಿಯ ಸಾಮಗ್ರಿಗಳು ಸ್ವಾಹಾ ಆಗುತ್ತವೆ ಎಂದು ತಿಳಿದುಕೊಂಡಿಲ್ಲ. ಯಾರೆಲ್ಲಾ ಮನುಷ್ಯರಿಗೆ ಏನೆಲ್ಲಾ ಇದೆಯೋ ಅದು ತತ್ವಗಳ ಸಹಿತ ಎಲ್ಲವೂ ಪರಿವರ್ತನೆಯಾಗುತ್ತದೆ. ಇದೆಲ್ಲವನ್ನೂ ಮಕ್ಕಳು ನೋಡಬೇಕಾಗುವುದು, ನೋಡುವಂತಹವರು ಬಹಳ ಮಹಾವೀರರಾಗಿರಬೇಕು. ಏನೇ ಆದರೂ ತಂದೆಯನ್ನು ಮರೆಯಬಾರದು. ಮನುಷ್ಯರಂತೂ ಅಯ್ಯೊ ಅಯ್ಯೊ, ಸಾಕು ಸಾಕು ಎಂದು ಬೇಡುತ್ತಿರುತ್ತಾರೆ. ಮೊಟ್ಟಮೊದಲು ಇದನ್ನು ತಿಳಿಸಿಕೊಡಬೇಕು. ಸ್ವಲ್ಪ ಯೋಚಿಸಿ, ಸತ್ಯಯುಗದಲ್ಲಿ ಭಾರತವೊಂದೇ ಇತ್ತು, ಬಹಳ ಕಡಿಮೆ ಮನುಷ್ಯರಿದ್ದರು, ಒಂದೇ ಧರ್ಮವಿತ್ತು. ಈಗ ಕಲಿಯುಗದ ಅಂತ್ಯದಲ್ಲಿ ಎಷ್ಟೊಂದು ಧರ್ಮಗಳಿವೆ. ಇವೂ ಸಹ ಎಲ್ಲಿಯವರೆಗೆ ನಡೆಯುತ್ತವೆ? ಕಲಿಯುಗದ ನಂತರ ಅವಶ್ಯವಾಗಿ ಸತ್ಯಯುಗವಾಗುತ್ತದೆ. ಈಗ ಸತ್ಯಯುಗದ ಸ್ಥಾಪನೆಯನ್ನು ಯಾರು ಮಾಡುತ್ತಾರೆ? ರಚೈತನಂತೂ ತಂದೆಯೇ ಆಗಿದ್ದಾರೆ. ಸತ್ಯಯುಗದ ಸ್ಥಾಪನೆ ಹಾಗೂ ಕಲಿಯುಗದ ವಿನಾಶವಾಗುತ್ತದೆ. ಈಗ ವಿನಾಶವು ಮುಂದೆ ನಿಂತಿದೆ, ಈಗ ನಿಮಗೆ ತಂದೆಯ ಮೂಲಕ ಭೂತ-ವರ್ತಮಾನ-ಭವಿಷ್ಯದ ಜ್ಞಾನವು ದೊರೆತಿದೆ. ಈ ಸ್ವದರ್ಶನಚಕ್ರವನ್ನು ತಿರುಗಿಸಬೇಕು, ತಂದೆ ಹಾಗೂ ತಂದೆಯ ರಚನೆಯನ್ನು ತಿಳಿದುಕೊಳ್ಳಬೇಕು. ಎಷ್ಟೊಂದು ಸಹಜ ಮಾತಾಗಿದೆ.

ಗೀತೆ:ನೀವು ಪ್ರೀತಿಯ ಸಾಗರರಾಗಿದ್ದೀರಿ....... ಚಿತ್ರಗಳಲ್ಲಿ ಜ್ಞಾನಸಾಗರ, ಆನಂದಸಾಗರ, ಎಂದು ಬರೆಯುತ್ತಾರೆ. ಅದರಲ್ಲಿ ಪ್ರೀತಿಯ ಸಾಗರ ಎಂಬ ಅಕ್ಷರವು ಅವಶ್ಯವಾಗಿ ಬರಬೇಕು. ತಂದೆಯ ಮಹಿಮೆ ಸಂಪೂರ್ಣವಾಗಿ ಬೇರೆಯಾಗಿದೆ. ಸರ್ವವ್ಯಾಪಿ ಎಂದು ಹೇಳುವುದರಿಂದ ಮಹಿಮೆಯನ್ನೇ ಇಲ್ಲವಾಗಿಸಿದ್ದಾರೆ. ಆದ್ದರಿಂದ ಪ್ರೀತಿಯ ಸಾಗರ ಎಂಬ ಅಕ್ಷರವನ್ನು ಅವಶ್ಯವಾಗಿ ಬರೆಯಬೇಕು. ಇದು ಬೇಹದ್ದಿನ ತಾಯಿ-ತಂದೆಯ ಪ್ರೀತಿಯಾಗಿದೆ. ಅವರಿಗಾಗಿಯೇ ನಿಮ್ಮ ಕೃಪೆಯಿಂದ ಅಪಾರ ಸುಖ-ಸಂಪತ್ತು ಪಡೆದೆವು ಎಂದು ಹೇಳುತ್ತಾರೆ. ಆದರೆ ಅವರನ್ನು ತಿಳಿದುಕೊಂಡಿಲ್ಲ. ಈಗ ತಂದೆಯು ಹೇಳುತ್ತಾರೆ - ನೀವು ನನ್ನನ್ನು ತಿಳಿದುಕೊಳ್ಳುವುದರಿಂದ ಎಲ್ಲವನ್ನೂ ತಿಳಿದುಕೊಳ್ಳುತ್ತೀರಿ. ನಾನೇ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತೇನೆ. ಇದು ಒಂದು ಜನ್ಮದ ಮಾತಲ್ಲ. ಇಡೀ ಸೃಷ್ಟಿಯ ಭೂತ-ಭವಿಷ್ಯ-ವರ್ತಮಾನವನ್ನು ತಿಳಿದಿದ್ದಾರೆ ಆದುದರಿಂದ ಇದೆಲ್ಲವೂ ಬುದ್ಧಿಯಲ್ಲಿ ಬರಬೇಕಾಗಿದೆ. ಯಾರು ದೇಹೀ ಅಭಿಮಾನಿಯಾಗುವುದಿಲ್ಲವೋ ಅವರಿಗೆ ಧಾರಣೆಯಾಗುವುದಿಲ್ಲ. ಇಡೀ ಕಲ್ಪವೂ ದೇಹಾಭಿಮಾನವೇ ನಡೆಯಿತು. ಸತ್ಯಯುಗದಲ್ಲಿಯೂ ಪರಮಾತ್ಮನ ಜ್ಞಾನವಿರುವುದಿಲ್ಲ. ಯಾವಾಗ ಪರಮಧಾಮದಿಂದ ಇಲ್ಲಿಗೆ ಪಾತ್ರವನ್ನು ಮಾಡಲು ಬರುತ್ತೀರಿ ಆಗ ಪರಮಾತ್ಮನ ಜ್ಞಾನವನ್ನು ಮರೆತುಹೋಗುತ್ತೀರಿ. ಆತ್ಮವು ಒಂದು ಶರೀರವನ್ನು ಬಿಟ್ಟು ಮತ್ತೊಂದು ಶರೀರವನ್ನು ತೆಗೆದುಕೊಳ್ಳುತ್ತದೆ ಎಂಬ ಜ್ಞಾನವು ಇರುತ್ತದೆ. ಆದರೆ ಸತ್ಯಯುಗದಲ್ಲಿ ದುಃಖದ ಮಾತಿರುವುದಿಲ್ಲ. ಪ್ರೇಮದಸಾಗರ, ಜ್ಞಾನಸಾಗರ ಎಂಬುದು ತಂದೆಯ ಮಹಿಮೆಯಾಗಿದೆ. ಒಂದು ಹನಿ ಮನ್ಮನಾಭವ, ಮಧ್ಯಾಜೀಭವ ಆಗಿದೆ. ಈ ಹನಿ ಸಿಕ್ಕಿದಾಗಲೇ ನಾವು ವಿಷಯಸಾಗರದಿಂದ ಕ್ಷೀರಸಾಗರಕ್ಕೆ ಹೊರಟುಹೋಗುತ್ತೇವೆ. ಸ್ವರ್ಗದಲ್ಲಿ ಹಾಲು-ತುಪ್ಪದ ನದಿಯು ಹರಿಯುತ್ತಿತ್ತೆಂದು ಹೇಳುತ್ತಾರಲ್ಲವೇ, ಇದೆಲ್ಲವೂ ಅಲ್ಲಿಯ ಮಹಿಮೆಯಾಗಿದೆ. ಬಾಕಿ ಹಾಲು-ತುಪ್ಪದ ನದಿ ಹೇಗೆ ಹರಿಯುತ್ತದೆ! ಮಳೆಯಲ್ಲಂತೂ ನೀರು ಮಾತ್ರ ಸುರಿಯುತ್ತದೆ ಅಂದಾಗ ತುಪ್ಪ ಎಲ್ಲಿಂದ ಸುರಿಯುತ್ತದೆ. ಇದು ಕೇವಲ ಮಹಿಮೆ ಮಾಡಿರುವುದಾಗಿದೆ. ಈಗ ನೀವು ಯಾವುದಕ್ಕೆ ಸ್ವರ್ಗವೆಂದು ಹೇಳುತ್ತಾರೆಂಬುದನ್ನು ತಿಳಿದುಕೊಂಡಿದ್ದೀರಿ. ಒಂದುವೇಳೆ ಅಜ್ಮೀರ್ದಲ್ಲಿ ಸ್ವರ್ಗದ ಮಾದರಿಯಿರಬಹುದು ಆದರೆ ಏನನ್ನೂ ತಿಳಿದುಕೊಂಡಿಲ್ಲ. ನೀವು ಯಾರಿಗಾದರೂ ತಿಳಿಸಿಕೊಟ್ಟರೆ ತಕ್ಷಣ ತಿಳಿದುಕೊಳ್ಳುತ್ತಾರೆ. ಹೇಗೆ ತಂದೆಯಲ್ಲಿ ಆದಿ-ಮಧ್ಯ-ಅಂತ್ಯದ ಜ್ಞಾನವಿದೆಯೋ ಹಾಗೆಯೇ ಮಕ್ಕಳ ಬುದ್ಧಿಯಲ್ಲಿಯೂ ತಿರುಗುತ್ತಿರಬೇಕು, ತಂದೆಯ ಪರಿಚಯವನ್ನು ಕೊಡಬೇಕು, ಯಥಾರ್ಥವಾದ ಮಹಿಮೆ ಹೇಳಬೇಕು. ಅವರ ಮಹಿಮೆಯು ಅಪರಮಪಾರವಾಗಿದೆ. ಎಲ್ಲರೂ ಒಂದೇ ಸಮಾನರಾಗಿರುವುದಿಲ್ಲ. ಪ್ರತಿಯೊಬ್ಬರಿಗೂ ತಮ್ಮತಮ್ಮದೇ ಆದ ಪಾತ್ರ ಸಿಕ್ಕಿದೆ. ಮೊದಲು ತಂದೆಯು ದಿವ್ಯದೃಷ್ಟಿಯಲ್ಲಿ ತೋರಿಸಿದ್ದನ್ನು ಮುಂದೆ ಹೋಗುತ್ತಾ ಪ್ರತ್ಯಕ್ಷದಲ್ಲಿ ನೋಡುತ್ತೀರಿ. ಸ್ಥಾಪನೆ ಹಾಗೂ ವಿನಾಶದ ಸಾಕ್ಷಾತ್ಕಾರ ಮಾಡಿಸುತ್ತಿರುತ್ತಾರೆ. ಅರ್ಜುನನಿಗೆ ದಿವ್ಯದೃಷ್ಟಿಯ ಸಾಕ್ಷಾತ್ಕಾರ ಮಾಡಿಸಿದ್ದರು ನಂತರ ಅದನ್ನು ಪ್ರತ್ಯಕ್ಷದಲ್ಲಿ ನೋಡಿದರು. ನೀವೂ ಸಹ ಈ ಕಣ್ಣುಗಳಿಂದ ವಿನಾಶವನ್ನು ನೋಡುತ್ತೀರಿ. ವೈಕುಂಠವನ್ನೂ ಸಾಕ್ಷಾತ್ಕಾರದಲ್ಲಿ ನೋಡಿದ್ದೀರಿ ಅದೂ ಸಹ ಯಾವಾಗ ಪ್ರತ್ಯಕ್ಷತೆಯಲ್ಲಿ ಬರುತ್ತದೆಯೋ ಆಗ ಸಾಕ್ಷಾತ್ಕಾರವು ಸಮಾಪ್ತಿಯಾಗಿಬಿಡುತ್ತದೆ. ಎಷ್ಟೊಂದು ಒಳ್ಳೊಳ್ಳೆಯ ಮಾತುಗಳನ್ನು ತಿಳಿಸುತ್ತಾರೆ. ಅದನ್ನು ಮಕ್ಕಳು ನಂತರ ಅನ್ಯರಿಗೆ ತಿಳಿಸಿಕೊಡಬೇಕು. ಸಹೋದರ-ಸಹೋದರಿಯರೆ ಬಂದು ಜ್ಞಾನ, ಯೋಗದ ಮೂಲಕ ಇಂತಹ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಿ.

ತಂದೆಯು ನಿಮಂತ್ರಣ ಪತ್ರವನ್ನು ಸರಿಪಡಿಸುತ್ತಿದ್ದರು. ಕೆಳಗಡೆ ಸಹಿ ಮಾಡುತ್ತಾರೆ, ಈ ಕಾರ್ಯಕ್ಕಾಗಿ ನಾವು ತನು-ಮನ-ಧನಸಹಿತ ಈಶ್ವರೀಯ ಸೇವೆಯಲ್ಲಿ ಉಪಸ್ಥಿತರಾಗಿದ್ದೇವೆ. ಮುಂದೆ ಹೋಗುತ್ತಾ ನಿಮ್ಮ ಮಹಿಮೆಯು ಗೊತ್ತಾಗುತ್ತದೆ. ಯಾರು ಕಲ್ಪದ ಹಿಂದೆ ಆಸ್ತಿಯನ್ನು ತೆಗೆದುಕೊಂಡಿದ್ದರೋ ಅವರು ಬಂದೇ ಬರುತ್ತಾರೆ ಆದರೆ ಪರಿಶ್ರಮಪಡಬೇಕಾಗುತ್ತದೆ. ನಂತರ ಅಪಾರವಾದ ಖುಷಿಯು ಏರುತ್ತಾ-ಏರುತ್ತಾ ಅವಿನಾಶಿಯಾಗಿಬಿಡುತ್ತದೆ. ನಂತರ ಪದೇ ಪದೇ ಬಾಡಿಹೋಗುವುದಿಲ್ಲ. ಬಹಳ ಬಿರುಗಾಳಿಗಳಂತೂ ಬರುತ್ತದೆ ಆದರೆ ಪಾರು ಮಾಡಬೇಕಾಗಿದೆ. ಶ್ರೀಮತದಂತೆ ನಡೆಯುತ್ತಾ ಇರಿ, ವ್ಯವಹಾರವನ್ನೂ ಮಾಡಬೇಕಾಗುತ್ತದೆ. ಎಲ್ಲಿಯವರೆಗೆ ಸೇವೆಯ ಪ್ರತ್ಯಕ್ಷ ಪ್ರಮಾಣವನ್ನು ಕೊಡುವುದಿಲ್ಲ ಅಲ್ಲಿಯವರೆಗೆ ತಂದೆಯು ಅಂತಹವರನ್ನು ಈ ಸೇವೆಯಲ್ಲಿ ತೊಡಗಿಸುವುದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಶ್ರೀಮತದಂತೆ ಪೂರ್ಣ ಗಮನ ಕೊಟ್ಟು ತಮ್ಮ ಹಾಗೂ ಅನ್ಯರ ಕಲ್ಯಾಣ ಮಾಡಬೇಕು. ಸರ್ವರಿಗೂ ಸತ್ಯಯಾತ್ರೆಯನ್ನು ಮಾಡಿಸಬೇಕು, ದಯಾಹೃದಯಿಗಳಾಗಬೇಕು.

2. ತಂದೆಯ ಪ್ರತೀ ಆಜ್ಞೆಯನ್ನು ಪಾಲಿಸಬೇಕು. ನೆನಪು ಹಾಗೂ ಸೇವೆಯ ಚಾರ್ಟನ್ನು ಅವಶ್ಯವಾಗಿ ಇಡಬೇಕು. ಸ್ವದರ್ಶನಚಕ್ರವನ್ನು ತಿರುಗಿಸಬೇಕು.

ವರದಾನ:
ಸತ್ಯ ಹೃದಯದಿಂದ ಸಾಹೇಭನನ್ನು ರಾಜಿ ಮಾಡುವಂತಹ ರಾಜಯುಕ್ತ, ಯುಕ್ತಿಯುಕ್ತ, ಯೋಗಯುಕ್ತ ಭವ

ಬಾಪ್ದಾದಾರವರ ಟೈಟಲ್ ದಿಲ್ವಾಲಾ, ದಿಲಾರಾಮ ಆಗಿದ್ದಾರೆ. ಯಾರು ಸತ್ಯ ಹೃದಯದ ಮಕ್ಕಳಾಗಿದ್ದಾರೆ ಅವರ ಮೇಲೆ ಸಾಹೇಭ ರಾಜಿಯಾಗಿಬಿಡುತ್ತಾರೆ. ಹೃದಯದಿಂದ ತಂದೆಯನ್ನು ನೆನಪು ಮಾಡುವಂತಹವರು ಸಹಜವಾಗಿ ಬಿಂದು ರೂಪವಾಗಲು ಸಾಧ್ಯ. ಅವರು ತಂದೆಯ ವಿಶೇಷ ಆಶೀರ್ವಾದಗಳಿಗೆ ಪಾತ್ರರಾಗಿಬಿಡುತ್ತಾರೆ. ಸತ್ಯತೆಯ ಶಕ್ತಿಯಿಂದ ಸಮಯ ಪ್ರಮಾಣ ಅವರ ಬುದ್ಧಿ ಯುಕ್ತಿಯುಕ್ತ, ಯಥಾರ್ಥ ಕಾರ್ಯ ಸ್ವತಃವಾಗಿ ಮಾಡುತ್ತಾರೆ ಭಗವಂತನನ್ನು ರಾಜಿ ಮಾಡಿದ್ದಾರೆ ಆದ್ದರಿಂದ ಪ್ರತಿ ಸಂಕಲ್ಪ, ಮಾತು ಮತ್ತು ಕರ್ಮ ಯಥಾರ್ಥವಾಗಿರುತ್ತದೆ. ಅವರು ರಾಜಯುಕ್ತ, ಯುಕ್ತಿಯುಕ್ತ, ಯೋಗಯುಕ್ತ ಆಗಿಬಿಡುವರು.

ಸ್ಲೋಗನ್:
ತಂದೆಯ ಪ್ರೀತಿಯಲ್ಲಿ ಸದಾ ಲೀನರಾಗಿದ್ದಾಗ ಅನೇಕ ಪ್ರಕಾರದ ದುಃಖ ಮತ್ತು ಮೋಸದಿಂದ ತಪ್ಪಿಸಿಕೊಂಡುಬಿಡುತ್ತಾರೆ.