ಪ್ರಾತಃ ಮುರಳಿ ಓಂ ಶಾಂತಿ "ಅವ್ಯಕ್ತ-ಬಾಪ್‌ದಾದಾ" ರಿವೈಸ್ - 06/12/87


ಸಿದ್ಧಿಗೆ ಆಧಾರ - 'ಶ್ರೇಷ್ಠವೃತ್ತಿ'

ಇಂದು ಬಾಪ್‌ದಾದಾ ತಮ್ಮ ನಾಲ್ಕಾರೂ ಕಡೆಯ ಪವಿತ್ರ ಹಂಸಗಳ ಸಭೆಯನ್ನು ನೋಡುತ್ತಿದ್ದಾರೆ. ಪ್ರತಿಯೊಬ್ಬ ಪವಿತ್ರಹಂಸವು ತನ್ನ ಶ್ರೇಷ್ಠ ಸ್ಥಿತಿಯ ಆಸನದ ಮೇಲೆ ವಿರಾಜಮಾನವಾಗಿದ್ದಾರೆ. ಇಡೀಕಲ್ಪದಲ್ಲಿ ಆಸನಧಾರಿ ಸರ್ವ ಪವಿತ್ರ ಹಂಸಗಳ ಸಭೆಯು ಅಲೌಕಿಕ ಮತ್ತು ಭಿನ್ನವಾಗಿದೆ. ಪ್ರತಿಯೊಂದು ಪವಿತ್ರ ಹಂಸವು ತನ್ನ ವಿಶೇಷತೆಗಳಿಂದ ಅತೀ ಸುಂದರವಾಗಿ ಶೃಂಗರಿಸಲ್ಪಟ್ಟಿದೆ. ವಿಶೇಷತೆಗಳು ಶ್ರೇಷ್ಠ ಶೃಂಗಾರವಾಗಿದೆ. ಶೃಂಗರಿತರಾಗಿರುವ ಪವಿತ್ರ ಹಂಸಗಳು ಎಷ್ಟು ಪ್ರಿಯವೆನಿಸುತ್ತಾರೆ? ಬಾಪ್‌ದಾದಾರವರು ಪ್ರತಿಯೊಬ್ಬರ ವಿಶೇಷತೆಗಳ ಶೃಂಗಾರವನ್ನು ನೋಡುತ್ತಾ ಹರ್ಷಿತರಾಗುತ್ತಾರೆ. ಶೃಂಗರಿತರಂತೂ ಎಲ್ಲರೂ ಆಗಿದ್ದಾರೆ ಆದರೆ ಮಕ್ಕಳು ಬ್ರಾಹ್ಮಣ ಜನ್ಮವನ್ನು ಪಡೆಯುತ್ತಿದ್ದಂತೆಯೇ ಬಾಪ್‌ದಾದಾರವರು 'ವಿಶೇಷ ಆತ್ಮಭವ' ದ ವರದಾನವನ್ನು ಕೊಟ್ಟರು. ನಂಬರ್‌ವಾರ್ ಆಗಿದ್ದರೂ ಕೊನೆಯ ನಂಬರಿನವರೂ ಸಹ ವಿಶೇಷ ಆತ್ಮಗಳಾಗಿದ್ದಾರೆ. ಬ್ರಾಹ್ಮಣ ಜೀವನದಲ್ಲಿ ಬರುವುದೆಂದರೆ ವಿಶೇಷ ಆತ್ಮನ ಪಟ್ಟಿಯಲ್ಲಿ ಬರುವುದಾಗಿದೆ. ಬ್ರಾಹ್ಮಣ ಪರಿವಾರದಲ್ಲಿ ಕೊನೆಯ ನಂಬರಿನವರೇ ಆಗಿರಬಹುದು ಆದರೆ ವಿಶ್ವದ ಅನೇಕ ಆತ್ಮಗಳ ಅಂತರದಲ್ಲಿ, ಕೊನೆಯ ನಂಬರಿನವರೂ ಸಹ ವಿಶೇಷವೆಂದು ಗಾಯನವಾಗುತ್ತಿದೆ ಆದ್ದರಿಂದಲೇ ಕೋಟಿಯಲ್ಲಿ ಕೆಲವರು, ಕೆಲವರಲ್ಲಿಯೂ ಕೆಲವರೆಂದು ಗಾಯನವಿದೆ ಆದ್ದರಿಂದ ಬ್ರಾಹ್ಮಣರ ಸಭೆಯೆಂದರೆ ವಿಶೇಷ ಆತ್ಮಗಳ ಸಭೆಯಾಗಿದೆ.

ಇಂದು ಬಾಪ್‌ದಾದಾ ನೋಡುತ್ತಿದ್ದರು - ತಂದೆಯು ಎಲ್ಲಾ ಮಕ್ಕಳಿಗೆ ಒಂದೇ ಸಮನಾಗಿ ವಿಶೇಷತೆಗಳ ಶೃಂಗಾರ ಮಾಡಿದ್ದಾರೆ , ಆದರೆ ಕೆಲವರು ಆ ಶೃಂಗಾರವನ್ನು ಧಾರಣೆ ಮಾಡಿಕೊಂಡು ಸಮಯ ಪ್ರಮಾಣ ಕಾರ್ಯದಲ್ಲಿ ತೊಡಗಿಸುತ್ತಾರೆ. ಇನ್ನೂ ಕೆಲವರು ಧಾರಣೆಯನ್ನೇ ಮಾಡಿಕೊಳ್ಳುವುದಿಲ್ಲ ಅಥವಾ ಕೆಲವರು ಸಮಯ ಪ್ರಮಾಣ ಕಾರ್ಯದಲ್ಲಿ ತೊಡಗಿಸುವುದೇ ಇಲ್ಲ. ಹೇಗೆ ಈಗಿನ ರಾಯಲ್ ಪರಿವಾರದವರು ಸಮಯ ಪ್ರಮಾಣ ಶೃಂಗಾರ ಮಾಡಿಕೊಳ್ಳುತ್ತಾರೆ ಆದ್ದರಿಂದ ಎಷ್ಟು ಚೆನ್ನಾಗಿ ಕಾಣುತ್ತಾರೆ! ಎಂತಹ ಸಮಯವೋ ಅಂತಹ ಶೃಂಗಾರ, ಇದಕ್ಕೆ ಜ್ಞಾನಪೂರ್ಣರೆಂದು ಹೇಳಲಾಗುತ್ತದೆ. ಹೇಗೆ ಇತ್ತೀಚೆಗೆ ಶೃಂಗಾರದ ಆಭರಣಗಳ ವಿಧವಿಧವಾದ ಸೆಟ್‌ಗಳನ್ನು ಇಟ್ಟುಕೊಳ್ಳುತ್ತಾರಲ್ಲವೆ ಅಂದಾಗ ಬಾಪ್‌ದಾದಾರವರು ಅನೇಕ ವಿಶೇಷತೆಗಳ, ಅನೇಕ ಶ್ರೇಷ್ಠಗುಣಗಳ, ಅನೇಕ ಪ್ರಕಾರದ ಸೆಟ್‌ಗಳನ್ನು ಕೊಟ್ಟಿದ್ದಾರೆ. ಭಲೆ ಎಷ್ಟಾದರೂ ಅಮೂಲ್ಯವಾದ ಸೆಟ್‌ಗಳಿರಲಿ, ಆದರೆ ಒಂದುವೇಳೆ ಸಮಯ ಪ್ರಮಾಣವಾಗಿ ಶೃಂಗಾರವಿಲ್ಲವೆಂದರೆ ಹೇಗಿರುತ್ತದೆ? ಹಾಗೆಯೇ ವಿಶೇಷತೆಗಳ, ಗುಣಗಳ, ಶಕ್ತಿಗಳ, ಜ್ಞಾನರತ್ನಗಳ ಅನೇಕ ಶೃಂಗಾರವನ್ನು ತಂದೆಯು ಎಲ್ಲರಿಗೂ ಕೊಟ್ಟಿದ್ದಾರೆ ಆದರೆ ಅದನ್ನು ಸಮಯ ಪ್ರಮಾಣ ಕಾರ್ಯದಲ್ಲಿ ಉಪಯೋಗಿಸುವುದರಲ್ಲಿ ನಂಬರ್‌ವಾರ್ ಆಗಿಬಿಡುತ್ತಾರೆ. ಭಲೆ ಇವೆಲ್ಲಾ ಶೃಂಗಾರವಿದ್ದರೂ, ಪ್ರತಿಯೊಂದು ವಿಶೇಷತೆಯ ಹಾಗೂ ಗುಣದ ಮಹತ್ವಿಕೆಯು ಸಮಯದಲ್ಲಷ್ಟೇ ಇರುತ್ತದೆ. ಇದ್ದರೂ ಸಹ ಸಮಯದಲ್ಲಿ ಕಾರ್ಯದಲ್ಲಿ ಉಪಯೋಗಿಸದಿದ್ದರೆ ಎಷ್ಟೇ ಅಮೂಲ್ಯವಾಗಿದ್ದರೂ ಅದಕ್ಕೆ ಮೌಲ್ಯವಿರುವುದಿಲ್ಲ. ಯಾವ ಸಮಯದಲ್ಲಿ ಯಾವ ವಿಶೇಷತೆಯನ್ನು ಧಾರಣೆ ಮಾಡಿಕೊಳ್ಳುವ ಕಾರ್ಯವಾಗಿದೆಯೋ ಅದರನುಸಾರ ಅದೇ ವಿಶೇಷತೆಗೆ ಮೌಲ್ಯವಿರುತ್ತದೆ. ಹೇಗೆ ಹಂಸವು ಕಲ್ಲು ಮತ್ತು ರತ್ನಗಳೆರಡನ್ನೂ ಗುರುತಿಸಿ, ಬೇರ್ಪಡಿಸಿ, ಧಾರಣೆ ಮಾಡಿಕೊಳ್ಳುತ್ತದೆ. ಕಲ್ಲುಗಳನ್ನು ಬಿಟ್ಟು ಮುತ್ತುರತ್ನಗಳನ್ನೇ ಧಾರಣೆ ಮಾಡುತ್ತದೆ ಅದೇರೀತಿ ಪವಿತ್ರ ಹಂಸಗಳು ಅಂದರೆ ಸಮಯದನುಸಾರ ವಿಶೇಷತೆ ಹಾಗೂ ಗುಣವನ್ನು ಗುರುತಿಸಿ, ಅದೇ ಸಮಯದಲ್ಲಿ ಉಪಯೋಗಿಸುವವರು. ಇಂತಹವರಿಗೆ ಗುರುತಿಸುವ ಹಾಗೂ ನಿರ್ಣಯ ಮಾಡುವ ಶಕ್ತಿಯುಳ್ಳ ಪವಿತ್ರ ಹಂಸವೆಂದು ಹೇಳಲಾಗುತ್ತದೆ. ಅಂದಾಗ ಗುರುತಿಸುವುದು ಮತ್ತು ನಿರ್ಣಯ ಮಾಡುವುದು - ಇವೆರಡೂ ಶಕ್ತಿಗಳು ಮುಂದೆ ಕರೆದುಕೊಂಡು ಹೋಗುತ್ತವೆ. ಯಾವಾಗ ಇವೆರಡೂ ಶಕ್ತಿಗಳು ಧಾರಣೆಯಾಗಿ ಬಿಡುತ್ತದೆಯೋ, ಈ ಶಕ್ತಿಗಳಿಂದ ಸಮಯ ಪ್ರಮಾಣ ಕಾರ್ಯವನ್ನು ಪಡೆಯಬಹುದು ಅಂದಾಗ ಪ್ರತಿಯೊಬ್ಬ ಪವಿತ್ರ ಹಂಸವು ತಮ್ಮ ಇವೆರಡೂ ಶಕ್ತಿಗಳನ್ನು ಪರಿಶೀಲನೆ ಮಾಡಿಕೊಳ್ಳಿ - ಎರಡೂ ಶಕ್ತಿಗಳೂ ಸಮಯದಲ್ಲಿ ಮೋಸ ಮಾಡುವುದಿಲ್ಲವೆ? ಒಂದುವೇಳೆ ಸಮಯವು ಕಳೆದನಂತರ ಗುರುತಿಸಿದಿರಿ ಅಥವಾ ನಿರ್ಣಯ ಮಾಡಿರಬಹುದು, ಆದರೆ ಆ ಸಮಯವಂತೂ ಕಳೆದುಹೋಯಿತಲ್ಲವೆ. ಯಾರು ನಂಬರ್‌ವನ್ ಪವಿತ್ರ ಹಂಸವಾಗಿದ್ದಾರೆಯೋ ಅವರಿಗೆ ಇವೆರಡೂ ಶಕ್ತಿಗಳು ಸದಾ ಸಮಯ ಪ್ರಮಾಣ ಕೆಲಸ ಮಾಡುತ್ತದೆ. ಒಂದುವೇಳೆ ಈ ಶಕ್ತಿಗಳು ಸಮಯದ ನಂತರ ಕೆಲಸ ಮಾಡಿದರೆ ಎರಡನೇ ನಂಬರಿನಲ್ಲಿ ಬಂದುಬಿಡುತ್ತೀರಿ. ಮೂರನೇ ನಂಬರಿನ ಮಾತನ್ನೇ ಬಿಟ್ಟುಬಿಡಿ. ಹಾಗಾದರೆ ಯಾರ ಬುದ್ಧಿಯು ಸದಾ ಪವಿತ್ರವಾಗಿದೆಯೋ, ಅಂತಹ ಹಂಸವೇ ಸಮಯದಲ್ಲಿ ಕಾರ್ಯ ಮಾಡಲು ಸಾಧ್ಯವಾಗುವುದು.

ಹೋಲಿಯ ಅರ್ಥವನ್ನು ತಿಳಿಸಿದ್ದೆವಲ್ಲವೆ - ಮೊದಲನೆಯದಾಗಿ ಹೋಲಿ ಎಂದರೆ ಪವಿತ್ರ ಮತ್ತು ಹಿಂದಿಭಾಷೆಯಲ್ಲಿ ಹೋ - ಲಿ ಎಂದರೆ ಕಳೆದದ್ದು ಕಳೆದುಹೋಯಿತು ಅರ್ಥಾತ್ ಆಗಿಹೋಯಿತು. ಅಂದಾಗ ಯಾರ ಬುದ್ಧಿಯು ಹೋಲಿ ಅರ್ಥಾತ್ ಸ್ವಚ್ಛವಾಗಿದೆಯೋ ಮತ್ತು ಸದಾ ಯಾವ ಸೆಕೆಂಡ್, ಯಾವ ಪರಿಸ್ಥಿತಿಯು ಕಳೆದುಹೋಯಿತೋ ಅದು ಆಗಿಹೋಯಿತು, ಈ ಅಭ್ಯಾಸವು ಯಾರಲ್ಲಿರುತ್ತದೆಯೋ ಅಂತಹ ಬುದ್ಧಿಯವರೇ ಸದಾ ಹೋಲಿ ಅರ್ಥಾತ್ ಆತ್ಮಿಕ ರಂಗಿನಲ್ಲಿ ರಂಗಿತರಾಗಿರುತ್ತಾರೆ. ಸದಾ ತಂದೆಯ ಸಂಗದ ರಂಗಿನಲ್ಲಿ ರಂಗಿತರಾಗಿರುತ್ತಾರೆ ಆದ್ದರಿಂದ ಒಂದು ಹೋಲಿ ಶಬ್ಧವನ್ನೇ ಮೂರು ರೂಪಗಳಿಂದ ಉಪಯೋಗಿಸಲಾಗುತ್ತದೆ. ಇದರಲ್ಲಿ ಈ ಮೂರೂ ಅರ್ಥಗಳಿಗೆ ವಿಶೇಷತೆಗಳಿವೆ ಅರ್ಥಾತ್ ಯಾವ ಹಂಸಗಳಿಗೆ ಈ ವಿಧಿಯು ಬರುತ್ತದೆಯೋ ಅವರು ಸಮಯ ಪ್ರಮಾಣ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾರೆ. ಇಂದು ಬಾಪ್‌ದಾದಾರವರು ಪವಿತ್ರ ಹಂಸಗಳ ಸಭೆಯಲ್ಲಿ ಸರ್ವ ಪವಿತ್ರ ಹಂಸಗಳ ಈ ವಿಶೇಷತೆಯನ್ನು ನೋಡುತ್ತಿದ್ದರು. ಸ್ಥೂಲ ಕಾರ್ಯವಿರಲಿ ಅಥವಾ ಆತ್ಮೀಕ ಕಾರ್ಯವಿರಲಿ ಆದರೆ ಎರಡರಲ್ಲಿ ಸಫಲತೆಗೆ ಆಧಾರ ಗುರುತಿಸುವ ಹಾಗೂ ನಿರ್ಣಯ ಮಾಡುವ ಶಕ್ತಿಯಾಗಿದೆ. ಯಾರ ಸಂಪರ್ಕದಲ್ಲಿಯೇ ಬರುತ್ತೀರೆಂದರೆ, ಎಲ್ಲಿಯವರೆಗೆ ಅವರ ಭಾವ ಮತ್ತು ಭಾವನೆಯನ್ನು ಗುರುತಿಸುವುದಿಲ್ಲ ಮತ್ತು ಗುರುತಿಸಿದ ನಂತರ ಯಥಾರ್ಥ ನಿರ್ಣಯ ಮಾಡಲಾಗುವುದಿಲ್ಲವೋ ಅಲ್ಲಿಯವರೆಗೆ ಎರಡೂ ಕಾರ್ಯಗಳಲ್ಲಿ ವ್ಯಕ್ತಿಯಿರಬಹುದು, ಪರಿಸ್ಥಿತಿಯಿರಬಹುದು ಆದರೆ ಸಫಲತೆಯು ಪ್ರಾಪ್ತಿಯಾಗುವುದಿಲ್ಲ. ಏಕೆಂದರೆ ವ್ಯಕ್ತಿಗಳ ಸಂಬಂಧದಲ್ಲಿಯೂ ಬರಬೇಕಾಗುತ್ತದೆ ಮತ್ತು ಪರಿಸ್ಥಿತಿಗಳನ್ನೂ ಪಾರು ಮಾಡಬೇಕಾಗುತ್ತದೆ. ಜೀವನದಲ್ಲಿ ಇವೆರಡೂ ಮಾತುಗಳು ಬರುತ್ತವೆ ಅಂದಮೇಲೆ ನಂಬರ್‌ವನ್ ಪವಿತ್ರ ಹಂಸಗಳು ಅರ್ಥಾತ್ ಎರಡೂ ವಿಶೇಷತೆಗಳಲ್ಲಿ ಸಂಪನ್ನರು. ಇದು ಇಂದಿನ ಈ ಸಭೆಯ ಸಮಾಚಾರವಾಯಿತು, ಈ ಸಭೆಯೆಂದರೆ ಕೇವಲ ಇಲ್ಲಿ ಮುಂದೆ ಕುಳಿತಿರುವವರಲ್ಲ, ಬಾಪ್ ದಾದಾರವರ ಮುಂದೆ ತಮ್ಮ ಜೊತೆಜೊತೆಗೆ ನಾಲ್ಕಾರು ಕಡೆಯ ಮಕ್ಕಳೂ ಸಹ ಪ್ರತ್ಯಕ್ಷವಾಗುತ್ತಾರೆ. ಬೇಹದ್ದಿನ ಪರಿವಾರದ ನಡುವೆ ಬಾಪ್‌ದಾದಾರವರು ಮಿಲನ ಮಾಡುತ್ತೇವೆ ಹಾಗೂ ವಾರ್ತಾಲಾಪ ಮಾಡುತ್ತೇವೆ. ಎಲ್ಲಾ ಬ್ರಾಹ್ಮಣ ಆತ್ಮಗಳು ತಮ್ಮ ನೆನಪಿನ ಶಕ್ತಿಯಿಂದ ತಾವೂ ಸಹ ಮಧುಬನದಲ್ಲಿ ಹಾಜರಾಗುತ್ತೀರಿ ಮತ್ತು ಬಾಪ್‌ದಾದಾ ಈ ವಿಶೇಷ ಮಾತನ್ನು ನೋಡುತ್ತಿದ್ದಾರೆ - ಪ್ರತಿಯೊಂದು ಮಗುವಿನ ವಿಧಿಯ ಮಾರ್ಗ (ಬುದ್ಧಿಯೋಗವು), ಸಿದ್ಧಿಯ ಮಾರ್ಗ- ಇವೆರಡೂ ರೇಖೆಗಳು ಎಷ್ಟು ಸ್ಪಷ್ಟವಾಗಿದೆ? ಆದಿಯಿಂದ ಇಲ್ಲಿಯವರೆಗಿನ ವಿಧಿಯು ಯಾವರೀತಿ ಇದೆ ಮತ್ತು ವಿಧಿಯ ಫಲ ಸ್ವರೂಪವಾಗಿ ಎಷ್ಟು ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಂಡಿದ್ದಾರೆ? ಇವೆರಡೂ ರೇಖೆಗಳು ಎಷ್ಟು ಸ್ಪಷ್ಟವಾಗಿದೆ ಮತ್ತು ಎಷ್ಟು ಧೀರ್ಘ ಅರ್ಥಾತ್ ವಿಧಿ ಮತ್ತು ಸಿದ್ಧಿಯ ಖಾತೆಯು ಎಷ್ಟು ಯಥಾರ್ಥ ರೂಪದಿಂದ ಜಮಾ ಆಗಿದೆ? ಎಂಬುದನ್ನು ನೋಡುತ್ತಿದ್ದರು. ವಿಧಿಯ ಆಧಾರವು ಶ್ರೇಷ್ಠವೃತ್ತಿಯಾಗಿದೆ. ಒಂದುವೇಳೆ ಶ್ರೇಷ್ಠವೃತ್ತಿಯಿದ್ದರೆ ಶ್ರೇಷ್ಠವಿಧಿಯೂ ಇರುವುದು ಮತ್ತು ಯಥಾರ್ಥ ವಿಧಿಯಿದ್ದರೆ ಸಿದ್ಧಿಯು ಶ್ರೇಷ್ಠ ವಾಗಿಯೇ ಇರುವುದು. ಅಂದಾಗ ವಿಧಿ ಮತ್ತು ಸಿದ್ಧಿಯ ಬೀಜವು ವೃತ್ತಿಯಾಗಿದೆ. ಶ್ರೇಷ್ಠವೃತ್ತಿಯು ಸದಾ ಸಹೋದರ-ಸಹೋದರರೆಂಬ ಆತ್ಮಿಕ ವೃತ್ತಿಯಿರಲಿ (ಭಾವನೆಯಿರಲಿ). ಇದಂತೂ ಮುಖ್ಯ ಮಾತಾಗಿದೆ ಆದರೆ ಇದರ ಜೊತೆಜೊತೆಗೆ ಸಂಪರ್ಕದಲ್ಲಿ ಬರುತ್ತಾ ಪ್ರತಿಯೊಂದು ಆತ್ಮನಪ್ರತಿ ಕಲ್ಯಾಣದ, ಸ್ನೇಹದ, ಸಹಯೋಗದ, ನಿಸ್ವಾರ್ಥತೆಯ ನಿರ್ವಿಕಲ್ಪ ವೃತ್ತಿಯಿರಲಿ, ನಿಸ್ವಾರ್ಥ ಸಂಕಲ್ಪ-ವೃತ್ತಿಯಿರಲಿ. ಕೆಲವೊಮ್ಮೆ ಯಾವುದೇ ಆತ್ಮನ ಪ್ರತಿ ವ್ಯರ್ಥ ಸಂಕಲ್ಪ ಹಾಗೂ ವಿಕಲ್ಪದ ವೃತ್ತಿಯಿರುತ್ತದೆಯೆಂದರೆ ಎಂತಹ ವೃತ್ತಿ-ದೃಷ್ಟಿಯೋ ಅದೇ ರೀತಿ ಆ ಆತ್ಮನ ಕರ್ತವ್ಯ, ಕರ್ಮದ ಸೃಷ್ಟಿಯು ಕಾಣುತ್ತದೆ. ಕೆಲಕೆಲವೊಮ್ಮೆ ಮಕ್ಕಳ ಮಾತನ್ನು ಬಾಪ್‌ದಾದಾ ಕೇಳುತ್ತಾರೆ ಮತ್ತು ನೋಡುತ್ತಲೂ ಇರುತ್ತಾರೆ. ವೃತ್ತಿಯ ಕಾರಣ ವರ್ಣನೆಯನ್ನೂ ಮಾಡುತ್ತಾರೆ, ಭಲೆ ಅವರು ಎಷ್ಟಾದರೂ ಒಳ್ಳೆಯ ಕಾರ್ಯ ಮಾಡಲಿ ಆದರೆ ವೃತ್ತಿಯು ವ್ಯರ್ಥವಾಗಿರುವ ಕಾರಣ ಸದಾ ಆ ಆತ್ಮನಪ್ರತಿ ಶಬ್ಧಗಳೂ ಸಹ ಇದೇರೀತಿ ಹೊರಬರುತ್ತವೆ - ಇವರು ಇರುವುದೇ ಹೀಗೆ, ಇದು ಆಗುವುದೇ ಹೀಗೆಂದು. ಈ ವೃತ್ತಿಯು ಅವರ ಕರ್ಮವೆಂಬ ಸೃಷ್ಟಿಯನ್ನು ಅದೇರೀತಿಯಾಗಿ ಅನುಭವ ಮಾಡಿಸುತ್ತದೆ. ಹೇಗೆ ತಾವು ಈ ಪ್ರಪಂಚದಲ್ಲಿ ಕಣ್ಣುಗಳ ದೃಷ್ಟಿಯ ಕನ್ನಡಕದ ದೃಷ್ಟಾಂತವನ್ನು ಕೊಡುತ್ತೀರಿ, ಯಾವ ರಂಗಿನ ಕನ್ನಡಕವನ್ನು ಹಾಕಿಕೊಳ್ಳುತ್ತಾರೆ ಅದೇ ಕಾಣುತ್ತದೆ. ಅದೇರೀತಿ ಹೇಗೆ ವೃತ್ತಿಯಿರುತ್ತದೆಯೋ ಅದೇರೀತಿ ವೃತ್ತಿ - ದೃಷ್ಟಿಯು ಬದಲಾಗುತ್ತದೆ, ದೃಷ್ಟಿಯು ಸೃಷ್ಟಿಯನ್ನು ಬದಲಾಯಿಸುತ್ತದೆ. ಒಂದುವೇಳೆ ವೃತ್ತಿಯ ಬೀಜವು ಸದಾ ಶ್ರೇಷ್ಠವಾಗಿರುತ್ತದೆಯೆಂದರೆ, ವಿಧಿ ಮತ್ತು ಸಿದ್ಧಿಯು ಸಫಲತಾ ಪೂರ್ವಕವಾಗಿಯೇ ಇರುತ್ತದೆ ಅಂದಾಗ ಮೊದಲು ವೃತ್ತಿಯ ಬುನಾದಿಯನ್ನು ಪರಿಶೀಲನೆ ಮಾಡಿಕೊಳ್ಳಿರಿ - ಅದಕ್ಕೆ ಶ್ರೇಷ್ಠವೃತ್ತಿಯೆಂದು ಹೇಳಲಾಗುತ್ತದೆ. ಒಂದುವೇಳೆ ಯಾರದೇ ಸಂಬಂಧ-ಸಂಪರ್ಕದಲ್ಲಿ ಶ್ರೇಷ್ಠವೃತ್ತಿಗೆ ಬದಲಾಗಿ ಸೇರ್ಪಡೆ ಆಗಿರುತ್ತದೆಯೆಂದರೆ, ಭಲೆ ತಾವು ವಿಧಿಯನ್ನೆಷ್ಟಾದರೂ ಉಪಯೋಗಿಸಿರಿ ಆದರೆ ಸಿದ್ಧಿಯಾಗುವುದಿಲ್ಲ ಏಕೆಂದರೆ ವೃತ್ತಿಯು ಬೀಜವಾಗಿದೆ ಮತ್ತು ವಿಧಿಯು ವೃಕ್ಷವಾಗಿದೆ, ಅದರ ಫಲವು ಸಿದ್ಧಿಯಾಗಿದೆ. ಒಂದುವೇಳೆ ಬೀಜವು ಸಾರಯುಕ್ತವಾಗಿ ಇಲ್ಲದಿದ್ದರೆ ವೃಕ್ಷವು ಭಲೆ ಎಷ್ಟೇ ವಿಸ್ತಾರದಿಂದ ಕೂಡಿರಲಿ ಆದರೆ ಸಿದ್ಧಿರೂಪಿ ಫಲವಾಗುವುದಿಲ್ಲ. ಇದೇ ವೃತ್ತಿ ಮತ್ತು ವಿಧಿಯ ಮೇಲೆ ಬಾಪ್‌ದಾದಾರವರು ಮಕ್ಕಳ ಪ್ರತಿ ಒಂದು ವಿಶೇಷವಾದ ಆತ್ಮಿಕ ವಾರ್ತಾಲಾಪವನ್ನು ಮಾಡುತ್ತಿದ್ದರು.

ಸ್ವ-ಉನ್ನತಿಯ ಪ್ರತಿ ಹಾಗೂ ಸೇವೆಯ ಸಫಲತೆಯ ಪ್ರತಿ ಒಂದು ರಮಣೀಕವಾದ ಘೋಷಣಾ ವಾಕ್ಯವನ್ನು ವಾರ್ತಾಲಾಪ ಮಾಡಿ ತಿಳಿಸುತ್ತಿದ್ದಾರೆ. ತಾವೆಲ್ಲರೂ ಈ ಸ್ಲೋಗನ್‌ನ್ನು ಪರಸ್ಪರದಲ್ಲಿಯೂ ಹೇಳುತ್ತೀರಿ. ಪ್ರತಿಯೊಂದು ಕಾರ್ಯದಲ್ಲಿ 'ಮೊದಲು ತಾವು' ಈ ಸ್ಲೋಗನ್ ನೆನಪಿದೆಯಲ್ಲವೆ? ಒಂದಾಗಿದೆ-'ಮೊದಲು ತಾವು' ಇನ್ನೊಂದಾಗಿದೆ-'ಮೊದಲು ನಾನು', "ಮೊದಲು ನಾನು" ಮತ್ತು "ಮೊದಲು ತಾವು” ಇವೆರಡೂ ಸ್ಲೋಗನ್ ಅವಶ್ಯಕವಾಗಿದೆ ಆದರೆ ಬಾಪ್‌ದಾದಾ ಆತ್ಮೀಯ ವಾರ್ತಲಾಪ ಮಾಡುತ್ತಾ ಮುಗುಳ್ನಗುತ್ತಿದ್ದರು. ಮಕ್ಕಳು ಎಲ್ಲಿ 'ಮೊದಲು ನಾನು' ಎನ್ನಬೇಕೋ ಅಲ್ಲಿ 'ಮೊದಲು ತಾವು' ಮಾಡಿಬಿಡುತ್ತಾರೆ. ಎಲ್ಲಿ 'ಮೊದಲು ತಾವು ಮಾಡಬೇಕೋ ಅಲ್ಲಿ 'ಮೊದಲು ನಾನು' ಎಂದುಬಿಡುತ್ತಾರೆ. ಅದಲು-ಬದಲು ಮಾಡಿಬಿಡುತ್ತಾರೆ. ಯಾವಾಗ ಯಾವುದೇ ಸ್ವಪರಿವರ್ತನೆಯ ಮಾತು ಬಂದಾಗ 'ಮೊದಲು ತಾವು' ಬದಲಾದರೆ ನಾನು ಬದಲಾಗುತ್ತೇನೆ. ಅಂದಮೇಲೆ 'ಮೊದಲು ತಾವು' ಆಯಿತಲ್ಲವೆ ಮತ್ತು ಯಾವುದೇ ಸೇವೆಯ ಅಥವಾ ಯಾವುದೇ ಇಂತಹ ಪರಿಸ್ಥಿತಿಯನ್ನು ಎದುರಿಸುವ ಅವಕಾಶವು ಬಂದಾಗ ಪ್ರಯತ್ನಿಸುತ್ತಾರೆ. ಮೊದಲು ನಾನು, ನನಗೂ ಮಾನ್ಯತೆಯಿದೆಯಲ್ಲವೆ, ನನಗೂ ಸಿಗಬೇಕಲ್ಲವೆ ಎಂದು ಹೇಳುತ್ತಾರೆ ಅಂದಾಗ ಎಲ್ಲಿ 'ಮೊದಲು ತಾವು' ಎನ್ನಬೇಕೋ ಅಲ್ಲಿ 'ನಾನು' ಎಂದುಬಿಡುತ್ತಾರೆ. ಸದಾ ಸ್ವಮಾನದಲ್ಲಿ ಸ್ಥಿತರಾಗಿ ಅನ್ಯರಿಗೆ ಸನ್ಮಾನ ಕೊಡುವುದೆಂದರೆ 'ಮೊದಲು ತಾವು' ಎನ್ನುವುದಾಗಿದೆ. ಕೇವಲ ಬಾಯಿಂದ 'ಮೊದಲು ತಾವು' ಎಂದು ಹೇಳಿ ಕರ್ಮದಲ್ಲಿ ಅಂತರವಾಗಬಾರದು. ಸ್ವಮಾನದಲ್ಲಿ ಸ್ಥಿತರಾಗಿ ಸನ್ಮಾನ ಕೊಡಬೇಕಾಗಿದೆ. ಸನ್ಮಾನ ಕೊಡುವುದು ಹಾಗೂ ಸ್ವಮಾನದಲ್ಲಿ ಸ್ಥಿತರಾಗುವುದು - ಇದರ ಚಿಹ್ನೆಯೇನಿರುವುದು? ಅದರಲ್ಲಿ ಸದಾ ಎರಡು ಮಾತುಗಳನ್ನು ಪರಿಶೀಲನೆ ಮಾಡಿಕೊಳ್ಳಿ:-

ಒಂದು ಅಭಿಮಾನದ ವೃತ್ತಿಯಾಗಿದೆ, ಇನ್ನೊಂದು ಅಪಮಾನದ ವೃತ್ತಿಯಾಗಿದೆ. ಯಾರು ಸ್ವಮಾನದಲ್ಲಿ ಸ್ಥಿತರಾಗುವರೋ ಮತ್ತು ಅನ್ಯರಿಗೆ ಸನ್ಮಾನವನ್ನು ಕೊಡುವಂತಹ ದಾತನಾಗಿರುವರೋ ಅವರಲ್ಲಿ ಅಭಿಮಾನವಿದ್ದಾಗಲಿ, ಅಪಮಾನದ ವೃತ್ತಿಯಾಗಲಿ ಇರುವುದಿಲ್ಲ. ಇವರು ಮಾಡುವುದೇ ಹೀಗೆ, ಇವರು ಇರುವುದೇ ಹೀಗೆ - ಇದೂ ಸಹ ರಾಯಲ್ ರೂಪದಲ್ಲಿ ಆ ಆತ್ಮನ ಪ್ರತಿ ಅಪಮಾನ ಮಾಡುವುದಾಗಿದೆ. ಸ್ವಮಾನದಲ್ಲಿ ಸ್ಥಿತರಾಗಿದ್ದು ಸನ್ಮಾನವನ್ನು ಕೊಡಬೇಕು - ಇದಕ್ಕೇ 'ಮೊದಲು ತಾವು' ಎಂದು ಹೇಳುವುದಾಗಿದೆ. ತಿಳಿಯಿತೆ? ಮತ್ತು ಯಾವುದೆಲ್ಲಾ ಸ್ವ-ಉನ್ನತಿಯ ಮಾತುಗಳಿವೆಯೋ ಅದರಲ್ಲಿ ಮೊದಲು ನಾನು ಎಂಬ ಸ್ಲೋಗನ್ ನೆನಪಿರಲಿ ಆಗ ಫಲಿತಾಂಶವೇನಾಗುವುದು? 'ಮೊದಲು ನಾನು' ಅರ್ಥಾತ್ ಮೊದಲು ಮಾಡುವವರೇ ಅರ್ಜುನರು. ಅರ್ಜುನ ಅರ್ಥಾತ್ ವಿಶೇಷ ಆತ್ಮ, ಭಿನ್ನ ಆತ್ಮ, ಅಲೌಕಿಕ ಆತ್ಮ, ಅಲೌಕಿಕ ವಿಶೇಷ ಆತ್ಮ. ಹೇಗೆ ಬ್ರಹ್ಮಾತಂದೆಯು ಸದಾ ಮೊದಲು ನಾನು ಎಂಬ ಸ್ಲೋಗನ್ನಿನಿಂದ ಅರ್ಜುನನಾದರಲ್ಲವೆ ಅರ್ಥಾತ್ ನಂಬರ್‌ವನ್ ಆತ್ಮನಾದರು. ನಂಬರ್‌ವನ್ ಆತ್ಮರದು ನಂಬರ್‌ವನ್ ಡಿವಿಜನ್ ಆಗಿದೆ. ಹೇಗೆ ನಂಬರ್‌ವನಂತೂ ಒಬ್ಬರೇ ಆಗುವರಲ್ಲವೆ ಅಂದಾಗ ಇವೆರಡೂ ಅವಶ್ಯವಾಗಿ ಇರಬೇಕಾಗಿದೆ ಆದರೆ ಯಾವ ಆಧಾರದ ಮೇಲೆ ನಂಬರ್‌ ಸಿಗುತ್ತದೆ ಎಂಬುದನ್ನು ತಿಳಿಸಿದೆವಲ್ಲವೆ. ಯಾರು ಸಮಯ ಪ್ರಮಾಣ ಯಾವುದೇ ವಿಶೇಷತೆಯನ್ನು ಕಾರ್ಯದಲ್ಲಿ ತೊಡಗಿಸುವುದಿಲ್ಲವೋ ಅವರು ಹಿಂದುಳಿಯುವರು. ಯಾರು ಸಮಯದಲ್ಲಿ ಕಾರ್ಯದಲ್ಲಿ ತೊಡಗಿಸುವರೋ ವಿನ್ (ವಿಜಯಿ) ಮಾಡುತ್ತಾರೆಯೋ ಅವರು ವನ್ (ಮೊಟ್ಟಮೊದಲಿಗರು) ಆಗಿಬಿಡುತ್ತಾರೆ. ಅಂದಾಗ ಇದನ್ನು ಪರಿಶೀಲನೆ ಮಾಡಿಕೊಳ್ಳಿ ಏಕೆಂದರೆ ಈ ವರ್ಷ ಸ್ವಯಂನ ಪರಿಶೀಲನೆಯ ಮಾತುಗಳನ್ನು ತಿಳಿಸುತ್ತಿದ್ದೇವೆ. ಭಿನ್ನ-ಭಿನ್ನವಾದ ಮಾತುಗಳನ್ನು ತಿಳಿಸಿದ್ದೇವಲ್ಲವೆ ಅಂದಾಗ ಇಂದು ಈ ಮಾತುಗಳನ್ನು ಪರಿಶೀಲನೆ ಮಾಡಿಕೊಳ್ಳಿ - 'ತಾವು' ಎನ್ನುವ ಬದಲು 'ನಾನು', 'ನಾನು' ಎನ್ನುವುದರ ಬದಲು 'ತಾವು' ಎನ್ನುವುದಿಲ್ಲ ತಾನೆ? ಇದಕ್ಕೆ ಯಥಾರ್ಥ ವಿಧಿಯೆಂದು ಹೇಳುತ್ತಾರೆ. ಎಲ್ಲಿ ಯಥಾರ್ಥ ವಿಧಿಯಿದೆಯೋ ಅಲ್ಲಿ ಸಿದ್ಧಿ (ಸಫಲತೆ)ಯು ಇದ್ದೇ ಇರುತ್ತದೆ. ಈ ವೃತ್ತಿಯ ವಿಧಿಯನ್ನು ತಿಳಿಸಿದೆವು - ಎರಡು ಮಾತುಗಳ ಪರಿಶೀಲನೆ ಮಾಡಿಕೊಳ್ಳಿ - ಅಭಿಮಾನದ ವೃತ್ತಿಯೂ ಇರಬಾರದು. ಅಪಮಾನದ ವೃತ್ತಿಯೂ ಇರಬಾರದು. ಎಲ್ಲಿ ಇವೆರಡರ ಅಪ್ರಾಪ್ತಿಯಿದೆಯೋ ಅಲ್ಲಿ ಸ್ವಮಾನದ ಪ್ರಾಪ್ತಿಯಿದೆ. ತಾವು ಹೇಳಿ, ಹೇಳದೇ ಇರಿ. ಯೋಚಿಸಿ, ಯೋಚಿಸದೇ ಇರಿ ಆದರೆ ಪ್ರಕೃತಿ, ವ್ಯಕ್ತಿ ಎರಡೂ ಸಹ ಸದಾ ಸ್ವತಹವಾಗಿಯೇ ಸ್ಪಮಾನವನ್ನು ಕೊಡುತ್ತಿರುತ್ತದೆ. ಸಂಕಲ್ಪ ಮಾತ್ರದಲ್ಲಿಯೂ ಸ್ವಮಾನದ ಪ್ರಾಪ್ತಿಯ ಇಚ್ಛೆಯಿದ್ದರೆ ಸನ್ಮಾನ ಸಿಗುವುದಿಲ್ಲ. ನಿರ್ಮಾಣರಾಗುವುದು ಅರ್ಥಾತ್ ' ಮೊದಲು ತಾವು' ಎನ್ನುವುದು. ನಿರ್ಮಾಣ ಸ್ಥಿತಿಯು ಸ್ವತಹವಾಗಿ ಸ್ವಮಾನವನ್ನು ಕೊಡಿಸುತ್ತದೆ. ಸ್ವಮಾನದ ಪರಿಸ್ಥಿತಿಗಳಲ್ಲಿ 'ಮೊದಲು ತಾವು' ಎನ್ನುವುದರ ಅರ್ಥವಾಗಿದೆ - ತಂದೆಯ ಸಮಾನರಾಗುವುದು, ಹೇಗೆ ಬ್ರಹ್ಮಾತಂದೆಯು ಸದಾ ಸಮಾನ ಕೊಡುವುದರಲ್ಲಿ 'ಮೊದಲು ಜಗದಂಬೆ', 'ಮೊದಲು ಸರಸ್ವತಿ ಮಾ' ನಂತರ 'ಬ್ರಹ್ಮಾತಂದೆ' ಯನ್ನಿಟ್ಟುಕೊಂಡರು. 'ಬ್ರಹ್ಮಾತಾಯಿ' ಯಿದ್ದರೂ ಸಹ ಸನ್ಮಾನ ಕೊಡುವ ಅರ್ಥವಾಗಿ ಜಗದಂಬೆ ಮಮ್ಮಾರವರನ್ನು ಮುಂದಿಟ್ಟರು, ಪ್ರತಿಯೊಂದು ಕಾರ್ಯದಲ್ಲಿ ಮಕ್ಕಳನ್ನು ಮುಂದಿಟ್ಟರು ಮತ್ತು ಪುರುಷಾರ್ಥದ ಸ್ಥಿತಿಯಲ್ಲಿ ಸದಾ ಸ್ವಯಂನ್ನು 'ಮೊದಲು ನಾನು' ಎಂದು ಇಂಜಿನ್‌ನ ರೂಪದಲ್ಲಿ ನೋಡಿಕೊಂಡರು. ಹೇಗೆ ಇಂಜಿನ್ ಮುಂಭಾಗದಲ್ಲಿ ಇರುತ್ತದೆಯಲ್ಲವೆ. ಸದಾ ಈ ಸಾಕಾರ ಜೀವನದಲ್ಲಿ ನೋಡಿಕೊಂಡರು - ನಾನು ಏನು ಮಾಡುವೆನು, ನನ್ನನ್ನು ನೋಡಿ ಎಲ್ಲರೂ ಮಾಡುವರು. ಹೀಗೆ ವಿಧಿಯಲ್ಲಿ, ಸ್ವ-ಉನ್ನತಿಯಲ್ಲಿ ಹಾಗೂ ತೀವ್ರ ಪುರುಷಾರ್ಥದ ಸಾಲಿನಲ್ಲಿ ಸದಾ 'ಮೊದಲು ನಾನು' ಎಂದು ಇಟ್ಟುಕೊಂಡರು. ಅಂದಮೇಲೆ ಇಂದು ವಿಧಿ ಮತ್ತು ಸಿದ್ಧಿಯ ರೇಖೆಗಳನ್ನು ಪರಿಶೀಲನೆ ಮಾಡುತ್ತಿದ್ದರು. ತಿಳಿಯಿತೆ? ಆದ್ದರಿಂದ ಅದಲು-ಬದಲು ಮಾಡಿಬಿಡಬೇಡಿ. ಬದಲು ಮಾಡುವುದೆಂದರೆ ಭಾಗ್ಯವನ್ನು ಬದಲಾಯಿಸುವುದು, ಸದಾ ಪವಿತ್ರ ಹಂಸಗಳಾಗಿ ನಿರ್ಣಯ ಶಕ್ತಿ, ಗುರುತಿಸುವ ಶಕ್ತಿಯನ್ನು ಸಮಯದಲ್ಲಿ ಕಾರ್ಯದಲ್ಲಿ ಉಪಯೋಗಿಸುವಂತಹ ವಿಶಾಲಬುದ್ಧಿಯವರಾಗಿರಿ ಹಾಗೂ ಸದಾ ವೃತ್ತಿಯೆಂಬ ಬೀಜವನ್ನು ಶ್ರೇಷ್ಠವನ್ನಾಗಿ ಮಾಡಿಕೊಂಡು ವಿಧಿ ಮತ್ತು ಸಿದ್ಧಿಯ ಶ್ರೇಷ್ಠ ಅನುಭವವನ್ನು ಸದಾ ಮಾಡುತ್ತಾ ಸಾಗಿರಿ.

ಇದಕ್ಕೆ ಮೊದಲೇ ತಿಳಿಸಿದ್ದೆವು – ಬಾಪ್‌ದಾದಾರವರಿಗೆ ಮಕ್ಕಳೊಂದಿಗೆ ಸ್ನೇಹವಿದೆ, ಸ್ನೇಹದ ಗುರುತೇನು? ಸ್ನೇಹವುಳ್ಳವರು ಸ್ನೇಹಿಯ ಕೊರತೆಯನ್ನು ನೋಡಲು ಆಗುವುದಿಲ್ಲ. ಸದಾ ಸ್ವಯಂನ್ನು ಮತ್ತು ಸ್ನೇಹೀ ಆತ್ಮನನ್ನು ಸಂಪನ್ನ, ಸಮಾನ ರೂಪದಲ್ಲಿ ನೋಡಬಯಸುತ್ತಾರೆ. ತಿಳಯಿತೆ? ಆದ್ದರಿಂದ ಮತ್ತೆ-ಮತ್ತೆ ಗಮನವನ್ನು ಸೆಳೆಯುತ್ತಾರೆ, ಪರಿಶೀಲನೆ ಮಾಡಿಸುತ್ತಾರೆ - ಸಂಪನ್ನರನ್ನಾಗಿ ಮಾಡುವ ಸತ್ಯಸ್ನೇಹವು ಇದೇ ಆಗಿದೆ. ಒಳ್ಳೆಯದು-

ಈಗ ಎಲ್ಲಾ ಕಡೆಯಿಂದ ಮೆಜಾರಿಟಿ ಹಳೆಯ ಮಕ್ಕಳು ಬಂದಿದ್ದೀರಿ. ಹಳಬರು ಎಂದು ಯಾರಿಗೆ ಹೇಳುತ್ತಾರೆ, ಅರ್ಥವನ್ನು ತಿಳಿದುಕೊಂಡಿದ್ದೀರಲ್ಲವೇ? ಬಾಪ್‌ದಾದಾ ಹಳಬರಿಗೆ ಎಲ್ಲಾ ಮಾತುಗಳಲ್ಲಿ ಪಕ್ಕಾ ಇರುವವರೆಂದು ಹೇಳುತ್ತೇವೆ, ಹಳಬರೆಂದರೆ ಪಕ್ಕಾ ಇರುವವರು. ಅನುಭವವೂ ಸಹ ಪಕ್ಕಾ ಮಾಡುತ್ತದೆ. ಈ ರೀತಿ ಕಚ್ಚಾ ಆಗಬೇಡಿ - ಮಾಯಾಬೆಕ್ಕು ಚಿಕ್ಕರೂಪದಲ್ಲಿ ಬಂದರೂ ಸಹ ಗಾಬರಿಯಾಗಿಬಿಡುವಂತೆ. ಎಲ್ಲರೂ ಹಳಬರು ಪಕ್ಕಾ ಇರುವವರೇ ಬಂದಿದ್ದೀರಲ್ಲವೆ? ಮಿಲನ ಮಾಡುವ ಅವಕಾಶವನ್ನು ತೆಗೆದುಕೊಳ್ಳುವುದರಲ್ಲಿಯೂ, ಎಲ್ಲರೂ 'ಮೊದಲು ನಾನು' ಎಂದು ಹೇಳಿದರೂ ಪರವಾಗಿಲ್ಲ. ಆದರೆ ಪ್ರತಿಯೊಂದು ಕಾರ್ಯದಲ್ಲಿ ನಿಯಮ ಮತ್ತು ಲಾಭವಂತೂ ಇದ್ದೇ ಇದೆ. ಈ ರೀತಿಯೂ ಅಲ್ಲ, ಮೊದಲು ನಾನು ಎಂದರೆ ಇದರ ಅರ್ಥ - ಒಂದು ಸಾವಿರ ಮಂದಿ ಬಂದುಬಿಡುವುದಲ್ಲ. ಸಾಕಾರ ಸೃಷ್ಟಿಯಲ್ಲಿ ಕಾಯಿದೆಯೂ ಇದೆ. ಲಾಭವೂ ಇದೆ. ಅವ್ಯಕ್ತ ವತನದಲ್ಲಿ ಯಾವುದೇ ಕಾಯಿದೆಯ ಮಾತಿಲ್ಲ ಅಥವಾ ಅದರನುಸಾರ ಕಾಯಿದೆ ಮಾಡಬೇಕಾಗುವುದಿಲ್ಲ ಆದರೆ ಅವ್ಯಕ್ತ ಮಿಲನಕ್ಕಾಗಿ ಪರಿಶ್ರಮವೆನಿಸುತ್ತದೆ, ಸಾಕಾರ ಮಿಲನವು ಸಹಜವೆನಿಸುತ್ತದೆ ಆದ್ದರಿಂದ ಓಡಿಬರುತ್ತೀರಿ. ಆದರೆ ಸಮಯ ಪ್ರಮಾಣ ಎಷ್ಟು ಕಾಯಿದೆಯೋ ಅಷ್ಟು ಲಾಭವಿರುತ್ತದೆ. ಬಾಪ್‌ದಾದಾ ಸ್ವಲ್ಪ ಸೂಚನೆ ಕೊಟ್ಟರೂ ತಿಳಿಯುತ್ತಾರೆ- ಈಗ ಗೊತ್ತಿಲ್ಲ ಏನಾಗುವುದಿದೆ? ಎಂದು ತಿಳಿಯುತ್ತಾರೆ. ಒಂದುವೇಳೆ ಏನಾದರೂ ಆಗುವುದಿದ್ದರೂ ಸಹ ಅದು ಹೇಳಿ ಬರುವುದಿಲ್ಲ. ಸಾಕಾರತಂದೆಯು ಅವ್ಯಕ್ತನಾದರು ಅಂದಮೇಲೆ ಮೊದಲೇ ತಿಳಿಸಿ ಅವ್ಯಕ್ತರಾದರೆ? ಯಾವುದು ಆಕಸ್ಮಿಕವಾಗಿ ಆಗುತ್ತದೆಯೋ ಅದು ಅಲೌಕಿಕ ಮತ್ತು ಪ್ರಿಯವಾಗಿರುತ್ತದೆ ಆದ್ದರಿಂದ ಬಾಪ್‌ದಾದಾರವರು ಹೇಳುತ್ತಾರೆ - ಸದಾ ಎವರೆಡಿಯಾಗಿರಿ. ಏನಾಗುವುದೋ ಅದು ಒಳ್ಳೆಯದಕ್ಕಿಂತ ಒಳ್ಳೆಯದೇ ಆಗುವುದು, ತಿಳಯಿತೇ? ಒಳ್ಳೆಯದು


ಸರ್ವ ಪವಿತ್ರ ಹಂಸಗಳಿಗೆ, ಸರ್ವ ವಿಶಾಲಬುದ್ಧಿ ಶ್ರೇಷ್ಠ-ಸ್ವಚ್ಛ ಬುದ್ಧಿಯನ್ನು ಧಾರಣೆ ಮಾಡಿಕೊಳ್ಳುವಂತಹ ಬುದ್ದಿವಂತ ಮಕ್ಕಳಿಗೆ, ಸರ್ವಶಕ್ತಿಗಳು ಸರ್ವ ವಿಶೇಷತೆಗಳನ್ನು ಸಮಯ ಪ್ರಮಾಣ ಕಾರ್ಯದಲ್ಲಿ ಉಪಯೋಗಿಸುವಂತಹ ಜ್ಞಾನಿ ಆತ್ಮಗಳು, ಯೋಗಿ ಆತ್ಮಗಳಿಗೆ, ಸದಾ ತಂದೆಯ ಸಮಾನ ಸಂಪನ್ನರಾಗುವ ಉಲ್ಲಾಸ-ಉತ್ಸಾಹದಲ್ಲಿ ಇರುವಂತಹ ಸಂಪನ್ನ ಮಕ್ಕಳಿಗೆ ಬಾಪ್‌ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ವರದಾನ :

'ಮಾಲೀಕತ್ವದ ಸ್ಮೃತಿಯ ಮೂಲಕ ಶ್ರೇಷ್ಠ ಅಧಿಕಾರದ ಅನುಭವ ಮಾಡುವಂತಹ ಕಂಬೈಂಡ್ ಸ್ವರೂಪಧಾರಿ ಭವ'

ಮೊಟ್ಟಮೊದಲು ತಮ್ಮ ಶರೀರ ಮತ್ತು ಆತ್ಮದ ಕಂಬೈಂಡ್ ರೂಪ- ಶರೀರವು ರಚನೆ ಆಗಿದೆ, ಆತ್ಮವು ರಚೈತನಾಗಿದ್ದಾನೆ ಎಂಬುದನ್ನು ಸ್ಮೃತಿಯಲ್ಲಿ ಇಟ್ಟುಕೊಳ್ಳಿರಿ. ಇದರಿಂದ ಸ್ವತಹವಾಗಿ ಮಾಲೀಕತ್ವದ ಸ್ಮೃತಿಯು ಇರುತ್ತದೆ. ಮಾಲೀಕನೆಂಬ ಸ್ಮೃತಿಯಿಂದ ತಮ್ಮ ಶ್ರೇಷ್ಠ ಅಧಿಕಾರದ ಅನುಭವವನ್ನು ಮಾಡುವಿರಿ. ಶರೀರವನ್ನು ನಡೆಸುವವರು ಆಗುವಿರಿ. ಇನ್ನೊಂದು- ತಂದೆ ಹಾಗೂ ಮಗು(ಶಿವಶಕ್ತಿ)ವಿನ ಕಂಬೈಂಡ್ ಸ್ವರೂಪದ ಸ್ಮೃತಿಯಿಂದ ಮಾಯೆಯ ವಿಘ್ನಗಳನ್ನು ಅಧಿಕಾರದಿಂದ ಪಾರು ಮಾಡಿಬಿಡುವಿರಿ.

ಸ್ಲೋಗನ್ :

ವಿಸ್ತಾರವನ್ನು ಸೆಕೆಂಡಿನಲ್ಲಿ ಸಮಾವೇಶ ಮಾಡಿಕೊಂಡು ಜ್ಞಾನದ ಸಾರದ ಅನುಭೂತಿ ಮಾಡಿರಿ ಮತ್ತು ಅನ್ಯರಿಗೂ ಮಾಡಿಸಿರಿ.