05.01.23         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಭಕ್ತರಲ್ಲಿ ಯಾವಾಗ ಗಲಾಟೆಯಾಗುತ್ತದೆಯೋ ಅಥವಾ ಅಪಾಯಗಳು ಬರುತ್ತದೆಯೋ ಆಗ ತಂದೆಯು ಬರುತ್ತಾರೆ, ಬಂದು ಜ್ಞಾನದಿಂದ ಗತಿ-ಸದ್ಗತಿಯನ್ನು ಮಾಡುತ್ತಾರೆ

ಪ್ರಶ್ನೆ:
ವಿಕರ್ಮಾಜೀತರು ಯಾರಾಗುತ್ತಾರೆ? ವಿಕರ್ಮಾಜೀತರಾಗುವಂತಹವರ ಚಿಹ್ನೆಯೇನಾಗಿದೆ?

ಉತ್ತರ:
ಯಾರು ಕರ್ಮ, ಅಕರ್ಮ ಮತ್ತು ವಿಕರ್ಮಗಳ ಗತಿಯನ್ನು ತಿಳಿದುಕೊಂಡು ಶ್ರೇಷ್ಠ ಕರ್ಮವನ್ನು ಮಾಡುತ್ತಾರೋ ಅವರೇ ವಿಕರ್ಮಾಜೀತರು ಆಗುತ್ತಾರೆ. ವಿಕರ್ಮಾಜೀತರಾಗುವಂತಹವರು ಎಂದೂ ಕರ್ಮದಿಂದ ದೂರವಾಗುವುದಿಲ್ಲ. ಅವರ ಕರ್ಮ ವಿಕರ್ಮ ಆಗುವುದಿಲ್ಲ.

ಪ್ರಶ್ನೆ:
ಈ ಸಮಯದಲ್ಲಿ ತಂದೆಯು ಯಾವ ಡಬಲ್ ಸರ್ವೀಸನ್ನು ಮಾಡುತ್ತಾರೆ?

ಉತ್ತರ:
ಆತ್ಮ ಮತ್ತು ಶರೀರ ಎರಡನ್ನೂ ಪಾವನ ಮಾಡುತ್ತಾರೆ ಮತ್ತು ತಮ್ಮ ಜೊತೆ ಹಿಂತಿರುಗಿ ಮನೆಗೆ ಕರೆದುಕೊಂಡು ಹೋಗುತ್ತಾರೆ. ಒಬ್ಬ ತಂದೆಯ ಚರಿತ್ರೆಯಾಗಿದೆ ಮನುಷ್ಯರದ್ದಲ್ಲ.

ಗೀತೆ:
ಓಂ ನಮಃ ಶಿವಾಯ....

ಓಂ ಶಾಂತಿ.
ಈ ಗೀತೆಯನ್ನು ಮಕ್ಕಳು ಕೇಳಿದ್ದೀರಾ. ಯಾರೆಲ್ಲಾ ಭಕ್ತಿಮಾರ್ಗದವರಿದ್ದಾರೆ ಅವರು ಈ ರೀತಿ ಗೀತೆಯನ್ನು ಹಾಡುತ್ತಾರೆ. ಘೋರ ಅಂಧಕಾರದಿಂದ ಬೆಳಕು ಬರುತ್ತದೆ ಮತ್ತು ದುಃಖದಿಂದ ದೂರವಾಗಲು ಕರೆಯುತ್ತಾರೆ. ನೀವು ಶಿವವಂಶಿ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ. ಇದೆಲ್ಲಾ ತಿಳಿದುಕೊಳ್ಳುವ ಮಾತಾಗಿದೆ. ಇಷ್ಟೆಲ್ಲಾ ಮಕ್ಕಳು ಕುಖವಂಶಾವಳಿಗಳಾಗಲು ಸಾಧ್ಯವಿಲ್ಲ, ಮುಖವಂಶಾವಳಿಗಳಾಗುತ್ತಾರೆ. ಕೃಷ್ಣನಿಗೆ ಇಷ್ಟು ರಾಣಿಯರು ಮತ್ತು ಮಕ್ಕಳು ಇರಲಿಲ್ಲ. ಗೀತೆಯ ಭಗವಂತ ರಾಜಯೋಗವನ್ನು ಕಲಿಸಿದರು ಅಂದಾಗ ಅವಶ್ಯವಾಗಿ ಮುಖವಂಶಾವಳಿಗಳಾಗಿದ್ದಾರೆ. ಪ್ರಜಾಪಿತ ಎನ್ನುವ ಅಕ್ಷರವು ಪ್ರಸಿದ್ಧವಾಗಿದೆ. ಇವರ ಮುಖದಿಂದ ತಂದೆಯೇ ಬಂದು ಬ್ರಾಹ್ಮಣ ಧರ್ಮವನ್ನು ರಚಿಸಿದ್ದಾರೆ. ಪ್ರಜಾಪಿತನ ಹೆಸರು ತಂದೆಗೆ ಶೋಭಿಸುತ್ತದೆ. ಈಗ ನೀವೇ ಪ್ರತ್ಯಕ್ಷದಲ್ಲಿ ಆ ತಂದೆಗೆ ಮಕ್ಕಳಾಗಿದ್ದೀರಿ. ಕೃಷ್ಣನೂ ಭಗವಂತನಾಗಿದ್ದಾರೆಂದು ಅವರು ಹೇಳುತ್ತಾರೆ. ಶಿವನೂ ಭಗವಂತನಾಗಿದ್ದಾರೆ. ರುದ್ರ ಭಗವಂತನ ಬದಲಾಗಿ ಕೃಷ್ಣನ ಹೆಸರನ್ನು ಹಾಕಿದ್ದಾರೆ. ಶಂಕರ ಪಾರ್ವತಿ ಎಂದು ಹೇಳುತ್ತಾರೆ ರುದ್ರ ಪಾರ್ವತಿ ಎಂದು ಹೇಳುವುದಿಲ್ಲ. ಶಿವಶಂಕರ ಮಹದೇವ ಎಂದು ಹೇಳುತ್ತಾರೆ. ಈಗ ಕೃಷ್ಣ ಎಲ್ಲಿಂದ ಬಂದನು? ಅವನಿಗೆ ರುದ್ರ ಹಾಗೂ ಶಂಕರನೆಂದು ಹೇಳಲಾಗುವುದಿಲ್ಲ. ಭಕ್ತರ ಗಾಯನ ಮಾಡುತ್ತಾರೆ ಆದರೆ ಭಗವಂತನನ್ನು ತಿಳಿದುಕೊಂಡಿಲ್ಲ. ಭಾರತದವರು ವಾಸ್ತವಿಕವಾಗಿ ಸತ್ಯ-ಸತ್ಯ ಭಕ್ತರಾಗಿದ್ದಾರೆ. ಯಾರು ಪೂಜ್ಯರಾಗಿದ್ದರು ಅವರೇ ಪೂಜಾರಿಗಳಾಗಿದ್ದಾರೆ. ಅವರಲ್ಲೂ ನಂಬರ್ವಾರ್ ಇದ್ದಾರೆ. ನಿಮ್ಮಲ್ಲೂ ನಂಬರ್ವಾರ್ ಇದ್ದಾರೆ. ನೀವು ಬ್ರಾಹ್ಮಣರಾಗಿದ್ದೀರಿ ಅವರು ಶೂದ್ರರಾಗಿದ್ದಾರೆ. ದೇವತಾಧರ್ಮದವರೇ ಬಹಳ ದುಃಖಿಗಳಾಗಿದ್ದಾರೆ ಏಕೆಂದರೆ ಅವರೇ ಬಹಳ ಸುಖವನ್ನು ನೋಡಿದ್ದಾರೆ. ಈಗ ಮನೆ, ಮನೆ ಅಲೆಯುವುದು ಅರ್ಧಕಲ್ಪಕ್ಕೋಸ್ಕರ ಸಮಾಪ್ತಿಯಾಗಿದೆ. ಈ ರಹಸ್ಯವನ್ನು ನೀವು ಬ್ರಾಹ್ಮಣರೇ ತಿಳಿದುಕೊಂಡಿದ್ದೀರಿ. ಅದರಲ್ಲೂ ನಂಬರ್ವಾರ್ ಆಗಿದೆ. ಯಾರು ಕಲ್ಪದ ಮೊದಲು ಎಷ್ಟು ಪುರುಷಾರ್ಥವನ್ನು ಮಾಡಿದ್ದರೋ ಅಷ್ಟೇ ಈಗಲೂ ಮಾಡುತ್ತಾರೆ. ನಾಟಕದಲ್ಲಿ ಏನಿದೆಯೋ ಅದೇ ರೀತಿ ಪುರುಷಾರ್ಥದ ಹೆಸರು ಬರುತ್ತದೆ ಎಂದಲ್ಲ. ನಾಟಕವು ಮಕ್ಕಳಿಂದ ಪುರುಷಾರ್ಥ ಮಾಡಿಸುತ್ತದೆ. ಹೇಗೆ ಪುರುಷಾರ್ಥವೋ ಹಾಗೆಯೇ ಪದವಿಯು ಸಿಗುತ್ತದೆ. ಕಲ್ಪದ ಮೊದಲು ಈ ರೀತಿ ಪುರುಷಾರ್ಥವನ್ನು ಮಾಡಿದ್ದಿರಿ ಎಂದು ನಮಗೆ ತಿಳಿದಿದೆ, ಈ ರೀತಿ ಸಹನೆ ಮಾಡಿದ್ದೆವು, ಯಜ್ಞದಲ್ಲಿ ವಿಘ್ನಗಳು ಬರುತ್ತಿತ್ತು.

ತಂದೆಯು ಪುನಃ ಬಂದಿದ್ದಾರೆಂದು ನೀವು ಮಕ್ಕಳಿಗೆ ತಿಳಿದಿದೆ. ಯಾವಾಗ ಬ್ರಿಟಿಷರ ರಾಜ್ಯವಿತ್ತೋ ಆಗ ಕಲ್ಪದ ಮೊದಲು ಇದೇ ಸಮಯದಲ್ಲಿ ಬಂದಿದ್ದರು. ಬ್ರಿಟಿಷರು ರಾಜ್ಯ ಮಾಡಿದ ನಂತರ ಪಾಕಿಸ್ತಾನವಾಯಿತು. ಇದು ಕಲ್ಪದ ಮೊದಲೂ ಆಗಿತ್ತು ಆದರೆ ಗೀತೆಯಲ್ಲಿ ಈ ಮಾತು ಇಲ್ಲ. ಕೊನೆಯಲ್ಲಿ ಎಲ್ಲರೂ ತಿಳಿದುಕೊಳ್ಳುತ್ತಾರೆ. ಅವಶ್ಯವಾಗಿ ಅದೇ ಸಮಯವಾಗಿದೆ. ಈಶ್ವರ ಬಂದಿದ್ದಾರೆಂದು ಕೆಲಕೆಲವರು ತಿಳಿದುಕೊಂಡಿದ್ದಾರೆ. ಯಾವಾಗ ಮಹಾಭಾರತದ ಯುದ್ಧವಾಯಿತೋ ಆಗ ಭಗವಂತ ಬಂದಿದ್ದರು. ಸರಿಯಿದೆ ಎಂದು ಹೇಳುತ್ತಾರೆ ಕೇವಲ ಹೆಸರು ಮಾತ್ರ ಬದಲಾಗಿದೆ. ರುದ್ರನ ಹೆಸರನ್ನು ತೆಗೆದುಕೊಂಡಾಗ ಸರಿಯಾಗಿದೆ ಎಂದು ತಿಳಿದುಕೊಳ್ಳುತ್ತಾರೆ. ರುದ್ರನೇ ಜ್ಞಾನಯಜ್ಞವನ್ನು ರಚನೆ ಮಾಡಿದರು ಅದರಿಂದ ಪ್ರಪಂಚದಲ್ಲಿ ಅಪಾಯಗಳು ಹೆಚ್ಚಿದವು. ಇದೂ ಸಹ ನಿಧನಿಧಾನವಾಗಿ ನಿಮ್ಮ ಮುಖಾಂತರ ತಿಳಿಯುತ್ತದೆ. ಕೃಷ್ಣ ಭಗವಂತನಲ್ಲವೆಂದು ಹೇಳುತ್ತಾರೆ. ಈಗ ಅದರಲ್ಲಿ ಇನ್ನೂ ಸಮಯವಿದೆ. ಈ ರೀತಿ ಗಲಾಟೆಗಳಾದರೆ ನೀವಿಲ್ಲಿ ವಿದ್ಯೆಯನ್ನು ಓದಲು ಸಾಧ್ಯವಿಲ್ಲ. ಇಲ್ಲಿ ಗಲಾಟೆಯಾಗುವ ನಿಯಮವಿಲ್ಲ. ಗುಪ್ತವೇಷದಲ್ಲಿ ಕೆಲಸ ನಡೆಯುತ್ತದೆ. ಈಗ ಇಲ್ಲಿಗೆ ಯಾರಾದರೂ ದೊಡ್ಡ ವ್ಯಕ್ತಿಗಳು ಬಂದರೆ ಅವರ ತಲೆ ಕೆಟ್ಟಿದೆ ಎಂದು ಹೇಳುತ್ತಾರೆ. ಇದೆಲ್ಲವನ್ನೂ ತಂದೆಯು ನೀವು ಮಕ್ಕಳಿಗೆ ಓದಿಸುತ್ತಿದ್ದಾರೆ. ದೇವತಾ ಧರ್ಮವನ್ನು ಭಗವಂತನೇ ರಚನೆ ಮಾಡಿದರು ಅವರೇ ಈಗ ಹೊಸಪ್ರಪಂಚವನ್ನು ರಚನೆ ಮಾಡಲು ಭಕ್ತರ ಗಲಾಟೆಯನ್ನು ದೂರ ಮಾಡಲು ಬಂದಿದ್ದಾರೆ. ವಿನಾಶದ ನಂತರ ದುಃಖವಾಗುವುದಿಲ್ಲ ಏಕೆಂದರೆ ಸತ್ಯಯುಗದಲ್ಲಿ ಭಕ್ತರಿರುವುದಿಲ್ಲ. ಅಲ್ಲಿ ದುಃಖ ಕೊಡುವಂತಹ ಯಾವುದೇ ಕರ್ಮವನ್ನು ಮಾಡುವುದಿಲ್ಲ.

(ಬಾಂಬೆಯಿಂದ ರಮೇಶ್ ಭಾಯಿಯ ಫೋನ್ ಬಂದಿತು) ಬಾಪ್ದಾದಾ ಹೊರಟು ಬಂದ ನಂತರ ಮಕ್ಕಳು ಉದಾಸೀನರಾಗುತ್ತಾರೆ. ಹೇಗೆ ಸ್ತ್ರೀಯು ಪತಿ ವಿದೇಶಕ್ಕೆ ಹೋದಾಗ ನೆನಪು ಬಂದಾಗ ಅಳುತ್ತಾರೆ, ಅದು ಶಾರೀರಿಕವಾದ ಸಂಬಂಧವಾಗಿದೆ. ಇಲ್ಲಿ ತಂದೆಯ ಜೊತೆ ಆತ್ಮೀಯ ಸಂಬಂಧವಾಗಿದೆ. ತಂದೆಯಿಂದ ದೂರವಾದಾಗ ಪ್ರೇಮದ ಕಣ್ಣೀರು ಬರುತ್ತದೆ. ಯಾರು ಸರ್ವೀಸೇಬಲ್ ಮಕ್ಕಳಾಗಿರುತ್ತಾರೆ ಅವರಿಗೆ ತಂದೆಯ ಬಗ್ಗೆ ಗಮನವಿರುತ್ತದೆ. ಸುಪುತ್ರ ಮಕ್ಕಳಿಗೆ ಗಮನವಿರುತ್ತದೆ. ಶಿವತಂದೆಯು ಬಹಳ ಶ್ರೇಷ್ಠಾತಿ ಶ್ರೇಷ್ಠ ಸಂಬಂಧವಾಗಿದ್ದಾರೆ. ಅವರಿಗಿಂತ ಶ್ರೇಷ್ಠವಾದಂತಹ ಸಂಬಂಧ ಬೇರೆ ಯಾರೂ ಇಲ್ಲ. ಶಿವತಂದೆಯ ಮಕ್ಕಳು ತಮಗಿಂತಲೂ ಶ್ರೇಷ್ಶರನ್ನಾಗಿ ಮಾಡುತ್ತಾರೆ. ನೀವು ಪಾವನರಾಗುತ್ತೀರಿ, ತಂದೆಯ ಸಮಾನ ಸದಾ ಪಾವನರಾಗಲು ಸಾಧ್ಯವಿಲ್ಲ ಆದರೆ ಪಾವನ ದೇವತೆಗಳಾಗುತ್ತೀರಿ. ತಂದೆಯು ಜ್ಞಾನದ ಸಾಗರರಾಗಿದ್ದಾರೆ ನಾವು ಎಷ್ಟೇ ಜ್ಞಾನವನ್ನು ಕೇಳಿದರೂ ಜ್ಞಾನಸಾಗರರಾಗಲು ಸಾಧ್ಯವಿಲ್ಲ. ಅವರು ಜ್ಞಾನಸಾಗರ, ಆನಂದಸಾಗರ ಆಗಿದ್ದಾರೆ. ಮಕ್ಕಳನ್ನೂ ಸಹ ಆನಂದಮಯರನ್ನಾಗಿ ಮಾಡುತ್ತಾರೆ. ಅನ್ಯರಿಗೆ ಕೇವಲ ಹೆಸರನ್ನು ಇಡುತ್ತಾರೆ. ಈ ಸಮಯ ಪ್ರಪಂಚದಲ್ಲಿ ಭಕ್ತರ ಮಾಲೆ ಬಹಳ ದೊಡ್ಡದಾಗಿದೆ. ನಿಮ್ಮದು 16,108 ಮಣಿಗಳ ಮಾಲೆಯಾಗಿದೆ. ಭಕ್ತರು ಕೋಟಿ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ಭಕ್ತಿಯ ಮಾತಿಲ್ಲ. ಜ್ಞಾನದಿಂದಲೇ ಸದ್ಗತಿಯಾಗುತ್ತದೆ. ಈಗ ನೀವು ಭಕ್ತಿಯ ಪಂಜರದಿಂದ ದೂರವಾಗಿದ್ದೀರಿ. ಎಲ್ಲಾ ಭಕ್ತರ ಮೇಲೆ ಯಾವಾಗ ಗಲಾಟೆಯಾಗುತ್ತದೆಯೋ ಆಗ ನಾನು ಬರಬೇಕಾಗುತ್ತದೆ. ಎಲ್ಲರ ಗತಿ-ಸದ್ಗತಿಯನ್ನು ಮಾಡಬೇಕಾಗುತ್ತದೆ ಎಂದು ತಂದೆಯು ಹೇಳುತ್ತಾರೆ. ಸ್ವರ್ಗದ ದೇವತೆಗಳು ಅವಶ್ಯವಾಗಿ ಆ ರೀತಿ ಕರ್ಮವನ್ನು ಮಾಡಿರುವುದರಿಂದ ಶ್ರೇಷ್ಠ ಪದವಿಯನ್ನು ಪಡೆದುಕೊಂಡಿದ್ದಾರೆ. ಇಲ್ಲಿ ಕರ್ಮ ವಿಕರ್ಮವಾಗುತ್ತದೆ ಏಕೆಂದರೆ ಮಾಯೆಯಿದೆ ಅಲ್ಲಿ ಮಾಯೆಯಿರುವುದಿಲ್ಲ. ನೀವು ವಿಕರ್ಮಾಜೀತರಾಗುತ್ತೀರಿ, ಯಾವ ಮಕ್ಕಳು ಈಗ ಕರ್ಮ, ಅಕರ್ಮ ಮತ್ತು ವಿಕರ್ಮಗಳ ಗತಿಯನ್ನು ತಿಳಿದುಕೊಳ್ಳುತ್ತಾರೋ ಅವರೆ ವಿಕರ್ಮಾಜೀತರಾಗುತ್ತಾರೆ. ಕಲ್ಪದ ಮೊದಲು ನೀವು ಮಕ್ಕಳಿಗೆ ರಾಜಯೋಗವನ್ನು ಕಲಿಸಿಕೊಟ್ಟಿದ್ದೆ ಈಗಲೂ ಕಲಿಸುತ್ತೇನೆ. ಕಾಂಗ್ರೆಸ್ಸಿನವರು ಬ್ರಿಟಿಷರನ್ನು ತೆಗೆದುಹಾಕಿ ರಾಜರುಗಳ ರಾಜ್ಯ ಪದವಿಯನ್ನು ಕಿತ್ತುಕೊಂಡರು ಮತ್ತು ರಾಜರ ಹೆಸರನ್ನು ಮರೆಮಾಡಿದರು. 5000 ವರ್ಷದ ಮೊದಲು ರಾಜಸ್ಥಾನವಾಗಿತ್ತು, ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ದೇವತೆಗಳ ರಾಜ್ಯವಿದ್ದಾಗ ಫರಿಸ್ಥಾನವಾಗಿತ್ತು. ಅವಶ್ಯವಾಗಿ ಅವರಿಗೂ ಭಗವಂತನೇ ಬಂದು ರಾಜಯೋಗವನ್ನು ಕಲಿಸಿಕೊಟ್ಟ ಕಾರಣ ಅವರ ಹೆಸರು ಭಗವಾನ್ ಭಾಗವತೀ ಎಂದು ಹೇಳಲಾಯಿತು. ಆದರೆ ಈಗ ತಮ್ಮಲ್ಲಿ ಜ್ಞಾನವಿರುವುದರಿಂದ ಭಗವಾನ್ ಭಾಗವತಿ ಎಂದು ಹೇಳುವುದಿಲ್ಲ. ಇಲ್ಲದಿದ್ದರೆ ಹೇಗೆ ರಾಜ-ರಾಣಿಯರೋ ಹಾಗೆಯೇ ಪ್ರಜೆಗಳು ಭಗವಾನ್ ಭಾಗವತಿಯಾಗಬೇಕಿತ್ತು. ಆದರೆ ಆ ರೀತಿಯಿಲ್ಲ. ಲಕ್ಷ್ಮೀ-ನಾರಾಯಣರ ಹೆಸರು ಪ್ರಜೆಗಳು ಯಾರು ತಮ್ಮಲ್ಲಿ ಇಟ್ಟುಕೊಳ್ಳಲಾಗುವುದಿಲ್ಲ, ಕಾನೂನು ಇಲ್ಲ. ವಿದೇಶದಲ್ಲಿ ರಾಜರ ಹೆಸರನ್ನು ಯಾರೂ ತಮ್ಮ ಮೇಲೆ ಇಟ್ಟುಕೊಳ್ಳುವುದಿಲ್ಲ. ಅವರಿಗೆ ಬಹಳ ಗೌರವವನ್ನು ಕೊಡುತ್ತಾರೆ. 5000 ವರ್ಷದ ಮೊದಲು ತಂದೆಯು ಬಂದಿದ್ದರು ಎಂದು ನೀವು ಮಕ್ಕಳಿಗೆ ತಿಳಿದಿದೆ. ದೈವೀ ರಾಜಾಸ್ಥಾನವನ್ನು ಸ್ಥಾಪನೆ ಮಾಡಲು ಈಗ ತಂದೆಯು ಬಂದಿದ್ದಾರೆ. ಶಿವತಂದೆಯು ಈಗ ಬರಬೇಕು. ಅವರೇ ಪಾಂಡವ ಪತಿಯಾಗಿದ್ದಾರೆ, ಕೃಷ್ಣನಂತೂ ಅಲ್ಲ. ತಂದೆಯು ಈಗ ಮಾರ್ಗದರ್ಶಿಯಾಗಿ ಹಿಂತಿರುಗಿ ಕರೆದುಕೊಂಡು ಹೋಗಲು ಮತ್ತು ಹೊಸ ಸತ್ಯಯುಗೀ ಪ್ರಪಂಚವನ್ನು ಸ್ಥಾಪನೆ ಮಾಡಲು ಬಂದಿದ್ದಾರೆ ಅಂದಾಗ ಅವಶ್ಯವಾಗಿ ಬ್ರಹ್ಮಾತಂದೆಯ ಮುಖಾಂತರ ಬ್ರಾಹ್ಮಣರನ್ನು ರಚನೆ ಮಾಡುತ್ತಾರೆ, ಕೃಷ್ಣನಂತೂ ಅಲ್ಲ. ಮುಖ್ಯವಾಗಿ ಗೀತೆಯನ್ನು ಖಂಡನೆ ಮಾಡಿದ್ದಾರೆ. ನಾನು ಕೃಷ್ಣನಲ್ಲವೆಂದು ಈಗ ತಂದೆಯು ಹೇಳುತ್ತಾರೆ. ನನಗೆ ರುದ್ರ ಹಾಗೂ ಸೋಮನಾಥನೆಂದು ಹೇಳಬಹುದು. ನಿಮಗೆ ಜ್ಞಾನದ ಸೋಮರಸವನ್ನು ಕುಡಿಸುತ್ತಿದ್ದೇನೆ ಬಾಕಿ ಜಗಳ ಮುಂತಾದ ಯಾವುದೇ ಮಾತಿಲ್ಲ. ನಿಮಗೆ ಯೋಗಬಲದಿಂದ ರಾಜ್ಯಪದವಿಯ ಬೆಣ್ಣೆಮುದ್ದೆಯು ಸಿಗುತ್ತದೆ. ಕೃಷ್ಣನಿಗೂ ಅವಶ್ಯವಾಗಿ ಬೆಣ್ಣೆಯು ಸಿಗುತ್ತದೆ. ಇದು ಕೃಷ್ಣನ ಅಂತಿಮಜನ್ಮವಾಗಿದೆ. ಇವರಿಗೆ (ಬ್ರಹ್ಮಾ-ಸರಸ್ವತಿಗೆ) ತಂದೆಯು ಭವಿಷ್ಯದಲ್ಲಿ ಲಕ್ಷ್ಮೀ-ನಾರಾಯಣರಾಗುವ ಕರ್ಮವನ್ನು ಕಲಿಸುತ್ತಿದ್ದಾರೆ. ಈ ಲಕ್ಷ್ಮೀ-ನಾರಾಯಣರೇ ಬಾಲ್ಯದಲ್ಲಿ ರಾಧೆ-ಕೃಷ್ಣರಾಗಿದ್ದಾರೆ ಆದ್ದರಿಂದ ಲಕ್ಷ್ಮೀ-ನಾರಾಯಣರ ಜೊತೆ ರಾಧೆ-ಕೃಷ್ಣರನ್ನು ತೋರಿಸಿದ್ದಾರೆ ಬಾಕಿ ಅವರದ್ದು ಯಾವುದೇ ದೊಡ್ಡತನವಿಲ್ಲ. ಚರಿತ್ರೆಯು ಒಂದೇ ಗೀತೆ ಭಗವಂತನದ್ದಾಗಿದೆ. ಶಿವತಂದೆಯು ಮಕ್ಕಳಿಗೆ ಭಿನ್ನ-ಭಿನ್ನವಾದ ಸಾಕ್ಷಾತ್ಕಾರವನ್ನು ಮಾಡಿಸುತ್ತಾರೆ ಬಾಕಿ ಮನುಷ್ಯರದ್ದು ಯಾವುದೇ ಚರಿತ್ರೆಯಿಲ್ಲ. ಕ್ರಿಸ್ತನು ಆದಿಯಲ್ಲಿ ಬಂದು ತನ್ನ ಧರ್ಮವನ್ನು ಸ್ಥಾಪನೆ ಮಾಡಿದರು. ಎಲ್ಲರೂ ತಮ್ಮ ಪಾತ್ರವನ್ನು ಮಾಡಲೇಬೇಕು, ಇದರಲ್ಲಿ ಚರಿತ್ರೆಯ ಯಾವುದೇ ಮಾತಿಲ್ಲ. ಅವರು ಯಾರಿಗೂ ಗತಿಯನ್ನು ಕೊಡಲು ಸಾಧ್ಯವಿಲ್ಲ. ಈಗ ಬೇಹದ್ದಿನ ತಂದೆಯು ಹೇಳುತ್ತಾರೆ - ನಾನು ನೀವು ಮಕ್ಕಳ ಡಬಲ್ ಸರ್ವೀಸ್ ಮಾಡಲು ಬಂದಿದ್ದೇನೆ ಆದ್ದರಿಂದ ನೀವು ಆತ್ಮ ಮತ್ತು ಶರೀರ ಎರಡೂ ಪವಿತ್ರವಾಗುತ್ತದೆ. ಎಲ್ಲರೂ ಹಿಂತಿರುಗಿ ಮನೆಗೆ ಮುಕ್ತಿಧಾಮಕ್ಕೆ ಕರೆದುಕೊಂಡು ಹೋಗುತ್ತೇನೆ ನಂತರ ತಮ್ಮ-ತಮ್ಮ ಪಾತ್ರವನ್ನು ಅಭಿನಯಿಸಲು ಬರುತ್ತೀರಿ. ಎಷ್ಟೊಂದು ಚೆನ್ನಾಗಿ ಮಕ್ಕಳಿಗೆ ತಿಳಿಸುತ್ತಾರೆ. ಈ ಲಕ್ಷ್ಮೀ-ನಾರಾಯಣರ ಚಿತ್ರದ ಬಗ್ಗೆ ತಿಳಿಸುವುದು ಬಹಳ ಸಹಜವಾಗಿದೆ. ತ್ರಿಮೂರ್ತಿ ಮತ್ತು ಶಿವತಂದೆಯ ಚಿತ್ರವೂ ಇದೆ. ಕೆಲವರು ತ್ರಿಮೂರ್ತಿಗಳಿರಬಾರದು ಎಂದು ಹೇಳುತ್ತಾರೆ, ಕೆಲವರು ಕೃಷ್ಣನ ಚಿತ್ರದಲ್ಲಿ 84 ಜನ್ಮಗಳ ಕಥೆ ಇರಬಾರದೆಂದು ಹೇಳುತ್ತಾರೆ. ಮನುಷ್ಯರು ಕೇಳುತ್ತಾರೆ - ಕೃಷ್ಣನು 84 ಜನ್ಮಗಳನ್ನು ತೆಗೆದುಕೊಂಡು ಪತಿತನಾಗುತ್ತಾನೆ ಅಂದಾಗ ಗಾಬರಿಯಾಗುತ್ತದೆ. ನಾವು ಸಿದ್ಧ ಮಾಡಿ ತಿಳಿಸುತ್ತೇವೆ, ಅವಶ್ಯವಾಗಿ ಮೊದಲನೆಯ ನಂಬರಿನವರು ಶ್ರೀಕೃಷ್ಣನಿಗೂ ಎಲ್ಲರಿಗಿಂತ ಹೆಚ್ಚು ಜನ್ಮವನ್ನು ತೆಗೆದುಕೊಳ್ಳುತ್ತಾರೆ. ಹೊಸ ಹೊಸ ವಿಚಾರಗಳು ಪ್ರತಿನಿತ್ಯ ಬರುತ್ತವೆ ಆದರೆ ಧಾರಣೆಯೂ ಸಹ ಆಗಬೇಕು. ಎಲ್ಲದಕ್ಕಿಂತ ಸಹಜ ಲಕ್ಷ್ಮೀ-ನಾರಾಯಣರ ಚಿತ್ರವನ್ನು ತಿಳಿಸುವುದಾಗಿದೆ. ಮನುಷ್ಯರು ಯಾವುದೇ ಚಿತ್ರದ ಅರ್ಥವನ್ನು ತಿಳಿದುಕೊಳ್ಳುವುದಿಲ್ಲ. ಉಲ್ಟಾ-ಸುಲ್ಟಾ ಚಿತ್ರವನ್ನು ಮಾಡುತ್ತಾರೆ. ನಾರಾಯಣನಿಗೆ 2 ಭುಜಗಳಿದ್ದಾಗ ಲಕ್ಷ್ಮಿಗೆ 4 ಭುಜಗಳನ್ನು ತೋರಿಸುತ್ತಾರೆ. ಸತ್ಯಯುಗದಲ್ಲಿ ಅಷ್ಟೊಂದು ಭುಜಗಳಿರುವುದಿಲ್ಲ. ಸೂಕ್ಷ್ಮವತನದಲ್ಲಿದ್ದಾಗ ಬ್ರಹ್ಮಾ, ವಿಷ್ಣು, ಶಂಕರಿರುತ್ತಾರೆ ಅವರಿಗೂ ಸಹ ಅಷ್ಟು ಭುಜಗಳಿರುವುದಿಲ್ಲ. ಮೂಲವತನದಲ್ಲಿ ನಿರಾಕಾರಿ ಆತ್ಮಗಳಿರುತ್ತಾರೆ ನಂತರ ಈ 8-10 ಭುಜಗಳಿರುವಂತಹವರು ಎಲ್ಲಿ ವಾಸ ಮಾಡುತ್ತಾರೆ. ಮನುಷ್ಯ ಸೃಷ್ಟಿಯಲ್ಲಿ ಮೊದಮೊದಲು ಲಕ್ಷ್ಮೀ-ನಾರಾಯಣರಿರುತ್ತಾರೆ, ಅವರಿಗೆ 2 ಭುಜಗಳಿರುತ್ತವೆ ಆದರೆ ಅವರಿಗೆ 4 ಭುಜಗಳನ್ನು ಕೊಟ್ಟಿದ್ದಾರೆ. ನಾರಾಯಣನನ್ನು ಕಪ್ಪು ಲಕ್ಷ್ಮಿಯನ್ನು ಸುಂದರವಾಗಿ ತೋರಿಸುತ್ತಾರೆ ಅಂದಾಗ ಅವರ ಮಕ್ಕಳು ಹೇಗೆ ಮತ್ತು ಎಷ್ಟು ಭುಜವುಳ್ಳಂತಹವರಾಗಿರುತ್ತಾರೆ? ಮಕ್ಕಳಿಗೆ 4 ಭುಜ, ಹೆಣ್ಣು ಮಗುವಿಗೆ 2 ಭುಜವಿರುತ್ತದೆಯೇನು? ಈ ರೀತಿ ಪ್ರಶ್ನೆಗಳು ಬರುತ್ತವೆ. ಶಿವಬಾಬಾ ಮುರುಳಿಯನ್ನು ತಿಳಿಸುತ್ತಿದ್ದಾರೆಂದು ನೀವು ಮಕ್ಕಳಿಗೆ ತಿಳಿಸಲಾಗಿದೆ. ಕೆಲವು ಬಾರಿ ಈ ಬ್ರಹ್ಮನೂ ತಿಳಿಸುತ್ತಾರೆ - ನಾನು ಮಾರ್ಗದರ್ಶಿಯಾಗಿ ಬಂದಿದ್ದೇನೆಂದು ಶಿವತಂದೆಯು ಹೇಳುತ್ತಾರೆ. ಈ ಬ್ರಹ್ಮನು ನನ್ನ ದೊಡ್ಡ ಮಗನಾಗಿದ್ದಾನೆ. ತ್ರಿಮೂರ್ತಿ ಬ್ರಹ್ಮ ಎಂದು ಹೇಳುತ್ತಾರೆ, ತ್ರಿಮೂರ್ತಿ ಶಂಕರ, ತ್ರಿಮೂರ್ತಿ ವಿಷ್ಣು ಎಂದು ಹೇಳುವುದಿಲ್ಲ. ಮಹದೇವನೆಂದು ಶಂಕರನಿಗೆ ಹೇಳಲಾಗುತ್ತದೆ. ನಂತರ ತ್ರಿಮೂರ್ತಿ ಬ್ರಹ್ಮನೆಂದು ಏಕೆ ಹೇಳುತ್ತಾರೆ? ಇವರು ಪ್ರಜೆಯನ್ನು ರಚನೆ ಮಾಡುತ್ತಾರೆ ಆದ್ದರಿಂದ ಇವರಿಗೆ ಪತ್ನಿಯಾಗಿದ್ದಾರೆ. ಶಂಕರ ಹಾಗೂ ವಿಷ್ಣುವಿಗೆ ಪತ್ನಿ ಎಂದು ಹೇಳುವುದಿಲ್ಲ. ಇದು ಬಹಳ ಅದ್ಭುತವಾದ ತಿಳಿದುಕೊಳ್ಳುವ ಮಾತಾಗಿದೆ. ಇಲ್ಲಿ ಕೇವಲ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಬೇಕು ಅದರಲ್ಲಿ ಶ್ರಮವಿದೆ. ಈಗ ನೀವು ಎಷ್ಟೊಂದು ಬುದ್ಧಿವಂತರಾಗಿದ್ದೀರಿ. ಬೇಹದ್ದಿನ ತಂದೆಯ ಮುಖಾಂತರ ನೀವು ಬೇಹದ್ದಿನ ಮಾಲೀಕರಾಗುತ್ತೀರಿ. ಈ ಭೂಮಿ, ಆಕಾಶ ಎಲ್ಲವೂ ನಿಮ್ಮದಾಗುತ್ತದೆ. ಬ್ರಹ್ಮಾಂಡವೂ ನಿಮ್ಮದಾಗುತ್ತದೆ. ಸರ್ವಶಕ್ತಿವಂತನ ರಾಜ್ಯವಿರುತ್ತದೆ. ಒಂದೇ ಸರ್ಕಾರವಿರುತ್ತದೆ. ಯಾವಾಗ ಸೂರ್ಯವಂಶೀ ಸರ್ಕಾರವಿರುತ್ತದೆಯೋ ಆಗ ಚಂದ್ರವಂಶಿಯಿರುವುದಿಲ್ಲ ನಂತರ ಚಂದ್ರವಂಶಿಗಳಿದ್ದಾಗ ಸೂರ್ಯವಂಶಿಗಳಿರುವುದಿಲ್ಲ. ಅದು ಕಳೆದುಹೋಯಿತು. ನಾಟಕ ತಿರುಗುಮರುಗು ಆಗಿದೆ. ಇದು ಬಹಳ ಅದ್ಭುತವಾದ ಮಾತಾಗಿದೆ. ನೀವು ಮಕ್ಕಳಿಗೆ ಎಷ್ಟೊಂದು ಖುಷಿಯ ನಶೆಯು ಏರಬೇಕಾಗಿದೆ. ಬೇಹದ್ದಿನ ತಂದೆಯಿಂದ ನಾವು ಅವಶ್ಯವಾಗಿ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಆಪತ್ತಿನಲ್ಲಿ ಎಷ್ಟೊಂದು ನೆನಪು ಮಾಡುತ್ತಾರೆ. ಈ ಬೇಹದ್ದಿನ ರಾಜ್ಯಪದವಿಯನ್ನು ಕೊಡುವಂತಹವರು ಪತಿಯರಿಗಿಂತ ಪತಿಯಾಗಿದ್ದಾರೆ. ಇವರನ್ನು ಎಷ್ಟೊಂದು ನೆನಪು ಮಾಡಬೇಕಾಗಿದೆ. ಎಷ್ಟು ದೊಡ್ಡ ಪ್ರಾಪ್ತಿಯಾಗುತ್ತದೆ. ಅಲ್ಲಿ ನೀವು ಯಾರಿಂದಲೂ ಎಂದೂ ಭಿಕ್ಷೆ ಬೇಡುವುದಿಲ್ಲ. ಬೇಹದ್ದಿನ ತಂದೆ ಭಾರತದ ಜೋಳಿಗೆಯನ್ನು ತುಂಬಿಸುತ್ತಿದ್ದಾರೆ. ಲಕ್ಷ್ಮೀ ನಾರಾಯಣರ ರಾಜ್ಯವನ್ನು ಚಿನ್ನದ ಯುಗವೆಂದು ಹೇಳಲಾಗುತ್ತದೆ. ಈಗ ಕಬ್ಬಿಣದ ಯುಗವಾಗಿದೆ. ಎಷ್ಟೊಂದು ಅಂತರವಿದೆ ನೋಡಿ. ನಾನು ಮಕ್ಕಳಿಗೆ ರಾಜಯೋಗವನ್ನು ಕಲಿಸುತ್ತಿದ್ದೇನೆಂದು ತಂದೆಯು ಹೇಳುತ್ತಿದ್ದಾರೆ. ನೀವೇ ದೇವಿ-ದೇವತೆಗಳಾಗುತ್ತೀರಿ ನಂತರ ಕ್ಷತ್ರಿಯ, ವೈಶ್ಯ, ಶೂದ್ರರಾದಿರಿ ಈಗ ಪುನಃ ಬ್ರಾಹ್ಮಣರಾಗಿದ್ದೀರಿ ನಂತರ ದೇವತೆಗಳಾಗುತ್ತೀರಿ. ಈ 84 ಜನ್ಮವನ್ನು ನೀವು ನೆನಪು ಮಾಡುತ್ತೀರಿ. ಚಿತ್ರಗಳ ಬಗ್ಗೆ ತಿಳಿಸುವುದು ಬಹಳ ಸಹಜವಾಗಿದೆ. ಯಾವಾಗ ದೇವಿ-ದೇವತೆಗಳ ರಾಜ್ಯವಿತ್ತು ಆಗ ಬೇರೆ ಯಾವುದೇ ರಾಜ್ಯವಿರಲಿಲ್ಲ ಒಂದೇ ರಾಜ್ಯವಿತ್ತು. ಬಹಳ ಕಡಿಮೆ ಇದ್ದರು. ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ, ಅಲ್ಲಿ ಪವಿತ್ರತೆಯಿತ್ತು, ಸುಖ-ಶಾಂತಿಯಿತ್ತು. ನಂತರ ಪುನರ್ಜನ್ಮ ತೆಗೆದುಕೊಳ್ಳುತ್ತಾ ಕೆಳಗೆ ಬರುತ್ತಾರೆ. 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಅವರೇ ತಮೋಪ್ರಧಾನರಾಗುತ್ತಾರೆ ನಂತರ ಸತೋಪ್ರಧಾನರಾಗಬೇಕು. ಅವಶ್ಯವಾಗಿ ಕಲಿಸುವಂತಹವರು ಬೇಕಲ್ಲವೇ. ತಂದೆಯ ವಿನಃ ಯಾರೂ ಕಲಿಸಲು ಸಾಧ್ಯವಿಲ್ಲ. ಶಿವತಂದೆಯು ಇವರ ಬಹಳ ಜನ್ಮಗಳ ಅಂತ್ಯದಲ್ಲಿ ಪ್ರವೇಶ ಮಾಡುತ್ತಾರೆ ಎನ್ನುವುದು ನಿಮಗೆ ತಿಳಿದಿದೆ. ಎಷ್ಟೊಂದು ಸ್ವಚ್ಛವಾಗಿ ತಿಳಿಸುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಒಬ್ಬ ತಂದೆಯಿಂದಲೇ ಸರ್ವ ಆತ್ಮೀಯ ಸಂಬಂಧವನ್ನು ಇಟ್ಟುಕೊಳ್ಳಬೇಕಾಗಿದೆ. ಸರ್ವೀಸೆಬಲ್ ಮಕ್ಕಳಿಗೆ ಗೌರವ ಕೊಡಬೇಕಾಗಿದೆ. ತಮ್ಮ ಸಮಾನ ಮಾಡಿಕೊಳ್ಳುವ ಸೇವೆಯನ್ನು ಮಾಡಬೇಕಾಗಿದೆ.

2. ಬೇಹದ್ದಿನ ತಂದೆಯ ಮುಖಾಂತರ ಬೇಹದ್ದಿನ ವಿಶ್ವದ ರಾಜ್ಯಭಾಗ್ಯ ಸಿಗುತ್ತಿದೆ. ಭೂಮಿ, ಆಕಾಶ, ಎಲ್ಲದರ ಮೇಲೆ ನಮಗೆ ಅಧಿಕಾರವಿದೆ. ಈ ನಶೆ ಖುಷಿಯಲ್ಲಿರಬೇಕಾಗಿದೆ. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಬೇಕಾಗಿದೆ.

ವರದಾನ:
ಬಾಲಕ ಮತ್ತು ಮಾಲೀಕತ್ವದ ಸಮತೋಲನದಿಂದ ಪುರುಷಾರ್ಥ ಮತ್ತು ಸೇವೆಯಲ್ಲಿ ಸದಾ ಸಫಲತಾಮೂರ್ತಿ ಭವ

ಸದಾ ಈ ನಶೆಯನ್ನಿಟ್ಟುಕೊಳ್ಳಿರಿ- ಬೇಹದ್ದಿನ ತಂದೆ ಮತ್ತು ಬೇಹದ್ದಿನ ಆಸ್ತಿಯ ಬಾಲಕನಿಂದ ಮಾಲೀಕನಾಗಿದ್ದೇನೆ ಆದರೆ ಯಾವಾಗ ಯಾವುದೇ ಸಲಹೆಯನ್ನು ಕೊಡಬೇಕು, ಯೋಜನೆಯನ್ನು ಯೋಚಿಸಬೇಕು, ಕಾರ್ಯವನ್ನು ಮಾಡಬೇಕೆಂದರೆ, ಮಾಲೀಕನಾಗಿದ್ದು ಮಾಡಿರಿ ಮತ್ತು ಯಾವಾಗ ಮೆಜಾರಿಟಿಯ ಮೂಲಕ ಅಥವಾ ನಿಮಿತ್ತನಾಗಿರುವ ಆತ್ಮರ ಮೂಲಕ ಯಾವುದೇ ಮಾತು ಫೈನಲ್ ಆಗಿಬಿಡುತ್ತದೆ, ಆ ಸಮಯದಲ್ಲಿ ತಾವು ಬಾಲಕರಾಗಿಬಿಡಿ. ಯಾವಸಮಯದಲ್ಲಿ ರಾಯ್ ಬಹದ್ದೂರ್ ಆಗಬೇಕು, ಯಾವ ಸಮಯದಲ್ಲಿ ರಾಯ್(ಸಲಹೆ)ನ್ನು ಒಪ್ಪಿಕೊಳ್ಳುವವರು ಆಗಬೇಕು- ಈ ವಿಧಿಯನ್ನು ಕಲಿತುಬಿಡಿ, ಆಗ ಪುರುಷಾರ್ಥದ ಮತ್ತು ಸೇವೆಯೆರಡರಲ್ಲಿಯೂ ಸಫಲರಾಗುತ್ತೀರಿ.

ಸ್ಲೋಗನ್:
ನಿಮಿತ್ತ ಮತ್ತು ನಿರ್ಮಾಣಚಿತ್ತರಾಗುವುದಕ್ಕಾಗಿ ಮನಸ್ಸು ಮತ್ತು ಬುದ್ಧಿಯನ್ನು ಪ್ರಭುವಿಗೆ ಅರ್ಪಣೆ ಮಾಡಿಬಿಡಿ.