03.11.19    Avyakt Bapdada     Kannada Murli     02.03.85     Om Shanti     Madhuban


ವರ್ತಮಾನ ಈಶ್ವರೀಯ ಜನ್ಮ-ಅಮೂಲ್ಯವಾದ ಜನ್ಮ


ಇಂದು ರತ್ನಾಗರ ತಂದೆಯು ತನ್ನ ಅಮೂಲ್ಯ ರತ್ನಗಳನ್ನು ನೋಡುತ್ತಿದ್ದಾರೆ. ಇದು ಅಲೌಕಿಕ ಅಮೂಲ್ಯವಾದ ರತ್ನಗಳ ದರ್ಬಾರು(ಸಭೆ) ಆಗಿದೆ. ಒಂದೊಂದು ರತ್ನವು ಅಮೂಲ್ಯವಾಗಿರುವುದಾಗಿದೆ. ವರ್ತಮಾನ ಈ ಸಮಯದ ವಿಶ್ವದ ಸರ್ವ ಆಸ್ತಿ ಅಥವಾ ವಿಶ್ವದ ಸರ್ವ ಖಜಾನೆಗಳನ್ನು ಒಟ್ಟುಗೂಡಿಸಿ, ಅದರ ಅಂತರದಲ್ಲಿ ಒಂದೊಂದು ಈಶ್ವರೀಯ ರತ್ನವು ಹಲವು ಪಟ್ಟು ಅಮೂಲ್ಯವಾದುದಾಗಿದೆ. ತಾವು ಒಂದು ರತ್ನದ ಮುಂದೆ ವಿಶ್ವದ ಸರ್ವ ಖಜಾನೆಗಳೂ ಸಹ ಏನೂ ಇಲ್ಲ. ಇಷ್ಟೊಂದು ಅಮೂಲ್ಯವಾದ ರತ್ನವಾಗಿದ್ದೀರಿ. ಈ ಅಮೂಲ್ಯ ರತ್ನವು ಇಡೀ ಕಲ್ಪದಲ್ಲಿ ಈ ಸಂಗಮಯುಗದಲ್ಲಿ ಅಲ್ಲದೆ ಮತ್ತೆಂದೂ ಸಿಗಲು ಸಾಧ್ಯವಾಗಿದೆ. ಸತ್ಯಯುಗಿ-ದೇವಾತ್ಮನ ಪಾತ್ರವೂ ಈ ಸಂಗಮಯುಗಿ ಈಶ್ವರೀಯ ಅಮೂಲ್ಯ ರತ್ನವಾಗುವ ಪಾತ್ರದ ಮುಂದೆ ಸೆಕೆಂಡ್ ನಂಬರಿನದಾಗಿ ಬಿಡುತ್ತದೆ. ಈಗ ನೀವು ಈಶ್ವರನ ಸಂತಾನರಾಗಿದ್ದೀರಿ, ಸತ್ಯಯುಗದಲ್ಲಿ ದೈವೀ ಸಂತಾನರಾಗುತ್ತೀರಿ. ಹೇಗೆ ಈಶ್ವರನದು ಅತಿ ಶ್ರೇಷ್ಠವಾದ ಹೆಸರಿದೆ, ಮಹಿಮೆಯಿದೆ, ಜನ್ಮವಿದೆ, ಕರ್ಮವಿದೆ, ಹಾಗೆಯೇ ಈಶ್ವರೀಯ ರತ್ನಗಳ ಅಥವಾ ಈಶ್ವರನ ಸಂತಾನ ಆತ್ಮರ ಮೌಲ್ಯವೂ ಸರ್ವ ಶ್ರೇಷ್ಠವಾದುದಾಗಿದೆ. ಈ ಶ್ರೇಷ್ಠ ಮಹಿಮೆಯ ಅಥವಾ ಶ್ರೇಷ್ಠ ಮೌಲ್ಯದ ನೆನಪಾರ್ಥವು ಈಗಲೂ 9 ರತ್ನಗಳ ರೂಪದಲ್ಲಿ ಗಾಯನ ಹಾಗೂ ಪೂಜಿಸಲ್ಪಡಲಾಗುತ್ತದೆ. 9 ರತ್ನಗಳ ಭಿನ್ನ-ಭಿನ್ನ ವಿಘ್ನ ವಿನಾಶಕ ರತ್ನವೆಂದು ಗಾಯನಗೊಳ್ಳುತ್ತದೆ. ಎಂತಹ ವಿಘ್ನವೋ ಅಂತಹ ವಿಶೇಷತೆಯಿರುವ ರತ್ನಗಳ ಬಣ್ಣವನ್ನು ಮಾಡಿ ಧರಿಸುತ್ತಾರೆ ಅಥವಾ ಲಾಕೆಟ್ನಲ್ಲಿ ಇಡುತ್ತಾರೆ ಅಥವಾ ಯಾವುದಾದರೊಂದು ರೂಪದಿಂದ ಆ ರತ್ನವನ್ನು ಮನೆಯಲ್ಲಿ ಇಡುತ್ತಾರೆ. ಈಗ ಅಂತಿಮ ಜನ್ಮದವರೆಗೂ ಸಹ ವಿಘ್ನ ವಿನಾಶಕನ ರೂಪದಲ್ಲಿ, ತಮ್ಮ ನೆನಪಾರ್ಥವನ್ನು ನೋಡುತ್ತಿದ್ದೀರಿ. ನಂಬರ್ವಾರಂತು ಖಂಡಿತವಾಗಿಯೂ ಇದ್ದಾರೆ ಆದರೆ ನಂಬರ್ವಾರ್ ಇದ್ದರೂ ಸಹ ಅಮೂಲ್ಯ ಮತ್ತು ವಿಘ್ನ-ವಿನಾಶಕರಂತು ಎಲ್ಲರೂ ಆಗಿದ್ದಾರೆ. ಇಂದಿಗೂ ಸಹ ಶ್ರೇಷ್ಠ ಸ್ವರೂಪದಿಂದ ತಾವು ರತ್ನಗಳಾದ ಆತ್ಮರ ಸ್ವಮಾನವನ್ನಿಡುತ್ತಾರೆ. ಬಹಳ ಪ್ರೀತಿಯಿಂದ, ಸ್ವಚ್ಛತೆಯಿಂದ ಸಂಭಾಲನೆ ಮಾಡಿಡುತ್ತಾರೆ, ಏಕೆಂದರೆ ತಾವೆಲ್ಲರೂ ಏನೇ ಆಗಿರಬಹುದು, ಭಲೆ ತಮ್ಮನ್ನು ಅಷ್ಟು ಯೋಗ್ಯವಲ್ಲವೆಂದೂ ಸಹ ತಿಳಿಯುತ್ತೀರಿ ಆದರೆ ತಂದೆಯು ತಾವು ಆತ್ಮರನ್ನು ಯೋಗ್ಯರೆಂದು ತಿಳಿದು ತನ್ನವರನ್ನಾಗಿ ಮಾಡಿಕೊಂಡಿದ್ದಾರೆ. ಸ್ವೀಕಾರ ಮಾಡಿದ್ದಾರೆ - "ನೀನು ನನ್ನವನು ನಾನು ನಿನ್ನವನು" ಎಂದು. ಯಾವ ಆತ್ಮದ ಮೇಲೆ ತಂದೆಯ ದೃಷ್ಟಿ ಬಿದ್ದಿತು, ಅವರು ಪ್ರಭುವಿನ ದೃಷ್ಟಿಯ ಕಾರಣದಿಂದ ಅಮೂಲ್ಯವಂತರು ಆಗಿಯೇ ಬಿಡುತ್ತಾರೆ. ಪರಮಾತ್ಮನ ದೃಷ್ಟಿಯ ಕಾರಣ ಈಶ್ವರೀಯ ಸೃಷ್ಟಿಯ, ಈಶ್ವರನ ಸಂಸಾರದ ಶ್ರೇಷ್ಠಾತ್ಮರಾಗಿ ಬಿಡುತ್ತಾರೆ. ಪಾರಸನಾಥನೊಂದಿಗೆ ಸಂಬಂಧದಲ್ಲಿ ಬಂದರೆಂದರೆ ಪಾರಸದ ರಂಗು ರಂಗೇರಿ ಬಿಡುತ್ತದೆ. ಆದ್ದರಿಂದ ಪರಮಾತ್ಮನ ಪ್ರೀತಿಯ ದೃಷ್ಟಿ ಸಿಗುವುದರಿಂದ ಇಡೀ ಕಲ್ಪದಲ್ಲಿ ಭಲೆ ಚೈತನ್ಯ ದೇವಾತ್ಮನ ರೂಪದಲ್ಲಿ, ಭಲೆ ಅರ್ಧ ಕಲ್ಪ ಜಡ ಚಿತ್ರಗಳ ರೂಪದಲ್ಲಿ ಅಥವಾ ಭಿನ್ನ-ಭಿನ್ನ ನೆನಪಾರ್ಥದ ರೂಪದಲ್ಲಿ, ಹೇಗೆ ರತ್ನಗಳ ರೂಪದಲ್ಲಿಯೂ ತಮ್ಮ ನೆನಪಾರ್ಥವಿದೆ, ನಕ್ಷತ್ರಗಳ ರೂಪದಲ್ಲಿಯೂ ತಮ್ಮ ನೆನಪಾರ್ಥವಿದೆ. ಯಾವುದೆಲ್ಲಾ ರೂಪದಲ್ಲಿ ನೆನಪಾರ್ಥವಿದೆ, ಇಡೀ ಕಲ್ಪದಲ್ಲಿ ಸರ್ವರ ಪ್ರಿಯರಾಗಿದ್ದೀರಿ ಏಕೆಂದರೆ ಅವಿನಾಶಿ ಪ್ರೀತಿಯ ಸಾಗರನ ಪ್ರೀತಿಯ ದೃಷ್ಟಿಯು ಇಡೀ ಕಲ್ಪಕ್ಕಾಗಿ ಪ್ರೀತಿಯ ಅಧಿಕಾರಿಯನ್ನಾಗಿ ಮಾಡಿ ಬಿಡುತ್ತದೆ. ಆದ್ದರಿಂದ ಭಕ್ತ ಜನರು ಅರ್ಧ ಗಳಿಗೆ, ಒಂದು ಗಳಿಗೆ ದೃಷ್ಟಿಗಾಗಿ ಚಡಪಡಿಸುತ್ತಾರೆ - ದೃಷ್ಟಿಯಿಂದ ಪರಿವರ್ತನೆಯಾಗಿ ಬಿಡೋಣ ಎಂದು. ಆದ್ದರಿಂದ ಈ ಸಮಯದ ಪ್ರೀತಿಯ ದೃಷ್ಟಿಯು ಅವಿನಾಶಿ ಪ್ರೀತಿಯ ಯೋಗ್ಯರನ್ನಾಗಿ ಮಾಡಿ ಬಿಡುತ್ತದೆ. ಅವಿನಾಶಿ ಪ್ರಾಪ್ತಿಯು ಸ್ವತಹವಾಗಿಯೇ ಆಗಿ ಬಿಡುತ್ತದೆ. ಪ್ರೀತಿಯಿಂದ ನೆನಪು ಮಾಡುತ್ತಾರೆ, ಪ್ರೀತಿಯಿಂದ ಇಡುತ್ತಾರೆ, ಪ್ರೀತಿಯಿಂದ ನೋಡುತ್ತಾರೆ.

ಇನ್ನೊಂದು ಮಾತು - ಸ್ವಚ್ಛತೆ ಅರ್ಥಾತ್ ಪವಿತ್ರತೆ. ನೀವು ಈ ಸಮಯದಲ್ಲಿ ತಂದೆಯ ಮೂಲಕ ಪವಿತ್ರತೆಯ ಜನ್ಮ ಸಿದ್ಧ ಅಧಿಕಾರವನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರಿ. ಪವಿತ್ರತೆಯು ಅಥವಾ ಸ್ವಚ್ಛತೆಯು ಸ್ವಯಂನ ಸ್ವ ಧರ್ಮವೆಂದು ತಿಳಿಯುತ್ತೀರಿ - ಆದ್ದರಿಂದ ಪವಿತ್ರತೆಯನ್ನು ಧಾರಣೆ ಮಾಡಿಕೊಳ್ಳುವುದರ ಕಾರಣ, ಎಲ್ಲಿ ತಮ್ಮ ನೆನಪಾರ್ಥವಾಗುತ್ತದೆಯೋ ಅಲ್ಲಿ ಪವಿತ್ರತೆ ಅಥವಾ ಸ್ವಚ್ಛತೆಯು ಈಗಲೂ ನೆನಪಾರ್ಥದ ರೂಪದಲ್ಲಿ ನಡೆಯುತ್ತಿದೆ. ಮತ್ತು ಅರ್ಧ ಕಲ್ಪವಂತು ಅಲ್ಲಿರುವುದೇ ಪವಿತ್ರ ಪಾಲನೆ, ಪವಿತ್ರ ಪ್ರಪಂಚ. ಹಾಗಾದರೆ ಅರ್ಧ ಕಲ್ಪದಲ್ಲಿ ಪವಿತ್ರತೆಯಿಂದ ಜನ್ಮವಾಗುತ್ತದೆ, ಪವಿತ್ರತೆಯಿಂದ ಪಾಲನೆಯಾಗುವುದು ಮತ್ತು ಅರ್ಧಕಲ್ಪ ಪವಿತ್ರತೆಯಿಂದ ಪೂಜೆಗೊಳ್ಳುವುದಾಗುತ್ತದೆ.

ಮೂರನೇ ಮಾತು - ಬಹಳ ಮನಃಪೂರ್ವಕವಾಗಿದೆ, ಶ್ರೇಷ್ಠವೆಂದು ತಿಳಿದು, ಅಮೂಲ್ಯವೆಂದು ತಿಳಿದು ಸಂಭಾಲನೆ ಮಾಡುತ್ತಾರೆ ಏಕೆಂದರೆ ಈ ಸಮಯದಲ್ಲಿ ಸ್ವಯಂ ಭಗವಂತನು ಮಾತಾಪಿತನ ರೂಪದಿಂದ ತಾವು ಮಕ್ಕಳನ್ನು ಸಂಭಾಲಿಸುತ್ತಾರೆ ಅರ್ಥಾತ್ ಪಾಲನೆ ಮಾಡುತ್ತಾರೆ ಅಂದಮೇಲೆ ಅವಿನಾಶಿ ಪಾಲನೆಯಾಗುವ ಕಾರಣ, ಅವಿನಾಶಿ ಸ್ನೇಹದ ಜೊತೆಗೆ ಸಂಭಾಲನೆ ಮಾಡುವ ಕಾರಣ, ಇಡೀ ಕಲ್ಪದಲ್ಲಿ ಬಹಳ ರಾಯಲ್ಟಿಯಿಂದ(ಗೌರವದಿಂದ) ಸ್ನೇಹದಿಂದ, ಆಧರದಿಂದ ಸಂಭಾಲನೆ ಮಾಡಲಾಗುತ್ತದೆ. ಇಷ್ಟೂ ಪ್ರೀತಿ, ಸ್ವಚ್ಛತೆ, ಪವಿತ್ರತೆ ಮತ್ತು ಸ್ನೇಹದಿಂದ ಸಂಭಾಲನೆ ಮಾಡುವ ಅವಿನಾಶಿ ಪಾತ್ರರಾಗಿ ಬಿಡುತ್ತೀರಿ. ಅಂದಮೇಲೆ ತಿಳಿಯಿತೆ - ತಾವೆಷ್ಟು ಅಮೂಲ್ಯವಾಗಿದ್ದೀರಿ? ಪ್ರತಿಯೊಂದು ರತ್ನದ ಮೌಲ್ಯವೆಷ್ಟಿದೆ! ಆದ್ದರಿಂದ ಇಂದು ರತ್ನಾಗರ ತಂದೆಯು ಪ್ರತಿಯೊಂದು ರತ್ನದ ಮೌಲ್ಯವನ್ನು ನೋಡುತ್ತಿದ್ದರು. ಇಡೀ ಪ್ರಪಂಚದ ಅಕ್ಷೋಣಿ ಆತ್ಮರು ಒಂದು ಕಡೆಯಿದ್ದಾರೆ. ಆದರೆ ತಾವು 5 ಪಾಂಡವರು ಅಕ್ಷೋಣಿಗಿಂತಲೂ ಶಕ್ತಿಶಾಲಿಯಿದ್ದೀರಿ. ಅಕ್ಷೋಣಿ ತಮ್ಮ ಮುಂದೆ ಸಮಾನವೂ ಇಲ್ಲ, ತಾವು ಇಷ್ಟೂ ಶಕ್ತಿಶಾಲಿಯಿದ್ದೀರಿ. ಅಂದಮೇಲೆ ಎಷ್ಟೊಂದು ಮೌಲ್ಯವಂತರಾಗಿ ಬಿಟ್ಟಿರಿ! ಇಷ್ಟೂ ಮೌಲ್ಯವನ್ನು ತಿಳಿದಿದ್ದೀರಿ? ಅಥವಾ ಕೆಲಕೆಲವೊಮ್ಮೆ ತಮ್ಮನ್ನು ತಾವು ಮರೆಯುತ್ತೀರಾ! ಯಾವಾಗ ತಮ್ಮನ್ನು ತಾವು ಮರೆಯುತ್ತೀರೆಂದರೆ ಬೇಸರವಾಗುತ್ತೀರಿ. ತಮ್ಮನ್ನು ತಾವು ಮರೆಯದಿರಿ. ಸದಾ ತಮ್ಮನ್ನು ಅಮೂಲ್ಯವಾದವನೆಂದು ತಿಳಿದುಕೊಂಡು ನಡೆಯಿರಿ. ಆದರೆ ಚಿಕ್ಕದಾದ ತಪ್ಪನ್ನೂ ಸಹ ಮಾಡಬಾರದು. ಅಮೂಲ್ಯವಾಗಿದ್ದೀರಿ, ಆದರೆ ತಂದೆಯ ಜೊತೆಯಿರುವ ಕಾರಣದಿಂದ ಅಮೂಲ್ಯವಾಗಿದ್ದೀರಿ. ತಂದೆಯನ್ನು ಮರೆತು ಕೇವಲ ತಮ್ಮನ್ನು ತಿಳಿಯುತ್ತೀರೆಂದರೂ ತಪ್ಪಾಗಿ ಬಿಡುತ್ತದೆ. ಆ ರೀತಿ ಮಾಡುವವನ್ನು ಮರೆಯಬಾರದು. ಆಗಿ ಬಿಟ್ಟೆವು ಆದರೆ ಮಾಡುವವರು ಜೊತೆಯಾದೆವು, ಇದು ತಿಳಿದುಕೊಳ್ಳುವ ವಿಧಿಯಾಗಿದೆ. ಒಂದುವೇಳೆ ವಿಧಿಯನ್ನೇ ಮರೆತು ಬಿಡುತ್ತೀರೆಂದರೆ ತಿಳುವಳಿಕೆ (ಬುದ್ಧಿ)ಯು, ಬುದ್ಧಿಹೀನತೆಯಲ್ಲಿ ಬದಲಾಗಿ ಬಿಡುತ್ತದೆ. ನಂತರ ನಾನೆನ್ನುವುದು ಬಂದು ಬಿಡುತ್ತದೆ. ವಿಧಿಯನ್ನು ಮರೆಯುವುದರಿಂದ ಸಿದ್ಧಿಯ ಅನುಭವವಾಗುವುದಿಲ್ಲ. ಆದ್ದರಿಂದ ವಿಧಿಪೂರ್ವಕವಾಗಿ ತಮ್ಮನ್ನು ಮೌಲ್ಯವಂತನೆಂದು ತಿಳಿದು, ವಿಶ್ವದ ಪೂರ್ವಜನಾಗಿ ಬಿಡಿ. ನಾನಂತು ಏನೂ ಇಲ್ಲ ಎನ್ನುವ ಬೇಸರವೂ ಇರಬಾರದು. ನಾನೇನೂ ಇಲ್ಲ - ಇದನ್ನೂ ಚಿಂತಿಸಬೇಡಿ, ನಾನೇ ಎಲ್ಲವನ್ನೂ ತಿಳಿದಿರುವವನು - ಹೀಗೂ ತಿಳಿಯಬಾರದು, ಇವೆರಡೂ ತಪ್ಪೇ ಆಗಿವೆ. ನಾನು ಇದ್ದೇನೆ ಆದರೆ ಮಾಡುವವರು ಮಾಡಿದ್ದಾರೆ. ಬಾಬಾ ಎನ್ನುವುದನ್ನು ತೆಗೆದು ಬಿಡುತ್ತೀರಿ, ಆಗ ಪಾಪವಾಗಿ ಬಿಡುತ್ತದೆ. ಬಾಬಾ ಇದ್ದಾರೆಂದರೆ ಪಾಪವಿಲ್ಲ. ಎಲ್ಲಿ ಬಾಬಾ ಹೆಸರಿದೆ, ಅಲ್ಲಿ ಪಾಪದ ಹೆಸರು-ಚಿಹ್ನೆಯೇನೂ ಇಲ್ಲ. ಮತ್ತು ಎಲ್ಲಿ ಪಾಪ ಇದೆ ಅಲ್ಲಿ ಬಾಬಾರ ಹೆಸರು-ಚಿಹ್ನೆಯಿರುವುದಿಲ್ಲ. ತಮ್ಮ ಮೌಲ್ಯವೇನೆಂದು ತಿಳಿಯಿತೆ!

ಭಗವಂತನ ದೃಷ್ಟಿಗೆ ಪಾತ್ರರಾಗಿದ್ದೀರಿ, ಇದು ಸಾಧಾರಣ ಮಾತಲ್ಲ. ಪಾಲನೆಗೆ ಪಾತ್ರರಾಗಿದ್ದೀರಿ. ಅವಿನಾಶಿ ಪವಿತ್ರತೆಯ ಜನ್ಮ-ಸಿದ್ಧ ಅಧಿಕಾರದ ಅಧಿಕಾರಿಯಾಗಿದ್ದೀರಿ. ಆದ್ದರಿಂದ ಜನ್ಮಸಿದ್ಧ ಅಧಿಕಾರವೆಂದಿಗೂ ಕಷ್ಟವೆನಿಸುವುದಿಲ್ಲ. ಸಹಜವಾಗಿ ಪ್ರಾಪ್ತಿಯಾಗುತ್ತದೆ. ಹಾಗೆಯೇ ಸ್ವಯಂ ಅನುಭವಿಯಾಗಿದ್ದೀರಿ- ಯಾರು ಅಧಿಕಾರಿ ಮಕ್ಕಳಿದ್ದಾರೆ, ಅವರಿಗೆ ಪವಿತ್ರತೆಯು ಕಷ್ಟವೆನಿಸುವುದಿಲ್ಲ. ಯಾರಿಗೆ ಪವಿತ್ರತೆಯು ಕಷ್ಟವೆನ್ಸಿತ್ತದೆ, ಅವರು ಹೆಚ್ಚಾಗಿ ಏರುಪೇರಾಗುತ್ತಾರೆ. ಪವಿತ್ರತೆಯ ಸ್ವಧರ್ಮವಿದೆ, ಜನ್ಮಸಿದ್ಧ ಅಧಿಕಾರವಿದೆಯೆಂದರೆ ಸದಾ ಸಹಜವೆನಿಸುತ್ತದೆ. ಪ್ರಪಂಚದವರೂ ಸಹ ಅವರಿಂದ ದೂರ ಓಡುತ್ತಾರೆ, ಅದೂ ಏತಕ್ಕಾಗಿ? ಪವಿತ್ರತೆಯು ಕಷ್ಟವೆನಿಸುತ್ತದೆ. ಯಾರು ಅಧಿಕಾರಿ ಆತ್ಮರಲ್ಲವೋ, ಅವರಿಗೆ ಕಷ್ಟವೇ ಎನಿಸುತ್ತದೆ. ಅಧಿಕಾರಿ ಆತ್ಮರು ಬಂದ ಕೂಡಲೆ ಧೃಡ ಸಂಕಲ್ಪ ಮಾಡುತ್ತಾರೆ- ಪವಿತ್ರತೆಯು ತಂದೆಯ ಅಧಿಕಾರವಾಗಿದೆ ಆದ್ದರಿಂದ ಪವಿತ್ರರಾಗಲೇಬೇಕು. ಹೃದಯವನ್ನು ಪವಿತ್ರತೆಯು ಸದಾ ಆಕರ್ಷಿಸುತ್ತದೆ. ಒಂದುವೇಳೆ ನಡೆಯುತ್ತಾ-ನಡೆಯುತ್ತಾ ಎಲ್ಲಿಯೇ ಮಾಯೆಯು ಪರೀಕ್ಷೆಯನ್ನು ತೆಗೆದುಕೊಳ್ಳುವುದಕ್ಕೂ ಸಹ ಬರುತ್ತದೆ, ಸಂಕಲ್ಪದ ರೂಪದಲ್ಲಾಗಬಹುದು, ಸ್ವಪ್ನದ ರೂಪದಲ್ಲಾಗಬಹುದು, ಅದರಿಂದ ಅಧಿಕಾರಿ ಆತ್ಮರು ಜ್ಞಾನಪೂರ್ಣರಾಗಿರುವ ಕಾರಣದಿಂದ ಗಾಬರಿಗೊಳ್ಳುವುದಿಲ್ಲ. ಆದರೆ ಜ್ಞಾನದ ಶಕ್ತಿಯಿಂದ ಸಂಕಲ್ಪವನ್ನು ಪರಿವರ್ತನೆ ಮಾಡಿ ಬಿಡುತ್ತಾರೆ. ಒಂದು ಸಂಕಲ್ಪದ ಹಿಂದೆ ಅನೇಕ ಸಂಕಲ್ಪಗಳನ್ನು ಉತ್ಪನ್ನ ಮಾಡುವುದಿಲ್ಲ. ಅಂಶವನ್ನು ವಂಶದ ರೂಪದಲ್ಲಿ ತರುವುದಿಲ್ಲ. ಏನಾಯಿತು, ಇದಾಯಿತು..... ಇದು ವಂಶವಾಗಿದೆ. ತಿಳಿಸಿದೆಯಲ್ಲವೆ ಏಕೆ ಎನ್ನುವುದರಿಂದ ಕ್ಯೂ (ಸಾಲು) ನಿಂತು ಬಿಡುತ್ತದೆ. ಈ ವಂಶವನ್ನೇ ಉತ್ಪನ್ನವನ್ನು ಮಾಡಿ ಬಿಡುತ್ತದೆ. ಬಂದಿತು ಮತ್ತು ಸದಾಕಾಲಕ್ಕಾಗಿ ಹೋಯಿತು. ಪರೀಕ್ಷೆ ತೆಗೆದುಕೊಳ್ಳಲು ಬಂದಿತು, ಪಾಸ್ ಆಗಿ ಬಿಟ್ಟೆವು, ಅಷ್ಟೇ ಸಮಾಪ್ತಿ. ಮಾಯೆಯೇಕೆ ಬಂದಿತು, ಎಲ್ಲಿಂದ ಬಂದಿತು, ಇಲ್ಲಿ ಬಂದಿತಾ, ಅಲ್ಲಿಂದ ಬಂದಿತಾ, ಬರಬಾರದಿತ್ತು, ಏಕೆ ಬಂದು ಬಿಟ್ಟಿತು - ಈ ವಂಶವಾಗಬಾರದು. ಒಳ್ಳೆಯದು. ಬಂದಿತೆಂದರೆ ತಾವು ಅದನ್ನು ಕೂರಿಸಬೇಡಿ, ಓಡಿಸಿರಿ! ಬಂದಿತೇಕೆ..... ಹೀಗೆ ಚಿಂತಿಸುತ್ತೀರೆಂದರೆ ಕುಳಿತು ಬಿಡುತ್ತದೆ. ಬಂದಿತು ಮುಂದುವರೆಸುವುದಕ್ಕಾಗಿ, ಪರೀಕ್ಷೆ ತೆಗೆದುಕೊಳ್ಳುವುದಕ್ಕಾಗಿ. ತರಗತಿಯನ್ನು ಮುಂದುವರೆಸುವುದಕ್ಕಾಗಿ, ಅನುಭವಿ ಮಾಡುವುದಕ್ಕಾಗಿ ಬಂದಿತು! ಏಕೆ ಬಂದಿತು, ಹೀಗೆ ಬಂದಿತಾ, ಹಾಗೆ ಬಂದಿತಾ- ಇದನ್ನು ಯೋಚಿಸಬೇಡಿ. ನಂತರ ಯೋಚಿಸುತ್ತೀರಿ - ಮಾಯೆಯದು ಇಂತಹ ರೂಪವಾಗುತ್ತದೆ. ಅದೇನಾದರೂ ಕೆಂಪಾಗಿದೆಯೇ, ಹಸಿರು ಬಣ್ಣದ್ದಾಗಿದೆಯೇ ಅಥವಾ ನೀಲಿಯಾಗಿದೆಯೇ! ಈ ವಿಸ್ತಾರದಲ್ಲಿ ಹೊರಟು ಹೋಗುತ್ತೀರಿ, ಇದರಲ್ಲಿ ಹೋಗದಿರಿ. ಗಾಬರಿಯೇಕೆ ಆಗುವುದು, ಅದನ್ನು ಪಾರು ಮಾಡಿ ಬಿಡಿ. ಪಾಸ್-ವಿತ್-ಆನರ್ ಆಗಿ ಬಿಡಿ. ಜ್ಞಾನದ ಶಕ್ತಿಯಿದೆ, ಶಸ್ತ್ರವಿದೆ, ಮಾಸ್ಟರ್ ಸರ್ವಶಕ್ತಿವಂತ ಆಗಿದ್ದೀರಿ, ತ್ರಿಕಾಲದರ್ಶಿ ಆಗಿದ್ದೀರಿ, ತ್ರಿವೇಣಿ ಆಗಿದ್ದೀರಿ, ಯಾವ ಕೊರತೆಯಿದೆ! ಬೇಗನೆ ಗಾಬರಿಯಾಗದಿರಿ. ಇರುವೆ ಬಂದರೂ ಸಹ ಗಾಬರಿಯಾಗುತ್ತೀರಿ. ಹೆಚ್ಚಾಗಿ ಯೋಚಿಸುತ್ತೀರಿ. ಯೋಚಿಸುವುದು ಅರ್ಥಾತ್ ಮಾಯೆಗೆ ಆಥಿತ್ಯವನ್ನು ಮಾಡುವುದು. ನಂತರ ಅದು ಮನೆ ಮಾಡಿಕೊಂಡು ಬಿಡುತ್ತದೆ. ಹೇಗೆ ಮಾರ್ಗದಲ್ಲಿ ನಡೆಯುತ್ತಿರುವ ಯಾವುದೇ ಕೊಳಕು ವಸ್ತು ಕಾಣಿಸಿದರೆ ಏನು ಮಾಡುವಿರಿ? ನಿಂತು ಯೋಚಿಸುತ್ತೀರಾ - ಇದು ಯಾರು ಬಿಸಾಡಿದ್ದಾರೆ, ಏಕೆ-ಏನಾಯಿತು! ಆಗಬಾರದಿತ್ತು, ಹೀಗೆ ಯೋಚಿಸುತ್ತೀರಾ ಅಥವಾ ಪಕ್ಕಕ್ಕೆ ಸರಿದು ಹೊರಟು ಹೋಗುವಿರಾ! ಹೆಚ್ಚಾಗಿ ವ್ಯರ್ಥ ಸಂಕಲ್ಪಗಳ ವಂಶವನ್ನು ಉತ್ಪನ್ನವಾಗಲು ಬಿಡಬಾರದು. ಅಂಶದ ರೂಪದಲ್ಲಿಯೇ ಸಮಾಪ್ತಿ ಮಾಡಿ ಬಿಡಿ. ಮೊದಲು ಸೆಕೆಂಡಿನ ಮಾತಾಗಿರುತ್ತದೆ, ನಂತರ ಅದನ್ನು ಗಂಟೆಗಳಲ್ಲಿ, ದಿನಗಳಲ್ಲಿ, ತಿಂಗಳುಗಳಲ್ಲಿ ಹೆಚ್ಚಿಸಿ ಬಿಡುತ್ತೀರಿ. ಮತ್ತೇನಾದರೂ ಒಂದು ತಿಂಗಳಿನ ನಂತರ ಏನಾಯಿತು ಎಂದು ಕೇಳಿದರೆ - ಆ ಮಾತು ಸೆಕೆಂಡಿನದಾಗಿರುತ್ತದೆ, ಆದ್ದರಿಂದ ಗಾಬರಿಯಾಗಬಾರದು. ಅದರ ಸೂಕ್ಷತೆಯಲ್ಲಿ ಹೋಗಿರಿ, ಜ್ಞಾನದ ಸೂಕ್ಷ್ಮತೆಯಲ್ಲಿ ಹೋಗಿರಿ, ಮಾತಿನ ಆಳದಲ್ಲಿ ಹೋಗದಿರಿ. ಬಾಪ್ದಾದಾರವರು ಇಷ್ಟೂ ಶ್ರೇಷ್ಠ ಅಮೂಲ್ಯವಾದಂತರ ರತ್ನಗಳನ್ನು, ಚಿಕ್ಕ-ಚಿಕ್ಕ ಮಣ್ಣಿನ ಕಣಗಳೊಂದಿಗೆ ಆಟವಾಡುವುತ್ತಿರುವುದನ್ನು ನೋಡುತ್ತಾರೆಂದರೆ ಯೋಚಿಸುತ್ತಾರೆ - ಈ ರತ್ನವು, ರತ್ನದೊಂದಿಗೆ ಆಟವಾಡುವವರು, ಮಣ್ಣಿನ ಕಣಗಳೊಂದಿಗೆ ಆಟವಾಡುತ್ತಿದ್ದಾರೆ! ರತ್ನವಾಗಿದ್ದೀರಿ ರತ್ನದೊಂದಿಗೆ ಆಡಿರಿ!

ಬಾಪ್ದಾದಾರವರು ಎಷ್ಟೊಂದು ಪ್ರೀತಿಯಿಂದ ಬೆಳೆಸಿದ್ದಾರೆ, ಮತ್ತೆ ಮಣ್ಣಿನ ಕಣಗಳನ್ನು ಹೇಗೆ ನೋಡಲು ಸಾಧ್ಯ! ಆ ನಂತರದ ಮೈಲಿಗೆಯಾಗಿ ಹೇಳುತ್ತಾರೆ - ಈಗ ಸ್ವಚ್ಛಗೊಳಿಸಿ, ಸ್ವಚ್ಛಗೊಳಿಸಿ ಎಂದು. ಗಾಬರಿಯೂ ಆಗಿ ಬಿಡುತ್ತಾರೆ - ಈಗ ಏನು ಮಾಡಲಿ, ಹೇಗೆ ಮಾಡಲಿ ಎಂದು. ಮಣ್ಣಿನೊಡನೆ ಆಟವಾಡುವುದಾದರೂ ಏಕೆ ಆಡುತ್ತೀರಿ, ಆ ಕಣವೂ ಸಹ ಯಾವುದು! ಧರಣಿಯಲ್ಲಿ ಬಿದ್ದಿರುವಂತದ್ದು. ಆದ್ದರಿಂದ ಸದಾ ತಮ್ಮ ಮೌಲ್ಯವನ್ನು ತಿಳಿದುಕೊಳ್ಳಿರಿ. ಒಳ್ಳೆಯದು!

ಇಂತಹ ಇಡೀ ಕಲ್ಪದ ಮೌಲ್ಯವಂತ ಆತ್ಮರಿಗೆ, ಪ್ರಭು ಪ್ರೀತಿಯ ಪಾತ್ರ ಆತ್ಮರಿಗೆ, ಪ್ರಭು ಪಾಲನೆಯ ಪಾತ್ರ ಆತ್ಮರಿಗೆ, ಪವಿತ್ರತೆಯ ಜನ್ಮಸಿದ್ಧ ಅಧಿಕಾರದ ಅಧಿಕಾರಿ ಆತ್ಮರಿಗೆ, ಸದಾ ತಂದೆ ಹಾಗೂ ನಾನು - ಈ ವಿಧಿಯಿಂದ ಸಿದ್ಧಿಯನ್ನು ಪಡೆಯುವಂತಹ ಆತ್ಮರಿಗೆ, ಸದಾ ಅಮೂಲ್ಯ ರತ್ನಗಳಾಗಿ ರತ್ನಗಳೊಂದಿಗೆ ಆಡುವಂತಹ ರಾಯಲ್ ಮಕ್ಕಳಿಗೆ, ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ!

ಪಾರ್ಟಿಯೊಂದಿಗೆ:-
1. ಸ್ವಯಂನ್ನು ಸದಾ ತಂದೆಯ ನಯನಗಳಲ್ಲಿ ಸಮಾವೇಶವಾಗಿರುವ ಆತ್ಮನೆಂದು ಅನುಭವ ಮಾಡುತ್ತೀರಾ? ನಯನಗಳಲ್ಲಿ ಯಾರು ಸಮಾವೇಶವಾಗಿರುತ್ತಾರೆ? ಯಾರು ಬಹಳ ಹಗುರ ಬಿಂದುವಾಗಿದ್ದಾರೆಯೋ ಅವರು. ಅಂದಮೇಲೆ ಸದಾ ತಾವಿರುವುದೇ ಬಿಂದು ಮತು ಬಿಂದುವಾಗಿ ತಂದೆಯ ನಯನಗಳಲ್ಲಿ ಸಮಾವೇಶವಾಗುವವರು. ಬಾಪ್ದಾದಾರವರು ತಮ್ಮ ನಯನಗಳಲ್ಲಿ ಸಮಾವೇಶವಾಗಿದ್ದಾರೆ ಮತ್ತು ತಾವೆಲ್ಲರೂ ಬಾಪ್ದಾದಾರವರ ನಯನಗಳಲ್ಲಿ ಸಮಾವೇಶವಾಗಿದ್ದೀರಿ. ಯಾವಾಗ ನಯನಗಳಲ್ಲಿರುವುದೇ ಬಾಪ್ದಾದಾ, ಅಂದಮೇಲೆ ಮತ್ತೇನೂ ಕಾಣಿಸುವುದಿಲ್ಲ. ಹಾಗಾದರೆ ಸದಾ ಈ ಸ್ಮೃತಿಯಿಂದ ಡಬಲ್ಲೈಟ್ ಆಗಿರಿ - ನಾನಿರುವುದೇ ಬಿಂದು. ಬಿಂದುವಿನಲ್ಲಿ ಯಾವುದೇ ಹೊರೆಯಿಲ್ಲ. ಈ ಸ್ಮೃತಿ ಸ್ವರೂಪವು ಸದಾ ಮುಂದುವರೆಸುತ್ತಿರುತ್ತದೆ. ಕಣ್ಣುಗಳಲ್ಲಿ ಮಧ್ಯದಲ್ಲಿ ನೋಡಿದರೆ ಬಿಂದುವೇ ಇದೆ. ಬಿಂದುವೇ ನೋಡುತ್ತದೆ. ಬಿಂದುವಿಲ್ಲದಿದ್ದರೆ ಕಣ್ಣುಗಳಿದ್ದರೂ ನೋಡಲು ಸಾಧ್ಯವಾಗುವುದಿಲ್ಲ. ಅಂದಮೇಲೆ ಸದಾ ಇದೇ ಸ್ವರೂಪವನ್ನು ಸ್ಮೃತಿಯಲ್ಲಿಟ್ಟುಕೊಂಡು ಹಾರುವ ಕಲೆಯ ಅನುಭವ ಮಾಡಿರಿ. ಬಾಪ್ದಾದಾರವರು ಮಕ್ಕಳ ವರ್ತಮಾನ ಮತ್ತು ಭವಿಷ್ಯದ ಭಾಗ್ಯವನ್ನು ನೋಡುತ್ತಾ ಹರ್ಷಿತವಾಗುತ್ತಾರೆ, ವರ್ತಮಾನವು ಭವಿಷ್ಯದ ಅದೃಷ್ಟವನ್ನು ರೂಪಿಸಿಕೊಳ್ಳುವ ಲೇಖನಿಯಾಗಿದೆ. ವರ್ತಮಾನವನ್ನು ಶ್ರೇಷ್ಠವನ್ನಾಗಿಸುವ ಸಾಧನವಾಗಿದೆ - ಹಿರಿಯರ ಸೂಚನೆಗಳನ್ನು ಸದಾ ಸ್ವೀಕರಿಸುತ್ತಾ, ಸ್ವಯಂನ್ನು ಪರಿವರ್ತನೆ ಮಾಡಿಕೊಳ್ಳುವುದು. ಇದೇ ವಿಶೇಷ ಗುಣದಿಂದ ವರ್ತಮಾನ ಮತ್ತು ಭವಿಷ್ಯದ ಅದೃಷ್ಟವು ಶ್ರೇಷ್ಠವಾಗಿ ಬಿಡುತ್ತದೆ.

2. ಎಲ್ಲರ ಮಸ್ತಕದಲ್ಲಿ ಭಾಗ್ಯದ ನಕ್ಷತ್ರವು ಹೊಳೆಯುತ್ತಿದೆಯಲ್ಲವೆ! ಸದಾ ಹೊಳೆಯುತ್ತದೆಯೇ? ಕೆಲವೊಮ್ಮೆ ಟಿಮ್ಟಿಮಾ ಎನ್ನುವುದಿಲ್ಲವೇ? ಅಖಂಡ ಜ್ಯೋತಿ ತಂದೆಯ ಜೊತೆ ತಾವೂ ಸಹ ಅಖಂಡ ಜ್ಯೋತಿಯಂತೆ ಸದಾ ಬೆಳಗುತ್ತಿರುವ ನಕ್ಷತ್ರವಾಗಿ ಬಿಟ್ಟಿರಿ. ಇಂತಹ ಅನುಭವ ಮಾಡುತ್ತೀರಾ! ಕೆಲವೊಮ್ಮೆ ದೀಪವನ್ನು ಅಥವಾ ನಕ್ಷತ್ರವನ್ನು ವಾಯುವು ಅಲುಗಾಡಿಸುವುದಿಲ್ಲವೇ? ಎಲ್ಲಿ ತಂದೆಯ ನೆನಪಿದೆಯೋ, ಅದು ಅವಿನಾಶಿಯಾಗಿ ಬೆಳಗುತ್ತಿರುವ ನಕ್ಷತ್ರವಾಗಿದೆ. ಟಿಮ್ಟಿಮಾ ಎನ್ನುವುದಲ್ಲ. ಲೈಟ್ ಸದಾ ಯಾವಾಗ ಟಿಮ್ಟಿಮಾ ಎನ್ನುತ್ತಿರುತ್ತದೆಯೆಂದರೆ ಬಂದ್ ಮಾಡಿ ಬಿಡುತ್ತಾರೆ, ಯಾರಿಗೂ ಅದು ಇಷ್ಟವಾಗುವುದಿಲ್ಲ. ಹಾಗಾದರೆ ಇದೂ ಸಹ ಸದಾ ಬೆಳಗುತ್ತಿರುವ ನಕ್ಷತ್ರವಾಗಿದೆ. ಸದಾ ಜ್ಞಾನ ಸೂರ್ಯ ತಂದೆಯಿಂದ ಪ್ರಕಾಶತೆಯನ್ನು ತೆಗೆದುಕೊಂಡು, ಅನ್ಯರಿಗೂ ಪ್ರಕಾಶತೆ (ಜ್ಞಾನ) ಕೊಡುವವರು. ಸೇವೆಯ ಉಮ್ಮಂಗ-ಉತ್ಸಾಹವು ಖಾಯಂ ಆಗಿರುತ್ತದೆ. ಎಲ್ಲರೂ ಶ್ರೇಷ್ಠಾತ್ಮರಾಗಿದ್ದೀರಿ, ಶ್ರೇಷ್ಠ ತಂದೆಯ ಶ್ರೇಷ್ಠಾತ್ಮರಾಗಿದ್ದೀರಿ.

ನೆನಪಿನ ಶಕ್ತಿಯಿಂದ ಸಫಲತೆಯು ಸಹಜವಾಗಿ ಪ್ರಾಪ್ತಿಯಾಗುತ್ತದೆ. ನೆನಪು ಮತ್ತು ಸೇವೆಯ ಜೊತೆ ಜೊತೆ ಎಷ್ಟಿರುತ್ತದೆಯೋ, ಅದರಿಂದ ನೆನಪಿನ ಮತ್ತು ಸೇವೆಯ ಬ್ಯಾಲೆನ್ಸ್ ಸದಾ ಸ್ವತಹವಾಗಿ ಸಫಲತೆಯ ಆಶೀರ್ವಾದವನ್ನು ಪ್ರಾಪ್ತಿ ಮಾಡಿಸುತ್ತದೆ, ಆದ್ದರಿಂದ ಸದಾ ಶಕ್ತಿಶಲಿ ನೆನಪಿನ ಸ್ವರೂಪದ ವಾತಾವರಣವನ್ನು ರೂಪಿಸುವುದರಿಂದ ಶಕ್ತಿಶಾಲಿ ಆತ್ಮರ ಆಹ್ವಾನವಾಗುತ್ತದೆ ಮತ್ತು ಸಫಲತೆಯು ಸಿಗುತ್ತದೆ. ನಿಮಿತ್ತವಾಗಿ ಲೌಕಿಕ ಕಾರ್ಯವಿದೆ ಆದರೆ ಲಗನ್ ತಂದೆ ಮತ್ತು ಸೇವೆಯಲ್ಲಿದೆ. ಲೌಕಿಕವೂ ಸೇವೆಗಾಗಿ ಇರುವುದಾಗಿದೆ, ತಮ್ಮ ಇಚ್ಛೆಯಿಂದ ಮಾಡುವುದಿಲ್ಲ, ಡೈರೆಕ್ಷನ್ನುಸಾರವಾಗಿ ಮಾಡುತ್ತೀರಿ, ಆದ್ದರಿಂದ ಇಂತಹ ಮಕ್ಕಳ ಜೊತೆ ತಂದೆಯ ಸ್ನೇಹದ ಹಸ್ತವು ಇದೆ. ಸದಾ ಖುಷಿಯಲ್ಲಿ ಹಾಡಿರಿ, ನರ್ತಿಸಿರಿ, ಇದೇ ಸೇವೆಯ ಸಾಧನವಾಗಿದೆ. ತಮ್ಮ ಖುಷಿಯನ್ನು ನೋಡಿ ಅನ್ಯರೂ ಖುಷಿಯಾಗಿ ಬಿಡುತ್ತಾರೆಂದರೆ ಇದೇ ಸೇವೆಯಾಗಿ ಬಿಡುತ್ತದೆ. ಬಾಪ್ದಾದಾರವರು ಮಕ್ಕಳಿಗೆ ಸದಾ ಹೇಳುತ್ತಾರೆ - ಎಷ್ಟು ಮಹಾದಾನಿ ಆಗುತ್ತೀರಿ, ಅಷ್ಟು ಖಜಾನೆಗಳು ವೃದ್ಧಿಯಾಗಿ ಬಿಡುತ್ತದೆ. ಮಹಾದಾನಿಯಾಗಿರಿ ಮತ್ತು ಖಜಾನೆಗಳನ್ನು ವೃದ್ಧಿಗೊಳಿಸಿರಿ. ಮಹಾದಾನಿಯಾಗಿದ್ದು ಹೆಚ್ಚಾಗಿ ದಾನ ಮಾಡಿರಿ. ಹೀಗೆ ಕೊಡುವುದೇ ತೆಗೆದುಕೊಳ್ಳುವುದಾಗಿದೆ. ಒಳ್ಳೆಯ ವಸ್ತುವೇನು ಸಿಗುತ್ತದೆಯೋ, ಅದನ್ನು ಕೊಡದೇ ಇರಲು ಸಾಧ್ಯವಾಗುವುದಿಲ್ಲ.

ಸದಾ ತಮ್ಮ ಭಾಗ್ಯವನ್ನು ನೋಡುತ್ತಾ ಹರ್ಷಿತವಾಗಿರಿ. ಎಷ್ಟೊಂದು ಶ್ರೇಷ್ಠ ಭಾಗ್ಯವು ಸಿಕ್ಕಿದೆ, ಮನೆಯಲ್ಲಿ ಕುಳಿತಿದ್ದಂತೆಯೇ ಭಗವಂತನು ಸಿಕ್ಕಿ ಬಿಟ್ಟರೆಂದರೆ, ಇದಕ್ಕಿಂತಲೂ ದೊಡ್ಡ ಭಾಗ್ಯ ಇನ್ನೇನು ಆಗುತ್ತದೆ! ಇದೇ ಭಾಗ್ಯವನ್ನು ಸ್ಮೃತಿಯಲ್ಲಿಟ್ಟುಕೊಂಡು ಹರ್ಷಿತವಾಗಿರಿ. ಅದರಿಂದ ದುಃಖ ಮತ್ತು ಅಶಾಂತಿಯು ಸದಾಕಾಲಕ್ಕಾಗಿ ಸಮಾಪ್ತಿಯಾಗಿ ಬಿಡುತ್ತದೆ. ಸುಖ ಸ್ವರೂಪ, ಶಾಂತ ಸ್ವರೂಪರಾಗಿ ಬಿಡುತ್ತೀರಿ. ಯಾರ ಭಾಗ್ಯವನ್ನು ಸ್ವಯಂ ಭಗವಂತನು ರೂಪಿಸಿದರು, ಅವರೆಷ್ಟು ಶ್ರೇಷ್ಠರಾದರು! ಅಂದಾಗ ಸದಾ ತಮ್ಮಲ್ಲಿ ಹೊಸ ಉಮ್ಮಂಗ, ಹೊಸ ಉತ್ಸಾಹವನ್ನು ಅನುಭವ ಮಾಡುತ್ತಾ ಮುಂದುವರೆಯುತ್ತಾ ಸಾಗಿರಿ ಏಕೆಂದರೆ ಸಂಗಮಯುಗದಲ್ಲಿ ಪ್ರತೀ ದಿನವೂ ಹೊಸ ಉಮ್ಮಂಗ, ಹೊಸ ಉತ್ಸಾಹವಿದೆ.

ಹೇಗೆ ನಡೆಯುತ್ತಿದ್ದೇವೆ, ಅಲ್ಲ, ಸದಾ ಹೊಸ ಉಮ್ಮಂಗ, ಹೊಸ ಉತ್ಸಾಹವು ಸದಾ ಮುಂದುವರೆಸುತ್ತದೆ. ಪ್ರತೀ ದಿನವೇ ಹೊಸದಾಗಿದೆ. ಸದಾ ಸ್ವಯಂನಲ್ಲಿ ಅಥವಾ ಸೇವೆಯಲ್ಲಿ ಯಾವುದಾದರೊಂದು ನವೀನತೆ ಅವಶ್ಯವಾಗಿರಬೇಕು. ತಮ್ಮನ್ನು ಎಷ್ಟು ಉಮ್ಮಂಗ-ಉತ್ಸಾಹದಲ್ಲಿಟ್ಟುಕೊಳ್ಳುತ್ತೀರಿ, ಅಷ್ಟು ಹೊಸ-ಹೊಸ ಟಚಿಂಗ್ ಆಗುತ್ತಿರುತ್ತದೆ. ಸ್ವಯಂ ತಾವು ಅನ್ಯ ಯಾರದೇ ಮಾತುಗಳಲ್ಲಿ ವ್ಯಸ್ತರಾಗುತ್ತೀರೆಂದರೆ, ಹೊಸ ಟಚಿಂಗ್ ಆಗುವುದಿಲ್ಲ. ಮನನ ಮಾಡುತ್ತೀರೆಂದರೆ ಹೊಸ ಉಮ್ಮಂಗವಿರುತ್ತದೆ.

ಬಂಧನದಲ್ಲಿರುವವರಿಗೆ ನೆನಪು-ಪ್ರೀತಿಯನ್ನು ಕೊಡುತ್ತಾ:- ಬಂಧನದಲ್ಲಿರುವವರ ನೆನಪಂತು ಸದಾ ತಂದೆಯ ಬಳಿ ತಲುಪುತ್ತದೆ ಮತ್ತು ಬಾಪ್ದಾದಾರವರು ಎಲ್ಲಾ ಬಂಧನದಲ್ಲಿರುವವರಿಗೆ ಇದೇ ಹೇಳುತ್ತಾರೆ - ಯೋಗ ಅರ್ಥಾತ್ ನೆನಪಿನ ಲಗನ್ನ್ನು ಅಗ್ನಿ ರೂಪವಾಗಿ ಮಾಡಿರಿ. ಯಾವಾಗ ಲಗನ್ ಅಗ್ನಿ ರೂಪವಾಗಿ ಬಿಡುತ್ತದೆಯೋ, ಅಗ್ನಿಯಲ್ಲಿ ಎಲ್ಲವೂ ಭಸ್ಮವಾಗಿ ಬಿಡುತ್ತದೆ. ಅಂದಮೇಲೆ ಈ ಬಂಧನವೂ ಸಹ ಲಗನ್ನಿನ ಅಗ್ನಿಯಲ್ಲಿ ಸಮಾಪ್ತಿಯಾಗಿ ಬಿಡುತ್ತದೆ ಮತ್ತು ಸ್ವತಂತ್ರ ಆತ್ಮರಾಗಿ ಸಂಕಲ್ಪವನ್ನೇನು ಮಾಡುತ್ತೀರಿ, ಅದರ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರಿ. ಸ್ನೇಹಿಯಾಗಿದ್ದೀರಿ, ಸ್ನೇಹದ ನೆನಪು ತಲುಪುತ್ತದೆ. ಸ್ನೇಹದ ಪ್ರತ್ಯುತ್ತರದಲ್ಲಿ ಸ್ನೇಹವು ಸಿಗುತ್ತದೆ. ಆದರೆ ಈಗ ನೆನಪನ್ನು ಶಕ್ತಿಶಾಲಿ ಅಗ್ನಿ ರೂಪವನ್ನಾಗಿ ಮಾಡಿರಿ. ನಂತರ ಆ ದಿನವೂ ಬಂದು ಬಿಡುತ್ತದೆ, ಅದು ಸನ್ಮುಖದಲ್ಲಿ ತಲುಪಿ ಬಿಡುತ್ತದೆ.

ವರದಾನ:  
ಸದಾ ಆತ್ಮಿಕ ಸ್ಥಿತಿಯಲ್ಲಿದ್ದು ಅನ್ಯರಲ್ಲಿಯೂ ಆತ್ಮವನ್ನು ನೋಡುವಂತ ಆತ್ಮಿಕ ರುಹೆ ಗುಲಾಬ್ ಭವ.

ರುಹೆ ಗುಲಾಬ್ ಅರ್ಥಾತ್ ಯಾರಲ್ಲಿ ಸದಾ ಆತ್ಮಿಕ ಸುಗಂಧವಿರುತ್ತದೆ. ಆತ್ಮಿಕ ಸುಗಂಧವಿರುವವರು ಎಲ್ಲಿಯೇ ನೋಡುತ್ತಾರೆ, ಯಾರನ್ನೇ ನೋಡುತ್ತಾರೆಂದರೆ ಆತ್ಮವನ್ನು ನೋಡುತ್ತಾರೆ, ಶರೀರವನ್ನಲ್ಲ. ಅಂದಮೇಲೆ ಸ್ವಯಂ ಸಹ ಸದಾ ಆತ್ಮಿಕ ಸ್ಥಿತಿಯಲ್ಲಿರಿ ಮತ್ತು ಅನ್ಯರಲ್ಲಿಯೂ ಆತ್ಮವನ್ನೇ ನೋಡಿರಿ. ತಂದೆಯು ಹೇಗೆ ಸರ್ವ ಶ್ರೇಷ್ಠನಿದ್ದಾರೆ, ಹಾಗೆಯೇ ಅವರ ಉದ್ಯಾನವನವೂ ಸಹ ಸರ್ವ ಶ್ರೇಷ್ಠವಾಗಿದೆ, ಆ ಉದ್ಯಾನ ವನದ ವಿಶೇಷ ಶೃಂಗಾರವು ಆತ್ಮಿಕ ಗುಲಾಬಿ ತಾವು ಮಕ್ಕಳಾಗಿದ್ದೀರಿ. ತಮ್ಮ ಆತ್ಮಿಕ ಸುಗಂಧವು ಅನೇಕ ಆತ್ಮರ ಕಲ್ಯಾಣ ಮಾಡುವಂತದ್ದಾಗಿದೆ.

ಸ್ಲೋಗನ್:
ಮರ್ಯಾದೆಯನ್ನು ಉಲ್ಲಂಘಿಸಿ ಯಾರಿಗೇ ಸುಖವನ್ನು ಕೊಡುತ್ತೀರೆಂದರೆ, ಅದೂ ಸಹ ದುಃಖದ ಖಾತೆಯಲ್ಲಿ ಜಮಾ ಆಗಿ ಬಿಡುತ್ತದೆ.