04/02/21 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ


"ಮಧುರ ಮಕ್ಕಳೇ - ಇದು ಅಂತಿಮ ಸಮಯವಾಗಿದೆ, ರಾವಣನು ಎಲ್ಲರನ್ನೂ ಸ್ಮಶಾನಕ್ಕೆ ಯೋಗ್ಯರನ್ನಾಗಿ ಮಾಡಿ ಬಿಟ್ಟಿದ್ದಾನೆ, ತಂದೆಯು ಅಮೃತದ ಮಳೆ ಸುರಿಸಿ ಜೊತೆ ಕರೆದುಕೊಂಡು ಹೋಗಲು ಬಂದಿದ್ದಾರೆ.”

ಪ್ರಶ್ನೆ:

ಶಿವ ತಂದೆಗೆ ಭೋಲಾ ಭಂಡಾರಿ ಎಂದೂ ಹೇಳಲಾಗುತ್ತದೆ - ಏಕೆ?

ಉತ್ತರ:

ಏಕೆಂದರೆ ಶಿವ ಭೋಲಾನಾಥನು ಬರುತ್ತಾರೆಂದರೆ ಗಣಿಕೆಯರು, ಅಹಲ್ಯೆಯರು, ಕುಬ್ಜೆಯರ ಕಲ್ಯಾಣವನ್ನೂ ಮಾಡಿ ಅವರನ್ನು ವಿಶ್ವದ ಮಾಲೀಕರನ್ನಾಗಿ ಮಾಡಿ ಬಿಡುತ್ತಾರೆ. ಅವರು ಬರುವುದೂ ಸಹ ನೋಡಿ, ಪತಿತ ಪ್ರಪಂಚ, ಪತಿತ ಶರೀರದಲ್ಲಿ ಬರುತ್ತಾರೆ! ಅಂದಮೇಲೆ ಭೋಲಾ(ಮುಗ್ಧ) ಆದರಲ್ಲವೆ. ಭೋಲಾ ತಂದೆಯ ಆದೇಶವಾಗಿದೆ - ಮಧುರ ಮಕ್ಕಳೇ, ಈಗ ಅಮೃತವನ್ನು ಕುಡಿಯಿರಿ, ವಿಕಾರಗಳೆಂಬ ವಿಷವನ್ನು ಬಿಟ್ಟು ಬಿಡಿ.

ಗೀತೆ:

ದೂರ ದೇಶದಲ್ಲಿರುವವರು................

ಓಂ ಶಾಂತಿ. ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ ಅರ್ಥಾತ್ ಆತ್ಮಗಳು ಈ ಶರೀರದ ಕರ್ಮೇಂದ್ರಿಯವಾದ ಕಿವಿಯ ಮೂಲಕ ಗೀತೆಯನ್ನು ಕೇಳಿದಿರಿ. ದೂರ ದೇಶದ ಯಾತ್ರಿಕನು ಬರುತ್ತಾರೆ, ನೀವೂ ಸಹ ಯಾತ್ರಿಕರಾಗಿದ್ದೀರಲ್ಲವೆ. ಯಾರೆಲ್ಲಾ ಮನುಷ್ಯಾತ್ಮರಿದ್ದಾರೆಯೋ ಅವರೆಲ್ಲರೂ ಯಾತ್ರಿಕರಾಗಿದ್ದಾರೆ. ಆತ್ಮಗಳಿಗೆ ಇಲ್ಲಿ ಯಾವುದೇ ಮನೆಯಿಲ್ಲ, ಆತ್ಮವು ನಿರಾಕಾರಿಯಾಗಿದೆ. ನಿರಾಕಾರಿ ಪ್ರಪಂಚದಲ್ಲಿರುವವರು ನಿರಾಕಾರಿ ಆತ್ಮಗಳಾಗಿದ್ದೀರಿ. ಅದಕ್ಕೆ ನಿರಾಕಾರಿ ಆತ್ಮಗಳ ಮನೆ, ದೇಶ ಅಥವಾ ಲೋಕ ಎಂದು ಹೇಳಲಾಗುತ್ತದೆ. ಈ ಸಾಕಾರ ಪ್ರಪಂಚಕ್ಕೆ ಜೀವಾತ್ಮರ ದೇಶವೆಂದು ಹೇಳಲಾಗುತ್ತದೆ. ಅದು ಆತ್ಮಗಳ ದೇಶವಾಗಿದೆ ನಂತರ ಆತ್ಮಗಳು ಇಲ್ಲಿ ಬಂದು ಶರೀರದಲ್ಲಿ ಪ್ರವೇಶ ಮಾಡುವುದರಿಂದ ನಿರಾಕಾರಿಯಿಂದ ಸಾಕಾರಿಯಾಗಿ ಬಿಡುತ್ತೀರಿ. ಆತ್ಮಕ್ಕೆ ರೂಪವಿಲ್ಲವೆಂದು ಹೇಳುವಂತಿಲ್ಲ. ರೂಪವೂ ಇದೆ, ಹೆಸರೂ ಇದೆ, ಇಷ್ಟು ಚಿಕ್ಕ ಆತ್ಮವು ಈ ಶರೀರದ ಮೂಲಕ ಎಷ್ಟು ಪಾತ್ರವನ್ನಭಿನಯಿಸುತ್ತದೆ. ಪ್ರತಿಯೊಂದು ಆತ್ಮನಲ್ಲಿ ಪಾತ್ರವನ್ನಭಿನಯಿಸುವ ರೆಕಾರ್ಡ್ ಎಷ್ಟೊಂದು ತುಂಬಲ್ಪಟ್ಟಿದೆ. ರೆಕಾರ್ಡನ್ನು ಒಂದು ಬಾರಿ ತುಂಬಲಾಗುತ್ತದೆ ನಂತರ ಅದನ್ನು ಎಷ್ಟು ಬಾರಿಯಾದರೂ ಪುನರಾವರ್ತಿಸಿ, ಅದೇ ನಡೆಯುವುದು. ಹಾಗೆಯೇ ಆತ್ಮವೂ ಸಹ ಈ ಶರೀರದಲ್ಲಿ ರೆಕಾರ್ಡ್ ಆಗಿದೆ, ಅದರಲ್ಲಿ 84 ಜನ್ಮಗಳ ಪಾತ್ರವು ಅಡಕವಾಗಿದೆ. ಹೇಗೆ ತಂದೆಯು ನಿರಾಕಾರನಾಗಿದ್ದಾರೆಯೋ ಹಾಗೆಯೇ ಆತ್ಮವೂ ನಿರಾಕಾರಿಯಾಗಿದೆ. ಶಾಸ್ತ್ರಗಳಲ್ಲಿ ಕೆಲವೊಂದು ಕಡೆ ಪರಮಾತ್ಮನು ನಾಮ-ರೂಪದಿಂದ ಭಿನ್ನವೆಂದು ಬರೆದು ಬಿಟ್ಟಿದ್ದಾರೆ. ಆದರೆ ನಾಮ-ರೂಪದಿಂದ ಭಿನ್ನವಾದ ವಸ್ತು ಯಾವುದೂ ಇಲ್ಲ. ಹೇಗೆ ಆಕಾಶವಿದೆ, "ಆಕಾಶ” ಎಂದು ಹೆಸರಂತೂ ಇದೆಯಲ್ಲವೆ. ಹೆಸರಿಲ್ಲದ ವಸ್ತು ಯಾವುದೂ ಇಲ್ಲ. ಮನುಷ್ಯರು ಪರಮಪಿತ ಪರಮಾತ್ಮ ಎಂದು ಹೇಳುತ್ತಾರೆ. ಈಗ ದೂರ ದೇಶದಲ್ಲಂತೂ ಎಲ್ಲಾ ಆತ್ಮರೂ ಇರುತ್ತಾರೆ. ಇದು ಸಾಕಾರ ದೇಶವಾಗಿದೆ, ಇದರಲ್ಲಿಯೂ ಇಬ್ಬರ ರಾಜ್ಯವು ನಡೆಯುತ್ತದೆ – ರಾಮ ರಾಜ್ಯ ಮತ್ತು ರಾವಣ ರಾಜ್ಯ. ಅರ್ಧ ಕಲ್ಪ ರಾಮ ರಾಜ್ಯ, ಇನ್ನರ್ಧ ಕಲ್ಪ ರಾವಣ ರಾಜ್ಯವಾಗಿದೆ. ತಂದೆಯು ಎಂದಿಗೂ ಮಕ್ಕಳಿಗಾಗಿ ದುಃಖದ ರಾಜ್ಯವನ್ನು ರಚಿಸುವುದಿಲ್ಲ. ಈಶ್ವರನೇ ಸುಖ-ದುಃಖವನ್ನು ಕೊಡುತ್ತಾರೆಂದು ಮನುಷ್ಯರು ಹೇಳುತ್ತಾರೆ ಆದರೆ ನಾನೆಂದೂ ಮಕ್ಕಳಿಗೆ ದುಃಖ ಕೊಡುವುದಿಲ್ಲ. ನನ್ನ ಹೆಸರೇ ಆಗಿದೆ - ದುಃಖಹರ್ತ-ಸುಖಕರ್ತ. ಇದು ಮನುಷ್ಯರ ತಪ್ಪಾಗಿದೆ. ಈಶ್ವರನೆಂದೂ ದುಃಖ ಕೊಡುವುದಿಲ್ಲ, ಈ ಸಮಯದಲ್ಲಿರುವುದೇ ದುಃಖಧಾಮ. ರಾವಣ ರಾಜ್ಯದಲ್ಲಿ ಅರ್ಧ ಕಲ್ಪ ದುಃಖವೇ ದುಃಖ ಸಿಗುತ್ತದೆ, ಸುಖದ ಅಂಚಲಿಯೂ ಇರುವುದಿಲ್ಲ ಮತ್ತೆ ಸುಖಧಾಮದಲ್ಲಿ ದುಃಖವಿರುವುದೇ ಇಲ್ಲ. ತಂದೆಯು ಸ್ವರ್ಗದ ರಚನೆಯನ್ನು ರಚಿಸುತ್ತಾರೆ, ನೀವೀಗ ಸಂಗಮದಲ್ಲಿದ್ದೀರಿ, ಇದಕ್ಕೆ ಯಾರೂ ಹೊಸ ಪ್ರಪಂಚವೆಂದು ಹೇಳುವುದಿಲ್ಲ. ಹೊಸ ಪ್ರಪಂಚದ ಹೆಸರೇ ಆಗಿದೆ - ಸತ್ಯಯುಗ, ಅದೇ ನಂತರ ಹಳೆಯದಾಗುತ್ತದೆ ಆದ್ದರಿಂದ ಇದಕ್ಕೆ ಕಲಿಯುಗವೆಂದು ಹೇಳಲಾಗುತ್ತದೆ. ಹೊಸ ವಸ್ತು ಚೆನ್ನಾಗಿರುತ್ತದೆ ಮತ್ತು ಹಳೆಯ ವಸ್ತು ಬಹಳ ಕೆಟ್ಟದ್ದಾಗಿ ಕಾಣಿಸುತ್ತದೆ. ಆದ್ದರಿಂದ ಹಳೆಯ ವಸ್ತುವನ್ನು ಸಮಾಪ್ತಿ ಮಾಡಲಾಗುತ್ತದೆ. ಮನುಷ್ಯರು ವಿಷಕ್ಕೇ (ವಿಕಾರ) ಸುಖವೆಂದು ತಿಳಿಯುತ್ತಾರೆ. ಅಮೃತವನ್ನು ಬಿಟ್ಟು ವಿಷವನ್ನೇಕೆ ಕುಡಿಯುವಿರಿ ಎಂದು ಗಾಯನವಿದೆ ಮತ್ತು ನಿಮ್ಮ ಏರುವ ಕಲೆಯಿಂದ ಸರ್ವರ ಉದ್ಧಾರವೆಂದೂ ಹೇಳುತ್ತಾರೆ. ತಾವು ಬಂದು ಏನನ್ನು ಮಾಡುತ್ತೀರೋ ಅದರಿಂದ ಎಲ್ಲರ ಕಲ್ಯಾಣವೇ ಆಗುವುದು, ಇಲ್ಲದಿದ್ದರೆ ರಾವಣ ರಾಜ್ಯದಲ್ಲಿ ಮನುಷ್ಯರು ಕೆಟ್ಟ ಕೆಲಸಗಳನ್ನೇ ಮಾಡುತ್ತಾರೆ. ಇದಂತೂ ಮಕ್ಕಳಿಗೆ ಅರ್ಥವಾಗಿದೆ – ಗುರು ನಾನಕರಿಗೆ 500 ವರ್ಷಗಳಾಯಿತು, ಅವರು ಪುನಃ ಯಾವಾಗ ಬರುತ್ತಾರೆ? ಅವರ ಆತ್ಮವು ಜ್ಯೋತಿಯಲ್ಲಿ ಜ್ಯೋತಿಯು ಸಮಾವೇಶವಾಯಿತು ಮತ್ತೆ ಹೇಗೆ ಬರುವರು ಎಂದು ಹೇಳುತ್ತಾರೆ. ಆದರೆ ನೀವು ಹೇಳುತ್ತೀರಿ- ಇಂದಿಗೆ 4500 ವರ್ಷಗಳ ನಂತರ ಪುನಃ ಗುರು ನಾನಕರು ಬರುತ್ತಾರೆ. ನಿಮ್ಮ ಬುದ್ಧಿಯಲ್ಲಿ ಇಡೀ ವಿಶ್ವದ ಚರಿತ್ರೆ-ಭೂಗೋಳವು ಸುತ್ತುತ್ತಿರುತ್ತದೆ. ಈ ಸಮಯದಲ್ಲಿ ಎಲ್ಲರೂ ತಮೋಪ್ರಧಾನರಾಗಿದ್ದಾರೆ, ಇದಕ್ಕೆ ಅಂತಿಮ ಸಮಯ ಎಂದು ಹೇಳಲಾಗುತ್ತದೆ. ಎಲ್ಲಾ ಮನುಷ್ಯರು ಹೇಗೆ ಸತ್ತು ಹೋಗಿದ್ದಾರೆ, ಎಲ್ಲರ ಜ್ಯೋತಿಯು ನಂದಿ ಹೋಗಿದೆ. ತಂದೆಯು ಎಲ್ಲರನ್ನೂ ಪುನಃ ಜಾಗೃತ ಮಾಡಲು ಬರುತ್ತಾರೆ. ಯಾವ ಮಕ್ಕಳು ಕಾಮ ಚಿತೆಯನ್ನೇರಿ ಭಸ್ಮವಾಗಿ ಬಿಟ್ಟಿದ್ದಾರೆಯೋ ಅವರನ್ನು ಅಮೃತ ವರ್ಷದಿಂದ ಏಳಿಸಿ ಜೊತೆ ಕರೆದುಕೊಂಡು ಹೋಗುತ್ತಾರೆ. ಮಾಯಾ ರಾವಣನು ಕಾಮ ಚಿತೆಯ ಮೇಲೆ ಕುಳ್ಳರಿಸಿ ಸ್ಮಶಾನಕ್ಕೆ ಯೋಗ್ಯರನ್ನಾಗಿ ಮಾಡಿ ಬಿಟ್ಟಿದ್ದಾರೆ, ಎಲ್ಲರೂ ಮಲಗಿ ಬಿಟ್ಟಿದ್ದಾರೆ. ಈಗ ತಂದೆಯು ಜ್ಞಾನಾಮೃತವನ್ನು ಕುಡಿಸುತ್ತಾರೆ. ಈ ಜ್ಞಾನಾಮೃತವೆಲ್ಲಿ, ಆ ನೀರೆಲ್ಲಿ! ಸಿಖ್ಖರು ವಿಶೇಷ ದಿನದಂದು ಬಹಳ ವಿಜೃಂಭಣೆಯಿಂದ ಸರೋವರವನ್ನು ಸ್ವಚ್ಛ ಮಾಡುತ್ತಾರೆ, ಮಣ್ಣನ್ನು ತೆಗೆಯುತ್ತಾರೆ ಆದ್ದರಿಂದ ಅಮೃತಸರ ಅರ್ಥಾತ್ ಅಮೃತದ ಸರೋವರ ಎಂದು ಹೆಸರನ್ನಿಟ್ಟಿದ್ದಾರೆ. ಗುರುನಾನಕರೂ ಸಹ ತಂದೆಯ ಮಹಿಮೆ ಮಾಡಿದ್ದಾರೆ. ಸ್ವಯಂ ಅವರೇ ಹೇಳುತ್ತಾರೆ - ಏಕ್ ಓಂಕಾರ್, ಸತ್ನಾಮ್.... ಅವರು ಸದಾ ಸತ್ಯವನ್ನು ಹೇಳುವವರಾಗಿದ್ದಾರೆ. ಸತ್ಯ ನಾರಾಯಣನ ಕಥೆಯಿದೆಯಲ್ಲವೆ. ಮನುಷ್ಯರು ಭಕ್ತಿಮಾರ್ಗದಲ್ಲಿ ಎಷ್ಟೊಂದು ಕಥೆಗಳನ್ನು ಕೇಳುತ್ತಾ ಬಂದಿದ್ದಾರೆ. ಅಮರ ಕಥೆ, ಮೂರನೇ ನೇತ್ರದ ಕಥೆ.... ಶಂಕರನು ಪಾರ್ವತಿಗೆ ಕಥೆಯನ್ನು ತಿಳಿಸಿದರೆಂದು ಹೇಳುತ್ತಾರೆ, ಶಂಕರನು ಸೂಕ್ಷ್ಮವತನದಲ್ಲಿರುವವರು ಮತ್ತೆ ಯಾವ ಕಥೆಯನ್ನು ತಿಳಿಸಿದರು? ಇವೆಲ್ಲಾ ಮಾತುಗಳನ್ನು ತಂದೆಯು ತಿಳಿಸುತ್ತಾರೆ - ವಾಸ್ತವದಲ್ಲಿ ನಿಮಗೆ ಅಮರ ಕಥೆಯನ್ನು ತಿಳಿಸಿ ಅಮರ ಲೋಕದಲ್ಲಿ ಕರೆದುಕೊಂಡು ಹೋಗಲು ನಾನು ಬಂದಿದ್ದೇನೆ. ಮೃತ್ಯು ಲೋಕದಿಂದ ಅಮರಲೋಕಕ್ಕೆ ಕರೆದುಕೊಂಡು ಹೋಗುತ್ತೇನೆ. ಬಾಕಿ ಸೂಕ್ಷ್ಮ ಲೋಕದಲ್ಲಿ ಅವಳಿಗೆ ಅಮರ ಕಥೆಯನ್ನು ತಿಳಿಸಲು ಪಾರ್ವತಿ ಏನು ದೋಷ ಮಾಡಿದಳು! ಶಾಸ್ತ್ರಗಳಲ್ಲಿ ಅನೇಕ ಕಥೆಗಳನ್ನು ಬರೆದು ಬಿಟ್ಟಿದ್ದಾರೆ. ಸತ್ಯ ನಾರಾಯಣನ ಸತ್ಯ ಕಥೆಯಂತೂ ಇಲ್ಲ. ನೀವು ಸತ್ಯ ನಾರಾಯಣನ ಕಥೆಗಳನ್ನು ಕೇಳಿರುತ್ತೀರಿ, ಅಂದಮೇಲೆ ಯಾರಾದರೂ ಸತ್ಯ ನಾರಾಯಣನಾಗುತ್ತಾರೆಯೇ, ಇನ್ನೂ ಕೆಳಗಿಳಿಯತೊಡಗುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ - ನಾವು ನರನಿಂದ ನಾರಾಯಣ, ನಾರಿಯಿಂದ ಲಕ್ಷ್ಮಿಯಾಗುತ್ತೇವೆ ಇದು ಅಮರ ಲೋಕದಲ್ಲಿ ಹೋಗುವುದಕ್ಕಾಗಿ ಸತ್ಯ ನಾರಾಯಣನ ಕಥೆ, ಮೂರನೇ ನೇತ್ರದ ಕಥೆಯಾಗಿದೆ. ಈಗ ನೀವಾತ್ಮಗಳಿಗೆ ಜ್ಞಾನದ ಮೂರನೇ ನೇತ್ರವು ಸಿಕ್ಕಿದೆ. ತಂದೆಯು ತಿಳಿಸುತ್ತಾರೆ - ನೀವೇ ಪಾವನರು, ಪೂಜ್ಯರಾಗಿದ್ದಿರಿ, ಮತ್ತೆ 84 ಜನ್ಮಗಳ ನಂತರ ನೀವೇ ಪೂಜಾರಿಗಳಾಗಿದ್ದೀರಿ. ಆದ್ದರಿಂದ ತಾವೇ ಪೂಜ್ಯ, ತಾವೇ ಪೂಜಾರಿ ಎಂದು ಗಾಯನವಿದೆ. ತಂದೆಯು ತಿಳಿಸುತ್ತಾರೆ - ನಾನಂತೂ ಸದಾ ಪೂಜ್ಯನಾಗಿದ್ದೇನೆ. ನಾನು ಬಂದು ನಿಮ್ಮನ್ನು ಪೂಜಾರಿಗಳಿಂದ ಪೂಜ್ಯರನ್ನಾಗಿ ಮಾಡುತ್ತೇನೆ, ಇದು ಪತಿತ ಪ್ರಪಂಚವಾಗಿದೆ, ಸತ್ಯಯುಗದಲ್ಲಿ ಪೂಜ್ಯ, ಪಾವನ ಮನುಷ್ಯರಿರುತ್ತಾರೆ. ಈ ಸಮಯದಲ್ಲಿ ಪೂಜಾರಿ, ಪತಿತ ಮನುಷ್ಯರಿದ್ದಾರೆ. ಸಾಧು-ಸಂತರು ಪತಿತ ಪಾವನ ಸೀತಾರಾಂ ಎಂದು ಹಾಡುತ್ತಿರುತ್ತಾರೆ. ಈ ಅಕ್ಷರವು ಸರಿಯಾಗಿದೆ.... ಎಲ್ಲಾ ಸೀತೆಯರು ವಧುಗಳಾಗಿದ್ದೀರಿ, ಹೇ ರಾಮನೇ ಬಂದು ನಮ್ಮನ್ನು ಪಾವನ ಮಾಡು ಎಂದು ಹೇಳುತ್ತೀರಿ. ಎಲ್ಲಾ ಭಕ್ತಿನಿಯರು ಕೂಗುತ್ತೀರಿ, ಹೇ ರಾಮ ಎಂದು ಆತ್ಮವೇ ಕೂಗುತ್ತದೆ. ಗಾಂಧೀಜಿಯೂ ಸಹ ಗೀತೆಯನ್ನು ಓದಿ ಮುಗಿಸುವಾಗ ಹೇ ಪತಿತ ಪಾವನ ಸೀತಾರಾಂ ಎಂದು ಹೇಳುತ್ತಿದ್ದರು. ನೀವೀಗ ತಿಳಿದುಕೊಂಡಿದ್ದೀರಿ - ಗೀತೆಯನ್ನು ಕೃಷ್ಣನು ತಿಳಿಸಲಿಲ್ಲ. ತಂದೆಯು ತಿಳಿಸುತ್ತಾರೆ - ಈಶ್ವರ ಸರ್ವವ್ಯಾಪಿಯಲ್ಲ ಎಂದು ಮನುಷ್ಯರಿಂದ ಅಭಿಪ್ರಾಯವನ್ನು ಬರೆಸಿಕೊಳ್ಳುತ್ತಾ ಇರಿ. ಗೀತೆಯ ಭಗವಂತ ಶಿವನಾಗಿದ್ದಾರೆ, ಕೃಷ್ಣನಲ್ಲ. ಗೀತೆಯ ಭಗವಂತನೆಂದು ಯಾರಿಗೆ ಹೇಳಲಾಗುತ್ತದೆ ಎಂದು ಮೊದಲು ಕೇಳಿರಿ. ಭಗವಂತನೆಂದು ನಿರಾಕಾರನಿಗೆ ಹೇಳುವರೋ ಅಥವಾ ಸಾಕಾರ ಮನುಷ್ಯನಿಗೋ? ಕೃಷ್ಣನಂತೂ ಸಾಕಾರಿಯಾಗಿದ್ದಾನೆ, ಶಿವನು ನಿರಾಕಾರಿಯಾಗಿದ್ದಾರೆ. ಇವರು ಕೇವಲ ಈ ತನುವಿನ ಆಧಾರವನ್ನು ತೆಗೆದುಕೊಳ್ಳುತ್ತಾರೆ ಆದರೆ ತಾಯಿಯ ಗರ್ಭದಿಂದ ಜನ್ಮ ಪಡೆಯುವುದಿಲ್ಲ. ಶಿವನಿಗೆ ಶರೀರವಿಲ್ಲ, ಇಲ್ಲಿ ಈ ಮನುಷ್ಯ ಲೋಕದಲ್ಲಿ ಸ್ಥೂಲ ಶರೀರವಿದೆ, ತಂದೆಯು ಬಂದು ಸತ್ಯವಾದ ಸತ್ಯ ನಾರಾಯಣನ ಕಥೆಯನ್ನು ತಿಳಿಸುತ್ತಾರೆ. ಪತಿತ ಪಾವನ, ಸರ್ವರ ಸದ್ಗತಿದಾತ, ಮುಕ್ತಿದಾತ, ದುಃಖಹರ್ತ-ಸುಖಕರ್ತ ಎಂದು ತಂದೆಯ ಮಹಿಮೆಯಿದೆ ಅಂದಮೇಲೆ ಸುಖವೆಲ್ಲಿರುತ್ತದೆ? ಇಲ್ಲಿರಲು ಸಾಧ್ಯವಿಲ್ಲ, ಸುಖವು ಇನ್ನೊಂದು ಜನ್ಮದಲ್ಲಿ ಸಿಗುತ್ತದೆ ಯಾವಾಗ ಹಳೆಯ ಪ್ರಪಂಚವು ಸಮಾಪ್ತಿಯಾಗಿ ಸ್ವರ್ಗ ಸ್ಥಾಪನೆಯಾಗುವುದು. ಯಾವುದರಿಂದ ಮುಕ್ತಮಾಡುತ್ತಾರೆ? ರಾವಣನ ದುಃಖದಿಂದ. ಇದು ದುಃಖಧಾಮವಲ್ಲವೆ. ತಂದೆಯು ಮಾರ್ಗದರ್ಶಕನೂ ಆಗುತ್ತಾರೆ, ಈ ಶರೀರವಂತೂ ಇಲ್ಲಿಯೇ ಸಮಾಪ್ತಿಯಾಗುತ್ತದೆ ಬಾಕಿ ಆತ್ಮಗಳನ್ನು ಕರೆದುಕೊಂಡು ಹೋಗುತ್ತಾರೆ. ಮೊದಲು ಪ್ರಿಯತಮ ನಂತರ ಪ್ರಿಯತಮೆ ಹೋಗುತ್ತಾಳೆ. ಅವರು ಅವಿನಾಶಿ ಅತೀ ಪ್ರಿಯವಾದ ಪ್ರಿಯತಮನಾಗಿದ್ದಾರೆ, ಎಲ್ಲರನ್ನೂ ದುಃಖದಿಂದ ಬಿಡಿಸಿ ಪವಿತ್ರರನ್ನಾಗಿ ಮಾಡಿ ಮನೆಗೆ ಕರೆದುಕೊಂಡು ಹೋಗುತ್ತಾರೆ. ವಿವಾಹ ಮಾಡಿಕೊಂಡು ಬಂದಾಗ ಮುಂದೆ ಪತಿಯಿರುತ್ತಾನೆ, ಹಿಂದೆ ಪತ್ನಿಯಿರುತ್ತಾಳೆ ನಂತರ ದಿಬ್ಬಣವಿರುತ್ತದೆ. ಈಗ ನಿಮ್ಮ ಮಾಲೆಯು ಅದೇ ರೀತಿಯಿದೆ. ಮೇಲೆ ಹೂ ಶಿವ ತಂದೆಯಿದ್ದಾರೆ, ಅವರಿಗೆ ನಮಸ್ಕಾರ ಮಾಡುತ್ತಾರೆ ನಂತರ ಜೋಡಿ ಮಣಿಗಳು - ಬ್ರಹ್ಮಾ-ಸರಸ್ವತಿ ಆ ನಂತರ ನೀವಿದ್ದೀರಿ, ಯಾರು ತಂದೆಗೆ ಸಹಯೋಗಿಗಳಾಗುತ್ತೀರಿ. ಹೂ ಶಿವ ತಂದೆಯ ನೆನಪಿನಿಂದಲೇ ಸೂರ್ಯವಂಶಿ ವಿಷ್ಣುವಿನ ಮಾಲೆಯಾಗಿದ್ದೀರಿ. ಬ್ರಹ್ಮಾ-ಸರಸ್ವತಿಯೇ ಲಕ್ಷ್ಮೀ-ನಾರಾಯಣರಾಗುತ್ತಾರೆ. ಲಕ್ಷ್ಮೀ-ನಾರಾಯಣರಿಂದ ಬ್ರಹ್ಮಾ-ಸರಸ್ವತಿಯಾಗುತ್ತಾರೆ. ಇವರು ಪರಿಶ್ರಮ ಪಟ್ಟಿದ್ದಾರೆ. ಆದ್ದರಿಂದಲೇ ಪೂಜೆ ನಡೆಯುತ್ತದೆ. ಮಾಲೆಯೆಂದರೇನು, ಇದು ಯಾರಿಗೂ ಗೊತ್ತಿಲ್ಲ, ಕೇವಲ ಮಾಲೆಯನ್ನು ಜಪಿಸುತ್ತಿರುತ್ತಾರೆ. 16108ರ ಮಾಲೆಯೂ ಇರುತ್ತದೆ, ದೊಡ್ಡ-ದೊಡ್ಡ ಮಂದಿರಗಳಲ್ಲಿ ಅದನ್ನು ಇಟ್ಟಿರುತ್ತಾರೆ, ಆ ಮಾಲೆಯನ್ನು ಜಪಿಸಲು ಒಬ್ಬೊಬ್ಬರು ಒಂದೊಂದು ಕಡೆ ಎಳೆಯುತ್ತಾರೆ. ಬ್ರಹ್ಮಾ ತಂದೆಯು ಮೊದಲು ಬಾಂಬೆಯಲ್ಲಿ ಲಕ್ಷ್ಮೀ-ನಾರಾಯಣನ ಮಂದಿರಕ್ಕೆ ಹೋಗುತ್ತಿದ್ದರು, ಹೋಗಿ ಮಾಲೆಯನ್ನು ಜಪಿಸುತ್ತಿದ್ದರು. ರಾಮ-ರಾಮ ಎಂದು ಹೇಳುತ್ತಿದ್ದರು ಏಕೆಂದರೆ ಹೂ ಒಬ್ಬರೇ ತಂದೆಯಲ್ಲವೆ. ಹೂವಿಗೆ ರಾಮ-ರಾಮ ಎಂದು ಹೇಳುತ್ತಾರೆ. ನಂತರ ಇಡೀ ಮಾಲೆಗೆ ತಲೆ ಬಾಗುತ್ತಾರೆ, ಜ್ಞಾನವೇನೂ ಇರುವುದಿಲ್ಲ. ಪಾದ್ರಿಗಳೂ ಸಹ ಕೈಯಲ್ಲಿ ಮಾಲೆಯನ್ನು ಜಪಿಸುತ್ತಿರುತ್ತಾರೆ. ಯಾರ ಮಾಲೆಯನ್ನು ಜಪಿಸುತ್ತೀರಿ ಎಂದು ಕೇಳಿದರೆ ಅವರಿಗೆ ಗೊತ್ತಿರುವುದಿಲ್ಲ. ಕ್ರಿಸ್ತನ ನೆನಪಿನಲ್ಲಿ ಜಪಿಸುತ್ತೇವೆ ಎಂದು ಹೇಳಿ ಬಿಡುತ್ತಾರೆ. ಆದರೆ ಕ್ರಿಸ್ತನ ಆತ್ಮವು ಎಲ್ಲಿದೆ? ಎಂಬುದು ಅವರಿಗೆ ತಿಳಿದಿಲ್ಲ. ನೀವು ತಿಳಿದುಕೊಂಡಿದ್ದೀರಿ, ಕ್ರಿಸ್ತನ ಆತ್ಮವೂ ಸಹ ಈಗ ತಮೋಪ್ರಧಾನವಾಗಿದೆ, ನೀವೂ ಸಹ ತಮೋಪ್ರಧಾನ, ಭಿಕಾರಿಗಳಾಗಿದ್ದಿರಿ, ಈಗ ಭಿಕಾರಿಗಳಿಂದ ರಾಜಕುಮಾರರಾಗುತ್ತೀರಿ. ಭಾರತವು ರಾಜ ಕುಮಾರ(ಸಾಹುಕಾರ)ನಾಗಿತ್ತು, ಈಗ ಭಿಕಾರಿಯಾಗಿದೆ. ಪುನಃ ರಾಜ ಕುಮಾರನಾಗುತ್ತದೆ, ಮಾಡುವವರು ತಂದೆಯಾಗಿದ್ದಾರೆ, ನೀವು ಮನುಷ್ಯರಿಂದ ರಾಜ ಕುಮಾರರಾಗುತ್ತೀರಿ. ಒಂದು ರಾಜ ಕುಮಾರರ ಕಾಲೇಜ್ ಸಹ ಇತ್ತು, ಅಲ್ಲಿ ರಾಜ ಕುಮಾರ-ಕುಮಾರಿಯರೂ ಹೋಗಿ ಓದುತ್ತಿದ್ದರು.

ನೀವಿಲ್ಲಿ ಓದಿ 21 ಜನ್ಮಗಳಿಗಾಗಿ ಸ್ವರ್ಗದಲ್ಲಿ ರಾಜ ಕುಮಾರ-ಕುಮಾರಿಯರಾಗುತ್ತೀರಿ. ಈ ಶ್ರೀಕೃಷ್ಣನು ರಾಜ ಕುಮಾರನಲ್ಲವೆ. ಅವನ 84 ಜನ್ಮಗಳ ಕಥೆಯು ಬರೆಯಲ್ಪಟ್ಟಿದೆ. ಇದು ಮನುಷ್ಯರಿಗೇನು ಗೊತ್ತು! ಈ ಮಾತುಗಳನ್ನು ಕೇವಲ ನೀವೇ ತಿಳಿದುಕೊಂಡಿದ್ದೀರಿ. "ಭಗವಾನುವಾಚ” - ಅವರು ಎಲ್ಲರ ತಂದೆಯಾಗಿದ್ದಾರೆ. ನೀವು ಪರಮಾತ್ಮ ತಂದೆಯಿಂದ ಈಗ ಕೇಳುತ್ತೀರಿ, ಅವರೇ ಸ್ವರ್ಗದ ಸ್ಥಾಪನೆ ಮಾಡುತ್ತಾರೆ ಅದಕ್ಕೆ ಸತ್ಯ ಖಂಡವೆಂದು ಹೇಳಲಾಗುವುದು. ಇದು ಅಸತ್ಯ ಖಂಡವಾಗಿದೆ. ಸತ್ಯ ಖಂಡವನ್ನು ತಂದೆಯೇ ಸ್ಥಾಪನೆ ಮಾಡುತ್ತಾರೆ. ಅಸತ್ಯ ಖಂಡವನ್ನು ರಾವಣನು ಸ್ಥಾಪನೆ ಮಾಡುತ್ತಾನೆ, ರಾವಣನ ಪ್ರತಿಮೆ ಮಾಡುತ್ತಾರೆ, ಅರ್ಥವೇನನ್ನೂ ತಿಳಿದುಕೊಂಡಿಲ್ಲ. ಕೊನೆಗೂ ರಾವಣ ಯಾರು? ಯಾರನ್ನು ಸಾಯಿಸುತ್ತಾರೆ ಮತ್ತೆ ಬದುಕಿ ಬರುತ್ತಾನೆ? ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ವಾಸ್ತವದಲ್ಲಿ ಸ್ತ್ರೀಯಲ್ಲಿರುವ ಐದು ವಿಕಾರಗಳು, ಪುರುಷನಲ್ಲಿರುವ ಐದು ವಿಕಾರಗಳಿಗೆ ರಾವಣನೆಂದು ಹೇಳಲಾಗುತ್ತದೆ. ರಾವಣನನ್ನು ಸಾಯಿಸುತ್ತಾರೆ, ಅವನನ್ನು ಸಾಯಿಸಿ ನಂತರ ಚಿನ್ನವನ್ನು ಲೂಟಿ ಮಾಡುತ್ತಾರೆ.

ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಇದು ಮುಳ್ಳಿನ ಕಾಡಾಗಿದೆ. ಬಾಂಬೆಯಲ್ಲಿ ಬಬುಲ್ನಾಥನ ಮಂದಿರವಿದೆ, ತಂದೆಯು ಬಂದು ಮುಳ್ಳುಗಳನ್ನು ಹೂಗಳನ್ನಾಗಿ ಮಾಡುತ್ತಾರೆ. ಎಲ್ಲರೂ ಒಬ್ಬರು ಇನ್ನೊಬ್ಬರಿಗೆ ಮುಳ್ಳನ್ನೇ ಚುಚ್ಚುತ್ತಾರೆ ಅರ್ಥಾತ್ ಕಾಮ ಕಟಾರಿಯನ್ನು ನಡೆಸುತ್ತಾರೆ. ಆದ್ದರಿಂದ ಮುಳ್ಳಿನ ಕಾಡು ಎಂದು ಹೇಳಲಾಗುತ್ತದೆ. ಸತ್ಯಯುಗಕ್ಕೆ ಹೂದೋಟವೆಂದು ಹೇಳಲಾಗುತ್ತದೆ. ಅದೇ ಹೂಗಳು ಮುಳ್ಳುಗಳಾಗುತ್ತಾರೆ, ನಂತರ ಮುಳ್ಳುಗಳಿಂದ ಹೂಗಳಾಗುತ್ತಾರೆ. ನೀವೀಗ ಪಂಚ ವಿಕಾರಗಳ ಮೇಲೆ ಜಯ ಗಳಿಸುತ್ತೀರಿ. ಈ ರಾವಣ ರಾಜ್ಯದ ವಿನಾಶವಂತೂ ಆಗಲೇಬೇಕಾಗಿದೆ. ಕೊನೆಗೆ ಮಹಾಯುದ್ಧವೂ ಆಗುವುದು, ಸತ್ಯ-ಸತ್ಯವಾದ ದಶಹರಾ ಆಗುವುದು. ರಾವಣ ರಾಜ್ಯವೇ ಸಮಾಪ್ತಿಯಾಗುತ್ತದೆ ನಂತರ ನೀವು ಲಂಕೆಯನ್ನು ಲೂಟಿ ಮಾಡುತ್ತೀರಿ. ನಿಮಗೆ ಚಿನ್ನದ ಮಹಲುಗಳು ಸಿಗುತ್ತವೆ. ನೀವೀಗ ರಾವಣನ ಮೇಲೆ ಜಯ ಗಳಿಸಿ ಸ್ವರ್ಗದ ಮಾಲೀಕರಾಗುತ್ತೀರಿ. ತಂದೆಯು ಇಡೀ ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತಾರೆ ಆದ್ದರಿಂದ ಇವರಿಗೆ ಶಿವ ಭೋಲಾ ಭಂಡಾರಿ ಎಂದು ಹೇಳುತ್ತಾರೆ. ಗಣಿಕೆಯರು, ಅಹಲ್ಯೆಯರು, ಕುಬ್ಜೆಯರು.... ಎಲ್ಲರನ್ನೂ ತಂದೆಯು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ತಂದೆಯು ಎಷ್ಟು ಭೋಲಾ ಆಗಿದ್ದಾರೆ! ಪತಿತ ಪ್ರಪಂಚದಲ್ಲಿ ಪತಿತ ಶರೀರದಲ್ಲಿ ಬರುತ್ತಾರೆ. ಬಾಕಿ ಯಾರು ಸ್ವರ್ಗಕ್ಕೆ ಯೋಗ್ಯರಲ್ಲವೋ ಅವರು ವಿಷ ಕುಡಿಯುವುದನ್ನು ಬಿಡುವುದೇ ಇಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈ ಅಂತಿಮ ಜನ್ಮದಲ್ಲಿ ಪಾವನರಾಗಿ, ಈ ವಿಕಾರವೇ ನಿಮ್ಮನ್ನು ಆದಿ-ಮಧ್ಯ-ಅಂತ್ಯ ದುಃಖಿಯನ್ನಾಗಿ ಮಾಡುತ್ತದೆ. ನೀವು ಇದೊಂದು ಜನ್ಮಕ್ಕಾಗಿ ವಿಷ ಕುಡಿಯುವುದನ್ನು ಬಿಡಲು ಸಾಧ್ಯವಿಲ್ಲವೆ? ನಾನು ನಿಮಗೆ ಅಮೃತವನ್ನು ಕುಡಿಸಿ ಅಮರರನ್ನಾಗಿ ಮಾಡುತ್ತೇನೆ, ಆದರೂ ಸಹ ನೀವು ಪವಿತ್ರರಾಗುವುದಿಲ್ಲ. ವಿಷವಿಲ್ಲದೆ, ಸಿಗರೇಟು-ಸಾರಾಯಿಯಿಲ್ಲದೆ ಇರಲು ಸಾಧ್ಯವಿಲ್ಲವೆ! ನಾನು ಬೇಹದ್ದಿನ ತಂದೆ ನಿಮಗೆ ಹೇಳುತ್ತೇನೆ - ಮಕ್ಕಳೇ, ಇದೊಂದು ಜನ್ಮಕ್ಕಾಗಿ ಪಾವನರಾಗಿ ಆಗ ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುವೆನು. ಹಳೆಯ ಪ್ರಪಂಚದ ವಿನಾಶ ಮತ್ತು ಹೊಸ ಪ್ರಪಂಚದ ಸ್ಥಾಪನೆ ಮಾಡುವುದು ತಂದೆಯದೇ ಕರ್ತವ್ಯವಾಗಿದೆ. ಈಗ ಇಡೀ ಪ್ರಪಂಚವನ್ನು ದುಃಖದಿಂದ ಬಿಡಿಸಿ ಸುಖಧಾಮ, ಶಾಂತಿಧಾಮಕ್ಕೆ ಕರೆದುಕೊಂಡು ಹೋಗಲು ತಂದೆಯು ಬಂದಿದ್ದಾರೆ. ಈಗ ಎಲ್ಲಾ ಧರ್ಮಗಳು ವಿನಾಶವಾಗುತ್ತವೆ. ಒಂದು ಆದಿ ಸನಾತನ ದೇವಿ-ದೇವತಾ ಧರ್ಮವು ಪುನಃ ಸ್ಥಾಪನೆಯಾಗುತ್ತದೆ. ಗ್ರಂಥದಲ್ಲಿಯೂ ಪರಮಪಿತ ಪರಮಾತ್ಮನಿಗೆ ಅಕಾಲ ಮೂರ್ತಿಯೆಂದು ಹೇಳಲಾಗುತ್ತದೆ. ತಂದೆಯು ಮಹಾಕಾಲ, ಕಾಲರ ಕಾಲನಾಗಿದ್ದಾರೆ, ಆ ಕಾಲವಂತೂ (ಮೃತ್ಯು) ಒಬ್ಬರು ಅಥವಾ ಇಬ್ಬರನ್ನು ತೆಗೆದುಕೊಂಡು ಹೋಗುತ್ತದೆ, ನಾನು ಎಲ್ಲಾ ಆತ್ಮರನ್ನು ಕರೆದುಕೊಂಡು ಹೋಗುತ್ತೇನೆ ಆದ್ದರಿಂದ ನನಗೆ ಮಹಾಕಾಲನೆಂದು ಹೇಳುತ್ತಾರೆ. ತಂದೆಯು ಬಂದು ನೀವು ಮಕ್ಕಳನ್ನು ಎಷ್ಟು ಬುದ್ಧಿವಂತರನ್ನಾಗಿ ಮಾಡುತ್ತಾರೆ! ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಈ ಅಂತಿಮ ಜನ್ಮದಲ್ಲಿ ವಿಷವನ್ನು ತ್ಯಾಗ ಮಾಡಿ ಅಮೃತವನ್ನು ಕುಡಿಯಬೇಕು ಹಾಗೂ ಕುಡಿಸಬೇಕಾಗಿದೆ. ಪಾವನರಾಗಬೇಕಾಗಿದೆ, ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ.

2. ವಿಷ್ಣುವಿನ ಕೊರಳಿನ ಮಾಲೆಯ ಮಣಿಯಾಗಲು ತಂದೆಯ ನೆನಪಿನಲ್ಲಿರಬೇಕಾಗಿದೆ. ಸಂಪೂರ್ಣ ಸಹಯೋಗಿಗಳಾಗಿ ತಂದೆಯ ಸಮಾನ ದುಃಖಹರ್ತರಾಗಬೇಕಾಗಿದೆ.

ವರದಾನ:

ಡ್ರಾಮಾದ ಗುರಾಣಿಯನ್ನು ಎದುರಿಗೆ ಹಿಡಿದು ಖುಷಿಯ ಪೌಷ್ಠಿಕ ಆಹಾರ ತೆಗೆದುಕೊಳ್ಳುವಂತಹ ಸದಾ ಶಕ್ತಿಶಾಲಿ ಭವ.

ಖುಷಿರೂಪಿ ಭೋಜನ ಆತ್ಮವನ್ನು ಶಕ್ತಿಶಾಲಿಯನ್ನಾಗಿ ಮಾಡುತ್ತದೆ, ಖುಷಿಗಿಂತಲೂ ಪೌಷ್ಠಿಕ ಆಹಾರ ಬೇರೊಂದಿಲ್ಲ ಎಂದೂ ಸಹ ಹೇಳುತ್ತಾರೆ. ಅದಕ್ಕಾಗಿ ಡ್ರಾಮದ ಗುರಾಣಿಯನ್ನು ಸರಿಯಾದ ರೀತಿಯಲ್ಲಿ ಕಾರ್ಯದಲ್ಲಿ ತೊಡಗಿಸಿ. ಒಂದುವೇಳೆ ಸದಾ ಡ್ರಾಮದ ಸ್ಮತಿ ಇದ್ದಲ್ಲಿ ಎಂದೂ ಸಹ ಬಾಡಿ ಹೋಗಲು ಸಾಧ್ಯವಿಲ್ಲ, ಖುಷಿ ಕಳೆದು ಹೋಗಲು ಸಾಧ್ಯವಿಲ್ಲ ಏಕೆಂದರೆ ಈ ಡ್ರಾಮ ಕಲ್ಯಾಣಕಾರಿಯಾಗಿದೆ. ಆದ್ದರಿಂದ ಅಕಲ್ಯಾಣಕಾರಿ ದೃಶ್ಯದಲ್ಲಿಯೂ ಸಹ ಕಲ್ಯಾಣ ಅಡಕವಾಗಿದೆ, ಈ ರೀತಿ ತಿಳಿದು ಸದಾ ಖುಷಿಯಲ್ಲಿರುವಿರಿ.

ಸ್ಲೋಗನ್:

ಪರಚಿಂತನೆ ಮತ್ತು ಪರದರ್ಶನದ ಧೂಳಿನಿಂದಲೂ ದೂರ ಇರುವಂತಹವರೇ ಸತ್ಯ ಅಮೂಲ್ಯ ವಜ್ರಗಳಾಗಿದ್ದಾರೆ.