03.04.19         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ತಂದೆಯ ಬಳಿ ನೀವು ರಿಫ್ರೆಶ್ ಆಗಲು ಬಂದಿದ್ದೀರಿ, ಇಲ್ಲಿ ನಿಮಗೆ ಪ್ರಾಪಂಚಿಕ ವಾಯುಮಂಡಲದಿಂದ ದೂರ ಸತ್ಯ ತಂದೆಯ ಸತ್ಯವಾದ ಸಂಗವು ಸಿಗುತ್ತದೆ"

ಪ್ರಶ್ನೆ:
ತಂದೆಯು ಮಕ್ಕಳ ಉನ್ನತಿಗಾಗಿ ಯಾವ ಒಂದು ಸಲಹೆಯನ್ನು ಕೊಡುತ್ತಾರೆ?

ಉತ್ತರ:
ಮಧುರ ಮಕ್ಕಳೇ ಎಂದೂ ಪರಸ್ಪರ ಸಾಂಸಾರಿಕ, ಅಲ್ಲ-ಸಲ್ಲದ ಮಾತುಗಳನ್ನು ಆಡಬೇಡಿ. ಒಂದು ವೇಳೆ ಯಾರಾದರೂ ತಿಳಿಸಿದರೂ ಸಹ ಕೇಳಿಯೂ ಕೇಳದಂತೆ ಇರಿ. ಒಳ್ಳೆಯ ಮಕ್ಕಳು ತಮ್ಮ ಸರ್ವೀಸಿನ ಕರ್ತವ್ಯವನ್ನು ಪೂರ್ಣ ಮಾಡಿ ತಂದೆಯ ನೆನಪಿನಲ್ಲಿ ಮಸ್ತರಾಗಿರುತ್ತಾರೆ. ಆದರೆ ಕೆಲವು ಮಕ್ಕಳು ವ್ಯರ್ಥ ಮಾತುಗಳನ್ನು ಬಹಳ ಖುಷಿಯಿಂದ ಕೇಳುತ್ತಾರೆ ಹಾಗೂ ಹೇಳುತ್ತಾರೆ. ಇದರಲ್ಲಿ ಬಹಳ ಸಮಯವು ನಷ್ಟವಾಗುತ್ತದೆ ಮತ್ತು ಉನ್ನತಿಯು ಆಗುವುದಿಲ್ಲ.

ಓಂ ಶಾಂತಿ.
ಡಬಲ್ ಓಂ ಶಾಂತಿ ಎಂದು ಹೇಳಿದರೂ ಸರಿಯಾಗಿದೆ. ಮಕ್ಕಳಿಗೆ ಅರ್ಥವಂತೂ ತಿಳಿಸಲಾಗಿದೆ - ನಾನು ಆತ್ಮ ಶಾಂತ ಸ್ವರೂಪನಾಗಿದ್ದೇನೆ. ಯಾವಾಗ ನನ್ನ ಧರ್ಮವೇ ಶಾಂತಿಯಾಗಿದೆ ಅಂದಮೇಲೆ ಮತ್ತೆ ಕಾಡಿನಲ್ಲಿ ಅಲೆದಾಡುವುದರಿಂದ ಶಾಂತಿ ಸಿಗಲು ಸಾಧ್ಯವಿಲ್ಲ. ನಾನು ಶಾಂತ ಸ್ವರೂಪನಾಗಿದ್ದೇನೆ, ಇದಂತೂ ಬಹಳ ಸಹಜವಾಗಿದೆ ಆದರೆ ಮಾಯೆಯ ಯುದ್ಧ ಆಗುವ ಕಾರಣ ಸ್ವಲ್ಪ ಕಷ್ಟವಾಗುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಬೇಹದ್ದಿನ ತಂದೆಯ ವಿನಃ ಈ ಜ್ಞಾನವನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ ಎಂಬುದು ಎಲ್ಲಾ ಮಕ್ಕಳಿಗೆ ಗೊತ್ತಿದೆ. ಜ್ಞಾನ ಸಾಗರ ಒಬ್ಬರೇ ತಂದೆಯಾಗಿದ್ದಾರೆ. ದೇಹಾಧಾರಿಗಳಿಗೆ ಎಂದೂ ಜ್ಞಾನ ಸಾಗರ ಎಂದು ಹೇಳಲು ಸಾಧ್ಯವಿಲ್ಲ. ರಚಯಿತನು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಡುತ್ತಾರೆ. ಅದು ನೀವು ಮಕ್ಕಳಿಗೆ ಸಿಗುತ್ತಿದೆ. ಕೆಲವರು ಒಳ್ಳೆಯ ಅನನ್ಯ ಮಕ್ಕಳೂ ಸಹ ಮರೆತು ಹೋಗುತ್ತಾರೆ ಏಕೆಂದರೆ ತಂದೆಯ ನೆನಪು ಪಾದರಸದಂತೆ. ಶಾಲೆಯಲ್ಲಿಯಂತೂ ಅವಶ್ಯವಾಗಿ ನಂಬರವಾರ್ ಇರುತ್ತಾರಲ್ಲವೇ. ಶಾಲೆಯಲ್ಲಿ ಸದಾ ಸಂಖ್ಯೆಯನ್ನು ಎಣಿಸಲಾಗುತ್ತದೆ. ಸತ್ಯಯುಗದಲ್ಲಿ ಎಂದೂ ಸಂಖ್ಯೆಯನ್ನು ಎಣಿಸಲಾಗುವುದಿಲ್ಲ. ಇದು ಶಾಲೆಯಾಗಿದೆ, ಇದನ್ನು ಅರಿತುಕೊಳ್ಳುವುದರಲ್ಲಿ ಬಹಳ ಬುದ್ಧಿಯು ಬೇಕು. ಅರ್ಧಕಲ್ಪ ಭಕ್ತಿಯಾಗಿದೆ. ಭಕ್ತಿಯ ನಂತರ ಜ್ಞಾನಸಾಗರ ತಂದೆಯು ಜ್ಞಾನವನ್ನು ಕೊಡಲು ಬರುತ್ತಾರೆ. ಭಕ್ತಿಮಾರ್ಗದವರು ಎಂದೂ ಜ್ಞಾನವನ್ನು ಕೊಡಲು ಸಾಧ್ಯವಿಲ್ಲ ಏಕೆಂದರೆ ಎಲ್ಲರೂ ದೇಹಾಧಾರಿಗಳಾಗಿದ್ದಾರೆ. ಶಿವ ತಂದೆಯು ಭಕ್ತಿ ಮಾಡುತ್ತಾರೆ ಎಂದು ಹೇಳುವುದಿಲ್ಲ. ಅವರು ಯಾರ ಭಕ್ತಿ ಮಾಡುತ್ತಾರೆ? ಒಬ್ಬರೇ ತಂದೆಯಾಗಿದ್ದಾರೆ, ಅವರಿಗೆ ದೇಹವಿಲ್ಲ, ಅವರು ಯಾರದೇ ಭಕ್ತಿ ಮಾಡುವುದಿಲ್ಲ. ಉಳಿದಂತೆ ಯಾರೆಲ್ಲಾ ದೇಹಧಾರಿಗಳಿದ್ದಾರೋ ಎಲ್ಲರೂ ಭಕ್ತಿ ಮಾಡುತ್ತಾರೆ ಏಕೆಂದರೆ ರಚನೆ ಆಗಿದ್ದಾರಲ್ಲವೇ. ರಚಯಿತ ಒಬ್ಬ ತಂದೆಯಾಗಿದ್ದಾರೆ. ಈ ಕಣ್ಣುಗಳಿಂದ ಯಾವುದೆಲ್ಲಾ ಚಿತ್ರವನ್ನು ನೋಡಲಾಗುತ್ತದೆಯೋ ಅದೆಲ್ಲಾ ರಚನೆಯಾಗಿದೆ. ಈ ಮಾತುಗಳು ಪದೇ-ಪದೇ ಮರೆತು ಹೋಗುತ್ತದೆ. ನಿಮಗೆ ಬೇಹದ್ದಿನ ತಂದೆಯ ಆಸ್ತಿಯು ತಂದೆ ಇಲ್ಲದೆ ಸಿಗಲು ಸಾಧ್ಯವಿಲ್ಲ ಎಂದು ತಂದೆಯು ತಿಳಿಸುತ್ತಾರೆ. ವೈಕುಂಠದ ಆಸ್ತಿಯಂತೂ ನಿಮಗೆ ಸಿಗುತ್ತದೆ. 5000 ವರ್ಷಗಳ ಮೊದಲು ಭಾರತದಲ್ಲಿ ಇವರ ರಾಜ್ಯವಿತ್ತು, 2500 ವರ್ಷಗಳು ಸೂರ್ಯವಂಶಿ, ಚಂದ್ರವಂಶಿಯವರ ರಾಜಧಾನಿ ನಡೆಯಿತು. ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ, ಇದಂತೂ ನೆನ್ನೆಯ ಮಾತಾಗಿದೆ. ತಂದೆಯ ವಿನಃ ಮತ್ತ್ಯಾರೂ ಇದನ್ನು ತಿಳಿಸಲು ಸಾಧ್ಯವಿಲ್ಲ. ಪತಿತಪಾವನ ಆ ತಂದೆಯೇ ಆಗಿದ್ದಾರೆ. ತಿಳಿಸುವುದರಲ್ಲಿಯೂ ಸಹ ಬಹಳ ಶ್ರಮವಾಗುತ್ತದೆ. ಕೋಟಿಯಲ್ಲಿ ಕೆಲವರೇ ತಿಳಿಯುತ್ತಾರೆ ಎಂದು ಸ್ವಯಂ ತಂದೆಯು ಹೇಳುತ್ತಾರೆ. ಈ ಚಕ್ರದ ಬಗ್ಗೆಯು ತಿಳಿಸಲಾಗಿದೆ, ಇದು ಇಡೀ ಪ್ರಪಂಚಕ್ಕೆ ಜ್ಞಾನವಾಗಿದೆ. ಏಣಿಯ ಚಿತ್ರವು ಬಹಳ ಚೆನ್ನಾಗಿದೆ ಆದರೂ ಸಹ ಕೆಲವರು ಸಿಟ್ಟು ಮಾಡಿಕೊಳ್ಳುತ್ತಾರೆ. ವಿವಾಹಕ್ಕಾಗಿ ಮಹಲನ್ನು ನಿರ್ಮಿಸುತ್ತಾರೆ. ಅವರಿಗೂ ಸಹ ತಿಳಿಸಿ, ದೃಷ್ಟಿ ಕೊಡಿ ಎಂದು ತಂದೆಯು ತಿಳಿಸುತ್ತಾರೆ. ಮುಂದೆ ಹೋದಂತೆ ಎಲ್ಲರಿಗೂ ಈ ಮಾತುಗಳು ಇಷ್ಟವಾಗುತ್ತವೆ. ನೀವು ಮಕ್ಕಳು ತಿಳಿಸಬೇಕಾಗಿದೆ. ತಂದೆಯಂತೂ ಯಾರ ಬಳಿಯೂ ಹೋಗುವುದಿಲ್ಲ. ಭಗವಾನುವಾಚ: ಯಾರು ಪೂಜಾರಿಗಳಾಗಿದ್ದಾರೆಯೋ ಅವರಿಗೆ ಎಂದೂ ಪೂಜ್ಯರು ಎಂದು ಹೇಳುವುದಿಲ್ಲ. ಕಲಿಯುಗದಲ್ಲಿ ಯಾರು ಒಬ್ಬರೂ ಸಹ ಪವಿತ್ರರಾಗಲು ಸಾಧ್ಯವಿಲ್ಲ. ಪೂಜ್ಯ ದೇವೀ-ದೇವತಾ ಧರ್ಮದ ಸ್ಥಾಪನೆಯನ್ನು ಎಲ್ಲರಿಗಿಂತ ಯಾರು ಶ್ರೇಷ್ಠಾತಿ ಶ್ರೇಷ್ಠ ಪೂಜ್ಯರಾಗಿದ್ದಾರೆಯೋ ಅವರೇ ಮಾಡುತ್ತಾರೆ. ಅರ್ಧಕಲ್ಪ ಪೂಜ್ಯರು ಮತ್ತೆ ಅರ್ಧಕಲ್ಪ ಪೂಜಾರಿಗಳಾಗುತ್ತಾರೆ. ಈ ಬ್ರಹ್ಮಾರವರೂ ಸಹ ಅನೇಕ ಗುರುಗಳನ್ನು ಮಾಡಿಕೊಂಡಿದ್ದರು. ಈಗ ತಿಳಿಸುತ್ತಾರೆ - ಗುರುಗಳನ್ನು ಮಾಡಿಕೊಳ್ಳುವುದು ಭಕ್ತಿ ಮಾರ್ಗವಾಗಿತ್ತು. ಈಗ ಸದ್ಗುರು ಸಿಕ್ಕಿದ್ದಾರೆ, ಅವರು ಪೂಜ್ಯರನ್ನಾಗಿ ಮಾಡುತ್ತಾರೆ. ಕೇವಲ ಒಬ್ಬರನ್ನಲ್ಲ, ಎಲ್ಲರನ್ನು ಮಾಡುತ್ತಾರೆ. ಆತ್ಮಗಳೆಲ್ಲರೂ ಪೂಜ್ಯ, ಸತೋಪ್ರಧಾನವಾಗಿ ಬಿಡುತ್ತಾರೆ, ಈಗಂತೂ ತಮೋಪ್ರಧಾನ, ಪೂಜಾರಿಗಳಾಗಿದ್ದಾರೆ. ಈಗಂತೂ ಇವೆಲ್ಲಾ ತಿಳಿದುಕೊಳ್ಳುವ ಮಾತುಗಳಾಗಿವೆ. ಕಲಿಯುಗದಲ್ಲಿ ಒಬ್ಬರೂ ಸಹ ಪವಿತ್ರ, ಪೂಜ್ಯರಿರಲು ಸಾಧ್ಯವಿಲ್ಲ ಎಂದು ತಂದೆಯು ತಿಳಿಸುತ್ತಾರೆ. ಎಲ್ಲರೂ ವಿಕಾರದಿಂದ ಜನ್ಮ ಪಡೆಯುತ್ತಾರೆ, ರಾವಣ ರಾಜ್ಯವಾಗಿದೆ. ಈ ಲಕ್ಷ್ಮೀ-ನಾರಾಯಣರೂ ಸಹ ಪುನರ್ಜನ್ಮವನ್ನು ಪಡೆಯುತ್ತಾರೆ, ಆದರೆ ಅವರು ಪೂಜ್ಯರಾಗಿದ್ದಾರೆ ಏಕೆಂದರೆ ಅಲ್ಲಿ ರಾವಣ ಇರುವುದಿಲ್ಲ. ಶಬ್ದವನ್ನು ಹೇಳುತ್ತಾರೆ. ಆದರೆ ರಾಮ ರಾಜ್ಯವು ಯಾವಾಗ ಮತ್ತು ರಾವಣ ರಾಜ್ಯವು ಯಾವಾಗ ಇರುತ್ತದೆ ಎಂಬುದನ್ನು ತಿಳಿದುಕೊಂಡಿಲ್ಲ. ಈ ಸಮಯದಲ್ಲಿ ನೋಡಿ, ಎಷ್ಟೊಂದು ಸಭೆಗಳಿವೆ. ಎಲ್ಲಿಂದಾದರೂ ಏನಾದರೂ ಸಿಕ್ಕಿದರೆ ಒಂದು ಕಡೆ ಬಿಟ್ಟು ಇನ್ನೊಂದು ಕಡೆ ಹೊರಟು ಹೋಗುತ್ತಾರೆ. ನೀವು ಈ ಸಮಯದಲ್ಲಿ ಪಾರಸ ಬುದ್ಧಿವುಳ್ಳವರಾಗುತ್ತಿದ್ದೀರಿ ಮತ್ತೆ ಅದರಲ್ಲಿಯೂ ಸಹ ಕೆಲವರು 20% ಆಗಿದ್ದೀರಿ, ಕೆಲವರು 50% ಆಗಿದ್ದೀರಿ. ಈಗ ರಾಜಧಾನಿಯು ಸ್ಥಾಪನೆ ಆಗುತ್ತಿದೆ ಎಂದು ತಂದೆಯು ತಿಳಿಸುತ್ತಾರೆ. ಈಗ ಮೇಲಿನಿಂದ ಉಳಿದಿರುವ ಆತ್ಮಗಳು ಬರುತ್ತಿದ್ದಾರೆ. ಸರ್ಕಸ್ನಲ್ಲಿಯೂ ಸಹ ಕೆಲವರು ಒಳ್ಳೊಳ್ಳೆಯ ಪಾತ್ರಧಾರಿಗಳೂ ಇರುತ್ತಾರೆ, ಕೆಲವರು ಹಗುರರೂ ಇರುತ್ತಾರೆ. ಇದು ಬೇಹದ್ದಿನ ಮಾತಾಗಿದೆ. ಮಕ್ಕಳಿಗೆ ಎಷ್ಟು ಚೆನ್ನಾಗಿ ತಿಳಿಸಲಾಗುತ್ತದೆ. ಇಲ್ಲಿ ನೀವು ಮಕ್ಕಳು ರಿಫ್ರೆಶ್ ಆಗಲು ಬಂದಿದ್ದೀರಿ, ಗಾಳಿಯನ್ನು ಸೇವಿಸುವುದಕ್ಕೆ ಅಲ್ಲ. ಕೆಲವರು ಕಲ್ಲು ಬುದ್ಧಿಯವರನ್ನು ಕರೆದುಕೊಂಡು ಬರುತ್ತಾರೆಂದರೆ ಅವರು ಪ್ರಾಪಂಚಿಕ ವಾಯುಮಂಡಲದಲ್ಲಿಯೇ ಇರುತ್ತಾರೆ. ಈಗ ನೀವು ಮಕ್ಕಳು ತಂದೆಯ ಶ್ರೀಮತದಿಂದ ಮಾಯೆಯ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರಿ. ಮಾಯೆಯು ನಿಮ್ಮ ಬುದ್ಧಿಯನ್ನು ಪದೇ-ಪದೇ ಓಡಿಸುತ್ತದೆ. ಇಲ್ಲಂತೂ ತಂದೆಯು ಆಕರ್ಷಣೆ ಮಾಡುತ್ತಾರೆ. ತಂದೆ ಎಂದೂ ಯಾವುದೇ ವಿರುದ್ಧವಾದ ಮಾತುಗಳನ್ನು ಮಾತನಾಡುವುದಿಲ್ಲ. ತಂದೆಯು ಸತ್ಯವನ್ನೇ ಹೇಳುತ್ತಾರಲ್ಲವೇ. ನೀವು ಇಲ್ಲಿ ಸತ್ಯ ತಂದೆಯ ಸಂಗದಲ್ಲಿ ಕುಳಿತಿದ್ದೀರಿ. ಉಳಿದವರೆಲ್ಲರೂ ಅಸತ್ಯದಲ್ಲಿ ಇದ್ದಾರೆ. ಅದಕ್ಕೆ ಸತ್ಯ ಸಂಗವೆಂದು ಹೇಳುವುದೂ ಸಹ ದೊಡ್ಡ ತಪ್ಪಾಗುತ್ತದೆ. ನಿಮಗೆ ಗೊತ್ತಿದೆ, ಒಬ್ಬ ತಂದೆಯೇ ಸತ್ಯವಾಗಿದ್ದಾರೆ. ಮನುಷ್ಯರು ಸತ್ಯ ಪರಮಾತ್ಮನ ಪೂಜೆ ಮಾಡುತ್ತಾರೆ, ಆದರೆ ನಾವು ಯಾರ ಪೂಜೆ ಮಾಡುತ್ತಿದ್ದೇವೆ ಎಂದು ಅವರಿಗೆ ತಿಳಿದಿಲ್ಲ, ಅಂದಮೇಲೆ ಅದಕ್ಕೆ ಅಂಧಶ್ರದ್ದೆ ಎಂದು ಹೇಳಲಾಗುತ್ತದೆ. ಆಗಾಖಾನ್ರವರನ್ನು ನೋಡಿ, ಎಷ್ಟೊಂದು ಜನ ಅನುಯಾಯಿಗಳಿದ್ದಾರೆ. ಅವರು ಎಲ್ಲಿಯೇ ಹೋಗುತ್ತಾರೆಂದರೆ ಅವರಿಗೆ ಬಹಳ ಗೌರವ ಸಿಗುತ್ತದೆ. ವಜ್ರಗಳಲ್ಲಿ ತೂಕ ಮಾಡುತ್ತಾರೆ. ಇಲ್ಲವೆಂದರೆ ವಜ್ರಗಳು ಎಂದೂ ತೂಕ ಮಾಡುವುದಿಲ್ಲ. ಸತ್ಯಯುಗದಲ್ಲಿ ವಜ್ರ-ವೈಢೂರ್ಯಗಳಂತೂ ನಿಮಗೆ ಕಲ್ಲಿನ ಸಮಾನವಾಗಿರುತ್ತವೆ. ಅದನ್ನು ಮನೆಗಳನ್ನು ಕಟ್ಟಲು ಉಪಯೋಗಿಸುತ್ತಾರೆ. ಇಲ್ಲಂತೂ ಯಾರೂ ಆ ರೀತಿ ಇಲ್ಲ. ಯಾರೊ ಸಹ ವಜ್ರಗಳನ್ನು ದಾನ ಮಾಡುವವರು ಇಲ್ಲ. ಮನುಷ್ಯರ ಬಳಿ ಬಹಳ ಹಣವಿದೆ, ಆದ್ದರಿಂದ ದಾನ ಮಾಡುತ್ತಾರೆ ಆದರೆ ಆ ದಾನವನ್ನು ಪಾಪಾತ್ಮರಿಗೆ ದಾನ ಮಾಡುವ ಕಾರಣ ಕೊಡುವವರಿಗೂ ಪಾಪವಾಗುತ್ತದೆ. ಅಜಾಮಿಳರಂತಹ ಪಾಪಾತ್ಮರಾಗಿ ಬಿಡುತ್ತಾರೆ. ಇದನ್ನು ಭಗವಂತನೇ ತಿಳಿಸುತ್ತಾರೆ, ಮನುಷ್ಯರಲ್ಲ. ಆದ್ದರಿಂದ ನಿಮ್ಮದು ಯಾವ ಚಿತ್ರಗಳು ಇದೆಯೋ ಅದರ ಮೇಲೆ ಸದಾ ಭಗವಾನುವಾಚ ಎಂದು ಬರೆದಿರಲಿ. ಸದಾ ತ್ರಿಮೂರ್ತಿ ಶಿವಭಗವಾನುವಾಚ ಎಂದು ಬರೆಯಿರಿ. ಕೇವಲ ಭಗವಂತ ಎಂದು ಹೇಳಿದರೂ ಮನುಷ್ಯರು ತಬ್ಬಿಬ್ಬಾಗುತ್ತಾರೆ. ಭಗವಂತ ನಿರಾಕಾರನಾಗಿದ್ದಾರೆ ಆದ್ದರಿಂದ ತ್ರಿಮೂರ್ತಿ ಎಂಬುವುದನ್ನು ಅವಶ್ಯವಾಗಿ ಬರೆಯಬೇಕಾಗಿದೆ. ಅದರಲ್ಲಿ ಕೇವಲ ಶಿವ ತಂದೆಯಲ್ಲಿ ಜೊತೆಗೆ ಬ್ರಹ್ಮಾ-ವಿಷ್ಣು-ಶಂಕರ ಎಂಬ ಮೂರು ಹೆಸರಿದೆ. ಬ್ರಹ್ಮಾ ದೇವತಾಯ ನಮಃ ಮತ್ತೆ ಅವರನ್ನು ಗುರು ಎಂದು ಹೇಳುತ್ತಾರೆ. ಶಿವ-ಶಂಕರ ಒಂದೇ ಎಂದು ಹೇಳಿ ಬಿಡುತ್ತಾರೆ. ಶಂಕರನು ಹೇಗೆ ಜ್ಞಾನ ಕೊಡುತ್ತಾರೆ! ಅಮರ ಕಥೆಯು ಇದೆ, ತಾವೆಲ್ಲರೂ ಪಾರ್ವತಿಯರು ಆಗಿದ್ದೀರಿ, ತಂದೆಯು ತಾವೆಲ್ಲಾ ಮಕ್ಕಳಿಗೆ ಆತ್ಮ ಎಂದು ತಿಳಿದು ಜ್ಞಾನವನ್ನು ಕೊಡುತ್ತಾರೆ. ಭಕ್ತಿಯ ಫಲವನ್ನು ಭಗವಂತನೇ ಕೊಡುತ್ತಾರೆ. ಒಬ್ಬರೇ ಶಿವತಂದೆಯಾಗಿದ್ದಾರೆ. ಈಶ್ವರ ಭಗವಂತ ಇತ್ಯಾದಿಯೂ ಅಲ್ಲ. ಶಿವತಂದೆ ಎಂಬ ಹೆಸರೂ ಬಹಳ ಮಧುರವಾಗಿದೆ. ಮಧುರ ಮಕ್ಕಳೇ ಎಂದು ಸ್ವಯಂ ತಂದೆಯೇ ಹೇಳುತ್ತಾರೆಂದರೆ ಬಾಬಾ ಆಗಿದ್ದಾರಲ್ಲವೇ! ಆತ್ಮಗಳಿಗೆ ಸಂಸ್ಕಾರವನ್ನು ತುಂಬಿಸಲಾಗುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಆತ್ಮವು ನಿರ್ಲೇಪವಲ್ಲ. ನಿರ್ಲೇಪವಾಗಿದ್ದರೆ ಪತಿತ ಹೇಗಾಗುತ್ತದೆ! ಅವಶ್ಯವಾಗಿ ಲೇಪ-ಚೇಪವಿದೆ. ಅದರಿಂದಲೇ ಪತಿತ ಆಗುತ್ತದೆ. ಭ್ರಷ್ಟಾಚಾರಿಗಳೆಂದು ಹೇಳುತ್ತಾರೆ. ದೇವತೆಗಳು ಶ್ರೇಷ್ಠಾಚಾರಿಗಳು. ತಾವು ಸರ್ವಗುಣ ಸಂಪನ್ನರು, ನಾವು ನೀಚರು, ಪಾಪಿಗಳು ಎಂದು ದೇವತೆಗಳ ಮಹಿಮೆ ಮಾಡುತ್ತಾರೆ, ಆದ್ದರಿಂದ ತಮ್ಮನ್ನು ದೇವತೆಗಳು ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಈಗ ತಂದೆಯು ಕುಳಿತು ಮನುಷ್ಯರನ್ನು ದೇವತೆಗಳನ್ನಾಗಿ ಮಾಡುತ್ತಾರೆ. ಗುರುನಾನಕ್ರ ಗ್ರಂಥದಲ್ಲಿಯೂ ಮಹಿಮೆ ಇದೆ - ಸಿಖ್ಖರು ಸತ್ ಶ್ರೀ ಅಕಾಲ್ ಎಂದು ಹೇಳುತ್ತಾರೆ. ಯಾರು ಅಕಾಲಮೂರ್ತಿ ಆಗಿದ್ದಾರೋ ಅವರು ಸತ್ಯ-ಸದ್ಗುರು ಆಗಿದ್ದಾರೆ ಅಂದಾಗ ಅವರೊಬ್ಬರನ್ನೇ ಒಪ್ಪಬೇಕು. ಹೇಳುವುದು ಒಂದು ಮತ್ತು ಮಾಡುವುದೇ ಇನ್ನೊಂದು. ಅರ್ಥವೇನನ್ನೂ ತಿಳಿದಿಲ್ಲ. ಈಗ ತಂದೆ ಯಾರು ಸದ್ಗುರು ಆಗಿದ್ದಾರೆ, ಅಕಾಲ ಮೂರ್ತಿ ಆಗಿದ್ದಾರೆ ಅವರೇ ಸ್ವಯಂ ತಿಳಿಸುತ್ತಾರೆ. ನಿಮ್ಮಲ್ಲಿಯೂ ನಂಬರವಾರ್ ಇದ್ದಾರೆ, ಕೆಲವರು ಸನ್ಮುಖದಲ್ಲಿ ಕುಳಿತಿದ್ದರೂ ಸಹ ಏನನ್ನೂ ತಿಳಿದುಕೊಳ್ಳುವುದಿಲ್ಲ. ಕೆಲವರು ಇಲ್ಲಿಂದ ಹೊರಗೆ ಹೋದರೆ ಸಮಾಪ್ತಿ ಆಗಿ ಬಿಡುತ್ತಾರೆ. ಮಕ್ಕಳೇ ಎಂದೂ ಸಹ ಲೌಕಿಕದ ಅಲ್ಲ-ಸಲ್ಲದ ಮಾತುಗಳನ್ನು ಕೇಳಬೇಡಿ ಎಂದು ತಂದೆಯೂ ಸಹ ನಿಷೇಧಿಸುತ್ತಾರೆ. ಕೆಲವರಂತೂ ಇಂತಹ ಮಾತುಗಳನ್ನು ಬಹಳ ಖುಷಿಯಿಂದ ಕೇಳುತ್ತಾರೆ ಮತ್ತು ಹೇಳುತ್ತಾರೆ. ತಂದೆಯ ಮಹಾವಾಕ್ಯಗಳನ್ನೇ ಮರೆತು ಹೋಗುತ್ತಾರೆ. ವಾಸ್ತವದಲ್ಲಿ ಯಾರು ಒಳ್ಳೆಯ ಮಕ್ಕಳಿದ್ದಾರೋ ಅವರ ತಮ್ಮ ಸೇವಾ ಕರ್ತವ್ಯವನ್ನು ಮುಗಿಸಿ ಮತ್ತು ತಮ್ಮ ಮಸ್ತಿಯಲ್ಲಿ ಇರುತ್ತಾರೆ. ಕೃಷ್ಣ ಮತ್ತು ಕ್ರಿಶ್ಚಿಯನ್ನ ಬಹಳ ಒಳ್ಳೆಯ ಸಂಬಂಧವಿದೆ ಎಂದು ತಂದೆಯು ತಿಳಿಸುತ್ತಾರೆ. ಕೃಷ್ಣನದ್ದು ರಾಜಧಾನಿ ಇರುತ್ತದೆಯಲ್ಲವೇ. ನಂತರ ಲಕ್ಷ್ಮೀ-ನಾರಾಯಣ ಎಂಬ ಹೆಸರು ಬರುತ್ತದೆ. ವೈಕುಂಠ ಎಂದು ಹೇಳಿದ ತಕ್ಷಣ ಕೃಷ್ಣನ ಹೆಸರು ನೆನಪಿಗೆ ಬರುತ್ತದೆ, ಲಕ್ಷ್ಮೀ-ನಾರಾಯಣರ ಹೆಸರು ನೆನಪಿಗೆ ಬರುವುದಿಲ್ಲ ಏಕೆಂದರೆ ಕೃಷ್ಣ ಚಿಕ್ಕ ಮಗು ಆಗಿದ್ದಾನೆ, ಚಿಕ್ಕ ಮಗು ಪವಿತ್ರವಾಗಿರುತ್ತದೆ. ಮಕ್ಕಳು ಹೇಗೆ ಜನಿಸುತ್ತಾರೆ, ಪರಿಚಾರಿಕೆಯರು ನಿಂತಿರುತ್ತಾರೆ ತಕ್ಷಣ ಎತ್ತಿಕೊಳ್ಳುತ್ತಾರೆ ಸಂಭಾಲನೆ ಮಾಡುತ್ತಾರೆ, ಇದನ್ನೂ ಸಹ ನೀವು ಸಾಕ್ಷಾತ್ಕಾರದಲ್ಲಿ ನೋಡಿದ್ದೀರಿ. ಬಾಲ್ಯ, ಯವ್ವನ, ವೃದ್ಧ ಬೇರೆ-ಬೇರೆ ಆಗಿ ಪಾತ್ರವನ್ನು ಅಭಿನಯಿಸಲಾಗುತ್ತದೆ. ಏನಾಯಿತು ಅದು ಡ್ರಾಮ ಆಗಿದೆ. ಅದರಲ್ಲಿ ಏನೂ ಸಂಕಲ್ಪ ನಡೆಯುವುದಿಲ್ಲ. ಇದಂತೂ ನಾಟಕವು ಮಾಡಲ್ಪಟ್ಟಿದೆಯಲ್ಲವೇ. ನಾಟಕದ ಯೋಜನೆ ಅನುಸಾರ ನಮ್ಮ ಪಾತ್ರವೂ ನಡೆಯುತ್ತಿದೆ. ಮಾಯೆಯ ಪ್ರವೇಶತೆಯು ಆಗುತ್ತದೆ ಮತ್ತು ತಂದೆಯ ಪ್ರವೇಶತೆಯು ಆಗುತ್ತದೆ. ಕೆಲವರು ರಾವಣನ ಮತದಂತೆ, ಇನ್ನೂ ಕೆಲವರು ತಂದೆಯ ಮತದಂತೆ ನಡೆಯುತ್ತಾರೆ. ರಾವಣ ಯಾರು? ಎಂದಾದರೂ ನೋಡಿದ್ದೀರಾ? ಕೇವಲ ಚಿತ್ರವನ್ನು ನೋಡಿದ್ದೀರಿ. ಶಿವ ತಂದೆಗಂತೂ ಈ ಜ್ಯೋತಿ ಸ್ವರೂಪವಾದರೂ ಇದೆ ಆದರೆ ರಾವಣನಿಗೆ ರೂಪವೇ ಇಲ್ಲ. ಪಂಚವಿಕಾರ ರೂಪಿ ಭೂತವು ಯಾವಾಗ ಬಂದು ಪ್ರವೇಶ ಮಾಡುತ್ತದೆಯೋ ಆಗ ರಾವಣನೆಂದು ಹೇಳಲಾಗುತ್ತದೆ. ಇದು ಭೂತಗಳ ಪ್ರಪಂಚ, ಅಸುರೀ ಪ್ರಪಂಚವಾಗಿದೆ. ನಾವು ಆತ್ಮಗಳು ಈಗ ಸುಧಾರಣೆ ಆಗುತ್ತಾ ಹೋಗುತ್ತಿದ್ದೇವೆ ಎಂದು ನಿಮಗೆ ಗೊತ್ತಿದೆ. ಇಲ್ಲಂತೂ ಶರೀರವು ಆಸುರಿ ಶರೀರ ಆಗಿದೆ. ಆತ್ಮವು ಸುಧಾರಣೆ ಆಗುತ್ತಾ-ಆಗುತ್ತಾ ಪಾವನ ಆಗಿ ಬಿಡುತ್ತದೆ ಮತ್ತೆ ಈ ಶರೀರವನ್ನು ಬಿಟ್ಟು ಬಿಡುತ್ತೀರಿ ನಂತರ ನಿಮಗೆ ಸತೋಪ್ರಧಾನ ಶರೀರವು ಸಿಗುತ್ತದೆ. ಕಂಚನ ಕಾಯವು ಸಿಗುತ್ತದೆ. ಅದೂ ಸಹ ಯಾವಾಗ ಸಿಗುತ್ತದೆ? ಆತ್ಮವು ಕಂಚನವಾದಾಗ ಸಿಗುತ್ತದೆ. ಹೇಗೆ ಚಿನ್ನವು ಶುದ್ದವಾಗಿದ್ದರೆ ಆಭರಣಗಳು ಶುದ್ಧ ಆಗುತ್ತವೆ. ಚಿನ್ನದಲ್ಲಿ ಬೆರೆಕೆಯನ್ನು ಹಾಕುತ್ತಾರೆ. ಈಗ ನೀವು ಮಕ್ಕಳ ಬುದ್ಧಿಯಲ್ಲಿ ಆದಿ-ಮಧ್ಯ-ಅಂತ್ಯದ ಜ್ಞಾನವು ತಿರುಗುತ್ತಿರುತ್ತದೆ. ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ. ಋಷಿ-ಮುನಿಗಳು ಎಲ್ಲರೂ ಸಹ ನೇತಿ-ನೇತಿ (ಗೊತ್ತಿಲ್ಲ-ಗೊತ್ತಿಲ್ಲ) ಎಂದು ಹೇಳಿ ಹೋದರು ಎಂದು ಹೇಳುತ್ತಾರೆ. ನಾವು ಹೇಳುತ್ತೇವೆ ಈ ಲಕ್ಷ್ಮೀ-ನಾರಾಯಣರೊಂದಿಗೆ ಕೇಳಿದರೆ ಇವರೂ ಸಹ ನೇತಿ-ನೇತಿ ಎಂದು ಹೇಳುತ್ತಾರೆ ಆದರೆ ಇವರೊಂದಿಗೆ ಕೇಳಲಾಗುವುದಿಲ್ಲ. ಕೇಳುವವರು ಯಾರು? ಗುರುಗಳೊಂದಿಗೆ ಕೇಳಲಾಗುತ್ತದೆ - ನೀವು ಅವರೊಂದಿಗೆ ಈ ಪ್ರಶ್ನೆಗಳನ್ನು ಮಾಡಬಹುದು, ನೀವು ತಿಳಿಸಿಕೊಡಲು ಎಷ್ಟು ತಲೆ ಕೆಡಿಸಿಕೊಳ್ಳುತ್ತೀರಿ, ಗಂಟಲು ಕಟ್ಟಿ ಬಿಡುತ್ತದೆ, ಯಾರು ತಿಳಿದುಕೊಳ್ಳುತ್ತಾರೋ ಅಂತಹ ಮಕ್ಕಳಿಗೆ ತಂದೆಯು ತಿಳಿಸುತ್ತಾರಲ್ಲವೇ. ಅನ್ಯರ ಜೊತೆ ವ್ಯರ್ಥವಾಗಿ ತಲೆ ಕೆಡಿಸಿಕೊಳ್ಳುತ್ತಾರೆಯೇ! ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
1. ಸೇವಾ ಕರ್ತವ್ಯವನ್ನು ಮುಗಿಸಿ ನಂತರ ತಮ್ಮ ಮಸ್ತಿಯಲ್ಲಿ ಇರಬೇಕಾಗಿದೆ. ವ್ಯರ್ಥ ಮಾತುಗಳನ್ನು ಕೇಳಬಾರದು, ಹೇಳಲೂಬಾರದು, ಒಬ್ಬ ತಂದೆಯ ಮಹಾವಾಕ್ಯಗಳನ್ನೇ ಸ್ಮೃತಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ, ಅವುಗಳನ್ನು ಮರೆಯಬಾರದು.

2. ಸದಾ ಖುಷಿ ಇರಲಿ, ರಚಯಿತ ಮತ್ತು ರಚನೆಯ ಜ್ಞಾನವು ಬುದ್ಧಿಯಲ್ಲಿ ತಿರುಗುತ್ತಿರಲಿ ಅರ್ಥಾತ್ ಅದರ ಸ್ಮರಣೆಯೇ ನಡೆಯುತ್ತಿರಲಿ. ಯಾವುದೇ ಮಾತಿನಲ್ಲಿ ಸಂಕಲ್ಪವು ನಡೆಯಬಾರದು, ಅದಕ್ಕಾಗಿ ನಾಟಕವನ್ನು ಚೆನ್ನಾಗಿ ಅರಿತುಕೊಂಡು ಪಾತ್ರವನ್ನು ಅಭಿನಯಿಸಬೇಕಾಗಿದೆ.


ವರದಾನ:
ದಾತಾನ ಕೊಡುಗೆಯನ್ನು ಸ್ಮೃತಿಯಲ್ಲಿಡುತ್ತಾ ಸರ್ವ ಸೆಳೆತಗಳಿಂದ ಮುಕ್ತರಾಗಿರುವಂತಹ, ಆಕರ್ಷಣಾ ಮುಕ್ತ ಭವ.

ಕೆಲವು ಮಕ್ಕಳು ಹೇಳುತ್ತಾರೆ ನನಗೆ ಇವರ ಜೊತೆ ಯಾವುದೇ ಸೆಳೆತ ಇಲ್ಲ, ಆದರೆ ಇವರ ಈ ಗುಣ ಬಹಳ ಒಳ್ಳೆಯದಿದೆ ಅಥವಾ ಇವರಲ್ಲಿ ಸೇವೆಯ ವಿಶೇಷತೆ ಬಹಳಯಿದೆ. ಆದರೆ ಯಾವುದೇ ವ್ಯಕ್ತಿ ಅಥವಾ ವೈಭವದ ಕಡೆ ಪದೇ-ಪದೇ ಸಂಕಲ್ಪ ಹೋಗುವುದೂ ಸಹಾ ಆಕರ್ಷಣೆಯಾಗಿದೆ. ಯಾರದೇ ವಿಶೇಷತೆಯನ್ನು ನೋಡುತ್ತಾ, ಗುಣವನ್ನು ಅಥವಾ ಸೇವೆಯನ್ನು ನೋಡುತ್ತಾ ದಾತಾನನ್ನು ಮರೆಯಬೇಡಿ.

ಸ್ಲೋಗನ್:
ಇಂತಹ ಆತ್ಮೀಯ ಸಮಾಜ ಸೇವಕರಾಗಿ ಯಾರು ಅಲೆದಾಡುತ್ತಿರುವ ಆತ್ಮಗಳಿಗೆ ಆಶ್ರಯ ಕೊಡಿ, ಭಗವಂತನ ಜೊತೆ ಮಿಲನ ಮಾಡಿಸಿ.