05.09.20         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ಈ ಬೇಹದ್ದಿನ ನಾಟಕದಲ್ಲಿ ನೀವಾತ್ಮಗಳಿಗೆ ತಮ್ಮ-ತಮ್ಮದೇ ಆದ ಪಾತ್ರವು ಸಿಕ್ಕಿದೆ, ನೀವೀಗ ಈ ಶರೀರರೂಪಿ ವಸ್ತ್ರವನ್ನು ಕಳಚಿ ಮನೆಗೆ ಹೋಗಬೇಕಾಗಿದೆ, ಮತ್ತೆ ಹೊಸ ರಾಜಧಾನಿಯಲ್ಲಿ ಬರಬೇಕಾಗಿದೆ"

ಪ್ರಶ್ನೆ:
ತಂದೆಯು ಪ್ರೇರಣೆಯಿಂದ ಯಾವುದೇ ಕಾರ್ಯವನ್ನು ಮಾಡುವುದಿಲ್ಲ, ಈ ಭೂಮಿಯಲ್ಲಿ ಅವರ ಅವತರಣೆಯಾಗುತ್ತದೆ, ಇದು ಯಾವ ಮಾತಿನಿಂದ ಸಿದ್ಧವಾಗುತ್ತದೆ?

ಉತ್ತರ:
ತಂದೆಗೆ ಮಾಡಿ-ಮಾಡಿಸುವವರೆಂದು ಹೇಳುತ್ತಾರೆ, ಪ್ರೇರಣೆಯೆಂದರೆ ವಿಚಾರವೆಂದರ್ಥ. ಪ್ರೇರಣೆಯಿಂದ ಹೊಸ ಪ್ರಪಂಚದ ಸ್ಥಾಪನೆಯಾಗುವುದಿಲ್ಲ. ತಂದೆಯು ಮಕ್ಕಳಿಂದ ಸ್ಥಾಪನೆ ಮಾಡಿಸುತ್ತಾರೆ, ಕರ್ಮೇಂದ್ರಿಯಗಳಿಲ್ಲದೆ ಏನನ್ನೂ ಮಾಡಿಸಲು ಸಾಧ್ಯವಿಲ್ಲ. ಆದ್ದರಿಂದ ಅವರಿಗೆ ಶರೀರದ ಆಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ.

ಓಂ ಶಾಂತಿ.
ಆತ್ಮಿಕ ಮಕ್ಕಳು ಆತ್ಮಿಕ ತಂದೆಯ ಸನ್ಮುಖದಲ್ಲಿ ಕುಳಿತಿದ್ದೀರಿ, ಅಂದರೆ ಆತ್ಮಗಳು ತಮ್ಮ ತಂದೆಯ ಮುಂದೆ ಕುಳಿತಿದ್ದೀರಿ. ಆತ್ಮವು ಅವಶ್ಯವಾಗಿ ಶರೀರದ ಜೊತೆಯೇ ಕುಳಿತುಕೊಳ್ಳುವುದು. ತಂದೆಯು ಶರೀರದ ಆಧಾರವನ್ನು ತೆಗೆದುಕೊಂಡಾಗಲೇ ಸನ್ಮುಖದಲ್ಲಿ ಬರುತ್ತಾರೆ. ಇದಕ್ಕೇ ಹೇಳಲಾಗುತ್ತದೆ - ಆತ್ಮರು ಮತ್ತು ಪರಮಾತ್ಮನು ಬಹಳಕಾಲ ಅಗಲಿದ್ದರು.... ನೀವು ಮಕ್ಕಳು ತಿಳಿದುಕೊಂಡಿದ್ದೀರಿ ಶ್ರೇಷ್ಠಾತಿ ಶ್ರೇಷ್ಠ ತಂದೆಗೇ ಈಶ್ವರ, ಪ್ರಭು, ಪರಮಾತ್ಮ ಎಂದು ಭಿನ್ನ ಹೆಸರುಗಳನ್ನು ಕೊಟ್ಟಿದ್ದಾರೆ, ಲೌಕಿಕ ತಂದೆಗೆ ಎಂದೂ ಪರಮಪಿತನೆಂದು ಹೇಳಲಾಗುವುದಿಲ್ಲ. ಕೇವಲ ಪರಮಪಿತನೆಂದು ಬರೆದರೂ ಸಹ ಪರವಾಗಿಲ್ಲ. ಪರಮಪಿತನೆಂದರೆ ಎಲ್ಲಾ ಆತ್ಮಗಳ ಅವರೊಬ್ಬರೇ ತಂದೆ ಆಗಿದ್ದಾರೆ. ಮಕ್ಕಳಿಗೆ ತಿಳಿದಿದೆ - ನಾವು ಪರಮಪಿತ ಜೊತೆ ಕುಳಿತಿದ್ದೇವೆ. ಪರಮಪಿತ ಪರಮಾತ್ಮ ಮತ್ತು ನಾವಾತ್ಮಗಳು ಶಾಂತಿಧಾಮದ ನಿವಾಸಿಗಳಾಗಿದ್ದೇವೆ ಇಲ್ಲಿಗೆ ಪಾತ್ರವನ್ನಭಿನಯಿಸಲು ಬರುತ್ತೇವೆ. ಸತ್ಯಯುಗದಿಂದ ಹಿಡಿದು ಕಲಿಯುಗದ ಅಂತ್ಯದವರೆಗೆ ಪಾತ್ರವನ್ನಭಿನಯಿಸಿದ್ದೇವೆ. ಈಗ ಇದು ಹೊಸ ರಚನೆಯಾಯಿತು. ರಚಯಿತ ತಂದೆಯೂ ತಿಳಿಸುತ್ತಾರೆ - ನೀವು ಮಕ್ಕಳು ಈ ರೀತಿ ಪಾತ್ರವನ್ನಭಿನಯಿಸುತ್ತೀರಿ. ನಾವು 84 ಜನ್ಮಗಳ ಚಕ್ರವನ್ನು ಸುತ್ತಿದ್ದೇವೆಂದು ಮೊದಲು ತಿಳಿದುಕೊಂಡಿರಲಿಲ್ಲ ಈಗ ನೀವು ಮಕ್ಕಳೊಂದಿಗೇ ತಂದೆಯು ಮಾತನಾಡುತ್ತಾರೆ, ಯಾರು 84 ಜನ್ಮಗಳ ಚಕ್ರವನ್ನು ಸುತ್ತಿದ್ದೀರಿ. ಎಲ್ಲರೂ 84 ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ. ಈ 84 ಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು ತಿಳಿಸಬೇಕಾಗಿದೆ ಬಾಕಿ ಲಕ್ಷಾಂತರ ವರ್ಷಗಳ ಮಾತೇ ಇಲ್ಲ. ನಾವು ಪ್ರತೀ 5000 ವರ್ಷಗಳ ನಂತರ ಪಾತ್ರವನ್ನಭಿನಯಿಸಲು ಬರುತ್ತೇವೆ. ನಾವು ಪಾತ್ರಧಾರಿಗಳಾಗಿದ್ದೇವೆಂಬುದು ಮಕ್ಕಳಿಗೆ ತಿಳಿದಿದೆ. ಸರ್ವಶ್ರೇಷ್ಠ ಭಗವಂತನಿಗೂ ವಿಚಿತ್ರ ಪಾತ್ರವಿದೆ. ಬ್ರಹ್ಮಾ ಮತ್ತು ವಿಷ್ಣುವಿನದು ವಿಚಿತ್ರ ಪಾತ್ರವೆಂದು ಹೇಳುವುದಿಲ್ಲ. ಇಬ್ಬರೂ 84 ಜನ್ಮಗಳ ಚಕ್ರವನ್ನು ಸುತ್ತುತ್ತಾರೆ ಬಾಕಿ ಈ ಪ್ರಪಂಚದಲ್ಲಿ ಶಂಕರನ ಪಾತ್ರವಿಲ್ಲ. ತ್ರಿಮೂರ್ತಿ ಚಿತ್ರದಲ್ಲಿ ಸ್ಥಾಪನೆ, ವಿನಾಶ, ಪಾಲನೆ ಎಂದು ತೋರಿಸುತ್ತಾರೆ. ಯಾವ ಚಿತ್ರಗಳನ್ನು ತೋರಿಸಿದ್ದೀರೋ ಅದರ ಮೇಲೆ ತಿಳಿಸಿಕೊಡಬೇಕು. ಸಂಗಮಯುಗದಲ್ಲಿ ಹಳೆಯ ಪ್ರಪಂಚದ ವಿನಾಶವಂತೂ ಆಗಲೇಬೇಕಾಗಿದೆ. ಪ್ರೇರಕ ಶಬ್ಧವೂ ಸಹ ತಪ್ಪಾಗಿದೆ. ಹೇಗೆ ಕೆಲವರು ಹೇಳುತ್ತಾರೆ - ಇಂದು ನಮಗೆ ಹೊರಗಡೆ ಹೋಗುವ ಪ್ರೇರಣೆಯಿಲ್ಲ ಎಂದು. ಪ್ರೇರಣೆ ಎಂದರೆ ವಿಚಾರ. ಪ್ರೇರಣೆ ಎಂಬುದಕ್ಕೆ ಮತ್ತ್ಯಾವುದೇ ಅರ್ಥವಿಲ್ಲ. ಪರಮಾತ್ಮನು ಪ್ರೇರಣೆಯಿಂದ ಕೆಲಸ ಮಾಡುವುದಿಲ್ಲ ಅಥವಾ ಪ್ರೇರಣೆಯಿಂದ ಜ್ಞಾನವು ಸಿಗುವುದಿಲ್ಲ. ತಂದೆಯು ಈ ಕರ್ಮೇಂದ್ರಿಯಗಳ ಮೂಲಕ ಪಾತ್ರವನ್ನಭಿನಯಿಸಲು ಬರುತ್ತಾರೆ. ಮಾಡಿ-ಮಾಡಿಸುವವರಲ್ಲವೆ. ಮಕ್ಕಳಿಂದ ಮಾಡಿಸುತ್ತಾರೆ. ಶರೀರವಿಲ್ಲದೆ ಮಾಡಲು ಸಾಧ್ಯವಿಲ್ಲ - ಈ ಮಾತುಗಳನ್ನು ಯಾರೂ ತಿಳಿದುಕೊಂಡಿಲ್ಲ. ಈಶ್ವರ ತಂದೆಯನ್ನೇ ಅರಿತುಕೊಂಡಿಲ್ಲ. ಋಷಿ-ಮುನಿ ಮೊದಲಾದವರೂ ಸಹ ನಾವು ಈಶ್ವರನ ಬಗ್ಗೆ ತಿಳಿದುಕೊಂಡಿಲ್ಲವೆಂದು ಹೇಳುತ್ತಿದ್ದರು. ಆತ್ಮನ ಜ್ಞಾನವಾಗಲಿ, ಪರಮಾತ್ಮನ ಜ್ಞಾನವಾಗಲಿ ಯಾರಲ್ಲಿಯೂ ಇಲ್ಲ. ತಂದೆಯು ಮುಖ್ಯ ರಚಯಿತ, ನಿರ್ದೇಶಕನಾಗಿದ್ದಾರೆ. ನಿರ್ದೇಶನವನ್ನೂ ಕೊಡುತ್ತಾರೆ, ಶ್ರೀಮತವನ್ನೂ ಕೊಡುತ್ತಾರೆ. ಮನುಷ್ಯರ ಬುದ್ಧಿಯಲ್ಲಂತೂ ಸರ್ವವ್ಯಾಪಿಯ ಜ್ಞಾನವಿದೆ. ಅವರು ನಮ್ಮ ತಂದೆಯಂದು ನೀವು ಹೇಳುತ್ತೀರಿ ಆದರೆ ಮನುಷ್ಯರು ಸರ್ವವ್ಯಾಪಿಯಂದು ಹೇಳಿರುವ ಕಾರಣ ತಂದೆಯೆಂದು ತಿಳಿಯುವುದಿಲ್ಲ. ಇದು ಬೇಹದ್ದಿನ ತಂದೆಯ ಪರಿವಾರವೆಂದು ನೀವು ತಿಳಿಯುತ್ತೀರಿ. ಮನುಷ್ಯರು ಸರ್ವವ್ಯಾಪಿಯೆಂದು ಹೇಳಿರುವುದರಿಂದ ಆ ಪರಿವಾರದ ಅನುಭೂತಿಯೇ ಆಗುವುದಿಲ್ಲ. ಅವರಿಗೆ ನಿರಾಕಾರಿ ಶಿವ ತಂದೆ, ನಿರಾಕಾರಿ ಆತ್ಮಗಳ ಪಿತನೆಂದು ಹೇಳಲಾಗುತ್ತದೆ. ಶರೀರವಿದ್ದಾಗಲೇ ಆತ್ಮವು ಬಾಬಾ ಎಂದು ಹೇಳುತ್ತದೆ. ಶರೀರವಿಲ್ಲದೆ ಆತ್ಮವು ಮಾತನಾಡಲು ಸಾಧ್ಯವಿಲ್ಲ. ಭಕ್ತಿಮಾರ್ಗದಲ್ಲಿ ಕರೆಯುತ್ತಾ ಬಂದಿದ್ದೀರಿ, ಅವರು ದುಃಖಹರ್ತ-ಸುಖಕರ್ತನೆಂದು ತಿಳಿಯುತ್ತಾರೆ. ಸುಖವು ಸುಖಧಾಮದಲ್ಲಿಯೂ, ಶಾಂತಿಯು ಶಾಂತಿಧಾಮದಲ್ಲಿಯೂ ಸಿಗುತ್ತದೆ, ಇಲ್ಲಂತೂ ದುಃಖವೇ ದುಃಖವಿದೆ. ಈ ಜ್ಞಾನವು ನಿಮಗೆ ಈ ಸಂಗಮಯುಗದಲ್ಲಿಯೇ ಸಿಗುತ್ತದೆ. ಸಂಗಮವೆಂದರೆ ಹಳೆಯದು ಮತ್ತು ಹೊಸದರ ನಡುವಿನ ಸಮಯ. ಯಾವಾಗ ಹೊಸ ಪ್ರಪಂಚದ ಸ್ಥಾಪನೆ ಮತ್ತು ಹಳೆಯ ಪ್ರಪಂಚದ ವಿನಾಶವಾಗಬೇಕಾಗಿದೆಯೋ ಆಗ ತಂದೆಯು ಬರುತ್ತಾರೆ. ಯಾವಾಗಲೂ ಮೊಟ್ಟ ಮೊದಲಿಗೆ ಹೊಸ ಪ್ರಪಂಚದ ಸ್ಥಾಪನೆಯಂದೇ ಹೇಳಬೇಕು, ಹಳೆಯ ಪ್ರಪಂಚದ ವಿನಾಶವೆಂದು ಮೊದಲಿಗೆ ಹೇಳುವುದು ತಪ್ಪಾಗಿ ಬಿಡುತ್ತದೆ. ಈಗ ನಿಮಗೆ ಬೇಹದ್ದಿನ ನಾಟಕದ ಜ್ಞಾನವು ಸಿಗುತ್ತದೆ. ಹೇಗೆ ಆ ನಾಟಕದಲ್ಲಿ ಪಾತ್ರಧಾರಿಗಳು ಬರುವಾಗ ಮನೆಯಿಂದ ಸಾಧಾರಣ ಉಡುಪುಗಳನ್ನು ಧರಿಸಿ ಬರುತ್ತಾರೆ ಮತ್ತೆ ನಾಟಕದ ಸ್ಟೇಜಿನ ಹಿಂದೆ ವಸ್ತ್ರಗಳನ್ನು ಬದಲಾಯಿಸಿಕೊಳ್ಳುತ್ತಾರೆ. ಮತ್ತೆ ನಾಟಕವು ಮುಗಿದ ನಂತರ ಆ ವಸ್ತ್ರಗಳನ್ನು ಕಳಚಿ ಮನೆಗೆ ಹೋಗುತ್ತಾರೆ. ಇಲ್ಲಿ ನೀವಾತ್ಮಗಳು ಮನೆಯಿಂದ ಅಶರೀರಿಯಾಗಿ ಬರುತ್ತೀರಿ. ಇಲ್ಲಿ ಬಂದು ಶರೀರರೂಪಿ ವಸ್ತ್ರವನ್ನು ಧರಿಸುತ್ತೀರಿ. ಪ್ರತಿಯೊಬ್ಬರಿಗೆ ತಮ್ಮ-ತಮ್ಮದೇ ಆದ ಪಾತ್ರವು ಸಿಕ್ಕಿದೆ, ಇದು ಬೇಹದ್ದಿನ ನಾಟಕವಾಗಿದೆ. ಈಗ ಈ ಬೇಹದ್ದಿನ ಇಡೀ ಪ್ರಪಂಚವೇ ಹಳೆಯದಾಗಿದೆ. ನಂತರ ಹೊಸ ಪ್ರಪಂಚವಾಗುವುದು. ಅದು ಬಹಳ ಚಿಕ್ಕದಾಗಿರುತ್ತದೆ, ಒಂದೇ ಧರ್ಮವಿರುತ್ತದೆ. ನೀವು ಮಕ್ಕಳು ಈ ಹಳೆಯ ಪ್ರಪಂಚದಿಂದ ಹೊರಟು ಹದ್ದಿನ ಪ್ರಪಂಚದಿಂದ, ಹೊಸ ಪ್ರಪಂಚದಲ್ಲಿ ಬರಬೇಕಾಗಿದೆ ಏಕೆಂದರೆ ಅಲ್ಲಿ ಒಂದು ಧರ್ಮವಿರುತ್ತದೆ. ಅನೇಕ ಧರ್ಮ, ಅನೇಕ ಮನುಷ್ಯರಿದ್ದರೆ ಅದು ಬೇಹದ್ದಾಗಿ ಬಿಡುತ್ತದೆ. ಸತ್ಯಯುಗದಲ್ಲಂತೂ ಒಂದೇ ಧರ್ಮ, ಕೆಲವರೇ ಮನುಷ್ಯರಿರುತ್ತಾರೆ. ಒಂದು ಧರ್ಮದ ಸ್ಥಾಪನೆಗಾಗಿ ತಂದೆಯು ಬರುತ್ತಾರೆ. ನೀವು ಮಕ್ಕಳಿಗೆ ಈ ಚಕ್ರವು ಹೇಗೆ ಸುತ್ತುತ್ತದೆಯೆಂದು, ಬೇಹದ್ದಿನ ನಾಟಕದ ರಹಸ್ಯವನ್ನು ತಿಳಿದುಕೊಂಡಿದ್ದೀರಿ. ಈ ಸಮಯದಲ್ಲಿ ಏನೆಲ್ಲವೂ ನಡೆಯುತ್ತದೆಯೋ ಅದರ ನೆನಪಾರ್ಥವಾಗಿ ಭಕ್ತಿಮಾರ್ಗದಲ್ಲಿ ಹಬ್ಬಗಳನ್ನಾಚರಿಸುತ್ತಾರೆ. ನಂಬರ್ವಾರ್ ಯಾವ-ಯಾವ ಹಬ್ಬಗಳಿವೆ ಎಂಬುದನ್ನೂ ನೀವು ತಿಳಿದುಕೊಂಡಿದ್ದೀರಿ. ಶಿವ ತಂದೆಯ ಜಯಂತಿಯೇ ಸರ್ವ ಶ್ರೇಷ್ಠವೆಂದು ಹೇಳಲಾಗುತ್ತದೆ. ಅವರು ಬಂದ ನಂತರವೇ ಅನ್ಯ ಹಬ್ಬಗಳಾಗುವವು. ಶಿವ ತಂದೆಯು ಬಂದು ಮೊಟ್ಟ ಮೊದಲಿಗೆ ಗೀತೆಯನ್ನು ತಿಳಿಸುತ್ತಾರೆ ಅರ್ಥಾತ್ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ, ಯೋಗವನ್ನೂ ಕಲಿಸುತ್ತಾರೆ. ಜೊತೆ ಜೊತೆಗೆ ನಿಮಗೆ ಓದಿಸುತ್ತಾರೆ ಅಂದಾಗ ಮೊಟ್ಟ ಮೊದಲಿಗೆ ತಂದೆಯು ಬಂದರು, ಶಿವ ಜಯಂತಿಯಾಯಿತು ನಂತರ ಗೀತಾ ಜಯಂತಿಯಾಗುತ್ತದೆ. ಆತ್ಮಗಳಿಗೇ ಜ್ಞಾನವನ್ನು ತಿಳಿಸುತ್ತಾರೆ ಅಂದಮೇಲೆ ಗೀತಾ ಜಯಂತಿಯಾಯಿತು. ನೀವು ಮಕ್ಕಳು ವಿಚಾರ ಮಾಡಿ, ಹಬ್ಬಗಳನ್ನು ನಂಬರ್ವಾರ್ ಬರೆಯಿರಿ. ಈ ಮಾತುಗಳನ್ನು ಈ ಧರ್ಮದವರೇ ತಿಳಿದುಕೊಳ್ಳುತ್ತಾರೆ. ಪ್ರತಿಯೊಬ್ಬರಿಗೆ ತಮ್ಮ-ತಮ್ಮ ಧರ್ಮವು ಪ್ರಿಯವೆನಿಸುತ್ತದೆ. ಅನ್ಯ ಧರ್ಮದವರ ಮಾತೇ ಇಲ್ಲ, ಭಲೆ ಯಾರಿಗಾದರೂ ಅನ್ಯ ಧರ್ಮವು ಪ್ರಿಯವಾಗಲೂಬಹುದು. ಆದರೆ ಆ ಧರ್ಮದಲ್ಲಂತೂ ಬರಲು ಸಾಧ್ಯವಿಲ್ಲ. ಸ್ವರ್ಗದಲ್ಲಿ ಮತ್ತ್ಯಾವುದೇ ಧರ್ಮದವರು ಬರುವುದಿಲ್ಲ. ವೃಕ್ಷದ ಚಿತ್ರದಲ್ಲಿ ಸ್ಪಷ್ಟವಾಗಿದೆ, ಯಾವ-ಯಾವ ಧರ್ಮದವರು ಯಾವ ಸಮಯದಲ್ಲಿ ಬರುವರೊ ಪುನಃ ಅದೇ ಸಮಯದಲ್ಲಿ ಬರುತ್ತಾರೆ. ಮೊದಲು ತಂದೆಯು ಬರುತ್ತಾರೆ, ಅವರೇ ಬಂದು ರಾಜಯೋಗವನ್ನು ಕಲಿಸುತ್ತಾರೆ. ಆದ್ದರಿಂದ ಶಿವ ಜಯಂತಿ ನಂತರ ಗೀತಾ ಜಯಂತಿ ಮತ್ತೆ ನಾರಾಯಣ ಜಯಂತಿಯೆಂದು ಹೇಳುತ್ತಾರೆ. ನಾರಾಯಣ ಜಯಂತಿಯೆಂದರೆ ಸತ್ಯಯುಗದಲ್ಲಾಗುತ್ತದೆ. ಅದನ್ನೂ ನಂಬರ್ವಾರ್ ಬರೆಯಬೇಕಾಗಿದೆ. ಇವು ಜ್ಞಾನದ ಮಾತುಗಳಾಗಿವೆ. ಶಿವ ಜಯಂತಿಯು ಯಾವಾಗ ಆಯಿತೆಂಬುದನ್ನೂ ತಿಳಿದುಕೊಂಡಿಲ್ಲ. ತಂದೆಯು ಜ್ಞಾನವನ್ನು ತಿಳಿಸಿದರು, ಇದಕ್ಕೆ ಗೀತೆಯಂದು ಹೇಳಲಾಗುತ್ತದೆ. ಇದರ ನಂತರ ವಿನಾಶವಾಗುತ್ತದೆ. ಜಗದಂಬೆ ಮೊದಲಾದವರ ಜಯಂತಿಗೆ ಯಾವುದೇ ರಜಾ ದಿನವಿಲ್ಲ. ಮನುಷ್ಯರು ಯಾರದೇ ತಿಥಿ-ತಾರೀಖು ಇತ್ಯಾದಿಗಳನ್ನು ತಿಳಿದುಕೊಂಡಿಲ್ಲ. ಲಕ್ಷ್ಮೀ-ನಾರಾಯಣ, ರಾಮ-ಸೀತೆಯರ ರಾಜ್ಯವನ್ನೇ ತಿಳಿದುಕೊಂಡಿಲ್ಲ. 2500 ವರ್ಷಗಳಿಂದ ಯಾರೆಲ್ಲಾ ಬಂದಿದ್ದಾರೆಯೋ ಅವರು ಬಂದಿದ್ದಾರೆ ಆದರೆ ಅದಕ್ಕಿಂತಲೂ ಮೊದಲು ಯಾವ ಆದಿ ಸನಾತನ ದೇವಿ-ದೇವತೆಗಳಿದ್ದರೋ ಅವರಿಗೆ ಎಷ್ಟು ಸಮಯವಾಯಿತು ಎಂಬುದನ್ನು ತಿಳಿದುಕೊಂಡಿಲ್ಲ. 5000 ವರ್ಷಗಳಿಗಿಂತಲೂ ದೊಡ್ಡ ಕಲ್ಪವಂತೂ ಇರಲು ಸಾಧ್ಯವಿಲ್ಲ. ಅರ್ಧ ಭಾಗವಂತೂ ಬಹಳಷ್ಟು ಜನಸಂಖ್ಯೆಯಾಯಿತು, ಇನ್ನು ಅರ್ಧ ಭಾಗದಲ್ಲಿ ಇವರ ರಾಜ್ಯವಿರುತ್ತದೆ. ಅಂದಮೇಲೆ ಲಕ್ಷಾಂತರ ವರ್ಷಗಳ ರಾಜ್ಯವಿರಲು ಹೇಗೆ ಸಾಧ್ಯ! 84 ಲಕ್ಷ ಜನ್ಮಗಳಿರುವುದಕ್ಕೂ ಸಾಧ್ಯವಿಲ್ಲ. ಕಲಿಯುಗದ ಆಯಸ್ಸು ಲಕ್ಷಾಂತರ ವರ್ಷಗಳಾಯಿತೆಂದು ಅವರು ತಿಳಿಯುತ್ತಾರೆ, ಹೀಗೆ ಹೇಳಿ ಮನುಷ್ಯರನ್ನು ಅಂಧಕಾರದಲ್ಲಿ ಹಾಕಿದ್ದಾರೆ. ಇಡೀ ನಾಟಕವು 5000 ವರ್ಷಗಳೆಂದು ಕೇವಲ ಕಲಿಯುಗಕ್ಕಾಗಿ, ಇನ್ನೂ 40 ಸಾವಿರ ವರ್ಷಗಳು ಉಳಿದಿವೆಯೆಂದು ಮನುಷ್ಯರು ತಿಳಿದಿದ್ದಾರೆ. ಭಗವಂತನು ಬರುವರೆಂದು ತಿಳಿಯುತ್ತಾರೆ ಆದರೆ ಭಗವಂತನು ಸಂಗಮಯುಗದಲ್ಲಿಯೇ ಬರುತ್ತಾರೆ. ಮಹಾಭಾರತ ಯುದ್ಧವೂ ಸಹ ಸಂಗಮಯುಗದಲ್ಲಿಯೇ ಆಗುತ್ತದೆ. ತಂದೆಯು ತಿಳಿಸುತ್ತಾರೆ - ನಾನು ಕಲ್ಪ-ಕಲ್ಪವೂ ಸಂಗಮಯುಗದಲ್ಲಿ ಬರುತ್ತೇನೆ. ತಂದೆಯು ಹೊಸ ಪ್ರಪಂಚದ ಸ್ಥಾಪನೆ, ಹಳೆಯ ಪ್ರಪಂಚದ ವಿನಾಶ ಮಾಡಿಸಲು ಬರುತ್ತಾರೆ. ಹೊಸ ಪ್ರಪಂಚದ ಸ್ಥಾಪನೆ ಮಾಡಿದರೆ ಹಳೆಯ ಪ್ರಪಂಚದ ವಿನಾಶವು ಖಂಡಿತ ಆಗುವುದು. ಇದಕ್ಕಾಗಿಯೇ ಈ ಯುದ್ಧವಿದೆ. ಇದರಲ್ಲಿ ಶಂಕರನ ಪ್ರೇರಣೆಯ ಯಾವುದೇ ಮಾತಿಲ್ಲ. ಖಂಡಿತವಾಗಿಯೂ ಹಳೆಯ ಪ್ರಪಂಚ ಸಮಾಪ್ತಿಯಾಗುವುದು. ಭೂಕಂಪದಲ್ಲಿ ಕಟ್ಟಡಗಳೆಲ್ಲವೂ ಸಮಾಪ್ತಿಯಾಗುವುದು ಏಕೆಂದರೆ ಹೊಸ ಪ್ರಪಂಚವೂ ಬೇಕಲ್ಲವೆ. ಅವಶ್ಯವಾಗಿ ಹೊಸ ಪ್ರಪಂಚವಿತ್ತು, ದೆಹಲಿಯೇ ಸ್ವರ್ಗವಾಗಿತ್ತು, ಜಮುನಾ ನದಿಯ ತೀರದಲ್ಲಿತ್ತು. ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಚಿತ್ರಗಳೂ ಇವೆಯಲ್ಲವೆ. ಲಕ್ಷ್ಮೀ-ನಾರಾಯಣರನ್ನು ಸ್ವರ್ಗದ ದೇವತೆಗಳೆಂದು ಹೇಳುತ್ತಾರೆ. ಅಲ್ಲಿ ಹೇಗೆ ಸ್ವಯಂವರವಾಗುತ್ತದೆ ಎಂಬುದನ್ನು ನೀವು ಮಕ್ಕಳು ಸಾಕ್ಷಾತ್ಕಾರದಲ್ಲಿ ನೋಡಿದ್ದೀರಿ. ಅವೆಲ್ಲಾ ವಿಚಾರಗಳನ್ನು ತಂದೆಯು ರಿವೈಜ್ ಮಾಡಿಸುತ್ತಾರೆ. ಒಳ್ಳೆಯ ಮಾತುಗಳು ನೆನಪಿಗೆ ಬರಲಿಲ್ಲವೆಂದರೆ ತಂದೆಯನ್ನು ನೆನಪು ಮಾಡಿ, ತಂದೆಯನ್ನು ಮರೆತು ಹೋದರೆ ಶಿಕ್ಷಕನನ್ನು ನೆನಪು ಮಾಡಿ. ಶಿಕ್ಷಕರು ಏನನ್ನು ಕಲಿಸುವರೋ ಅದು ಅವಶ್ಯವಾಗಿ ನೆನಪಿಗೆ ಬರುತ್ತದೆಯಲ್ಲವೆ. ಶಿಕ್ಷಕರೂ ನೆನಪಿರುವರು, ಜ್ಞಾನವೂ ನೆನಪಿರುವುದು. ಉದ್ದೇಶವು ನಿಮ್ಮ ಬುದ್ಧಿಯಲ್ಲಿದೆ, ಇದನ್ನು ನೆನಪಿಟ್ಟುಕೊಳ್ಳಲೇಬೇಕಾಗುವುದು ಏಕೆಂದರೆ ನಿಮ್ಮದು ವಿದ್ಯಾರ್ಥಿ ಜೀವನವಲ್ಲವೆ. ಇದನ್ನೂ ತಿಳಿದುಕೊಂಡಿದ್ದೀರಿ - ನಮಗೆ ಓದಿಸುವವರು ತಂದೆಯಾಗಿದ್ದಾರೆ. ಲೌಕಿಕ ತಂದೆಯೇನೂ ಮಾಯವಾಗಿ ಬಿಡುವುದಿಲ್ಲ, ಲೌಕಿಕ-ಪಾರಲೌಕಿಕ ಮತ್ತು ಇವರು ಅಲೌಕಿಕ ತಂದೆಯಾಗಿದ್ದಾರೆ. ಇವರನ್ನು (ಬ್ರಹ್ಮಾ) ನೆನಪು ಮಾಡುವುದಿಲ್ಲ. ಲೌಕಿಕ ತಂದೆಯಿಂದ ಆಸ್ತಿಯು ಸಿಗುತ್ತದೆ ಅಂತ್ಯದವರೆಗೆ ಅವರ ನೆನಪಿರುತ್ತದೆ. ಶರೀರವನ್ನು ಬಿಟ್ಟ ಮೇಲೆ ಇನ್ನೊಬ್ಬ ತಂದೆಯು ಸಿಗುತ್ತಾರೆ. ಪ್ರತೀ ಜನ್ಮದಲ್ಲಿಯೂ ಲೌಕಿಕ ತಂದೆಯರು ಸಿಗುತ್ತಾರೆ. ಪಾರಲೌಕಿಕ ತಂದೆಯನ್ನೂ ಸಹ ಸುಖ ಹಾಗೂ ದುಃಖದಲ್ಲಿ ನೆನಪು ಮಾಡುತ್ತಾರೆ. ಮಕ್ಕಳಾದರೆ ಈಶ್ವರನು ನಮಗೆ ಮಕ್ಕಳನ್ನು ಕೊಟ್ಟರೆಂದು ಹೇಳುತ್ತಾರೆ. ಆದರೆ ಪ್ರಜಾಪಿತ ಬ್ರಹ್ಮನನ್ನು ಏಕೆ ನೆನಪು ಮಾಡುತ್ತಾರೆ? ಏಕೆಂದರೆ ಇವರಿಂದ ಏನೂ ಸಿಗುವುದಿಲ್ಲ. ಇವರಿಗೆ ಅಲೌಕಿಕ ತಂದೆಯೆಂದು ಹೇಳಲಾಗುತ್ತದೆ.

ನಾವು ಬ್ರಹ್ಮಾರವರ ಮೂಲಕ ಶಿವ ತಂದೆಯಿಂದ ಆಸ್ತಿಯನ್ನು ಪಡೆಯುತ್ತಿದ್ದೇವೆಂದು ನೀವು ತಿಳಿದುಕೊಂಡಿದ್ದೀರಿ. ಹೇಗೆ ನಾವು ಓದುತ್ತೇವೆಯೋ ಹಾಗೆಯೇ ಈ ರಥವು ನಿಮಿತ್ತವಾಗಿದೆ. ಬಹಳ ಜನ್ಮಗಳ ಅಂತಿಮದಲ್ಲಿ ಇವರ ಶರೀರವೇ ರಥವಾಗಿದೆ. ರಥಕ್ಕೆ ಹೆಸರನ್ನೂ ಇಡಬೇಕಾಗುತ್ತದೆಯಲ್ಲವೆ. ಇದು ಬೇಹದ್ದಿನ ಸನ್ಯಾಸವಾಗಿದೆ. ಈ ರಥವು ಸ್ಥಿರವಾಗಿರುತ್ತದೆ. ಉಳಿದವರಂತೂ ನಡೆಯುತ್ತಾ-ನಡೆಯುತ್ತಾ ಬಿಟ್ಟು ಹೋಗುತ್ತಾರೆ. ಆದರೆ ಈ ರಥವು ಡ್ರಾಮಾನುಸಾರ ನಿಶ್ಚಿತವಾಗಿದೆ. ಇವರಿಗೆ ಭಾಗ್ಯಶಾಲಿ ರಥವೆಂದು ಕರೆಯಲಾಗುತ್ತದೆ. ನಿಮ್ಮೆಲ್ಲರಿಗೆ ಭಾಗ್ಯಶಾಲಿ ರಥವೆಂದು ಹೇಳುವುದಿಲ್ಲ. ಇವರೊಬ್ಬರ (ಬ್ರಹ್ಮಾ) ಶರೀರಕ್ಕೆ ಭಾಗ್ಯಶಾಲಿ ರಥವೆಂದು ಹೇಳಲಾಗುತ್ತದೆ ಯಾರಲ್ಲಿ ತಂದೆಯು ಬಂದು ಜ್ಞಾನವನ್ನು ತಿಳಿಸುತ್ತಾರೆ. ಸ್ಥಾಪನಾ ಕಾರ್ಯವನ್ನು ಮಾಡಿಸುತ್ತಾರೆ, ನಿಮ್ಮ ಶರೀರಗಳು ಭಾಗ್ಯಶಾಲಿ ರಥಗಳಾಗಲಿಲ್ಲ. ನೀವಾತ್ಮಗಳು ಈ ಶರೀರವೆಂಬ ರಥದಲ್ಲಿ ಕುಳಿತು ಓದುತ್ತೀರಿ, ಆತ್ಮವು ಪವಿತ್ರವಾಗಿ ಬಿಡುತ್ತದೆ. ಆದ್ದರಿಂದ ತಂದೆಯು ಇವರಲ್ಲಿ ಕುಳಿತು ಓದಿಸುವ ಕಾರಣ ಬಲಿಹಾರಿಯು ಈ ತನು (ಬ್ರಹ್ಮಾ) ವಿನದಾಗಿದೆ. ಈ ಅಂತಿಮ ಜನ್ಮವು ಬಹಳ ಅಮೂಲ್ಯವಾಗಿದೆ, ಮತ್ತೆ ಶರೀರವನ್ನು ಬದಲಾಯಿಸಿ ಮತ್ತೆ ದೇವತೆಗಳಾಗುತ್ತೇವೆ. ಈ ಹಳೆಯ ಶರೀರದ ಮೂಲಕವೇ ನೀವು ಶಿಕ್ಷಣವನ್ನು ಪಡೆಯುತ್ತೀರಿ, ಶಿವ ತಂದೆಯ ಮಕ್ಕಳಾಗುತ್ತೀರಿ. ನಿಮಗೆ ತಿಳಿದಿದೆ, ಮೊದಲಿನ ಜೀವನವು ಕನಿಷ್ಟವಾಗಿತ್ತು, ಈಗ ಶ್ರೇಷ್ಠವಾಗುತ್ತಿದೆ. ಎಷ್ಟು ಓದುತ್ತೀರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ತಂದೆಯು ತಿಳಿಸಿದ್ದಾರೆ - ಮುಖ್ಯವಾದುದು ನೆನಪಿನ ಯಾತ್ರೆಯಾಗಿದೆ. ಇದನ್ನೇ ಭಾರತದ ಪ್ರಾಚೀನ ಯೋಗವೆಂದು ಹೇಳುತ್ತಾರೆ, ಇದರಿಂದ ನೀವು ಪತಿತರಿಂದ ಪಾವನರಾಗುತ್ತೀರಿ. ಸ್ವರ್ಗವಾಸಿಗಳಂತೂ ಎಲ್ಲರೂ ಆಗುತ್ತಾರೆ ಆದರೆ ಪದವಿಗಳು ವಿದ್ಯೆಯ ಮೇಲೆ ಆಧಾರಿತವಾಗಿದೆ. ನೀವು ಬೇಹದ್ದಿನ ಶಾಲೆಯಲ್ಲಿ ಕುಳಿತಿದ್ದೀರಿ, ನೀವೇ ಮತ್ತೆ ದೇವತೆಗಳಾಗುತ್ತೀರಿ. ಯಾರು ಶ್ರೇಷ್ಠ ಪದವಿಯನ್ನು ಪಡೆಯಬಹುದು, ಅವರ ವಿದ್ಯಾರ್ಹತೆಯು ಏನಿರಬೇಕು ಎಂಬುದನ್ನು ನೀವು ತಿಳಿದುಕೊಳ್ಳಬಹುದು. ಮೊದಲು ನಮ್ಮಲ್ಲಿಯೂ ಯಾವುದೇ ವಿಶೇಷತೆಗಳಿರಲಿಲ್ಲ, ಆಸುರೀ ಮತದನುಸಾರ ನಡೆಯುತ್ತಿದ್ದೆವು, ಈಗ ಈಶ್ವರೀಯ ಮತವು ಸಿಕ್ಕಿದೆ. ಆಸುರೀ ಮತದಿಂದ ನಾವು ಇಳಿಯುವ ಕಲೆಯಲ್ಲಿ ಹೋಗುತ್ತೇವೆ, ಈಶ್ವರೀಯ ಮತದಿಂದ ಏರುವ ಕಲೆಯಲ್ಲಿ ಬರುತ್ತೇವೆ. ಈಶ್ವರೀಯ ಮತವನ್ನು ನೀಡುವವರು ಒಬ್ಬ ತಂದೆಯಾಗಿದ್ದಾರೆ. ಆಸುರೀ ಮತವನ್ನು ಕೊಡುವವರು ಅನೇಕರಿದ್ದಾರೆ, ತಂದೆ-ತಾಯಿ, ಸಹೋದರ-ಸಹೋದರಿಯರು, ಶಿಕ್ಷಕ-ಗುರು ಎಷ್ಟೊಂದು ಜನರ ಮತವು ಸಿಗುತ್ತದೆ. ಈಗ ನಿಮಗೆ ಒಬ್ಬರ ಮತವು ಸಿಗುತ್ತದೆ, ಅದೂ 21 ಜನ್ಮಗಳವರೆಗೆ ಪ್ರಯೋಜನಕಾರಿಯಾಗಿದೆ ಅಂದಮೇಲೆ ಇಂತಹ ಶ್ರೀಮತದಂತೆ ನಡೆಯಬೇಕಲ್ಲವೆ. ಎಷ್ಟು ನಡೆಯುತ್ತೀರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ, ಕಡಿಮೆ ನಡೆದರೆ ಕಡಿಮೆ ಪದವಿ. ಶ್ರೀಮತವು ಭಗವಂತನದಾಗಿದೆ. ಶ್ರೇಷ್ಠಾತಿ ಶ್ರೇಷ್ಠರು ಭಗವಂತನೇ ಆಗಿದ್ದಾರೆ. ಇವರೇ ಕೃಷ್ಣನನ್ನು ಸರ್ವಶ್ರೇಷ್ಠನನ್ನಾಗಿ ಮಾಡಿದರು ನಂತರ ರಾವಣನು ಕನಿಷ್ಟರನ್ನಾಗಿ ಮಾಡಿದನು, ತಂದೆಯು ಸುಂದರರನ್ನಾಗಿ ಮಾಡುತ್ತಾರೆ ಮತ್ತೆ ರಾವಣನು ಪತಿತರನ್ನಾಗಿ ಮಾಡುತ್ತಾನೆ. ತಂದೆಯು ಆಸ್ತಿಯನ್ನು ಕೊಡುತ್ತಾರೆ, ದೇವತೆಗಳು ನಿರ್ವಿಕಾರಿಗಳಾಗುತ್ತೀರಿ. ಆದ್ದರಿಂದ ಸರ್ವಗುಣ ಸಂಪನ್ನರು, 16 ಕಲಾ ಸಂಪನ್ನರೆಂದು ದೇವತೆಗಳ ಮಹಿಮೆಯನ್ನು ಹಾಡುತ್ತಾರೆ. ಸನ್ಯಾಸಿಗಳಿಗೆ ಸಂಪೂರ್ಣ ನಿರ್ವಿಕಾರಿಗಳೆಂದು ಹೇಳುವುದಿಲ್ಲ, ಸತ್ಯಯುಗದಲ್ಲಿ ಆತ್ಮ ಮತ್ತು ಶರೀರವೆರಡೂ ಪವಿತ್ರವಾಗಿರುತ್ತದೆ. ದೇವತೆಗಳನ್ನು ಎಲ್ಲರೂ ತಿಳಿದುಕೊಂಡಿದ್ದಾರೆ, ಅವರು ಸಂಪೂರ್ಣ ನಿರ್ವಿಕಾರಿಗಳಾಗಿರುವ ಕಾರಣ ಸಂಪೂರ್ಣ ವಿಶ್ವಕ್ಕೆ ಮಾಲೀಕರಾಗುತ್ತಾರೆ, ಈಗಿಲ್ಲ. ನೀವೇ ನಂತರ ಆಗುತ್ತೀರಿ. ತಂದೆಯು ಸಂಗಮಯುಗದಲ್ಲಿಯೇ ಬರುತ್ತಾರೆ, ಬ್ರಹ್ಮನ ಮೂಲಕ ಬ್ರಾಹ್ಮಣರು, ನೀವೆಲ್ಲರೂ ಬ್ರಹ್ಮನ ಮಕ್ಕಳಾದಿರಿ. ಅವರು ಗ್ರೇಟ್-ಗ್ರೇಟ್ ಗ್ರಾಂಡ್ಫಾದರ್ (ಮನುಕುಲದ ಮುತ್ತಜ್ಜ) ಆಗಿದ್ದಾರೆ. ಇದನ್ನು ತಿಳಿಸಿ - ಪ್ರಜಾಪಿತ ಬ್ರಹ್ಮನ ಹೆಸರನ್ನು ಕೇಳಿದ್ದೀರಾ? ಪರಮಪಿತ ಪರಮಾತ್ಮನು ಬ್ರಹ್ಮಾರವರ ಮೂಲಕವೇ ಸೃಷ್ಟಿಯನ್ನು ರಚಿಸುತ್ತಾರಲ್ಲವೆ. ಬ್ರಾಹ್ಮಣ ಕುಲವಿದೆ, ಬ್ರಹ್ಮಾ ಮುಖವಂಶಾವಳಿಯು ಪರಸ್ಪರ ಸಹೋದರ-ಸಹೋದರಿಯಾದರು. ಇಲ್ಲಿ ರಾಜ-ರಾಣಿಯ ಮಾತಿಲ್ಲ. ಈ ಬ್ರಾಹ್ಮಣ ಕುಲವಂತೂ ಸಂಗಮಯುಗದ ಸ್ವಲ್ಪ ಸಮಯವಷ್ಟೇ ನಡೆಯುತ್ತದೆ. ರಾಜಧಾನಿಯು ಪಾಂಡವರಿಗಾಗಲಿ, ಕೌರವರಿಗಾಗಲೀ ಇಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. 21 ಜನ್ಮಗಳ ಶ್ರೇಷ್ಠ ಪದವಿಗೆ ಅಧಿಕಾರಿಗಳಾಗಲು ಎಲ್ಲಾ ಆಸುರೀ ಮತಗಳನ್ನು ಬಿಟ್ಟು ಒಂದು ಈಶ್ವರೀಯ ಮತದಂತೆ ನಡೆಯಬೇಕಾಗಿದೆ. ಸಂಪೂರ್ಣ ನಿರ್ವಿಕಾರಿಗಳಾಗಬೇಕಾಗಿದೆ.

2. ಈ ಹಳೆಯ ಶರೀರದಲ್ಲಿ ಕುಳಿತು ತಂದೆಯ ಶಿಕ್ಷಣಗಳನ್ನು ಧಾರಣೆ ಮಾಡಿಕೊಂಡು ದೇವತೆಗಳಾಗಬೇಕಾಗಿದೆ. ಇದು ಬಹಳ ಅಮೂಲ್ಯ ಜೀವನವಾಗಿದೆ, ಇದರಲ್ಲಿ ಬಹಳ ಶ್ರೇಷ್ಠರಾಗಬೇಕು.

ವರದಾನ:
ಸರ್ವ ಸಂಬಂಧದ ಸಹಯೋಗದ ಅನುಭೂತಿಯ ಮುಖಾಂತರ ನಿರಂತರ ಯೋಗಿ, ಸಹಜಯೋಗಿ ಭವ.

ಪ್ರತಿ ಸಮಯ ತಂದೆಯ ಭಿನ್ನ-ಭಿನ್ನ ಸಂಬಂಧಗಳ ಸಹಯೋಗ ಪಡೆಯುವುದು ಅರ್ಥಾತ್ ಅನುಭವ ಮಾಡುವುದೇ ಸಹಜ ಯೋಗವಾಗಿದೆ. ತಂದೆ ಎಂತಹದೇ ಸಮಯದಲ್ಲಿ ಸಂಬಂಧ ನಿಭಾಯಿಸಲು ಬಂಧಿತರಾಗಿದ್ದಾರೆ. ಇಡೀ ಕಲ್ಪದಲ್ಲಿ ಈಗಲೇ ಸರ್ವ ಅನುಭವಗಳ ಗಣಿ ಪ್ರಾಪ್ತಿಯಾಗುವುದು. ಆದ್ದರಿಂದ ಸದಾ ಸರ್ವ ಸಂಬಂಧಗಳ ಸಹಯೋಗವನ್ನು ಪಡೆಯಿರಿ ಮತ್ತು ನಿರಂತರ ಯೋಗಿ, ಸಹಜಯೋಗಿಗಳಾಗಿ ಏಕೆಂದರೆ ಯಾರು ಸರ್ವ ಸಂಬಂಧಗಳ ಅನುಭೂತಿ ಅಥವಾ ಪ್ರಾಪ್ತಿಯಲ್ಲಿ ಮಗ್ನರಾಗಿರುತ್ತಾರೆ. ಅವರು ಹಳೆಯ ಜಗತ್ತಿನ ವಾತಾವರಣದಿಂದ ಸಹಜವಾಗಿ ಉಪರಾಮವಾಗಿ ಬಿಡುತ್ತಾರೆ.

ಸ್ಲೋಗನ್:
ಸರ್ವಶಕ್ತಿಯಿಂದ ಸಂಪನ್ನರಾಗಿರುವುದು ಇದೇ ಬ್ರಾಹ್ಮಣ ಸ್ವರೂಪದ ವಿಶೇಷತೆಯಾಗಿದೆ.