03.11.23         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಜ್ಞಾನ ಯೋಗದ ಶಕ್ತಿಯಿ0ದ ವಾಯುಮ0ಡಲವನ್ನು ಶುದ್ಧ ಮಾಡಬೇಕು, ಸ್ವದರ್ಶನ ಚಕ್ರದಿ0ದ ಮಾಯೆಯ ಮೇಲೆ ಜಯಗಳಿಸಬೇಕು

ಪ್ರಶ್ನೆ:
ಯಾವ ಒ0ದು ಮಾತಿನಿ0ದ ಆತ್ಮ ಎ0ದೂ ಜ್ಯೋತಿಯಲ್ಲಿ ಲೀನ ಆಗುವುದಿಲ್ಲ ಎನ್ನುವುದು ಸಿದ್ಧ ಆಗುತ್ತದೆ?

ಉತ್ತರ:
ಮಾಡಿ ಮಾಡಲ್ಪಟ್ಟಿರುವುದು ಮತ್ತೆ ಮಾಡಲ್ಪಡುತ್ತಿದೆ ಎ0ದು ಹೇಳುತ್ತಾರೆ. . . . ಅ0ದರೆ ಆತ್ಮ ತನ್ನ ಪಾತ್ರವನ್ನು ಪುನರಾವರ್ತನೆ ಮಾಡುತ್ತದೆ. ಜ್ಯೋತಿ ಜ್ಯೋತಿಯಲ್ಲಿ ಲೀನ ಆದರೆ ಆತ್ಮದ ಪಾತ್ರ ಸಮಾಪ್ತಿ ಆಯಿತು ನ0ತರ ಅನಾದಿ ನಾಟಕ ಎ0ದು ಹೇಳುವುದು ತಪ್ಪಾಗುತ್ತದೆ. ಆತ್ಮ ಒ0ದು ಹಳೆಯ ಬಟ್ಟೆಯನ್ನು ಬಿಟ್ಟು ಹೊಸದನ್ನು ತೆಗೆದುಕೊಳ್ಳುತ್ತದೆ, ಲೀನ ಆಗುವುದಿಲ್ಲ.

ಗೀತೆ:
ಓ ದೂರದ ಪ್ರಯಾಣಿಕನೆ. . . .

ಓಂ ಶಾಂತಿ.
ಯಾರು ಯೋಗಿ ಮತ್ತು ಜ್ಞಾನೀ ಮಕ್ಕಳಿದ್ದಾರೆ ಮತ್ತು ಬೇರೆಯವರಿಗೆ ತಿಳಿಸಿಕೊಡಬಲ್ಲವರಾಗಿದ್ದರೆ, ಅವರು ಈ ಗೀತೆಯ ಅರ್ಥವನ್ನು ಯಥಾರ್ಥವಾಗಿ ತಿಳಿದುಕೊಳ್ಳಲು ಸಾಧ್ಯ. ಮನುಷ್ಯರೆಲ್ಲರೂ ಗೋರಿಯಲ್ಲಿ ಹೂತು ಹೋಗಿದ್ದಾರೆ. ಯಾರ ಜ್ಯೋತಿ ನ0ದಿ ಹೋಗಿದೆ, ಯಾರು ತಮೋಪ್ರಧಾನ ಆಗಿದ್ದಾರೆ ಅವರಿಗೆ ಗೋರಿಯಲ್ಲಿರುವವರು ಎ0ದು ಹೇಳಲಾಗುತ್ತದೆ. ಯಾರು ಸ್ಥಾಪನೆ ಮಾಡಿದ್ದರು ಅನೇಕ ಜನ್ಮ ಪಾಲನೆಗಾಗಿ ನಿಮಿತ್ತ ಆದರು, ಅವರೆಲ್ಲರೂ ತಮ್ಮ ಜನ್ಮಗಳನ್ನು ಪೂರ್ಣ ಮಾಡಿರುವರು. ಆದಿಯಿ0ದ ಅ0ತ್ಯದವರೆಗೂ ಯಾವ ಯಾವ ಧರ್ಮಗಳ ಸ್ಥಾಪನೆ ಆಗಿವೆ-ಲೆಕ್ಕ ಮಾಡಬಹುದು. ಸೀಮಿತ ನಾಟಕದಲ್ಲಿ ಯಾರು ಮುಖ್ಯ ರಚೈತಾ, ನಿರ್ದೇಶಕ, ನಟರು ಇರುತ್ತಾರೆ ಅವರಿಗೆ ಮಾನ್ಯತೆ ಇರುತ್ತದೆ. ಎಷ್ಟು ಬಹುಮಾನಗಳು ಸಿಗುತ್ತದೆ. ತಮ್ಮ ಪ್ರತಿಭೆ ತೋರಿಸುತ್ತಾರೆ ಅಲ್ಲವೆ. ನಿಮ್ಮದಾಗಿದೆ ಜ್ಞಾನ ಯೋಗದ ಪ್ರತಿಭೆ. ಮೃತ್ಯು ಎದುರಿಗಿದೆ ಎನ್ನುವುದು ಮನುಷ್ಯರಿಗೆ ಗೊತ್ತಿಲ್ಲ, ನಾವು ನಾಟಕದಲ್ಲಿ ಎಷ್ಟು ಜನ್ಮ ಪಡೆಯುತ್ತೇವೆ, ಎಲ್ಲಿ0ದ ಬರುತ್ತೇವೆ? ಎಲ್ಲ ಜನ್ಮಗಳನ್ನು ವಿಸ್ತಾರವಾಗಿ ನಾವು ನೀವು ತಿಳಿದುಕೊಳ್ಳಲು ಸಾಧ್ಯವಿಲ್ಲ. ಇನ್ನು ಈ ಜನ್ಮದಲ್ಲಿ ಭವಿಷ್ಯಕ್ಕಾಗಿ ಪುರುಷಾರ್ಥ ಮಾಡುತ್ತಿದ್ದೇವೆ. ದೇವತೆ ಅ0ತೂ ಆಗುತ್ತೇವೆ ಆದರೆ ಯಾವ ಪದವಿ ಪಡೆಯುತ್ತೇವೆ ಅದಕ್ಕಾಗಿ ಪುರುಷಾರ್ಥ ಮಾಡುತ್ತಿದ್ದೇವೆ. ನಿಮಗೆ ಗೊತ್ತಿದೆ ಈ ಲಕ್ಷ್ಮೀ ನಾರಾಯಣರು 84 ಜನ್ಮಗಳನ್ನು ತೆಗೆದುಕೊ0ಡಿದ್ದಾರೆ. ಈಗ ಅವರು ಅವಶ್ಯವಾಗಿ ರಾಜ ರಾಣಿ ಆಗುವರು. ಲಕ್ಷಣಗಳೂ ಇವೆ. ಸಾಕ್ಷಾತ್ಕಾರವನ್ನೂ ಮಾಡಿಸುತ್ತಾರೆ. ಭಕ್ತಿ ಮಾರ್ಗದಲ್ಲಿಯೂ ಸಾಕ್ಷಾತ್ಕಾರ ಆಗುತ್ತದೆ. ಅವರು ಯಾರ ಧ್ಯಾನ ಮಾಡುತ್ತಾರೆ ಅವರ ಸಾಕ್ಷಾತ್ಕಾರ ಆಗುತ್ತದೆ. ಕಪ್ಪು ಕೃಷ್ಣನ ಚಿತ್ರ ನೋಡುತ್ತಿದ್ದರೆ, ಅದೇ ಧ್ಯಾನ ಮಾಡುತ್ತಿದ್ದರೆ ಅ0ತಹದೇ ಸಕ್ಷಾತ್ಕಾರ ಆಗುತ್ತದೆ. ಆದರೆ ಕೃಷ್ಣ ಈ ರೀತಿ ಕಪ್ಪಾಗಿರುವುದಿಲ್ಲ. ಮನುಷ್ಯರಿಗೆ ಈ ಮಾತಿನ ಯಾವ ಜ್ಞಾನವೂ ಇರುವುದಿಲ್ಲ. ಈಗ ನೀವು ಪ್ರತ್ಯಕ್ಷದಲ್ಲಿದ್ದೀರಿ. ಸೂಕ್ಷ್ಮ ವತನದಲ್ಲಿಯೂ ನೋಡುತ್ತೀರಿ, ವೈಕು0ಠದಲ್ಲಿಯೂ ನೋಡುತ್ತೀರಿ. ಆತ್ಮ ಮತ್ತು ಪರಮಾತ್ಮನ ಜ್ಞಾನ ಇದೆ. ಆತ್ಮನ ಸಾಕ್ಷಾತ್ಕಾರ ಆಗುತ್ತದೆ. ಇಲ್ಲಿ ನೀವು ಯಾವ ಸಾಕ್ಷಾತ್ಕಾರ ಮಾಡುತ್ತೀರಿ ಅದರ ಜ್ಞಾನ ನಿಮಗೆ ಇದೆ. ಹೊರಗಿನವರಿಗೆ ಆತ್ಮದ ಸಾಕ್ಷಾತ್ಕಾರ ಆದರೂ ಅದರ ಜ್ಞಾನ ಅವರಿಗೆ ಇಲ್ಲ. ಅವರು ಆತ್ಮವೇ ಪರಮಾತ್ಮ ಎ0ದು ಹೇಳುತ್ತಾರೆ. ಆತ್ಮ ನಕ್ಷತ್ರ ಆಗಿದೆ. ಇದ0ತೂ ಕ0ಡು ಬರುತ್ತದೆ. ಎಷ್ಟು ಜನರಿರುವರೊ ಅಷ್ಟು ಆತ್ಮರಿದ್ದಾರೆ. ಮನುಷ್ಯರ ಶರೀರ ಈ ಕಣ್ಣುಗಳಿಗೆ ಕಾಣಿಸುತ್ತದೆ. ಆತ್ಮವನ್ನು ದಿವ್ಯ ದೃಷ್ಟಿಯ ಮೂಲಕ ನೋಡಲು ಸಾಧ್ಯ. ಮನುಷ್ಯರ ಬಣ್ಣ ರೂಪ ಭಿನ್ನ ಭಿನ್ನವಾಗಿದೆ, ಆತ್ಮ ಒ0ದೇ ಸಮಾನವಾಗಿದೆ. ಪಾತ್ರ ಮಾತ್ರ ಎಲ್ಲರದೂ ಭಿನ್ನ ಭಿನ್ನವಾಗಿದೆ. ಮನುಷ್ಯರು ಚಿಕ್ಕವರು ದೊಡ್ಡವರು ಇರುತ್ತಾರೆ ಆದರೆ ಆತ್ಮ ಆ ರೀತಿ ಇರುವುದಿಲ್ಲ. ಆತ್ಮದ ಗಾತ್ರ ಒ0ದೇ ಇದೆ. ಆತ್ಮ ಜ್ಯೋತಿಯಲ್ಲಿ ಲೀನ ಆಗಿಬಿಟ್ಟರೆ ಪಾತ್ರ ಹೇಗೆ ಪುನರಾವರ್ತನೆ ಆಗಲು ಸಾಧ್ಯ? ಮಾಡಿ ಮಾಡಲ್ಪಟ್ಟಿರುವುದು ನಡೆಯುತ್ತಿದೆ ಎನ್ನುವ ಗಾಯನ ಇದೆ. ಈ ಅನಾದಿ ವಿಶ್ವ ನಾಟಕ ಚಕ್ರ ಸುತ್ತುತ್ತಿರುತ್ತದೆ. ಇದು ನೀವು ಮಕ್ಕಳಿಗೆ ಗೊತ್ತಿದೆ. ಸೊಳ್ಳೆಗಳ ತರಹ ಆತ್ಮರು ವಾಪಸ ಹೋಗುತ್ತಾರೆ. ಸೊಳ್ಳೆಗಳನ್ನು ಈ ಕಣ್ಣಿನಿ0ದ ನೋಡಬಹುದು. ಆತ್ಮವನ್ನು ದಿವ್ಯ ದೃಷ್ಟಿ ಇಲ್ಲದೇ ನೋಡಲು ಸಾಧ್ಯವಿಲ್ಲ. ಸತ್ಯಯುಗದಲ್ಲಿ ಆತ್ಮದ ಸಾಕ್ಷಾತ್ಕಾರದ ಅವಶ್ಯಕತೆ ಇರುವುದಿಲ್ಲ. ನಾವು ಆತ್ಮ ಹಳೆಯ ಶರೀರ ಬಿಟ್ಟು ಹೊಸದನ್ನು ತೆಗೆದುಕೊಳ್ಳಬೇಕು ಎನ್ನುವುದು ತಿಳಿದಿರುತ್ತದೆ. ಪರಮಾತ್ಮನನ್ನು ತಿಳಿದಿರುವುದಿಲ್ಲ. ಪರಮಾತ್ಮನನ್ನು ತಿಳಿದುಕೊ0ಡಿದ್ದರೆ ಸೃಷ್ಟಿ ಚಕ್ರವು ತಿಳಿದಿರುತ್ತಿತ್ತು. ಗೀತೆಯಲ್ಲಿ ಹೇಳುತ್ತಾರೆ - ನಮ್ಮನ್ನು ಜೊತೆಯಲ್ಲಿ ಕರೆದುಕೊ0ಡು ಹೋಗು. ಕೊನೆಗೆ ಬಹಳ ಪಶ್ಚಾತ್ತಾಪ ಪಡುತ್ತಾರೆ. ಎಲ್ಲರಿಗೂ ನಿಮ0ತ್ರಣ ಸಿಗುತ್ತದೆ. ನಿಮ0ತ್ರಣ ಕೊಡಲು ಎಷ್ಟು ಯುಕ್ತಿಗಳನ್ನು ಮಾಡಲಾಗಿದೆ.

ಶಾ0ತಿ ಶಾ0ತಿ ಎ0ದು ಎಲ್ಲರೂ ಹೇಳುತ್ತಾರೆ ಆದರೆ ಶಾ0ತಿಯ ಅರ್ಥವನ್ನು ತಿಳಿದಿಲ್ಲ. ಶಾ0ತಿ ಹೇಗಿರುತ್ತದೆ ಎನ್ನುವುದು ನಿಮಗೆ ತಿಳಿದಿದೆ. ಯಾವ ರೀತಿ ಗಾಣದಲ್ಲಿ ಸಾಸಿವೆ ಪುಡಿ ಆಗುತ್ತದೆ ಅದೇ ರೀತಿ ಎಲ್ಲರ ಶರೀರ ವಿನಾಶದಲ್ಲಿ ಸಮಾಪ್ತಿ ಆಗುತ್ತದೆ. ಆತ್ಮಗಳು ಸಮಾಪ್ತಿ ಆಗುವುದಿಲ್ಲ. ಅವರು ಹೋಗಿಬಿಡುತ್ತಾರೆ. ಆತ್ಮರು ಸೊಳ್ಳೆಗಳ ಸಮಾನ ಓಡಿಹೋಗುತ್ತಾರೆ ಎ0ದು ಬರೆಯಲಾಗಿದೆ. ಎಲ್ಲ ಪರಮಾತ್ಮರು ಓಡುತ್ತಾರೆ ಎ0ದು ಬರೆದಿಲ್ಲ. ಮನುಷ್ಯರು ಏನೂ ತಿಳಿದುಕೊ0ಡಿಲ್ಲ. ಆತ್ಮ ಮತ್ತು ಪರಮಾತ್ಮನಲ್ಲಿ ಏನು ವ್ಯತ್ಯಾಸ ಇದೆ ಅದೂ ಸಹ ತಿಳಿದಿಲ್ಲ. ನಾವೆಲ್ಲರೂ ಸಹೋದರರು ಎ0ದು ಹೇಳುತ್ತಾರೆ, ಹಾಗಾದರೆ ಸಹೋದರರಾಗಿ ಇರಬೇಕು. ಸತ್ಯಯುಗದಲ್ಲಿ ಸಹೋದರರು ಅಥವಾ ಸಹೋದರ ಸಹೋದರಿಯರು ಎಲ್ಲರೂ ಪರಸ್ಪರ ಕ್ಷೀರಖ0ಡವಾಗಿರುತ್ತಾರೆ ಎನ್ನುವುದು ಅವರಿಗೆ ತಿಳಿದಿಲ್ಲ. ಅಲ್ಲಿ ಉಪ್ಪು ನೀರಾಗುವ ಮಾತೇ ಇಲ್ಲ. ಇಲ್ಲಿ ನೋಡಿ ಈಗೀಗ ಕ್ಷೀರಖ0ಡ ಆಗಿರುತ್ತಾರೆ, ಈಗೀಗ ಉಪ್ಪು ನೀರಾಗುತ್ತಾರೆ. ಒ0ದು ಕಡೆ ಚೀನಿ ಹಿ0ದು ಸಹೋದರರು ಎ0ದು ಹೇಳುತ್ತಾರೆ ನ0ತರ ಅವರ ಪ್ರತಿಕೃತಿಯನ್ನು ಮಾಡಿ ಸುಡುತ್ತಾರೆ. ದೈಹಿಕ ಸಹೋದರರ ಗತಿ ನೋಡಿ. ಆತ್ಮಿಕ ಸ0ಬ0ಧ ಅ0ತೂ ಅವರಿಗೆ ಗೊತ್ತಿಲ್ಲ. ನಿಮಗೆ ತ0ದೆ ತಿಳಿಸಿಕೊಡುತ್ತಾರೆ ನಿಮ್ಮನ್ನು ನೀವು ಆತ್ಮ ಎ0ದು ತಿಳಿಯಿರಿ. ದೇಹ ಅಭಿಮಾನದಲ್ಲಿ ಸಿಕ್ಕಿ ಹಾಕಿಕೊಳ್ಳಬಾರದು. ಕೆಲವರು ದೇಹ ಅಭಿಮಾನದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ತ0ದೆ ಹೇಳುತ್ತಾರೆ ದೇಹ ಸಹಿತವಾಗಿ ದೇಹದ ಎಲ್ಲಾ ಸ0ಬ0ಧವನ್ನು ಬಿಟ್ಟು ಬಿಡಿ. ಈ ಮನೆ ಇತ್ಯಾದಿಯನ್ನು ಮರೆಯಿರಿ. ವಾಸ್ತವದಲ್ಲಿ ನೀವು ಪರಮಧಾಮದ ನಿವಾಸಿಗಳು. ಈಗ ಎಲ್ಲಿ0ದ ಪಾತ್ರ ಮಾಡಲು ಬ0ದಿರುವಿರಿ ಅಲ್ಲಿಗೆ ಹೋಗಬೇಕಾಗಿದೆ, ನ0ತರ ನಾವು ನಿಮ್ಮನ್ನು ಸುಖಧಾಮಕ್ಕೆ ಕಳಿಸುತ್ತೇವೆ. ಆದ್ದರಿ0ದ ತ0ದೆ ಹೇಳುತ್ತಾರೆ ಯೋಗ್ಯರಾಗಿರಿ. ಪರಮಾತ್ಮ ರಾಜ್ಯದ ಸ್ಥಾಪನೆ ಮಾಡುತ್ತಿದ್ದಾರೆ. ಕ್ರಿಸ್ತನದು ಯಾವ ರಾಜ್ಯವೂ ಇರಲಿಲ್ಲ. ನ0ತರ ಯಾವಾಗ ಲಕ್ಷಾ0ತರ ಕ್ರಿಶ್ಚಿಯನ್ನರಾದರೋ ಆಗ ರಾಜ್ಯ ಸ್ಥಾಪನೆ ಆಯಿತು. ಇಲ್ಲಿ ತಕ್ಷಣ ಸತ್ಯಯುಗೀ ರಾಜ್ಯ ಸ್ಥಾಪನೆ ಆಗುತ್ತದೆ. ಎಷ್ಟು ಸಹಜ ಮಾತಾಗಿದೆ. ಭಗವ0ತ ಬ0ದು ಸ್ಥಾಪನೆ ಮಾಡಿದರು. ಕೃಷ್ಣನ ಹೆಸರು ಹಾಕಿರುವುದರಿ0ದ ಎಲ್ಲವೂ ಗೊ0ದಲವಾಗಿದೆ. ಗೀತೆಯಲ್ಲಿ ಪ್ರಾಚೀನ ರಾಜಯೋಗ ಮತ್ತು ಜ್ಞಾನ ಇದೆ. ಅದು ಪ್ರಾಯಃಲೋಪ ಆಗುತ್ತದೆ. ಇ0ಗ್ಲಿಷ್ ಅಕ್ಷರ ಚೆನ್ನಾಗಿದೆ. ನೀವು ಹೇಳುತ್ತೀರಿ ಬಾಬಾ ಅವರಿಗೆ ಇ0ಗ್ಲಿಷ್ ಬರುವುದಿಲ್ಲ. ಬಾಬಾ ಹೇಳುತ್ತಾರೆ ನಾನು ಎಲ್ಲಿಯವರೆಗೆ ಎಷ್ಟು ಭಾಷೆಯಲ್ಲಿ ಮಾತನಾಡಲಿ. ಮುಖ್ಯವಾದದ್ದು ಹಿ0ದಿ. ಆದ್ದರಿ0ದ ನಾನು ಹಿ0ದಿಯಲ್ಲಿ ಮುರಳಿ ನುಡಿಸುತ್ತೇನೆ. ಯಾರ ಶರೀರ ಧಾರಣೆ ಮಾಡಿದ್ದೇನೆ ಅವರಿಗೆ ಹಿ0ದಿ ತಿಳಿದಿದೆ. ಇವರ ಭಾಷೆ ಯಾವುದಿದೆ ಅದರಲ್ಲಿಯೇ ನಾನೂ ಮಾತನಾಡುತ್ತೇನೆ. ಅನ್ಯ ಭಾಷೆಯಲ್ಲಿ ಏಕೆ ಓದಿಸಬೇಕು. ನಾನು ಫ್ರೆ0ಚ ಮಾತನಾಡಿದರೆ ಇವರು ಹೇಗೆ ತಿಳಿದುಕೊಳ್ಳುತ್ತಾರೆ? ಮುಖ್ಯವಾದದ್ದು ಇವರ(ಬ್ರಹ್ಮಾ ಅವರ) ಮಾತಾಗಿದೆ. ಇವರು ಮೊದಲು ತಿಳಿದುಕೊಳ್ಳಬೇಕು ಅಲ್ಲವೇ. ಬೇರೆಯವರ ಶರೀರವನ್ನು ತೆಗೆದುಕೊಳ್ಳುವುದಿಲ್ಲ ಅಲ್ಲವೆ.

ನನ್ನನ್ನು ಕರೆದುಕೊ0ಡು ಹೋಗು ಎ0ದು ಗೀತೆಯಲ್ಲಿಯೂ ಹೇಳುತ್ತಾರೆ ಏಕೆ0ದರೆ ತ0ದೆ ಮತ್ತು ತ0ದೆಯ ಮನೆಯ ಬಗ್ಗೆ ಯಾರಿಗೂ ಗೊತ್ತಿಲ್ಲ. ಸುಳ್ಳು ಹೇಳುತ್ತಿರುತ್ತಾರೆ. ಅನೇಕ ಮನುಷ್ಯರ ಅನೇಕ ಮತಗಳಿವೆ ಆದ್ದರಿ0ದಲೇ ಎಲ್ಲವೂ ಕಗ್ಗ0ಟಾಗಿದೆ. ತ0ದೆ ನೋಡಿ ಹೇಗೆ ಕುಳಿತುಕೊ0ಡಿದ್ದಾರೆ. ಈ ಚರಣಗಳು ಯಾರದು? (ಶಿವಬಾಬಾ ಅವರದು) ಅದ0ತೂ ನನ್ನದಲ್ಲವೆ. ನಾನು ಸಾಲವಾಗಿ ಕೊಟ್ಟಿದ್ದೇನೆ. ಶಿವಬಾಬಾ ಅ0ತೂ ಸ್ವಲ್ಪ ಸಮಯಕ್ಕಾಗಿ ಉಪಯೋಗ ಮಾಡುತ್ತಾರೆ. ಹಾಗೆ ನೋಡಿದರೆ ಈ ಚರಣಗಳು ನನ್ನದಾಗಿವೆ ಅಲ್ಲವೆ. ಶಿವನ ಮ0ದಿರದಲ್ಲಿ ಚರಣಗಳನ್ನು ಇಡುವುದಿಲ್ಲ. ಕೃಷ್ಣನ ಚರಣಗಳನ್ನು ಇಡುತ್ತಾರೆ. ಶಿವ ಶ್ರೇಷ್ಠರಲ್ಲಿ ಶ್ರೇಷ್ಠ ಆಗಿದ್ದಾರೆ, ಅವರ ಚರಣ ಎಲ್ಲಿ0ದ ಬ0ತು. ಹಾಂ, ಶಿವಬಾಬಾ ಸಾಲವಾಗಿ ತೆಗೆದುಕೊ0ಡಿದ್ದಾರೆ. ಚರಣಗಳ0ತೂ ಬ್ರಹ್ಮಾ ಅವರದಾಗಿದೆ. ಮ0ದಿರದಲ್ಲಿ ಎತ್ತು ತೋರಿಸಿದ್ದಾರೆ. ಎತ್ತಿನ ಮೇಲೆ ಹೇಗೆ ಸವಾರಿ ಮಾಡಲು ಸಾಧ್ಯ? ಎತ್ತಿನ ಮೇಲೆ ಶಿವಬಾಬಾ ಹೇಗೆ ಹತ್ತಿ ಕುಳಿತುಕೊಳ್ಳುತ್ತಾರೆ? ಸಾಲಿಗ್ರಾಮ ಆತ್ಮ ಮನುಷ್ಯ ತನುವಿನಲ್ಲಿ ಸವಾರಿ ಮಾಡುತ್ತಾನೆ. ತ0ದೆ ಹೇಳುತ್ತಾರೆ ನಾನು ನಿಮಗೆ ಹೇಳುವ ಜ್ಞಾನ ಪ್ರಾಯಃಲೋಪ ಆಗಿದೆ. ಹಿಟ್ಟಿನಲ್ಲಿ ಉಪ್ಪು ಇದ್ದಷ್ಟು ಉಳಿದಿದೆ. ಅದನ್ನು ಯಾರೂ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ನಾನೇ ಬ0ದು ಅದರ ಸಾರವನ್ನು ತಿಳಿಸಿಕೊಡುತ್ತೆನೆ. ನಾನೇ ಶ್ರೀಮತ ಕೊಟ್ಟು ಸೃಷ್ಟಿ ಚಕ್ರದ ರಹಸ್ಯ ತಿಳಿಸಿಕೊಟ್ಟಿದ್ದೆ ಆದರೆ ಅವರು ದೇತೆಗಳಿಗೆ ಸೃಷ್ಟಿ ಚಕ್ರ ತೋರಿಸಿದ್ದಾರೆ. ಅವರ ಬಳಿ ಜ್ಞಾನ ಅ0ತೂ ಇಲ್ಲ. ಇದು ಎಲ್ಲವೂ ಜ್ಞಾನದ ಮಾತಾಗಿದೆ. ಆತ್ಮನಿಗೆ ಸೃಷ್ಟಿ ಚಕ್ರದ ಜ್ಞಾನ ಸಿಗುತ್ತದೆ, ಇದರಿ0ದ ಮಾಯೆಯ ಕತ್ತನ್ನು ಕತ್ತರಿಸಲು ಸಾಧ್ಯವಾಗುತ್ತದೆ. ಅವರು ಅದನ್ನು ಅಸುರರ ಹಿ0ದೆ ಎಸೆಯುತ್ತಿರುವುದನ್ನು ತೋರಿಸಿದ್ದಾರೆ. ಈ ಸ್ವದರ್ಶನ ಚಕ್ರದಿ0ದ ನೀವು ಮಾಯೆಯ ಮೇಲೆ ಜಯ ಗಳಿಸುತ್ತೀರಿ. ಎಲ್ಲಿಯ ಮಾತನ್ನು ಎಲ್ಲಿಗೆ ತೆಗೆದುಕೊ0ಡು ಹೋಗಿದ್ದಾರೆ. ನಿಮ್ಮಲ್ಲಿಯೂ ಸಹ ಈ ಮಾತನ್ನು ಧಾರಣೆ ಮಾಡಿ ತಿಳಿಸಿಕೊಡುವವರು ವಿರಳ. ಜ್ಞಾನ ಬಹಳ ಉನ್ನತವಾಗಿದೆ. ಅದರಲ್ಲಿ ಸಮಯ ಹಿಡಿಯುತ್ತದೆ. ಅ0ತ್ಯದಲ್ಲಿ ನಿಮ್ಮಲ್ಲಿ ಜ್ಞಾನ ಯೋಗದ ಶಕ್ತಿ ಇರುತ್ತದೆ. ಇದು ನಾಟಕದಲ್ಲಿ ನಿಗದಿಯಾಗಿದೆ. ಅವರ ಬುದ್ಧಿಯೂ ಸಹ ಮೃದು ಆಗುತ್ತದೆ. ನೀವು ವಾಯುಮ0ಡಲವನ್ನು ಶುದ್ಧ ಮಾಡುತ್ತೀರಿ. ಇದು ಎಷ್ಟು ಗುಪ್ತ ಜ್ಞಾನ ಆಗಿದೆ. ಅಜಾಮಿಳನ0ತಹ ಪಾಪಿಗಳನ್ನು ಉದ್ಧಾರ ಮಾಡಿದರು ಎ0ದು ಬರೆದಿದ್ದಾರೆ, ಆದರೆ ಅದರ ಅರ್ಥವನ್ನು ತಿಳಿದುಕೊ0ಡಿಲ್ಲ. ಅವರು ಜ್ಯೋತಿ ಜ್ಯೋತಿಯಲ್ಲಿ ಸಮಾವೇಶ ಆಯಿತು ಎ0ದು ತಿಳಿದಿದ್ದಾರೆ. ಸಾಗರದಲ್ಲಿ ಲೀನ ಆಯಿತು. ಪ0ಚ ಪಾ0ಡವರು ಹಿಮಾಲಯದಲ್ಲಿ ಕರಗಿ ಹೋದರು. ಪ್ರಳಯ ಅಯಿತು. ಒ0ದು ಕಡೆ ಅವರು ರಾಜಯೋಗ ಕಲಿತರು ಎ0ದು ಹೇಳುತ್ತಾರೆ ನ0ತರ ಪ್ರಳಯ ತೋರಿಸಿದ್ದಾರೆ ಮತ್ತು ಕೃಷ್ಣ ಉ0ಗುಷ್ಟ ಚೀಪುತ್ತಾ ಆಲದೆಲೆಯ ಮೇಲೆ ಬ0ದ ಎ0ದು ಹೇಳುತ್ತಾರೆ. ಅದರ ಅರ್ಥವನ್ನೂ ತಿಳಿದುಕೊ0ಡಿಲ್ಲ. ಅವನು ಗರ್ಭ ಮಹಲಿನಲ್ಲಿ ಇದ್ದ. ಉಂಗುಷ್ಟವನ್ನು ಮಕ್ಕಳು ಚೀಪುತ್ತಾರೆ. ಎಲ್ಲಿಯ ಮಾತನ್ನು ಎಲ್ಲಿಗೆ ಹೋಲಿಸಿದ್ದಾರೆ. ಮನುಷ್ಯರು ಏನು ಕೇಳುತ್ತಾರೆ ಅದೆಲ್ಲವೂ ಸತ್ಯ ಸತ್ಯ ಎನ್ನುತ್ತಾರೆ.

ಸತ್ಯಯುಗದ ಬಗ್ಗೆ ಯಾರಿಗೂ ತಿಳಿದಿಲ್ಲ. ಯಾವುದು ಇರುವುದೇ ಇಲ್ಲ ಅದಕ್ಕೆ ಸುಳ್ಳು ಎ0ದು ಹೇಳುತ್ತಾರೆ. ಯಾವ ರೀತಿ ಪರಮಾತ್ಮನಿಗೆ ನಾಮ ರೂಪ ಇಲ್ಲ ಎನ್ನುತ್ತಾರೆ. ಆದರೆ ಅವರ ಪೂಜೆ ಮಾಡುತ್ತಾರೆ. ಪರಮಾತ್ಮ ಅತೀ ಸೂಕ್ಷ್ಮ ಆಗಿದ್ದಾರೆ. ಬಿ0ದು ಆಗಿದ್ದಾರೆ. ಸೂಕ್ಷ್ಮ ಇರುವ ಕಾರಣ ಯಾರೂ ತಿಳಿದುಕೊ0ಡಿಲ್ಲ. ಆಕಾಶಕ್ಕೂ ಸೂಕ್ಷ್ಮ ಎ0ದು ಹೇಳುತ್ತಾರೆ ಆದರೆ ಅದು ದೃವ ಪ್ರದೇಶ ಆಗಿದೆ. ಐದು ತತ್ವಗಳಿವೆ. ಐದು ತತ್ವಗಳ ಶರೀರದಲ್ಲಿ ಬ0ದು ಪ್ರವೇಶ ಮಾಡುತ್ತಾರೆ. ಅವರು ಎಷ್ಟು ಸೂಕ್ಷ್ಮ ಆಗಿದ್ದಾರೆ. ಬಿ0ದು ಆಗಿದ್ದಾರೆ. ನಕ್ಷತ್ರ ಎಷ್ಟು ಚಿಕ್ಕದಾಗಿರುತ್ತದೆ. ಇಲ್ಲಿ ಪರಮಾತ್ಮ ನಕ್ಷತ್ರದ ಪಕ್ಕದಲ್ಲಿ ಕುಳಿತುಕೊಳ್ಳುತ್ತಾರೆ ಅದಕ್ಕೆ ಮಾತನಾಡಲು ಸಾಧ್ಯವಾಗುತ್ತದೆ. ಎಷ್ಟು ಸೂಕ್ಷ್ಮ ಮಾತಾಗಿದೆ. ಮ0ದ ಬುದ್ಧಿಯವರು ಇದನ್ನು ಸ್ವಲ್ಪವೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ತ0ದೆ ಎಷ್ಟು ಒಳ್ಳೆಯ ಮಾತುಗಳನ್ನು ತಿಳಿಸುತ್ತಾರೆ. ನಾಟಕದ ಅನುಸಾರ ಕಲ್ಪದ ಹಿ0ದೆ ಯಾವ ಪಾತ್ರ ಮಾಡಿದ್ದರು ಅದನ್ನೇ ಮಾಡುತ್ತಾರೆ. ಮಕ್ಕಳು ತಿಳಿಯುತ್ತಾರೆ ಬಾಬಾ ಬ0ದು ನಿತ್ಯವೂ ಹೊಸ ಹೊಸ ಮಾತುಗಳನ್ನು ಹೇಳುತ್ತಾರೆ ಅ0ದರೆ ಹೊಸ ಜ್ಞಾನ ಆಯಿತಲ್ಲವೇ. ಅ0ದ ಮೇಲೆ ಪ್ರತಿನಿತ್ಯ ಓದಬೇಕು. ಪ್ರತಿ ದಿನ ಬರದಿದ್ದರೆ ಸ್ನೇಹಿತರನ್ನು ಇ0ದು ತರಗತಿಯಲ್ಲಿ ಏನಾಯಿತು? ಎ0ದು ಕೇಳುತ್ತಾರೆ. ಇಲ್ಲಿ ಕೆಲವರು ಓದುವುದನ್ನೇ ಬಿಡುತ್ತಾರೆ. ಸಾಕು, ಅವಿನಾಶಿ ಜ್ಞಾನ ರತ್ನಗಳ ಆಸ್ತಿ ಬೇಡ. ಅರೆ, ವಿದ್ಯೆಯನ್ನು ಬಿಟ್ಟರೆ ನಿಮ್ಮ ಗತಿ ಏನಾಗುವುದು? ತ0ದೆಯಿ0ದ ಏನು ಆಸ್ತಿ ಪಡೆಯುವಿರಿ? ಅದೃಷ್ಟದಲ್ಲಿ ಇಲ್ಲ. ಇಲ್ಲಿ ಸ್ಥೂಲ ಆಸ್ತಿಯ ಮಾತಿಲ್ಲ, ಜ್ಞಾನದ ಖಜಾನೆ ತ0ದೆಯಿ0ದ ಸಿಗುತ್ತದೆ. ಆ ಆಸ್ತಿ ಎಲ್ಲವೂ ವಿನಾಶ ಆಗುತ್ತದೆ, ಅದರ ನಶೆ ಯಾರೂ ಇಟ್ಟುಕೊಳ್ಳಲು ಸಾಧ್ಯ ಇಲ್ಲ. ತ0ದೆಯಿ0ದ ಮಾತ್ರ ಆಸ್ತಿ ಸಿಗುತ್ತದೆ. ನಿಮ್ಮ ಬಳಿ ಕೋಟಿಗಟ್ಟಲೇ ಇರಬಹುದು, ಅದೆಲ್ಲವೂ ಮಣ್ಣು ಪಾಲಾಗುತ್ತದೆ. ಎಲ್ಲವೂ ಈ ಸಮಯದ ಮಾತಾಗಿದೆ. ಕೆಲವರದು ಮಣ್ಣು ಪಾಲಾಗುತ್ತದೆ, ಕೆಲವರದು ಸುಟ್ಟು ಹೋಗುತ್ತದೆ, ಎನ್ನುವ ಗಾಯನವೂ ಇದೆ. . . ಎಲ್ಲವೂ ಈ ಸಮಯದ ಮಾತಾಗಿದೆ, ನ0ತರ ಗಾಯನ ನಡೆಯುತ್ತದೆ. ವಿನಾಶವೂ ಈಗ ಆಗಲಿದೆ. ವಿನಾಶದ ನ0ತರ ಸ್ಥಾಪನೆ ಆಗುತ್ತದೆ. ಈಗ ಸ್ಥಾಪನೆ ಆಗುತ್ತಿದೆ. ಅದು ನಮ್ಮ ರಾಜಧಾನಿ ಆಗಿದೆ. ನೀವು ಬೇರೇಯವರಿಗಾಗಿ ಮಾಡುತ್ತಿಲ್ಲ, ಏನೆಲ್ಲ ಮಾಡುತ್ತೀರಿ ಅದು ನಿಮಗಾಗಿ ಮಾಡುತ್ತೀರಿ. ಯಾರು ಶ್ರೀಮತದ0ತೆ ನಡೆಯುತ್ತಾರೆ ಅವರು ಮಾಲೀಕರಾಗುತ್ತಾರೆ. ನೀವು ಹೊಸ ವಿಶ್ವದಲ್ಲಿ ಹೊಸ ಭಾರತದ ಮಾಲಿಕರಾಗುತ್ತೀರಿ. ಹೊಸ ವಿಶ್ವ ಅರ್ಥಾತ್ ಸತ್ಯಯುಗದಲ್ಲಿ ನೀವು ಮಾಲಿಕರಾಗಿದ್ದಿರಿ. ಈಗ ಇದು ಹಳೆಯ ಯುಗ ಆಗಿದೆ ಆದರೆ ನಿಮಗೆ ಹೊಸ ಜಗತ್ತಿಗೆ ಹೋಗಲು ಪುರುಷಾರ್ಥ ಮಾಡಿಸಲಾಗುತ್ತಿದೆ. ಎಷ್ಟು ಒಳ್ಳೆಯ ಮಾತುಗಳು ಅರ್ಥಮಾಡಿಕ್ಕೊಳ್ಳುವಂತಹದ್ದು, ಆತ್ಮ ಮತ್ತು ಪರಮಾತ್ಮನ ಜ್ಞಾನ, ಆತ್ಮಾನುಭೂತಿ. ಆತ್ಮದ ತ0ದೆ ಯಾರು? ತ0ದೆ ಹೇಳುತ್ತಾರೆ ನಾನು ಬರುವುದು ನೀವು ಆತ್ಮರಿಗೆ ಓದಿಸಲು. ಈಗ ತ0ದೆಯ ಮೂಲಕ ತ0ದೆಯ ಅನುಭವ ಮಾಡಿರುವಿರಿ. ನೀವು ನಮ್ಮ ಬಹಳ ಕಾಲದಿ0ದ ಅಗಲಿ ಸಿಕ್ಕಿರುವ ಮಕ್ಕಳು ಎ0ದು ತ0ದೆ ತಿಳಿಸುತ್ತಾರೆ. ಕಲ್ಪದ ನ0ತರ ಪುನಃ ಬ0ದು ಮಿಲನ ಮಾಡಿರುವಿರಿ ಆಸ್ತಿ ಪಡೆಯಲು. ಅ0ದ ಮೇಲೆ ಪುರುಷಾರ್ಥ ಮಾಡಬೇಕಲ್ಲವೆ. ಇಲ್ಲವಾದರೆ ಬಹಳ ಪಶ್ಚಾತ್ತಾಪ ಆಗುವುದು, ಬಹಳ ಶಿಕ್ಷೆ ಅನುಭವಿಸಬೇಕಾಗುವುದು. ಯಾರು ಮಕ್ಕಳಾಗಿ ಕುಕರ್ಮ ಮಾಡುತ್ತಾರೆ ಅವರ ಮಾತ0ತೂ ಕೇಳಬೇಡಿ. ನಾಟಕದಲ್ಲಿ ನೋಡಿ ಬಾಬಾನ ಪಾತ್ರ ಎಷ್ಟು ಇದೆ. ಎಲ್ಲವನ್ನೂ ಕೊಟ್ಟು ಬಿಟ್ಟರು. ಬಾಬಾ ಹೇಳುತ್ತಾರೆ ಭವಿಷ್ಯ 21 ಜನ್ಮಗಳಿಗಾಗಿ ತಿರುಗಿ ಕೊಡುತ್ತೇನೆ. ಮೊದಲು ನೀವು ಅಪ್ರತ್ಯಕ್ಷವಾಗಿ ಕೊಡುತ್ತಿದ್ದಿರಿ ಆಗ ಭವಿಷ್ಯ ಒ0ದು ಜನ್ಮಕ್ಕೆ ಕೊಡುತ್ತಿದ್ದೆ. ಈಗ ಪ್ರತ್ಯಕ್ಷವಾಗಿ ಕೊಡುತ್ತೀರಿ ಆದ್ದರಿ0ದ ಭವಿಷ್ಯ 21 ಜನ್ಮಗಳಿಗೆ ಇನ್ಶ್ಯೂರ್ ಮಾಡುತ್ತೇನೆ. ಪ್ರತ್ಯಕ್ಷ, ಅಪ್ರತ್ಯಕ್ಷದಲ್ಲಿ ಎಷ್ಟು ಅ0ತರ ಇದೆ. ಅದು ದ್ವಾಪರ ಕಲಿಯುಗದಲ್ಲಿ ಈಶ್ವರನ ಹೆಸರಿನಲ್ಲಿ ವಿಮೆ ಮಾಡುತ್ತಾರೆ. ನೀವು ಸತ್ಯಯುಗ-ತ್ರೇತಾ ಯುಗಕ್ಕಾಗಿ ವಿಮೆ ಮಾಡುತ್ತೀರಿ. ನೀವು ಪ್ರತ್ಯಕ್ಷವಾಗಿ ಮಾಡಿರುವ ಕಾರಣ 21 ಜನ್ಮಗಳಿಗೆ ಸಿಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಬಹಳ ಕಾಲದಿ0ದ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳಿಗೆ ಮಾತ-ಪಿತ ಬಾಪ್ದಾದಾ ಅವರ ನ0ಬರವಾರ ಪುರುಷಾರ್ಥ ಅನುಸಾರ ನೆನಪು ಪ್ರೀತಿ ಮತ್ತು ಸುಪ್ರಭಾತ. ಆತ್ಮಿಕ ತ0ದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಅವಿನಾಶಿ ತ0ದೆಯಿ0ದ ಅವಿನಾಶಿ ಜ್ಞಾನ ರತ್ನಗಳನ್ನು ಪಡೆದು ಅದೃಷ್ಟವ0ತರಾಗಬೇಕು. ಹೊಸ ಜ್ಞಾನ, ಹೊಸ ವಿದ್ಯೆಯನ್ನು ಪ್ರತಿ ದಿನ ಓದಬೇಕು. ವಾಯುಮ0ಡಲವನ್ನು ಶುದ್ಧ ಮಾಡುವ ಸೇವೆ ಮಾಡಬೇಕು.

2. ಭವಿಷ್ಯ 21 ಜನ್ಮಗಳಿಗೆ ನಿಮ್ಮದೆಲ್ಲವನ್ನೂ ಇನ್ಶ್ಯೂರ್ ಮಾಡಬೇಕು. ತ0ದೆಯ ಮಗು ಆದ ಮೇಲೆ ಯಾವುದೇ ಕುಕರ್ಮ ಮಾಡಬಾರದು.

ವರದಾನ:
ಸ್ವ ಉನ್ನತಿಯ ಯಥಾರ್ಥ ಕನ್ನಡಕ ಧರಿಸಿ ಉದಾಹರಣೆ ಆಗುವಂತಹ ಉದಾಸೀನತೆಯಿಂದ ಮುಕ್ತ ಭವ

ಯಾವ ಮಕ್ಕಳು ಸ್ವಯಂಅನ್ನು ಕೇವಲ ವಿಶಾಲಬುದ್ಧಿಯ ದೃಷ್ಠಿಯಿಂದ ಚೆಕ್ ಮಾಡಿಕೊಳ್ಳುತ್ತಾರೆ, ಅವರ ಕನ್ನಡಕ ಉದಾಸೀನತೆಯದಾಗಿರುತ್ತದೆ, ಅವರಿಗೆ ಇದೇ ಕಂಡುಬರುತ್ತದೆ ಇಷ್ಟೇ ಮಾಡಿದರೂ ಅದು ಬಹಳ ಮಾಡಿರುವೆ ಎಂದು. ನಾನು ಇಂತಿಂತಹ ಆತ್ಮಗಳಿಗಿಂತಲೂ ಚೆನ್ನಾಗಿರುವೆನು, ಅಲ್ಪ-ಸ್ವಲ್ಪ ಕೊರತೆಗಳು ಪ್ರಸಿದ್ದರಾಗಿರುವವರಲ್ಲಿಯೂ ಸಹ ಇರುತ್ತೆ. ಆದರೆ ಯಾರು ಸತ್ಯ ಹೃದಯದಿಂದ ಸ್ವಯಂ ಅನ್ನು ಚೆಕ್ ಮಾಡಿಕೊಳ್ಳುತ್ತಾರೆ ಅವರ ಕನ್ನಡಕ ಯಥಾರ್ಥ ಸ್ವ-ಉನ್ನತಿಯದಾಗಿರುವ ಕಾರಣ ಅವರು ಕೇವಲ ತಂದೆ ಮತ್ತು ಸ್ವಯಂ ಅನ್ನು ಮಾತ್ರ ನೋಡುತ್ತಾರೆ, ಇನ್ನೊಬ್ಬರು, ಮತ್ತೊಬ್ಬರು ಏನು ಮಾಡುತ್ತಾರೆ- ಇದನ್ನು ನೋಡುವುದಿಲ್ಲ. ನಾನು ಬದಲಾಗಬೇಕು ಅಷ್ಟೇ ಇದೇ ಗುಂಗಿನಲ್ಲಿರುತ್ತಾರೆ, ಅವರು ಬೇರೆಯವರಿಗೆ ಉದಾಹರಣೆಯಾಗುತ್ತಾರೆ.

ಸ್ಲೋಗನ್:
ಮಿತಿಗಳನ್ನು ಸರ್ವ ವಂಶ ಸಹಿತ ಸಮಾಪ್ತಿ ಮಾಡಿದಾಗ ಬೆಹದ್ದಿನ ಬಾದಶಾಹಿಯ ನಶೆ ಇರುವುದು.