04.05.22         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಶ್ರೀಮತದಂತೆ ಪವಿತ್ರರಾಗಿ ಆಗ ಧರ್ಮರಾಜನ ಶಿಕ್ಷೆಗಳಿಂದ ಬಿಡುಗಡೆಯಾಗುತ್ತೀರಿ, ವಜ್ರ ಸಮಾನ ಆಗಬೇಕೆಂದರೆ ಜ್ಞಾನಮೃತವನ್ನು ಕುಡಿಯಿರಿ, ವಿಷವನ್ನು ತ್ಯಾಗ ಮಾಡಿ

ಪ್ರಶ್ನೆ:
ಸತ್ಯಯುಗಿ ಪದವಿಯ ಇಡೀ ಆಧಾರವು ಯಾವ ಮಾತಿನ ಮೇಲಿದೆ?

ಉತ್ತರ:
ಸತ್ಯಯುಗೀ ಪದವಿಯ ಆಧಾರವು ಪವಿತ್ರತೆಯ ಮೇಲಿದೆ. ನೀವು ನೆನಪಿನಲ್ಲಿದ್ದು ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. ಪವಿತ್ರರಾಗುವುದರಿಂದಲೇ ಸದ್ಗತಿಯಾಗುವುದು. ಯಾರು ಪವಿತ್ರರಾಗುವುದಿಲ್ಲ, ಅವರು ಶಿಕ್ಷೆಯನ್ನು ಅನುಭವಿಸಿ ತಮ್ಮ ಧರ್ಮದಲ್ಲಿ ಹೋಗಿ ಬಿಡುತ್ತಾರೆ. ಭಲೆ ನೀವು ಮನೆಯಲ್ಲಿ ಇರಿ, ಆದರೆ ಯಾವುದೇ ದೇಹಧಾರಿಯನ್ನು ನೆನಪು ಮಾಡಬೇಡಿ. ಪವಿತ್ರರಾಗಿರುವುದರಿಂದಲೇ ಶ್ರೇಷ್ಠ ಪದವಿ ಸಿಗುವುದು.

ಗೀತೆ:
ನಿಮ್ಮನ್ನು ಪಡೆದ ನಾನು ಈ ಜಗತ್ತನ್ನೇ ಪಡೆದೆನು.....

ಓಂ ಶಾಂತಿ.
ಶಿವ ಭಗವಾನುವಾಚ, ಒಬ್ಬ ನಿರಾಕಾರ ಪರಮಪಿತ ಪರಮಾತ್ಮನನ್ನೇ ಶಿವಬಾಬಾ ಎಂದು ಹೇಳಲಾಗುತ್ತದೆ ಮತ್ತ್ಯಾರಿಗೂ ಭಗವಂತ ಎಂದು ಹೇಳಲಾಗುವುದಿಲ್ಲ. ಅವರೇ ಎಲ್ಲಾ ಆತ್ಮಗಳ ತಂದೆ ಆಗಿದ್ದಾರೆ ಆದ್ದರಿಂದ ಮೊದಲು-ಮೊದಲು ನಾವು ಅವಶ್ಯವಾಗಿ ಶಿವಬಾಬಾರವರ ಮಕ್ಕಳಾಗಿದ್ದೇವೆ ಎನ್ನುವ ನಿಶ್ಚಯ ಇರಬೇಕು. ದುಃಖದ ಸಮಯದಲ್ಲಿ ಪರಮಾತ್ಮ ಸಹಾಯ ಮಾಡು, ದಯೆ ತೋರಿಸು ಎಂದು ಹೇಳುತ್ತಾರೆ ಆದರೆ ನಮ್ಮ ಆತ್ಮವು ಪರಮಾತ್ಮನನ್ನು ನೆನಪು ಮಾಡುತ್ತದೆ ಎನ್ನುವುದನ್ನು ತಿಳಿದುಕೊಂಡಿಲ್ಲ. ನಾನು ಆತ್ಮನ ತಂದೆಯು ಅವರೇ ಆಗಿದ್ದಾರೆ. ಈ ಸಮಯದಲ್ಲಿ ಇಡೀ ಪ್ರಪಂಚವೂ ಪತಿತಾತ್ಮರ ಪ್ರಪಂಚವಾಗಿದೆ. ಆದ್ದರಿಂದಲೇ ನೀವು ಸಂಪೂರ್ಣ ನಿರ್ವಿಕಾರಿಗಳು, ನಾವು ನೀಚರು, ಪಾಪಿಗಳಾಗಿದ್ದೇವೆಂದು ಗಾಯನ ಮಾಡುತ್ತಾರೆ, ಆದರೆ ನಂತರ ತಮ್ಮನ್ನು ಪತಿತರೆಂದು ತಿಳಿದುಕೊಳ್ಳುವುದೇ ಇಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ ಭಗವಂತ ತಂದೆಯು ಒಬ್ಬರೇ ಆಗಿದ್ದಾರೆ ಎಂದು ನೀವು ಹೇಳುವುದರಿಂದ ನೀವೆಲ್ಲರೂ ಪರಸ್ಪರ ಸಹೋದರ-ಸಹೋದರರಾಗಿ ಬಿಟ್ಟಿರಲ್ಲವೇ. ಶರೀರದ ಸಂಬಂಧದಲ್ಲಿಯೂ ಸಹ ಸಹೋದರ-ಸಹೋದರಿಯಾಗುತ್ತೀರಿ. ಶಿವಬಾಬಾನ ಮಕ್ಕಳು ಪ್ರಜಾಪಿತ ಬ್ರಹ್ಮನಿಗೂ ಸಹ ಮಕ್ಕಳಾದಿರಿ. ಇವರು ನಿಮ್ಮ ಬೇಹದ್ದಿನ ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ. ಇಂತಹ ತಂದೆಯು ಹೇಳುತ್ತಾರೆ - ಮಕ್ಕಳೇ ನಾನು ನಿಮ್ಮನ್ನು ಪತಿತರನ್ನಾಗಿ ಮಾಡುವುದಿಲ್ಲ, ನಾನು ಪಾವನರನ್ನಾಗಿ ಮಾಡಲು ಬಂದಿದ್ದೇನೆ, ಆದರೆ ನನ್ನ ಮತದ ಮೇಲೆ ನಡೆದಾಗ ಮಾತ್ರ ನಿಮ್ಮನ್ನು ಪಾವನರನಾಗಿ ಮಾಡುತ್ತೇನೆ. ಇಲ್ಲಿ ಎಲ್ಲಾ ಮನುಷ್ಯರು ರಾವಣನ ಮತದ ಮೇಲಿದ್ದಾರೆ. ಎಲ್ಲರಲ್ಲಿ ಪಂಚ ವಿಕಾರಿಗಳಿವೆ ಆದ್ದರಿಂದ ತಂದೆ ಹೇಳುತ್ತಾರೆ - ಮಕ್ಕಳೇ ಈಗ ನಿರ್ವಿಕಾರಿಗಳಾಗಿ, ಶ್ರೀಮತದನುಸಾರ ನಡೆಯಿರಿ. ಆದರೆ ವಿಕಾರಗಳನ್ನು ಬಿಡುವುದಿಲ್ಲವೆಂದರೆ ಸ್ವರ್ಗದ ಮಾಲೀಕರಾಗುವುದಿಲ್ಲ. ಎಲ್ಲರೂ ಅಜಾಮಿಳರಂತಹ ಪಾಪಿಗಳಾಗಿ ಬಿಟ್ಟಿದ್ದಾರೆ. ರಾವಣ ಸಂಪ್ರದಾಯವಾಗಿದೆ, ಇದು ಶೋಕವಾಟಿಕೆಯಾಗಿದೆ, ಎಷ್ಟು ದುಃಖಿಗಳಿದ್ದಾರೆ. ತಂದೆಯೇ ಬಂದು ಪುನಃ ರಾಮ ರಾಜ್ಯವನ್ನಾಗಿ ಮಾಡುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಇದೇ ಸತ್ಯ-ಸತ್ಯ ಯುದ್ಧದ ಮೈದಾನವಾಗಿದೆ. ಗೀತೆಯಲ್ಲಿಯೂ ಸಹ ಭಗವಂತ ಹೇಳುತ್ತಾರೆ - ಕಾಮ ಮಹಾಶತ್ರುವಾಗಿದೆ, ಇದರ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಕೊಳ್ಳಿ. ಆದರೆ ಇದರ ಮೇಲೆ ಗೆಲ್ಲುವುದೇ ಇಲ್ಲ. ಈಗ ತಂದೆಯು ಕುಳಿತು ತಿಳಿಸಿಕೊಡುತ್ತಾರೆ - ಮಕ್ಕಳೇ, ನಿಮ್ಮ ಆತ್ಮವು ಕರ್ಮೇಂದ್ರಿಯಗಳ ಮುಖಾಂತರ ಕೇಳುತ್ತದೆ ನಂತರ ಹೇಳುತ್ತದೆ, ಆತ್ಮವೇ ಪಾತ್ರ ಮಾಡುತ್ತದೆ. ನಾವು ಆತ್ಮರಾಗಿದ್ದೇವೆ, ಈ ಶರೀರವನ್ನು ಧಾರಣೆ ಮಾಡಿ ಪಾತ್ರವನ್ನು ಅಭಿನಯಿಸುತ್ತೇವೆ ಆದರೆ ಮನುಷ್ಯರು ಆತ್ಮಾಭಿಮಾನಿಯಾಗುವ ಬದಲು ದೇಹಾಭಿಮಾನಿಗಳಾಗಿ ಬಿಟ್ಟಿದ್ದಾರೆ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಆತ್ಮಾಭಿಮಾನಿಗಳಾಗಿ. ಸತ್ಯಯುಗದಲ್ಲಿ ಎಲ್ಲರೂ ಆತ್ಮಾಭಿಮಾನಿಗಳಾಗಿರುತ್ತಾರೆ ಆದರೆ ಪರಮಾತ್ಮನನ್ನು ತಿಳಿದುಕೊಂಡಿರುವುದಿಲ್ಲ. ಇಲ್ಲಿ ನೀವು ದೇಹಾಭಿಮಾನಿಗಳಾಗಿದ್ದೀರಿ ಹಾಗೂ ಪರಮಾತ್ಮನನ್ನು ಅರಿತುಕೊಂಡಿಲ್ಲ ಆದ್ದರಿಂದಲೇ ನಿಮ್ಮದು ಇಂತಹ ದುರ್ಗತಿಯಾಗಿದೆ. ದುರ್ಗತಿಯನ್ನೂ ಸಹ ಅರಿತುಕೊಂಡಿಲ್ಲ. ಯಾರ ಹತ್ತಿರ ತುಂಬಾ ಹಣವಿರುತ್ತದೆ, ಅವರು ನಾವು ಸ್ವರ್ಗದಲ್ಲಿದ್ದೇವೆಂದು ತಿಳಿದುಕೊಳ್ಳುತ್ತಾರೆ ಆದರೆ ತಂದೆಯೂ ಹೇಳುತ್ತಾರೆ - ಇವರೆಲ್ಲರೂ ಬಡವರಾಗುತ್ತಾರೆ ಏಕೆಂದರೆ ವಿನಾಶವಾಗುವುದಿದೆ. ವಿನಾಶವಾಗುವುದು ಒಳ್ಳೆಯದಲ್ಲವೇ! ಏಕೆಂದರೆ ನಾವು ಪುನಃ ಮುಕ್ತಿಧಾಮದಲ್ಲಿ ಹೋಗುತ್ತೇವೆ. ಇದಕ್ಕಾಗಿ ಖುಷಿ ಪಡಬೇಕು. ನೀವು ಮಕ್ಕಳು ಸಾಯುವುದಕ್ಕೋಸ್ಕರ ತಯಾರಿ ಮಾಡಿಕೊಳ್ಳುತ್ತಿದ್ದೀರಿ. ಮನುಷ್ಯರಂತು ಸಾಯಲು ತುಂಬಾ ಹೆದರುತ್ತಾರೆ ಆದರೆ ತಂದೆಯು ನಿಮ್ಮನ್ನು ವೈಕುಂಠದಲ್ಲಿ ಕರೆದುಕೊಂಡು ಹೋಗುವುದಕ್ಕೋಸ್ಕರ ಯೋಗ್ಯರನ್ನಾಗಿ ಮಾಡುತ್ತಿದ್ದಾರೆ. ಪತಿತರಂತು ಪತಿತ ಪ್ರಪಂಚದಲ್ಲಿಯೇ ಜನ್ಮ ತೆಗೆದುಕೊಳ್ಳುತ್ತಾ ಇರುತ್ತಾರೆ. ಯಾರು ಸ್ವರ್ಗವಾಸಿಗಳಾಗುವುದಿಲ್ಲ. ಮೂಲ ಮಾತನ್ನು ತಂದೆಯೇ ಹೇಳುತ್ತಾರೆ - ಮಕ್ಕಳೇ ಪವಿತ್ರರಾಗಿ. ಪವಿತ್ರರಾಗದ ಹೊರತು ಪವಿತ್ರ ಪ್ರಪಂಚದಲ್ಲಿ ಹೋಗಲು ಸಾಧ್ಯವಿಲ್ಲ. ಪವಿತ್ರತೆಯ ಮೇಲೆಯೇ ಅಭಲೆಯರ ಮೇಲೆ ಅತ್ಯಾಚಾರವಾಗುತ್ತದೆ. ವಿಷವನ್ನೇ ಅವರು ಅಮೃತವೆಂದು ತಿಳಿಯುತ್ತಾರೆ. ಇಲ್ಲಿ ತಂದೆಯು ಹೇಳುತ್ತಾರೆ - ಜ್ಞಾನಾಮೃತದಿಂದ ನಿಮ್ಮನ್ನು ವಜ್ರ ಸಮಾನರನ್ನಾಗಿ ಮಾಡುತ್ತೇನೆ, ನಂತರ ನೀವು ವಿಷವನ್ನು ಸೇವಿಸಿ ಕವಡೆಯ ಸಮಾನ ಏಕಾಗುತ್ತೀರಿ! ಅರ್ಧಕಲ್ಪ ನೀವು ವಿಷವನ್ನು ಸೇವಿಸಿದಿರಿ, ಈಗ ನನ್ನ ಆಜ್ಞೆಯನ್ನು ಪಾಲಿಸಿ. ಇಲ್ಲವೆಂದರೆ ಧರ್ಮರಾಜನ ಶಿಕ್ಷೆಗಳನ್ನು ಭೋಗಿಸಬೇಕಾಗುವುದು. ಲೌಕಿಕ ತಂದೆಯೂ ಸಹ ಹೇಳುತ್ತಾರೆ - ಮಕ್ಕಳೇ ಕುಲಕ್ಕೆ ಕಳಂಕಿತವಾಗುವಂತಹ ಯಾವುದೇ ಕರ್ಮವನ್ನು ಮಾಡಬೇಡಿ. ಬೇಹದ್ದಿನ ತಂದೆಯು ಹೇಳುತ್ತಾರೆ- ಶ್ರೀಮತದನುಸಾರ ನಡೆಯಿರಿ, ಪವಿತ್ರರಾಗಿ. ಒಂದುವೇಳೆ ಕಾಮ ಚಿತೆಯ ಮೇಲೆ ಕುಳಿತು ನಿಮ್ಮ ಮುಖವು ಕಪ್ಪಾಯಿತೆಂದರೆ ನೀವು ಇನ್ನೂ ಕಪ್ಪಾಗಿಬಿಡುತ್ತೀರಿ. ಈಗ ನಿಮ್ಮನ್ನು ನಾನು ಜ್ಞಾನ ಚಿತೆಯ ಮೇಲೆ ಕೂರಿಸಿ ಸುಂದರರನ್ನಾಗಿ ಮಾಡುತ್ತೇನೆ. ಕಾಮ ಚಿತೆಯ ಮೇಲೆ ಕುಳಿತುಕೊಳ್ಳುತ್ತೀರೆಂದರೆ ಸ್ವರ್ಗದ ಮುಖವನ್ನೂ ಸಹ ನೀವು ನೋಡಲು ಸಾಧ್ಯವಿಲ್ಲ. ಆದ್ದರಿಂದ ತಂದೆಯು ಹೇಳುತ್ತಾರೆ - ಈಗ ಶ್ರೀಮತದ ಮೇಲೆ ನಡೆಯಿರಿ. ತಂದೆಯಂತು ಮಕ್ಕಳೊಂದಿಗೇನೇ ಮಾತನಾಡುತ್ತಾರಲ್ಲವೇ. ಮಕ್ಕಳೇ ತಿಳಿದುಕೊಂಡಿದ್ದಾರೆ - ತಂದೆಯು ನಮಗೆ ಸ್ವರ್ಗದ ಆಸ್ತಿಯನ್ನು ಕೊಡಲು ಬಂದಿದ್ದಾರೆ. ಕಲಿಯುಗವು ಈಗ ಪೂರ್ಣ ಆಗುವುದಿದೆ. ಯಾರು ತಂದೆಯ ಶ್ರೀಮತದನುಸಾರ ನಡೆಯುತ್ತಾರೆ, ಅವರದೇ ಸದ್ಗತಿಯಾಗುವುದು. ಪವಿತ್ರರಾಗುವುದಿಲ್ಲವೆಂದರೆ ಶಿಕ್ಷೆಯನ್ನು ಭೋಗಿಸಿ ತಮ್ಮ ಧರ್ಮದಲ್ಲಿ ಹೋಗಿ ಬಿಡುತ್ತಾರೆ. ಭಾರತವಾಸಿಗಳೇ ಸ್ವರ್ಗವಾಸಿಗಳಾಗಿದ್ದರು. ಈಗ ಪತಿತರಾಗಿ ಬಿಟ್ಟಿದ್ದಾರೆ. ಅವರಿಗೆ ಸ್ವರ್ಗವು ಗೊತ್ತೇ ಇಲ್ಲ. ಆದ್ದರಿಂದ ತಂದೆ ಹೇಳುತ್ತಾರೆ - ನೀವು ನನ್ನ ಮತದ ಮೇಲೆ ನಡೆಯದೆ ಅನ್ಯರ ಮತದ ಮೇಲೆ ನಡೆದು ವಿಕಾರದಲ್ಲಿ ಹೋದರೆ ನೀವು ಸತ್ತ ಹಾಗೆ, ನಂತರ ಭಲೆ ಅಂತ್ಯದಲ್ಲಿ ಸ್ವರ್ಗದಲ್ಲಿ ಬರುತ್ತೀರಿ, ಆದರೆ ತುಂಬಾ ಕಡಿಮೆ ಪದವಿಯನ್ನು ಪಡೆಯುತ್ತೀರಿ. ಈಗ ಯಾರು ಸಾಹುಕಾರರಿದ್ದಾರೆ, ಅವರು ಬಡವರಾಗುತ್ತಾರೆ. ಇಲ್ಲಿ ಯಾರು ಬಡವರಿದ್ದಾರೆ, ಅವರೇ ಸಾಹುಕಾರರಾಗುತ್ತಾರೆ. ತಂದೆಯು ಬಡವರ ಬಂಧು ಆಗಿದ್ದಾರೆ. ಎಲ್ಲಾ ಆಧಾರವೂ ಪವಿತ್ರತೆಯ ಮೇಲಿದೆ. ತಂದೆಯ ಜೊತೆ ಯೋಗವನ್ನು ಜೋಡಿಸುವುದರಿಂದ ನೀವು ಪಾವನರಾಗುತ್ತೀರಿ. ತಂದೆಯು ಮಕ್ಕಳಿಗೆ ತಿಳಿಸಿಕೊಡುತ್ತಾರೆ - ಮಕ್ಕಳೇ, ನಾನು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ. ನಾನು ಮನೆ-ಮಠವನ್ನು ಬಿಡಿಸುವುದಿಲ್ಲ. ಭಲೆ ಮನೆಯಲ್ಲೇ ಇರಿ, ಆದರೆ ವಿಕಾರದಲ್ಲಿ ಹೋಗಬೇಡಿ ಮತ್ತು ಯಾವುದೇ ದೇಹಾಧಾರಿಯನ್ನು ನೆನಪು ಮಾಡಬೇಡಿ. ಈ ಸಮಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ. ಸತ್ಯಯುಗದಲ್ಲಿ ಪಾವನ ದೇವತೆಗಳಾಗಿದ್ದರು. ಈ ಸಮಯದಲ್ಲಿ ಅವರು ಪತಿತರಾಗಿ ಬಿಟ್ಟಿದ್ದಾರೆ. ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಈಗ ಅಂತಿಮ ಜನ್ಮವಾಗಿದೆ.

ನೀವೆಲ್ಲರೂ ಪಾರ್ವತಿಯರಾಗಿದ್ದೀರಿ, ನಿಮಗೆ ಅಮರನಾಥ ತಂದೆಯು ಈಗ ಅಮರಪುರಿಯ ಮಾಲೀಕರನ್ನಾಗಿ ಮಾಡಲು ಅಮರ ಕಥೆಯನ್ನು ತಿಳಿಸುತ್ತಿದ್ದಾರೆ. ಈಗ ಅಮರನಾಥ ತಂದೆಯನ್ನು ನೆನಪು ಮಾಡಿ. ನೆನಪಿನಿಂದಲೇ ನಿಮ್ಮ ವಿಕರ್ಮವು ವಿನಾಶವಾಗುತ್ತದೆ. ಬಾಕಿ ಶಿವ ಅಥವಾ ಶಂಕರ ಹಾಗೂ ಪಾರ್ವತಿ ಯಾವುದೇ ಪರ್ವತಗಳ ಮೇಲೆ ಹೋಗಿ ಕುಳಿತಿಲ್ಲ. ಇವೆಲ್ಲವೂ ಭಕ್ತಿ ಮಾರ್ಗದ ಚಿಹ್ನೆಗಳಾಗಿವೆ. ಅರ್ಧಕಲ್ಪ ನೀವು ತುಂಬಾ ಪೆಟ್ಟನ್ನು ತಿಂದಿದ್ದೀರಿ, ಈಗ ತಂದೆಯು ಬಂದು ಹೇಳುತ್ತಾರೆ - ಮಕ್ಕಳೇ ನಾನು ನಿಮ್ಮನ್ನು ಸ್ವರ್ಗದಲ್ಲಿ ಕರೆದುಕೊಂಡು ಹೋಗುತ್ತೇನೆ. ಸತ್ಯಯುಗದಲ್ಲಿ ಸುಖವೇ ಸುಖವಿರುತ್ತದೆ. ಅಲ್ಲಿ ಪೆಟ್ಟನ್ನು ತಿನ್ನುವುದಿಲ್ಲ, ಬೀಳುವುದೂ ಇಲ್ಲ. ಮುಖ್ಯ ಮಾತು ಪವಿತ್ರರಾಗುವುದಾಗಿದೆ. ಇಲ್ಲಿ ಯಾವಾಗ ತುಂಬಾ ಅತ್ಯಾಚಾರಗಳನ್ನು ಮಾಡುತ್ತಾರೆ, ಆಗ ಪಾಪದ ಕೊಡವು ತುಂಬುತ್ತದೆ ಮತ್ತು ವಿನಾಶವಾಗುತ್ತದೆ. ಕೇವಲ ಈಗ ಒಂದು ಜನ್ಮದಲ್ಲಿ ಪವಿತ್ರರಾಗುವುದರಿಂದ ಪವಿತ್ರ ಪ್ರಪಂಚದ ಮಾಲೀಕರಾಗುತ್ತೀರಿ. ಈಗ ಯಾರು ಶ್ರೀಮತದ ಅನುಸಾರ ನಡೆಯುತ್ತಾರೆ ಅವರೇ ಮಾಲೀಕರಾಗುತ್ತಾರೆ. ಒಂದುವೇಳೆ ಕಲ್ಪದ ಹಿಂದೆ ಶ್ರೀಮತದ ಅನುಸಾರ ನಡೆದಿಲ್ಲವೆಂದರೆ ಈಗಲೂ ನಡೆಯುವುದಿಲ್ಲ, ಪದವಿಯನ್ನು ಪಡೆಯುವುದಿಲ್ಲ. ನೀವು ಒಬ್ಬ ತಂದೆಯ ಮಕ್ಕಳಾಗಿದ್ದೀರಿ ಆದ್ದರಿಂದ ನೀವು ಪರಸ್ಪರ ಸಹೋದರ-ಸಹೋದರಿಯಾಗಿದ್ದೀರಿ. ಆದರೆ ತಂದೆಯ ಮಕ್ಕಳಾಗಿ ಒಂದುವೇಳೆ ಬೀಳುತ್ತೀರೆಂದರೆ ಮತ್ತಷ್ಟು ರಸಾತಳದಲ್ಲಿ ಬೀಳುತ್ತೀರಿ, ಇನ್ನೂ ಪಾಪಾತ್ಮರಾಗಿ ಬಿಡುತ್ತೀರಿ. ಇದು ಈಶ್ವರೀಯ ಸರ್ಕಾರವಾಗಿದೆ. ಒಂದುವೇಳೆ ನನ್ನ ಮತದ ಅನುಸಾರ ಪವಿತ್ರರಾಗುವುದಿಲ್ಲವೆಂದರೆ ಧರ್ಮರಾಜನ ಮುಖಾಂತರ ತುಂಬಾ ಕಠಿಣ ಶಿಕ್ಷೆಯನ್ನು ಭೋಗಿಸಬೇಕಾಗುವುದು. ಜನ್ಮ-ಜನ್ಮಾಂತರಗಳಲ್ಲಿ ಯಾವ ಪಾಪವನ್ನು ಮಾಡಿದ್ದೇವೆ, ಅದೆಲ್ಲದರ ಶಿಕ್ಷೆಯನ್ನು ಭೋಗಿಸಿ ಲೆಕ್ಕಾಚಾರವನ್ನು ಸಮಾಪ್ತಿ ಮಾಡಬೇಕಾಗುವುದು. ಯೋಗಬಲದಿಂದ ವಿಕರ್ಮಗಳನ್ನು ಭಸ್ಮ ಮಾಡಬೇಕಾಗುವುದು ಅಥವಾ ತುಂಬಾ ಕಠಿಣ ಶಿಕ್ಷೆಯನ್ನಾದರೂ ಭೋಗಿಸಲೇ ಬೇಕಾಗುವುದು. ಎಷ್ಟೊಂದು ಜನ ಬ್ರಹ್ಮಾ ಕುಮಾರ-ಕುಮಾರಿಯರಿದ್ದಾರೆ, ಎಲ್ಲರೂ ಪವಿತ್ರರಾಗಿರುತ್ತಾರೆ, ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ. ಈಗ ನೀವು ಶಿವ ಶಕ್ತಿ ಸೇನೆ, ಗೋಪ-ಗೋಪಿಕೆಯರಾಗಿದ್ದೀರಿ. ಸ್ವಯಂ ಭಗವಂತನೇ ನಿಮಗೆ ಓದಿಸುತ್ತಾರೆ. ಲಕ್ಷ್ಮೀ-ನಾರಾಯಣರನ್ನು ಭಗವಾನ್-ಭಗವತಿ ಎಂದು ಹೇಳುತ್ತಾರೆಂದಾಗ ಅವರಿಗೆ ಅವಶ್ಯವಾಗಿ ಭಗವಂತನೇ ಆಸ್ತಿಯನ್ನು ಕೊಟ್ಟಿದ್ದಾರೆ. ಭಗವಂತನೇ ಬಂದು ನಿಮ್ಮನ್ನು ದೇವತೆಗಳನ್ನಾಗಿ ಮಾಡುತ್ತಾರೆ. ಸತ್ಯಯುಗದಲ್ಲಿ ಯಥಾ ರಾಜಾ-ರಾಣಿ ತಥಾ ಪ್ರಜಾ ಆಗಿರುತ್ತಾರೆ. ಎಲ್ಲರೂ ಶ್ರೇಷ್ಠಾಚಾರಿಗಳಾಗಿದ್ದರು. ಈಗ ರಾವಣ ರಾಜ್ಯವಾಗಿದೆ. ಒಂದುವೇಳೆ ರಾಮರಾಜ್ಯದಲ್ಲಿ ಹೋಗಬೇಕೆಂದರೆ ಪವಿತ್ರರಾಗಿ ಮತ್ತು ರಾಮನ (ಪರಮಾತ್ಮನ) ಮತದ ಮೇಲೆ ನಡೆಯಿರಿ. ರಾವಣನ ಮತದಿಂದ ನಿಮ್ಮ ದುರ್ಗತಿಯೇ ಆಗುತ್ತದೆ. ಗಾಯನವೂ ಇದೆ- ಕೆಲವರದು ಮಣ್ಣಿನಲ್ಲಿ ಹೋಗುತ್ತದೆ, ಚಿನ್ನ ಮುಂತಾದವುದನ್ನು ಜಮೀನಿನಲ್ಲಿ ಗೋಡೆಗಳಲ್ಲಿ ಮುಚ್ಚಿಡುತ್ತಾರೆ. ಒಂದುವೇಳೆ ಅವರು ಆಕಸ್ಮಿಕವಾಗಿ ಸಾಯುತ್ತಾರೆಂದರೆ ಎಲ್ಲವೂ ಅಲ್ಲಿಯೇ ಉಳಿದುಬಿಡುತ್ತದೆ. ವಿನಾಶವಂತು ಆಗಲೇ ಬೇಕಾಗಿದೆ. ಭೂಕಂಪ ಮುಂತಾದವುಗಳು ಆಗುವುದರಿಂದ ಅನೇಕರು ಕಳ್ಳರು ಆಗಿಬಿಡುತ್ತಾರೆ. ಈಗ ಧನಿಕ ತಂದೆಯು ಬಂದಿದ್ದಾರೆ. ನಿಮ್ಮನ್ನು ತನ್ನವರನ್ನಾಗಿ ಮಾಡಿ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಇಂದಿನ ದಿನಗಳಲ್ಲಿ ವಾನಪ್ರಸ್ಥ ಅವಸ್ಥೆಯಲ್ಲಿಯೂ ಸಹ ವಿಕಾರವಿಲ್ಲದೇ ಇರುವುದಿಲ್ಲ, ಸಂಪೂರ್ಣವಾಗಿ ತಮೋಪ್ರಧಾನರಾಗಿಬಿಟ್ಟಿದ್ದಾರೆ. ತಂದೆಯನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ. ತಂದೆಯೂ ಹೇಳುತ್ತಾರೆ- ಮಕ್ಕಳೇ, ನಾನು ಪವಿತ್ರರನ್ನಾಗಿ ಮಾಡಲು ಬಂದಿದ್ದೇನೆ. ಒಂದುವೇಳೆ ವಿಕಾರದಲ್ಲಿ ಹೋಗುತ್ತೀರೆಂದರೆ ತುಂಬಾ ಕಠಿಣ ಶಿಕ್ಷೆಯನ್ನು ಅನುಭವಿಸಬೇಕಾಗುವುದು. ನಾನು ಪವಿತ್ರರನ್ನಾಗಿ ಮಾಡಿ ಪವಿತ್ರ ಪ್ರಪಂಚದ ಸ್ಥಾಪನೆ ಮಾಡಲು ಬಂದಿದ್ದೇನೆ. ನಂತರ ನೀವು ಪತಿತರಾಗಿ ವಿಘ್ನಗಳನ್ನು ಹಾಕುತ್ತೀರಾ! ಸ್ವರ್ಗದ ರಚನೆ ಮಾಡುವುದರಲ್ಲಿ ತೊಂದರೆಯನ್ನು ಕೊಡುತ್ತೀರೆಂದರೆ ತುಂಬಾ ಕಠಿಣ ಶಿಕ್ಷೆಯನ್ನು ಅನುಭವಿಸ ಬೇಕಾಗುವುದು. ನಾನು ನಿಮ್ಮನ್ನು ಸ್ವರ್ಗವಾಸಿಗಳನ್ನಾಗಿ ಮಾಡಲು ಬಂದಿದ್ದೇನೆ. ಒಂದುವೇಳೆ ವಿಕಾರವನ್ನು ಬಿಡುವುದಿಲ್ಲವೆಂದರೆ ಧರ್ಮರಾಜನ ಮುಖಾಂತರ ತುಂಬಾ ಏಟುಗಳನ್ನು ತಿನ್ನುತ್ತೀರಿ. ತುಂಬಾ ಹಿಂಸೆಯನ್ನು ಅನುಭವಿಸಬೇಕಾಗುವುದು. ಇದು ಇಂದ್ರ ಸಭೆಯಾಗಿದೆ. ಒಂದು ಕಥೆಯೂ ಇದೆ - ಎಲ್ಲಿ ಜ್ಞಾನ ದೇವತೆಗಳು ಇರುತ್ತಿದ್ದರೋ ಅಲ್ಲಿ ಯಾರನ್ನಾದರೂ ಪತಿತರನ್ನು ಕರೆದುಕೊಂಡು ಬಂದರೆ ಅವರ ವೈಬ್ರೇಷನ್ ಬರುತ್ತಿತ್ತು. ಅದೇ ರೀತಿಯಾಗಿ ಈ ಸಭೆಯಲ್ಲಿ ಯಾವುದೇ ಪತಿತರನ್ನು ಕೂರಿಸಲಾಗುವುದಿಲ್ಲ. ಪವಿತ್ರತೆಯ ಪ್ರತಿಜ್ಞೆಯನ್ನು ಮಾಡದ ಹೊರತು ಅವರನ್ನು ಕೂರಿಸಬಾರದು, ಇಲ್ಲವೆಂದರೆ ಕರೆದುಕೊಂಡು ಬರುವವರ ಮೇಲೂ ಸಹ ಪಾಪವಾಗುತ್ತದೆ. ತಂದೆಯು ತಿಳಿದುಕೊಳ್ಳುತ್ತಾರೆ - ಪುನಃ ಕರೆದುಕೊಂಡು ಬರುತ್ತಾರೆಂದರೆ ಅವರಿಗೆ ಶಿಕ್ಷಣವನ್ನು ಕೊಡಲಾಗುತ್ತದೆ. ಶಿವ ಬಾಬಾರವರನ್ನು ನೆನಪು ಮಾಡುವುದರಿಂದ ಆತ್ಮವೂ ಶುದ್ಧವಾಗುತ್ತದೆ. ವಾಯುಮಂಡಲವು ಶಾಂತಿಯಿಂದ ಕೂಡಿರುತ್ತದೆ. ತಂದೆಯೇ ಕುಳಿತು ಪರಿಚಯವನ್ನು ಕೊಡುತ್ತಾರೆ - ನಾನು ನಿಮ್ಮ ತಂದೆ ಆಗಿದ್ದೇನೆ. 5000 ಸಾವಿರ ವರ್ಷಗಳ ಹಿಂದಿನ ತರಹ ನಿಮ್ಮನ್ನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡಲು ಬಂದಿದ್ದೇನೆ. ಬೇಹದ್ದಿನ ತಂದೆಯಿಂದ ಬೇಹದ್ದಿನ ಸುಖದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ತಂದೆ ಆತ್ಮೀಯ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಯೋಗಬಲದಿಂದ ವಿಕರ್ಮಗಳ ಎಲ್ಲಾ ಲೆಕ್ಕಾಚಾರವನ್ನು ಸಮಾಪ್ತಿ ಮಾಡಿ ಆತ್ಮನನ್ನು ಶುದ್ಧ ಹಾಗೂ ವಾಯುಮಂಡಲವನ್ನು ಶಾಂತವನ್ನಾಗಿ ಮಾಡಬೇಕಾಗಿದೆ.

2. ತಂದೆಯ ಶ್ರೀಮತದಂತೆ ಸಂಪೂರ್ಣ ಪಾವನರಾಗುವಂತಹ ಪ್ರತಿಜ್ಞೆ ಮಾಡಬೇಕಾಗಿದೆ. ವಿಕಾರಗಳಿಗೆ ವಶರಾಗಿ ಸ್ವರ್ಗದ ರಚನೆಯಲ್ಲಿ ವಿಘ್ನರೂಪರಾಗಬಾರದಾಗಿದೆ.

ವರದಾನ:
ಮನಸ್ಸು-ಬುದ್ಧಿಯ ಸ್ವಚ್ಛತೆಯ ಮೂಲಕ ಯಥಾರ್ಥ ನಿರ್ಣಯ ಮಾಡುವಂತಹ ಸಫಲತಾ ಸಂಪನ್ನ ಭವ.

ಯಾವುದೇ ಕಾರ್ಯದಲ್ಲಿ ಸಫಲತೆಯನ್ನು ಆಗ ಪ್ರಾಪ್ತಿಯಾಗುತ್ತದೆ, ಯಾವಾಗ ಸಮಯದಲ್ಲಿ ಬುದ್ಧಿಯು ಯಥಾರ್ಥ ನಿರ್ಣಯವನ್ನು ಕೊಡುತ್ತದೆ. ಆದರೆ ಯಾವಾಗ ಮನಸ್ಸು-ಬುದ್ಧಿಯು ಸ್ವಚ್ಛವಾಗಿರುವುದೋ, ಯಾವುದೋ ಕೊಳಕಿರುವುದಿಲ್ಲವೋ, ಆಗಲೇ ನಿರ್ಣಯ ಶಕ್ತಿಯು ಕೆಲಸ ಮಾಡುತ್ತದೆ. ಆದ್ದರಿಂದ ಯೋಗಾಗ್ನಿಯ ಮೂಲಕ ವ್ಯರ್ಥವನ್ನು ಸಮಾಪ್ತಿ ಮಾಡುತ್ತಾ ಬುದ್ಧಿಯನ್ನು ಸ್ವಚ್ಛಗೊಳಿಸಿರಿ. ಅದರಲ್ಲಿ ಯಾವುದೇ ಪ್ರಕಾರದ ಬಲಹೀನತೆಯಿದ್ದರೆ ಅದು ಕೊಳಕಾಗಿದೆ. ಸ್ವಲ್ಪ ವ್ಯರ್ಥ ಸಂಕಲ್ಪವಿದ್ದರೂ ಕೊಳಕಿದೆ, ಯಾವಾಗ ಇದೆಲ್ಲವೂ ಸಮಾಪ್ತಿಯಾಗುವುದೋ ಅಗಲೇ ನಿಶ್ಚಿಂತವಾಗಿರುತ್ತೀರಿ ಹಾಗೂ ಸ್ವಚ್ಛ ಬುದ್ಧಿಯಿರುವುದರಿಂದ ಪ್ರತಿಯೊಂದು ಕಾರ್ಯದಲ್ಲಿ ಸಫಲತೆಯು ಪ್ರಾಪ್ತಿಯಾಗುವುದು.

ಸ್ಲೋಗನ್:
ಸದಾ ಶ್ರೇಷ್ಠ ಹಾಗೂ ಶುದ್ಧ ಸಂಕಲ್ಪವು ಇಮರ್ಜ್ ಆಗಿದ್ದರೆ ವ್ಯರ್ಥವು ಸ್ವತಹವಾಗಿಯೇ ಮರ್ಜ್ ಆಗಿ ಬಿಡುತ್ತದೆ.

ಮಾತೇಶ್ವರಿಯವರ ಮಧುರ ಮಹಾವಾಕ್ಯಗಳು:

ಈ ಕಲಿಯುಗೀ ಪ್ರಪಂಚವನ್ನು ಸಾರವಿಲ್ಲದ ಪ್ರಪಂಚವೆಂದು ಏಕೆ ಹೇಳುತ್ತಾರೆ? ಏಕೆಂದರೆ ಈ ಪ್ರಪಂಚದಲ್ಲಿ ಯಾವುದೇ ಸಾರ ಅಥವಾ ಶಕ್ತಿಯಿಲ್ಲ ಅಂದರೆ ಯಾವುದೇ ವಸ್ತುವಿನಲ್ಲಿಯೂ ಶಕ್ತಿ ಅಂದರೆ ಸುಖ, ಶಾಂತಿ, ಪವಿತ್ರತೆಯಿಲ್ಲ. ಈ ಸೃಷ್ಟಿಯಲ್ಲಿ ಯಾವುದೋ ಸಮಯದಲ್ಲಿ ಸುಖ, ಶಾಂತಿ, ಪವಿತ್ರತೆಯಿತ್ತು, ಅದು ಈಗಿಲ್ಲ ಏಕೆಂದರೆ ಈಗ ಪ್ರತಿಯೊಬ್ಬರಲ್ಲಿಯೂ 5 ಭೂತಗಳ ಪ್ರವೇಶತೆಯಿದೆ ಆದ್ದರಿಂದಲೇ ಈ ಸೃಷ್ಟಿಯನ್ನು ಭಯದ ಸಾಗರ ಅಥವಾ ಕರ್ಮ ಬಂಧನಗಳ ಸಾಗರವೆಂದು ಹೇಳುತ್ತಾರೆ. ಇದರಲ್ಲಿ ಪ್ರತಿಯೊಬ್ಬರೂ ದುಃಖಿಯಾಗಿ ಪರಮಾತ್ಮನನ್ನು ಕರೆಯುತ್ತಿದ್ದಾರೆ- ಪರಮಾತ್ಮನೇ, ನಮ್ಮನ್ನು ಭವಸಾಗರದಿಂದ ಬಿಡಿಸು ಎಂದು ಕರೆಯುತ್ತಿದ್ದಾರೆ. ಇದರಿಂದ ಸಿದ್ಧವಾಗುತ್ತದೆ - ಅವಶ್ಯವಾಗಿ ಯಾವುದೇ ಅಭಯ ಅರ್ಥಾತ್ ನಿರ್ಭಯತೆಯ ಪ್ರಪಂಚವಿದೆ, ಅಲ್ಲಿಗೆ ಹೋಗಲು ಎಲ್ಲರೂ ಬಯಸುತ್ತಾರೆ ಆದ್ದರಿಂದ ಈ ಪ್ರಪಂಚವನ್ನು ಪಾಪದ ಸಾಗರವೆಂದು ಹೇಳುತ್ತಾರೆ. ಇಂತಹ ಪ್ರಪಂಚದಿಂದ ಬಿಡಿಸಿಕೊಂಡು ಪುಣ್ಯಾತ್ಮರಿರುವ ಪ್ರಪಂಚದಲ್ಲಿ ಹೋಗುವುದಕ್ಕಾಗಿ ಬಯಸುತ್ತಾರೆ ಹಾಗಾದರೆ ಪ್ರಪಂಚಗಳು ಎರಡಿವೆ. ಒಂದು ಸತ್ಯಯುಗಿ ಸಾರವಿರುವ ಪ್ರಪಂಚ, ಇನ್ನೊಂದು - ಕಲಿಯುಗಿ ನಿಸ್ಸಾರವಾದ ಪ್ರಪಂಚ. ಎರಡೂ ಪ್ರಪಂಚಗಳು ಇದೇ ಸೃಷ್ಟಿಯಲ್ಲಿ ಆಗುತ್ತದೆ.

ಮನುಷ್ಯರು ಹೇಳುತ್ತಾರೆ - ಹೇ ಪ್ರಭು, ನಮ್ಮನ್ನು ಈ ಭವ ಸಾಗರದಿಂದ ಆ ಕಡೆ ಕರೆದುಕೊಂಡು ನಡೆಯಿರಿ, ಆ ಕಡೆ ಅಂದರೆ ಏನು? ಜನರು ತಿಳಿಯುತ್ತಾರೆ ಆ ಕಡೆ ಎಂದರೆ ಜನನ-ಮರಣದ ಚಕ್ರದಲ್ಲಿಯೇ ಬರಬಾರದು ಅಂದರೆ ಮುಕ್ತರಾಗಿ ಹೋಗಿ ಬಿಡಬೇಕು. ಈಗ ಇದಂತು ಮನುಷ್ಯರು ಹೇಳುವುದಾಯಿತು ಆದರೆ ಪರಮಾತ್ಮನು ಹೇಳುವರು - ಮಕ್ಕಳೇ, ಸತ್ಯವಾಗಿ ಎಲ್ಲಿ ಸುಖ-ಶಾಂತಿಯಿದೆ, ದುಃಖ-ಅಶಾಂತಿಯಿಂದ ದೂರವಿದೆಯೋ ಆ ಪ್ರಪಂಚಕ್ಕೆ ನಾನು ನಿಮ್ಮನ್ನು ಕರೆದುಕೊಂಡು ಹೋಗುವೆನು. ಯಾವಾಗ ನೀವು ಸುಖವನ್ನೇ ಬಯಸುತ್ತೀರೆಂದರೆ, ಅವಶ್ಯವಾಗಿ ಅದು ಈ ಜೀವನದಲ್ಲಾಗಬೇಕು. ಈಗ ಅವರಂತು ಸತ್ಯಯುಗಿ ವೈಕುಂಠದ ದೇವತೆಗಳ ಪ್ರಪಂಚವಿತ್ತು, ಅಲ್ಲಿ ಸರ್ವ ಸುಖದ ಜೀವನವಿತ್ತು, ಆ ದೇವತೆಗಳನ್ನು ಅಮರರೆಂದು ಹೇಳುತ್ತಿದ್ದೆವು. ಈಗ ಅಮರತ್ವದ ಅರ್ಥವೇ ಇಲ್ಲದಂತಾಗಿದೆ, ದೇವತೆಗಳ ಆಯಸ್ಸು ಧೀರ್ಘಾಯಸ್ಸಿತ್ತು, ಅವರೆಂದಿಗೂ ಸಾಯುತ್ತಿರಲಿಲ್ಲ ಎಂದಲ್ಲ, ಈಗ ಈ ರೀತಿ ಹೇಳುವುದು ತಪ್ಪಾಗುತ್ತದೆ ಏಕೆಂದರೆ ಆ ರೀತಿಯಂತು ಇಲ್ಲ. ಅವರ ಆಯಸ್ಸೇನೂ ಸತ್ಯ-ತ್ರೇತಾದವರೆಗೂ ನಡೆಯಲಿಲ್ಲ ಆದರೆ ದೇವಿ-ದೇವತೆಗಳ ಜನ್ಮವು ಸತ್ಯಯುಗ-ತ್ರೇತಾದಲ್ಲಿ ಬಹಳ ಆಯಸ್ಸಿತ್ತು, 21 ಜನ್ಮಗಳಂತು ಅವರು ಬಹಳ ಚೆನ್ನಾಗಿ ರಾಜ್ಯಾಡಳಿತ ನಡೆಸಿದರು, ಮತ್ತೆ ನಂತರ 63 ಜನ್ಮಗಳು ದ್ವಾಪರದಿಂದ ಕಲಿಯುಗದ ಅಂತ್ಯದವರೆಗೂ ಅಂದರೆ ಅವರ ಜನ್ಮವು ಏರುವ ಕಲೆಯಲ್ಲಿ 21 ಜನ್ಮಗಳು ಮತ್ತು ಇಳಿಯುವ ಕಲೆಯಲ್ಲಿ 63 ಜನ್ಮಗಳಾಯಿತು, ಮನುಷ್ಯನ ಒಟ್ಟು ಜನ್ಮಗಳು 84 ಜನ್ಮಗಳನ್ನು ಪಡೆದರು. ಆದರೆ ಮನುಷ್ಯರೇನು ತಿಳಿಯುತ್ತಾರೆ- ಮನುಷ್ಯನು 84 ಲಕ್ಷ ಯೋನಿಗಳಲ್ಲಿ ಭೋಗಿಸುವನು ಎಂದು ಹೇಳುವುದು ತಪ್ಪು. ಒಂದುವೇಳೆ ಮನುಷ್ಯನು ತನ್ನ ಯೋನಿಯಲ್ಲಿ ಸುಖ-ದುಃಖವೆರಡೂ ಪಾತ್ರವನ್ನು ಅನುಭವಿಸಬಹುದು ಅಂದಾಗ ಪ್ರಾಣಿಗಳ ಯೋನಿಯಲ್ಲಿ ಅನುಭವಿಸುವ ಅವಶ್ಯಕತೆಯಾದರೂ ಏನಿದೆ! ಇಡೀ ಸೃಷ್ಟಿಯಲ್ಲಿ ಪಶು-ಪ್ರಾಣಿ, ಪಕ್ಷಿ ಇತ್ಯಾದಿಗಳೆಲ್ಲವೂ ಸೇರಿ 84 ಲಕ್ಷ ಯೋನಿಗಳಾಗಲು ಸಾಧ್ಯವಿದೆ ಏಕೆಂದರೆ ಅನೇಕ ಪ್ರಕಾರದ ಉತ್ಪತ್ತಿಯಿದೆ. ಆದರೆ ಮನುಷ್ಯ, ಮನುಷ್ಯನ ಯೋನಿಯಲಿಯೇ ತನ್ನ ಪಾಪ-ಪುಣ್ಯವನ್ನು ಭೋಗಿಸುತ್ತಿದ್ದಾನೆ ಮತ್ತು ಪ್ರಾಣಿಯು ತನ್ನ ಯೋನಿಯಲ್ಲಿ ಭೋಗಿಸುತ್ತಿದೆ. ಮನುಷ್ಯನು ಪ್ರಾಣಿಯ ಯೋನಿಯನ್ನು ಪಡೆಯುವುದಿಲ್ಲ ಮತ್ತು ಪ್ರಾಣಿಯು ಮನುಷ್ಯನ ಯೋನಿಯಲ್ಲಿ ಬರುವುದಿಲ್ಲ. ಮನುಷ್ಯನು ತನ್ನ ಯೋನಿಯಲ್ಲಿಯೇ ಅನುಭವಿಸಬೇಕಾಗುತ್ತದೆ ಆದ್ದರಿಂದ ಅವನಿಗೆ ಮನುಷ್ಯ ಜೀವನದಲ್ಲಿಯೇ ಸುಖ-ದುಃಖದ ಅನುಭೂತಿಯಾಗುತ್ತದೆ. ಅದೇ ರೀತಿಯಲ್ಲಿ ಪ್ರಾಣಿಗಳೂ ಸಹ ತನ್ನ ಯೋನಿಯಲ್ಲಿ ಸುಖ-ದುಃಖವನ್ನು ಅನುಭವಿಸಬೇಕಾಗುವುದು. ಆದರೆ ಅದರಲ್ಲಿ ಈ ಬುದ್ಧಿಯಿರುವುದಿಲ್ಲ - ಯಾವ ಕರ್ಮದಿಂದ ಈ ರೀತಿ ಅನುಭವಿಸುತ್ತಿದ್ದೇವೆ? ಅದು ಅನುಭವಿಸುತ್ತಿರುವುದೂ ಸಹ ಮನುಷ್ಯ ತಿಳಿಯುತ್ತಾರೆ ಏಕೆಂದರೆ ಮನುಷ್ಯನು ಬುದ್ಧಿಜೀವಿ, ಆದರೆ ಈ ರೀತಿಯಲ್ಲ - ಮನುಷ್ಯನು 84 ಲಕ್ಷ ಯೋನಿಗಳಲ್ಲಿ ಅನುಭವಿಸುತ್ತಾನೆ. ಇದಂತು ಮನುಷ್ಯರನ್ನು ಭಯ ಪಡಿಸುವುದಕ್ಕಾಗಿ ಹೇಳಿ ಬಿಡುತ್ತಾರೆ- ಒಂದುವೇಳೆ ತಪ್ಪು ಕರ್ಮವನ್ನು ಮಾಡುತ್ತೀರೆಂದರೆ ಪಶುವಿನ ಯೋನಿಯಲ್ಲಿ ಜನ್ಮವಾಗುವುದು ಎಂದು. ನಾವೂ ಸಹ ಈ ಸಂಗಮದ ಸಮಯದಲ್ಲಿ ನಮ್ಮ ಜೀವನವನ್ನು ಪರಿವರ್ತನೆ ಮಾಡುತ್ತಾ ಪಾಪಾತ್ಮರಿಂದ ಪುಣ್ಯಾತ್ಮರಾಗುತ್ತಿದ್ದೇವೆ. ಒಳ್ಳೆಯದು. ಓಂ ಶಾಂತಿ.