03.06.22         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಇದು ಸ್ಮಶಾನ ಮತ್ತು ಸ್ವರ್ಗದ ಆಟವಾಗಿದೆ, ಈ ಸಮಯದಲ್ಲಿ ಸ್ಮಶಾನವಿದೆ ನಂತರ ಇದೇ ಸ್ವರ್ಗವಾಗುತ್ತದೆ - ನೀವು ಈ ಸ್ಮಶಾನದೊಂದಿಗೆ ಮನಸ್ಸನ್ನಿಡಬಾರದು

ಪ್ರಶ್ನೆ:
ಮನುಷ್ಯರು ಯಾವ ಒಂದು ಮಾತನ್ನು ತಿಳಿದುಕೊಂಡರೆ ಎಲ್ಲಾ ಸಂಶಯಗಳು ದೂರವಾಗಿ ಬಿಡುತ್ತವೆ?

ಉತ್ತರ:
ತಂದೆಯು ಯಾರಾಗಿದ್ದಾರೆ, ಅವರು ಹೇಗೆ ಬರುತ್ತಾರೆ - ಈ ಮಾತನ್ನು ಅರಿತುಕೊಂಡರೆ ಎಲ್ಲಾ ಸಂಶಯಗಳು ದೂರವಾಗಿ ಬಿಡುತ್ತವೆ. ಎಲ್ಲಿಯ ತನಕ ತಂದೆಯನ್ನು ತಿಳಿಯುವುದಿಲ್ಲ ಅಲ್ಲಿಯ ತನಕವೂ ಸಂಶಯವು ದೂರವಾಗಲು ಸಾಧ್ಯವಿಲ್ಲ. ನಿಶ್ಚಯ ಬುದ್ಧಿಯವರಾಗುವುದರಿಂದ ವಿಜಯಮಾಲೆಯಲ್ಲಿ ಬಂದು ಬಿಡುತ್ತೀರಿ ಆದರೆ ಒಂದೊಂದು ಮಾತಿನಲ್ಲಿ ಸೆಕೆಂಡಿನಲ್ಲಿ ಪೂರ್ಣ ನಿಶ್ಚಯವಾಗಬೇಕು.

ಗೀತೆ:
ಆಕಾಶ ಸಿಂಹಾಸನವನ್ನು ಬಿಟ್ಟು ಬಾ ...

ಓಂ ಶಾಂತಿ.
ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ ಇವರು ಬೇಹದ್ದಿನ ಆತ್ಮಿಕ ತಂದೆಯಾಗಿದ್ದಾರೆ. ಆತ್ಮಗಳೆಲ್ಲರೂ ಅವಶ್ಯವಾಗಿ ರೂಪವನ್ನು ಬದಲಾಯಿಸುತ್ತಾರೆ. ನಿರಾಕಾರದಿಂದ ಸಾಕಾರದಲ್ಲಿ ಕರ್ಮಕ್ಷೇತ್ರದಲ್ಲಿ ಪಾತ್ರವನ್ನು ಅಭಿನಯಿಸಲು ಬರುತ್ತಾರೆ. ಮಕ್ಕಳು ಹೇಳುತ್ತಾರೆ - ಬಾಬಾ, ನೀವೂ ಸಹ ನಮ್ಮ ತರಹ ರೂಪವನ್ನು ಬದಲಾಯಿಸಿ. ಅವಶ್ಯವಾಗಿ ತಂದೆಯು ಸಾಕಾರ ರೂಪವನ್ನು ಧಾರಣೆ ಮಾಡಿಯೇ ಜ್ಞಾನವನ್ನು ಕೊಡುವರಲ್ಲವೇ. ಮನುಷ್ಯನ ರೂಪವನ್ನೇ ತೆಗೆದುಕೊಳ್ಳುತ್ತಾರೆ! ಮಕ್ಕಳು ತಿಳಿದುಕೊಂಡಿದ್ದೀರಿ- ನಾವು ನಿರಾಕಾರ ಆಗಿದ್ದೇವೆ ನಂತರ ಸಾಕಾರಿಯಾಗುತ್ತೇವೆ. ಅದು ನಿರಾಕಾರಿ ಪ್ರಪಂಚವಾಗಿದೆ. ಇಲ್ಲಿ ತಂದೆಯೇ ಕುಳಿತು ತಿಳಿಸುತ್ತಾರೆ ಮಕ್ಕಳೇ ನೀವು ನಿಮ್ಮ 84 ಜನ್ಮಗಳ ಕಥೆಯನ್ನು ಅರಿತುಕೊಂಡಿಲ್ಲ. ನಾನು ಇವರಲ್ಲಿ (ಬ್ರಹ್ಮಾ) ಪ್ರವೇಶ ಮಾಡಿ ಇವರಿಗೆ ತಿಳಿಸುತ್ತಿದ್ದೇನೆ. ಇದನ್ನೂ ಅರಿತುಕೊಂಡಿಲ್ಲ ಅಲ್ಲವೇ. ಕೃಷ್ಣನಂತೂ ಸತ್ಯಯುಗದ ರಾಜಕುಮಾರನಾಗಿದ್ದಾರೆ ಆದ್ದರಿಂದ ತಂದೆಯೇ ಈ ಪತಿತ ಪ್ರಪಂಚದಲ್ಲಿ, ಪತಿತ ಶರೀರದಲ್ಲಿ ಬರಬೇಕಾಗುತ್ತದೆ. ಕೃಷ್ಣನು ಸುಂದರನಾಗಿದ್ದ, ನಂತರ ಹೇಗೆ ಕಪ್ಪಾದನು? ಇದನ್ನು ಯಾರೂ ತಿಳಿದುಕೊಂಡಿಲ್ಲ. ಸರ್ಪವು ಕಚ್ಚಿತೆಂದು ಹೇಳುತ್ತಾರೆ. ವಾಸ್ತವದಲ್ಲಿ ಇದು ಪಂಚ ವಿಕಾರಗಳ ಮಾತಾಗಿದೆ. ಕಾಮ ಚಿತೆಯ ಮೇಲೆ ಕುಳಿತುಕೊಳ್ಳುವುದರಿಂದ ಕಪ್ಪಾಗಿ ಬಿಡುತ್ತಾರೆ. ಕೃಷ್ಣನನ್ನು ಶ್ಯಾಮ-ಸುಂದರ ಎಂದು ಹೇಳುತ್ತಾರೆ. ನನಗಂತೂ ನನ್ನದೇ ಆದ ಶರೀರವಿಲ್ಲ, ನಾನು ಶ್ಯಾಮ ಅಥವಾ ಸುಂದರನಾಗಲು ಹೇಗೆ ಸಾಧ್ಯ! ನಾನು ಸದಾ ಪಾವನನಾಗಿದ್ದೇನೆ. ನಾನು ಕಲ್ಪ-ಕಲ್ಪವೂ ಸಂಗಮಯುಗದಲ್ಲಿಯೇ ಬರುತ್ತೇನೆ. ಯಾವಾಗ ಕಲಿಯುಗದ ಅಂತ್ಯ, ಸತ್ಯಯುಗದ ಆದಿಯಾಗುತ್ತದೆ ಆಗಲೇ ನಾನು ಬರಬೇಕಾಗುತ್ತದೆ. ನಾನೇ ಬಂದು ಸ್ವರ್ಗದ ಸ್ಥಾಪನೆ ಮಾಡಬೇಕಾಗಿದೆ. ಸತ್ಯಯುಗವು ಸುಖಧಾಮವಾಗಿದೆ, ಕಲಿಯುಗವು ದುಃಖಧಾಮವಾಗಿದೆ. ಈ ಸಮಯದಲ್ಲಿ ಎಲ್ಲಾ ಮನುಷ್ಯ ಮಾತ್ರರು ಪತಿತರಾಗಿದ್ದಾರೆ. ಸತ್ಯಯುಗದ ಲಕ್ಷ್ಮೀ-ನಾರಾಯಣ, ಮಹಾರಾಜ-ಮಹಾರಾಣಿಯ ಆಡಳಿತವನ್ನು ಭ್ರಷ್ಟಾಚಾರಿ ಎಂದು ಹೇಳುವುದಿಲ್ಲ ಆದರೆ ಇಲ್ಲಿ ಎಲ್ಲರೂ ಪತಿತರಾಗಿದ್ದಾರೆ. ಭಾರತವು ಸ್ವರ್ಗವಾಗಿದ್ದಾಗ ದೇವೀ ದೇವತೆಗಳ ರಾಜ್ಯವಿತ್ತು, ಒಂದೇ ಧರ್ಮವಿತ್ತು. ಸಂಪೂರ್ಣ ಪಾವನ ಶ್ರೇಷ್ಠಾಚಾರಿಗಳಾಗಿದ್ದರು. ಭ್ರಷ್ಟಾಚಾರಿಗಳು ಶ್ರೇಷ್ಠಾಚಾರಿಗಳ ಪೂಜೆ ಮಾಡುತ್ತಾರೆ. ಸನ್ಯಾಸಿಗಳು ಪವಿತ್ರರಾಗುತ್ತಾರೆಂದರೆ ಅಪವಿತ್ರರು ಅವರಿಗೆ ತಲೆ ಬಾಗಿಸುತ್ತಾರೆ. ಸನ್ಯಾಸಿಗಳನ್ನು ಗೃಹಸ್ಥಿಗಳು ಸ್ವಲ್ಪವೂ ಅನುಕರಣೆ ಮಾಡುವುದಿಲ್ಲ. ನಾನು ಇಂತಹ ಸನ್ಯಾಸಿಯ ಅನುಯಾಯಿಯಾಗಿದ್ದೇನೆ ಎಂದು ಕೇವಲ ಹೇಳುತ್ತಾರಷ್ಟೆ. ಅನುಯಾಯಿಯಾಗಿದ್ದೇನೆಂದು ಹೇಳುತ್ತೀರೆಂದರೆ ಅವರನ್ನು ಅನುಕರಣೆ ಮಾಡಿ. ನೀವೂ ಸಹ ಸನ್ಯಾಸಿಯಾದಾಗ ಅವರ ಅನುಯಾಯಿ ಎಂದು ಹೇಳಬಹುದು. ಗೃಹಸ್ಥಿಗಳು ಅನುಯಾಯಿಗಳಾಗುತ್ತಾರೆ ಆದರೆ ಅವರು ಪವಿತ್ರರಂತೂ ಆಗುವುದಿಲ್ಲ. ಸನ್ಯಾಸಿಗಳೂ ಸಹ ಅವರಿಗೆ ತಿಳಿಸುವುದಿಲ್ಲ, ನಾವು ಅನುಕರಣೆ ಮಾಡುತ್ತಿಲ್ಲವೆಂದು ಅವರೂ ಸಹ ತಿಳಿದುಕೊಳ್ಳುವುದಿಲ್ಲ ಆದರೆ ಇಲ್ಲಿ ಮಾತಾ-ಪಿತಾರನ್ನು ಪೂರ್ಣ ಅನುಕರಣೆ ಮಾಡಬೇಕಾಗಿದೆ. ಗಾಯನವಿದೆ - ಮಾತಾ-ಪಿತಾರನ್ನು ಅನುಕರಣೆ ಮಾಡಿ, ಮತ್ತೆಲ್ಲಾ ಸಂಗಗಳಿಂದ ಬುದ್ಧಿಯೋಗವನ್ನು ತೆಗೆಯಬೇಕಾಗಿದೆ. ಎಲ್ಲ ದೇಹಧಾರಿಗಳಿಂದ ಬುದ್ಧಿಯನ್ನು ತೆಗೆದು ನಾನೊಬ್ಬ ತಂದೆಯೊಂದಿಗೆ ಜೋಡಿಸಿದಾಗ ನನ್ನ ಹತ್ತಿರ ತಲುಪುತ್ತೀರಿ, ಮತ್ತೆ ಸತ್ಯಯುಗದಲ್ಲಿ ಬಂದು ಬಿಡುತ್ತೀರಿ. ನೀವು ಸರ್ವತೋಮುಖರಾಗಿದ್ದೀರಿ (ಆಲ್ರೌಂಡರ್). 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. ಆದಿಯಿಂದ ಅಂತ್ಯದ ತನಕ, ಅಂತ್ಯದಿಂದ ಆದಿಯ ತನಕ ನಮ್ಮ ಆಲ್ರೌಂಡ್ ಪಾತ್ರವು ನಡೆಯುತ್ತದೆ ಎನ್ನುವುದನ್ನು ನೀವು ಅರಿತುಕೊಂಡಿದ್ದೀರಿ. ಅನ್ಯ ಧರ್ಮದವರ ಪಾತ್ರವು ಆದಿಯಿಂದ ಅಂತ್ಯದ ತನಕ ನಡೆಯುವುದಿಲ್ಲ. ಆದಿ ಸನಾತನ ದೇವೀ-ದೇವತಾ ಧರ್ಮವು ಒಂದೇ ಆಗಿದೆ. ಮೊದಮೊದಲು ಸೂರ್ಯವಂಶೀಯರಿದ್ದರು.

ಈಗ ನೀವು ಅರಿತುಕೊಂಡಿದ್ದೀರಿ ನಾವು ಆಲ್ರೌಂಡ್ 84 ಜನ್ಮಗಳ ಚಕ್ರವನ್ನು ಸುತ್ತುತ್ತೇವೆ. ನಂತರದಲ್ಲಿ ಬರುವವರು ಆಲ್ರೌಂಡರ್ ಆಗಲು ಸಾಧ್ಯವಿಲ್ಲ. ಇದು ತಿಳುವಳಿಕೆಯ ಮಾತಾಗಿದೆ. ಇದನ್ನು ತಂದೆಯ ವಿನಃ ಯಾರೂ ತಿಳಿಸಲು ಸಾಧ್ಯವಿಲ್ಲ. ಮೊದಮೊದಲು ದೇವತಾ ಧರ್ಮವಿರುತ್ತದೆ. ಅರ್ಧಕಲ್ಪ ಸೂರ್ಯವಂಶೀ, ಅರ್ಧಕಲ್ಪ ಚಂದ್ರವಂಶೀ ರಾಜ್ಯವು ನಡೆಯುತ್ತದೆ. ಈಗ ಇದು ಅತೀ ಚಿಕ್ಕದಾದ ಯುಗವಾಗಿದೆ. ಇದನ್ನೇ ಸಂಗಮವೆಂದು ಹೇಳುತ್ತಾರೆ, ಕುಂಭ ಎಂತಲೂ ಹೇಳುತ್ತಾರೆ. ತಂದೆಯನ್ನೇ ನೆನಪು ಮಾಡುತ್ತಾರೆ - ಹೇ ಪರಮಪಿತ ಪರಮಾತ್ಮ ಬಂದು ನಾವು ಪತಿತರನ್ನು ಪಾವನ ಮಾಡು. ತಂದೆಯೊಂದಿಗೆ ಮಿಲನ ಮಾಡಲು ಎಷ್ಟೊಂದು ಅಲೆದಾಡುತ್ತಿರುತ್ತಾರೆ. ಯಜ್ಞ-ತಪ, ದಾನ-ಪುಣ್ಯ ಮುಂತಾದವುಗಳನ್ನು ಮಾಡುತ್ತಿರುತ್ತಾರೆ ಆದರೆ ಏನೂ ಲಾಭವಾಗುವುದಿಲ್ಲ. ಈಗ ನೀವು ಅಲೆದಾಡುವಿಕೆಯಿಂದ ಮುಕ್ತರಾಗಿದ್ದೀರಿ. ಅದು ಭಕ್ತಿಕಾಂಡವಾಗಿದೆ, ಇದು ಜ್ಞಾನಕಾಂಡವಾಗಿದೆ. ಭಕ್ತಿಮಾರ್ಗವು ಅರ್ಧಕಲ್ಪ ನಡೆಯುತ್ತದೆ. ಇದು ಜ್ಞಾನ ಮಾರ್ಗವಾಗಿದೆ. ಈ ಸಮಯದಲ್ಲಿ ನಿಮಗೆ ಈ ಹಳೆಯ ಪ್ರಪಂಚದಿಂದ ವೈರಾಗ್ಯವನ್ನು ತರಿಸುತ್ತಾರೆ ಆದ್ದರಿಂದ ನಿಮ್ಮಲ್ಲಿ ಬೇಹದ್ದಿನ ವೈರಾಗ್ಯವಿದೆ ಏಕೆಂದರೆ ಇಡೀ ಪ್ರಪಂಚವು ಸ್ಮಶಾನವಾಗುವುದಿದೆ ಎನ್ನುವುದನ್ನು ನೀವು ತಿಳಿದುಕೊಂಡಿದ್ದೀರಿ. ಈ ಸಮಯದಲ್ಲಿ ಸ್ಮಶಾನವಾಗಿದೆ ಮತ್ತೆ ಇದೇ ಸ್ವರ್ಗವಾಗುತ್ತದೆ. ಇದು ಸ್ಮಶಾನ ಹಾಗೂ ಸ್ವರ್ಗದ ಆಟವಾಗಿದೆ. ತಂದೆಯು ಸ್ವರ್ಗದ ಸ್ಥಾಪನೆ ಮಾಡುತ್ತಾರೆ, ಆದ್ದರಿಂದ ಇವರನ್ನು ನೆನಪು ಮಾಡುತ್ತಾರೆ. ರಾವಣನನ್ನು ಯಾರೂ ನೆನಪು ಮಾಡುವುದಿಲ್ಲ. ಮುಖ್ಯವಾಗಿ ಒಂದು ಮಾತನ್ನು ತಿಳಿದುಕೊಳ್ಳುವುದರಿಂದ ನಂತರ ಎಲ್ಲ ಸಂಶಯಗಳು ದೂರವಾಗುತ್ತವೆ, ಎಲ್ಲಿಯ ತನಕ ತಂದೆಯನ್ನು ಅರಿತುಕೊಳ್ಳುವುದಿಲ್ಲವೋ ಅಲ್ಲಿಯ ತನಕ ಸಂಶಯ ಬುದ್ಧಿಯವರಾಗಿಯೇ ಇರುತ್ತೀರಿ. ಸಂಶಯಬುದ್ಧಿ ವಿನಶ್ಯಂತಿ... ಅವಶ್ಯವಾಗಿ ನಾವೆಲ್ಲಾ ಆತ್ಮಗಳ ತಂದೆಯಾಗಿದ್ದಾರೆ, ಅವರೇ ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ. ನಿಶ್ಚಯದಿಂದಲೇ ವಿಜಯಮಾಲೆಯಲ್ಲಿ ಸುತ್ತುತ್ತೀರಿ. ಒಂದೊಂದು ಅಕ್ಷರದಲ್ಲಿ ಸೆಕೆಂಡಿನಲ್ಲಿ ನಿಶ್ಚಯವಾಗಿ ಬಿಡಬೇಕು. ಬಾಬಾ ಹೇಳುತ್ತಾರೆಂದರೆ ಪೂರ್ಣ ನಿಶ್ಚಯವಾಗಬೇಕಲ್ಲವೇ. ನಿರಾಕಾರನಿಗೆ ತಂದೆ ಎಂದು ಹೇಳಲಾಗುತ್ತದೆ. ಹಾಗೆಯೇ ಗಾಂಧೀಜಿಗೆ ಬಾಪೂಜಿ ಎಂದು ಹೇಳುತ್ತಿದ್ದರು ಆದರೆ ಇಲ್ಲಿ ವಿಶ್ವದ ಬಾಪೂಜಿ ಬೇಕಲ್ಲವೇ. ತಂದೆಯಂತೂ ವಿಶ್ವದ ಪರಮಪಿತನಾಗಿದ್ದಾರೆ. ಅವರು ವಿಶ್ವದ ಪರಮಪಿತನಾಗಿರುವುದರಿಂದ ತುಂಬಾ ದೊಡ್ಡವರಾದರಲ್ಲವೇ, ಅವರಿಂದ ವಿಶ್ವದ ರಾಜ್ಯಭಾಗ್ಯವು ಸಿಗುತ್ತದೆ. ಬ್ರಹ್ಮಾರವರ ಮುಖಾಂತರ ವಿಷ್ಣುವಿನ ರಾಜ್ಯದ ಸ್ಥಾಪನೆಯಾಗುತ್ತದೆ. ನಿಮಗೆ ಗೊತ್ತಿದೆ- ನಾವೇ ವಿಶ್ವದ ಮಾಲೀಕರಾಗಿದ್ದೆವು, ನಾವೇ ದೇವೀ-ದೇವತೆಗಳಾಗಿದ್ದೆವು ನಂತರ ಚಂದ್ರವಂಶೀ, ವೈಶ್ಯವಂಶೀ, ಶೂದ್ರವಂಶೀಯವರಾದೆವು. ಈ ಎಲ್ಲಾ ಮಾತುಗಳನ್ನು ನೀವು ಮಕ್ಕಳೇ ಅರಿತುಕೊಳ್ಳುತ್ತೀರಿ. ತಂದೆಯೂ ಸಹ ಹೇಳುತ್ತಾರೆ - ಮಕ್ಕಳೇ, ಈ ನನ್ನ ಜ್ಞಾನ ಯಜ್ಞದಲ್ಲಿ ಅನೇಕ ವಿಘ್ನಗಳು ಬರುತ್ತವೆ. ಇದು ರುದ್ರ ಜ್ಞಾನ ಯಜ್ಞವಾಗಿದೆ, ಇದರಿಂದ ವಿನಾಶಜ್ವಾಲೆಯು ಪ್ರಜ್ವಲಿತವಾಗುತ್ತದೆ. ಇದರಲ್ಲಿ ಇಡೀ ಹಳೆಯ ಪ್ರಪಂಚವು ಸಮಾಪ್ತಿಯಾಗಿ, ಒಂದು ದೇವತಾ ಧರ್ಮದ ಸ್ಥಾಪನೆಯಾಗುವುದು. ನಿಮಗೆ ತಿಳಿಸಿಕೊಡುವವರು ತಂದೆಯಾಗಿದ್ದಾರೆ, ಅವರು ಸತ್ಯವನ್ನೇ ಹೇಳುತ್ತಾರೆ, ನರನಿಂದ ನಾರಾಯಣರಾಗುವ ಸತ್ಯ ಕಥೆಯನ್ನು ತಿಳಿಸುತ್ತಾರೆ. ಈ ಕಥೆಯನ್ನು ನೀವು ಈಗಲೇ ಕೇಳುತ್ತೀರಿ. ಇದು ಪರಂಪರೆಯಿಂದ ನಡೆದು ಬರುವುದಿಲ್ಲ.

ನೀವು 84 ಜನ್ಮಗಳನ್ನು ಪೂರ್ಣ ಮಾಡಿತ್ತೀರಿ, ನಂತರ ಹೊಸ ಪ್ರಪಂಚದಲ್ಲಿ ನಿಮ್ಮ ರಾಜ್ಯವಿರುವುದು. ಇದು ರಾಜಯೋಗದ ಜ್ಞಾನವಾಗಿದೆ ಎನ್ನುವುದನ್ನು ಈಗ ತಂದೆಯು ತಿಳಿಸುತ್ತಾರೆ. ಸಹಜ ರಾಜಯೋಗದ ಜ್ಞಾನವು ಒಬ್ಬ ಪರಮಪಿತ ಪರಮಾತ್ಮನ ಬಳಿಯೇ ಇದೆ, ಇದನ್ನು ಭಾರತದ ಪ್ರಾಚೀನ ರಾಜಯೋಗವೆಂದು ಹೇಳುತ್ತಾರೆ. ಅವಶ್ಯವಾಗಿ ಕಲಿಯುಗವನ್ನು ಸತ್ಯಯುಗವನ್ನಾಗಿ ಮಾಡಿದ್ದರು. ವಿನಾಶವು ಪ್ರಾರಂಭವಾಗಿತ್ತು, ಅಣ್ವಸ್ತ್ರಗಳ ಮಾತಾಗಿದೆ. ಸತ್ಯಯುಗ ತ್ರೇತಾದಲ್ಲಿ ಯಾವುದೇ ಯುದ್ಧಗಳು ನಡೆಯುವುದಿಲ್ಲ, ನಂತರದಲ್ಲಿ ಪ್ರಾರಂಭವಾಗುತ್ತದೆ. ಈ ಅಣ್ವಸ್ತ್ರಗಳ ಯುದ್ಧವು ಕೊನೆಯ ಯುದ್ಧವಾಗಿದೆ. ಮೊದಲು ಕತ್ತಿಗಳಿಂದ ಯುದ್ಧ ಮಾಡುತ್ತಿದ್ದರು, ನಂತರ ಬಂದೂಕುಗಳನ್ನು ಉಪಯೋಗಿಸಿದರು, ನಂತರ ತೋಪುಗಳನ್ನು ಕಂಡುಹಿಡಿದರು, ಈಗ ಬಾಂಬ್ಸ್ಗಳನ್ನು ತಯಾರಿಸಿದ್ದಾರೆ. ಇಲ್ಲವೆಂದರೆ ಇಡೀ ಪ್ರಪಂಚದ ವಿನಾಶವು ಹೇಗಾಗುತ್ತದೆ. ಮತ್ತೆ ಇದರ ಜೊತೆಗೆ ಪ್ರಾಕೃತಿಕ ಆಪತ್ತುಗಳೂ ಸಹ ಆಗುತ್ತವೆ. ಧಾರಾಕಾರವಾದ ಮಳೆ, ಕ್ಷಾಮ ಇವುಗಳು ಪ್ರಾಕೃತಿಕ ಆಪತ್ತುಗಳಾಗಿವೆ. ಭೂಕಂಪವಾದರೆ ಅದನ್ನು ಪ್ರಾಕೃತಿಕ ಆಪತ್ತು ಎಂದು ಹೇಳುತ್ತಾರೆ. ಅದರಲ್ಲಿ ಯಾರೇನು ಮಾಡಲು ಸಾಧ್ಯ. ಯಾರಾದರೂ ತಮ್ಮ ವಿಮೆ (ಇನ್ಶೂರೆನ್ಸ್) ಮಾಡಿಸಿದ್ದರೆ ಯಾರು ಯಾರಿಗೆ ಕೊಡುತ್ತಾರೆ. ಎಲ್ಲರೂ ಸತ್ತು ಹೋಗುತ್ತಾರೆ, ಯಾರಿಗೂ ಏನೂ ಸಿಗುವುದಿಲ್ಲ. ಈಗ ನೀವು ತಂದೆಯ ಬಳಿ ವಿಮೆ ಮಾಡಬೇಕಾಗಿದೆ. ಈ ವಿಮೆಯನ್ನು ಭಕ್ತಿಯಲ್ಲಿಯೂ ಸಹ ಮಾಡುತ್ತಾರೆ. ಆದರೆ ಅದು ಅರ್ಧ ಕಲ್ಪಕ್ಕೆ ಪ್ರತಿಫಲ ಸಿಗುತ್ತದೆ. ಇಲ್ಲಂತೂ ನೀವು ನೇರವಾಗಿ ವಿಮೆ ಮಾಡುತ್ತೀರಿ. ಯಾರಾದರೂ ಸರ್ವಸ್ವವನ್ನು ವಿಮೆ ಮಾಡುತ್ತಾರೆಂದರೆ ಅವರಿಗೆ ರಾಜ್ಯಭಾಗ್ಯವು ಸಿಕ್ಕಿಬಿಡುವುದು. ಹೇಗೆ ಬಾಬಾ ತಮ್ಮ ಬಗ್ಗೆ ತಿಳಿಸುತ್ತಾರೆ - ಸರ್ವಸ್ವವನ್ನು ತಂದೆಗೆ ವಿಮೆ ಮಾಡಿದರು. ತಂದೆಯ ಹತ್ತಿರ ವಿಮೆ ಮಾಡಿದರೆ ಪೂರ್ಣ ರಾಜ್ಯಭಾಗ್ಯವು ಸಿಗುತ್ತದೆ. ಉಳಿದಂತೆ ಈ ಪ್ರಪಂಚವೇ ಸಮಾಪ್ತಿಯಾಗಿ ಬಿಡುತ್ತದೆ. ಇದು ಮೃತ್ಯುಲೋಕವಾಗಿವೆ. ಕೆಲವರದು ಮಣ್ಣಿನಲ್ಲಿ ಹೋಗುತ್ತದೆ, ಕೆಲವರದು ರಾಜರ ಪಾಲಾಗುತ್ತದೆ.... ಯಾವಾಗಲಾದರೂ ಎಲ್ಲಾದರೂ ಬೆಂಕಿಯು ಬೀಳುತ್ತದೆ ಎಂದರೆ, ಅಥವಾ ಯಾವುದೇ ಆಪತ್ತುಗಳು ಬಂದರೆ ಅಲ್ಲಿ ಕಳ್ಳರು ಲೂಟಿ ಮಾಡುತ್ತಾರೆ. ಈ ಸಮಯವೇ ಅಂತ್ಯದ್ದಾಗಿದೆ ಆದ್ದರಿಂದ ಈಗ ತಂದೆಯನ್ನು ನೆನಪು ಮಾಡಬೇಕಾಗಿದೆ, ಸಹಯೋಗ ಕೊಡಬೇಕಾಗಿದೆ.

ಈ ಸಮಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ. ಅವರು ಪಾವನ ಪ್ರಪಂಚವನ್ನು ಸ್ಥಾಪನೆ ಮಾಡಲು ಸಾಧ್ಯವಿಲ್ಲ. ಇದಂತೂ ತಂದೆಯ ಕರ್ತವ್ಯವಾಗಿದೆ. ತಂದೆಯನ್ನೇ ನಿರಾಕಾರಿ ಪ್ರಪಂಚದಿಂದ ಬಂದುಬಿಡಿ, ಬಂದು ರೂಪವನ್ನು ಧರಿಸಿ ಎಂದು ಕರೆಯುತ್ತಾರೆ ಅಂದಾಗ ತಂದೆಯು ಹೇಳುತ್ತಾರೆ, ನಾನು ಸಾಕಾರದಲ್ಲಿ ಬಂದಿದ್ದೇನೆ, ರೂಪವನ್ನು ಧರಿಸಿದ್ದೇನೆ ಆದರೆ ಯಾವಾಗಲೂ ಇವರಲ್ಲಿ ಇರುವುದಿಲ್ಲ. ದಿನವಿಡೀ ಸವಾರಿ ಮಾಡುವುದಿಲ್ಲ. ಎತ್ತಿನ ಸವಾರಿಯನ್ನು ತೋರಿಸುತ್ತಾರೆ ಹಾಗೂ ಭಾಗ್ಯಶಾಲಿರಥ ಮನುಷ್ಯನನ್ನು ತೋರಿಸುತ್ತಾರೆ. ಈಗ ಇದು ಸತ್ಯವೋ, ಅದು ಸತ್ಯವೋ? ಗೋಶಾಲೆಯನ್ನು ತೋರಿಸುತ್ತಾರಲ್ಲವೇ. ಗೋಮುಖವನ್ನೂ ತೋರಿಸಿದ್ದಾರೆ. ಎತ್ತಿನ ಮೇಲೆ ಸವಾರಿ ಮತ್ತು ನಂತರ ಗೋಮುಖದಿಂದ ಜ್ಞಾನವನ್ನು ಕೊಡುತ್ತಾರೆ. ಈ ಜ್ಞಾನಾಮೃತವು ಬರುತ್ತದೆ. ಅರ್ಥವಿದೆಯಲ್ಲವೇ. ಗೋಮುಖದ ಮಂದಿರವೂ ಇದೆ. ಅನೇಕರು ಹೋಗುತ್ತಾರೆ ಮತ್ತು ಗೋವಿನ ಬಾಯಿಯಿಂದ ಅಮೃತವು ಬರುತ್ತದೆ, ಹೋಗಿ ಅದನ್ನು ಕುಡಿಯಬೇಕು ಎಂದು ತಿಳಿಯುತ್ತಾರೆ. ಏಳುನೂರು ಮೆಟ್ಟಿಲುಗಳಿವೆ. ಎಲ್ಲದಕ್ಕಿಂತ ದೊಡ್ಡ ಗೋಮುಖವು ಇದಾಗಿದೆ. ಅಮರನಾಥದಲ್ಲಿ ಎಷ್ಟೊಂದು ಪರಿಶ್ರಮಪಟ್ಟು ಹೋಗುತ್ತಾರೆ ಆದರೆ ಅಲ್ಲಿ ಏನೂ ಇಲ್ಲ. ಎಲ್ಲವೂ ಸುಳ್ಳಾಗಿದೆ, ಶಂಕರನು ಪಾರ್ವತಿಗೆ ಕಥೆಯನ್ನು ಹೇಳಿದರೆಂದು ತೋರಿಸುತ್ತಾರೆ. ಈಗ ಪಾರ್ವತಿಗೆ ಕಥೆಯನ್ನು ತಿಳಿಸಲು ದುರ್ಗತಿ ಆಗಿದೆಯೇನು? ಮನುಷ್ಯರು ಮುಂತಾದವುಗಳನ್ನು ಕಟ್ಟಿಸುವುದರಲ್ಲಿ ಎಷ್ಟೊಂದು ಖರ್ಚು ಮಾಡುತ್ತಾರೆ. ತಂದೆಯು ಹೇಳುತ್ತಾರೆ- ಖರ್ಚು ಮಾಡುತ್ತಾ-ಮಾಡುತ್ತಾ ನೀವು ಎಲ್ಲಾ ಹಣವನ್ನು ಕಳೆದು ಬಿಟ್ಟಿದ್ದೀರಿ. ನೀವು ಎಷ್ಟು ನಿರ್ವಿಕಾರಿಗಳಾಗಿದ್ದೀರಿ, ಈಗ ವಿಕಾರಿಗಳಾಗಿ ಬಿಟ್ಟಿದ್ದೀರಿ. ಮತ್ತೆ ನಾನು ಬಂದು ನಿರ್ವಿಕಾರಿಗಳನ್ನಾಗಿ ಮಾಡುತ್ತೇನೆ. ತಂದೆಯಿಂದ ನಾವು ಆಸ್ತಿಯನ್ನು ತೆಗೆದುಕೊಳ್ಳಲು ಬಂದಿದ್ದೇವೆ ಎನ್ನುವುದು ನಿಮಗೆ ತಿಳಿದಿದೆ. ನೀವು ಮಕ್ಕಳಿಗೆ ಆಸ್ತಿಯನ್ನು ಕೊಡುತ್ತಿದ್ದೇನೆ. ಭಾರತವು ಪರಮಪಿತ ಪರಮಾತ್ಮನ ಜನ್ಮಸ್ಥಾನವಾಗಿದೆ ಆದ್ದರಿಂದ ಎಲ್ಲದಕ್ಕಿಂತ ದೊಡ್ಡ ತೀರ್ಥಸ್ಥಾನವಾಯಿತಲ್ಲವೇ. ಮತ್ತೆ ಸರ್ವಪತಿತರನ್ನು ತಂದೆಯೇ ಪಾವನರನ್ನಾಗಿ ಮಾಡುತ್ತಾರೆ. ಗೀತೆಯಲ್ಲಿ ಒಂದುವೇಳೆ ತಂದೆಯ ಹೆಸರು ಇದ್ದಿದ್ದರೆ ಎಲ್ಲರೂ ಇಲ್ಲಿ ಬಂದು ಹೂವನ್ನು ಅರ್ಪಿಸುತ್ತಿದ್ದರು. ತಂದೆಯ ವಿನಃ ಎಲ್ಲರಿಗೂ ಸದ್ಗತಿಯನ್ನು ಯಾರು ಕೊಡಲು ಸಾಧ್ಯ? ಭಾರತವೇ ಎಲ್ಲದಕ್ಕಿಂತ ದೊಡ್ಡದಕ್ಕಿಂತ ದೊಡ್ಡ ತೀರ್ಥ ಸ್ಥಾನವಾಗಿದೆ. ಆದರೆ ಯಾರಿಗೂ ತಿಳಿದಿಲ್ಲ. ಇಲ್ಲವೆಂದರೆ ತಂದೆಯ ಮಹಿಮೆ ಹೇಗೆ ಅಪರಮಪಾರವಾಗಿದೆಯೋ ಹಾಗೆಯೇ ಭಾರತದ ಮಹಿಮೆಯು ಅಪರಮಪಾರವಾಗಿದೆ. ಭಾರತವೇ ಸ್ವರ್ಗ ಹಾಗೂ ನರಕವಾಗುತ್ತದೆ. ಸ್ವರ್ಗದ ಮಹಿಮೆಯೂ ಅಪರಮಪಾರವಾಗಿದೆ. ಅಪರಮಪಾರ ನಿಂದನೆಯನ್ನು ನರಕಕ್ಕೆ ಮಾಡುತ್ತಾರೆ.

ನೀವು ಮಕ್ಕಳು ಸತ್ಯ ಖಂಡದ ಮಾಲೀಕರಾಗುತ್ತೀರಿ. ಇಲ್ಲಿ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳಲು ಬಂದಿದ್ದೀರಿ. ತಂದೆಯು ಹೇಳುತ್ತಾರೆ ಮನ್ಮನಾಭವ ಮತ್ಯೆಲ್ಲದರಿಂದ ಬುದ್ಧಿಯೋಗವನ್ನು ತೆಗೆದು ನನ್ನೊಬ್ಬನನ್ನು ನೆನಪು ಮಾಡಿ. ನೆನಪಿನಿಂದಲೇ ಪವಿತ್ರರಾಗುತ್ತೀರಿ. ಜ್ಞಾನದಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ, ಮುಕ್ತಿಯ ಆಸ್ತಿಯು ಎಲ್ಲರಿಗೂ ಸಿಗುತ್ತದೆ ಆದರೆ ಸ್ವರ್ಗದ ಆಸ್ತಿಯನ್ನು ಯಾರು ರಾಜಯೋಗವನ್ನು ಕಲಿಯುತ್ತಾರೆ ಅವರೇ ಪಡೆಯುತ್ತಾರೆ. ಸದ್ಗತಿಯಂತು ಎಲ್ಲರಿಗೂ ಆಗಬೇಕಾಗಿದೆ, ಎಲ್ಲರನ್ನು ಹಿಂತಿರುಗಿ ಕರೆದುಕೊಂಡು ಹೋಗುತ್ತಾರೆ. ತಂದೆಯು ಹೇಳುತ್ತಾರೆ ನಾನು ಕಾಲರ ಕಾಲನಾಗಿದ್ದೇನೆ. ಮಹಾಕಾಲನ ಮಂದಿರವು ಇದೆ. ತಂದೆಯು ತಿಳಿಸುತ್ತಾರೆ ಅಂತ್ಯದಲ್ಲಿ ಯಾವಾಗ ಪ್ರತ್ಯಕ್ಷತೆಯಾಗುತ್ತದೆ, ಆಗ ಇವರಿಗೆ ಅವಶ್ಯವಾಗಿ ತಿಳಿಸುವವರು ಬೇಹದ್ದಿನ ತಂದೆಯಾಗಿದ್ದಾರೆ ಎನ್ನುವುದನ್ನು ಎಲ್ಲರೂ ತಿಳಿಯುತ್ತಾರೆ. ಕಥೆಯನ್ನು ತಿಳಿಸುವವರು ಒಂದುವೇಳೆ ಗೀತೆಯ ಭಗವಂತ ಕೃಷ್ಣನಲ್ಲ, ಶಿವನಾಗಿದ್ದಾರೆ ಎಂದು ಈಗ ಹೇಳಿದರೆ ಇವರಿಗೆ ಬ್ರಹ್ಮಾಕುಮಾರಿಯರ ಭೂತವು ಹಿಡಿದಿದೆ ಎಂದು ಎಲ್ಲರೂ ಹೇಳುತ್ತಾರೆ. ಆದ್ದರಿಂದ ಇವರಿಗೆ ಈಗ ಸಮಯವಲ್ಲ, ಅಂತ್ಯದಲ್ಲಿ ಒಪ್ಪುತ್ತಾರೆ. ಈಗ ಒಪ್ಪುವುರೆಂದರೆ ಎಲ್ಲಾ ಗ್ರಹಚಾರವು ಓಡಿ ಹೋಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಮತ್ತೆಲ್ಲಾ ಸಂಗಗಳನ್ನು ಬಿಟ್ಟು ಮಾತಾ ಪಿತಾರನ್ನು ಪೂರ್ತಿ-ಪೂರ್ತಿ ಅನುಕರಣೆ ಮಾಡಬೇಕಾಗಿದೆ. ಈ ಹಳೆಯ ಪ್ರಪಂಚದೊಂದಿಗೆ ಬೇಹದ್ದಿನ ವೈರಾಗ್ಯವನ್ನಿಟ್ಟು ಇದನ್ನು ಮರೆಯಬೇಕಾಗಿದೆ.

2. ಇದು ಅಂತಿಮ ಸಮಯವಾಗಿದೆ. ಎಲ್ಲವೂ ಸಮಾಪ್ತಿಯಾಗುವ ಮೊದಲೇ ತಮ್ಮ ಬಳಿ ಏನೆಲ್ಲಾ ಇದೆಯೋ ಅದನ್ನು ವಿಮೆ(ಇನ್ಶೂರ್) ಮಾಡಿ ಭವಿಷ್ಯದಲ್ಲಿ ಪೂರ್ಣ ರಾಜ್ಯಭಾಗ್ಯದ ಅಧಿಕಾರವನ್ನು ಪಡೆಯಬೇಕಾಗಿದೆ.

ವರದಾನ:
ಬ್ರಾಹ್ಮಣ ಜೀವನದಲ್ಲಿ ಸದಾ ಖುಷಿಯ ಔಷಧಿಯನ್ನು ಸೇವಿಸುವ ಹಾಗೂ ಸೇವನೆ ಮಾಡಿಸುವಂತಹ ಶ್ರೇಷ್ಠ ಭಾಗ್ಯಶಾಲಿ ಭವ.

ನಾವು ವಿಶ್ವದ ಮಾಲೀಕನ ಬಾಲಕರಿಂದ ಮಾಲೀಕರಾಗುವವರು ಎಂಬ ಈಶ್ವರೀಯ ನಶೆ ಹಾಗೂ ಖುಷಿಯಲ್ಲಿರಿ. ವಾಹ್ ನನ್ನ ಶ್ರೇಷ್ಠ ಭಾಗ್ಯವೇ ಅರ್ಥಾತ್ ಅದೃಷ್ಟವೆ!! ಸದಾ ಇದೇ ಖುಷಿಯ ಉಯ್ಯಾಲೆಯಲ್ಲಿ ತೂಗಾಡುತ್ತಿರಿ. ಸದಾ ಭಾಗ್ಯಶಾಲಿಯೂ ಆಗಿದ್ದೀರಿ ಹಾಗೂ ಸದಾ ಖುಷಿಯ ಔಷಧಿಯನ್ನು ಸೇವಿಸುತ್ತಾ ಹಾಗೂ ಅನ್ಯರಿಗೂ ಸೇವನೆ ಮಾಡಿಸುವವರೂ ಆಗಿದ್ದೀರಿ. ಅನ್ಯರಿಗೂ ಖುಷಿಯ ಮಹಾದಾನವನ್ನು ಕೊಡುತ್ತಾ ಭಾಗ್ಯಶಾಲಿಯನ್ನಾಗಿ ಮಾಡುತ್ತೀರಿ. ತಮ್ಮ ಜೀವನವೇ ಖುಷಿಯಾಗಿರುವುದು, ಖುಷಿಯಾಗಿರುವುದೇ ಜೀವಿಸುವುದಾಗಿದೆ-ಇದೇ ಬ್ರಾಹ್ಮಣ ಜೀವನದಲ್ಲಿ ಶ್ರೇಷ್ಠ ವರದಾನವೂ ಆಗಿದೆ.

ಸ್ಲೋಗನ್:
ಪ್ರತಿಯೊಂದು ಪರಿಸ್ಥಿತಿಯಲ್ಲಿ ಸಹನಶೀಲರಾಗಿ ಇರುತ್ತೀರೆಂದರೆ, ಮೋಜಿನ ಅನುಭವ ಮಾಡುತ್ತಾ ಇರುತ್ತೀರಿ.

ಮಾತೇಶ್ವರಿಯವರ ಅಮೂಲ್ಯ ಮಹಾವಾಕ್ಯ

1. ತಮ್ಮ ಈ ಈಶ್ವರೀಯ ಜ್ಞಾನವು ತಮ್ಮ ಬುದ್ಧಿಯಿಂದ ಹೊರಬಂದಿರುವುದಲ್ಲ, ತಮ್ಮ ಬುದ್ಧಿ ಅಥವಾ ಕಲ್ಪನೆಯೂ ಅಲ್ಲ ಅಥವಾ ತಮ್ಮ ಸಂಕಲ್ಪವೂ ಅಲ್ಲ ಆದರೆ ಈ ಜ್ಞಾನವು ಇಡೀ ಸೃಷ್ಟಿಯ ರಚೈತನ ಮೂಲಕ ಕೇಳಿರುವಂತಹ ಜ್ಞಾನವಾಗಿದೆ. ಹಾಗೂ ಯಾರು ಕೇಳುವುದರ ಜೊತೆ-ಜೊತೆಗೆ ಅನುಭವ ಮತ್ತು ವಿವೇಕದಲ್ಲಿ ತರುತ್ತಾರೆಯೋ, ಅದನ್ನು ತಮಗೆ ಪ್ರತ್ಯಕ್ಷದಲ್ಲಿ ತಿಳಿಸುತ್ತಿದ್ದೇವೆ. ಒಂದುವೇಳೆ ನಮ್ಮ ವಿವೇಕದ ಮಾತಾಗಿದ್ದರೆ, ಕೇವಲ ನಮ್ಮ ಬಳಿಯಿರುತ್ತದೆ ಆದರೆ ಇದಂತು ಪರಮಾತ್ಮನ ಮೂಲಕ ಕೇಳಿಸಿಕೊಂಡು, ವಿವೇಕದಿಂದ ಅನುಭವದಲ್ಲಿ ಧಾರಣೆ ಮಾಡುತ್ತೇವೆ. ಯಾವ ಮಾತು ಧಾರಣೆ ಮಾಡುತ್ತೇವೆಯೋ, ಅದು ಯಾವಾಗ ವಿವೇಕ ಹಾಗೂ ಅನುಭವದಲ್ಲೇನು ಬರುತ್ತದೆಯೋ ಆಗ ಒಪ್ಪಲಾಗುತ್ತದೆ. ಈ ಮಾತನ್ನೂ ಸಹ ನಾವು ಇವರ ಮೂಲಕ ತಿಳಿದುಬಿಟ್ಟಿದ್ದೇವೆ. ಅಂದಮೇಲೆ ಪರಮಾತ್ಮನ ರಚನೆ ಏನಾಗಿದೆ? ಪರಮಾತ್ಮನು ಏನಾಗಿದ್ದಾರೆ? ಉಳಿದಂತೆ ಇದ್ಯಾವುದೂ ನಮ್ಮ ಸಂಕಲ್ಪಗಳ ಮಾತಲ್ಲ, ಒಂದುವೇಳೆ ಆ ರೀತಿ ಆಗಿದ್ದರೆ ನಮ್ಮ ಮನಸ್ಸಿನಲ್ಲಿ ಉತ್ಪನ್ನವಾಗುತ್ತದೆ, ಅದು ನಮ್ಮ ಸಂಕಲ್ಪವಾಯಿತು ಆದ್ದರಿಂದ ನಮಗೇನು ಸ್ವಯಂ ಪರಮಾತ್ಮನ ಮೂಲಕ ಮುಖ್ಯ ಧಾರಣಾಯೋಗ್ಯ ಮಹಾವಾಕ್ಯಗಳು ಸಿಕ್ಕಿದೆಯೋ, ಅದಾಗಿದೆ ಮುಖ್ಯವಾಗಿ ಯೋಗವನ್ನಿಡುವುದು ಆದರೆ ಯೋಗಕ್ಕೆ ಮೊದಲು ಜ್ಞಾನ(ತಿಳುವಳಿಕೆ ಅಥವಾ ಅರಿವು)ವಿರಬೇಕಾಗಿದೆ. ಯೋಗ ಮಾಡುವುದಕ್ಕೆ ಮೊದಲು ಜ್ಞಾನವಿರಬೇಕೆಂದು ಏಕೆ ಹೇಳಲಾಗುತ್ತದೆ? ಮೊದಲು ಚಿಂತನೆ, ಅರಿವು, ಅದರನಂತರ ಯೋಗವನ್ನಿಡುವುದು.... ಸದಾ ಹೀಗೆ ಹೇಳಲಾಗುತ್ತದೆ- ಮೊದಲು ತಿಳುವಳಿಕೆಯಿರಬೇಕು, ಇಲ್ಲದಿದ್ದರೆ ಉಲ್ಟಾಕರ್ಮ ನಡೆಯುತ್ತದೆ ಆದ್ದರಿಂದ ಮೊದಲು ಅವಶ್ಯವಾಗಿ ಜ್ಞಾನವಿರಬೇಕು. ಜ್ಞಾನವು ಒಂದು ಶ್ರೇಷ್ಠವಾದ ಸ್ಥಿತಿಯಾಗಿದೆ, ಅದನ್ನು ತಿಳಿದುಕೊಳ್ಳುವುದಕ್ಕಾಗಿ ಬುದ್ಧಿಯಿರಬೇಕು ಏಕೆಂದರೆ ನಮಗೆ ಸರ್ವಶ್ರೇಷ್ಠ ಪರಮಾತ್ಮನು ಓದಿಸುತ್ತಾರೆ.

2. ಈ ಈಶ್ವರೀಯ ಜ್ಞಾನವು ಒಂದುಕಡೆ ಮುರಿಯುವುದು(ಸಂಬಂಧ), ಮತ್ತೊಂದು ಕಡೆ ಜೋಡಣೆ ಮಾಡುವುದಾಗಿದೆ. ಒಬ್ಬ ಪರಮಾತ್ಮನ ಸಂಗವನ್ನು ಜೋಡಿಸಿರಿ, ಆ ಶುದ್ಧ ಸಂಬಂಧದಿಂದ ನಮ್ಮ ಜ್ಞಾನ ಏಣಿಯು ಮುಂದುವರೆಯುತ್ತದೆ ಏಕೆಂದರೆ ಇದೇ ಸಮಯದಲ್ಲಿ ಆತ್ಮವು ಕರ್ಮಬಂಧನದಲ್ಲಿ ವಶವಾಗಿ ಬಿಟ್ಟಿದೆ. ಅದು ಆದಿಯಲ್ಲಿ ಕರ್ಮಬಂಧನ ರಹಿತವಾಗಿತ್ತು, ನಂತರದಲ್ಲಿ ಕರ್ಮ ಬಂಧನದಲ್ಲಿ ಬಂದಿದೆ, ಈಗ ಮತ್ತೆ ಅದು ತನ್ನ ಕರ್ಮಬಂಧನಗಳಿಂದ ಮುಕ್ತವಾಗಬೇಕಾಗಿದೆ. ಈಗ ತನ್ನ ಕರ್ಮಗಳ ಬಂಧನವೂ ಇಲ್ಲ ಮತ್ತು ಕರ್ಮ ಮಾಡುವುದು ನಮ್ಮ ಕೈಯಲ್ಲಿರಲಿ ಅಂದರೆ ಕರ್ಮದ ಮೇಲೆ ನಿಯಂತ್ರಣವಿದ್ದಾಗ ಕರ್ಮಗಳ ಬಂಧನವು ಬರುವುದಿಲ್ಲ. ಇದಕ್ಕೇ ಜೀವನ್ಮುಕ್ತಿ ಎಂದು ಹೇಳಲಾಗುವುದು. ಹೀಗೆ ಇಲ್ಲದಿದ್ದರೆ ಕರ್ಮಬಂಧನದಲ್ಲಿ, ಚಕ್ರದಲ್ಲಿ ಬರುವುದರಿಂದ ಸದಾಕಾಲಕ್ಕಾಗಿ ಜೀವನ್ಮುಕ್ತಿ ಸಿಗುವುದಿಲ್ಲ. ಈಗಂತು ಆತ್ಮನಿಂದ ಶಕ್ತಿಯು ಹೊರಟು ಹೋಗಿದೆ ಮತ್ತು ಅದರ ನಿಯಂತ್ರಣವಿಲ್ಲದೆ ಕರ್ಮ ನಡೆಯುತ್ತಿದೆ ಆದರೆ ಕರ್ಮವು ಆತ್ಮನಿಂದ ಆಗಬೇಕು ಮತ್ತು ಆತ್ಮದಲ್ಲಿ ಶಕ್ತಿಯು ಬರಬೇಕಾಗಿದೆ ಮತ್ತು ಕರ್ಮವು ಇಂತಹ ಸ್ಥಿತಿಯಲ್ಲಿ ಬರಬೇಕಾಗಿದೆ, ಆ ಕರ್ಮವು ಬಂಧನದಲ್ಲಿರಬಾರದು. ಇಲ್ಲದಿದ್ದರೆ ಮನುಷ್ಯನು ದುಃಖ-ಸುಖದ ಬಂಧನದಲ್ಲಿ ಬಂದುಬಿಡುತ್ತದೆ ಏಕೆಂದರೆ ಅವರನ್ನು ಕರ್ಮವು ಸೆಳೆಯುತ್ತಿರುತ್ತದೆ. ಆತ್ಮನಲ್ಲಿ ಅಂತಹ ಶಕ್ತಿಯು ಬರುತ್ತದೆ, ಯಾವುದರಿಂದ ಕರ್ಮಗಳ ಬಂಧನವಾಗುವುದಿಲ್ಲ- ಇದು ಫಲಿತಾಂಶವಾಗಿದೆ. ಈ ಮಾತುಗಳನ್ನು ಧಾರಣೆ ಮಾಡುವುದರಿಂದ ಸಹಜವಾಗಿ ಬಿಡುತ್ತದೆ, ಈ ಶಾಲೆಯ ಲಕ್ಷ್ಯವೂ ಇದೇ ಆಗಿದೆ. ಉಳಿದಂತ ತಮ್ಮನ್ನು ಯಾವುದೇ ವೇದ-ಶಾಸ್ತ್ರಗಳ ಪಠಣ ಮಾಡಿ ಡಿಗ್ರಿಯನ್ನು ಪಡೆಯಬೇಕಾಗಿರುವುದಿಲ್ಲ. ಆದರೆ ಈ ಈಶ್ವರೀಯ ಜ್ಞಾನದಿಂದ ತಾವು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕಾಗಿದೆ, ಅದಕ್ಕಾಗಿ ಈಶ್ವರನಿಂದ ಆ ಶಕ್ತಿಯನ್ನು ಪಡೆಯಬೇಕಾಗಿದೆ. ಒಳ್ಳೆಯದು. ಓಂ ಶಾಂತಿ.