05.01.21         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನಿಮ್ಮ ಬಾಯಿಂದ ಎಂದೂ ಹೇ ಈಶ್ವರ, ಹೇ ಬಾಬಾ ಎಂಬ ಶಬ್ಧವು ಬರಬಾರದು, ಇದು ಭಕ್ತಿಮಾರ್ಗದ ಅಭ್ಯಾಸವಾಗಿದೆ

ಪ್ರಶ್ನೆ:
ನೀವು ಮಕ್ಕಳು ಶ್ವೇತ ವಸ್ತ್ರಗಳನ್ನು ಏಕೆ ಇಷ್ಟ ಪಡುತ್ತೀರಿ? ಇದು ಯಾವ ಮಾತಿನ ಪ್ರತೀಕವಾಗಿದೆ?

ಉತ್ತರ:
ನೀವೀಗ ಈ ಹಳೆಯ ಪ್ರಪಂಚದಿಂದ ಜೀವಿಸಿದ್ದಂತೆಯೇ ಸತ್ತಿದ್ದೀರಿ. ಆದ್ದರಿಂದ ನಿಮಗೆ ಶ್ವೇತ ವಸ್ತ್ರಗಳು ಇಷ್ಟವಾಗುತ್ತದೆ. ಈ ಶ್ವೇತ ವಸ್ತ್ರವು ಮೃತ್ಯುವನ್ನು ಸಿದ್ಧ ಮಾಡುತ್ತದೆ. ಯಾರಾದರೂ ಮರಣ ಹೊಂದಿದಾಗ ಅವರ ಮೇಲೆ ಶ್ವೇತ ವಸ್ತ್ರಗಳನ್ನು ಹಾಕುತ್ತಾರೆ. ನೀವು ಮಕ್ಕಳೂ ಸಹ ಈಗ ಮರುಜೀವಿಗಳಾಗಿದ್ದೀರಿ.

ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ, ಈ ಆತ್ಮಿಕ ಶಬ್ಧವನ್ನು ಹೇಳದೆ ಕೇವಲ ತಂದೆಯೆಂದು ಹೇಳಿದರೂ ಸರಿಯಾಗಿದೆ. ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ, ಎಲ್ಲರೂ ತಮ್ಮನ್ನು ಸಹೋದರ-ಸಹೋದರರೆಂದೇ ಹೇಳಿಕೊಳ್ಳುತ್ತಾರೆ ಅಂದಾಗ ತಂದೆಯು ಮಕ್ಕಳಿಗೆ ತಿಳಿಸಿಕೊಡುತ್ತಾರೆ, ಎಲ್ಲರಿಗೂ ತಿಳಿಸುವುದಿಲ್ಲ - ಎಲ್ಲರೂ ತಮ್ಮನ್ನು ಸಹೋದರ-ಸಹೋದರರೆಂದೇ ಹೇಳಿಕೊಳ್ಳುತ್ತೀರಿ. ಗೀತೆಯಲ್ಲಿ ಭಗವಾನುವಾಚ ಎಂದು ಬರೆಯಲಾಗಿದೆ, ಈಗ ಭಗವಾನುವಾಚವು ಯಾರ ಪ್ರತಿ? ಭಗವಂತನಿಗೆ ಎಲ್ಲರೂ ಮಕ್ಕಳಾಗಿದ್ದಾರೆ. ಅವರು ತಂದೆಯಾಗಿದ್ದಾರೆ ಆದ್ದರಿಂದ ಭಗವಂತನ ಮಕ್ಕಳೆಲ್ಲರೂ ಪರಸ್ಪರ ಸಹೋದರರಾಗಿದ್ದೀರಿ. ಭಗವಂತನೇ ತಿಳಿಸಿರಬೇಕು, ರಾಜಯೋಗವನ್ನು ಕಲಿಸಿರಬೇಕಲ್ಲವೆ. ಈಗ ನಿಮ್ಮ ಬುದ್ಧಿಯ ಬೀಗವು ತೆರೆದಿದೆ. ಪ್ರಪಂಚದಲ್ಲಿ ಮತ್ತ್ಯಾರಿಗೂ ಇಂತಹ ವಿಚಾರಗಳು ನಡೆಯಲು ಸಾಧ್ಯವಿಲ್ಲ. ಯಾರ್ಯಾರಿಗೆ ಸಂದೇಶ ಸಿಗುತ್ತಾ ಹೋಗುವುದೋ ಅವರು ಶಾಲೆಗೆ ಬರತೊಡಗುತ್ತಾರೆ, ಓದುತ್ತಾ ಹೋಗುತ್ತಾರೆ. ಪ್ರದರ್ಶನಿಯಂತೂ ನೋಡಿದೆವು, ಈಗ ಹೋಗಿ ಇನ್ನೂ ಹೆಚ್ಚಿನದಾಗಿ ಕೇಳೋಣವೆಂದು ತಿಳಿಯುತ್ತಾರೆ. ಮೊಟ್ಟ ಮೊದಲ ಮುಖ್ಯ ಮಾತಾಗಿದೆ ಜ್ಞಾನ ಸಾಗರ, ಪತಿತ-ಪಾವನ ಗೀತಾ ಜ್ಞಾನದಾತ ಶಿವ ಭಗವಾನುವಾಚ. ಮೊಟ್ಟ ಮೊದಲು ಅವರಿಗೆ ಇದು ಅರ್ಥವಾಗಬೇಕು - ಇವರಿಗೆ ಕಲಿಸಿ ಕೊಡುವವರು ಅಥವಾ ತಿಳಿಸಿ ಕೊಡುವವರು ಯಾರು? ಅವರು ಪರಮ ಆತ್ಮ, ಜ್ಞಾನ ಸಾಗರ ನಿರಾಕಾರನಾಗಿದ್ದಾರೆ. ಅವರು ಸತ್ಯವಾಗಿದ್ದಾರೆ. ಅವರು ಸತ್ಯವನ್ನೇ ತಿಳಿಸುತ್ತಾರೆ. ಅದರಲ್ಲಿ ಮತ್ತ್ಯಾವುದೇ ಪ್ರಶ್ನೆಯೇಳಲು ಸಾಧ್ಯವಿಲ್ಲ. ಮೊಟ್ಟ ಮೊದಲು ಇದರ ಬಗ್ಗೆ ತಿಳಿಸಬೇಕಾಗಿದೆ, ನಮಗೆ ಪರಮಪಿತ ಪರಮಾತ್ಮನು ಬ್ರಹ್ಮಾರವರ ಮೂಲಕ ರಾಜಯೋಗವನ್ನು ಕಲಿಸುತ್ತಾರೆ. ಇದು ರಾಜ್ಯ ಪದವಿಯಾಗಿದೆ. ಯಾರು ಎಲ್ಲರ ತಂದೆಯಾಗಿದ್ದಾರೆಯೋ ಆ ಪಾರಲೌಕಿಕ ತಂದೆಯೇ ಕುಳಿತು ತಿಳಿಸಿಕೊಡುತ್ತಾರೆ. ಅವರೇ ಎಲ್ಲದಕ್ಕಿಂತ ದೊಡ್ಡ ಅಥಾರಿಟಿಯಾಗಿದ್ದಾರೆ ಎಂಬುದು ಯಾರಿಗೆ ನಿಶ್ಚಯವಾಗಿ ಬಿಡುವುದೋ ಅವರಿಗೆ ಮತ್ತ್ಯಾವುದೇ ಪ್ರಶ್ನೆಯು ಉತ್ಪನ್ನವಾಗಲು ಸಾಧ್ಯವಿಲ್ಲ. ಆ ಪತಿತ-ಪಾವನನು ಇಲ್ಲಿ ಬರುತ್ತಾರೆಂದರೆ ಅವಶ್ಯವಾಗಿ ತನ್ನ ಸಮಯದಲ್ಲಿಯೇ ಬರುವರು. ನೀವು ನೋಡುತ್ತಿದ್ದೀರಿ, ಇದು ಅದೇ ಮಹಾಭಾರತ ಯುದ್ಧವಾಗಿದೆ. ವಿನಾಶದ ನಂತರ ಮತ್ತೆ ನಿರ್ವಿಕಾರಿ ಪ್ರಪಂಚ ಬರಲಿದೆ, ಇದು ವಿಕಾರಿ ಪ್ರಪಂಚವಾಗಿದೆ. ಈ ಭಾರತವೇ ನಿರ್ವಿಕಾರಿಯಾಗಿತ್ತು ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಬುದ್ಧಿಯು ಓಡುವುದೇ ಇಲ್ಲ. ಗಾಡ್ರೇಜ್ ಬೀಗವು ಹಾಕಲ್ಪಟ್ಟಿದೆ. ಅದರ ಬೀಗದ ಕೈ ಒಬ್ಬ ತಂದೆಯ ಬಳಿಯೇ ಇದೆ. ಆದ್ದರಿಂದ ಅವರಿಗೇ ಜ್ಞಾನದಾತ, ದಿವ್ಯ ಚಕ್ಷು ವಿದಾತನೆಂದು ಹೇಳಲಾಗುತ್ತದೆ. ಜ್ಞಾನದ ಮೂರನೆಯ ನೇತ್ರವನ್ನು ಕೊಡುತ್ತಾರೆ. ನಿಮಗೆ ಓದಿಸುವವರು ಯಾರೆಂಬುದು ಯಾವ ಮನುಷ್ಯರಿಗೂ ತಿಳಿದಿಲ್ಲ. ಈ ದಾದಾರವರು ಹೇಳುತ್ತಾರೆಂದು ತಿಳಿಯುವ ಕಾರಣ ಟೀಕೆ ಮಾಡುತ್ತಾರೆ. ಒಂದಲ್ಲ ಒಂದು ಮಾತನಾಡುತ್ತಾರೆ ಆದ್ದರಿಂದ ಮೊಟ್ಟ ಮೊದಲನೆಯದಾಗಿ ಇದೇ ಮಾತನ್ನು ತಿಳಿಸಿ. ಇದರಲ್ಲಿ ಶಿವ ಭಗವಾನುವಾಚವೆಂದು ಬರೆಯಲ್ಪಟ್ಟಿದೆ. ಭಗವಂತನು ಸತ್ಯವಾಗಿದ್ದಾರೆ.

ತಂದೆಯು ತಿಳಿದುಕೊಳ್ಳುತ್ತಾರೆ - ನಾನು ಪತಿತ ಪಾವನ ಶಿವನಾಗಿದ್ದೇನೆ. ನಾನು ಪರಮಧಾಮದಿಂದ ಈ ಸಾಲಿಗ್ರಾಮಗಳಿಗೆ ಓದಿಸಲು ಬಂದಿದ್ದೇನೆ. ತಂದೆಯು ಜ್ಞಾನ ಪೂರ್ಣನಾಗಿದ್ದಾರೆ, ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ಈ ಶಿಕ್ಷಣವು ಈಗ ನಿಮಗೇ ಬೇಹದ್ದಿನ ತಂದೆಯಿಂದ ಸಿಗುತ್ತಿದೆ, ಅವರೇ ಸೃಷ್ಟಿಯ ರಚಯಿತನಾಗಿದ್ದಾರೆ. ಪತಿತ ಸೃಷ್ಟಿಯನ್ನು ಪಾವನ ಮಾಡುವವರಾಗಿದ್ದಾರೆ. ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ ಅಂದಮೇಲೆ ಮೊಟ್ಟ ಮೊದಲಿಗೆ ಅವರ ಪರಿಚಯವನ್ನೇ ಕೊಡಬೇಕಾಗಿದೆ - ಪರಮಪಿತ ಪರಮಾತ್ಮನ ಜೊತೆ ತಮ್ಮ ಸಂಬಂಧವೇನು? ಅವರು ಸತ್ಯವಾಗಿದ್ದಾರೆ, ನರನಿಂದ ನಾರಾಯಣನಾಗುವ ಸತ್ಯ ಜ್ಞಾನವನ್ನು ತಿಳಿಸುತ್ತಾರೆ. ಮಕ್ಕಳಿಗೆ ತಿಳಿದಿದೆ - ತಂದೆಯು ಸತ್ಯವಾಗಿದ್ದಾರೆ, ತಂದೆಯೇ ಸತ್ಯ ಖಂಡವನ್ನಾಗಿ ಮಾಡುತ್ತಾರೆ. ನೀವು ನರನಿಂದ ನಾರಾಯಣನಾಗಲು ಇಲ್ಲಿಗೆ ಬರುತ್ತೀರಿ. ಬ್ಯಾರಿಸ್ಟರ್ ಬಳಿಗೆ ಹೋದಾಗ ನಾವು ಬ್ಯಾರಿಸ್ಟರ್ ಆಗಲು ಬಂದಿದ್ದೇವೆಂದು ತಿಳಿದುಕೊಳ್ಳುತ್ತಾರೆ. ಈಗ ನಿಮಗೆ ನಿಶ್ಚಯವಿದೆ - ನಮಗೆ ಭಗವಂತನೇ ಓದಿಸುತ್ತಾರೆ. ಕೆಲವರು ನಿಶ್ಚಯ ಮಾಡಿಕೊಳ್ಳುತ್ತಾರೆ ಮತ್ತೆ ಸಂಶಯ ಬುದ್ಧಿಯವರಾಗಿ ಬಿಡುತ್ತಾರೆ. ಆಗ ಅವರಿಗೆ ಎಲ್ಲಾ ಮನುಷ್ಯರೂ ಹೇಳುತ್ತಾರೆ - ನೀವು ಭಗವಂತನೇ ನಮಗೆ ಓದಿಸುತ್ತಾರೆಂದು ಹೇಳುತ್ತಿದ್ದಿರಿ ಮತ್ತೆ ಭಗವಂತನನ್ನು ಬಿಟ್ಟು ಏಕೆ ಬಂದಿದ್ದೀರಿ? ಸಂಶಯ ಬರುವುದರಿಂದಲೇ ಓಡಿ ಹೋಗುತ್ತಾರೆ. ಯಾವುದಾದರೊಂದು ವಿಕರ್ಮ ಮಾಡುತ್ತಾರೆ. ಭಗವಾನುವಾಚ ಕಾಮ ಮಹಾಶತ್ರು ಆಗಿದೆ. ಇದರ ಮೇಲೆ ಜಯ ಗಳಿಸುವುದರಿಂದಲೇ ನೀವು ಜಗತ್ಜೀತರಾಗುವಿರಿ. ಯಾರು ಪಾವನರಾಗುವರೋ ಅವರೇ ಪಾವನ ಪ್ರಪಂಚದಲ್ಲಿ ಹೋಗುತ್ತಾರೆ. ಇಲ್ಲಿ ರಾಜಯೋಗದ ಮಾತಾಗಿದೆ. ನೀವು ಹೋಗಿ ಅಲ್ಲಿ ರಾಜ್ಯಭಾರ ಮಾಡುತ್ತೀರಿ ಉಳಿದಂತೆ ಯಾರೆಲ್ಲಾ ಆತ್ಮಗಳಿದ್ದಾರೆಯೋ ಅವರು ತಮ್ಮ ಲೆಕ್ಕಾಚಾರಗಳನ್ನು ಮುಗಿಸಿಕೊಂಡು ಹಿಂತಿರುಗಿ ತಮ್ಮ ಮನೆಗೆ ಹೊರಟು ಹೋಗುತ್ತಾರೆ. ಇದು ಅಂತಿಮ ಸಮಯವಾಗಿದೆ. ಬುದ್ಧಿಯು ಹೇಳುತ್ತದೆ - ಸತ್ಯಯುಗವು ಖಂಡಿತ ಸ್ಥಾಪನೆಯಾಗಬೇಕಾಗಿದೆ. ಸತ್ಯಯುಗಕ್ಕೆ ಪಾವನ ಪ್ರಪಂಚವೆಂದು ಹೇಳಲಾಗುತ್ತದೆ, ಉಳಿದೆಲ್ಲರೂ ಮುಕ್ತಿಧಾಮಕ್ಕೆ ಹೊರಟು ಹೋಗುವರು. ಅವರು ಮತ್ತೆ ತಮ್ಮ ಪಾತ್ರವನ್ನು ಪುನರಾವರ್ತಿಸಬೇಕಾಗಿದೆ. ಪಾವನರಾಗಿ ಪಾವನ ಪ್ರಪಂಚದ ಮಾಲೀಕರಾಗಲು ನೀವೂ ಸಹ ತಮ್ಮ ಪುರುಷಾರ್ಥ ಮಾಡುತ್ತಿರುತ್ತೀರಿ. ಅಲ್ಲಿ ಎಲ್ಲರೂ ತಮ್ಮನ್ನು ಮಾಲೀಕರೆಂದು ತಿಳಿಯುತ್ತಾರಲ್ಲವೆ. ಪ್ರಜೆಗಳೂ ಮಾಲೀಕರಾಗಿರುತ್ತಾರೆ. ಈಗಿನ ಪ್ರಜೆಗಳೂ ಸಹ ನಮ್ಮ ಭಾರತವೆಂದು ಹೇಳುತ್ತಾರಲ್ಲವೆ. ದೊಡ್ಡ-ದೊಡ್ಡ ಮನುಷ್ಯರು, ಸನ್ಯಾಸಿ ಮೊದಲಾದವರೂ ಸಹ ನಮ್ಮ ಭಾರತವೆಂದು ಹೇಳುತ್ತಾರೆ. ಈ ಸಮಯ ಭಾರತದಲ್ಲಿ ಎಲ್ಲರೂ ನರಕವಾಸಿಗಳಾಗಿದ್ದಾರೆ. ನಾವೀಗ ಸ್ವರ್ಗವಾಸಿಯಾಗಲು ಈ ರಾಜಯೋಗವನ್ನು ಕಲಿಯುತ್ತಿದ್ದೇವೆಂದು ನೀವು ತಿಳಿಯುತ್ತೀರಿ. ಎಲ್ಲರೂ ಸ್ವರ್ಗವಾಸಿಗಳಾಗುವುದಿಲ್ಲ, ಈ ಜ್ಞಾನವು ಈಗ ಬಂದಿದೆ. ಅವರೆಲ್ಲರೂ ಶಾಸ್ತ್ರ ಇತ್ಯಾದಿ ಏನೆಲ್ಲವನ್ನೂ ತಿಳಿಸುತ್ತಾರೆಯೋ ಅವರು ಶಾಸ್ತ್ರಗಳ ಅಥಾರಿಟಿಯಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ಈ ಭಕ್ತಿಮಾರ್ಗದ ವೇದಶಾಸ್ತ್ರ ಇತ್ಯಾದಿಗಳೆಲ್ಲವನ್ನೂ ಓದುವುದರಿಂದ ಏಣಿಯನ್ನು ಕೆಳಗಿಳಿಯುತ್ತಲೇ ಹೋಗುತ್ತೀರಿ. ಇದೆಲ್ಲವೂ ಭಕ್ತಿಮಾರ್ಗವಾಗಿದೆ. ತಂದೆಯು ತಿಳಿಸುತ್ತಾರೆ - ಯಾವಾಗ ಭಕ್ತಿಮಾರ್ಗವು ಪೂರ್ಣವಾಗುವುದೋ ಆಗಲೇ ನಾನು ಬರುತ್ತೇನೆ. ನಾನೇ ಬಂದು ಎಲ್ಲಾ ಭಕ್ತರಿಗೆ ಭಕ್ತಿಯ ಫಲವನ್ನು ಕೊಡಬೇಕಾಗುತ್ತದೆ. ಭಕ್ತರು ಅನೇಕರಿದ್ದಾರೆ. ಹೇ ಗಾಡ್ ಫಾದರ್ ಎಂದು ಎಲ್ಲರೂ ಕರೆಯುತ್ತಾರಲ್ಲವೆ. ಭಕ್ತರ ಬಾಯಿಂದ ಓ ಗಾಡ್ ಫಾದರ್, ಹೇ ಭಗವಂತ ಎಂದು ಅವಶ್ಯವಾಗಿ ಬರುತ್ತದೆ. ಮನುಷ್ಯರಿಗೆ ಇದು ಅರ್ಧಕಲ್ಪದಿಂದ ಅಭ್ಯಾಸವಾಗಿ ಬಿಟ್ಟಿದೆ ಆದರೆ ನಿಮಗೆ ತಿಳಿದಿದೆ - ಅವರಂತೂ ನಮ್ಮ ತಂದೆಯಾಗಿದ್ದಾರೆ ಅಂದಮೇಲೆ ಅವರನ್ನು ಹೇ ಬಾಬಾ ಎನ್ನುವಂತಿಲ್ಲ. ತಂದೆಯಿಂದಲೇ ಆಸ್ತಿಯನ್ನು ಪಡೆಯಬೇಕಾಗಿದೆ. ಮೊದಲು ಈ ನಿಶ್ಚಯವಿದೆ - ನಾವು ತಂದೆಯಿಂದ ಆಸ್ತಿಯನ್ನು ಪಡೆಯುತ್ತೇವೆ. ತಂದೆಯು ಮಕ್ಕಳಿಗೆ ಆಸ್ತಿಯನ್ನು ತೆಗೆದುಕೊಳ್ಳಲು ಅಧಿಕಾರಿಗಳನ್ನಾಗಿ ಮಾಡುತ್ತಾರೆ. ಇವರು ಸತ್ಯ ತಂದೆಯಲ್ಲವೆ. ತಂದೆಗೆ ಗೊತ್ತಿದೆ - ಇವರು ನನ್ನ ಮಕ್ಕಳಾಗಿದ್ದಾರೆ. ಇವರಿಗೆ ನಾನು ಜ್ಞಾನಾಮೃತವನ್ನು ಕುಡಿಸಿ, ಜ್ಞಾನ ಚಿತೆಯ ಮೇಲೆ ಕೂರಿಸಿ, ಘೋರ ನಿದ್ರೆಯಿಂದ ಎಬ್ಬಿಸಿ ಸ್ವರ್ಗದಲ್ಲಿ ಕರೆದುಕೊಂಡು ಹೋಗುತ್ತೇನೆ. ಆತ್ಮಗಳು ಅಲ್ಲಿ ಶಾಂತಿಧಾಮ ಮತ್ತು ಸುಖಧಾಮದಲ್ಲಿರುತ್ತಾರೆ. ಸುಖಧಾಮಕ್ಕೆ ನಿರ್ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ಸಂಪೂರ್ಣ ನಿರ್ವಿಕಾರಿ ದೇವತೆಗಳಲ್ಲವೆ. ಮತ್ತೆ ಶಾಂತಿಧಾಮವು ಮಧುರ ಮನೆಯಾಗಿದೆ. ಈಗ ನಿಮಗೆ ಅರ್ಥವಾಗಿದೆ - ಅದು ನಮ್ಮ ಮನೆಯಾಗಿದೆ. ನಾವು ಪಾತ್ರಧಾರಿಗಳು ಇಲ್ಲಿ ಪಾತ್ರವನ್ನಭಿನಯಿಸಲು ಆ ಶಾಂತಿಧಾಮದಿಂದ ಬರುತ್ತೇವೆ. ನಾವಾತ್ಮರು ಇಲ್ಲಿನ ನಿವಾಸಿಗಳಲ್ಲ. ಆ ಸ್ಥೂಲ ಪಾತ್ರಧಾರಿಗಳು ಇಲ್ಲಿಯ ನಿವಾಸಿಗಳಾಗಿರುತ್ತಾರೆ. ಕೇವಲ ಮನೆಯಿಂದ ಬಂದು ವಸ್ತ್ರವನ್ನು ಬದಲಾಯಿಸಿ ಪಾತ್ರವನ್ನಭಿನಯಿಸುತ್ತಾರೆ. ನೀವಂತೂ ತಿಳಿದುಕೊಂಡಿದ್ದೀರಿ - ನಮ್ಮ ಮನೆಯು ಶಾಂತಿಧಾಮವಾಗಿದೆ. ನಾವು ಮತ್ತೆ ಅಲ್ಲಿಗೆ ಹಿಂತಿರುಗಿ ಹೋಗುತ್ತೇವೆ. ಯಾವಾಗ ಎಲ್ಲಾ ಪಾತ್ರಧಾರಿಗಳು ಸ್ಟೇಜಿನ ಮೇಲೆ ಬಂದು ಬಿಡುವರೋ ಆಗ ತಂದೆಯು ಮತ್ತೆ ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ. ಆದ್ದರಿಂದ ಅವರಿಗೆ ಮುಕ್ತಿದಾತ, ಮಾರ್ಗದರ್ಶಕನೆಂದೂ ಹೇಳಲಾಗುತ್ತದೆ. ದುಃಖಹರ್ತ-ಸುಖಕರ್ತನಾಗಿದ್ದಾರೆ ಅಂದಾಗ ಇಷ್ಟೆಲ್ಲಾ ಮನುಷ್ಯಾತ್ಮರು ಎಲ್ಲಿ ಹೋಗುವರು? ವಿಚಾರ ಮಾಡಿ - ಪತಿತ-ಪಾವನನನ್ನು ಕರೆಯುತ್ತೀರಿ - ಏತಕ್ಕಾಗಿ? ತಮ್ಮ ಮೃತ್ಯುವಿಗಾಗಿ. ದುಃಖದ ಪ್ರಪಂಚದಲ್ಲಿರಲು ಇಷ್ಟವಿಲ್ಲ. ಆದ್ದರಿಂದ ಮನೆಗೆ ನಡೆಯಿರಿ ಎಂದು ತಂದೆಯು ಹೇಳುತ್ತಾರೆ. ಇವರೆಲ್ಲರೂ ಮುಕ್ತಿಯನ್ನೇ ಇಚ್ಛಿಸುವವರಾಗಿದ್ದಾರೆ. ಭಾರತದ ಪ್ರಾಚೀನ ರಾಜಯೋಗವು ಎಷ್ಟು ಪ್ರಸಿದ್ಧವಾಗಿದೆ! ಇದನ್ನು ಕಲಿಸಲು ವಿದೇಶಕ್ಕೂ ಹೋಗುತ್ತಾರೆ. ವಾಸ್ತವದಲ್ಲಿ ಹಠಯೋಗಿಗಳು ರಾಜಯೋಗವನ್ನು ಅರಿತುಕೊಂಡೇ ಇಲ್ಲ. ಅವರ ಯೋಗವೇ ತಪ್ಪಾಗಿದೆ. ಆದ್ದರಿಂದ ನೀವು ಹೋಗಿ ಸತ್ಯ ರಾಜಯೋಗವನ್ನು ಕಲಿಸಬೇಕಾಗಿದೆ. ಮನುಷ್ಯರು ಸನ್ಯಾಸಿಗಳ ಕಾವೀ ಬಟ್ಟೆಯನ್ನು ನೋಡಿ ಅವರಿಗೆ ಎಷ್ಟೊಂದು ಮಾನ್ಯತೆಯನ್ನು ಕೊಡುತ್ತಾರೆ. ಬೌದ್ಧ ಧರ್ಮದಲ್ಲಿಯೂ ಸನ್ಯಾಸಿಗಳು ಕಾವಿ ಧರಿಸಿರುವುದನ್ನು ನೋಡಿ ಅವರಿಗೆ ಗೌರವಿಸುತ್ತಾರೆ. ಸನ್ಯಾಸಿಗಳಂತೂ ನಂತರದಲ್ಲಿ ಆಗುತ್ತಾರೆ. ಬೌದ್ಧ ಧರ್ಮದಲ್ಲಿ ಆರಂಭದಲ್ಲಿ ಯಾರೂ ಸನ್ಯಾಸಿಗಳಿರುವುದಿಲ್ಲ. ಯಾವಾಗ ಪಾಪವು ಹೆಚ್ಚಾಗುವುದೋ ಆಗ ಬೌದ್ಧ ಧರ್ಮದಲ್ಲಿ ಸನ್ಯಾಸ ಧರ್ಮವು ಸ್ಥಾಪನೆಯಾಗುತ್ತದೆ. ಆರಂಭದಲ್ಲಂತೂ ಆ ಆತ್ಮರು ಮೇಲಿನಿಂದ ಬರುತ್ತಾರೆ, ಅವರ ಸಂಖ್ಯೆಯು ಹೆಚ್ಚಾಗುತ್ತದೆ. ಆರಂಭದಲ್ಲಿ ಸನ್ಯಾಸವನ್ನು ಕಲಿಸಿ ಏನು ಮಾಡಬೇಕು! ಆದ್ದರಿಂದ ನಂತರದಲ್ಲಿ ಸನ್ಯಾಸವಾಗುತ್ತದೆ. ಇದನ್ನೂ ಸಹ ಇಲ್ಲಿಂದ ಅವರು ಕಾಪಿ ಮಾಡುತ್ತಾರೆ. ಕ್ರಿಶ್ಚಿಯನ್ನರಲ್ಲಿಯೂ ಅನೇಕರು ಸನ್ಯಾಸಿಗಳಿಗೆ ಮಾನ್ಯತೆ ಕೊಡುತ್ತಾರೆ. ಕಾವೀ ವಸ್ತ್ರವು ಹಠಯೋಗಿಗಳದಾಗಿದೆ. ನೀವಂತೂ ಗೃಹಸ್ಥವನ್ನು ಬಿಡಬೇಕಾಗಿಲ್ಲ ಅಥವಾ ಯಾವುದೇ ಶ್ವೇತ ವಸ್ತ್ರಗಳನ್ನು ಧರಿಸಲೇಬೇಕೆಂಬ ಬಂಧನವಿಲ್ಲ. ಆದರೆ ಶ್ವೇತ ವಸ್ತ್ರವು ಒಳ್ಳೆಯದಾಗಿದೆ. ನೀವು ಭಟ್ಟಿಯಲ್ಲಿ ಇದ್ದಿರಿ, ಆದ್ದರಿಂದ ಈ ವಸ್ತ್ರವು ಬದಲಾವಣೆಯಾಗಿದೆ. ಇತ್ತೀಚೆಗೆ ಶ್ವೇತ ವಸ್ತ್ರಗಳನ್ನು ಬಹಳ ಇಷ್ಟ ಪಡುತ್ತಾರೆ. ಮನುಷ್ಯರು ಮರಣ ಹೊಂದಿದಾಗಲೂ ಶ್ವೇತ ಹೊದಿಕೆಯನ್ನು ಹೊದಿಸುತ್ತಾರೆ. ನೀವೂ ಸಹ ಈಗ ಮರುಜೀವಿಗಳಾಗಿದ್ದೀರಿ ಆದ್ದರಿಂದ ಶ್ವೇತ ವಸ್ತ್ರವು ಚೆನ್ನಾಗಿದೆ.

ಮೊದಲಿಗೆ ಯಾರೇ ಬಂದರೂ ಸಹ ತಂದೆಯ ಪರಿಚಯ ಕೊಡಬೇಕಾಗಿದೆ. ಇಬ್ಬರು ತಂದೆಯರಿದ್ದಾರೆ, ಈ ಮಾತುಗಳನ್ನು ತಿಳಿದುಕೊಳ್ಳುವುದರಲ್ಲಿ ಸಮಯ ತೆಗೆದುಕೊಳ್ಳುತ್ತಾರೆ. ಪ್ರದರ್ಶನಿಯಲ್ಲಿ ನೀವು ಇಷ್ಟೊಂದು ತಿಳಿಸಲು ಸಾಧ್ಯವಿಲ್ಲ. ಸತ್ಯಯುಗದಲ್ಲಿ ಒಬ್ಬರೆ ತಂದೆಯಿರುತ್ತಾರೆ, ಈ ಸಮಯದಲ್ಲಿ ನಿಮಗೆ ಮೂವರು ತಂದೆಯರಿದ್ದಾರೆ ಏಕೆಂದರೆ ಪ್ರಜಾಪಿತ ಬ್ರಹ್ಮನ ತನುವಿನಲ್ಲಿ ಭಗವಂತನು ಬರುತ್ತಾರೆ ಅಂದಾಗ ಅವರೂ ಸಹ ಎಲ್ಲರ ಅಲೌಕಿಕ ತಂದೆಯಾಗಿದ್ದಾರೆ. ಲೌಕಿಕ ತಂದೆಯೂ ಇದ್ದಾರೆ, ಒಳ್ಳೆಯದು - ಈಗ ಮೂವರು ತಂದೆಯರಲ್ಲಿ ಅತಿ ಶ್ರೇಷ್ಠ ಆಸ್ತಿಯು ಯಾರದಾಗಿದೆ? ನಿರಾಕಾರ ತಂದೆಯು ಆಸ್ತಿಯನ್ನು ಹೇಗೆ ಕೊಡುವುದು! ಇದಕ್ಕೆ ಅವರು ಬ್ರಹ್ಮನ ಮೂಲಕ ಎಂದು ಹೇಳುತ್ತಾರೆ. ಆದ್ದರಿಂದ ಈ ಚಿತ್ರದಲ್ಲಿ ನೀವು ಬಹಳ ಚೆನ್ನಾಗಿ ತಿಳಿಸಬಲ್ಲಿರಿ. ಶಿವ ತಂದೆಯು ನಿರಾಕಾರನಾಗಿದ್ದಾರೆ ಮತ್ತು ಇವರು ಪ್ರಜಾಪಿತನಾಗಿದ್ದಾರೆ. ಬ್ರಹ್ಮನು ಆದಿ ದೇವ, ಗ್ರೇಟ್ ಗ್ರೇಟ್ ಗ್ರಾಂಡ್ಫಾದರ್ ಆಗಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನು ಶಿವನಿಗೆ ನೀವು ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಎಂದು ಹೇಳುವುದಿಲ್ಲ. ನಾನು ಎಲ್ಲರ ತಂದೆಯಾಗಿದ್ದೇನೆ. ಇವರು ಪ್ರಜಾಪಿತ ಬ್ರಹ್ಮನಾಗಿದ್ದಾರೆ. ನೀವೆಲ್ಲರೂ ಸಹೋದರ-ಸಹೋದರಿಯರಾಗಿದ್ದೀರಿ. ಭಲೆ ಸ್ತ್ರೀ-ಪುರುಷರಿದ್ದಾರೆ ಆದರೆ ಬುದ್ಧಿಯಿಂದ ತಿಳಿದಿದೆ - ನಾವು ಸಹೋದರ-ಸಹೋದರಿಯರಾಗಿದ್ದೇವೆ, ತಂದೆಯಿಂದ ಆಸ್ತಿಯನ್ನು ಪಡೆಯುತ್ತೇವೆ. ಸಹೋದರ-ಸಹೋದರಿಯರ ನಡುವೆ ವಿಕಾರಿ ದೃಷ್ಟಿಯಿರಲು ಸಾಧ್ಯವಿಲ್ಲ. ಒಂದುವೇಳೆ ಇಬ್ಬರ ನಡುವೆ ವಿಕಾರಿ ದೃಷ್ಟಿಯು ಸೆಳೆಯುತ್ತದೆಯೆಂದರೆ ಅಂತಹವರು ಬಿದ್ದು ಹೋಗುತ್ತಾರೆ, ತಂದೆಯನ್ನೇ ಮರೆತು ಹೋಗುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ನನ್ನ ಮಕ್ಕಳಾಗಿಯೂ ಮತ್ತೆ ಮುಖ ಕಪ್ಪು ಏಕೆ ಮಾಡಿಕೊಳ್ಳುತ್ತೀರಿ? ಬೇಹದ್ದಿನ ತಂದೆಯು ಮಕ್ಕಳಿಗೆ ತಿಳಿಸಿಕೊಡುತ್ತಾರೆ. ನಿಮಗೆ ಈ ನಶೆಯೇರಿದೆ. ನಿಮಗೆ ಗೊತ್ತಿದೆ, ಗೃಹಸ್ಥ ವ್ಯವಹಾರದಲ್ಲಿಯೇ ಇರಬೇಕಾಗಿದೆ, ಲೌಕಿಕ ಸಂಬಂಧಿಗಳ ಕಡೆಯೂ ಗಮನ ಕೊಡಬೇಕು, ಜೊತೆ ನಿಭಾಯಿಸಬೇಕಾಗಿದೆ. ಲೌಕಿಕ ತಂದೆಯನ್ನಂತೂ ನೀವು ತಂದೆಯೆಂದು ಹೇಳುತ್ತೀರಲ್ಲವೆ. ಅವರನ್ನು ನೀವು ಸಹೋದರನೆಂದು ಹೇಳುವಂತಿಲ್ಲ. ಸಾಮಾನ್ಯವಾಗಿ ತಂದೆಯನ್ನು ತಂದೆಯದೇ ಹೇಳುತ್ತಾರೆ, ಬುದ್ಧಿಯಲ್ಲಿದೆ - ಇವರು ನಮ್ಮ ಲೌಕಿಕ ತಂದೆಯಾಗಿದ್ದಾರೆ ಎಂದು ಜ್ಞಾನವಂತೂ ಇದೆಯಲ್ಲವೆ. ಈ ಜ್ಞಾನವು ಬಹಳ ವಿಚಿತ್ರವಾಗಿದೆ. ಇತ್ತೀಚೆಗೆ ಬಹಳ ಮಂದಿ ಹೆಸರನ್ನಿಟ್ಟು ಕರೆಯುತ್ತಾರೆ ಆದರೆ ಯಾರಾದರೂ ಹೊಸಬರು, ಹೊರಗಿನ ವ್ಯಕ್ತಿಗಳ ಮುಂದೆ ನೀವು ಸಹೋದರನೆಂದು ಕರೆದಾಗ ಇವರ ತಲೆ ಕೆಟ್ಟಿದೆ ಎಂದು ಅವರು ತಿಳಿದುಕೊಳ್ಳುತ್ತಾರೆ. ಇದರಲ್ಲಿ ಬಹಳ ಯುಕ್ತಿ ಬೇಕು. ನಿಮ್ಮದು ಗುಪ್ತ ಜ್ಞಾನ, ಗುಪ್ತ ಸಂಬಂಧವಾಗಿದೆ. ಇದರಲ್ಲಿ ಬಹಳ ಯುಕ್ತಿಯಿಂದ ನಡೆದುಕೊಳ್ಳಬೇಕಾಗಿದೆ. ಆದರೆ ಒಬ್ಬರು ಇನ್ನೊಬ್ಬರಿಗೆ ಗೌರವ ಕೊಡುವುದು ಒಳ್ಳೆಯದಾಗಿದೆ. ಲೌಕಿಕದೊಂದಿಗೂ ಸಂಬಂಧವನ್ನು ನಿಭಾಯಿಸಬೇಕಾಗಿದೆ ಆದರೆ ಬುದ್ಧಿಯು ಮೇಲೆ ಹೋಗಬೇಕು, ನಾವು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಇದು ಸ್ಮೃತಿಯಲ್ಲಿರಲಿ ಆದರೆ ಚಿಕ್ಕಪ್ಪನನ್ನು ಚಿಕ್ಕಪ್ಪ, ತಂದೆಯನ್ನು ತಂದೆಯೆಂದು ಹೇಳಬೇಕಾಗುತ್ತದೆ. ಯಾರು ಬಿ.ಕೆ. ಆಗಿಲ್ಲವೋ ಅವರು ಸಹೋದರ-ಸಹೋದರರೆಂದು ತಿಳಿಯುವುದಿಲ್ಲ. ಯಾರು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದಾರೆಯೋ ಅವರೇ ಈ ಮಾತುಗಳನ್ನು ತಿಳಿದುಕೊಳ್ಳುವರು. ಹೊರಗಿನವರು ಮೊದಲು ಈ ಮಾತುಗಳನ್ನು ಕೇಳಿದಾಗ ತಬ್ಬಿಬ್ಬಾಗುತ್ತಾರೆ, ಇದರಲ್ಲಿ ತಿಳಿದುಕೊಳ್ಳಲು ಬಹಳ ಒಳ್ಳೆಯ ವಿದ್ಯೆಯು ಬೇಕು. ತಂದೆಯು ನೀವು ಮಕ್ಕಳಿಗೆ ವಿಶಾಲ ಬುದ್ಧಿಯನ್ನಾಗಿ ಮಾಡುತ್ತಾರೆ. ಮೊದಲು ನೀವು ಹದ್ದಿನ ಬುದ್ಧಿಯಲ್ಲಿದ್ದಿರಿ, ಈಗ ಬುದ್ಧಿಯು ಬೇಹದ್ದಿನ ಕಡೆಗೆ ಹೊರಟು ಹೋಗುತ್ತದೆ. ಅವರು ನಮ್ಮ ಬೇಹದ್ದಿನ ತಂದೆಯಾಗಿದ್ದಾರೆ. ಇವರೆಲ್ಲರೂ ನಮ್ಮ ಸಹೋದರ-ಸಹೋದರಿಯರಾಗಿದ್ದಾರೆ ಬಾಕಿ ಸಂಬಂಧದಲ್ಲಂತೂ ಸೊಸೆಯನ್ನು ಸೊಸೆ, ಅತ್ತೆಯನ್ನು ಅತ್ತೆಯೆಂದೇ ಹೇಳುತ್ತಾರೆ. ಸಹೋದರಿಯೆಂದು ಹೇಳುವುದಿಲ್ಲ. ಬರುವುದಂತೂ ಇಬ್ಬರೂ ಬರುತ್ತಾರೆ ಆದರೆ ಮನೆಯಲ್ಲಿದ್ದರೂ ಸಹ ಬಹಳ ಯುಕ್ತಿಯಿಂದ ನಡೆದುಕೊಳ್ಳಬೇಕಾಗುವುದು. ಲೋಕ ಸಂಗ್ರಹವನ್ನೂ ನೋಡಬೇಕಾಗುತ್ತದೆ ಇಲ್ಲವಾದರೆ ಇವರು ಪತಿಯನ್ನು ಸಹೋದರ, ಅತ್ತೆಯನ್ನು ಸಹೋದರಿಯೆಂದು ಹೇಳುತ್ತಾರೆ, ಇವರು ಏನನ್ನು ಕಲಿಯುತ್ತಾರೆಂದು ಅವರು ಕೇಳುತ್ತಾರೆ. ಈ ಜ್ಞಾನದ ಮಾತುಗಳು ನಿಮಗೇ ಗೊತ್ತು, ಮತ್ತ್ಯಾರಿಗೂ ಗೊತ್ತಿಲ್ಲ. ನಿಮ್ಮ ಗತಿ ಮತವು ನಿಮಗೇ ತಿಳಿದಿದೆಯೆಂದು ಹೇಳುತ್ತಾರಲ್ಲವೆ. ನೀವೀಗ ಅವರ ಮಕ್ಕಳಾಗಿದ್ದೀರಿ ಅಂದಮೇಲೆ ನಿಮ್ಮ ಗತಿ ಮತವೂ ಸಹ ನಿಮಗೇ ಗೊತ್ತಿದೆ. ಬಹಳ ಸಂಭಾಲನೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಎಲ್ಲಿಯೂ ಯಾರೂ ತಬ್ಬಿಬ್ಬಾಗುವಂತಾಗಬಾರದು ಅಂದಾಗ ಪ್ರದರ್ಶನಿಯಲ್ಲಿಯೂ ಸಹ ನೀವು ಮಕ್ಕಳು ಮೊಟ್ಟ ಮೊದಲು ಇದನ್ನು ತಿಳಿಸಬೇಕಾಗಿದೆ - ನಮಗೆ ಓದಿಸುವವರು ಭಗವಂತನಾಗಿದ್ದಾರೆ. ಈಗ ಹೇಳಿ - ಅವರು ಯಾರು? ನಿರಾಕಾರ ಶಿವನೇ ಅಥವಾ ಕೃಷ್ಣನೇ? ಶಿವ ಜಯಂತಿಯ ನಂತರ ಕೃಷ್ಣ ಜಯಂತಿಯು ಬರುತ್ತದೆ ಏಕೆಂದರೆ ತಂದೆಯು ರಾಜಯೋಗವನ್ನು ಕಲಿಸುತ್ತಾರೆ. ಮಕ್ಕಳ ಬುದ್ಧಿಯಲ್ಲಿ ಬಂದಿತಲ್ಲವೆ - ಎಲ್ಲಿಯವರೆಗೆ ಶಿವ ಪರಮಾತ್ಮನು ಬರುವುದಿಲ್ಲವೋ ಅಲ್ಲಿಯವರೆಗೆ ಶಿವ ಜಯಂತಿಯನ್ನಾಚರಿಸಲು ಸಾಧ್ಯವಿಲ್ಲ. ಎಲ್ಲಿಯವರೆಗೆ ಶಿವನು ಬಂದು ಕೃಷ್ಣ ಪುರಿಯನ್ನು ಸ್ಥಾಪನೆ ಮಾಡುವುದಿಲ್ಲವೋ ಅಲ್ಲಿಯವರೆಗೆ ಕೃಷ್ಣ ಜಯಂತಿಯನ್ನು ಹೇಗೆ ಆಚರಿಸುವಿರಿ? ಕೃಷ್ಣನ ಜನ್ಮವನ್ನಂತೂ ಆಚರಿಸುತ್ತಾರೆ ಆದರೆ ತಿಳಿದುಕೊಂಡಿದ್ದಾರೆಯೇ! ಕೃಷ್ಣನು ರಾಜಕುಮಾರನಾಗಿದ್ದನು ಅಂದಮೇಲೆ ಅವಶ್ಯವಾಗಿ ಸತ್ಯಯುಗದಲ್ಲಿಯೇ ರಾಜಕುಮಾರನಿರುವರು. ದೇವಿ-ದೇವತೆಗಳ ರಾಜಧಾನಿಯಿರುವುದು. ಕೇವಲ ಒಬ್ಬ ಕೃಷ್ಣನಿಗಂತೂ ರಾಜ್ಯವು ಸಿಕ್ಕಿರುವುದಿಲ್ಲ. ಅವಶ್ಯವಾಗಿ ಕೃಷ್ಣ ಪುರಿಯೂ ಇರಬೇಕಲ್ಲವೆ. ಕೃಷ್ಣ ಪುರಿಯೆಂದು ಹೇಳುತ್ತಾರೆ ಮತ್ತು ಇದು ಕಂಸ ಪುರಿಯಾಗಿದೆ, ಕಂಸ ಪುರಿಯು ಸಮಾಪ್ತಿಯಾಗಿ ನಂತರ ಕೃಷ್ಣ ಪುರಿಯು ಸ್ಥಾಪನೆಯಾಯಿತಲ್ಲವೆ, ಆಗುವುದು ಭಾರತದಲ್ಲಿಯೇ. ಹೊಸ ಪ್ರಪಂಚದಲ್ಲಿ ಈ ಕಂಸ ಮೊದಲಾದವರಿರಲು ಸಾಧ್ಯವಿಲ್ಲ. ಕಲಿಯುಗಕ್ಕೇ ಕಂಸ ಪುರಿಯೆಂದು ಹೇಳಲಾಗುತ್ತದೆ. ಇಲ್ಲಿ ನೋಡಿ, ಎಷ್ಟೊಂದು ಮನುಷ್ಯರಿದ್ದಾರೆ! ಸತ್ಯಯುಗದಲ್ಲಿ ಕೆಲವರೇ ಇರುತ್ತಾರೆ. ದೇವತೆಗಳು ಯಾವುದೇ ಯುದ್ಧ ಮಾಡಲಿಲ್ಲ. ಕೃಷ್ಣ ಪುರಿ ಎಂದಾದರೂ ಹೇಳಿ ಅಥವಾ ವಿಷ್ಣು ಪುರಿ ಎಂದಾದರೂ ಹೇಳಿ, ದೈವೀ ಸಂಪ್ರದಾಯವೆಂದಾದರೂ ಹೇಳಿ, ಎಲ್ಲವೂ ಒಂದೇ ಆಗಿದೆ. ಇಲ್ಲಿ ಆಸುರೀ ಸಂಪ್ರದಾಯವಿದೆ ಬಾಕಿ ದೇವತೆಗಳು-ಅಸುರರ ನಡುವೆ, ಕೌರವರು-ಪಾಂಡವರ ನಡುವೆ ಯಾವುದೇ ಯುದ್ಧವಾಗಲಿಲ್ಲ. ನೀವು ರಾವಣನ ಮೇಲೆ ಜಯ ಗಳಿಸುತ್ತೀರಿ. ತಂದೆಯು ತಿಳಿಸುತ್ತಾರೆ - ಈ ವಿಕಾರಗಳ ಮೇಲೆ ಜಯ ಗಳಿಸಿ ಆಗ ನೀವು ಜಗಜ್ಜೀತರಾಗಿ ಬಿಡುವಿರಿ. ಇದರಲ್ಲಿ ಯಾವುದೇ ಯುದ್ಧ ಮಾಡಬೇಕಾಗಿಲ್ಲ. ಯುದ್ಧದ ಹೆಸರನ್ನು ತೆಗೆದುಕೊಂಡಾಗ ಅದು ಹಿಂಸೆಯಾಗಿ ಬಿಡುವುದು. ರಾವಣನ ಮೇಲೆ ಜಯ ಗಳಿಸಬೇಕಾಗಿದೆ ಆದರೆ ಅಹಿಂಸೆಯಿಂದ. ಕೇವಲ ತಂದೆಯನ್ನು ನೆನಪು ಮಾಡುವುದರಿಂದ ನಮ್ಮ ವಿಕರ್ಮಗಳು ವಿನಾಶವಾಗುತ್ತದೆ. ಯುದ್ಧ ಮೊದಲಾದ ಯಾವುದೇ ಮಾತಿಲ್ಲ. ತಂದೆಯು ತಿಳಿಸುತ್ತಾರೆ - ನೀವು ತಮೋಪ್ರಧಾನರಾಗಿ ಬಿಟ್ಟಿದ್ದೀರಿ, ಈಗ ಮತ್ತೆ ಸತೋಪ್ರಧಾನರಾಗಬೇಕಾಗಿದೆ. ಭಾರತದ ಪ್ರಾಚೀನ ರಾಜಯೋಗವು ಪ್ರಸಿದ್ಧವಾಗಿದೆ. ತಂದೆಯು ತಿಳಿಸುತ್ತಾರೆ - ನನ್ನ ಜೊತೆ ಬುದ್ಧಿಯೋಗವನ್ನು ಜೋಡಿಸಿ ಆಗ ನಿಮ್ಮ ಪಾಪಗಳು ಭಸ್ಮವಾಗುತ್ತವೆ. ತಂದೆಯು ಪತಿತ-ಪಾವನನಾಗಿದ್ದಾರೆ, ಅವರೊಂದಿಗೆ ಬುದ್ಧಿಯೋಗವನ್ನಿಡಬೇಕಾಗಿದೆ. ಇದರಿಂದ ನೀವು ಪತಿತರಿಂದ ಪಾವನರಾಗಿ ಬಿಡುವಿರಿ. ನೀವೀಗ ಪ್ರತ್ಯಕ್ಷದಲ್ಲಿ ಅವರ ಜೊತೆ ಬುದ್ಧಿಯೋಗವನ್ನಿಡುತ್ತಿದ್ದೀರಿ. ಇದರಲ್ಲಿ ಯಾವುದೇ ಯುದ್ಧದ ಮಾತಿಲ್ಲ. ಯಾರು ಚೆನ್ನಾಗಿ ಓದುವರೋ ಮತ್ತು ತಂದೆಯ ಜೊತೆ ಯೋಗವನ್ನಿಡುವರೋ ಅವರೇ ತಂದೆಯಿಂದ ಆಸ್ತಿಯನ್ನು ಪಡೆಯುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸಹೋದರ-ಸಹೋದರನ ದೃಷ್ಟಿಯ ಅಭ್ಯಾಸ ಮಾಡುತ್ತಾ ಲೌಕಿಕ ಬಂಧನಗಳೊಂದಿಗೆ ಸಂಬಂಧವನ್ನು ನಿಭಾಯಿಸಬೇಕಾಗಿದೆ. ಬಹಳ ಯುಕ್ತಿಯಿಂದ ನಡೆಯಬೇಕಾಗಿದೆ. ವಿಕಾರಿ ದೃಷ್ಟಿಯು ಇರಲೇಬಾರದು. ಅಂತಿಮ ಸಮಯದಲ್ಲಿ ಸಂಪೂರ್ಣ ಪಾವನರಾಗಬೇಕಾಗಿದೆ.

2. ತಂದೆಯಿಂದ ಪೂರ್ಣ ಆಸ್ತಿಯನ್ನು ಪಡೆದುಕೊಳ್ಳಲು ಚೆನ್ನಾಗಿ ಓದಬೇಕು ಮತ್ತು ಪತಿತ ಪಾವನ ತಂದೆಯೊಂದಿಗೆ ಯೋಗವನ್ನಿಟ್ಟು ಪಾವನರಾಗಬೇಕಾಗಿದೆ.

ವರದಾನ:
ಬಲಹೀನತೆಗಳಿಗೆ ಫುಲ್ ಸ್ಟಾಪ್ ಹಾಕಿ ತಮ್ಮ ಸಂಪನ್ನ ಸ್ವರೂಪವನ್ನು ಪ್ರತ್ಯಕ್ಷ ಮಾಡುವಂತಹ ಸಾಕ್ಷಾತ್ಕಾರ ಮೂರ್ತಿ ಭವ.

ವಿಶ್ವ ನಿಮ್ಮ ಕಲ್ಪದ ಹಿಂದಿನ ಸಂಪನ್ನ ಸ್ವರೂಪ, ಪೂಜ್ಯ ಸ್ವರೂಪದ ಸ್ಮರಣೆ ಮಾಡುತ್ತಿದ್ದಾರೆ. ಆದ್ದರಿಂದ ಈಗ ತಮ್ಮ ಸಂಪನ್ನ ಸ್ವರೂಪವನ್ನು ಕಾರ್ಯ ರೂಪದಲ್ಲಿ ಪ್ರಖ್ಯಾತ ಮಾಡಿ. ಕಳೆದು ಹೋದ ಬಲಹೀನತೆಗಳಿಗೆ ಫುಲ್ ಸ್ಟಾಪ್ ಹಾಕಿ ಬಿಡಿ, ದೃಢ ಸಂಕಲ್ಪದ ಮುಖಾಂತರ ಹಳೆಯ ಸ್ವಭಾವ-ಸಂಸ್ಕಾರವನ್ನು ಸಮಾಪ್ತಿ ಮಾಡಿ, ಬೇರೆಯವರ ಬಲಹೀನತೆಗಳ ನಕಲನ್ನು ಮಾಡಬೇಡಿ, ಅವಗುಣ ಧಾರಣೆ ಮಾಡುವಂತಹ ಬುದ್ಧಿಯನ್ನು ನಾಶ ಮಾಡಿ, ದಿವ್ಯ ಗುಣ ಧಾರಣೆ ಮಾಡುವಂತಹ ಸತೋಪ್ರಧಾನ ಬುದ್ಧಿ ಧಾರಣೆ ಮಾಡಿ. ಆಗ ಸಾಕ್ಷಾತ್ಕಾರ ಮೂರ್ತಿಗಳಾಗುವಿರಿ.

ಸ್ಲೋಗನ್:
ತಮ್ಮ ಅನಾದಿ ಹಾಗೂ ಆದಿಯ ಗುಣಗಳನ್ನು ಸ್ಮೃತಿಯಲ್ಲಿಟ್ಟು ಅದನ್ನು ಸ್ವರೂಪದಲ್ಲಿ ತನ್ನಿ.


ಬ್ರಹ್ಮಾ ತಂದೆಯ ಸಮಾನ ಸಂಪನ್ನ ಸ್ಥಿತಿಯ ಅನುಭವ ಮಾಡಿರಿ:-
ಈಗ ಸ್ಪೀಕರ್ನ ಸ್ಥಾನದ ಜೊತೆಯಲ್ಲಿ ಸರ್ವ ಅನುಭವಗಳ ಅಧಿಕಾರಿಯ ಆಸನವನ್ನು ತೆಗೆದುಕೊಳ್ಳಿರಿ. ಈ ಆಸನದ ಮೇಲೆ ಕುಳಿತು ಸದಾ ಸಹಜಯೋಗಿ, ಸದಾಕಾಲದ ಯೋಗಿ, ಸ್ವತಹ ಯೋಗಿಯಾಗಿರಿ. ಸರ್ವ ಅನುಭವಗಳ ಅಧಿಕಾರಿಯಾಗುತ್ತೀರೆಂದರೆ, ಎಲ್ಲರೂ ತಾವಾಗಿಯೇ ಬಾಗುವರು.