5.1.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ತಮನ್ನು ಆತ್ಮನೆಂದು ತಿಳಿದು ಸಹೋದರ ಆತ್ಮನೊಂದಿಗೆ ಮಾತನಾಡಿ, ಇಂತಹ ದೃಷ್ಟಿಯನ್ನು ಪಕ್ಕಾ ಮಾಡಿಕೊಂಡಾಗ ವಿಕಾರಗಳ ಭೂತ ಪ್ರವೇಶವಾಗುವುದಿಲ್ಲ, ಯಾವಾಗ ಯಾರಲ್ಲಿಯಾದರೂ ಭೂತ ನೋಡುತ್ತೀರೆಂದರೆ ಅವರಿಂದ ದೂರವಾಗಿ ಇರಿ.

ಪ್ರಶ್ನೆ:
ತಂದೆಯ ಮಕ್ಕಳಾದ ನಂತರವೂ ಸಹ ಆಸ್ತಿಕ ಮತ್ತು ನಾಸ್ತಿಕ ಮಕ್ಕಳಿದ್ದಾರೆ - ಅದು ಹೇಗೆ?

ಉತ್ತರ:
ಯಾರು ಈಶ್ವರೀಯ ನಿಯಮಗಳನ್ನು ಪಾಲನೆ ಮಾಡುತ್ತಾರೆ, ದೇಹೀ ಅಭಿಮಾನಿಯಾಗಿರುವ ಪುರುಷಾರ್ಥವನ್ನು ಮಾಡುತ್ತಾರೆಯೋ ಅವರು ಆಸ್ತಿಕರಾಗಿದ್ದಾರೆ ಮತ್ತು ಯಾರು ಈಶ್ವರೀಯ ನಿಯಮಗಳಿಗೆ ವಿರುದ್ಧವಾಗಿ ವಿಕಾರಗಳಿಗೆ ವಶವಾಗಿ ಪರಸ್ಪರ ಹೊಡೆದಾಡುತ್ತಾ-ಜಗಳವಾಡುತ್ತಿರುತ್ತಾರೆ, ಅವರು ನಾಸ್ತಿಕರಾಗಿದ್ದಾರೆ. ಆಸ್ತಿಕ ಮಕ್ಕಳು ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳಿಂದ ಬುದ್ಧಿಯೋಗವನ್ನು ತೆಗೆದು ತಮ್ಮನ್ನು ಸಹೋದರ-ಸಹೋದರ ಎಂದು ತಿಳಿಯುತ್ತಾರೆ. ನಾಸ್ತಿಕರು ದೇಹಾಭಿಮಾನದಲ್ಲಿರುತ್ತಾರೆ.

ಓಂ ಶಾಂತಿ.
ಮೊಟ್ಟ ಮೊದಲು ತಂದೆ ಮಕ್ಕಳಿಗೆ ತಿಳಿಸುತ್ತಿದ್ದಾರೆ - ಹೇ ಮಕ್ಕಳೇ, ಬುದ್ಧಿಯಲ್ಲಿ ಸದಾ ಇದನ್ನು ನೆನಪಿಟ್ಟುಕೊಳ್ಳಿ. ಶಿವ ತಂದೆಯು ನಮ್ಮ ಸುಪ್ರೀಂ ತಂದೆಯೂ ಆಗಿದ್ದಾರೆ, ಸುಪ್ರೀಂ ಶಿಕ್ಷಕನೂ ಆಗಿದ್ದಾರೆ, ಸುಪ್ರೀಂ ಸದ್ಗುರುವೂ ಆಗಿದ್ದಾರೆ. ಇದನ್ನು ಮೊಟ್ಟ ಮೊದಲು ಬುದ್ಧಿಯಲ್ಲಿ ಅವಶ್ಯವಾಗಿ ಬರಬೇಕಾಗಿದೆ. ಪ್ರತಿಯೊಬ್ಬರೂ ತಮ್ಮನ್ನು ತಿಳಿದುಕೊಳ್ಳಬಹುದು - ನಮ್ಮ ಬುದ್ಧಿಯಲ್ಲಿ ಇದು ಬಂದಿದೆಯೆ ಅಥವಾ ಇಲ್ಲವೆ? ಒಂದು ವೇಳೆ ಬುದ್ಧಿಯಲ್ಲಿ ನೆನಪು ಬಂದಿತೆಂದರೆ ಆಸ್ತಿಕರು, ನೆನಪಿಗೆ ಬರಲಿಲ್ಲವೆಂದರೆ ನಾಸ್ತಿಕರು. ವಿಧ್ಯಾರ್ಥಿಗಳ ಬುದ್ಧಿಯಲ್ಲಿ ಶಿಕ್ಷಕರು ಬಂದಿದ್ದಾರೆಂದು ತಕ್ಷಣ ಬರಬೇಕು. ಮನೆಯಲ್ಲಿರುವ ಕಾರಣ ಇದನ್ನು ಮರೆತು ಹೋಗುತ್ತಾರೆ. ಆ ಲೆಕ್ಕದಿಂದ ನೋಡಿದಾಗ ಕೆಲವರಷ್ಟೇ ವಿರಳವಾಗಿ ನಮ್ಮ ಸುಪ್ರೀಂ ತಂದೆಯು ಬಂದಿದ್ದಾರೆ ಎಂಬುದನ್ನು ಅರಿತುಕೊಳ್ಳುತ್ತಾರೆ. ತಂದೆಯು ಶಿಕ್ಷಕರೂ ಆಗಿದ್ದಾರೆ ಮತ್ತು ಕರೆದುಕೊಂಡು ಹೋಗುವ ಸದ್ಗುರುವೂ ಆಗಿದ್ದಾರೆ. ಇದು ನೆನಪಿಗೆ ಬಂದಾಗ ಖುಷಿಯ ನಶೆಯೇರುವುದು ಮತ್ತು ಕರೆದುಕೊಂಡು ಹೋಗುವ ಸದ್ಗುರುವೂ ಆಗಿದ್ದಾರೆ. ಇದು ನೆನಪಿಗೆ ಬಂದಾಗ ಖುಷಿಯ ನಶೆಯೇರುವುದು. ಇಲ್ಲವೆಂದರೆ ತಮ್ಮದೇ ಆದ ದುಃಖ, ನೋವಿನ ಪ್ರಪಂಚದ ಛೀ ಛೀ ಮಾತುಗಳಲ್ಲಿ, ಭಿನ್ನ-ಭಿನ್ನ ಆಲೋಚನೆಗಳಲ್ಲಿ ಕುಳಿತಿರುತ್ತಾರೆ. ಎರಡನೆಯದಾಗಿ ಬಹಳಷ್ಟು ಜನ ಮಕ್ಕಳನ್ನು ಕೇಳುತ್ತಾರೆ, ವಿನಾಶಕ್ಕೆ ಇನ್ನು ಎಷ್ಟು ಸಮಯವಿದೆ ಎನ್ನುತ್ತಾರೆ ಅಂದಾಗ ತಿಳಿಸಿ - ಇದು ಕೇಳುವ ಮಾತಲ್ಲ, ಮೊದಲು ನಮಗೆ ಇದನ್ನು ಯಾರು ತಿಳಿಸಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಿ. ಮೊದಲು ತಂದೆಯ ಪರಿಚಯವನ್ನು ಅವರಿಗೆ ಕೊಡಿ. ತಿಳಿಸುವ ಅಭ್ಯಾಸವಿದ್ದಾಗ ಸರಿಯಾಗಿ ತಿಳಿಸಿಕೊಡುತ್ತೀರಿ. ಇಲ್ಲವೆಂದರೆ ಆ ಸಮಯದಲ್ಲಿ ಎಲ್ಲವನ್ನೂ ಮರೆತು ಹೋಗುತ್ತೀರಿ. ತಮ್ಮನ್ನು ಆತ್ಮನೆಂದು ತಿಳಿದು ಅನ್ಯರನ್ನು ಆತ್ಮಿಕ ದೃಷ್ಟಿಯಿಂದ ನೋಡಿ ಎಂದು ತಂದೆಯು ಬಹಳ ತಿಳಿಸುತ್ತಾರೆ ಆದರೆ ಆ ದೃಷ್ಟಿಯು ನಿಲ್ಲುವುದಿಲ್ಲ. ರೂಪಾಯಿಯಲ್ಲಿ ಒಂದು ಆಣೆಯಷ್ಟು ಪರಿಶ್ರಮದಿಂದ ಕುಳಿತುಕೊಳ್ಳುತ್ತದೆ. ಬುದ್ಧಿಯಲ್ಲಿ ಕುಳಿತುಕೊಳ್ಳುವುದೇ ಇಲ್ಲ. ಇದೇನು ತಂದೆಯು ಶಾಪ ಕೊಡುವುದಿಲ್ಲ. ಇಲ್ಲಂತೂ ತಂದೆಯು ತಿಳಿಸುತ್ತಾರೆ, ಮಕ್ಕಳೇ ಈ ಜ್ಞಾನವು ಬಹಳ ಉನ್ನತವಾಗಿದೆ. ರಾಜಧಾನಿಯ ಸ್ಥಾಪನೆಯಾಗುತ್ತದೆ. ಪ್ರಜೆಗಳಿಂದ ಹಿಡಿದು ರಾಜರವರೆಗೂ ಪದವಿಯನ್ನು ಪಡೆಯುತ್ತಾರೆ. ಪ್ರಜೆಗಳಿಂದ ರಾಜರಾಗುತ್ತಾರೆ ರಾಜರು ಕೆಲವರಷ್ಟೇ ಆಗುತ್ತಾರೆ, ಉಳಿದವರು ನಂಬರ್ ವಾರ್ ಪ್ರಜೆಗಳಾಗುತ್ತಾರೆ. ಕೊನೆಯ ನಂಬರಿನವರ ಬುದ್ಧಿಯಲ್ಲಿ ಎಂದೂ ಯಾವುದೆ ಮಾತುಗಳು ಕುಳಿತುಕೊಳ್ಳುವುದಿಲ್ಲ. ಅಂದಾಗ ಮೊದಲು ಯಾವಾಗ ಯಾರಿಗೇ ತಿಳಿಸುತ್ತೀರೆಂದರೆ ಶಿವ ತಂದೆಯು 32 ಗುಣಗಳ ಯಾವ ಚಿತ್ರವನ್ನು ಮಾಡಿಸಿದ್ದಾರೆಯೋ ಅದರ ಬಗ್ಗೆ ತಿಳಿಸಿಕೊಡಿ. ಅದರಲ್ಲಿಯೂ ಸಹ ಬರೆಯಲ್ಪಟ್ಟಿದೆ - ಸುಪ್ರೀಂ ತಂದೆ, ಸುಪ್ರೀಂ ಶಿಕ್ಷಕ, ಸುಪ್ರೀಂ ಸದ್ಗುರುವಾಗಿದ್ದಾರೆ. ನಮಗೆ ತಿಳಿಸಿಕೊಡುವವರು ಸುಪ್ರೀಂ ತಂದೆಯಾಗಿದ್ದಾರೆಂದು ಯಾವಾಗ ನಿಶ್ಚಯವಾಗುತ್ತದೆ ನಂತರ ಸಂಶಯವೂ ಬರುವುದಿಲ್ಲ. ತಂದೆಯ ನೆನಪಿನ ವಿನಃ ಸ್ಥಾಪನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಈಗ ರಾಜಧಾನಿಯು ಸ್ಥಾಪನೆಯಾಗುತ್ತಿದೆ ಎಂದು ನೀವು ಯಾವಾಗ ತಿಳಿಸುತ್ತೀರೋ ಆಗ ಅವರ ಬುದ್ಧಿಯಲ್ಲಿ ಇವರಿಗೆ ತಿಳಿಸುವವರು ಬೇರೆ ಯಾರೋ ಇದ್ದಾರೆಂಬುದು ಅವಶ್ಯವಾಗಿ ಬರಬೇಕು. ರಾಜಧಾನಿಯು ಸ್ಥಾಪನೆಯಾಗುತ್ತಿದೆ ಎಂದು ಯಾವುದೇ ಮನುಷ್ಯ ಮಾತ್ರರೂ ಹೇಳಲು ಸಾಧ್ಯವಿಲ್ಲ. ಅಂದಾಗ ಮೊಟ್ಟ ಮೊದಲು ತಂದೆಯ ನಿಶ್ಚಯ ಮಾಡಿಸಬೇಕು. ನಮಗೆ ಪರಮಾತ್ಮ ತಂದೆಯು ಓದಿಸುತ್ತಿದ್ದಾರೆ, ಇದು ಯಾವುದೇ ಮನುಷ್ಯರ ಮತವಲ್ಲ, ಈಶ್ವರೀಯ ಮತವಾಗಿದೆ. ಹೊಸ ಪ್ರಪಂಚವು ಅವಶ್ಯವಾಗಿ ತಂದೆಯ ಮೂಲಕವೇ ಸ್ಥಾಪನೆಯಾಗುವುದು. ಹಳೆಯ ಪ್ರಪಂಚದ ವಿನಾಶವೂ ಸಹ ತಂದೆಯ ಕರ್ತವ್ಯವೇ ಆಗಿದೆ. ಎಲ್ಲಿಯವರೆಗೆ ಈ ನಿಶ್ಚಯವಿರುವುದಿಲ್ಲವೋ ಅಲ್ಲಿಯವರೆಗೆ ಇದು ಹೇಗಾಗುತ್ತದೆ ಎಂದು ಕೇಳುತ್ತಲೇ ಇರುತ್ತಾರೆ. ಆದ್ದರಿಂದ ಮೊಟ್ಟ ಮೊದಲು ಶ್ರೀಮತದ ಮಾತನ್ನು ಬುದ್ಧಿಯಲ್ಲಿ ಕುರಿಸಬೇಕು, ಆಗ ಮುಂದೆ ಅರ್ಥ ಮಾಡಿಕೊಳ್ಳುತ್ತಾರೆ. ಇಲ್ಲವೆಂದರೆ ಇದು ಮನುಷ್ಯರ ಮತವೆಂದು ತಿಳಿದುಕೊಳ್ಳುತ್ತಾರೆ. ಪ್ರತಿಯೊಬ್ಬ ಮನುಷ್ಯರ ಮತವೂ ಬೇರೆ-ಬೇರೆಯಾಗಿದೆ. ಮನುಷ್ಯರ ಮತವು ಒಂದೇ ಆಗಿರಲು ಸಾಧ್ಯವಿಲ್ಲ. ಈ ಸಮಯದಲ್ಲಿ ನಿಮಗೆ ಮತ ಕೊಡುವವರು ಒಬ್ಬರೇ ಆಗಿದ್ದಾರೆ. ಅವರ ಶ್ರೀಮತದಂತೆ ನಿಯಮ ಪೂರ್ವಕವಾಗಿ ನಡೆಯಬೇಕು. ನಡೆಯುವುದೂ ಸಹ ಬಹಳ ಪರಿಶ್ರಮದ ಕೆಲಸವಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಆತ್ಮಾಭಿಮಾನಿಗಳಾಗಿ. ನಾನಾತ್ಮ ನನ್ನ ಸಹೋದರ ಆತ್ಮನೊಂದಿಗೆ ಮಾತನಾಡುತ್ತೇನೆ ಎಂದು ತಿಳಿದುಕೊಂಡಾಗ ಎಂದೂ ಜಗಳ-ಕಲಹಗಳಾಗಲು ಸಾಧ್ಯವಿಲ್ಲ. ದೇಹಾಭಿಮಾನ ಬಂದರೆ ಅವರನ್ನು ತಿಳಿದುಕೊಳ್ಳಿ - ಅವರು ನಾಸ್ತಿಕರು. ಆತ್ಮಾಭಿಮಾನಿಗಳಲ್ಲವೆಂದರೆ ಅವರು ನಾಸ್ತಿಕರು. ಆತ್ಮಾಭಿಮಾನಿಗಳಾದರೆ ತಿಳಿಯಿರಿ, ಅವರು ಆಸ್ತಿಕರಾಗಿದ್ದಾರೆ. ದೇಹಾಭಿಮಾನವು ಬಹಳ ನಷ್ಟಕಾರಕವಾಗಿದೆ. ಸ್ವಲ್ಪ ಜಗಳವಾಡುತ್ತಾರೆ - ಹೊಡೆದಾಡುತ್ತಾರೆಂದರೆ ತಿಳಿದುಕೊಳ್ಳಿರಿ ಅವರು ನಾಸ್ತಿಕರು. ತಂದೆಯನ್ನು ಅರಿತುಕೊಂಡಿಲ್ಲ, ಕ್ರೋಧದ ಭೂತವಿದೆ ಎಂದರೆ ನಾಸ್ತಿಕರೇ ಆದರು. ತಂದೆಯೇ ಮಕ್ಕಳಲ್ಲಿ ಭೂತವೆಲ್ಲಿಂದ ಬಂದಿತು ಅಂದಮೇಲೆ ಅವರು ಆಸ್ತಿಕರಾಗಲಿಲ್ಲ. ನಮಗೆ ತಂದೆಯಲ್ಲಿ ಬಹಳ ಪ್ರೀತಿಯಿದೆ ಎಂದು ಅವರು ಎಷ್ಟೇ ಹೇಳಲಿ. ಒಂದುವೇಳೆ ಈಶ್ವರೀಯ ನಿಯಮಗಳಿಗೆ ವಿರುದ್ಧವಾಗಿ ಮಾತನಾಡುತ್ತಾರೆಂದರೆ ಅವರನ್ನು ರಾವಣನ ಸಂಪ್ರದಾಯದವರೆಂದೇ ತಿಳಿಯಬೇಕು. ದೇಹಾಭಿಮಾನದಲ್ಲಿರುತ್ತಾರೆ, ಯಾರಲ್ಲಿಯಾದರೂ ವಿಕಾರಿ ಭೂತವನ್ನು ನೋಡಿದರೆ ಅಥವಾ ಕುದೃಷ್ಟಿಯನ್ನು ನೋಡಿದರೆ ಅವರಿಂದ ದೂರವಾಗಿ ಬಿಡಬೇಕು. ಭೂತದ ಮುಂದೆ ನಿಂತೇ ಇದ್ದರೆ ಭೂತದ ಪ್ರವೇಶತೆಯಾಗಿ ಬಿಡುವುದು. ಭೂತವು ಭೂತದೊಂದಿಗೆ ಹೊಡೆದಾಡುತ್ತಿರುತ್ತದೆ. ಯಾರಲ್ಲಿಯಾದರೂ ವಿಕಾರಿ ಭೂತವು ಬಂದರೆ ಅವರು ಪೂರ್ಣ ನಾಸ್ತಿಕರು. ದೇವತೆಗಳಂತೂ ಸರ್ವಗುಣ ಸಂಪನ್ನರಾಗಿರುತ್ತಾರೆ. ಆ ಗುಣಗಳು ಇಲ್ಲವೆಂದರೆ ನಾಸ್ತಿಕರೆಂದು ಅರ್ಥ. ನಾಸ್ತಿಕರು ಆಸ್ತಿಯನ್ನು ಪಡೆಯುತ್ತಾರೆಯೇ! ಅಂಶ ಮಾತ್ರವೂ ದೋಷವಿರಬಾರದು. ಇಲ್ಲವೆಂದರೆ ಬಹಳಷ್ಟು ಶಿಕ್ಷೆಗಳನ್ನು ಅನುಭವಿಸಿ ಪ್ರಜಾ ಪದವಿಯಲ್ಲಿ ಹೋಗಬೇಕಾಗುತ್ತದೆ. ಆದ್ದರಿಂದ ಭೂತಗಳಿಂದ ದೂರವಿರಬೇಕು. ಭೂತವನ್ನು ಎದುರಿಸಲು ಹೋದರೆ ಅದು ಬಂದು ಬಿಡುತ್ತದೆ. ಎಂದೂ ಭೂತದೊಂದಿಗೆ ಎದುರಿಸಲು ಹೋಗುವುದಿಲ್ಲ. ಅಂತಹವರೊಂದಿಗೆ ಹೆಚ್ಚಿಗೆ ಮಾತನಾಡಲೂಬಾರದು. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಇದು ಭೂತದ ಪ್ರಪಂಚವಾಗಿದೆ. ಎಲ್ಲಿಯವರೆಗೆ ಭೂತಗಳು ಹೋಗುವುದಿಲ್ಲವೋ ಶಿಕ್ಷೆಗಳನ್ನು ಅನುಭವಿಸಬೇಕಾಗುತ್ತದೆ. ಪದವಿಯನ್ನೂ ಪಡೆಯುವುದಿಲ್ಲ. ಯುದ್ಧವಂತೂ ಒಂದೇ ಆಗಿದೆ ಆದರೆ ಇದರಿಂದ ಕೆಲವರು ರಾಜರಾಗಿ ಬಿಡುತ್ತಾರೆ, ಕೆಲವರು ಪ್ರಜೆಗಳಾಗಿ ಬಿಡುತ್ತಾರೆ. ರಾಜರ ಪ್ರಪಂಚವಿತ್ತು ಆದರೆ ಈಗ ಪ್ರಜೆಗಳ ಪ್ರಪಂಚವಾಗಿದೆ. ಎಲ್ಲರಲ್ಲಿಯೂ ಭೂತವಿದೆ ಆದ್ದರಿಂದ ಭೂತಗಳನ್ನು ಪೂರ್ಣ ತೆಗೆಯುವ ಪುರುಷಾರ್ಥ ಮಾಡಬೇಕು. ತಂದೆಯು ಮುರುಳಿಯಲ್ಲಿ ಬಹಳಷ್ಟು ತಿಳಿಸುತ್ತಾರೆ. ಭಿನ್ನ-ಭಿನ್ನ ಪ್ರಕಾರದ ಸ್ವಭಾವದವರಿರುತ್ತಾರೆ ಅದನ್ನು ಕೇಳಲೇಬೇಡಿ. ಪ್ರದರ್ಶನಿ ಮುಂತಾದವುಗಳಲ್ಲಿ ಮೊಟ್ಟ ಮೊದಲು ತಂದೆಯ ಪರಿಚಯವನ್ನು ಕೊಡಬೇಕು. ತಂದೆಯು ಎಷ್ಟೊಂದು ಪ್ರಿಯರಾಗಿದ್ದಾರೆ, ಅವರು ನಮ್ಮನ್ನು ಇಂತಹ ದೇವತೆಗಳನ್ನಾಗಿ ಮಾಡುತ್ತಾರೆ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರು..... ಎಂಬ ಗಾಯನವೂ ಇದೆ. ದೇವತೆಗಳು ಸತ್ಯಯುಗದಲ್ಲಿಯೇ ಇದ್ದರು ಅಂದಮೇಲೆ ಅವಶ್ಯವಾಗಿ ಸತ್ಯಯುಗಕ್ಕೆ ಮೊದಲು ಕಲಿಯುಗವಿತ್ತು. ಈ ಸೃಷ್ಟಿ ಚಕ್ರದ ಜ್ಞಾನವೂ ಸಹ ನೀವು ಮಕ್ಕಳ ಬುದ್ಧಿಯಲ್ಲಿ ಈಗಷ್ಟೇ ಇದೆ, ಸತ್ಯಯುಗದಲ್ಲಿ ಈ ಜ್ಞಾನವು ದೇವತೆಗಳಲ್ಲಿಯೂ ಇರುವುದಿಲ್ಲ. ಈಗ ನೀವು ಜ್ಞಾನಪೂರ್ಣರಾಗುತ್ತೀರಿ, ಪದವಿಯು ಸಿಕ್ಕಿತೆಂದರೆ ನಂತರ ಜ್ಞಾನದ ಅವಶ್ಯಕತೆಯಿರುವುದಿಲ್ಲ. ಇವರು ಬೇಹದ್ದಿನ ತಂದೆಯಾಗಿದ್ದಾರೆ, ಯಾರ ಮೂಲಕ ನಿಮಗೆ 21 ಜನ್ಮಗಳ ಆಸ್ತಿಯು ಸಿಗುತ್ತದೆ. ಅಂದಮೇಲೆ ಇಂತಹ ತಂದೆಯನ್ನು ಎಷ್ಟೊಂದು ನೆನಪು ಮಾಡಬೇಕು! ತಂದೆಯು ಸದಾ ತಿಳಿಸುತ್ತಾರೆ - ಮಕ್ಕಳೇ, ಸದಾ ನಮಗೆ ಶಿವತಂದೆಯು ತಿಳಿಸುತ್ತಿದ್ದಾರೆ ಎಂದು ತಿಳಿಯಿರಿ. ಶಿವ ತಂದೆಯು ಈ ರಥದ ಮೂಲಕ ನಮಗೆ ಓದಿಸುತ್ತಿದ್ದಾರೆ. ಅವರು ನಮ್ಮ ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ. ಇದು ಬೇಹದ್ದಿನ ವಿದ್ಯೆಯಾಗಿದೆ. ನೀವೂ ಸಹ ತಿಳಿಯುತ್ತೀರಿ - ಮೊದಲು ನಾವು ತುಚ್ಛ ಬುದ್ಧಿಯವರಾಗಿದ್ದೆವು. ಈ ಕಾಲೇಜಿನ ಬಗ್ಗೆ ಯಾರಿಗೂ ಏನೂ ತಿಳಿದಿಲ್ಲ. ಆದ್ದರಿಂದ ತಿಳಿಸುವ ಸಮಯದಲ್ಲಿ, ಒಳ್ಳೆಯ ರೀತಿಯಲ್ಲಿ ಮನನ ಮಾಡಿ ತಿಳಿಸಿ. ಕೃಷ್ಣನ ಮಾತೇನಿಲ್ಲ. ಇದನ್ನು ತಂದೆ ತಿಳಿಸಿದ್ದಾರೆ. ಕೃಷ್ಣನದು ಯಾವುದೇ ಚರಿತ್ರೆ ಇಲ್ಲ. ಶಿವ ತಂದೆಯ ವಿನಃ, ಬ್ರಹ್ಮಾ, ವಿಷ್ಣು, ಶಂಕರರದೂ. ಚರಿತ್ರೆ ಇಲ್ಲ. ಒಬ್ಬ ತಂದೆಯದೇ ಆಗಿದೆ, ಯಾರು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಾರೆ, ವಿಶ್ವವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ. ನೀವು ಅಂತಹ ತಂದೆಯ ಶ್ರೀಮತದಂತೆ ನಡೆಯುತ್ತೀರಿ. ತಂದೆಗೆ ಸಹಯೋಗಿಗಳಾಗಿದ್ದೀರಿ, ತಂದೆಯು ಇಲ್ಲವೆಂದರೆ ನಿಮಗೆ ಏನನ್ನೂ ಮಾಡಲು ಸಾಧ್ಯವಿಲ್ಲ. ನೀವೀಗ ನಯಾಪೈಸೆಗೂ ಬೆಲೆಯಿಲ್ಲದವರಿಂದ. ಬಹಳ ಬೆಲೆ ಉಳ್ಳವರಾಗುತ್ತಿದ್ದೀರಿ. ನಂಬರ್ ವಾರ್ ಪುರುಷಾರ್ಥದನುಸಾರ ಎಲ್ಲವನ್ನೂ ಅರಿತಿದ್ದೀರಿ ಅಂದಾಗ ಮೊಟ್ಟ ಮೊದಲನೆಯದು ತಂದೆಯ ಪರಿಚಯವಾಗಿದೆ. ಕೃಷ್ಣನಂತೂ ಚಿಕ್ಕ ಮಗುವಾಗಿದ್ದಾನೆ, ಸತ್ಯಯುಗದಲ್ಲಿ ಕೃಷ್ಣನ ಬೇಹದ್ದಿನ ರಾಜಧಾನಿಯಿರುತ್ತದೆ, ಅವರ ರಾಜ್ಯದಲ್ಲಿ ಮತ್ತ್ಯಾರೂ ಇರುವುದಿಲ್ಲ ಆದರೆ ಈಗಂತೂ ಕಲಿಯುಗವಾಗಿದೆ, ಎಷ್ಟೊಂದು ಧರ್ಮಗಳಿವೆ. ಇದೊಂದೇ ಆದಿ ಸನಾತನ ದೇವಿ-ದೇವತಾ ಧರ್ಮವು ಯಾವಾಗ ಸ್ಥಾಪನೆಯಾಯಿತು ಎಂಬುದೂ ಸಹ ಯಾರ ಬುದ್ಧಿಯಲ್ಲಿಯೂ ಇಲ್ಲ. ನೀವು ಮಕ್ಕಳ ಬುದ್ಧಿಯಲ್ಲಿಯೂ ಸಹ ನಂಬರ್ ವಾರ್ ಪುರುಷಾರ್ಥದನುಸಾರವಾಗಿ ಇದೆ ಅಂದಾಗ ಮೊದಲು ತಂದೆಯ ಮಹಿಮೆಯ ಬಗ್ಗೆ ಬಹಳ ಚೆನ್ನಾಗಿ ತಿಳಿಸಬೇಕು - ನಮಗೆ ಗೊತ್ತಿದೆ ಅವಶ್ಯವಾಗಿ ತಂದೆಯಿಂದ ನಮಗೆ ಪರಿಚಯ ಸಿಕ್ಕಿದೆ. ತಂದೆಯು ತಿಳಿಸುತ್ತಾರೆ - ನಾನೇ ಸರ್ವರ ಸದ್ಗತಿದಾತನಾಗಿದ್ದೇನೆ. ಕಲ್ಪ-ಕಲ್ಪವೂ ನಾನು ನೀವು ಮಕ್ಕಳಿಗೆ ಸಲಹೆ ನೀಡುತ್ತೇನೆ. ತಮ್ಮನ್ನು ಆತ್ಮನೆಂದು ತಿಳಿಯಿರಿ ಮತ್ತು ನೆನಪು ಮಾಡಿ. ಆಗ ಪತಿತ ಆತ್ಮವು ಪಾವನವಾಗಿ ಬಿಡುವುದು. ಆತ್ಮಾಭಿಮಾನಿ ಭವ. ಅನ್ಯರನ್ನೂ ಆತ್ಮನೆಂದು ತಿಳಿಯುವುದರಿಂದ ನಿಮಗೆ ಕುದೃಷ್ಟಿಯು ಬರುವುದಿಲ್ಲ. ಆತ್ಮವೇ ಶರೀರದ ಮೂಲಕ ಕರ್ಮ ಮಾಡುತ್ತದೆ. ನಾವೂ ಆತ್ಮರಾಗಿದ್ದೇವೆ, ಇವರೂ ಆತ್ಮನಾಗಿದ್ದಾರೆ ಎಂಬುದನ್ನು ಪರಿಪಕ್ವ ಮಾಡಿಕೊಳ್ಳಬೇಕು. ಏಕೆಂದರೆ ನಿಮಗೆ ಗೊತ್ತಿದೆ - ನಾವು ಮೊದಲು 100% ಪಾವನರಾಗಿದ್ದೆವು ನಂತರ ಪತಿತರಾದೆವು. ತಂದೆಯೇ ಬನ್ನಿ ಎಂದು ಆತ್ಮವೇ ಕರೆಯುತ್ತದೆ. ಆತ್ಮದ ಅಭಿಮಾನವು ಪಕ್ಕಾ ಇರಬೇಕು, ಮತ್ತೆಲ್ಲಾ ಸಂಬಂಧಗಳನ್ನು ಮರೆತು ಹೋಗಬೇಕು. ನಾವಾತ್ಮರು ಮಧುರ ಮನೆಯ ನಿವಾಸಿಗಳಾಗಿದ್ದೇವೆ. ಪಾತ್ರವನ್ನಭಿನಯಿಸಲು ಇಲ್ಲಿಗೆ ಬಂದಿದ್ದೇವೆ. ಇದನ್ನೂ ಸಹ ನೀವು ಮಕ್ಕಳು ತಿಳಿಯುತ್ತೀರಿ. ನಿಮ್ಮಲ್ಲಿಯೂ ನಂಬರ್ ವಾರ್ ಆಗಿ ಕೆಲವರಿಗೆ ಮಾತ್ರವೇ ನೆನಪಿರುತ್ತದೆ. ಭಗವಂತನು ಓದಿಸುತ್ತಿದ್ದಾರೆಂದು ಎಷ್ಟೊಂದು ಖುಷಿಯಿರಬೇಕು. ಸ್ವಯಂ ಭಗವಂತ ನಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ. ನಾವು ಅವರ ವಿನಃ ಬೇರೆ ಯಾರನ್ನೂ ನೆನಪು ಮಾಡುವುದಿಲ್ಲವೆಂದು ನೀವು ಹೇಳುತ್ತೀರಿ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಬಿಟ್ಟು ನನ್ನೊಬ್ಬನನ್ನೇ ನೆನಪು ಮಾಡಿ. ತಾವೆಲ್ಲಾ ಆತ್ಮರು ಸಹೋದರರಾಗಿದ್ದೀರಿ, ಇದನ್ನು ಕೆಲವರು ಒಪ್ಪುತ್ತಾರೆ, ಇನ್ನೂ ಕೆಲವರು ಒಪ್ಪದಿರಲೂಬಹುದು. ಅವರು ನಾಸ್ತಿಕರೆಂದು ತಿಳಿಯಿರಿ. ನಾವು ಶಿವ ತಂದೆಯ ಮಕ್ಕಳಾಗಿದ್ದೇವೆಂದರೆ ಪಾವನರಾಗಬೇಕು. ಬಾಬಾ ಬಂದು ನಮ್ಮನ್ನು ಪಾವನ ವಿಶ್ವದ ಮಾಲೀಕರನ್ನಾಗಿ ಮಾಡಿ ಎಂದು ತಂದೆಯನ್ನು ಕರೆಯುತ್ತಾರೆ. ಸತ್ಯಯುಗದಲ್ಲಂತೂ ಪಾವನರಾಗುವ ಮಾತೇ ಬರುವುದಿಲ್ಲ. ಅಂದಾಗ ಮೊದಲು ಇದನ್ನು ತಿಳಿಯಿರಿ - ಇವರು ಶಿವ ತಂದೆಯಾಗಿದ್ದಾರೆ, ಇವರಿಂದ ಹೊಸ ಪ್ರಪಂಚವು ಸ್ಥಾಪನೆಯಾಗುತ್ತದೆ, ಒಂದು ವೇಳೆ ವಿನಾಶವು ಯಾವಾಗ ಪ್ರಾರಂಭವಾಗುತ್ತದೆ ಎಂದು ಕೇಳಿದರೆ ತಿಳಿಸಿಕೊಡಿ. ಮೊದಲು ತಂದೆಯನ್ನು ತಿಳಿದುಕೊಳ್ಳಿ, ತಂದೆಯನ್ನು ತಿಳಿದುಕೊಳ್ಳದ ಹೊರತು ನಂತರದ ಮಾತು ಹೇಗೆ ಬುದ್ಧಿಯಲ್ಲಿ ಬರುತ್ತದೆ? ನಾವು ಸತ್ಯ ತಂದೆಯ ಮಕ್ಕಳು ಸತ್ಯವನ್ನೇ ಹೇಳುತ್ತೇವೆ. ನಾವು ಯಾವುದೇ ಮನುಷ್ಯರ ಮಕ್ಕಳಲ್ಲ, ಶಿವತಂದೆಯ ಮಕ್ಕಳಾಗಿದ್ದೇವೆ. ಭಗವಾನುವಾಚ - ಯಾರೆಲ್ಲಾ ಸಹೋದರ ಆತ್ಮಗಳ ತಂದೆಯಾಗಿದ್ದಾರೆಯೋ ಅವರನ್ನು ಭಗವಂತನೆಂದು ಕರೆಯಲಾಗುತ್ತದೆ. ಮನುಷ್ಯರು ತಮ್ಮನ್ನು ಭಗವಂತನೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಭಗವಂತನು ನಿರಾಕಾರನಾಗಿದ್ದಾರೆ, ಅವರೇ ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ. ಯಾವುದೇ ಮನುಷ್ಯರು ತಂದೆ, ಶಿಕ್ಷಕ, ಸದ್ಗುರುವಾಗಲು ಸಾಧ್ಯವಿಲ್ಲ ಮತ್ತು ಯಾವುದೇ ಮನುಷ್ಯರು ಮನುಷ್ಯರ ಸದ್ಗತಿ ಮಾಡಲು ಸಾಧ್ಯವಿಲ್ಲ, ಭಗವಂತನಾಗಲಾರರು. ತಂದೆಯು ಪತಿತ-ಪಾವನನಾಗಿದ್ದಾರೆ, ರಾವಣನು ಪತಿತರನ್ನಾಗಿ ಮಾಡುತ್ತಾನೆ. ಉಳಿದವರೆಲ್ಲರೂ ಭಕ್ತಿಯ ಗುರುಗಳಾಗಿದ್ದಾರೆ, ಇದೂ ಸಹ ನಿಮಗೆ ಗೊತ್ತಿದೆ, ಯಾರು ಇಲ್ಲಿಗೆ ಬರುತ್ತಾರೆಯೋ ಅವರು ಆಸ್ತಿಕರಂತೂ ಆಗುತ್ತಾರೆ. ಬೇಹದ್ದಿನ ತಂದೆಯ ಬಳಿಗೆ ಬಂದು ಇವರು ನಮ್ಮ ತಂದೆ, ಶಿಕ್ಷಕ, ಗುರುವಾಗಿದ್ದಾರೆಂದು ನಿಶ್ಚಯ ಮಾಡಿಕೊಳ್ಳುತ್ತಾರೆ. ಯಾವಾಗ ದೈವೀ ಗುಣಗಳು ಸಂಪೂರ್ಣವಾಗಿ ಬಂದು ಬಿಡುತ್ತದೆಯೋ ಆಗ ಯುದ್ಧವೂ ಪ್ರಾರಂಭವಾಗುವುದು. ಸಮಯದನುಸಾರ ಈಗ ಕರ್ಮಾತೀತ ಸ್ಥಿತಿಯನ್ನು ತಲುಪುತ್ತಿದ್ದೇವೆಂದು ತಾವು ತಿಳಿದುಕೊಳ್ಳುವಿರಿ. ಈಗ ಆ ಕರ್ಮಾತೀತ ಸ್ಥಿತಿಯನ್ನು ಎಲ್ಲಿ ತಲುಪಿದ್ದೀರಿ? ಇನ್ನೂ ಬಹಳ ಕೆಲಸವಿದೆ, ಅನೇಕರಿಗೆ ತಂದೆಯ ಸಂದೇಶವನ್ನು ಕೊಡಬೇಕಾಗಿದೆ. ತಂದೆಯಿಂದ ಆಸ್ತಿಯನ್ನು ಪಡೆದುಕೊಳ್ಳಲು ಎಲ್ಲರಿಗೂ ಅಧಿಕಾರವಿದೆ, ಈಗ ಬಹಳ ಜೋರಾಗಿ ಯುದ್ಧವೂ ಆಗಲಿದೆ, ನಂತರ ಈ ಆಸ್ಪತ್ರೆ, ವೈದ್ಯರು ಮುಂತಾದವರ್ಯಾರೂ ಇರುವುದಿಲ್ಲ. ತಂದೆಯು ಮಕ್ಕಳಿಗೆ ಸನ್ಮುಖದಲ್ಲಿ ತಿಳಿಸುತ್ತಿದ್ದಾರೆ - ಮಕ್ಕಳೇ, ನೀವಾತ್ಮರು ಶರೀರದ ಮೂಲಕ 84 ಜನ್ಮಗಳ ಪಾತ್ರವನ್ನಭಿನಯಿಸುತ್ತೀರಿ. ಕೆಲವರದು 70-80 ಜನ್ಮಗಳೂ ಆಗಿರಬಹುದು ಆದರೆ ಎಲ್ಲರೂ ಹೋಗಬೇಕಾಗಿದೆ. ವಿನಾಶವೂ ಆಗಲೇಬೇಕಾಗಿದೆ. ಅಪವಿತ್ರ ಆತ್ಮರು ಹೋಗಲು ಸಾಧ್ಯವಿಲ್ಲ. ಆದ್ದರಿಂದ ಪಾವನರಾಗಲು ತಂದೆಯನ್ನು ಅವಶ್ಯವಾಗಿ ನೆನಪು ಮಾಡಬೇಕು, ಪರಿಶ್ರಮವೂ ಇದೆ. 21 ಜನ್ಮಗಳಿಗಾಗಿ ಸ್ವರ್ಗವಾಸಿಗಳಾಗಬೇಕಾಗಿದೆ ಅಂದಾಗ ಇದು ಕಡಿಮೆ ಮಾತೇನು! ಮನುಷ್ಯರು ಇಂಥಹವರು ಸ್ವರ್ಗವಾಸಿಗಳಾದರು ಎಂದು ಹೇಳುತ್ತಾರೆ, ಅರೆ! ಸ್ವರ್ಗವೆಲ್ಲಿದೆ? ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ. ಸ್ವಯಂ ಭಗವಂತನೇ ನಮಗೆ ಓದಿಸುತ್ತಾರೆ, ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆಂದು ನಿಮಗೆ ಬಹಳ ಖುಷಿಯಿರಬೇಕು. ಖುಷಿಯು 2 ಪ್ರಕಾರವಾಗಿರುತ್ತದೆ. 1. ಸ್ಥಾಯಿ ಖುಷಿ 2. ಅಲ್ಪಕಾಲದ ಖುಷಿ. ಓದುವುದಿಲ್ಲ, ಅನ್ಯರಿಗೆ ಓದಿಸುವುದಿಲ್ಲವೆಂದರೆ ಖುಷಿ ಎಲ್ಲಿರುತ್ತದೆ? ಆಸುರೀ ಗುಣಗಳನ್ನು ಓಡಿಸಬೇಕು. ತಂದೆಯು ಬಹಳಷ್ಟು ತಿಳಿಸುತ್ತಾರೆ, ಕರ್ಮಭೋಗವೂ ಸಹ ಬಹಳ ಇದೆ. ಎಲ್ಲಿಯವರೆಗೆ ಕರ್ಮಭೋಗವಿದೆಯೋ ಇದು ಚಿಹ್ನೆಯಾಗಿದೆ, ಇನ್ನೂ ಕರ್ಮಾತೀತ ಸ್ಥಿತಿಯಾಗಿಲ್ಲ. ಈಗ ಬಹಳ ಪರಿಶ್ರಮ ಪಡಬೇಕಾಗಿದೆ. ಯಾವುದೇ ಮಾಯೆಯ ಬಿರುಗಾಳಿ ಬರದಿರಲಿ. ಮಕ್ಕಳಿಗೆ ಈ ನಿಶ್ಚಯವಿದೆ - ತಂದೆಯು ನಮ್ಮನ್ನು ಅನೇಕ ಬಾರಿ ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದ್ದಾರೆ. ಇದು ಬುದ್ಧಿಯಲ್ಲಿ ಬಂದರೂ ಸಹ ಅಹೋ ಸೌಭಾಗ್ಯ. ಇದು ಬೇಹದ್ದಿನ ದೊಡ್ಡ ಶಾಲೆಯಾಗಿದೆ, ಆ ಶಾಲೆಯು ಮಿತವಾದ ಚಿಕ್ಕ ಶಾಲೆಯಾಗಿರುತ್ತದೆ. ತಂದೆಗಂತೂ ಬಹಳ ದಯೆ ಬರುತ್ತದೆ - ಮಕ್ಕಳಿಗೆ ಹೇಗೆ ತಿಳಿಸಲಿ, ಕೆಲವರಿಂದಂತೂ ಇಲ್ಲಿಯವರೆವಿಗೂ ವಿಕಾರಿ ಭೂತಗಳು ಹೋಗಿಯೇ ಇಲ್ಲ. ತಂದೆಯ ಹೃದಯವನ್ನೇರುವ ಬದಲು ಬಿದ್ದು ಹೋಗುತ್ತಾರೆ. ಕೆಲವು ಮಕ್ಕಳಂತೂ (ಕನ್ಯೆಯರು) ಅನೇಕರ ಕಲ್ಯಾಣ ಮಾಡಲು ತಯಾರಾಗುತ್ತಿದ್ದಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
೧. ಈಶ್ವರೀಯ ನಿಯಮಗಳಿಗೆ ವಿರುದ್ಧವಾದ ಯಾವುದೇ ಮಾತುಗಳನ್ನಾಡಬಾರದು. ಒಂದು ವೇಳೆ ಯಾರಲ್ಲಿಯಾದರೂ ಭೂತ ಪ್ರವೇಶತೆಯಾಗಿದೆ ಅಥವಾ ದೃಷ್ಟಿಯು ಕೆಟ್ಟಿದೆಯೆಂದರೆ ಅವರಿಂದ ದೂರವಾಗಿ ಬಿಡಬೇಕು. ಅವರ ಜೊತೆ ಹೆಚ್ಚಿಗೆ ಮಾತನಾಡಬಾರದು.

೨. ಸ್ಥಿರವಾದ ಖುಷಿಯಲ್ಲಿರಲು ವಿದ್ಯೆಯ ಮೇಲೆ ಪೂರ್ಣ ಗಮನವನ್ನಿಡಬೇಕು, ಆಸುರೀ ಗುಣಗಳನ್ನು ತೆಗೆದು ದೈವೀ ಗುಣಗಳನ್ನು ಧಾರಣೆ ಮಾಡಿಕೊಂಡು ಆಸ್ತಿಕರಾಗಬೇಕು.

ವರದಾನ:
ಪ್ರತಿ ಸೆಕೆಂಡ್ ಹಾಗೂ ಪ್ರತಿ ಸಂಕಲ್ಪದ ಮಹತ್ವಿಕೆಯನ್ನು ತಿಳಿದು ಜಮಾದ ಖಾತೆಯನ್ನು ಸಂಪನ್ನ ಮಾಡಿಕೊಳ್ಳುವವರೇ ಸಮರ್ಥ ಆತ್ಮ ಭವ.

ಸಂಗಮಯುಗದಲ್ಲಿ ಅವಿನಾಶಿ ತಂದೆಯ ಮೂಲಕ ಎಲ್ಲಾ ಸಮಯದಲ್ಲಿಯೂ ಅವಿನಾಶಿ ಪ್ರಾಪ್ತಿಗಳಾಗುವುವು. ಇಡೀ ಕಲ್ಪದಲ್ಲಿ ಇಂತಹ ಭಾಗ್ಯ ಪ್ರಾಪ್ತಿ ಮಾಡಿಕೊಳ್ಳಲು ಇದೊಂದೇ ಸಮಯವಾಗಿದೆ - ಆದ್ದರಿಂದ ನಿಮ್ಮ ಸ್ಲೋಗನ್ ಆಗಿದೆ ಈಗಿಲ್ಲದಿದ್ದರೆ ಇನ್ನೆಂದಿಗೂ ಇಲ್ಲ. ಯಾವುದೇ ಶ್ರೇಷ್ಠ ಕಾರ್ಯ ಮಾಡಬೇಕಾದರೂ ಅದನ್ನು ಈಗಲೇ ಮಾಡಿ. ಈ ಸ್ಮೃತಿಯಿಂದ ಎಂದೂ ಸಹಾ ಸಮಯ ಸಂಕಲ್ಪ ಅಥವಾ ಕರ್ಮ ವ್ಯರ್ಥವಾಗಿ ಕಳೆಯುವುದಿಲ್ಲ, ಸಮರ್ಥ ಸಂಕಲ್ಪಗಳಿಂದ ಜಮಾದ ಖಾತೆ ಸಂಪನ್ನವಾಗಿ ಬಿಡುವುದು ಮತ್ತು ಆತ್ಮ ಸಮರ್ಥವಾಗಿ ಬಿಡುವುದು.

ಸ್ಲೋಗನ್:
ಪ್ರತಿ ಮಾತು, ಪ್ರತಿ ಕರ್ಮದ ಅಲೌಕಿಕತೆಯೇ ಪವಿತ್ರತೆಯಾಗಿದೆ, ಸಾಧಾರಣತೆಯನ್ನು ಅಲೌಕಿಕತೆಯಲ್ಲಿ ಪರಿವರ್ತನೆ ಮಾಡಿ ಬಿಡಿ.

ಬ್ರಹ್ಮಾ ತಂದೆಯ ಸಮಾನರಾಗಲು ವಿಶೇಷ ಪುರುಷಾರ್ಥ -

ಲೌಕಿಕದಲ್ಲಿ ಅಲೌಕಿಕತೆಯ ಸ್ಮೃತಿಯಿರಲಿ. ಲೌಕಿಕದಲ್ಲಿ ಇದ್ದರು ಸಹಾ ನಾವು ಬೇರೆ ಜನರಿಂದ ಭಿನ್ನವಾಗಿರುವೆವು. ತಮ್ಮನ್ನು ಆತ್ಮಿಕ ರೂಪದಲ್ಲಿ ಭಿನ್ನ ಎಂದು ತಿಳಿಯಬೇಕು. ಕರ್ತವ್ಯದಿಂದ ಭಿನ್ನ ಆಗುವುದು ಸಹಜವಾಗಿದೆ, ಅದರಿಂದ ಪ್ರಪಂಚಕ್ಕೆ ಪ್ರಿಯ ಎನ್ನಿಸುವುದಿಲ್ಲ, ಆದರೆ ಯಾವಾಗ ಶರೀರದಿಂದ ಭಿನ್ನರಾಗಿದ್ದು ಆತ್ಮ ರೂಪದಲ್ಲಿ ಕಾರ್ಯ ಮಾಡುವಿರಿ. ಆಗ ಎಲ್ಲರಿಗೂ ಪ್ರೀಯರೆನಿಸುವಿರಿ, ಇದನ್ನೇ ಅಲೌಕಿಕ ಸ್ಥಿತಿ ಎಂದು ಹೇಳಲಾಗುವುದು.