05.05.22         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನೀವು ತಂದೆಯ ಶ್ರೀಮತದ ಮೇಲೆ ನಡೆಯುತ್ತೀರೆಂದರೆ ನಿಮಗೆ ಯಾರೂ ದುಃಖವನ್ನು ಕೊಡಲು ಸಾಧ್ಯವಿಲ್ಲ, ದುಃಖ-ಕಷ್ಟ ಕೊಡುವವನು ರಾವಣನಾಗಿದ್ದಾನೆ, ಇವರು ನಿಮ್ಮ ರಾಜ್ಯದಲ್ಲಿ ಇರುವುದೇ ಇಲ್ಲ

ಪ್ರಶ್ನೆ:
ಈ ಜ್ಞಾನ ಯಜ್ಞದಲ್ಲಿ ನೀವು ಮಕ್ಕಳು ಯಾವ ಆಹುತಿಯನ್ನು ಮಾಡುವಿರಿ?

ಉತ್ತರ:
ಈ ಜ್ಞಾನ ಯಜ್ಞದಲ್ಲಿ ನೀವು ಯಾವುದೇ ಎಳ್ಳು, ಎಣ್ಣೆಯ ಆಹುತಿಯನ್ನು ಕೊಡುವುದಿಲ್ಲ, ಇದರಲ್ಲಿ ನೀವು ದೇಹ ಸಹಿತ ಏನೆಲ್ಲಾ ಇದೆ ಅದೆಲ್ಲವನ್ನೂ ಆಹುತಿ ಕೊಡಬೇಕಾಗಿದೆ ಅರ್ಥಾತ್ ಬುದ್ಧಿಯಿಂದ ಎಲ್ಲವನ್ನು ಮರೆಯಬೇಕಾಗಿದೆ. ಈ ಯಜ್ಞವನ್ನು ಪವಿತ್ರರಾಗಿರುವಂತಹ ಬ್ರಾಹ್ಮಣರೇ ಸಂಭಾಲನೆ ಮಾಡಲು ಸಾಧ್ಯ. ಯಾರು ಪವಿತ್ರ ಬ್ರಾಹ್ಮಣರಾಗುತ್ತಾರೆ ಅವರೇ ಬ್ರಾಹ್ಮಣ ಸೋ ದೇವತೆ ಆಗುತ್ತಾರೆ.

ಗೀತೆ:
ನಿಮ್ಮನ್ನು ಪಡೆದ ನಾವು ಇಡೀ ಜಗತ್ತನ್ನೇ ಪಡೆದೆವು...

ಓಂ ಶಾಂತಿ.
ಮಕ್ಕಳು ತಂದೆಯ ಹತ್ತಿರ ಬಂದಿದ್ದಾರೆ. ಯಾವಾಗ ಮಕ್ಕಳು ತಂದೆಯನ್ನು ಅರಿತುಕೊಳ್ಳುತ್ತಾರೆ, ಆಗಲೇ ತಂದೆಯ ಹತ್ತಿರ ಬರುತ್ತಾರೆ. ತಂದೆಯನ್ನು ಅರಿತಿಲ್ಲವೆಂದರೆ ಹತ್ತಿರ ಬರಲು ಸಾಧ್ಯವಿಲ್ಲ. ಮಕ್ಕಳು ತಿಳಿದುಕೊಂಡಿದ್ದೇವೆ ನಾವು ನಿರಾಕಾರಿ ಬೇಹದ್ದಿನ ತಂದೆಯ ಹತ್ತಿರ ಹೋಗುತ್ತೇವೆ. ಅವರ ಹೆಸರೇ ಶಿವಬಾಬಾ ಆಗಿದೆ. ಅವರಿಗೆ ತಮ್ಮ ಶರೀರವಿಲ್ಲ. ಆದ್ದರಿಂದ ಅವರಿಗೆ ಯಾರೂ ಶತ್ರು ಆಗಲು ಸಾಧ್ಯವಿಲ್ಲ. ಇಲ್ಲಂತು ತುಂಬಾ ಶತ್ರುಗಳು ಆಗುತ್ತಾರೆ. ಅವರು ರಾಜರನ್ನೂ ಸಹ ಸಾಯಿಸಿ ಬಿಡುತ್ತಾರೆ. ಅದೇ ರೀತಿ ಗಾಂಧೀಜಿಯನ್ನೂ ಸಾಯಿಸಿದರು ಏಕೆಂದರೆ ಅವರಿಗೆ ತಮ್ಮ ಶರೀರವಿತ್ತು. ಶಿವ ತಂದೆಗಂತು ತನ್ನ ಶರೀರವಿಲ್ಲ, ಆ ಕಾರಣ ಒಂದುವೇಳೆ ನನ್ನನ್ನು ಸಾಯಿಸಲು ಇಚ್ಚಿಸಿದರೆ ಅವರು ನಾನು ಯಾರಲ್ಲಿ ಪ್ರವೇಶ ಮಾಡುತ್ತೇನೆಯೋ ಅವರನ್ನೇ ಸಾಯಿಸಲು ಬರುತ್ತಾರೆ. ಆತ್ಮವನ್ನು ಯಾರೂ ತುಂಡರಿಸಲು ಸಾಧ್ಯವಿಲ್ಲ. ನನ್ನನ್ನು ಯಾರು ಯಥಾರ್ಥ ರೀತಿಯಲ್ಲಿ ಅರ್ಥ ಮಾಡಿಕೊಳ್ಳುತ್ತಾರೆ. ಅವರಿಗೇನೇ ರಾಜ್ಯಭಾಗ್ಯವನ್ನು ಕೊಡುತ್ತೇನೆ. ಆ ರಾಜ್ಯಭಾಗ್ಯವನ್ನು ಯಾರೂ ಸುಡಲು ಸಾಧ್ಯವಿಲ್ಲ. ಯಾವುದೇ ಪರಿಸ್ಥಿತಿಯಲ್ಲಿ ಅದನ್ನು ನೀರಿನಲ್ಲಿ ಮುಳುಗಿಸಲೂ ಸಾಧ್ಯವಿಲ್ಲ.

ನೀವು ಮಕ್ಕಳು ತಂದೆಯನ್ನು ಅವಿನಾಶಿ ರಾಜಧಾನಿಯ ಆಸ್ತಿಯನ್ನು ಪಡೆಯಲು ಬಂದಿದ್ದೀರಿ. ನಿಮಗೆ ಯಾವುದೇ ದುಃಖ ಅಥವಾ ಕಷ್ಟವನ್ನು ಕೊಡುವುದಿಲ್ಲ. ಸತ್ಯಯುಗದಲ್ಲಿ ಕಷ್ಟ ಕೊಡುವವರು ಯಾರೂ ಇರುವುದಿಲ್ಲ. ಕಷ್ಟವನ್ನು ಕೊಡುವವರು ರಾವಣ ಆಗಿದ್ದಾರೆ. ರಾವಣನಿಗೆ ಹತ್ತು ತಲೆಗಳನ್ನು ತೋರಿಸುತ್ತಾರೆ. ಕೇವಲ ರಾವಣನ್ನು ತೋರಿಸುತ್ತಾರೆ. ಮಂಡೋದರಿಯನ್ನು ತೋರಿಸುವುದಿಲ್ಲ. ಕೇವಲ ಹೆಸರನ್ನಷ್ಟೆ ಇಟ್ಟಿದ್ದಾರೆ-ರಾವಣನಿಗೆ ಪತ್ನಿ ಇದ್ದರೆಂದು ಆದ್ದರಿಂದ ಈ ರಾವಣ ರಾಜ್ಯದಲ್ಲಿ ನಿಮಗೆ ಕಷ್ಟವಾಗಬಹುದು ಆದರೆ ಅಲ್ಲಿ ರಾವಣನಿರುವುದೇ ಇಲ್ಲ. ತಂದೆಯಂತು ನಿರಾಕಾರನಾಗಿರುವ ಕಾರಣ ಅವರನ್ನು ಯಾರೂ ಹೊಡೆಯಲು ಸಾಧ್ಯವಿಲ್ಲ. ಅಂತಹ ತಂದೆಯು ನಿಮ್ಮನ್ನೂ ಸಹ ಶರೀರವಿದ್ದರೂ ಯಾವುದೇ ದುಃಖವಿಲ್ಲದಂತೆ ಮಾಡುತ್ತಾರೆ ಆದ್ದರಿಂದ ಇಂತಹ ತಂದೆಯ ಮತದ ಮೇಲೆ ನಡೆಯಬೇಕಾಗಿದೆ. ತಂದೆ ಜ್ಞಾನ ಸಾಗರ ಆಗಿದ್ದಾರೆ ಮತ್ತ್ಯಾರೂ ಈ ಜ್ಞಾನವನ್ನು ಕೊಡಲು ಸಾಧ್ಯವಿಲ್ಲ. ಬ್ರಹ್ಮನ ಮುಖಾಂತರ ತಂದೆಯು ಎಲ್ಲಾ ಶಾಸ್ತ್ರಗಳ ಸಾರವನ್ನು ತಿಳಿಸಿಕೊಡುತ್ತಾರೆ. ಬ್ರಹ್ಮ ಶಿವ ಬಾಬಾನ ಮಗನಾಗಿದ್ದಾರೆ. ಈ ರೀತಿ ಅಲ್ಲ - ವಿಷ್ಣುವಿನ ನಾಭಿಯಿಂದ ಬ್ರಹ್ಮಾ ಬಂದರು. ಒಂದುವೇಳೆ ಇಲ್ಲಿ ನಾಭಿಯಿಂದ ಬಂದದ್ದೇ ಆದರೆ ನೀವೂ ಸಹ ಶಿವನ ನಾಭಿಯಿಂದ ಬಂದಿರಿ ಎಂದು ಹೇಳಬೇಕಾಗುತ್ತದೆ. ಆದರೆ ಈ ಚಿತ್ರಗಳೆಲ್ಲವೂ ತಪ್ಪಾಗಿದೆ. ಒಬ್ಬ ತಂದೆಯೇ ಸತ್ಯ ಆಗಿದ್ದಾರೆ. ಆದರೆ ರಾವಣನ ನಮ್ಮನ್ನು ಅಸತ್ಯವನ್ನಾಗಿ ಮಾಡಿ ಬಿಡುತ್ತಾನೆ. ಇದು ಆಟವಾಗಿದೆ. ಈ ಆಟವನ್ನು ನೀವೇ ತಿಳಿದುಕೊಂಡಿದ್ದೀರಿ - ಯಾವಾಗಿನಿಂದ ರಾವಣ ರಾಜ್ಯ ಶುರುವಾಯಿತು, ಹೇಗೆ ಮನುಷ್ಯರು ಕೆಳಗಿಳಿಯುತ್ತಾ-ಇಳಿಯುತ್ತಾ ಬಿದ್ದೇ ಹೋದರು, ಮೇಲೇರಲು ಸಾಧ್ಯವಿಲ್ಲ. ತಂದೆಯ ಹತ್ತಿರ ಹೋಗುವ ಮಾರ್ಗವನ್ನು ಯಾರೆಲ್ಲಾ ತೋರಿಸುತ್ತಾರೆ, ಅವರು ಇನ್ನೂ ಕಾಡಿನಲ್ಲೇ ಕರೆದುಕೊಂಡು ಹೋಗುತ್ತಾರೆ. ಏಕೆಂದರೆ ಯಾರೂ ಮಾರ್ಗವನ್ನು ತಿಳಿದುಕೊಂಡಿಲ್ಲ. ತಂದೆ, ಮನೆ ಮತ್ತು ಸ್ವರ್ಗವನ್ನು ಯಾರೂ ತಿಳಿದುಕೊಂಡಿಲ್ಲ. ಯಾರೆಲ್ಲಾ ಗುರುಗಳಿದ್ದಾರೆ ಅವರೆಲ್ಲಾ ಹಠಯೋಗಿಗಳಾಗಿದ್ದಾರೆ. ಮನೆ ಮಠವನ್ನು ಬಿಟ್ಟು ಹೋಗುತ್ತಾರೆ ಆದರೆ ಇಲ್ಲಿ ಬಾಬಾ ಬಿಡಿಸುವುದಿಲ್ಲ. ಮಕ್ಕಳೇ ಕೇವಲ ಪವಿತ್ರರಾಗಿ ಎಂದಷ್ಟೆ ಹೇಳುತ್ತಾರೆ. ಕುಮಾರಿ ಮತ್ತು ಕುಮಾರರಂತೂ ಪವಿತ್ರರಾಗಿದ್ದಾರೆ. ದ್ರೌಪದಿಯು ಬಾಬಾ ನನ್ನನ್ನು ರಕ್ಷಣೆ ಮಾಡು ಎಂದು ಕೂಗುತ್ತಾರೆ. ನಾವು ಈಗ ಪವಿತ್ರರಾಗಿದ್ದು ಕೃಷ್ಣಪುರಿಯಲ್ಲಿ ಹೋಗಲು ಇಚ್ಚಿಸುದ್ದೇವೆ. ಕನ್ಯೆಯರೂ ಸಹ ಕೂಗುತ್ತಾರೆ ಏಕೆಂದರೆ ತಂದೆ ತಾಯಿ ಅವರನ್ನು ಮದುವೆ ಆಗಲೇಬೇಕೆಂದು ತುಂಬಾ ತೊಂದರೆ ಕೊಡುತ್ತಾರೆ. ಕೆಲವು ಕಡೆ ಮೊದಲು ತಂದೆ-ತಾಯಿ ಕನ್ಯೆಯರ ಪಾದಗಳಿಗೆ ನಮಸ್ಕರಿಸುತ್ತಾರೆ ಏಕೆಂದರೆ ಅವರು ಸ್ವಯಂನ್ನು ಪತಿತ ಮತ್ತು ಕನ್ಯೆರನ್ನು ಪಾವನ ಎಂದು ತಿಳಿಯುತ್ತಾರೆ. ಪತಿತ ಪಾವನ ಬಾ ಎಂದು ಕರೆಯುತ್ತಾರೆ. ಈಗ ತಂದೆಯು ಹೇಳುತ್ತಾರೆ - ಕುಮಾರಿಯರೇ ನೀವು ಪತಿತರಾಗಬೇಡಿ. ಇಲ್ಲದಿದ್ದರೆ ಚೀರಾಡಬೇಕಾಗುವುದು. ನೀವೀಗ ತಮ್ಮನ್ನು ರಕ್ಷಿಸಿಕೊಳ್ಳಬೇಕು. ತಂದೆಯು ಬಂದಿರುವುದೇ ಪಾವನರನ್ನಾಗಿ ಮಾಡಲು. ತಂದೆಯು ಹೇಳುತ್ತಾರೆ-ಮಕ್ಕಳೇ, ಸ್ವರ್ಗದ ರಾಜ್ಯಭಾಗ್ಯದ ಆಸ್ತಿಯನ್ನು ಕೊಡಲು ಬಂದಿದ್ದೇನೆ ಆದ್ದರಿಂದ ಪವಿತ್ರರಾಗಲೇಬೇಕು. ಪತಿತರಾಗುತ್ತೀರೆಂದರೆ ಪತಿತರಾಗಿಯೇ ಸಾಯುತ್ತೀರಿ. ಸ್ವರ್ಗದ ಸುಖವನ್ನು ನೋಡಲು ಸಾಧ್ಯವಾಗುವುದಿಲ್ಲ. ಸ್ವರ್ಗದಲ್ಲಂತು ಬಹಳ ಮೋಜು ಇರುತ್ತದೆ. ವಜ್ರರತ್ನಗಳ ಮಹಲ್ ಇರುತ್ತದೆ. ರಾಧಾ-ಕೃಷ್ಣರೇ ಲಕ್ಷ್ಮೀ-ನಾರಾಯಣರಾಗುತ್ತಾರೆ ಆದ್ದರಿಂದ ಲಕ್ಷ್ಮೀ-ನಾರಾಯಣರನ್ನೂ ಸಹ ಎಷ್ಟು ಪ್ರೀತಿ ಮಾಡಬೇಕು. ಕೃಷ್ಣನನ್ನು ಪ್ರೀತಿ ಮಾಡುತ್ತಾರೆ ಆದರೆ ರಾಧೆಯನ್ನು ಏಕೆ ಮರೆತು ಹೋಗಿದ್ದಾರೆ. ಕೃಷ್ಣ ಜನ್ಮಾಷ್ಠಮಿಯಲ್ಲಿ ಕೃಷ್ಣನನ್ನು ಉಯ್ಯಾಲೆಯಲ್ಲಿ ತೂಗುತ್ತೀರಿ. ಮಾತೆಯರು ಕೃಷ್ಣನ್ನು ತುಂಬಾ ಪ್ರೀತಿ ಮಾಡುತ್ತಾರೆ ಆದರೆ ರಾಧೆಯನ್ನು ಪ್ರೀತಿ ಮಾಡುವುದಿಲ್ಲ. ಮತ್ತೆ ಬ್ರಹ್ಮನೇ ಯಾರು ಕೃಷ್ಣನಾಗುವವರಿದ್ದಾರೆ ಅವರಿಗೆ ಇಷ್ಟೊಂದು ಪೂಜೆ ಮಾಡುವುದಿಲ್ಲ. ಜಗದಂಬನಿಗಂತು ತುಂಬಾ ಪೂಜೆಯನ್ನು ಮಾಡುತ್ತಾರೆ. ಆದಿದೇವ ಬ್ರಹ್ಮನದ್ದು ಕೇವಲ ಅಜ್ಮೀರ್ನಲ್ಲಿ ಮಾತ್ರ ಮಂದಿರವಿದೆ. ಈಗ ಮಮ್ಮಾ ಜ್ಞಾನ-ಜ್ಞಾನೇಶ್ವರಿ ಆಗಿದ್ದಾರೆ. ನೀವು ತಿಳಿದುಕೊಂಡಿದ್ದೀರಿ - ಅವರು ಬ್ರಾಹ್ಮಣಿಯಾಗಿದ್ದಾರೆ, ಸ್ವರ್ಗದ ಆದಿ ದೇವಿಯಲ್ಲ. ಅವರಿಗೆ ಯಾವುದೇ 8 ಭುಜಗಳಿಲ್ಲ ಆದರೆ ಮಂದಿರದಲ್ಲಿ ಎಂಟು ಭುಜಗಳನ್ನು ತೋರಿಸಿದ್ದಾರೆ. ಮಕ್ಕಳೇ, ಮಾಯೆಯ ರಾಜ್ಯದಲ್ಲಿ ಸುಳ್ಳೇ ಸುಳ್ಳಿದೆ ಎಂದು ತಂದೆ ಹೇಳುತ್ತಾರೆ. ಒಬ್ಬ ತಂದೆಯೇ ಸತ್ಯವಾಗಿದ್ದಾರೆ, ಅವರು ಮನುಷ್ಯರಿಂದ ದೇವತೆಗಳನ್ನಾಗಿ ಮಾಡಲು ಸತ್ಯವನ್ನೇ ತಿಳಿಸುತ್ತಾರೆ. ನೀವು ಶಾರೀರಿಕ ಬ್ರಾಹ್ಮಣರ ಮುಖಾಂತರ ಅನೇಕ ಕಥೆಗಳನ್ನು ಕೇಳುತ್ತಾ-ಕೇಳುತ್ತಾ ಯಾವ ಗತಿಗೆ ಬಂದು ಬಿಟ್ಟಿದ್ದೀರಿ. ಈಗ ಮೃತ್ಯು ಸಮೀಪದಲ್ಲಿಯೇ ನಿಂತಿದೆ ಆದ್ದರಿಂದ ತಂದೆಯು ಹೇಳುತ್ತಾರೆ - ಯಾವಾಗ ಈ ವೃಕ್ಷವು ಜಡ್ಜಡೀ ಭೂತ ಅವಸ್ತೆಯನ್ನು ತಲುಪುತ್ತದೆ, ಆಗ ಕಲಿಯುಗದ ಅಂತ್ಯದಲ್ಲಿ ಕಲ್ಪದ ಸಂಗಮಯುಗದಲ್ಲಿ ನಾನು ಬರುತ್ತೇನೆ. ನಾನು ಯುಗ-ಯುಗಗಳಲ್ಲಿ ಬರುವುದಿಲ್ಲ. ನಾನು ಮೀನು-ಮೊಸಳೆ, ವರಾಹ ಅವತಾರಗಳನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಕಣ-ಕಣದಲ್ಲಿ ಇರುವುದಿಲ್ಲ. ನೀವು ಆತ್ಮಗಳೂ ಸಹ ಕಣ-ಕಣದಲ್ಲಿ ಹೋಗುವುದಿಲ್ಲ ಅಂದಾಗ ನಾನು ಹೇಗೆ ಹೋಗುತ್ತೇನೆ! ಮನುಷ್ಯರಿಗೋಸ್ಕರ ಹೇಳುತ್ತಾರೆ ಮನುಷ್ಯರು ಪ್ರಾಣಿಗಳಾಗಿ ಜನ್ಮವನ್ನು ಪಡೆಯುತ್ತಾರೆ ಮತ್ತು ಲೆಕ್ಕವಿಲ್ಲದಷ್ಟು ಯೋನಿಗಳಲ್ಲಿ ಬರುತ್ತಾರೆ ಎಂದು ಹೇಳುತ್ತಾರೆ. ಈಗ ತಂದೆಯು ಹೇಳುತ್ತಾರೆ - ಮಕ್ಕಳೇ, ನಾನೀಗ ಸತ್ಯ ಮಾತನ್ನು ನಿಮಗೆ ತಿಳಿಸುತ್ತೇನೆ. ಈಗ ನಿರ್ಣಯ ಮಾಡಿ, ಲಕ್ಷ ಜನ್ಮಗಳು ಸತ್ಯವೋ ಅಥವಾ ಸುಳ್ಳೋ? ಈ ಸುಳ್ಳು ಪ್ರಪಂಚದಲ್ಲಿ ಸತ್ಯ ಎಲ್ಲಿಂದ ಬಂದಿತು? ಸತ್ಯವಂತು ಒಬ್ಬ ತಂದೆಯೇ ಆಗಿದ್ದಾರೆ. ತಂದೆಯೇ ಬಂದು ಸತ್ಯ-ಅಸತ್ಯದ ನಿರ್ಣಯ ಮಾಡುತ್ತಾರೆ. ಮಾಯೆಯು ಎಲ್ಲರನ್ನು ಅಸತ್ಯವನ್ನಾಗಿ ಮಾಡಿ ಬಿಟ್ಟಿದೆ. ಈಗ ತಂದೆಯೇ ಬಂದು ಎಲ್ಲರನ್ನು ಸತ್ಯವನ್ನಾಗಿ ಮಾಡುತ್ತಾರೆ. ಈಗ ನಿರ್ಣಯ ಮಾಡಿ ಇದರಲ್ಲಿ ರೈಟ್ ಯಾವುದು? ನಿಮ್ಮ ಇಷ್ಟೊಂದು ಗುರು ಗೋಸಾಯಿಗಳು ಸತ್ಯವೋ ಅಥವಾ ಒಬ್ಬ ತಂದೆಯು ಸತ್ಯವೋ? ಒಬ್ಬ ಸತ್ಯ ತಂದೆಯೇ ಸತ್ಯ ಪ್ರಪಂಚದ ಸ್ಥಾಪನೆ ಮಾಡುತ್ತಾರೆ. ಅಲ್ಲಿ ಯಾವುದೇ ಕಾನೂನು ವಿರುದ್ಧ ಕಾರ್ಯವು ಆಗುವುದಿಲ್ಲ. ಅಲ್ಲಿ ಯಾರಿಗೂ ವಿಷ (ವಿಕಾರ) ಸಿಗುವುದಿಲ್ಲ.

ನಾವು ಭಾರತವಾಸಿಗಳೇ ಅವಶ್ಯವಾಗಿ ದೇವೀ-ದೇವತೆಗಳು ಆಗಿದ್ದೆವೆಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ನೀವೀಗ ಪತಿತರಾಗಿ ಬಿಟ್ಟಿದ್ದೀರಿ ಆದ್ದರಿಂದಲೇ ಪತಿತ-ಪಾವನ ಬನ್ನಿ ಎಂದು ಕೂಗುತ್ತೀರಿ. ಯಥಾ ರಾಜಾ-ರಾಣಿ ತಥಾ ಪ್ರಜಾ ಎಲ್ಲರೂ ಪತಿತರಾಗಿರುವ ಕಾರಣವೇ ಲಕ್ಷ್ಮೀ-ನಾರಾಯಣ ಮುಂತಾದವರನ್ನು ಪೂಜಿಸುತ್ತಾರಲ್ಲವೇ. ಭಾರತದಲ್ಲಿಯೇ ಪವಿತ್ರ ರಾಜರಿದ್ದರು, ಈಗ ಅಪವಿತ್ರರಾಗಿದ್ದಾರೆ. ಆದ್ದರಿಂದ ಪವಿತ್ರರನ್ನು ಪೂಜಿಸುತ್ತಾರೆ. ಈಗ ತಂದೆಯೇ ಬಂದು ನಿಮ್ಮನ್ನು ಮಹಾರಾಜ-ಮಹಾರಾಣಿಯನ್ನಾಗಿ ಮಾಡುತ್ತಾರೆ ಆದ್ದರಿಂದ ಪುರುಷಾರ್ಥ ಮಾಡಬೇಕಾಗಿದೆ. ಬಾಕಿ ಎಂಟು ಭುಜದವರು ಯಾರೂ ಇಲ್ಲ. ಲಕ್ಷ್ಮೀ-ನಾರಾಯಣರಿಗೂ ಸಹ ಎರಡು ಭುಜಗಳಿವೆ. ಚಿತ್ರಗಳಲ್ಲಿ ನಾರಾಯಣನನ್ನು ಕಪ್ಪಾಗಿ ಮತ್ತು ಲಕ್ಷ್ಮಿಯನ್ನು ಬೆಳ್ಳಗೆ ತೋರಿಸುತ್ತಾರೆ. ಈಗ ಒಬ್ಬರು ಪವಿತ್ರ ಇನ್ನೊಬ್ಬರು ಅಪವಿತ್ರರಾಗಲು ಹೇಗೆ ಸಾಧ್ಯ! ಆದ್ದರಿಂದ ಚಿತ್ರಗಳು ಸುಳ್ಳಾಯಿತಲ್ಲವೇ. ಈಗ ತಂದೆಯೇ ತಿಳಿಸುತ್ತಾರೆ ರಾಧಾ-ಕೃಷ್ಣ ಇಬ್ಬರೂ ಸುಂದರರಾಗಿದ್ದರು, ನಂತರ ಕಾಮ ಚಿತೆಯ ಮೇಲೆ ಕುಳಿತು ಇಬ್ಬರೂ ಕಪ್ಪಾಗಿ ಬಿಟ್ಟರು. ಒಬ್ಬರು ಸುಂದರ ಇನ್ನೊಬ್ಬರು ಶ್ಯಾಮನಾಗಿರಲು ಸಾಧ್ಯವಿಲ್ಲ. ಕೃಷ್ಣನನ್ನು ಶ್ಯಾಮ ಸುಂದರನೆಂದು ಹೇಳುತ್ತಾರೆ ಆದರೆ ರಾಧೆಯನ್ನು ಶ್ಯಾಮ ಸುಂದರಿ ಎಂದು ಏಕೆ ಹೇಳುವುದಿಲ್ಲ. ಈ ವ್ಯತ್ಯಾಸವನ್ನು ಏಕೆ ಇಟ್ಟಿದ್ದಾರೆ? ಜೋಡಿ ಎಂದಾಗ ಒಂದೇ ತರಹ ಇರಬೇಕಲ್ಲವೇ! ಈಗ ನೀವು ಜ್ಞಾನ ಚಿತೆಯ ಮೇಲೆ ಕುಳಿತಿದ್ದೀರಿ. ಮತ್ತೆ ಕಾಮ ಚಿತೆಯ ಮೇಲೆ ಏಕೆ ಕುಳಿತುಕೊಳ್ಳುತ್ತೀರಿ. ಮಕ್ಕಳಿಗೆ ಈ ಪುರುಷಾರ್ಥವನ್ನು ಮಾಡಿಸಬೇಕು. ನಾವು ಜ್ಞಾನಚಿತೆಯ ಮೇಲೆ ಕುಳಿತಿದ್ದೇವೆ ಮತ್ತೆ ನೀವು ಕಾಮಚಿತೆಯ ಮೇಲೆ ಕುಳಿತುಕೊಳ್ಳುವ ಚೇಷ್ಟೆಯನ್ನು ಏಕೆ ಮಾಡುತ್ತೀರಿ! ಒಂದುವೇಳೆ ಪುರುಷರು ಜ್ಞಾನವನ್ನು ತೆಗೆದುಕೊಳ್ಳುತ್ತಾರೆ, ಸ್ತ್ರೀ ತೆಗೆದುಕೊಳ್ಳುವುದಿಲ್ಲವೆಂದರೆ ಅಲ್ಲಿ ಜಗಳವೇರ್ಪಡುತ್ತದೆ. ಯಜ್ಞದಲ್ಲಿ ವಿಘ್ನಗಳಂತೂ ತುಂಬಾ ಬರುತ್ತವೆ. ಈ ಜ್ಞಾನವು ಎಷ್ಟು ಉದ್ದಗಲವಾಗಿದೆ. ಯಾವಾಗ ತಂದೆಯು ಬಂದರು ಆಗ ರುದ್ರ ಜ್ಞಾನ ಯಜ್ಞವು ಶುರುವಾಯಿತು. ಎಲ್ಲಿಯ ತನಕ ನೀವು ಬ್ರಾಹ್ಮಣರಾಗುವುದಿಲ್ಲ ಅಲ್ಲಿಯ ತನಕ ದೇವತೆಗಳಾಗಲು ಸಾಧ್ಯವಿಲ್ಲ. ಶೂದ್ರರು ಪತಿತರಿಂದ ಪಾವನರಾಗಬೇಕೆಂದರೆ ಬ್ರಾಹ್ಮಣರಾಗಲೇ ಬೇಕಾಗುವುದು. ಬ್ರಾಹ್ಮಣರೇ ಯಜ್ಞವನ್ನು ಸಂಭಾಲನೆ ಮಾಡುತ್ತಾರೆ, ಇದರಲ್ಲಿ ಪವಿತ್ರರಾಗಬೇಕಾಗಿದೆ. ಬಾಕಿ ಆ ಬ್ರಾಹ್ಮಣರ ತರಹ ಯಾವುದೇ ಎಳ್ಳು, ಎಣ್ಣೆ ಮುಂತಾದವುಗಳನ್ನು ಸೇರಿಸಿ ಯಜ್ಞದಲ್ಲಿ ಆಹುತಿ ಮಾಡುವುದಿಲ್ಲ. ತಿಳಿದುಕೊಳ್ಳುತ್ತಾರೆ ಭಗವಂತನೇ ಇಂತಹ ಯಜ್ಞವನ್ನು ರಚಿಸಿದ್ದರೆಂದು. ತಂದೆಯು ಹೇಳುತ್ತಾರೆ ಇದು ಜ್ಞಾನ ಯಜ್ಞವಾಗಿದೆ. ಇದರಲ್ಲಿ ನೀವು ಆಹುತಿ ಆಗುತ್ತೀರಿ. ದೇಹ ಸಹಿತ ಏನೆಲ್ಲವು ಇದೆ ಅದನ್ನು ಆಹುತಿ ಮಾಡಬೇಕಾಗಿದೆ. ಬಾಕಿ ಪೈಸೆ ಮುಂತಾದವುಗಳನ್ನು ಹಾಕಬಾರದು. ಇದರ ಮೇಲೆ ಒಂದು ಕಥೆಯೂ ಇದೆ. ದಕ್ಷ ಪ್ರಜಾಪಿತನು ಯಜ್ಞವನ್ನು ರಚಿಸಿದನೆಂದು. ಈಗ ಪ್ರಜಾಪಿತ ಒಬ್ಬರೇ ಆಗಿದ್ದಾರೆ. ಪ್ರಜಾಪಿತ ಬ್ರಹ್ಮ ಮತ್ತೆ ದಕ್ಷ ಪ್ರಜಾಪಿತ ಎಲ್ಲಿಂದ ಬಂದರು? ತಂದೆಯು ಪ್ರಜಾಪಿತ ಬ್ರಹ್ಮನ ಮುಖಾಂತರ ಯಜ್ಞ ರಚಿಸುತ್ತಾರೆ. ಇದರಲ್ಲಿ ನೀವೆಲ್ಲರೂ ಬ್ರಾಹ್ಮಣರಾಗಿದ್ದೀರಿ. ನಿಮಗೆ ತಾತನಿಂದ ಆಸ್ತಿಯು ಸಿಗುತ್ತದೆ. ನೀವೇ ಹೇಳುತ್ತೀರಿ ನಾವು ಬ್ರಹ್ಮನ ಮುಖಾಂತರ ಶಿವ ಬಾಬಾರವರ ಹತ್ತಿರ ಬಂದಿದ್ದೇವೆ. ಇವರು ಶಿವ ಬಾಬಾರವರ ಅಂಚೆ ಕಚೇರಿ ಆಗಿದ್ದಾರೆ. ಪತ್ರ ಬರೆದರೂ ಶಿವ ಬಾಬಾ ಛಿ/o ಬ್ರಹ್ಮಾ ಎಂದು ಬರೆಯುತ್ತಾರೆ. ಬ್ರಹ್ಮನಲ್ಲಿಯೇ ಬಾಬಾ ನಿವಾಸವಾಗಿದ್ದಾರೆ. ಈ ಎಲ್ಲಾ ಬ್ರಾಹ್ಮಣರಾಗುವುದಕ್ಕೋಸ್ಕರ ಜ್ಞಾನಯೋಗವನ್ನು ಕಲಿಯುತ್ತಿದ್ದಾರೆ. ನಾವು ಪತಿತರಾಗಿಲ್ಲ ಎಂದು ನೀವು ಹೇಳಲು ಸಾಧ್ಯವಿಲ್ಲ. ನಾವು ಪತಿತರಾಗಿದ್ದೇವೆ ಆದರೆ ಪತಿತ ಪಾವನ ನಮ್ಮನ್ನು ಪಾವನರನ್ನಾಗಿ ಮಾಡುತ್ತಿದ್ದಾರೆ. ಮತ್ಯಾವುದೇ ಮನುಷ್ಯ ಮಾತ್ರರು ಪಾವನರಾಗಿಲ್ಲ. ಆದ್ದರಿಂದಲೇ ಗಂಗಾ ಸ್ನಾನವನ್ನು ಮಾಡಲು ಹೋಗುತ್ತಾರೆ. ಈಗ ನೀವು ತಿಳಿದುಕೊಂಡಿದ್ದೀರಿ - ಒಬ್ಬ ಸದ್ಗುರು ತಂದೆಯೇ ನಮ್ಮನ್ನು ಪಾವನ ಮಾಡುತ್ತಾರೆ. ಅವರ ಶ್ರೀಮತವೇ ಆಗಿದೆ. ಮಕ್ಕಳೇ, ನೀವು ನನ್ನೊಬ್ಬನ ಜೊತೆ ನಿಮ್ಮ ಬುದ್ಧಿ ಯೋಗವನ್ನು ಜೋಡಿಸಿ. ನಿರ್ಣಯ ಮಾಡಿ. ಯಾವುದೇ ಗುರುಗಳ ಹತ್ತಿರ ಹೋಗಿ ಅಥವಾ ನನ್ನ ಮತದ ಮೇಲಾದರೂ ನಡೆಯಿರಿ. ನಿಮಗಂತು ಒಬ್ಬ ತಂದೆಯೇ ಟೀಚರ್, ಸದ್ಗುರುವೂ ಆಗಿದ್ದಾರೆ. ಬೇಹದ್ದಿನ ತಂದೆಯು ಎಲ್ಲಾ ಮನುಷ್ಯ ಮಾತ್ರರಿಗೆ ಹೇಳುತ್ತಾರೆ - ಮಕ್ಕಳೇ ಆತ್ಮಾಭಿಮಾನಿಯಾಗಿ. ದೇವತೆಗಳು ಆತ್ಮಾಭಿಮಾನಿಯಾಗಿರುತ್ತಾರೆ. ಇಲ್ಲಿ ಈ ಜ್ಞಾನವು ಯಾರಲ್ಲಿಯೂ ಇಲ್ಲ. ಸನ್ಯಾಸಿಗಳಂತು ಆತ್ಮ ಸೋ ಪರಮಾತ್ಮ ಎಂದು ಹೇಳುತ್ತಾರೆ ಮತ್ತು ಆತ್ಮವು ಬ್ರಹ್ಮಾ ತತ್ವದಲ್ಲಿ ಲೀನವಾಗುತ್ತದೆ ಎಂದು ಹೇಳುತ್ತಾರೆ. ಇಂತಹ ಮಾತುಗಳನ್ನು ಕೇಳುತ್ತಾ-ಕೇಳುತ್ತಾ ನೀವು ಇಷ್ಟು ದುಃಖಿ ಪತಿತರಾಗಿ ಬಿಟ್ಟಿದ್ದೀರಿ. ಯಾರು ವಿಕಾರದಿಂದ ಜನ್ಮವನ್ನು ಪಡೆಯುತ್ತಾರೆ, ಅವರನ್ನು ಭ್ರಷ್ಟಾಚಾರಿ ಪತಿತರೆಂದು ಹೇಳಲಾಗುತ್ತದೆ. ಅವರು ರಾವಣ ರಾಜ್ಯದಲ್ಲಿ ಭ್ರಷ್ಟಾಚಾರಿ ಕೆಲಸವನ್ನೇ ಮಾಡುತ್ತಾರೆ. ಮತ್ತೆ ಹೂಗಳನ್ನಾಗಿ ಮಾಡುವುದಕ್ಕೋಸ್ಕರ ತಂದೆಯೇ ಬರಬೇಕಾಗುತ್ತದೆ. ಭಾರತದಲ್ಲಿಯೇ ಬರುತ್ತಾರೆ. ತಂದೆಯು ಹೇಳುತ್ತಾರೆ ನಾನು ನಿಮಗೆ ಜ್ಞಾನ ಮತ್ತು ಯೋಗವನ್ನು ಕಲಿಸುತ್ತೇನೆ, 5000 ವರ್ಷಗಳ ಹಿಂದೆಯೂ ಸಹ ನಿಮಗೆ ರಾಜಯೋಗವನ್ನು ಕಲಿಸು ಸ್ವರ್ಗದ ಮಾಲಿಕರನಾಗಿ ಮಾಡಿದ್ದೆ, ಈಗ ಪುನಃ ಮಾಡುತ್ತೇನೆ. ಕಲ್ಪ-ಕಲ್ಪದಲ್ಲಿಯೂ ಬರುತ್ತಲೇ ಇರುತ್ತೇನೆ. ಇದಕ್ಕೆ ಆದಿಯು ಇಲ್ಲ, ಅಂತ್ಯವು ಇಲ್ಲ. ಈ ಚಕ್ರವು ನಡೆಯುತ್ತಲೇ ಇರುತ್ತದೆ. ಪ್ರಳಯದ ಮಾತಂತೂ ಇಲ್ಲ. ನೀವು ಮಕ್ಕಳು ಈ ಸಮಯದಲ್ಲಿ ಅವಿನಾಶಿ ಜ್ಞಾನರತ್ನಗಳಿಂದ ಜೋಳಿಗೆಯನ್ನು ತುಂಬಿಸಿಕೊಳ್ಳುತ್ತೀರಿ. ಶಿವಬಾಬಾರವರಿಗೆ ಬಂಬಂ ಮಹಾದೇವ ಎಂದು ಹೇಳುತ್ತಾರೆ. ಬಂಬಂ ಅರ್ಥಾತ್ ಶಂಖ ಧ್ವನಿ ಮಾಡಿ ನಮ್ಮ ಜೋಳಿಗೆಯನ್ನು ತುಂಬಿಸು. ಜ್ಞಾನವು ಬುದ್ಧಿಯಲ್ಲಿ ಇರುತ್ತದೆಯಲ್ಲವೇ. ಆತ್ಮನಲ್ಲಿಯೇ ಸಂಸ್ಕಾರವಿರುತ್ತದೆ. ಆತ್ಮವೇ ಓದಿ ಇಂಜಿನಿಯರ್, ಬ್ಯಾರಿಸ್ಟರ್ ಮುಂತಾದುವುಗಳಾಗುತ್ತದೆ. ಈಗ ನೀವು ಆತ್ಮಗಳು ಏನು ಆಗುತ್ತೀರಿ? ಅದಕ್ಕೆ ಹೇಳುತ್ತೀರಿ ನಾವು ಬಾಬಾನಿಂದ ಆಸ್ತಿಯನ್ನು ಪಡೆದುಕೊಂಡು ಲಕ್ಷ್ಮೀ-ನಾರಾಯಣರಾಗುತ್ತೇವೆ. ಆತ್ಮವೂ ಅವಶ್ಯವಾಗಿ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತದೆ. ಇದು ತಿಳಿದುಕೊಳ್ಳುವಂತಹ ಮಾತಾಗಿದೆ. ಕೆಲವರಿಗೆ ಕೇವಲ ಈ ಎರಡಕ್ಷರವನ್ನು ಕಿವಿಯಲ್ಲಿ ಹಾಕಿ - ನೀವು ಆತ್ಮ ಆಗಿದ್ದೀರಿ, ಶಿವ ಬಾಬಾರವರನ್ನು ನೆನಪು ಮಾಡಿ ಆಗ ಸ್ವರ್ಗದ ರಾಜ್ಯಭಾಗ್ಯವು ಸಿಗುತ್ತದೆ. ಎಷ್ಟು ಸಹಜ ಮಾತುಗಳಾಗಿದೆ. ಒಬ್ಬ ತಂದೆಯೇ ಸತ್ಯವನ್ನು ತಿಳಿಸುತ್ತಾರೆ ಎಲ್ಲರಿಗು ಸದ್ಗತಿಯನ್ನು ಕೊಡುತ್ತಾರೆ, ಉಳಿದೆಲ್ಲರೂ ಸುಳ್ಳನ್ನು ತಿಳಿಸಿ ದುರ್ಗತಿಯನ್ನೇ ಮಾಡುತ್ತಾರೆ. ಈ ಶಾಸ್ತ್ರ ಮುಂತಾದವುಗಳೆಲ್ಲವೂ ಸಹ ನಂತರದಲ್ಲಿ ಮಾಡಲ್ಪಟ್ಟಿವೆ. ಭಾರತದ ಶಾಸ್ತ್ರವು ಒಂದು ಗೀತೆಯೇ ಆಗಿದೆ. ಹೇಳುತ್ತಾರೆ ಇದು ಪರಂಪರೆಯಿಂದ ನಡೆದು ಬಂದಿದೆ ಎಂದು. ಆದರೆ ಯಾವಾಗಿನಿಂದ? ಅವರು ಸೃಷ್ಟಿಗೆ ಲಕ್ಷಾಂತರ ವರ್ಷಗಳಾಗಿದೆ ಎಂದು ತಿಳಿಯುತ್ತಾರೆ. ಒಳ್ಳೆಯದು.

ನೀವು ಮಕ್ಕಳು ಬಾಬಾರವರಿಗೋಸ್ಕರ ದ್ರಾಕ್ಷಿಯನ್ನು ತರುತ್ತೀರಿ. ನೀವೇ ತರುತ್ತೀರಿ, ನೀವೇ ತಿನ್ನುತ್ತೀರಿ. ನಾನಂತೂ ತಿನ್ನುವುದಿಲ್ಲ ಏಕೆಂದರೆ ನಾನು ಅಭೋಕ್ತನಾಗಿದ್ದೇನೆ. ಸತ್ಯಯುಗದಲ್ಲಿಯು ನಿಮಗೋಸ್ಕರವೇ ಮಹಲ್ಗಳು ಮಾಡಲ್ಪಡುತ್ತವೆ. ಇಲ್ಲಿಯೂ ನಿಮ್ಮನ್ನು ಹೊಸ ಮೆಹಲ್ನಲ್ಲಿ ಇಡುತ್ತೇನೆ, ನಾನಂತೂ ಹಳೆಯದರಲ್ಲಿಯೇ ಇರುತ್ತೇನೆ. ಇವರು ವಿಚಿತ್ರ ಬಾಬಾ ಆಗಿದ್ದಾರೆ. ಇವರು ತಂದೆಯು ಆಗಿದ್ದಾರೆ, ಅತಿಥಿಯೂ ಆಗಿದ್ದಾರೆ. ಬಾಂಬೆಯಲ್ಲಿ ಹೋಗುತ್ತಾರೆಂದರೆ ಅತಿಥಿ ಎಂದು ಹೇಳಲಾಗುತ್ತದೆಯಲ್ಲವೇ! ಇವರಂತು ಇಡೀ ಪ್ರಪಂಚದ ಅತಿ ದೊಡ್ಡ ಅತಿಥಿಯಾಗಿದ್ದಾರೆ. ಇವರಿಗೆ ಬರುವುದು ಮತ್ತು ಹೋಗುವುದರಲ್ಲಿ ತಡವಾಗುವುದಿಲ್ಲ. ಈ ಅತಿಥಿಯು ವಿಚಿತ್ರವಾಗಿದ್ದಾರೆ. ದೂರ ದೇಶದವರು ಪರದೇಶದಲ್ಲಿ ಬರುತ್ತಾರೆ ಎಂದಾಗ ಅತಿಥಿಯಾದರಲ್ಲವೇ! ನಿಮ್ಮನ್ನು ಹೂಗಳನ್ನಾಗಿ ಮಾಡಿ ಆಸ್ತಿಯನ್ನು ಕೊಡಲು ಬರುತ್ತಾರೆ ಮತ್ತು ಕವಡೆಯಿಂದ ವಜ್ರ ಸಮಾನರನ್ನಾಗಿ ಮಾಡಲು ಬಂದಿದ್ದಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತ್-ಪಿತ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ.ಆತ್ಮೀಯ ತಂದೆ ಆತ್ಮೀಯ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಅವಿನಾಶಿ ಜ್ಞಾನರತ್ನಗಳನ್ನು ಧಾರಣೆ ಮಾಡಿ ಶಂಖುಧ್ವನಿ ಮಾಡಬೇಕಾಗಿದೆ. ಎಲ್ಲರಿಗೆ ಈ ಜ್ಞಾನರತ್ನಗಳನ್ನು ಕೊಡಬೇಕಾಗಿದೆ.

2. ಸತ್ಯ ಮತ್ತು ಅಸತ್ಯವನ್ನು ಅರಿತುಕೊಂದು ಸತ್ಯ ಮತದ ಮೇಲೆ ನಡೆಯಬೇಕಾಗಿದೆ. ಯಾವುದೇ ಕಾನೂನಿಗೆ ವಿರುದ್ಧವಾದ ಕರ್ಮವನ್ನು ಮಾಡಬಾರದಾಗಿದೆ.

ವರದಾನ:
ಬುದ್ಧಿಯನ್ನು ವ್ಯಸ್ತವಾಗಿಡುವ ವಿಧಿಯ ಮೂಲಕ ವ್ಯರ್ಥವನ್ನು ಸಮಾಪ್ತಿಗೊಳಿಸುವಂತಹ ಸದಾ ಸಮರ್ಥ ಭವ.

ಸದಾ ಸಮರ್ಥ ಎಂದರೆ ಶಕ್ತಿಶಾಲಿ, ಈ ರೀತಿ ಅವರೇ ಆಗುವರು, ಯಾರು ಸ್ವಯಂನ್ನು ವ್ಯಸ್ತವಾಗಿಟ್ಟುಕೊಳ್ಳುವ ವಿಧಿಯನ್ನು ಪ್ರಯೋಗಿಸುತ್ತಾರೆ. ವ್ಯರ್ಥವನ್ನು ಸಮಾಪ್ತಿ ಮಾಡುತ್ತಾ ಸಮರ್ಥರಾಗುವ ಸಹಜ ಸಾಧನವೇ ಆಗಿದೆ - ಸದಾ ವ್ಯಸ್ತವಾಗಿರುವುದು. ಆದ್ದರಿಂದ ಪ್ರತಿನಿತ್ಯವೂ ಬೆಳಗ್ಗೆ ಯಾವ ರೀತಿ ಸ್ಥೂಲ ದಿನಚರಿಯನ್ನು ತಯಾರಿ ಮಾಡುತ್ತೀರಿ. ಹಾಗೆಯೇ ತಮ್ಮ ಬುದ್ಧಿಯನ್ನು ವ್ಯಸ್ತವಾಗಿಡುವ ದಿನಚರಿಯನ್ನು ತಯಾರು ಮಾಡಿರಿ- ಈ ಸಮಯ ಬುದ್ಧಿಯಲ್ಲಿ ಈ ಸಮರ್ಥ ಸಂಕಲ್ಪದಿಂದ ವ್ಯರ್ಥವನ್ನು ಸಮಾಪ್ತಿ ಮಾಡುತ್ತೇವೆ. ವ್ಯಸ್ತವಾಗಿ ಇರುತ್ತೀರೆಂದರೆ ಮಾಯೆಯು ದೂರದಿಂದಲೇ ಹಿಂತಿರುಗಿ ಹೊರಟು ಹೊಗುವುದು.

ಸ್ಲೋಗನ್:
ದುಃಖಗಳ ಪ್ರಪಂಚವನ್ನು ಮರೆಯಬೇಕೆಂದರೆ ಪರಮಾತ್ಮನ ಪ್ರೀತಿಯಲ್ಲಿ ಸದಾ ಮುಳುಗಿರಿ.