04.11.23         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಪಾವನರಾಗಿ ಗತಿ-ಸದ್ಗತಿಗೆ ಯೋಗ್ಯರಾಗಿ, ಪತಿತ ಆತ್ಮವು ಗತಿ-ಸದ್ಗತಿಗೆ ಯೋಗ್ಯವಲ್ಲ. ಬೇಹದ್ದಿನ ತಂದೆಯು ನಿಮ್ಮನ್ನು ಬೇಹದ್ದಿನ ಯೋಗ್ಯರನ್ನಾಗಿ ಮಾಡುತ್ತಿದ್ದಾರೆ”

ಪ್ರಶ್ನೆ:
ಪಿತಾವ್ರತ ಎಂದು ಯಾರಿಗೆ ಹೇಳಲಾಗುತ್ತದೆ? ಅವರ ಮುಖ್ಯ ಚಿಹ್ನೆಯನ್ನು ತಿಳಿಸಿ?.

ಉತ್ತರ:
ಯಾರು ಪೂರ್ಣವಾಗಿ ತಂದೆಯ ಶ್ರೀಮತದಂತೆ ನಡೆಯುತ್ತಾರೆ, ಅಶರೀರಿಯಾಗುವ ಅಭ್ಯಾಸ ಮಾಡುತ್ತಾರೆ, ಅವ್ಯಭಿಚಾರಿ ನೆನಪಿನಲ್ಲಿರುತ್ತಾರೆ - ಇಂತಹ ಸುಪುತ್ರ ಮಕ್ಕಳೇ ಪ್ರತೀ ಮಾತನ್ನೂ ಧಾರಣೆ ಮಾಡುತ್ತ್ತಾರೆ. ಇಂತಹವರೇ ಪಿತಾವ್ರತ ಆಗಿದ್ದಾರೆ. ಅವರು ಸದಾ ಸೇವೆಯನ್ನು ಕುರಿತು ವಿಚಾರ ಮಾಡುತ್ತಿರುತ್ತಾರೆ. ಅವರ ಬುದ್ಧಿರೂಪಿ ಪಾತ್ರೆಯು ಪವಿತ್ರವಾಗುತ್ತಿರುತ್ತದೆ. ಅವರು ತಂದೆಗೆ ಎಂದೂ ವಿಚ್ಛೇದನ ಕೊಡುವುದಿಲ್ಲ.

ಗೀತೆ:
ನನಗೆ ಆಶ್ರಯ ಕೊಡುವವರು....

ಓಂ ಶಾಂತಿ.
ನಂಬರ್ವಾರ್ ಪುರುಷಾರ್ಥದ ಅನುಸಾರವಾಗಿ ಮಕ್ಕಳು ಧನ್ಯವಾದಗಳನ್ನು ಹೇಳುತ್ತಾರೆ. ಎಲ್ಲರೂ ಒಂದೇ ರೀತಿಯಾಗಿ ಧನ್ಯವಾದಗಳನ್ನು ಹೇಳುವುದಿಲ್ಲ. ಯಾರು ಒಳ್ಳೆಯ ನಿಶ್ಚಯಬುದ್ಧಿಯವರಾಗಿರುತ್ತಾರೆ ಹಾಗೂ ತಂದೆಯ ಸೇವೆಯಲ್ಲಿ ಹೃದಯಪೂರ್ವಕವಾಗಿ ಪ್ರೀತಿಯಿಂದ ತೊಡಗಿರುತ್ತಾರೆ, ಅವರೇ ಆಂತರ್ಯದಿಂದ ತಂದೆಗೆ ಕಮಾಲ್ ನಿಮ್ಮದು, ನಾವೇನೂ ತಿಳಿದುಕೊಂಡಿರಲಿಲ್ಲವೆಂದು ಧನ್ಯವಾದಗಳನ್ನು ಹೇಳುತ್ತಾರೆ. ನಾವಂತೂ ನಿಮ್ಮೊಂದಿಗೆ ಮಿಲನ ಮಾಡಲು ಯೋಗ್ಯರಾಗಿರಲಿಲ್ಲ. ಅದೇನೋ ಸರಿಯಾಗಿದೆ, ಮಾಯೆಯು ಎಲ್ಲರನ್ನೂ ಅಯೋಗ್ಯರನ್ನಾಗಿ ಮಾಡಿಬಿಟ್ಟಿದೆ. ಅವರಿಗೆ ಸ್ವರ್ಗಕ್ಕೆ ಯೋಗ್ಯರನ್ನಾಗಿ ಮಾಡುವವರು ಯಾರು ಹಾಗೂ ನರಕಕ್ಕೆ ಯೋಗ್ಯರನ್ನಾಗಿ ಮಾಡುವವರು ಯಾರು? ಎಂದು ತಿಳಿದಿಲ್ಲ. ಅವರಂತೂ ಗತಿ-ಸದ್ಗತಿ ಎರಡಕ್ಕೂ ಯೋಗ್ಯರನ್ನಾಗಿ ತಂದೆಯೇ ಮಾಡುತ್ತಾರೆಂದು ತಿಳಿದಿದ್ದಾರೆ. ಇಲ್ಲವಾದರೆ ಅಲ್ಲಿಗೆ (ಸ್ವರ್ಗಕ್ಕೆ) ಯೋಗ್ಯರು ಯಾರೂ ಇಲ್ಲ ಏಕೆಂದರೆ ನಾವು ಪತಿತರೆಂದು ಸ್ವಯಂ ಹೇಳುತ್ತಾರೆ. ಈ ಪ್ರಪಂಚವೇ ಪತಿತವಾಗಿದೆ. ಸಾಧು-ಸಂತರ್ಯಾರೂ ಸಹ ತಂದೆಯನ್ನು ತಿಳಿದುಕೊಂಡಿಲ್ಲ. ಈಗ ತಂದೆಯು ನೀವು ಮಕ್ಕಳಿಗೆ ತಮ್ಮ ಪರಿಚಯವನ್ನು ಕೊಟ್ಟಿದ್ದಾರೆ. ತಂದೆಯೇ ಬಂದು ಪರಿಚಯ ಕೊಡಬೇಕೆಂಬ ನಿಯಮವಿದೆ. ಇಲ್ಲಿಯೇ ಬಂದು ಯೋಗ್ಯರನ್ನಾಗಿ ಮಾಡಬೇಕು, ಪಾವನ ಮಾಡಬೇಕು. ಒಂದುವೇಳೆ ಅಲ್ಲಿಯೇ ಕುಳಿತು ಪಾವನ ಮಾಡುವುದಾದರೆ ಇಷ್ಟೊಂದು ಯೋಗ್ಯವಿಲ್ಲದವರು ಏಕೆ ಆಗುತ್ತಿದ್ದರು?

ನಂಬರ್ವಾರ್ ಪುರುಷಾರ್ಥದ ಅನುಸಾರ ನೀವು ಮಕ್ಕಳಲ್ಲಿ ನಿಶ್ಚಯಬುದ್ಧಿಯಿದೆ. ತಂದೆಯ ಪರಿಚಯವನ್ನು ಹೇಗೆ ಕೊಡಬೇಕೆಂದು ಬುದ್ಧಿಯಿರಬೇಕು. ಶಿವಾಯ ನಮಃ ಸಹ ಅವಶ್ಯವಾಗಿ ಬೇಕು. ಅವರೇ ಶ್ರೇಷ್ಠಾತಿ ಶ್ರೇಷ್ಠ ತಾಯಿ-ತಂದೆಯಾಗಿದ್ದಾರೆ. ಬ್ರಹ್ಮಾ-ವಿಷ್ಣು-ಶಂಕರರಂತೂ ರಚನೆಯಾಗಿದ್ದಾರೆ, ಅವರನ್ನು ರಚಿಸುವವರು ಅವಶ್ಯವಾಗಿ ತಂದೆಯಾಗಿರಬೇಕು, ತಾಯಿಯೂ ಸಹ ಬೇಕಾಗುತ್ತದೆ. ಸರ್ವರಿಗೂ ಅವಶ್ಯವಾಗಿ ಒಬ್ಬರೇ ಪರಮಪಿತ ಆಗಿದ್ದಾರೆ. ನಿರಾಕಾರನಿಗೆ ಮಾತ್ರ ಗಾಡ್ ಎಂದು ಹೇಳಲಾಗುತ್ತದೆ. ರಚೈತ ಸದಾ ಒಬ್ಬರೇ ಆಗಿರುತ್ತಾರೆ. ಹೀಗೆ ಮೊಟ್ಟಮೊದಲು (ಅಲ್ಫ್) ತಂದೆಯ ಪರಿಚಯವನ್ನು ಕೊಡಬೇಕಾಗುವುದು. ಈ ಯುಕ್ತಿಯುಕ್ತವಾಗಿ ಹೇಗೆ ಪರಿಚಯವನ್ನು ಕೊಡಬೇಕೆಂದು ತಿಳಿದುಕೊಳ್ಳಬೇಕು. ಭಗವಂತನೇ ಜ್ಞಾನಸಾಗರನಾಗಿದ್ದಾರೆ, ಅವರೇ ಬಂದು ರಾಜಯೋಗವನ್ನು ಕಲಿಸಿದರು. ಆ ಭಗವಂತ ಯಾರು? ಹೀಗೆ ಮೊದಲು(ಅಲ್ಫ್) ತಂದೆಯ ಪರಿಚಯ ಕೊಡಬೇಕು. ತಂದೆಯು ನಿರಾಕಾರನಾಗಿದ್ದಾರೆ, ಆತ್ಮನೂ ನಿರಾಕಾರವಾಗಿದೆ. ಆ ನಿರಾಕಾರ ತಂದೆಯು ಬಂದು ಮಕ್ಕಳಿಗೆ ಆಸ್ತಿಯನ್ನು ಕೊಡುತ್ತಾರೆ. ಯಾರ ಮುಖಾಂತರವಾದರೂ ತಿಳಿಸಿಕೊಡುತ್ತಾರಲ್ಲವೆ. ಇಲ್ಲವಾದರೆ ರಾಜರಿಗೂ ರಾಜನನ್ನಾಗಿ ಹೇಗೆ ಮಾಡಿದರು? ಸತ್ಯಯುಗೀ ರಾಜ್ಯವನ್ನು ಯಾರು ಸ್ಥಾಪನೆ ಮಾಡಿದರು? ಸ್ವರ್ಗದ ರಚಯಿತ ಯಾರಾಗಿದ್ದಾರೆ? ಅವಶ್ಯವಾಗಿ ಸ್ವರ್ಗಸ್ಥಾಪಕ, ಪರಮಪಿತ ಪರಮಾತ್ಮ ಆಗಿರಬೇಕು. ಅವರು ನಿರಾಕಾರಿಯೂ ಆಗಿರಬೇಕು. ಮೊಟ್ಟಮೊದಲು ತಂದೆಯ ಪರಿಚಯವನ್ನು ಕೊಡಬೇಕಾಗುತ್ತದೆ. ಕೃಷ್ಣನಿಗೆ ಹಾಗೂ ಬ್ರಹ್ಮಾ-ವಿಷ್ಣು-ಶಂಕರರಿಗೆ ತಂದೆಯೆಂದು ಹೇಳುವುದಿಲ್ಲ. ಅವರನ್ನು ರಚಿಸಲಾಗುವುದು. ಯಾವಾಗ ಸೂಕ್ಷ್ಮವತನದವರನ್ನು ರಚಿಸಲಾಗುತ್ತದೆಯೆಂದರೆ ಅವರೂ ಸಹ ರಚನೆಯಾಗಿದ್ದಾರೆ. ಅಂದಾಗ ಸ್ಥೂಲವತನದಲ್ಲಿ ಇರುವವರನ್ನು ಭಗವಂತನೆಂದು ಹೇಗೆ ಹೇಳಲಾಗುತ್ತದೆ. ಅವರಿಗೆ ದೇವತಾಯ ನಮಃ ಎಂದು, ಇವರಿಗೆ ಶಿವಾಯ ನಮಃ ಎಂದು ಹೇಳಲಾಗುತ್ತದೆ. ಈ ಮಾತು ಮುಖ್ಯವಾಗಿದೆ. ಈಗ ಪ್ರದರ್ಶಿನಿಯಲ್ಲಿ ಮತ್ತೆ-ಮತ್ತೆ ಈ ಮಾತನ್ನು ತಿಳಿಸಿಕೊಡುವುದಿಲ್ಲ. ಇದನ್ನು ಒಬ್ಬೊಬ್ಬರಿಗೂ ಚೆನ್ನಾಗಿ ತಿಳಿಸಿಕೊಡಬೇಕು. ನಿಶ್ಚಯ ಮಾಡಿಸಬೇಕು. ಬನ್ನಿ ನಿಮಗೆ ತಂದೆಯ ಸಾಕ್ಷಾತ್ಕಾರ ಮಾಡಿಸುತ್ತೇವೆಂದು ಯಾರೇ ಬಂದರೂ ಅವರಿಗೆ ಮೊದಲು ಹೇಳಬೇಕು. ತಂದೆಯಿಂದಲೇ ನಿಮಗೆ ಆಸ್ತಿ ಸಿಗುತ್ತದೆ. ತಂದೇಯೇ ಗೀತೆಯಲ್ಲಿ ರಾಜಯೋಗವನ್ನು ಕಲಿಸಿದ್ದಾರೆ. ಕೃಷ್ಣನು ರಾಜಯೋಗವನ್ನು ಕಲಿಸಲಿಲ್ಲ. ತಂದೆಯೇ ಗೀತೆಯ ಭಗವಂತನಾಗಿದ್ದಾರೆ. ಮೊಟ್ಟ ಮೊದಲ ಮಾತು ಇದಾಗಿದೆ. ಕೃಷ್ಣ ಭಗವಾನುವಾಚವಲ್ಲ. ರುದ್ರಭಗವಾನುವಾಚ ಅಥವಾ ಸೋಮನಾಥ, ಶಿವಭಗವಾನುವಾಚ ಎಂದು ಹೇಳಲಾಗುತ್ತದೆ. ಪ್ರತಿಯೊಬ್ಬ ಮನುಷ್ಯನ ಜೀವನಕಥೆ ತಮ್ಮತಮ್ಮದೇ ಆಗಿದೆ. ಪರಸ್ಪರ ಹೋಲಿಕೆಯಿರುವುದಿಲ್ಲ. ಆದುದರಿಂದ ಯಾರೇ ಬಂದರೂ ಮೊಟ್ಟ ಮೊದಲು ಈ ಮಾತಿನ ಮೇಲೆ ತಿಳಿಸಿಕೊಡಬೇಕು. ತಿಳಿಸಿಕೊಡಬೇಕಾಗಿರುವ ಮೂಲ ಮಾತು ಇದಾಗಿದೆ. ಇದು ಪರಮಪಿತ ಪರಮಾತ್ಮನ ಕರ್ತವ್ಯವಾಗಿದೆ. ಅವರು ತಂದೆಯಾಗಿದ್ದಾರೆ, ಇವರು ಮಗ ಆಗಿದ್ದಾರೆ. ಅವರು ಸ್ವರ್ಗ ಸ್ಥಾಪಕರು ತಂದೆಯಾಗಿದ್ದಾರೆ, ಇವರು ಸ್ವರ್ಗದ ರಾಜಕುಮಾರನಾಗಿದ್ದಾರೆ. ಇದನ್ನು ಸಂಪೂರ್ಣ ಸ್ಪಷ್ಟ ಮಾಡಿ ತಿಳಿಸಬೇಕು. ಗೀತೆಯೇ ಮುಖ್ಯವಾಗಿದೆ. ಅದರ ಆಧಾರದ ಮೇಲೆ ಉಳಿದ ಶಾಸ್ತ್ರಗಳಿವೆ. ಸರ್ವಶಾಸ್ತ್ರಮಯಿ ಶಿರೋಮಣಿ ಭಗವದ್ಗೀತೆಯಾಗಿದೆ. ಮನುಷ್ಯರು ಕೇಳುತ್ತಾರೆ ನೀವು ವೇದ ಶಾಸ್ತ್ರಗಳನ್ನು ಒಪ್ಪುತ್ತೀರಾ? ಎಂದು ಪ್ರತಿಯೊಬ್ಬರೂ ತಮ್ಮ ಧರ್ಮಶಾಸ್ತ್ರವನ್ನು ಒಪ್ಪಿಕೊಳ್ಳುತ್ತಾರೆ. ಎಲ್ಲಾ ಶಾಸ್ತ್ರಗಳನ್ನು ಹೇಗೆ ಒಪ್ಪಿಕೊಳ್ಳುತ್ತಾರೆ?. ಹೌದು ಎಲ್ಲಾ ಧರ್ಮ ಶಾಸ್ತ್ರಗಳಂತೂ ಖಂಡಿತ ಇದೆ. ಆದರೆ ಶಾಸ್ತ್ರಗಳನ್ನು ತಿಳಿಯುವ ಮೊದಲು ಮುಖ್ಯವಾಗಿ ಯಾರಿಂದ ಆಸ್ತಿಯು ಸಿಗುತ್ತದೆಯೋ ಆ ತಂದೆಯನ್ನು ತಿಳಿಯಬೇಕಾಗಿದೆ. ಶಾಸ್ತ್ರಗಳಿಂದ ಅಸ್ತಿಯು ಸಿಗುವುದಿಲ್ಲ, ತಂದೆಯಿಂದ ಆಸ್ತಿಯು ಸಿಗುತ್ತದೆ. ತಂದೆಯು ಯಾವ ಜ್ಞಾನವನ್ನು ಹಾಗೂ ಆಸ್ತಿಯನ್ನು ಕೊಡುತ್ತಾರೆಯೋ ಆ ಪುಸ್ತಕವನ್ನು ಬರೆಯಲ್ಪಟ್ಟಿದೆ. ಹೀಗೆ ಮೊಟ್ಟಮೊದಲು ಗೀತೆಯ ಬಗ್ಗೆ ಕೇಳಬೇಕು. ಗೀತೆಯ ಭಗವಂತ ಯಾರಾಗಿದ್ದಾರೆ? ಅದರಲ್ಲಿ ರಾಜಯೋಗದ ಮಾತೂ ಬರುತ್ತದೆ. ರಾಜಯೋಗವು ಅವಶ್ಯವಾಗಿ ಹೊಸಪ್ರಪಂಚಕ್ಕಾಗಿ ಇರಬೇಕು ಏಕೆಂದರೆ ಭಗವಂತನು ಬಂದು ಪತಿತರನ್ನಂತೂ ಮಾಡುವುದಿಲ್ಲ, ಅವರಂತೂ ಪಾವನ ಮಹಾರಾಜರನ್ನಾಗಿ ಮಾಡಬೇಕು. ಮೊಟ್ಟಮೊದಲು ತಂದೆಯವರ ಪರಿಚಯವನ್ನು ಕೊಟ್ಟು ಇದನ್ನು ಈ ರೀತಿ ಬರೆಸಿ - ನಿಜವಾಗಿಯೂ ಇವರು ನನ್ನ ತಂದೆಯೆಂದು ನಾನು ನಿಶ್ಚಯ ಮಾಡಿಕೊಂಡಿದ್ದೇನೆ. ಮೊಟ್ಟಮೊದಲಿಗೆ ತಿಳಿಸಬೇಕು, ಶಿವಾಯನಮಃ ನೀವೇ ತಾಯಿ-ತಂದೆ ಎಂಬ ಮಹಿಮೆಯೂ ಸಹ ಆ ತಂದೆಯದೇ ಆಗಿದೆ. ಭಗವಂತ ಭಕ್ತಿಯ ಫಲವನ್ನು ಇಲ್ಲಿಗೆ ಬಂದು ಕೊಡಬೇಕಾಗುತ್ತದೆ. ಭಕ್ತಿಯ ಫಲವೇನಾಗಿದೆ, ಅದನ್ನು ನೀವೀಗ ತಿಳಿದುಕೊಂಡಿದ್ದೀರಿ. ಯಾರು ತುಂಬಾ ಭಕ್ತಿಯನ್ನು ಮಾಡಿರುತ್ತಾರೆಯೋ ಅವರಿಗೇ ಫಲ ಸಿಗುತ್ತದೆ ಆದರೆ ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿಲ್ಲ. ನಿಮ್ಮಲ್ಲಿಯೂ ನಂಬರ್ವಾರ್ ಪುರುಷಾರ್ಥದ ಅನುಸಾರ ತಿಳಿದಿದ್ದಾರೆ. ನಿಮ್ಮ ಬೇಹದ್ದಿನ ತಾಯಿ-ತಂದೆ ಅವರಾಗಿದ್ದಾರೆಂದು ತಿಳಿಸಲಾಗುತ್ತದೆ. ಜಗದಂಬಾ, ಜಗತ್ಪಿತ ಎಂದೂ ಗಾಯನ ಮಾಡಲಾಗುತ್ತದೆ. ಆಡಂ ಹಾಗೂ ಈವ್ ಮನುಷ್ಯರೆಂದು ತಿಳಿದಿದ್ದಾರೆ. ಈವ್ ತಾಯಿಯೆಂದು ಹೇಳಿಬಿಡುತ್ತಾರೆ. ವಾಸ್ತವಿಕವಾಗಿ ಈವ್ ಯಾರಾಗಿದ್ದಾರೆ, ಇದನ್ನು ತಿಳಿದುಕೊಂಡಿಲ್ಲ. ಅದನ್ನು ತಂದೆಯು ಕುಳಿತು ತಿಳಿಸುತ್ತಿದ್ದಾರೆ. ಹೌದು! ತಕ್ಷಣ ಯಾರೂ ಸಹ ತಿಳಿದುಕೊಳ್ಳಲು ಆಗುವುದಿಲ್ಲ. ಓದಿನಲ್ಲಿ ಸಮಯ ಹಿಡಿಯುತ್ತದೆ. ಓದುತ್ತಾ-ಓದುತ್ತಾ ಕೊನೆಗೆ ಬ್ಯಾರಿಸ್ಟರ್ ಆಗಿಬಿಡುತ್ತಾರೆ. ದೇವತೆ ಆಗಬೇಕೆಂಬ ಲಕ್ಷ್ಯವು ಅವಶ್ಯವಾಗಿದೆ ಆದುದರಿಂದ ಮೊದಲು ತಂದೆಯ ಪರಿಚಯವನ್ನು ಕೊಡಬೇಕಾಗಿದೆ. ನೀವೇ ತಾಯಿ-ತಂದೆಯೆಂದು ಹಾಡುತ್ತಾರೆ..... ಹಾಗೂ ಮತ್ತೊಂದು ಕಡೆ ಪತಿತ-ಪಾವನ ಬಾ ಎಂದು ಹೇಳುತ್ತಾರೆ. ಹಾಗಾದರೆ ಪತಿತ ಪ್ರಪಂಚ ಹಾಗೂ ಪಾವನ ಪ್ರಪಂಚವೆಂದು ಯಾವುದಕ್ಕೆ ಹೇಳಲಾಗುತ್ತದೆ? ಕಲಿಯುಗವು ಇನ್ನೂ 40 ಸಾವಿರ ವರ್ಷಗಳು ಇರುವುದೇನು? ಒಳ್ಳೆಯದು ಭಲೆ ಪಾವನ ಮಾಡುವಂತಹವರಂತೂ ಅವರೊಬ್ಬರೆ ಆಗಿದ್ದಾರಲ್ಲವೆ. ಪರಮಪಿತ ಪರಮಾತ್ಮನೇ ಸ್ವರ್ಗ ಸ್ಥಾಪನೆ ಮಾಡುವವರಾಗಿದ್ದಾರೆ ಕೃಷ್ಣನಂತೂ ಆಗಲು ಸಾಧ್ಯವಿಲ್ಲ. ಕೃಷ್ಣ ಸ್ವರ್ಗದ ಆಸ್ತಿಯನ್ನು ಪಡೆದವರಾಗಿದ್ದಾರೆ. ಆ ಕೃಷ್ಣ ಸ್ವರ್ಗದ ರಾಜಕುಮಾರ ಹಾಗೂ ಶಿವಬಾಬಾ ಸ್ವರ್ಗದ ರಚೈತನಾಗಿದ್ದಾರೆ. ಕೃಷ್ಣನು ರಚನೆ, ಮೊದಲನೆಯ ರಾಜಕುಮಾರನಾಗಿದ್ದಾನೆ. ಈ ರೀತಿ ಸ್ಪಷ್ಟಮಾಡಿ ದೊಡ್ಡ-ದೊಡ್ಡ ಅಕ್ಷರಗಳಲ್ಲಿ ಬರೆಯಬೇಕಾಗಿದೆ, ಆಗ ನಿಮಗೆ ತಿಳಿಸಲು ಸಹಜವಾಗುತ್ತದೆ. ರಚೈತ ಮತ್ತು ರಚನೆಯ ಪರಿಚಯವಾಗುತ್ತದೆ. ರಚೈತನೇ ಜ್ಞಾನಪೂರ್ಣನಾಗಿದ್ದಾರೆ, ಅವರೇ ರಾಜಯೋಗವನ್ನು ಕಲಿಸುತ್ತಾರೆ. ಅವರು ಯಾವುದೇ ರಾಜನಲ್ಲ, ಅವರು ರಾಜಯೋಗವನ್ನು ಕಲಿಸಿ ರಾಜರಿಗೂ ರಾಜರನ್ನಾಗಿ ಮಾಡುತ್ತಾರೆ. ಭಗವಂತ ರಾಜಯೋಗವನ್ನು ಕಲಿಸಿದರು, ಕೃಷ್ಣನು ಆ ರಾಜಯೋಗದಿಂದ ರಾಜ್ಯಪದವಿಯನ್ನು ಪಡೆದುಕೊಂಡು ಮತ್ತೆ ಕಳೆದುಕೊಂಡಿದ್ದಾನೆ. ಈಗ ಆತನೆ ಪುನಃ ಪಡೆಯಬೇಕಾಗಿದೆ. ಹೀಗೆ ಚಿತ್ರಗಳ ಮೂಲಕ ಬಹಳ ಚೆನ್ನಾಗಿ ತಿಳಿಸಲಾಗುತ್ತದೆ. ತಂದೆಯ ಕರ್ತವ್ಯದ ಪರಿಚಯ ಅವಶ್ಯವಾಗಿ ಬೇಕಾಗಿದೆ. ಶ್ರೀ ಕೃಷ್ಣನ ಹೆಸರನ್ನು ಹಾಕಿದ್ದರಿಂದ ಭಾರತ ಕವಡೆ ಸಮಾನ ಆಗಿಹೋಯಿತು. ಶಿವಬಾಬಾನನ್ನು ತಿಳಿದುಕೊಳ್ಳುವುದರಿಂದ ಭಾರತ ವಜ್ರಸಮಾನವಾಗುತ್ತದೆ. ಆದರೆ ಇವರು ನಮ್ಮ ತಂದೆಯೆಂದು ಬುದ್ಧಿಯಲ್ಲಿ ಕುಳಿತುಕೊಳ್ಳಬೇಕು. ತಂದೆಯೇ ಮೊಟ್ಟಮೊದಲಿಗೆ ಹೊಸ ಸ್ವರ್ಗದ ಪ್ರಪಂಚವನ್ನು ರಚಿಸಿದರು, ಈಗ ಅದೇ ಹಳೆಯ ಪ್ರಪಂಚವಾಗಿದೆ. ಗೀತೆಯಲ್ಲಿ ರಾಜಯೋಗವಿದೆ. ವಿದೇಶದವರು ರಾಜಯೋಗವನ್ನು ಕಲಿಯಲು ಬಯಸುತ್ತಾರೆ. ಗೀತೆಯಿಂದಲೇ ಕಲಿತಿದ್ದಾರೆ. ಈಗ ನೀವು ತಿಳಿದುಕೊಂಡಿದ್ದೀರಿ ಹಾಗೂ ತಂದೆ ಯಾರು? ಎಂದು ಅನ್ಯರಿಗೂ ತಿಳಿಸಿಕೊಡಲು ಪ್ರಯತ್ನಪಡುತ್ತೀರಿ. ಅವರು ಸರ್ವವ್ಯಾಪಿಯಲ್ಲ. ಒಂದುವೇಳೆ ಸರ್ವವ್ಯಾಪಿಯಾಗಿದ್ದರೆ ಅವರು ಹೇಗೆ ರಾಜಯೋಗವನ್ನು ಕಲಿಸುತ್ತಾರೆ? ಈ ತಪ್ಪಿನ ಬಗ್ಗೆ ಗಮನಕೊಟ್ಟು ವಿಚಾರ ಮಾಡಬೇಕು. ಯಾರು ಸೇವೆಯಲ್ಲಿ ತತ್ಫರರಾಗಿರುತ್ತಾರೆಯೋ ಅವರಿಗೆ ಈ ವಿಚಾರವು ನಡೆಯುತ್ತದೆ. ಧಾರಣೆಯೂ ಸಹ ತಂದೆಯ ಶ್ರೀಮತದಂತೆ ನಡೆದಾಗ ಆಗುತ್ತದೆ. ಅಶರೀರಿಭವ ಮನ್ಮನಾಭವ ಆಗಿರಬೇಕು, ಪತಿವ್ರತಾ ಅಥವಾ ಪಿತಾವ್ರತರಾಗಿ ಅಥವಾ ಸುಪುತ್ರ ಮಗುವಾಗಿ.

ತಂದೆಯ ಆಜ್ಞೆಯಾಗಿದೆ - ಎಷ್ಟು ಸಾಧ್ಯವೋ ಅಷ್ಟು ನೆನಪನ್ನು ಹೆಚ್ಚಿಸಿಕೊಳ್ಳಿ. ದೇಹಾಭಿಮಾನದಲ್ಲಿ ಬರುವುದರಿಂದ ನೀವು ನೆನಪು ಮಾಡುವುದಿಲ್ಲ, ಬುದ್ಧಿಯೂ ಪವಿತ್ರವಾಗುವುದಿಲ್ಲ. ಹುಲಿಯ ಹಾಲಿಗಾಗಿ ಚಿನ್ನದ ಪಾತ್ರೆ ಬೇಕೆಂದು ಹೇಳುತ್ತಾರೆ. ಹಾಗೆಯೇ ಇಲ್ಲಿ ಪಿತಾವ್ರತ ಪಾತ್ರೆ (ಬುದ್ಧಿ) ಯಾಗಬೇಕು. ಅವ್ಯಭಿಚಾರಿ ಪಿತಾವ್ರತರು ಬಹಳ ಕಡಿಮೆಯಿದ್ದಾರೆ. ಕೆಲವರಂತೂ ಚಿಕ್ಕಮಕ್ಕಳಂತೆ ಏನೂ ತಿಳಿದುಕೊಂಡಿಲ್ಲ. ಇಲ್ಲಿ ಕುಳಿತಿರುತ್ತಾರೆ ಆದರೆ ಏನೂ ತಿಳಿದುಕೊಂಡಿರುವುದಿಲ್ಲ. ಚಿಕ್ಕಮಕ್ಕಳು ಪರಸ್ಪರ ಮಿತ್ರರಂತೆ ಇರುತ್ತಾರೆಂದರೆ ತುಂಬಾ ಪ್ರೀತಿಯಿಂದಿರುವುದನ್ನು ನೋಡಿ ತಕ್ಷಣ ವಿವಾಹ ಮಾಡಿಬಿಡುತ್ತಾರೆ ಅಂದಾಗ ಇದೂ ಸಹ ಅದೇ ರೀತಿಯದ್ದಾಗಿದೆ. ತಂದೆಯ ಜೊತೆ ನಮ್ಮ ನಿಶ್ಚಿತಾರ್ಥ ಮಾಡಿಕೊಳ್ಳಬೇಕು ಆದರೆ ಏನನ್ನೂ ತಿಳಿದುಕೊಂಡಿರುವುದಿಲ್ಲ. ನಾವು ಮಮ್ಮಾ-ಬಾಬಾರವರ ಮಕ್ಕಳಾಗಿದ್ದೇವೆ, ಅವರಿಂದ ಆಸ್ತಿಯನ್ನು ಪಡೆಯಬೇಕೆನ್ನುವುದೂ ಸಹ ತಿಳಿದುಕೊಂಡಿರುವುದಿಲ್ಲ. ಆಶ್ಚರ್ಯವೆನಿಸುತ್ತದೆಯಲ್ಲವೆ. 5-6 ವರ್ಷಗಳು ಇದೂ ಸಹ ತಂದೆಗೆ ಪತಿಗೆ ವಿಚ್ಚೇದನ ಕೊಟ್ಟುಬಿಡುತ್ತಾರೆ. ಮಾಯೆಯು ಅಷ್ಟೊಂದು ಕಷ್ಟ ಕೊಡುತ್ತದೆ.

ಆದುದರಿಂದ ಮೊದಲಿಗೆ ತಿಳಿಸಬೇಕು ಶಿವಾಯ ನಮಃ, ಬ್ರಹ್ಮಾ-ವಿಷ್ಣು-ಶಂಕರರ ರಚೈತನೂ ಇವರಾಗಿದ್ದಾರೆ. ಜ್ಞಾನಸಾಗರನೂ ಈ ಶಿವನೇ ಆಗಿದ್ದಾರೆ. ಅಂದಾಗ ಈಗ ಏನು ಮಾಡಬೇಕು? ತ್ರಿಮೂರ್ತಿಚಿತ್ರದ ಪಕ್ಕದಲ್ಲಿ ಸ್ಥಳ ಖಾಲಿಯಿದೆ ಅದರಲ್ಲಿ ಶಿವತಂದೆಯ ಹಾಗೂ ಕೃಷ್ಣನ ಕರ್ತವ್ಯಗಳೇ ಬೇರೆಯಾಗಿದೆ ಎಂದು ಬರೆಯಬೇಕು. ಮೊದಲಿಗೆ ಯಾವಾಗ ಈ ಮಾತುಗಳನ್ನು ತಿಳಿಸುತ್ತೀರಿ ಆಗ ಬುದ್ದಿಯು ತೆರೆಯುತ್ತದೆ ಹಾಗೂ ಈ ವಿದ್ಯೆಯು ಭವಿಷ್ಯಕ್ಕಾಗಿ ಆಗಿದೆ. ಇಂತಹ ವಿದ್ಯೆಯು ಎಲ್ಲಿಯೂ ಇರುವುದಿಲ್ಲ. ಶಾಸ್ತ್ರಗಳಿಂದ ಈ ಅನುಭವವನ್ನು ಮಾಡಲಾಗುವುದಿಲ್ಲ. ನಾವು ಸತ್ಯಯುಗದ ಆದಿಯಲ್ಲಿ ಬರಲು ಓದುತ್ತಿದ್ದೇವೆಂದು ನಿಮ್ಮ ಬುದ್ಧಿಯಲ್ಲಿದೆ. ಶಾಲೆಯು ಮುಗಿಯುವ ವೇಳೆಗೆ ನಮ್ಮ ಅಂತಿಮ ಪೇಪರ್ ಬರುತ್ತದೆ ನಂತರ ನಾವು ಹೋಗಿ ರಾಜ್ಯ ಮಾಡುತ್ತೇವೆ. ಗೀತೆಯನ್ನು ಹೇಳುವವರು ಇಂತಹ ಮಾತುಗಳನ್ನು ತಿಳಿಸಿಕೊಡುವುದಿಲ್ಲ. ಮೊದಲು ತಂದೆಯನ್ನು ತಿಳಿದುಕೊಳ್ಳಬೇಕು. ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕು. ತಂದೆಯೇ ತ್ರಿಕಾಲದರ್ಶಿಯಾಗಿದ್ದಾರೆ. ಪ್ರಪಂಚದಲ್ಲಿ ಮತ್ತ್ಯಾವ ಮನುಷ್ಯನೂ ತ್ರಿಕಾಲದರ್ಶಿಯಲ್ಲ. ವಾಸ್ತವದಲ್ಲಿ ಯಾರು ಪೂಜ್ಯರಾಗಿದ್ದಾರೋ ಅವರೇ ಮತ್ತೆ ಪೂಜಾರಿಯಾಗುತ್ತಾರೆ. ಭಕ್ತಿಯನ್ನು ನೀವೇ ಮಾಡಿದ್ದೀರಿ. ಇದೆಲ್ಲವನ್ನೂ ಬೇರೆ ಯಾರೂ ತಿಳಿದಿಲ್ಲ. ಯಾರು ಭಕ್ತಿ ಮಾಡಿದ್ದಾರೆಯೋ ಅವರೇ ಮೊದಲನೇ ನಂಬರಿನಲ್ಲಿ ಬ್ರಹ್ಮಾ, ನಂತರ ಬ್ರಹ್ಮಾಮುಖವಂಶಾವಳಿಗಳಾಗಿದ್ದಾರೆ. ತಾವೇ ಪೂಜ್ಯರೂ ಆಗುತ್ತಾರೆ. ಮೊದಲನೇ ನಂಬರಿನ ಪೂಜ್ಯರೇ ಮೊದಲನೇ ನಂಬರಿನ ಪೂಜಾರಿ ಯಾಗಿದ್ದಾರೆ, ಪುನಃ ಪೂಜ್ಯರಾಗುತ್ತಾರೆ. ಭಕ್ತಿಯ ಫಲವು ಮೊದಲು ಇವರಿಗೇ ಸಿಗುತ್ತದೆ. ಬ್ರಾಹ್ಮಣರೇ ಓದಿ ನಂತರ ದೇವತೆಯಾಗುತ್ತಾರೆ. ಇದು ಯಾವ ಶಾಸ್ತ್ರಗಳಲ್ಲಿಯೂ ಬರೆಯಲ್ಪಟ್ಟಿಲ್ಲ. ಭೀಷ್ಮ ಪಿತಾಮಹ ಮೊದಲಾದವರಿಗೆ ಇವರಿಂದ ಜ್ಞಾನ ಬಾಣವನ್ನು ಹೊಡೆಸುತ್ತಿರುವವರು ಬೇರೆ ಯಾರೋ ಇದ್ದಾರೆಂದು ತಿಳಿದಿದೆ. ಅವಶ್ಯವಾಗಿ ಇವರಲ್ಲಿ ಯಾವುದೋ ಶಕ್ತಿಯಿದೆ ಎಂದು ತಿಳಿದುಕೊಳ್ಳುತ್ತಾರೆ. ಯಾವುದೋ ಶಕ್ತಿಯಿದೆ ಅದೇ ಕಲಿಸುತ್ತಿದೆ ಎಂದು ಈಗಲೂ ಹೇಳುತ್ತಾರೆ.

ಈ ಮಕ್ಕಳೆಲ್ಲರೂ ನನ್ನವರೆಂದು ಬಾಬಾ ನೋಡುತ್ತಾರೆ. ಇವರ (ಬ್ರಹ್ಮನ) ನಯನಗಳಿಂದಲೇ ನೋಡುತ್ತಾರೆ. ಹೇಗೆ ಪಿತೃಗಳಿಗೆ ಶ್ರಾದ್ಧ ತಿನ್ನಿಸುತ್ತಾರೆ. ಆಗ ಇವರು ಯಾರೆಂದು ಆತ್ಮವೇ ಬಂದು ನೋಡುತ್ತದೆ. ಭೋಜನವನ್ನು ಸ್ವೀಕಾರ ಮಾಡುವಾಗ ನೇತ್ರ ಮೊದಲಾದುವುಗಳು ಅವರ ರೀತಿಯೇ ಆಗಿಬಿಡುತ್ತದೆ. ತಾತ್ಕಾಲಿಕವಾಗಿ ಆಧಾರ ತೆಗೆದುಕೊಳ್ಳುತ್ತಾರೆ. ಇದೆಲ್ಲವೂ ಭಾರತದಲ್ಲಿಯೇ ನಡೆಯುತ್ತದೆ. ಪ್ರಾಚೀನ ಭಾರತದಲ್ಲಿ ಮೊಟ್ಟ ಮೊದಲು ರಾಧಾ-ಕೃಷ್ಣರಿದ್ದರು. ಅವರಿಗೆ ಜನ್ಮ ಕೊಡುವವರು ಶ್ರೇಷ್ಠರೆಂದು ಎಣಿಸುವುದಿಲ್ಲ ಏಕೆಂದರೆ ಅವರು ಕಡಿಮೆ ಅಂಕಗಳಿಂದ ಉತ್ತೀರ್ಣರಾಗಿರುತ್ತಾರೆ. ಕೃಷ್ಣನಿಂದ ಮಹಿಮೆಯು ಪ್ರಾರಂಭವಾಗುತ್ತದೆ. ರಾಧಾ-ಕೃಷ್ಣರಿಬ್ಬರೂ ಅವರವರ ರಾಜಧಾನಿಯಲ್ಲಿ ಇರುತ್ತಾರೆ. ಅವರ ತಾಯಿ-ತಂದೆಗಿಂತಲೂ ಮಕ್ಕಳ ಹೆಸರು ಪ್ರಸಿದ್ದಿಯಾಗಿದೆ. ಇವು ವಿಚಿತ್ರವಾದ ಮಾತುಗಳಾಗಿವೆ. ಗುಪ್ತ ಖುಷಿಯೂ ಇರುತ್ತದೆ. ತಂದೆಯು ಹೇಳುತ್ತಾರೆ - ನಾನು ಸಾಧಾರಣ ಶರೀರದಲ್ಲಿ ಬರುತ್ತೇನೆ. ಇಷ್ಟೊಂದು ಮಾತೆಯರ ಸಂಘಟನೆಯನ್ನು ಪಾಲನೆ ಮಾಡುವ ಸಲುವಾಗಿ ಸಾಧಾರಣ ಶರೀರವನ್ನು ತೆಗೆದುಕೊಂಡಿದ್ದೇನೆ, ಇವರಿಂದ ಪಾಲನೆ ನಡೆಯುತ್ತಿತ್ತು. ಇದು ಶಿವತಂದೆಯ ಭಂಡಾರವಾಗಿದೆ. ಭೋಲಾ ಭಂಡಾರಿ, ಅವಿನಾಶಿ ಜ್ಞಾನರತ್ನಗಳುಳ್ಳವರೂ ಆಗಿದ್ದಾರೆ. ಮತ್ತೆ ಎಲ್ಲರೂ ದತ್ತು ಮಕ್ಕಳಾಗಿದ್ದಾರೆ. ಅವರನ್ನೂ ಪಾಲನೆ ಮಾಡಬೇಕಾಗುತ್ತದೆ. ಇದನ್ನು ಮಕ್ಕಳೇ ತಿಳಿದುಕೊಳ್ಳುತ್ತಾರೆ.

ಮೊದಲು ಯಾವಾಗ ಪ್ರಾರಂಭ ಮಾಡುತ್ತೀರಿ ಆಗ ಶಿವಭಗವಾನುವಾಚ, ಅವರೇ ಸರ್ವರ ರಚೈತ ಎಂದೂ ಹೇಳಿ. ನಂತರ ಕೃಷ್ಣನಿಗೆ ಜ್ಞಾನಸಾಗರ, ಗಾಡ್ ಫಾದರ್, ಪರಮಪಿತ ಪರಮಾತ್ಮನೆಂದು ಹೇಗೆ ಹೇಳುತ್ತೀರಿ? ಎಂಬ ಬರವಣಿಗೆ ಓದಲು ಸ್ಪಷ್ಟವಾಗಿರಬೇಕು, ಬುದ್ಧಿಯಲ್ಲಿ ಚೆನ್ನಾಗಿ ಕುಳಿತುಕೊಳ್ಳಬೇಕು. ಕೆಲವರಿಗೆ ತಿಳಿದುಕೊಳ್ಳಲು 2-3 ವರ್ಷಗಳೇ ಬೇಕಾಗುತ್ತದೆ. ಭಗವಂತನಂತೂ ಬಂದು ಭಕ್ತಿಯ ಫಲವನ್ನು ಕೊಡಬೇಕಾಗುತ್ತದೆ. ಬ್ರಹ್ಮಾನ ಮುಖಾಂತರ ತಂದೆಯು ಯಜ್ಞವನ್ನು ರಚಿಸಿದರು, ಬ್ರಾಹ್ಮಣರಿಗೆ ಓದಿಸುತ್ತಾ ಬ್ರಾಹ್ಮಣರಿಂದ ದೇವತೆಗಳನ್ನಾಗಿ ಮಾಡಿದರು. ಮತ್ತೆ ಕೆಳಗಿಳಿಯಲೇಬೇಕು. ಇದು ಬಹಳ ಒಳ್ಳೆಯ ತಿಳುವಳಿಕೆಯಾಗಿದೆ. ಮೊದಲು ಶ್ರೀಕೃಷ್ಣ ಸ್ವರ್ಗದ ರಾಜಕುಮಾರ, ಸ್ವರ್ಗಸ್ಥಾಪಕ ಪರಮಪಿತ ಪರಮಾತ್ಮನಲ್ಲವೆಂದು ಸಿದ್ಧ ಮಾಡಿ ತೋರಿಸಬೇಕು. ಸರ್ವವ್ಯಾಪಿಯ ಜ್ಞಾನದಿಂದ ಸಂಪೂರ್ಣವಾಗಿ ತಮೋಪ್ರಧಾನರಾಗಿದ್ದಾರೆ. ಯಾರು ರಾಜ್ಯಭಾಗ್ಯವನ್ನು ಕೊಟ್ಟರೋ ಅವರನ್ನು ಮರೆತುಹೋದರು. ಕಲ್ಪ-ಕಲ್ಪವೂ ತಂದೆಯು ರಾಜ್ಯವನ್ನು ಕೊಡುತ್ತಾರೆ. ನಾವು ಅಂತಹ ತಂದೆಯನ್ನು ಮರೆತುಹೋಗುತ್ತೇವೆ. ಬಹಳ ಆಶ್ಚರ್ಯವೆನಿಸುತ್ತದೆ. ಇಡೀ ದಿನ ಖುಷಿಯಲ್ಲಿ ನೃತ್ಯ ಮಾಡುತ್ತಿರಬೇಕು. ಬಾಬಾ ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಅವ್ಯಭಿಚಾರಿ ಪಿತಾವ್ರತರಾಗಿರಬೇಕು. ನೆನಪಿನಲ್ಲಿದ್ದು ಬುದ್ಧಿಯನ್ನು ಪವಿತ್ರವಾಗಿ ಮಾಡಿಕೊಳ್ಳಬೇಕು.

2. ತಂದೆಯ ಪರಿಚಯವನ್ನು ಯುಕ್ತಿಯುಕ್ತವಾಗಿ ಕೊಡುವ ವಿಧಿಯನ್ನು ರಚಿಸಬೇಕು. ವಿಚಾರಸಾಗರ ಮಂಥನ ಮಾಡಿ ಅಲ್ಫ್(ತಂದೆ)ನನ್ನು ಸಿದ್ಧ ಮಾಡಬೇಕು. ನಿಶ್ಚಯಬುದ್ಧಿಯವರಾಗಿ ಸೇವೆ ಮಾಡಬೇಕು.

ವರದಾನ:
ಸ್ವ ಪರಿವರ್ತನೆಯ ಮುಖಾಂತರ ವಿಶ್ವಪರಿವರ್ತನೆಗೆ ನಿಮಿತ್ತರಾಗುವಂತಹ ಶ್ರೇಷ್ಠ ಸೇವಾಧಾರಿ ಭವ

ನೀವು ಮಕ್ಕಳು ಸ್ವ ಪರಿವರ್ತನೆಯಿಂದ ವಿಶ್ವ ಪರಿವರ್ತನೆ ಮಾಡುವಂತಹ ಗುತ್ತಿಗೆ ತೆಗೆದುಕೊಂಡಿರುವಿರಿ. ಸ್ವ ಪರಿವರ್ತನೆಯೇ ವಿಶ್ವ ಪರಿವರ್ತನೆಗೆ ಆಧಾರವಾಗಿದೆ. ಸ್ವ ಪರಿವರ್ತನೆ ಆಗದೆ ಯಾವುದೇ ಆತ್ಮದ ಪ್ರತಿ ಎಷ್ಟೇ ಪರಿಶ್ರಮ ಮಾಡಿದರೂ, ಪರಿವರ್ತನೆಯಾಗಲು ಸಾಧ್ಯವಿಲ್ಲ ಏಕೆಂದರೆ ಇತ್ತೀಚಿನ ಸಮಯದಲ್ಲಿ ಕೇವಲ ಕೇಳುವುದರಿಂದ ಬದಲಾಗುವುದಿಲ್ಲ ಆದರೆ ನೋಡುವುದರಿಂದ ಬದಲಾಗುತ್ತಾರೆ. ಬಂಧನ ಹಾಕುವವರೂ ಸಹ ಜೀವನದ ಪರಿವರ್ತನೆ ನೋಡಿ ಬದಲಾಗಿಬಿಡುತ್ತಾರೆ, ಅಂದಮೇಲೆ ಮಾಡಿ ತೋರಿಸಬೇಕು, ಬದಲಾವಣೆ ಮಾಡಿ ತೋರಿಸುವುದೇ ಶ್ರೇಷ್ಠ ಸೇವಾಧಾರಿ ಆಗುವುದಾಗಿದೆ.

ಸ್ಲೋಗನ್:
ಸಮಯ, ಸಂಕಲ್ಪ ಮತ್ತು ಮಾತಿನ ಶಕ್ತಿಯನ್ನು ವ್ಯರ್ಥದಿಂದ ಅತ್ಯುತ್ತಮವಾಗಿ ಬದಲಾಯಿಸಿದಾಗ ಶಕ್ತಿಶಾಲಿಯಾಗಿಬಿಡುವಿರಿ.