03/02/21 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ


"ಮಧುರ ಮಕ್ಕಳೇ - ಎಲ್ಲರಿಗೆ ಇದೇ ಸಂದೇಶವನ್ನು ಕೊಡಿ, ತಂದೆಯ ಆಜ್ಞೆಯಾಗಿದೆ - ಈ ಪುರುಷೋತ್ತಮ ಸಂಗಮಯುಗದಲ್ಲಿ ಪವಿತ್ರರಾಗಿ ಆಗ ಸತ್ಯಯುಗದ ಆಸ್ತಿಯು ಸಿಗುವುದು.”

ಪ್ರಶ್ನೆ:

ಎಲ್ಲರಿಗೆ ಯಾವ ಸಸ್ತಾ ವ್ಯಾಪಾರವನ್ನು ತಿಳಿಸುತ್ತೀರಿ?

ಉತ್ತರ:

ಈ ಅಂತಿಮ ಜನ್ಮದಲ್ಲಿ ತಂದೆಯ ಆದೇಶದಂತೆ ನಡೆದು ಪವಿತ್ರರಾಗಿ, ಇದರಿಂದ 21 ಜನ್ಮಗಳಿಗಾಗಿ ರಾಜ್ಯಭಾಗ್ಯವು ಸಿಗುವುದು, ಇದು ಬಹಳ ಸಸ್ತಾ ವ್ಯಾಪಾರವಾಗಿದೆ. ಈ ವ್ಯಾಪಾರ ಮಾಡುವುದನ್ನೇ ನೀವು ಎಲ್ಲರಿಗೆ ಕಲಿಸಿ. ತಿಳಿಸಿರಿ - ಈಗ ಶಿವ ತಂದೆಯನ್ನು ನೆನಪು ಮಾಡಿ ಪವಿತ್ರರಾಗಿ ಆಗ ಪವಿತ್ರ ಪ್ರಪಂಚದ ಮಾಲೀಕರಾಗುವಿರಿ.

ಓಂ ಶಾಂತಿ. ಆತ್ಮಿಕ ಮಕ್ಕಳಿಗೆ ತಿಳಿದಿದೆ, ಆತ್ಮಿಕ ತಂದೆಯು ತಿಳಿಸಿ ಕೊಡುತ್ತಾರೆ - ಪ್ರದರ್ಶನಿ ಅಥವಾ ಮೇಳಗಳಲ್ಲಿ ಶೋ ತೋರಿಸುತ್ತೀರಿ, ಅಥವಾ ಚಿತ್ರಗಳ ಬಗ್ಗೆ ಮನುಷ್ಯರಿಗೆ ತಿಳಿಸುತ್ತೀರಿ - ತಂದೆಯಿಂದ ಈಗ ಬೇಹದ್ದಿನ ಆಸ್ತಿ ತೆಗೆದುಕೊಳ್ಳಬೇಕಾಗಿದೆ. ಯಾವ ಆಸ್ತಿ? ಮನುಷ್ಯರಿಂದ ದೇವತೆಗಳಾಗುವ ಅಥವಾ ಬೇಹದ್ದಿನ ತಂದೆಯಿಂದ ಅರ್ಧ ಕಲ್ಪಕ್ಕಾಗಿ ಸ್ವರ್ಗದ ರಾಜ್ಯವನ್ನು ಹೇಗೆ ತೆಗೆದುಕೊಳ್ಳುವುದು, ಇದನ್ನು ತಿಳಿಸಬೇಕಾಗಿದೆ. ತಂದೆಯು ಸೌಧಾಗರನಂತೂ ಆಗಿಯೇ ಇದ್ದಾರೆ, ಅವರೊಂದಿಗೆ ಈ ವ್ಯಾಪಾರ ಮಾಡಬೇಕಾಗಿದೆ. ಇದಂತೂ ಮನುಷ್ಯರಿಗೇ ತಿಳಿದಿದೆ, ದೇವಿ-ದೇವತೆಗಳು ಪವಿತ್ರರಾಗಿರುತ್ತಾರೆ, ಭಾರತದಲ್ಲಿ ಸತ್ಯಯುಗವಿದ್ದಾಗ ದೇವಿ-ದೇವತೆಗಳು ಪವಿತ್ರರಾಗಿದ್ದರು, ಅವಶ್ಯವಾಗಿ ಅವರು ಸ್ವರ್ಗಕ್ಕಾಗಿ ಯಾವುದೋ ಪ್ರಾಪ್ತಿ ಮಾಡಿಕೊಂಡಿರಬೇಕು. ಸ್ವರ್ಗದ ಸ್ಥಾಪನೆ ಮಾಡುವ ತಂದೆಯ ವಿನಃ ಬೇರೆ ಯಾರೂ ಇದನ್ನು ಪ್ರಾಪ್ತಿ ಮಾಡಿಸಲು ಸಾಧ್ಯವಿಲ್ಲ. ಪತಿತ-ಪಾವನ ತಂದೆಯೇ ಪಾವನರನ್ನಾಗಿ ಮಾಡಿ ಪಾವನ ಪ್ರಪಂಚದ ರಾಜ್ಯವನ್ನು ಕೊಡುವವರಾಗಿದ್ದಾರೆ. ಎಷ್ಟೊಂದು ಸಸ್ತಾ ವ್ಯಾಪಾರವನ್ನು ಕೊಡುತ್ತಾರೆ. ಕೇವಲ ತಿಳಿಸುತ್ತಾರೆ - ಮಕ್ಕಳೇ, ಇದು ನಿಮ್ಮ ಅಂತಿಮ ಜನ್ಮವಾಗಿದೆ. ನಾನು ಇಲ್ಲಿರುವವರೆಗೆ ಪವಿತ್ರರಾಗಿ. ನಾನು ಪವಿತ್ರರನ್ನಾಗಿ ಮಾಡಲು ಬಂದಿದ್ದೇನೆ, ನೀವು ಈ ಅಂತಿಮ ಜನ್ಮದಲ್ಲಿ ಪಾವನರಾಗುವ ಪುರುಷಾರ್ಥ ಮಾಡಿದ್ದೇ ಆದರೆ ಪಾವನ ಪ್ರಪಂಚದ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ. ಈ ವ್ಯಾಪಾರವು ಬಹಳ ಸಸ್ತಾ ಆಗಿದೆ ಆದ್ದರಿಂದ ತಂದೆಗೆ ವಿಚಾರ ಬಂದಿತು, ಮಕ್ಕಳು ಈ ರೀತಿ ತಿಳಿಸಬೇಕು, ತಂದೆಯ ಆಜ್ಞೆಯಾಗಿದೆ - ಪವಿತ್ರರಾಗಿ. ಇದು ಪುರುಷೋತ್ತಮ ಸಂಗಮಯುಗವಾಗಿದೆ, ಈಗ ಪವಿತ್ರರಾಗಬೇಕಾಗಿದೆ. ಉತ್ತಮರಿಗಿಂತ ಉತ್ತಮ ಪುರುಷರು ದೇವತೆಗಳಾಗಿದ್ದಾರೆ. ಲಕ್ಷ್ಮೀ-ನಾರಾಯಣರ ರಾಜ್ಯವು ನಡೆಯಿತಲ್ಲವೆ. ಸ್ವರ್ಗದ ರಾಜ್ಯ ಭಾಗ್ಯವು ನಿಮಗೆ ತಂದೆಯಿಂದ ಆಸ್ತಿಯ ರೂಪದಲ್ಲಿ ಸಿಗುತ್ತದೆ ಒಂದುವೇಳೆ ತಂದೆಯ ಮತದಂತೆ ಈ ಅಂತಿಮ ಜನ್ಮದಲ್ಲಿ ಪವಿತ್ರರಾದಾಗ ಮಾತ್ರ. ಈ ಯುಕ್ತಿಯನ್ನೂ ತಿಳಿಸುತ್ತಾರೆ – ಯೋಗ ಬಲದಿಂದ ತಮ್ಮನ್ನು ಹೇಗೆ ತಮೋಪ್ರಧಾನರಿಂದ ಸತೋಪ್ರಧಾನರನ್ನಾಗಿ ಮಾಡಿಕೊಳ್ಳುವುದು. ಮಕ್ಕಳು ಕಲ್ಯಾಣಕ್ಕಾಗಿ ಖರ್ಚಂತೂ ಮಾಡಲೇಬೇಕಾಗಿದೆ. ಖರ್ಚು ಮಾಡದೆ ರಾಜಧಾನಿಯು ಸ್ಥಾಪನೆಯಾಗಲು ಸಾಧ್ಯವಿಲ್ಲ. ಈಗ ಲಕ್ಷ್ಮೀ-ನಾರಾಯಣರ ರಾಜಧಾನಿಯು ಸ್ಥಾಪನೆಯಾಗುತ್ತಿದೆ ಅಂದಮೇಲೆ ಮಕ್ಕಳು ಖಂಡಿತ ಪವಿತ್ರರಾಗಬೇಕಾಗಿದೆ. ಮನಸಾ-ವಾಚಾ-ಕರ್ಮಣಾ ಯಾವುದೇ ಉಲ್ಟಾ ಸುಲ್ಟಾ ಕೆಲಸ ಮಾಡಬಾರದು. ದೇವತೆಗಳಿಗೆ ಎಂದೂ ಯಾವುದೇ ಕೆಟ್ಟ ವಿಚಾರವೂ ಬರುವುದಿಲ್ಲ. ಬಾಯಿಂದ ಇಂತಹ ಯಾವುದೇ ವಚನವೂ ಬರುವುದಿಲ್ಲ. ಅವರು ಸರ್ವಗುಣ ಸಂಪನ್ನರು, ಸಂಪೂರ್ಣ ನಿರ್ವಿಕಾರಿಗಳು, ಮರ್ಯಾದಾ ಪುರುಷೋತ್ತಮರು.... ಯಾರು ಇದ್ದು ಹೋಗುವರೋ ಅವರ ಮಹಿಮೆಯನ್ನು ಗಾಯನ ಮಾಡಲಾಗುತ್ತದೆ. ಈಗ ನೀವು ಮಕ್ಕಳನ್ನು ಅದೇ ದೇವಿ-ದೇವತೆಗಳನ್ನಾಗಿ ಮಾಡಲು ಬಂದಿದ್ದೇನೆ ಅಂದಮೇಲೆ ಇಂತಹ ಯಾವುದೇ ಕೆಟ್ಟ ಕೆಲಸವನ್ನು ಮಾಡಬಾರದು. ದೇವತೆಗಳು ಸಂಪೂರ್ಣ ನಿರ್ವಿಕಾರಿಗಳಾಗಿದ್ದರು, ಆ ಗುಣವನ್ನೂ ಸಹ ನೀವು ಈಗ ಧಾರಣೆ ಮಾಡಿಕೊಳ್ಳುತ್ತೀರಿ, ಏಕೆಂದರೆ ಈ ಮೃತ್ಯುಲೋಕದಲ್ಲಿ ನಿಮ್ಮದು ಇದು ಅಂತಿಮ ಜನ್ಮವಾಗಿದೆ. ಪತಿತ ಪ್ರಪಂಚಕ್ಕೆ ಮೃತ್ಯು ಲೋಕ, ಪಾವನ ಪ್ರಪಂಚಕ್ಕೆ ಅಮರ ಲೋಕವೆಂದು ಹೇಳಲಾಗುತ್ತದೆ. ಈಗ ಮೃತ್ಯು ಲೋಕದ ವಿನಾಶವು ಸಮ್ಮುಖದಲ್ಲಿ ನಿಂತಿದೆ ಅಂದಮೇಲೆ ಅವಶ್ಯವಾಗಿ ಅಮರ ಪುರಿಯ ಸ್ಥಾಪನೆಯಾಗುವುದು. ಇದು ಅದೇ ಮಹಾಭಾರಿ ಮಹಾಭಾರತ ಯುದ್ಧವಾಗಿದೆ, ಯಾವುದನ್ನು ಶಾಸ್ತ್ರಗಳಲ್ಲಿ ತೋರಿಸಿದ್ದಾರೆ, ಇದರಿಂದ ಹಳೆಯ ವಿಕಾರಿ ಪ್ರಪಂಚವು ಸಮಾಪ್ತಿಯಾಗುತ್ತದೆ ಆದರೆ ಈ ಜ್ಞಾನವು ಯಾರಲ್ಲಿಯೂ ಇಲ್ಲ. ತಂದೆಯು ತಿಳಿಸುತ್ತಾರೆ - ಎಲ್ಲರೂ ಅಜ್ಞಾನ ನಿದ್ರೆಯಲ್ಲಿ ಮಲಗಿ ಬಿಟ್ಟಿದ್ದಾರೆ. 5 ವಿಕಾರಗಳ ನಶೆಯಿರುತ್ತದೆ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಪವಿತ್ರರಾಗಿ ಮಾ|| ಭಗವಂತರಾಗುತ್ತೀರಲ್ಲವೆ. ಲಕ್ಷ್ಮೀ-ನಾರಾಯಣರಿಗೆ ಭಗವಾನ್-ಭಗವತಿ ಎಂದು ಹೇಳುತ್ತಾರೆ ಅರ್ಥಾತ್ ಭಗವಂತನ ಮೂಲಕ ಈ ಆಸ್ತಿಯನ್ನು ಪಡೆದಿದ್ದಾರೆ. ಈಗಂತೂ ಭಾರತವು ಪತಿತವಾಗಿದೆ, ಮನಸ್ಸಾ-ವಾಚಾ-ಕರ್ಮಣಾ ಕರ್ತವ್ಯವೇ ಈ ರೀತಿ ನಡೆಯುತ್ತದೆ. ಯಾವುದೇ ಮಾತು ಮೊದಲು ಬುದ್ಧಿಯಲ್ಲಿ ಬರುತ್ತದೆ ನಂತರ ಅದು ಬಾಯಿಂದ ಹೊರಡುತ್ತದೆ. ಅದು ಕರ್ಮದಲ್ಲಿ ಬಂದಾಗ ವಿಕರ್ಮವಾಗಿ ಬಿಡುತ್ತದೆ. ತಂದೆಯು ತಿಳಿಸುತ್ತಾರೆ - ಸತ್ಯಯುಗದಲ್ಲಿ ಯಾವುದೇ ವಿಕರ್ಮವಾಗುವುದಿಲ್ಲ, ಇಲ್ಲಿ ವಿಕರ್ಮವಾಗುತ್ತದೆ ಏಕೆಂದರೆ ರಾವಣ ರಾಜ್ಯವಾಗಿದೆ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಇನ್ನು ಸ್ವಲ್ಪವೇ ಆಯಸ್ಸು ಉಳಿದಿದೆ, ಈಗಾದರೂ ಪವಿತ್ರರಾಗಿ. ಪ್ರತಿಜ್ಞೆ ಮಾಡಬೇಕು - ಪವಿತ್ರರಾಗಿ ಮತ್ತು ನನ್ನೊಂದಿಗೆ ಬುದ್ಧಿ ಯೋಗವನ್ನಿಡಲೂ ಬೇಕಾಗಿದೆ, ಇದರಿಂದ ನಿಮ್ಮ ಜನ್ಮ-ಜನ್ಮಾಂತರದ ಪಾಪಗಳು ಕಳೆಯುವವು. ಆಗಲೇ ನೀವು 21 ಜನ್ಮಗಳಿಗಾಗಿ ಸ್ವರ್ಗದ ಮಾಲೀಕರಾಗುತ್ತೀರಿ. ತಂದೆಯು ಅವಕಾಶ ನೀಡುತ್ತಾರೆ. ಇವರಂತೂ ತಿಳಿಸುತ್ತಲೇ ಇರುತ್ತಾರೆ - ಇವರ ಮೂಲಕ ತಂದೆಯು ಈ ಆಸ್ತಿಯನ್ನು ಕೊಡುತ್ತಾರೆ. ಅವರು ಶಿವ ತಂದೆ, ಇವರು ದಾದಾ ಆಗಿದ್ದಾರೆ. ಆದ್ದರಿಂದ ಯಾವಾಗಲೂ ಬಾಪ್ದಾದಾ ಎಂದೇ ಹೇಳುತ್ತಾರೆ. ಶಿವನು ತಂದೆ, ಬ್ರಹ್ಮನು ದಾದಾ ಆಗಿದ್ದಾರೆ. ತಂದೆಯು ಎಷ್ಟೊಂದು ವ್ಯಾಪಾರ ಮಾಡಿಸುತ್ತಾರೆ. ಮೃತ್ಯುಲೋಕದ ವಿನಾಶವು ಸಮ್ಮುಖದಲ್ಲಿ ನಿಂತಿದೆ. ಅಮರ ಲೋಕದ ಸ್ಥಾಪನೆಯಾಗುತ್ತಿದೆ. ಭಾರತವಾಸಿಗಳ ಕಲ್ಯಾಣವಾಗಲಿ ಎಂದೇ ಪ್ರದರ್ಶನಿ ಮೇಳಗಳನ್ನು ಮಾಡಲಾಗುತ್ತದೆ. ತಂದೆಯೇ ಬಂದು ಭಾರತದಲ್ಲಿ ರಾಮ ರಾಜ್ಯವನ್ನು ಸ್ಥಾಪನೆ ಮಾಡುತ್ತಾರೆ. ರಾಮ ರಾಜ್ಯದಲ್ಲಿ ಅವಶ್ಯವಾಗಿ ಪವಿತ್ರರೇ ಇರುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಕಾಮ ಮಹಾ ಶತ್ರುವಾಗಿದೆ. ಈ 5 ವಿಕಾರಗಳಿಗೇ ಮಾಯೆಯೆಂದು ಹೇಳಲಾಗುತ್ತದೆ. ಇದರ ಮೇಲೆ ಜಯಿಸಿದರೆ ನೀವು ಜಗತ್ಜೀತರಾಗುವಿರಿ. ದೇವಿ-ದೇವತೆಗಳು ಜಗತ್ಜೀತರಾಗಿದ್ದಾರೆ, ಮತ್ತ್ಯಾರೂ ಜಗತ್ಜೀತರಾಗಲು ಸಾಧ್ಯವಿಲ್ಲ. ತಂದೆಯು ತಿಳಿಸಿದ್ದರು, ಕ್ರಿಶ್ಚಿಯನ್ನರು ಒಂದುವೇಳೆ ಪರಸ್ಪರ ಒಂದಾದರೆ ಇಡೀ ಸೃಷ್ಟಿಯ ಆಡಳಿತ ನಡೆಸಬಲ್ಲರು ಆದರೆ ಅದು ನಿಯಮವಿಲ್ಲ. ಈ ಬಾಂಬುಗಳಿರುವುದೇ ಹಳೆಯ ಪ್ರಪಂಚವನ್ನು ಸಮಾಪ್ತಿ ಮಾಡುವುದಕ್ಕಾಗಿ. ಕಲ್ಪ-ಕಲ್ಪವೂ ಇದೇ ರೀತಿ ಹೊಸದರಿಂದ ಹಳೆಯದು, ಹಳೆಯದರಿಂದ ಹೊಸದಾಗುತ್ತದೆ. ಹೊಸ ಪ್ರಪಂಚದಲ್ಲಿ ಈಶ್ವರೀಯ ರಾಜ್ಯವಿರುತ್ತದೆ, ಅದಕ್ಕೆ ರಾಮ ರಾಜ್ಯವೆಂದು ಹೇಳಲಾಗುತ್ತದೆ. ಈಶ್ವರನನ್ನು ಅರಿತುಕೊಳ್ಳದೇ ಇರುವ ಕಾರಣ ಕೇವಲ ರಾಮ-ರಾಮ ಎಂದು ಜಪಿಸುತ್ತಿರುತ್ತಾರೆ. ನೀವು ಮಕ್ಕಳು ಈ ಮಾತುಗಳನ್ನು ತಮ್ಮಲ್ಲಿ ಧಾರಣೆ ಮಾಡಿಕೊಳ್ಳಬೇಕು. ಅವಶ್ಯವಾಗಿ ನಾವು 84 ಜನ್ಮಗಳಲ್ಲಿ ಸತೋಪ್ರಧಾನರಿಂದ ತಮೋಪ್ರಧಾನರಾಗಿದ್ದೇವೆ. ಈಗ ಮತ್ತೆ ಅವಶ್ಯವಾಗಿ ಸತೋಪ್ರಧಾನರಾಗಬೇಕಾಗಿದೆ. ಶಿವ ತಂದೆಯ ಆದೇಶವಾಗಿದೆ, ಈಗ ಅದರನುಸಾರ ನಡೆದಿದ್ದೇ ಆದರೆ 21 ಜನ್ಮಗಳಿಗಾಗಿ ಪವಿತ್ರ ಪ್ರಪಂಚದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಈಗ ನೀವು ಬೇಕೆಂದರೆ ಪುರುಷಾರ್ಥ ಮಾಡಬಹುದು, ಮಾಡದೇ ಇರಬಹುದು. ನೆನಪಿನಲ್ಲಿದ್ದು ಅನ್ಯರಿಗೆ ಮಾರ್ಗವನ್ನು ತಿಳಿಸಬಹುದು ಅಥವಾ ತಿಳಿಸದೇ ಇರಬಹುದು. ಎಲ್ಲವೂ ನಿಮ್ಮ ಮೇಲೆ ಆಧಾರಿತವಾಗಿದೆ. ಪ್ರದರ್ಶನಿಗಳ ಮೂಲಕ ಮಕ್ಕಳು ಅನೇಕರಿಗೆ ಮಾರ್ಗವನ್ನು ತಿಳಿಸುತ್ತಿದ್ದಾರೆ, ತಮ್ಮ ಕಲ್ಯಾಣವನ್ನೂ ಮಾಡಿಕೊಳ್ಳಬೇಕಾಗಿದೆ. ಈ ವ್ಯಾಪಾರವು ಬಹಳ ಸಸ್ತಾ ಆಗಿದೆ. ಕೇವಲ ಈ ಅಂತಿಮ ಜನ್ಮದಲ್ಲಿ ಪವಿತ್ರರಾಗಿರುವುದರಿಂದ, ಶಿವ ತಂದೆಯ ನೆನಪಿನಲ್ಲಿರುವುದರಿಂದ ನೀವು ತಮೋಪ್ರಧಾನರಿದ್ದವರು ಸತೋಪ್ರಧಾನರಾಗುತ್ತೀರಿ. ಎಷ್ಟು ಸಸ್ತಾ ವ್ಯಾಪಾರವಾಗಿದೆ! ಇದರಿಂದ ಜೀವನವೇ ಬದಲಾಗುತ್ತದೆ. ಹೀಗ್ಹೀಗೆ ವಿಚಾರ ಮಾಡಬೇಕು. ತಂದೆಯ ಬಳಿ ಸಮಾಚಾರಗಳು ಬರುತ್ತವೆ. ಶ್ರೀ ರಕ್ಷೆಯನ್ನು ಕಟ್ಟಲು ಹೋದಾಗ ಕೆಲಕೆಲವರು ಹೇಳಿದರು - ಈ ಸಮಯವು ತಮೋ ಪ್ರಧಾನ ಪ್ರಪಂಚವಾಗಿದೆ ಅಂದಮೇಲೆ ಇಲ್ಲಿ ಪವಿತ್ರರಾಗಿರುವುದು ಅಸಂಭವವಾಗಿದೆ ಎಂದು. ಪಾಪ! ಅವರಿಗೆ ಈಗ ಸಂಗಮಯುಗವಾಗಿದೆ ಎಂಬುದು ಗೊತ್ತಿಲ್ಲ. ತಂದೆಯೇ ಪವಿತ್ರರನ್ನಾಗಿ ಮಾಡುತ್ತಾರೆ. ಇವರಿಗೆ ಪರಮಪಿತ ಪರಮಾತ್ಮನೇ ಸಹಯೋಗಿಯಾಗಿದ್ದಾರೆ ಎಂಬುದು ಅವರಿಗೆ ಗೊತ್ತೇ ಇಲ್ಲ. ಪವಿತ್ರರಾದರೆ ಪವಿತ್ರ ಪ್ರಪಂಚದ ಮಾಲೀಕರಾಗಬಹುದು. ಇಲ್ಲಿನ ಪದವಿಯು ಬಹಳ ಭಾರಿಯಾಗಿದೆ ಎಂಬುದನ್ನು ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ಈ ಮಾಯಾ ರೂಪಿ 5 ವಿಕಾರಗಳ ಮೇಲೆ ಜಯ ಗಳಿಸಿದರೆ ನೀವು ಜಗತ್ಜೀತರಾಗುವಿರಿ ಅಂದಮೇಲೆ ಏಕೆ ಪವಿತ್ರರಾಗುವುದಿಲ್ಲ. ಇದು ಫಸ್ಟ್ಕ್ಲಾಸ್ ವ್ಯಾಪಾರವಾಗಿದೆ, ತಂದೆಯು ತಿಳಿಸುತ್ತಾರೆ - ಮಕ್ಕಳೇ, ಕಾಮ ಮಹಾ ಶತ್ರುವಾಗಿದೆ, ಇದನ್ನು ಜಯಿಸುವುದರಿಂದ ನೀವು ಪವಿತ್ರರಾಗುವಿರಿ. ಮಾಯಾಜೀತರೇ ಜಗತ್ಜೀತರು. ಇದು ಯೋಗಬಲದಿಂದ ಮಾಯೆಯನ್ನು ಗೆಲ್ಲುವ ಮಾತಾಗಿದೆ. ಪರಮಪಿತ ಪರಮಾತ್ಮನು ಬಂದು ಆತ್ಮಗಳಿಗೆ ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿದರೆ ನಿಮ್ಮಲ್ಲಿರುವ ತುಕ್ಕು ಬಿಟ್ಟು ಹೋಗುವುದು. ನೀವು ಸತೋಪ್ರಧಾನ ಪ್ರಪಂಚದ ಮಾಲೀಕರಾಗುತ್ತೀರಿ. ತಂದೆಯು ಸಂಗಮದಲ್ಲಿಯೇ ಆಸ್ತಿಯನ್ನು ಕೊಡುತ್ತಾರೆ. ಎಲ್ಲರಿಗಿಂತ ಉತ್ತಮ ಪುರುಷರು ಈ ಲಕ್ಷ್ಮೀ-ನಾರಾಯಣರಾಗಿದ್ದರು. ಇವರಿಗೆ ಮರ್ಯಾದಾ ಪುರುಷೋತ್ತಮ, ದೇವಿ-ದೇವತಾ ಧರ್ಮದವರೆಂದು ಹೇಳಲಾಗುತ್ತದೆ. ಮಕ್ಕಳಿಗೆ ಬಹಳ ಚೆನ್ನಾಗಿ ತಿಳಿಸಲಾಗುತ್ತದೆ. ಆದರೆ ಕೆಲಕೆಲವೊಮ್ಮೆ ಈ ಅಂಶಗಳು ಮರೆತು ಹೋಗುತ್ತವೆ ನಂತರ ಭಾಷಣದಲ್ಲಿ ಈ ಮಾತುಗಳನ್ನು ತಿಳಿಸಲಿಲ್ಲವೆಂದು ವಿಚಾರ ಬರುತ್ತದೆ. ತಿಳಿಸುವ ಮಾತುಗಳಂತು ಬಹಳಷ್ಟಿವೆ! ವಕೀಲರೂ ಸಹ ಕೆಲಕೆಲವು ಮಾತುಗಳನ್ನು ಮರೆತು ಹೋಗುತ್ತಾರೆ ನಂತರ ಅದು ನೆನಪಿಗೆ ಬಂದಾಗ ಗೊಂದಲವಾಗುತ್ತದೆ. ವೈದ್ಯರದೂ ಸಹ ಇದೇ ರೀತಿಯಾಗುತ್ತದೆ. ಈ ಖಾಯಿಲೆಗಾಗಿ ಈ ಔಷಧಿಯು ಸರಿಯಾಗಿದೆ ಎಂದು ನಂತರದಲ್ಲಿ ವಿಚಾರ ಬರುತ್ತದೆ. ಹಾಗೆಯೇ ಇಲ್ಲಿಯೂ ಸಹ ಅನೇಕ ಮಾತುಗಳಿವೆ. ತಂದೆಯು ತಿಳಿಸುತ್ತಾರೆ - ಇಂದು ನಿಮಗೆ ಗುಹ್ಯ-ಗುಹ್ಯವಾದ ವಿಚಾರಗಳನ್ನು ತಿಳಿಸುತ್ತೇನೆ. ಆದರೆ ತಿಳಿದುಕೊಳ್ಳುವವರೆಲ್ಲರೂ ಪತಿತರಾಗಿದ್ದಾರೆ. ಹೇ ಪತಿತ-ಪಾವನ.... ಎಂದು ಹೇಳುತ್ತಾರೆ ಮತ್ತೆ ಯಾರಿಗಾದರೂ ಪತಿತರೆಂದು ಹೇಳಿದ್ದೇ ಆದರೆ ಕೋಪಿಸಿಕೊಳ್ಳುತ್ತಾರೆ. ಈಶ್ವರನ ಮುಂದೆ ಹೇ ಪತಿತ-ಪಾವನ ಬನ್ನಿ, ಬಂದು ನಮ್ಮನ್ನು ಪಾವನ ಮಾಡಿ ಎಂದು ಸತ್ಯವನ್ನು ಹೇಳುತ್ತಾರೆ. ಈಶ್ವರನನ್ನು ಮರೆತು ಹೋದರೆ ಮತ್ತೆ ಸುಳ್ಳು ಹೇಳಿ ಬಿಡುತ್ತಾರೆ. ಆದ್ದರಿಂದ ಬಹಳ ಯುಕ್ತಿಯಿಂದ ತಿಳಿಸಬೇಕಾಗಿದೆ - ಹಾವೂ ಸಾಯಬೇಕು, ಕೋಲೂ ಮುರಿಯಬಾರದು. ತಂದೆಯು ತಿಳಿಸುತ್ತಾರೆ, ಇಲಿಯಿಂದ ಗುಣವನ್ನು ಕಲಿಯಿರಿ, ಹೇಗೆ ಇಲಿಯು ಬಹಳ ಯುಕ್ತಿಯಿಂದ ಕಚ್ಚುತ್ತದೆ. ಅದರಿಂದ ರಕ್ತವು ಹೊರ ಬಂದರೂ ಸಹ ಅದು ಗೊತ್ತೇ ಆಗುವುದಿಲ್ಲ. ಅದೇರೀತಿ ಮಕ್ಕಳ ಬುದ್ಧಿಯಲ್ಲಿ ಎಲ್ಲಾ ಮಾತುಗಳೂ ನೆನಪಿರಬೇಕು. ಯೋಗದಲ್ಲಿರುವವರಿಗೆ ಸಮಯದಲ್ಲಿ ಸಹಯೋಗ ಸಿಗುತ್ತದೆ. ಕೇಳುವವರು ತಿಳಿಸುವವರಿಗಿಂತಲೂ ಹೆಚ್ಚು ತಂದೆಗೆ ಪ್ರಿಯರಾಗಲೂಬಹುದು ಆದ್ದರಿಂದ ಸ್ವಯಂ ತಂದೆಯೇ ಕುಳಿತು ತಿಳಿಸುತ್ತಾರೆ ಅಂದಾಗ ಈ ರೀತಿ ತಿಳಿಸಬೇಕು, ಅವರಿಗೆ ಪವಿತ್ರರಾಗುವುದು ಬಹಳ ಒಳ್ಳೆಯದು ಎಂಬುದು ಅರ್ಥವಾಗಬೇಕು. ಇದೊಂದು ಜನ್ಮ ಪವಿತ್ರರಾಗಿದ್ದರೆ ನಾವು 21 ಜನ್ಮಗಳು ಪವಿತ್ರ ಪ್ರಪಂಚದ ಮಾಲೀಕರಾಗುತ್ತೇವೆ. ಭಗವಾನುವಾಚ - ಈ ಅಂತಿಮ ಜನ್ಮ ಪವಿತ್ರರಾಗಿ ಆಗ ನಾನು ಗ್ಯಾರಂಟಿ ಕೊಡುತ್ತೇನೆ, ಡ್ರಾಮಾ ಪ್ಲಾನನುಸಾರ ನೀವು 21 ಜನ್ಮಗಳಿಗಾಗಿ ಆಸ್ತಿಯನ್ನು ಪಡೆಯುತ್ತೀರಿ. ನಾವು ಕಲ್ಪ-ಕಲ್ಪವೂ ಈ ಆಸ್ತಿಯನ್ನು ಪಡೆಯುತ್ತಾ ಇರುತ್ತೇವೆ, ಸರ್ವೀಸಿನ ಉತ್ಸಾಹವಿರುವವರು ನಾವು ಹೋಗಿ ತಿಳಿಸಬೇಕೆಂದು ತಿಳಿದುಕೊಳ್ಳುತ್ತಾರೆ. ಸರ್ವೀಸಿಗಾಗಿ ಓಡುತ್ತಿರಬೇಕು. ತಂದೆಯಂತೂ ಜ್ಞಾನ ಸಾಗರನಾಗಿದ್ದಾರೆ, ಅವರು ಎಷ್ಟೊಂದು ಜ್ಞಾನದ ಮಳೆಯನ್ನು ಸುರಿಸುತ್ತಾರೆ. ಯಾರ ಆತ್ಮವು ಪವಿತ್ರವಾಗಿದೆಯೋ ಅವರಿಗೆ ಧಾರಣೆಯೂ ಆಗುತ್ತದೆ. ತಮ್ಮ ಹೆಸರನ್ನು ಪ್ರಸಿದ್ಧ ಮಾಡಿ ತೋರಿಸುತ್ತಾರೆ. ಪ್ರದರ್ಶನಿ, ಮೇಳಗಳಿಂದ ಯಾರು ಹೇಗೆ ಸರ್ವೀಸ್ ಮಾಡುತ್ತಾರೆ ಎಂಬುದು ಅರ್ಥವಾಗುತ್ತದೆ. ಶಿಕ್ಷಕಿ ಸಹೋದರಿಯರು ಹೋಗಿ ನೋಡಬೇಕು - ಯಾರು ಹೇಗೆ ತಿಳಿಸುತ್ತಾರೆ ಎಂದು. ಹೆಚ್ಚಿನದಾಗಿ ಲಕ್ಷ್ಮೀ-ನಾರಾಯಣ ಹಾಗೂ ಏಣಿ ಚಿತ್ರದ ಬಗ್ಗೆ ತಿಳಿಸುವುದು ಒಳ್ಳೆಯದಾಗಿದೆ - ಯೋಗಬಲದಿಂದ ಮತ್ತೆ ಈ ರೀತಿ ಲಕ್ಷ್ಮೀ-ನಾರಾಯಣರಾಗುತ್ತೇವೆ, ಲಕ್ಷ್ಮೀ-ನಾರಾಯಣರೇ ಕೊನೆಯಲ್ಲಿ ಆದಿ ದೇವ, ಆದಿ ದೇವಿಯಾಗುತ್ತಾರೆ. ಚತುರ್ಭುಜದಲ್ಲಿ ಲಕ್ಷ್ಮೀ-ನಾರಾಯಣ ಇಬ್ಬರೂ ಬಂದು ಬಿಡುತ್ತಾರೆ. ಎರಡು ಭುಜ ಲಕ್ಷ್ಮಿಯದು, ಎರಡು ಭುಜ ನಾರಾಯಣನದು. ಇದೂ ಸಹ ಭಾರತವಾಸಿಗಳಿಗೆ ಗೊತ್ತಿದೆ, ಮಹಾಲಕ್ಷ್ಮಿಗೆ ನಾಲ್ಕು ಭುಜಗಳಿವೆ - ಇದರ ಅರ್ಥವೇನೆಂದರೆ ಅವರು ದಂಪತಿಗಳಾಗಿದ್ದಾರೆ. ವಿಷ್ಣುವೆಂದರೆ ಚತುರ್ಭುಜ ಇರುವವರು.

ಪ್ರದರ್ಶನಿಯಲ್ಲಂತೂ ಪ್ರತಿನಿತ್ಯವೂ ತಿಳಿಸಲಾಗುತ್ತದೆ. ರಥವನ್ನೂ ತೋರಿಸಿದ್ದಾರೆ, ಅರ್ಜುನನು ರಥದಲ್ಲಿ ಕುಳಿತಿದ್ದನು, ಕೃಷ್ಣನು ರಥವನ್ನು ನಡೆಸುವ ಸಾರಥಿಯಾಗಿದ್ದನೆಂದು ಹೇಳುತ್ತಾರೆ. ಇವೆಲ್ಲವೂ ಕಥೆಗಳಾಗಿವೆ. ಇಲ್ಲಿ ಇವು ಜ್ಞಾನದ ಮಾತುಗಳಾಗಿವೆ. ಜ್ಞಾನಾಮೃತದ ಕಳಶವನ್ನು ಲಕ್ಷ್ಮಿಯ ತಲೆಯ ಮೇಲೆ ಇಟ್ಟಿದ್ದಾರೆಂದು ತೋರಿಸುತ್ತಾರೆ. ವಾಸ್ತವದಲ್ಲಿ ಕಳಶವನ್ನು ಜಗದಂಬೆಯ ಮೇಲೆ ಇಡಲಾಗಿದೆ. ಇವರೇ ನಂತರ ಲಕ್ಷ್ಮಿಯಾಗುತ್ತಾರೆ. ಇದನ್ನೂ ಸಹ ತಿಳಿಸಬೇಕಾಗಿದೆ. ಸತ್ಯಯುಗದಲ್ಲಿ ಒಂದು ಧರ್ಮ, ಒಂದು ಮತದ ಮನುಷ್ಯರಿರುತ್ತಾರೆ, ದೇವತೆಗಳದು ಒಂದು ಮತವಾಗಿದೆ. ದೇವತೆಗಳಿಗೇ ಶ್ರೀ ಎಂದು ಹೇಳಲಾಗುತ್ತದೆ, ಮತ್ತ್ಯಾರಿಗೂ ಹೇಳುವುದಿಲ್ಲ. ಅಂದಾಗ ತಂದೆಗೆ ಈ ವಿಚಾರ ನಡೆಯುತ್ತಿತ್ತು - ತಿಳಿಸುವುದಕ್ಕೆ ಕೆಲವೇ ಶಬ್ಧಗಳಿರಬೇಕು, ಈ ಅಂತಿಮ ಜನ್ಮದಲ್ಲಿ ಪಂಚ ವಿಕಾರಗಳನ್ನು ಗೆಲ್ಲುವುದರಿಂದ ನೀವು ರಾಮ ರಾಜ್ಯದ ಮಾಲೀಕರಾಗುತ್ತೀರಿ. ಇದು ಸಸ್ತಾ ವ್ಯಾಪಾರವಾಗಿದೆ, ತಂದೆಯು ಬಂದು ಅವಿನಾಶಿ ಜ್ಞಾನ ರತ್ನಗಳ ದಾನವನ್ನು ಕೊಡುತ್ತಾರೆ. ತಂದೆಯು ಜ್ಞಾನ ಸಾಗರನಾಗಿದ್ದಾರೆ, ಅವರೇ ಜ್ಞಾನ ರತ್ನಗಳನ್ನು ಕೊಡುತ್ತಾರೆ. ಇಂದ್ರ ಸಭೆಯಲ್ಲಿ ಕೆಲವರು ಮಾಣಿಕ್ಯ, ಮುತ್ತು, ನೀಲ ಮಣಿ ಎಲ್ಲರೂ ಇದ್ದಾರೆ, ಎಲ್ಲರೂ ಸಹಯೋಗ ನೀಡುವವರೇ. ಹೇಗೆ ವಜ್ರಗಳಲ್ಲಿ ಭಿನ್ನ-ಭಿನ್ನ ಪ್ರಕಾರದವು ಇರುತ್ತದೆಯಲ್ಲವೆ ಆದ್ದರಿಂದ ನವರತ್ನಗಳನ್ನು ತೋರಿಸಿದ್ದಾರೆ. ಇದಂತೂ ಅವಶ್ಯವಾಗಿದೆ, ಯಾರು ಚೆನ್ನಾಗಿ ಓದುವರೋ ಅವರು ಪದವಿಯನ್ನು ಪಡೆಯುತ್ತಾರೆ. ನಂಬರ್ವಾರಂತೂ ಇದೆಯಲ್ಲವೆ. ಪುರುಷಾರ್ಥ ಮಾಡುವ ಸಮಯವೇ ಇದಾಗಿದೆ. ಇದನ್ನಂತೂ ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ತಂದೆಯ ಮಾಲೆಯ ಮಣಿಯಾಗುತ್ತೇವೆ. ಎಷ್ಟು ಶಿವ ತಂದೆಯನ್ನು ನೆನಪು ಮಾಡುತ್ತೇವೆಯೋ ಅಷ್ಟು ನಾವು ಹೇಗೆ ನೆನಪಿನ ಯಾತ್ರೆಯಲ್ಲಿ ಸ್ಫರ್ಧೆ ಮಾಡುತ್ತೇವೆ. ಇದರಿಂದ ಪಾಪಗಳು ಬೇಗನೆ ವಿನಾಶವಾಗುತ್ತವೆ.

ಈ ವಿದ್ಯೆಯು ಬಹಳ ದೊಡ್ಡದಾಗಿಲ್ಲ, ಕೇವಲ ಪವಿತ್ರರಾಗಿರಬೇಕಾಗಿದೆ. ದೈವೀ ಗುಣಗಳನ್ನೂ ಧಾರಣೆ ಮಾಡಿಕೊಳ್ಳಬೇಕಾಗಿದೆ. ಬಾಯಿಂದ ಎಂದೂ ಕಲ್ಲುಗಳು ಹೊರ ಬರಬಾರದು. ಕಲ್ಲುಗಳನ್ನು ಎಸೆಯುವವರು ಕಲ್ಲು ಬುದ್ಧಿಯವರೇ ಆಗುತ್ತಾರೆ. ರತ್ನಗಳನ್ನು ಹೊರ ಹಾಕುವವರು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಇದು ಬಹಳ ಸಹಜವಾಗಿದೆ. ಜಿಜ್ಞಾಸುಗಳಿಗೆ ತಿಳಿಸಿ - ಪತಿತ-ಪಾವನ, ಸರ್ವರ ಮುಕ್ತಿ-ಜೀವನ್ಮುಕ್ತಿದಾತ ಪರಮಪಿತ ಪರಮಾತ್ಮ ಶಿವನು ಹೇಳುತ್ತಾರೆ - ಹೇ ಭಾರತವಾಸಿ ಆತ್ಮಿಕ ಮಕ್ಕಳೇ, ರಾವಣ ರಾಜ್ಯ ಮೃತ್ಯುಲೋಕದ ಈ ಕಲಿಯುಗೀ ಅಂತಿಮ ಜನ್ಮದಲ್ಲಿ ಪವಿತ್ರರಾಗಿ ಇರುವುದರಿಂದ ಮತ್ತು ಪರಮಪಿತ ಪರಮಾತ್ಮ ಶಿವನ ಜೊತೆ ಬುದ್ಧಿ ಯೋಗಬಲದ ಯಾತ್ರೆಯಿಂದ ತಮೋಪ್ರಧಾನ ಆತ್ಮರು ಸತೋಪ್ರಧಾನ ಆತ್ಮರಾಗಿ, ಸತೋಪ್ರಧಾನ ಸತ್ಯಯುಗೀ ವಿಶ್ವದಲ್ಲಿ ಸುಖ, ಶಾಂತಿ, ಪವಿತ್ರತೆ, ಸಂಪತ್ತಿನಿಂದ ಸಂಪನ್ನರಾಗಿ, ಮರ್ಯಾದಾ ಪುರುಷೋತ್ತಮ ದೈವೀ ಸ್ವರಾಜ್ಯ ಪದವಿಯನ್ನು ಪುನಃ ಪಡೆಯುತ್ತೀರಿ, 5000 ವರ್ಷಗಳ ಹಿಂದಿನ ತರಹ. ಆದರೆ ಮುಂಬರಲಿರುವ ಮಹಾಭಾರಿ ವಿನಾಶಕ್ಕೆ ಮೊದಲೇ ತಂದೆಯು ನಮಗೆ ಆಸ್ತಿಯನ್ನು ಕೊಡುತ್ತಾರೆ, ವಿದ್ಯೆಯನ್ನು ಓದಿಸುತ್ತಾರೆ. ಎಷ್ಟು ಓದುವಿರೋ ಅಷ್ಟು ಪದವಿಯನ್ನು ಪಡೆಯುವಿರಿ. ಜೊತೆಯಲ್ಲಂತೂ ಕರೆದುಕೊಂಡೇ ಹೋಗುತ್ತಾರೆ ಅಂದಮೇಲೆ ನಮಗೆ ಈ ಹಳೆಯ ಶರೀರದ ಹಾಗೂ ಹಳೆಯ ಪ್ರಪಂಚದ ವಿಚಾರವೇಕೆ ಇರಬೇಕು! ನಿಮ್ಮದು ಹಳೆಯ ಪ್ರಪಂಚವನ್ನು ಬಿಡುವ ಸಮಯವಾಗಿದೆ. ಇಂತಿಂತಹ ಮಾತುಗಳು ಬುದ್ಧಿಯಲ್ಲಿ ಮಂಥನ ನಡೆಯುತ್ತಿದ್ದರೂ ಬಹಳ ಒಳ್ಳೆಯದು. ಮುಂದೆ ಹೋದಂತೆ ಪುರುಷಾರ್ಥ ಮಾಡುತ್ತಾ-ಮಾಡುತ್ತಾ ಸಮಯ ಬರ ತೊಡಗುವುದು. ಆ ಸಮಯದಲ್ಲಿ ಗುಟುಕರಿಸುವುದಿಲ್ಲ. ಪ್ರಪಂಚವೂ ಸಹ ಇನ್ನು ಸ್ವಲ್ಪವೇ ಸಮಯವು ಉಳಿಯುವುದು ಎಂಬುದನ್ನು ನೋಡುತ್ತೀರಿ ಅಂದಮೇಲೆ ಬುದ್ಧಿಯೋಗವನ್ನಿಡಬೇಕು. ಸರ್ವೀಸ್ ಮಾಡುವುದರಿಂದ ಸಹಯೋಗವು ಸಿಗುವುದು. ಅನ್ಯರಿಗೆ ಎಷ್ಟು ಸುಖದ ಮಾರ್ಗವನ್ನು ತಿಳಿಸುತ್ತೀರೋ ಅಷ್ಟು ಖುಷಿಯಿರುವುದು. ಪುರುಷಾರ್ಥವೂ ನಡೆಯುತ್ತದೆ. ಅದೃಷ್ಟವು ಕಾಣಿಸುತ್ತದೆ. ತಂದೆಯಂತೂ ಪುರುಷಾರ್ಥವನ್ನು ಕಲಿಸುತ್ತಾರೆ, ಕೆಲವರು ಅದರಲ್ಲಿ ತೊಡಗುತ್ತಾರೆ, ಕೆಲವರು ತೊಡಗುವುದಿಲ್ಲ. ನಿಮಗೆ ತಿಳಿದಿದೆ, ಕೋಟ್ಯಾಧಿಪತಿಗಳು, ಪದಮಪತಿಗಳೆಲ್ಲರೂ ಹಾಗೆಯೇ ಸಮಾಪ್ತಿಯಾಗಿ ಬಿಡುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕಾಗಿ ಬಾಯಿಂದ ಸದಾ ರತ್ನಗಳೇ ಹೊರ ಬರಬೇಕಾಗಿದೆ, ಕಲ್ಲುಗಳಲ್ಲ. ಮನಸ್ಸಾ-ವಾಚಾ-ಕರ್ಮಣಾ ಮರ್ಯಾದಾ ಪುರುಷೋತ್ತಮರನ್ನಾಗಿ ಮಾಡುವಂತಹ ಕರ್ಮವನ್ನೇ ಮಾಡಬೇಕಾಗಿದೆ.

2. ಈ ಅಂತಿಮ ಜನ್ಮದಲ್ಲಿ ಪವಿತ್ರರಾಗುವ ಪ್ರತಿಜ್ಞೆ ಮಾಡಬೇಕಾಗಿದೆ. ಪವಿತ್ರರಾಗುವ ಯುಕ್ತಿಯನ್ನೇ ಎಲ್ಲರಿಗೆ ತಿಳಿಸಬೇಕಾಗಿದೆ.

ವರದಾನ:

ಸದಾ ಕಲ್ಯಾಣಕಾರಿ ಭಾವನೆಯ ಮುಖಾಂತರ ಗುಣಗ್ರಾಹಿಯಾಗುವಂತಹ ಅಚಲ ಅಡೋಲ ಭವ.

ನಿಮ್ಮ ಸ್ಥಿತಿಯನ್ನು ಸದಾ ಅಚಲ ಅಡೋಲವಾಗಿ ಮಾಡಿಕೊಳ್ಳಲು ಸದಾ ಗುಣಗ್ರಾಹಿಗಳಾಗಿ. ಒಂದುವೇಳೆ ಪ್ರತಿ ಮಾತಿನಲ್ಲಿ ಗುಣಗ್ರಾಹಿಗಳಾದಾಗ ಏರುಪೇರಿನಲ್ಲಿ ಬರುವುದಿಲ್ಲ. ಗುಣಗ್ರಾಹಿ ಅರ್ಥಾತ್ ಕಲ್ಯಾಣದ ಭಾವನೆ. ಅವಗುಣದಲ್ಲಿಯೂ ಗುಣವನ್ನೆ ನೋಡುವುದು ಇದಕ್ಕೆ ಹೇಳಲಾಗುವುದು ಗುಣಗ್ರಾಹಿ, ಆದ್ದರಿಂದ ಅವಗುಣವುಳ್ಳವರಲ್ಲಿಯೂ ಸಹ ಗುಣವನ್ನೇ ತೆಗೆದುಕೊಳ್ಳಿ. ಹೇಗೆ ಅವರು ಅವಗುಣಗಳಲ್ಲಿ ಧೃಡರಾಗಿರುವರೊ ಹಾಗೆ ನೀವು ಗುಣಗಳಲ್ಲಿ ದೃಢವಾಗಿರಿ. ಗುಣಗಳ ಗ್ರಾಹಕರಾಗಿ, ಅವಗುಣಗಳದ್ದಲ್ಲ.

ಸ್ಲೋಗನ್:

ತಮ್ಮದೆಲ್ಲವನ್ನು ತಂದೆಗೆ ಅರ್ಪಣೆ ಮಾಡಿ ಸದಾ ಹಗುರರಾಗಿರುವವರೇ ಫರಿಶ್ತಾ ಆಗಿದ್ದಾರೆ.