04.10.20    Avyakt Bapdada     Kannada Murli     29.03.86     Om Shanti     Madhuban


ಡಬಲ್ ವಿದೇಶಿ ಮಕ್ಕಳೊಂದಿಗೆ ಬಾಪ್ದಾದಾರವರ ವಾರ್ತಾಲಾಪ


ಇಂದು ಬಾಪ್ದಾದಾರವರು ವತನದಲ್ಲಿ ನಾಲ್ಕೂ ಕಡೆಯಲ್ಲಿರುವ ಡಬಲ್ ವಿದೇಶಿ ಮಕ್ಕಳನ್ನು ಇಮರ್ಜ್ ಮಾಡುತ್ತಾ, ಎಲ್ಲಾ ಮಕ್ಕಳ ವಿಶೇಷತೆಗಳನ್ನು ನೋಡುತ್ತಿದ್ದರು, ಏಕೆಂದರೆ ಎಲ್ಲಾ ಮಕ್ಕಳು ವಿಶೇಷ ಆತ್ಮರಾಗಿದ್ದಾರೆ. ಆದ್ದರಿಂದ ತಂದೆಯ ಮಕ್ಕಳಾದರು ಅಂದರೆ ಶ್ರೇಷ್ಠ ಭಾಗ್ಯವಂತರಾದರು. ವಿಶೇಷ ಆತ್ಮರಂತು ಎಲ್ಲರೂ ಆಗಿದ್ದಾರೆ, ಆದರೂ ನಂಬರ್ವಾರ್ ಎಂದು ಹೇಳಲಾಗುತ್ತದೆ. ಸ್ವಲ್ಪ ಸಮಯದಲ್ಲಿಯೇ ನಾಲ್ಕೂ ಕಡೆಯಲ್ಲಿಯೂ ಭಿನ್ನ-ಭಿನ್ನ ರೀತಿ-ಪದ್ಧತಿ ಅಥವಾ ಮಾನ್ಯತೆಗಳಿದ್ದರೂ ಸಹ ಒಂದು ಮಾನ್ಯತೆಯ ಏಕಮತದವರಾಗಿ ಬಿಟ್ಟರು ಎಂದು ವಿಶೇಷ ರೂಪದಿಂದ ಬಾಪ್ದಾದಾರವರು ಡಬಲ್ವಿದೇಶಿ ಮಕ್ಕಳನ್ನು ನೋಡುತ್ತಿದ್ದರು. ಒಂದನೆಯದಾಗಿ ಸ್ನೇಹದ ಸಂಬಂಧದಲ್ಲಿ ಬಹಳ ಬೇಗನೆ ಬಂಧಿತರಾದರು. ಸ್ನೇಹದ ಸಂಬಂಧದಲ್ಲಿ, ಈಶ್ವರೀಯ ಪರಿವಾರದವರು ಆಗುವುದರಲ್ಲಿ, ತಂದೆಯ ಮಗುವಾಗುವುದರಲ್ಲಿ ಒಳ್ಳೆಯ ಸಹಯೋಗವನ್ನು ಕೊಟ್ಟರು. ಅಂದಾಗ ಒಂದಂತು ಸ್ನೇಹದರಲ್ಲಿ ಬರುವ ವಿಶೇಷತೆ, ಇನ್ನೊಂದು ಸ್ನೇಹದ ಕಾರಣದಿಂದ ಪರಿವರ್ತನಾ ಶಕ್ತಿಯು ಸಹಜವಾಗಿಯೇ ಪ್ರತ್ಯಕ್ಷ ರೂಪದಲ್ಲಿ (ಧಾರಣೆ) ತಂದರು. ಸ್ವ ಪರಿವರ್ತನೆ ಹಾಗೂ ಜೊತೆ ಜೊತೆಗೆ ಸರಿ ಸಮಾನರ ಪರಿವರ್ತನೆಯಲ್ಲಿ ಬಹಳ ಚೆನ್ನಾಗಿ ಮುಂದುವರೆಯುತ್ತಿದ್ದಾರೆ. ಅಂದಮೇಲೆ ಸ್ನೇಹದ ಶಕ್ತಿ ಮತು ಪರಿವರ್ತನೆ ಮಾಡುವ ಶಕ್ತಿ - ಇವೆರಡೂ ವಿಶೇಷತೆಗಳನ್ನು ಸಾಹಸದಿಂದ ಧಾರಣೆ ಮಾಡಿಕೊಳ್ಳುತ್ತಾ ಬಹಳ ಒಳ್ಳೆಯ ಪ್ರತ್ಯಕ್ಷ ಪ್ರಮಾಣವನ್ನೇ ತೋರಿಸುತ್ತಿದ್ದಾರೆ.

ವತನದಲ್ಲಿಂದು ಬಾಪ್ದಾದಾ ಪರಸ್ಪರದಲ್ಲಿ ಮಕ್ಕಳ ವಿಶೇಷತೆಯ ಬಗ್ಗೆ ವಾರ್ತಾಲಾಪ ಮಾಡುತ್ತಿದ್ದರು. ಈಗ ಈ ವರ್ಷದಲ್ಲಿ ಅವ್ಯಕ್ತನು ವ್ಯಕ್ತದಲ್ಲಿ ಮಿಲನವಾಗುವ ಸೀಜನ್ ಅಥವಾ ಮಿಲನದ ಮೇಳವೆಂದಾದರೂ ಹೇಳಿ, ಅದು ಸಮಾಪ್ತಿಯಾಗುತ್ತಿದೆ. ಇದರಲ್ಲಿ ಬಾಪ್ದಾದಾರವರು ಎಲ್ಲರ ಫಲಿತಾಂಶವನ್ನು ನೋಡುತ್ತಿದ್ದರು. ಹಾಗೆ ನೋಡಿದರೆ ಅವ್ಯಕ್ತ ರೂಪದಿಂದ ಅವ್ಯಕ್ತ ಸ್ಥಿತಿಯಿಂದ ಸದಾ ಕಾಲವೂ ಮಿಲನವಾಗುತ್ತಿರುತ್ತದೆ ಮತ್ತು ಸದಾ ಇರುತ್ತದೆ. ಆದರೆ ಸಾಕಾರ ರೂಪದ ಮೂಲಕ ಮಿಲನವಾಗುವ ಸಮಯವನ್ನು ನಿಶ್ಚಿತಗೊಳಿಸಲಾಗುತ್ತದೆ ಮತ್ತು ಇದರಲ್ಲಿ ಸಮಯದ ಮಿತಿಯನ್ನಿಡಲಾಗುತ್ತದೆ. ಅವ್ಯಕ್ತ ರೂಪದ ಮಿಲನದಲ್ಲಿ ಸಮಯದ ಮಿತಿಯಿಲ್ಲ, ಯಾರೆಷ್ಟು ಸಮಯ ಬೇಕಾದರೂ ಮಿಲನ ಮಾಡಬಹುದು. ಅವ್ಯಕ್ತ ಶಕ್ತಿಯ ಅನುಭೂತಿ ಮಾಡುತ್ತಾ, ಸ್ವಯಂನ್ನು ಸೇವೆಯನ್ನು ಮುಂದುವರೆಸಬಹುದು. ಆದರೂ ನಿಶ್ಚಿತ ಸಮಯದನುಸಾರವಾಗಿ ಈ ವರ್ಷದ ಈ ಸೀಜನ್ ಸಮಾಪ್ತಿಯಾಗುತ್ತಿದೆ. ಆದರೆ ಸಮಾಪ್ತಿಯಲ್ಲ, ಸಂಪನ್ನವಾಗುತ್ತಿದೆ. ಮಿಲನವಾಗುವುದು ಅಂದರೆ ಸಮಾನರಾಗುವುದು. ಸಮಾನರಾದಿರಲ್ಲವೆ. ಅಂದಮೇಲೆ ಸಮಾಪ್ತಿಯಲ್ಲ, ಭಲೆ ಸೀಜನ್ನಿನ ಸಮಯವಂತು ಸಮಾಪ್ತಿಯಾಗುತ್ತಿದೆ. ಆದರೆ ಸ್ವಯಂ ತಾವು ಸಮಾನ ಮತ್ತು ಸಂಪನ್ನರಾದಿರಿ ಆದ್ದರಿಂದಲೇ ವತನದಲ್ಲಿ ಬಾಪ್ದಾದಾರವರು ನಾಲ್ಕೂ ಕಡೆಯಲ್ಲಿನ ಡಬಲ್ ವಿದೇಶಿ ಮಕ್ಕಳನ್ನು ನೋಡುತ್ತಾ ಹರ್ಷಿತವಾಗುತ್ತಿದ್ದರು ಏಕೆಂದರೆ ಸಾಕಾರದಲ್ಲಂತು ಕೆಲವರು ಬರಲು ಸಾಧ್ಯವಾಗಬಹುದು, ಕೆಲವರಿಗೆ ಬರಲು ಸಾಧ್ಯವಾಗದೇ ಇರಬಹುದು. ಆದ್ದರಿಂದ ಬರಲು ಸಾಧ್ಯವಾಗದಿದ್ದಾಗ ತನ್ನ ಪತ್ರ ಅಥವಾ ಚಿತ್ರವನ್ನು (ಗ್ರೀಟಿಂಗ್ ಕಾರ್ಡ್) ಕಳುಹಿಸುತ್ತಾರೆ. ಆದರೆ ಅವ್ಯಕ್ತ ರೂಪದಲ್ಲಿ ಬಾಪ್ದಾದಾರವರು ನಾಲ್ಕೂ ಕಡೆಯಲ್ಲಿನ ಸಂಘಟನೆಯನ್ನು ಸಹಜವಾಗಿಯೇ ಇಮರ್ಜ್ ಮಾಡಬಹುದು. ಒಂದುವೇಳೆ ಇಲ್ಲೇನಾದರೂ (ಸಾಕಾರದಲ್ಲಿ/ಮಧುಬನದಲ್ಲಿ) ಎಲ್ಲರನ್ನೂ ಕರೆಸಿದರೆ ಇರುವುದಕ್ಕಾಗಿ ಎಲ್ಲಾ ಸಾಧನಗಳು ಬೇಕಾಗುತ್ತದೆ. ಅವ್ಯಕ್ತ ವತನದಲ್ಲಂತು ಈ ಸ್ಥೂಲ ಸಾಧನಗಳ ಅವಶ್ಯಕತೆಯೇನೂ ಇರುವುದಿಲ್ಲ. ಅಲ್ಲಂತು ಕೇವಲ ಡಬಲ್ ವಿದೇಶಿಗಳೇ ಅಲ್ಲ ಆದರೆ ಇಡೀ ಭಾರತದ ಮಕ್ಕಳನ್ನೂ ಒಟ್ಟು ಗೂಡಿಸಿದರೂ ಹೀಗೆನಿಸುತ್ತದೆ, ಇದು ಬೇಹದ್ದಿನ ಅವ್ಯಕ್ತ ವತನವಾಗಿದೆ. ಅಲ್ಲಿ ಭಲೆ ಎಷ್ಟೇ ಲಕ್ಷಗಳೇ ಇರಬಹುದು ಆದರೂ ಹೀಗೆನಿಸುತ್ತದೆ, ಹೇಗೆಂದರೆ ಒಂದು ಚಿಕ್ಕದಾದ ಸಂಘಟನೆಯಂತೆ ಕಾಣಿಸುತ್ತಿದೆ. ಇಂದು ವತನದಲ್ಲಿ ಕೇವಲ ಡಬಲ್ ವಿದೇಶಿಗಳನ್ನಷ್ಟೇ ಇಮರ್ಜ್ ಮಾಡಿದ್ದರು.

ಬಾಪ್ದಾದಾರವರು ನೋಡುತ್ತಿದ್ದರು - ಭಿನ್ನವಾದ ರೀತಿ-ಪದ್ಧತಿಗಳಿದ್ದರೂ ಸಹ ಧೃಡ ಸಂಕಲ್ಪದಿಂದ ಪ್ರಗತಿಯನ್ನು ಚೆನ್ನಾಗಿ ಮಾಡಿದ್ದಾರೆ. ಮೆಜಾರಿಟಿಯಲ್ಲಿ ಉಮ್ಮಂಗ-ಉತ್ಸಾಹದಲ್ಲಿ ನಡೆಯುತ್ತಿದ್ದಾರೆ. ಕೆಲಕೆಲವರು ಆಟ ತೋರಿಸುವವರೂ ಇದ್ದೇ ಇರುತ್ತಾರೆ. ಆದರೆ ಫಲಿತಾಂಶದಲ್ಲಿ ಈ ಅಂತರವನ್ನು ನೋಡಿದರೆ ಹಿಂದಿನ ವರ್ಷದವರೆಗೂ ಬಹಳಷ್ಟು ಗೊಂದಲವಾಗುತ್ತಿದ್ದರು. ಆದರೆ ಈ ವರ್ಷದ ಫಲಿತಾಂಶದಲ್ಲಿ ಕೆಲವು ಮಕ್ಕಳು ಮೊದಲಿಗಿಂತಲೂ ಶಕ್ತಿಶಾಲಿಯಾಗಿರುವುದನ್ನು ನೋಡಿದೆವು. ಕೆಲಕೆಲವರು ಬಾಪ್ದಾದಾರವರಿಗೆ ಆಟವನ್ನು ತೋರಿಸುವವರನ್ನೂ ನೋಡಿದೆವು. ತಬ್ಬಿಬ್ಬಾಗುವ ಆಟವನ್ನೂ ಮಾಡುತ್ತಾರಲ್ಲವೆ. ಆ ಸಮಯದ ವಿಡಿಯೋ ಮಾಡಿ, ಕುಳಿತು ನೋಡಿದರೆ ತಮಗೂ ಸಹ ಇದು ಡ್ರಾಮಾ ಎನಿಸುತ್ತದೆ. ಆದರೆ ಮುಂಚೆಗಿಂತಲೂ ಅಂತರವಿದೆ. ಈಗ ಅನುಭವಿಯಾಗಿದ್ದಾರೆ, ಗಂಭೀರವೂ ಆಗುತ್ತಿದ್ದಾರೆ. ಅಂದಮೇಲೆ ಈ ಫಲಿತಾಂಶವನ್ನು ನೋಡಿದರು - ವಿದ್ಯೆಯೊಂದಿಗೆ ಪ್ರೀತಿ ಹಾಗೂ ನೆನಪಿನಲ್ಲಿರುವ ಉಮ್ಮಂಗವು ಭಿನ್ನ ರೀತಿ-ಪದ್ಧತಿಯ ಮಾನ್ಯತೆಯನ್ನೂ ಸಹಜವಾಗಿಯೇ ಪರಿವರ್ತನೆ ಮಾಡಿಸುತ್ತದೆ. ಭಾರತವಾಸಿಗಳಿಗೆ ಪರಿವರ್ತನೆಯಾಗುವುದರಲ್ಲಿ ಸಹಜವಿದೆ. ದೇವತೆಗಳನ್ನು ತಿಳಿದಿದ್ದಾರೆ, ಶಾಸ್ತ್ರಗಳ ಮಿಕ್ಸ್ ನಾಲೆಡ್ಜ್ನ್ನು ತಿಳಿದಿದ್ದಾರೆ ಆದ್ದರಿಂದ ಈ ಮಾನ್ಯತೆಗಳು ಭಾರತವಾಸಿಗಳಿಗಾಗಿ ಅಷ್ಟೇನೂ ಹೊಸದಲ್ಲ. ಆದರೂ ನಾಲ್ಕೂ ಕಡೆಯಲ್ಲಿನ ಎಲ್ಲಾ ಮಕ್ಕಳಲ್ಲಿ ಇಂತಹ ನಿಶ್ಚಯಬುದ್ಧಿ, ಅಟಲ, ಅಚಲ ಆತ್ಮರನ್ನು ನೋಡಿದರು. ಹಾಗೆಯೇ ನಿಶ್ಚಿಯಬುದ್ಧಿಯವರು ಅನ್ಯರನ್ನೂ ನಿಶ್ಚಯಬುದ್ಧಿಯವರನ್ನಾಗಿ ಮಾಡುವುದರಲ್ಲಿ ಉದಾಹರಣೆಯಾಗಿದ್ದಾರೆ. ಪ್ರವೃತ್ತಿಯಲ್ಲಿ ಇರುತ್ತಿದ್ದರೂ ಶಕ್ತಿಶಾಲಿ ಸಂಕಲ್ಪದಿಂದ ದೃಷ್ಟಿ, ವೃತ್ತಿಯನ್ನು ಪರಿವರ್ತನೆ ಮಾಡಿ ಬಿಡುತ್ತಾರೆ. ಅಂತಹ ವಿಶೇಷ ರತ್ನಗಳನ್ನೂ ನೋಡಿದೆವು. ಕೆಲವರು ಇಂತಹ ಮಕ್ಕಳೂ ಇದ್ದಾರೆ, ಯಾರೆಷ್ಟೇ ತನ್ನ ರೀತಿಯನುಸಾರ ಅಲ್ಪಕಾಲದ ಸಾಧನಗಳಲ್ಲಿ, ಅಲ್ಪಕಾಲದ ಸುಖಗಳಲ್ಲಿ ಮಸ್ತರಾಗಿದ್ದರು, ಅಂತಹವರೂ ಸಹ ಹಗಲು-ರಾತ್ರಿಯ ಪರಿವರ್ತನೆಯಲ್ಲಿ ಬಹಳ ತೀವ್ರ ಪುರುಷಾರ್ಥಿಯ ಲೈನ್ನಲ್ಲಿ ನಡೆಯುತ್ತಿದ್ದಾರೆ. ಭಲೆ ಹೆಚ್ಚು ಅಂದಾಜೂ ಇಲ್ಲದೆಯೂ ಇರಬಹುದು ಆದರೂ ಒಳ್ಳೆಯವರಾಗಿದ್ದಾರೆ. ಹೇಗೆ ಬಾಪ್ದಾದಾ ಜಾಟ್ಕೂ (ಒಂದೇ ಏಟಿಗೆ ಬಲಿ) ಉದಾಹರಣೆಯನ್ನು ಕೊಡುತ್ತಾರೆ. ಹಾಗೆಯೇ ಮನಸ್ಸಿನಿಂದ ತ್ಯಾಗದ ಸಂಕಲ್ಪವನ್ನು ಮಾಡಿದ ನಂತರ ಈ ಕಣ್ಣುಗಳೂ ಸಹ ಎಲ್ಲಿಯೂ ಮುಳುಗಿ ಬಿಡಬಾರದು - ಇಂತಹವರೂ ಇದ್ದಾರೆ. ಇಂದು ಸಂಪೂರ್ಣ ಫಲಿತಾಂಶವನ್ನು ನೋಡುತ್ತಿದ್ದರು. ಬಾಪ್ದಾದಾರವರು ಶಕ್ತಿಶಾಲಿ ಆತ್ಮರನ್ನು ನೋಡುತ್ತಾ, ಮುಗುಳ್ನಗುತ್ತಾ ಆತ್ಮಿಕ ವಾರ್ತಾಲಾಪ ಮಾಡುತ್ತಿದ್ದರು - ಅದೇನೆಂದರೆ, ಬ್ರಹ್ಮಾನ ರಚನೆಯು ಎರಡು ಪ್ರಕಾರದ ಗಾಯನವಿದೆ. ಒಂದು - ಬ್ರಹ್ಮಾನ ಮುಖದಿಂದ ಬ್ರಾಹ್ಮಣರು ಬಂದರು. ಮತ್ತೊಂದು ರಚನೆ - ಬ್ರಹ್ಮಾ ಸಂಕಲ್ಪದಿಂದ ಸೃಷ್ಟಿಯನ್ನು ರಚಿಸಿದರು. ಅಂದಮೇಲೆ ಬ್ರಹ್ಮಾ ತಂದೆಯು ಎಷ್ಟುಸಮಯದಿಂದ ಶ್ರೇಷ್ಠ-ಶಕ್ತಿಶಾಲಿ ಸಂಕಲ್ಪವನ್ನು ಮಾಡಿರಬಹುದು! ಇರುವುದಂತು ಬಾಪ್ದಾದಾ ಇಬ್ಬರೂ ಇದ್ದಾರೆ, ಆದರೂ ರಚನೆಯ ಮಾತಿನಲ್ಲಿ ಶಿವನ ರಚನೆಯೆಂದು ಹೇಳುವುದಿಲ್ಲ. ಶಿವವಂಶಿ ಎಂದು ಹೇಳುತ್ತಾರೆ. ಶಿವ ಕುಮಾರ ಶಿವ ಕುಮಾರಿ ಎಂದು ಹೇಳುವುದಿಲ್ಲ. ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿ ಎಂದು ಹೇಳಲಾಗುತ್ತದೆ. ಅಂದಾಗ ಬ್ರಹ್ಮಾನ ವಿಶೇಷ ಶ್ರೇಷ್ಠ ಸಂಕಲ್ಪದಿಂದ ಆಹ್ವಾನ ಮಾಡಿದರು ಅರ್ಥಾತ್ ರಚನೆಯನ್ನು ರಚಿಸಿದರು. ಈ ಬ್ರಹ್ಮಾರವರ ಶಕ್ತಿಶಾಲಿ ಸಂಕಲ್ಪದಿಂದ, ಆಹ್ವಾನದಿಂದ ಸಾಕಾರದಲ್ಲಿ ತಲುಪಿದರು.

ಸಂಕಲ್ಪದ ರಚನೆಯೇನು ಕಡಿಮೆಯಲ್ಲ. ಸಂಕಲ್ಪವು ಶಕ್ತಿಶಾಲಿ ಆಗಿರುತ್ತದೆಯೆಂದರೆ - ದೂರದಿಂದ, ಭಿನ್ನವಾದ ಪರದೆಯೊಳಗಿರುವ ಮಕ್ಕಳನ್ನೂ ತನ್ನ ಪರಿವಾರದಲ್ಲಿ ತರಬೇಕಾಗಿತ್ತು, ಅದನ್ನು ಶ್ರೇಷ್ಠ ಶಕ್ತಿಶಾಲಿ ಸಂಕಲ್ಪವು ಪ್ರೇರಣೆಗೊಳಿಸುತ್ತಾ ಸಮೀಪಕ್ಕೆ ತಂದಿತು. ಆದ್ದರಿಂದ ಈ ಶಕ್ತಿಶಾಲಿ ಸಂಕಲ್ಪದ ರಚನೆಯೂ ಸಹ ಶಕ್ತಿಶಾಲಿಯಾಗಿದೆ. ಹಲವರ ಇದೇ ಅನುಭವವಿದೆ - ಬುದ್ಧಿಗೆ ವಿಶೇಷವಾಗಿ ಯಾರೋ ಪ್ರೇರೇಪಿಸುತ್ತಾ ಸಮೀಪಕ್ಕೆ ಕರೆ ತರುತ್ತಿದ್ದಾರೆ ಎನ್ನುವುದಿತ್ತು. ಬ್ರಹ್ಮನ ಶಕ್ತಿಶಾಲಿ ಸಂಕಲ್ಪ ಕಾರಣದಿಂದ, ಈಗಲೂ ಬ್ರಹ್ಮನ ಚಿತ್ರವನ್ನು ನೋಡಿದ ಕೂಡಲೇ ಚೈತನ್ಯತೆಯ ಅನುಭವವಾಗುತ್ತದೆ. ಚೈತನ್ಯ ಸಂಬಂಧದ ಅನುಭವದಿಂದ ಮುಂದುವರೆಯುತ್ತಿದ್ದಾರೆ ಅಂದಾಗ ಬಾಪ್ದಾದಾರವರು ರಚನೆಯನ್ನು ನೋಡುತ್ತಾ ಹರ್ಷಿತವಾಗುತ್ತಿದ್ದಾರೆ. ಈಗ ಇನ್ನು ಮುಂದೆಯೂ ಶಕ್ತಿಶಾಲಿ ರಚನೆಯ ಪ್ರತ್ಯಕ್ಷತೆಯ ಪ್ರಮಾಣವನ್ನು ಕೊಡುತ್ತಿರುತ್ತಾರೆ. ಡಬಲ್ ವಿದೇಶಿಗಳ ಸೇವೆಯ ಸಮಯದ ಲೆಕ್ಕದಿಂದೀಗ ಬಾಲ್ಯದ ಸಮಯವು ಸಮಾಪ್ತಿಯಾಯಿತು. ಈಗ ಅನುಭವಿಯಾಗಿದ್ದು ಅನ್ಯರನ್ನೂ ಅಚಲ-ಅಡೋಲರನ್ನಾಗಿ ಮಾಡುವ, ಆನುಭವ ಮಾಡಿಸುವ ಸಮಯವಾಗಿದೆ. ಈಗ ಆಟವಾಡುವ ಸಮಯವು ಸಮಾಪ್ತಿಯಾಯಿತು, ಈಗ ಸದಾ ಸಮರ್ಥರಾಗಿದ್ದು ನಿರ್ಬಲ ಆತ್ಮರನ್ನು ಸಮರ್ಥರನ್ನಾಗಿ ಮಾಡುತ್ತಾ ನಡೆಯಿರಿ. ತಮ್ಮಲ್ಲಿಯೇ ನಿರ್ಬಲತೆಯ ಸಂಸ್ಕಾರವಿದ್ದರೆ, ಅನ್ಯರನ್ನೂ ನಿರ್ಬಲರನ್ನಾಗಿಯೇ ಮಾಡುತ್ತೀರಿ. ಸಮಯ ಕಡಿಮೆಯಿದೆ ಮತ್ತು ರಚನೆಯು ಬಹಳ ಹೆಚ್ಚಾಗಿ ಬರುವಂತವರಿದ್ದಾರೆ. ಬಹಳ ಆಗಿ ಬಿಟ್ಟಿದ್ದೇವೆ ಎಂದು ಇಷ್ಟು ಸಂಖ್ಯೆಯಲ್ಲಿಯೇ ಖುಷಿಯಾಗಿ ಬಿಡಬಾರದು. ಈಗಂತು ಸಂಖ್ಯೆಯು ಹೆಚ್ಚಾಗಲೇಬೇಕು. ಆದರೆ ತಾವು ಹೇಗೆ ಇಷ್ಟು ಸಮಯದಿಂದ ಪಾಲನೆಯನ್ನು ಪಡೆದಿರಿ ಮತ್ತು ತಾವೆಲ್ಲರೂ ಯಾವ ವಿಧಿಯಿಂದ ಪಾಲನೆಯನ್ನು ಪಡೆದಿದ್ದೀರಿ, ಅದೀಗ ಪರಿವರ್ತನೆಯಾಗುತ್ತಾ ಹೋಗುತ್ತದೆ.

ಹೇಗೆ 50 ವರ್ಷಗಳ ಪಾಲನೆ ಪಡೆದಿರುವವರೇ ಇದ್ದಾರೆ, ಗೋಲ್ಡನ್ ಜೂಬಿಲಿಯರಲ್ಲಿ ಮತ್ತು ಸಿಲ್ವರ್ ಜೂಬಿಲಿಯವರಲ್ಲಿ ಅಂತರವಿದೆಯಲ್ಲವೆ. ಹಾಗೆಯೇ ನಂತರ ಬರುವವರಲ್ಲಿಯೂ ಅಂತರವಾಗುತ್ತಾ ಇರುತ್ತದೆ. ಹಾಗಾದರೆ ಅವರನ್ನು ಸ್ವಲ್ಪ ಸಮಯದಲ್ಲಿಯೇ ಶಕ್ತಿಶಾಲಿ ಮಾಡಬೇಕಾಗುತ್ತದೆ. ಅವರಲ್ಲಂತು ಶ್ರೇಷ್ಠ ಭಾವನೆಯು ಇದ್ದೇ ಇರುತ್ತದೆ ಆದರೆ ತಾವೆಲ್ಲರೂ ಅದೇರೀತಿ ಸ್ವಲ್ಪ ಸಮಯದಲ್ಲಿ ಮುಂದುವರೆಯುವ ಮಕ್ಕಳಿಗೆ ತಮ್ಮ ಸಂಬಂಧ ಮತ್ತು ಸಂಪರ್ಕದ ಸಹಯೋಗವನ್ನು ಕೊಡಲೇಬೇಕಾಗುತ್ತದೆ, ಅದರಿಂದ ಅವರಲ್ಲಿ ಸಹಜವಾಗಿ ಮುಂದುವರೆಯುವ ಉಮ್ಮಂಗ ಮತ್ತು ಸಾಹಸವಾಗಬೇಕು. ಈಗ ಈ ಸೇವೆಯು ಬಹಳಷ್ಟು ಆಗುವುದಿದೆ, ಕೇವಲ ಸ್ವಯಂನಲ್ಲಷ್ಟೇ ಶಕ್ತಿಗಳನ್ನು ಜಮಾ ಮಾಡುವ ಸಮಯವಿಲ್ಲ. ಆದರೆ ತಮ್ಮ ಜೊತೆಗೆ ಅಷ್ಟೇ ಶಕ್ತಿಗಳನ್ನು ಅನ್ಯರಿಗಾಗಿಯೂ ಜಮಾ ಮಾಡಬೇಕು, ಅದರಿಂದ ಅನ್ಯರಿಗೂ ಸಹಯೋಗ ಕೊಡಲು ಸಾಧ್ಯವಾಗುತ್ತದೆ. ಕೇವಲ ಸಹಯೋಗ ತೆಗೆದುಕೊಳ್ಳುವವರಲ್ಲ ಆದರೆ ಕೊಡುವವರೂ ಆಗಬೇಕಾಗಿದೆ. ಯಾರು ಜ್ಞಾನದಲ್ಲಿ ಬಂದು ಎರಡು ವರ್ಷಗಳಾಗಿದೆ, ಆ ಎರಡು ವರ್ಷಗಳೂ ಸಹ ಕಡಿಮೆಯೇನಲ್ಲ, ಸ್ವಲ್ಪ ಸಮಯದಲ್ಲಿ ಎಲ್ಲವನ್ನೂ ಅನುಭವ ಮಾಡಬೇಕಾಗಿದೆ. ಹೇಗೆ ವೃಕ್ಷದಲ್ಲಿ ತೋರಿಸುತ್ತೀರಲ್ಲವೆ, ಅಂತ್ಯದಲ್ಲಿ ಬರುವ ಆತ್ಮರೂ ಸಹ ಅವಶ್ಯವಾಗಿ 4 ಸ್ಥಿತಿಗಳಿಂದ ಮುಂದೆಸಾಗುತ್ತಾರೆ. ಅವರದು ಭಲೆ 10-12 ಜನ್ಮಗಳೇ ಆಗಿರಲಿ ಅಥವಾ ಎಷ್ಟಾದರೂ ಆಗಿರಲಿ, ಅಂದಾಗ ಅಂತ್ಯದಲ್ಲಿ ಬರುವವರೂ ಸಹ ಸ್ವಲ್ಪಸಮಯದಲ್ಲಿ ಸರ್ವಶಕ್ತಿಗಳ ಅನುಭವ ಮಾಡಲೇಬೇಕು. ವಿದ್ಯಾರ್ಥಿ ಜೀವನವನ್ನೂ ಮತ್ತು ಜೊತೆ ಜೊತೆಗೆ ಸೇವಾಧಾರಿಯೆನ್ನುವ ಅನುಭವವನ್ನೂ ಮಾಡಬೇಕು. ಸೇವಾಧಾರಿಯು ಕೇವಲ ಕೋರ್ಸ್ ಕೊಡುವುದು ಅಥವಾ ಭಾಷಣ ಮಾಡುವುದಷ್ಟೇ ಅಲ್ಲ, ಸೇವಾಧಾರಿ ಅಂದರೆ ಸದಾ ಉಮ್ಮಂಗ-ಉತ್ಸಾಹದ ಸಹಯೋಗವನ್ನು ಕೊಡುವುದಾಗಿದೆ. ಶಕ್ತಿಶಾಲಿಯನ್ನಾಗಿ ಮಾಡುವ ಸಹಯೋಗವನ್ನು ಕೊಡಿ. ಸ್ವಲ್ಪವೇ ಸಮಯದಲ್ಲಿ ಎಲ್ಲಾ ವಿಷಯಗಳನ್ನು (ಎಲ್ಲಾ ಸಬ್ಜೆಕ್ಟ್) ಪಾಸ್ ಮಾಡಬೇಕು. ಇಷ್ಟು ತೀವ್ರ ಗತಿಯಿಂದ ಮಾಡಿದಾಗಲೇ ಅವರು ತಲುಪುವರಲ್ಲವೆ. ಆದ್ದರಿಂದ ಒಬ್ಬರಿನ್ನೊಬ್ಬರ ಸಹಯೋಗಿ ಆಗಬೇಕಾಗಿದೆ. ಒಬ್ಬರಿನ್ನೊಬ್ಬರ ಯೋಗಿಯಾಗಬಾರದು, ಒಬ್ಬರು ಇನ್ನೊಬ್ಬರೊಂದಿಗೆ ಯೋಗವನ್ನಿಡುವುದನ್ನು ಆರಂಭಿಸಬಾರದು. ಸಹಯೋಗಿ ಆತ್ಮನು ಸದಾ ಸಹಯೋಗದಿಂದ ತಂದೆಯ ಸಮೀಪ ಮತ್ತು ಸಮಾನರನ್ನಾಗಿ ಮಾಡಿ ಬಿಡುತ್ತಾರೆ. ತಮ್ಮ ಸಮಾನರನ್ನಾಗಿ ಅಲ್ಲ ಆದರೆ ತಂದೆಯ ಸಮಾನರನ್ನಾಗಿ ಮಾಡಬೇಕಾಗಿದೆ. ಈಗ ತಮ್ಮಲ್ಲಿ ಏನೆಲ್ಲಾ ಬಲಹೀನತೆಗಳಿವೆ, ಅದನ್ನು ಇಲ್ಲಿಯೇ ಬಿಟ್ಟು ಹೋಗಬೇಕಾಗಿದೆ. ವಿದೇಶಕ್ಕೆ ತೆಗೆದುಕೊಂಡು ಹೋಗಬಾರದು. ಶಕ್ತಿಶಾಲಿ ಆತ್ಮನಾಗಿ ಅನ್ಯರನ್ನೂ ಶಕ್ತಿಶಾಲಿಯನ್ನಾಗಿ ಮಾಡಬೇಕಾಗಿದೆ - ವಿಶೇಷವಾಗಿ ಸದಾ ಇದೇ ಧೃಡ ಸಂಕಲ್ಪವು ಸ್ಮೃತಿಯಲ್ಲಿರಲಿ. ಒಳ್ಳೆಯದು!

ನಾಲ್ಕೂ ಕಡೆಯಲ್ಲಿರುವ ಎಲ್ಲಾ ಮಕ್ಕಳಿಗೆ ವಿಶೇಷ ಸ್ನೇಹ ಸಂಪನ್ನ ನೆನಪು-ಪ್ರೀತಿಯನ್ನು ಕೊಡುತ್ತಿದ್ದೇವೆ. ಸದಾ ಸ್ನೇಹಿ, ಸದಾ ಸಹಯೋಗಿ ಮತ್ತು ಶಕ್ತಿಶಾಲಿಯಾಗಿರುವಂತಹ ಶ್ರೇಷ್ಠ ಆತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಎಲ್ಲರಿಗೂ ಈ ಖುಷಿಯಿದೆಯಲ್ಲವೆ - ವಿಭಿನ್ನವಾಗಿದ್ದರೂ ಒಂದಾಗಿ ಬಿಟ್ಟೆವು. ಈಗ ಭಿನ್ನ-ಭಿನ್ನ ಮತದವರಲ್ಲ, ಒಂದೇ ಈಶ್ವರೀಯ ಮತದಂತೆ ನಡೆಯುವ ಶ್ರೇಷ್ಠ ಆತ್ಮರಾಗಿದ್ದೀರಿ. ಬ್ರಾಹ್ಮಣರ ಭಾಷೆಯೂ ಒಂದೇ ಆಗಿದೆ. ಒಬ್ಬ ತಂದೆಯ ಮಕ್ಕಳು ಮತ್ತು ಒಂದೇ ಜ್ಞಾನವನ್ನು ಅನ್ಯರಿಗೂ ಕೊಟ್ಟು, ಸರ್ವರನ್ನು ಒಬ್ಬ ತಂದೆಯ ಮಕ್ಕಳನ್ನಾಗಿ ಮಾಡಬೇಕಾಗಿದೆ. ಇದೆಷ್ಟು ದೊಡ್ಡ ಶ್ರೇಷ್ಠವಾದ ಪರಿವಾರವಾಗಿದೆ!!! ಎಲ್ಲಿಯೇ ಹೋಗಿ, ಯಾವುದೇ ದೇಶದಲ್ಲಿಯೇ ಹೋಗುತ್ತೀರೆಂದರೆ ಈ ನಶೆಯಿದೆಯೇ - ಇದು ನಮ್ಮ ಮನೆಯಾಗಿದೆ. ಸೇವಾಸ್ಥಾನ ಅಂದರೆ ನಮ್ಮ ಮನೆ. ಈ ರೀತಿ ಇಷ್ಟೊಂದು ಮನೆಗಳು ಮತ್ತ್ಯಾರಿಗೂ ಇರುವುದಿಲ್ಲ. ಒಂದುವೇಳೆ ತಮ್ಮನ್ನು ಯಾರಾದರೂ ಕೇಳುತ್ತಾರೆ - ತಮ್ಮ ಪರಿಚಯ ಎಲ್ಲೆಲ್ಲಿ ಸಿಗುತ್ತದೆ? ಆಗ ಹೇಳುವಿರಿ - ಇಡೀ ವಿಶ್ವದಲ್ಲಿಯೇ ಸಿಗುತ್ತದೆ. ಎಲ್ಲಿಯೇ ಹೋಗಿ ನಮ್ಮದೇ ಪರಿವಾರವಿದೆ. ಎಷ್ಟೊಂದು ಬೇಹದ್ದಿನ ಅಧಿಕಾರಿ ಆಗಿ ಬಿಟ್ಟಿರಿ! ಸೇವಾಧಾರಿ ಆಗಿ ಬಿಟ್ಟಿರಿ! ಸೇವಾಧಾರಿ ಆಗುವುದು ಅಂದರೆ ಅಧಿಕಾರಿ ಆಗುವುದಾಗಿದೆ. ಇದು ಬೇಹದ್ದಿನ ಆತ್ಮಿಕ ಖುಷಿಯಾಗಿದೆ. ಈಗ ಪ್ರತಿಯೊಂದು ಸ್ಥಾನವು ತಮ್ಮ ಶಕ್ತಿಶಾಲಿ ಸ್ಥಿತಿಯಿಂದ ವಿಸ್ತಾರದ ಪ್ರಾಪ್ತಿಯಾಗುತ್ತಿದೆ. ಮೊದಲು ಸ್ವಲ್ಪ ಪರಿಶ್ರಮವೆನಿಸುತ್ತದೆ, ನಂತರ ಸ್ವಲ್ಪ ಮಂದಿ ಉದಾಹರಣೆಯಾಗಿ ಬಿಟ್ಟರೆ, ಅವರನ್ನು ನೋಡುತ್ತಾ ಅನ್ಯರೂ ಸಹಜವಾಗಿ ಮುಂದುವರೆಯುತ್ತಿರುತ್ತಾರೆ.

ಬಾಪ್ದಾದಾರವರು ಎಲ್ಲಾ ಮಕ್ಕಳಿಗೆ ಇದೇ ಶ್ರೇಷ್ಠ ಸಂಕಲ್ಪವನ್ನು ಮತ್ತೆ-ಮತ್ತೆ ಸ್ಮೃತಿಗೆ ತರಿಸುತ್ತಾರೆ - ಅದೇನೆಂದರೆ, ಸದಾ ಸ್ವಯಂ ತಾವೂ ನೆನಪು ಮತ್ತು ಸೇವೆಯ ಉಮ್ಮಂಗ-ಉತ್ಸಾಹದಲ್ಲಿರಿ, ಖುಷಿ-ಖುಷಿಯಿಂದ ತೀವ್ರ ಗತಿಯಿಂದ ಮುಂದೆ ಸಾಗಿರಿ ಮತ್ತು ಅನ್ಯರನ್ನೂ ಸಹ ಅದೇರೀತಿ ಉಮ್ಮಂಗ-ಉತ್ಸಾಹದಿಂದ ಮುಂದುವರೆಸುತ್ತಾ ಸಾಗಿರಿ. ಮತ್ತು ನಾಲ್ಕೂ ಕಡೆಯಲ್ಲಿರುವವರು ಯಾರು ಸಾಕಾರದಲ್ಲಿ ತಲುಪಿಲ್ಲವೋ, ಅವರ ಚಿತ್ರ ಮತ್ತು ಪತ್ರಗಳು ತಲುಪಿವೆ. ಅದರ ಪ್ರತ್ಯುತ್ತರದಲ್ಲಿ ಎಲ್ಲರಿಗೂ ಬಾಪ್ದಾದಾರವರು ಪದಮಪಟ್ಟು ಹೃದಯದಿಂದ ನೆನಪು-ಪ್ರೀತಿಗಳನ್ನೂ ಕೊಡುತ್ತಿದ್ದಾರೆ. ಈಗ ಎಷ್ಟು ಉಮ್ಮಂಗ-ಉತ್ಸಾಹ, ಖುಷಿಯಿಂದೆಯೋ, ಅದಕ್ಕಿಂತ ಇನ್ನೂ ಪದಮಪಟ್ಟು ಹೆಚ್ಚಿಸಿಕೊಳ್ಳಿರಿ. ಕೆಲಕೆಲವರು ತನ್ನ ಬಲಹೀನತೆಗಳ ಸಮಾಚಾರವನ್ನೂ ಬರೆದಿದ್ದಾರೆ, ಅವರಿಗಾಗಿ ಬಾಪ್ದಾದಾರವರು ಹೇಳುತ್ತಾರೆ - ಬರೆದಿದ್ದೀರಿ ಅಂದರೆ ತಂದೆಗೆ ಕೊಟ್ಟಂತಾಯಿತು. ಕೊಟ್ಟಿರುವ ವಸ್ತುವೆಂದಿಗೂ ಸಹ ತನ್ನ ಬಳಿ ಇರಲು ಸಾಧ್ಯವಿಲ್ಲ. ಬಲಹೀನತೆಯನ್ನು ಕೊಟ್ಟಿರೆಂದರೆ, ಅದನ್ನೆಂದಿಗೂ ಸಂಕಲ್ಪದಲ್ಲಿಯೂ ತಂದುಕೊಳ್ಳಬಾರದು. ಮೂರನೇ ಮಾತು - ಎಂದಿಗೂ ಯಾರಿಗೂ ತನ್ನ ಸಂಸ್ಕಾರ ಅಥವಾ ಸಂಘಟನೆಯ ಸಂಸ್ಕಾರ ಅಥವಾ ವಾಯುಮಂಡಲದ ಏರುಪೇರುಗಳಿಂದ ಬೇಸರವಾಗಬಾರದು. ಸದಾ ತಂದೆಯನ್ನು ಕಂಬೈಂಡ್ ರೂಪದಲ್ಲಿ ಅನುಭವ ಮಾಡುತ್ತಾ, ಬೇಸರದಿಂದ ಶಕ್ತಿಶಾಲಿಯಾಗಿ ಮೇಲೆ ಹಾರುತ್ತಿರಿ. ಲೆಕ್ಕಾಚಾರಗಳು ಸಮಾಪ್ತಿಯಾಗುವುದು ಅಂದರೆ ಹೊರೆಯು ಸಮಾಪ್ತಿಯಾಗುವುದು. ಖುಷಿ-ಖುಷಿಯಿಂದ ಹಿಂದಿನ(ಜನ್ಮ) ಹೊರೆಯನ್ನು ಭಸ್ಮಗೊಳಿಸುತ್ತಾ ಸಾಗಿರಿ. ಬಾಪ್ದಾದಾರವರು ಸದಾ ಮಕ್ಕಳ ಸಹಯೋಗಿಯಾಗಿದ್ದಾರೆ. ಹೆಚ್ಚಾಗಿ ಯೋಚಿಸಬೇಡಿ, ವ್ಯರ್ಥ ವಿಚಾರವೂ ಸಹ ಬಲಹೀನರನ್ನಾಗಿ ಮಾಡಿ ಬಿಡುತ್ತದೆ. ಯಾರಲ್ಲಿ ಹೆಚ್ಚಾಗಿ ವ್ಯರ್ಥ ಸಂಕಲ್ಪ ನಡೆಯುತ್ತದೆಯೋ ಅವರು 2-4 ಬಾರಿ ಮುರುಳಿ ಓದಿರಿ. ಮನನ ಮಾಡಿರಿ, ಓದುತ್ತಾ ಇರಿ. ಓದುತ್ತಾ ಯಾವುದಾದರೊಂದು ಪಾಯಿಂಟ್ ಬುದ್ಧಿಯಲ್ಲಿ ಕುಳಿತುಕೊಂಡು ಬಿಡುತ್ತದೆ. ಶುದ್ಧ ಸಂಕಲ್ಪಗಳ ಶಕ್ತಿಯನ್ನು ಜಮಾ ಮಾಡಿಕೊಳ್ಳುತ್ತಾ ಇರುತ್ತೀರೆಂದರೆ ವ್ಯರ್ಥವು ಸಮಾಪ್ತಿಯಾಗಿ ಬಿಡುತ್ತದೆ. ತಿಳಿಯಿತೆ!

ಬಾಪ್ದಾದಾರವರ ವಿಶೇಷ ಪ್ರೇರಣೆಗಳು:

ನಾಲ್ಕೂ ಕಡೆಯಲ್ಲಿ ಭಲೆ ದೇಶದಲ್ಲಿರಬಹುದು, ಭಲೆ ವಿದೇಶದಲ್ಲಿಯೇ ಇರಬಹುದು, ಹಲವು ಅಂತಹ ಚಿಕ್ಕ-ಚಿಕ್ಕ ಸ್ಥಾನಗಳಿವೆ. ಈ ಸಮಯದನುಸಾರವಾಗಿ ಸಾಧಾರಣವಿದೆ ಆದರೆ ಸಂಪನ್ನವಾಗಿರುವ ಮಕ್ಕಳಿದ್ದಾರೆ. ಅದೇರೀತಿ ಕೆಲವರು ಹೀಗೂ ಇದ್ದಾರೆ, ಯಾರು ನಿಮಿತ್ತವಾಗಿರುವ ಮಕ್ಕಳಿದ್ದಾರೆ ಅವರನ್ನು ತನ್ನ ಕಡೆಗೆ ಪರಿಕ್ರಮಣ ಹಾಕಲಿ ಎನ್ನುವ ಆಸೆಯನ್ನಿಟ್ಟುಕೊಂಡು ಬಹಳ ಸಮಯದಿಂದ ನೋಡುತ್ತಿದ್ದಾರೆ ಆದರೆ ಆ ಆಶೆಯು ಪೂರ್ಣವಾಗುತ್ತಿಲ್ಲ. ಆ ಆಶೆಯನ್ನೂ ಬಾಪ್ದಾರವರು ಪೂರ್ಣಗೊಳಿಸುತ್ತಿದ್ದಾರೆ. ವಿಶೇಷವಾಗಿ ಯಾರು ಯೋಜನೆಯನ್ನು ಮಾಡಿಕೊಂಡಿರುವ ಮಹಾರಥಿ ಮಕ್ಕಳಿದ್ದಾರೆ, ಯಾರ ಆಶಾ ದೀಪಕರಾಗಿದ್ದ್ದಾರೆಯೋ ಅವರು ಆಶಾ ದೀಪ ಬೆಳಗಿಸಲು ಹೋಗಬೇಕಾಗಿದೆ. ಆಶಾ ದೀಪವನ್ನು ಬೆಳಗಿಸುವುದಕ್ಕಾಗಿ ಬಾಪ್ದಾದಾರವರು ವಿಶೇಷವಾಗಿ ಸಮಯವನ್ನು ಕೊಡುತ್ತಿದ್ದಾರೆ. ಎಲ್ಲಾ ಮಹಾರಥಿಗಳು ಒಟ್ಟಾಗಿ ಸೇರಿ ಭಿನ್ನ-ಭಿನ್ನ ಪ್ರಾಂತ್ಯಗಳನ್ನು ಹಂಚಿರಿ, ಯಾರ ಬಳಿ ಸಮಯದ ಅಭಾವದಿಂದ ಹೋಗುವುದಕ್ಕಾಗಿ ಸಾಧ್ಯವಾಗಲಿಲ್ಲವೋ, ಆ ಹಳ್ಳಿ ಮಕ್ಕಳ ಆಶೆಯನ್ನೂ ಪೂರ್ಣಗೊಳಿಸಬೇಕು. ಮುಖ್ಯ ಸ್ಥಾನಗಳಲ್ಲಂತು ಮುಖ್ಯವಾದ ಕಾರ್ಯಕ್ರಮಗಳದಿಂದ ಖಂಡಿತವಾಗಿ ಹೋಗುತ್ತೀರಿ ಆದರೆ ಚಿಕ್ಕ-ಚಿಕ್ಕದಾದ ಯಾವ ಸ್ಥಾನಗಳಿವೆಯೋ, ಅವರ ಯಥಾಶಕ್ತಿ ಕಾರ್ಯಕ್ರಮವೇ ದೊಡ್ಡ ಕಾರ್ಯಕ್ರಮವಾಗಿದೆ. ಅವರ ಭಾವನೆಯೇ ಬಹಳ ದೊಡ್ಡ ಕಾರ್ಯಕ್ರಮವಾಗಿದೆ. ಬಾಪ್ದಾದಾರವರ ಬಳಿ ಅಂತಹ ಮಕ್ಕಳ ಅರ್ಜಿಗಳು ಬಹಳ ಸಮಯದಿಂದ ಫೈಲ್ನಲ್ಲಿಯೇ ಇವೆ. ಈ ಫೈಲ್ನ್ನೂ ಸಹ ಬಾಪ್ದಾದಾರವರು ಕ್ಲಿಯರ್ ಮಾಡಲು ಬಯಸುತ್ತಾರೆ. ಮಹಾರಥಿ ಮಕ್ಕಳಿಗೆ ಚಕ್ರವರ್ತಿಯಾಗುವ ವಿಶೇಷ ಅವಕಾಶವನ್ನು ಕೊಡುತ್ತಿದ್ದಾರೆ. ಮತ್ತೆ ಹೀಗೂ ಹೇಳಬಾರದು - ಎಲ್ಲಾ ಸ್ಥಾನಗಳಿಗೂ ದಾದಿಯವರು ಹೋಗಲಿ ಎಂದು. ಹೀಗೆ ಮಾಡಬಾರದು, ಒಂದುವೇಳೆ ಒಬ್ಬದಾದಿಯವರೇ ಎಲ್ಲಾ ಕಡೆಗಳಲ್ಲಿಯೂ ಹೋಗಬೇಕಾಗುತ್ತದೆ ಎಂದರೆ, ಮತ್ತೆ 5 ವರ್ಷಗಳ ಸಮಯವೇ ಹಿಡಿಸುತ್ತದೆ. ಹಾಗಾದರೆ ಮತ್ತೆ ಬಾಪ್ದಾದಾರವರೂ 5 ವರ್ಷಗಳ ಬರುವುದು ಬೇಡ - ಇದು ಒಪ್ಪಿಗೆಯಿದೆಯೇ? ಬಾಪ್ದಾದಾರವರ ಸೀಜನ್ ಇಲ್ಲಾಗಲಿ ಮತ್ತು ದಾದಿಯವರು ಪರಿಕ್ರಮಣದಲ್ಲಿ ಹೋಗಲಿ - ಇದೂ ಸಹ ಸರಿಯೆನಿಸುವುದಿಲ್ಲ. ಆದ್ದರಿಂದ ಮಹಾರಥಿಗಳು ಈ ಕಾರ್ಯಕ್ರಮವನ್ನು ತಯಾರು ಮಾಡಿಕೊಳ್ಳಿರಿ. ಎಲ್ಲಿಗೆ ಯಾರೂ ಹೋಗಿಲ್ಲವೋ, ಅಲ್ಲಿಗೆ ಹೋಗುವ ಪ್ಲಾನ್ ಮಾಡಿ ಮತ್ತು ವಿಶೇಷವಾಗಿ ಈ ವರ್ಷದಲ್ಲಿ ಎಲ್ಲಿಯೇ ಹೋಗುತ್ತೀರೆಂದರೆ, ಒಂದು ದಿನ ಹೊರಗಿನ ಸೇವೆ, ಒಂದು ದಿನ ಬ್ರಾಹ್ಮಣರ ತಪಸ್ಸಿನ ಕಾರ್ಯಕ್ರಮ - ಇವೆರಡೂ ಕಾರ್ಯಕ್ರಮವು ಅವಶ್ಯವಾಗಿರಲಿ. ಕೇವಲ ಕಾರ್ಯಕ್ರಮದಲ್ಲಷ್ಟೇ ಹೋಗಿ, ಮತ್ತೆ ಓಡೋಡಿಕೊಂಡು ಬಂದು ಬಿಡುವುದಲ್ಲ. ಎಷ್ಟು ಸಾಧ್ಯವೋ ಅಂತಹ ಕಾರ್ಯಕ್ರಮವನ್ನು ಮಾಡಿರಿ, ಯಾವುದರಲ್ಲಿ ವಿಶೇಷವಾಗಿ ಬ್ರಾಹ್ಮಣರಿಗೆ ರಿಫ್ರೆಷ್ಮೆಂಟ್ ಸಿಗುತ್ತದೆ. ಮತ್ತೆ ಜೊತೆ ಜೊತೆಗೆ ಅಂತಹ ಕಾರ್ಯಕ್ರಮವಿರಲಿ, ಯಾವುದರಿಂದ ವಿ.ಐ.ಪಿ.,ಗಳ ಸಂಪರ್ಕವೂ ಆಗಲಿ ಆದರೆ ಚಿಕ್ಕ ಕಾರ್ಯಕ್ರಮವಾಗಿರಲಿ. ಪ್ರಾರಂಭವೇ ಅಂತಹ ಕಾರ್ಯಕ್ರಮದಿಂದ ಮಾಡಿರಿ, ಯಾವುದರಲ್ಲಿ ಬ್ರಾಹ್ಮಣರಿಗೂ ವಿಶೇಷವಾಗಿ ಉಮ್ಮಂಗ-ಉತ್ಸಾಹದ ಶಕ್ತಿಯು ಸಿಗುತ್ತದೆ, ನಿರ್ವಿಘ್ನರಾಗುವ ಸಾಹಸ-ಉಲ್ಲಾಸವು ತುಂಬುತ್ತದೆ. ಅಂದಾಗ ನಾಲ್ಕೂ ಕಡೆಯಲ್ಲಿಯೂ ಪರಿಕ್ರಮಣ ಹಾಕುವ ಕಾರ್ಯಕ್ರಮಗಳನ್ನು ತಯಾರು ಮಾಡುವುದಕ್ಕಾಗಿಯೂ ವಿಶೇಷ ಸಮಯವನ್ನು ಕೊಡುತ್ತಿದ್ದೇವೆ, ಏಕೆಂದರೆ ಸಮಯದನುಸಾರ ಸಂದರ್ಭವೂ ಬದಲಾಗುತ್ತಿದೆ ಮತ್ತು ಬದಲಾಗುತ್ತಿರುತ್ತದೆ. ಆದ್ದರಿಂದ ಫೈಲ್ನ್ನು ಕ್ಲಿಯರ್ ಮಾಡಬೇಕಾಗಿದೆ. ಒಳ್ಳೆಯದು.

ವರದಾನ:  
ಆತ್ಮೀಯತೆಯ ಶ್ರೇಷ್ಠ ಸ್ಥಿತಿಯ ಮೂಲಕ ವಾತಾವರಣವನ್ನು ಆತ್ಮೀಯತೆಯನ್ನಾಗಿ ಮಾಡುವಂತಹ ಸಹಜ ಪುರುಷಾರ್ಥಿ ಭವ.

ಆತ್ಮೀಯತೆಯ ಸ್ಥಿತಿಯ ಮೂಲಕ ತಮ್ಮ ಸೇವಾಕೇಂದ್ರದ ವಾತಾವರಣವನ್ನು ಈರೀತಿ ತಯಾರು ಮಾಡಿರಿ, ಯಾವುದರಿಂದ ಸ್ವಯಂ ತಾವು ಹಾಗೂ ಬರುವಂತಹ ಆತ್ಮರಲ್ಲಿ ಸಹಜ ಉನ್ನತಿಯಾಗಲು ಸಾಧ್ಯವಾಗಬೇಕು ಏಕೆಂದರೆ ಯಾರೆಲ್ಲರೂ ಹೊರಗಿನ ವಾತಾವರಣದಿಂದ ಸುಸ್ತಾಗಿ ಬರುತ್ತಾರೆಯೋ, ಅವರಿಗೆ ಹೆಚ್ಚಿನ ಸಹಯೋಗದ ಅವಶ್ಯಕತೆಯಿರುತ್ತದೆ. ಆದ್ದರಿಂದ ಅವರಿಗೆ ಆತ್ಮೀಯತೆಯ ವಾಯುಮಂಡಲದ ಸಹಯೋಗವನ್ನು ಕೊಡಿ. ಸಹಜ ಪುರುಷಾರ್ಥಿಯಾಗಿರಿ ಮತ್ತು ಅನ್ಯರನ್ನೂ ಮಾಡಿರಿ. ಬರುವಂತಹ ಪ್ರತಿಯೊಂದು ಆತ್ಮವೂ ಇದೇ ಅನುಭವ ಮಾಡಲಿ - ಈ ಸ್ಥಾನವು ಸಹಜವಾಗಿಯೇ ಉನ್ನತಿಯನ್ನು ಪ್ರಾಪ್ತಿ ಮಾಡಿಕೊಳ್ಳುವ ಸ್ಥಾನವಾಗಿದೆ.

ಸ್ಲೋಗನ್:
ವರದಾನಿಯಾಗಿದ್ದು ಶುಭಭಾವನೆ ಮತ್ತು ಶುಭಕಾಮನೆಯ ವರದಾನವನ್ನು ಕೊಡುತ್ತಾ ಇರಿ.


ಮುರಳಿ ಪ್ರಶ್ನೆಗಳು -

1. ಬಾಪ್ದಾದಾ ಮಕ್ಕಳಲ್ಲಿ ಯಾವ ಎರಡು ವಿಶೇಷತೆಗಳನ್ನು ನೋಡುತ್ತಿದ್ದಾರೆ?

2. ಯಾವ ಶಕ್ತಿಯ ಅನುಭವದಿಂದ ಸ್ವಯಂ ಮತ್ತು ಸೇವೆಯಲ್ಲಿ ಮುಂದುವರೆಯಬಹುದು?

3. ಪ್ರವೃತ್ತಿಯಲ್ಲಿರುತ್ತ ಶಕ್ತಿಶಾಲಿ ಸಂಕಲ್ಪದಿಂದ ಯಾವ ಪರಿವರ್ತನೆ ಮಾಡಬೇಕು?

4. ಬ್ರಹ್ಮನ ರಚನೆ ಯಾವ ಎರಡು ಪ್ರಕಾರದಲ್ಲಿ ಗಾಯನವಿದೆ?

5. ಬ್ರಹ್ಮನ ಚಿತ್ರದಿಂದ ಯಾವ ಅನುಭವವಾಗುತ್ತದೆ?

6. ಇದು ಯಾವ ಸಮಯವಾಗಿದೆ?

7. ವಿದ್ಯಾರ್ಥಿ ಜೀವನದ ಜೊತೆಯಲ್ಲಿ ಯಾವ ಅನುಭವ ಮಾಡಬೇಕು?

8. ಯಾವ ದೃಢ ಸಂಕಲ್ಪದ ಸ್ಮೃತಿ ಸದಾ ಇರಬೇಕು?

9. ಸೇವಾಧಾರಿಯಾಗುವುದು ಎಂದರೇನು?

10. ನಾವು ಹೇಗೆ ಶಕ್ತಿಶಾಲಿಯಾಗಿ ಮುಂದುವರೆಯುತ್ತಾ ಹಾರುತ್ತಿರಬೇಕು?