04.01.20         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಹೆಜ್ಜೆ-ಹೆಜ್ಜೆಯಲ್ಲಿ ತಂದೆಯ ಶ್ರೀಮತದಂತೆ ನಡೆಯುತ್ತಾ ಇರಿ, ಒಬ್ಬ ತಂದೆಯಿಂದಲೇ ಕೇಳಿರಿ ಆಗ ಮಾಯೆಯ ಯುದ್ಧವಾಗುವುದಿಲ್ಲ

ಪ್ರಶ್ನೆ:
ಶ್ರೇಷ್ಠ ಪದವಿಯನ್ನು ಪಡೆದುಕೊಳ್ಳುವ ಆಧಾರವೇನು?

ಉತ್ತರ:
ಶ್ರೇಷ್ಠ ಪದವಿಯನ್ನು ಪಡೆಯಲು ತಂದೆಯ ಪ್ರತೀ ಆದೇಶದಂತೆ ನಡೆಯುತ್ತಾ ಇರಿ. ತಂದೆಯ ಆದೇಶ ಸಿಕ್ಕಿತು ಮತ್ತು ಮಕ್ಕಳು ಅದನ್ನು ಪಾಲಿಸಿದರು. ಬೇರೇನೂ ಸಂಕಲ್ಪದವರೆಗೂ ಬರಬಾರದು. 2. ಈ ಆತ್ಮಿಕ ಸೇವೆಯಲ್ಲಿ ತೊಡಗಿರಿ. ನಿಮಗೆ ಮತ್ತ್ಯಾರ ನೆನಪೂ ಬರಬಾರದು. ತಾನು ಸತ್ತರೆ ತನ್ನ ಪಾಲಿಗೆ ಜಗತ್ತೇ ಸತ್ತಂತೆ ಆಗ ಶ್ರೇಷ್ಠ ಪದವಿ ಸಿಗುವುದು.

ಗೀತೆ:
ನಿಮ್ಮನ್ನು ಪಡೆದ ನಾನು ಜಗತ್ತನ್ನೇ ಪಡೆದೆನು............

ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ಈ ಗೀತೆಯನ್ನು ಕೇಳಿದಿರಿ, ಅವರಂತೂ ಭಕ್ತಿಮಾರ್ಗದಲ್ಲಿ ಹಾಡಿದ್ದಾರೆ - ಈ ಸಮಯದಲ್ಲಿ ತಂದೆಯು ಅದರ ರಹಸ್ಯವನ್ನು ತಿಳಿಸುತ್ತಾರೆ. ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ - ನಾವೀಗ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ಪಡೆಯುತ್ತಿದ್ದೇವೆ, ನಮ್ಮ ರಾಜ್ಯವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಭಾರತದ ರಾಜ್ಯವನ್ನು ಅನೇಕರು ಕಸಿದುಕೊಂಡರು. ಮುಸಲ್ಮಾನರು, ಬ್ರಿಟಿಷರು ಲೂಟಿ ಮಾಡಿದರು. ವಾಸ್ತವದಲ್ಲಿ ಮೊದಲು ರಾವಣನು ಆಸುರಿ ಮತದಂತೆ ಕಸಿದುಕೊಂಡಿದ್ದಾನೆ. ಕೆಟ್ಟದ್ದನ್ನು ಕೇಳಬೇಡಿ, ಕೆಟ್ಟದನ್ನು ನೋಡಬೇಡಿ.... ಎಂದು ಕೋತಿಗಳ ಚಿತ್ರವನ್ನು ತೋರಿಸುತ್ತಾರೆ ಅಂದಮೇಲೆ ಇದಕ್ಕೂ ಏನೋ ರಹಸ್ಯವಿರಬೇಕಲ್ಲವೆ. ತಂದೆಯು ತಿಳಿಸುತ್ತಾರೆ ಒಂದು ಕಡೆ ರಾವಣನ ಆಸುರೀ ಸಂಪ್ರದಾಯವಿದೆ ಯಾರು ತಂದೆಯನ್ನು ಅರಿತುಕೊಂಡಿಲ್ಲ ಮತ್ತು ಇನ್ನೊಂದು ಕಡೆ ನೀವು ಮಕ್ಕಳಿದ್ದೀರಿ. ನೀವೂ ಸಹ ಮೊದಲು ತಿಳಿದುಕೊಂಡಿರಲಿಲ್ಲ. ತಂದೆಯು ಇವರ (ಬ್ರಹ್ಮಾ) ಬಗ್ಗೆಯೂ ತಿಳಿಸುತ್ತಾರೆ - ಇವರೂ ಸಹ ಬಹಳ ಭಕ್ತಿ ಮಾಡಿದ್ದಾರೆ, ಇವರದು ಇದು ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ಇವರೇ ಮೊದಲು ಪಾವನರಾಗಿದ್ದರು, ಈಗ ಪತಿತರಾಗಿದ್ದಾರೆ. ಇವರನ್ನು ನಾನು ತಿಳಿದುಕೊಂಡಿದ್ದೇನೆ. ನೀವೀಗ ಮತ್ತ್ಯಾರ ಮತವನ್ನೂ ಕೇಳಬೇಡಿ. ತಂದೆಯು ಹೇಳುತ್ತಾರೆ - ನಾನು ನೀವು ಮಕ್ಕಳೊಂದಿಗೇ ಮಾತನಾಡುತ್ತೇನೆ. ಯಾವಾಗ ಯಾರಾದರೂ ಮಿತ್ರ ಸಂಬಂಧಿ ಮೊದಲಾದವರನ್ನು ಕರೆದುಕೊಂಡು ಬರುತ್ತಾರೆಂದರೆ ಅವರೊಂದಿಗೆ ಸ್ವಲ್ಪ ಮಾತನಾಡುತ್ತೇನೆ. ಮೊದಲನೆಯ ಮಾತೇನೆಂದರೆ ಪವಿತ್ರರಾಗಬೇಕಾಗಿದೆ ಆಗಲೇ ಬುದ್ಧಿಯಲ್ಲಿ ಧಾರಣೆಯಾಗುವುದು. ಇಲ್ಲಿನ ಕಾಯಿದೆಯು ಬಹಳ ಕಠಿಣವಾಗಿದೆ. ಮೊದಲಂತೂ ಹೇಳುತ್ತಿದ್ದೆವು - 7 ದಿನಗಳು ಭಟ್ಟಿಯಲ್ಲಿರಬೇಕು, ಮತ್ತ್ಯಾರ ನೆನಪೂ ಬರಬಾರದು. ಪತ್ರ ಮೊದಲಾದುವುಗಳನ್ನು ಬರೆಯಬಾರದು. ಭಲೆ ಎಲ್ಲಿಯಾದರೂ ಇರಿ ಆದರೆ ಇಡೀ ದಿನ ಭಟ್ಟಿಯಲ್ಲಿರಬೇಕಾಗಿದೆ. ಈಗಂತೂ ನೀವು ಭಟ್ಟಿಯಲ್ಲಿದ್ದು ಮತ್ತೆ ಹೊರಗೆ ಹೋಗುತ್ತೀರಿ. ಕೆಲವರು ಆಶ್ಚರ್ಯವೆನಿಸುವಂತೆ ಕೇಳಿ ಹೇಳಿ ಸ್ವಲ್ಪ ದಿನಗಳವರೆಗೆ ನಡೆದು ಮಾಯೆಗೆ ವಶವಾಗಿ ಹೊರಟು ಹೋದರು. ಇದು ಬಹಳ ದೊಡ್ಡ ಗುರಿಯಾಗಿದೆ. ತಂದೆಯ ಮಾತನ್ನು ಪಾಲಿಸುವುದಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ - ನೀವಂತೂ ವಾನಪ್ರಸ್ಥಿಯಾಗಿದ್ದೀರಿ, ನೀವೇಕೆ ಸುಮ್ಮನೆ ಸಿಕ್ಕಿಹಾಕಿಕೊಂಡಿದ್ದೀರಿ. ನೀವಂತೂ ಈ ಆತ್ಮಿಕ ಸೇವೆಯಲ್ಲಿ ತೊಡಗಿರಿ. ನಿಮಗೆ ಮತ್ತ್ಯಾರ ನೆನಪೂ ಬರಬಾರದು. ತಾನು ಸತ್ತರೆ ತನ್ನ ಪಾಲಿಗೆ ಜಗತ್ತೇ ಸತ್ತಂತೆ - ಈ ಸ್ಥಿತಿಯಿದ್ದಾಗ ಶ್ರೇಷ್ಠ ಪದವಿ ಸಿಗುತ್ತದೆ. ನರನಿಂದ ನಾರಾಯಣನಾಗುವುದೇ ನಿಮ್ಮ ಪುರುಷಾರ್ಥವಾಗಿದೆ. ಹೆಜ್ಜೆ-ಹೆಜ್ಜೆಯಲ್ಲಿ ತಂದೆಯ ಆದೇಶದಂತೆ ನಡೆಯಬೇಕಾಗಿದೆ ಆದರೆ ಇದರಲ್ಲಿಯೂ ಸಾಹಸ ಬೇಕು. ಕೇವಲ ಹೇಳುವ ಮಾತಲ್ಲ, ಮೋಹದ ಸೆಳೆತವೂ ಸಹ ಕಡಿಮೆಯಿಲ್ಲ ಆದ್ದರಿಂದ ನಷ್ಟಮೋಹಿಯಾಗಬೇಕು. ನನ್ನವರು ಒಬ್ಬ ಶಿವ ತಂದೆಯ ವಿನಃ ಅನ್ಯ ಯಾರೂ ಇಲ್ಲ. ನಾವಂತೂ ತಂದೆಯ ಆಶ್ರಯವನ್ನು ಪಡೆಯುತ್ತೇವೆ. ನಾವೆಂದೂ ವಿಕಾರದ ಸಹಯೋಗ ಕೊಡುವುದಿಲ್ಲ - ಹೀಗೆ ನೀವು ಈಶ್ವರನ ಕಡೆ ಬರುತ್ತೀರೆಂದರೆ ಮಾಯೆಯೂ ಸಹ ನಿಮ್ಮನ್ನು ಬಿಡುವುದಿಲ್ಲ. ಬಹಳ ಸತಾಯಿಸುತ್ತದೆ. ಹೇಗೆ ವೈದ್ಯರು ಹೇಳುತ್ತಾರೆ - ಈ ಔಷಧಿಯಿಂದ ಮೊದಲು ಒಳಗಿರುವ ಎಲ್ಲಾ ಖಾಯಿಲೆಗಳು ಹೊರ ಬರುತ್ತವೆ, ಹೆದರಬೇಡಿ ಎಂದು. ಇಲ್ಲಿಯೂ ಹಾಗೆಯೇ ಮಾಯೆಯು ಬಹಳ ಸತಾಯಿಸುತ್ತದೆ. ವಾನಪ್ರಸ್ಥ ಸ್ಥಿತಿಯಲ್ಲಿಯೂ ವಿಕಾರದ ಸಂಕಲ್ಪವನ್ನು ತರುತ್ತದೆ, ಮೋಹವು ಉತ್ಪನ್ನವಾಗಿ ಬಿಡುತ್ತದೆ. ಇದೆಲ್ಲವೂ ಆಗುವುದೆಂದು ತಂದೆಯು ಮೊದಲೇ ಎಲ್ಲವನ್ನೂ ಹೇಳಿ ಬಿಡುತ್ತಾರೆ. ಎಲ್ಲಿಯವರೆಗೆ ಜೀವಿಸಿರುತ್ತೀರೋ ಅಲ್ಲಿಯವರೆಗೆ ಈ ಮಾಯೆಯ ಮಲ್ಲ ಯುದ್ಧವು ನಡೆಯುತ್ತಿರುವುದು. ಮಾಯೆಯೂ ಸಹ ಬಲಶಾಲಿಯಾಗಿ ನಿಮ್ಮನ್ನು ಬಿಡುವುದಿಲ್ಲ, ಇದು ಡ್ರಾಮಾದಲ್ಲಿ ನಿಗಧಿಯಾಗಿದೆ. ವಿಕಲ್ಪವನ್ನು ತರಬೇಡ ಎಂದು ನಾನು ಮಾಯೆಗೆ ಹೇಳುವುದಿಲ್ಲ. ಬಾಬಾ, ಕೃಪೆ ತೋರಿ ಎಂದು ಅನೇಕರು ಬರೆಯುತ್ತಾರೆ. ಆದರೆ ನಾನು ಯಾರ ಮೇಲಾದರೂ ಕೃಪೆ ತೋರುವೆನೇ! ಇಲ್ಲಂತೂ ನೀವು ಶ್ರೀಮತದಂತೆ ನಡೆಯಬೇಕಾಗಿದೆ. ಒಂದುವೇಳೆ ನಾನು ಕೃಪೆ ತೋರಿದ್ದೇ ಆದರೆ ಎಲ್ಲರೂ ಮಹಾರಾಜರಾಗಿ ಬಿಡುವರು. ಆದರೆ ಇದು ಡ್ರಾಮಾದಲ್ಲಿಲ್ಲ. ಎಲ್ಲಾ ಧರ್ಮದವರೂ ಬರುತ್ತಾರೆ, ಯಾರು ಅನ್ಯ ಧರ್ಮಗಳಲ್ಲಿ ಮತಾಂತರಗೊಂಡಿದ್ದಾರೆಯೋ ಅವರೆಲ್ಲರೂ ಮತ್ತೆ ಬರುತ್ತಾರೆ. ಸಸಿಯ ನಾಟಿಯಾಗುತ್ತದೆ, ಇದರಲ್ಲಿ ಬಹಳ ಪರಿಶ್ರಮವಿದೆ. ಯಾರಾದರೂ ಹೊಸಬರು ಬಂದಾಗ ಕೇವಲ ಇಷ್ಟನ್ನು ತಿಳಿಸಿ - ತಂದೆಯನ್ನು ನೆನಪು ಮಾಡಿ, ಶಿವ ಭಗವಾನುವಾಚ. ಕೃಷ್ಣನು ಭಗವಂತನಲ್ಲ, ಕೃಷ್ಣನು 84 ಜನ್ಮಗಳಲ್ಲಿ ಬರುತ್ತಾನೆ. ಈಗ ಅನೇಕ ಮತ, ಅನೇಕ ಮಾತುಗಳಿವೆ. ಇದನ್ನು ಬುದ್ಧಿಯಲ್ಲಿ ಪೂರ್ಣ ಧಾರಣೆ ಮಾಡಿಕೊಳ್ಳಬೇಕಾಗಿದೆ. ನಾವು ಪತಿತರಾಗಿದ್ದೆವು, ಈಗ ತಂದೆಯು ತಿಳಿಸುತ್ತಾರೆ - ನೀವು ಹೇಗೆ ಪಾವನರಾಗುವಿರಿ ಎಂದು. ಕಲ್ಪದ ಮೊದಲೂ ಸಹ ತಿಳಿಸಿದ್ದರು - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ, ತಮ್ಮನ್ನು ಆತ್ಮನೆಂದು ತಿಳಿದು ದೇಹದ ಎಲ್ಲಾ ಧರ್ಮಗಳನ್ನು ಬಿಟ್ಟು ಜೀವಿಸಿದ್ದಂತೆಯೇ ಸಾಯಿರಿ. ತಂದೆಯಾದ ನನ್ನೊಬ್ಬನನ್ನೇ ನೆನಪು ಮಾಡಿ, ನಾನು ಸರ್ವರ ಸದ್ಗತಿ ಮಾಡಲು ಬಂದಿದ್ದೇನೆ. ಭಾರತವಾಸಿಗಳೇ ಶ್ರೇಷ್ಠರಾಗುತ್ತೀರಿ, ಮತ್ತೆ 84 ಜನ್ಮಗಳನ್ನು ತೆಗೆದುಕೊಂಡು ಕೆಳಗಿಳಿಯುತ್ತೀರಿ. ತಿಳಿಸಿಕೊಡಿ, ನೀವು ಭಾರತವಾಸಿಗಳೇ ಈ ದೇವಿ-ದೇವತೆಗಳ ಪೂಜೆ ಮಾಡುತ್ತೀರಿ ಅಂದಮೇಲೆ ಇವರು ಯಾರು? ಇವರು ಸ್ವರ್ಗದ ಮಾಲೀಕರಾಗಿದ್ದರಲ್ಲವೆ. ಈಗ ಎಲ್ಲಿದ್ದಾರೆ? 84 ಜನ್ಮಗಳನ್ನು ಯಾರು ತೆಗೆದುಕೊಳ್ಳುತ್ತಾರೆ? ಸತ್ಯಯುಗದಲ್ಲಂತೂ ಇದೇ ದೇವಿ-ದೇವತೆಗಳಿದ್ದರು, ಈಗ ಇದೇ ಮಹಾಭಾರತದ ಯುದ್ಧದ ಮೂಲಕ ಎಲ್ಲರ ವಿನಾಶವಾಗುವುದು. ಈಗ ಎಲ್ಲರೂ ಪತಿತ, ತಮೋಪ್ರಧಾನರಾಗಿದ್ದಾರೆ. ನಾನೂ ಸಹ ಇವರ ಬಹಳ ಜನ್ಮಗಳ ಅಂತಿಮದಲ್ಲಿಯೇ ಬಂದು ಪ್ರವೇಶ ಮಾಡುತ್ತೇನೆ. ಇವರು ಪೂರ್ಣ ಭಕ್ತನಾಗಿದ್ದರು, ನಾರಾಯಣನ ಪೂಜೆ ಮಾಡುತ್ತಿದ್ದರು, ಇವರಲ್ಲಿಯೇ ಪ್ರವೇಶ ಮಾಡಿ ಮತ್ತೆ ಇವರನ್ನು ನಾರಾಯಣನನ್ನಾಗಿ ಮಾಡುತ್ತೇನೆ. ಈಗ ನೀವೂ ಸಹ ಪುರುಷಾರ್ಥ ಮಾಡಬೇಕಾಗಿದೆ. ಈಗ ದೈವೀ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಮಾಲೆಯು ತಯಾರಾಗುತ್ತಿದೆಯಲ್ಲವೆ. ಮೇಲೆ ನಿರಾಕಾರ ಹೂ, ಅವರ ನಂತರ ಜೋಡಿ ಮಣಿಗಳು. ಶಿವ ತಂದೆಯ ಕೆಳಗೆ ಇವರು ನಿಂತಿದ್ದಾರೆ. ಜಗತ್ಪಿತಾ ಬ್ರಹ್ಮಾ ಮತ್ತು ಜಗದಂಬಾ ಸರಸ್ವತಿ. ನೀವೀಗ ಈ ಪುರುಷಾರ್ಥದಿಂದ ವಿಷ್ಣು ಪುರಿಯ ಮಾಲೀಕರಾಗುತ್ತೀರಿ. ಪ್ರಜೆಗಳೂ ಸಹ ನಮ್ಮ ಭಾರತವೆಂದು ಹೇಳುತ್ತಾರಲ್ಲವೆ. ನೀವೂ ಸಹ ತಿಳಿದುಕೊಳ್ಳುತ್ತೀರಿ - ನಾವು ವಿಶ್ವದ ಮಾಲೀಕರಾಗಿದ್ದೇವೆ, ನಾವು ರಾಜ್ಯಭಾರ ಮಾಡುತ್ತೇವೆ, ಮತ್ತ್ಯಾವುದೇ ಧರ್ಮವಿರುವುದಿಲ್ಲ. ಆದರೆ ಇದು ನಮ್ಮ ರಾಜಧಾನಿಯಾಗಿದೆ, ಮತ್ತ್ಯಾರ ರಾಜಧಾನಿಯಿರುವುದಿಲ್ಲ ಎಂದು ಈ ರೀತಿ ಹೇಳುವುದಿಲ್ಲ. ಇಲ್ಲಿ ಅನೇಕರಿರುವ ಕಾರಣ ನಮ್ಮದು, ನಿಮ್ಮದು ಎಂಬುದು ನಡೆಯುತ್ತದೆ. ಅಲ್ಲಿ ಈ ಮಾತುಗಳೇ ಇರುವುದಿಲ್ಲ ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಮತ್ತೆಲ್ಲಾ ಮಾತುಗಳನ್ನು ಬಿಟ್ಟು ನನ್ನೊಬ್ಬನನ್ನೇ ನೆನಪು ಮಾಡಿ ಆಗ ವಿಕರ್ಮಗಳು ವಿನಾಶವಾಗುತ್ತವೆ. ಯಾರಾದರೂ ಸನ್ಮುಖದಲ್ಲಿ ಕುಳಿತು ಯೋಗ ಮಾಡಿಸಲಿ, ದೃಷ್ಟಿ ಕೊಡಲಿ ಆಗ ಚೆನ್ನಾಗಿರುತ್ತದೆ ಎಂದಲ್ಲ. ನಡೆದಾಡುತ್ತಾ-ತಿರುಗಾಡುತ್ತಾ ತಂದೆಯನ್ನು ನೆನಪು ಮಾಡಬೇಕಾಗಿದೆ. ಇಡೀ ದಿನದಲ್ಲಿ ಎಷ್ಟು ನೆನಪು ಮಾಡಿದೆನು? ಮುಂಜಾನೆ ಎದ್ದು ತಂದೆಯೊಂದಿಗೆ ಎಷ್ಟು ಸಮಯ ಮಾತನಾಡಿದೆನು? ಇಂದು ತಂದೆಯ ನೆನಪಿನಲ್ಲಿ ಕುಳಿತಿದ್ದೆನಾ? ಎಂದು ತಮ್ಮ ಚಾರ್ಟನ್ನಿಡಿ. ಹೀಗೆ ಕೇಳಿಕೊಳ್ಳುತ್ತಾ ತನ್ನೊಂದಿಗೆ ಪರಿಶ್ರಮ ಪಡಬೇಕಾಗಿದೆ. ಜ್ಞಾನವಂತೂ ಬುದ್ಧಿಯಲ್ಲಿದೆ, ಇದನ್ನು ಮತ್ತೆ ಅನ್ಯರಿಗೂ ತಿಳಿಸಬೇಕಾಗಿದೆ. ಕಾಮ ಮಹಾಶತ್ರುವೆಂಬುದು ಮತ್ತ್ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. 2-4 ವರ್ಷಗಳಿದ್ದು ಮತ್ತೆ ಮಾಯೆಯ ಪೆಟ್ಟು ಬಿದ್ದರೆ ಕೆಳಗೆ ಬೀಳುತ್ತಾರೆ ಮತ್ತೆ ಬಾಬಾ, ನಾವು ಮುಖ ಕಪ್ಪು ಮಾಡಿಕೊಂಡೆವು ಎಂದು ತಂದೆಗೆ ಪತ್ರ ಬರೆಯುತ್ತಾರೆ. ಮತ್ತೆ ತಂದೆಯು ಈ ರೀತಿ ಬರೆಯುತ್ತಾರೆ - ಮುಖ ಕಪ್ಪು ಮಾಡಿಕೊಳ್ಳುವವರು 12 ತಿಂಗಳವರೆಗೆ ಇಲ್ಲಿ ಬರಲು ಅನುಮತಿಯಿಲ್ಲ. ನೀವು ತಂದೆಯೊಂದಿಗೆ ಪ್ರತಿಜ್ಞೆ ಮಾಡಿ ಮತ್ತೆ ವಿಕಾರದಲ್ಲಿ ಹೋದಿರಿ, ನನ್ನ ಬಳಿ ಎಂದೂ ಬರಬೇಡಿ. ಇದು ಉನ್ನತ ಗುರಿಯಾಗಿದೆ. ತಂದೆಯು ಪತಿತರಿಂದ ಪಾವನರನ್ನಾಗಿ ಮಾಡುವುದಕ್ಕಾಗಿಯೇ ಬಂದಿದ್ದಾರೆ, ಅನೇಕ ಮಕ್ಕಳು ವಿವಾಹ ಮಾಡಿಕೊಂಡು ಪವಿತ್ರರಾಗಿ ಇರುತ್ತಾರೆ. ಹಾ! ಯಾವುದೇ ಕನ್ಯೆಯ ಮೇಲೆ ಬಹಳ ಬಂಧನ ಹಾಕುತ್ತಿದ್ದರೆ ಅವರನ್ನು ಪಾರು ಮಾಡುವುದಕ್ಕಾಗಿ ಗಂಧರ್ವ ವಿವಾಹ ಮಾಡಿಕೊಂಡು ಪವಿತ್ರರಾಗಿರುತ್ತಾರೆ. ಅದರಲ್ಲಿಯೂ ಕೆಲಕೆಲವರು ಮತ್ತೆ ಮಾಯೆಗೆ ವಶವಾಗಿ ಬಿಡುತ್ತಾರೆ, ಸೋಲನ್ನನುಭವಿಸುತ್ತಾರೆ. ಸ್ತ್ರೀಯರೂ ಸಹ ಬಹಳ ಸೋಲನ್ನನುಭವಿಸುತ್ತಾರೆ. ತಂದೆಯು ತಿಳಿಸುತ್ತಾರೆ - ನೀವಂತೂ ಶೂರ್ಪನಖಿಯಾಗಿದ್ದೀರಿ ಎಂದು. ಇವೆಲ್ಲಾ ಹೆಸರುಗಳು ಈ ಸಮಯದ್ದಾಗಿದೆ. ಇಲ್ಲಂತೂ ತಂದೆಯು ಯಾವುದೇ ವಿಕಾರಿಯನ್ನು ಕುಳಿತುಕೊಳ್ಳಲೂ ಬಿಡುವುದಿಲ್ಲ. ಹೆಜ್ಜೆ-ಹೆಜ್ಜೆಯಲ್ಲಿ ತಂದೆಯಿಂದ ಸಲಹೆ ತೆಗೆದುಕೊಳ್ಳಬೇಕಾಗಿದೆ. ಸಮರ್ಪಣೆಯಾಗಿ ಬಿಟ್ಟರೆ ಮತ್ತೆ ತಂದೆಯು ಹೇಳುತ್ತಾರೆ - ಮಕ್ಕಳೇ, ಈಗ ಟ್ರಸ್ಟಿಯಾಗಿ, ಆದೇಶದಂತೆ ನಡೆಯುತ್ತಾ ಇರಿ. ನೀವು ಎಲ್ಲಾ ಲೆಕ್ಕ ಪತ್ರವನ್ನು ತಿಳಿಸುತ್ತೀರೆಂದರೆ ನಾನು ಸಲಹೆ ಕೊಡುತ್ತೇನೆ. ಇವು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ನೀವು ಭಲೆ ಭೋಗವನ್ನಿಡಿ ಆದರೆ ನಾನೇನೂ ತಿನ್ನುವುದಿಲ್ಲ. ನಾನಂತೂ ದಾತನಾಗಿದ್ದೇನೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ರಾತ್ರಿ ಕ್ಲಾಸ್ 15-6-68 :

ಏನೆಲ್ಲಾ ಆಗಿ ಹೋಗಿದೆ ಅದನ್ನು ಪುನರಾವರ್ತನೆ ಮಾಡುವುದರಿಂದ ಯಾರ ಬಲಹೀನತೆ ಹೃದಯದಲ್ಲಿದೆ ಆಗ ಅವರ ಹೃದಯದ ಬಲಹೀನತೆಯೂ ಸಹ ಪುನರಾವರ್ತನೆಯಾಗಿ ಬಿಡುತ್ತದೆ. ಅದಕ್ಕಾಗಿ ಮಕ್ಕಳಿಗೆ ಡ್ರಾಮದ ಪಟ್ಟಿಯ ಮೇಲೆ ನಿಲ್ಲಿಸಲಾಗಿದೆ. ಮುಖ್ಯ ಲಾಭ ಇರುವುದೇ ನೆನಪಿನಿಂದ. ನೆನಪಿನಿಂದಲೇ ಆಯಸ್ಸು ಹೆಚ್ಚಾಗಬೇಕಿದೆ. ಡ್ರಾಮವನ್ನು ಮಕ್ಕಳು ತಿಳಿದುಕೊಂಡು ಬಿಟ್ಟರೆ ಎಂದೂ ವಿಚಾರ ಬರುವುದಿಲ್ಲ. ಡ್ರಾಮದಲ್ಲಿ ಈ ಸಮಯ ಜ್ಞಾನ ಕಲಿಯುವ ಮತ್ತು ಕಲಿಸುವುದು ನಡೆಯುತ್ತಿದೆ. ನಂತರ ಪಾತ್ರ ಸಮಾಪ್ತಿಯಾಗಿ ಬಿಡುತ್ತದೆ. ತಂದೆಯದೂ ಇಲ್ಲಾ, ನಮ್ಮದೂ ಪಾತ್ರ ಇರುವುದಿಲ್ಲ. ಅವರು ಕೊಡುವಂತಹ ಪಾತ್ರ ನಾವು ತೆಗೆದುಕೊಳ್ಳುವ ಪಾತ್ರವೂ ಇರುವುದಿಲ್ಲ. ಅಂದರೆ ಒಂದಾಗಿ ಬಿಡುವುದಲ್ಲವೆ. ನಮ್ಮ ಪಾತ್ರ ಹೊಸ ಪ್ರಪಂಚದಲ್ಲಿ ಆಗಿ ಬಿಡುವುದು. ಬಾಬಾರವರ ಪಾತ್ರ ಶಾಂತಿಧಾಮದಲ್ಲಿರುವುದು. ಪಾತ್ರದ ರೀಲ್ ತುಂಬಿರುವುದಲ್ಲವೆ, ನಮ್ಮ ಪ್ರಾರಬ್ಧದ ಪಾತ್ರ, ಬಾಬಾನ ಶಾಂತಿಧಾಮದ ಪಾತ್ರ. ಕೊಡುವ ಮತ್ತು ತೆಗೆದುಕೊಳ್ಳುವ ಪಾತ್ರ ಪೂರ್ತಿಯಾಯಿತು, ಡ್ರಾಮವೇ ಪೂರ್ತಿಯಾಯಿತು. ನಂತರ ನಾವು ರಾಜ್ಯ ಮಾಡಲು ಬರುವೆವು, ಅಲ್ಲಿ ಪಾತ್ರ ಬದಲಾಗುವುದು. ಜ್ಞಾನ ಸ್ಟಾಪ್ ಆಗುವುದು, ನಾವು ಈ ರೀತಿ ಆಗಿ ಬಿಡುವೆವು. ಪಾತ್ರವೇ ಪೂರ್ತಿ ಆದಮೇಲೆ ಉಳಿದಂತೆ ವ್ಯತ್ಯಾಸವೇನೂ ಇರುವುದಿಲ್ಲ. ಮಕ್ಕಳ ಮತ್ತು ತಂದೆ ಪಾತ್ರವೂ ಇರುವುದಿಲ್ಲ. ಇವರೂ ಸಹ ಪೂರ್ತಿ ಜ್ಞಾನವನ್ನು ತೆಗೆದುಕೊಂಡು ಬಿಡುವರು. ಇವರ ಬಳಿಯೂ ಸಹ ಏನೂ ಉಳಿಯುವುದಿಲ್ಲ. ಕೊಡುವಂತಹವರೂ ಬಳಿಯಲ್ಲಿರುವುದಿಲ್ಲ, ತೆಗೆದುಕೊಂಡವರಲ್ಲಿಯೂ ಕೊರತೆ ಇರುವುದಿಲ್ಲ. ಅಂದರೆ ಇಬ್ಬರೂ ಒಬ್ಬರಿನ್ನೊಬ್ಬರ ಸಮಾನರಾದರು. ಇದರಲ್ಲಿ ವಿಚಾರ ಸಾಗರ ಮಂಥನ ಮಾಡುವಂತಹ ಬುದ್ಧಿಯ ಅವಶ್ಯಕತೆಯಿದೆ. ಮುಖ್ಯವಾದ ಪುರುಷಾರ್ಥವಾಗಿದೆ ನೆನಪಿನ ಯಾತ್ರೆಯದು. ತಂದೆ ಕುಳಿತು ಅರ್ಥ ತಿಳಿಸುತ್ತಾರೆ. ಹೇಳುವುದರಲ್ಲಿ ದೊಡ್ಡ ಮಾತಾಗಿ ಬಿಡುವುದು, ಬುದ್ಧಿಯಲ್ಲಂತೂ ಸೂಕ್ಷ್ಮವಾಗಿದೆಯಲ್ಲವೆ. ಒಳಗೆ ತಿಳಿದುಕೊಂಡಿರುವಿರಿ ಶಿವಬಾಬಾರವರ ರೂಪ ಏನಾಗಿದೆ ಎಂದು ಕಲಿಸಿ ಕೊಡುವುದರಲ್ಲಿ ದೊಡ್ಡ ರೂಪವಾಗಿ ಬಿಡುತ್ತದೆ, ಭಕ್ತಿಮಾರ್ಗದಲ್ಲಿ ದೊಡ್ಡ ಲಿಂಗ ಮಾಡಿ ಬಿಡುತ್ತಾರೆ. ಆತ್ಮವಂತೂ ಚಿಕ್ಕದಾಗಿದೆಯಲ್ಲವೆ. ಇದಾಗಿದೆ ಪ್ರಕೃತಿ. ಎಲ್ಲಿಯವರೆಗೆ ಅಂತ್ಯವನ್ನು ಮುಟ್ಟುವರು? ಆಮೇಲೆ ಕಡೆಯಲ್ಲಿ ಬೇ ಅಂತ ಎಂದು ಹೇಳಿ ಬಿಡುವರು. ತಂದೆಯಂತೂ ತಿಳಿಸಿದ್ದಾರೆ ಇಡೀ ಪಾತ್ರ ಆತ್ಮನಲ್ಲಿ ತುಂಬಿದೆ ಇದು ಪ್ರಕೃತಿಯಾಗಿದೆ. ಅಂತ್ಯವನ್ನು ಕಾಣಲಾಗುವುದಿಲ್ಲ. ಸೃಷ್ಠಿ ಚಕ್ರದ ಅಂತ್ಯವನ್ನು ಪಡೆಯುವಿರಿ. ರಚೈತ ಮತ್ತು ರಚನೆಯ ಆದಿ ಮಧ್ಯೆ ಅಂತ್ಯವನ್ನು ನೀವು ತಿಳಿದುಕೊಂಡಿರುವಿರಿ. ಬಾಬಾ ಜ್ಞಾನ ಸಾಗರ ಆಗಿದ್ದಾರೆ. ಮತ್ತು ನಾವೂ ಸಹ ಫುಲ್ ಆಗಿ ಬಿಡುವೆವು. ಪಡೆದುಕೊಳ್ಳಲು ಏನೂ ಉಳಿದಿರುವುದಿಲ್ಲ. ತಂದೆ ಇವರಲ್ಲಿ ಪ್ರವೇಶ ಮಾಡಿ ಓದಿಸುತ್ತಿದ್ದಾರೆ. ಅವರು ಬಿಂದಿ ಆಗಿದ್ದಾರೆ. ಆತ್ಮ ಅಥವಾ ಪರಮಾತ್ಮನ ಸಾಕ್ಷಾತ್ಕಾರ ಆಗುವುದರಿಂದ ಖುಷಿ ಏನು ಆಗುವುದಿಲ್ಲ. ಪರಿಶ್ರಮ ಪಟ್ಟು ತಂದೆಯನ್ನು ನೆನಪು ಮಾಡಬೇಕು ಆಗ ವಿಕರ್ಮ ವಿನಾಶವಾಗುವುದು. ತಂದೆ ಹೇಳುತ್ತಾರೆ ನನ್ನಲ್ಲಿ ಜ್ಞಾನ ಬಂದ್ ಆಗಿ ಬಿಡುವುದು ಆಗ ನಿಮ್ಮಲ್ಲಿಯೂ ಸಹ ಬಂದ್ ಆಗಿ ಬಿಡುವುದು. ಜ್ಞಾನ ಪಡೆದು ಶ್ರೇಷ್ಠರಾಗಿ ಬಿಡುವಿರಿ. ಎಲ್ಲವನ್ನೂ ತೆಗೆದುಕೊಂಡು ಬಿಡುವಿರಿ ಆದರೂ ಸಹ ತಂದೆ ತಂದೆಯೇ ಆಗಿದ್ದಾರಲ್ಲವೆ. ನೀವು ಆತ್ಮರು ಆತ್ಮರಾಗೇ ಇರುವಿರಿ, ತಂದೆಯಾಗಂತೂ ಇರುವುದಿಲ್ಲ. ಇದಂತೂ ಜ್ಞಾನವಾಗಿದೆ. ತಂದೆ ತಂದೆಯೇ, ಮಕ್ಕಳು ಮಕ್ಕಳೇ. ಇದೆಲ್ಲವನ್ನೂ ವಿಚಾರ ಸಾಗರ ಮಂಥನ ಮಾಡಿ ಆಳದಲ್ಲಿ ಹೋಗುವ ಮಾತಾಗಿದೆ. ಇವರೂ ಸಹ ತಿಳಿದುಕೊಳ್ಳುತ್ತಾರೆ ಎಲ್ಲರೂ ಸಹ ಹೋಗಲೇ ಬೇಕು. ಎಲ್ಲರೂ ಹೋಗುವಂತಹವರು. ಬಾಕಿ ಆತ್ಮ ಹೋಗಿ ಇರುವುದು. ಇಡೀ ಜಗತ್ತೆ ಸಮಾಪ್ತಿಯಾಗುವುದಿದೆ. ಇದರಲ್ಲಿ ನಿರ್ಭಯರಾಗಿರಬೇಕಾಗುತ್ತದೆ. ನಿರ್ಭಯರಾಗಿರಲು ಪುರುಷಾರ್ಥ ಮಾಡಬೇಕು. ಶರೀರ ಇತ್ಯಾದಿಯ ಭಾನ ಬರಬಾರದು. ಅದೇ ಅವಸ್ಥೆಯಲ್ಲಿ ಹೋಗಬೇಕು. ತಂದೆ ತಮ್ಮ ಸಮಾನ ಮಾಡುತ್ತಾರೆ. ನೀವು ಮಕ್ಕಳು ಸಹ ನಿಮ್ಮ ಸಮಾನ ಮಾಡುತ್ತಿರುವಿರಿ. ಒಬ್ಬ ತಂದೆಯದೇ ನೆನಪಿರಬೇಕು ಈ ರೀತಿಯ ಪುರುಷಾರ್ಥ ಮಾಡಬೇಕು. ಇನ್ನೂ ಸಮಯ ಇದೆ. ಈ ಪೂರ್ವಾಭ್ಯಾಸ ತೀಕ್ಷ್ಣವಾಗಿ ಮಾಡಬೇಕು. ಅಭ್ಯಾಸ ಇಲ್ಲದೇ ಹೋದರೆ ನಿಂತು ಬಿಡುವಿರಿ. ಕಾಲುಗಳು ಅದುರಲು ಪ್ರಾರಂಭವಾಗುವುದು ಮತ್ತು ಹೃದಯಾ ಘಾತ ಆಕಸ್ಮಿಕವಾಗಿ ಆಗುತ್ತಿರುತ್ತೆ. ತಮೋಪ್ರಧಾನ ಶರೀರಕ್ಕೆ ಹೃದಯಘಾತವಾಗುವಲ್ಲಿ ಹೆಚ್ಚು ಸಮಯ ಇಡಿಸುವುದಿಲ್ಲ. ಎಷ್ಟು ಅಶರೀರಿಯಾಗುತ್ತಾ ಹೋಗುವಿರಿ, ತಂದೆಯ ನೆನಪು ಮಾಡುತ್ತಿದ್ದಾಗ ಸಮೀಪ ಬರುತ್ತಾ ಹೋಗುವಿರಿ. ಯೋಗವುಳ್ಳವರೇ ನಿರ್ಭಯರಾಗಿರುತ್ತಾರೆ. ಯೋಗದಿಂದ ಶಕ್ತಿ ಸಿಗುವುದು, ಜ್ಞಾನದಿಂದ ಧನ ಸಿಗುವುದು. ಮಕ್ಕಳಿಗೆ ಬೇಕು ಶಕ್ತಿ. ಆದ್ದರಿಂದ ಶಕ್ತಿ ಪಡೆಯಲು ತಂದೆಯನ್ನು ನೆನಪು ಮಾಡುತ್ತಿರಿ. ಬಾಬಾ ಆಗಿದ್ದಾರೆ ಅವಿನಾಸಿ ಸರ್ಜನ್. ಅವರು ಎಂದೂ ರೋಗಿಯಾಗಲು ಸಾಧ್ಯವಿಲ್ಲ. ಈಗ ತಂದೆ ಹೇಳುತ್ತಾರೆ ನೀವು ನಿಮ್ಮ ಅವಿನಾಶಿ ಔಷಧಿಯನ್ನು ಮಾಡುತ್ತಿರಿ. ನಾನು ಇಂತಹ ಸಂಜೀವಿನಿ ಬೂಟಿ ಕೊಡುತ್ತೇನೆ ಅದರಿಂದ ಎಂದೂ ಯಾವುದೇ ಖಾಯಿಲೆ ಬೀಳುವುದಿಲ್ಲ. ಕೇವಲ ಪತಿತ-ಪಾವನ ತಂದೆಯನ್ನು ನೆನಪು ಮಾಡುತ್ತಿರಿ ಆಗ ಪಾವನರಾಗಿ ಬಿಡುವಿರಿ. ದೇವತೆಗಳು ಸದಾ ನಿರೋಗಿ ಪಾವನರಾಗಿರುತ್ತಾರಲ್ಲವೆ. ಮಕ್ಕಳಿಗೆ ಇದಂತೂ ನಿಶ್ಚಯವಾಗಿ ಹೋಗಿದೆ ನಾವು ಕಲ್ಪ-ಕಲ್ಪ ಆಸ್ತಿಯನ್ನು ಪಡೆಯುವೆವು. ಅನಾದಿ ಸಮಯ ದಿಂದ ಅಗಣಿತ ಬಾರಿ ತಂದೆ ಬಂದಿದ್ದಾರೆ ಹೇಗೆ ಈಗ ಬಂದ ಹಾಗೆ. ಬಾಬಾ ಏನು ಅಗಲಿ ಹೋಗಿ ಪುನಃ ಸಿಕ್ಕಿರುವರು, ತಿಳುವಳಿಕೆ ಕೊಡುತ್ತಾ ಇದೇ ರಾಜಯೋಗವಾಗಿದೆ. ಆ ಗೀತಯೆ ಇತ್ಯಾದಿ ಎಲ್ಲಾ ಭಕ್ತಿ ಮಾರ್ಗದ್ದಾಗಿದೆ. ಈ ಜ್ಞಾನ ಮಾರ್ಗ ತಂದೆಯೇ ತಿಳಿಸುತ್ತಾರೆ. ತಂದೆಯೇ ಬಂದು ನಮ್ಮನ್ನು ಕೆಳಗೆ ಬಿದ್ದವರನ್ನು ಮೇಲಕ್ಕೆ ಎತ್ತುತ್ತಾರೆ. ಯಾರಿಗೆ ಪಕ್ಕಾ ನಿಶ್ಚಯ ಬುದ್ಧಿಯಿದೆ ಅವರೇ ಮಾಲೆಯ ಮಣಿಯಾಗುತ್ತಾರೆ. ಮಕ್ಕಳು ಅರ್ಥ ಮಾಡಿಕೊಂಡಿದ್ದಾರೆ ಭಕ್ತಿ ಮಾಡುತ್ತಾ ಮಾಡುತ್ತಾ ನಾವು ಕೆಳಗೆ ಬೀಳುತ್ತಲೇ ಬಂದೆವು. ಈಗ ತಂದೆ ಬಂದು ಸತ್ಯ ಸಂಪಾದನೆ ಮಾಡಿಸುತ್ತಾರೆ. ಲೌಕಿಕ ತಂದೆ ಇಷ್ಟು ಸಂಪಾದನೆ ಮಾಡಿಸುವುದಿಲ್ಲ ಎಷ್ಟು ಪಾರಲೌಕಿಕ ತಂದೆ ಮಾಡಿಸುತ್ತಾರೆ. ಒಳ್ಳೆಯದು ಮಕ್ಕಳಿಗೆ ಶುಭರಾತ್ರಿ ಮತ್ತು ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಮಾಯೆಯು ಶಕ್ತಿಶಾಲಿಯಾಗಿ ಮುಂದೆ ಬರುತ್ತದೆ ಅದಕ್ಕೆ ಹೆದರಬಾರದು, ಮಾಯಾಜೀತರಾಗಬೇಕು. ಹೆಜ್ಜೆ-ಹೆಜ್ಜೆಯಲ್ಲಿ ಶ್ರೀಮತದಂತೆ ನಡೆದು ತಮ್ಮ ಮೇಲೆ ತಾವೇ ಕೃಪೆ ಮಾಡಿಕೊಳ್ಳಬೇಕಾಗಿದೆ.

2. ತಂದೆಗೆ ತಮ್ಮ ಸತ್ಯ-ಸತ್ಯವಾಗಿ ಲೆಕ್ಕ ಪತ್ರವನ್ನು ತಿಳಿಸಬೇಕಾಗಿದೆ. ಟ್ರಸ್ಟಿಯಾಗಿ ಇರಬೇಕಾಗಿದೆ. ನಡೆಯುತ್ತಾ-ತಿರುಗಾಡುತ್ತಾ ನೆನಪಿನ ಅಭ್ಯಾಸ ಮಾಡಬೇಕಾಗಿದೆ.

ವರದಾನ:
ತಮ್ಮ ಸ್ವರೂಪದ ಮುಖಾಂತರ ಭಕ್ತರಿಗೆ ಬೆಳಕಿನ ಕಿರೀಟದ ಸಾಕ್ಷಾತ್ಕಾರ ಮಾಡಿಸುವಂತಹ ಇಷ್ಟ ದೇವ ಭವ.

ಎಂದಿನಿಂದ ನೀವು ತಂದೆಗೆ ಮಕ್ಕಳಾದಿರಿ, ಪವಿತ್ರತೆಯ ಪ್ರತಿಜ್ಞೆ ಮಾಡಿದಿರಿ ಅದಕ್ಕೆ ಪ್ರತಿಯಾಗಿ ಬೆಳಕಿನ ಕಿರೀಟ ಪ್ರಾಪ್ತಿಯಾಯಿತು. ಈ ಬೆಳಕಿನ ಕಿರೀಟದ ಮುಂದೆ ರತ್ನಜಡಿತ ಕಿರೀಟ ಏನೂ ಇಲ್ಲ. ಎಷ್ಟೆಷ್ಟು ಸಂಕಲ್ಪ, ಮಾತು ಮತ್ತು ಕರ್ಮದಲ್ಲಿ ಪವಿತ್ರತೆಯ ಧಾರಣೆ ಮಾಡುತ್ತಾ ಹೋಗುವಿರಿ ಅಷ್ಟು ಈ ಬೆಳಕಿನ ಕಿರೀಟ ಸ್ಪಷ್ಟವಾಗುತ್ತಾ ಹೋಗುವುದು ಮತ್ತು ಇಷ್ಟ ದೇವರ ರೂಪದಲ್ಲಿ ಭಕ್ತರಿಗೆ ಪ್ರತ್ಯಕ್ಷರಾಗುತ್ತಾ ಹೋಗುವಿರಿ.

ಸ್ಲೋಗನ್:
ಸದಾ ಬಾಪ್ದಾದಾರವರ ಚತ್ರಛಾಯೆಯ ಒಳಗೆ ಇದ್ದಾಗ ವಿಘ್ನ-ವಿನಾಶಕರಾಗಿ ಬಿಡುವಿರಿ.


ಬ್ರಹ್ಮಾ ತಂದೆಯ ಸಮಾನ ಸಂಪನ್ನ ಸ್ಥಿತಿಯ ಅನುಭವ ಮಾಡಿರಿ:-

ಸ್ವಯಂನ್ನು ಜ್ಞಾನ-ಯೋಗದ ಪ್ರಕಾಶತೆಯ ಲೈಟ್ ಮೈಟ್ನಿಂದ ಸಂಪನ್ನವನ್ನಾಗಿ ಮಾಡಿಕೊಳ್ಳುತ್ತೀರೆಂದರೆ, ಯಾವುದೇ ಪರಿಸ್ಥಿತಿಯನ್ನು ಸೆಕೆಂಡಿನಲ್ಲಿ ಪಾಸ್ ಮಾಡಿ ಬಿಡುತ್ತೀರಿ. ಈಗ ಯೋಗವನ್ನಿಡುವವರಲ್ಲ ಆದರೆ ಸದಾ ಕಂಬೈಂಡ್ ಅರ್ಥಾತ್ ಜೊತೆಯಲ್ಲಿರುವಂತಹ ನಿರಂತರ ಯೋಗಿ, ಸದಾ ಸಹಯೋಗಿಯಾಗಿರುತ್ತಾ ಹಾರುವ ಕಲೆಯಲ್ಲಿ ಹಾರುತ್ತಾ, ಬ್ರಹ್ಮಾ ತಂದೆಯ ಸಮಾನ ಸಂಪನ್ನತೆ ಮತ್ತು ಸಂಪೂರ್ಣತೆಯ ಅನುಭವ ಮಾಡಿರಿ.