05.07.20    Avyakt Bapdada     Kannada Murli     20.02.86     Om Shanti     Madhuban


ಹಾರುವ ಕಲೆಯಿಂದ ಸರ್ವರ ಕಲ್ಯಾಣ


ಇಂದು ವಿಶೇಷವಾಗಿ ಡಬಲ್ವಿದೇಶಿ ಮಕ್ಕಳಿಗೆ ಡಬಲ್ ಶುಭಾಷಯಗಳನ್ನು ಕೊಡಲು ಬಂದಿದ್ದೇವೆ. ಒಂದು - ದೂರ ದೇಶದಲ್ಲಿ ಭಿನ್ನ ಧರ್ಮಗಳಲ್ಲಿ ಹೋಗಿದ್ದರೂ ಸಮೀಪದಲ್ಲಿ ಭಾರತದಲ್ಲಿರುವ ಅನೇಕ ಆತ್ಮರಿಂದ ಬಹಳ ಬೇಗನೆ ತಂದೆಯನ್ನು ಗುರುತಿಸಿದರು. ತಂದೆಯನ್ನು ಗುರುತಿಸುವ ಅರ್ಥಾತ್ ತಮ್ಮ ಭಾಗ್ಯವನ್ನು ಪ್ರಾಪ್ತಿ ಮಾಡಿಕೊಂಡಿರುವುದಕ್ಕಾಗಿ ಶುಭಾಷಯಗಳು ಮತ್ತು ಇನ್ನೊಂದು - ಹೇಗೆ ತೀವ್ರ ಗತಿಯಿಂದ ಗುರುತಿಸಿದಿರಿ, ಹಾಗೆಯೇ ತೀವ್ರ ಗತಿಯಿಂದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರಿ. ಆದ್ದರಿಂದ ಸೇವೆಯಲ್ಲಿ ತೀವ್ರ ಗತಿಯಿಂದ ಮುಂದುವರೆದಿರುವುದಕ್ಕಾಗಿ ಇನ್ನೊಂದು ಶುಭಾಷಯಗಳು. ಸೇವೆಯ ವೃದ್ದಿಯ ಗತಿಯು ತೀವ್ರಗೊಳ್ಳುತ್ತಿದೆ ಮತ್ತು ಇನ್ನು ಮುಂದೆಯೂ ಡಬಲ್ ದೇಶಿ ಮಕ್ಕಳು ವಿಶೇಷ ಕಾರ್ಯಾರ್ಥವಾಗಿ ನಿಮಿತ್ತರಾಗಬೇಕಾಗಿದೆ. ಭಾರತಕ್ಕೆ ನಿಮಿತ್ತವಾದ ಆದಿ ರತ್ನ ವಿಶೇಷ ಆತ್ಮರು ಸ್ಥಾಪನೆಯ ಕಾರ್ಯದಲ್ಲಿ ಬಹಳ ಶಕ್ತಿಶಾಲಿ ಬುನಾದಿಯಾಗಿ ಕಾರ್ಯದ ಸ್ಥಾಪನೆಯನ್ನು ಮಾಡಿದರು ಮತ್ತು ಡಬಲ್ ವಿದೇಶಿ ಮಕ್ಕಳು ನಾಲ್ಕೂ ಕಡೆಯಲ್ಲಿ ಧ್ವನಿಯನ್ನರಡಿಸುವುದರಲ್ಲಿ ತೀವ್ರ ಗತಿಯ ಸೇವೆಯನ್ನು ಮಾಡಿದರು ಮತ್ತು ಮಾಡುತ್ತಿರುತ್ತಾರೆ. ಆದ್ದರಿಂದ ಬಾಪ್ದಾದಾರವರು ಎಲ್ಲಾ ಮಕ್ಕಳು ಬರುತ್ತಿದ್ದಂತೆಯೇ, ಜನ್ಮವಾಗುತ್ತಿದ್ದಂತೆಯೇ ಬಹಳ ಬೇಗನೆ ಸೇವೆಯಲ್ಲಿ ಮುಂದುವರೆಯುವ ವಿಶೇಷ ಶುಭಾಷಯಗಳನ್ನು ಕೊಡುತ್ತಿದ್ದಾರೆ. ಸ್ವಲ್ಪ ಸಮಯದಲ್ಲಿ ಭಿನ್ನ-ಭಿನ್ನ ದೇಶಗಳಲ್ಲಿ ಸೇವೆಯ ವಿಸ್ತಾರವನ್ನು ಮಾಡಿದ್ದೀರಿ, ಆದ್ದರಿಂದ ಧ್ವನಿಯನ್ನರಡಿಸುವ ಕಾರ್ಯವು ಸಹಜವಾಗಿ ವೃದ್ಧಿ ಪಡೆಯುತ್ತಿದೆ. ಮತ್ತು ಸದಾ ಅವಶ್ಯವಾಗಿ ಡಬಲ್ ಲೈಟ್ ಆಗಿದ್ದು, ಡಬಲ್ ಕಿರೀಟಧಾರಿಯಾಗುವ ಸಂಪೂರ್ಣ ಅಧಿಕಾರವನ್ನು ಪ್ರಾಪ್ತಿ ಮಾಡಿಕೊಳ್ಳುವ ತೀವ್ರ ಪುರುಷಾರ್ಥವನ್ನು ಮಾಡುತ್ತೀರಿ. ಇಂದು ವಿಶೇಷವಾಗಿ ಮಿಲನವಾಗುವುದಕ್ಕಾಗಿ ಬಂದಿದ್ದೇವೆ. ಬಾಪ್ದಾದಾರವರು ನೋಡುತ್ತಿದ್ದಾರೆ - ಏನೆಂದರೆ, ಎಲ್ಲರ ಹೃದಯದಲ್ಲಿ ಖುಷಿಯ ಸಂಗೀತವು ಮೊಳಗುತ್ತಿದೆ. ಮಕ್ಕಳ ಖುಷಿಯ ಸಂಗೀತ, ಖುಷಿಯ ಹಾಡು ಬಾಪ್ದಾದಾರವರಿಗೆ ಕೇಳಿಸುತ್ತದೆ. ನೆನಪು ಮತ್ತು ಸೇವೆಯಲ್ಲಿ ಲಗನ್ನಿನಿಂದ ಮುಂದುವರೆಯುತ್ತಿದ್ದಾರೆ. ನೆನಪೂ ಇದೆ, ಸೇವೆಯೂ ಇದೆ ಆದರೆ ಈಗ ಏನು ಸೇರ್ಪಡೆಯಾಗಬೇಕು? ಎರಡೂ ಇದೆ ಆದರೆ ಸದಾ ಎರಡರ ಬ್ಯಾಲೆನ್ಸ್ ಇರಲಿ. ಈ ಬ್ಯಾಲೆನ್ಸ್ ಸ್ವಯಂನ್ನು ಮತ್ತು ಸೇವೆಯಲ್ಲಿ ತಂದೆಯ ಆಶೀರ್ವಾದಗಳ ಅನುಭವಿಯನ್ನಾಗಿ ಮಾಡುತ್ತದೆ. ಸೇವೆಯ ಉಮ್ಮಂಗ-ಉತ್ಸಾಹವಿರುತ್ತದೆ. ಈಗ ಸೇವೆಯಲ್ಲಿ ಇನ್ನೂ ನೆನಪು ಮತ್ತು ಸೇವೆಯ ಬ್ಯಾಲೆನ್ಸ್ ಇಡುವುದರಿಂದ ಹೆಚ್ಚಾಗಿ ಧ್ವನಿ ಹರಡುವ ರೂಪದಲ್ಲಿ ವಿಶ್ವದಲ್ಲಿ ಮೊಳಗುತ್ತದೆ. ಬಹಳ ಚೆನ್ನಾಗಿ ವಿಸ್ತಾರ ಮಾಡಿದ್ದೀರಿ. ವಿಸ್ತಾರದ ನಂತರ ಏನು ಮಾಡಲಾಗುತ್ತದೆ? ವಿಸ್ತಾರದ ಜೊತೆಗೆ ಈಗಿನ್ನೂ ಸೇವೆಯ ಸಾರದಲ್ಲಿ, ಇಂತಹ ವಿಶೇಷ ಆತ್ಮರನ್ನು ನಿಮಿತ್ತ ಮಾಡಬೇಕಾಗಿದೆ, ಆ ವಿಶೇಷ ಆತ್ಮರು ಭಾರತದ ವಿಶೇಷ ಆತ್ಮರನ್ನು ಜಾಗೃತಗೊಳಿಸಲಿ. ಈಗ ಭಾರತದಲ್ಲಿಯೂ ಸೇವೆಯ ರೂಪ ರೇಖೆಯು ಸಮಯದನುಸಾರವಾಗಿ ಮುಂದುವರೆಯುತ್ತಿದೆ. ನೇತರು, ಧರ್ಮನೇತರು ಮತ್ತು ಜೊತೆ ಜೊತೆ ಅಭಿನೇತರುಗಳೂ ಸಹ ಸಂಪರ್ಕದಲ್ಲಿ ಬರುತ್ತಿದ್ದಾರೆ. ಬಾಕಿ ಯಾರು ಉಳಿದುಕೊಂಡಿದ್ದಾರೆ? ಸಂಪರ್ಕದಲ್ಲಂತು ಬರುತ್ತಿದ್ದಾರೆ, ನೇತರೂ ಸಹ ಬರುತ್ತಿದ್ದಾರೆ. ಆದರೆ ವಿಶೇಷವಾಗಿ ರಾಜನೇತರು, ಅವರವರೆಗೂ ಸಮೀಪ ಸಂಬಂಧ-ಸಂಪರ್ಕದಲ್ಲಿ ಬರುವ ಸಂಕಲ್ಪವು ಉತ್ಪನ್ನವಾಗಲೇಬೇಕು.

ಡಬಲ್ ವಿದೇಶಿ ಎಲ್ಲಾ ಮಕ್ಕಳು ಹಾರುವ ಕಲೆಯಲ್ಲಿ ಹಾರುತ್ತಿದ್ದೀರಲ್ಲವೆ! ಏರುವ ಕಲೆಯವರಂತು ಆಗಿಲ್ಲವಲ್ಲವೇ! ಹಾರುವ ಕಲೆ ಇದೆಯೇ? ಹಾರುವ ಕಲೆಯವರು ಆಗುವುದು ಅರ್ಥಾತ್ ಸರ್ವರ ಕಲ್ಯಾಣವಾಗುವುದು. ಯಾವಾಗ ಎಲ್ಲಾ ಮಕ್ಕಳೂ ಏಕರಸವಾಗಿ ಹಾರುವ ಕಲೆಯವರಾಗುತ್ತೀರಿ, ಆಗ ಸರ್ವರ ಕಲ್ಯಾಣ ಅರ್ಥಾತ್ ಪರಿವರ್ತನಾ ಕಾರ್ಯವು ಸಂಪನ್ನವಾಗಿ ಬಿಡುತ್ತದೆ. ಈಗ ಹಾರುವ ಕಲೆಯಿದೆ ಆದರೆ ಹಾರುವುದರ ಜೊತೆ ಜೊತೆಗೆ ಹಂತಗಳೂ ಇವೆ. ಕೆಲವೊಮ್ಮೆ ಬಹಳ ಒಳ್ಳೆಯ ಹಂತವಿದೆ ಮತ್ತೆ ಕೆಲವೊಮ್ಮೆ ಸ್ಟೇಜ್ಗಾಗಿ ಪುರುಷಾರ್ಥ ಮಾಡುವ ಸ್ಟೇಜ್ ಇದೆ. ಸದಾ ಮತ್ತು ಮೆಜಾರಿಟಿಯಲ್ಲಿ ಹಾರುವ ಕಲೆಯಾಗುವುದು ಅರ್ಥಾತ್ ಸಮಾಪ್ತಿಯಾಗುವುದು. ಈಗ ಎಲ್ಲಾ ಮಕ್ಕಳಿಗೂ ಗೊತ್ತಿದೆ ಹಾರುವ ಕಲೆಯೇ ಶ್ರೇಷ್ಠ ಸ್ಥಿತಿಯಾಗಿದೆ. ಹಾರುವ ಕಲೆಯೇ ಕರ್ಮಾತೀತ ಸ್ಥಿತಿಯನ್ನು ಪ್ರಾಪ್ತಿ ಮಾಡಿಕೊಳ್ಳುವ ಸ್ಥಿತಿಯಾಗಿದೆ. ಹಾರುವ ಕಲೆಯೇ ಕರ್ಮಾತೀತ ಸ್ಥಿತಿಯನ್ನು ಪ್ರಾಪ್ತಿ ಮಾಡಿಕೊಳ್ಳುವ ಸ್ಥಿತಿಯಾಗಿದೆ. ಹಾರುವ ಕಲೆಯೇ ದೇಹದಲ್ಲಿರುತ್ತಾ, ದೇಹದಿಂದ ಭಿನ್ನ ಮತ್ತು ಸದಾ ತಂದೆ ಮತ್ತು ಸೇವೆಯಲ್ಲಿ ಭಿನ್ನರಾಗುವ ಸ್ಥಿತಿಯಾಗಿದೆ. ಹಾರುವಕಲೆಯೇ ವಿದಾತಾ ಮತ್ತು ವರದಾತಾ ಸ್ಟೇಜಿನ ಸ್ಥಿತಿಯಾಗಿದೆ. ಹಾರುವ ಕಲೆಯೇ ನಡೆಯುತ್ತಾ-ಸುತ್ತಾಡುತ್ತಾ ಫರಿಶ್ತಾ ಅಥವಾ ದೇವತಾ ಎರಡೂ ರೂಪಗಳ ಸಾಕ್ಷಾತ್ಕಾರ ಮಾಡಿಸುವ ಸ್ಥಿತಿಯಾಗಿದೆ.

ಹಾರುವ ಕಲೆಯು ಸರ್ವ ಆತ್ಮರನ್ನು ಭಿಕಾರಿತನದಿಂದ ಮುಕ್ತಗೊಳಿಸಿ, ತಂದೆಯ ಆಸ್ತಿಗೆ ಅಧಿಕಾರಿಯನ್ನಾಗಿ ಮಾಡುವುದಾಗಿದೆ. ಎಲ್ಲಾ ಆತ್ಮರೂ ಅನುಭವ ಮಾಡುವರು - ಏನೆಂದರೆ, ನಾವೆಲ್ಲಾ ಆತ್ಮರ ಇಷ್ಟ ದೇವ ಅಥವಾ ಇಷ್ಟ ದೇವಿ ಅಥವಾ ನಿಮಿತ್ತರಾಗಿರುವ ಯಾರೆಲ್ಲಾ ಅನೇಕ ದೇವತೆಗಳಿದ್ದಾರೆ, ಎಲ್ಲರೂ ಈ ಧರಣಿಯಲ್ಲಿ ಅವತರಣೆಯಾಗಿ ಬಿಟಿದ್ದಾರೆ. ಸತ್ಯಯುಗದಲ್ಲಂತು ಎಲ್ಲರೂ ಸದ್ಗತಿಯಲ್ಲಿರುತ್ತಾರೆ ಆದರೆ ಈ ಸಮಯದಲ್ಲಿ ಯಾರೆಲ್ಲಾ ಆತ್ಮರಿದ್ದಾರೆ, ಸರ್ವರ ಸದ್ಗತಿದಾತಾ ಆಗಲಿ. ಹೇಗೆ ಯಾವುದೇ ಡ್ರಾಮಾದಲ್ಲಿ ಯಾವಾಗ ಸಮಾಪ್ತಿಯಾಗುತ್ತದೆ, ಅಂತ್ಯದಲ್ಲಿ ಎಲ್ಲಾ ಪಾತ್ರಧಾರಿಗಳು ಸ್ಟೇಜಿನ ಮುಂದೆ ಬರುತ್ತಾರೆ. ಅಂದಾಗ ಈಗ ಕಲ್ಪದ ಡ್ರಾಮಾವು ಸಮಾಪ್ತಿಯಾಗುವ ಸಮಯವು ಬರುತ್ತಿದೆ. ಇಡೀ ವಿಶ್ವದ ಆತ್ಮರಿಗೆ ಭಲೆ ಸ್ವಪ್ನದಲ್ಲಿರಬಹುದು, ಭಲೆ ಒಂದು ಸೆಕೆಂಡಿನ ದರ್ಶನದಲ್ಲಿ, ಭಲೆ ಪ್ರತ್ಯಕ್ಷತೆಯಲ್ಲಿರಬಹುದು, ನಾಲ್ಕೂ ಕಡೆಯಲ್ಲಿನ ಧ್ವನಿಯ ಮೂಲಕ ಅವಶ್ಯವಾಗಿ ಈ ಸಾಕ್ಷಾತ್ಕಾರವಾಗುತ್ತದೆ - ಈ ಡ್ರಾಮಾದ ಹೀರೋ ಪಾತ್ರಧಾರಿಗಳು ಸ್ಟೇಜಿನ ಮೇಲೆ ಪ್ರತ್ಯಕ್ಷವಾಗಿ ಬಿಟ್ಟಿದ್ದಾರೆ. ಧರಣಿಯ ನಕ್ಷತ್ರಗಳು, ಧರಣಿಯಲ್ಲಿ ಪ್ರತ್ಯಕ್ಷವಾಗಿ ಬಿಟ್ಟಿದ್ದಾರೆ. ಎಲ್ಲರೂ ತಮ್ಮ-ತಮ್ಮ ಇಷ್ಟ ದೇವನನ್ನು ಪ್ರಾಪ್ತಿ ಮಾಡಿಕೊಂಡು ಖುಷಿಯಾಗುತ್ತಾರೆ. ಆಶ್ರಯವು ಸಿಗುತ್ತದೆ. ಡಬಲ್ ವಿದೇಶಿಗಳೂ ಸಹ ಇಷ್ಟ ದೇವ ಇಷ್ಟ ದೇವಿಯರಲ್ಲಿ ಇದ್ದಾರಲ್ಲವೆ! ಅಥವಾ ಗೋಲ್ಡನ್ ಜುಬಿಲಿಯವರೇ? ತಾವೂ ಸಹ ಅದರಲ್ಲಿದ್ದೀರಾ ಅಥವಾ ನೋಡುವವರೇ? ಹೇಗೆ ಈಗ ಗೋಲ್ಡನ್ ಜುಬಿಲಿಯ ದೃಶ್ಯವನ್ನು ನೋಡಿದಿರಿ. ಇದಂತು ಒಂದು ರಮಣೀಕ ಪಾತ್ರವನ್ನಭಿನಯಿಸಿದಿರಿ. ಆದರೆ ಯಾವಾಗ ಅಂತಿಮ ದೃಶ್ಯವಾಗುತ್ತದೆ, ಅದರಲ್ಲಂತು ತಾವು ಸಾಕ್ಷಾತ್ಕಾರವನ್ನು ಮಾಡಿಸುವವರಾಗಿದ್ದೀರಾ ಅಥವಾ ನೋಡುವವರೇ? ಏನಾಗುವಿರಿ? ಹೀರೋ ಪಾತ್ರಧಾರಿಯಾಗಿದ್ದೀರಲ್ಲವೆ. ಈಗ ಇಮರ್ಜ್ ಮಾಡಿಕೊಳ್ಳಿ, ಆ ದೃಶ್ಯವು ಹೇಗಿರುತ್ತದೆ ಎಂದು. ಇದೇ ಅಂತಿಮ ದೃಶ್ಯಕ್ಕಾಗಿ ಈಗಿನಿಂದ ತ್ರಿಕಾಲದರ್ಶಿಯಾಗಿದ್ದು ನೋಡಿರಿ - ಅದೆಂತಹ ದೃಶ್ಯವಾಗಿರುತ್ತದೆ ಮತ್ತು ಎಷ್ಟು ಸುಂದರವಾಗಿ ನಾವಾಗುತ್ತೇವೆ. ಶೃಂಗಾರಿತವಾಗಿರುವ ದಿವ್ಯ ಗುಣಮೂರ್ತಿ ಫರಿಶ್ತೆಯಿಂದ ದೇವತಾ, ಇದಕ್ಕಾಗಿ ಈಗಿನಿಂದ ತಮ್ಮನ್ನು ಸದಾ ಫರಿಶ್ತಾ ಸ್ವರೂಪದ ಸ್ಥಿತಿಯ ಅಭ್ಯಾಸವನ್ನು ಮಾಡಿಕೊಳ್ಳುತ್ತಾ ಮುಂದುವರೆಯುತ್ತಾ ಸಾಗಿರಿ. ನಾಲ್ಕು ವಿಶೇಷ ವಿಷಯಗಳೇನಿದೆ - ಜ್ಞಾನಮೂರ್ತಿ, ನಿರಂತರ ನೆನಪಿನ ಮೂರ್ತಿ, ಸರ್ವ ದಿವ್ಯ ಗುಣಗಳ ಮೂರ್ತಿ, ಒಂದು ದಿವ್ಯಗುಣದ ಕೊರತೆಯೇನಾದರೂ ಆಯಿತೆಂದರೆ 16 ಕಲಾ ಸಂಪನ್ನರೆಂದು ಹೇಳುವುದಿಲ್ಲ. 16 ಕಲಾ, ಸರ್ವ ಮತು ಸಂಪೂರ್ಣ - ಇದು ಮೂರರ ಮಹಿಮೆಯಾಗಿದೆ. ಸರ್ವಗುಣ ಸಂಪನ್ನ ಎಂದು ಹೇಳುತ್ತೀರಿ, ಸಂಪೂರ್ಣ ನಿರ್ವಿಕಾರಿ ಎಂದು ಹೇಳುತ್ತೀರಿ ಮತ್ತು 16 ಕಲಾ ಸಂಪನ್ನ ಎಂದು ಹೇಳುತ್ತೀರಿ. ಮೂರೂ ವಿಶೇಷತೆಗಳೂ ಇರಬೇಕು. 16 ಕಲಾ ಅರ್ಥಾತ್ ಸಂಪನ್ನವೂ ಆಗಬೇಕು, ಸಂಪೂರ್ಣರೂ ಆಗಿರಬೇಕು ಮತ್ತು ಸರ್ವವೂ ಇರಬೇಕು. ಅಂದಾಗ ಇದನ್ನು ಪರಿಶೀಲನೆ ಮಾಡಿಕೋಳ್ಳಿರಿ. ತಿಳಿಸಿದ್ದೆವಲ್ಲವೆ- ಈ ವರ್ಷದಲ್ಲಿ ಬಹಳ ಕಾಲದ ಲೆಕ್ಕದಿಂದ ಜಮಾ ಆಗುವಂತದ್ದಿದೆ ನಂತರ ಬಹಳ ಕಾಲದ ಲೆಕ್ಕವು ಮುಕ್ತಾಯವಾಗಿ ಬಿಡುತ್ತದೆ, ನಂತರ ಸ್ವಲ್ಪಕಾಲ ಎಂದು ಹೇಳುವುದರಲ್ಲಿ ಬರುತ್ತದೆ, ಬಹಳ ಕಾಲ ಅಲ್ಲ. ಬಹಳ ಕಾಲದ ಪುರುಷಾರ್ಥದ ಲೈನ್ನಲ್ಲಿ ಬಂದು ಬಿಡಿ. ಆಗಲೇ ಬಹಳ ಕಾಲದ ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳಲು ಅಧಿಕಾರಿಯಾಗುತ್ತೀರಿ. ಎರಡು-ನಾಲ್ಕು ಜನ್ಮಗಳೂ ಸಹ ಕಡಿಮೆಯಾಯಿತೆಂದರೆ ಬಹಳ ಕಾಲದ ಲೆಕ್ಕದಲ್ಲಿರುವುದಿಲ್ಲ. ಮೊದಲ ಜನ್ಮವಾಗಲಿ ಮತ್ತು ಮೊದಲ ಪ್ರಕೃತಿಯ ಶ್ರೇಷ್ಠ ಸುಖವಿರಲಿ. ವನ್-ವನ್-ವನ್ ಆಗಿರಲಿ. ಎಲ್ಲರಲ್ಲಿ ವನ್ ಇರಲಿ - ಅದಕ್ಕಾಗಿ ಏನು ಮಾಡಬೇಕಾಗುತ್ತದೆ? ಸೇವೆಯೂ ನಂಬರ್ವನ್, ಸ್ಥಿತಿಯೂ ನಂಬರ್ವನ್ ಇದ್ದಾಗ ವನ್-ವನ್ನಲ್ಲಿ ಬರುತ್ತೀರಲ್ಲವೆ! ಅಂದಾಗ ಸತ್ಯಯುಗದ ಆದಿಯಲ್ಲಿ ಬರುವ ನಂಬರ್ವನ್ ಆತ್ಮರ ಜೊತೆ ಪಾತ್ರವನ್ನಭಿನಯಿಸುವವರು ಮತ್ತು ನಂಬರ್ವನ್ ಜನ್ಮದಲ್ಲಿ ಪಾತ್ರವನ್ನಭಿನಯಿಸುವವರು. ಹಾಗಾದರೆ ಸಂವತ್ಸರದ ಆರಂಭವನ್ನೂ ತಾವು ಮಾಡುವಿರಿ. ಮೊಟ್ಟ ಮೊದಲ ಜನ್ಮದವರೇ ಮೊದಲ ದಿನಾಂಕ, ಮೊದಲ ತಿಂಗಳು, ಮೊದಲ ಸಂವತ್ಸರವನ್ನು ಆರಂಭಿಸುತ್ತಾರೆ. ಅಂದಾಗ ಡಬಲ್ ವಿದೇಶಿಗಳು ನಂಬರ್ವನ್ನಲ್ಲಿ ಬರುತ್ತೀರಲ್ಲವೆ. ಒಳ್ಳೆಯದು ಫರಿಶ್ತಾ ಸ್ಥಿತಿಯ ವಸ್ತ್ರವನ್ನು ಧರಿಸುವುದು ಬರುತ್ತದೆಯಲ್ಲವೆ! ಇದು ಹೊಳೆಯುತ್ತಿರುವ ವಸ್ತ್ರವಾಗಿದೆ. ಈ ಸ್ಮೃತಿ ಮತ್ತು ಸ್ವರೂಪರಾಗುವುದು ಅರ್ಥಾತ್ ಫರಿಶ್ತಾ ಉಡುಪನ್ನು ಧಾರಣೆ ಮಾಡುವುದು. ಹೊಳೆಯುವ ವಸ್ತುವು ದೂರದಿಂದಲೇ ಆಕರ್ಷಿಸುತ್ತದೆ. ಅಂದಾಗ ಈ ಫರಿಶ್ತಾ ವಸ್ತ್ರ ಅರ್ಥಾತ್ ಫರಿಶ್ತಾ ಸ್ವರೂಪವು ದೂರ ದೂರದವರೆಗೆ ಆತ್ಮರನ್ನು ಆಕರ್ಷಣೆ ಮಾಡುತ್ತದೆ. ಒಳ್ಳೆಯದು!

ಇಂದು ಯು.ಕೆ.ಯವರ ಸರದಿಯಾಗಿದೆ. ಯು.ಕೆ.,ಯವರ ವಿಶೇಷತೆಯೇನಾಗಿದೆ? ಲಂಡನ್ನ್ನು ಸತ್ಯಯುಗದಲ್ಲಿಯೂ ರಾಜಧಾನಿ ಮಾಡುತ್ತೀರಾ ಅಥವಾ ಕೇವಲ ಸುತ್ತಾಡುವ ಸ್ಥಾನವನ್ನಾಗಿ ಮಾಡುವಿರಾ? ಅದಿರುವುದಂತು ಯುನೈಟೆಡ್ ಕಿಂಗ್ಡಮ್ ಅಲ್ಲವೆ! ಅಲ್ಲಿಯೂ ಕಿಂಗ್ಡಮ್ ಮಾಡುವಿರಾ ಅಥವಾ ಕೇವಲ ಕಿಂಗ್ಸ್(ರಾಜರು) ಹೋಗಿ ಪರಿಕ್ರಮಣ ಹಾಕುವಿರಾ? ಆದರೂ ಯಾವ ಹೆಸರಿದೆ, ಕಿಂಗ್ಡಮ್(ರಾಜಧಾನಿ) ಹೇಳುತ್ತಾರೆ. ಅಂದಾಗ ಈ ಸಮಯದ ಸೇವೆಯ ರಾಜಧಾನಿಯಂತು ಇದ್ದೇ ಇದೆ. ಇಡೀ ವಿದೇಶದ ಸೇವೆಯ ರಾಜಧಾನಿಯಂತು ನಿಮಿತ್ತವಿದ್ದೇ ಇದೆ. ಕಿಂಗ್ಡಮ್ ಹೆಸರಂತು ಸರಿಯಿದೆಯಲ್ಲವೆ! ಎಲ್ಲರನ್ನೂ ಯುನೈಟ್ ಮಾಡುವ ಕಿಂಗ್ಡಮ್ ಆಗಿದೆ. ಎಲ್ಲಾಆತ್ಮರನ್ನು ತಂದೆಯೊಂದಿಗೆ ಮಿಲನ ಮಾಡಿಸುವ ರಾಜಧಾನಿಯಾಗಿದೆ. ಯು.ಕೆ.ಯವರನ್ನು ಬಾಪ್ದಾದಾರವರು ಹೇಳುತ್ತಾರೆ - ಓ.ಕೆ. ಆಗಿರುವವರು. ಯು.ಕೆ. ಅರ್ಥಾತ್ ಓ.ಕೆ. ಆಗಿರುವವರು. ಯಾವಾಗ ಯಾರೊಂದಿಗೇ ಕೇಳಿದರೂ ಓ.ಕೆ. ಹೀಗಿದ್ದೀರಲ್ಲವೆ. ಯಾವಾಗ ಸರಿಯಾಗಿರುತ್ತೀರಿ ಆಗ ಹೇಳುತ್ತೀರಿ - ಹಾ, ಓ.ಕೆ., ಓ.ಕೆ. ಎಂದು ಹೇಳುವುದರಲ್ಲಿ ಅಂತರವಾಗುತ್ತದೆ. ಅಂದಾಗ ಸಂಗಮಯುಗದ ರಾಜಧಾನಿ, ಸೇವೆಯ ರಾಜಧಾನಿ, ಇದರಲ್ಲಿ ರಾಜ್ಯ ಶಕ್ತಿ ಅರ್ಥಾತ್ ರಾಯಲ್ ಫ್ಯಾಮಿಲಿಯ ಆತ್ಮರು ತಯಾರಾಗುವ ಪ್ರೇರಣೆಯನ್ನು ನಾಲ್ಕೂ ಕಡೆಯಲ್ಲಿ ಹರಡಿರಿ. ಆಗ ರಾಜಧಾನಿಯಲ್ಲಿ ರಾಜ್ಯಾಧಿಕಾರಿಯನ್ನಾಗಿ ಮಾಡುವ ರಾಜ್ಯ-ಸ್ಥಾನವಂತು ಆಯಿತಲ್ಲವೆ. ಆದ್ದರಿಂದ ಬಾಪ್ದಾದಾರವರು ಪ್ರತೀ ದೇಶದ ವಿಶೇಷತೆಯನ್ನು ವಿಶೇಷ ರೂಪದಿಂದ ನೆನಪು ಮಾಡುತ್ತಾರೆ ಮತ್ತು ವಿಶೇಷತೆಯಿಂದ ಸದಾ ಮುಂದುವರೆಸುತ್ತಾರೆ. ಬಾಪ್ದಾದಾರವರು ಬಲಹೀನತೆಗಳನ್ನು ನೋಡುವುದಿಲ್ಲ, ಕೇವಲ ಸನ್ನೆ ಮಾಡುತ್ತಾರೆ. ಬಹಳ ಒಳ್ಳೆಯದು - ಒಳ್ಳೆಯದನ್ನು ಹೇಳುತ್ತಾ-ಹೇಳುತ್ತಾ ಬಹಳ ಒಳ್ಳೆಯವರಾಗಿ ಬಿಡುತ್ತೀರಿ. ಬಲಹೀನರಾಗಿದ್ದೀರಿ, ಬಲಹೀನರಾಗಿದ್ದೀರಿ ಎಂದು ಹೇಳುತ್ತೇವೆಂದರೆ ಬಲಹೀನರಾಗಿ ಬಿಡುತ್ತೀರಿ. ಒಂದಂತು ಮೊದಲು ಬಲಹೀನರಾಗಿರುತ್ತಾರೆ, ಇನ್ನೊಬ್ಬರು ಯಾವಾಗ ಹೇಳಿ ಬಿಡುತ್ತಾರೆ ಆಗ ಮೂರ್ಛಿತರಾಗಿ ಬಿಡುತ್ತಾರೆ. ಹೇಗಾದರೂ ಮೂರ್ಛಿತರಾಗಿರಲಿ ಆದರೆ ಅವರಿಗೆ ಶ್ರೇಷ್ಠ ಸ್ಮೃತಿಯ, ವಿಶೇಷತೆಗಳ ಸ್ಮೃತಿಯ ಸಂಜೀವಿನಿ ಮೂಲಿಕೆಯನ್ನು ತಿನ್ನಿಸುತ್ತೀರೆಂದರೆ ಮೂರ್ಛಿತರಿಂದ ಜಾಗೃತರಾಗಿ ಬಿಡುತ್ತ್ತಾರೆ. ಸಂಜೀವಿನಿ ಮೂಲಿಕೆಯು ಎಲ್ಲರ ಬಳಿ ಇದೆಯಲ್ಲವೆ. ಅಂದಮೇಲೆ ವಿಶೇಷತೆಗಳ ದರ್ಪಣವನ್ನು ಅವರ ಮುಂದೆ ಇಡಿ, ಏಕೆಂದರೆ ಪ್ರತಿಯೊಂದು ಬ್ರಾಹ್ಮಣ ಆತ್ಮನು ವಿಶೇಷವಾಗಿದ್ದಾರೆ. ಕೋಟಿಯಲ್ಲಿ ಕೆಲವರಲ್ಲವೆ. ಅಂದ ವಿಶೇಷವಾದರಲ್ಲವೆ! ಕೇವಲ ಆ ಸಮಯದಲ್ಲಿ ತನ್ನ ವಿಶೇಷತೆಗಳನ್ನು ಮರೆತು ಬಿಡುತ್ತಾರೆ. ಅವರಿಗೆ ಸ್ಮೃತಿ ತರಿಸುವುದರಿಂದ ವಿಶೇಷ ಆತ್ಮರಾಗಿಯೇ ಬಿಡುತ್ತಾರೆ. ತಾವು ವಿಶೇಷರನ್ನಾಗಿ ಮಾಡುವ ಅವಶ್ಯಕತೆಯಿಲ್ಲ. ಒಂದುವೇಳೆ ತಾವು ಯಾರಿಗಾದರೂ ಬಲಹೀನತೆಗಳನ್ನು ತಿಳಿಸುತ್ತೀರೆಂದರೆ, ಅವರು ಬಚ್ಚಿಡುತ್ತಾರೆ. ನಾನು ಹಾಗಿಲ್ಲ ಎಂದು ಅಲ್ಲಿಯೇ ನಿಲ್ಲಿಸುತ್ತಾರೆ. ತಾವು ವಿಶೇಷತೆಯನ್ನು ತಿಳಿಸಿರಿ. ಎಲ್ಲಿಯವರೆಗೆ ಬಲಹೀನತೆಯನ್ನು ತಾವೇ ಅನುಭವ ಮಾಡುವುದಿಲ್ಲ, ಅಲ್ಲಿಯವರೆಗೆ ಪರಿವರ್ತನೆ ಮಾಡಲು ಸಾಧ್ಯವಿಲ್ಲ. ಭಲೆ 50 ವರ್ಷಗಳು ತಾವು ಪರಿಶ್ರಮ ಪಡುತ್ತೀರಿ. ಆದ್ದರಿಂದ ಈ ಸಂಜೀವಿನಿ ಮೂಲಿಕೆಯಿಂದ, ಮೂರ್ಛಿತರನ್ನು ಜಾಗೃತಗೊಳಿಸಿ ಹಾರುತ್ತಾ ಮತ್ತು ಹಾರಿಸುತ್ತಾ ಸಾಗಿರಿ. ಇದನ್ನೇ ಯು.ಕೆ.ಯವರು ಮಾಡುತ್ತಾರಲ್ಲವೆ. ಒಳ್ಳೆಯದು.

ಲಂಡನ್ನಿಂದ ಅನ್ಯ ಬೇರೆ-ಬೇರೆ ಸ್ಥಾನಗಳಲ್ಲಿ ಎಷ್ಟೊಂದು ಮಂದಿ ಹೋಗಿದ್ದಾರೆ. ಭಾರತದಿಂದಲೇ ಹೋದರು, ಲಂಡನ್ನಿಂದ ಎಷ್ಟು ಮಂದಿ ಹೋದರು? ಆಸ್ಟ್ರೇಲಿಯಾದಿಂದ ಎಷ್ಟು ಮಂದಿ ಹೋದರು. ಆಸ್ಟ್ರೇಲಿಯಾ ಸಹ ವೃದ್ಧಿ ಹೊಂದಿದೆ ಮತ್ತು ಎಲ್ಲೆಲ್ಲಿ ಹೋಗಿದ್ದಾರೆ? ಜ್ಞಾನ ಗಂಗೆಯರು ಎಷ್ಟುದೂರ-ದೂರ ಹರಿಯುತ್ತಾರೆಯೋ ಅಷ್ಟೂ ಒಳ್ಳೆಯದು. ಯು.ಕೆ., ಆಸ್ಟ್ರೇಲಿಯಾ, ಅಮೇರಿಕಾ, ಯುರೋಪ್ನಲ್ಲಿ ಎಷ್ಟು ಸೇವಾಕೇಂದ್ರಗಳಿವೆ? (ಎಲ್ಲರೂ ತಮ್ಮ-ತಮ್ಮ ಸಂಖ್ಯೆಗಳನ್ನು ತಿಳಿಸಿದರು)

ಅಂದರೆ ವೃದ್ಧಿಯನ್ನು ಪ್ರಾಪ್ತಿ ಮಾಡುತ್ತಿದ್ದೀರಿ ಅಲ್ಲವೆ. ಈಗ ಯಾವುದಾದರೂ ವಿಶೇಷ ಸ್ಥಾನವು ಉಳಿದುಕೊಂಡಿದೆಯೇ? (ಬಹಳ ಇದೆ) ಒಳ್ಳೆಯದು - ಅದರ ಯೋಜನೆಯನ್ನೂ ಮಾಡುತ್ತಿದ್ದೀರಲ್ಲವೆ. ವಿದೇಶಕ್ಕೆ ಇದರ ಲಿಫ್ಟ್ ಇದೆ ಬಹಳ ಸಹಜವಾಗಿ ಸೇವಾಕೇಂದ್ರವನ್ನು ತೆರೆಯಬಹುದು. ಲೌಕಿಕ ಸೇವೆಯನ್ನೂ ಮಾಡಬಹುದು ಮತ್ತು ಅಲೌಕಿಕ ಸೇವೆಗೂ ನಿಮಿತ್ತರಾಗಬಹುದು. ಭಾರತದಲ್ಲಾದರೂ ನಿಮಂತ್ರಣದಲ್ಲಿ ಸೇವಾಕೇಂದ್ರದ ಸ್ಥಾಪನೆಯಾಗುವ ವಿಶೇಷತೆಯನ್ನು ಹೊಂದಿದೆ. ಆದರೆ ವಿದೇಶದಲ್ಲಿ ಸ್ವಯಂ ತಾನೇ ನಿಮಂತ್ರಣವನ್ನು ಸ್ವಯಂಗೆ ಕೊಡುತ್ತಾರೆ. ನಿಮಂತ್ರಣವನ್ನು ಕೊಡುವವರೂ ಸಹ ಸ್ವಯಂ ಮತ್ತು ತಲುಪುವವರೂ ಸಹ ಸ್ವಯಂ ಆಗಿರುತ್ತಾರೆ, ಹಾಗಾದರೆ ಇದೂ ಸಹ ಸೇವೆಯಲ್ಲಿ ಸಹಜ ವೃದ್ಧಿ ಹೊಂದುವ ಒಂದು ಲಿಫ್ಟ್ ಸಿಕ್ಕಿದೆ. ಎಲ್ಲಿಯೇ ಹೋಗುತ್ತೀರೆಂದರೆ ಇಬ್ಬರು-ಮೂವರು ಸೇರಿ, ಅಲ್ಲಿ ಸ್ಥಾಪನೆಗೆ ನಿಮಿತ್ತರಾಗಬಹುದು ಮತ್ತು ಆಗುತ್ತಿರುತ್ತಾರೆ. ಇದು ಡ್ರಾಮಾನುಸಾರ ಲಿಫ್ಟ್ ಎಂದಾದರೂ ಹೇಳಿ, ಗಿಫ್ಟ್ ಎಂದಾದರೂ ಹೇಳಿ, ಸಿಕ್ಕಿದೆ. ಏಕೆಂದರೆ ಸ್ವಲ್ಪ ಸಮಯದಲ್ಲಿ ಸೇವೆಯನ್ನು ಸಮಾಪ್ತಿ ಮಾಡಬೇಕೆಂದರೆ ತೀವ್ರ ಗತಿಯಿದ್ದಾಗ ಸಮಯದಲ್ಲಿ ಸಮಾಪ್ತಿಯಾಗುತ್ತದೆ. ಒಂದೇ ದಿನದಲ್ಲಿ ಬಹಳ ಸೇವಾಕೇಂದ್ರಗಳನ್ನು ತೆರೆಯಬಹುದು. ನಾಲ್ಕೂ ಕಡೆಗಳಲ್ಲಿ ವಿದೇಶದಲ್ಲಿ ನಿಮಿತ್ತರಾಗುವವವರು ವಿದೇಶಿಗಳ ಸೇವೆಯ ಅವಕಾಶವು ಸಹಜವಾಗಿ ಇದೆ. ಭಾರತದವರನ್ನು ನೋಡಿ - ವಿಸಾ ಸಹ ಸಿಗುವುದು ಕಷ್ಟವಿದೆ. ಅಂದಾಗ ಅಲ್ಲಿರುವವರೇ ಅಲ್ಲಿಯ ಸೇವೆಗೆ ನಿಮಿತ್ತರಾಗುವ ಅವಕಾಶ ಇದಾಗಿದೆ. ಆದ್ದರಿಂದ ಸೇವೆಯ ಅವಕಾಶವಿದೆ. ಹೇಗೆ ಲಾಸ್ಟ್ ಸೋ ಫಾಸ್ಟ್ ಹೋಗುವ ಅವಕಾಶವಿದೆ, ಹಾಗೆಯೇ ಸೇವೆಯ ಅವಕಾಶವೂ ಸಹ ಫಾಸ್ಟ್ ಆಗಿರುವುದು ಸಿಕ್ಕಿದೆ. ಆದ್ದರಿಂದ ನಾವು ಹಿಂದೆ ಬಂದೆವು ಎನ್ನುವ ದೂರು ಇರುವುದಿಲ್ಲ. ಹಿಂದೆ ಬರುವವರಿಗೂ ಸಹ ಫಾಸ್ಟ್ ಹೋಗುವ ಅವಕಾಶವೂ ಸಹ ವಿಶೇಷವಾಗಿ ಇದೆ. ಆದ್ದರಿಂದ ಪ್ರತಿಯೊಬ್ಬರೂ ಸೇವಾಧಾರಿಯಾಗಿದ್ದಾರೆ. ಎಲ್ಲರೂ ಸೇವಾಧಾರಿಯಾಗಿದ್ದೀರಾ ಅಥವಾ ಸೇವಾಕೇಂದ್ರದಲ್ಲಿರುವ ಸೇವಾಧಾರಿಯಾಗಿದ್ದೀರಾ? ಎಲ್ಲಿಯೇ ಇರಬಹುದು ಸೇವೆಯಿಲ್ಲದೆ ಶಾಂತವಾಗಿರಲು ಸಾಧ್ಯವಿಲ್ಲ. ಸೇವೆಯೇ ಶಾಂತಿ/ಸುಖದ ನಿದ್ರೆಯಾಗಿದೆ. ಹೇಳುತ್ತಾರಲ್ಲವೆ - ಸುಖದ ನಿದ್ರೆಯೇ ಜೀವನವಾಗಿದೆ. ಸೇವೆಯೇ ಸುಖದ ನಿದ್ರೆಯೆಂದಾದರೂ ಹೇಳಿ, ಮಲಗುವುದೆಂದಾದರೂ ಹೇಳಿ, ಸೇವೆಯಿಲ್ಲವೆಂದರೆ ನಿದ್ರೆಯೂ ಇಲ್ಲ. ತಿಳಿಸಿದೆವಲ್ಲವೆ, ಸೇವೆಯು ಕೇವಲ ವಾಣಿಯದಲ್ಲ, ಪ್ರತಿಯೊಂದು ಸೆಕೆಂಡ್ ಸಹ ಸೇವೆಯಾಗಿದೆ. ಪ್ರತೀ ಸಂಕಲ್ಪದಲ್ಲಿ ಸೇವೆಯಿದೆ. ಯಾರೂ ಹೀಗೆ ಹೇಳಲು ಸಾಧ್ಯವಿಲ್ಲ - ಭಲೆ ಭಾರತವಾಸಿಗಳು, ಭಲೆ ವಿದೇಶದಲಿರುವವರು, ಯಾರೇ ಬ್ರಾಹ್ಮಣರು ಹೀಗೆ ಹೇಳಲು ಸಾಧ್ಯವಿಲ್ಲ - ಸೇವೆಯ ಅವಕಾಶವಿಲ್ಲ ಎಂದು. ರೋಗವಿದ್ದರೂ ಮನಸ್ಸಾ ಸೇವೆ, ವಾಯುಮಂಡಲವನ್ನು ತಯಾರು ಮಾಡುವ ಸೇವೆ, ಪ್ರಕಂಪನಗಳನ್ನು ಹರಡಿಸುವ ಸೇವೆಯನ್ನಂತು ಮಾಡಬಹುದು. ಯಾವುದೇ ಪ್ರಕಾರದ ಸೇವೆಯನ್ನು ಮಾಡಿರಿ ಆದರೆ ಸೇವೆಯಲ್ಲಿಯೇ ಇರಬೇಕು. ಸೇವೆಯೇ ಜೀವನವಾಗಿದೆ. ಬ್ರಾಹ್ಮಣನ ಅರ್ಥವೇ ಆಗಿದೆ - ಸೇವಾಧಾರಿ. ಒಳ್ಳೆಯದು.

ಸದಾ ಹಾರುವ ಕಲೆ ಸರ್ವರ ಕಲ್ಯಾಣದ ಸ್ಥಿತಿಯಲ್ಲಿ ಸ್ಥಿತರಾಗಿರುವ, ಸದಾ ಸ್ವಯಂನ್ನು ಫರಿಶ್ತೆಯ ಅನುಭವವನ್ನು ಮಾಡುವಂತಹ, ಸದಾ ವಿಶ್ವದ ಮುಂದೆ ಇಷ್ಟ ದೇವನ ರೂಪದಲ್ಲಿ ಪ್ರತ್ಯಕ್ಷವಾಗುವ, ದೇವಾತ್ಮನು ಸದಾ ಸ್ವಯಂನ್ನು ವಿಶೇಷ ಆತ್ಮನೆಂದು ತಿಳಿದು ಅನ್ಯರಿಗೂ ವಿಶೇಷತೆಯನ್ನು ಅನುಭವ ಮಾಡಿಸುವ, ವಿಶೇಷ ಆತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಪಾರ್ಟಿಯೊಂದಿಗೆ:-

ಸದಾ ಸ್ವಯಂನ್ನು ಕರ್ಮಯೋಗಿಯ ಅನುಭವ ಮಾಡುತ್ತಿರಾ! ಕರ್ಮಯೋಗಿ ಜೀವನ ಅರ್ಥಾತ್ ಪ್ರತಿಯೊಂದು ಕಾರ್ಯವನ್ನು ಮಾಡುತ್ತಾ ನೆನಪಿನ ಯಾತ್ರೆಯಲ್ಲಿ ಸದಾ ಇರಿ. ಈ ಶ್ರೇಷ್ಠ ಕಾರ್ಯವನ್ನು ಶ್ರೇಷ್ಠ ತಂದೆಯ ಮಕ್ಕಳೇ ಮಾಡುತ್ತಾರೆ ಮತ್ತು ಸದಾ ಸಫಲರಾಗುತ್ತಾರೆ. ತಾವೆಲ್ಲರೂ ಕರ್ಮಯೋಗಿ ಆತ್ಮರಾಗಿದ್ದೀರಲ್ಲವೆ. ಕರ್ಮದಲ್ಲಿರುತ್ತಾ ಭಿನ್ನ ಮತ್ತು ಪ್ರಿಯ - ಸದಾ ಇದೇ ಅಭ್ಯಾಸದಿಂದ ಸ್ವಯಂನ್ನು ಮುಂದುವರೆಸಬೇಕಾಗಿದೆ. ಸ್ವಯಂನ ಜೊತೆ ಜೊತೆಗೆ ವಿಶ್ವದ ಜವಾಬ್ದಾರಿಯು ಎಲ್ಲರ ಮೇಲೆ ಇದೆ. ಆದರೆ ಇದೆಲ್ಲವೂ ಸ್ಥೂಲ ಸಾಧನವಾಗಿದೆ. ಕರ್ಮಯೋಗಿ ಜೀವನದ ಮೂಲಕ ಮುಂದುವರೆಯುತ್ತಾ ಸಾಗಿರಿ ಮತ್ತು ಮುಂದುವರೆಸುತ್ತಾ ಸಾಗಿರಿ. ಇದೇ ಜೀವನ ಅತಿ ಪ್ರಿಯವಾದ ಜೀವನವಾಗಿದೆ. ಸೇವೆಯೂ ಆಗಲಿ ಮತ್ತು ಖುಷಿಯೂ ಇರಲಿ. ಎರಡೂ ಜೊತೆ ಜೊತೆಗೆ ಸರಿಯಾಗಿದೆಯಲ್ಲವೆ. ಗೋಲ್ಡನ್ ಜುಬಿಲಿಯಂತು ಎಲ್ಲರದೂ ಆಗಿದೆ. ಗೋಲ್ಡನ್ ಅರ್ಥತ್ ಸತೋಪ್ರಧಾನ ಸ್ಥಿತಿಯಲ್ಲಿ ಸ್ಥಿತರಾಗಿರುವವರು. ಅಂದಾಗ ಸದಾ ತಮ್ಮನ್ನು ಈ ಶ್ರೇಷ್ಠ ಸ್ಥಿತಿಯ ಮೂಲಕ ಮುಂದುವರೆಸುತ್ತಾ ಸಾಗಿರಿ. ಎಲ್ಲರೂ ಸೇವೆಯನ್ನು ಬಹಳ ಚೆನ್ನಾಗಿ ಮಾಡಿದ್ದೀರಲ್ಲವೆ. ಸೇವೆಯ ಅವಕಾಶವೂ ಸಹ ಈಗಲೇ ಸಿಗುತ್ತದೆ, ನಂತರ ಈ ಅವಕಾಶವು ಸಮಾಪ್ತಿಯಾಗಿ ಬಿಡುತ್ತದೆ. ಅಂದಾಗ ಸದಾ ಸೇವೆಯಲ್ಲಿ ಮುಂದುವರೆಯುತ್ತಾ ಸಾಗಿರಿ. ಒಳ್ಳೆಯದು.

ವರದಾನ:  
ತಂದೆಯ ಛತ್ರಛಾಯೆಯ ಅನುಭವದ ಮೂಲಕ ವಿಘ್ನ ವಿನಾಶಕನ ಡಿಗ್ರಿಯನ್ನು ತೆಗೆದುಕೊಳ್ಳುವ ಅನುಭವೀ ಮೂರ್ತಿ ಭವ.

ಎಲ್ಲಿ ತಂದೆಯ ಜೊತೆ ಇದೆ, ಅಲ್ಲಿ ಯಾರೇನೂ ಮಾಡಲು ಸಾಧ್ಯವಿಲ್ಲ. ಈ ಜೊತೆಯ ಅನುಭವವೇ ಛತ್ರಛಾಯೆ ಆಗಿ ಬಿಡುತ್ತದೆ. ಬಾಪ್ದಾದಾರವರು ಸದಾ ಮಕ್ಕಳ ರಕ್ಷಣೆ ಮಾಡಿಯೇ ಮಾಡುತ್ತಾರೆ. ಪರೀಕ್ಷೆಗಳು ಬರುತ್ತವೆ, ತಾವುಗಳು ಅನುಭವಿಯಾಗುವುದಕ್ಕಾಗಿ. ಆದ್ದರಿಂದ ಸದಾ ತಿಳಿದುಕೊಳ್ಳಬೇಕು - ಈ ಪರೀಕ್ಷೆಯು ಮುಂದಿನ ಕ್ಲಾಸ್ಗೆ ಹೋಗುವುದಕ್ಕಾಗಿ ಬರುತ್ತಿದೆ. ಇದರಿಂದಲೇ ಸದಾಕಾಲಕ್ಕಾಗಿ ವಿಘ್ನ ವಿನಾಶಕನ ಡಿಗ್ರಿ ಮತ್ತು ಅನುಭವಿ ಮೂರ್ತಿಯಾಗುವ ವರದಾನವು ಸಿಕ್ಕಿ ಬಿಡುತ್ತದೆ. ಒಂದುವೇಳೆ ಈಗೇನಾದರೂ ಸ್ವಲ್ಪ ವಿಘ್ನವನ್ನು ಹಾಕುತ್ತಾರೆಂದರೆ, ನಿಧಾನ-ನಿಧಾನವಾಗಿ ತಣ್ಣಗಾಗಿ ಬಿಡುತ್ತಾರೆ.

ಸ್ಲೋಗನ್:
ಯಾರು ಸಮಯದಲ್ಲಿ ಸಹಯೋಗಿಯಾಗುತ್ತಾರೆ, ಅವರಿಗೆ ಒಂದಕ್ಕೆ ಪದಮದಷ್ಟು ಫಲ ಸಿಕ್ಕಿ ಬಿಡುತ್ತದೆ.


ಮುರಳಿ ಪ್ರಶ್ನೆಗಳು :

1. ಸರ್ವರ ಕಲ್ಯಾಣ ಅರ್ಥಾತ್ ಪರಿವರ್ತನಾ ಕಾರ್ಯವು ಯಾವಗ ಸಂಪನ್ನವಾಗುವುದು?
ಅ. ಸ್ವಯಂ ಸಂಪನ್ನವಾದಾಗ
ಆ. ಎಲ್ಲ ಮಕ್ಕಳು ಏಕರಸವಾಗಿ ಹಾರುವ ಕಲೆಯವರಾದಾಗ
ಇ. ಬ್ರಾಹ್ಮಣ ಮಕ್ಕಳು ಕರ್ಮಾತೀತರಾದಾಗ

2. ಶ್ರೇಷ್ಠ ಸ್ಥಿತಿ ಯಾವುದಾಗಿದೆ?
ಅ. ಹಾರುವ ಕಲೆ
ಆ. ಏರುವ ಕಲೆ
ಇ. ಜಂಪ್ ಮಾಡುವ ಕಲೆ

3. ಹಾರುವ ಕಲೆ ಎಂತಹ ಸ್ಥಿತಿಯನ್ನು ಪ್ರಾಪ್ತಿ ಮಾಡಿಸುತ್ತದೆ?
ಅ. ಅವ್ಯಕ್ತ ಸ್ಥಿತಿಯನ್ನು
ಆ. ಕರ್ಮಾತೀತ ಸ್ಥಿತಿಯನ್ನು
ಇ. ಆತ್ಮಾಭಿಮಾನಿಯಾಗುವ ಸ್ಥಿತಿಯನ್ನು

4. ಹಾರುವ ಕಲೆಯು ಸರ್ವ ಆತ್ಮರನ್ನು ಯಾವುದರಿಂದ ಮುಕ್ತಗೊಳಿಸುತ್ತದೆ?
ಅ. ಭಿಕಾರಿತನದಿಂದ
ಆ. ಅಲೆದಾಟದಿಂದ
ಇ. ದುಃಖದಿಂದ

5. 16 ಕಲಾ ಸಂಪನ್ನರಾಗಲು ನಾಲ್ಕು ವಿಶೇಷ ವಿಷಯಗಳು ಯಾವುವು?

6. ತಂದೆಯ ಜೊತೆಯ ಅನುಭವವು ಏನಾಗಿ ಆಗಿ ಬಿಡುತ್ತದೆ?

7. ಸದಾಕಾಲಕ್ಕಾಗಿ ವಿಘ್ನ ವಿನಾಶಕನ ಡಿಗ್ರಿ ಮತ್ತು ಅನುಭವಿ ಮೂರ್ತಿಯ ವರದಾನವು ಯಾವಾಗ ಸಿಗುವುದು?

8. ಯಾವಾಗ ಅಂತಿಮ ದೃಶ್ಯವಾಗುತ್ತದೆ, ಆಗ ತಾವು ಏನು ಮಾಡಿಸುವವರಾಗುತ್ತೀರಿ?

9. ಅಂತಿಮ ದೃಶ್ಯಕ್ಕಾಗಿ ನಾವು ಯಾವ ಅಭ್ಯಾಸ ಮಾಡಬೇಕು?

10. ಸೇವೆಯಲ್ಲಿಯೂ ನಂಬರ್ವನ್, ಸ್ಥಿತಿಯೂ ನಂಬರ್ವನ್ ಇದ್ದಾಗ ಯಾರ ಜೊತೆ ಪಾತ್ರವನ್ನಭಿನಯಿಸುತ್ತೀರಿ?