03.03.19    Avyakt Bapdada     Kannada Murli     28.02.84     Om Shanti     Madhuban


"ಬಿಂದು ಮತ್ತು ಬೂಂದ್(ಹನಿ)ನ ರಹಸ್ಯ"


ಇಂದು ಭೋಲಾನಾಥ ತಂದೆಯು ತನ್ನ ಭೋಲಾ ಮಕ್ಕಳೊಂದಿಗೆ, ಮಕ್ಕಳ ಹಾಗೂ ತಂದೆಯ ಅವತರಣೆಯ ದಿನ ಅರ್ಥಾತ್ ಅಲೌಕಿಕ ಆತ್ಮಿಕ ಜಯಂತಿಯನ್ನು ಆಚರಿಸುವುದಕ್ಕಾಗಿ ಬಂದಿದ್ದಾರೆ. ಭೋಲಾನಾಥ ತಂದೆಯವರಿಗೆ ಎಲ್ಲರಿಗಿಂತಲೂ ಪ್ರಿಯರಾಗಿರುವವರು ಭೋಲಾ ಮಕ್ಕಳಾಗಿದ್ದಾರೆ. ಭೋಲಾ ಅರ್ಥಾತ್ ಯಾರು ಸದಾ ಸರಳ ಸ್ವಭಾವಿ, ಶುಭ ಭಾವ ಮತ್ತು ಸ್ವಚ್ಛತೆಯಿಂದ ಕೂಡಿರುವ ಮನಸ್ಸು ಮತ್ತು ಕರ್ಮವೆರಡರಲ್ಲಿಯೂ ಸತ್ಯತೆ ಮತ್ತು ಸ್ವಚ್ಛತೆಯಿರುವುದು, ಇಂತಹ ಭೋಲಾ ಮಕ್ಕಳು ಭೋಲಾನಾಥ ತಂದೆಯವರನ್ನೂ ತನ್ನ ಕಡೆಗೆ ಆಕರ್ಷಣೆ ಮಾಡುತ್ತದೆ. ಭೋಲಾನಾಥ ತಂದೆಯು ಸರಳ ಸ್ವಭಾವವಿರುವ ಭೋಲಾ ಮಕ್ಕಳ ಗುಣ ಮಾಲೆಯನ್ನು ಸದಾ ಸ್ಮರಣೆ ಮಾಡುತ್ತಿರುತ್ತಾರೆ. ತಾವೆಲ್ಲರೂ ಸಹ ಅನೇಕ ಜನ್ಮಗಳಲ್ಲಿ ತಂದೆಯ ಹೆಸರಿನ ಮಾಲೆಯ ಸ್ಮರಣೆ ಮಾಡಿದ್ದೀರಿ ಮತ್ತು ತಂದೆಯು ಈಗ ಸಂಗಮಯುಗದಲ್ಲಿ ಮಕ್ಕಳಿಗೆ ರಿಟರ್ನ್ ಕೊಡುತ್ತಿದ್ದಾರೆ. ಮಕ್ಕಳ ಗುಣ ಮಾಲೆಯನ್ನು ಸ್ಮರಣೆ ಮಾಡುತ್ತಾರೆ. ಇಷ್ಟೊಂದು ಭೋಲಾ ಮಕ್ಕಳು ಭೋಲಾನಾಥನ ಪ್ರಿಯರಾಗಿದ್ದಾರೆ. ಎಷ್ಟು ಜ್ಞಾನ ಸ್ವರೂಪರು, ಶಕ್ತಿಪೂರ್ಣರೋ ಅಷ್ಟೇ ಭೋಲಾತನವಿದೆ. ಭಗವಂತನಿಗೆ ಭೋಲಾತನವು ಪ್ರಿಯವಾಗಿದೆ. ತಮ್ಮಲ್ಲಿ ಯಾವುದು ಭಗವಂತನನ್ನೂ ಮೋಹವನ್ನುಂಟು ಮಾಡಿತು, ತನ್ನವರನ್ನಾಗಿ ಮಾಡಿ ಬಿಟ್ಟಿತು - ಇಂತಹ ತಮ್ಮ ಶ್ರೇಷ್ಠ ಭಾಗ್ಯವನ್ನು ತಿಳಿದುಕೊಂಡಿದ್ದೀರಲ್ಲವೆ! ಇಂದು ಭಕ್ತರು ಮತ್ತು ಮಕ್ಕಳಿಬ್ಬರದೂ ವಿಶೇಷವಾಗಿ ಆಚರಿಸುವ ದಿನವಾಗಿದೆ. ಭಕ್ತರು ತಯಾರಿ ಮಾಡಿಕೊಳ್ಳುತ್ತಿದ್ದಾರೆ, ಆಹ್ವಾನ ಮಾಡುತ್ತಿದ್ದಾರೆ ಮತ್ತು ತಾವು ಸನ್ಮುಖದಲ್ಲಿ ಕುಳಿತಿದ್ದೀರಿ. ಭಕ್ತರ ಲೀಲೆಯನ್ನೂ ತಂದೆಯವರು ನೋಡಿ-ನೋಡಿ ಮುಗುಳ್ನಗುತ್ತಾರೆ ಮತ್ತು ಮಕ್ಕಳ ಮಿಲನದ ಲೀಲೆಯನ್ನು ನೋಡಿ -ನೋಡಿ ಹರ್ಷವಾಗುತ್ತಾರೆ. ಒಂದು ಕಡೆ ವಿಯೋಗಿ ಭಕ್ತಾತ್ಮರು, ಇನ್ನೊಂದು ಕಡೆ ಸಹಜಯೋಗಿ ಮಕ್ಕಳು. ಇಬ್ಬರೂ ತನ್ನ-ತನ್ನ ಲಗನ್ನಿನಿಂದ ಪ್ರಿಯವಾಗಿದ್ದಾರೆ. ಭಕ್ತರೂ ಸಹ ಕಡಿಮೆಯೇನಿಲ್ಲ. ನಾಳೆಯ ದಿನ ಆಕಾರಿ ಇಷ್ಟ ರೂಪದಲ್ಲಿ ಪರಿಕ್ರಮಣ ಹಾಕಿ ನೋಡಿರಿ. ತಂದೆಯ ಜೊತೆಯಲ್ಲಿ ಸಾಲಿಗ್ರಾಮ ಮಕ್ಕಳದೂ ಸಹ ವಿಶೇಷ ರೂಪದಿಂದ ಪೂಜೆಯಾಗುತ್ತದೆ. ತಮ್ಮ ಹಾಗೂ ತಂದೆಯ ಪೂಜೆಯ ಜೊತೆಗೆ ಭಕ್ತರನ್ನೂ ನೋಡಿರಿ. ಈಗಿನವರೆಗೂ ನೌಧಾ ಭಕ್ತರು ಕೆಲ ಕೆಲವರಿದ್ದಾರೆ, ಅವರು ಸತ್ಯ ಸ್ನೇಹದಿಂದ ಭಕ್ತಿಯನ್ನು ಮಾಡುತ್ತಾ, ಭಕ್ತಿಯ ಭಾವನೆಯ ಅಲ್ಪ ಸಮಯದ ಫಲವನ್ನು ಅನುಭವ ಮಾಡುತ್ತಾರೆ. ನಾಳೆಯ ದಿನ ಭಕ್ತರ ಭಕ್ತಿಯಲ್ಲಿ ವಿಶೇಷ ಲಗನ್ನಿನ ದಿನವಾಗಿದೆ. ತಿಳಿಯಿತೆ! ತಾವೆಲ್ಲರೂ ತಂದೆಯ ಜಯಂತಿಯನ್ನು ಆಚರಿಸುವಿರೇ ಅಥವಾ ತಮ್ಮದನ್ನೇ? ಇಡೀ ಕಲ್ಪದಲ್ಲಿ ತಂದೆ ಹಾಗೂ ಮಕ್ಕಳಿಬ್ಬರದೂ ಒಂದೇ ದಿನ ಜಯಂತಿಯಾಗುತ್ತದೆ, ಇದಾಗಲು ಸಾಧ್ಯವೇ? ಭಲೇ ದಿನವೂ ಅದೇ ಆಗಿರಬಹುದು, ವರ್ಷವು ಅದೇ ಆಗಿರಲು ಸಾಧ್ಯವಿಲ್ಲ. ತಂದೆ ಹಾಗೂ ಮಕ್ಕಳಲ್ಲಿ ಅಂತರವಂತು ಆಗುತ್ತದೆಯಲ್ಲವೆ. ಆದರೆ ಅಲೌಕಿಕ ಜಯಂತಿಯು ತಂದೆ ಹಾಗೂ ಮಕ್ಕಳದು ಜೊತೆ ಜೊತೆಗಿದೆ. ತಾವು ಹೇಳುವಿರಿ - ನಾವು ತಂದೆಯ ಜಯಂತಿಯನ್ನು ಆಚರಿಸುತ್ತೇವೆ ಮತ್ತು ತಂದೆಯು ಹೇಳುವರು - ಮಕ್ಕಳ ಜಯಂತಿಯನ್ನು ಆಚರಿಸುತ್ತೇವೆ. ಅಂದಮೇಲೆ ವಿಚಿತ್ರವಾದ ಜಯಂತಿಯಾಯಿತಲ್ಲವೆ. ತಮ್ಮದೂ ಆಚರಿಸುತ್ತೀರಿ, ತಂದೆಯ ಜಯಂತಿಯನ್ನೂ ಆಚರಿಸುತ್ತೀರಿ. ಇದರಿಂದಲೇ ಯೋಚಿಸಿರಿ - ಭೋಲಾನಾಥ ತಂದೆಗೆ ಮಕ್ಕಳೊಂದಿಗೆ ಎಷ್ಟೊಂದು ಸ್ನೇಹವಿದೆ, ಅದೂ ಜನ್ಮ ದಿನವೂ ಒಂದೇ ಆಗಿದೆ. ಅಂದಮೇಲೆ ಭೋಲಾನಾಥನಿಗೆ ಮೋಹವಾಯಿತಲ್ಲವೆ. ಭಕ್ತರು ತನ್ನ ಭಕ್ತಿಯ ಮಸ್ತಿಯಲ್ಲಿ ಮಸ್ತರಾಗಿ ಬಿಡುತ್ತಾರೆ ಮತ್ತು ತಾವು "ಪಡೆದು ಬಿಟ್ಟೆವು" ಎನ್ನುವ ಖುಷಿಯಲ್ಲಿ ಜೊತೆ ಜೊತೆಯಲ್ಲಿ ಆಚರಿಸುತ್ತೀರಿ, ಹಾಡುತ್ತೀರಿ, ನರ್ತಿಸುತ್ತೀರಿ. ನೆನಪಾರ್ಥವನ್ನೇನು ಮಾಡಲಾಗಿದೆ, ಅದರಲ್ಲಿಯೂ ಬಹಳ ರಹಸ್ಯಗಳು ಸಮಾವೇಶವಾಗಿದೆ. ಪೂಜೆಯಲ್ಲಿ, ಚಿತ್ರಗಳಲ್ಲಿ ಎರಡು ವಿಶೇಷತೆಗಳು ವಿಶೇಷವಾಗಿ ಇದೆ. ಒಂದಂತು - ಬಿಂದುವಿನ ವಿಶೇಷತೆ ಮತ್ತು ಇನ್ನೊಂದು - ಬೂಂದ್- ಬೂಂದ್ (ಹನಿ-ಹನಿ) ವಿಶೇಷತೆ. ಪೂಜೆಯ ವಿಧಿಯಲ್ಲಿ ಒಂದೊಂದು ಹನಿಯ ಮಹತ್ವವಿದೆ. ಈ ಸಮಯದಲ್ಲಿ ತಾವು ಮಕ್ಕಳು ಬಿಂದುವಿನ ರಹಸ್ಯದಲ್ಲಿ ಸ್ಥಿತರಾಗುತ್ತೀರಿ. ವಿಶೇಷವಾಗಿ ಇಡೀ ಜ್ಞಾನದ ಸಾರವು ಒಂದು ಬಿಂದು ಶಬ್ಧದಲ್ಲಿ ಸಮಾವೇಶವಾಗಿದೆ. ತಂದೆಯೂ ಬಿಂದು, ತಾವಾತ್ಮರೂ ಸಹ ಬಿಂದು ಮತ್ತು ಡ್ರಾಮಾದ ಜ್ಞಾನವನ್ನು ಧಾರಣೆ ಮಾಡಿಕೊಳ್ಳಲು - ಏನಾಯಿತು ಸಮಾಪ್ತಿ ಅರ್ಥಾತ್ ಪೂರ್ಣ ವಿರಾಮ, ಬಿಂದುವನ್ನಿಡಲಾಯಿತು. ಪರಮ ಆತ್ಮ, ಆತ್ಮ ಮತ್ತು ಈ ಪ್ರಕೃತಿಯ ಆಟ ಅರ್ಥಾತ್ ಡ್ರಾಮಾ - ಮೂರರ ಜ್ಞಾನವು ಪ್ರತ್ಯಕ್ಷ ಜೀವನದಲ್ಲಿ ಬಿಂದುವನ್ನೇ ಅನುಭವ ಮಾಡುತ್ತೀರಲ್ಲವೆ. ಆದ್ದರಿಂದ ಭಕ್ತಿಯಲ್ಲಿಯೂ ಪ್ರತಿಮೆಯ ಮಧ್ಯೆ ಬಿಂದುವಿನ ಮಹತ್ವವಿದೆ. ಇನ್ನೊಂದು - ಬೂಂದ್ನ ಮಹತ್ವ - ತಾವೆಲ್ಲರೂ ನೆನಪಿನಲ್ಲಿ ಕುಳಿತುಕೊಳ್ಳುತ್ತೀರಾ ಅಥವಾ ಯಾರದಾದರೂ ನೆನಪಿನಲ್ಲಿ ಕುಳಿತುಕೊಳ್ಳುತ್ತೀರೆಂದರೆ, ಯಾವ ವಿಧಿಯಿಂದು ಮಾಡಿಸುತ್ತೀರಿ? ಸಂಕಲ್ಪಗಳ ಹನಿಯ ಮೂಲಕ - ನಾನು ಆತ್ಮನಾಗಿದ್ದೇನೆ, ಈ ಹನಿಯನ್ನು ಹಾಕಿದಿರಿ. ತಂದೆಯ ಮಗುವಾಗಿರುವೆನು - ಇನ್ನೊಂದು ಹನಿ. ಹೀಗೆ ಶುದ್ಧ ಸಂಕಲ್ಪಗಳ ಹನಿಯ ಮೂಲಕ ಮಿಲನದ ಸಿದ್ಧಿಯ ಅನುಭವವನು ಮಾಡುತ್ತೀರಲ್ಲವೆ. ಅಂದಮೇಲೆ ಒಂದು ಶುದ್ಧ ಸಂಕಲ್ಪಗಳ ಸ್ಮೃತಿಯ ಹನಿ. ಇನ್ನೊಂದು - ಯಾವಾಗ ಆತ್ಮಿಕ ವಾರ್ತಾಲಾಪ ಮಾಡುತ್ತೀರಿ, ತಂದೆಯ ಒಂದೊಂದು ಮಹಿಮೆ ಮತ್ತು ಪ್ರಾಪ್ತಿಯ ಶುದ್ಧ ಸಂಕಲ್ಪಗಳ ಹನಿಯನ್ನು ಹಾಕುತ್ತೀರಲ್ಲವೆ. ತಾವು ಹೀಗಿದ್ದೀರಿ, ತಾವು ನಮ್ಮನ್ನು ಹೀಗೆ ಮಾಡಿದಿರಿ - ಇದೇ ಮಧುರಾತಿ ಮಧುರವಾದ ಶೀತಲ ಹನಿಯನ್ನು ತಂದೆಯ ಮೇಲೆ ಹಾಕುವಿರಿ ಅರ್ಥಾತ್ ತಂದೆಯೊಂದಿಗೆ ಆತ್ಮಿಕ ವಾರ್ತಾಲಾಪವನ್ನು ಮಾಡುವಿರಿ. ಒಂದೊಂದು ಮಾತಿನ ವಿಚಾರ ಮಾಡುತ್ತೀರಲ್ಲವೆ, ಒಟ್ಟೊಟ್ಟಿಗೆ ಅಲ್ಲ. ಮೂರನೆಯ ಮಾತು - ಎಲ್ಲಾ ಮಕ್ಕಳು ತಮ್ಮ ತನು-ಮನ-ಧನದಿಂದ ಸಹಯೋಗದ ಹನಿಯನ್ನು ಹಾಕುತ್ತೀರಿ. ಆದ್ದರಿಂದ ತಾವುಗಳು ವಿಶೇಷವಾಗಿ ಹೇಳುತ್ತೀರಿ ಹನಿ ಹನಿ ಗೂಡಿದರೆ ಹಳ್ಳ. ಇಷ್ಟು ದೊಡ್ಡ ವಿಶ್ವ ಪರಿವರ್ತನೆಯ ಕಾರ್ಯ, ಸರ್ವ ಶಕ್ತಿವಂತನ ಬೇಹದ್ದಿನ ವಿಶಾಲ ಕಾರ್ಯವಾಗಿದೆ, ಅದರಲ್ಲಿ ತಾವು ಪ್ರತಿಯೊಬ್ಬರೂ ಸಹಯೋಗವನ್ನೆಲ್ಲವನ್ನೂ ಕೊಡುತ್ತೀರಿ, ಹನಿಯ ಸಮಾನವೇ ಸಹಯೋಗವಾಗಿದೆ. ಆದರೆ ಎಲ್ಲರ ಹನಿ-ಹನಿಯ ಸಹಯೋಗದಿಂದ, ಸಹಯೋಗದ ವಿಶಾಲ ಸಾಗರವಾಗಿ ಬಿಡುತ್ತದೆ. ಆದ್ದರಿಂದ ಪೂಜೆಯ ವಿಧಿಯಲ್ಲಿಯೂ ಹನಿಯ ಮಹತ್ವವನ್ನು ತೋರಿಸಿದ್ದಾರೆ. ವಿಶೇಷವಾಗಿ ವ್ರತದ ವಿಧಿಯನ್ನು ತೋರಿಸುತ್ತಾರೆ. ವ್ರತವನ್ನು ತೆಗೆದುಕೊಳ್ಳುತ್ತೀರಲ್ಲವೆ. ತಾವೆಲ್ಲರೂ ಸಹ ತಂದೆಯ ಸಹಯೋಗಿಯಾಗುವುದರಲ್ಲಿ ವ್ಯರ್ಥ ಸಂಕಲ್ಪದ ಭೋಜನದ ವ್ರತವನ್ನು ತೆಗೆದುಕೊಳ್ಳುತ್ತೀರಿ - ಬುದ್ಧಿಯಲ್ಲೆಂದಿಗೂ ಅಶುದ್ಧ ವ್ಯರ್ಥ ಸಂಕಲ್ಪಗಳನ್ನು ಸ್ವೀಕರಿಸುವುದಿಲ್ಲ ಎಂದು. ಈ ವ್ರತ ಅರ್ಥಾತ್ ಧೃಡ ಸಂಕಲ್ಪವನ್ನು ತೆಗೆದುಕೊಳ್ಳುತ್ತೀರಿ ಮತ್ತು ಭಕ್ತರು ಅಶುದ್ಧ ಭೋಜನದ ವ್ರತವನ್ನಿಡುತ್ತಾರೆ. ಮತ್ತು ಜೊತೆ ಜೊತೆಗೆ ತಾವು ಸದಾಕಾಲಕ್ಕಾಗಿ ಜಾಗೃತ ಜ್ಯೋತಿಯಾಗುತ್ತೀರಿ ಮತ್ತು ಅವರು ಅದರ ನೆನಪಿನ ಸ್ವರೂಪದಲ್ಲಿ ಜಾಗರಣೆಯನ್ನು ಮಾಡುತ್ತಾರೆ. ತಾವು ಮಕ್ಕಳ ಅವಿನಾಶಿ ಆತ್ಮಿಕ ಅಂತರ್ಮುಖಿ ವಿಧಿಗಳನ್ನು, ಭಕ್ತರು ಸ್ಥೂಲ ಬಾಹರ್ಮುಖಿಯ ವಿಧಿಗಳನ್ನು ಮಾಡಿ ಬಿಟ್ಟಿದ್ದಾರೆ. ಆದರೆ ಅದರ ಕಾಪಿಯನ್ನಂತು ತಮ್ಮಿಂದಲೇ ಮಾಡಿದ್ದಾರೆ. ಏನೆಲ್ಲವೂ ನೆನಪಿಗೆ ಬಂದಿತು, ರಜೋಪ್ರಧಾನ ಬುದ್ಧಿಯಿರುವ ಕಾರಣದಿಂದ ಅಂತಹ ವಿಧಿಯನ್ನೇ ಮಾಡಿ ಬಿಟ್ಟರು. ಅಂತಹ ರಜೋಗುಣಿ ನಂಬರ್ ವನ್ ಭಕ್ತ ಮತ್ತು ಭಕ್ತಿಯ ಲೆಕ್ಕದಿಂದ ಸತೋಗುಣಿ ಭಕ್ತರಂತು ಬ್ರಹ್ಮಾ ಮತ್ತು ತಾವೆಲ್ಲರೂ ವಿಶೇಷ ಆತ್ಮರು ನಿಮಿತ್ತರಾಗುತ್ತೀರಿ. ಆದರೆ ಮೊದಲು ಮನಸ್ಸಾ ಸ್ನೇಹ ಮತ್ತು ಮನಸ್ಸಾ ಶಕ್ತಿಯಿರುವ ಕಾರಣದಿಂದ ಮಾನಸಿಕ ಭಾವದ ಭಕ್ತಿಯು ಶುರುವಾಗುತ್ತದೆ. ಈ ಸ್ಥೂಲ ವಿಧಿಗಳು ನಂತರದಲ್ಲಿ ನಿಧಾನ-ನಿಧಾನವಾಗಿ ಹೆಚ್ಚಾಗುತ್ತದೆ. ಆದರೂ ರಚೈತ ತಂದೆಯು ತನ್ನ ಭಕ್ತಾತ್ಮರ ರಚನೆಯನ್ನು ಹಾಗೂ ಅವರ ವಿಧಿಗಳನ್ನು ನೋಡುತ್ತಾ ಇದೇ ಹೇಳುತ್ತಾರೆ - ಈ ಭಕ್ತರ ಸ್ಮೃತಿಯ, ಬುದ್ಧಿಯದೂ ಚಮತ್ಕಾರವಾಗಿದೆ. ಆದರೂ ಈ ವಿಧಿಗಳ ಮೂಲಕ ಬುದ್ಧಿಯನ್ನು ವ್ಯಸ್ತವಾಗಿಡುವುದರಿಂದ, ವಿಕಾರಗಳಲ್ಲಿ ಹೋಗುವುದರಿಂದ ಅಲ್ಪ ಸ್ವಲ್ಪವಾದರೂ ದೂರ ಮಾಡಿದರಲ್ಲವೆ. ತಿಳಿಯಿತೆ ತಮ್ಮ ಯಥಾರ್ಥ ಸಿದ್ಧಿಯ ವಿಧಿಯು ಭಕ್ತಿಯಲ್ಲಿ ಏನೇನು ನಡೆಯುತ್ತಾ ಬರುತ್ತಿದೆ. ಇದು ನೆನಪಾರ್ಥದ ಮಹತ್ವ. ಡಬಲ್ ವಿದೇಶಿ ಮಕ್ಕಳಂತು ಭಕ್ತಿ ನೋಡುವುದರಿಂದ ದೂರದಲ್ಲಿರುತ್ತಾರೆ. ಆದರೆ ತಮ್ಮೆಲ್ಲರ ಭಕ್ತರಾಗಿದ್ದಾರೆ. ಅಂದಮೇಲೆ ಭಕ್ತರ ಲೀಲೆಯನ್ನು ತಾವು ಮಕ್ಕಳು ಅನುಭವ ಮಾಡುತ್ತೀರಿ ಈಗಲೂ ಭಕ್ತಾತ್ಮರು ನಾವು ಪೂಜ್ಯಾತ್ಮರ ಪೂಜೆಯನ್ನು ಹೇಗೆ ಮಾಡುತ್ತಿದ್ದಾರೆ ಮತ್ತು ಆಹ್ವಾನ ಮಾಡುತ್ತಿದ್ದಾರೆ ಎಂಬ ಅನುಭವ ಮಾಡುತ್ತೀರಾ? ಭಕ್ತರ ಕೂಗಿನ ಅನುಭವವೆಂದಾದರೂ ಆಗುತ್ತದೆಯೇ! ಭಕ್ತರ ಮೇಲೆ ದಯೆ ಬರುತ್ತದೆಯೇ? ಭಕ್ತರ ಬಗ್ಗೆಯೂ ಬಹಳ ಚೆನ್ನಾಗಿ ತಿಳಿದಿದ್ದೀರಲ್ಲವೆ! ಭಕ್ತರು ಕೂಗಿದರು ಮತ್ತು ತಾವು ಅದನ್ನು ತಿಳಿಯಲಿಲ್ಲವೆಂದರೆ ಭಕ್ತರ ಗತಿಯೇನಾಗುತ್ತದೆ! ಆದ್ದರಿಂದ ಭಕ್ತರೇನು, ಪೂಜಾರಿ ಎಂದರೇನು, ಪೂಜ್ಯರು ಏನಾಗಿದ್ದಾರೆ, ಈ ರಹಸ್ಯವನ್ನೂ ಬಹಳ ಚೆನ್ನಾಗಿ ತಿಳಿದಿದ್ದೀರಿ. ಪೂಜ್ಯ ಮತ್ತು ಪೂಜಾರಿಯ ರಹಸ್ಯವನ್ನು ತಿಳಿದಿದ್ದೀರಲ್ಲವೆ. ಒಳ್ಳೆಯದು ಎಂದಾದರೂ ಭಕ್ತರ ಕೂಗಿನ ಅನುಭವವಾಗುತ್ತದೆಯೇ? ಪಾಂಡವರಿಗೂ ಆಗುತ್ತದೆಯೇ ಅಥವ ಕೇವಲ ಶಕ್ತಿಯರಿಗಷ್ಟೇ ಆಗುತ್ತದೆಯೇ! ಸಾಲಿಗ್ರಾಮಗಳಂತು ಬಹಳಷ್ಟಿರುತ್ತದೆ, ಲಕ್ಷಾಂತರ ಅಂದಾಜಿನಲ್ಲಿರುತ್ತದೆ. ಆದರೆ ದೇವತೆಗಳು ಲಕ್ಷಾಂತರ ಅಂದಾಜಿನಲ್ಲಿರುವುದಿಲ್ಲ. ದೇವಿಯರು ಹಾಗೂ ದೇವತೆಗಳು ಸಾವಿರಗಳ ಅಂದಾಜಿನಲ್ಲಿರುತ್ತಾರೆ, ಲಕ್ಷಾಂತರ ಅಂದಾಜಿನಲ್ಲಾಗುವುದಿಲ್ಲ. ಒಳ್ಳೆಯದು ಇದರ ರಹಸ್ಯವನ್ನೂ ಎಂದಾದರೂ ತಿಳಿಸುತ್ತೇವೆ. ಡಬಲ್ ವಿದೇಶಿಗಳಲ್ಲಿಯೂ ಆದಿಯಲ್ಲಿ ಯಾರು ಬರುತ್ತಾರೆಯೋ, ಅವರು ಪ್ರಾರಂಭದಲ್ಲಿಯೂ ಉದಾಹರಣೆಯಾದರು, ಅದರಲ್ಲಿ ಭಲೇ ಶಕ್ತಿಯರಿರಲಿ ಅಥವಾ ಪಾಂಡವರು, ಅವರದೂ ಸಹ ವಿಶೇಷತೆಯಿದೆಯಲ್ಲವೆ. ತಂದೆಯಂತು ಎಲ್ಲರಿಗಿಂತಲೂ ಮೊದಲ ದೊಡ್ಡ ವಿದೇಶಿ ಆಗಿದ್ದಾರೆ. ಬಹಳ ಹೆಚ್ಚು ಸಮಯ ವಿದೇಶದಲ್ಲಿ ಯಾರಿರುತ್ತಾರೆ? ತಂದೆಯವರು ಇರುತ್ತಾರಲ್ಲವೆ. ಈಗ ದಿನ ಕಳೆದಂತೆ ಎಷ್ಟು ಮುಂದಿನ ಸಮಯವು ಬರುತ್ತದೆಯೋ, ಅಷ್ಟು ಭಕ್ತರ ಆಹ್ವಾನದ ಕೂಗು, ಅವರ ಭಾವನೆಗಳೆಲ್ಲವೂ ತಮ್ಮ ಬಳಿ ಸ್ಪಷ್ಟ ರೂಪದಲ್ಲಿ ಅನುಭವವಾಗುತ್ತದೆ, ಯಾವ ಇಷ್ಟ ದೇವಿ ಅಥವಾ ದೇವತೆ ಎನ್ನುವುದೂ ತಿಳಿದು ಬರುತ್ತದೆ. ಸ್ವಲ್ಪ ಪರಿಪಕ್ವವಾಗಿ ಬಿಡಿ ನಂತರದಲ್ಲಿ ಹೇಗೆ ದಿವ್ಯ ದೃಷ್ಟಿಯಿಂದ ಸ್ಪಷ್ಟವಾಗಿ ಕಾಣಿಸುತ್ತದೆ ಹಾಗೆಯೇ ಇದೆಲ್ಲವೂ ದಿವ್ಯ ಬುದ್ಧಿಯ ಟಚಿಂಗ್ನ ಮೂಲಕ ಇಂತಹ ಅನುಭವಾಗುತ್ತದೆ. ಈಗಂತು ತಯಾರಾಗುತ್ತಿದ್ದೀರಿ ಆದ್ದರಿಂದ ಪ್ರತ್ಯಕ್ಷತೆಯ ಪರದೆಯು ತೆರೆಯಲಾಗುತ್ತಿಲ್ಲ. ಯಾವಾಗ ಶೃಂಗಾರಿತರಾಗಿ ಬಿಡುತ್ತೀರಿ ಆಗ ಪರದೆಯು ತೆರೆಯುತ್ತದೆ ಮತ್ತು ಸ್ವಯಂನ್ನೂ ನೋಡಿಕೊಳ್ಳುವಿರಿ. ನಂತರ ಎಲ್ಲರ ಮುಖದಿಂದ ಹೊರ ಬರುತ್ತದೆ - ಇಂತಹ ದೇವಿಯೂ ಬಂದು ಬಿಟ್ಟಿದ್ದಾರೆ. ಈ ದೇವತೆಯೂ ಬಂದು ಬಿಟ್ಟಿದ್ದಾರೆ. ಒಳ್ಳೆಯದು - ಸದಾ ಭೋಲಾನಾಥ ತಂದೆಯ ಸರಳ ಚಿತ್ತ, ಸಹಜ ಸ್ವಭಾವವಿರುವ ಸಹಜಯೋಗಿ, ಭೋಲಾ ಮಕ್ಕಳು, ಸದಾ ಬಿಂದು ಹಾಗೂ ಹನಿಯ ರಹಸ್ಯವನ್ನು ಜೀವನದಲ್ಲಿ ಧಾರಣೆ ಮಾಡಿಕೊಳ್ಳುವ, ಧಾರಣಾ ಸ್ವರೂಪ ಆತ್ಮರು, ಸದಾ ಮನ-ವಾಣಿ-ಕರ್ಮದಲ್ಲಿ ದೃಢ ಸಂಕಲ್ಪದ ವ್ರತವನ್ನು ತೆಗೆದುಕೊಳ್ಳುವ ಜ್ಞಾನಿ ಆತ್ಮರು, ಸದಾ ತಮ್ಮ ಪೂಜ್ಯ ಸ್ವರೂಪದಲ್ಲಿ ಸ್ಥಿತರಾಗಿರುವ ಪೂಜ್ಯಾತ್ಮರಿಗೆ ಭೋಲಾನಾಥ, ವರದಾತಾ, ವಿದಾತಾ ತಂದೆಯ ನೆನಪು-ಪ್ರೀತಿ ಹಾಗೂ ನಮಸ್ತೆ.

ಧ್ವಜಾರೋಹಣವಾದ ನಂತರ ಬಾಪ್ದಾದಾರವರ ಮಧುರ ಮಹಾವಾಕ್ಯಗಳು:-

ತಂದೆಯು ಹೇಳುವರು - ಮಕ್ಕಳ ಧ್ವಜವು ಸದಾ ಮಹಾನ್ ಆಗಿದೆ. ಮಕ್ಕಳಿಲ್ಲದಿದ್ದರೆ ತಂದೆಯೂ ಸಹ ಏನು ಮಾಡುವರು. ತಾವು ಹೇಳುತ್ತೀರಿ - ತಂದೆಯ ಧ್ವಜವು ಸದಾ ಮಹಾನ್........ (ಗೀತೆಯನ್ನು ಮೊಳಗಿಸಲಾಗಿತ್ತು) ಮತ್ತು ತಂದೆಯವರು ಹೇಳುವರು - ಮಕ್ಕಳ ಧ್ವಜವು ಸದಾ ಮಹಾನ್. ಎಲ್ಲಾ ಮಕ್ಕಳ ಮಸ್ತಕದಲ್ಲಿ ಸದಾ ವಿಜಯದ ಧ್ವಜವು ಹಾರುತ್ತಿದೆ. ಎಲ್ಲರ ನಯನಗಳಲ್ಲಿ, ಎಲ್ಲರ ಮಸ್ತಕದಲ್ಲಿ ವಿಜಯದ ಧ್ವಜಾರೋಹಣವಾಯಿತು. ಬಾಪ್ದಾದಾರವರು ನೋಡುತ್ತಿದ್ದಾರೆ ಇವರು ಒಂದು ಧ್ವಜದ ಧ್ವಜಾರೋಹಣ ಮಾಡಲಿಲ್ಲ. ಆದರೆ ಎಲ್ಲರ ಮಸ್ತಕದ ಜೊತೆ ಜೊತೆ ವಿಜಯದ ಧ್ವಜವನ್ನು ಅವಿನಾಶಿಯಾಗಿ ಹಾರಿಸಲಾಯಿತು. ತಂದೆ ಹಾಗೂ ಮಕ್ಕಳ ಅದ್ಭುತವಾದ ಜನ್ಮ ದಿನದ ಶುಭಾಷಯಗಳು ನಾಲ್ಕಾರು ಕಡೆಯಲ್ಲಿರುವ ಅತೀ ಸ್ನೇಹಿ, ಸೇವೆಯ ಜೊತೆಗಾರರು, ಸದಾ ಹೆಜ್ಜೆಯಲ್ಲಿ ಹೆಜ್ಜೆಯನ್ನಿಡುವ ಮಕ್ಕಳಿಗೆ, ಈ ಅಲೌಕಿಕ ಬ್ರಾಹ್ಮಣ ಜೀವನದ ಜನ್ಮ ದಿನದ ಪ್ರಯುಕ್ತವಾಗಿ ಶುಭಾಷಯಗಳು. ಸದಾ ಎಲ್ಲಾ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಶುಭಾಷಯಗಳ ರಿಟರ್ನ್ನಲ್ಲಿ ಸ್ನೇಹ ತುಂಬಿರುವ ಬಾಹುಗಳ ಮಾಲೆಯನ್ನು ತೊಡಿಸುತ್ತಾ ಶುಭಾಷಯಗಳನ್ನು ಕೊಡುತ್ತಿದ್ದಾರೆ. ಎಲ್ಲಾ ಮಕ್ಕಳಿಗೂ ಈ ಅಲೌಕಿಕ ಜನ್ಮ ದಿನವನ್ನು, ವಿಶ್ವದ ಪ್ರತಿಯೊಂದು ಆತ್ಮವು ನೆನಪಾರ್ಥದ ರೂಪದಲ್ಲಿ ಆಚರಿಸುತಾ ಬರುತ್ತಿದ್ದಾರೆ. ಏಕೆಂದರೆ ತಂದೆಯ ಜೊತೆಗೆ ಮಕ್ಕಳೂ ಸಹ ಬ್ರಾಹ್ಮಣ ಜೀವನದಲ್ಲಿ ಸರ್ವ ಆತ್ಮರಿಗೂ ಬಹಳ-ಬಹಳ-ಬಹಳ ಸುಖ-ಶಾಂತಿ, ಖುಷಿ ಮತ್ತು ಶಕ್ತಿಯ ಸಹಯೋಗವು ಸಿಕ್ಕಿದೆ. ಈ ಸಹಯೋಗದ ಕಾರಣದಿಂದ ಎಲ್ಲರ ಹೃದಯದಿಂದ ಶಿವ ಮತ್ತು ಸಾಲಿಗ್ರಾಮಗಳಿಬ್ಬರ ಜನ್ಮ ದಿನವನ್ನು ಶಿವಜಯಂತಿಯಾಗಿ ಆಚರಿಸಲಾಗುತ್ತಿದೆ. ಅಂದಮೇಲೆ ಇಂತಹ ಸಾಲಿಗ್ರಾಮ ಮಕ್ಕಳಿಗೆ ಶಿವ ತಂದೆ ಹಾಗೂ ಬ್ರಹ್ಮಾ ತಂದೆಯಿಬ್ಬರಿಂದ ಸದಾ ಪದಮದಷ್ಟು ಶುಭಾಷಯಗಳು, ಶುಭಾಷಯಗಳು. ಸದಾ ಶುಭಾಷಯಗಳು, ಸದಾ ವೃದ್ಧಿಯಾಗಿರಿ ಮತ್ತು ಸದಾ ವಿಧಿಪೂರ್ವಕ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳಿರಿ. ಒಳ್ಳೆಯದು.

ವಿದಾಯಿಯ ಸಮಯದಲ್ಲಿ :-

ಎಲ್ಲರೂ ಗುಡ್ಮಾರ್ನಿಂಗ್ ಮಾಡಿಯೇ ಮಾಡುತ್ತಾರೆ ಆದರೆ ತಮ್ಮದು ಗಾಡ್ನ ಜೊತೆ ಮಾರ್ನಿಂಗ್ ಆಗಿದೆ, ಅಂದಮೇಲೆ ಗಾಡ್ಲಿ ಮಾರ್ನಿಂಗ್ ಆಗಿ ಬಿಟ್ಟಿತಲ್ಲವೆ. ಗಾಡ್ನ ಜೊತೆ ರಾತ್ರಿಯನ್ನು ಕಳೆದಿರಿ ಮತ್ತು ಗಾಡ್ನ ಜೊತೆ ಮಾರ್ನಿಂಗ್ ಮಾಡುತ್ತಿದ್ದೀರಿ. ಅಂದಾಗ ಸದಾ ಗಾಡ್ ಮತ್ತು ಗುಡ್ ಎರಡೂ ನೆನಪಿರಲಿ. ಗಾಡ್ನ ನೆನಪೇ ಗುಡ್ ಮಾಡಿಸುತ್ತದೆ. ಒಂದು ವೇಳೆ ಗಾಡ್ನ ನೆನಪಿಲ್ಲವೆಂದರೆ ಗುಡ್ ಆಗಲು ಸಾಧ್ಯವಿಲ್ಲ. ತಮ್ಮೆಲ್ಲರದು ಸದಾಕಾಲವೂ ಗಾಡ್ಲೀ ಲೈಫ್ ಆಗಿದೆ, ಆದ್ದರಿಂದ ಪ್ರತೀ ಸೆಕೆಂಡ್, ಪ್ರತೀ ಸಂಕಲ್ಪವೂ ಗುಡ್ ಆಗಿರುತ್ತದೆ. ಅಂದಮೇಲೆ ಕೇವಲ ಗುಡ್ ಮಾರ್ನಿಂಗ್, ಗುಡ್ ಈವಿನಿಂಗ್, ಗುಡ್ ನೈಟ್ ಅಲ್ಲ ಆದರೆ ಪ್ರತೀ ಸೆಕೆಂಡ್, ಪ್ರತೀ ಸಂಕಲ್ಪವು ಗಾಡ್ನ ನೆನಪಿನ ಕಾರಣದಿಂದ ಗುಡ್ ಆಗಿದೆ. ಹೀಗೆ ಅನುಭವ ಮಾಡುತ್ತೀರಾ! ಈಗ ಜೀವನವೇ ಗುಡ್ ಆಗಿದೆ. ಏಕೆಂದರೆ ಜೀವನವೇ ಗಾಡ್ನ ಜೊತೆಯಿದೆ, ಪ್ರತೀ ಕರ್ಮವು ತಂದೆಯ ಜೊತೆಗೆ ಮಾಡುತ್ತೀರಲ್ಲವೆ. ಒಬ್ಬರಂತು ಮಾಡುವುದಿಲ್ಲವೇ? ಆಹಾರ ಸೇವಿಸುತ್ತೀರೆಂದರೆ ತಂದೆಯ ಜೊತೆಯೇ ಅಥವಾ ಒಬ್ಬರೇ ಸೇವಿಸುತ್ತೀರಾ! ಸದಾ ಗಾಡ್ ಮತ್ತು ಗುಡ್ ಎರಡರ ಸಂಬಂಧವನ್ನು ನೆನಪಿಟ್ಟುಕೊಳ್ಳಿರಿ ಮತ್ತು ಜೀವನದಲ್ಲಿ ತಂದುಕೊಳ್ಳಿರಿ. ತಿಳಿಯಿತೆ - ಎಲ್ಲರಿಗೂ ಬಾಪ್ದಾದಾರವರ ವಿಶೇಷ ಅಮೃತ ವೇಳೆಯ ಅಮರ ನೆನಪು-ಪ್ರೀತಿ ಹಾಗೂ ನಮಸ್ತೆ.

ವರದಾನ:
ಮಹಾದಾನಿಯಾಗಿದ್ದು ವಿಶಾಲ ಹೃದಯದಿಂದ ಖುಷಿಯ ಖಜಾನೆಯನ್ನು ಹಂಚುವಂತಹ ಮಾಸ್ಟರ್ ದಯಾ ಹೃದಯಿ ಭವ.

ಜನರು ಅಲ್ಪಕಾಲದ ಖುಷಿಯನ್ನು ಪ್ರಾಪ್ತಿ ಮಾಡಿಕೊಳ್ಳುವುದಕ್ಕಾಗಿ ಎಷ್ಟೊಂದು ಸಮಯ ಹಾಗೂ ಹಣವನ್ನು ಖರ್ಚು ಮಾಡುತ್ತಾರೆ. ಆದರೂ ಸತ್ಯ ಖುಷಿಯು ಸಿಗುವುದಿಲ್ಲ, ಹೀಗೆ ಅವಶ್ಯಕತೆಯಿರುವ ಸಮಯದಲ್ಲಿ ತಾವಾತ್ಮರು ಮಹಾದಾನಿಯಾಗಿದ್ದು ವಿಶಾಲ ಹೃದಯದಿಂದ ಖುಷಿಯ ದಾನವನ್ನು ಕೊಡಬೇಕಾಗಿದೆ. ಇದಕ್ಕಾಗಿ ದಯಾಹೃದಯದ ಗುಣವನ್ನು ಇಮರ್ಜ್ ಮಾಡಿಕೊಳ್ಳಿರಿ. ತಮ್ಮ ಜಡ ಚಿತ್ರವು ವರದಾನವನ್ನು ಕೊಡುತ್ತಿದೆ ಅಂದಮೇಲೆ ತಾವೂ ಸಹ ಚೈತನ್ಯದಲ್ಲಿ ದಯಾಹೃದಯಿಗಳಾಗಿದ್ದು ಹಂಚುತ್ತಾ ಸಾಗಿರಿ ಏಕೆಂದರೆ ಪರವಶ ಆತ್ಮರಾಗಿದ್ದಾರೆ. ಎಂದಿಗೂ ಇದನ್ನು ಯೋಚಿಸಬೇಡಿ - ಇವರಂತು ಕೇಳುವವರೇ ಅಲ್ಲ, ತಾವು ದಯಾಹೃದಯಿಗಳಾಗಿ ಕೊಡುತ್ತಾ ಸಾಗಿರಿ. ತಮ್ಮ ಶುಭ ಭಾವನೆಯು ಅವರಿಗೆ ಅವಶ್ಯವಾಗಿ ಫಲವನ್ನು ಕೊಡುವುದು.

ಸ್ಲೋಗನ್:
ಯೋಗದ ಶಕ್ತಿಯ ಮೂಲಕ ಪ್ರತೀ ಕರ್ಮೇಂದ್ರಿಯಕ್ಕೆ ಆದೇಶದಲ್ಲಿ ನಡೆಸುವವರೇ ಸ್ವರಾಜ್ಯ ಅಧಿಕಾರಿ ಆಗಿದ್ದಾರೆ.