04.03.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ- ಇಡೀ ಪ್ರಪಂಚದಲ್ಲಿ ನಿಮ್ಮಂತಹ ಪದಮಾಪದಮ ಭಾಗ್ಯಶಾಲಿ ವಿದ್ಯಾರ್ಥಿಗಳು ಯಾರೂ ಇಲ್ಲ, ನಿಮಗೆ ಸ್ವಯಂ ಜ್ಞಾನ ಸಾಗರ ತಂದೆಯು ಶಿಕ್ಷಕರಾಗಿ ಓದಿಸುತ್ತಾರೆ.

ಪ್ರಶ್ನೆ:
ಯಾವ ನಶೆಯು ಸದಾ ಇದ್ದಾಗ ಮೋಹದ ದಾರಗಳು ತುಂಡಾಗುತ್ತವೆ?

ಉತ್ತರ:
ಸರ್ವೀಸ್ ಮಾಡುವ ಆಸಕ್ತಿಯು ಸದಾ ಇರಲಿ ಆಗ ಮೋಹದ ದಾರಗಳು ತುಂಡಾಗುತ್ತವೆ, ಸದಾ ಬುದ್ಧಿಯಲ್ಲಿ ನೆನಪಿರಲಿ - ಈ ಕಣ್ಣುಗಳಿಂದ ಏನೆಲ್ಲವನೂ ನೋಡುತ್ತೇವೆಯೋ ಅದೆಲ್ಲವೂ ವಿನಾಶಿಯಾಗಿದೆ, ಇದನ್ನು ನೋಡಿಯೂ ನೋಡದಂತಿರಬೇಕು. ತಂದೆಯ ಶ್ರೀಮತವಾಗಿದೆ - ಕೆಟ್ಟದ್ದನ್ನು ನೋಡಬೇಡಿ, ಕೆಟ್ಟದ್ದನ್ನು ಕೇಳಬಾರದು.........

ಓಂ ಶಾಂತಿ.
ಶಿವ ಭಗವಾನುವಾಚ. ಮಧುರ ಸಾಲಿಗ್ರಾಮ ಅಥವಾ ಆತ್ಮಿಕ ಮಕ್ಕಳ ಪ್ರತಿ. ಇದಂತೂ ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಸತ್ಯಯುಗೀ ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದೆವು ಅಂದಮೇಲೆ ಇದನ್ನು ನೆನಪಿಟ್ಟುಕೊಳ್ಳಬೇಕು - ಆದಿ ಸನಾತನ ದೇವಿ - ದೇವತಾ ಧರ್ಮವನ್ನಂತೂ ಎಲ್ಲರೂ ಒಪ್ಪುತ್ತಾರೆ. ಆದರೆ ದೇವತಾ ಧರ್ಮದ ಬದಲಾಗಿ ಹಿಂದೂ ಹೆಸರನ್ನಿಟ್ಟು ಬಿಟ್ಟಿದ್ದಾರೆ. ನಿಮಗೆ ಆದಿ ಸನಾತನ ಯಾರಾಗಿದ್ದರೆಂದು ಗೊತ್ತಿದೆ ಆದರೆ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಈ ರೀತಿಯಾಗಿದ್ದಾರೆ. ಇದನ್ನು ಭಗವಂತನೇ ತಿಳಿಸುತ್ತಾರೆ. ಭಗವಂತನು ಯಾವುದೇ ದೇಹಧಾರಿ ಮನುಷ್ಯನಲ್ಲ. ಮತ್ತೆಲ್ಲರಿಗೆ ತಮ್ಮ-ತಮ್ಮ ದೇಹವಿದೆ ಆದರೆ ಶಿವ ತಂದೆಗೆ ವಿದೇಹಿ ಎಂದು ಹೇಳಲಾಗುತ್ತದೆ. ಅವರಿಗೆ ತಮ್ಮದೇ ಆದ ದೇಹವಿಲ್ಲ ಮತ್ತೆಲ್ಲರಿಗೆ ತಮ್ಮ ದೇಹವಿದೆ. ಆದ್ದರಿಂದ ತಮ್ಮನ್ನೂ ಸಹ ಹೀಗೆ ವಿದೇಹಿಯೆಂದು ತಿಳಿಯುವುದು ಎಷ್ಟು ಮಧುರವೆನಿಸುತ್ತದೆ. ನಾವು ಹೇಗಿದ್ದೆವು, ಈಗ ಏನಾಗುತ್ತಿದ್ದೇವೆ, ಈ ನಾಟಕವು ಹೇಗೆ ಮಾಡಲ್ಪಟ್ಟಿದೆ ಇದನ್ನೂ ಸಹ ನೀವೀಗ ತಿಳಿಯುತ್ತಿದ್ದೀರಿ. ಈ ದೇವಿ-ದೇವತಾ ಧರ್ಮವೇ ಪವಿತ್ರ ಗೃಹಸ್ಥಾಶ್ರಮವಾಗಿತ್ತು, ಈಗ ಆಶ್ರಮವಲ್ಲ. ನಿಮಗೆ ಗೊತ್ತಿದೆ, ಈಗ ನಾವು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಿದ್ದೇವೆ. ಹಿಂದೂ ಹೆಸರಂತೂ ಈಗ ಇಡಲಾಗಿದೆ, ಆದಿ ಸನಾತನ ಹಿಂದೂ ಧರ್ಮವಂತೂ ಇಲ್ಲ. ಆದಿ ಸನಾತನ ಧರ್ಮದವರಿಗೂ ತಿಳಿಸಿ ಎಂದು ತಂದೆಯು ಅನೇಕ ಬಾರಿ ಹೇಳಿದ್ದಾರೆ ಅಂದಮೇಲೆ ಅವರಿಗೆ ತಿಳಿಸಿ - ನೀವು ಆದಿ ಸನಾತನ ದೇವಿ-ದೇವತಾ ಪವಿತ್ರ ಧರ್ಮದವರಾಗಿದ್ದೀರೋ ಅಥವಾ ಹಿಂದೂ ಧರ್ಮದವರಾಗಿದ್ದೀರೋ? ಎಂಬುದನ್ನೂ ಬರೆಯಿರಿ ಎಂದು ಅವರಿಗೆ ತಿಳಿಸಿದಾಗ 84 ಜನ್ಮಗಳ ಬಗ್ಗೆ ತಿಳಿಯುತ್ತದೆ. ಈ ಜ್ಞಾನವು ಬಹಳ ಸಹಜವಾಗಿದೆ ಕೇವಲ ಇದಕ್ಕೆ ಲಕ್ಷಾಂತರ ವರ್ಷಗಳೆಂದು ಹೇಳಿರುವುದರಿಂದ ಮನುಷ್ಯರು ತಬ್ಬಿಬ್ಬಾಗುತ್ತಾರೆ. ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಸತೋಪ್ರಧಾನರಿಂದ ತಮೋಪ್ರಧಾನರಾಗುವುದೂ ಸಹ ನಾಟಕದಲ್ಲಿ ಪಾತ್ರವಿದೆ. ದೇವತಾ ಧರ್ಮದವರೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ ತೆಗೆದುಕೊಳ್ಳುತ್ತಾ ಎಷ್ಟೊಂದು ಪತಿತರಾಗಿ ಬಿಟ್ಟಿದ್ದಾರೆ. ಭಾರತವು ಮೊದಲು ಎಷ್ಟು ಶ್ರೇಷ್ಠವಾಗಿತ್ತು, ಭಾರತವನ್ನೇ ಮಹಿಮೆ ಮಾಡಬೇಕು. ಈಗ ಇದೇ ಮತ್ತೆ ತಮೋಪ್ರಧಾನದಿಂದ ಸತೋಪ್ರಧಾನ, ಹಳೆಯ ಪ್ರಪಂಚದಿಂದ ಹೊಸ ಪ್ರಪಂಚವು ಅವಶ್ಯವಾಗಿ ಆಗಬೇಕಾಗಿದೆ. ಮುಂದೆ ಹೋದಂತೆ ನಿಮ್ಮ ಮಾತನ್ನು ಅವಶ್ಯವಾಗಿ ತಿಳಿದುಕೊಳ್ಳುತ್ತಾರೆ, ಆದ್ದರಿಂದ ಅವರಿಗೆ ಹೇಳಿ - ಘೋರ ನಿದ್ರೆಯಿಂದ ಎದ್ದೇಳಿ, ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ. ನೀವು ಮಕ್ಕಳಿಗೆ ಇಡೀ ದಿನ ಖುಷಿಯಿರಬೇಕು, ಇಡೀ ಪ್ರಪಂಚದಲ್ಲಿ ಇಡೀ ಭಾರತದಲ್ಲಿ ನಿಮ್ಮಂತಹ ಪದಮಾಪದಮ ಭಾಗ್ಯಶಾಲಿ ವಿದ್ಯಾರ್ಥಿಗಳು ಯಾರೂ ಇಲ್ಲ. ನಾವೇ ಆಗಿದ್ದೆವು ಮತ್ತೆ ನಾವೇ ಆಗುತ್ತೇವೆ ಎಂದು ನೀವೂ ಸಹ ತಿಳಿಯುತ್ತೀರಿ. ಯಾರಾಗಿದ್ದರೋ ಅವರೇ ಆಗುತ್ತಾರೆ ಇದರಲ್ಲಿ ತಬ್ಬಿಬ್ಬಾಗಬೇಡಿ, ಪ್ರದರ್ಶನಿಯಲ್ಲಿ ಸ್ವಲ್ಪ ಕೇಳಿ ಹೋಗುತ್ತಾರೆಂದರೂ ಸಹ ಅವರು ಪ್ರಜೆಗಳಾಗುತ್ತಾ ಹೋಗುತ್ತಾರೆ. ಏಕೆಂದರೆ ಅವಿನಾಶಿ ಜ್ಞಾನ ಧನದ ವಿನಾಶವಾಗುವುದಿಲ್ಲ. ದಿನ-ಪ್ರತಿದಿನ ನಿಮ್ಮ ಸಂಸ್ಥೆಯು ಮುಂದುವರೆಯುತ್ತಾ ಹೋಗುವುದು ಆಗ ಅನೇಕಾನೇಕರು ನಿಮ್ಮ ಬಳಿ ಬರುತ್ತಾರೆ. ನಿಧಾನ-ನಿಧಾನವಾಗಿ ಧರ್ಮದ ಸ್ಥಾಪನೆಯಾಗುತ್ತದೆ. ಯಾವಾಗ ಯಾರೇ ಹಿರಿಯ ವ್ಯಕ್ತಿಗಳು ಹೊರಗಿನಿಂದ ಬರುತ್ತಾರೆಂದರೆ ಅವರ ಮುಖವನ್ನು ನೋಡಲು ಎಷ್ಟೊಂದು ಮನುಷ್ಯರು ಹೋಗುತ್ತಾರೆ. ಇಲ್ಲಂತೂ ಆ ಮಾತಿಲ್ಲ ಏಕೆಂದರೆ ನಿಮಗೆ ಗೊತ್ತಿದೆ - ಈ ಪ್ರಪಂಚದಲ್ಲಿ ಏನೆಲ್ಲಾ ವಸ್ತುಗಳಿವೆಯೋ ಅವೆಲ್ಲಾ ವಿನಾಶಿಯಾಗಿದೆ ಅವನ್ನು ನೋಡಬಾರದು. ಕೆಟ್ಟದ್ದನ್ನು ನೋಡಬೇಡಿ... ಈ ಕೊಳಕು ಭಸ್ಮವಾಗುವುದಿದೆ. ಮನುಷ್ಯರು ಮೊದಲಾದ ಯಾರೆಲ್ಲರನ್ನೂ ನೋಡುತ್ತೀರೋ ಅವರು ಕಲಿಯುಗಿಗಳಾಗಿದ್ದಾರೆಂದು ತಿಳಿಯುತ್ತೀರಿ. ಆದರೆ ನೀವು ಸಂಗಮಯುಗಿ ಬ್ರಾಹ್ಮಣರಾಗಿದ್ದೀರಿ. ಸಂಗಮಯುಗವನ್ನು ಯಾರೂ ತಿಳಿದುಕೊಂಡಿಲ್ಲ ಕೇವಲ ಇಷ್ಟನ್ನು ನೆನಪಿಟ್ಟುಕೊಳ್ಳಿ - ಇದು ಸಂಗಮಯುಗಾವಾಗಿದೆ, ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ ಮತ್ತು ಅವಶ್ಯವಾಗಿ ಪವಿತ್ರರೂ ಆಗಬೇಕಾಗಿದೆ. ಈಗ ತಂದೆಯು ತಿಳಿಸುತ್ತಾರೆ - ಈ ಕಾಮ ವಿಕಾರವು ಆದಿ-ಮಧ್ಯ-ಅಂತ್ಯ ದುಃಖ ಕೊಡುವುದಾಗಿದೆ ಅಂದಾಗ ಇದರ ಮೇಲೆ ವಿಜಯ ಗಳಿಸಿ. ವಿಷಕ್ಕಾಗಿ ಎಷ್ಟೊಂದು ತೊಂದರೆ ಕೊಡುತ್ತಾರೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಕಾಮ ಮಹಾಶತ್ರುವಾಗಿದೆ, ಅದನ್ನು ಜಯಿಸಬೇಕು. ಈಗ ಈ ಸಮಯದಲ್ಲಿ ಪ್ರಪಂಚದಲ್ಲಿ ಎಷ್ಟೊಂದು ಮನುಷ್ಯರಿದ್ದಾರೆ, ನೀವು ಒಬ್ಬೊಬ್ಬರಿಗೂ ಎಲ್ಲಿಯವರೆಗೆ ತಿಳಿಸುತ್ತೀರಿ. ಒಬ್ಬೊಬ್ಬರಿಗೆ ತಿಳಿಸುತ್ತೀರೆಂದರೆ ಇನ್ನೊಬ್ಬರು ಇದು ಜಾದು ಆಗಿದೆ ಎಂದು ಹೇಳುತ್ತಾರೆ ಮತ್ತು ವಿದ್ಯೆಯನ್ನು ಬಿಟ್ಟು ಬಿಡುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಆದಿ ಸನಾತನ ಧರ್ಮದವರಿಗೆ ತಿಳಿಸಿ - ಆದಿ ಸನಾತನವು ದೇವತಾ ಧರ್ಮವಾಗಿದೆ, ಲಕ್ಷ್ಮೀ-ನಾರಾಯಣರು ಈ ಪದವಿಯನ್ನು ಹೇಗೆ ಪಡೆದರು? ಹೇಗೆ ಮನುಷ್ಯರಿಂದ ದೇವತೆಗಳಾದರು? ಎಂದು ನೀವು ತಿಳಿಸುತ್ತೀರಿ ಅಂದಾಗ ಅವಶ್ಯವಾಗಿ ಅಂತಿಮ ಜನ್ಮದಲ್ಲಿಯೇ ಪಡೆದಿರಬೇಕು. 84 ಜನ್ಮಗಳನ್ನು ಪೂರ್ಣ ಮಾಡಿದ ನಂತರ ಈ ರೀತಿಯಾದರು. ಯಾರಿಗೆ ಸರ್ವೀಸಿನ ಆಸಕ್ತಿಯಿದೆಯೋ ಅವರು ಇದರಲ್ಲಿ ತೊಡಗಿರುತ್ತಾರೆ ಇದರಿಂದ ಎಲ್ಲಾ ಕಡೆಯ ಮೋಹವು ತುಂಡಾಗುತ್ತದೆ. ಈ ಕಣ್ಣುಗಳಿಂದ ಏನೆಲ್ಲಾ ನೋಡುತ್ತಿದ್ದೇವೆಯೋ ಅದನ್ನು ಮರೆಯಬೇಕು. ಹೇಗೆ ನೋಡಿದರೂ ನೋಡದ ಹಾಗಿರಬೇಕು. ಕೆಟ್ಟದ್ದನ್ನು ನೋಡಬೇಡಿ, ಮನುಷ್ಯರಂತೂ ಕೋತಿಗಳನ್ನು ಚಿತ್ರವನ್ನು ಮಾಡುತ್ತಾರೆ, ಆದರೆ ಇದರ ಅರ್ಥವನ್ನು ತಿಳಿದುಕೊಂಡಿಲ್ಲ. ಮಕ್ಕಳು ಎಷ್ಟೊಂದು ಪರಿಶ್ರಮ ಪಡುತ್ತಾರೆ. ಯಾರು ಅನ್ಯರಿಗೆ ತಿಳಿಸಿ ಯೋಗ್ಯರನ್ನಾಗಿ ಮಾಡುತ್ತಾರೆಯೋ ಅವರಿಗೆ ತಂದೆಯು ಅವಕಾಶ ಕೊಡುತ್ತಾರೆ. ಯಾರು ಕೆಲಸ ಮಾಡಿ ತೋರಿಸುತ್ತಾರೆಯೋ ಅವರಿಗೇ ಬಹುಮಾನ ಸಿಗುತ್ತದೆ. ತಂದೆಯು ನಮಗೆ ಎಷ್ಟೊಂದು ಬಹುಮಾನಗಳನ್ನು ಕೊಡುತ್ತಾರೆ ಎಂದು ನಿಮಗೆ ಗೊತ್ತಿದೆ. ಮೊದಲನೆಯದು ಸೂರ್ಯವಂಶಿ ರಾಜಧಾನಿಯ ಬಹುಮಾನವಾಗಿದೆ. ಎರಡನೆಯದು ಚಂದ್ರವಂಶಿ ರಾಜಧಾನಿಯ ಬಹುಮಾನವಾಗಿದೆ. ನಂಬರವಾರಂತೂ ಇದ್ದೇ ಇದೆ. ಭಕ್ತಿಮಾರ್ಗದ ಶಾಸ್ತ್ರಗಳನ್ನು ಕುಳಿತು ರಚಿಸುತ್ತಾರೆ. ಈಗ ತಂದೆಯು ತಿಳಿಸುತ್ತಾರೆ ಮಕ್ಕಳೇ, ಈ ಶಾಸ್ತ್ರಗಳನ್ನು ಓದುವುದರಿಂದ, ಯಜ್ಞ-ತಪಗಳನ್ನು ಮಾಡುವುದರಿಂದ ಯಾರೂ ನನ್ನೊಂದಿಗೆ ಮಿಲನ ಮಾಡುವುದಿಲ್ಲ. ದಿನ- ಪ್ರತಿದಿನ ಎಷ್ಟೊಂದು ಪಾಪಾತ್ಮರಾಗುತ್ತಾ ಹೋಗುತ್ತಾರೆ, ಯಾರೂ ಪುಣ್ಯಾತ್ಮರಾಗುವುದಿಲ್ಲ. ತಂದೆಯೇ ಬಂದು ಪುಣ್ಯಾತ್ಮರನ್ನಾಗಿ ಮಾಡುತ್ತಾರೆ. ಒಂದಾಗಿದೆ- ಮಿತವಾದ ದಾನ-ಪುಣ್ಯ, ಇನ್ನೊಂದು ಅಪರಿಮಿತವಾದುದಾಗಿದೆ. ಭಕ್ತಿ ಮಾರ್ಗದಲ್ಲಿ ಪರೋಕ್ಷವಾಗಿ ಈಶ್ವರಾರ್ಥವಾಗಿ ದಾನ-ಪುಣ್ಯ ಮಾಡುತ್ತಾರೆ. ಆದರೆ ಈಶ್ವರನೆಂದು ಯಾರಿಗೆ ಹೇಳಲಾಗುತ್ತದೆ ಎಂದು ಗೊತ್ತಿಲ್ಲ. ಈಗ ನಿಮಗೆ ಗೊತ್ತಿದೆ ಆದ್ದರಿಂದಲೇ ಶಿವ ತಂದೆಯು ನಮ್ಮನ್ನು ಹೇಗಿದ್ದವರನ್ನು ಹೇಗೆ ಮಾಡುತ್ತಾರೆ! ಎಂದು ಹೇಳುತ್ತೀರಿ. ಭಗವಂತ ಒಬ್ಬರೇ ಆಗಿದ್ದಾರೆ, ಆದರೆ ಅವರನ್ನೇ ಸರ್ವವ್ಯಾಪಿ ಎಂದು ಹೇಳಿ ಬಿಟ್ಟಿದ್ದಾರೆ. ಆದ್ದರಿಂದ ಅವರಿಗೆ ತಿಳಿಸಬೇಕು - ನೀವು ಏನೇನು ಮಾಡಿ ಬಿಟ್ಟಿದ್ದೀರಿ. ನಿಮ್ಮ ಬಳಿ ಬರುತ್ತಾರೆ, ಸ್ವಲ್ಪ ಕೇಳಿ ಹೊರಗೆ ಹೋಗುತ್ತಾರೆಂದರೆ ಅದು ಸಮಾಪ್ತಿಯಾಗುತ್ತದೆ. ಇಲ್ಲಿಯದು ಇಲ್ಲಿಗೇ ಉಳಿಯುತ್ತದೆ. ಎಲ್ಲವನ್ನೂ ಮರೆತು ಹೋಗುತ್ತಾರೆ, ಜ್ಞಾನವು ಬಹಳ ಚೆನ್ನಾಗಿದೆ ನಾವು ಮತ್ತೆ ಬರುತ್ತೇವೆಂದು ನಿಮಗೆ ಹೇಳುತ್ತಾರೆ. ಆದರೆ ಮೋಹದ ದಾರಗಳು ತುಂಡಾಗುವುದೇ ಇಲ್ಲ. ಮೋಹಜೀತ ರಾಜನ ಕಥೆಯು ಎಷ್ಟು ಚೆನ್ನಾಗಿದೆ. ಮೋಹಜೀತ ಎಂದರೆ ಈ ಲಕ್ಷ್ಮೀ-ನಾರಾಯಣರಾಗಿದ್ದಾರೆ. ಆದರೆ ಮನುಷ್ಯರಿಗೆ ಇದು ಗೊತ್ತಿಲ್ಲ. ಇದು ಆಶ್ಚರ್ಯವಾಗಿದೆ, ರಾವಣ ರಾಜ್ಯದಲ್ಲಿ ಏಣಿಯನ್ನು ಇಳಿಯುತ್ತಾ ಒಮ್ಮೆಲೆ ಕೆಳಗೆ ಬಿದ್ದು ಹೋಗುತ್ತಾರೆ. ಹೇಗೆ ಮಕ್ಕಳ ಆಟವಿರುತ್ತದೆಯಲ್ಲವೆ - ಮೇಲೆ ಹೋಗಿ ಮತ್ತೆ ಕೆಳಗೆ ಬೀಳುತ್ತಾರೆ. ನಿಮ್ಮ ಆಟವೂ ಸಹ ಬಹಳ ಸಹಜವಾಗಿದೆ. ತಂದೆಯು ತಿಳಿಸುತ್ತಾರೆ - ಚೆನ್ನಾಗಿ ಧಾರಣೆ ಮಾಡಿ, ಯಾವುದೇ ಛೀ! ಛೀ! ಕೆಲಸವನ್ನು ಮಾಡಬಾರದು. ತಂದೆಯು ತಿಳಿಸುತ್ತಾರೆ - ನಾನು ಬೀಜರೂಪ ಸತ್ ಚಿತ್ ಆನಂದ ಸ್ವರೂಪನಾಗಿದ್ದೇನೆ, ಜ್ಞಾನ ಸಾಗರನಾಗಿದ್ದೇನೆ, ಜ್ಞಾನ ಸಾಗರನು ಮೇಲೆ ಕುಳಿತುಕೊಂಡೇ ಇರುವರೇನು! ಎಂದಾದರೂ ಬಂದು ಜ್ಞಾನವನ್ನು ಕೊಟ್ಟಿರಬೇಕಲ್ಲವೆ. ಆದರೆ ಜ್ಞಾನ ಎಂದರೇನು ಎಂಬುದು ಯಾರಿಗೂ ಗೊತ್ತಿಲ್ಲ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನು ನಿಮಗೆ ಓದಿಸಲು ಬರುತ್ತೇನೆಂದರೆ ಪ್ರತಿನಿತ್ಯವೂ ಓದಬೇಕಲ್ಲವೆ. ಪ್ರತಿನಿತ್ಯವೂ ವಿದ್ಯಾಭ್ಯಾಸವನ್ನು ತಪ್ಪಿಸಬಾರದು. ಯಾವುದಾದರೊಂದು ಒಳ್ಳೆಯ ಜ್ಞಾನ ಬಿಂದು ಅವಶ್ಯವಾಗಿ ಸಿಗುತ್ತದೆ. ಮುರುಳಿಯನ್ನೇ ಓದದಿದ್ದರೆ ಅವಶ್ಯವಾಗಿ ಜ್ಞಾನ ಬಿಂದುಗಳು ತಪ್ಪಿ ಹೋಗುತ್ತವೆ, ಬಹಳಷ್ಟು ಜ್ಞಾನದ ಅಂಶಗಳಿವೆ. ಇದೂ ಸಹ ನಿಮಗೆ ತಿಳಿಸಬೇಕು - ನೀವು ಭಾರತವಾಸಿಗಳು ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದೀರಿ, ಈಗ ಎಷ್ಟೊಂದು ಧರ್ಮಗಳಾಗಿವೆ ಮತ್ತೆ ಇತಿಹಾಸವು ಪುನರಾವರ್ತನೆಯಾಗುತ್ತದೆ. ಇದು ಏರುವ ಮತ್ತು ಇಳಿಯುವ ಏಣಿಯಾಗಿದೆ. ಹೇಗೆ ಜಿನ್ ರಾಕ್ಷಸನಿಗೆ ಏಣಿಯನ್ನು ಹತ್ತು ಮತ್ತು ಇಳಿ ಎಂದು ಆಜ್ಞೆಯನ್ನು ಮಾಡಿದ್ದರೋ ಹಾಗೆಯೇ ನೀವೆಲ್ಲರೂ ಜಿನ್ ಆಗಿದ್ದೀರಲ್ಲವೆ. ಅಂದರೆ 84ರ ಏಣಿಯನ್ನು ಹತ್ತುತ್ತೀರಿ ಮತ್ತು ಇಳಿಯುತ್ತೀರಿ ಎಷ್ಟೊಂದು ಮನುಷ್ಯರಿದ್ದಾರೆ. ಪ್ರತಿಯೊಬ್ಬರೂ ಸಹ ಎಷ್ಟೊಂದು ಪಾತ್ರವನ್ನು ಅಭಿನಯಿಸಬೇಕಾಗುತ್ತದೆ. ಮಕ್ಕಳಿಗಂತೂ ಬಹಳ ಆಶ್ಚರ್ಯವೆನಿಸಬೇಕು. ಏಕೆಂದರೆ ನಿಮಗೆ ಬೇಹದ್ದಿನ ನಾಟಕದ ಪೂರ್ಣ ಅರಿವಾಗಿದೆ. ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ನೀವೇ ತಿಳಿದುಕೊಂಡಿದ್ದೀರಿ ಇದನ್ನು ಯಾವುದೇ ಮನುಷ್ಯರು ತಿಳಿದುಕೊಂಡಿಲ್ಲ. ಸತ್ಯಯುಗದಲ್ಲಿ ಯಾರದೇ ಬಾಯಿಂದ ಯಾವುದೇ ಕೆಟ್ಟ ವಚನಗಳು ಬರುವುದಿಲ್ಲ. ಇಲ್ಲಂತೂ ಒಬ್ಬರು ಇನ್ನೊಬ್ಬರಿಗೆ ನಿಂದನೆ ಮಾಡುತ್ತಿರುತ್ತಾರೆ. ಇದು ವಿಷಯ ವೈತರಣೀ ನದಿ, ರೌರವ ನರಕವಾಗಿದೆ. ಎಲ್ಲಾ ಮನುಷ್ಯರು ರೌರವ ನರಕದಲ್ಲಿದ್ದಾರೆ. ಇಲ್ಲಂತೂ ಯಥಾ ರಾಜ-ರಾಣಿ ತಥಾ ಪ್ರಜಾ. ನಿಮ್ಮ ವಿಜಯವು ಅಂತ್ಯದಲ್ಲಾಗುತ್ತದೆ ಆಗ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯನ್ನು ಯಾರು ಮಾಡಿದರೆಂದು ತಿಳಿಯುತ್ತಾರೆ. ಇದೇ ಮೊದಲ ನಂಬರಿನ ಮುಖ್ಯ ಮಾತಾಗಿದೆ. ಇದು ಯಾರಿಗೂ ಗೊತ್ತಿಲ್ಲ. ತಂದೆಯು ತಿಳಿಸುತ್ತಾರೆ - ನಾನಂತೂ ಬಡವರ ಬಂಧುವಾಗಿದ್ದೇನೆ, ಇದಂತೂ ಅಂತ್ಯದಲ್ಲಿ ಯಾವಾಗ ಟೂಲೇಟ್ ಆಗಿ ಬಿಡುತ್ತದೆಯೋ ಆಗ ತಿಳಿಯುತ್ತಾರೆ. ಈಗ ನಿಮಗೆ ಮೂರನೇ ನೇತ್ರ ಸಿಕ್ಕಿದೆ. ಮಧುರ ಮನೆ ಮತ್ತು ಮಧುರ ರಾಜಧಾನಿಯು ಬುದ್ಧಿಯಲ್ಲಿ ನೆನಪಿದೆ. ಈಗ ಶಾಂತಿಧಾಮ - ಸುಖಧಾಮಕ್ಕೆ ಹೋಗಬೇಕಾಗಿದೆ. ನೀವು ಯಾವ ಪಾತ್ರವನ್ನು ಅಭಿನಯಿಸಿದಿರಿ ಈಗ ಬುದ್ಧಿಯಲ್ಲಂತೂ ಬರುತ್ತದೆಯಲ್ಲವೆ. ನೀವು ಬ್ರಾಹ್ಮಣರ ವಿನಃ ಎಲ್ಲರೂ ಸತ್ತು ಹೋಗಿದ್ದಾರೆ, ಬ್ರಾಹ್ಮಣರೇ ಎದ್ದು ನಿಲ್ಲುತ್ತೀರಿ. ಬ್ರಾಹ್ಮಣರೇ ಸೋ ದೇವತೆಗಳಾಗುತ್ತೀರಿ. ಇದೊಂದೇ ಧರ್ಮವು ಸ್ಥಾಪನೆಯಾಗುತ್ತಿದೆ. ಮತ್ತೆಲ್ಲಾ ಧರ್ಮಗಳು ಹೇಗೆ ಸ್ಥಾಪನೆಯಾಗುತ್ತದೆ ಎಂಬುದೂ ಸಹ ನಿಮ್ಮ ಬುದ್ಧಿಯಲ್ಲಿದೆ, ತಿಳಿಸುವವರೂ ಒಬ್ಬರೇ ತಂದೆಯಾಗಿದ್ದಾರೆ ಅಂದಮೇಲೆ ಇಂತಹ ತಂದೆಯನ್ನು ಗಳಿಗೆ-ಗಳಿಗೆಯೂ ನೆನಪು ಮಾಡಬೇಕು. ಉದ್ಯೋಗ-ವ್ಯವಹಾರಗಳನ್ನು ಭಲೇ ಮಾಡಿ ಕೇವಲ ಪವಿತ್ರರಾಗಿ. ಆದಿ ಸನಾತನ ದೇವಿ-ದೇವತಾ ಧರ್ಮವು ಪವಿತ್ರವಾಗಿತ್ತು ಈಗ ಮತ್ತೆ ಪವಿತ್ರವಾಗಬೇಕಾಗಿದೆ. ನಡೆಯುತ್ತಾ-ತಿರುಗಾಡುತ್ತಾ ತಂದೆಯಾದ ನನ್ನನ್ನು ನೆನಪು ಮಾಡುತ್ತೀರೆಂದರೆ ನೀವು ಸತೋಪ್ರಧಾನರಾಗಿ ಬಿಡುತ್ತೀರಿ. ಯಾವಾಗ ಸತೋಪ್ರಧಾನರಾಗುತ್ತೀರೋ ಆಗ ಶಕ್ತಿ ಬರುತ್ತದೆ. ನೆನಪಿನ ಯಾತ್ರೆಯ ವಿನಃ ನೀವು ಎಂದೂ ಸಹ ಶ್ರೇಷ್ಠಾತಿ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಯಾವಾಗ ಸತೋಪ್ರಧಾನತೆಯನ್ನು ತಲುಪುತ್ತೀರೋ ಆಗಲೇ ಪಾಪಗಳು ಪರಿಹಾರವಾಗುತ್ತವೆ. ಇದು ಯೋಗಾಗ್ನಿಯಾಗಿದೆ. ಈ ಶಬ್ಧವು ಗೀತೆಯದಾಗಿದೆ. ಯೋಗ-ಯೋಗ ಎಂದು ಹೇಳಿ ತಲೆಕೆಡಿಸಿಕೊಳ್ಳುತ್ತಾರೆ. ವಿದೇಶದಿಂದಲೂ ಸಹ ಯೋಗವನ್ನು ಕಲಿಸುವುದಕ್ಕಾಗಿ ಅವರನ್ನು ಸಿಕ್ಕಿ ಹಾಕಿಸಿ ಕರೆ ತರುತ್ತಾರೆ. ಯಾವಾಗ ನಿಮ್ಮ ಈ ಮಾತನ್ನು ಅರಿತುಕೊಳ್ಳುವರೋ - ಪರಮಾತ್ಮ ತಂದೆಯು ಒಬ್ಬರೇ ಆಗಿದ್ದಾರೆ ಅವರೇ ಬಂದು ಎಲ್ಲರನ್ನು ಶ್ರೇಷ್ಠರನ್ನಾಗಿ ಮಾಡುತ್ತಾರೆ ಎಂದು ತಿಳಿದಾಗ ಒಂದು ದಿನ ಪತ್ರಿಕೆಯವರೂ ಸಹ ಈ ಮಾತುಗಳನ್ನು ಹಾಕುತ್ತಾರೆ. ಇದಂತೂ ಖಚಿತವಾಗಿದೆ. ರಾಜಯೋಗವನ್ನು ಒಬ್ಬ ಪರಮಪಿತ ಪರಮಾತ್ಮನ ವಿನಃ ಮತ್ತ್ಯಾರೂ ಕಲಿಸಲು ಸಾಧ್ಯವಿಲ್ಲ. ಈ ಮಾತುಗಳನ್ನು ದೊಡ್ಡ-ದೊಡ್ಡ ಅಕ್ಷರಗಳಲ್ಲಿ ಹಾಕಬೇಕು. ಒಳ್ಳೆಯದು.

ಮಾತೇಶ್ವರಿಜಿಯವರ ಅಮೂಲ್ಯ ಮಹಾವಾಕ್ಯ -

1. ನಯನ ಹೀನ ಅರ್ಥಾತ್ ಜ್ಞಾನ ನೇತ್ರ ಹೀನರಿಗೆ ಮಾರ್ಗ ತೋರಿಸುವಂತಹ ಪರಮಾತ್ಮ ನಯನಹೀನರಿಗೆ ಮಾರ್ಗ ತೋರಿಸು ಫ್ರಭು..... ಈಗ ಏನು ಮನುಷ್ಯರು ಗೀತೆಯನ್ನು ಹಾಡುತ್ತಾರೆ ನಯನ ಹೀನರಿಗೆ ಮಾರ್ಗ ತೋರಿಸು, ಅಂದಾಗ ಮಾರ್ಗ ತೋರಿಸುವಂತಹವರು ಒಬ್ಬರೇ ಪರಮಾತ್ಮ ಆದರು, ಆದ್ದರಿಂದಲೇ ಪರಮಾತ್ಮನನ್ನು ಕರೆಯುತ್ತಾರೆ ಮತ್ತು ಯಾವ ಸಮಯದಲ್ಲಿ ಹೇಳುತ್ತಾರೆ ಫ್ರಭು ಮಾರ್ಗ ತೋರಿಸು ಎಂದು. ಅಂದರೆ ಖಂಡಿತವಾಗಿ ಮನುಷ್ಯರಿಗೆ ಮಾರ್ಗ ತೋರಿಸಲು ಖುದ್ದು ಪರಮಾತ್ಮನಿಗೆ ನಿರಾಕಾರ ರೂಪದಿಂದ ಸಾಕಾರ ರೂಪದಲ್ಲಿ ಅವಶ್ಯವಾಗಿ ಬರಬೇಕಾಗುತ್ತದೆ, ಆದ್ದರಿಂದಲೇ ಸ್ಥೂಲವಾಗಿ ಮಾರ್ಗ ತೋರಿಸುತ್ತಾರೆ, ಬಾರದೇ ಮಾರ್ಗ ತಿಳಿಸಲು ಸಾಧ್ಯವಿಲ್ಲ. ಈಗ ಏನು ಮನುಷ್ಯರು ತಬ್ಬಿಬ್ಬಾಗಿದ್ದಾರೆ, ಹೀಗೆ ತಬ್ಬಿಬ್ಬಾಗಿರುವವರಿಗೆ ಮಾರ್ಗ ಬೇಕು. ಆದ್ದರಿಂದ ಪರಮಾತ್ಮನಿಗೆ ಹೇಳುತ್ತಾರೆ ನಯನಹೀನರಿಗೆ ಮಾರ್ಗ ತೋರಿಸು ಪ್ರಭು..... ನಂತರ ಇವರಿಗೆ ನಾವಿಕ ಎಂದೂ ಕರೆಯಲಾಗುವುದು, ಯಾರು ಆಚೆಯ ದಡಕ್ಕೆ ಅಥವಾ ಈ 5 ತತ್ವಗಳಿಂದ ಆಗಿರುವಂತಹ ಸೃಷ್ಠಿಯಾಗಿದೆ. ಇದನ್ನು ಪಾರು ಮಾಡಿ ಆ ದಡ ಅರ್ಥಾತ್ 5 ತತ್ವಗಳಿಂದ ಪಾರು ಮಾಡಿ ಏನು ಆರನೇ ತತ್ವ ಅಖಂಡ ಜ್ಯೋತಿ ಮಹಾ ತತ್ವವಾಗಿದೆ ಅದರಲ್ಲಿ ಕರೆದುಕೊಂಡು ಹೋಗುತ್ತಾರೆ. ಆದ್ದರಿಂದ ಪರಮಾತ್ಮ ಸಹಾ ಯಾವಾಗ ಈ ದಡದಿಂದ ಆ ದಡಕ್ಕೆ ಬರಬೇಕು ಆಗಲೇ ಕರೆದುಕೊಂಡು ಹೋಗುತ್ತಾರೆ. ಆದ್ದರಿಂದ ಪರಮಾತ್ಮನಿಗೆ ನಾವಿಕ ಎಂದೂ ಸಹಾ ಕರೆಯುತ್ತಾರೆ. ಅವರೇ ನಾವು ನಾವೆಯನ್ನು (ಆತ್ಮರೂಪಿ ನಾವೆ) ಆ ದಡಕ್ಕೆ ಕರೆದುಕೊಂಡು ಹೋಗುತ್ತಾರೆ. ಈಗ ಯಾರು ಪರಮಾತ್ಮನ ಜೊತೆ ಸಂಬಂಧದಲ್ಲಿರುತ್ತಾರೆ ಅವರನ್ನು ಜೊತೆಯಲ್ಲಿ ಕರೆದೊಯ್ಯುತ್ತಾರೆ. ಬಾಕಿ ಯಾರೆಲ್ಲಾ ಉಳಿಯುತ್ತಾರೆ ಅವರು ಧರ್ಮರಾಜನ ಸಜೆಗಳನ್ನು ತಿನ್ನುತ್ತಾ ನಂತರ ಮುಕ್ತರಾಗುತ್ತಾರೆ.

2) ಮುಳ್ಳು ಅರ್ಥಾತ್ ದುಃಖದ ಪ್ರಪಂಚದಿಂದ ಹೂವಿನ ನೆರಳು ಅರ್ಥಾತ್ ಸುಖದ ಪ್ರಪಂಚಕ್ಕೆ ಕರೆದೊಯ್ಯುವವರು ಪರಮಾತ್ಮ ಆಗಿದ್ದಾರೆ ಮುಳ್ಳುಗಳ ಪ್ರಪಂಚದಿಂದ ಹೂವಿನ ನೆರಳಿಗೆ ಕರೆದುಕೊಂಡು ಹೋಗಿ, ಈಗ ಈ ಕರೆಯನ್ನು ಪರಮಾತ್ಮನಿಗಾಗಿಯೇ ಮಾಡುತ್ತಿದ್ದಾರೆ. ಯಾವಾಗ ಮನುಷ್ಯರು ಅತಿಯಾದ ದುಃಖಿಗಳಾಗುತ್ತಾರೆ, ಆಗ ಪರಮಾತ್ಮನನ್ನು ನೆನಪು ಮಾಡುತ್ತಾರೆ, ಪರಮಾತ್ಮ ಈ ಮುಳ್ಳುಗಳ ಪ್ರಪಂಚದಿಂದ ಕರೆದುಕೊಂಡು ಹೋಗಿ ಹೂವಿನ ನೆರಳಿಗೆ, ಇದರಿಂದ ಸಿದ್ಧವಾಗುವುದು ಖಂಡಿತವಾಗಿ ಅದೂ ಒಂದು ಪ್ರಪಂಚವಾಗಿದೆ. ಈಗ ಇದನ್ನಂತೂ ಎಲ್ಲಾ ಮನುಷ್ಯರೂ ತಿಳಿದಿದ್ದಾರೆ ಈಗ ಏನು ಪ್ರಪಂಚವಿದೆ ಅದು ದುಃಖದಿಂದ ತುಂಬಿದೆ. ಯಾವ ಕಾರಣ ಮನುಷ್ಯ ದುಃಖ ಮತ್ತು ಅಶಾಂತಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಿದ್ದಾನೆ ಮತ್ತು ನೆನಪು ಹೂವಿನ ಪ್ರಪಂಚವನ್ನು ಮಾಡುತ್ತಾರೆ. ಅಂದರೆ ಖಂಡಿತವಾಗಿ ಅದೂ ಒಂದು ಪ್ರಪಂಚವಿರಬಹುದು. ಯಾವ ಪ್ರಪಂಚದ ಸಂಸ್ಕಾರ ಆತ್ಮದಲ್ಲಿ ತುಂಬಿದೆ. ಈಗ ಅದನ್ನಂತೂ ನಾವು ತಿಳಿದಿದ್ದೇವೆ ದುಃಖ, ಅಶಾಂತಿ ಎಲ್ಲವೂ ಕರ್ಮ ಬಂಧನದ ಲೆಕ್ಕಾಚಾರವಾಗಿದೆ. ರಾಜನಿಂದ ಹಿಡಿದು ಪ್ರಜೆಯವರೆಗೆ ಪ್ರತಿಯೊಬ್ಬ ಮನುಷ್ಯ ಮಾತ್ರರೂ ಈ ಲೆಕ್ಕಾಚಾರದಲ್ಲಿ ಪೂರ್ತಿ ಸಿಕ್ಕಿಹಾಕಿಕೊಂಡಿದ್ದಾರೆ. ಆದ್ದರಿಂದ ಪರಮಾತ್ಮ ಖುದ್ದು ಹೇಳುತ್ತಾರೆ ಈಗಿನ ಸಂಸಾರ ಕಲಿಯುಗವಾಗಿದೆ, ಆದ್ದರಿಂದ ಆ ಎಲ್ಲಾ ಕರ್ಮಬಂಧನ ರಹಿತ ಜೀವನಮುಕ್ತ ದೇವಿ ದೇವತೆಗಳ ರಾಜ್ಯ, ಯಾವುದು ಈಗ ಇಲ್ಲ. ಈಗ ನಾವು ಏನು ಜೀವನಮುಕ್ತ ಎಂದು ಹೇಳುವೆವು, ಅದರ ಅರ್ಥ ಇದಲ್ಲ ನಾವು ಯಾವುದೇ ದೇಹದಿಂದ ಮುಕ್ತರಾಗಿದ್ದೆವು ಎಂದು, ಅವರಿಗೆ ಯಾವುದೇ ದೇಹಭಾನ ಇರಲಿಲ್ಲ. ಆದರೆ ಅವರು ಈ ದೇಹದಲ್ಲಿದ್ದರೂ ಸಹಾ ದುಃಖವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಿರಲಿಲ್ಲ, ಅವರಲ್ಲಿ ಯಾವುದೇ ಕರ್ಮ ಬಂಧನದ ವಿಚಾರ ಇರುವುದಿಲ್ಲ. ಅವರು ಜೀವನ ಪಡೆಯುತ್ತ ಜೀವನ ಬಿಡುತ್ತಾ ಆದಿ ಮಧ್ಯೆ ಅಂತ್ಯ ಸುಖವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಿದ್ದರು. ಅಂದರೆ ಜೀವನಮುಕ್ತಿಯ ಅರ್ಥವೇ ಆಗಿದೆ, ಜೀವನದಲ್ಲಿದ್ದರೂ ಕರ್ಮಾತೀತ, ಈಗ ಈ ಎಲ್ಲಾ ಪ್ರಪಂಚ 5 ವಿಕಾರಗಳಲ್ಲಿ ಪೂರ್ತಿ ಅಂಟಿಕೊಂಡು ಬಿಟ್ಟಿದೆ, ತಿಳಿಯಿರಿ 5 ವಿಕಾರಗಳ ಪೂರ್ತಿ-ಪೂರ್ತಿ ವಾಸಯಿದೆ, ಆದರೆ ಮನುಷ್ಯರಲ್ಲಿ ಇಷ್ಟು ಶಕ್ತಿ ಇಲ್ಲ. ಯಾವುದು ಈ 5 ಭೂತಗಳನ್ನು ಗೆಲ್ಲಲು ಸಾಧ್ಯವಾಗಬೇಕು, ಆಗಲೇ ಪರಮಾತ್ಮ ಖುದ್ಧು ಬಂದು 5 ಭೂತಗಳಿಂದ ಬಿಡಿಸುತ್ತಾರೆ ಮತ್ತು ಭವಿಷ್ಯ ಪ್ರಾಲಭ್ದ ದೇವಿ ದೇವತಾ ಪದವಿಯನ್ನು ಪ್ರಾಪ್ತಿ ಮಾಡಿಸುತ್ತಾರೆ.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
1. ಸೂರ್ಯವಂಶಿ ರಾಜಧಾನಿಯ ಬಹುಮಾನವನ್ನು ಪಡೆಯಲು ಬಾಪ್ದಾದಾರವರ ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು. ಸರ್ವೀಸ್ ಮಾಡಿ ತೋರಿಸಬೇಕು, ಮೋಹದ ದಾರಗಳನ್ನು ಕತ್ತರಿಸಬೇಕು.

2. ಜ್ಞಾನ ಸಾಗರ ವಿದೇಹಿ ತಂದೆಯು ಸ್ವಯಂ ಓದಿಸಲು ಬರುತ್ತಾರೆ, ಆದ್ದರಿಂದ ಪ್ರತಿನಿತ್ಯ ಓದಬೇಕಾಗಿದೆ. ಒಂದು ದಿನವೂ ವಿದ್ಯೆಯನ್ನು ತಪ್ಪಿಸಬಾರದು. ತಂದೆಯ ಸಮಾನ ವಿದೇಹಿಯಾಗುವ ಪುರುಷಾರ್ಥ ಮಾಡಬೇಕು.

ವರದಾನ:
ಶ್ರೇಷ್ಠ ವೃತ್ತಿಯ ವ್ರತ ಧಾರಣೆ ಮಾಡಿ ಸತ್ಯ ಶಿವರಾತ್ರಿ ಆಚರಿಸುವಂತಹ ವಿಶ್ವ ಪರಿವರ್ತಕ ಭವ.

ಭಕ್ತ ಜನರು ಸ್ಥೂಲ ವಸ್ತುಗಳ ವ್ರತವನ್ನಿಡುತ್ತಾರೆ ಆದರೆ ನೀವು ನಿಮ್ಮ ಬಲಹೀನತೆ ವೃತ್ತಿಯನ್ನು ಸದಾ ಕಾಲಕ್ಕಾಗಿ ಅಳಿಸಿ ಹಾಕಲು ವ್ರತವನ್ನಿಡುತ್ತೀರಿ. ಏಕೆಂದರೆ ಯಾವುದೇ ಒಳ್ಳೆಯ ಅಥವಾ ಕೆಟ್ಟ ಮಾತು ಮೊದಲು ವೃತ್ತಿಯಲ್ಲಿ ಧಾರಣೆಯಾಗುವುದು, ನಂತರ ವಾಣೀ ಮತ್ತು ಕರ್ಮದಲ್ಲಿ ಬರುವುದು. ನಿಮ್ಮ ಶುಭ ವೃತ್ತಿಯ ಮೂಲಕ ಏನು ಶ್ರೇಷ್ಠ ಮಾತು ಮತ್ತು ಕರ್ಮ ಆಗುವುದು ಅದರಿಂದಲೇ ವಿಶ್ವ ಪರಿವರ್ತನೆಯ ಮಹಾನ್ ಕಾರ್ಯ ಸಂಪನ್ನವಾಗುವುದು. ಈ ಶ್ರೇಷ್ಠ ವೃತ್ತಿಯ ವ್ರತ ಧಾರಣೆ ಮಾಡುವುದೇ ಶಿವರಾತ್ರಿಯನ್ನು ಆಚರಿಸುವುದಾಗಿದೆ.

ಸ್ಲೋಗನ್:
ಯಾರ ಹೃದಯದಲ್ಲಿ ಸದಾ ಖುಶಿಯ ಸೂರ್ಯ ಉದಯವಾಗಿರುತ್ತದೆ ಅವರು ಸದಾ ಖುಷಿಯಿಂದಿರುತ್ತಾರೆ.