04.07.20         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಶ್ರೇಷ್ಠರಾಗಬೇಕೆಂದರೆ ನಿತ್ಯವೂ ತಮ್ಮ ಚಾರ್ಟನ್ನು ನೋಡಿಕೊಳ್ಳಿ - ಯಾವುದೇ ಕರ್ಮೇಂದ್ರಿಯಗಳು ಮೋಸ ಮಾಡದಿರಲಿ, ಕಣ್ಣುಗಳು ಬಹಳ ಮೋಸಗಾರನಾಗಿದೆ, ಇದರಿಂದ ಸಂಭಾಲನೆ ಮಾಡಿಕೊಳ್ಳಿ.

ಪ್ರಶ್ನೆ:
ಎಲ್ಲದಕ್ಕಿಂತ ಕೆಟ್ಟ ಹವ್ಯಾಸವು ಯಾವುದಾಗಿದೆ, ಅದರಿಂದ ಮುಕ್ತರಾಗುವ ಉಪಾಯವೇನು?

ಉತ್ತರ:
ನಾಲಿಗೆಯ ರುಚಿಯು ಎಲ್ಲದಕ್ಕಿಂತ ಕೆಟ್ಟ ಹವ್ಯಾಸವಾಗಿದೆ. ಯಾವುದೇ ಒಳ್ಳೆಯ ಪದಾರ್ಥವನ್ನು ನೋಡಿದರೆ ಮುಚ್ಚಿಟ್ಟುಕೊಂಡು ತಿಂದು ಬಿಡುತ್ತಾರೆ. ಮುಚ್ಚಿಟ್ಟುಕೊಳ್ಳುವುದು ಎಂದರೆ ಕಳ್ಳತನವಾಗಿದೆ. ಕಳ್ಳತನವೆಂಬ ಮಾಯೆಯೂ ಸಹ ಅನೇಕರ ಕಿವಿ, ಮೂಗನ್ನು ಹಿಡಿದುಕೊಳ್ಳುತ್ತದೆ. ಇದರಿಂದ ಮುಕ್ತರಾಗುವ ಸಾಧನವೆಂದರೆ ಯಾವಾಗ ಎಲ್ಲಿಯಾದರೂ ಬುದ್ಧಿಯು ಹೋಗುತ್ತದೆ ಆಗ ತಮಗೆ ತಾವೇ ಶಿಕ್ಷೆ ಕೊಟ್ಟುಕೊಳ್ಳಿ. ಕೆಟ್ಟ ಹವ್ಯಾಸಗಳನ್ನು ತೆಗೆಯಲು ತಮಗೆ ತಾವೇ ಪೆಟ್ಟನ್ನು ಕೊಟ್ಟುಕೊಳ್ಳಿ.

ಓಂ ಶಾಂತಿ.
ಆತ್ಮಾಭಿಮಾನಿಯಾಗಿ ಕುಳಿತಿದ್ದೀರಾ? ಪ್ರತಿಯೊಂದು ಮಾತನ್ನು ತಮ್ಮೊಂದಿಗೆ ತಾವೇ ಕೇಳಿಕೊಳ್ಳಬೇಕು - ನಾನು ಆತ್ಮಾಭಿಮಾನಿಯಾಗಿ ಕುಳಿತಿದ್ದೇನೆಯೇ? ಮತ್ತು ತಂದೆಯನ್ನು ನೆನಪು ಮಾಡುತ್ತಿದ್ದೇನೆಯೇ? ಶಿವಶಕ್ತಿ ಪಾಂಡವ ಸೇನೆಯೆಂದು ಗಾಯನವಿದೆ, ಈ ಶಿವ ತಂದೆಯ ಸೈನ್ಯವು ಕುಳಿತಿದೆಯಲ್ಲವೆ. ಆ ಸೇನೆಯಲ್ಲಂತೂ ಕೇವಲ ಯುವಕರಿರುತ್ತಾರೆ. ವೃದ್ಧರು, ಮಕ್ಕಳು ಮೊದಲಾದವರು ಇರುವುದಿಲ್ಲ. ಈ ಸೈನ್ಯದಲ್ಲಿ ಮಕ್ಕಳು, ವೃದ್ಧರು, ಯುವಕರು ಎಲ್ಲರೂ ಕುಳಿತಿದ್ದೀರಿ. ಇದು ಮಾಯೆಯ ಮೇಲೆ ಜಯ ಗಳಿಸುವ ಸೇನೆಯಾಗಿದೆ. ಪ್ರತಿಯೊಬ್ಬರೂ ಮಾಯೆಯಿಂದ ಜಯ ಗಳಿಸಿ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ಪಡೆಯಬೇಕಾಗಿದೆ. ಮಕ್ಕಳಿಗೆ ಗೊತ್ತಿದೆ - ಮಾಯೆಯು ಬಹಳ ಪ್ರಬಲವಾಗಿದೆ. ಕರ್ಮೇಂದ್ರಿಯಗಳು ಎಲ್ಲದಕ್ಕಿಂತ ಹೆಚ್ಚಿನದಾಗಿ ಮೋಸ ಮಾಡುತ್ತದೆ. ಚಾರ್ಟಿನಲ್ಲಿ ಇದನ್ನೂ ಬರೆಯಿರಿ - ಇಂದು ಯಾವ ಕರ್ಮೇಂದ್ರಿಯವು ಮೋಸಗೊಳಿಸಿತು? ಯಾರನ್ನಾದರೂ ನೋಡಿದರೆ ಅವರೊಂದಿಗೆ ಮನಸ್ಸಾಗಿ ಅವರ ಮೇಲೆ ಕೈಯನ್ನು ಹಾಕೋಣವೆಂದೆನಿಸುತ್ತದೆ, ಹೀಗೆ ಕಣ್ಣುಗಳು ಮೋಸ ಮಾಡುತ್ತದೆ. ಪ್ರತಿಯೊಂದು ಕರ್ಮೇಂದ್ರಿಯವನ್ನು ನೋಡಿಕೊಳ್ಳಿ, ಯಾವ ಕರ್ಮೇಂದ್ರಿಯವು ಬಹಳ ನಷ್ಟವನ್ನುಂಟು ಮಾಡುತ್ತದೆ? ಇದಕ್ಕೆ ಸೂರದಾಸರ ಉದಾಹರಣೆಯನ್ನು ಕೊಡುತ್ತಾರೆ. ಹೀಗೆ ತಮ್ಮನ್ನು ಪರಿಶೀಲನೆ ಮಾಡಿಕೊಳ್ಳುತ್ತಿರಬೇಕು ಏಕೆಂದರೆ ಕಣ್ಣುಗಳು ಬಹಳ ಮೋಸ ಮಾಡುವಂತದ್ದಾಗಿದೆ. ಒಳ್ಳೊಳ್ಳೆಯ ಮಕ್ಕಳಿಗೂ ಸಹ ಮಾಯೆಯು ಮೋಸಗೊಳಿಸುತ್ತದೆ. ಭಲೆ ಚೆನ್ನಾಗಿ ಸರ್ವೀಸ್ ಮಾಡುತ್ತಾರೆ ಆದರೆ ಕಣ್ಣುಗಳು ಮೋಸ ಮಾಡುತ್ತವೆ. ಇವುಗಳ ಮೇಲೆ ಗಮನವನ್ನಿಡಬೇಕು ಏಕೆಂದರೆ ಶತ್ರುವಲ್ಲವೆ. ತನ್ನ ಪದವಿಯನ್ನೇ ಭ್ರಷ್ಟ ಮಾಡಿ ಬಿಡುತ್ತದೆ. ಯಾರು ಬುದ್ಧಿವಂತರಿದ್ದಾರೆಯೋ ಅವರು ಬಹಳ ಚೆನ್ನಾಗಿ ನೋಟ್ ಮಾಡಿಕೊಳ್ಳಬೇಕು. ಡೈರಿ ಜೇಬಿನಲ್ಲಿರಲಿ. ಹೇಗೆ ಭಕ್ತಿಮಾರ್ಗದಲ್ಲಿ ಬುದ್ಧಿಯು ಬೇರೆ ಕಡೆ ಹೋಗುತ್ತದೆಯೆಂದರೆ ತಮ್ಮನ್ನು ಜಿಗುಟಿಕೊಳ್ಳುತ್ತಾರೆ. ನೀವೂ ಸಹ ಶಿಕ್ಷೆಯನ್ನು ಕೊಟ್ಟುಕೊಳ್ಳಬೇಕು. ಬಹಳ ಎಚ್ಚರಿಕೆಯನ್ನಿಡಬೇಕು. ಕರ್ಮೇಂದ್ರಿಯಗಳು ಮೋಸ ಮಾಡುತ್ತಿಲ್ಲವೆ! ಹಾಗಿದ್ದರೆ ಅಲ್ಲಿಂದ ದೂರವಾಗಬೇಕು. ಎದ್ದು ನಿಂತು ನೋಡಲೂಬಾರದು. ಸ್ತ್ರೀ-ಪುರುಷರಲ್ಲಿ ಬಹಳ ಚಂಚಲತೆಯಾಗಿದೆ. ನೋಡುವುದರಿಂದಲೇ ಕಾಮ ವಿಕಾರದ ದೃಷ್ಟಿಯು ಹೋಗುತ್ತದೆ. ಆದ್ದರಿಂದ ಸನ್ಯಾಸಿಗಳು ಕಣ್ಣು ಮುಚ್ಚಿ ಕುಳಿತುಕೊಳ್ಳುತ್ತಾರೆ. ಕೆಲಕೆಲವರು ಸನ್ಯಾಸಿಗಳು ಸ್ತ್ರೀಗೆ ಬೆನ್ನು ತಿರುಗಿಸಿ ಕುಳಿತುಕೊಳ್ಳುತ್ತಾರೆ. ಆ ಸನ್ಯಾಸಿಗಳಿಗೆ ಏನು ಸಿಗುತ್ತದೆ? ಹೆಚ್ಚೆಂದರೆ 10-20 ಲಕ್ಷ ಅಥವಾ ಕೋಟಿಗಳನ್ನು ಸಂಪಾದಿಸಬೇಕಾಗಿದೆ. ಆದರೂ ಸಹ ಅವರು ಶರೀರ ಬಿಟ್ಟರೆ ಸಮಾಪ್ತಿ ಮತ್ತೆ ಇನ್ನೊಂದು ಜನ್ಮದಲ್ಲಿ ಕೂಡಿಡಬೇಕಾಗಿದೆ. ನೀವು ಮಕ್ಕಳಿಗಂತೂ ಏನೆಲ್ಲವೂ ಸಿಗುತ್ತದೆಯೋ ಅದು ಅವಿನಾಶಿ ಆಸ್ತಿಯಾಗಿ ಬಿಡುತ್ತದೆ. ಅಲ್ಲಿ ಹಣದ ಲೋಭವಿರುವುದೇ ಇಲ್ಲ. ಯಾವುದೇ ವಸ್ತುವಿನ ಪ್ರಾಪ್ತಿಗಳಲ್ಲಿ ತಲೆ ಕೆಡಿಸಿಕೊಳ್ಳಲು ಅಂತಹ ಯಾವುದೇ ಅಪ್ರಾಪ್ತ ವಸ್ತುವಿರುವುದೇ ಇಲ್ಲ. ಕಲಿಯುಗದ ಅಂತ್ಯ ಸತ್ಯಯುಗದ ಆದಿಯಲ್ಲಿ ರಾತ್ರಿ-ಹಗಲಿನ ಅಂತರವಿದೆ. ಅಲ್ಲಂತೂ ಅಪಾರ ಸುಖವಿರುತ್ತದೆ. ಇಲ್ಲಿ ಏನೂ ಇಲ್ಲ ಆದ್ದರಿಂದ ತಂದೆಯು ಯಾವಾಗಲೂ ತಿಳಿಸುತ್ತಾರೆ - ಸಂಗಮ ಎನ್ನುವ ಶಬ್ಧದ ಜೊತೆಗೆ ಪುರುಷೋತ್ತಮ ಶಬ್ಧವನ್ನು ಅವಶ್ಯವಾಗಿ ಬರೆಯಿರಿ. ಶಬ್ಧಗಳನ್ನು ಬಹಳ ಸ್ಪಷ್ಟವಾಗಿ ಹೇಳಬೇಕು. ತಿಳಿಸುವುದರಲ್ಲಿ ಬಹಳ ಸಹಜವಾಗಿದೆ. ಮನುಷ್ಯರಿಂದ ದೇವತಾ... ಅಂದಾಗ ಅವಶ್ಯವಾಗಿ ತಂದೆಯು ದೇವತೆಗಳನ್ನಾಗಿ ಮಾಡಲು ನರಕವಾಸಿಗಳನ್ನು ಸ್ವರ್ಗವಾಸಿಗಳನ್ನಾಗಿ ಮಾಡಲು ಸಂಗಮಯುಗದಲ್ಲಿಯೇ ಬರುತ್ತಾರಲ್ಲವೆ. ಮನುಷ್ಯರಂತೂ ಘೋರ ಅಂಧಕಾರದಲ್ಲಿದ್ದಾರೆ. ಸ್ವರ್ಗವು ಹೇಗಿರುತ್ತದೆ ಎಂಬುದನ್ನು ತಿಳಿದೇ ಇಲ್ಲ. ಅನ್ಯ ಧರ್ಮದವರಂತೂ ಸ್ವರ್ಗವನ್ನು ನೋಡುವುದಕ್ಕೂ ಸಾಧ್ಯವಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ - ನಿಮ್ಮ ಧರ್ಮವು ಬಹಳ ಸುಖ ಕೊಡುವಂತದ್ದಾಗಿದೆ ಅದಕ್ಕೆ ಸ್ವರ್ಗವೆಂದು ಹೇಳುತ್ತಾರೆ. ಆದರೆ ನಾವೂ ಸಹ ಸ್ವರ್ಗದಲ್ಲಿ ಹೋಗಬಹುದೆಂಬುದನ್ನು ತಿಳಿದುಕೊಂಡಿಲ್ಲ. ಭಾರತವಾಸಿಗಳೂ ಸಹ ಇದನ್ನು ಮರೆತು ಬಿಟ್ಟಿದ್ದಾರೆ. ಸ್ವರ್ಗಕ್ಕೆ ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ. 3000 ವರ್ಷಗಳ ಮೊದಲು ಸ್ವರ್ಗವಿತ್ತೆಂಬ ಮಾತನ್ನು ಕ್ರಿಶ್ಚಿಯನ್ನರೂ ಸಹ ಹೇಳುತ್ತಾರೆ. ಲಕ್ಷ್ಮೀ-ನಾರಾಯಣರಿಗೆ ಭಗವಾನ್-ಭಗವತಿಯೆಂದು ಹೇಳುತ್ತಾರೆ. ಅವಶ್ಯವಾಗಿ ಭಗವಂತನೇ ಭಗವಾನ್-ಭಗವತಿಯರನ್ನಾಗಿ ಮಾಡುತ್ತಾರೆ ಅಂದಮೇಲೆ ಪರಿಶ್ರಮ ಪಡಬೇಕು. ನಿತ್ಯವೂ ತಮ್ಮ ಚಾರ್ಟನ್ನು ನೋಡಿಕೊಳ್ಳಬೇಕು - ಯಾವ ಕರ್ಮೇಂದ್ರಿಯವು ಮೋಸಗೊಳಿಸಿತು? ನಾಲಿಗೆಯೇನೂ ಕಡಿಮೆಯಿಲ್ಲ. ಯಾವುದಾದರೂ ಒಳ್ಳೆಯ ಪದಾರ್ಥವನ್ನು ನೋಡಿದರೆ ಮುಚ್ಚಿಟ್ಟುಕೊಂಡು ತಿಂದು ಬಿಡುತ್ತಾರೆ. ಇದೂ ಸಹ ಪಾಪವೆಂದು ತಿಳಿದುಕೊಂಡಿಲ್ಲ. ಅದರಲ್ಲಿಯೂ ಶಿವ ತಂದೆಯ ಯಜ್ಞದಿಂದ ಕಳ್ಳತನವನ್ನು ಮಾಡುವುದು ಬಹಳ ಕೆಟ್ಟದ್ದಾಗಿದೆ. ಅಡಿಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳನೆಂದು ಹೇಳಲಾಗುತ್ತದೆ. ಮಾಯೆಯು ಅನೇಕರನ್ನು ಕಿವಿಯನ್ನಿಡಿಯುತ್ತದೆ. ಎಲ್ಲಿಯವರೆಗೆ ಕೆಟ್ಟ ಹವ್ಯಾಸಗಳಿರುವುದೋ ಅಲ್ಲಿಯವರೆಗೆ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಸ್ವರ್ಗದಲ್ಲಿ ಹೋಗುವುದು ದೊಡ್ಡ ಮಾತಲ್ಲ ಆದರೆ ರಾಜ-ರಾಣಿಯೆಲ್ಲಿ! ಪ್ರಜೆಗಳೆಲ್ಲಿ! ಆದ್ದರಿಂದಲೇ ತಂದೆಯು ತಿಳಿಸುತ್ತಾರೆ - ಕರ್ಮೇಂದ್ರಿಯಗಳನ್ನು ಪರಿಶೀಲನೆ ಮಾಡಿಕೊಳ್ಳಿ - ಯಾವುದೇ ಕರ್ಮೇಂದ್ರಿಯವು ಮೋಸ ಮಾಡುತ್ತಿಲ್ಲವೇ? ಲೆಕ್ಕ ಪತ್ರವನ್ನಿಡಬೇಕು. ಇದು ವ್ಯಾಪಾರವಲ್ಲವೆ. ತಂದೆಯು ತಿಳಿಸುತ್ತಾರೆ - ನನ್ನೊಂದಿಗೆ ವ್ಯಾಪಾರ ಮಾಡಬೇಕು, ಶ್ರೇಷ್ಠ ಪದವಿಯನ್ನು ಪಡೆಯಬೇಕೆಂದರೆ ಶ್ರೀಮತದಂತೆ ನಡೆಯಿರಿ. ತಂದೆಯು ಆದೇಶ ನೀಡುತ್ತಾರೆ, ಅದರಲ್ಲಿಯೂ ಮಾಯೆಯು ವಿಘ್ನಗಳನ್ನು ಹಾಕುವುದು. ಕಾರ್ಯದಲ್ಲಿ ತರಲು ಬಿಡುವುದಿಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಇದನ್ನು ಮರೆಯಬೇಡಿ. ಹುಡುಗಾಟಿಕೆ ಮಾಡುವುದರಿಂದ ನಂತರ ಬಹಳ ಪಶ್ಚಾತ್ತಾಪ ಪಡುವಿರಿ, ಎಂದೂ ಶ್ರೇಷ್ಠ ಪದವಿಯನ್ನು ಪಡೆಯುವುದಿಲ್ಲ. ಈಗಂತೂ ನಾವು ನರನಿಂದ ನಾರಾಯಣರಾಗುತ್ತೇವೆಂದು ಖುಷಿಯಿಂದ ಹೇಳುತ್ತೀರಿ. ಆದರೆ ತಮ್ಮೊಂದಿಗೆ ಕೇಳಿಕೊಳ್ಳುತ್ತಾ ಇರಿ - ಕರ್ಮೇಂದ್ರಿಯಗಳು ಮೋಸ ಮಾಡುತ್ತಿಲ್ಲವೇ?

ತಮ್ಮ ಉನ್ನತಿ ಮಾಡಿಕೊಳ್ಳಬೇಕೆಂದರೆ ತಂದೆಯು ಯಾವ ಆದೇಶ ನೀಡುವರೋ ಅದನ್ನು ಕಾರ್ಯದಲ್ಲಿ ತನ್ನಿ. ಇಡೀ ದಿನದ ಚಾರ್ಟನ್ನು ನೋಡಿಕೊಳ್ಳಿ. ತಪ್ಪುಗಳಂತೂ ಬಹಳಷ್ಟು ಆಗುತ್ತಿರುತ್ತವೆ. ಕಣ್ಣುಗಳು ಮೋಸ ಮಾಡುತ್ತವೆ. ಇವರಿಗೆ ತಿನ್ನಿಸಲೇ? ಉಡುಗೊರೆಯನ್ನು ಕೊಡಲೇ? ಎಂದು ದಯೆ ಬರುತ್ತದೆ. ಇದರಿಂದ ತಮ್ಮ ಬಹಳಷ್ಟು ಹಣವನ್ನು ವ್ಯರ್ಥ ಮಾಡುತ್ತಾರೆ. ಮಾಲೆಯ ಮಣಿಯಾಗುವುದರಲ್ಲಿ ಬಹಳ ಪರಿಶ್ರಮವಿದೆ. 8 ರತ್ನಗಳು ಮುಖ್ಯವಾಗಿವೆ, ನವರತ್ನಗಳೆಂದು ಹೇಳುತ್ತಾರೆ. ಒಂದು ತಂದೆಯಾಗಿದ್ದಾರೆ, ಉಳಿದವು 8 ಮಣಿಗಳಾಗಿವೆ. ಮಧ್ಯದಲ್ಲಿ ತಂದೆಯ ಚಿಹ್ನೆಯೂ ಬೇಕಲ್ಲವೆ. ಯಾವುದಾದರೂ ಗ್ರಹಚಾರವು ಕುಳಿತುಕೊಂಡಾಗ ನವರತ್ನಗಳ ಉಂಗುರವನ್ನು ಹಾಕಿಸುತ್ತಾರೆ. ಇಷ್ಟೊಂದು ಮಂದಿ ಪುರುಷಾರ್ಥ ಮಾಡುವುದರಲ್ಲಿ ಪಾಸ್-ವಿತ್-ಆನರ್ ಆಗುವವರು ಕೇವಲ 8 ಮಂದಿ ಮಾತ್ರ. ಉಳಿದಂತೆ ಯಾವ 100ರ ಮಾಲೆಯಿದೆಯೋ ಅವರಿಗೂ ಸಹ ಅಲ್ಪ ಸ್ವಲ್ಪ ಶಿಕ್ಷೆಯು ಸಿಗುತ್ತದೆ. 8 ರತ್ನಗಳಿಗೆ ಬಹಳ ಮಹಿಮೆಯಿದೆ. ದೇಹಾಭಿಮಾನದಲ್ಲಿ ಬರುವುದರಿಂದಲೇ ಕರ್ಮೇಂದ್ರಿಯಗಳು ಬಹಳ ಮೋಸ ಮಾಡುತ್ತವೆ. ತಲೆಯ ಮೇಲೆ ಬಹಳ ಪಾಪದ ಹೊರೆಯಿದೆ. ದಾನ-ಪುಣ್ಯ ಮಾಡಿದರೆ ಪಾಪವು ಕಳೆಯುವುದೆಂದು ಭಕ್ತಿಯಲ್ಲಿಯೂ ಚಿಂತೆಯಿರುತ್ತದೆ. ಸತ್ಯಯುಗದಲ್ಲಿ ಯಾವುದೇ ಚಿಂತೆಯಿರುವುದಿಲ್ಲ. ಏಕೆಂದರೆ ಅಲ್ಲಿ ರಾವಣ ರಾಜ್ಯವೇ ಇಲ್ಲ. ಒಂದುವೇಳೆ ಅಲ್ಲಿಯೂ ಸಹ ಇಂತಹ ಮಾತುಗಳಿದ್ದರೆ ನರಕ ಮತ್ತು ಸ್ವರ್ಗದಲ್ಲಿ ಏನೂ ಅಂತರವೇ ಇರುವುದಿಲ್ಲ. ನೀವು ಇಷ್ಟೊಂದು ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕಾಗಿ ನಿಮಗೆ ಭಗವಂತನೇ ಓದಿಸುತ್ತಾರೆ. ತಂದೆಯ ನೆನಪು ಬರಲಿಲ್ಲವೆಂದರೆ ಓದಿಸುವ ಶಿಕ್ಷಕರ ನೆನಪಾದರೂ ಮಾಡಿ. ಭಲೆ ಈ ನೆನಪನ್ನಾದರೂ ಮಾಡಿ - ನಮ್ಮ ಒಬ್ಬರೇ ತಂದೆಯು ಸದ್ಗುರುವೂ ಆಗಿದ್ದಾರೆ. ಮನುಷ್ಯರು ಆಸುರೀ ಮತದಂತೆ ತಂದೆಯನ್ನು ಎಷ್ಟು ತಿರಸ್ಕಾರ ಮಾಡಿದ್ದಾರೆ. ಈಗ ತಂದೆ ಎಲ್ಲರ ಮೇಲೆ ಉಪಕಾರ ಮಾಡುತ್ತಾರೆ. ನೀವು ಮಕ್ಕಳೂ ಸಹ ಉಪಕಾರ ಮಾಡಬೇಕು. ಯಾರ ಮೇಲೂ ಅಪಕಾರವಾಗಲಿ, ಕುದೃಷ್ಟಿಯಾಗಲಿ ಇರಬಾರದು, ಇದರಿಂದ ತಮ್ಮದೇ ನಷ್ಟ ಮಾಡಿಕೊಳ್ಳುತ್ತೀರಿ. ಆ ವೈಬ್ರೇಷನ್ ಮತ್ತೆ ಅನ್ಯರ ಮೇಲೂ ಪ್ರಭಾವ ಬೀರುತ್ತದೆ. ಇದು ಬಹಳ ದೊಡ್ಡ ಗುರಿಯಾಗಿದೆ. ನಿತ್ಯವೂ ತಮ್ಮ ಲೆಕ್ಕ ಪತ್ರವನ್ನು ನೋಡಿಕೊಳ್ಳಿ. ಯಾವುದೇ ವಿಕರ್ಮವನ್ನು ಮಾಡಲಿಲ್ಲವೇ? ಇದು ವಿಕರ್ಮಿ ಪ್ರಪಂಚ, ವಿಕರ್ಮಿ ಸಂವತ್ಸರವಾಗಿದೆ. ವಿಕರ್ಮಾಜೀತ ದೇವತೆಗಳ ಸಂವತ್ಸರದ ಬಗ್ಗೆ ಯಾರಿಗೂ ತಿಳಿದಿಲ್ಲ. ತಂದೆಯು ತಿಳಿಸುತ್ತಾರೆ - ವಿಕರ್ಮಾಜೀತ ಸಂವತ್ಸರವು ಕಳೆದು 5000 ವರ್ಷಗಳಾಯಿತು ನಂತರ ವಿಕರ್ಮ ಸಂವತ್ಸರವು ಆರಂಭವಾಗುತ್ತದೆ. ರಾಜರೂ ಸಹ ವಿಕರ್ಮಗಳನ್ನೇ ಮಾಡುತ್ತಿರುತ್ತಾರೆ. ಆದ್ದರಿಂದಲೇ ತಂದೆಯು ತಿಳಿಸುತ್ತಾರೆ - ಕರ್ಮ, ಅಕರ್ಮ, ವಿಕರ್ಮದ ಗತಿಯನ್ನು ನಾನು ನಿಮಗೆ ತಿಳಿಸುತ್ತೇನೆ. ರಾವಣ ರಾಜ್ಯದಲ್ಲಿ ನಿಮ್ಮ ಕರ್ಮವು ವಿಕರ್ಮವಾಗುತ್ತದೆ. ಸತ್ಯಯುಗದಲ್ಲಿ ಕರ್ಮಗಳು ಅಕರ್ಮವಾಗುತ್ತದೆ, ವಿಕರ್ಮವಾಗುವುದಿಲ್ಲ. ಅಲ್ಲಿ ವಿಕರ್ಮದ ಹೆಸರೇ ಇರುವುದಿಲ್ಲ. ಈ ಜ್ಞಾನದ ಮೂರನೆಯ ನೇತ್ರವು ಈಗ ಸಿಕ್ಕಿದೆ. ನೀವು ಮಕ್ಕಳು ತಂದೆಯ ಮೂಲಕ ತ್ರಿನೇತ್ರಿ, ತ್ರಿಕಾಲದರ್ಶಿಗಳಾಗಿದ್ದೀರಿ. ಯಾವುದೇ ಮನುಷ್ಯರು ಈ ರೀತಿ ಮಾಡಲು ಸಾಧ್ಯವಿಲ್ಲ. ಮಾಡುವವರು ತಂದೆಯಾಗಿದ್ದಾರೆ. ಮೊದಲು ಆಸ್ತಿಕರಾದಾಗಲೇ ತ್ರಿನೇತ್ರಿ, ತ್ರಿಕಾಲದರ್ಶಿಗಳಾಗುವಿರಿ. ಇಡೀ ನಾಟಕದ ರಹಸ್ಯ ಮೂಲವತನ, ಸೂಕ್ಷ್ಮವತನ, 84 ಜನ್ಮಗಳ ಚಕ್ರವು ಎಲ್ಲವೂ ಬುದ್ಧಿಯಲ್ಲಿದೆ, ನಂತರದಲ್ಲಿ ಅನ್ಯ ಧರ್ಮಗಳು ಬರುತ್ತವೆ. ವೃದ್ಧಿ ಹೊಂದುತ್ತಿರುತ್ತಾರೆ. ಆ ಧರ್ಮ ಸ್ಥಾಪಕರಿಗೆ ಗುರುಗಳೆಂದು ಹೇಳುವುದಿಲ್ಲ. ಸರ್ವರ ಸದ್ಗತಿ ಮಾಡುವ ಸದ್ಗುರು ಒಬ್ಬರೇ ಆಗಿದ್ದಾರೆ. ಉಳಿದವರು ಯಾರೂ ಸಹ ಸದ್ಗತಿ ಮಾಡಲು ಬರುವುದಿಲ್ಲ, ಅವರು ಕೇವಲ ಧರ್ಮ ಸ್ಥಾಪಕರಾಗಿದ್ದಾರೆ. ಕ್ರೈಸ್ತನನ್ನು ನೆನಪು ಮಾಡುವುದರಿಂದ ಸದ್ಗತಿಯಾಗುತ್ತದೆಯೇ? ಏನೂ ಇಲ್ಲ. ಅವರೆಲ್ಲರು ಭಕ್ತಿಯ ಸಾಲಿನಲ್ಲಿದ್ದಾರೆಂದು ಹೇಳಲಾಗುತ್ತದೆ. ಜ್ಞಾನದ ಸಾಲಿನಲ್ಲಿ ಕೇವಲ ನೀವೇ ಇದ್ದೀರಿ, ಮಾರ್ಗದರ್ಶಕರಾಗಿದ್ದೀರಿ. ಅವರೆಲ್ಲರಿಗೆ ಶಾಂತಿಧಾಮ, ಸುಖಧಾಮದ ಮಾರ್ಗವನ್ನು ತಿಳಿಸಿ. ತಂದೆಯು ಮುಕ್ತಿದಾತ, ಮಾರ್ಗದರ್ಶಕನಾಗಿದ್ದಾರೆ. ಆ ತಂದೆಯನ್ನು ನೆನಪು ಮಾಡುವುದರಿಂದಲೇ ವಿಕರ್ಮಗಳು ವಿನಾಶವಾಗುತ್ತವೆ.

ನೀವು ಮಕ್ಕಳೀಗ ವಿಕರ್ಮ ವಿನಾಶ ಮಾಡಿಕೊಳ್ಳುವ ಪುರುಷಾರ್ಥವನ್ನು ಮಾಡುತ್ತಿದ್ದೀರಿ. ಆದ್ದರಿಂದ ನೀವು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ ಒಂದು ಕಡೆ ಪುರುಷಾರ್ಥ, ಇನ್ನೊಂದು ಕಡೆ ವಿಕರ್ಮವಾಗದಿರಲಿ. ಪುರುಷಾರ್ಥದ ಜೊತೆ ಜೊತೆಗೆ ವಿಕರ್ಮ ಮಾಡಿದಿರೆಂದರೆ ನೂರು ಪಟ್ಟು ಶಿಕ್ಷೆಯಾಗುವುದು. ಎಷ್ಟು ಸಾಧ್ಯವೋ ಅಷ್ಟು ವಿಕರ್ಮಗಳನ್ನು ಮಾಡಬೇಡಿ. ಇಲ್ಲವಾದರೆ ವಿಕರ್ಮಗಳ ಖಾತೆಯು ಹೆಚ್ಚುತ್ತಾ ಹೋಗುವುದು. ಹೆಸರನ್ನು ಹಾಳು ಮಾಡುತ್ತೀರಿ, ಭಗವಂತನೇ ನಮಗೆ ಓದಿಸುತ್ತಾರೆಂದು ನಿಮಗೆ ಗೊತ್ತಿದೆ ಅಂದಮೇಲೆ ಪುನಃ ಯಾವುದೇ ವಿಕರ್ಮ ಮಾಡಬಾರದು. ಕಳ್ಳತನವು ಚಿಕ್ಕದಾಗಿರಲಿ, ದೊಡ್ಡದಾಗಿರಲಿ ಪಾಪವಂತೂ ಆಗುತ್ತದೆಯಲ್ಲವೆ. ಈ ಕಣ್ಣುಗಳು ಬಹಳ ಮೋಸ ಮಾಡುತ್ತದೆ. ತಂದೆಯು ಮಕ್ಕಳ ಚಲನೆಯಿಂದಲೇ ಅರಿತುಕೊಳ್ಳುತ್ತಾರೆ. ಆದ್ದರಿಂದ ಎಂದಿಗೂ ಸಂಕಲ್ಪದಲ್ಲಿಯೂ ಬರಬಾರದು - ಇವರು ನನ್ನ ಸ್ತ್ರೀಯಾಗಿದ್ದಾರೆಂದು. ನಾವು ಬ್ರಹ್ಮಾಕುಮಾರ-ಕುಮಾರಿಯಾಗಿದ್ದೇವೆ, ಶಿವ ತಂದೆಯ ಮೊಮ್ಮಕ್ಕಳಾಗಿದ್ದೇವೆ, ತಂದೆಯೊಂದಿಗೆ ಪ್ರತಿಜ್ಞೆ ಮಾಡಿದ್ದೇವೆ, ಶ್ರೀ ರಕ್ಷೆಯನ್ನು ಕಟ್ಟಿಕೊಂಡಿದ್ದೇವೆ ಮತ್ತೆ ಇನ್ನೇಕೆ ಕಣ್ಣುಗಳು ಮೋಸಗೊಳಿಸುತ್ತವೆ? ನೆನಪಿನ ಬಲದಿಂದ ಯಾವುದೇ ಕರ್ಮೇಂದ್ರಿಯಗಳ ಮೋಸದಿಂದ ಪಾರಾಗಬಲ್ಲಿರಿ. ಇದರಲ್ಲಿ ಬಹಳ ಪರಿಶ್ರಮ ಪಡಬೇಕು. ತಂದೆಯ ಆದೇಶದಂತೆ ಕಾರ್ಯದಲ್ಲಿ ತಂದು ಚಾರ್ಟನ್ನು ಬರೆಯಿರಿ. ಸ್ತ್ರೀ-ಪುರುಷರು ಪರಸ್ಪರ ಇದನ್ನೇ ಮಾತನಾಡಿಕೊಳ್ಳಿ - ನಾವು ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳೋಣ, ಶಿಕ್ಷಕರಿಂದ ಪೂರ್ಣ ಓದೋಣ. ಇಂತಹ ಶಿಕ್ಷಕರು ಮತ್ತೆಂದೂ ಸಿಗಲು ಸಾಧ್ಯವಿಲ್ಲ, ಯಾರು ಬೇಹದ್ದಿನ ಜ್ಞಾನವನ್ನು ಕೊಡುವರು. ಇದು ಲಕ್ಷ್ಮೀ-ನಾರಾಯಣರಿಗೇ ಗೊತ್ತಿಲ್ಲ, ಅಂದಮೇಲೆ ಅವರ ನಂತರ ಬರುವವರಿಗೆ ಏನು ತಿಳಿದಿರುತ್ತದೆ! ತಂದೆಯು ತಿಳಿಸುತ್ತಾರೆ - ಈ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೇವಲ ನೀವು ಸಂಗಮಯುಗದಲ್ಲಿ ತಿಳಿದುಕೊಳ್ಳುತ್ತೀರಿ, ಹೀಗೆ ಮಾಡಿ, ಹಾಗೆ ಮಾಡಿ ಎಂದು ತಂದೆಯು ಬಹಳಷ್ಟು ತಿಳಿಸುತ್ತಾರೆ. ಆದರೆ ಇಲ್ಲಿಂದ ಹೋದರೆಂದರೆ ಎಲ್ಲವೂ ಸಮಾಪ್ತಿಯಾಗುತ್ತದೆ. ಶಿವ ತಂದೆಯು ನಮಗೆ ಹೇಳುತ್ತಾರೆಂದು ತಿಳಿದುಕೊಳ್ಳುವುದೇ ಇಲ್ಲ. ಯಾವಾಗ ಶಿವ ತಂದೆಯು ತಿಳಿಸುತ್ತಾರೆಂದೇ ತಿಳಿದುಕೊಳ್ಳಿ. ಇವರ ಭಾವಚಿತ್ರವನ್ನೂ ಇಟ್ಟುಕೊಳ್ಳಬೇಡಿ. ಕೇವಲ ಈ ರಥವನ್ನು (ಬ್ರಹ್ಮಾ) ಲೋನ್ ಆಗಿ ತೆಗೆದುಕೊಂಡಿದ್ದೇನೆ. ಇವರೂ ಪುರುಷಾರ್ಥಿಯಾಗಿದ್ದಾರೆ. ನಾನು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ಇವರೂ ಹೇಳುತ್ತಾರೆ. ನಿಮ್ಮ ತರಹ ಇವರೂ ಸಹ ವಿದ್ಯಾರ್ಥಿ ಜೀವನದಲ್ಲಿದ್ದಾರೆ. ಮುಂದೆ ಹೋದಂತೆ ನಿಮ್ಮ ಮಹಿಮೆಯು ಹೆಚ್ಚುತ್ತಾ ಹೋಗುವುದು. ಈಗಂತೂ ನೀವು ಪೂಜ್ಯ ದೇವತೆಗಳಾಗಲು ಓದುತ್ತೀರಿ ನಂತರ ಸತ್ಯಯುಗದಲ್ಲಿ ದೇವತೆಗಳಾಗುವಿರಿ. ಇವೆಲ್ಲಾ ಮಾತುಗಳನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಯಾರ ಅದೃಷ್ಟದಲ್ಲಿಲ್ಲವೋ ಅವರಿಗೆ ಈ ಸಂಶಯವು ಉದ್ಭವವಾಗುತ್ತದೆ ಶಿವ ತಂದೆಯು ಬಂದು ಹೇಗೆ ಓದಿಸುತ್ತಾರೆ? ನಾನು ಇದನ್ನು ಒಪ್ಪುವುದಿಲ್ಲ ಎಂದು ಶಂಖಿಸುತ್ತಾರೆ. ಒಪ್ಪುವುದೇ ಇಲ್ಲವೆಂದಾಗ ಮತ್ತೆ ಶಿವ ತಂದೆಯನ್ನು ಹೇಗೆ ನೆನಪು ಮಾಡುವರು! ವಿಕರ್ಮಗಳು ವಿನಾಶವಾಗುವುದೇ ಇಲ್ಲ. ಈ ರಾಜಧಾನಿಯು ನಂಬರ್ವಾರ್ ಆಗಿ ಸ್ಥಾಪನೆಯಾಗುತಿದೆ. ದಾಸ-ದಾಸಿಯರೂ ಬೇಕಲ್ಲವೆ. ರಾಜರಿಗೆ ದಾಸಿಯರೂ ಸಹ ವರದಕ್ಷಿಣೆಯಲ್ಲಿ ಸಿಗುತ್ತಾರೆ. ಇಲ್ಲಿಯೇ ಇಷ್ಟೊಂದು ದಾಸಿಯರನ್ನು ಇಟ್ಟುಕೊಳ್ಳುತ್ತಾರೆಂದಾಗ ಸತ್ಯಯುಗದಲ್ಲಿ ಇನ್ನೆಷ್ಟು ಮಂದಿ ಇರುತ್ತಾರೆ! ಆದ್ದರಿಂದ ದಾಸ-ದಾಸಿಯರಾಗುವಂತಹ ಡೀಲ ಪುರುಷಾರ್ಥವನ್ನು ಮಾಡಬಾರದು. ಬಾಬಾ, ನಾವೀಗ ಶರೀರವನ್ನು ಬಿಟ್ಟರೆ ಏನು ಪದವಿ ಸಿಗಬಹುದೆಂದು ತಂದೆಯನ್ನು ಕೇಳಬಹುದು. ತಂದೆಯು ತಕ್ಷಣ ತಿಳಿಸಿ ಬಿಡುತ್ತಾರೆ - ತಮ್ಮ ಚಾರ್ಟನ್ನು ತಾವೇ ನೋಡಿಕೊಳ್ಳಿ, ಅಂತಿಮದಲ್ಲಿ ನಂಬರ್ವಾರ್ ಕರ್ಮಾತೀತ ಸ್ಥಿತಿಯು ಆಗಿ ಬಿಡುವುದು. ಇದು ಸತ್ಯ ಸಂಪಾದನೆಯಾಗಿದೆ. ಆ ಸಂಪಾದನೆಯಲ್ಲಾದರೆ ರಾತ್ರಿ-ಹಗಲು ಎಷ್ಟೊಂದು ಬ್ಯುಸಿಯಾಗಿರುತ್ತಾರೆ! ವ್ಯಾಪಾರಿಗಳು ಒಂದು ಕೈಯಿಂದ ಊಟ ಮಾಡುತ್ತಾರೆ. ಇನ್ನೊಂದು ಕೈಯಿಂದ ಪೋನಿನಲ್ಲಿ ಕಾರೋಬಾರನ್ನು ನಡೆಸುತ್ತಿರುತ್ತಾರೆ. ಈಗ ತಿಳಿಸಿ, ಇಂತಹ ವ್ಯಕ್ತಿಗಳು ಜ್ಞಾನದಲ್ಲಿ ನಡೆಯಬಲ್ಲರೆ? ನಮಗೆ ಬಿಡುವೆಲ್ಲಿದೆ ಎಂದು ಹೇಳುತ್ತಾರೆ. ಅರೆ! ಸತ್ಯ ರಾಜ್ಯಭಾಗ್ಯವು ಸಿಗುತ್ತದೆ. ಕೇವಲ ತಂದೆಯನ್ನು ನೆನಪು ಮಾಡುವುದರಿಂದ ವಿಕರ್ಮಗಳು ವಿನಾಶವಾಗುತ್ತವೆ. ಅಷ್ಟ ದೇವತೆ ಮುಂತಾದವರನ್ನು ನೆನಪು ಮಾಡುತ್ತಾರಲ್ಲವೆ. ಅವರ ನೆನಪಿನಿಂದಮ್ತೂ ಏನೂ ಸಿಗುವುದಿಲ್ಲ. ತಂದೆಯು ಮತ್ತೆ-ಮತ್ತೆ ಪ್ರತಿಯೊಂದು ಮಾತನ್ನೂ ತಿಳಿಸುತ್ತಿರುತ್ತಾರೆ. ಏಕೆಂದರೆ ಕೊನೆಗೊಂದು ದಿನ ಇಂತಹ ಮಾತನ್ನು ನಮಗೆ ತಿಳಿಸಿರಲಿಲ್ಲವೆಂದು ಯಾರೂ ಹೇಳಬಾರದು. ನೀವು ಮಕ್ಕಳು ಎಲ್ಲರಿಗೆ ಸಂದೇಶವನ್ನು ಕೊಡಬೇಕಾಗಿದೆ. ಏರೋಪ್ಲೇನ್ನಿಂದಲೂ ಸಂದೇಶ ಪತ್ರಗಳನ್ನು ಹಾಕುವ ಪ್ರಯತ್ನ ಪಡಬೇಕು. ಅದರಲ್ಲಿ ಬರೆಯಿರಿ ಶಿವ ತಂದೆಯೂ ಹೀಗೆ ಹೇಳುತ್ತಾರೆ, ಬ್ರಹ್ಮಾರವರೂ ಸಹ ಶಿವ ತಂದೆಯ ಮಗನಾಗಿದ್ದಾರೆ. ಪ್ರಜಾಪಿತನಾಗಿರುವುದರಿಂದ ಅವರೂ ತಂದೆ, ಇವರೂ ತಂದೆಯಾದರು. ಶಿವ ತಂದೆ ಎಂದು ಹೇಳಿದರೆ ಸಾಕು, ಅನೇಕ ಮಕ್ಕಳಿಗೆ ಪ್ರೇಮದ ಕಣ್ಣೀರು ಬಂದು ಬಿಡುತ್ತದೆ. ತಂದೆಯನ್ನು ಎಂದೂ ನೋಡಿಯೂ ಇರುವುದಿಲ್ಲ. ಆದರೆ ಬರೆಯುತ್ತಾರೆ - ಬಾಬಾ, ಯಾವಾಗ ಬಂದು ತಮ್ಮೊಂದಿಗೆ ಮಿಲನ ಮಾಡುತ್ತೇವೆ, ಬಾಬಾ ಬಂಧನದಿಂದ ಬಿಡಿಸಿ ಎಂದು ಅನೇಕರಿಗೆ ತಂದೆಯ ಮತ್ತು ರಾಜಕುಮಾರನ ಸಾಕ್ಷಾತ್ಕಾರವೂ ಆಗುತ್ತದೆ. ಮುಂದೆ ಹೋದಂತೆ ಅನೇಕರಿಗೆ ಸಾಕ್ಷಾತ್ಕಾರವಾಗುತ್ತದೆ. ಆದರೂ ಸಹ ಪುರುಷಾರ್ಥವನ್ನಂತೂ ಮಾಡಬೇಕಾಗುತ್ತದೆ. ಮನುಷ್ಯರಿಗೆ ಸಾಯುವ ಸಮಯದಲ್ಲಿಯೂ ಭಗವಂತನನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ನೀವೂ ಸಹ ನೋಡುತ್ತೀರಿ, ಅಂತಿಮದಲ್ಲಿ ಹೆಚ್ಚಿನ ಪುರುಷಾರ್ಥ ಮಾಡುತ್ತಾರೆ, ನೆನಪು ಮಾಡತೊಡಗುತ್ತಾರೆ.

ತಂದೆಯು ಸಲಹೆ ನೀಡುತ್ತಾರೆ - ಸಮಯವು ಸಿಕ್ಕಿದಾಗ ಪುರುಷಾರ್ಥ ಮಾಡಿ. ಮುಂದುವರೆಯುತ್ತಾ ಹೋಗಿ. ತಂದೆಯ ನೆನಪಿನಲ್ಲಿದ್ದು ವಿಕರ್ಮ ವಿನಾಶ ಮಾಡಿಕೊಳ್ಳಿ ಆಗ ಕೊನೆಯಲ್ಲಿ ಬಂದರೂ ಸಹ ಮೊದಲು ಹೋಗುತ್ತೀರಿ. ಹೇಗೆ ರೈಲು ತಡವಾಗುತ್ತದೆಯೆಂದರೆ ಅದನ್ನು ತೀವ್ರವಾಗಿ ಚಾಲನೆ ಮಾಡುತ್ತಾರಲ್ಲವೆ. ನಿಮಗೂ ಸಹ ಪುರುಷಾರ್ಥದಲ್ಲಿ ಬಹಳ ಬೇಗನೆ ಮುಂದೆ ಹೋಗಲು ಸಮಯವು ಸಿಗುತ್ತದೆ. ಇಲ್ಲಿ ಬಂದು ಸಂಪಾದನೆ ಮಾಡಿಕೊಳ್ಳಿ, ತಂದೆಯು ಸಲಹೆಯನ್ನೂ ಕೊಡುತ್ತಾರೆ - ಹೀಗೆ ಮಾಡಿ ತಮ್ಮ ಕಲ್ಯಾಣ ಮಾಡಿಕೊಳ್ಳಿ. ತಂದೆಯ ಶ್ರೀಮತದಂತೆ ನಡೆಯಿರಿ. ಏರೋಪ್ಲೇನ್ನಿಂದ ಪತ್ರಿಕೆಗಳನ್ನು ಹಾಕಿರಿ, ಇದರಿಂದ ಮನುಷ್ಯರು ತಿಳಿದುಕೊಳ್ಳಲಿ - ಇವರು ಬಹಳ ಚೆನ್ನಾಗಿ ಸಂದೇಶವನ್ನು ಕೊಡುತ್ತಿರುತ್ತಾರೆ. ಭಾರತವು ಎಷ್ಟು ದೊಡ್ಡದಾಗಿದೆ! ಅಂದಮೇಲೆ ಎಲ್ಲರಿಗೆ ಅರ್ಥವಾಗಬೇಕು ಏಕೆಂದರೆ ಬಾಬಾ ನಮಗಂತೂ ಗೊತ್ತೇ ಆಗಲಿಲ್ಲ ಎಂದು ಯಾರೂ ಹೇಳುವಂತಾಗಬಾರದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸೂಕ್ಷ್ಮ ಬುದ್ಧಿಯವರಾಗಿ ತಮ್ಮ ಪರಿಶೀಲನೆ ಮಾಡಿಕೊಳ್ಳಬೇಕು - ಕಣ್ಣುಗಳು ಮೋಸ ಮಾಡುತ್ತಿಲ್ಲವೆ? ಯಾವುದೇ ಕರ್ಮೇಂದ್ರಿಯಕ್ಕೆ ವಶರಾಗಿ ಉಲ್ಟಾ ಕರ್ಮವನ್ನು ಮಾಡಬಾರದು. ನೆನಪಿನ ಬಲದಿಂದ, ಕರ್ಮೇಂದ್ರಿಯಗಳ ಮೋಸದಿಂದ ಮುಕ್ತರಾಗಬೇಕಾಗಿದೆ.

2. ಈ ಸತ್ಯ ಸಂಪಾದನೆಗಾಗಿ ಸಮಯವನ್ನು ತೆಗೆಯಬೇಕಾಗಿದೆ. ತಡವಾಗಿ ಬಂದರೂ ಸಹ ಪುರುಷಾರ್ಥದಿಂದ ತೀವ್ರವಾಗಿ ಮುಂದೆ ಹೋಗಬೇಕಾಗಿದೆ. ಇದು ವಿಕರ್ಮ ವಿನಾಶ ಮಾಡಿಕೊಳ್ಳುವ ಸಮಯವಾಗಿದೆ. ಆದ್ದರಿಂದ ಯಾವುದೇ ವಿಕರ್ಮ ಮಾಡಬಾರದು.

ವರದಾನ:
ಎಲ್ಲಾ ಕಂಡೀಷನ್(ಪರಿಸ್ಥಿತಿಯಲ್ಲಿ)ನಲ್ಲಿಯೂ ಸುರಕ್ಷಿತರಾಗಿರುವಂತಹ ಏರ್ಕಂಡೀಷನ್ ಟಿಕೆಟ್ನ ಅಧಿಕಾರಿ ಭವ.

ಯಾರು ಇಲ್ಲಿ ಎಲ್ಲಾ ಪರಿಸ್ಥಿತಿಗಳಲ್ಲಿಯೂ ಸುರಕ್ಷಿತರಾಗಿರುತ್ತಾರೆ ಏರ್ಕಂಡೀಷನ್ನ ಟಿಕೆಟ್ ಅಂತಹ ಮಕ್ಕಳಿಗೇ ಸಿಗುತ್ತದೆ. ಎಂತಹದೇ ಪರಿಸ್ಥಿತಿ ಬರಲಿ, ಯಾವುದೇ ಸಮಸ್ಯೆಗಳು ಬರಲಿ, ಆದರೆ ಎಲ್ಲಾ ಸಮಸ್ಯೆಗಳನ್ನು ಸೆಕೆಂಡ್ನಲ್ಲಿ ಪಾರಾಗುವಂತಹ ಸರ್ಟಿಫಿಕೆಟ್ ಅವಶ್ಯಕವಿದೆ. ಹೇಗೆ ಆ ಟಿಕೆಟ್ಗಾಗಿ ಹಣವನ್ನು ಕೊಡುವಿರಿ ಇಲ್ಲಿಯೂ ಹಾಗೆಯೇ ಸದಾ ವಿಜಯಿ ಆಗಲು ಹಣದ ಅವಶ್ಯಕತೆಯಿದೆ - ಯಾವುದರಿಂದ ಟಿಕೆಟ್ ಸಿಗುವುದು. ಈ ಹಣವನ್ನು ಪ್ರಾಪ್ತಿ ಮಾಡಿಕೊಳ್ಳುವುದಕ್ಕಾಗಿ ಪರಿಶ್ರಮ ಪಡುವ ಅವಶ್ಯಕತೆ ಇಲ್ಲ, ಕೇವಲ ಸದಾ ತಂದೆಯ ಜೊತೆಯಲ್ಲಿರಿ ಆಗ ಅಗಣಿತವಾದ ಸಂಪಾದನೆ ಜಮಾ ಆಗುತ್ತಿರುತ್ತದೆ.

ಸ್ಲೋಗನ್:
ಎಂತಹದೇ ಪರಿಸ್ಥಿತಿ ಇರಲಿ, ಪರಿಸ್ಥಿತಿ ಹೊರಟು ಹೋಗಲಿ ಆದರೆ ಖುಷಿ ಹೋಗದಿರಲಿ.