04.06.22         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನೀವು ಜಗದಂಬಾ ಕಾಮಧೇನುವಿನ ಪುತ್ರ ಹಾಗೂ ಪುತ್ರಿಯರಾಗಿದ್ದೀರಿ, ನೀವು ಎಲ್ಲರ ಮನೋಕಾಮನೆಗಳನ್ನು ಪೂರ್ಣ ಮಾಡಬೇಕಾಗಿದೆ, ತಮ್ಮ ಸಹೋದರ-ಸಹೋದರಿಯರಿಗೆ ಸತ್ಯಮಾರ್ಗವನ್ನು ತಿಳಿಸಬೇಕಾಗಿದೆ

ಪ್ರಶ್ನೆ:
ನೀವು ಮಕ್ಕಳಿಗೆ ತಂದೆಯಿಂದ ಯಾವ ಜವಾಬ್ದಾರಿಯು ಸಿಕ್ಕಿದೆ?

ಉತ್ತರ:
ಮಕ್ಕಳೇ, ಬೇಹದ್ದಿನ ತಂದೆಯು ಬೇಹದ್ದಿನ ಸುಖವನ್ನು ಕೊಡಲು ಬಂದಿದ್ದಾರೆ ಎಂದಾಗ ಮನೆ-ಮನೆಯಲ್ಲಿ ಈ ಸಂದೇಶವನ್ನು ಕೊಡುವುದು ನಿಮ್ಮ ಕರ್ತವ್ಯವಾಗಿದೆ. ತಂದೆಯ ಸಹಯೋಗಿಗಳಾಗಿ ಮನೆ-ಮನೆಯನ್ನು ಸ್ವರ್ಗವನ್ನಾಗಿ ಮಾಡಿ. ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವ ಸೇವೆಯನ್ನು ಮಾಡಿ. ತಂದೆಯ ಸಮಾನ ನಿರಹಂಕಾರಿ, ನಿರಾಕಾರಿ ಆಗಿ ಎಲ್ಲರ ಸೇವೆ ಮಾಡಿ. ಇಡೀ ಪ್ರಪಂಚವನ್ನು ರಾವಣ ಶತ್ರುವಿನ ಮುಷ್ಠಿಯಿಂದ ಮುಕ್ತಗೊಳಿಸುವುದು - ಎಲ್ಲದಕ್ಕಿಂತ ದೊಡ್ಡ ಜವಾಬ್ದಾರಿಯು ನೀವು ಮಕ್ಕಳದಾಗಿದೆ.

ಗೀತೆ:
ಮಾತಾ ಓ ಮಾತಾ ನೀನೇ ಎಲ್ಲರ ಭಾಗ್ಯ ವಿಧಾತಾ......

ಓಂ ಶಾಂತಿ.
ಈ ಮಾತೆಯ ಮಹಿಮೆಯು ಭಾರತದಲ್ಲಿಯೇ ಗಾಯನ ಮಾಡಲಾಗಿದೆ. ಅವಶ್ಯವಾಗಿ ಜಗದಾಂಬಾರವರು ಭಾಗ್ಯವಿಧಾತ ಆಗಿದ್ದಾರೆ. ಇವರ ಹೆಸರೇ ಕಾಮಧೇನುವೆಂದು ಇಡಲಾಗಿದೆ ಅರ್ಥಾತ್ ಎಲ್ಲಾ ಕಾಮನೆಗಳನ್ನು ಪೂರ್ಣ ಮಾಡುವವರು. ಈ ಆಸ್ತಿಯು ಅವರಿಗೆ ಎಲ್ಲಿಂದ ಸಿಗುತ್ತದೆ? ಶಿವ ತಂದೆಯ ಮುಖಾಂತರ ಜಗದಂಬಾ ಹಾಗೂ ಜಗತ್ಪಿತಾರವರಿಗೆ ಆಸ್ತಿಯೂ ಸಿಗುತ್ತದೆ. ಮಕ್ಕಳಿಗೆ ನಾವು ಆತ್ಮಗಳಾಗಿದ್ದೇವೆ ಎನ್ನುವ ನಿಶ್ಚಯವಿದೆ. ಆತ್ಮವನ್ನು ತಿಳಿಯಬಹುದು, ನೋಡಲಾಗುವುದಿಲ್ಲ. ಜೀವ ಮತ್ತು ಆತ್ಮಗಳು ಆಗಿದ್ದೀರಿ. ಆತ್ಮ ಅವಿನಾಶಿಯಾಗಿದೆ. ಶರೀರವು ವಿನಾಶಿಯಾಗಿದೆ, ಇದನ್ನು ಕಣ್ಣುಗಳಿಂದ ನೋಡಬಹುದಾಗಿದೆ. ಆತ್ಮನ ಸಾಕ್ಷಾತ್ಕಾರವಾಗುತ್ತದೆ. ವಿವೇಕಾನಂದರಿಗೆ ಆತ್ಮನ ಸಾಕ್ಷಾತ್ಕಾರವಾಯಿತು ಆದರೆ ತಿಳಿಯಲಾಗಲಿಲ್ಲವೆಂದು ಹೇಳುತ್ತಾರೆ. ಮಕ್ಕಳು ತಿಳಿದುಕೊಳ್ಳುತ್ತೀರಿ- ನಾವು ಆತ್ಮನ ಸಾಕ್ಷಾತ್ಕಾರ ಮಾಡುತ್ತೇವೆಂದರೆ ತಂದೆಯದನ್ನೇ ಮಾಡುತ್ತೇವೆ. ಹೇಗೆ ಆತ್ಮವಿದೆ, ಆತ್ಮಗಳ ತಂದೆಯೂ ಅದೇರೀತಿ ಇದ್ದಾರೆ. ಯಾವುದೇ ಅಂತರವಿಲ್ಲ. ಇವರು ತಂದೆಯಾಗಿದ್ದಾರೆ, ಇವರು ಮಗು ಆಗಿದ್ದಾರೆ ಎನ್ನುವುದನ್ನು ಬುದ್ಧಿಯಿಂದ ತಿಳಿಯಲಾಗುತ್ತದೆ. ಎಲ್ಲಾ ಆತ್ಮಗಳು ಆ ತಂದೆಯನ್ನು ನೆನಪು ಮಾಡುತ್ತಾರೆ. ಈ ಕಣ್ಣುಗಳಿಂದ ತಮ್ಮ ಆತ್ಮವನ್ನಾಗಲೀ, ತಂದೆಯ ಆತ್ಮವನ್ನಾಗಲೀ ನೋಡಲು ಸಾಧ್ಯವಿಲ್ಲ. ಅವರು ಪರಮಧಾಮದಲ್ಲಿ ಇರುವಂತಹ ಪರಮ ಆತ್ಮ ಸುಪ್ರೀಂ ಆಗಿದ್ದಾರೆ. ಭಕ್ತಿಮಾರ್ಗದಲ್ಲಿಯೂ ಸಹ ನೌಧಾ ಭಕ್ತಿ ಮಾಡುತ್ತಾರೆಂದರೆ ಅವರಿಗೆ ಸಾಕ್ಷಾತ್ಕಾರವಾಗುತ್ತದೆ. ಅವರು ಯಾರನ್ನು ಪೂಜಿಸುತ್ತಾರೆ ಅವರ ಆತ್ಮವು ಈ ಸಮಯದಲ್ಲಿ ಈ ಶರೀರದಲ್ಲಿ ಇದ್ದಾರೆಂದಲ್ಲ. ಅವರ ಆತ್ಮವು ಪುನರ್ಜನ್ಮದಲ್ಲಿ ಹೋಗಿದೆ. ಭಕ್ತಿ ಮಾರ್ಗದಲ್ಲಿ ಯಾರಾರು, ಯಾವ-ಯಾವ ಭಾವನೆಯಿಂದ ಯಾರನ್ನು ಪೂಜಿಸುತ್ತಾರೆ ಅವರ ಸಾಕ್ಷಾತ್ಕಾರವಾಗುತ್ತದೆ. ಅನೇಕ ಚಿತ್ರಗಳನ್ನು ಮಾಡಿಸಿದ್ದಾರೆ, ಇದನ್ನು ಗೊಂಬೆಗಳ ಪೂಜೆ ಎಂದು ಹೇಳಲಾಗುತ್ತದೆ. ಭಾವನೆಯನ್ನು ಇಟ್ಟುಕೊಳ್ಳುವುದರಿಂದ ಅಲ್ಪಕಾಲದ ಸ್ವಲ್ಪ ಸುಖದ ಪ್ರಾಪ್ತಿಯು ಸಿಗುತ್ತದೆ. ನಿಮ್ಮ ಬೇಹದ್ದಿನ ಸುಖದ ಮಾತೇ ಭಿನ್ನವಾಗಿದೆ. ನೀವು ತಿಳಿದುಕೊಂಡಿದ್ದೀರಿ ನಾವು ಸ್ವರ್ಗದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೇವೆ. ಭಕ್ತಿಯಿಂದ ಯಾರು ಸ್ವರ್ಗದಲ್ಲಿ ಹೋಗುವುದಿಲ್ಲ. ಯಾವಾಗ ಭಕ್ತಿ ಪೂರ್ಣವಾಗುತ್ತದೆ ಅರ್ಥಾತ್ ಪ್ರಪಂಚವು ಹಳೆಯದಾಗುತ್ತದೆ ಆಗಲೇ ಮತ್ತೆ ಕಲಿಯುಗದ ನಂತರ ಸತ್ಯಯುಗ ಹೊಸ ಪ್ರಪಂಚವು ಬರುತ್ತದೆ. ಇದು ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಸನ್ಯಾಸಿಗಳೂ ಹೇಳುತ್ತಾರೆ- ಇಂತಹ ಜ್ಯೋತಿಯು-ಜ್ಯೋತಿಯಲ್ಲಿ ಸಮಾವೇಶವಾಯಿತೆಂದು. ಆದರೆ ಈ ರೀತಿ ಆಗುವುದಿಲ್ಲ. ನಿಮಗೆ ಈಗ ಈಶ್ವರೀಯ ಬುದ್ಧಿಯು ಸಿಕ್ಕಿದೆ, ಇದನ್ನು ಶ್ರೀಮತವೆಂದು ಹೇಳುತ್ತಾರೆ. ಅಕ್ಷರವು ತುಂಬಾ ಚೆನ್ನಾಗಿದೆ- ಶ್ರೀ, ಶ್ರೀ ಭಗವಾನುವಾಚ. ಅವರೇ ಸ್ವರ್ಗದ ಮಾಲೀಕ ಅರ್ಥಾತ್ ನರನಿಂದ ನಾರಾಯಣನನ್ನಾಗಿ ಮಾಡುತ್ತಾರೆ. ನೀವು ಶ್ರೀಮತದಿಂದ ವಿಶ್ವದ ರಾಜ್ಯವನ್ನು ಪಡೆಯುತ್ತೀರಿ. ಶ್ರೀ, ಶ್ರೀ 108ರ ಮಾಲೆಯ ಮಹಿಮೆ ತುಂಬಾ ಇದೆ. 8 ರತ್ನಗಳ ಮಾಲೆಯೂ ಆಗುತ್ತದೆ. ಸನ್ಯಾಸಿಗಳೆಲ್ಲರೂ ಇದನ್ನು ಜಪಿಸುತ್ತಾರೆ. ಒಂದು ವಸ್ತ್ರವನ್ನು ಮಾಡುತ್ತಾರೆ, ಅದನ್ನು ಗೋಮುಖ ಎಂದು ಹೇಳುತ್ತಾರೆ. ಅದರಲ್ಲಿ ಕೈ ಹಾಕಿ ಮಾಲೆಯನ್ನು ಜಪಿಸುತ್ತಾರೆ. ತಂದೆಯು ಹೇಳುತ್ತಾರೆ - ನಿರಂತರ ನೆನಪು ಮಾಡಿ. ಅದನ್ನು ಅವರು ಮಾಲೆಯನ್ನು ಜಪಿಸುವ ಅರ್ಥದಲ್ಲಿ ತೆಗೆದುಕೊಂಡಿದ್ದಾರೆ. ಈಗ ಪಾರಲೌಕಿಕ ತಂದೆಯೇ ಬಂದು ಬ್ರಹ್ಮಾರವರ ಮುಖಾಂತರ ನಮ್ಮನ್ನು ತಮ್ಮವರನಾಗಿ ಮಾಡಿಕೊಂಡಿದ್ದಾರೆ ಎನ್ನುವುದು ನೀವು ಮಕ್ಕಳಿಗೆ ತಿಳಿದಿದೆ. ಪ್ರಜಾಪಿತ ಬ್ರಹ್ಮನಿದ್ದಾರೆಂದರೆ ಪ್ರಜಾ ಮಾತೆಯು ಇದ್ದಾರೆ. ಜಗದಂಬಾರವರನ್ನು ಜಗತ್ತಿನ ಮಾತೆ ಮತ್ತು ಲಕ್ಷ್ಮಿಯನ್ನು ವಿಶ್ವದ ಮಹಾರಾಣಿ ಎಂದು ಹೇಳಲಾಗಿದೆ. ವಿಶ್ವದ ಅಂಬಾ ಎಂದಾದರೂ ಹೇಳಿ ಅಥವಾ ಜಗದಂಬ ಎಂದಾದರೂ ಹೇಳಿ ಒಂದೇ ಮಾತಾಗಿದೆ. ನೀವು ಮಕ್ಕಳಾಗಿರುವುದರಿಂದ ಇದು ಪರಿವಾರ ಆಯಿತಲ್ಲವೇ. ನೀವು ಮಕ್ಕಳೂ ಸಹ ಎಲ್ಲರ ಮನೋಕಾಮನೆಗಳನ್ನು ಪೂರ್ಣ ಮಾಡುವವರಾಗಿದ್ದೀರಿ. ನೀವು ಜಗದಂಬಾರವರ ಪುತ್ರ ಹಾಗೂ ಪುತ್ರಿಯರಾಗಿದ್ದೀರಿ. ನಾವು ನಮ್ಮ ಸಹೋದರ-ಸಹೋದರಿಯರಿಗೆ ಮಾರ್ಗವನ್ನು ತಿಳಿಸಬೇಕು ಎನ್ನುವ ನಶೆಯು ಬುದ್ಧಿಯಲ್ಲಿ ಇರುತ್ತದೆಯೇ! ಬಹಳ ಸಹಜವಾಗಿದೆ. ಭಕ್ತಿಮಾರ್ಗದಲ್ಲಿ ಬಹಳ ಕಷ್ಟವಿರುತ್ತದೆ. ಎಷ್ಟೊಂದು ಹಠಯೋಗ-ಪ್ರಾಣಾಯಾಮ ಮುಂತಾದವುಗಳನ್ನು ಮಾಡುತ್ತಾರೆ. ನದಿಯಲ್ಲಿ ಹೋಗಿ ಸ್ನಾನ ಮಾಡುತ್ತಾರೆ, ಬಹಳ ಪರಿಶ್ರಮವನ್ನು ತೆಗೆದುಕೊಳ್ಳುತ್ತಾರೆ. ನೀವು ಸುಸ್ತಾಗಿ ಬಿಟ್ಟಿದ್ದೀರಿ ಎಂದು ತಂದೆಯು ಹೇಳುತ್ತಾರೆ. ಬ್ರಾಹ್ಮಣರಿಗೇ ತಿಳಿಸಲಾಗುತ್ತದೆ, ಅವರೇ ನಿರಾಕಾರ ಪರಮಪಿತ ಪರಮಾತ್ಮನೊಂದಿಗೆ ನಮ್ಮ ಸಂಬಂಧವೇನೆಂದು ತಿಳಿಯುತ್ತಾರೆ. ಶಿವಬಾಬಾ ಎನ್ನುವ ಶಬ್ದವೂ ಶೋಭಿಸುತ್ತದೆ, ರುದ್ರಬಾಬಾ ಎಂದು ಹೇಳುವುದಿಲ್ಲ, ಶಿವಬಾಬಾ ಎಂದು ಹೇಳುತ್ತೇವೆ. ಇದು ತುಂಬಾ ಸರಳವಾಗಿದೆ. ಹೆಸರುಗಳಂತೂ ಇನ್ನೂ ಬಹಳಷ್ಟಿವೆ ಆದರೆ ಶಿವಬಾಬಾ ಎನ್ನುವುದು ಸರಿಯಾಗಿದೆ. ಶಿವ ಎಂದರೆ ಬಿಂದು. ರುದ್ರ ಎಂದರೆ ಬಿಂದುವಲ್ಲ. ಭಲೆ ಶಿವಬಾಬಾ ಎಂದು ಹೇಳುತ್ತಾರೆ ಆದರೆ ಏನೂ ತಿಳಿದುಕೊಂಡಿಲ್ಲ. ಶಿವಬಾಬಾ ಮತ್ತು ನೀವು ಸಾಲಿಗ್ರಾಮಗಳಿದ್ದೀರಿ, ಈಗ ನೀವು ಮಕ್ಕಳ ಮೇಲೆ ಜವಾಬ್ದಾರಿಯಿದೆ. ಹೇಗೆ ಗಾಂಧೀಜಿ ಮುಂತಾದವರು ಭಾರತವನ್ನು ವಿದೇಶಿಗಳಿಂದ ಮುಕ್ತ ಮಾಡಬೇಕೆಂದು ತಿಳಿಯುತ್ತಿದ್ದರು. ಇದಂತು ಹದ್ದಿನ ಮಾತಾಯಿತು ಆದರೆ ತಂದೆಯು ನೀವು ಮಕ್ಕಳನ್ನು ಜವಾಬ್ದಾರರನ್ನಾಗಿ ಮಾಡುತ್ತಾರೆ. ವಿಶೇಷವಾಗಿ ಭಾರತವನ್ನು ಹಾಗೂ ಇಡೀ ಪ್ರಪಂಚವನ್ನು ಮಾಯಾರಾವಣ ಶತ್ರುವಿನಿಂದ ಮುಕ್ತಗೊಳಿಸಬೇಕಾಗಿದೆ. ಈ ಶತ್ರು ಎಲ್ಲರಿಗೆ ತುಂಬಾ ದುಃಖವನ್ನು ಕೊಟ್ಟಿದ್ದಾನೆ, ಈಗ ಈ ರಾವಣನ ಮೇಲೆ ವಿಜಯವನ್ನು ಪಡೆಯಬೇಕಾಗಿದೆ. ಹೇಗೆ ಗಾಂಧೀಜಿಯವರು ವಿದೇಶಿಯರನ್ನು ಓಡಿಸಿದರು, ಈ ರಾವಣನೂ ಸಹ ದೊಡ್ಡ ವಿದೇಶಿಯಾಗಿದ್ದಾನೆ. ದ್ವಾಪರದಲ್ಲಿ ಈ ರಾವಣನು ಪ್ರವೇಶಿಸುತ್ತಾನೆ, ಈ ರಾವಣನು ಬಂದು ಸಂಪೂರ್ಣವಾಗಿ ರಾಜ್ಯವನ್ನು ಕಸಿದುಕೊಳ್ಳುತ್ತಾನೆ ಎನ್ನುವುದು ಯಾರಿಗೂ ತಿಳಿಯುವುದಿಲ್ಲ. ಈ ರಾವಣನು ಎಲ್ಲರಿಗಿಂತ ಹಳೆಯ ವಿದೇಶಿಯಾಗಿದ್ದಾನೆ, ಈ ಭಾರತವನ್ನು ಇಂತಹ ಕಂಗಾಲರನ್ನಾಗಿ ಮಾಡಿ ಬಿಟ್ಟಿದ್ದಾನೆ. ರಾವಣನ ಮತದಿಂದ ಭಾರತವು ಇಂತಹ ಭ್ರಷ್ಟಾಚಾರಿ ಆಗಿ ಬಿಟ್ಟಿದೆ ಆದ್ದರಿಂದ ಈ ಶತ್ರುವನ್ನು ಓಡಿಸಬೇಕಾಗಿದೆ. ಇವನು ಹೇಗೆ ಓಡುತ್ತಾನೆಂದು ಶ್ರೀಮತವು ಸಿಗುತ್ತದೆ. ನೀವೀಗ ತಂದೆಯ ಸಹಯೋಗಿಗಳಾಗಬೇಕು. ಈಗ ನನ್ನವರಾಗಿ ನಂತರ ಪರಮತದಂತೆ ನಡೆಯುತ್ತೀರೆಂದರೆ ಬಿದ್ದು ಹೋಗುತ್ತೀರಿ. ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಸಾಹಸ ಮಕ್ಕಳದು ಸಹಯೋಗ ತಂದೆಯದು... ಎಂಬ ಗಾಯನವಿದೆ. ನೀವು ಈಶ್ವರೀಯ ಸೇವಾಧಾರಿಗಳಾಗಿದ್ದೀರಿ. ಭಗವಂತನೇ ಬಂದು ನಿಮ್ಮ ಸೇವೆ ಮಾಡುತ್ತಾರೆ. ಅವರನ್ನೇ ಹೇ ಪತಿತ ಪಾವನ ಬನ್ನಿ ಎಂದು ನೆನಪು ಮಾಡುತ್ತಾರೆ. ಸೇವೆ ಮಾಡುವವರನ್ನು ಸೇವಕರೆಂದು ಹೇಳಲಾಗುತ್ತದೆ. ತಂದೆಯು ಎಷ್ಟು ನಿರಹಂಕಾರಿ, ನಿರಾಕಾರನಾಗಿದ್ದಾರೆ. ಅವರು ನಿರಹಂಕಾರಿ, ನಿರಾಕಾರಿ ಆಗುವುದನ್ನು ಕಲಿಸುತ್ತಾರೆ. ಅನ್ಯರನ್ನು ತಮ್ಮ ಸಮಾನ ಮಾಡಿಕೊಂಡು ಮುಳ್ಳುಗಳನ್ನು ಹೂಗಳನ್ನಾಗಿ ಮಾಡಬೇಕಾಗಿದೆ. ನಾವು ವಿಕಾರಗಳಲ್ಲಿ ಹೋಗುವುದಿಲ್ಲವೆಂದು ಗ್ಯಾರಂಟಿ ಮಾಡಲಾಗುತ್ತದೆ ಏಕೆಂದರೆ ಈ ವಿಕಾರಗಳು ಎಲ್ಲದಕ್ಕಿಂತ ಹಳೆಯ ಶತ್ರುಗಳಾಗಿವೆ. ಇದರ ಮೇಲೆ ಜಯವನ್ನು ಪಡೆಯಬೇಕಾಗಿದೆ. ಕೆಲ-ಕೆಲವರು ಬಾಬಾ ನಾವು ಸೋತು ಹೋದೆವೆಂದು ಬರೆಯುತ್ತಾರೆ, ಕೆಲವರಂತು ತಿಳಿಸುವುದೇ ಇಲ್ಲ. ಒಂದಂತು ಹೆಸರನ್ನು ಕೆಡಿಸುತ್ತಾರೆ. ಸದ್ಗುರುವಿನ ನಿಂದನೆಯನ್ನು ಮಾಡಿಸುತ್ತಾರೆಂದರೆ ಅವರು ತಮ್ಮ ನಷ್ಟವನ್ನೇ ಮಾಡಿಕೊಳ್ಳುತ್ತಾರೆ. ಈಗ ನಾವು ಶಿವಬಾಬಾನ ಮೊಮ್ಮಕ್ಕಳಾಗಿದ್ದೇವೆ ಎನ್ನುವುದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಪ್ರಜಾಪಿತ ಬ್ರಹ್ಮನ ಮಕ್ಕಳಾಗಿದ್ದೀರಿ. ಬ್ರಹ್ಮನೂ ಸಹ ಶಿವಬಾಬಾರವರಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ. ನೀವೂ ಸಹ ಅವರಿಂದಲೇ ತೆಗೆದುಕೊಳ್ಳುತ್ತೀರಿ. ತಂದೆಯಿಂದ ಕಲ್ಪದ ಮೊದಲೂ ಸಹ ಆಸ್ತಿಯನ್ನು ತೆಗೆದುಕೊಂಡಿದ್ದೆವು ಎನ್ನುವುದು ನಿಮಗೆ ತಿಳಿದಿದೆ. ಆತ್ಮವು ತಿಳಿದುಕೊಳ್ಳುತ್ತದೆ. ಆತ್ಮವೇ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ಪಡೆಯುತ್ತದೆ. ಶರೀರಕ್ಕೆ ಹೆಸರು ಬರುತ್ತದೆ. ಶಿವತಂದೆಯಂತು ಕೇವಲ ಜ್ಞಾನವನ್ನು ಕೊಡುವುದಕ್ಕಾಗಿ ಶರೀರವನ್ನು ಲೋನ್ ತೆಗೆದುಕೊಳ್ಳುತ್ತಾರೆ. ಬ್ರಹ್ಮಾರವರ ತನುವಿನ ಮುಖಾಂತರ ಶಿವ ಭಗವಾನುವಾಚ. ಬಾಕಿ ಹೆಚ್ಚಿನ ಮಾತುಗಳಲ್ಲಿ ಹೋಗುವ ಅವಶ್ಯಕತೆ ಇಲ್ಲ. ಆತ್ಮವು ಹೊರಬರುತ್ತದೆ ಎಂದರೆ ನಂತರ ಏನು ಆಗುತ್ತದೆ? ಹೇಗೆ ಬರುತ್ತದೆ, ಈ ಮಾತುಗಳಲ್ಲಿಯೂ ಸಹ ಹೋಗುವುದರಿಂದ ಯಾವುದೇ ಲಾಭವಿಲ್ಲ. ಇದಂತೂ ಸಾಕ್ಷಾತ್ಕಾರವಾಗಿದೆ. ಏನೆಲ್ಲವೂ ಆಗುತ್ತದೆ ಅದು ಸಾಕ್ಷಾತ್ಕಾರವಾಗಿದೆ. ಸೂಕ್ಷ್ಮವತನದ ಮಾರ್ಗವೂ ಸಹ ಈಗ ತೆರೆಯಲ್ಪಟ್ಟಿದೆ. ಅನೇಕರು ಹೋಗಿ ಬರುತ್ತಾರೆ. ಇದರಲ್ಲಿ ಜ್ಞಾನ-ಯೋಗದ ಯಾವುದೇ ಮಾತಿಲ್ಲ. ಭೋಗವನ್ನಿಡುತ್ತಾರೆ, ಆತ್ಮವು ಬರುತ್ತದೆ. ತಿನ್ನಿಸಿ, ಕುಡಿಸುತ್ತಾರೆ ಇದೆಲ್ಲವೂ ವಾರ್ತಾಲಾಪವಾಗಿದೆ. ತಂದೆಗೆ ಮಕ್ಕಳ ಮೇಲೆ ತುಂಬಾ ಪ್ರೀತಿಯಿದೆ. ನೀವು ಮಕ್ಕಳು ಬಾಪ್ದಾದಾ ನಾವು ಬಂದಿದ್ದೇವೆಂದು ಹೇಳುತ್ತೀರಿ, ಶಿವ ಮತ್ತು ಪ್ರಜಾಪಿತ ಬ್ರಹ್ಮಾ ಇಬ್ಬರೂ ಇದ್ದಾರೆ. ಬ್ರಹ್ಮಾರವರನ್ನು ಗ್ರೇಟ್-ಗ್ರೇಟ್ ಗ್ರಾಂಡ್ ಫಾದರ್ ಎಂದು ಕರೆಯಲಾಗುತ್ತದೆ. ಎಷ್ಟು ದೊಡ್ಡ ವಂಶಾವಳಿಯಾಗಿದೆ. ಇದು ಮನುಷ್ಯರ ವಂಶಾವಳಿಯಾಗಿದೆ. ಇದು ಸಾಕಾರದ ಮಾತಾಗಿದೆ. ಎಲ್ಲಾ ಮನೆತನಗಳಿಗಿಂತ ಇದು ಮೊದಲ ನಂಬರಿನ ಮುಖ್ಯ ಮನೆತನವಾಗಿದೆ ಎಂದು ಗಾಯನ ಮಾಡಲಾಗುತ್ತದೆ. ದೊಡ್ಡ ನಾಟಕವಾಗಿದೆಯಲ್ಲವೇ. ಈಗ ಮಕ್ಕಳು ಒಳ್ಳೆಯ ರೀತಿಯಲ್ಲಿ ಅರಿತುಕೊಳ್ಳುತ್ತಾರೆ. ಕೆಲವರು ತಿಳಿದುಕೊಳ್ಳುವುದೂ ಇಲ್ಲ. ಅವಶ್ಯವಾಗಿ ಶಿವಬಾಬಾ ಎಲ್ಲರ ತಂದೆ ಆಗಿದ್ದಾರೆ, ಆಸ್ತಿಯು ತಾತನಿಂದ ಸಿಗುತ್ತದೆ. ಬ್ರಹ್ಮನಿಗೂ ಸಹ ಇವರಿಂದಲೇ ಸಿಗುತ್ತದೆ ಇಷ್ಟಂತೂ ತಿಳಿದುಕೊಳ್ಳುತ್ತಾರೆ. ಒಳ್ಳೆಯದು. ಬ್ರಹ್ಮಾರವರನ್ನೂ ಸಹ ಮರೆತು ಬಿಡಿ. ನಿಶ್ಚಿತಾರ್ಥ ಆಗಿ ಬಿಟ್ಟಿದೆ ಎಂದರೆ ಮತ್ತೆ ಇನ್ನೇನಿದೆ? ಮತ್ತೆ ದಲ್ಲಾಳಿಯನ್ನು ನೆನಪು ಮಾಡುವುದಿಲ್ಲ. ಇವರು ದಲ್ಲಾಳಿ ಆಗಿದ್ದಾರೆ, ನಿಶ್ಚಿತಾರ್ಥವನ್ನು ಮಾಡಿಸುತ್ತಾರೆ. ಹೇ! ಮಕ್ಕಳೇ......... ಎಂದು ಹೇಳಿ ಆತ್ಮಗಳೊಂದಿಗೆ ಮಾತನಾಡುತ್ತಾರೆ. ಬಾಬಾ ಬಂದು ನಮ್ಮನ್ನು ಪಾವನರನ್ನಾಗಿ ಮಾಡಿ ಎಂದು ಆತ್ಮವೂ ನೆನಪು ಮಾಡುತ್ತದೆ. ತಂದೆಯು ಹೇಳುತ್ತಾರೆ, ನನ್ನನ್ನು ನೆನಪು ಮಾಡುತ್ತೀರೆಂದರೆ ನೀವು ಪಾವನರಾಗುತ್ತಾ ಹೋಗುತ್ತೀರಿ ಮತ್ಯಾವುದೇ ಉಪಾಯವಿಲ್ಲ. ಶಾಂತಿಧಾಮದಿಂದ ಮತ್ತೆ ನಿಮ್ಮನ್ನು ಸ್ವರ್ಗದಲ್ಲಿ ಕಳಿಸುತ್ತೇನೆ. ಇದು ತಂದೆಯ ಮನೆ ಆಗಿದೆ, ಅದು ಮಾವನ ಮನೆಯಾಗಿದೆ. ತಂದೆಯ ಮನೆಯಲ್ಲಿ ಆಭರಣ ಮುಂತಾದವುಗಳನ್ನು ಹಾಕಿಕೊಳ್ಳುವುದಿಲ್ಲ, ನಿಯಮವಿಲ್ಲ. ಇತ್ತೀಚೆಗೆ ಇದಂತು ಫ್ಯಾಷನ್ ಆಗಿ ಬಿಟ್ಟಿದೆ. ಈ ಸಮಯದಲ್ಲಿ ನಾವು ಮಾವನ ಮನೆಗೆ ಹೋಗಿ ನಾವು ಎಲ್ಲವನ್ನು ಧರಿಸುತ್ತೇವೆ ಎನ್ನುವುದನ್ನು ನೀವು ತಿಳಿದುಕೊಂಡಿದ್ದೀರಿ. ವಿವಾಹದ ಸಮಯದಲ್ಲಿ ಕನ್ಯೆಗೆ ಮೊದಲು ಎಲ್ಲವನ್ನು ತೆಗೆದುಬಿಡುತ್ತಾರೆ. ಹಳೆಯ ವಸ್ತ್ರವನ್ನು ತೊಡಿಸುತ್ತಾರೆ. ನೀವೂ ಸಹ ತಿಳಿದುಕೊಂಡಿದ್ದೀರಿ - ಬಾಬಾರವರು ನಮ್ಮನ್ನು ಮಾವನ ಮನೆಗೆ ಕರೆದುಕೊಂಡು ಹೋಗಲು ಶೃಂಗಾರ ಮಾಡುತ್ತಿದ್ದಾರೆ. ಮಾವನಮನೆಯಲ್ಲಿ 21 ಜನ್ಮಗಳು ನಾವು ಸದಾ ಸುಖಿಯಾಗಿರುತ್ತೇವೆ. ಅದಕ್ಕಾಗಿ ಪುರುಷಾರ್ಥ ಮಾಡಬೇಕಾಗುತ್ತದೆ, ಪವಿತ್ರರಾಗಿರಬೇಕಾಗುತ್ತದೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಪ ಸಮಾನವಾಗಿರಬೇಕು. ಇದು ಅಂತಿಮ ಜನ್ಮವಾಗಿದೆ. ತಂದೆಯು ತಿಳಿಸುತ್ತಾರೆ - ಮೊದಲು ಅವ್ಯಭಿಚಾರಿ ಸತೋಪ್ರಧಾನ ಭಕ್ತಿಯಿತ್ತು, ಈಗ ತಮೋಪ್ರಧಾನವಾಗಿ ಬಿಟ್ಟಿದೆ. ಬಾಂಬೆಯಲ್ಲಿ ಗಣೇಶನ ಪೂಜೆಯಾಗುತ್ತದೆ ಅದಕ್ಕೆ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ದೇವತೆಗಳನ್ನು ರಚನೆ ಮಾಡಿ, ಪಾಲನೆ ಮಾಡಿ ನಂತರ ಮುಳುಗಿಸಿ ಬಿಡುತ್ತಾರೆ, ವಿನಾಶ ಮಾಡಿಬಿಡುತ್ತಾರೆ. ಈಗ ನೀವು ಮಕ್ಕಳಿಗೆ ವಿಚಿತ್ರವೆನಿಸುತ್ತದೆ. ಇದು ಯಾವ ರೀತಿ-ಪದ್ಧತಿಯಾಗಿದೆ ಎನ್ನುವುದನ್ನು ನೀವು ತಿಳಿಸಬಲ್ಲಿರಿ. ದೇವಿಯರಿಗೆ ಜನ್ಮಕೊಟ್ಟು, ಪೂಜೆ ಮಾಡಿ, ತಿನ್ನಿಸಿ, ಕುಡಿಸಿ, ಗೌರವಿಸಿ ನಂತರ ಮುಳುಗಿಸಿ ಬಿಡುತ್ತಾರೆ, ವಿಚಿತ್ರವಾಗಿದೆ. ತುಳಸಿಯ ವಿವಾಹವನ್ನು ಕೃಷ್ಣನ ಜೊತೆ ತೋರಿಸುತ್ತಾರೆ. ತುಂಬಾ ವಿಜೃಂಭಣೆಯಿಂದ ವಿವಾಹ ಮಾಡುತ್ತಾರೆ. ವಿದೇಶಿಯರು ಇಂತಹ ಮಾತುಗಳನ್ನು ಕೇಳುತ್ತಾರೆಂದರೆ ಬಹುಶಃ ಈ ರೀತಿ ಆಗಿರಬಹುದೇನೋ ಎಂದು ತಿಳಿಯುತ್ತಾರೆ. ಎಂತೆಂತಹ ಮಾತುಗಳನ್ನು ಬರೆದಿದ್ದಾರೆ. ಇಲ್ಲಿ ಜೂಜು ಮುಂತಾದ ಯಾವುದೇ ಮಾತಿಲ್ಲ ಆದರೆ ಪಾಂಡವರು ಜೂಜಾಟವನ್ನು ಆಡಿದರು, ದ್ರೌಪದಿಯನ್ನು ಪಣದಲ್ಲಿ ಇಟ್ಟರು ಎಂದು ಅವರು ಹೇಳುತ್ತಾರೆ. ಎಂತೆಂತಹ ಮಾತುಗಳನ್ನು ಬರೆದಿದ್ದಾರೆ, ಇದರಿಂದ ರಾಜಯೋಗದ ಮಾತು ಸಂಪೂರ್ಣವಾಗಿ ಗುಪ್ತವಾಗುತ್ತದೆ. ಈಗ ತಂದೆಯು ಹೇಳುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ, ಇದಂತೂ ಬಹಳ ಸಹಜವಾಗಿದೆ, ನಾವು 21 ಜನ್ಮಗಳಿಗಾಗಿ ಸ್ವರ್ಗ, ಕ್ಷೀರ ಸಾಗರದಲ್ಲಿ ಹೋಗುತ್ತೇವೆನ್ನುವುದು ಬುದ್ಧಿಯಲ್ಲಿ ಬರಬೇಕಾಗಿದೆ. ಈಗ ಇದು ವಿಷದ ಸಾಗರವಾಗಿದೆ. ವಿಷದ ಸಾಗರದಿಂದ ಹೊರ ಬಂದು ಕ್ಷೀರ ಸಾಗರದಲ್ಲಿ ನೀವು ಹೋಗುತ್ತಿದ್ದೀರಿ, ನಿಮ್ಮದು ಹೊಸ ಮಾತುಗಳಾಗಿದೆ. ಮನುಷ್ಯರು ಕೇಳಿದರೆ ಆಶ್ಚರ್ಯಚಕಿತರಾಗುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ಅವಶ್ಯವಾಗಿ ನಾವು ಸ್ವರ್ಗದಲ್ಲಿ ತುಂಬಾ ಸುಖಿಯಾಗಿರುತ್ತೇವೆ. ನಾವು ವಿಶ್ವದ ಮಾಲೀಕರಾಗುತ್ತೇವೆ. ಅಲ್ಲಿ ನಮ್ಮ ರಾಜಧಾನಿಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಈಗಂತು ಎಷ್ಟು ವಿಭಾಗಗಳಿವೆ, ಜಗಳಾಡುತ್ತಾ ಇರುತ್ತಾರೆ. ನೀವು ಮಕ್ಕಳು ಈಗ ತಿಳಿಸಬೇಕಾಗಿದೆ - ನಿಮ್ಮ ಮೂಲಶತ್ರು ರಾವಣನಾಗಿದ್ದಾನೆ, ಇವನ ಮೇಲೆ ನೀವು ಕಲ್ಪ-ಕಲ್ಪವೂ ವಿಜಯವನ್ನು ಪಡೆಯುತ್ತೀರಿ, ಮಾಯಾಜೀತರೇ ಜಗತ್ಜೀತರಾಗುತ್ತೀರಿ. ಇದು ಸೋಲು-ಗೆಲುವಿನ ಆಟವಾಗಿದೆ. ನಾವು ಅವಶ್ಯವಾಗಿ ವಿಜಯಿಗಳಾಗುತ್ತೇವೆ, ಅನುತ್ತೀರ್ಣರಾಗುವುದಿಲ್ಲ ಎನ್ನುವುದು ನಿಮಗೆ ತಿಳಿದಿದೆ. ವಿನಾಶವು ಸಮ್ಮುಖದಲ್ಲಿ ನಿಂತಿದೆ. ರಕ್ತದ ನದಿಗಳು ಹರಿಯುತ್ತವೆ. ಅನೇಕ ನಿರಪರಾಧಿಗಳು ಸಾಯುತ್ತಾರೆ. ಇದನ್ನು ನರಕ ಅಥವಾ ಭ್ರಷ್ಟಾಚಾರಿ ಪತಿತ ಪ್ರಪಂಚವೆಂದು ಹೇಳಲಾಗುತ್ತದೆ. ಪತಿತ ಪಾವನ ಬನ್ನಿ ಎಂದು ಹಾಡುತ್ತಾರೆ.

ಹೇಗೆ ನೀವಾತ್ಮರು ನಕ್ಷತ್ರವಾಗಿದ್ದೀರಿ ಹಾಗೆಯೇ ನಾನೂ ಸಹ ನಕ್ಷತ್ರವಾಗಿದ್ದೇನೆ. ನಾನೂ ಸಹ ಡ್ರಾಮಾದ ಬಂಧನದಲ್ಲಿ ಬಂಧಿತನಾಗಿದ್ದೇನೆ. ಇದರಿಂದ ಯಾರೂ ಸಹ ಮುಕ್ತರಾಗಲು ಸಾಧ್ಯವಿಲ್ಲ. ಇಲ್ಲವೆಂದರೆ ನನಗೆ ಈ ಪತಿತ ಪ್ರಪಂಚದಲ್ಲಿ ಬರುವ ಅವಶ್ಯಕತೆಯೇನಿದೆ! ನಾನಂತೂ ಪರಮಧಾಮದಲ್ಲಿ ಇರುವವನಾಗಿದ್ದೇನೆ! ಈ ನಾಟಕದಲ್ಲಿ ಪ್ರತಿಯೊಬ್ಬರೂ ತಮ್ಮ-ತಮ್ಮ ಪಾತ್ರವನ್ನು ಅಭಿನಯಿಸುತ್ತಾರೆ. ಚಿಂತೆಯ ಯಾವುದೇ ಮಾತಿಲ್ಲ. ಇಲ್ಲಿ ನೀವು ನಶೆಯಲ್ಲಿ ನಿಶ್ಚಿಂತರಾಗಿರುತ್ತೀರಿ ಎಂದು ತಂದೆಯು ಹೇಳುತ್ತಾರೆ. ತಂದೆಯು ಯಾವುದೇ ಕಷ್ಟವನ್ನು ಕೊಡುವುದಿಲ್ಲ. ಕೇವಲ ನೆನಪು ಮಾಡಬೇಕು ಮತ್ತು ಮಾಡಿಸಬೇಕಾಗಿದೆ. ಬೇಹದ್ದಿನ ತಂದೆಯು ಬೇಹದ್ದಿನ ಸುಖವನ್ನು ಕೊಡಲು ಬಂದಿದ್ದಾರೆ. ನೀವು ಮನೆ-ಮನೆಗೆ ನಿಮಂತ್ರಣ ಕೊಡಬೇಕಾಗಿದೆ - ಇಷ್ಟು ಕಾರ್ಯವನ್ನು ನೀವು ಮಾಡಬೇಕಾಗಿದೆ. ನೀವು ಮಕ್ಕಳ ಮೇಲೆ ದೊಡ್ಡ ಜವಾಬ್ದಾರಿಯಿದೆ, ಆದರೂ ಸಹ ಮಾಯೆಯು ನೋಡಿ! ಸತ್ಯನಾಶ ಮಾಡಿ ಬಿಡುತ್ತದೆ. ಭಾರತವು ಎಷ್ಟೊಂದು ದುಃಖಿಯಾಗಿ ಬಿಟ್ಟಿದೆ. ಮಾಯೆಯೇ ದುಃಖವನ್ನು ಕೊಟ್ಟಿದೆ. ಈಗ ನೀವು ಮಕ್ಕಳು ತಂದೆಗೆ ಸಹಯೋಗ ಕೊಟ್ಟು ಮುಳ್ಳುಗಳನ್ನು ಹೂವುಗಳನ್ನಾಗಿ ಮಾಡಬೇಕಾಗಿದೆ. ನಮ್ಮ ಈ ಬ್ರಾಹ್ಮಣ ಕುಲದಲ್ಲಿ ಯಾವ ಯಾವ ಪ್ರಕಾರದ ಹೂಗಳಿವೆ ಎನ್ನುವುದನ್ನು ನೀವು ಮಕ್ಕಳು ಅರಿತುಕೊಂಡಿದ್ದೀರಿ. ಸೇವೆ ಮಾಡುತ್ತೀರೆಂದರೆ ಪದವಿಯನ್ನು ಪಡೆಯುತ್ತೀರಿ, ಇಲ್ಲವೆಂದರೆ ಪ್ರಜೆಗಳಲ್ಲಿ ಹೋಗುವಿರಿ. ಪರಿಶ್ರಮವಿದೆಯಲ್ಲವೆ! ಅನೇಕ ಮಕ್ಕಳಿದ್ದಾರೆ, ಅವರು ಸೇವೆಯಲ್ಲಿ ತೊಡಗಿದ್ದಾರೆ. ಕೆಲವು ಮಕ್ಕಳಿಗೆ ಸಮಯ (ಬಿಡುವು) ಸಿಗುವುದಿಲ್ಲ, ಆದ್ದರಿಂದ ಬಹಳ ಪೆಟ್ಟು ತಿನ್ನುತ್ತಾರೆ. ಇದರಲ್ಲಿ ಧೈರ್ಯವಿರಬೇಕಾಗಿದೆ, ಭಯ ಪಡಬಾರದು. ನಷ್ಟಮೋಹ ಆಗಿರಬೇಕು. ಮೋಹವೂ ಸಹ ಕಡಿಮೆಯೇನಿಲ್ಲ, ತುಂಬಾ ಪ್ರಬಲವಾಗಿದೆ. ಸಾಹುಕಾರರ ಮನೆಯವರಾಗಿದ್ದರೆ ತಂದೆಯು ಮೊದಲು ಅವರಲ್ಲಿರುವ ದೇಹಾಭಿಮಾನವನ್ನು ಬಿಡಿಸಲು ಕಸಗುಡಿಸಿ, ಪಾತ್ರೆಯನ್ನು ತೊಳೆಯಿರಿ ಎಂದು ಹೇಳುತ್ತಾರೆ. ಪರೀಕ್ಷೆಯಂತೂ ತೆಗೆದುಕೊಳ್ಳುತ್ತಾರಲ್ಲವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಶ್ರೀಮತದನುಸಾರ ತಂದೆಗೆ ಸಂಪೂರ್ಣ ಸಹಯೋಗಿಗಳಾಗಬೇಕು, ಪರಮತ ಹಾಗೂ ಮನಮತದಂತೆ ನಡೆಯಬಾರದು. ನಷ್ಟಮೋಹಿಯಾಗಿ ತಮ್ಮಲ್ಲಿ ಧೈರ್ಯವನ್ನಿಟ್ಟು ಸೇವೆಯಲ್ಲಿ ತೊಡಗಬೇಕಾಗಿದೆ.

2. ಈಗ ನಾವು ತಂದೆಯ ಮನೆಯಲ್ಲಿದ್ದೇವೆ, ಇಲ್ಲಿ ಯಾವುದೇ ಪ್ರಕಾರದ ಫ್ಯಾಷನ್ (ತೋರ್ಪಡಿಕೆಯ ಶೃಂಗಾರ) ಮಾಡಬಾರದು. ಸ್ವಯಂನ್ನು ಜ್ಞಾನ ರತ್ನಗಳಿಂದ ಶೃಂಗರಿಸಿಕೊಳ್ಳಬೇಕಾಗಿದೆ. ಪವಿತ್ರರಾಗಿರಬೇಕಾಗಿದೆ.

ವರದಾನ:
ದುಃಖವನ್ನು ಸುಖದಲ್ಲಿ, ನಿಂದನೆಯನ್ನು ಪ್ರಶಂಸೆಯಲ್ಲಿ ಪರಿವರ್ತನೆ ಮಾಡುವಂತಹ ಪುಣ್ಯಾತ್ಮ ಭವ.

ಯಾರು ಎಂದಿಗೂ, ಯಾರಿಗೂ ದುಃಖ ಕೊಡುವುದಿಲ್ಲ ಹಾಗೂ ದುಃಖವನ್ನು ತೆಗೆದುಕೊಳ್ಳುವುದಿಲ್ಲ, ಆದರೆ ದುಃಖವನ್ನೂ ಸುಖದ ರೂಪದಲ್ಲಿ ಸ್ವೀಕರಿಸುತ್ತಾರೆಯೋ ಅವರೇ ಪುಣ್ಯಾತ್ಮರಾಗಿದ್ದಾರೆ. ನಿಂದನೆಯನ್ನು ಪ್ರಶಂಸೆಯೆಂದು ತಿಳಿದಾಗ ಹೇಳಲಾಗುವುದು - ಪುಣ್ಯಾತ್ಮ. ಈ ಪಾಠವು ಸದಾ ಪರಿಪಕ್ವವಾಗಿರಲಿ - ನಿಂದಿಸುವವರು ಅಥವಾ ದುಃಖ ಕೊಡುವಂತಹ ಆತ್ಮನಿಗೂ ಸಹ ಸ್ವಯಂ ದಯಾಹೃದಯಿ ಸ್ವರೂಪದಿಂದ, ದಯಾ ದೃಷ್ಟಿಯಿಂದ ನೋಡಬೇಕು. ನಿಂದಿಸುವ ದೃಷ್ಟಿಯಿಂದಲ್ಲ. ಅವರು ನಿಂದಿಸಲಿ, ತಾವು ಹೂವನ್ನು ಅರ್ಪಿಸಿದಾಗ ಪುಣ್ಯಾತ್ಮನೆಂದು ಹೇಳಲಾಗುವುದು.

ಸ್ಲೋಗನ್:
ಬಾಪ್ದಾದಾರವರನ್ನು ನಯನಗಳಲ್ಲಿ ಸಮಾವೇಶ ಮಾಡಿಕೊಳ್ಳುವವರೇ ವಿಶ್ವದ ಮಣಿ, ಕಣ್ಮಣಿಯಾಗಿದ್ದಾರೆ.