05.03.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನೀವು ವಿದ್ಯೆಯನ್ನೆಂದೂ ತಪ್ಪಿಸಬಾರದು, ವಿದ್ಯೆಯಿಂದಲೇ ವಿದ್ಯಾರ್ಥಿ ವೇತನ ಸಿಗುತ್ತದೆ, ಆದ್ದರಿಂದ ತಂದೆಯ ಮೂಲಕ ಯಾವ ಜ್ಞಾನ ಸಿಗುತ್ತದೆಯೋ ಅದನ್ನು ಗ್ರಹಿಸಬೇಕು.

ಪ್ರಶ್ನೆ:
ಯೋಗ್ಯ ಬ್ರಾಹ್ಮಣರೆಂದು ಯಾರಿಗೆ ಹೇಳುತ್ತಾರೆ? ಅವರ ಲಕ್ಷಣಗಳನ್ನು ತಿಳಿಸಿ.

ಉತ್ತರ:
1. ಯಾರ ಮುಖದಲ್ಲಿ ತಂದೆಯ ಗೀತಾ ಜ್ಞಾನವು ಕಂಠಪಾಠವಾಗಿರುತ್ತದೆಯೋ ಅವರೇ ಯೋಗ್ಯ ಬ್ರಾಹ್ಮಣರು. 2. ಅವರು ಅನೇಕರನ್ನು ತನ್ನ ಸಮಾನ ಮಾಡಿಕೊಳ್ಳುತ್ತಾರೆ. 3. ಅನೇಕರಿಗೆ ಜ್ಞಾನ ಧನದ ದಾನ-ಪುಣ್ಯ ಮಾಡುತ್ತಾರೆ. 4. ಎಂದೂ ಪರಸ್ಪರ ಒಬ್ಬರು ಇನ್ನೊಬ್ಬರ ಮತ-ಭೇದದಲ್ಲಿ ಬರುವುದಿಲ್ಲ. 5. ಯಾವುದೇ ದೇಹಧಾರಿಗಳೊಂದಿಗೆ ಬುದ್ಧಿಯು ಸಿಕ್ಕಿಹಾಕಿಕೊಂಡಿರುವುದಿಲ್ಲ. 6. ಬ್ರಾಹ್ಮಣ ಅರ್ಥಾತ್ ಅವರಲ್ಲಿ ಯಾವುದೇ ಭೂತವಿರುವುದಿಲ್ಲ, ದೇಹದ ಅಹಂಕಾರವನ್ನು ಬಿಟ್ಟು ಆತ್ಮಾಭಿಮಾನಿಯಾಗಿರುವ ಪುರುಷಾರ್ಥ ಮಾಡುತ್ತಾರೆ.

ಓಂ ಶಾಂತಿ.
ತಂದೆಯು ತಮ್ಮ ಮತ್ತು ಸೃಷ್ಟಿ ಚಕ್ರದ ಪರಿಚಯವನ್ನಂತೂ ಕೊಟ್ಟಿದ್ದಾರೆ. ಇದಂತೂ ಮಕ್ಕಳ ಬುದ್ಧಿಯಲ್ಲಿ ಕುಳಿತು ಬಿಟ್ಟಿದೆ - ಸೃಷ್ಟಿ ಚಕ್ರವು ಚಾಚೂ ತಪ್ಪದೆ ಪುನರಾವರ್ತನೆಯಾಗುತ್ತದೆ. ಹೇಗೆ ನಾಟಕವನ್ನು ರಚಿಸುತ್ತಾರೆ, ಯಾವ ಮಾದರಿಯಾಗಿ ಮಾಡುತ್ತಾರೆಯೋ ಅದೇ ಪುನರಾವರ್ತನೆಯಾಗುತ್ತದೆ. ನೀವು ಮಕ್ಕಳ ಬುದ್ಧಿಯಲ್ಲಿ ಈ ಚಕ್ರವು ತಿರುಗಬೇಕು. ನಿಮ್ಮ ಹೆಸರೇ ಆಗಿದೆ - ಸ್ವದರ್ಶನ ಚಕ್ರಧಾರಿ, ಆದ್ದರಿಂದ ಬುದ್ಧಿಯಲ್ಲಿ ಚಕ್ರವು ಸುತ್ತಬೇಕು. ತಂದೆಯ ಮೂಲಕ ಯಾವ ಜ್ಞಾನವು ಸಿಗುತ್ತದೆಯೋ ಅದನ್ನು ಗ್ರಹಿಸಬೇಕು. ಈ ರೀತಿ ಗ್ರಹಣ ಮಾಡಬೇಕು ಅಂತ್ಯದಲ್ಲಿ ತಂದೆ ಮತ್ತು ರಚನೆಯ ಆದಿ-ಮಧ್ಯಅಂತ್ಯದ ನೆನಪೇ ಇರಬೇಕು. ಮಕ್ಕಳು ಬಹಳ ಚೆನ್ನಾಗಿ ಪುರುಷಾರ್ಥ ಮಾಡಬೇಕು. ಇದು ವಿದ್ಯೆಯಾಗಿದೆ, ಶಿಕ್ಷಣವಾಗಿದೆ. ಈ ಶಿಕ್ಷಣವನ್ನು ನೀವು ಬ್ರಾಹ್ಮಣರ ವಿನಃ ಬೇರೆ ಯಾರೂ ತಿಳಿದುಕೊಂಡಿಲ್ಲ. ವರ್ಣಗಳ ಅಂತರವಂತೂ ಇದೆಯಲ್ಲವೆ. ನಾವೆಲ್ಲರೂ ಸೇರಿ ಒಂದಾಗಬೇಕು. ಮನುಷ್ಯರು ತಿಳಿಯುತ್ತಾರೆ - ಈಗ ಇಡೀ ಪ್ರಪಂಚವಂತೂ ಒಂದಾಗಲು ಸಾಧ್ಯವಿಲ್ಲ. ಇಲ್ಲಿ ಇಡೀ ವಿಶ್ವದಲ್ಲಿ ಒಂದು ರಾಜ್ಯ, ಒಂದು ಧರ್ಮ, ಒಂದು ಭಾಷೆ ಇರಬೇಕು ಆದರೆ ಅದು ಸತ್ಯಯುಗದಲ್ಲಿತ್ತು. ಇಡೀ ವಿಶ್ವವೇ ಒಂದು ರಾಜಧಾನಿಯಾಗಿತ್ತು. ಅದರ ಮಾಲೀಕರು ಈ ಲಕ್ಷ್ಮೀ-ನಾರಾಯಣರಾಗಿದ್ದರು ಅಂದಾಗ ನೀವು ಇದನ್ನು ತಿಳಿಸಬೇಕು - ವಿಶ್ವದಲ್ಲಿ ಶಾಂತಿಯ ರಾಜ್ಯ ಇದಾಗಿದೆ, ಇದು ಕೇವಲ ಭಾರತದ ಮಾತೇ ಆಗಿದೆ. ಯಾವಾಗ ಇವರ ರಾಜ್ಯವಿರುತ್ತದೆಯೋ ಆಗ ಇಡೀ ವಿಶ್ವದಲ್ಲಿ ಸಂಪೂರ್ಣ ಶಾಂತಿಯಿರುತ್ತದೆ. ಇದನ್ನು ನಿಮ್ಮ ವಿನಃ ಮತ್ತ್ಯಾರೂ ತಿಳಿದುಕೊಂಡಿಲ್ಲ. ಎಲ್ಲರೂ ಭಕ್ತರಾಗಿದ್ದಾರೆ, ಇದರ ವ್ಯತ್ಯಾಸವನ್ನೂ ನೀವು ನೋಡುತ್ತೀರಿ. ಭಕ್ತಿಯೇ ಬೇರೆ, ಜ್ಞಾನವೇ ಬೇರೆಯಾಗಿದೆ. ಭಕ್ತಿ ಮಾಡದೇ ಇದ್ದರೆ ಯಾವುದೇ ಭೂತ-ಪ್ರೇತಗಳು ತಿಂದು ಬಿಡುತ್ತದೆ ಎಂದಲ್ಲ. ಅದು ಸಾಧ್ಯವೇ ಇಲ್ಲ. ತಾವಂತೂ ತಂದೆಯ ಮಕ್ಕಳಾಗಿದ್ದೀರಿ, ನಿಮ್ಮಲ್ಲಿ ಯಾವ ಭೂತಗಳಿವೆಯೋ ಅವೆಲ್ಲವೂ ಹೊರಟು ಹೋಗಬೇಕು. ಮೊದಲ ನಂಬರಿನ ಭೂತವು ದೇಹದ ಅಹಂಕಾರವಾಗಿದೆ. ಇದನ್ನು ತೆಗೆಯುವುದಕ್ಕಾಗಿಯೇ ತಂದೆಯು ದೇಹೀ-ಅಭಿಮಾನಿಗಳನ್ನಾಗಿ ಮಾಡುತ್ತಿರುತ್ತಾರೆ. ತಂದೆಯನ್ನು ನೆನಪು ಮಾಡುವುದರಿಂದ ಯಾವುದೇ ಭೂತವು ಸನ್ಮುಖದಲ್ಲಿ ಬರುವುದಿಲ್ಲ. 21 ಜನ್ಮಗಳಿಗಾಗಿ ಯಾವುದೇ ಭೂತವು ಬರುವುದಿಲ್ಲ. ಈ ಪಂಚ ಭೂತಗಳು ರಾವಣನ ಸಂಪ್ರದಾಯವಾಗಿದೆ. ರಾವಣ ರಾಜ್ಯವೆಂದು ಹೇಳುತ್ತಾರೆ. ರಾಮ ರಾಜ್ಯವೇ ಬೇರೆ, ರಾವಣ ರಾಜ್ಯವೇ ಬೇರೆಯಾಗಿದೆ. ರಾವಣ ರಾಜ್ಯದಲ್ಲಿ ಭ್ರಷ್ಟಾಚಾರಿಗಳು, ರಾಮ ರಾಜ್ಯದಲ್ಲಿ ಶ್ರೇಷ್ಠಾಚಾರಿಗಳು ಇರುತ್ತಾರೆ. ಇದರ ವ್ಯತ್ಯಾಸವೂ ಸಹ ನೀವು ಮಕ್ಕಳ ಹೊರತು ಬೇರೆ ಯಾರಿಗೂ ಗೊತ್ತಿಲ್ಲ. ನಿಮ್ಮಲ್ಲಿಯೂ ಯಾರು ಬುದ್ಧಿವಂತ ಮಕ್ಕಳಿದ್ದಾರೆಯೋ ಅವರೇ ಇದನ್ನು ಚೆನ್ನಾಗಿ ಅರಿತುಕೊಳ್ಳುತ್ತಾರೆ ಏಕೆಂದರೆ ಮಾಯಾ ಬೆಕ್ಕು ಕಡಿಮೆಯೇನಿಲ್ಲ. ಕೆಲಕೆಲವರು ವಿದ್ಯೆಯನ್ನೇ ಬಿಟ್ಟು ಬಿಡುತ್ತಾರೆ, ಸೇವಾಕೇಂದ್ರಕ್ಕೂ ಹೋಗುವುದಿಲ್ಲ, ದೈವೀ ಗುಣಗಳನ್ನೂ ಧಾರಣೆ ಮಾಡುವುದಿಲ್ಲ, ಕಣ್ಣುಗಳು ಮೋಸ ಮಾಡುತ್ತವೆ. ಯಾವುದೇ ಒಳ್ಳೆಯ ಪದಾರ್ಥವನ್ನು ನೋಡಿದರೆ ತಿಂದು ಬಿಡುತ್ತಾರೆ. ಆದ್ದರಿಂದ ಈಗ ತಂದೆಯೂ ತಿಳಿಸುತ್ತಾರೆ - ಮಕ್ಕಳೇ, ನೀವು ಮಕ್ಕಳ ಗುರಿ-ಧ್ಯೇಯವು ಇದಾಗಿದೆ (ಲಕ್ಷ್ಮೀ-ನಾರಾಯಣ) ನೀವು ಈ ರೀತಿ ಆಗಬೇಕಾಗಿದೆ - ದೈವೀ ಗುಣಗಳನ್ನೂ ಧಾರಣೆ ಮಾಡಬೇಕಾಗಿದೆ. ಯಥಾ ರಾಜ-ರಾಣಿ ತಥಾ ಪ್ರಜಾ ಎಲ್ಲರಲ್ಲಿಯೂ ದೈವೀ ಗುಣಗಳಿರುತ್ತವೆ. ಅಲ್ಲಿ ಆಸುರೀ ಗುಣಗಳಿರುವುದಿಲ್ಲ, ಅಸುರರು ಇರುವುದೇ ಇಲ್ಲ. ಈ ಮಾತುಗಳನ್ನು ನೀವು ಬ್ರಹ್ಮಾಕುಮಾರ-ಕುಮಾರಿಯರ ಹೊರತು ಬೇರೆ ಯಾರೂ ತಿಳಿದುಕೊಂಡಿಲ್ಲ. ನಿಮಗೆ ಶುದ್ಧ ಅಹಂಕಾರವಿದೆ. ನೀವು ಆಸ್ತಿಕರಾಗುತ್ತಿದ್ದೀರಿ ಏಕೆಂದರೆ ಮಧುರಾತಿ ಮಧುರ ಆತ್ಮಿಕ ತಂದೆಗೆ ಮಕ್ಕಳಾಗಿದ್ದೀರಿ. ಇದೂ ಸಹ ಗೊತ್ತಿದೆ ಯಾವುದೇ ದೇಹಧಾರಿಗಳೆಂದೂ ರಾಜಯೋಗದ ಜ್ಞಾನ ಮತ್ತು ನೆನಪಿನ ಯಾತ್ರೆಯನ್ನು ಕಲಿಸಲು ಸಾಧ್ಯವಿಲ್ಲ. ಒಬ್ಬ ತಂದೆಯೇ ಕಲಿಸುತ್ತಾರೆ. ನೀವು ಕಲಿತು ಮತ್ತೆ ಅನ್ಯರಿಗೆ ಕಲಿಸುತ್ತೀರಿ. ನಿಮ್ಮನ್ನು ಕೇಳುತ್ತಾರೆ - ನಿಮಗೆ ಇದನ್ನು ಕಲಿಸಿದವರು ಯಾರು? ನಿಮ್ಮ ಗುರು ಯಾರು? ಏಕೆಂದರೆ ಶಿಕ್ಷಕರು ಆಧ್ಯಾತ್ಮಿಕ ಮಾತುಗಳನ್ನು ತಿಳಿಸುವುದಿಲ್ಲ. ಇದನ್ನು ಗುರುಗಳೇ ಕಲಿಸುತ್ತಾರೆ. ಮಕ್ಕಳಿಗೆ ಗೊತ್ತಿದೆ, ನಮಗೆ ಗುರುಗಳಿಲ್ಲ ಆದರೆ ಸದ್ಗುರು ಇದ್ದಾರೆ ಅವರನ್ನು ಪರಮಾತ್ಮನೆಂದು ಹೇಳಲಾಗುತ್ತದೆ. ನಾಟಕದನುಸಾರ ಸದ್ಗುರು ತಾವೇ ಬಂದು ಪರಿಚಯ ಕೊಡುತ್ತಾರೆ ಮತ್ತು ಏನೆಲ್ಲವನ್ನೂ ತಿಳಿಸುತ್ತಾರೆಯೋ ಅದೆಲ್ಲವೂ ಸತ್ಯವನ್ನೇ ತಿಳಿಸುತ್ತಾರೆ ಮತ್ತು ಸತ್ಯ ಖಂಡದಲ್ಲಿ ಕರೆದುಕೊಂಡು ಹೋಗುತ್ತಾರೆ. ಒಬ್ಬರೇ ಸತ್ಯವಾಗಿದ್ದಾರೆ ಆದ್ದರಿಂದ ಮತ್ತ್ಯಾವುದೇ ದೇಹಧಾರಿಗಳನ್ನು ನೆನಪು ಮಾಡುವುದು ಸುಳ್ಳಾಗಿದೆ. ಇಲ್ಲಂತೂ ನೀವು ಒಬ್ಬ ತಂದೆಯನ್ನೇ ನೆನಪು ಮಾಡಬೇಕು. ಹೇಗೆ ಎಲ್ಲಾ ಆತ್ಮಗಳೂ ಜ್ಯೋತಿ ಬಿ೦ದುವಾಗಿದ್ದಾರೆ ಹಾಗೆಯೇ ತಂದೆಯೂ ಜ್ಯೋತಿ ಬಿ೦ದು ಆಗಿದ್ದಾರೆ. ಆದರೆ ಪ್ರತಿಯೊಂದು ಆತ್ಮನ ಸಂಸ್ಕಾರ, ಕರ್ಮ ಬೇರೆ-ಬೇರೆ ಆಗಿದೆ. ಒಂದೇ ತರಹದ ಸಂಸ್ಕಾರವಿರಲು ಸಾಧ್ಯವಿಲ್ಲ. ಒಂದು ವೇಳೆ ಒಂದೇ ತರಹದ ಸಂಸ್ಕಾರವಿದ್ದರೆ ಎಲ್ಲರ ಮುಖ ಲಕ್ಷಣಗಳು ಒಂದೇ ರೀತಿಯಿರಬೇಕು. ಆದರೆ ಒಂದೇ ರೀತಿಯ ಮುಖ ಲಕ್ಷಣಗಳಿರಲು ಸಾಧ್ಯವಿಲ್ಲ. ಅವಶ್ಯವಾಗಿ ಸ್ವಲ್ಪ ವ್ಯತ್ಯಾಸವಂತೂ ಇದ್ದೇ ಇದೆ. ಈ ನಾಟಕವಂತೂ ಒಂದೇ ಆಗಿದೆ, ಸೃಷ್ಟಿಯೂ ಒಂದೇ ಆಗಿದೆ ಅನೇಕ ಇಲ್ಲ ಆದರೆ ಮನುಷ್ಯರು ಮೇಲೆ ಮತ್ತು ಕೆಳಗೆ ಪ್ರಪಂಚವಿದೆ, ಮೇಲೆ ನಕ್ಷತ್ರಗಳಲ್ಲಿಯೂ ಪ್ರಪಂಚವಿದೆ ಎಂದು ಸುಳ್ಳು ಹೇಳುತ್ತಿರುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಇದನ್ನು ಯಾರು ತಿಳಿಸಿದರು? ಆಗ ಶಾಸ್ತ್ರಗಳ ಹೆಸರನ್ನು ತೆಗೆದುಕೊಳ್ಳುತ್ತಾರೆ. ಶಾಸ್ತ್ರಗಳನ್ನು ಅವಶ್ಯವಾಗಿ ಯಾರಾದರೂ ಮನುಷ್ಯರೇ ಬರೆದಿರುತ್ತಾರೆ. ನಿಮಗಂತೂ ಗೊತ್ತಿದೆ, ಇದಂತೂ ಮಾಡಿ ಮಾಡಲ್ಪಟ್ಟ ನಾಟಕವಾಗಿದೆ. ಕ್ಷಣ-ಪ್ರತಿ ಕ್ಷಣ ಇಡೀ ಪ್ರಪಂಚದ ಯಾವ ಪಾತ್ರವು ನಡೆಯುತ್ತದೆಯೋ ಇದೂ ಮಾಡಿ-ಮಾಡಲ್ಪಟ್ಟ ಆಟವಾಗಿದೆ. ಈ ಚಕ್ರವು ಹೇಗೆ ತಿರುಗುತ್ತದೆ, ಎಲ್ಲಾ ಮನುಷ್ಯ ಮಾತ್ರರೂ ಹೇಗೆ ಪಾತ್ರವನ್ನು ಅಭಿನಯಿಸುತ್ತಾರೆ? ಇದೆಲ್ಲವೂ ನೀವು ಮಕ್ಕಳ ಬುದ್ಧಿಯಲ್ಲಿ ಬಂದು ಬಿಟ್ಟಿದೆ. ತಂದೆಯು ಈಗಾಗಲೇ ತಿಳಿಸಿದ್ದಾರೆ, ಸತ್ಯಯುಗದಲ್ಲಿ ಕೇವಲ ನಿಮ್ಮದೇ ಪಾತ್ರವಿರುತ್ತದೆ. ನಂಬರ್ವಾರ್ ಆಗಿ ಪಾತ್ರವನ್ನಭಿನಯಿಸಲು ಬರುತ್ತೀರಿ. ತಂದೆಯು ಬಹಳ ಚೆನ್ನಾಗಿ ತಿಳಿಸುತ್ತಾರೆ ಅಂದಾಗ ತಾವು ಮಕ್ಕಳು ಮತ್ತೆ ಅನ್ಯರಿಗೆ ತಿಳಿಸಬೇಕಾಗುತ್ತದೆ. ದೊಡ್ಡ-ದೊಡ್ಡ ಸೇವಾಕೇಂದ್ರಗಳು ತೆರೆಯುತ್ತಾ ಹೋಗುತ್ತವೆ ಅಂದಾಗ ಅಲ್ಲಿಗೆ ದೊಡ್ಡ-ದೊಡ್ಡ ವ್ಯಕ್ತಿಗಳು ಬರುತ್ತಾರೆ, ಬಡವರೂ ಬರುತ್ತಾರೆ. ಬಹಳ ಅಂದರೆ ಬಡವರ ಬುದ್ಧಿಯಲ್ಲಿಯೇ ಜ್ಞಾನವು ಬೇಗನೆ ಕುಳಿತು ಬಿಡುತ್ತದೆ. ಹಿರಿಯ ವ್ಯಕ್ತಿಗಳು ಭಲೇ ಬರುತ್ತಾರೆ ಆದರೆ ಏನಾದರೂ ಕೆಲಸವಿತ್ತೆಂದರೆ ನಮಗೆ ಬಿಡುವಿಲ್ಲವೆಂದು ಹೇಳುತ್ತಾರೆ. ನಾವು ಚೆನ್ನಾಗಿ ಓದುತ್ತೇವೆ ಎಂದು ಪ್ರತಿಜ್ಞೆ ಮಾಡುತ್ತಾರೆ ಆದರೆ ಮತ್ತೆ ಒಂದು ವೇಳೆ ಓದಲಿಲ್ಲವೆಂದರೆ ಪೆಟ್ಟು ಬೀಳುತ್ತದೆ. ಮಾಯೆಯು ಇನ್ನೂ ತನ್ನ ಕಡೆ ಎಳೆಯುತ್ತದೆ. ಅನೇಕ ಮಕ್ಕಳು ಇದರಿಂದ ಓದುವುದನ್ನೇ ನಿಲ್ಲಿಸಿ ಬಿಡುತ್ತಾರೆ, ವಿದ್ಯಾಭ್ಯಾಸದಲ್ಲಿಯೂ ತಪ್ಪಿಸಿಕೊಳ್ಳುತ್ತಿರುತ್ತಾರೆ ಅಂದರೆ ಅವಶ್ಯವಾಗಿ ಅನುತ್ತೀರ್ಣರಾಗಿ ಬಿಡುತ್ತಾರೆ. ಶಾಲೆಯಲ್ಲಿ ಯಾರು ಒಳ್ಳೊಳ್ಳೆಯ ಮಕ್ಕಳಿರುತ್ತಾರೆ ಅವರು ಎಂದೂ ಸಹ ಮದುವೆ, ಅಲ್ಲಿ-ಇಲ್ಲಿ ಹೋಗುವ ರಜೆ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ನಾವು ಚೆನ್ನಾಗಿ ಓದಿ ವಿದ್ಯಾರ್ಥಿ ವೇತನವನ್ನು ಪಡೆಯಬೇಕೆಂದು ಬುದ್ಧಿಯಲ್ಲಿರುತ್ತದೆ ಆದ್ದರಿಂದ ಓದುತ್ತಾರೆ. ವಿದ್ಯೆಯನ್ನು ತಪ್ಪಿಸುವ ವಿಚಾರ ಮಾಡುವುದಿಲ್ಲ ಅವರಿಗೆ ವಿದ್ಯಾಭ್ಯಾಸದ ವಿನಃ ಬೇರೇನೂ ಪ್ರಿಯವಾಗುವುದೇ ಇಲ್ಲ. ಅದರಿಂದ ಅವರು ವ್ಯರ್ಥವಾಗಿ ಸಮಯವು ಕಳೆಯುತ್ತದೆ ಎಂದು ತಿಳಿಯುತ್ತಾರೆ. ಇಲ್ಲಿ ಒಬ್ಬರೇ ಶಿಕ್ಷಕರು ಓದಿಸುವವರಾಗಿದ್ದಾರೆ ಅಂದಮೇಲೆ ಎಂದೂ ವಿದ್ಯೆಯನ್ನು ತಪ್ಪಿಸಬಾರದು. ಇದರಲ್ಲಿಯೂ ನಂಬರ್ವಾರ್ ಪುರುಷಾರ್ಥದನುಸಾರವಾಗಿದ್ದಾಗ ನೋಡುತ್ತಾರೆ, ಇವರು ಚೆನ್ನಾಗಿ ಓದುತ್ತಾರೆಂದರೆ ಓದಿಸುವವರಿಗೂ ಅವರನ್ನು ನೋಡಿ ಇಷ್ಟವಾಗುತ್ತದೆ, ಶಿಕ್ಷಕರ ಹೆಸರೂ ಪ್ರಸಿದ್ಧವಾಗುತ್ತದೆ. ಅವರ ಗ್ರೇಡ್ ಹೆಚ್ಚಾಗುತ್ತದೆ, ಶ್ರೇಷ್ಠ ಪದವಿ ಸಿಗುತ್ತದೆ. ಇಲ್ಲಿಯೂ ಸಹ ಮಕ್ಕಳು ಯಾರೆಷ್ಟು ಓದುತ್ತಾರೆಯೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಕೆಲವರು ಓದಿ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ, ಇನ್ನೂ ಕೆಲವರು ಕಡಿಮೆ. ಎಲ್ಲದರ ಆಧಾರವು ಒಂದೇ ರೀತಿಯಿರುವುದಿಲ್ಲ. ಬುದ್ಧಿಯ ಮೇಲೆ ಆಧಾರಿತವಾಗಿದೆ. ಅಲ್ಲಂತೂ ಮನುಷ್ಯರು ಮನುಷ್ಯರಿಗೆ ಓದಿಸುತ್ತಾರೆ ಆದರೆ ನಿಮಗೆ ತಿಳಿದಿದೆ - ಬೇಹದ್ದಿನ ತಂದೆಯು ನಮಗೆ ಓದಿಸುತ್ತಾರೆಂದ ಮೇಲೆ ಬಹಳ ಚೆನ್ನಾಗಿ ಓದಬೇಕು. ಇದರಲ್ಲಿ ಹುಡುಗಾಟಿಕೆ ಮಾಡಬಾರದು, ವಿದ್ಯೆಯನ್ನು ಬಿಡಬಾರದು. ಉಲ್ಟಾ-ಸುಲ್ಟಾ ಮಾತುಗಳನ್ನು ತಿಳಿಸಿ ಪರಸ್ಪರ ಶತ್ರುಗಳೂ ಆಗಿ ಬಿಡುತ್ತಾರೆ. ಪರಮತದಂತೆ ನಡೆಯಬಾರದು ಶ್ರೀಮತಕ್ಕಾಗಿ ಯಾರು ಏನೇ ಹೇಳಲಿ ಆದರೆ ನಿಮಗೆ ನಿಶ್ಚಯವಿದೆ - ನಮಗೆ ತಂದೆಯು ಓದಿಸುತ್ತಾರೆ ಅಂದಮೇಲೆ ನಾವು ವಿದ್ಯೆಯನ್ನು ಬಿಡಬಾರದು. ಮಕ್ಕಳು ನಂಬರ್ವಾರ್ ಇದ್ದಾರೆ, ತಂದೆಯಂತೂ ಮೊದಲನೇ ನಂಬರಿನವರಾಗಿದ್ದಾರೆ. ಈ ಶಿವ ತಂದೆಯಿಂದಲೇ ಓದಬೇಕಾಗಿದೆ. ಶಿವ ತಂದೆಯಿಂದಲೇ ಸಂಪಾದನೆಯನ್ನೂ ಮಾಡಿಕೊಳ್ಳಬೇಕಾಗಿದೆ, ಕೆಲವರು ಉಲ್ಟಾ-ಸುಲ್ಟಾ ಮಾತುಗಳನ್ನು ತಿಳಿಸಿ. ಅನ್ಯರ ಮುಖವನ್ನು ತಿರುಗಿಸಿ ಬಿಡುತ್ತಾರೆ. ಈ ಬ್ಯಾಂಕ್ ಶಿವ ತಂದೆಯದಾಗಿದೆ. ತಿಳಿದುಕೊಳ್ಳಿ, ಯಾರಾದರೂ ಹೊರಗಡೆ ಸತ್ಸಂಗವನ್ನು ಪ್ರಾರಂಭಿಸುತ್ತಾರೆ, ನಾವು ಶಿವ ತಂದೆಯ ಬ್ಯಾಂಕಿನಲ್ಲಿ ಜಮಾ ಮಾಡಬೇಕು ಅಂದಮೇಲೆ ಹೇಗೆ ಮಾಡುವುದು ಎಂದು ಕೇಳುತ್ತಾರೆ. ಮಕ್ಕಳು ಯಾರು ಬರುತ್ತಾರೆಯೋ ಅವರು ಶಿವ ತಂದೆಯ ಭಂಡಾರದಲ್ಲಿ ಹಾಕುತ್ತಾರೆ. ಒಂದು ಪೈಸೆ ಕೊಟ್ಟರೂ ಸಹ ಅದಕ್ಕೆ ನೂರು ಪಟ್ಟು ಪ್ರತಿಫಲವು ಸಿಗುತ್ತದೆ. ಶಿವ ತಂದೆಯು ತಿಳಿಸುತ್ತಾರೆ - ನಿಮಗೆ ಇದಕ್ಕೆ ಬದಲಾಗಿ ಮಹಲುಗಳು ಸಿಗುತ್ತದೆ. ಈ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ, ಧನವಂತರು ಒಳ್ಳೊಳ್ಳೆಯ ಕುಟುಂಬದಿಂದ ಅನೇಕರು ಬರುತ್ತಾರೆ. ಆದರೆ ಶಿವ ತಂದೆಯ ಭಂಡಾರದಿಂದ ನಮ್ಮ ಪಾಲನೆಯಾಗುವುದಿಲ್ಲ ಎಂದು ಯಾರೂ ಹೇಳುವುದಿಲ್ಲ. ಎಲ್ಲರ ಪಾಲನೆಯಾಗುತ್ತದೆ. ಕೆಲವರು ಸಾಹುಕಾರರಿದ್ದಾರೆ, ಇನ್ನೂ ಕೆಲವರು ಬಡವರಿದ್ದಾರೆ. ಸಾಹುಕಾರರಿಂದ ಬಡವರ ಪಾಲನೆಯಾಗುತ್ತದೆ ಆದರೆ ಯೋಗ್ಯರೂ ಆಗಿರಬೇಕು, ಆರೋಗ್ಯವಂತರೂ ಆಗಿರಬೇಕು, ಜ್ಞಾನವನ್ನೂ ಕೊಡುವಂತಿರಬೇಕು. ನಂಬರ್ವಾರ್ ಅಂತೂ ಇರುತ್ತಾರೆ, ಎಲ್ಲರೂ ತಮ್ಮ ಪುರುಷಾರ್ಥವನ್ನು ಮಾಡುತ್ತಿರುತ್ತಾರೆ. ಕೆಲವರು ಒಳ್ಳೆಯ ಪುರುಷಾರ್ಥ ಮಾಡುತ್ತಾ-ಮಾಡುತ್ತಾ ಗೈರು ಹಾಜರಿಯಾಗುತ್ತಾರೆ. ಕಾರಣ-ಅಕಾರಣದಿಂದ ಬರುವುದನ್ನೇ ಬಿಟ್ಟು ಬಿಡುತ್ತಾರೆ ಮತ್ತೆ ಆರೋಗ್ಯವೂ ಸಹ ಹಾಳಾಗಿ ಬಿಡುತ್ತದೆ. ಸದಾ ಆರೋಗ್ಯವಂತರನ್ನಾಗಿ ಮಾಡಲು ಇದೆಲ್ಲವನ್ನೂ ಕಲಿಸಲಾಗುತ್ತದೆ. ಯಾರಿಗೆ ಆಸಕ್ತಿಯಿದೆಯೋ ಅವರು ನೆನಪಿನಿಂದಲೇ ನಮ್ಮ ಪಾಪಗಳು ತುಂಡಾಗುತ್ತವೆ ಎಂದು ತಿಳಿಯುತ್ತಾರೆ ಮತ್ತು ಬಹಳ ಚೆನ್ನಾಗಿ ಪುರುಷಾರ್ಥವನ್ನು ಮಾಡುತ್ತಾರೆ, ಇನ್ನೂ ಕೆಲವರು ಹಾಗೆಯೇ ಸುಮ್ಮನೆ ಸಮಯವನ್ನು ಕಳೆಯುತ್ತಿರುತ್ತಾರೆ ಅಂದಾಗ ತಮ್ಮ ತಮ್ಮ ಪರಿಶೀಲನೆ ಮಾಡಿಕೊಳ್ಳಬೇಕು. ತಂದೆಯು ತಿಳಿಸುತ್ತಾರೆ ಹುಡುಗಾಟಿಕೆ ಮಾಡುತ್ತೀರೆಂದರೆ ಯಾರಿಗೂ ಓದಿಸಲು ಇವರಿಂದಾಗುವುದಿಲ್ಲ ಎಂದು ತಿಳಿದು ಬಿಡುತ್ತದೆ. ತಂದೆಯು ತಿಳಿಸುತ್ತಾರೆ - 7 ದಿನಗಳಲ್ಲಿ ನೀವು ಯೋಗ್ಯ ಬ್ರಾಹ್ಮಣ- ಬ್ರಾಹ್ಮಣಿಯಾಗಿ ಬಿಡಬೇಕು. ಕೇವಲ ಹೆಸರಿಗೆ ಮಾತ್ರವಲ್ಲ, ಯಾರ ಮುಖದಲ್ಲಿ ತಂದೆಯ ಗೀತಾ ಜ್ಞಾನವು ಕಂಠಪಾಠವಾಗಿರುತ್ತದೆಯೋ ಅವರೇ ಬ್ರಾಹ್ಮಣ-ಬ್ರಾಹ್ಮಣಿಯಾಗಿದ್ದಾರೆ. ಬ್ರಾಹ್ಮಣರಲ್ಲಿಯೂ ನಂಬರ್ವಾರಂತೂ ಇದ್ದೇ ಇರುತ್ತಾರೆ. ಇಲ್ಲಿಯೂ ಹಾಗೆಯೇ ಇರುತ್ತಾರೆ ಅಂದಮೇಲೆ ವಿದ್ಯೆಯ ಮೇಲೆ ಗಮನವಿಲ್ಲವೆಂದರೆ ಏನಾಗುತ್ತದೆ! ಪ್ರತಿಯೊಬ್ಬರೂ ತಮ್ಮ ಪುರುಷಾರ್ಥವನ್ನು ಮಾಡಬೇಕು, ಸರ್ವೀಸಿನ ಪ್ರತ್ಯಕ್ಷ ಪ್ರಮಾಣವನ್ನು ಕೊಡಬೇಕು ಆಗಲೇ ಇವರು ಇಂತಹ ಪದವಿಯನ್ನು ಪಡೆಯುವರೆಂದು ಅರ್ಥವಾಗುತ್ತದೆ. ನಂತರ ಅದೇ ಕಲ್ಪ-ಕಲ್ಪಾಂತರಕ್ಕಾಗಿ ನಿಗಧಿಯಾಗಿ ಬಿಡುತ್ತದೆ. ಓದುವುದಿಲ್ಲ ಓದಿಸಲಿಲ್ಲವೆಂದರೆ ತಿಳಿಯಬೇಕು - ನಾನೇ ಪೂರ್ಣವಾಗಿ ಓದಲಿಲ್ಲ ಆದ್ದರಿಂದಲೇ ಓದಿಸಲು ಆಗುತ್ತಿಲ್ಲ. ತಂದೆಯು ಹೇಳುತ್ತಾರೆ - ಮಕ್ಕಳೇ, ನೀವು ಅನ್ಯರಿಗೆ ಓದಿಸುವಷ್ಟು ಯೋಗ್ಯರು ಏಕೆ ಆಗುವುದಿಲ್ಲ! ಎಲ್ಲಿಯವರೆಗೆ ಬ್ರಾಹ್ಮಣಿಯರನ್ನು ಕಳುಹಿಸುವುದು. ತಮ್ಮ ಸಮಾನರನ್ನಾಗಿ ಮಾಡಿಕೊಂಡಿಲ್ಲವೆ! ಯಾರು ಬಹಳ ಚೆನ್ನಾಗಿ ಓದುತ್ತಾರೆಯೋ ಅವರಿಗೆ ಸಹಯೋಗವನ್ನು ಕೊಡಬೇಕು, ಅನೇಕರಿಗೆ ಪರಸ್ಪರ ಮತಭೇದವಿರುತ್ತದೆ. ಒಬ್ಬರು ಇನ್ನೊಬ್ಬರಲ್ಲಿ ಸಿಕ್ಕಿಕೊಂಡು ವಿದ್ಯೆಯನ್ನೇ ಬಿಟ್ಟು ಬಿಡುತ್ತಾರೆ. ಯಾರು ಮಾಡುತ್ತಾರೆಯೋ ಅವರೇ ಪಡೆಯುತ್ತಾರೆ. ಒಬ್ಬರು ಇನ್ನೊಬ್ಬರ ಮಾತಿನಲ್ಲಿ ಬಂದು ನೀವು ವಿದ್ಯೆಯನ್ನೇಕೆ ಬಿಟ್ಟು ಬಿಡುತ್ತೀರಿ? ಇದೂ ಸಹ ಡ್ರಾಮಾ. ಅದೃಷ್ಟದಲ್ಲಿಲ್ಲ. ದಿನ-ಪ್ರತಿದಿನ ವಿದ್ಯೆಯು ಮುಂದುವರೆಯುತ್ತಾ ಹೋಗುತ್ತದೆ. ಸೇವಾ ಕೇಂದ್ರಗಳು ತೆರೆಯುತ್ತಾ ಇರುತ್ತವೆ. ಇದು ಶಿವ ತಂದೆಯ ಖರ್ಚಲ್ಲ ಎಲ್ಲವೂ ಮಕ್ಕಳ ಖರ್ಚು ಆಗಿದೆ. ಈ ದಾನವು ಎಲ್ಲದಕ್ಕಿಂತ ಒಳ್ಳೆಯದಾಗಿದೆ. ಹೇಗೆ ಆ ದಾನದಿಂದ ಅಲ್ಪಕಾಲದ ಸುಖ ಸಿಗುತ್ತದೆ ಹಾಗೆಯೇ ಇದರಿಂದ 21 ಜನ್ಮಗಳ ಪ್ರಾಪ್ತಿಯು ಸಿಗುತ್ತದೆ. ನಿಮಗೆ ಗೊತ್ತಿದೆ, ನಾವು ನರನಿಂದ ನಾರಾಯಣರಾಗಲು ಇಲ್ಲಿಗೆ ಬಂದಿದ್ದೇವೆ. ಅಂದಾಗ ಯಾರು ಚೆನ್ನಾಗಿ ಓದುತ್ತಾರೆಯೋ ಅವರನ್ನು ಅನುಸರಿಸಿ. ಎಷ್ಟು ನಿಯಮಿತವಾಗಿ ಓದಬೇಕು! ಅನೇಕರು ದೇಹಾಭಿಮಾನದಲ್ಲಿ ಬಂದು ತಮ್ಮ ಅದೃಷ್ಟದೊಂದಿಗೆ ಮುನಿಸಿಕೊಳ್ಳುತ್ತಾರೆ ಆದ್ದರಿಂದ ಮೆಜಾರಿಟಿ ಮಾತೆಯರದಾಗಿದೆ. ಮಾತೆಯರ ಹೆಸರು ಪ್ರಸಿದ್ಧವಾಗಿದೆ, ನಾಟಕದಲ್ಲಿ ಮಾತೆಯರ ಉನ್ನತಿಯೂ ನಿಗಧಿಯಾಗಿದೆ. ಅಂದಮೇಲೆ ತಂದೆಯು ಮಧುರಾತಿ ಮಧುರ ಮಕ್ಕಳಿಗೆ ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ನನ್ನೊಬ್ಬನನ್ನೆ ನೆನಪು ಮಾಡಿ, ಆತ್ಮಾಭಿಮಾನಿಯಾಗಿ. ಶರೀರ ಇಲ್ಲವೆಂದರೆ ಅನ್ಯರದನ್ನು ಹೇಗೆ ಕೇಳುತ್ತೀರಿ! ಆದ್ದರಿಂದ ಇದನ್ನು ಪಕ್ಕಾ ಅಭ್ಯಾಸ ಮಾಡಿ - ನಾವು ಆತ್ಮರಾಗಿದ್ದೇವೆ, ಈಗ ನಾವು ಹಿಂತಿರುಗಿ ಹೋಗಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಇದೆಲ್ಲವನ್ನೂ ತ್ಯಾಗ ಮಾಡಿ, ತಂದೆಯನ್ನು ನೆನಪು ಮಾಡಿ. ಇದರ ಮೇಲೆಯೇ ಎಲ್ಲವೂ ಆಧಾರವಾಗಿದೆ. ಉದ್ಯೋಗ ವ್ಯವಹಾರಗಳನ್ನು ಭಲೇ ಮಾಡುತ್ತಾ ಇರಿ. 8 ಗಂಟೆ ವ್ಯವಹಾರ, 8 ಗಂಟೆ ವಿಶ್ರಾಂತಿ ಇನ್ನುಳಿದ 8 ಗಂಟೆಗಳಲ್ಲಿ ಈ ಸರ್ಕಾರದ ಸೇವೆ ಮಾಡಿ. ಇದೂ ಸಹ ನನ್ನ ಸೇವೆಯಲ್ಲ. ನೀವು ಇಡೀ ವಿಶ್ವದ ಸೇವೆ ಮಾಡುತ್ತೀರಿ, ಇದಕ್ಕಾಗಿ ಸಮಯವನ್ನು ತೆಗೆಯಿರಿ. ಮುಖ್ಯವಾದುದು ನೆನಪಿನ ಯಾತ್ರೆಯಾಗಿದೆ. ಆದ್ದರಿಂದ ಸಮಯವನ್ನು ವ್ಯರ್ಥವಾಗಿ ಕಳೆಯಬಾರದು. ಆ ಸರ್ಕಾರದ ಸರ್ವೀಸನ್ನು 8 ಗಂಟೆಗಳ ಕಾಲ ಮಾಡುತ್ತೀರಿ. ಅದರಿಂದೇನು ಸಿಗುತ್ತದೆ! 2000, 5000... ಆದರೆ ಈ ಸರ್ಕಾರದ ಸೇವೆ ಮಾಡುತ್ತೀರೆಂದರೆ ನೀವು ಪದಮಾಪದಮಪತಿ ಆಗುತ್ತೀರಿ ಅಂದಮೇಲೆ ಎಷ್ಟು ಪ್ರೀತಿಯಿಂದ ಸೇವೆ ಮಾಡಬೇಕು. ಅಷ್ಟರತ್ನಗಳಾಗಿದ್ದಾರೆಂದರೆ ಅವಶ್ಯವಾಗಿ ಅವರು 8 ಗಂಟೆಗಳ ಕಾಲ ತಂದೆಯನ್ನು ನೆನಪು ಮಾಡಿರುವರು. ಭಕ್ತಿ ಮಾರ್ಗದಲ್ಲಿ ಬಹಳ ನೆನಪು ಮಾಡುತ್ತಾರೆ, ಸಮಯವನ್ನು ಕಳೆಯುತ್ತಾರೆ ಆದರೆ ಸಿಗುವುದೇನೂ ಇಲ್ಲ. ಗಂಗಾ ಸ್ನಾನ, ಜಪ-ತಪ ಮೊದಲಾದವುಗಳನ್ನು ಮಾಡುವುದರಿಂದ ತಂದೆಯಿಂದ ಆಸ್ತಿಯನ್ನು ಪಡೆಯಲು ತಂದೆಯೇ ಸಿಗುವುದಿಲ್ಲ. ಇಲ್ಲಂತೂ ನಿಮಗೆ ತಂದೆಯಿಂದ ಆಸ್ತಿಯು ಸಿಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
1. ಶ್ರೀ ಮತವನ್ನು ಬಿಟ್ಟು ಎಂದೂ ಪರಮತದಂತೆ ನಡೆಯಬಾರದು. ಉಲ್ಟಾ-ಸುಲ್ಟಾ ಮಾತುಗಳಲ್ಲಿ ವಿದ್ಯೆಯೊಂದಿಗೆ ಮುಖ ತಿರುಗಿಸಿಕೊಳ್ಳಬಾರದು. ಮತಭೇದದಲ್ಲಿ ಬರಬಾರದು.

2. ತಮ್ಮನ್ನು ಪರಿಶೀಲನೆ ಮಾಡಿಕೊಳ್ಳಬೇಕು - ನಾವು ಎಂದೂ ತಪ್ಪುಗಳನ್ನು ಮಾಡುವುದಿಲ್ಲವೇ? ವಿದ್ಯೆಯ ಮೇಲೆ ಪೂರ್ಣ ಗಮನವಿದೆಯೇ? ಸಮಯವಂತೂ ವ್ಯರ್ಥವಾಗಿ ಕಳೆಯುತ್ತಿಲ್ಲವೆ? ಆತ್ಮಾಭಿಮಾನಿ ಆಗಿದ್ದೇನೆಯೇ? ಆತ್ಮಿಕ ಸೇವೆಯನ್ನು ಹೃದಯಪೂರ್ವಕವಾಗಿ ಮಾಡುತ್ತಿದ್ದೇನೆಯೇ?

ವರದಾನ:
ಹಳೆಯ ಸಂಸ್ಕಾರ ಮತ್ತು ಸಂಸಾರದ ಸಂಬಂಧಗಳ ಆಕರ್ಷಣೆಯಿಂದ ಮುಕ್ತರಾಗಿರುವಂತಹ ಡಬಲ್ ಲೈಟ್ ಫರಿಶ್ತಾ ಭವ.

ಫರಿಶ್ತಾ ಎಂದರೇನೆ ಹಳೆಯ ಸಂಸಾರದ ಆಕರ್ಷಣೆಗಳಿಂದ ಮುಕ್ತ, ಸಂಬಂಧಗಳ ರೂಪದಲ್ಲಿಯೂ ಆಕರ್ಷಣೆ ಇಲ್ಲ. ದೇಹ ಅಥವಾ ಯಾವುದೇ ದೇಹಧಾರಿ ವ್ಯಕ್ತಿ ಅಥವಾ ವಸ್ತುಗಳ ಕಡೆಯೂ ಆಕರ್ಷಣೆ ಇಲ್ಲ, ಅದೇ ರೀತಿ ಹಳೆಯ ಸಂಸ್ಕಾರಗಳ ಆಕರ್ಷಣೆಯಿಂದಲೂ ಮುಕ್ತ - ಸಂಕಲ್ಪ, ವೃತ್ತಿ ಅಥವಾ ವಾಣಿಯ ರೂಪದಲ್ಲಿ ಯಾವುದೇ ಸಂಸ್ಕಾರದ ಆಕರ್ಷಣೆ ಇಲ್ಲ. ಯಾವಾಗ ಈ ರೀತಿ ಸರ್ವ ಆಕರ್ಷಣೆಗಳಿಂದ ಅಥವಾ ವ್ಯರ್ಥ ಸಮಯ, ವ್ಯರ್ಥ ಸಂಗ, ವ್ಯರ್ಥ ವಾತಾವರಣದಿಂದ ಮುಕ್ತರಾಗುವಿರಿ ಆಗ ಹೇಳಲಾಗುವುದು ಡಬಲ್ ಲೈಟ್ ಫರಿಶ್ತಾ.

ಸ್ಲೋಗನ್:
ಶಾಂತಿಯ ಶಕ್ತಿಯ ಮೂಲಕ ಸರ್ವ ಆತ್ಮಗಳ ಪಾಲನೆ ಮಾಡುವಂತಹವರೆ ಆತ್ಮೀಯ ಸಮಾಜ ಸೇವಕರಾಗಿದ್ದಾರೆ.