03.01.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ ತಂದೆ (ಅಲ್ಫ್) ಹಾಗೂ (ಬೇ) ಆಸ್ತಿಯನ್ನು ನೆನಪು ಮಾಡುತ್ತಿದ್ದರೆ ಖುಷಿಯ ನಶೆಯೇರುತ್ತದೆ, ಇದು ಬಹಳ ಸಹಜ ಸೆಕೆಂಡಿನ ಮಾತಾಗಿದೆ.

ಪ್ರಶ್ನೆ:
ಅಪರಿಮಿತ ಖುಷಿ ಯಾವ ಮಕ್ಕಳಿಗೆ ಇರುತ್ತದೆ? ಸದಾ ಖುಷಿಯ ನಶೆ ಏರಿರಬೇಕಾದರೆ ಅದರ ಸಾಧನವೇನು?

ಉತ್ತರ:
ಯಾವ ಮಕ್ಕಳು ಅಶರೀರಿಯಾಗುವ ಅಭ್ಯಾಸ ಮಾಡುವರೋ ಮತ್ತು ತಂದೆಯು ಏನನ್ನು ಹೇಳುತ್ತಾರೆಯೋ ಅದನ್ನು ಚೆನ್ನಾಗಿ ಧಾರಣೆ ಮಾಡಿ ಅನ್ಯರಿಗೆ ಮಾಡಿಸುತ್ತಾರೆ ಅವರಿಗೆ ಅಪಾರ ಖುಷಿಯಿರುತ್ತದೆ. ಖುಷಿಯ ನಶೆಯು ಸದಾ ಏರಿರಬೇಕಾದರೆ ಅವಿನಾಶಿ ಜ್ಞಾನರತ್ನಗಳ ದಾನ ಮಾಡುತ್ತಿರಿ. ಅನೇಕರ ಕಲ್ಯಾಣವನ್ನು ಮಾಡಿ. ಸದಾ ಈ ಸ್ಮೃತಿಯಲ್ಲಿರಿ - ನಾವೀಗ ಸುಖ ಹಾಗೂ ಶಾಂತಿಯ ಶಿಖರದ ಮೇಲೆ ಹತ್ತುತ್ತಿದ್ದೇವೆ ಎಂದಾಗ ಖುಷಿಯಿರುತ್ತದೆ.

ಓಂ ಶಾಂತಿ.
ಬಾಪ್‍ದಾದಾರವರ ವಿಚಾರವಾಗಿದೆ - ಒಂದು ಸೆಕೆಂಡಿನಲ್ಲಿ ಮಕ್ಕಳಿಂದ ಬರೆಸಿಕೊಂಡು ತೆಗೆದುಕೊಳ್ಳಬೇಕು - ಯಾರ ನೆನಪಿನಲ್ಲಿ ಕುಳಿತಿದ್ದೀರಿ? ಇದನ್ನು ಬರೆಯುವುದರಲ್ಲಿ ಸಮಯವೇನೂ ಹಿಡಿಸುವುದಿಲ್ಲ. ಪ್ರತಿಯೊಬ್ಬರೂ ಒಂದು ಸೆಕೆಂಡಿನಲ್ಲಿ ಬರೆದು ತಂದೆಗೆ ತೋರಿಸಬಹುದು (ಬರೆದು ಬಾಪ್‍ದಾದಾರವರಿಗೆ ತೋರಿಸಿದರು ಮತ್ತು ತಂದೆಯೂ (ಬ್ರಹ್ಮಾ) ಬರೆದರು, ಬಾಬಾ ಏನನ್ನು ಬರೆದರೋ ಅದನ್ನು ಬೇರೆ ಯಾರೂ ಬರೆಯಲಿಲ್ಲ. ತಂದೆಯು ಬರೆದರು ತಂದೆ ಹಾಗೂ ಆಸ್ತಿ, ಎಷ್ಟೊಂದು ಸಹಜವಾಗಿದೆ. ತಂದೆಯು ಓದಿಸುತ್ತಾರೆ ಹಾಗೂ ತಾವು ರಾಜ್ಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಿದ್ದೀರಿ. ಇನ್ನು ಹೆಚ್ಚಾಗಿ ಬರೆಯುವ ಅವಶ್ಯಕತೆಯಿಲ್ಲ. ತಾವು ಬರೆಯುವುದರಲ್ಲಿ ಎರಡು ನಿಮಿಷ ತೆಗೆದುಕೊಂಡಿರಿ. ತಂದೆ ಮತ್ತು ಆಸ್ತಿಯ ವಿಚಾರವು ಎರಡು ಸೆಕೆಂಡಿನದಾಯಿತು. ಸನ್ಯಾಸಿಗಳು ಕೇವಲ ತಂದೆಯನ್ನು ನೆನಪು ಮಾಡುತ್ತಾರೆ. ತಮಗೆ ಆಸ್ತಿಯೂ ಸಹ ನೆನಪಿದೆ, ನೆನಪಿನ ಅಭ್ಯಾಸವಾಗಿ ಬಿಡುತ್ತದೆ. ಬುದ್ಧಿಯಲ್ಲಿ ಕುಳಿತುಕೊಂಡರೆ ಖುಷಿಯ ನಶೆಯೇರುತ್ತದೆ. ತಂದೆಯೆಂದರೆ ಎಷ್ಟು ಬಹಳ ಎತ್ತರವಾದ ಶಿಖರದಂತಿದೆ ಅದಕ್ಕಿಂತಲೂ ಮೇಲೆ ಇನ್ನ್ಯಾವುದೇ ವಸ್ತುಗಳಿರುವುದಿಲ್ಲ. ಇರುವಂತಹ ಸ್ಥಾನವೂ ಶ್ರೇಷ್ಟಾತಿ ಶ್ರೇಷ್ಠವಾಗಿದೆ. ಸೆಕೆಂಡಿನಲ್ಲಿ ಮುಕ್ತಿ-ಜೀವನ್ಮುಕ್ತಿಯ ಅರ್ಥವೂ ಸಹ ಯಾರಿಗೂ ಗೊತ್ತಿಲ್ಲ. ಅದಕ್ಕೂ ಸಹ ಅರ್ಥವಿರುತ್ತದೆ. ಗಂಡು ಮಗು ಜನ್ಮ ಪಡೆದರೆ ಬರೆಯುತ್ತಾರೆ - ಇಷ್ಟು ಗಂಟೆ, ಇಷ್ಟು ನಿಮಿಷ, ಇಷ್ಟು ಸೆಕೆಂಡಿನಲಾಯಿತೆಂದು ಟಿಕ್, ಟಿಕ್ ನಡೆಯುತ್ತಲೇ ಇರುತ್ತದೆ. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡುವುದರಲ್ಲಿ ಸೆಕೆಂಡ್ ಸಹ ಹಿಡಿಸುವುದಿಲ್ಲ. ಹೇಳುವ ಅವಶ್ಯಕತೆಯೂ ಇಲ್ಲ ನೆನಪಂತೂ ಇದ್ದೇ ಇರುತ್ತದೆ. ತಾವು ಮಕ್ಕಳಿಗೆ ಅಷ್ಟು ಚೆನ್ನಾಗಿ ಸ್ಥಿತಿಯಿರಬೇಕು. ಆದರೆ ಅದು ಯಾವಾಗ ನೆನಪಿರುತ್ತದೆಯೋ ಆಗ ಇರುತ್ತದೆ. ಇಲ್ಲಿ ಕುಳಿತಿದ್ದೀರಿ ಅಂದಾಗ ತಂದೆ ಹಾಗೂ ರಾಜ್ಯದ ನೆನಪಿರಬೇಕು. ಬುದ್ಧಿಯು ನೋಡುತ್ತಿರುತ್ತದೆ, ಇದಕ್ಕೆ ದಿವ್ಯ ದೃಷ್ಟಿ ಎನ್ನಲಾಗುತ್ತದೆ. ಆತ್ಮವೂ ನೋಡುತ್ತದೆ ತಂದೆಯನ್ನು ಆತ್ಮವೇ ನೆನಪು ಮಾಡುತ್ತದೆ. ತಾವೂ ಸಹ ತಂದೆಯನ್ನು ನೆನಪು ಮಾಡಿ ಆಗ ರಾಜಧಾನಿಯೂ ಜೊತೆಯಲ್ಲಿ ನೆನಪು ಬರುತ್ತದೆ. ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಇಲ್ಲೂ ಸಹ ನೆನಪಿನಲ್ಲಿ ಕುಳಿತಾಗ ಗದ್ಗದಿತರಾಗುವಿರಿ. ತಂದೆಗೆ ಇಲ್ಲಿಯ ಯಾವ ಮಾತೂ ನೆನಪೇ ಇಲ್ಲ. ತಂದೆಯು ಅಲ್ಲಿನ ಮಾತುಗಳನ್ನೇ ನೆನಪು ಮಾಡುತ್ತಾರೆ. ತಂದೆ ಮತ್ತು ರಾಜ್ಯವು ಬಾಗಿಲಲ್ಲಿ ನಿಂತಿರುವ ಹಾಗೆ ಅನಿಸುತ್ತದೆ. ತಂದೆಯು ಹೇಳುತ್ತಾರೆ - ತಾವು ಮಕ್ಕಳಿಗೆ ರಾಜ್ಯವನ್ನು ತಂದಿದ್ದೇನೆ. ತಾವು ನೆನಪು ಮಾಡುವುದಿಲ್ಲ, ಆದ್ದರಿಂದ ಖುಷಿಯು ಸ್ಥಿರವಾಗಿರುವುದಿಲ್ಲ. ತಾವು ಕುಳಿತುಕೊಳ್ಳುತ್ತಾ-ಎದ್ದೇಳುತ್ತಾ ತಮ್ಮನ್ನು ಆತ್ಮನೆಂದು ತಿಳಿಯಿರಿ ಮತ್ತು ನಾನು ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ. ಎಷ್ಟು ಶ್ರೇಷ್ಠ ಸ್ಥಾನದಲ್ಲಿ ಇರುತ್ತೀರಿ ಆದರೆ ಜಗತ್ತಿಗೆ ಇದು ಗೊತ್ತಿದೆಯೇ? ಮನುಷ್ಯರು ಮುಕ್ತಿಗೆ ಹೋಗಲು ಎಷ್ಟೊಂದು ಕಷ್ಟ ಪಡುತ್ತಾರೆ. ಈಗ ಮುಕ್ತಿಧಾಮವು ಎಲ್ಲಿದೆ? ಆತ್ಮವಂತೂ ರಾಕೆಟ್ ಆಗಿದೆ ಎಂಬುದಂತೂ ತಮಗೆ ಗೊತ್ತಿದೆ. ಅವರು ಚಂದ್ರನ ತನಕ ಹೋಗುತ್ತಾರೆ. ನಂತರ ಆಕಾಶವಿದೆ, ತಾವು ಆಕಾಶಕ್ಕಿಂತಲೂ ಬಹಳ ಮೇಲೆ ಹೋಗುತ್ತೀರಿ. ಚಂದ್ರನು ಈ ಜಗತ್ತಿನದಾಗಿದೆ. ಸೂರ್ಯ, ಚಂದ್ರ, ನಕ್ಷತ್ರಗಳಿಗಿಂತಲೂ ಮೇಲೆ, ಶಬ್ಧದಿಂದಲೂ ಮೇಲೆ ಎಂದು ಹೇಳಲಾಗುತ್ತದೆ. ಈ ಶರೀರವನ್ನು ಬಿಡಬೇಕು ತಾವು ಮಧುರ ಶಾಂತಿಯ ಮನೆಯಿಂದ ಬರುತ್ತೀರಿ, ಬಂದು ಹೋಗುವುದರಲ್ಲಿ ಸಮಯ ಹಿಡಿಸುವುದಿಲ್ಲ. ತಮ್ಮ ಮನೆಯಾಗಿದೆ - ಇಲ್ಲಂತೂ ಎಲ್ಲಿಗೆ ಹೋದರೂ ಸಮಯ ಹಿಡಿಸುತ್ತದೆ. ಆತ್ಮ ಶರೀರ ಬಿಟ್ಟಾಗ ಸೆಕೆಂಡಿನಲ್ಲಿ ಎಲ್ಲಿಂದ ಎಲ್ಲಿಗೋ ಹೊರಟು ಹೋಗುತ್ತದೆ. ಒಂದು ದೇಹವನ್ನು ಬಿಟ್ಟು ಇನ್ನೊಂದರಲ್ಲಿ ಪ್ರವೇಶ ಮಾಡುತ್ತದೆ ಅಂದಮೇಲೆ ತಮ್ಮನ್ನು ಆತ್ಮನೆಂದು ತಿಳಿಯಬೇಕು. ತಾವು ಬಹಳ ಶ್ರೇಷ್ಠ ಶಿಖರಕ್ಕೆ ಹೋಗುತ್ತೀರಿ. ಮನುಷ್ಯರು ಶಾಂತಿಯನ್ನು ಬಯಸುತ್ತಾರೆ. ಶಾಂತಿಯದು ಬಹಳ ಎತ್ತರ ಶಿಖರವೆಂದರೆ ನಿರಾಕಾರ ಜಗತ್ತು ಹಾಗೂ ಸುಖದ ಎತ್ತರವಾದ ಶಿಖರವೆಂದರೆ ಸುಖಧಾಮ. ತಮ್ಮ ಮನೆಯೂ ಸಹ ಎಷ್ಟು ಎತ್ತರದಲ್ಲಿದೆ, ಜಗತ್ತಿನವರು ಎಂದೂ ಈ ಮಾತುಗಳ ಬಗ್ಗೆ ವಿಚಾರ ಮಾಡುವುದಿಲ್ಲ. ಅವರಿಗೆ ಈ ಮಾತುಗಳನ್ನು ತಿಳಿಸುವವರು ಯಾರೂ ಇಲ್ಲ. ಅದಕ್ಕೆ ಶಾಂತಿಯ ಸ್ಥಂಭ ಎನ್ನಲಾಗುತ್ತದೆ, ಮನುಷ್ಯರು ವಿಶ್ವದಲ್ಲಿ ಶಾಂತಿಯಾಗಲಿ ಎಂದು ಹೇಳುತ್ತಿರುತ್ತಾರೆ. ಆದರೆ ಶಾಂತಿಯೆಲ್ಲಿದೆ ಎಂಬುದರ ಅರ್ಥವನ್ನಂತೂ ತಿಳಿದುಕೊಂಡಿಲ್ಲ. ಈ ಲಕ್ಷ್ಮೀ-ನಾರಾಯಣರು ಸುಖದ ಸ್ತಂಭದಲ್ಲಿದ್ದರು ಅಲ್ಲಿ ಯಾವುದೇ ಲೋಭ, ದುರಾಸೆಯಿರುವುದಿಲ್ಲ. ಅಲ್ಲಿ ಭೋಜನ-ಪಾನೀಯ, ಮಾತನಾಡುವುದು ಎಲ್ಲವೂ ರಾಯಲ್ ಆಗಿರುತ್ತದೆ ಮತ್ತು ಸುಖವೂ ಸಹ ಶ್ರೇಷ್ಠವಾಗಿದೆ. ಅವರ ಮಹಿಮೆಯನ್ನು ನೋಡಿ ಎಷ್ಟಿದೆ. ಏಕೆಂದರೆ ಅವರು ಬಹಳ ಶ್ರಮ ಪಟ್ಟಿದ್ದಾರೆ. ಇವರು ಒಬ್ಬರಿಲ್ಲ ಪೂರ್ಣ ಮಾಲೆಯೇ ಮಾಡಲ್ಪಟ್ಟಿದೆ. ವಾಸ್ತವದಲ್ಲಿ ನವರತ್ನಗಳ ಗಾಯನವಿದೆ. ಖಂಡಿತ ಅವರು ಗುಪ್ತ ಪ್ರಯತ್ನ ಪಟ್ಟಿರಬಹುದು. ತಂದೆ ಹಾಗೂ ಆಸ್ತಿಯ ನೆನಪಿರಲಿ ಆಗಲೇ ವಿಕರ್ಮ ವಿನಾಶವಾಗುವುದು. ಆದರೆ ಮಾಯೆಯು ನೆನಪು ಮಾಡಲು ಬಿಡುವುದಿಲ್ಲ. ಕೆಲವೊಮ್ಮೆ ಕಾಮ, ಕೆಲವೊಮ್ಮೆ ಕ್ರೋಧ.... ಬಹಳ ಬಿರುಗಾಳಿಯನ್ನು ತರುತ್ತದೆ. ತಮ್ಮ ನಾಡಿಯನ್ನು ನೋಡಿಕೊಳ್ಳಬೇಕು. ನಾರದನಿಗೂ ಸಹ ಮುಖ ನೋಡಿಕೋ ಎನ್ನಲಾಯಿತು ಅಂದಮೇಲೆ ಆ ಸ್ಥಿತಿಯು ಈಗಿಲ್ಲ, ಮಾಡಿಕೊಳ್ಳಬೇಕು. ತಂದೆಯು ಗುರಿಯನ್ನಂತೂ ಹೇಳುತ್ತಾರೆ - ಒಳಗಡೆ ಪುರುಷಾರ್ಥವನ್ನಂತೂ ಮಾಡುತ್ತಿರಿ. ಮುಂದೆಹೋದಂತೆ ತಮ್ಮ ಸ್ಥಿತಿಯು ಈ ರೀತಿ ಆಗುತ್ತದೆ. ಅಶರೀರಿಯಾಗುವ ಅಭ್ಯಾಸ ಮಾಡಬೇಕು. ಈಗ ಹಿಂತಿರುಗಿ ಹೋಗಬೇಕು. ನನ್ನನ್ನು ನೆನಪು ಮಾಡಿ ಎಂದು ತಂದೆಯು ಹೇಳುತ್ತಾರೆ. ನೆನಪು ಮಾಡದಿದ್ದರೆ ಶಿಕ್ಷೆಯೂ ಸಹ ಬಹಳ ಅನುಭವಿಸಬೇಕಾಗುತ್ತದೆ ಮತ್ತು ಪದವಿಯೂ ಕಡಿಮೆ. ಇದು ಬಹಳ ಸೂಕ್ಷ್ಮವಾದ ಮಾತುಗಳಾಗಿವೆ. ಅವರು ವಿಜ್ಞಾನದಲ್ಲಿ ಎಷ್ಟು ಆಳವಾಗಿ ಹೋಗುತ್ತಾರೆ, ಏನೇನೋ ಮಾಡುತ್ತಿರುತ್ತಾರೆ. ಆ ಸಂಸ್ಕಾರವೂ ಬೇಕಲ್ಲವೆ ಅವರು ಮತ್ತೆ ಅಲ್ಲಿಯೂ ಹೋಗಿ ಈ ವಸ್ತುಗಳನ್ನೆಲ್ಲಾ ಮಾಡುತ್ತಾರೆ. ಕೇವಲ ಈ ಜಗತ್ತು ಪರಿವರ್ತನೆಯಾಗುತ್ತದೆ. ಇಲ್ಲಿಯ ಸಂಸ್ಕಾರಕ್ಕನುಸಾರವಾಗಿಯೇ ಹೋಗಿ ಜನ್ಮ ಪಡೆಯುತ್ತಾರೆ. ಹೇಗೆ ಯುದ್ಧದವರ ಬುದ್ಧಿಯಲ್ಲಿ ಯುದ್ಧದ ಸಂಸ್ಕಾರವಿರುತ್ತದೆ ಅಂದಮೇಲೆ ಆ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತಾರೆ. ಯುದ್ಧ ಮಾಡದೆ ಇರಲು ಸಾಧ್ಯವಿಲ್ಲ. ಅಧಿಕಾರಿಗಳ ಬಳಿ ಪ್ರವೇಶ ಮಾಡುವ ಸಮಯದಲ್ಲಿ ಯಾವುದೇ ಖಾಯಿಲೆಯಿಲ್ಲವೆ ಎಂದು ಪರಿಶೀಲನೆ ಮಾಡುತ್ತಾರೆ. ಕಣ್ಣು-ಕಿವಿ ಎಲ್ಲವೂ ಸರಿಯಾಗಿದೆಯೇ. ಯುದ್ಧದಲ್ಲಿ ಎಲ್ಲವೂ ಸರಿಯಿರಬೇಕು. ಇಲ್ಲಿಯೂ ಸಹ ನೋಡಲಾಗುತ್ತದೆ - ಯಾರು-ಯಾರು ವಿಜಯಮಾಲೆಯ ಮಣಿಗಳಾಗುತ್ತಾರೆ. ತಾವು ಪುರುಷಾರ್ಥ ಮಾಡಿ ಕರ್ಮಾತೀತ ಸ್ಥಿತಿಯನ್ನು ಪಡೆಯಬೇಕು. ಆತ್ಮ ಅಶರೀರಿಯಾಗಿ ಬಂದಿತ್ತು, ಅಶರೀರಿಯಾಗಿ ಹೋಗಬೇಕು. ಅಲ್ಲಿ ಶರೀರದೊಂದಿಗೆ ಯಾವುದೇ ಸಂಬಂಧ ಇಲ್ಲ. ಆತ್ಮವು ಈಗ ಅಶರೀರಿಗಗಳಾಗಬೇಕಾಗಿದೆ. ಆತ್ಮಗಳು ಅಲ್ಲಿಂದ ಬರುತ್ತವೆ, ಬಂದು ಶರೀರದಲ್ಲಿ ಪ್ರವೇಶ ಮಾಡುತ್ತವೆ. ಅನೇಕ ಆತ್ಮಗಳು ಬರುತ್ತಿರುತ್ತವೆ, ಎಲ್ಲರಿಗೂ ತನ್ನ-ತನ್ನ ಪಾತ್ರವು ಸಿಕ್ಕಿದೆ. ಯಾರ್ಯಾರು ಹೊಸ-ಹೊಸ ಆತ್ಮಗಳು ಬರುತ್ತವೆಯೋ ಅವರಿಗೆ ಮೊದಲು ಸುಖ ಸಿಗಬೇಕು. ಆದ್ದರಿಂದ ಅವರ ಮಹಿಮೆಯಾಗುತ್ತದೆ, ದೊಡ್ಡ ವೃಕ್ಷವಲ್ಲವೆ. ಎಷ್ಟು ಹೆಸರುವಾಸಿಯಾದ ದೊಡ್ಡ ವ್ಯಕ್ತಿಗಳಿದ್ದರು ತಮ್ಮ-ತಮ್ಮ ಶಕ್ತಿ ಅನುಸಾರವಾಗಿ ಬಹಳ ಸುಖದಲ್ಲಿರುತ್ತಾರೆ ಅಂದಮೇಲೆ ತಾವು ಮಕ್ಕಳೂ ಪರಿಶ್ರಮ ಪಡಬೇಕು, ಕರ್ಮಾತೀತ ಸ್ಥಿತಿಯಲ್ಲಿ ಪವಿತ್ರರಾಗಿ ಹೋಗಬೇಕು. ಯಾರಿಗೂ ದುಃಖವನ್ನು ಕೊಡುವುದಿಲ್ಲವೆ, ತಮ್ಮ ನಡುವಳಿಕೆಯನ್ನು ನೋಡಿಕೊಳ್ಳಬೇಕು. ತಂದೆಯು ಎಷ್ಟು ಮಧುರವಾಗಿದ್ದಾರೆ, ಅತಿ ಪ್ರಿಯರಲ್ಲವೆ ಅಂದಮೇಲೆ ಮಕ್ಕಳೂ ಸಹ ಅದೇ ರೀತಿಯಾಗಬೇಕು. ಇದಂತೂ ತಾವು ಮಕ್ಕಳಿಗೆ ಗೊತ್ತಿದೆ ತಂದೆಯು ಇಲ್ಲಿಯೇ ಇದ್ದಾರೆ. ತಂದೆಯು ಇಲ್ಲಿ ಸ್ಥಾಪನೆ ಮಾಡುತ್ತಿದ್ದಾರೆ ಎಂಬುದು ಮನುಷ್ಯರಿಗೆ ಗೊತ್ತಿದೆಯೇ! ಆದರೂ ಜನ್ಮ-ಜನ್ಮಾಂತರ ಅವರು ನೆನಪು ಮಾಡುತ್ತಲೇ ಇರುತ್ತಾರೆ. ಶಿವನ ಮಂದಿರಕ್ಕೆ ಹೋಗಿ ಎಷ್ಟು ಪೂಜೆ ಮಾಡುತ್ತಾರೆ. ಎಷ್ಟು ಎತ್ತರವಾದ ಸ್ಥಾನದಲ್ಲಿ ಬದರಿನಾಥ ಮುಂತಾದ ಮಂದಿರಗಳಿಗೆ ಹೋಗುತ್ತಾರೆ, ಎಷ್ಟೊಂದು ಜಾತ್ರೆಗಳಾಗುತ್ತವೆ, ಏಕೆಂದರೆ ಬಹಳ ಮಧುರರಲ್ಲವೆ. ಸರ್ವಶ್ರೇಷ್ಠ ಭಗವಂತನೆಂದು ಗಾಯನ ಮಾಡುತ್ತಾರೆ. ಬುದ್ಧಿಯಲ್ಲಿ ನಿರಾಕಾರನೇ ನೆನಪಿಗೆ ಬರುತ್ತಾರೆ. ನಿರಾಕಾರನಂತೂ ಹೌದು ನಂತರ ಬ್ರಹ್ಮಾ-ವಿಷ್ಣು-ಶಂಕರ, ಅವರನ್ನು ಭಗವಂತನೆಂದು ಕರೆಯುವುದಿಲ್ಲ.

ನಾವು ಸತೋಪ್ರಧಾನ ದೇವತೆಗಳಾಗಿದ್ದೆವು, ಯಾವಾಗ ನಾವು ವಿಶ್ವದ ಮಾಲೀಕರಾಗಿದ್ದೆವೋ ಆಗ ಇಷ್ಟೊಂದು ಮನುಷ್ಯರಿರಲಿಲ್ಲ ಎಂಬುದು ತಾವು ಮಕ್ಕಳಿಗೆ ಗೊತ್ತಿದೆ. ಕೇವಲ ಭಾರತದಲ್ಲಿಯೇ ಇವರು ರಾಜ್ಯವಿರುತ್ತದೆ. ಉಳಿದವರೆಲ್ಲರೂ ಶಾಂತಿಧಾಮಕ್ಕೆ ಹೋಗಿ ಬಿಡುತ್ತಾರೆ. ತಾವು ಇದನ್ನು ನೋಡುತ್ತಿರುತ್ತೀರಿ, ಇದರಲ್ಲಿ ಬಹಳ ವಿಶಾಲಬುದ್ಧಿಯು ಬೇಕು. ಅಲ್ಲಿ ಬೆಟ್ಟ ಇತ್ಯಾದಿಗಳ ಮೇಲೆ ಹೋಗುವ ಅವಶ್ಯಕತೆಯಿಲ್ಲ. ಅಲ್ಲಿ ಯಾವುದೇ ಅಪಘಾತ ಇತ್ಯಾದಿಗಳು ಆಗುವುದಿಲ್ಲ. ಅದು ಅದ್ಭುತವಾದ ಸ್ವರ್ಗವಾಗಿದೆ. ಯಾವಾಗ ಆ ಅದ್ಭುತವಾದ ಸ್ವರ್ಗವಿರುವುದಿಲ್ಲ ಆಗ ಮಾಯೆಯ ಅದ್ಭುತಗಳು ಆಗುತ್ತದೆ. ಈ ಮಾತುಗಳು ಜಗತ್ತಿನವರು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಈಗ ತಾವು ಸ್ವರ್ಗಕ್ಕೆ ಹೋಗಲು ಪುರುಷಾರ್ಥ ಮಾಡುತ್ತಿದ್ದೀರಿ. ಅದು ಸುಖದ ಸ್ಥಂಭವಾಗಿದೆ, ಇದು ದುಃಖದ ಸ್ಥಂಭವಾಗಿದೆ. ಯುದ್ಧದಲ್ಲಿ ಎಷ್ಟೊಂದು ಮನುಷ್ಯರು ಪ್ರತಿನಿತ್ಯ ಸಾಯುತ್ತಲೇ ಇರುತ್ತಾರೆ ಮತ್ತೆ ಜನ್ಮ ಪಡೆಯುತ್ತಿರುತ್ತಾರೆ. ಈಶ್ವರನ ಅಂತ್ಯವನ್ನು ಪಡೆಯಲಾಗುವುದಿಲ್ಲ ಎನ್ನುವ ಗಾಯನ ಮಾಡುತ್ತಾರೆ. ಈಶ್ವರನಂತೂ ಬಿಂದುವಾಗಿದ್ದಾರೆ, ಅವರ ಅಂತ್ಯವನ್ನೇನು ಪಡೆಯುವಿರಿ. ತಂದೆಯು ತಿಳಿಸುತ್ತಾರೆ - ಈ ರಚನೆಯ ಆದಿ-ಮಧ್ಯ-ಅಂತ್ಯವನ್ನು ಯಾರೂ ತಿಳಿದುಕೊಂಡಿಲ್ಲ. ಸಾಧು-ಸಂತರು ಯಾರೂ ರಚನೆ ಹಾಗೂ ರಚಯಿತನನ್ನು ಪಡೆಯಲು ಸಾಧ್ಯವಿಲ್ಲ. ತಮಗೆ ತಂದೆಯು ಓದಿಸುತ್ತಾರೆ, ಇದಕ್ಕೆ ವಿದ್ಯೆಯೆನ್ನಲಾಗುತ್ತದೆ. ಸೃಷ್ಟಿಚಕ್ರದ ರಹಸ್ಯವನ್ನು ತಾವು ಮಕ್ಕಳೆ ತಿಳಿಯುತ್ತೀರಿ. ಅವರು ಹೇಳುತ್ತಾರೆ ನಮಗೆ ಗೊತ್ತಿಲ್ಲ ಅಥವಾ ಲಕ್ಷಾಂತರ ವರ್ಷಗಳೆಂದು ಹೇಳಿ ಬಿಡುತ್ತಾರೆ.

ಈಗ ತಂದೆಯು ತಿಳಿಸಿದ್ದಾರೆ - ಏನೆಲ್ಲಾ ತಾವಿಲ್ಲಿ ನೋಡುತ್ತೀರಿ, ಇವೆಲ್ಲವೂ ಅಲ್ಲಿರುವುದಿಲ್ಲ. ಸ್ವರ್ಗವು ಸುಖದ ಸ್ಥಂಭವಾಗಿದೆ, ಇಲ್ಲಿ ದುಃಖವೇ ದುಃಖವಿದೆ. ಇದಕ್ಕಿದ್ದಂತೆಯೇ ಮೃತ್ಯುವು ಈ ರೀತಿ ಬರುತ್ತದೆ, ಅದರಿಂದ ಎಲ್ಲರೂ ಸಮಾಪ್ತಿಯಾಗಿ ಬಿಡುತ್ತಾರೆ. ಮೃತ್ಯುವನ್ನು ನೋಡುವುದು ಚಿಕ್ಕಮ್ಮನ ಮನೆಯಂತಲ್ಲ. ಇದಕ್ಕೆ ದುಃಖದ ಶಿಖರವೆನ್ನಲಾಗುತ್ತದೆ, ಅದು ಸುಖದ ಶಿಖರವಾಗಿದೆ. ಬೇರೆ ಇನ್ನ್ಯಾವುದೇ ಅಕ್ಷರವಿಲ್ಲ. ನಿಮ್ಮಲ್ಲಿಯೂ ಅನೇಕರಿದ್ದಾರೆ ಅವರು ಕೇಳಿಸಿಕೊಳ್ಳುತ್ತಾರೆ ಆದರೆ ಧಾರಣೆಯಾಗುವುದಿಲ್ಲ. ಯಾವಾಗ ಬುದ್ಧಿಯು ಚಿನ್ನದ ಸಮಾನವಾಗುತ್ತದೆಯೋ ಆಗ ಧಾರಣೆಯಾಗುತ್ತದೆ. ಧಾರಣೆಯಾಗದಿದ್ದರೆ ಖುಷಿಯೂ ಇರುವುದಿಲ್ಲ. ಚೆನ್ನಾಗಿ ಓದುವವರೂ ಇದ್ದಾರೆ, ಕಡಿಮೆ ಓದುವವರೂ ಇದ್ದಾರೆ. ವಿದ್ಯೆಯಲ್ಲಿ ವ್ಯತ್ಯಾಸವಂತೂ ಇದೆಯಲ್ಲವೆ. ಅವರಿಗೆ ಬೇಹದ್ದಿನ ತಂದೆಯು ಎಷ್ಟೇ ತಿಳಿಸಲಿ ಆದರೆ ಎಂದೂ ಸಹ ಅರ್ಥವೇ ಮಾಡಿಕೊಳ್ಳುವುದಿಲ್ಲ. ನೆನಪಿನ ವಿನಃ ನೀವು ಎಂದೂ ಪವಿತ್ರರಾಗಿರಲು ಸಾಧ್ಯವಿಲ್ಲ. ತಂದೆಯು ಅಯಸ್ಕಾಂತವಾಗಿದ್ದಾರೆ, ಅವರು ಸಂಪೂರ್ಣ ಶ್ರೇಷ್ಠ ಶಕ್ತಿಯುಳ್ಳವರಾಗಿದ್ದಾರೆ. ಅವರಿಗೆ ಎಂದೂ ಸಹ ತುಕ್ಕು ಹಿಡಿಯಲು ಸಾಧ್ಯವಿಲ್ಲ. ಇನ್ನುಳಿದವರೆಲ್ಲರ ಮೇಲೂ ತುಕ್ಕು ಹಿಡಿಯುತ್ತದೆ. ಅದನ್ನು ಇಳಿಸಿಕೊಂಡು ಮತ್ತೆ ಸತೋಪ್ರಧಾನರಾಗಬೇಕು. ತಂದೆಯು ಹೇಳುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ, ಬೇರೆ ಯಾರಲ್ಲಿಯೂ ಮಮತ್ವವಿರಬಾರದು. ಶ್ರೀಮಂತರಿಗಂತೂ ಇಡೀ ದಿನ ಹಣ-ಐಶ್ವರ್ಯವೇ ಮುಂದೆ ಬರುತ್ತಿರುತ್ತದೆ. ಬಡವರಿಗಂತೂ ಏನೂ ಇಲ್ಲ, ಆದರೆ ಬಡವರು ಸ್ವಲ್ಪ ಬುದ್ಧಿವಂತರಾಗಬೇಕು ಅದರಿಂದ ಧಾರಣೆಯಾಗುತ್ತದೆ. ನೆನಪಿನ ವಿನಃ ಕೊಳಕು ಹೇಗೆ ಹೋಗುತ್ತದೆ? ನಾವು ಪವಿತ್ರರು ಹೇಗೆ ಆಗುತ್ತೇವೆ? ತಾವು ಇಲ್ಲಿಗೆ ಬರುವುದೇ ಶ್ರೇಷ್ಠ ಶಿಖರಕ್ಕೆ ಹೋಗಲು. ತಂದೆಯ ಶಿಕ್ಷಣದಂತೆಯೇ ನಡೆಯುವುದರಿಂದ ನಾವು ಉತ್ತಮ ಸುಖದ ಶಿಖರಕ್ಕೆ ಹೋಗುತ್ತೇವೆ ಎಂಬುದು ತಮಗೆ ಗೊತ್ತಿದೆ. ಇದರಲ್ಲಿ ಪ್ರಯತ್ನವಿದೆ. ತಂದೆಯು ಶಿಖರಕ್ಕೆ ಕರೆದೊಯ್ಯಲು ಬರುತ್ತಾರೆ ಅಂದಮೇಲೆ ತಂದೆಯ ಶ್ರೀಮತದಂತೆ ನಡೆಯಬೇಕಾಗುತ್ತದೆ. ಮೊದಲ ನಂಬರಿನಲ್ಲಿ ಶ್ರೀ ಲಕ್ಷ್ಮಿ-ನಾರಾಯಣ ಗಾಯನವಿದೆ. ಅವರು ಶಿಖರದ ಮೇಲೆ ಇರುತ್ತಾರೆ ನಂತರ ಸ್ವಲ್ಪ ಕಡಿಮೆಯಾಗಿ ಬಿಡುತ್ತದೆ. ಹೊಸ ಜಗತ್ತಿಗೆ ಸುಖದ ಶಿಖರವೆನ್ನಲಾಗುತ್ತದೆ, ಅಲ್ಲಿ ಯಾವುದೇ ಮೈಲಿಗೆ ವಸ್ತುಗಳಿರುವುದಿಲ್ಲ. ಅಲ್ಲಿ ಧೂಳುಯಿರುವುದಿಲ್ಲ ಮನೆಗಳನ್ನು ಹಾಳು ಮಾಡುವಂತಹ ಯಾವುದೇ ಪ್ರಕಾರದ ಗಾಳಿಯು ಬೀಸುವುದಿಲ್ಲ. ಸ್ವರ್ಗದ ಮಹಿಮೆಯಂತೂ ಅಪಾರವಾಗಿದೆ, ಅದಕ್ಕಾಗಿ ಪುರುಷಾರ್ಥ ಮಾಡಬೇಕು. ಲಕ್ಷ್ಮೀ-ನಾರಾಯಣರು ಎಷ್ಟು ಶ್ರೇಷ್ಠವಾಗಿದ್ದಾರೆ, ಅವರನ್ನು ನೋಡಿದರೇನೆ ಎಷ್ಟು ಖುಷಿಯಾಗುತ್ತದೆ. ಮುಂದೆ ಹೋದಂತೆ ಅನೇಕರಿಗೆ ಸಾಕ್ಷಾತ್ಕಾರವಾಗುತ್ತದೆ. ಪ್ರಾರಂಭದಲ್ಲಿ ಎಷ್ಟೊಂದು ಸಾಕ್ಷಾತ್ಕಾರವಾಗುತ್ತಿತ್ತು. ಕಿರೀಟ ಮುಂತಾದವನ್ನು ಹಾಕಿಕೊಂಡು ಬರುತ್ತಿದ್ದರು, ಆ ವಸ್ತುಗಳಂತೂ ಇಲ್ಲಿ ಸಿಗಲು ಸಾಧ್ಯವಿಲ್ಲ. ತಂದೆಯು (ಬ್ರಹ್ಮಾ) ವಜ್ರದ ವ್ಯಾಪಾರಿಯಾಗಿದ್ದರು. ಮೊದಲು 50,000 ರೂ. ಗಳಲ್ಲಿ ಯಾವ ಮಣಿಯನ್ನು ತೆಗೆದುಕೊಳ್ಳುತ್ತಿದ್ದರೋ ಅದು ಈಗ 50 ಲಕ್ಷಕ್ಕೂ ಸಿಗುವುದಿಲ್ಲ. ತಾವು ಸ್ವರ್ಗಕ್ಕಾಗಿ ಪುರುಷಾರ್ಥ ಮಾಡುತ್ತಿದ್ದೀರಿ. ಅಲ್ಲಿ ಅಪಾರ ಸುಖವಿದೆ. ತಂದೆಯು ಇಷ್ಟೊಂದು ಓದಿಸುತ್ತಾರೆ ಆದರೆ ಮಕ್ಕಳಲ್ಲಿ ಹಗಲು-ರಾತ್ರಿಯ ವ್ಯತ್ಯಾಸವಾಗುತ್ತದೆ. ರಾಜ-ರಾಣಿಯರೆಲ್ಲಿ, ದಾಸ-ದಾಸಿಯರೆಲ್ಲಿ! ಯಾರು ಓದಿ ಮತ್ತು ಓದಿಸುತ್ತಾರೆಯೋ ಅವರು ಮರೆಯಾಗಿರಲು ಸಾಧ್ಯವಿಲ್ಲ. ತಂದೆಯೇ ನಾವು ಇಂತಹ ಸ್ಥಾನಕ್ಕೆ ಹೋಗಿ ಸರ್ವೀಸ್ ಮಾಡುತ್ತೇವೆಂದು ತಕ್ಷಣ ಹೇಳುತ್ತಾರೆ. ಸರ್ವೀಸಂತೂ ಬಹಳಷ್ಟಿದೆ ಅಂದಾಗ ತಾವು ಈ ಕಾಡನ್ನು ಮಂದಿರವನ್ನಾಗಿ ಮಾಡಬೇಕು. ರೊಟ್ಟಿಯ ತುಣುಕನ್ನು ತಿಂದರೊ ಇಲ್ಲವೊ, ಇವರು ಸರ್ವೀಸಿಗೆ ಹೋಗುತ್ತಾರೆ. ವ್ಯಾಪಾರಿಗಳು ಹಾಗೆಯೇ ಮಾಡುತ್ತಾರೆ. ಒಳ್ಳೆಯ ಗ್ರಾಹಕರು ಬಂದರೆ ತಿನ್ನುತ್ತಾರೆಯೋ ಇಲ್ಲವೋ ಓಡುತ್ತಾರೆ. ಹಣ ಸಂಪಾದನೆಯ ಆಸಕ್ತಿಯಿರುತ್ತದೆ. ಇಲ್ಲಂತೂ ಬೇಹದ್ದಿನ ತಂದೆಯಿಂದ ಅಪಾರ ಸುಖ ಸಿಗುತ್ತದೆ. ಭಲೆ ಸ್ವಲ್ಪ ಸಮಯವಿದೆ ಆದರೆ ನಾಳೆ ಶರೀರ ಬಿಟ್ಟು ಹೋದರೆ ಯಾವುದೇ ಭರವಸೆಯಿಲ್ಲ. ವಿನಾಶವಂತೂ ಆಗಲೇಬೇಕು. ನಿಮಗಾಗಿಯೇ ಗಾಯನವಿದೆ - ಬೆಕ್ಕಿಗೆ ಚಲ್ಲಾಟ, ಇಲಿಗೆ ಪ್ರಾಣ ಸಂಕಟ. ತಮ್ಮ ಖುಷಿಗೆ ಮಿತಿಯೇ ಇಲ್ಲ. ತಮಗೆ ಅಪಾರ ಖುಷಿಯಾಗಬೇಕು. ತಾವು ಅನೇಕರ ಕಲ್ಯಾಣ ಮಾಡಬೇಕು. ಕೊನೆಯಲ್ಲಿ ಕರ್ಮಾತೀತ ಸ್ಥಿತಿಯಾಗುತ್ತದೆ. ತಾವು ನೆನಪು ಮಾಡುತ್ತಾ-ಮಾಡುತ್ತಾ ಅಶರೀರಿಯಾಗಿ ಆಗ ಅನಾಯಾಸವಾಗಿ ಹಾರುತ್ತೀರಿ. ಇದು ಬಹಳ ಕಷ್ಟವಿದೆ. ಕೆಲವರಂತೂ ಬಹಳ ಸರ್ವೀಸ್ ಮಾಡುತ್ತಾರೆ, ಇಡೀ ದಿನ ಮ್ಯೂಜಿಯಂನಲ್ಲಿ ತಿಳಿಸಲು ನಿಂತಿರುತ್ತಾರೆ. ಹಗಲು-ರಾತ್ರಿ ಸರ್ವೀಸಿನಲ್ಲಿ ನಿರತರಾಗಿರುತ್ತಾರೆ. ನೂರಾರು ಮ್ಯೂಜಿಯಂಗಳು ತೆರೆಯಲ್ಪಡುತ್ತವೆ. ಲಕ್ಷಾಂತರ ಜನರು ತಮ್ಮ ಬಳಿಗೆ ಬರುತ್ತಾರೆ. ತಮಗೆ ಸಮಯವೇ ಸಿಗುವುದಿಲ್ಲ. ಈ ಅವಿನಾಶಿ ಜ್ಞಾನರತ್ನಗಳ ನಿಮ್ಮ ಅಂಗಡಿಗಳು ಎಲ್ಲದಕ್ಕಿಂತ ಹೆಚ್ಚು ತೆರೆಯುತ್ತವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಪಿತ ಬಾಪ್‍ದಾದಾರವರ ನೆನಪು-ಪ್ರೀತಿ ಹಾಗೂ ಗುಡ್‍ಮಾರ್ನಿಂಗ್. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಜ್ಞಾನದ ಧಾರಣೆ ಮಾಡಿಕೊಳ್ಳಲು ಮೊದಲು ತಮ್ಮ ಬುದ್ಧಿಯನ್ನು ಚಿನ್ನದ ಯುಗದ ಸಮಾನ ಮಾಡಿಕೊಳ್ಳಿ. ತಂದೆಯ ನೆನಪಿನ ವಿನಃ ಬೇರೆ ಯಾವುದೇ ವಸ್ತುವಿನಲ್ಲಿ ಮಮತ್ವವಿರಬಾರದು.

2. ಕರ್ಮಾತೀತ ಸ್ಥಿತಿಯನ್ನು ಪ್ರಾಪ್ತಿ ಮಾಡಿಕೊಂಡು ಮನೆಗೆ ಹೋಗಲು ಅಶರೀರಿಗಳಾಗುವ ಅಭ್ಯಾಸ ಮಾಡಿ. ಯಾರಿಗೂ ದುಃಖ ಕೊಡುವುದಿಲ್ಲವೆ? ತಂದೆಯ ಸಮಾನ ಮಧುರರಾಗಿದ್ದೇನೆಯೇ? ಎಂದು ತಮ್ಮ ನಡುವಳಿಕೆಯನ್ನು ನೋಡಿಕೊಳ್ಳಬೇಕು.

ವರದಾನ:
ಬ್ರಾಹಣ ಜೀವನದ ಸ್ವಾಭಾವಿಕ ಸ್ವಭಾವ ಕಲ್ಲನ್ನೂ ಸಹಾ ನೀರನ್ನಾಗಿ ಮಾಡುವಂತಹ ಮಾಸ್ಟರ್ ಪ್ರೇಮ ಸಾಗರ ಭವ.

ಹೇಗೆ ಪ್ರೀತಿ ಕಲ್ಲನ್ನೂ ಸಹ ಕರಗಿಸಿ ಬಿಡುವುದು ಎಂದು ಪ್ರಪಂಚದವರು ಹೇಳುತ್ತಾರೆ, ಅದೇರೀತಿ ನೀವು ಬ್ರಾಹಣರ ಸ್ವಾಭಾವಿಕ ಸ್ವಭಾವವೇ ಮಾಸ್ಟರ್ ಪ್ರೀತಿಯ ಸಾಗರ ಆಗಿದೆ. ನಿಮ್ಮ ಬಳಿ ಆತ್ಮಿಕ ಪ್ರೀತಿ, ಪರಮಾತ್ಮ ಪ್ರೀತಿಯ ಇಂತಹ ಶಕ್ತಿ ಇದೆ, ಯಾವುದರಿಂದ ಭಿನ್ನ-ಭಿನ್ನ ಸ್ವಭಾವವನ್ನು ಪರಿವರ್ತನೆ ಮಾಡಲು ಸಾಧ್ಯ. ಹೇಗೆ ಪ್ರೀತಿಯ ಸಾಗರ ತನ್ನ ಪ್ರೀತಿಯ ಸ್ವರೂಪದ ಅನಾದಿ ಸ್ವಭಾವದಿಂದ ನೀವು ಮಕ್ಕಳನ್ನು ತನ್ನವರನ್ನಾಗಿ ಮಾಡಿಕೊಂಡರು. ಅದೇ ರೀತಿ ನೀವೂ ಸಹ ಮಾಸ್ಟರ್ ಪ್ರೀತಿಯ ಸಾಗರ ಆಗಿ ವಿಶ್ವದ ಆತ್ಮರಿಗೆ ಸತ್ಯ , ನಿಸ್ವಾರ್ಥ ಆತ್ಮಿಕ ಪ್ರೀತಿ ಕೊಟ್ಟಾಗ ಅವರ ಸ್ವಭಾವ ಪರಿವರ್ತನೆಯಾಗಿ ಬಿಡುವುದು.

ಸ್ಲೋಗನ್:
ನಿಮ್ಮ ವಿಶೇಷತೆಗಳನ್ನು ಸ್ಮತಿಯಲ್ಲಿಟ್ಟು ಅವುಗಳನ್ನು ಸೇವೆಯಲ್ಲಿ ತೊಡಗಿಸಿದಾಗ ಹಾರುವ ಕಲೆಯಲ್ಲಿ ಹಾರುತ್ತಿರುವಿರಿ.


ಬ್ರಹ್ಮಾ ತಂದೆಯ ಸಮಾನರಾಗಲು ವಿಶೇಷ ಪುರುಷಾರ್

ಅಂತರ್ಮುಖತೆಯ ಸ್ಥಿತಿಯಲ್ಲಿರುತ್ತಾ ನಂತರ ಬಾಹರ್ಮುಖತೆಯಲ್ಲಿ ಬನ್ನಿ, ಈ ಅಭ್ಯಾಸಕ್ಕಾಗಿ ನಿಮ್ಮ ಮೇಲೆ ವಯಕ್ತಿಕವಾಗಿ ಗಮನ ಇಡುವಂತಹ ಅವಶ್ಯಕತೆಯಿದೆ. ಯಾವಾಗ ನೀವು ಅಂತರ್ಮುಖತೆಯ ಸ್ಥಿತಿಯಲ್ಲಿರುವಿರಿ ಆಗ ಬಾಹರ್ಮುಖತೆಯ ಮಾತುಗಳು ತೊಡಕುಂಟು ಮಾಡುವುದಿಲ್ಲ. ಏಕೆಂದರೆ ದೇಹ ಅಭಿಮಾನದಿಂದ ಗೈರು ಹಾಜರಾಗಿರುವಿರಿ.