03.02.19    Avyakt Bapdada     Kannada Murli     17.04.84     Om Shanti     Madhuban


" ಪದಮಾಪದಮ ಭಾಗ್ಯಶಾಲಿಯ ಚಿಹ್ನೆ"


ಇಂದು ಭಾಗ್ಯವಿದಾತಾ ತಂದೆಯು ಭಾಗ್ಯಶಾಲಿಯಾಗಿರುವ ಎಲ್ಲಾ ಮಕ್ಕಳನ್ನು ನೋಡುತ್ತಿದ್ದಾರೆ. ಪ್ರತಿಯೊಬ್ಬ ಬ್ರಾಹ್ಮಣ ಆತ್ಮನು ಭಾಗ್ಯಶಾಲಿ ಆತ್ಮನಾಗಿದ್ದಾರೆ. ಬ್ರಾಹ್ಮಣರಾಗುವುದು ಅರ್ಥಾತ್ ಭಾಗ್ಯಶಾಲಿಯಾಗುವುದು. ಭಗವಂತನ ಮಕ್ಕಳಾಗುವುದು ಅರ್ಥಾತ್ ಭಾಗ್ಯಶಾಲಿಯಾಗುವುದು. ಭಾಗ್ಯವಂತರಂತು ಎಲ್ಲರೂ ಆಗಿದ್ದಾರೆ ಆದರೆ ತಂದೆಯ ಮಕ್ಕಳಾದ ನಂತರ ತಂದೆಯ ಮೂಲಕ ಭಿನ್ನ-ಭಿನ್ನ ಖಜಾನೆಗಳೇನು ಆಸ್ತಿಯ ರೂಪದಲ್ಲಿ ಪ್ರಾಪ್ತಿಯಾಗುತ್ತದೆ, ಆ ಶ್ರೇಷ್ಠ ಆಸ್ತಿಯ ಅಧಿಕಾರವನ್ನು ಪ್ರಾಪ್ತಿ ಮಾಡಿಕೊಂಡು ಅಧಿಕಾರಿ ಜೀವನದಲ್ಲಿ ನಡೆಸುವುದು ಅಥವಾ ಪ್ರಾಪ್ತಿಯಾಗಿರುವ ಅಧಿಕಾರವನ್ನು ಸದಾ ಸಹಜ ವಿಧಿಯ ಮೂಲಕ ವೃದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುವುದು - ಇದರಲ್ಲಿ ನಂಬರ್ ವಾರ್ ಆಗಿ ಬಿಡುತ್ತಾರೆ. ಕೆಲವರು ಭಾಗ್ಯಶಾಲಿಯಾಗಿ ಉಳಿದುಕೊಳ್ಳುತ್ತಾರೆ, ಕೆಲವರು ಸೌಭಾಗ್ಯಶಾಲಿಯಾಗಿ ಬಿಡುತ್ತಾರೆ. ಕೆಲವರು ಸಾವಿರ, ಕೆಲವರು ಲಕ್ಷ, ಕೆಲವರು ಪದಮಾಪದಮ ಭಾಗ್ಯಶಾಲಿ ಆಗಿ ಬಿಡುತ್ತಾರೆ. ಏಕೆಂದರೆ ಖಜಾನೆಯನ್ನು ವಿಧಿಯಿಂದ ಕಾರ್ಯದಲ್ಲಿ ಉಪಯೋಗಿಸುವುದು ಅರ್ಥಾತ್ ವೃದ್ಧಿಯನ್ನು ಹೊಂದುವುದಾಗಿದೆ. ಭಲೇ ಸ್ವಯಂನ್ನು ಸಂಪನ್ನ ಮಾಡಿಕೊಳ್ಳುವ ಕಾರ್ಯದಲ್ಲಿ ಉಪಯೋಗಿಸಲಿ, ಭಲೇ ಸ್ವಯಂನ ಸಂಪನ್ನತೆಯ ಮೂಲಕ ಅನ್ಯ ಆತ್ಮರ ಸೇವೆಯ ಕಾರ್ಯದಲ್ಲಿ ಉಪಯೋಗಿಸಲಿ. ವಿನಾಶಿ ಧನವನ್ನು ಖರ್ಚು ಮಾಡುವುದರಿಂದ ಖಾಲಿಯಾಗುತ್ತದೆ, ಅವಿನಾಶಿ ಧನವನ್ನು ಖರ್ಚು ಮಾಡುವುದರಿಂದ ಪದಮದಷ್ಟು ಹೆಚ್ಚುತ್ತದೆ. ಆದ್ದರಿಂದ ಹೇಳಿಕೆ ಇದೆ - ಖರ್ಚು ಮಾಡಿರಿ ಮತ್ತು ಸ್ವೀಕರಿಸಿರಿ. ಎಷ್ಟು ಖರ್ಚು ಮಾಡುವಿರಿ, ಸ್ವೀಕರಿಸುತ್ತೀರೋ ಅಷ್ಟೂ ರಾಜರಿಗೂ ರಾಜ, ತಂದೆಯವರು ಇನ್ನೂ ಸಂಪನ್ನರನ್ನಾಗಿ ಮಾಡಿ ಬಿಡುತ್ತಾರೆ. ಆದ್ದರಿಂದ ಪ್ರಾಪ್ತಿಯಾಗಿರುವ ಯಾವ ಖಜಾನೆಗಳ ಭಾಗ್ಯವಿದೆ, ಅದನ್ನು ಯಾರು ಸೇವಾರ್ಥವಾಗಿ ಉಪಯೋಗಿಸುತ್ತಾರೆಯೋ ಅವರು ಮುಂದುವರೆಯುತ್ತಾರೆ. ಪದಮಾಪದಮ ಭಾಗ್ಯಶಾಲಿ ಅರ್ಥಾತ್ ಪ್ರತೀ ಹೆಜ್ಜೆಯಲ್ಲಿ ಪದಮಗಳ ಸಂಪಾದನೆಯನ್ನು ಜಮಾ ಮಾಡಿಕೊಳ್ಳುವವರು ಮತ್ತು ಪ್ರತೀ ಸಂಕಲ್ಪದಿಂದ ಅಥವಾ ಮಾತು, ಕರ್ಮ, ಸಂಪರ್ಕದಿಂದ ಪದಮಗಳನ್ನು ಪದಮದಷ್ಟು ಸೇವಾಧಾರಿಯಾಗಿದ್ದು, ಸೇವೆಯಲ್ಲಿ ಉಪಯೋಗಿಸುವವರು. ಪದಮಾಪದಮ ಭಾಗ್ಯಶಾಲಿಯು ಸದಾ ವಿಶಾಲ ಹೃದಯಿ, ಅವಿನಾಶಿ, ಅಖಂಡ ಮಹಾದಾನಿ, ಸರ್ವರ ಪ್ರತಿ ಸರ್ವ ಖಜಾನೆಗಳನ್ನು ಕೊಡುವಂತಹ ದಾತಾ ಆಗಿರುತ್ತಾರೆ. ಸಮಯ ಅಥವಾ ಕಾರ್ಯಕ್ರಮದನುಸಾರ, ಸಾಧನಗಳನುಸಾರವಾಗಿ ಸೇವಾಧಾರಿಯಾಗುವುದಲ್ಲ, ಅಖಂಡ ಮಹಾದಾನಿ. ವಾಚಾ ಇಲ್ಲವೆಂದರೆ ಮನಸ್ಸಾ ಅಥವಾ ಕರ್ಮಣಾ. ಸಂಬಂಧ-ಸಂಪರ್ಕದ ಮೂಲಕ ಯಾವುದಾದರೊಂದು ವಿಧಿಯ ಮೂಲಕ ಅಕೂಟ, ಅಖಂಡ ಖಜಾನೆಯ ನಿರಂತರ ಸೇವಾಧಾರಿ. ಸೇವೆಯ ಭಿನ್ನ-ಭಿನ್ನ ರೂಪಗಳಿರುತ್ತವೆ, ಆದರೆ ಸೇವೆಯ ಹೆಜ್ಜೆಯು ಸದಾ ನಡೆಯುತ್ತಿರಬೇಕು. ಹೇಗೆ ನಿರಂತರ ಯೋಗಿಯಾಗಿದ್ದೀರಿ, ಹಾಗೆಯೇ ನಿರಂತರ ಸೇವಾಧಾರಿ. ನಿರಂತರ ಸೇವಾಧಾರಿಯು ಸೇವೆಯ ಶ್ರೇಷ್ಠ ಫಲವನ್ನು ನಿರಂತರ ಭೋಗಿಸುತ್ತಾರೆ ಮತ್ತು ಅನ್ಯರಿಗೂ ಅನುಭವ ಮಾಡಿಸುತ್ತಾರೆ ಅರ್ಥಾತ್ ತಾನೇ ಸದಾ ಫಲವನ್ನು ಅನುಭವಿಸುತ್ತಾ ಪ್ರತ್ಯಕ್ಷ ಸ್ವರೂಪವಾಗಿ ಬಿಡುತ್ತಾರೆ. ಪದಮಾಪದಮ ಭಾಗ್ಯಶಾಲಿ ಆತ್ಮನು ಸದಾ ಪದಮದ ಆಸನ ನಿವಾಸಿ ಅರ್ಥಾತ್ ಕಮಲ ಪುಷ್ಫ ಸ್ಥಿತಿಯ ಆಸನದ ನಿವಾಸಿ, ಅಲ್ಪಕಾಲದರ ಆಕರ್ಷಣೆ ಮತ್ತು ಅಲ್ಪಕಾಲದ ಫಲವನ್ನು ಸ್ವೀಕರಿಸುವುದರಿಂದ ಭಿನ್ನ ಹಾಗೂ ತಂದೆ ಮತ್ತು ಬ್ರಾಹ್ಮಣ ಪರಿವಾರದ, ವಿಶ್ವದ ಪ್ರಿಯರು. ಇಂತಹ ಶ್ರೇಷ್ಠ ಸೇವಾಧಾರಿ ಆತ್ಮರಿಗೆ ಸರ್ವ ಆತ್ಮರು ಸದಾಕಾಲದ ಸ್ನೇಹದ ಖುಷಿಯ ಪುಷ್ಫಗಳನ್ನು ಅರ್ಪಿಸುತ್ತಾರೆ. ಸ್ವಯಂ ಬಾಪ್ದಾದಾರವರೂ ಸಹ ಇಂತಹ ನಿರಂತರ ಸೇವಾಧಾರಿ, ಪದಮಾಪದಮ ಭಾಗ್ಯಶಾಲಿ ಆತ್ಮರ ಬಗ್ಗೆ ಸ್ನೇಹದ ಪುಷ್ಫಗಳನ್ನು ಅರ್ಪಿಸುತ್ತಾರೆ. ಪದಮಾಪದಮ ಭಾಗ್ಯಶಾಲಿ ಆತ್ಮನು ಸದಾ ತನ್ನ ಹೊಳೆಯುತ್ತಿರುವ ಭಾಗ್ಯದ ನಕ್ಷತ್ರದ ಮೂಲಕ ಅನ್ಯ ಆತ್ಮರನ್ನೂ ಭಾಗ್ಯಶಾಲಿಯನ್ನಾಗಿ ಮಾಡುವ ಪ್ರಕಾಶತೆಯನ್ನು ಕೊಡುವರು. ಬಾಪ್ದಾದಾರವರು ಇಂತಹ ಭಾಗ್ಯಶಾಲಿ ಮಕ್ಕಳನ್ನು ನೋಡುತ್ತಿದ್ದರು. ಭಲೇ ದೂರವಿದ್ದಾರೆಯೋ, ಸನ್ಮುಖದಲ್ಲಿಯೇ ಇರಬಹುದು ಆದರೆ ಸದಾ ತಂದೆಯ ಹೃದಯದಲ್ಲಿ ಸಮಾವೇಶವಾಗಿದ್ದಾರೆ ಆದ್ದರಿಂದ ಸಮಾನರು ಸಮೀಪದಲ್ಲಿರುತ್ತಾರೆ. ಈಗ ತಮ್ಮನ್ನು ತಾವು ಕೇಳಿಕೊಳ್ಳಿರಿ - ನಾನು ಎಂತಹ ಭಾಗ್ಯಶಾಲಿ ಆಗಿರುವೆನು! ತಮ್ಮನ್ನು ತಾವಂತು ತಿಳಿಯಬಹುದಲ್ಲವೆ! ಅನ್ಯರು ಹೇಳುವುದರಿಂದ ಒಪ್ಪಿಕೊಳ್ಳಿರಿ ಅಥವಾ ಒಪ್ಪದಿರಿ ಆದರೆ ಸ್ವಯಂನ್ನಂತು ಎಲ್ಲರೂ ತಿಳಿಯುತ್ತೀರಿ - ನಾನು ಯಾರು ಎಂದು. ತಿಳಿಯಿತೆ! ಆದರೂ ಬಾಪ್ದಾದಾರವರು ಹೇಳುತ್ತಾರೆ - ಭಾಗ್ಯಹೀನರಿಂತ ಭಾಗ್ಯಶಾಲಿಯಂತು ಆಗಿ ಬಿಟ್ಟಿರಿ. ಅನೇಕ ಪ್ರಕಾರದ ದುಃಖ-ನೋವುಗಳಿಂದಂತು ಪಾರಾಗುತ್ತೀರಿ. ಸ್ವರ್ಗದ ಮಾಲೀಕರಂತು ಆಗುವಿರಿ. ಒಂದು - ಸ್ವರ್ಗದಲ್ಲಿ ಬರುವುದಾಗಿದೆ. ಇನ್ನೊಂದು - ರಾಜ್ಯಾಧಿಕಾರಿ ಆಗುವುದು. ಬರುವವರಂತು ಎಲ್ಲರೂ ಬರುತ್ತಾರೆ ಆದರೆ ಯಾವಾಗ ಮತ್ತು ಎಲ್ಲಿ ಬರುತ್ತೇವೆ - ಇದನ್ನು ಸ್ವಯಂನೊಂದಿಗೆ ಕೇಳಿಕೊಳ್ಳಿರಿ. ಬಾಪ್ದಾದಾರವರ ರಿಜಿಸ್ಟರ್ ನಲ್ಲಿ ಸ್ವರ್ಗದಲ್ಲಿ ಬರುವ ಪಟ್ಟಿಯಲ್ಲಿ ಹೆಸರು ಬಂದು ಬಿಟ್ಟಿದೆ. ಪ್ರಪಂಚದವರಿಗಿಂತಲೂ ಇದು ಒಳ್ಳೆಯದಾಗಿದೆ. ಆದರೆ ಒಳ್ಳೆಯದಕ್ಕಿಂತಲೂ ಒಳ್ಳೆಯದಿಲ್ಲ. ಹಾಗಾದರೆ ಏನು ಮಾಡುವಿರಿ? ಯಾವ ಜೋನ್ ನಂಬರ್ವನ್ ಬರುತ್ತದೆ. ಪ್ರತಿಯೊಂದು ಜೋನಿನ ವಿಶೇಷತೆಯೂ ತನ್ನ-ತನ್ನದಾಗಿದೆ. ಮಹಾರಾಷ್ಟ್ರದ ವಿಶೇಷತೆಯೇನಾಗಿದೆ? ಗೊತ್ತಿದೆಯೇ? ಮಹಾನರಂತು ಆಗಿಯೇ ಇದ್ದೀರಿ ಆದರೆ ವಿಶೇಷವಾದ ವಿಶೇಷತೆಯನ್ನೇನು ಗಾಯನವಾಗುತ್ತದೆ! ಮಹಾರಾಷ್ಟ್ರದಲ್ಲಿ ಗಣಪತಿಯ ಪೂಜೆಯು ಹೆಚ್ಚಾಗಿ ಆಗುತ್ತದೆ. ಗಣಪತಿಯನ್ನು ಏನು ಹೇಳುತ್ತಾರೆ? ವಿಘ್ನವಿನಾಶಕ. ಯಾವುದೇ ಕಾರ್ಯವನ್ನು ಆರಂಭ ಮಾಡುತ್ತಾರೆಂದರೆ ಮೊದಲು ಗಣೇಶಾಯ ನಮಃ ಹೇಳುತ್ತಾರೆ. ಅಂದಮೇಲೆ ಮಹಾರಾಷ್ಟ್ರದವರು ಏನು ಮಾಡುವಿರಿ? ಪ್ರತಿಯೊಂದು ಮಹಾನ್ ಕಾರ್ಯದಲ್ಲಿ ಶ್ರೀ ಗಣೇಶ ಮಾಡುತ್ತೀರಲ್ಲವೆ. ಮಹಾರಾಷ್ಟ್ರ ಅರ್ಥಾತ್ ಸದಾ ವಿಘ್ನವಿನಾಶಕ ರಾಷ್ಟ್ರ. ಅಂದಮೇಲೆ ಸದಾ ವಿಘ್ನವಿನಾಶಕನಾಗಿದ್ದು ಸ್ವಯಂನ ಹಾಗೂ ಅನ್ಯರ ಪ್ರತಿ ಇದೇ ಮಹಾನತೆಯನ್ನು ತೋರಿಸುತ್ತೀರಾ! ಮಹಾರಾಷ್ಟ್ರದಲ್ಲಿ ವಿಘ್ನವಿರಬಾರದು. ಎಲ್ಲರೂ ವಿಘ್ನವಿನಾಶಕರಾಗಿ ಬಿಡಬೇಕು. ಬಂದಿತು ಮತ್ತು ದೂರದಿಂದ ನಮಸ್ಕಾರ ಮಾಡಿತು. ಅಂದಮೇಲೆ ಇಂತಹ ವಿಘ್ನವಿನಾಶಕ ಗ್ರೂಪ್ನ್ನು ಕರೆತಂದಿದ್ದೀರಲ್ಲವೆ! ಮಹಾರಾಷ್ಟ್ರದವರು ಸದಾ ತಮ್ಮ ಈ ಮಹಾನತೆಯನ್ನು ವಿಶ್ವದ ಮುಂದೆ ತೋರಿಸಬೇಕು. ವಿಘ್ನದಿಂದ ಭಯ ಪಡುವವರಂತು ಆಗಿಲ್ಲವಲ್ಲವೆ. ವಿಘ್ನ ವಿನಾಶಕರು ಚಾಲೆಂಜ್ ಮಾಡುವವರಾಗಿದ್ದಾರೆ. ಹಾಗೆಯೇ ಮಹಾರಾಷ್ಟ್ರದಲ್ಲಿ ಬಹದ್ದೂರಿಯನ್ನು ತೋರಿಸುತ್ತಾರೆ. ಒಳ್ಳೆಯದು.

ಯು.ಪಿ.ಯವರು ಏನು ಚಮತ್ಕಾರವನ್ನು ತೋರಿಸುತ್ತಾರೆ? ಯು.ಪಿ.ಯ ವಿಶೇಷತೆಯೇನಾಗಿದೆ? ತೀರ್ಥ ಸ್ಥಾನಗಳೂ ಬಹಳಷ್ಟಿವೆ, ನದಿಗಳೂ ಸಹ ಬಹಳಷ್ಟಿವೆ, ಜಗದ್ಗುರುಗಳೂ ಅಲ್ಲಿಯೇ ಇದ್ದಾರೆ. ನಾಲ್ಕೂ ಮೂಲೆಗಳಲ್ಲಿ ನಾಲ್ಕು ಜಗದ್ಗುರು ಇದ್ದಾರಲ್ಲವೆ. ಮಹಾಮಂಡಲೇಶ್ವರರು ಯು.ಪಿ.ಯಲ್ಲಿ ಹೆಚ್ಚಾಗಿ ಇದ್ದಾರೆ. ಹರಿಯ ದ್ವಾರ ಯು.ಪಿ.ಯಲ್ಲಿ ವಿಶೇಷವಾಗಿ ಇದೆ. ಅಂದಮೇಲೆ ಹರಿಯ ದ್ವಾರ ಅರ್ಥಾತ್ ಹರಿಯ ಬಳಿ ಹೋಗುವ ದ್ವಾರವನ್ನು ತಿಳಿಸುವಂತಹ ಸೇವಾಧಾರಿಗಳು ಹೆಚ್ಚಾಗಿರಬೇಕು. ಹೇಗೆ ತೀರ್ಥ ಸ್ಥಾನವಿರುವ ಕಾರಣದಿಂದ ಯು.ಪಿ.ಯಲ್ಲಿ ಪಂಡರು ಬಹಳ ಇದ್ದಾರೆ. ಅವರಂತು ತಿನ್ನುವವರು - ಕುಡಿಯುವವರಾಗಿದ್ದಾರೆ ಆದರೆ ಇವರು ಸತ್ಯ ಮಾರ್ಗವನ್ನು ತಿಳಿಸುವಂತಹ ಆತ್ಮಿಕ ಸೇವಾಧಾರಿ ಪಂಡರಾಗಿದ್ದಾರೆ. ಯಾರು ತಂದೆಯ ಜೊತೆ ಮಿಲನ ಮಾಡುವವರಾಗಿದ್ದಾರೆ, ತಂದೆಯ ಸಮೀಪಕ್ಕೆ ಕರೆತರುವವರಾಗಿದ್ದಾರೆ, ಇಂತಹ ಪಾಂಡವರು ಪಂಡರು ಯು.ಪಿ.ಯಲ್ಲಿ ವಿಶೇಷವಾಗಿ ಇದ್ದಾರೆಯೇ? ಯು.ಪಿ.ಯವರು ವಿಶೇಷವಾಗಿ ಈ ಪಾಂಡವರಿಂದ ಪಂಡನ ಪ್ರತ್ಯಕ್ಷ ರೂಪವನ್ನು ತೋರಿಸಬೇಕಾಗಿದೆ. ತಿಳಿಯಿತೆ! ಮೈಸೂರಿನ ವಿಶೇಷತೆಯೇನಾಗಿದೆ? ಅಲ್ಲಿ ಚಂದನವೂ ಇದೆ ಮತ್ತು ವಿಶೇಷವಾಗಿ ಉದ್ಯಾನವನವೂ ಇದೆ. ಅಂದಮೇಲೆ ಕರ್ನಾಟಕದವರು ವಿಶೇಷವಾಗಿ ಸದಾ ಆತ್ಮಿಕ ಗುಲಾಬಿ, ಸದಾ ಸುಗಂಧಭರಿತ ಚಂದನದವರಾಗಿದ್ದು, ವಿಶ್ವದಲ್ಲಿ ಚಂದನದ ಸುಗಂಧವೆಂದಾದರೂ ಹೇಳಿ ಅಥವಾ ಆತ್ಮಿಕ ಗುಲಾಬಿಯ ಸುಗಂಧವೆಂದಾದರೂ ಹೇಳಿ, ವಿಶ್ವವನ್ನು ಉದ್ಯಾನವನವನ್ನಾಗಿ ಮಾಡಬೇಕಾಗಿದೆ ಮತ್ತು ವಿಶ್ವದಲ್ಲಿ ಚಂದನದ ಸುಗಂಧವನ್ನು ಹರಡಿಸಬೇಕಾಗಿದೆ. ಚಂದನದ ತಿಲಕವನ್ನು ಕೊಟ್ಟು ಸುಗಂಧಭರಿತ ಮತ್ತು ಶೀತಲವನ್ನಾಗಿ ಮಾಡಬೇಕಾಗಿದೆ. ಚಂದನವು ಶೀತಲವೂ ಆಗಿರುತ್ತದೆ ಅಂದಮೇಲೆ ಅತೀ ಹೆಚ್ಚು ಆತ್ಮಿಕ ಗುಲಾಬಿಗಳು ಕರ್ನಾಟಕದಿಂದ ಹೊರ ಬರುವರಲ್ಲವೆ. ಈ ಪ್ರತ್ಯಕ್ಷ ಪ್ರಮಾಣವನ್ನು ತೆಗೆದುಕೊಂಡು ಬರಬೇಕಾಗಿದೆ. ಈಗ ಎಲ್ಲರೂ ತಮ್ಮ-ತಮ್ಮ ವಿಶೇಷತೆಯ ಪ್ರತ್ಯಕ್ಷ ರೂಪವನ್ನು ತೋರಿಸಬೇಕಾಗಿದೆ. ಅರಳಿರುವ ಸುಗಂಧಭರಿತ ಆತ್ಮಿಕ ಗುಲಾಬಿಯನ್ನು ತರಬೇಕಾಗುತ್ತದೆ. ತಂದಿದ್ದೀರಿ, ಸ್ವಲ್ಪ-ಸ್ವಲ್ಪ ತಂದಿದ್ದೀರಿ ಆದರೆ ಹೂಗುಚ್ಛವನ್ನು ತಂದಿಲ್ಲ. ಒಳ್ಳೆಯದು.

ವಿದೇಶದ ಮಹಿಮೆಯನ್ನಂತು ಬಹಳಷ್ಟು ತಿಳಿಸಿದ್ದೇವೆ. ವಿದೇಶದ ವಿಶೇಷತೆಯಾಗಿದೆ - ಭಿನ್ನವಾಗಿಯೂ ಬಹಳ ಹೆಚ್ಚು ಇರುತ್ತಾರೆ, ಪ್ರಿಯರೂ ಸಹ ಬಹಳ ಹೆಚ್ಚಾಗಿಯೇ ಇರುತ್ತಾರೆ. ಬಾಪ್ದಾದಾರವರು ವಿದೇಶಿ ಮಕ್ಕಳ ಭಿನ್ನ ಹಾಗೂ ಪ್ರಿಯರಾಗಿರುವುದನ್ನು ನೋಡುತ್ತಾ ಹರ್ಷಿತವಾಗುತ್ತಾರೆ. ಆ ಜೀವನವಂತು ಕಳೆದು ಹೋಯಿತು. ಎಷ್ಟು ಸಿಕ್ಕಿಕೊಂಡಿದ್ದಿರಿ, ಅಷ್ಟೇ ಈಗ ಭಿನ್ನರೂ ಆಗಿ ಬಿಟ್ಟಿರಿ. ಆದ್ದರಿಂದ ವಿದೇಶದ ಭಿನ್ನ ಹಾಗೂ ಪ್ರಿಯರಾಗಿರುವುದು ಬಾಪ್ದಾದಾರವರಿಗೂ ಪ್ರಿಯವೆನಿಸುತ್ತದೆ. ಆದ್ದರಿಂದ ವಿಶೇಷವಾಗಿ ಬಾಪ್ದಾದಾರವರೂ ನೆನಪು-ಪ್ರೀತಿಯನ್ನು ಕೊಡುತ್ತಿದ್ದಾರೆ. ತಮ್ಮ ವಿಶೇಷತೆಯಲ್ಲಿ ಸಮಾವೇಶವಾಗಿ ಬಿಟ್ಟಿರಾ! ಈ ರೀತಿ ಭಿನ್ನ ಹಾಗೂ ಪ್ರಿಯರಾಗಿದ್ದೀರಲ್ಲವೆ. ಮಮತ್ವವಂತು ಇಲ್ಲ ಅಲ್ಲವೆ. ಆದರೂ ನೋಡಿ - ವಿದೇಶಿ ಅತಿಥಿಯಾಗಿದ್ದರೂ ಮನೆಯಲ್ಲಿ ಬಂದಿದ್ದೀರೆಂದರೆ, ಅತಿಥಿಗಳನ್ನು ಸದಾ ಮುಂಚಿಡಲಾಗುತ್ತದೆ. ಆದ್ದರಿಂದ ಭಾರತವಾಸಿಗಳನ್ನು ವಿದೇಶಿಗಳು ನೋಡುತ್ತಾ ವಿಶೇಷವಾಗಿ ಖುಷಿಯಾಗುತ್ತದೆ. ಕೆಲವರು ಇಂತಹ ಅತಿಥಿಗಳೂ ಇರುತ್ತಾರೆ, ಅವರು ಯಜಮಾನನಾಗಿ ಕುಳಿತು ಬಿಡುತ್ತಾರೆ. ವಿದೇಶಿಗಳದು ಇದೇ ರೀತಿಯಾಗಿದ್ದಾರೆ. ಅತಿಥಿಗಳಾಗಿ ಬರುತ್ತಾರೆ ಮತ್ತು ಯಜಮಾನನಾಗಿ ಕುಳಿತು ಬಿಡುತ್ತಾರೆ. ಆದರೂ ಅನೇಕ ಅಡಚಣೆಗಳನ್ನು ದಾಟಿಕೊಂಡು ತಂದೆಯ ಬಳಿ ಅಂದರೆ ತಮ್ಮ ಬಳಿ ಬಂದಿದ್ದಾರೆ. ಅಂದಮೇಲೆ "ಮೊದಲು ತಾವು" ಎನ್ನುತ್ತೀರಲ್ಲವೆ. ಹಾಗೆ ನೋಡಿದರೆ ಭಾರತದ ವಿಶೇಷತೆ ತನ್ನದು, ವಿದೇಶದ ವಿಶೇಷತೆಯು ತನ್ನದಾಗಿದೆ. ಒಳ್ಳೆಯದು.

ಎಲ್ಲರೂ ಪದಮಾಸನಧಾರಿ ಪದಮಾಪದಮ ಭಾಗ್ಯಶಾಲಿ, ಸದಾ ಪ್ರತೀ ಸೆಕೆಂಡ್, ಪ್ರತೀ ಸಂಕಲ್ಪದಲ್ಲಿ ನಿರಂತರವಾಗಿ 84 ಗಂಟೆಗಳ ದೇವಿಯರು ಪ್ರಸಿದ್ಧವಿದ್ದಾರೆ. ಅಂದಮೇಲೆ ಈಗ 84ರಲ್ಲಿ ಗಂಟೆಯನ್ನು ಬಾರಿಸುತ್ತೀರಾ ಅಥವಾ ಈಗಿನ್ನೂ ನಿರೀಕ್ಷಣೆ ಮಾಡುವಿರಾ! ವಿದೇಶದಲ್ಲಂತು ಭಯದಿಂದ ಬದುಕುತ್ತಿದ್ದಾರೆ ಅಂದಾಗ ಗಂಟೆಯನ್ನು ಯಾವಾಗ ಬಾರಿಸುತ್ತೀರಿ. ವಿದೇಶದವರು ಬಾರಿಸುವುದೇ ಅಥವಾ ದೇಶದವರೇ! 84 ಅಂದರೆ ನಾಲ್ಕೂ ಕಡೆಯಲ್ಲಿರುವ ಗಂಟೆಗಳು ಮೊಳಗುವುದು. ಯಾವಾಗ ಸಮಾಪ್ತಿಯ ಆರತಿಯನ್ನು ಮಾಡುವರು, ಆಗ ಜೋರಾಗಿ ಗಂಟೆಗಳನ್ನು ಮೊಳಗಿಸುತ್ತಾರಲ್ಲವೆ ಆಗಲೇ ಸಮಾಪ್ತಿಯಾಗುತ್ತದೆ. ಆರತಿಯಾಗುವುದು ಅಂದರೆ ಸಮಾಪ್ತಿಯಾಗುವುದು. ಅಂದಮೇಲೆ ಈಗ ಏನು ಮಾಡುವಿರಿ? ಎಲ್ಲರೂ ಪದಮ-ಆಸನಧಾರಿ, ಪದಮಾಪದಮ ಭಾಗ್ಯಶಾಲಿ ಆಗಿದ್ದೀರಾ.

ಸದಾ ಪ್ರತೀ ಸೆಕೆಂಡ್, ಪ್ರತೀ ಸಂಕಲ್ಪದಲ್ಲಿ ನಿರಂತರ ಸೇವಾಧಾರಿ, ಸದಾ ವಿಶಾಲ ಹೃದಯಿಯಾಗಿದ್ದು ಸರ್ವ ಖಜಾನೆಗಳನ್ನು ಕೊಡುವವರು, ಮಾಸ್ಟರ್ ದಾತಾ, ಸದಾ ಸ್ವಯಂನ ಸಂಪನ್ನತೆಯ ಮೂಲಕ ಅನ್ಯರನ್ನೂ ಸಂಪನ್ನ ಮಾಡುವವರು, ಶ್ರೇಷ್ಠ ಭಾಗ್ಯದ ಅಧಿಕಾರಿ, ಸದಾ ಶ್ರೇಷ್ಠ ಪ್ರತ್ಯಕ್ಷ ಪ್ರಮಾಣವನ್ನು ಕೊಡುವಂತಹ ಸುಪುತ್ರ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಪಂಜಾಬ್ ನಿವಾಸಿಗಳ ಪ್ರತಿ :-

೧. ತಂದೆಯು ಕುಳಿತಿದ್ದಾರೆ, ಆದ್ದರಿಂದ ಯೋಚಿಸುವ ಅವಶ್ಯಕತೆಯಿಲ್ಲ, ಏನಾಗುತ್ತದೆಯೋ ಅದು ಕಲ್ಯಾಣಕಾರಿಯಾಗಿದೆ. ತಾವಂತು ಎಲ್ಲರಿಗಾಗಿ ಇದ್ದೀರಿ. ಹಿಂದೂಗಳೂ ಅಲ್ಲ, ಸಿಖ್ಖರೂ ಅಲ್ಲ. ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ಎಲ್ಲರವರಾಗಿದ್ದೀರಿ. ಪಾಕಿಕಿಸ್ತಾನದಲ್ಲಿಯೂ ಇದೇ ಹೇಳುತ್ತಿದ್ದರಲ್ಲವೆ - ತಾವಂತು ಅಲ್ಲಾಹ್ನ ಜನರು, ತಮಗೆ ಯಾವುದೇ ಮಾತಿನೊಂದಿಗೆ ಸಂಬಂಧವಿಲ್ಲ. ಆದ್ದರಿಂದ ತಾವು ಈಶ್ವರನವರಾಗಿದ್ದೀರಿ, ಮತ್ತ್ಯಾರವರೂ ಅಲ್ಲ. ಏನೇ ಆಗಲಿ ಆದರೆ ಭಯ ಪಡುವವರಲ್ಲ. ಬೆಂಕಿ ಎಷ್ಟಾದರೂ ಹತ್ತಿಕೊಳ್ಳಲಿ, ಬೆಕ್ಕಿನ ಮರಿಗಳಂತು ಸುರಕ್ಷಿತವಾಗಿರುತ್ತವೆ. ಆದರೆ ಯಾರು ಯೋಗಯುಕ್ತರಾಗಿರುತ್ತಾರೆಯೋ ಅವರೇ ಸುರಕ್ಷಿತವಾಗಿರುತ್ತಾರೆ. ನಾನು ಬಾಬಾರವರ ಮಗುವಾಗಿದ್ದೇನೆ ಎಂದು ಹೇಳುವುದು ಮತ್ತು ನೆನಪು ಅನ್ಯರದನ್ನು ಮಾಡುವುದು ಹೀಗಾಗಬಾರದು. ಇಂತಹವರಿಗೆ ಸಹಯೋಗವು ಸಿಗುವುದಿಲ್ಲ. ಭಯ ಪಡಬೇಡಿ, ಗಾಬರಿಯಾಗಬೇಡಿ, ಮುಂದುವರೆಯಿರಿ. ನೆನಪಿನ ಯಾತ್ರೆಯಲ್ಲಿ, ಧಾರಣೆಯಲ್ಲಿ, ಓದಿನಲ್ಲಿ ಎಲ್ಲಾ ವಿಷಯಗಳಿಂದ ಮುಂದುವರೆಯಿರಿ. ಎಷ್ಟು ಮುಂದುವರೆಯುತ್ತೀರಿ ಅಷ್ಟು ಸಹಜವಾಗಿಯೇ ಪ್ರಾಪ್ತಿಯನ್ನು ಮಾಡಿಕೊಳ್ಳುತ್ತಿರುತ್ತೀರಿ.

೨. ಎಲ್ಲರೂ ತಮ್ಮನ್ನು ಈ ಸೃಷ್ಟಿ ಡ್ರಾಮಾದಲ್ಲಿ ವಿಶೇಷವಾದ ಪಾತ್ರಧಾರಿಯೆಂದು ತಿಳಿಯುತ್ತೀರಾ? ಕಲ್ಪದ ಮೊದಲಿನವರು ತಮ್ಮ ಚಿತ್ರವನ್ನು ಈಗ ನೋಡುತ್ತಿದ್ದೀರಾ! ಇದೇ ಬ್ರಾಹ್ಮಣ ಜೀವನವ ಅದ್ಭುತವಾಗಿದೆ. ಸದಾ ಇದೆ ವಿಶೇಷತೆಯನ್ನು ನೆನಪು ಮಾಡಿರಿ - ಏನಾಗಿದ್ದೆವು ಮತ್ತು ಏನಾಗಿ ಬಿಟ್ಟೆವು! ಕವಡೆಯಿಂದ ವಜ್ರ ಸಮಾನರಾಗಿ ಬಿಟ್ಟೆವು. ದುಃಖಿ ಪ್ರಪಂಚದಿಂದ ಸುಖಿ ಪ್ರಪಂಚದಲ್ಲಿ ಬಂದು ಬಿಟ್ಟೆವು. ತಾವೆಲ್ಲರೂ ಈ ಡ್ರಾಮಾದ ಹೀರೊ-ಹೀರೊಯಿನ್ ಪಾತ್ರಧಾರಿಯಾಗಿದ್ದೀರಿ. ಒಬ್ಬೊಬ್ಬ ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿಯು ತಂದೆಯ ಸಂದೇಶವನ್ನು ತಿಳಿಸುವಂತಹ ಸಂದೇಶಿಯಾಗಿದ್ದೀರಿ. ಭಗವಂತನ ಸಂದೇಶವನ್ನು ತಿಳಿಸುವಂತಹ ಸಂದೇಶಿಗಳು ಎಷ್ಟು ಶ್ರೇಷ್ಠವಾಗಿ ಬಿಟ್ಟರು! ಅಂದಮೇಲೆ ಸದಾ ಇದೇ ಕಾರ್ಯರ್ಥವಾಗಿ ಅವತರಣೆಯಾಗಿದ್ದೀರಿ. ಈ ಸಂದೇಶವನ್ನು ಕೊಡುವುದಕ್ಕಾಗಿ ಮೇಲಿಂದ ಕೆಳಗೆ ಬಂದಿದ್ದೀರಿ - ಇದೇ ಸ್ಮೃತಿಯು ಖುಷಿಯನ್ನು ಕೊಡುವಂತದ್ದಾಗಿದೆ. ತಮ್ಮ ಇದೇ ಕರ್ತವ್ಯವನ್ನು ಸದಾ ನೆನಪಿಟ್ಟುಕೊಳ್ಳಿರಿ - ಖುಷಿಗಳ ಖಜಾನೆಯ ಮಾಲೀಕರಾಗಿದ್ದೇವೆ, ಅಷ್ಟೇ. ಇದೇ ತಮ್ಮ ಬಿರುದು ಸಹ ಆಗಿದೆ.

3. ಸದಾ ತಮ್ಮನ್ನು ಸಂಗಮಯುಗಿ ಶ್ರೇಷ್ಠ ಬ್ರಾಹ್ಮಣ ಆತ್ಮರೆಂದು ಅನುಭವ ಮಾಡುತ್ತೀರಾ? ಸತ್ಯ ಬ್ರಾಹ್ಮಣ ಅರ್ಥಾತ್ ಸದಾ ಸತ್ಯ ತಂದೆಯ ಪರಿಚಯವನ್ನು ಕೊಡುವವರು. ಬ್ರಾಹ್ಮಣರ ಕಾರ್ಯವಾಗಿದೆ - ಕಥೆಯನ್ನು ತಿಳಿಸುವುದು, ನೀವು ಕಥೆಯನ್ನು ತಿಳಿಸುವುದಿಲ್ಲ. ಆದರೆ ಸತ್ಯ ಪರಿಚಯವನ್ನು ತಿಳಿಸುತ್ತೀರಿ. ಹೀಗೆ ಸತ್ಯ ತಂದೆಯ ಸತ್ಯ ಪರಿಚಯವನ್ನು ಕೊಡುವವರು ಬ್ರಾಹ್ಮಣ ಆತ್ಮರಾಗಿದ್ದೇವೆ - ಇದೇ ನಶೆಯಿರಲಿ. ಬ್ರಾಹ್ಮಣರು ದೇವತೆಗಳಿಗಿಂತಲೂ ಶ್ರೇಷ್ಠರಾಗಿದ್ದಾರೆ. ಆದ್ದರಿಂದ ಬ್ರಾಹ್ಮಣರ ಸ್ಥಾನವು ಶಿಖೆಯಲ್ಲಿ ತೋರಿಸುತ್ತಾರೆ. ಶಿಖೆಯಿರುವ ಬ್ರಾಹ್ಮಣರು ಅರ್ಥಾತ್ ಶ್ರೇಷ್ಠ ಸ್ಥಿತಿಯಲ್ಲಿರುವವರು. ಶ್ರೇಷ್ಠರಾಗಿರುವುದರಿಂದ ಕೆಳಗಿರುವುದೆಲ್ಲವೂ ಚಿಕ್ಕದಾಗಿರುತ್ತದೆ. ಯಾವುದೇ ಮಾತೂ ಸಹ ದೊಡ್ಡದೆನಿಸುವುದಿಲ್ಲ. ಮೇಲೆ ಕುಳಿತುಕೊಂಡು ಕೆಳಗಿರುವ ವಸ್ತುವನ್ನು ನೋಡುತ್ತೀರೆಂದರೆ ಚಿಕ್ಕದೆನಿಸುತ್ತದೆ. ಎಂದೇ ಯಾವುದೇ ಸಮಸ್ಯೆಯು ದೊಡ್ಡದೆನಿಸುತ್ತದೆಯೆಂದರೆ, ಅದಕ್ಕೆ ಕಾರಣ - ಕೆಳಗೆ ಕುಳಿತು ನೋಡುತ್ತೀರಿ. ಮೇಲಿನಿಂದ ನೋಡುತ್ತೀರೆಂದರೆ ಪರಿಶ್ರಮ ಪಡಬೇಕಾಗಿರುವುದಿಲ್ಲ. ಅಂದಮೇಲೆ ಸದಾ ನೆನಪಿಟ್ಟುಕೊಳ್ಳಿರಿ - ಶಿಖೆಯ ಬ್ರಾಹ್ಮಣರಾಗಿದ್ದೇವೆ - ಇದರಲ್ಲಿ ದೊಡ್ಡ ಸಮಸ್ಯೆಯೂ ಸೆಕೆಂಡಿನಲ್ಲಿ ಚಿಕ್ಕದಾಗಿ ಬಿಡುತ್ತದೆ. ಸಮಸ್ಯೆಯಿಂದ ಗಾಬರಿಯಾಗುವವರಲ್ಲ ಆದರೆ ಪಾರು ಮಾಡುವವರು, ಸಮಸ್ಯೆಯ ಸಮಾಧಾನ ಮಾಡುವವರು. ಒಳ್ಳೆಯದು.

ಇಂದು ಮುಂಜಾನೆ(18/04/84) ಅಮೃತ ವೇಳೆಯಲ್ಲಿ ಒಬ್ಬ ಸಹೋದರನ ಹಾರ್ಟ್ಫೇಲ್ ಆಗಿರುವುದರಿಂದ, ತನ್ನ ಹಳೆಯ ಶರೀರವನ್ನು ಮಧುಬನದಲ್ಲಿ ಬಿಟ್ಟರು, ಆ ಸಮಯದಲ್ಲಿ ಅವ್ಯಕ್ತ-ಬಾಪ್ದಾದಾರವರು ಉಚ್ಛರಿಸಿರುವ ಮಹಾ ವಾಕ್ಯಗಳು -

ಎಲ್ಲರೂ ಡ್ರಾಮಾದ ಪ್ರತೀ ದೃಶ್ಯವನ್ನು ಸಾಕ್ಷಿಯಾಗಿ ನೋಡುವಂತಹ ಶ್ರೇಷ್ಠಾತ್ಮರಾಗಿದ್ದೀರಲ್ಲವೆ! ಡ್ರಾಮಾದಲ್ಲಿ ಯಾವುದೇ ದೃಶ್ಯವಿರುತ್ತದೆ, ಅದನ್ನು ಕಲ್ಯಾಣಕಾರಿ ಎಂದು ಹೇಳಲಾಗುತ್ತದೆ. ಹೊಸದೇನಲ್ಲ(ಅವರ ಲೌಕಿಕ ಅತ್ತಿಗೆಯವರೊಂದಿಗೆ) ಏನು ಯೋಚಿಸುತ್ತಿದ್ದೀರಿ? ಸಾಕ್ಷಿ ಸ್ಥಿತಿಯ ಸ್ಥಾನದಲ್ಲಿ ಕುಳಿತುಕೊಂಡು, ಎಲ್ಲಾ ದೃಶ್ಯಗಳನ್ನು ನೋಡುವುದರಿಂದ ತಮ್ಮದೂ ಕಲ್ಯಾಣವಿದೆ ಮತ್ತು ಆ ಆತ್ಮನದೂ ಕಲ್ಯಾಣವಿದೆ. ಇದನ್ನಂತು ತಿಳಿಯುತ್ತೀರಲ್ಲವೆ! ನೆನಪಿನಲ್ಲಿ ಶಕ್ತಿರೂಪವಾಗಿದ್ದೀರಲ್ಲವೆ. ಶಕ್ತಿಯು ಸದಾ ವಿಜಯಿಯಾಗಿರುತ್ತಾರೆ. ವಿಜಯಿ ಶಕ್ತಿರೂಪಧಾರಿಯಾಗಿ ಎಲ್ಲಾ ಪಾತ್ರವನ್ನು ಅಭಿನಯಿಸುವವರು. ಇದೂ ಸಹ ಪಾತ್ರವಾಗಿದೆ. ಪಾತ್ರವನ್ನಭಿನಯಿಸುತ್ತಾ ಎಂದಿಗೂ ಸಹ ಮತ್ತ್ಯಾವುದೇ ಸಂಕಲ್ಪವನ್ನು ಮಾಡಬಾರದು. ಪ್ರತೀ ಆತ್ಮನದು ತಮ್ಮ-ತಮ್ಮ ಪಾತ್ರವಿದೆ. ಈಗ ಆ ಆತ್ಮನಿಗೆ ಶಾಂತಿ ಮತ್ತು ಶಕ್ತಿಯ ಸಹಯೋಗವನ್ನು ಕೊಡಿ. ಇಷ್ಟೆಲ್ಲಾ ದೈವೀ ಪರಿವಾರದ ಸಹಯೋಗದ ಪ್ರಾಪ್ತಿಯಾಗುತ್ತಿದೆ ಆದ್ದರಿಂದ ಯೋಚಿಸುವ ಮಾತೇನೂ ಇಲ್ಲ. ಮಹಾನ್ ತೀರ್ಥ ಸ್ಥಾನವಾಗಿದೆಯಲ್ಲವೆ! ಮಹಾನ್ ಆತ್ಮನಾಗಿದ್ದಾರೆ, ಮಹಾನ್ ತೀರ್ಥ ಸ್ಥಾನವಾಗಿದೆ. ಸದಾ ಮಹಾನತೆಯನ್ನೇ ಯೋಚಿಸಿರಿ. ಎಲ್ಲರೂ ನೆನಪಿನಲ್ಲಿ ಕುಳಿತಿದ್ದೀರಲ್ಲವೆ! ಒಂದು ಮುದ್ದಾದ ಮಗು, ತನ್ನ ಈ ಹಳೆಯ ಶರೀರದ ಲೆಕ್ಕವನ್ನು ಪೂರ್ಣಗೊಳಿಸಿ ಹೊಸ ಶರೀರದ ತಯಾರಿಯಲ್ಲಿ ಹೊರಟಿತು. ಆದ್ದರಿಂದ ಈಗ ಎಲ್ಲರೂ ಆ ಭಾಗ್ಯಶಾಲಿ ಆತ್ಮನಿಗೆ ಶಾಂತಿ, ಶಕ್ತಿಯ ಸಹಯೋಗವನ್ನು ಕೊಡಿರಿ. ಇದೇ ವಿಶೇಷವಾದ ಸೇವೆಯಾಗಿದೆ. ಏಕೆ, ಏನು ಎನ್ನುವುದರಲ್ಲಿ ಹೋಗಬಾರದು. ಆದರೆ ಸ್ವಯಂ ಸಹ ಶಕ್ತಿ ಸ್ವರೂಪರಾಗಿ, ವಿಶ್ವದಲ್ಲಿ ಶಾಂತಿಯ ಕಿರಣಗಳನ್ನು ಹರಡಿಸಿರಿ. ಶ್ರೇಷ್ಠಾತ್ಮನಾಗಿದ್ದಾರೆ, ಸಂಪಾದನೆ ಮಾಡುವ ಆತ್ಮನಾಗಿದ್ದಾರೆ. ಆದ್ದರಿಂದ ಯೋಚಿಸುವ ಯಾವುದೇ ಮಾತಿಲ್ಲ. ತಿಳಿಯಿತೆ!

ವರದಾನ:
ಫರಿಶ್ಥಾ ಸ್ವರೂಪದ ಸ್ಮೃತಿಯ ಮೂಲಕ ತಂದೆಯ ಛತ್ರಛಾಯೆಯ ಅನುಭವ ಮಾಡುವಂತಹ ವಿಘ್ನಜೀತ ಭವ.

ಅಮೃತ ವೇಳೆ ಏಳುತ್ತಿದ್ದಂತೆಯೇ ಸ್ಮೃತಿಯಲ್ಲಿ ತಂದುಕೊಳ್ಳಿರಿ - ನಾನು ಫರಿಶ್ಥೆಯಾಗಿದ್ದೇನೆ. ಬ್ರಹ್ಮಾ ತಂದೆಗೆ ಇದೇ ಮನ ಪ್ರಿಯ ಉಡುಗೊರೆಯನ್ನು ಕೊಡುತ್ತೀರೆಂದರೆ, ಪ್ರತಿನಿತ್ಯವೂ ಅಮೃತ ವೇಳೆಯಲ್ಲಿ ಬಾಪ್ದಾದಾರವರು ತಮ್ಮನ್ನು ತನ್ನ ಬಾಹುಗಳಲ್ಲಿ ಸಮಾವೇಶ ಮಾಡಿಕೊಳ್ಳುತ್ತಾರೆ, ಅನುಭವ ಮಾಡುತ್ತೀರಿ - ಬಾಬಾರವರ ಬಾಹುಗಳಲ್ಲಿ, ಅತೀಂದ್ರಿಯ ಸುಖದಲ್ಲಿ ತೂಗುತ್ತಿದ್ದಾರೆ. ಯಾರು ಫರಿಶ್ಥಾ ಸ್ವರೂಪದ ಸ್ಮೃತಿಯಲ್ಲಿ ಇರುತ್ತೀರಿ, ಅವರ ಮುಂದೆ ಯಾವುದೇ ಪರಿಸ್ಥಿತಿ ಅಥವಾ ವಿಘ್ನವು ಬಂದರೂ ಸಹ ಅವರಿಗಾಗಿ ತಂದೆಯು ಛತ್ರಛಾಯೆಯಾಗಿ ಬಿಡುತ್ತಾರೆ. ಅಂದಮೇಲೆ ತಂದೆಯ ಛತ್ರಛಾಯೆ ಅಥವಾ ಪ್ರೀತಿಯ ಅನುಭವವನ್ನು ಮಾಡುತ್ತಾ ವಿಘ್ನಜೀತರಾಗಿರಿ.

ಸ್ಲೋಗನ್:
ಸುಖ ಸ್ವರೂಪ ಆತ್ಮನು ಸ್ವಸ್ಥಿತಿಯಿಂದ ಪರಿಸ್ಥಿತಿಯ ಮೇಲೆ ಸಹಜವಾಗಿ ವಿಜಯವನ್ನು ಪ್ರಾಪ್ತಿ ಮಾಡಿಕೊಂಡು ಬಿಡುತ್ತಾರೆ.