04.01.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ತಂದೆಯ ನೆನಪಿನಲ್ಲಿದ್ದು ಸದಾ ಹರ್ಷಿತವಾಗಿರಿ, ನೆನಪಿನಲ್ಲಿ ಇರುವವರು ಬಹಳ ರಮಣೀಕ ಮತ್ತು ಮಧುರರಾಗಿರುತ್ತಾರೆ, ಖುಷಿಯಲ್ಲಿದ್ದು ಸೇವೆಯನ್ನು ಮಾಡುತ್ತಾರೆ

ಪ್ರಶ್ನೆ:
ಜ್ಞಾನದ ನಶೆಯ ಜೊತೆ ಜೊತೆಗೆ ಯಾವ ಪರಿಶೀಲನೆಯನ್ನು ಮಾಡಿಕೊಳ್ಳುವುದು ಬಹಳ ಅವಶ್ಯಕತೆಯಿದೆ?

ಉತ್ತರ:
ಜ್ಞಾನದ ನಶೆಯಂತೂ ಇರುತ್ತದೆ, ಆದರೆ ಎಷ್ಟು ದೇಹೀ-ಅಭಿಮಾನಿಯಾಗಿರುತ್ತೇನೆ? ಎಂಬುದನ್ನು ಪರಿಶೀಲನೆ ಮಾಡಿಕೊಳ್ಳಿ. ಜ್ಞಾನವಂತೂ ಬಹಳ ಸಹಜವಾಗಿದೆ ಆದರೆ ಯೋಗದಲ್ಲಿ ಮಾಯೆಯು ವಿಘ್ನವನ್ನು ಹಾಕುತ್ತದೆ. ಗೃಹಸ್ಥ ವ್ಯವಹಾರದಲ್ಲಿ ಅನಾಸಕ್ತರಾಗಿರಬೇಕು. ಮಾಯಾರೂಪಿ ಇಲಿಯು ಒಳಗೊಳಗೆ ಕತ್ತರಿಸುವುದು ಗೊತ್ತಾಗದಿರುವ ರೀತಿ ಇರಬಾರದು. ನಿಮ್ಮ ನಾಡಿಯನ್ನು ನೀವೇ ನೋಡಿಕೊಳ್ಳಿ - ನನಗೆ ತಂದೆಯ ಜೊತೆ ಆಳವಾದ ಪ್ರೀತಿಯಿರುವುದೇ? ಎಷ್ಟು ಸಮಯ ನಾನು ನೆನಪಿನಲ್ಲಿರುತ್ತೇನೆ?

ಗೀತೆ:
ಪತಂಗವೇ ನೀನು ಇನ್ನೂ ಏಕೆ ಸುಡಲಿಲ್

ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳು ಗೀತೆಯ ಸಾಲನ್ನು ಕೇಳಿದಿರಿ, ಏಕೆಂದರೆ ಯಾವಾಗ ತಂದೆಯು ಇಷ್ಟೆಲ್ಲಾ ಶೋಭೆಯನ್ನು ತೋರಿಸುತ್ತಾರೆ. ನೀವು ಇಷ್ಟೊಂದು ಸುಂದರರಾಗುತ್ತೀರಿ ಅಂದಾಗ ತಂದೆಯ ಮಕ್ಕಳಾಗಿ ಏಕೆ ಆಗಬಾರದು. ಯಾವ ತಂದೆಯು ಶ್ಯಾಮನಿಂದ ಸುಂದರರನ್ನಾಗಿ ಮಾಡುತ್ತಾರೆ. ನಾವು ಶ್ಯಾಮನಿಂದ ಸುಂದರರಾಗುತ್ತೇವೆ ಎಂಬುದನ್ನು ಮಕ್ಕಳು ತಿಳಿದಿದ್ದೀರಿ. ಒಬ್ಬರ ಮಾತಲ್ಲ, ಅವರು ಕೃಷ್ಣನಿಗೆ ಶ್ಯಾಮ ಸುಂದರನೆಂದು ಹೇಳುತ್ತಾರೆ, ಚಿತ್ರವನ್ನೂ ಸಹ ಅದೇ ರೀತಿಯಾಗಿ ಮಾಡುತ್ತಾರೆ. ಕೆಲವು ಸುಂದರವಾಗಿ, ಕೆಲವು ಶ್ಯಾಮನಾಗಿ ಹೇಗೆ ಆಗಲು ಸಾಧ್ಯವಿದೆ ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಸತ್ಯಯುಗದ ರಾಜಕುಮಾರ ಶ್ರೀ ಕೃಷ್ಣ ಕಪ್ಪಾಗಿರಲು ಸಾಧ್ಯವಿಲ್ಲ. ಕೃಷ್ಣನಂತಹ ಮಗ ಇರಲಿ, ಪತಿಯಿರಲಿ ಎಂದು ಎಲ್ಲರೂ ಬಯಸುತ್ತಾರೆ. ಮತ್ತೆ ಇವನು ಶ್ಯಾಮನಾಗಿ ಹೇಗೆ ಆಗುತ್ತಾನೆ, ಏನನ್ನೂ ತಿಳಿದುಕೊಂಡಿಲ್ಲ. ಕೃಷ್ಣನನ್ನು ಕಪ್ಪಾಗಿ ಏಕೆ ತೋರಿಸುತ್ತಾರೆ? ಕಾರಣ ಬೇಕು. ಸರ್ಪದ ಮೇಲೆ ನರ್ತಿಸಿದನೆಂದು ತೋರಿಸುತ್ತಾರಲ್ಲವೆ. ಇಂತಹ ವಿಚಾರವಂತೂ ಆಗಿರುವುದಕ್ಕೆ ಸಾಧ್ಯವಿಲ್ಲ. ಇಂತಿಂತಹ ಮಾತುಗಳನ್ನು ಶಾಸ್ತ್ರಗಳಲ್ಲಿ ಕೇಳಿ ಹೇಳುತ್ತಾರೆ - ವಾಸ್ತವದಲ್ಲಿ ಇಂತಹ ಯಾವುದೇ ವಿಚಾರಗಳು ಇರುವುದಿಲ್ಲ. ಯಾವ ರೀತಿ ಚಿತ್ರಗಳಲ್ಲಿ ತೋರಿಸುತ್ತಾರೆ, ಶೇಷ ಶಯನದ ಮೇಲೆ ನಾರಾಯಣ ಕುಳಿತಿದ್ದಾನೆ, ಶೇಷ ಶಯನದಂತಹ ಸರ್ಪವು ಯಾವುದೂ ಇರುವುದಕ್ಕೆ ಸಾಧ್ಯವಿಲ್ಲ. ಇಷ್ಟೊಂದು ನೂರಾರು ಮುಖಗಳು ಇರುತ್ತವೆಯೇನು? ಎಂತೆಂತಹ ಚಿತ್ರಗಳನ್ನು ಕುಳಿತು ಮಾಡಿ ಬಿಟ್ಟಿದ್ದಾರೆ. ತಂದೆಯು ತಿಳಿಸುತ್ತಾರೆ - ಇದರಲ್ಲಿ ಏನೂ ಇಲ್ಲ, ಇವೆಲ್ಲವೂ ಭಕ್ತಿಮಾರ್ಗದ ಚಿತ್ರಗಳಾಗಿವೆ. ಇದೂ ಸಹ ನಾಟಕದಲ್ಲಿ ನಿಶ್ಚಿತವಾಗಿದೆ. ಆರಂಭದಿಂದ ಹಿಡಿದು ಈ ಸಮಯದವರೆಗೆ ಯಾವ ನಾಟಕವು ನಿಶ್ಚಿತವಾಗಿದೆಯೋ ಅದು ಪುನಃ ಪುನರಾವರ್ತನೆಯಾಗುತ್ತದೆ. ಭಕ್ತಿಯಲ್ಲಿ ಏನೇನು ಮಾಡುತ್ತಾರೆ ಎಂದು ಕೇವಲ ತಿಳಿಸಲಾಗುತ್ತಿದೆ. ಎಷ್ಟೊಂದು ಖರ್ಚು ಮಾಡುತ್ತಾರೆ, ಎಂತೆಂತಹ ಚಿತ್ರಗಳನ್ನು ಮಾಡುತ್ತಾರೆ. ಇವನ್ನು ಮೊದಲು ನೋಡಿದಾಗ ಇಷ್ಟೊಂದು ಆಶ್ಚರ್ಯವಾಗುತ್ತಿರಲಿಲ್ಲ. ಯಾವಾಗ ತಂದೆಯು ತಿಳಿಸಿಕೊಡುತ್ತಾರೆಯೋ ಆಗ ಇವೆಲ್ಲವೂ ಭಕ್ತಿಮಾರ್ಗದ ವಿಚಾರಗಳೆಂದು ತಿಳಿಯುತ್ತದೆ. ಭಕ್ತಿಯಲ್ಲಿ ಯಾವುದೆಲ್ಲಾ ಆಗಿದೆಯೋ ಅದು ಅವಶ್ಯವಾಗಿ ಪುನಃ ಆಗುತ್ತದೆ. ಇದನ್ನು ನಿಮ್ಮ ವಿನಃ ಬೇರೆ ಯಾರೂ ತಿಳಿಯಲು ಸಾಧ್ಯವಿಲ್ಲ. ಇದಂತೂ ಗೊತ್ತಿದೆ - ನಾಟಕದಲ್ಲಿ ಏನು ನೊಂದಾವಣೆಯಾಗಿದೆಯೋ ಅದೇ ಆಗುತ್ತಿರುತ್ತದೆ. ಅನೇಕ ಧರ್ಮಗಳ ವಿನಾಶ ಒಂದು ಧರ್ಮದ ಸ್ಥಾಪನೆಯಾಗುತ್ತದೆ, ಇದರಲ್ಲಿ ಬಹಳ ಕಲ್ಯಾಣವಿದೆ. ಈಗ ನೀವು ಈ ಪ್ರಾರ್ಥನೆ ಮುಂತಾದವುಗಳೆಲ್ಲಾ ಮಾಡುವುದಿಲ್ಲ, ಅವರು ಭಗವಂತನಿಂದ ಫಲವನ್ನು ಪಡೆಯಲು ಎಲ್ಲವನ್ನೂ ಮಾಡುತ್ತಿರುತ್ತಾರೆ. ಜೀವನ್ಮುಕ್ತಿಯ ಫಲವಾಗಿದೆ ಅಂದಾಗ ಇದೆಲ್ಲವನ್ನೂ ತಿಳಿಸಲಾಗುತ್ತಿದೆ. ಇಲ್ಲಿ ಪ್ರಜೆಗಳ ಮೇಲೆ ಪ್ರಜೆಗಳ ರಾಜ್ಯವಿದೆ. ಗೀತೆಯಲ್ಲಿ ಭಾರತವಾಸಿ ಪಾಂಡವರು, ಕೌರವರು ಏನು ಮಾಡಿ ಹೋದರು ಎಂದು ಇದೆ. ಅವಶ್ಯವಾಗಿ ಯಾದವರೇ ಶಸ್ತ್ರಾಸ್ತ್ರಗಳನ್ನು ಹೊರ ತಂದರು, ತಮ್ಮ ಕುಲವನ್ನು ವಿನಾಶ ಮಾಡಿದರು. ಇವರೆಲ್ಲರೂ ಪರಸ್ಪರದಲ್ಲಿ ಶತ್ರಗಳಾಗಿದ್ದಾರೆ. ನೀವು ಸಮಾಚಾರ ಮುಂತಾದವುಗಳನ್ನು ಕೇಳುವುದಿಲ್ಲ, ಯಾರು ಕೇಳುತ್ತಾರೆಯೋ ಅವರು ಚೆನ್ನಾಗಿ ತಿಳಿದುಕೊಳ್ಳಬಹುದು. ದಿನ-ಪ್ರತಿದಿನ ಒಳ ಜಗಳಗಳು ಬಹಳ ಇದೆ. ಅವರೆಲ್ಲರೂ ಕ್ರಿಶ್ಚಿಯನ್ನರೆ ಆಗಿದ್ದರೂ ಸಹ ಒಳ ಜಗಳಗಳು ಬಹಳ ಇವೆ. ಮನೆಯಲ್ಲಿ ಕುಳಿತಿದ್ದೆ ಪರಸ್ಪರರನ್ನು ಹಾರಿಸಿ ಬಿಡುತ್ತಾರೆ (ಕೊಂದು ಬಿಡುತ್ತಾರೆ). ನೀವು ರಾಜ್ಯದ ರಾಜ್ಯಭಾರವನ್ನು ಮಾಡುವುದಕ್ಕಾಗಿ ರಾಜಯೋಗವನ್ನು ಕಲಿಯುತ್ತಿದ್ದೀರಿ. ಹಳೆಯ ಪ್ರಪಂಚದ ಶುದ್ಧತೆಯೂ ಬೇಕಾಗಿದೆ. ನಂತರ ಹೊಸ ಜಗತ್ತಿನಲ್ಲಿ ಎಲ್ಲವೂ ಹೊಸದಾಗಿರುತ್ತದೆ. ಅಲ್ಲಿ ಪಂಚ ತತ್ವಗಳೂ ಸಹ ಸತೋಪ್ರಧಾನವಾಗಿರುತ್ತವೆ, ಸಮುದ್ರದಿಂದ ನೀರು ಉಕ್ಕಿ ಬಂದು ನಷ್ಟ ಮಾಡುವಂತಹ ಶಕ್ತಿಯಿರುವುದಿಲ್ಲ. ಈಗಂತೂ ಪಂಚ ತತ್ವಗಳು ಎಷ್ಟೊಂದು ನಷ್ಟ ಮಾಡುತ್ತಿವೆ. ಅಲ್ಲಿ ಇಡೀ ಪ್ರಕೃತಿಯೇ ದಾಸಿಯಾಗಿರುತ್ತದೆ ಆದ್ದರಿಂದ ಅಲ್ಲಿ ದುಃಖದ ಮಾತೇ ಇರುವುದಿಲ್ಲ. ಇದೂ ಸಹ ಮಾಡಿ-ಮಾಡಲ್ಪಟ್ಟಿರುವ ನಾಟಕದ ಆಟವಾಗಿದೆ. ಸತ್ಯಯುಗವನ್ನು ಸ್ವರ್ಗವೆಂದು ಹೇಳಲಾಗುತ್ತದೆ, ಕ್ರಿಶ್ಚಿಯನ್ನರೂ ಸಹ ಮೊಟ್ಟ ಮೊದಲು ಸ್ವರ್ಗವಿತ್ತೆಂದು ಹೇಳುತ್ತಾರೆ. ಭಾರತವು ಅವಿನಾಶಿ ಖಂಡವಾಗಿದೆ. ಕೇವಲ ನಮ್ಮನ್ನು ಮುಕ್ತರನ್ನಾಗಿ ಮಾಡುವ ತಂದೆ ಭಾರತದಲ್ಲಿ ಬರುತ್ತಾರೆಂದು ಅವರಿಗೆ ಗೊತ್ತಿಲ್ಲ. ಶಿವಜಯಂತಿಯನ್ನೂ ಆಚರಿಸುತ್ತಾರೆ ಆದರೂ ಸಹ ತಿಳಿಯಲು ಸಾಧ್ಯವಾಗಿಲ್ಲ. ಈಗ ನೀವು ತಿಳಿಸಿಕೊಡುತ್ತೀರಿ - ಭಾರತದಲ್ಲಿ ಶಿವ ಜಯಂತಿಯನ್ನು ಆಚರಿಸಲಾಗುತ್ತಿದೆ ಅಂದಾಗ ಅವಶ್ಯಾವಾಗಿ ಶಿವ ತಂದೆಯು ಭಾರತದಲ್ಲಿ ಬಂದು ಸ್ವರ್ಗವನ್ನು ಸ್ಥಾಪನೆ ಮಾಡಿದ್ದರು. ಈಗ ಪುನಃ ಮಾಡುತ್ತಿದ್ದಾರೆ. ಯಾರು ಪ್ರಜೆಗಳಾಗುವವರಿದ್ದಾರೆ, ಅವರ ಬುದ್ಧಿಯಲ್ಲಿ ಏನೂ ಕುಳಿತುಕೊಳ್ಳುವುದಿಲ್ಲ. ಯಾರು ರಾಜಧಾನಿಯಲ್ಲಿ ಇರುವವರಾಗಿದ್ದಾರೆ ಅವರು ತಿಳಿಯುತ್ತಾರೆ - ನಿಜಕ್ಕೂ ನಾವು ಶಿವತಂದೆಯ ಮಕ್ಕಳಾಗಿದ್ದೇವೆ. ಪ್ರಜಾಪಿತ ಬ್ರಹ್ಮನೂ ಇದ್ದಾರೆ. ಮುಕ್ತಿದಾತ ಜ್ಞಾನಸಾಗರ ಸ್ವಯಂ ತಂದೆಯೇ ಆಗಿದ್ದಾರೆ ಆದರೆ ಬ್ರಹ್ಮನಿಗೆ ಹೇಳುವುದಿಲ್ಲ. ಬ್ರಹ್ಮನಿಗೂ ಸಹ ಅವರಿಂದಲೇ ಮುಕ್ತಿಯಾಗುತ್ತದೆ. ಎಲ್ಲರನ್ನೂ ಒಬ್ಬ ತಂದೆಯೇ ಮುಕ್ತರನ್ನಾಗಿ ಮಾಡುತ್ತಾರೆ. ಏಕೆಂದರೆ ಎಲ್ಲರೂ ತಮೋಪ್ರಧಾನ ಆಗಿದ್ದಾರೆ. ಈ ರೀತಿ ಆಂತರ್ಯದಲ್ಲಿ ವಿಚಾರಸಾಗರ ಮಂಥನ ನಡೆಯಬೇಕು. ನಾವು ಇಂತಹ ಮುರುಳಿಯನ್ನು ನುಡಿಸಿದೆವೆಂದರೆ ಮನುಷ್ಯರಿಗೆ ತಕ್ಷಣ ಅರ್ಥವಾಗುತ್ತದೆ. ಮಕ್ಕಳಂತೂ ನಂಬರ್ ವಾರ್ ಇದ್ದೇ ಇದ್ದಾರೆ. ಇದು ಜ್ಞಾನವಾಗಿದೆ. ನಿತ್ಯವೂ ಇದನ್ನು ಅಭ್ಯಾಸ ಮಾಡಬೇಕು. ಭಯ ಪಟ್ಟು ವಿದ್ಯೆಯನ್ನು ಬಿಡುವುದಂತೂ ಸರಿಯಿಲ್ಲ. ನಂತರ ಕರ್ಮ ಬಂಧನವೆಂದು ಹೇಳುತ್ತಾರೆ. ನೋಡಿ, ಪ್ರಾರಂಭದಲ್ಲಿ ಎಷ್ಟೊಂದು ಜನ ಮನೆ ಬಿಟ್ಟು ಬಂದರು. ನಂತರ ಕೆಲವರು ಹೊರಟು ಹೋದರು. ಸಿಂಧ್ನಲ್ಲಿ ಬಹಳಷ್ಟು ಮಕ್ಕಳು ಬಂದರು, ನಂತರ ತೊಂದರೆಗೊಳಗಾಗಿ ಎಷ್ಟೊಂದು ಜನ ಶತ್ರುಗಳಾದರು. ಮೊದಲು ಅವರಿಗೆ ಜ್ಞಾನವು ಬಹಳ ಚೆನ್ನಾಗಿ ಇಷ್ಟವಾಗುತ್ತಿತ್ತು, ಇವರಿಗೆ ಭಗವಂತನ ಕೊಡುಗೆ ಸಿಕ್ಕಿದೆಯೆಂದು ತಿಳಿದಿದ್ದರು. ಈಗಲೂ ಅದೇ ರೀತಿ ತಿಳಿಯುತ್ತಾರೆ - ಯಾವುದೋ ಶಕ್ತಿಯಿದೆ. ಆದರೆ ಪರಮಾತ್ಮನ ಪ್ರವೇಶತೆ ಎಂದು ತಿಳಿಯುವುದಿಲ್ಲ ಇಂದಿನ ದಿನಗಳಲ್ಲಿ ರಿದ್ಧಿ ಸಿದ್ಧಿಯ ಶಕ್ತಿ ಬಹಳ ಜನರಲ್ಲಿದೆ. ಗೀತೆಯನ್ನು ತೆಗೆದುಕೊಂಡು ಹೇಳುತ್ತಿರುತ್ತಾರೆ. ತಂದೆಯು ತಿಳಿಸುತ್ತಾರೆ - ಇದೆಲ್ಲವೂ ಭಕ್ತಿಮಾರ್ಗದ ಪುಸ್ತಕಗಳೇ ಆಗಿವೆ. ಜ್ಞಾನಸಾಗರನಂತೂ ನಾನೇ ಆಗಿದ್ದೇನೆ. ನನ್ನನ್ನೇ ಭಕ್ತಿಮಾರ್ಗದಲ್ಲಿ ನೆನಪು ಮಾಡುತ್ತಾರೆ. ನಾಟಕದನುಸಾರ ಇದೂ ಸಹ ನೊಂದಾವಣೆಯಾಗಿದೆ. ಸಾಕ್ಷಾತ್ಕಾರವೂ ಆಗುತ್ತದೆ, ಭಕ್ತಿ ಮಾರ್ಗದವರನ್ನೂ ಸಹ ಸಂತುಷ್ಟರನ್ನಾಗಿ ಮಾಡುತ್ತಾರೆ. ಜ್ಞಾನವನ್ನು ತೆಗೆದುಕೊಳ್ಳದಿದ್ದರೆ ಅವರಿಗೆ ಭಕ್ತಿಯೂ ಸಹ ಒಳ್ಳೆಯದು. ಅಂದರೂ ಸಹ ಮನುಷ್ಯರು ಸುಧಾರಣೆಯಾಗುತ್ತಾರೆ, ಕಳ್ಳತನ ಮುಂತಾದವುಗಳನ್ನು ಮಾಡುವುದಿಲ್ಲ. ಭಗವಂತನ ಭಜನೆ ಮಾಡುವವರು ಎಂದೂ ಸಹ ಉಲ್ಟಾ ಮಾತುಗಳನ್ನಾಡುವುದಿಲ್ಲ. ಎಷ್ಟಾದರೂ ಭಕ್ತರಲ್ಲವೆ. ಇಂದಿನ ದಿನಗಳಲ್ಲಿ ಭಕ್ತರಾಗಿದ್ದರೂ ಸಹ ದಿವಾಳಿಯಾಗಿ ಬಿಡುತ್ತಾರೆ. ಶಿವ ತಂದೆಯ ಮಕ್ಕಳಾದರೆ ದಿವಾಳಿಯಾಗುವುದಿಲ್ಲ ಎಂದೇನಲ್ಲ. ಹಿಂದಿನ ಕರ್ಮದ ಲೆಕ್ಕವಿದ್ದರೆ ದಿವಾಳಿಯಾಗುತ್ತಾರೆ, ಜ್ಞಾನದಲ್ಲಿ ಬಂದಿದ್ದರೂ ದಿವಾಳಿಯಾಗಿ ಬಿಡುತ್ತಾರೆ. ಇದಕ್ಕೆ ಜ್ಞಾನದ ಸಂಬಂಧವೇನೂ ಇಲ್ಲ. ನೀವು ಮಕ್ಕಳೀಗ ಸೇವೆಯಲ್ಲಿ ತೊಡಗಿದ್ದೀರಿ, ಶ್ರೀಮತದಂತೆ ಸೇವೆಯಲ್ಲಿ ತೊಡಗುವುದರಿಂದ ಫಲವನ್ನು ಪಡೆಯುತ್ತೇವೆಂದು ತಿಳಿದಿದ್ದೀರಿ. ನಾವು ಎಲ್ಲವನ್ನೂ ಅಲ್ಲಿಗೆ ವರ್ಗಾವಣೆ ಮಾಡಬೇಕು, ಬ್ಯಾಗ್-ಬ್ಯಾಗೇಜ್ ಎಲ್ಲವನ್ನೂ ವರ್ಗಾವಣೆ ಮಾಡಬೇಕು. ಬಾಬಾರವರಿಗೆ ಮೊದಲು ಮಜಾ ಬಂದು ಬಿಟ್ಟಿತ್ತು. ಅಲ್ಲಿಂದ ಯಾವಾಗ ಹೊರಟರು ಆಗ ಗೀತೆಯನ್ನು ಬರೆದರು. ಅಲ್ಫ್(ಆತ್ಮ)ಗೆ ಅಲ್ಲಾಹ್ (ತಂದೆ) ಸಿಕ್ಕಿದರು. ಬೇ ಸಿಕ್ಕಿತು ಬಾದಶಾಹಿ. ಬ್ರಹ್ಮಾಬಾಬಾರಾರಿಗೆ ಚತುರ್ಭುಜ ವಿಷ್ಣುವಿನ, ಶ್ರೀ ಕೃಷ್ಣನ ಸಾಕ್ಷಾತ್ಕಾರವಾದಾಗ ಅನಿಸುತ್ತಿತ್ತು - ದ್ವಾರಿಕಾದ ಚಕ್ರವರ್ತಿಯಾಗುತ್ತೇನೆ. ಈ ರೀತಿ ನಶೆಯೇರುತ್ತಿತ್ತು. ಈಗ ಈ ವಿನಾಶಿ ಪೈಸೆ ಹಣವನ್ನು ಏನು ಮಾಡುವುದು? ಅಂದಾಗ ನೀವು ಮಕ್ಕಳಿಗೂ ಸಹ ಖುಷಿಯಾಗಬೇಕು. ನಮಗೆ ತಂದೆಯು ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುತ್ತಾರೆ. ಆದರೆ ಮಕ್ಕಳು ಇಷ್ಟೊಂದು ಪುರುಷಾರ್ಥವನ್ನು ಮಾಡುವುದಿಲ್ಲ. ನಡೆಯುತ್ತಾ-ನಡೆಯುತ್ತಾ ಬಿದ್ದು ಬಿಡುತ್ತಾರೆ. ಒಳ್ಳೊಳ್ಳೆಯ ಮಕ್ಕಳು ತಂದೆಗೆ ನಿಮಂತ್ರಣ ಕೊಡುವಂತಹವರೂ ಎಂದೂ ತಂದೆಯನ್ನು ನೆನಪೇ ಮಾಡುವುದಿಲ್ಲ. ನಾವು ಬಹಳ ಖುಷಿಯಾಗಿದ್ದೇವೆಂದು ತಂದೆಯ ಬಳಿಗೆ ಪತ್ರ ಬರಬೇಕು. ತಂದೆಯೇ, ನಾವು ನಿಮ್ಮ ನೆನಪಿನಲ್ಲಿ ಮಸ್ತರಾಗಿರುತ್ತೇವೆ. ಬಹಳಷ್ಟು ಮಕ್ಕಳು ಎಂದೂ ನೆನಪೇ ಮಾಡುವುದಿಲ್ಲ. ನೆನಪಿನ ಯಾತ್ರೆಯಲ್ಲಿಯೇ ಖುಷಿಯು ಹೆಚ್ಚಾಗಿರುತ್ತದೆ. ಭಲೇ ಜ್ಞಾನದಲ್ಲಿ ಎಷ್ಟೆ ಮಸ್ತರಾಗಿದ್ದರೂ ದೇಹಾಭಿಮಾನ ಎಷ್ಟಿರುತ್ತದೆ. ಆತ್ಮಾಭಿಮಾನಿ ಸ್ಥಿತಿಯು ಎಲ್ಲಿರುತ್ತದೆ? ಜ್ಞಾನವಂತೂ ಬಹಳ ಸರಳವಾಗಿದೆ, ಯೋಗದಲ್ಲಿಯೇ ಮಾಯೆಯು ವಿಘ್ನಗಳನ್ನು ಹಾಕುತ್ತದೆ. ಗೃಹಸ್ಥ ವ್ಯವಹಾರದಲ್ಲಿಯೂ ಅನಾಸಕ್ತರಾಗಿರಬೇಕು. ಮಾಯೆಯಿಂದ ಚಳ್ಳೆ ಹಣ್ಣನ್ನು ತಿನ್ನುವಂತೆ ಆಗಬಾರದು. ಮಾಯೆಯು ಇಲಿಯಂತೆ ಕಚ್ಚುತ್ತದೆ. ಇಲಿಯು ಈ ರೀತಿ ಕಚ್ಚುತ್ತದೆ - ಭಲೆ ರಕ್ತ ಹೊರ ಬಂದರೂ ಗೊತ್ತಾಗುವುದಿಲ್ಲ. ಮಕ್ಕಳಿಗೆ ದೇಹಾಭಿಮಾನದಲ್ಲಿ ಬರುವುದರಿಂದ ಎಷ್ಟು ನಷ್ಟವಾಗುತ್ತದೆ ಎಂದು ತಿಳಿಯುವುದೇ ಇಲ್ಲ ಶ್ರೇಷ್ಠ ಪದವಿ ಪಡೆಯಲಾರರು. ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕು. ಮಮ್ಮಾ-ಬಾಬಾರವರಂತೆ ತಂದೆಯ ಸಿಂಹಾಸನಾಧೀಶ ಆಗೋಣ. ತಂದೆಯು ಮನವನ್ನು ಗೆಲ್ಲುವಂತಹವರಾಗಿದ್ದಾರೆ. ದಿಲ್ವಾಡಾ ಮಂದಿರದಲ್ಲಿಯೂ ಸಹ ಪೂರ್ಣ ನೆನಪಾರ್ಥವಿದೆ. ಒಳಗಡೆ ಆನೆಗಳ ಮೇಲೆ ಮಹಾರಥಿಗಳು ಕುಳಿತಿದ್ದಾರೆ. ನಿಮ್ಮಲ್ಲಿಯೂ ಸಹ ಮಹಾರಥಿಗಳು, ಕುದುರೆ ಸವಾರರು, ಕಾಲಾಳುಗಳು ಇದ್ದಾರೆ. ಪ್ರತಿಯೊಬ್ಬರೂ ತಮ್ಮ-ತಮ್ಮ ನಾಡಿಯನ್ನು ನೋಡಿಕೊಳ್ಳಬೇಕು. ತಂದೆಯು ಏಕೆ ನೋಡಬೇಕು. ನಾವು ತಂದೆಯನ್ನು ನೆನಪು ಮಾಡುತ್ತೇವೆಯೇ? ಮತ್ತು ಬಾಬಾರವರಂತೆ ಸೇವೆ ಮಾಡುತ್ತೇವೆಯೇ? ತಂದೆಯ ಜೊತೆ ನಮ್ಮ ಯೋಗವಿದೆಯೇ? ರಾತ್ರಿಯಲ್ಲಿ ಎಚ್ಚರವಾಗಿದ್ದು ತಂದೆಯನ್ನು ನೆನಪು ಮಾಡುತ್ತೇವೆಯೇ? ನಾವು ಬಹಳಷ್ಟು ಜನರ ಸೇವೆಯನ್ನು ಮಾಡುತ್ತೇವೆಯೇ? ಎಂದು ಚಾರ್ಟ್ ಇಡಬೇಕು. ತಂದೆಯನ್ನು ಬಹಳ ಅಂದರೆ ಎಷ್ಟು ನೆನಪು ಮಾಡುತ್ತೇವೆ? ಕೆಲವರು ನಾವು ನಿರಂತರ ನೆನಪು ಮಾಡುತ್ತೇವೆ ಎಂದು ಹೇಳುತ್ತಾರೆ, ಇದಂತೂ ಸಾಧ್ಯವಿಲ್ಲ. ಕೆಲವು ಮಕ್ಕಳು ಹೇಳುತ್ತಾರೆ - ನಾವು ತಂದೆಯ ಮಕ್ಕಳಾದೆವಲ್ಲವೆ ಸಾಕು. ಆದರೆ ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ನೆನಪು ಮಾಡಬೇಕು. ತಂದೆಯ ನೆನಪಿಲ್ಲದೆ ಸೇವೆ ಮಾಡಿದರೆ ತಂದೆಯನ್ನು ನೆನಪು ಮಾಡುತ್ತಿಲ್ಲವೆಂದರ್ಥ. ತಂದೆಯ ನೆನಪಿನಲ್ಲಿಯೇ ಸದಾ ಹರ್ಷಿತರಾಗಿರಬೇಕು. ನೆನಪಿನಲ್ಲಿರುವವರು ಸದಾ ರಮಣೀಕವಾಗಿರುತ್ತಾರೆ, ಹರ್ಷಿತ ಮುಖಿಗಳಾಗಿರುತ್ತಾರೆ. ಯಾರಿಗಾದರೂ ಬಹಳ ಖುಷಿಯಿಂದ, ರಮಣೀಕತೆಯಿಂದ ತಿಳಿಸುತ್ತಾರೆ. ಸೇವೆಯ ಮೇಲೆ ಆಸಕ್ತಿಯಿರುವವರು ಬಹಳ ಕಡಿಮೆ ಮಂದಿಯಿದ್ದಾರೆ. ಚಿತ್ರಗಳ ಬಗ್ಗೆ ತಿಳಿಸುವುದು ಬಹಳ ಸಹಜವೇ ಆಗಿದೆ. ಇವರು ಶ್ರೇಷ್ಠಾತಿ ಶ್ರೇಷ್ಠ ಭಗವಂತನಾಗಿದ್ದಾರೆ ನಂತರ ಅವರ ರಚನೆ, ನಾವೆಲ್ಲಾ ಆತ್ಮರು ಸಹೋದರ-ಸಹೋದರರಾಗಿದ್ದೇವೆ. ಬ್ರದರ್ ಹುಡ್ ಆಗಿದೆ. ಅವರು ಫಾದರ್ ಹುಡ್ ಎಂದು ಹೇಳಿದ್ದಾರೆ. ಮೊದಲು ಶಿವ ತಂದೆಯ ಪರಿಚಯ ಕೊಡಬೇಕು - ಇವರು ಎಲ್ಲಾ ಆತ್ಮರ ಪಿತನಾಗಿದ್ದಾರೆ, ಪರಮಪಿತ ಪರಮಾತ್ಮನಾಗಿದ್ದಾರೆ. ನಾವಾತ್ಮರು ನಿರಾಕಾರ ಆಗಿದ್ದೇವೆ, ಭೃಕುಟಿಯ ಮಧ್ಯದಲ್ಲಿರುತ್ತೇವೆ. ಶಿವ ತಂದೆಯೂ ಸಹ ನಕ್ಷತ್ರದಂತಿದ್ದಾರೆ. ಆದರೆ ನಕ್ಷತ್ರದ ಪೂಜೆಯಾಗಲು ಹೇಗೆ ಸಾಧ್ಯ. ಆದ್ದರಿಂದ ದೊಡ್ಡದನ್ನಾಗಿ ಮಾಡುತ್ತಾರೆ. ಬಾಕಿ ಆತ್ಮ ಎಂದೂ ಸಹ 84 ಲಕ್ಷ ಜನ್ಮವನ್ನು ಪಡೆಯುವುದಿಲ್ಲ. ತಂದೆಯು ತಿಳಿಸುತ್ತಾರೆ - ಆತ್ಮವು ಮೊದಲು ಅಶರೀರಿಗಳಾಗಿ ಬಂದು ಶರೀರವನ್ನು ಧರಿಸಿ ಪಾತ್ರವನ್ನಭಿನಯಿಸುತ್ತದೆ. ಸತೋಪ್ರಧಾನ ಆತ್ಮವು ಪುನರ್ ಜನ್ಮವನ್ನು ಪಡೆಯುತ್ತಾ-ಪಡೆಯುತ್ತಾ ಕಬ್ಬಿಣ ಸಮಾನವಾಗಿ ಬಿಡುತ್ತದೆ. ನಂತರ ಬರುವವರೂ 84 ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ. ಎಲ್ಲರೂ 84 ಜನ್ಮಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಆತ್ಮವೇ ಒಂದು ಶರೀರವನ್ನು ಬಿಟ್ಟು ಮತ್ತೊಂದನ್ನು ತೆಗೆದುಕೊಳ್ಳುತ್ತದೆ. ನಾಮ, ರೂಪ, ದೇಶ, ಕಾಲ ಎಲ್ಲವೂ ಬದಲಾವಣೆಯಾಗುತ್ತದೆ. ಈ ರೀತಿಯಾಗಿ ಭಾಷಣ ಮಾಡಬೇಕು. ಹೇಳುತ್ತಾರೆ - ಸೆಲ್ಫ್ ರಿಯಲೈಸೇಷನ್ ಎಂದು ಆದರೆ ಮಾಡಿಸುವವರು ಯಾರು? ಆತ್ಮವೇ ಪರಮಾತ್ಮನೆಂದು ಹೇಳುವುದು ಸೆಲ್ಫ್ ರಿಯಲೈಸೇಷನ್ ಆಗುತ್ತದೆಯೇನು? ಇದು ಹೊಸ ಜ್ಞಾನವಾಗಿದೆ. ತಂದೆಯು ಜ್ಞಾನದ ಸಾಗರನಾಗಿದ್ದಾರೆ, ಪತಿತ-ಪಾವನನಾಗಿದ್ದಾರೆ, ಸರ್ವರ ಸದ್ಗತಿದಾತನಾಗಿದ್ದಾರೆ, ಅವರೇ ಕುಳಿತು ತಿಳಿಸುತ್ತಿದ್ದಾರೆ. ನಂತರ ಅವರ ಮಹಿಮೆಯನ್ನು ಬಹಳ ಮಾಡಿ. ಅವರ ಮಹಿಮೆಯನ್ನು ಕೇಳಿದಿರಿ ಆತ್ಮದ ಪರಿಚಯವನ್ನೂ ಹೇಳಲಾಗಿದೆ, ಈಗ ಪರಮಾತ್ಮನ ಪರಿಚಯವನ್ನು ಹೇಳುತ್ತಾರೆ. ಅವರಿಗೆ ಸರ್ವ ಆತ್ಮರ ಪಿತನೆಂದು ಹೇಳಲಾಗುತ್ತದೆ. ಅವರು ಚಿಕ್ಕದು, ದೊಡ್ಡ ಗಾತ್ರವಾಗಲು ಸಾಧ್ಯವಿಲ್ಲ. ಪರಮಪಿತ ಪರಮಾತ್ಮೆನೆಂದರೆ ಸುಪ್ರೀಂ ಸೋಲ್, ಸೋಲ್ ಎಂದರೆ ಆತ್ಮ, ಪರಮಾತ್ಮನಂತೂ ಬಹಳ ದೂರ ಇರುವವರು. ಅವರು ಪುನರ್ ಜನ್ಮದಲ್ಲಿ ಬರುವುದಿಲ್ಲ. ಆದ್ದರಿಂದ ಅವರನ್ನು ಪರಮಪಿತನೆಂದು ಕರೆಯಲಾಗುತ್ತದೆ. ಇಷ್ಟು ಸೂಕ್ಷ ಆತ್ಮದಲ್ಲಿ ಪಾತ್ರವು ತುಂಬಿದೆ. ಪತಿತ-ಪಾವನನೆಂದೂ ಸಹ ಅವರಿಗೆ ಹೇಳಲಾಗುತ್ತದೆ. ಅವರ ಹೆಸರೂ ಸದಾ ಶಿವಬಾಬಾ ಎಂದಾಗಿದೆ. ರುದ್ರ ಬಾಬಾ ಎಂದಲ್ಲ. ಭಕ್ತಿಮಾರ್ಗದಲ್ಲಿ ಅನೇಕ ಹೆಸರುಗಳನ್ನು ಇಟ್ಟಿದ್ದಾರೆ, ಅವರನ್ನು ಎಲ್ಲರೂ ನೆನಪು ಮಾಡುತ್ತಾರೆ - ಪತಿತ-ಪಾವನ ಬಂದು ಎಲ್ಲರನ್ನು ಪಾವನ ಮಾಡು ಎಂದು. ಅಂದಾಗ ಅವಶ್ಯವಾಗಿ ಬರಬೇಕಾಗುತ್ತದೆ. ಅವರು ಒಂದು ಧರ್ಮದ ಸ್ಥಾಪನೆಯನ್ನು ಯಾವಾಗ ಮಾಡಬೇಕಾಗುತ್ತದೆಯೋ ಆಗ ಬರುತ್ತಾರೆ. ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಗಾಗಿ ಬರುತ್ತಾರೆ. ಈಗ ಕಲಿಯುಗ ಅಂದಾಗ ಬಹಳಷ್ಟು ಮನುಷ್ಯರಿದ್ದಾರೆ, ಸತ್ಯಯುಗದಲ್ಲಿ ಬಹಳ ಕಡಿಮೆ ಮನುಷ್ಯರಿರುತ್ತಾರೆ. ಬ್ರಹ್ಮನ ಮೂಲಕ ಸ್ಥಾಪನೆ, ಶಂಕರನ ಮೂಲಕ ವಿನಾಶ....... ಎಂದು ಗಾಯನವಿದೆ. ಗೀತೆಯ ಮುಖಾಂತರವೇ ಆದಿಸನಾತನ ಧರ್ಮದ ಸ್ಥಾಪನೆಯಾಗಿತ್ತು. ಕೇವಲ ಅದರಲ್ಲಿ ಮರೆತು ಕೃಷ್ಣನ ಹೆಸರನ್ನು ಹಾಕಲಾಗಿದೆ. ತಂದೆಯು ಹೇಳುತ್ತಾರೆ - ಕೃಷ್ಣನಂತೂ ಪುನರ್ ಜನ್ಮದಲ್ಲಿ ಬರುವವನಾಗಿದ್ದಾನೆ, ನಾನಂತೂ ಬರುವುದಿಲ್ಲ. ಅಂದಾಗ ಈಗ ತೀರ್ಮಾನ ಮಾಡಿ, ಪರಮಪಿತ ಪರಮಾತ್ಮ ಶಿವನೋ ಅಥವಾ ಶ್ರೀ ಕೃಷ್ಣನೋ ಎಂದು. ಗೀತೆಯ ಭಗವಂತ ಯಾರಾಗಿದ್ದಾರೆ? ಭಗವಂತನೆಂದು ಒಬ್ಬರಿಗೇ ಹೇಳಲಾಗುತ್ತದೆಯಲ್ಲವೆ ಆದರೂ ಈ ಮಾತುಗಳನ್ನು ಒಂದು ವೇಳೆ ಯಾರಾದರೂ ಒಪ್ಪದಿದ್ದರೆ ಇವರು ನಮ್ಮ ಧರ್ಮದವರಲ್ಲವೆಂದು ತಿಳಿಯಬೇಕು. ಸತ್ಯಯುಗದಲ್ಲಿ ಬರುವವರು ತಕ್ಷಣ ಒಪ್ಪುತ್ತಾರೆ ಮತ್ತು ಧಾರಣೆ ಮಾಡಲು ತೊಡಗುತ್ತಾರೆ. ಮೂಲ ಮಾತೇ ಇದಾಗಿದೆ. ಇದರಲ್ಲಿಯೇ ನಿಮ್ಮ ವಿಜಯವಿದೆ ಆದರೆ ದೇಹೀ-ಅಭಿಮಾನಿ ಸ್ಥಿತಿಯು ಎಲ್ಲಿದೇ? ಪರಸ್ಪರ ನಾಮ-ರೂಪದಲ್ಲಿ ಸಿಲುಕಿ ಬಿಡುತ್ತಾರೆ. ಭಕ್ತಿ ಮಾರ್ಗದಲ್ಲಿಯೂ ಪಾರ ಬ್ರಹ್ಮನನ್ನು ಪಡೆಯಬೇಕೆಂದು ಬಯಕೆಯಿತ್ತು, ಉಳಿದ ಭಯ ಎಲ್ಲಿಯದು. ಬಹಳ ಸಾಹಸ ಬೇಕಾಗಿದೆ. ಭಾಷಣ ಮಾಡುವವರು ಆತ್ಮದ ಜ್ಞಾನವನ್ನು ಬಹಳ ಮಸ್ತಿಯಿಂದ ಕೊಡಬೇಕು ನಂತರ ಪರಮಾತ್ಮನೆಂದು ಯಾರಿಗೆ ಹೇಳಲಾಗುತ್ತದೆ ಎಂದು ಇದರ ಬಗ್ಗೆ ತಿಳಿಸಬೇಕು. ತಂದೆಯ ಮಹಿಮೆಯಾಗಿದೆ ಪ್ರೇಮ ಸಾಗರ, ಶಾಂತಿಯ ಸಾಗರ. ಮಕ್ಕಳದ್ದೂ ಸಹ ಅದೇ ರೀತಿ ಮಹಿಮೆಯಿದೆ. ಯಾರ ಮೇಲಾದರೂ ಕೋಪ ಮಾಡಿಕೊಳ್ಳುವುದೆಂದರೆ ಕಾನೂನನ್ನು ಕೈಗೆತ್ತಿಕೊಂಡಂತೆ. ತಂದೆಯು ಎಷ್ಟೊಂದು ಮಧುರವಾಗಿದ್ದಾರೆ. ಮಕ್ಕಳು ಯಾವುದೇ ಕೆಲಸದಲ್ಲಿ ಆಗುವುದಿಲ್ಲವೆಂದರೆ ಅವರು ಪದವಿಗೆ ಯೋಗ್ಯರಾಗುವುದಿಲ್ಲ, ಬಹಳ ಮಧುರರಾಗಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಗುಡ್ಮಾರ್ನಿಂಗ್. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

೧. ತಮ್ಮ ಬ್ಯಾಗ್-ಬ್ಯಾಗೇಜನ್ನು ವರ್ಗಾವಣೆ ಮಾಡಿ ಖುಷಿ ಮತ್ತು ಮಸ್ತಿಯಲ್ಲಿರಬೇಕಾಗಿದೆ. ಮಮ್ಮಾ-ಬಾಬಾರವರ ಸಮಾನ ಸಿಂಹಾಸನಾಧೀಶರಾಗಬೇಕಾಗಿದೆ, ಬಹಳಷ್ಟು ನೆನಪಿನಲ್ಲಿರಬೇಕಾಗಿದೆ.

೨. ಯಾರದೇ ಭಯದಿಂದ ವಿದ್ಯೆಯನ್ನು ಬಿಡಬಾರದಾಗಿದೆ. ನೆನಪಿನಿಂದ ತಮ್ಮ ಕರ್ಮ ಬಂಧನಗಳನ್ನು ಹಗುರ ಮಾಡಿಕೊಳ್ಳಬೇಕಾಗಿದೆ. ಎಂದೂ ಕ್ರೋಧದಲ್ಲಿ ಬಂದು ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದಾಗಿದೆ. ಯಾವುದೇ ಸೇವೆಯಲ್ಲಿ ಆಗುವುದಿಲ್ಲವೆಂದು ಹೇಳಬಾರದು.

ವರದಾನ:
ಬ್ರಾಹ್ಮಣ ಜೀವನದ ಆಸ್ತಿ ಮತ್ತು ವ್ಯಕ್ತಿತ್ವದ ಅನುಭವ ಮಾಡಿ ಮತ್ತು ಮಾಡಿಸುವಂತಹ ವಿಶೇಷ ಆತ್ಮ ಭವ.

ಬಾಪ್ದಾದಾ ಎಲ್ಲಾ ಬ್ರಾಹ್ಮಣ ಮಕ್ಕಳೀಗೆ ಸ್ಮೃತಿ ತರಿಸುತ್ತಾರೆ. ಬ್ರಾಹ್ಮಣರಾದಿರೆಂದರೆ ಅಹೋ ಸೌಭಾಗ್ಯ! ಆದರೆ ಬ್ರಾಹ್ಮಣ ಜೀವನದ ಆಸ್ತಿ, ಸ್ವತ್ತು ಸಂತುಷ್ಠತೆಯಾಗಿದೆ ಮತ್ತು ಬ್ರಾಹ್ಮಣ ಜೀವನದ ವ್ಯಕ್ತಿತ್ವ ಪ್ರಸನ್ನತೆಯಾಗಿದೆ. ಈ ಅನುಭವದಿಂದ ಎಂದೂ ವಂಚಿತರಾಗಬೇಡಿ. ಅಧಿಕಾರಿಗಳಾಗಿರುವಿರಿ. ಯಾವಾಗ ದಾತಾ, ವರದಾತ ಬಿಚ್ಚು ಹೃದಯದಿಂದ ಪ್ರಾಪ್ತಿಗಳ ಖಜಾನೆಯನ್ನು ಕೊಡುತ್ತಿದ್ದಾರೆ ಎಂದಾಗ ಅದನ್ನು ಅನುಭವದಲ್ಲಿ ತನ್ನಿ ಮತ್ತು ಅನ್ಯರನ್ನೂ ಸಹ ಅನುಭವಿಗಳನ್ನಾಗಿ ಮಾಡಿ ಆಗ ಹೇಳಲಾಗುವುದು ವಿಶೇಷ ಆತ್ಮ.

ಸ್ಲೋಗನ್:
ಅಂತಿಮ ಸಮಯದ ಬಗ್ಗೆ ಯೋಚಿಸುವ ಬದಲು ಅಂತಿಮ ಸ್ಥಿತಿಯ ಬಗ್ಗೆ ಯೋಚಿಸಿ.


ಬ್ರಹ್ಮಾ ತಂದೆಯ ಸಮಾನರಾಗಲು ವಿಶೇಷ ಪುರುಷಾರ್ಥ -

ಸೇವೆಯ ಪ್ರತ್ಯಕ್ಷ ಫಲವನ್ನು ತೋರಿಸಲು ಹೇಗೆ ಬ್ರಹ್ಮಾ ತಂದೆ ತಮ್ಮ ಆತ್ಮೀಯ ಸ್ಥಿತಿಯ ಮೂಲಕ ಸೇವೆ ಮಾಡಿದರು. ಅದೇ ರೀತಿ ನೀವು ಮಕ್ಕಳೂ ಸಹಾ ಈಗ ನಿಮ್ಮ ಸ್ಥಿತಿಯನ್ನು ಪ್ರತ್ಯಕ್ಷ ಮಾಡಿ. ರೂಹ್ ಎಂದು ಆತ್ಮನಿಗೂ ಸಹಾ ಹೇಳಲಾಗುವುದು ಮತ್ತು ರೂಹ್ ಎಂದು ಸುಗಂಧಕ್ಕೂ ಸಹಾ ಹೇಳುತ್ತಾರೆ. ಆದ್ದರಿಂದ ಆತ್ಮೀಯ ಸ್ಥಿತಿಯಲ್ಲಿರುವುದರಿಂದ ಎರಡೂ ಆಗಿ ಬಿಡುವುದು. ದಿವ್ಯ ಗುಣಗಳ ಆಕರ್ಷಣೆ ಅರ್ಥಾತ್ ಸುಗಂಧ ಆ ರೂಹ್ ಸಹಾ ಆಗುವುದು ಮತ್ತು ಆತ್ಮಿಕ ಸ್ವರೂಪವೂ ಸಹ ಕಂಡು ಬರುವುದು.