03.01.21    Avyakt Bapdada     Kannada Murli    05.10.87     Om Shanti     Madhuban


ಬ್ರಾಹ್ಮಣ ಜೀವನದ ಸುಖ-ಸಂತುಷ್ಟತೆ ಅಥವಾ ಪ್ರಸನ್ನತೆ


ಇಂದು ಬಾಪ್ದಾದಾರವರು ನಾಲ್ಕೂ ಕಡೆಯಲ್ಲಿರುವ ತನ್ನ ಅತಿ ಮುದ್ದಾದ, ಅಗಲಿ ಮರಳಿ ಸಿಕ್ಕಿರುವ ಬ್ರಾಹ್ಮಣ ಮಕ್ಕಳು, ವಿಶೇಷವಾಗಿ ಬ್ರಾಹ್ಮಣ ಜೀವನದ ವಿಶೇಷತೆಯಿಂದ ಕೂಡಿರುವ ಮಕ್ಕಳನ್ನು ನೋಡುತ್ತಿದ್ದಾರೆ. ಇಂದು ಬಾಪ್ದಾದಾರವರು ಅಮೃತವೇಳೆಯಲ್ಲಿ ಸರ್ವ ಬ್ರಾಹ್ಮಣ ಕುಲದ ಮಕ್ಕಳೆಲ್ಲರಿಂದ, ಅಂತಹ ವಿಶೇಷ ಆತ್ಮರನ್ನು ಆಯ್ಕೆ ಮಾಡುತ್ತಿದ್ದರು, ಯಾರು ಸದಾ ಸಂತುಷ್ಟತೆಯ ಮೂಲಕ ಸ್ವಯಂ ಸಹ ಸದಾ ಸಂತುಷ್ಟವಾಗಿ ಇರುತ್ತಾರೆ ಮತ್ತು ಅನ್ಯರನ್ನೂ ಸಹ ತನ್ನ ದೃಷ್ಟಿ, ವೃತ್ತಿ ಮತ್ತು ಕೃತಿಯ ಸಂತುಷ್ಟತೆಯ ಅನುಭೂತಿಯ ಮೂಲಕ ಸದಾ ಅನುಭವ ಮಾಡಿಸುತ್ತಾ ಬಂದಿದ್ದಾರೆ. ಅಂದಾಗ ಯಾರು ಸದಾ ಸಂಕಲ್ಪದಲ್ಲಿ, ಮಾತಿನಲ್ಲಿ, ಸಂಘಟನೆಯ ಸಂಬಂಧ-ಸಂಪರ್ಕದಲ್ಲಿ, ಕರ್ಮದಲ್ಲಿ ಸಂತುಷ್ಟತೆಯ ಸುವರ್ಣ ಪುಷ್ಪಗಳ ಸುರಿಮಳೆಯು ಬಾಪ್ದಾದಾರವರ ಮೂಲಕ ಸ್ವಯಂ ಮೇಲೆ ಸುರಿಯುತ್ತಿರುವ ಅನುಭವ ಮಾಡುತ್ತಾ ಹಾಗೂ ಸದಾ ಸರ್ವ ಪ್ರಾಪ್ತಿ ಸಂತುಷ್ಟತೆಯ ಸುವರ್ಣ ಪುಷ್ಪಗಳ ಸುರಿಮಳೆ ಗೈಯುತ್ತಿರುತ್ತಾರೆ - ಇಂದು ಇಂತಹ ಸಂತುಷ್ಟಮಣಿಗಳ ಮಾಲೆಯನ್ನು ಪೋಣಿಸುತ್ತಿದ್ದರು, ನಾಲ್ಕೂ ಕಡೆಗಳಲ್ಲಿಂದ ಇಂತಹ ಸಂತುಷ್ಟ ಆತ್ಮರು ಕೆಲಕೆಲವರಷ್ಟೇ ಕಂಡು ಬಂದರು. ದೊಡ್ಡ ಮಾಲೆಯೇನೂ ಆಗಲಿಲ್ಲ, ಚಿಕ್ಕದಾದ ಮಾಲೆಯಾಯಿತು. ಬಾಪ್ದಾದಾರವರು ಮತ್ತೆ-ಮತ್ತೆ ಸಂತುಷ್ಟ ಮಣಿಗಳ ಮಾಲೆಯನ್ನು ನೋಡುತ್ತಾ ಹರ್ಷಿತವಾಗುತ್ತಿದ್ದರು ಏಕೆಂದರೆ ಇಂತಹ ಸಂತುಷ್ಟಮಣಿಗಳೇ ಬಾಪ್ದಾದಾರವರ ಕೊರಳಿನ ಹಾರವಾಗುತ್ತಾರೆ, ರಾಜ್ಯಾಧಿಕಾರಿ ಆಗುವರು ಮತ್ತು ಭಕ್ತರ ಸ್ಮರಣೆಯ ಮಾಲೆಯಾಗುತ್ತಾರೆ.

ಬಾಪ್ದಾದಾರವರು ಅನ್ಯ ಮಕ್ಕಳನ್ನೂ ನೋಡುತ್ತಿದ್ದರು, ಯಾರು ಕೆಲವೊಮ್ಮೆ ಸಂತುಷ್ಟ ಮತ್ತು ಕೆಲವೊಮ್ಮೆ ಅಂಶದಷ್ಟು ಅಸಂತುಷ್ಟ ಸಂಕಲ್ಪದ ನೆರಳಿನೊಳಗೆ ಬಂದು ಬಿಡುತ್ತಾರೆ, ಮತ್ತೆ ನಂತರ ಹೊರ ಬರುತ್ತಾರೆ, ಸಿಕ್ಕಿಕೊಳ್ಳುವುದಿಲ್ಲ. ಮೂರನೇ ಪ್ರಕಾರದ ಮಕ್ಕಳು - ಕೆಲವೊಮ್ಮೆ ಸಂಕಲ್ಪದ ಅಸಂತುಷ್ಟತೆಯಲ್ಲಿ, ಕೆಲವೊಮ್ಮೆ ತಾನೇ ತನ್ನೊಂದಿಗಿನ ಅಸಂತುಷ್ಟತೆಯಲ್ಲಿ, ಕೆಲವೊಮ್ಮೆ ಪರಿಸ್ಥಿತಿಗಳ ಮೂಲಕ ಅಸಂತುಷ್ಟತೆಯಾಗುವುದರಲ್ಲಿ, ಕೆಲವೊಮ್ಮೆ ತನ್ನ ಏರುಪೇರುಗಳಿಂದ ಅಸಂತುಷ್ಟತೆಯಲ್ಲಿ, ಮತ್ತೆ ಕೆಲವೊಮ್ಮೆ ಚಿಕ್ಕ ಪುಟ್ಟ ಮಾತುಗಳಲ್ಲಿ ಅಸಂತುಷ್ಟರಾಗುವ ಚಕ್ರದಲ್ಲಿಯೇ ನಡೆಯುತ್ತಾ ಮತ್ತು ಹೊರ ಬರುತ್ತಾ, ಮತ್ತೆ ಕೆಲವೊಮ್ಮೆ ಸಿಲುಕುತ್ತಿರುವಂತಹ ಮಾಲೆಯನ್ನೂ ನೋಡಿದರು. ಅಂದಮೇಲೆ ಮೂರು ಮಾಲೆಗಳು ತಯಾರಾದವು. ಎಲ್ಲರೂ ಮಣಿಗಳೇ ಆಗಿದ್ದಾರೆ ಆದರೆ ಸಂತುಷ್ಟ-ಮಣಿಗಳ ಹೊಳಪು ಮತ್ತು ಮತ್ತೆರಡು ಪ್ರಕಾರದ ಮಣಿಗಳ ಹೊಳಪೇನಾಗಿರುತ್ತದೆ ಎನ್ನುವುದನ್ನು ತಾವೂ ಸಹ ತಿಳಿದುಕೊಳ್ಳಲು ಸಾಧ್ಯವಿದೆ. ಬ್ರಹ್ಮಾ ತಂದೆಯು ಮತ್ತೆ-ಮತ್ತೆ ಈ ಮೂರು ಮಾಲೆಗಳನ್ನು ನೋಡುತ್ತಾ ಹರ್ಷಿತವಾಗುತ್ತಿದ್ದರು, ಜೊತೆ ಜೊತೆಗೆ ಎರಡನೇ ನಂಬರಿನ ಮಾಲೆಯ ಮಣಿಗಳನ್ನು ಮೊದಲ ಮಾಲೆಯಲ್ಲಿ ಬಂದು ಬಿಡಬೇಕೆಂಬ ಪ್ರಯತ್ನವನ್ನೂ ಮಾಡುತ್ತಿದ್ದರು. ಇದರ ಆತ್ಮಿಕ ವಾರ್ತಾಲಾಪವು ನಡೆಯುತ್ತಿತ್ತು ಏಕೆಂದರೆ ಎರಡನೇ ಮಾಲೆಯಲ್ಲಿರುವ ಕೆಲಕೆಲವು ಮಣಿಗಳು ಬಹಳ ಸ್ವಲ್ಪ ಅಸಂತುಷ್ಟತೆಯ ನೆರಳಿನಲ್ಲಿರುವ ಕಾರಣದಿಂದ, ಮೊದಲ ಮಾಲೆಯಿಂದ ವಂಚಿತರಾಗಿ ಬಿಟ್ಟಿದ್ದಾರೆ. ಇವರನ್ನು ಹೇಗಾದರೂ ಪರಿವರ್ತನೆ ಮಾಡಿ ಮೊದಲ ಮಾಲೆಯಲ್ಲಿ ತರಬೇಕು, ಒಬ್ಬೊಬ್ಬರ ಗುಣ ವಿಶೇಷತೆಗಳು, ಸೇವೆ ಎಲ್ಲವನ್ನೂ ಸನ್ಮುಖದಲ್ಲಿ ನೋಡುತ್ತಾ ಮತ್ತೆ-ಮತ್ತೆ ಇದನ್ನೇ ಹೇಳಬೇಕು, ಇವರನ್ನು ಮೊದಲ ಮಾಲೆಯಲ್ಲಿ ತಂದು ಬಿಡಿ. ಇಂತಹ ಮಣಿಗಳು ಸುಮಾರು 25-30 ಮಣಿಗಳಿದ್ದವು, ಇವರ ಬಗ್ಗೆ ವಿಶೇಷವಾಗಿ ಬ್ರಹ್ಮಾ ಹಾಗೂ ಶಿವ ತಂದೆಯ ಆತ್ಮಿಕ ವಾರ್ತಾಲಾಪವು ನಡೆಯುತ್ತಿತ್ತು. ಬ್ರಹ್ಮಾ ತಂದೆಯು ಹೇಳಿದರು ಮೊದಲ ನಂಬರಿನಲ್ಲಿ ಈ ಮಣಿಗಳನ್ನೂ ಸೇರಿಸಬೇಕು. ಆದರೆ ನಂತರದಲ್ಲಿ ಸ್ವಯಂ ತಾನೇ ಮುಗುಳ್ನಗುತ್ತಾ ಇದನ್ನೇ ಹೇಳಿದರು - ಇವರನ್ನು ತಂದೆಯು ಅವಶ್ಯವಾಗಿ ಮೊದಲ ನಂಬರಿನಲ್ಲಿಯೇ ಕರೆ ತಂದು ತೋರಿಸುತ್ತಾರೆ. ಇಂತಹ ವಿಶೇಷ ಮಣಿಗಳೂ ಸಹ ಇದ್ದವು.

ಈ ರೀತಿ ವಾರ್ತಾಲಾಪ ನಡೆಯುತ್ತಾ ಒಂದು ಮಾತು ಬಂದಿತು - ಅಸಂತುಷ್ಟತೆಯ ವಿಶೇಷ ಕಾರಣವೇನು? ಯಾವಾಗ ಸಂಗಮಯುಗದ ವಿಶೇಷ ವರದಾನವೇ ಸಂತುಷ್ಟತೆಯಾಗಿದೆ, ಈ ವರದಾನವಿದ್ದರೂ ವರದಾತನಿಂದ ವರದಾನವು ಪ್ರಾಪ್ತಿಯಾದ ವರದಾನಿ ಆತ್ಮರು ಎರಡನೇ ನಂಬರಿನ ಮಾಲೆಯಲ್ಲೇಕೆ ಬರುತ್ತಾರೆ? ಸರ್ವ ಪ್ರಾಪ್ತಿಗಳು ಸಂತುಷ್ಟತೆಯ ಬೀಜವಾಗಿದೆ. ಅಸಂತುಷ್ಟತೆಯ ಬೀಜ ಸ್ಥೂಲ ಅಥವಾ ಸೂಕ್ಷ್ಮ ಅಪ್ರಾಪ್ತಿಯಾಗಿದೆ. ಯಾವಾಗ "ಬ್ರಾಹ್ಮಣರ ಖಜಾನೆಯಲ್ಲಿ ಅಥವಾ ಬ್ರಾಹ್ಮಣರ ಜೀವನದಲ್ಲಿ ಯಾವುದೇ ಅಪ್ರಾಪ್ತ ವಸ್ತುವೇ ಇಲ್ಲ" ಎಂಬ ಗಾಯನ ಬ್ರಾಹ್ಮಣರದಾಗಿದೆ, ಅಂದಮೇಲೆ ಅಸಂತುಷ್ಟತೆ ಏಕೆ? ವರದಾತನು ವರದಾನವನ್ನು ಕೊಡುವುದರಲ್ಲೇನಾದರೂ ಅಂತರ ಮಾಡಿದರೆ ಅಥವಾ ತೆಗೆದುಕೊಳ್ಳುವವರು ಅಂತರ ಮಾಡಿಕೊಂಡಿದ್ದಾರೆಯೇ, ಏನಾಯಿತು? ಯಾವಾಗ, ದಾತನ ಬಳಿ ಸಂಪನ್ನವಾಗಿರುವ ಭಂಡಾರವೇ ಇದೆ, ಇಷ್ಟೂ ಸಂಪನ್ನವಾಗಿದೆ ಅದರಿಂದ ತಮ್ಮ ಅರ್ಥಾತ್ ಶ್ರೇಷ್ಠ ನಿಮಿತ್ತ ಆತ್ಮರು ಬಹಳ ಕಾಲದ ಬ್ರಹ್ಮಾಕುಮಾರ/ಬ್ರಹ್ಮಾಕುಮಾರಿ ಆಗಿ ಬಿಟ್ಟರು, ಅವರ 21 ಜನ್ಮಗಳ ವಂಶಾವಳಿ ಮತ್ತು ಆ ನಂತರ ಅವರ ಭಕ್ತರು, ಭಕ್ತರುಗಳ ವಂಶಾವಳಿಯವರೂ ಸಹ ಅದೇ ಪ್ರಾಪ್ತಿಗಳ ಆಧಾರದಿಂದಲೇ ನಡೆಯುತ್ತಿರುತ್ತಾರೆ. ಇಷ್ಟು ದೊಡ್ಡ ಪ್ರಾಪ್ತಿಯಾದರೂ ಅಸಂತುಷ್ಟತೆಯೇಕೆ? ಎಲ್ಲರಿಗೂ ಅಕೂಟ ಖಜಾನೆಗಳ ಪ್ರಾಪ್ತಿಯು ಒಬ್ಬರ ಮೂಲಕ, ಒಂದೇ ರೀತಿ, ಒಂದೇ ಸಮಯದಲ್ಲಿ, ಒಂದೇ ವಿಧಿಯಿಂದ ಪ್ರಾಪ್ತಿಯಾಗಿದೆ. ಆದರೆ ಪ್ರಾಪ್ತಿಯಾಗಿರುವ ಖಜಾನೆಗಳನ್ನು ಪ್ರತೀ ಸಮಯದಲ್ಲಿ ಕಾರ್ಯದಲ್ಲಿ ಉಪಯೋಗಿಸುವುದಿಲ್ಲ ಅಂದರೆ ಸ್ಮೃತಿಯಲ್ಲಿರುವುದಿಲ್ಲ. ಮುಖದಿಂದ ಖುಷಿಯಾಗುತ್ತಾರೆ ಆದರೆ ಹೃದಯದಿಂದ ಖುಷಿಯಾಗುವುದಿಲ್ಲ. ಸ್ಮೃತಿಯಲ್ಲಿ ಇರುತ್ತದೆ ಆದರೆ ಸ್ಮೃತಿ ಸ್ವರೂಪದಲ್ಲಿ ಬರುವುದಿಲ್ಲ. ಬೇಹದ್ದಿನ ಪ್ರಾಪ್ತಿಯಾಗಿದೆ ಆದರೆ ಅದನ್ನು ಕೆಲವೊಂದು ಕಡೆ ಅಲ್ಪಕಾಲದ ಪ್ರಾಪ್ತಿಯಲ್ಲಿ ಪರಿವರ್ತನೆ ಮಾಡಿ ಬಿಡುತ್ತೀರಿ, ಈ ಕಾರಣದಿಂದ ಅಲ್ಪಕಾಲದ ಪ್ರಾಪ್ತಿಯ ಇಚ್ಛೆ, ಬೇಹದ್ದಿನ ಪ್ರಾಪ್ತಿಯ ಫಲ ಸ್ವರೂಪವಾಗಿ ಸಂತುಷ್ಟತೆಯ ಅನುಭೂತಿಯೇನಾಗಬೇಕು ಅದನ್ನು ವಂಚಿತಗೊಳಿಸುತ್ತೀರಿ. ಅಲ್ಪಕಾಲದ ಪ್ರಾಪ್ತಿಯು ಹೃದಯಗಳಲ್ಲಿ ಅಲ್ಪಕಾಲದ್ದನ್ನೇ ಹಾಕುತ್ತದೆ, ಆದ್ದರಿಂದ ಅಸಂತುಷ್ಟತೆಯ ಅನುಭೂತಿಯಾಗುತ್ತದೆ. ಸೇವೆಯಲ್ಲಿ ಅಲ್ಪಕಾಲದ್ದನ್ನೇ ಹಾಕುತ್ತೀರಿ ಏಕೆಂದರೆ ಅಲ್ಪಕಾಲದ ಇಚ್ಛೆಯ ಫಲದಿಂದ ಮನ ಇಚ್ಛಿತ ಫಲವು ಪ್ರಾಪ್ತಿಯಾಗುವುದಿಲ್ಲ. ಅಲ್ಪಕಾಲದ ಇಚ್ಛೆಗಳ ಫಲವು ಅಲ್ಪಕಾಲದ್ದನ್ನೇ ಪೂರ್ಣಗೊಳಿಸುತ್ತದೆ. ಆದ್ದರಿಂದ ಈಗೀಗ ಸಂತುಷ್ಟತೆ, ಈಗೀಗ ಅಸಂತುಷ್ಟರಾಗಿ ಬಿಡುತ್ತಾರೆ. ಅಲ್ಪಕಾಲ ನಶೆಯು ಬೇಹದ್ದಿನ ನಶೆಯ ಅನುಭವ ಮಾಡಿಸಲು ಬಿಡುವುದಿಲ್ಲ. ಆದ್ದರಿಂದ ವಿಶೇಷವಾಗಿ ಪರಿಶೀಲನೆ ಮಾಡಿರಿ - ಮನಸ್ಸಿನ ಅರ್ಥಾತ್ ಸ್ವಯಂನ ಸಂತುಷ್ಟತೆ, ಸರ್ವರ ಸಂತುಷ್ಟತೆಯ ಅನುಭವವಾಗುತ್ತದೆಯೇ?

ಸಂತುಷ್ಟತೆಯ ಲಕ್ಷಣಗಳಾಗಿವೆ - ಸಂತುಷ್ಟವಾಗಿರುವವರು ಮನಸ್ಸಿನಿಂದ, ಹೃದಯದಿಂದ, ಸರ್ವರಿಂದ, ತಂದೆಯಿಂದ, ಡ್ರಾಮಾದಿಂದಲೂ ಸಂತುಷ್ಟವಾಗಿರುತ್ತಾರೆ. ಅವರ ಮನಸ್ಸಿನಲ್ಲಿ ಮತ್ತು ತನುವಿನಲ್ಲಿ ಸದಾ ಪ್ರಸನ್ನತೆಯು ಪ್ರಕಂಪನಗಳೇ ಕಾಣಿಸುತ್ತದೆ. ಭಲೆ ಯಾವುದೇ ಪರಿಸ್ಥಿತಿಯೇ ಬರಲಿ, ಯಾವುದೇ ಆತ್ಮನು ಅವರ ಲೆಕ್ಕಾಚಾರವನ್ನು ಸಮಾಪ್ತಿಗೊಳಿಸುವುದಕ್ಕಾಗಿ ಎದುರಿಸುವಂತಹ ರೀತಿಯಲ್ಲಿಯೇ ಬರಲಿ, ಭಲೆ ಶರೀರದ ಕರ್ಮಭೋಗವೇ ತನ್ನ ಮುಂದೆ ಬರುತ್ತಿರಲಿ ಆದರೆ ಅಲ್ಪಕಾಲದ ಕಾಮನೆಯಿಂದ ಮುಕ್ತವಾಗಿರುವ ಆತ್ಮವು, ಸಂತುಷ್ಟತೆಯ ಕಾರಣದಿಂದ ಸದಾ ಪ್ರಸನ್ನತೆಯ ಹೊಳಪಿನಲ್ಲಿ ಹೊಳೆಯುತ್ತಿರುವ ತಾರೆಯಾಗಿ ಕಾಣಿಸುತ್ತಾರೆ. ಪ್ರಸನ್ನಚಿತ್ತನು ಯಾವುದೊಂದು ಮಾತಿನಲ್ಲಿಯೂ ಪ್ರಶ್ನಚಿತ್ತನಾಗುವುದಿಲ್ಲ. ಪ್ರಶ್ನೆಯಿದ್ದರೆ ಪ್ರಸನ್ನತೆಯಿಲ್ಲ, ಪ್ರಸನ್ನಚಿತ್ತರ ಲಕ್ಷಣಗಳಾಗಿವೆ - ಅವರು ಸದಾ ನಿಸ್ವಾರ್ಥಿ ಮತ್ತು ಸದಾ ಎಲ್ಲರನ್ನೂ ನಿರ್ದೋಷಿ ಎಂದು ಅನುಭವ ಮಾಡುವರು, ಯಾರೊಬ್ಬರ ಮೇಲೂ ದೋಷವನ್ನಿಡುವುದಿಲ್ಲ, ನನ್ನ ಭಾಗ್ಯವನ್ನು ಈ ರೀತಿ ಮಾಡಿ ಬಿಟ್ಟರು ಎಂದು ಭಾಗ್ಯವಿದಾತನ ಮೇಲೂ ಇಡುವುದಿಲ್ಲ ಮತ್ತು ಡ್ರಾಮಾದಲ್ಲಿ ನನ್ನ ಪಾತ್ರವೇ ಹೀಗಿದೆ ಎಂದು ಡ್ರಾಮಾದ ಮೇಲೂ ದೋಷವನ್ನಿಡುವುದಿಲ್ಲ, ಇವರ ಸ್ವಭಾವ-ಸಂಸ್ಕಾರಗಳು ಹೀಗಿವೆ ಎಂದು ಯಾವುದೇ ವ್ಯಕ್ತಿಯ ಪ್ರತಿಯೂ ದೋಷವನ್ನಿಡುವುದಿಲ್ಲ. ಪ್ರಕೃತಿಯ ಮೇಲೂ ಸಹ ದೋಷವನ್ನಿಡುವುದಿಲ್ಲ - ಈ ಪ್ರಕೃತಿಯ ವಾಯುಮಂಡಲವೇ ಹೀಗಿದೆ, ನನ್ನ ಶರೀರವೇ ಹೀಗಿದೆ ಎಂದು ತನ್ನ ಶರೀರದ ಲೆಕ್ಕಾಚಾರದ ಬಗ್ಗೆಯೂ ದೋಷವನ್ನಿಡುವುದಿಲ್ಲ. ಪ್ರಸನ್ನಚಿತ್ತರು ಅರ್ಥಾತ್ ಸದಾ ನಿಸ್ವಾರ್ಥ, ನಿರ್ದೋಷ ವೃತ್ತಿ-ದೃಷ್ಟಿ ಇರುವವರಾಗಿದ್ದಾರೆ ಅಂದಮೇಲೆ ಸಂಗಮಯುಗದ ವಿಶೇಷತೆಯು ಸಂತುಷ್ಟತೆ ಆಗಿದೆ ಮತ್ತು ಸಂತುಷ್ಟತೆಯ ಚಿಹ್ನೆಯು ಪ್ರಸನ್ನತೆ ಇರುವುದು. ಇದು ಬ್ರಾಹ್ಮಣ ಜೀವನದ ವಿಶೇಷ ಪ್ರಾಪ್ತಿಯಾಗಿದೆ. ಸಂತುಷ್ಟತೆ ಅಥವಾ ಪ್ರಸನ್ನತೆಯಿಲ್ಲದಿದ್ದರೆ ಬ್ರಾಹ್ಮಣನಾಗಿ ಲಾಭವನ್ನೇ ತೆಗೆದುಕೊಳ್ಳಲಿಲ್ಲ. ಬ್ರಾಹ್ಮಣ ಜೀವನದ ಸುಖವೇ ಸಂತುಷ್ಟತೆ, ಪ್ರಸನ್ನತೆಯಾಗಿದೆ. ಬ್ರಾಹ್ಮಣ ಜೀವನವಾಯಿತು ಮತ್ತು ಅದರ ಸುಖವನ್ನು ತೆಗೆದುಕೊಳ್ಳದಿದ್ದರೆ ಹೆಸರಿಗಷ್ಟೇ ಬ್ರಾಹ್ಮಣರಾದಿರಾ ಅಥವಾ ಪ್ರಾಪ್ತಿ ಸ್ವರೂಪ ಬ್ರಾಹ್ಮಣರಾದಂತೆಯೇ? ಅಂದಾಗ ಬಾಪ್ದಾದಾರವರು ಬ್ರಾಹ್ಮಣ ಮಕ್ಕಳೆಲ್ಲರಿಗೂ ಇದನ್ನೇ ಸ್ಮೃತಿ ತರಿಸುತ್ತಿದ್ದಾರೆ - ಬ್ರಾಹ್ಮಣರಾದಿರಿ, ಅಹೋ ಭಾಗ್ಯ! ಆದರೆ ಬ್ರಾಹ್ಮಣ ಜೀವನ ಆಸ್ತಿ ಸಂತುಷ್ಟತೆಯಾಗಿದೆ ಮತ್ತು ಬ್ರಾಹ್ಮಣ ಜೀವನದ ವ್ಯಕ್ತಿತ್ವ `ಪ್ರಸನ್ನತೆ' ಆಗಿದೆ, ಅಧಿಕಾರಿ ಆಗಿದ್ದೀರಿ. ಈ ಅನುಭವದಿಂದ ಎಂದಿಗೂ ವಂಚಿತರಾಗಬಾರದು. ಯಾವಾಗ ದಾತಾ, ವರದಾತನು ತೆರೆದ ಹೃದಯದಿಂದ ಪ್ರಾಪ್ತಿಗಳ ಖಜಾನೆಯನ್ನೇ ಕೊಡುತ್ತಿದ್ದಾರೆ, ಅವಶ್ಯವಾಗಿ ಕೊಟ್ಟಿದ್ದಾರೆ ಅಂದಮೇಲೆ ತಮ್ಮ ಆಸ್ತಿ ಮತ್ತು ಅಸ್ತಿತ್ವ(ವ್ಯಕ್ತಿತ್ವ)ವನ್ನು ಬಹಳ ಚೆನ್ನಾಗಿ ಅನುಭವದಲ್ಲಿ ತಂದುಕೊಳ್ಳಿರಿ, ಅನ್ಯರನ್ನೂ ಅನುಭವಿಯನ್ನಾಗಿ ಮಾಡಿರಿ. ತಿಳಿಯಿತೆ? ಪ್ರತಿಯೊಬ್ಬರೂ ತಮ್ಮೊಂದಿಗೆ ಕೇಳಿಕೊಳ್ಳಿರಿ - ಯಾವ ನಂಬರಿನ ಮಾಲೆಯಲ್ಲಿದ್ದೇನೆ? ಮಾಲೆಯಲ್ಲಂತು ಇದ್ದೀರಿ. ಆದರೆ ಯಾವ ನಂಬರಿನ ಮಾಲೆಯಲ್ಲಿ ಇದ್ದೇನೆ. ಒಳ್ಳೆಯದು.

ಇಂದು ರಾಜಾಸ್ಥಾನ ಮತ್ತು ಯು.ಪಿ.ಯವರ ಗ್ರೂಪ್ ಬಂದಿದ್ದಾರೆ. ರಾಜಾಸ್ಥಾನ ಅರ್ಥಾತ್ ರಾಜ್ಯ ಸಂಸ್ಕಾರದವರು. ಪ್ರತೀ ಸಂಕಲ್ಪದಲ್ಲಿ, ಸ್ವರೂಪದಲ್ಲಿಯೂ ಪ್ರತ್ಯಕ್ಷದಲ್ಲಿ ರಾಜ್ಯ ಸಂಸ್ಕಾರದಲ್ಲಿ ಇರುವವರು ಅರ್ಥಾತ್ ಪ್ರತ್ಯಕ್ಷವಾಗಿ ತೋರಿಸುವವರು - ಇವರಿಗೇ ರಾಜಾಸ್ಥಾನ ನಿವಾಸಿಗಳೆಂದು ಹೇಳಲಾಗುತ್ತದೆ. ತಾವು ಹೀಗಿದ್ದೀರಲ್ಲವೇ? ಕೆಲವೊಮ್ಮೆ ಪ್ರಜೆಗಳಂತು ಆಗುವುದಿಲ್ಲ ಅಲ್ಲವೇ? ಒಂದುವೇಳೆ ವಶರಾಗಿ ಬಿಡುತ್ತೀರೆಂದರೆ ಪ್ರಜೆಗಳು ಎಂದು ಹೇಳುತ್ತೇವೆ, ಮಾಲೀಕರಾಗಿದ್ದರೆ ರಾಜಾ. ಅಂದಾಗ ಕೆಲವೊಮ್ಮೆ ರಾಜಾ, ಕೆಲವೊಮ್ಮೆ ಪ್ರಜಾ ಎನ್ನುವಂತೆ ಇರಬಾರದು. ಸದಾ ಸ್ವತಹವಾಗಿಯೇ ರಾಜನ ಸಂಸ್ಕಾರವು ಸ್ಮೃತಿ ಸ್ವರೂಪದಲ್ಲಿ ಇರಲಿ. ಇಂತಹ ರಾಜಾಸ್ಥಾನ ನಿವಾಸಿ ಮಕ್ಕಳ ಮಹತ್ವವೂ ಇದೆ. ಎಲ್ಲರೂ ಸದಾ ರಾಜನನ್ನು ಶ್ರೇಷ್ಠ ದೃಷ್ಟಿಯಿಂದ ನೋಡುವರು ಮತ್ತು ರಾಜನಿಗೆ ಸ್ಥಾನವನ್ನೂ ಸಹ ಶ್ರೇಷ್ಠವಾಗಿರುವುದನ್ನೇ ಕೊಡುತ್ತಾರೆ. ರಾಜನು ಸದಾ ಸಿಂಹಾಸನದಲ್ಲಿ ಕುಳಿತುಕೊಳ್ಳುತ್ತಾರೆ, ಪ್ರಜೆಗಳು ಸದಾ ಕೆಳಗೆ ಕುಳಿತಿರುತ್ತಾರೆ. ಅಂದಮೇಲೆ ರಾಜಾಸ್ಥಾನದ ರಾಜ್ಯಸಂಸ್ಕಾರದ ಆತ್ಮರು ಅರ್ಥಾತ್ ಸದಾ ಶ್ರೇಷ್ಠ ಸ್ಥಿತಿಯ ಸ್ಥಾನದಲ್ಲಿ ಇರುವವರು - ಈ ರೀತಿ ಆಗಿದ್ದೀರಾ ಅಥವಾ ತಯಾರಾಗುತ್ತಿದ್ದೀರಾ? ಆಗಿದ್ದೀರಿ ಮತ್ತು ಸಂಪನ್ನರಾಗಲೇಬೇಕು. ರಾಜಾಸ್ಥಾನದ ಮಹಿಮೆಯೇನೂ ಕಡಿಮೆಯಿಲ್ಲ, ಸ್ಥಾಪನೆಯ ಮುಖ್ಯ ಕೇಂದ್ರವೇ ರಾಜಾಸ್ಥಾನದಲ್ಲಿದೆ ಅಂದಮೇಲೆ ಶ್ರೇಷ್ಠರಾಗಿದ್ದೀರಲ್ಲವೆ. ರಾಜಾಸ್ಥಾನ ಹೆಸರಿನಿಂದಲೂ ಶ್ರೇಷ್ಠ, ಕಾರ್ಯದಿಂದಲೂ ಶ್ರೇಷ್ಠ, ಇಂತಹ ರಾಜಾಸ್ಥಾನದ ಮಕ್ಕಳು ತನ್ನ ಮನೆಯಲ್ಲಿ ತಲುಪಿದ್ದೀರಿ. ತಿಳಿಯಿತೆ?

ಯು.ಪಿ.ಯ ಭೂಮಿಯು ವಿಶೇಷವಾಗಿ ಪಾವನ ಭೂಮಿಯೆಂದು ಗಾಯನಗೊಂಡಿದೆ. ಭಕ್ತಿಮಾರ್ಗದಲ್ಲಿನ ಪಾವನಗೊಳಿಸುವ ಗಂಗಾ ನದಿಯೂ ಅಲ್ಲಿಯೇ ಇದೆ ಮತ್ತು ಭಕ್ತಿಯ ಲೆಕ್ಕದಿಂದ ಕೃಷ್ಣನ ಭೂಮಿಯೂ ಸಹ ಯು.ಪಿ.ಯಲ್ಲಿಯೇ ಇದೆ. ಭೂಮಿಯ ಬಹಳ ಮಹಿಮೆಯಿದೆ. ಕೃಷ್ಣನ ಲೀಲೆ, ಜನ್ಮ ಭೂಮಿಯನ್ನು ನೋಡಬೇಕೆಂದರೆ ಯು.ಪಿ.ಯಲ್ಲಿಯೇ ನೋಡಲು ಹೋಗುತ್ತಾರೆ ಅಂದಮೇಲೆ ಇದು ಯು.ಪಿ.ಯವರ ವಿಶೇಷತೆಯಾಗಿದೆ - ಸದಾ ಪಾವನರಾಗಿದ್ದು ಅನ್ಯರನ್ನೂ ಪಾವನಗೊಳಿಸುವ ವಿಶೇಷತೆಯಿಂದ ಸಂಪನ್ನರಾಗಿದ್ದೀರಿ. ತಂದೆಯ ಮಹಿಮೆಯಲ್ಲಿ ಪತಿತ ಪಾವನ...... ಎಂಬ ಮಹಿಮೆಯೇನಿದೆಯೋ, ಅದೇರೀತಿ ತಂದೆಯ ಸಮಾನ ಪತಿತ ಪಾವನಿ ಆಗಿದ್ದೀರಿ ಎಂಬ ಮಹಿಮೆಯು ಯು.ಪಿ.ಯವರದಾಗಿದೆ. ಭಾಗ್ಯದ ನಕ್ಷತ್ರವು ಹೊಳೆಯುತ್ತಿದೆ - ಹೀಗೆ ಭಾಗ್ಯವಂತ ಸ್ಥಾನ ಮತ್ತು ಸ್ಥಿತಿ ಎರಡರ ಮಹಿಮೆಯಿದೆ. ಸದಾ ಪಾವನರಾಗಿರುವುದು ಸ್ಥಿತಿಯ ಮಹಿಮೆಯಾಗಿದೆ, ಅಂದಮೇಲೆ ತಮ್ಮನ್ನು ಇಂತಹ ಭಾಗ್ಯಶಾಲಿ ಎಂದು ತಿಳಿಯುತ್ತೀರಾ? ಸದಾ ತಮ್ಮ ಭಾಗ್ಯವನ್ನು ನೋಡುತ್ತಾ ಹರ್ಷಿತವಾಗುತ್ತಾ ಮತ್ತು ಅನ್ಯರನ್ನೂ ಹರ್ಷಿತಗೊಳಿಸುತ್ತಾ ನಡೆಯಿರಿ ಏಕೆಂದರೆ ಹರ್ಷಿತ ಮುಖವು ಸ್ವತಹವಾಗಿಯೇ ಆಕರ್ಷಿತ ಮೂರ್ತಿಯಾಗಿರುತ್ತದೆ. ಹೇಗೆ ಸ್ಥೂಲ ನದಿಯು ತನ್ನ ಕಡೆಗೆ ಸೆಳೆಯುತ್ತದೆ ಅಲ್ಲವೆ, ಆ ಸೆಳೆತದಿಂದ ಯಾತ್ರಿಗಳು ಹೋಗುತ್ತಾರೆ. ಅವರೆಷ್ಟಾದರೂ ಕಷ್ಟ ಪಡಬೇಕಾಗುವುದು, ಆದರೂ ಸಹ ಪಾವನರಾಗುವ ಆಕರ್ಷಣೆಯು ಸೆಳೆಯುತ್ತದೆ. ಹಾಗಾದರೆ ಪಾವನರನ್ನಾಗಿ ಮಾಡುವ ಕಾರ್ಯದ ನೆನಪಾರ್ಥವು ಈ ಯು.ಪಿ.ಯಲ್ಲಿದೆ. ಇದೇ ರೀತಿ ಹರ್ಷಿತ ಮತ್ತು ಆಕರ್ಷಿತ ಮೂರ್ತಿ ಆಗಬೇಕಾಗಿದೆ. ತಿಳಿಯಿತೆ?

ಮೂರನೇ ಗ್ರೂಪ್- ಡಬಲ್ ವಿದೇಶಿಗಳ ಗ್ರೂಪ್ ಆಗಿದೆ. ಡಬಲ್ ವಿದೇಶಿ ಅರ್ಥಾತ್ ಸದಾ ವಿದೇಶಿ ತಂದೆಯನ್ನು ಆಕರ್ಷಣೆ ಮಾಡುವವರು. ಏಕೆಂದರೆ ಸಮಾನರಾಗಿದ್ದಾರಲ್ಲವೆ. ತಂದೆಯೂ ವಿದೇಶಿ ಆಗಿದ್ದಾರೆ, ತಾವುಗಳೂ ವಿದೇಶಿ ಆಗಿದ್ದೀರಿ, ಸಮಾನರು ಪ್ರಿಯವಾಗುತ್ತಾರೆ. ಮಾತಾಪಿತನಿಗಿಂತಲೂ ಮಿತ್ರನೇ ಹೆಚ್ಚಾಗಿ ಪ್ರಿಯವೆನಿಸುತ್ತಾರೆ. ಅಂದಮೇಲೆ ಡಬಲ್ ವಿದೇಶಿಗಳು ಸದಾ ತಂದೆಯ ಸಮಾನ ಈ ದೇಹ ಮತ್ತು ದೇಹದ ಆಕರ್ಷಣೆಯಿಂದ ಭಿನ್ನವಾದ ವಿದೇಶಿ ಆಗಿದ್ದೇವೆ, ಅಶರೀರ ಆಗಿದ್ದೇವೆ, ಅವ್ಯಕ್ತರಾಗಿದ್ದೇವೆ. ಅಂದಮೇಲೆ ತಂದೆಯು ತನ್ನ ಸಮಾನ ಅಶರೀರಿ, ಅವ್ಯಕ್ತ ಸ್ಥಿತಿಯಿರುವ ಮಕ್ಕಳನ್ನು ನೋಡುತ್ತಾ ಹರ್ಷಿತವಾಗುತ್ತಾರೆ. ಬಹಳ ಚೆನ್ನಾಗಿಯೇ ರೇಸ್ ಮಾಡುತ್ತಿದ್ದಾರೆ. ಸೇವೆಯಲ್ಲಿಯೂ ಭಿನ್ನ-ಭಿನ್ನವಾದ ಸಾಧನ ಮತ್ತು ಭಿನ್ನ-ಭಿನ್ನ ವಿಧಿಗಳಿಂದ ವೃದ್ಧಿಯಾಗುವ ರೇಸ್ನ್ನು ಚೆನ್ನಾಗಿ ಮಾಡುತ್ತಿದ್ದಾರೆ. ವಿಧಿಯನ್ನೂ ಸ್ವೀಕರಿಸುತ್ತಾರೆ ಮತ್ತು ವೃದ್ಧಿಯನ್ನೂ ಮಾಡುತ್ತಿದ್ದಾರೆ. ಆದ್ದರಿಂದ ಬಾಪ್ದಾದಾರವರು ನಾಲ್ಕೂ ಕಡೆಯಲ್ಲಿರುವ ಡಬಲ್ ವಿದೇಶಿ ಮಕ್ಕಳ ಪ್ರತಿ ಸೇವೆಯ ಶುಭಾಷಯಗಳನ್ನೂ ಕೊಡುತ್ತಾರೆ ಹಾಗೂ ಸ್ವಯಂನ ವೃದ್ಧಿಯ ಪ್ರತಿ ಸ್ಮೃತಿಯನ್ನು ತರಿಸುತ್ತಾರೆ. ಸ್ವಯಂನ ಉನ್ನತಿಯಲ್ಲಿ ಸದಾ ಹಾರುವ ಕಲೆಯ ಮೂಲಕ ಹಾರುತ್ತಿರಿ. ಸ್ವ-ಉನ್ನತಿ ಹಾಗೂ ಸೇವೆಯ ಉನ್ನತಿಯ ಬ್ಯಾಲೆನ್ಸ್ನ ಮೂಲಕ ಸದಾ ತಂದೆಯ ಬ್ಲೆಸ್ಸಿಂಗ್ನ ಅಧಿಕಾರಿಯಾಗಿದ್ದೀರಿ ಮತ್ತು ಸದಾ ಅಧಿಕಾರಿ ಆಗಿರುತ್ತೀರಿ. ಒಳ್ಳೆಯದು.

ನಾಲ್ಕನೆಯ ಗ್ರೂಪ್ - ಮಧುಬನ ನಿವಾಸಿಗಳಂತು ಸದಾ ಇದ್ದೇ ಇರುತ್ತೀರಿ. ಯಾರು ಹೃದಯದಲ್ಲಿರುತ್ತಾರೆಯೋ ಅವರು ಜೊತೆಯಲ್ಲಿರುತ್ತಾರೆ. ಬಹಳ ಹೆಚ್ಚಾಗಿ ವಿಧಿಪೂರ್ವಕವಾದ ಬ್ರಹ್ಮಾ ಭೋಜನವೂ ಸಹ ಮಧುಬನದಲ್ಲಿಯೇ ತಯಾರಾಗುತ್ತದೆ. ಎಲ್ಲರಿಗಿಂತಲೂ ಅಗಲಿ ಮರಳಿ ಸಿಕ್ಕಿರುವ ಮಕ್ಕಳೂ ಸಹ ಮಧುಬನ ನಿವಾಸಿಗಳಾಗಿದ್ದಾರೆ. ಎಲ್ಲಾ ಕಾರ್ಯಕ್ರಮಗಳೂ ಸಹ ಮಧುಬನದಲ್ಲಿಯೇ ಆಗುತ್ತವೆ. ಬಹಳ ಹೆಚ್ಚಾಗಿ ಡೈರೆಕ್ಟ್ ಮುರುಳಿಗಳನ್ನೂ ಸಹ ಮಧುಬನದವರೇ ಕೇಳುತ್ತಾರೆ ಅಂದಮೇಲೆ ಮಧುಬನ ನಿವಾಸಿಗಳು ಸದಾ ಶ್ರೇಷ್ಠಭಾಗ್ಯದ ಅಧಿಕಾರಿ ಆತ್ಮರಾಗಿದ್ದಾರೆ. ಸೇವೆಯನ್ನೂ ಮನಃಪೂರ್ವಕವಾಗಿ ಮಾಡುತ್ತಾರೆ. ಆದ್ದರಿಂದ ಮಧುಬನ ನಿವಾಸಿಗಳಿಗೆ ಬಾಪ್ದಾದಾ ಹಾಗೂ ಸರ್ವ ಬ್ರಾಹ್ಮಣರ ಮನಸ್ಸಿನಿಂದ ಆಶೀರ್ವಾದಗಳು ಪ್ರಾಪ್ತಿಯಾಗುತ್ತಿರುತ್ತದೆ. ಒಳ್ಳೆಯದು.

ನಾಲ್ಕೂ ಕಡೆಯಲ್ಲಿನ ಬಾಪ್ದಾದಾರವರ ವಿಶೇಷ ಸರ್ವ ಸಂತುಷ್ಟ ಮಣಿಗಳಿಗೆ, ಬಾಪ್ದಾದಾರವರ ವಿಶೇಷ ನೆನಪು-ಪ್ರೀತಿ. ಜೊತೆ ಜೊತೆಗೆ ಸರ್ವ ಭಾಗ್ಯಶಾಲಿ ಬ್ರಾಹ್ಮಣ ಜೀವನದ ಪ್ರಾಪ್ತಿ ಮಾಡಿಕೊಳ್ಳುವಂತಹ ಕೋಟಿಯಲ್ಲಿ ಕೆಲವರು, ಕೆಲವರಲ್ಲಿಯೂ ಕೆಲವು ಅಗಲಿ ಮರಳಿ ಸಿಕ್ಕಿರುವ ಆತ್ಮರಿಗೆ, ಬಾಪ್ದಾದಾರವರ ಶುಭ ಸಂಕಲ್ಪವನ್ನು ಸಂಪನ್ನಗೊಳಿಸುವ ಆತ್ಮರಿಗೆ, ಸಂಗಮಯುಗಿ ಬ್ರಾಹ್ಮಣ ಜೀವನದ ಆಸ್ತಿಯ ಸಂಪೂರ್ಣ ಅಧಿಕಾರವನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಆತ್ಮರಿಗೆ, ವಿದಾತಾ ಮತ್ತು ವರದಾತಾ ಬಾಪ್ದಾದಾರವರ ಬಹಳ-ಬಹಳ ನೆನಪು-ಪ್ರೀತಿಯನ್ನು ಸ್ವೀಕಾರ ಮಾಡಿರಿ.

ಬಾಪ್ದಾದಾರವರಿಂದ ದಾದಿ ಜಾನಕಿ ಜೀ ಹಾಗೂ ದಾದಿ ಚಂದ್ರಮಣಿ ಜೀ ಯವರು ಸೇವೆಯಲ್ಲಿ ಹೋಗುವುದಕ್ಕಾಗಿ ಅನುಮತಿ ತೆಗೆದುಕೊಳ್ಳುತ್ತಿದ್ದಾರೆ

ಹೋಗುತ್ತಿದ್ದೀರಾ ಅಥವಾ ಸಮಾವೇಶ ಮಾಡಿಕೊಳ್ಳುತ್ತಿದ್ದೀರಾ? ಅಲ್ಲಿಗೆ ಹೋಗಿರಿ ಅಥವಾ ಅಲ್ಲಿಂದ ಬನ್ನಿರಿ ಆದರೆ ಸದಾ ಸಮಾವೇಶವಾಗಿರಿ. ಬಾಪ್ದಾದಾರವರು ಅನನ್ಯ ಮಕ್ಕಳನ್ನೆಂದಿಗೂ ಬೇರೆಯಾಗಿ ನೋಡುವುದೇ ಇಲ್ಲ. ಭಲೆ ಆಕಾರದಲ್ಲಿ ಅಥವಾ ಸಾಕಾರದಲ್ಲಿಯೂ ಸದಾ ಜೊತೆಯಿದ್ದಾರೆ. ಏಕೆಂದರೆ ಯಾರು ಮಹಾವೀರ ಮಕ್ಕಳಿದ್ದಾರೆಯೋ ಅವರಷ್ಟೇ ಈ ಪ್ರತಿಜ್ಞೆಯನ್ನು ನಿಭಾಯಿಸುತ್ತಾರೆ - ಬಾಬಾ, ಪ್ರತೀ ಸಮಯದಲ್ಲಿ ಜೊತೆಯಿರುತ್ತೇವೆ, ಜೊತೆಯಲ್ಲಿಯೇ ನಡೆಯುತ್ತೇವೆ ಎಂದು. ಬಹಳ ಸ್ವಲ್ಪ ಮಕ್ಕಳೇ ಇದನ್ನು ನಿಭಾಯಿಸುತ್ತಾರೆ ಆದ್ದರಿಂದ ಇಂತಹ ಮಹಾವೀರ ಮಕ್ಕಳು, ಅನನ್ಯ ಮಕ್ಕಳು ಎಲ್ಲಿಯೇ ಹೋಗುತ್ತಾರೆಂದರೆ ತಂದೆಯನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ ಮತ್ತು ತಂದೆಯೂ ಸಹ ವತನದಲ್ಲಿಯೂ ಸಹ ಸದಾ ಜೊತೆಯಲ್ಲಿಯೇ ಇಟ್ಟುಕೊಳ್ಳುತ್ತಾರೆ. ಪ್ರತೀ ಹೆಜ್ಜೆಯಲ್ಲಿಯೂ ಜೊತೆ ಕೊಡುತ್ತಾರೆ. ಆದ್ದರಿಂದ ಹೋಗುತ್ತಿದ್ದೀರಿ, ಬರುತ್ತಿದ್ದೀರಿ, ಇದನ್ನು ಏನೆಂದು ಹೇಳುವುದು? ಆದ್ದರಿಂದ ತಾವು ಹೋಗುತ್ತಿದ್ದೀರಾ ಅಥವಾ ಸಮಾವೇಶವಾಗುತ್ತಿದ್ದೀರಾ ಎಂದು ಕೇಳಿದೆವು. ಇದೇ ರೀತಿ ಜೊತೆಯಲ್ಲಿ ಇರುತ್ತಾ-ಇರುತ್ತಾ ಸಮಾನರಾಗಿ ಸಮಾವೇಶವಾಗುತ್ತೀರಿ. ಮನೆಯಲ್ಲಿ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುತ್ತೀರಿ, ಜೊತೆಯಲ್ಲಿರುತ್ತೀರಿ, ಆನಂತರ ತಾವು ರಾಜ್ಯಾಡಳಿತ ಮಾಡುವುದನ್ನು ಬಾಬಾರವರು ಮೇಲಿಂದ ನೋಡುವರು. ಆದರೆ ಜೊತೆಯ ಸ್ವಲ್ಪ ಸಮಯದ ಅನುಭವವನ್ನು ಮಾಡಿರಿ. ಒಳ್ಳೆಯದು.

(ಇಂದು ಬಾಬಾ ತಾವು ಅದ್ಭುತವಾದ ಮಾಲೆಯನ್ನು ಮಾಡಿದ್ದೀರಿ) ತಾವುಗಳೂ ಸಹ ಮಾಲೆಯನ್ನು ತಯಾರು ಮಾಡುತ್ತೀರಲ್ಲವೆ. ಈಗಂತು ಮಾಲೆ ಚಿಕ್ಕದಾಗಿದೆ, ಈಗ ದೊಡ್ಡದಾಗುತ್ತದೆ. ಯಾರೀಗ ಕೆಲ ಕೆಲವೊಮ್ಮೆ ಸ್ವಲ್ಪ ಮೂರ್ಛಿತರಾಗುತ್ತಾರೆಯೋ, ಅವರನ್ನು ಸ್ವಲ್ಪ ಸಮಯದಲ್ಲಿಯೇ ಪ್ರಕೃತಿ ಅಥವಾ ಸಮಯದ ಕರೆಯು ಜಾಗರೂಕತೆಯಲ್ಲಿ ಕರೆ ತರುತ್ತದೆ, ಆನಂತರ ಮಾಲೆಯು ದೊಡ್ಡದಾಗಿ ಬಿಡುತ್ತದೆ. ಒಳ್ಳೆಯದು - ತಾವೆಲ್ಲಿಯೇ ಹೋಗಿ, ತಂದೆಯ ವರದಾನಿಯಂತು ಆಗಿದ್ದೀರಿ. ತಮ್ಮ ಪ್ರತೀ ಹೆಜ್ಜೆಯಿಂದ ಎಲ್ಲರಿಗೂ ತಂದೆಯ ವರದಾನವು ಸಿಗುತ್ತಿರುತ್ತದೆ. ನೋಡುತ್ತಿದ್ದರೂ ತಂದೆಯ ವರದಾನ ದೃಷ್ಟಿಯಿಂದ ನೋಡುವರು, ಮಾತನಾಡಿದರೂ ಸಹ ಮಾತಿನಿಂದ ವರದಾನವನ್ನು ಪಡೆಯುವರು, ಕರ್ಮದಿಂದಲೂ ವರದಾನವನ್ನೇ ಪಡೆಯುವರು. ನಡೆಯುತ್ತಾ-ಸುತ್ತಾಡುತ್ತಾ ಇದ್ದರೂ ವರದಾನಗಳ ಸುರಿಮಳೆ ಗೈಯಲು ಹೋಗುತ್ತಿದ್ದೀರಿ. ಈಗ ಯಾವ ಆತ್ಮರು ಬರುತ್ತಿದ್ದಾರೆಯೋ ಅವರಿಗೆ ವರದಾನದ ಅಥವಾ ಮಹಾದಾನದ ಅವಶ್ಯಕತೆಯೇ ಇದೆ. ತಾವುಗಳು ಅಲ್ಲಿಗೆ ಹೋಗುವುದು ಅರ್ಥಾತ್ ತೆರೆದ ಹೃದಯದಿಂದ ಅವರಿಗೆ ತಂದೆಯ ವರದಾನ ಸಿಗುವುದಾಗಿದೆ. ಒಳ್ಳೆಯದು.

ವರದಾನ:  
ಬುದ್ಧಿಯೆಂಬ ಪಾದದ ಮೂಲಕ ಈ ಐದು ತತ್ವಗಳ ಆಕರ್ಷಣೆಯಿಂದ ದೂರವಿರುವ ಫರಿಶ್ತಾ ಸ್ವರೂಪ ಭವ.

ಫರಿಶ್ಥೆಗಳಿಗೆ ಸದಾ ಪ್ರಕಾಶದ ಕಾಯವನ್ನು ತೋರಿಸುತ್ತಾರೆ. ಪ್ರಕಾಶದ ಕಾಯವಿರುವವರು ಸದಾ ಈ ದೇಹದ ಸ್ಮೃತಿಯಿಂದಲೂ ದೂರವಿರುತ್ತಾರೆ. ಅವರ ಬುದ್ಧಿಯೆಂಬ ಪಾದವು ಈ ಐದು ತತ್ವಗಳ ಆಕರ್ಷಣೆಯಿಂದ ಮೇಲೆ ಅರ್ಥಾತ್ ಆಚೆಯಿರುತ್ತದೆ. ಇಂತಹ ಫರಿಶ್ಥೆಗಳನ್ನು ಮಾಯೆ ಅಥವಾ ಯಾವುದೇ ಮಾಯಾವಿಯೂ ಸ್ಪರ್ಷಿಸುವುದಕ್ಕೂ ಸಾಧ್ಯವಿಲ್ಲ. ಆದರೆ ಈ ರೀತಿಯಾಗಬೇಕೆಂದರೆ - ಯಾವಾಗ ಯಾವುದರಲ್ಲಿಯೂ ಅಧೀನರಾಗುವುದಿಲ್ಲವೋ ಆಗಲೇ ಇದಾಗುತ್ತದೆ. ಶರೀರಕ್ಕೂ ಅಧಿಕಾರಿಯಾಗಿದ್ದು ನಡೆಯಬೇಕು, ಮಾಯೆಗೂ ತಾವು ಅಧಿಕಾರಿಯಾಗಬೇಕು, ಲೌಕಿಕ ಅಥವಾ ಅಲೌಕಿಕ ಸಂಬಂಧದಲ್ಲಿಯೂ ಅಧೀನತೆಯಲ್ಲಿ ಬರಬಾರದು.

ಸ್ಲೋಗನ್:
ಶರೀರವನ್ನು ನೋಡುವ ಹವ್ಯಾಸವಿದೆಯೆಂದರೆ, ಪ್ರಕಾಶದ ಶರೀರವನ್ನು ನೋಡಿರಿ, ಪ್ರಕಾಶ ರೂಪದಲ್ಲಿ ಸ್ಥಿತರಾಗಿರಿ.


05-10-87 ಅವ್ಯಕ್ತ ಮುರಳಿಯಿಂದ ಸ್ವ-ಉನ್ನತಿಗಾಗಿ ಪ್ರಶ್ನಾವಳಿ -

1. ಎಂತಹ ಆತ್ಮಗಳು ಸಂತುಷ್ಟತೆಯ ಮಾಲೆಯಲ್ಲಿ ಪೋಣಿಸಲ್ಪಡುವರು?

2. ಸಂತುಷ್ಟ ಆತ್ಮಗಳು ಅನ್ಯ ಆತ್ಮಗಳನ್ನು ಹೇಗೆ ಸಂತುಷ್ಟ ಪಡಿಸುತ್ತಾರೆ?

3. ಬಾಪ್ದಾದಾರವರು ಎಂತಹ ಮೂರು ಮಾಲೆಗಳನ್ನು ನೋಡುತ್ತಿದ್ದರು?

4. ಬ್ರಾಹ್ಮಣರ ಗಾಯನ ಏನಾಗಿದೆ?

5. ಅಸಂತುಷ್ಟತೆಯ ಅನುಭವ ಏಕೆ ಆಗುತ್ತದೆ?

6. ಪ್ರಸನ್ನಚಿತ್ತರಾಗಿರುವ ಆತ್ಮಗಳ ಲಕ್ಷಣ ಏನಾಗಿದೆ?

7. ಬ್ರಾಹ್ಮಣ ಜೀವನದ ಆಸ್ತಿ ಏನಾಗಿದೆ?

8. ರಾಜಸ್ಥಾನ ಎಂದರೆ ಎಂತಹವರು?

9. ತಂದೆಯಿಂದ ಆರ್ಶೀವಾದ ತೆಗೆದುಕೊಳ್ಳುವಂತಹ ಅಧಿಕಾರಿಗಳು ಹೇಗೆ ಆಗಬೇಕು?

10. ಫರಿಶ್ಥೆಗಳನ್ನು ಯಾರು ಮುಟ್ಟುವುದಕ್ಕೆ ಸಾಧ್ಯವಿಲ್ಲ?