04.10.21         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ತಂದೆಯನ್ನು ನೆನಪು ಮಾಡುವ ಭಿನ್ನ-ಭಿನ್ನ ಯುಕ್ತಿಗಳನ್ನು ರಚಿಸಿ ಪುರುಷಾರ್ಥ ಮಾಡಿ ಚಾರ್ಟ್ ಇಡಿ, ಸುಸ್ತಾಗಬೇಡಿ, ಬಿರುಗಾಳಿಗಳಲ್ಲಿ ಅಡೋಲವಾಗಿರಿ

ಪ್ರಶ್ನೆ:
ಮಕ್ಕಳು ತಮ್ಮ ಯಾವ ಅನುಭವವನ್ನು ಪರಸ್ಪರ ಒಬ್ಬರು ಇನ್ನೊಬ್ಬರಿಗೆ ತಿಳಿಸಬೇಕು?

ಉತ್ತರ:
1. ನಾವು ತಂದೆಯನ್ನು ಎಷ್ಟು ಸಮಯ ಮತ್ತು ಹೇಗೆ ನೆನಪು ಮಾಡುತ್ತೇವೆ! ಭೋಜನದ ಸಮಯದಲ್ಲಿ ತಂದೆಯ ನೆನಪಿರುತ್ತದೆಯೇ ಅಥವಾ ಅನೇಕ ಪ್ರಕಾರದ ವಿಚಾರಗಳು ಬರುತ್ತದೆಯೇ! ತಂದೆಯು ತಿಳಿಸುತ್ತಾರೆ - ಮಕ್ಕಳೇ, ಪ್ರಯತ್ನ ಪಟ್ಟು ನೋಡಿರಿ - ಭೋಜನದ ಸಮಯದಲ್ಲಿ ತಂದೆಯ ವಿನಃ ಮತ್ತೇನೂ ನೆನಪಿಗೆ ಬರುತ್ತಿಲ್ಲವೇ! ಮತ್ತೆ ಪರಸ್ಪರ ಒಬ್ಬರು ಇನ್ನೊಬ್ಬರಿಗೆ ಅನುಭವವನ್ನು ತಿಳಿಸಿರಿ. 2. ಯಾವುದೇ ಬಹಳ ದುಃಖದಾಯಕ ದೃಶ್ಯವನ್ನು ನೋಡುತ್ತಿದ್ದರೂ ನಮ್ಮ ಸ್ಥಿತಿಯು ಹೇಗಿತ್ತು! ಇದರ ಅನುಭವವನ್ನೂ ಪರಸ್ಪರ ತಿಳಿಸಬೇಕು.

ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳು ಈಗ ಬೇಹದ್ದಿನ ತಂದೆಯನ್ನು ಹೇಗೆ ಮರೆಯುವಿರಿ, ಯಾರಿಂದ ಬೇಹದ್ದಿನ ಆಸ್ತಿಯು ಸಿಗುತ್ತಿದೆ. ಅವರನ್ನು ಅರ್ಧ ಕಲ್ಪ ನೆನಪು ಮಾಡುತ್ತಿದ್ದಿರಿ, ಇದನ್ನಂತೂ ತಿಳಿಸಿದ್ದಾರೆ - ಮನುಷ್ಯರಿಗೆಂದೂ ಭಗವಂತನೆಂದು ಹೇಳುವುದಿಲ್ಲ ಅಂದಮೇಲೆ ಈಗ ಬೇಹದ್ದಿನ ತಂದೆಯು ಸಿಕ್ಕಿದ್ದಾರೆ, ಅವರ ನೆನಪಿನಲ್ಲಿಯೇ ಚಮತ್ಕಾರವಿದೆ. ಪತಿತ-ಪಾವನ ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು ಪಾವನರಾಗುತ್ತಾ ಹೋಗುತ್ತೀರಿ. ನೀವೀಗ ತಮ್ಮನ್ನು ಪಾವನರೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಯಾವಾಗ ಸಂಪೂರ್ಣ ಪಾವನರಾಗಿ ಬಿಡುತ್ತೀರೋ ಆಗ ಈ ಶರೀರವನ್ನು ಬಿಟ್ಟು ಹೋಗಿ ಸಂಪೂರ್ಣ ಪವಿತ್ರ ಶರೀರವನ್ನು ತೆಗೆದುಕೊಳ್ಳುತ್ತೀರಿ. ಯಾವಾಗ ಸತ್ಯಯುಗದಲ್ಲಿ ಹೊಸ ಶರೀರ ಸಿಗುವುದೋ ಆಗ ಸಂಪೂರ್ಣರೆಂದು ಹೇಳಲಾಗುವುದು. ನಂತರ ರಾವಣ ರಾಜ್ಯವು ಸಮಾಪ್ತಿ ಆಗಿ ಬಿಡುತ್ತದೆ. ಸತ್ಯಯುಗದಲ್ಲಿ ರಾವಣನ ಪ್ರತಿಮೆಯನ್ನು ಮಾಡುವುದಿಲ್ಲ ಅಂದಾಗ ನೀವು ಮಕ್ಕಳು ಕುಳಿತುಕೊಳ್ಳುತ್ತೀರಿ, ನಡೆಯುತ್ತಾ-ತಿರುಗಾಡುತ್ತಾ ಇರುತ್ತೀರೆಂದರೆ ಬುದ್ಧಿಯಲ್ಲಿ ಇದೇ ಇರಲಿ, ನಾವೀಗ 84 ಜನ್ಮಗಳ ಚಕ್ರವನ್ನು ಪೂರ್ಣಗೊಳಿಸಿದ್ದೇವೆ. ಈಗ ಮತ್ತೆ ಹೊಸ ಚಕ್ರವು ಆರಂಭವಾಗುತ್ತದೆ. ಅದು ಹೊಸ ಪವಿತ್ರ ಪ್ರಪಂಚವಾಗಿದೆ, ಹೊಸ ಭಾರತ ಹೊಸ ದೆಹಲಿಯಾಗಿರುತ್ತದೆ. ಮಕ್ಕಳಿಗೆ ತಿಳಿದಿದೆ - ಮೊದಲು ಜಮುನಾ ನದಿಯ ತೀರದಲ್ಲಿ ಪರಿಸ್ತಾನವನ್ನಾಗಿ ಮಾಡಬೇಕಾಗಿದೆ. ಮಕ್ಕಳಿಗೆ ಬಹಳ ಚೆನ್ನಾಗಿ ತಿಳಿಸಲಾಗುತ್ತದೆ, ಮಕ್ಕಳೇ ಮೊಟ್ಟ ಮೊದಲು ತಂದೆಯನ್ನು ನೆನಪು ಮಾಡಿ. ಭಗವಂತ ತಂದೆಯು ಓದಿಸುತ್ತಾರೆ, ಅವರೇ ತಂದೆ, ಶಿಕ್ಷಕ, ಗುರುವಾಗಿದ್ದಾರೆ. ಇದನ್ನು ನೆನಪಿಟ್ಟುಕೊಳ್ಳಿ. ತಂದೆಯು ಈ ಮಾತನ್ನೂ ತಿಳಿಸಿದ್ದರು - ನೀವು ಬಾಜೋಲಿ ಆಟವನ್ನು ಆಡುತ್ತೀರಿ, ವರ್ಣಗಳ ಚಿತ್ರವು ಬಹಳ ಅತ್ಯವಶ್ಯಕವಾಗಿದೆ. ಎಲ್ಲರಿಗಿಂತ ಮೇಲೆ ಶಿವ ತಂದೆಯಿದ್ದಾರೆ ನಂತರ ಶಿಖೆಗೆ ಸಮಾನರಾದ ಬ್ರಾಹ್ಮಣರಿದ್ದೀರಿ, ಇದನ್ನು ತಿಳಿಸುವುದಕ್ಕಾಗಿ ತಂದೆಯು ಹೇಳುತ್ತಾರೆ. ಒಳ್ಳೆಯದು - ಇದನ್ನು ಬುದ್ಧಿಯಲ್ಲಿಟ್ಟುಕೊಳ್ಳಿ - ನಾವು 84 ಜನ್ಮಗಳ ಬಾಜೋಲಿಯನ್ನು ಆಡುತ್ತೇವೆ. ಈಗ ಸಂಗಮವಾಗಿದೆ. ತಂದೆಯು ಹೆಚ್ಚು ಸಮಯ ಇರುವುದಿಲ್ಲ ಆದರೂ 100 ವರ್ಷಗಳಂತೂ ಹಿಡಿಸುತ್ತದೆ. ಎಲ್ಲಾ ಅಲ್ಲೋಲ-ಕಲ್ಲೋಲ, ಏರುಪೇರುಗಳೆಲ್ಲವೂ ಮುಗಿದು ರಾಜ್ಯವು ಆರಂಭವಾಗುತ್ತದೆ. ಮಹಾಭಾರತ ಯುದ್ಧವೂ ಅದೇ ಆಗಿದೆ ಯಾವುದರಲ್ಲಿ ಅನೇಕ ಧರ್ಮಗಳ ವಿನಾಶ, ಒಂದು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತಿದೆ. ನಿಮ್ಮ ಬಾಜೋಲಿ ಆಟವು ನೋಡಿ, ಎಷ್ಟು ಅದ್ಭುತವಾಗಿದೆ. ನಿಮಗೆ ತಿಳಿದಿದೆ- ಸನ್ಯಾಸಿಗಳು ಈ ಆಟವನ್ನು ಆಡುತ್ತಾರೆ. ತೀರ್ಥ ಸ್ಥಾನಗಳಿಗೆ ಹೋಗುತ್ತಾರೆ, ಮನುಷ್ಯರಿಗೆ ಶ್ರದ್ಧೆಯಿರುತ್ತದೆಯಲ್ಲವೆ ಆದ್ದರಿಂದ ಅವರಿಗೆ ಏನಾದರೊಂದನ್ನು ಕೊಟ್ಟು ಬಿಡುತ್ತಾರೆ. ಅದರಿಂದಲೇ ಅವರ ಪಾಲನೆಯು ನಡೆಯುತ್ತಿರುತ್ತದೆ ಏಕೆಂದರೆ ಇಂತಹ ಮನುಷ್ಯರು ತಮ್ಮ ಜೊತೆ ಏನು ತೆಗೆದುಕೊಂಡು ಹೋಗುತ್ತಾರೆ? ತಂದೆಯು ಇವೆಲ್ಲಾ ಮಾತುಗಳ ಅನುಭವಿಯಾಗಿದ್ದಾರೆ ಆದ್ದರಿಂದಲೇ ಶಿವ ತಂದೆಯು ಅನುಭವೀ ರಥವನ್ನು ತೆಗೆದುಕೊಂಡಿದ್ದಾರೆ. ಇವರು ಗುರುಗಳನ್ನೂ ಮಾಡಿಕೊಂಡಿದ್ದರು. ಬಹಳಷ್ಟು ನೋಡಿದರು, ತೀರ್ಥ ಯಾತ್ರೆಗಳನ್ನು ಮಾಡಿದರು. ಈಗ ತಂದೆಯು ತಿಳಿಸುವುದೇನೆಂದರೆ ನೀವು ಬಾಜೋಲಿ ಆಟವನ್ನು (ತಲೆ ಮತ್ತು ಕಾಲು ಒಂದು ಕಡೆ ಸೇರುವ ಒಂದು ಪ್ರಕಾರದ ಆಟ) ನೆನಪು ಮಾಡಿಕೊಳ್ಳಬಹುದು. ನಾವೀಗ ಬ್ರಾಹ್ಮಣರಾಗಿದ್ದೇವೆ ನಂತರ ದೇವತಾ, ಕ್ಷತ್ರಿಯರಾಗುತ್ತೇವೆ. ಇವೆಲ್ಲವೂ ಭಾರತದ ಮಾತಾಗಿದೆ. ತಂದೆಯು ತಿಳಿಸಿದ್ದಾರೆ, ಅನ್ಯ ಧರ್ಮಗಳು ಹೇಗೆ ಶಾಖೆಗಳಿದ್ದಂತೆ. ತಂದೆಯು ನಿಮಗೇ 84 ಜನ್ಮಗಳ ಕಥೆಯನ್ನು ತಿಳಿಸಿದ್ದಾರೆ, ಯಾರು ಬುದ್ಧಿವಂತರಿದ್ದಾರೆಯೋ ಅವರ ಲೆಕ್ಕದಿಂದ ಅವರು ತಿಳಿದುಕೊಳ್ಳಬಲ್ಲರು. ಇಸ್ಲಾಮಿ ಬರುತ್ತಾರೆಂದರೆ ಅವರದು ಅಂದಾಜು ಎಷ್ಟು ಜನ್ಮಗಳಿರಬಹುದು! ನಿಖರವಾದ ಲೆಕ್ಕದ ಅವಶ್ಯಕತೆಯೇನೂ ಇಲ್ಲ. ಈ ಮಾತುಗಳಲ್ಲಿ ಯಾವುದೇ ಚಿಂತೆಯ ಮಾತಿಲ್ಲ. ಎಲ್ಲದಕ್ಕಿಂತ ಹೆಚ್ಚಿನ ಚಿಂತೆಯು ಇದೇ ಇರುತ್ತದೆ - ನಾವು ತಂದೆಯನ್ನು ನೆನಪು ಮಾಡುತ್ತಾ ಇರಬೇಕು ಅಷ್ಟೆ. ಒಬ್ಬರನ್ನು ನೆನಪು ಮಾಡುವುದೇ ಚಿಂತೆಯಾಗಿದೆ. ಪದೇ-ಪದೇ ಮಾಯೆಯು ಅನ್ಯ ಚಿಂತೆಗಳಲ್ಲಿ ಸಿಲುಕಿಸುತ್ತದೆ. ಇದರಲ್ಲಿ ಮಾಯೆಯು ಚಿಂತೆಯಲ್ಲಿ ಬಹಳ ತರುತ್ತದೆ, ಆದರೆ ಮಕ್ಕಳು ನೆನಪು ಮಾಡಲೇಬೇಕು - ನಾವೀಗ ಮನೆಗೆ ಹೋಗಬೇಕಾಗಿದೆ. ಮಧುರ ಮನೆಯು ಯಾರಿಗೂ ನೆನಪು ಬರುವುದಿಲ್ಲ. ಶಾಂತಿ ದೇವ ಎಂದು ಹಾಡುತ್ತಾರೆ, ನಮಗೆ ಶಾಂತಿಯನ್ನು ಕೊಡಿ ಎಂದು ಭಗವಂತನಿಗೆ ಹೇಳುತ್ತಾರೆ.

ಈಗ ನೀವು ಮಕ್ಕಳು ಇದನ್ನಂತೂ ತಿಳಿದುಕೊಂಡಿದ್ದೀರಿ - ಈ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ. ಇದೂ ಸಹ ನಿಮ್ಮ ಬುದ್ಧಿಯಲ್ಲಿದೆ, ಅನ್ಯ ಮನುಷ್ಯರಂತೂ ಘೋರ ಅಂಧಕಾರದಲ್ಲಿದ್ದಾರೆ. ಶಾಂತಿಯು ಸತ್ಯಯುಗದಲ್ಲಿಯೇ ಇರುತ್ತದೆ, ಒಂದು ಧರ್ಮ, ಒಂದು ಭಾಷೆ, ರೀತಿ ನೀತಿಗಳು ಒಂದೇ ಇರುವವು. ಅಲ್ಲಿರುವುದೇ ಶಾಂತಿಯ ರಾಜ್ಯ, ಅದ್ವೈತದ ಮಾತೇ ಇಲ್ಲ. ಅಲ್ಲಂತೂ ಒಂದೇ ರಾಜಧಾನಿಯಿರುತ್ತದೆ, ಸತೋಪ್ರಧಾನರಿರುತ್ತಾರೆ. ಯುದ್ಧವಾಗಲು ರಾವಣ ರಾಜ್ಯವೇ ಇರುವುದಿಲ್ಲ ಅಂದಾಗ ನೀವು ಮಕ್ಕಳಿಗೆ ಖುಷಿಯ ನಶೆಯೇರಬೇಕು. ಶಾಸ್ತ್ರಗಳಲ್ಲಿ ಅತೀಂದ್ರಿಯ ಸುಖವನ್ನು ಗೋಪ-ಗೋಪಿಯರಿಂದ ಕೇಳಿರಿ ಎಂಬ ಯಾವ ಗಾಯನವಿದೆಯೋ ಆ ಗೋಪ-ಗೋಪಿಕೆಯರು ನೀವೇ ಆಗಿದ್ದೀರಿ. ನೀವು ಸನ್ಮುಖದಲ್ಲಿ ಕುಳಿತಿದ್ದೀರಿ, ನಿಮ್ಮಲ್ಲಿಯೇ ನಂಬರ್ವಾರ್ ಇದ್ದಾರೆ. ತಂದೆಯು ನಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ ಎಂಬುದು ಕೆಲವರಿಗೇ ನೆನಪಿರುತ್ತದೆ. ಇದಂತೂ ಆಶ್ಚರ್ಯವಾಗಿದೆಯಲ್ಲವೆ! ಜೀವನಪರ್ಯಂತ ಜೊತೆ ಕೊಡುತ್ತಾರೆ. ಮಡಿಲಿಗೆ ತೆಗೆದುಕೊಂಡು ಮತ್ತೆ ವಿದ್ಯೆಯನ್ನು ಆರಂಭಿಸುತ್ತಾರೆ ಅಂದಮೇಲೆ ಇದು ನೆನಪಿದ್ದರೂ ಸಹ ಬಹಳ ಖುಷಿಯಿರುವುದು ಆದರೆ ಮಾಯೆಯು ಇದನ್ನು ಮರೆಸಿ ಬಿಡುತ್ತದೆ. ಮಕ್ಕಳು ಇದನ್ನೂ ಸಹ ತಿಳಿಸಬೇಕಾಗುತ್ತದೆ. ಇನ್ನೂ ಸ್ವಲ್ಪವೇ ಸಮಯವಿದೆ ಎಂದು ಹೇಳುತ್ತೀರಿ, ಇದಕ್ಕೇನು ಸಾಕ್ಷಿ ಎಂದು ಮನುಷ್ಯರು ಕೇಳುತ್ತಾರೆ. ಆಗ ತಿಳಿಸಿರಿ, ನೋಡಿ ಇದರಲ್ಲಿ ಭಗವಾನುವಾಚ ಎಂದು ಬರೆಯಲ್ಪಟ್ಟಿದೆ. ಯಜ್ಞವನ್ನೂ ರಚಿಸಿದ್ದಾರೆ, ಇದು ಜ್ಞಾನ ಯಜ್ಞವಾಗಿದೆ. ಈಗ ಕೃಷ್ಣನು ಯಜ್ಞವನ್ನು ರಚಿಸಲು ಸಾಧ್ಯವಿಲ್ಲ.

ಮಕ್ಕಳಿಗೆ ಇದೂ ಸಹ ಬುದ್ಧಿಯಲ್ಲಿರಬೇಕು - ನಾವು ಈ ಬೇಹದ್ದಿನ ಯಜ್ಞದ ಬ್ರಾಹ್ಮಣರಾಗಿದ್ದೇವೆ, ತಂದೆಯು ನಮ್ಮನ್ನು ನಿಮಿತ್ತ ಮಾಡಿದ್ದಾರೆ. ಯಾವಾಗ ನೀವು ಚೆನ್ನಾಗಿ ಜ್ಞಾನ ಮತ್ತು ಯೋಗದ ಧಾರಣೆ ಮಾಡುತ್ತೀರೋ ಆತ್ಮವು ಸಂಪೂರ್ಣವಾಗಿ ಬಿಡುತ್ತದೆಯೋ ಆಗ ಈ ಬಿದುರಿನ ಕಾಡಿಗೆ ಬೆಂಕಿ ಬೀಳುವುದು. ಇದು ಬೇಹದ್ದಿನ ಕರ್ಮಕ್ಷೇತ್ರವಾಗಿದೆ ಎಲ್ಲಿ ಎಲ್ಲರೂ ಬಂದು ಆಟವಾಡುತ್ತಾರೆ ಎಂಬುದು ಮನುಷ್ಯರಿಗೇ ತಿಳಿದಿರುತ್ತದೆಯಲ್ಲವೆ. ಮಾಡಿ-ಮಾಡಲ್ಪಟ್ಟಿರುವುದೇ ನಡೆಯುತ್ತಿದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಡ್ರಾಮಾದಲ್ಲಿ ಇಲ್ಲದೇ ಇರುವುದು ನಡೆದರೆ ಚಿಂತೆ ಮಾಡಬೇಕು, ಏನು ನಡೆಯಿತೋ ಅದು ಡ್ರಾಮಾದಲ್ಲಿತ್ತು ಅಂದಮೇಲೆ ಅದರ ಚಿಂತನೆಯನ್ನೇಕೆ ಮಾಡಬೇಕು! ನಾವು ನಾಟಕವನ್ನು ನೋಡುತ್ತೇವೆ, ಡ್ರಾಮಾದಲ್ಲಿ ಯಾವುದೇ ಅಂತಹ ದುಃಖದಾಯಕ ದೃಶ್ಯವಿದ್ದರೆ ಅದನ್ನು ನೋಡಿ ಮನುಷ್ಯರು ಅಳುತ್ತಾರೆ ಆದರೆ ಈಗ ಅದು ಸುಳ್ಳು ನಾಟಕವಾಗಿದೆ, ಇದು ಸತ್ಯವಾದ ನಾಟಕವಾಗಿದೆ. ಸತ್ಯ-ಸತ್ಯವಾಗಿ ಪಾತ್ರವನ್ನು ಅಭಿನಯಿಸುತ್ತಾರೆ ಆದರೆ ನಿಮಗೆ ಯಾವುದೆ ದುಃಖದ ಕಣ್ಣೀರು ಬರಬಾರದು. ನೀವು ಸಾಕ್ಷಿಯಾಗಿ ನೋಡಬೇಕಾಗಿದೆ. ನೀವು ತಿಳಿದುಕೊಂಡಿದ್ದೀರಿ, ಇದು ನಾಟಕವಾಗಿದೆ, ಇದರಲ್ಲಿ ಅಳುವ ಅವಶ್ಯಕತೆಯೇನಿದೆ! ಕಳೆದದ್ದು ಕಳೆದುಹೋಯಿತು, ಎಂದೂ ವಿಚಾರವನ್ನೂ ಮಾಡಬಾರದು. ನೀವು ಮುಂದುವರೆಯುತ್ತಾ ತಂದೆಯನ್ನು ನೆನಪು ಮಾಡುತ್ತಾ ಇರಿ ಮತ್ತು ಎಲ್ಲರಿಗೆ ಮಾರ್ಗ ತಿಳಿಸುತ್ತಾ ಇರಿ. ತಂದೆಯಂತೂ ಸಲಹೆ ನೀಡುತ್ತಾ ಇರುತ್ತಾರೆ. ನಿಮ್ಮ ಬಳಿ ತ್ರಿಮೂರ್ತಿಯ ಚಿತ್ರವಿದೆ, ಅದರಲ್ಲಿ ಅವರು ಶಿವ ತಂದೆ, ಇದು ಅವರ ಆಸ್ತಿ ಎಂದು ಸ್ಪಷ್ಟವಾಗಿ ಬರೆಯಲ್ಪಟ್ಟಿದೆ. ನೀವು ಮಕ್ಕಳಿಗೆ ಈ ಚಿತ್ರವನ್ನು ನೋಡುತ್ತದ್ದಂತೆಯೇ ಬಹಳ ಖುಷಿಯಾಗಬೇಕು - ತಂದೆಯಿಂದ ನಮಗೆ ವಿಷ್ಣು ಪುರಿಯ ಆಸ್ತಿ ಸಿಗುತ್ತದೆ, ಹಳೆಯ ಪ್ರಪಂಚದ ಸಮಾಪ್ತಿಯಾಗಲಿದೆ. ಈ ಚಿತ್ರವನ್ನು ಮುಂಭಾಗದಲ್ಲಿಡಿ, ಇದರಲ್ಲಿ ಖರ್ಚೆನೂ ಇಲ್ಲ. ವೃಕ್ಷದ ಚಿತ್ರವು ಬಹಳ ಚೆನ್ನಾಗಿದೆ. ನಿತ್ಯವೂ ಮುಂಜಾನೆಯೆದ್ದು ವಿಚಾರ ಸಾಗರ ಮಂಥನ ಮಾಡಿರಿ. ತಮಗೆ ತಾವೇ ಶಿಕ್ಷಕರಾಗಿ ಓದಿಸಿ, ಎಲ್ಲರಿಗೂ ಬುದ್ಧಿಯಿದೆ - ತಮ್ಮ ಮನೆಯಲ್ಲಿ ಚಿತ್ರವನ್ನು ಇಟ್ಟುಕೊಳ್ಳಿ. ತಮ್ಮ ಚಿತ್ರದಲ್ಲಿ ಬಹಳ ಒಳ್ಳೆಯ ಜ್ಞಾನವಿದೆ. ವಿನಾಶವಾಗುತ್ತದೆ ಎಂದು ಹೇಳುತ್ತಾರೆ ಅಂದಮೇಲೆ ತಂದೆಯ ಜೊತೆ ಪ್ರೀತಿಯಿದೆಯಲ್ಲವೆ. ಶಿವ ತಂದೆಯು ದಲ್ಲಾಳಿಯಾಗಿ ನಮ್ಮ ವಿವಾಹ ಮಾಡಿಸುತ್ತಾರೆ. ಯಾವಾಗ ಸದ್ಗುರು ದಲ್ಲಾಳಿಯ ರೂಪದಲ್ಲಿ ಸಿಕ್ಕಿದರೋ ಆಗ ಎಷ್ಟು ಒಳ್ಳೊಳ್ಳೆಯ ಮಾತು ತಿಳಿದುಕೊಳ್ಳಲು ಮತ್ತು ತಿಳಿಸುವುದಕ್ಕಾಗಿ ಸಿಕ್ಕಿದೆ ಆದರೂ ಮಾಯೆಯ ಪ್ರಭಾವ ಬಹಳಷ್ಟಿದೆ. 100 ವರ್ಷಗಳ ಮೊದಲು ಈ ವಿದ್ಯುತ್, ಗ್ಯಾಸ್ ಇತ್ಯಾದಿಯೇನೂ ಇರಲಿಲ್ಲ. ಹಿಂದಿನ ಕಾಲದಲ್ಲಿ ವೈಸರಾಯ್ ಮೊದಲಾದವರು ನಾಲ್ಕು ಕುದುರೆಗಳ, ಎಂಟು ಕುದುರೆಗಳ ಗಾಡಿಯಲ್ಲಿ ಬರುತ್ತಿದ್ದರು. ಮೊದಲು ಸಾಹುಕಾರರು ಗಾಡಿಯಲ್ಲಿ ಬರುತ್ತಿದ್ದರು, ಈಗಂತೂ ವಿಮಾನಗಳು ಬಂದು ಬಿಟ್ಟಿದೆ, ಹಿಂದೆ ಇದೇನೂ ಇರಲಿಲ್ಲ. 100 ವರ್ಷಗಳಲ್ಲಿ ಇದು ಏನಾಗಿ ಬಿಟ್ಟಿದೆ! ಇದೇ ಸ್ವರ್ಗವೆಂದು ಮನುಷ್ಯರು ತಿಳಿದುಕೊಳ್ಳುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಸ್ವರ್ಗವು ಸ್ವರ್ಗವೇ ಆಗಿರುತ್ತದೆ. ಇಲ್ಲಿರುವ ವಸ್ತುಗಳೆಲ್ಲವೂ ಬಿಡುಗಾಸಿನದಾಗಿದೆ, ಇದಕ್ಕೆ ತಾತ್ಕಾಲಿಕ ಆಡಂಬರವೆಂದು ಹೇಳಲಾಗುತ್ತದೆ. ಈಗ ನೀವು ಮಕ್ಕಳಿಗೆ ನಾವು ತಂದೆಯನ್ನು ನೆನಪು ಮಾಡಬೇಕು ಎಂಬ ಒಂದೇ ಚಿಂತೆಯಿರಲಿ, ಇದರಲ್ಲಿ ಮಾಯೆಯು ವಿಘ್ನಗಳನ್ನು ಹಾಕುತ್ತದೆ. ತಂದೆಯು ತಮ್ಮ ಉದಾಹರಣೆಯನ್ನು ತಿಳಿಸುತ್ತಾರೆ, ಭೋಜನವನ್ನು ಮಾಡುವಾಗ ನೆನಪಿನಲ್ಲಿದ್ದು ತಿನ್ನಬೇಕೆಂದು ಬಹಳ ಪ್ರಯತ್ನ ಪಡುತ್ತೇನೆ ಆದರೂ ಮರೆತು ಹೋಗುತ್ತೇನೆ ಆಗ ಮಕ್ಕಳಿಗೆ ಇನ್ನೆಷ್ಟು ಪರಿಶ್ರಮವಾಗಬಹುದು! ಎಂದು ತಿಳಿದುಕೊಳ್ಳುತ್ತೇನೆ. ಒಳ್ಳೆಯದು ಮಕ್ಕಳೇ, ನೀವು ಪ್ರಯತ್ನ ಪಟ್ಟು ನೋಡಿರಿ. ತಂದೆಯ ನೆನಪಿನಲ್ಲಿದ್ದು ತೋರಿಸಿ, ನೋಡಿಕೊಳ್ಳಿ - ಇಡೀ ಸಮಯ ನೆನಪು ಇರುತ್ತದೆಯೇ? ಇದರ ಅನುಭವವನ್ನು ತಿಳಿಸಬೇಕು. ಬಾಬಾ, ಇಡೀ ಸಮಯ ನೆನಪು ಇರುವುದಿಲ್ಲ, ಬಹಳ ಭಿನ್ನ-ಭಿನ್ನ ಪ್ರಕಾರದ ಮಾತುಗಳು ನೆನಪಿಗೆ ಬಂದು ಬಿಡುತ್ತವೆ. ತಂದೆಯು ಸ್ವಯಂ ತಮ್ಮ ಅನುಭವವನ್ನು ತಿಳಿಸುತ್ತಾರೆ. ತಂದೆಯು ಯಾರಲ್ಲಿ ಪ್ರವೇಶ ಮಾಡಿದರೋ ಇವರೂ ಸಹ ಪುರುಷಾರ್ಥಿಯಾಗಿದ್ದಾರೆ, ಇವರಿಗೂ ಬಹಳ ಜಂಜಾಟವಿದೆ. ದೊಡ್ಡವರೆಂದು ಕರೆಸಿಕೊಳ್ಳುವುದು ಎಂದರೆ ದೊಡ್ಡ ದುಃಖವನ್ನು ಅನುಭವಿಸುವುದು. ಎಷ್ಟೊಂದು ಸಮಾಚಾರಗಳು ಬರುತ್ತವೆ, ವಿಕಾರಗಳ ಕಾರಣ ಎಷ್ಟೊಂದು ಹೊಡೆಯುತ್ತಾರೆ, ಮನೆಯಿಂದ ಹೊರ ಹಾಕುತ್ತಾರೆ. ನಾನು ಈಶ್ವರನ ಮಡಿಲಿಗೆ ಬಂದಿದ್ದೇವೆಂದು ಕನ್ಯೆಯರು ಹೇಳುತ್ತಾರೆ, ಎಷ್ಟೊಂದು ವಿಘ್ನಗಳು ಬೀಳುತ್ತವೆ. ಕೆಲವರ ಬಳಿ ಶಾಂತಿಯಿರುವುದಿಲ್ಲ, ನೀವು ಮಕ್ಕಳಿಗೆ ಎಲ್ಲಾ ಸೌಲಭ್ಯವಿದೆ, ಈಗ ಪುರುಷಾರ್ಥ ಮಾಡಿ ಶ್ರೀಮತದಂತೆ ನಡೆದು ಶಾಂತಿಯಲ್ಲಿರುತ್ತೀರಿ. ಈ ತಂದೆಯು (ಬ್ರಹ್ಮಾ) ಇಲ್ಲಿಯೂ ಕೆಲವು ಇಂತಹ ಮನೆಗಳನ್ನು ನೋಡಿದ್ದಾರೆ ಎಲ್ಲಿ ಪರಸ್ಪರ ಹೊಂದಾಣಿಕೆಯಿಂದ, ಪ್ರೀತಿಯಿಂದ ಇರುತ್ತಾರೆ. ಎಲ್ಲರೂ ದೊಡ್ಡವರ ಆಜ್ಞೆಯಂತೆ ನಡೆಯುತ್ತಾರೆ. ನಮ್ಮ ಮನೆಯಲ್ಲಿ ಸ್ವರ್ಗವೇ ಇದೆಯೆಂದು ಹೇಳುತ್ತಾರೆ.

ಈಗ ತಂದೆಯು ನಿಮ್ಮನ್ನು ಇಂತಹ ಸ್ವರ್ಗದಲ್ಲಿ ಕರೆದುಕೊಂಡು ಹೋಗುತ್ತಾರೆ, ಅಲ್ಲಿ ಎಲ್ಲಾ ಪ್ರಕಾರದ ಸುಖವಿರುತ್ತದೆ. ದೇವತೆಗಳ 36 ಪ್ರಕಾರದ ಭೋಜನದ ಗಾಯನವಿದೆ, ನೀವೀಗ ತಂದೆಯಿಂದ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ. ಅಲ್ಲಂತೂ ಎಷ್ಟು ಸ್ವಾಧಿಷ್ಟ ಭೋಜನವನ್ನು ಸೇವಿಸುತ್ತಾರೆ ಮತ್ತು ಪವಿತ್ರರಾಗಿರುತ್ತಾರೆ. ನೀವೀಗ ಅಂತಹ ಪ್ರಪಂಚದ ಮಾಲೀಕರಾಗುತ್ತೀರಿ, ರಾಜ-ರಾಣಿ ಪ್ರಜೆಗಳಲ್ಲಿ ಅಂತರವಿರುತ್ತದೆಯಲ್ಲವೆ. ಮೊದಲು ರಾಜರು ಬಹಳ ಆಡಂಬರದಿಂದಿರುತ್ತಿದ್ದರು. ಇವರಂತೂ ಪತಿತರಾದರು ಮತ್ತು ರಾವಣ ರಾಜ್ಯದಲ್ಲಿದ್ದಾರೆ ಅಂದಮೇಲೆ ವಿಚಾರ ಮಾಡಿ, ಸತ್ಯಯುಗದಲ್ಲಿ ಹೇಗಿರಬಹುದು! ಸನ್ಮುಖದಲ್ಲಿ ಲಕ್ಷ್ಮೀ-ನಾರಾಯಣರ ಚಿತ್ರವನ್ನು ಇಟ್ಟಿದ್ದಾರೆ. ಕೃಷ್ಣನಿಗೆ ಎಷ್ಟೊಂದು ಸುಳ್ಳು ಮಾತುಗಳನ್ನು ಬರೆದು ಕಳಂಕವನ್ನು ಹೊರಿಸಿದ್ದಾರೆ. ಸುಳ್ಳೆಂದರೆ ಸುಳ್ಳು, ಸತ್ಯತಾ ಅಂಶವೂ ಇಲ್ಲ. ನೀವೀಗ ತಿಳಿದುಕೊಂಡಿದ್ದೀರಿ - ನಾವು ಸ್ವರ್ಗದ ಮಾಲೀಕರಾಗಿದ್ದೆವು ಅಂದರೆ 84 ಜನ್ಮಗಳನ್ನು ತೆಗೆದುಕೊಂಡು ಸಂಪೂರ್ಣ ಶೂದ್ರ ಬುದ್ಧಿಯವರಾಗಿ ಬಿಟ್ಟಿದ್ದೇವೆ. ಯಾವ ಸ್ಥಿತಿಯಾಗಿ ಬಿಟ್ಟಿದೆ. ಈಗ ಪುನಃ ಪುರುಷಾರ್ಥ ಮಾಡಿ ಹೇಗಾಗುತ್ತೀರಿ! ನೀವು ಏನಾಗುವಿರಿ ಎಂದು ತಂದೆಯು ಕೇಳುತ್ತಾರಲ್ಲವೆ ಆಗ ಸೂರ್ಯವಂಶಿಯರಾಗುತ್ತೇವೆ, ನಾವು ಮಾತಾಪಿತರನ್ನು ಪೂರ್ಣ ಫಾಲೋ ಮಾಡುತ್ತೇವೆ, ಕಡಿಮೆ ಪುರುಷಾರ್ಥ ಮಾಡುವುದಿಲ್ಲವೆಂದು ಎಲ್ಲರೂ ಕೈಯನ್ನು ಎತ್ತುತ್ತಾರೆ. ಎಲ್ಲಾ ಪರಿಶ್ರಮವು ನೆನಪು ಮತ್ತು ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುವುದರ ಮೇಲಿದೆ ಆದ್ದರಿಂದ ತಂದೆಯು ಹೇಳುತ್ತಾರೆ - ಎಷ್ಟು ಸಾಧ್ಯವೋ ಸರ್ವೀಸ್ ಮಾಡುವುದನ್ನು ಕಲಿಯಿರಿ, ಇದು ಬಹಳ ಸಹಜವಾಗಿದೆ. ಇವರು ಶಿವ ತಂದೆಯಾಗಿದ್ದಾರೆ, ಇದು ವಿಷ್ಣು ಪುರಿ ಲಕ್ಷ್ಮೀ-ನಾರಾಯಣರ ರಾಜ್ಯವಿರುವುದು. ಈ ತಂದೆಯೇ ಬಹಳ ಅನುಭವಿಯಾಗಿದ್ದಾರೆ. ಏಣಿ ಚಿತ್ರದಲ್ಲಿ ನೀವು ತಿಳಿಸಬಹುದು.

ನೀವು ಮಕ್ಕಳಿಗೆ ಈ ವೃಕ್ಷ, ಚಕ್ರವನ್ನು ನೋಡುತ್ತಿದ್ದಂತೆಯೇ ಬುದ್ಧಿಯಲ್ಲಿ ಇಡೀ ಜ್ಞಾನವು ಬಂದು ಬಿಡಬೇಕು. ಈ ಯಾವ ಲಕ್ಷ್ಮೀ-ನಾರಾಯಣರಿದ್ದಾರೆಯೋ ಇವರ ರಾಜಧಾನಿಯು ಎಲ್ಲಿ ಹೋಯಿತು! ಯಾರು ಯುದ್ಧ ಮಾಡಿದರು! ಯಾರಿಂದ ಸೋಲಿಸಿದರು! ಈಗಂತೂ ಆ ರಾಜ್ಯವೂ ಇಲ್ಲ, ಈ ಈಶ್ವರೀಯ ಮಾತುಗಳನ್ನು ಯಾರೂ ತಿಳಿದುಕೊಂಡಿಲ್ಲ. ನೀವು ಮಕ್ಕಳಿಗೆ ಇದೂ ಸಾಕ್ಷಾತ್ಕಾರವಾಗಿದೆ, ಹೇಗೆ ಗುಹೆಗಳಲ್ಲಿ ಗಣಿಗಳಿಂದ ಹೋಗಿ ವಜ್ರ ರತ್ನಗಳನ್ನು ತೆಗೆದುಕೊಂಡು ಬರುತ್ತಾರೆ. ಈ ವಿಜ್ಞಾನವು ನಿಮ್ಮ ಸುಖಕ್ಕಾಗಿ ಇರುವುದು, ಇಲ್ಲಿ ದುಃಖಕ್ಕಾಗಿಯೇ ಇದೆ, ಸತ್ಯಯುಗದಲ್ಲಿ ವಿಮಾನಗಳು ಫುಲ್ಪ್ರೂಫ್ ಆಗಿರುತ್ತವೆ. ಮಕ್ಕಳು ಆರಂಭದಲ್ಲಿ ಇದೆಲ್ಲವನ್ನೂ ಸಾಕ್ಷಾತ್ಕಾರದಲ್ಲಿ ನೋಡಿದ್ದಾರೆ, ಅಂತಿಮದಲ್ಲಿಯೂ ನೀವು ಬಹಳ ಸಾಕ್ಷಾತ್ಕಾರಗಳನ್ನು ನೋಡುತ್ತೀರಿ. ಇದನ್ನೂ ನೀವು ಸಾಕ್ಷಾತ್ಕಾರ ಮಾಡಿದ್ದೀರಿ, ಕಳ್ಳರು ಲೂಟಿ ಮಾಡಲು ಬರುತ್ತಾರೆ ನಂತರ ನಿಮ್ಮ ಶಕ್ತಿ ರೂಪವನ್ನು ನೋಡಿ ಓಡಿ ಹೋಗುತ್ತಾರೆ, ಅವೆಲ್ಲವೂ ನಿಮ್ಮ ಅಂತಿಮ ಸಮಯದ ಮಾತಾಗಿದೆ. ಕಳ್ಳರು ಲೂಟಿ ಮಾಡಲು ಬರುತ್ತಾರೆ ಆಗ ನೀವು ತಂದೆಯ ನೆನಪಿನಲ್ಲಿ ನಿಂತಿದ್ದರೆ ಅವರು ಓಡಿ ಹೋಗುವರು.

ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ತೀವ್ರ ಪುರುಷಾರ್ಥ ಮಾಡಿರಿ. ಮುಖ್ಯ ಮಾತು ಪವಿತ್ರತೆಯಾಗಿದೆ, ಒಂದು ಜನ್ಮದಲ್ಲಿ ಪವಿತ್ರರಾಗಬೇಕಾಗಿದೆ ಮೃತ್ಯು ಸನ್ಮುಖದಲ್ಲಿ ನಿಂತಿದೆ. ಪ್ರಾಕೃತಿಕ ಆಪತ್ತುಗಳು ಬಹಳ ಕಠಿಣವಾಗಿ ಬರುತ್ತವೆ, ಇದರಲ್ಲಿ ಎಲ್ಲವೂ ಸಮಾಪ್ತಿಯಾಗುತ್ತದೆ. ಶಿವ ತಂದೆಯು ಇವರ ಮೂಲಕ ಹೇಳುತ್ತಾರೆ, ಇವರ ಆತ್ಮವೂ ಕೇಳಿಸಿಕೊಳ್ಳುತ್ತದೆ. ಈ ತಂದೆಯು ಎಲ್ಲವನ್ನೂ ತಿಳಿಸುತ್ತಾರೆ, ಶಿವ ತಂದೆಗಂತೂ ಅನುಭವವಿಲ್ಲ, ಮಕ್ಕಳಿಗೇ ಅನುಭವವಿರುತ್ತದೆ - ಮಾಯೆಯ ಬಿರುಗಾಳಿಗಳು ಹೇಗೆ ಬರುತ್ತವೆ ಎಂದು. ಮೊಟ್ಟ ಮೊದಲಿಗರು ಇವರಾಗಿದ್ದಾರೆ ಅಂದಮೇಲೆ ಇವರಿಗೆ ಎಲ್ಲಾ ಅನುಭವವಿರುವುದು. ಅಂದಾಗ ಇದರಲ್ಲಿ ಹೆದರಬಾರದು, ಅಡೋಲರಾಗಿರಬೇಕಾಗಿದೆ. ತಂದೆಯ ನೆನಪಿನಲ್ಲಿದ್ದಾಗಲೇ ಶಕ್ತಿಯು ಸಿಗುತ್ತದೆ. ಕೆಲವು ಮಕ್ಕಳು ಚಾರ್ಟ್ ಬರೆಯುತ್ತಾರೆ ಮತ್ತೆ ನಡೆಯುತ್ತಾ-ನಡೆಯುತ್ತಾ ನಿಲ್ಲಿಸಿ ಬಿಡುತ್ತಾರೆ. ಇವರು ಸುಸ್ತಾಗಿದ್ದಾರೆಂದು ತಂದೆಯು ತಿಳಿದುಕೊಳ್ಳುತ್ತಾರೆ. ಪಾರಲೌಕಿಕ ತಂದೆ ಯಾರಿಂದ ಇಷ್ಟು ದೊಡ್ಡ ಆಸ್ತಿಯು ಸಿಗುತ್ತದೆಯೋ ಇಂತಹ ತಂದೆಗೆ ಎಂದೂ ಪತ್ರವನ್ನೂ ಬರೆಯುವುದಿಲ್ಲ, ನೆನಪೇ ಮಾಡುವುದಿಲ್ಲ, ಇಂತಹ ತಂದೆಯನ್ನು ಎಷ್ಟೊಂದು ನೆನಪು ಮಾಡಬೇಕು! ಬಾಬಾ, ನಾವು ನಿಮ್ಮನ್ನು ಬಹಳ ನೆನಪು ಮಾಡುತ್ತೇವೆ, ಬಾಬಾ ತಮ್ಮ ನೆನಪಿಲ್ಲದೆ ನಾವು ಇರಲು ಹೇಗೆ ಸಾಧ್ಯ! ಯಾವ ತಂದೆಯಿಂದ ವಿಶ್ವದ ರಾಜ್ಯಭಾಗ್ಯವು ಸಿಗುತ್ತದೆಯೋ ಇಂತಹ ತಂದೆಯನ್ನು ಹೇಗೆ ಮರೆಯುವುದು! ಒಂದು ಪತ್ರವನ್ನು ಬರೆದರೂ ಸಹ ನೆನಪು ಮಾಡಿದಂತಾಯಿತಲ್ಲವೆ. ಲೌಕಿಕ ತಂದೆಯೂ ಸಹ ಮಕ್ಕಳಿಗೆ ಕಣ್ಮಣಿಗಳೇ ಎಂದು ಪತ್ರವನ್ನು ಬರೆಯುತ್ತಾರೆ. ಸ್ತ್ರೀಯು ಪತಿಗೆ ಹೇಗೆ ಪತ್ರವನ್ನು ಬರೆಯುತ್ತಾಳೆ? ಇಲ್ಲಂತೂ ಎರಡು ಸಂಬಂಧಗಳಿವೆ, ಇದೂ ಸಹ ನೆನಪು ಮಾಡುವ ಯುಕ್ತಿಯಾಗಿದೆ, ಎಷ್ಟು ಮಧುರ ತಂದೆಯಾಗಿದ್ದಾರೆ! ನಮ್ಮಿಂದ ಏನನ್ನು ಬಯಸುತ್ತಾರೆ? ಏನೂ ಇಲ್ಲ. ಅವರು ದಾತನಾಗಿದ್ದಾರೆ, ನೀಡುವವರಾಗಿದ್ದಾರಲ್ಲವೆ. ಇವರು ತೆಗೆದುಕೊಳ್ಳುವವರಲ್ಲ, ಮಧುರ ಮಕ್ಕಳೇ ನಾನು ಬಂದಿದ್ದೇನೆ, ಭಾರತವನ್ನು ಸುಗಂಧಭರಿತ ಹೂದೋಟವನ್ನಾಗಿ ಮಾಡಿ ಹೋಗುತ್ತೇನೆಂದು ಹೇಳುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸೂರ್ಯವಂಶಿಯರಾಗಲು ಮಾತಾಪಿತರನ್ನು ಸಂಪೂರ್ಣ ಫಾಲೋ ಮಾಡಬೇಕಾಗಿದೆ. ನೆನಪಿನಲ್ಲಿರುವ ಮತ್ತು ಅನ್ಯರನ್ನೂ ತಮ್ಮ ಸಮಾನರನ್ನಾಗಿ ಮಾಡುವ ಪರಿಶ್ರಮ ಪಡಬೇಕಾಗಿದೆ.

2. ಪುರುಷಾರ್ಥ ಮಾಡಿ ಶ್ರೀಮತದಂತೆ ನಡೆದು ಶಾಂತವಾಗಿರಬೇಕಾಗಿದೆ. ಹಿರಿಯರ ಆಜ್ಞೆಯನ್ನು ಪಾಲಿಸಬೇಕಾಗಿದೆ.

ವರದಾನ:
ಸ್ವಯಂನ್ನು ಸೇವಾಧಾರಿ ಎಂದು ತಿಳಿದುಕೊಂಡು ಬಾಗುವ ಹಾಗೂ ಸರ್ವರನ್ನು ಬಾಗಿಸುವಂತಹ ನಿಮಿತ್ತ ಹಾಗೂ ನಮ್ರಚಿತ್ತ ಭವ.

ಯಾರು ತನ್ನ ಪ್ರತೀ ಸಂಕಲ್ಪ ಅಥವಾ ಪ್ರತೀ ಕರ್ಮವನ್ನೂ ತಂದೆಯ ಮುಂದೆ ಅರ್ಪಣೆ ಮಾಡಿ ಬಿಡುತ್ತಾರೆ, ಅವರಿಗೇ ನಿಮಿತ್ತ ಎಂದು ಹೇಳಲಾಗುತ್ತದೆ. ನಿಮಿತ್ತರಾಗುವುದು ಅಂದರೆ ಅರ್ಪಣೆಯಾಗುವುದು ಹಾಗೂ ಯಾರು ಬಾಗುತ್ತಾರೆಯೋ ಅವರು ನಮ್ರಚಿತ್ತರು. ಸಂಸ್ಕಾರಗಳಲ್ಲಿ, ಸಂಕಲ್ಪಗಳಲ್ಲಿ ಎಷ್ಟು ಬಾಗುತ್ತಾರೆಯೋ ಅಷ್ಟು ತಮ್ಮ ಮುಂದೆ ವಿಶ್ವವು ಬಾಗುವುದು. ಬಾಗುವುದು ಅಂದರೆ ಬಾಗಿಸುವುದಾಗಿದೆ. ಎಂದಿಗೂ ಸಹ ಅನ್ಯರು ನಮ್ಮ ಮುಂದೆ ಸ್ವಲ್ಪವಾದರೂ ಬಾಗಲಿ ಎಂಬ ಸಂಕಲ್ಪವೂ ಇರಬಾರದು. ಯಾರು ಸತ್ಯ ಸೇವಾಧಾರಿ ಆಗಿರುತ್ತಾರೆಯೋ ಅವರು ಸದಾ ಬಾಗುತ್ತಾರೆ. ಎಂದಿಗೂ ಸಹ ತನ್ನ ಆವೇಶವನ್ನು ತೋರಿಸುವುದಿಲ್ಲ.

ಸ್ಲೋಗನ್:
ಈಗ ಸಮಸ್ಯಾ ಸ್ವರೂಪರಲ್ಲ, ಸಮಾಧಾನ ಸ್ವರೂಪರಾಗಿರಿ.